ಭಾರತದಲ್ಲಿ ಶೂದ್ರರ ಶೋಷಣೆ ನಡೆದಿದೆಯೇ??
– ವಲವಿ ವಿಜಯಪುರ
ಸಾಮಾನ್ಯವಾಗಿ ಭಾರತದಲ್ಲಿ ಮನುಸ್ಮೃತಿಯು ಶೂದ್ರರಿಗೆ ವೇದಗಳನ್ನು ಕಲಿಯುವ ಅಧಿಕಾರ ನೀಡಲಿಲ್ಲ. ಅವರಿಗೆ ಸಂಸ್ಕೃತದ ಜ್ಞಾನವನ್ನು ಕೊಡಲಿಲ್ಲ. ವಿದ್ಯೆಯನ್ನು ಶೂದ್ರರಿಂದ ಮುಚ್ಚಿಡಲಾಯಿತು. ಮೇಲ್ವರ್ಗದವರ ಮನೆಯ ಸಗಣಿಯನ್ನು ಬಾಚುವದೇ ಅವರ ಕೆಲಸವಾಗಿತ್ತು. ಯಾವುದೇ ಉನ್ನತ ಹುದ್ದೆಗಳನ್ನು ನೀಡದೇ ಅವರನ್ನು ವಂಚಿಸಲಾಯಿತು. ಮತ್ತು ಈ ವಂಚನೆಯಲ್ಲಿ ಅಧಿಕವಾಗಿ ಬ್ರಾಹ್ಮಣರು ಭಾಗೀದಾರರು. ಸಮಾಜವೆಂಬ ಪಿರಮಿಡ್ ಆಕೃತಿಯಲ್ಲಿ ಅತ್ಯಂತ ಮೇಲೆ ಬ್ರಾಹ್ಮಣನಿದ್ದರೆ ಅತ್ಯಂತ ಕೆಳಸ್ತರದಲ್ಲಿ ಶೂದ್ರನಿದ್ದಾನೆ ಮತ್ತು ಅವನನ್ನು ವಿಶೇಷವಾಗಿ ಬ್ರಾಹ್ಮಣರು ಶೋಷಣೆ ಮಾಡಿದ್ದಾರೆ ಅನ್ನುವದು ಆಧುನಿಕ ಶಿಕ್ಷಣ ಪಡೆದವರ ವಾದವಾಗಿದೆ.
ಬ್ರಾಹ್ಮಣರು ಭಾರತದಲ್ಲಿ ಜಾತಿ ವ್ಯವಸ್ತೆ ಹುಟ್ಟು ಹಾಕಿದರು. ಇದರಿಂದ ಭಾರತದಲ್ಲಿ ಇನ್ನಿಲ್ಲದಂತೆ ಜಾತಿ ತಾರತಮ್ಯಗಳು ನಡೆದು ಶೂದ್ರರು ಎಲ್ಲದರಿಂದಲೂ ವಂಚಿತರಾಗಿ ಅತಿಯಾಗಿ ಶೋಷಿಸಲ್ಪಟ್ಟರು. ( ಇದಕ್ಕೆ ಭಗವದ್ಗೀತೆಯ ಸಾಲುಗಳಾದ “ಚಾತುರ್ವರ್ಣಂ ಮಯಾ ಸೃಷ್ಟಿಂ………” ಸಾಲುಗಳನ್ನು ಉದಾಹರಿಸುತ್ತಾರೆ ) ಹಾಗಿದ್ದರೆ ಭಾರತದಲ್ಲಿ ನಿಜವಾಗಿ ಪ್ರಾಚೀನ ಕಾಲದಿಂದ ಇವತ್ತಿನ ವರೆಗೂ ಶೂದ್ರರನ್ನು ತುಂಬಾ ಶೋಷಣೆಗೊಳಪಡಿಸಲಾಗಿದೆಯೇ?? ಎಂಬ ಪ್ರಶ್ನೆ ನಮ್ಮನ್ನು ಕಾಡತೊಡಗುತ್ತದೆ. ಅಪರಾಧಿ ಪ್ರಜ್ಷೆ ನಮ್ಮನ್ನು ತಲೆಕೆಳ ಹಾಕುವಂತೆ ಮಾಡುತ್ತದೆ. ಹಾಗೇ ಪ್ರಾಚೀನ ಕಾಲದಿಂದ ಇವತ್ತಿನವರೆಗಿನ ಕಾಲಘಟ್ಟವನ್ನು ವೀಕ್ಷಿಸಿದಾಗ ನಮಗೆ ಇಂಥ ವಾದದಲ್ಲಿ ಹುರುಳಿಲ್ಲವೆಂದು ತೋರುತ್ತಾ ಹೋಗುತ್ತದೆ.
ಮೊದಲಿಗೆ ಋಷಿ ಮುನಿಗಳ ಕಾಲಕ್ಕೆ ಹೋಗೋಣ. ಬಸವಣ್ಣನವರ ಒಂದು ಪ್ರಸಿದ್ಧ ವಚನದಿಂದ ನೋಡೋಣ.
ವ್ಯಾಸ ಬೋಯಿತಿಯ ಮಗ
ಮಾರ್ಕಂಡೇಯ ಮಾತಂಗಿಯ ಮಗ
ಮಂಡೋದರಿ ಕಪ್ಪೆಯ ಮಗಳು
ಕುಲವನರಸದಿರಿಂ ಭೋ
ಕುಲದಿಂದ ಮುನ್ನೇನಾದರಿಂ ಭೋ
ಸಾಕ್ಷಾತ್ ಅಗಸ್ತ್ಯ ಕಬ್ಬಿಲ
ದೂರ್ವಾಸ ಮಚ್ಚಿಗ
ಕಶ್ಯಪ ಕಮ್ಮಾರ
ಕೌಂಡಿನ್ಯನೆಂಬ ಋಷಿ
ಮೂರುಲೋಕವನರಿದೆ ನಾವಿದ ಕಾಣಿ ಭೋ
ಹೀಗೆ ಬಸವಣ್ಣನವರು ತಮ್ಮ ಒಂದು ವಚನದಲ್ಲಿ ಹೇಳುತ್ತಾರೆ. ಇದಕ್ಕೆ ಮಾನ್ಯ ಭೈರಪ್ಪನವರ ‘ಪರ್ವ’ದಿಂದ ಇನ್ನಷ್ಟು ಜನರನ್ನು ಸೇರಿಸುತ್ತೇನೆ. ಭಾರದ್ವಾಜರು ಕುಂಬಾರ ಹೆಣ್ಣುಮಗಳಲ್ಲಿ ಹುಟ್ಟಿದವರು. ಕುರುಕುಲದ ಕುಲಗುರುಗಳಾದ ಕೃಪರು ಮತ್ತು ಅವರ ತಂಗಿ ಕೃಪಿಯು ಬೇಡರ ಹೆಣ್ಣುಮಗಳಲ್ಲಿ ಹುಟ್ಟಿದವರು. ಭೈರಪ್ಪನವರ ‘ದಾಟು’ ಪ್ರಕಾರ ವಶಿಷ್ಠರ ಹೆಂಡತಿ ಅರುಂಧತಿ ಮಾದಿಗ ಹೆಣ್ಣು. ಜಮದಗ್ನಿಯ ಹೆಂಡತಿ ರೇಣುಕೆ ಕ್ಷತ್ರಿಯ ಹೆಣ್ಣು. ಪುಲಸ್ತ್ಯರ ಹೆಂಡತಿ ರಾವಣನ ತಾಯಿ ಕೈಕಶಿ ರಾಕ್ಷಸ ಕುಲದಾಕೆ. ಸ್ವತಃ ವಿಶ್ವಾಮಿತ್ರರು ಕ್ಷತ್ರಿಯ. ಜಾಬಾಲಿಗಳು ವೇಶ್ಯೆಯ ಮಗ. ವಾಲ್ಮೀಕಿ ಬೇಡರ ಜಾತಿಯವರು. ಇವರೆಲ್ಲ ಶೂದ್ರ ಕುಲದ ಹೆಣ್ಣು ಮಕ್ಕಳಲ್ಲಿ ಹುಟ್ಟಿದ್ದಾರೆ. ಅಥವಾ ಸ್ವತಃ ಶೂದ್ರರಾಗಿದ್ದಾರೆ. ಆದಾಗ್ಯೂ ಇವರನ್ನು ಬ್ರಾಹ್ಮಣ ಸಮಾಜ ತಿರಸ್ಕರಿಸಿದ್ದು ನಮಗೆ ಕಂಡುಬಂದಿಲ್ಲ. ಇವರಲ್ಲೇನೇಕರನ್ನು ಬ್ರಾಹ್ಮಣ ಸಮುದಾಯ ಗೋತ್ರೋತ್ಪನ್ನ ಋಷಿ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ ಅನೇಕರು ಬರೆದ ಮಂತ್ರಗಳನ್ನು ಬ್ರಾಹ್ಮಣ ಸಮುದಾಯ ನಿಷ್ಟೆಯಿಂದ ಗೌರವದಿಂದ ನಿತ್ಯ ಪಠಿಸುತ್ತದೆ. ಅವರ ಕಾವ್ಯಗಳು ನಮ್ಮ ನಿತ್ಯದ ಜೀವನದ ಮೇಲೆ ಪ್ರಭಾವ ಬೀರಿವೆಯೆಂದು ಗೌರವದಿಂದ ಕಾಣಲಾಗುತ್ತದೆ. ಅಂದ ಮೇಲೆ ಶೂದ್ರಾದಿಗಳಿಗೆ ಋಷಿ ಮುನಿಗಳ ಕಾಲದಲ್ಲಿ ಯಾವ ಶೋಷಣೆ ನಡೆದಿಲ್ಲವೆಂದೇ ಹೇಳಬೇಕಾಗುತ್ತದೆ.
ಶ್ರೀ ಸೂರ್ಯನಾಥ ಕಾಮತ್ ಅವರು ತಮ್ಮ ‘ಒಕ್ಕಲುತನ ಮತ್ತು ಒಕ್ಕಲಿಗರು’ ಎಂಬ ಪುಸ್ತಕದಲ್ಲಿ ಜನಕ ಮಹಾರಾಜ ಒಕ್ಕಲಿಗನಾಗಿದ್ದನೆಂದು ತಿಳಿಸುತ್ತಾರೆ. ಯಾಕೆಂದರೆ ಹೊಲ ಹರಗುವಾಗಲೇನೇ ಸೀತೆ ಅವನ ನೇಗಿಲಿಗೆ ತಾಗಿ ಸಿಕ್ಕವಳು ಮತ್ತು ಒಕ್ಕಲಿಗರ ಗುರುತಾದ ನೇಗಿಲದ ಹೆಸರನ್ನೇ ಆಕೆಗಿಡಲಾಯಿತು. ಸೀತೆ ಅಂದರೆ ನೇಗಿಲ ಪಾಳು ಅಥವಾ ತುದಿ ಎನ್ನುತ್ತಾರೆ. ಆದ್ದರಿಂದ ಜನಕ ಮಹಾರಾಜ ಜಾತಿಯಿಂದ ಒಕ್ಕಲಿಗನಾಗಿದ್ದನೆಂದು ನಿರೂಪಿಸುತ್ತಾರೆ. ಜನಕ ಒಕ್ಕಲಿಗನಾಗಿದ್ದರೂ ವೇದ ಪಾರಂಗತನಾಗಿದ್ದನಲ್ಲದೇ ಅವನನ್ನು ರಾಜರ್ಷಿ ಎಂದು ಕರೆಯಲಾಗುತ್ತಿತ್ತು. ಇವನು ಹೆಣ್ಣು ಕೊಡುವಾತನೂ ಇವನ ಜಾತಿಗೆ ಸೇರಿದವನೆ ಆಗಿರಬೇಕಲ್ಲವೇ? ಆಗ ದಶರಥನೂ ಶೂದ್ರನಾಗಿರಬೇಕೆಂದು ತರ್ಕಿಸಬೇಕಾಗುತ್ತದೆ. ಜನಕನಿಗೆ ಶೂದ್ರನಾಗಿದ್ದರೂ ವೇದಾಧ್ಯಯನ ನಿರಾಕರಿಸಿರಲಿಲ್ಲ. ಮತ್ತು ಗೌರವದಿಂದ ಎಲ್ಲರೂ ಜನಕನನ್ನು ಕಂಡಿದ್ದಾರೆ. ಹಾಗೆ ರಾಮನನ್ನು ಕೂಡ ಗೌರವದಿಂದ ಕಾಣುವದಷ್ಟೇ ಅಲ್ಲದೇ ವಿಷ್ಣುವಿನ ಅವತಾರಕ್ಕೂ ಹೋಲಿಸಿದ್ದಾರೆ. ಇವನ ಕತೆ ಬರೆದ ವಾಲ್ಮೀಕಿ ಬೇಡರವನಾದರೂ ಶೂದ್ರನೊಬ್ಬನ ಕಥೆ ಬರೆದವನಾದರೂ ಅವನನ್ನು ಮತ್ತು ಅವನ ಕತೆಯನ್ನು ಬ್ರಾಹ್ಮಣ ಸಮುದಾಯ ತಲೆಯ ಮೇಲಿಟ್ಟುಕೊಂಡು ಮೆರೆಸಿದೆ.
ಕೃಷ್ಣನ ಕಾಲಕ್ಕೆ ಬರೋಣ. ಇಲ್ಲಿಯೂ ವಿಷ್ಣುವಿನ ಅವತಾರವೆಂದು ಕರೆಸಿಕೊಂಡು ಬ್ರಾಹ್ಮಣರಿಂದ ಪೂಜೆಗೊಳಗಾಗುತ್ತಿರುವವನು ಒಬ್ಬ ಶೂದ್ರ ರಾಜ. ಅವನೇ ಕುರುಬ ಅಥವಾ ಗವಳಿ ಅಥವಾ ಯಾದವನೆಂದು ಪರಿಚಿತನಾದ ಕೃಷ್ಣ. ಈ ಕಾಲದಲ್ಲಿ ಅನೇಕ ಶೂದ್ರ ರಾಜರು ಕಂಡು ಬರುತ್ತಾರೆ. ವಿರಾಟರಾಜ ಅವರಲ್ಲೊಬ್ಬ. ಇವನು ಕೌರವರ ಮೂಲ ಪುರುಷ ಶಂತನುವಿನ ಹೆಂಡತಿ ಸತ್ಯವತಿಯ ತಮ್ಮ. ಅಂದ ಮೇಲೆ ಇವನೂ ಅಂಬಿಗ ಕುಲದವನು. ಪಾಂಡವರು ಇವನ ಮಗಳ ಮದುವೆ ತಮ್ಮ ಮಗನೊಂದಿಗೆ ಮಾಡಿದ್ದಾರೆ. ಭೀಷ್ಮ, ಚಿತ್ರಾಂಗದ, ವಿಚಿತ್ರವೀರ್ಯರು ಅಂಬಿಗ ಕುಲದವರಾದ ಗಂಗೆ, ಸತ್ಯವತಿಯ ಮಕ್ಕಳು. ವ್ಯಾಸರು ಕೂಡ ಇದೇ ಸತ್ಯವತಿಯ ಮಗ. ಇವರ ಕಾಲದಲ್ಲಿ ವೇದಾಧ್ಯಯನವಾಗಲೀ ಇನ್ನಿತರ ವಿದ್ಯೆಯಾಗಲೀ ಯಾರಿಗೂ ನಿರಾಕರಿಸಲ್ಪಟ್ಟಿಲ್ಲ. ಈ ಕಾಲದ ಶ್ರೇಷ್ಟ ಧನುರ್ಧರ ಭೀಷ್ಮನಾಗಿದ್ದ. ಹಾಗೇ ದಾಸೀ ಪುತ್ರ ಸೂತ ವಿದುರ ವೇದ ಪಾರಂಗತನಾಗಿದ್ದ. ಇಲ್ಲಿ ಉಳಿದೆಲ್ಲಾ ಕೆಳಜಾತಿಯವರಿಗೆ ಕಲಿಸಿದ ಧನುರ್ವಿದ್ಯೆಯನ್ನು ಕೇವಲ ಕರ್ಣ, ಮತ್ತು ಏಕಲವ್ಯರಿಗೆ ನಿರಾಕರಿಸಲಾಯಿತೆಂದರೆ ಏನರ್ಥ? (ಕರ್ಣನು ಅಗ್ನಿವೇಷರಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡುವಾಗ ಆತನ ಜಾತಿ ಅಡ್ಡವಾಗಿಲ್ಲದಿದ್ದುದನ್ನು ಗಮನಿಸಿ). ವಿರಾಟರಾಜ, ಕೃಷ್ಣ, ಜನಕ ಇವರುಗಳನ್ನು ನೋಡಿದಾಗ ಪ್ರಭುತ್ವವು ಶೂದ್ರರದೂ ಆಗಿತ್ತೆಂಬುದು ನಮಗೆ ತಿಳಿಯುತ್ತದೆ. ಪ್ರಭುತ್ವದಲ್ಲೇ ಅವರಿರುವಾಗ ಅವರ ಶೋಷಣೆ ನಡೆಯುತ್ತಿತ್ತು. ಅವರಿಗೆ ವಿದ್ಯೆ ಹೇಳಿಕೊಡುತ್ತಿರಲಿಲ್ಲ ಕೇವಲ ಸಗಣಿ ಬಳಿಯುವ ಕಾರ್ಯ ಮಾತ್ರ ಅವರದಾಗಿತ್ತು ಎಂದರೆ ಏನರ್ಥ??
ಇನ್ನು ಇತಿಹಾಸ ಕಾಲಕ್ಕೆ ಬರೋಣ.
ಕ್ರಿ. ಪೂ 2 ನೇ ಶತಮಾನದಲ್ಲಿ ಮನುಸ್ಮೃತಿ ಬರೆಯಲಾಯಿತು ಮತ್ತು ಅದರಲ್ಲಿ ಶೂದ್ರ ಶೋಷಣೆಯ ಅನೇಕ ಅಂಶಗಳಿದ್ದವು. ಮನುಸ್ಮೃತಿಯಿಂದಲೇ ಭಾರತದಲ್ಲಿ ಶೂದ್ರರು ತಮ್ಮ ಸ್ಥಾನ ಮಾನ ಕಳೆದುಕೊಳ್ಳುವಂತಾಯಿತು. ಮನುಸ್ಮೃತಿಯಲ್ಲಿ ಶೂದ್ರನಿಗೆ ರಾಜ್ಯಾಧಿಕಾರ ಕೊಡಬಾರದು. ಒಂದು ವೇಳೆ ಶೂದ್ರನು ರಾಜನಾಗಿದ್ದರೆ ಅಂಥಲ್ಲಿ ಇರಬಾರದು ಎಂದು ಹೇಳಿದ್ದಾರೆ ಮತ್ತು ಶೂದ್ರ ವಿದ್ಯೆ ಕಲಿತರೆ ಅವನ ಕಿವಿಯಲ್ಲಿ ಸೀಸ ಸುರಿಯಬೇಕೆಂದು ಹೇಳಲಾಗಿದೆ. ಇದನ್ನು ಅನುಸರಿಸಿ ಬ್ರಾಹ್ಮಣರು ಶೂದ್ರನಿಗೆ ವಿದ್ಯೆ ಕಲಿಸದೇ ಮುಚ್ಚಿಟ್ಟು ವಂಚಿಸಿ ತಮ್ಮ ದಾಸರಂತೆ ಅವರನ್ನು ಕಂಡರು ಎಂದು ಹೇಳಲಾಗುತ್ತದೆ. ಸರಿ, ಇದನ್ನು ಕಟ್ಟು ನಿಟ್ಟಿನಿಂದ ಬ್ರಾಹ್ಮಣರು ಅನುಸರಿಸಿದ್ದಾರೆಯೇ? ಎಂದು ನೋಡೋಣ.
ಮೊದಲನೆಯದಾಗಿ ಮನು ಸ್ಮೃತಿಯ ಪ್ರಕಾರ ಶೂದ್ರನ ರಾಜ್ಯಾಧಿಕಾರ ತಡೆಯಬೇಕು ಮತ್ತು ಶೂದ್ರ ರಾಜನಿದ್ದಲ್ಲಿ ವಾಸಿಸಬಾರದಲ್ಲವೇ? ಇದೇ ಕಾಲದ ಚಂದ್ರಗುಪ್ತ ಮೋಚಿಯಾಗಿದ್ದ. ಅವನ ಮಗ ಬಿಂದುಸಾರ ಮೊಮ್ಮಗ ಅಶೋಕ ಇವರೂ ಮೋಚಿಯೇ ಅಲ್ಲವೇ ? ಇವರನ್ನು ರಾಜರಾಗಲು ಅವತ್ತಿನ ಮನುಸ್ಮೃತಿಯಲ್ಲಿ ಹೇಳಿದ್ದನ್ನು ಕಟ್ಟುನಿಟ್ಟಾಗಿ ಪಾಲಿಸುವ ಬ್ರಾಹ್ಮಣರು ಹೇಗೆ ಬಿಟ್ಟರು. ನಂದರು ಕೂಡ ಶೂದ್ರರಲ್ಲವೇ ಅವರ ಅಧಿಕಾರಗಳನ್ನು ಅವರೇಕೆ ಒಪ್ಪಿದರು. ಅಲ್ಲದೇ ಇವರ ಆಡಳಿತದಲ್ಲಿ ಬ್ರಾಹ್ಮಣರ ಪಾಲಿತ್ತು. ಉದಾ ಚಾಣಕ್ಯ, ಅಮಾತ್ಯ ರಾಕ್ಷಸ ಇತ್ಯಾದಿ. ಇವರೇಕೆ ರಾಜ್ಯ ತ್ಯಾಗ ಮಾಡಿ ಹೋಗಲಿಲ್ಲ.
ಭಾರತದಲ್ಲಿ ಬೌದ್ಧ ಮತ ಜನ್ಮ ತಾಳಿದ್ದೇ ವೈದಿಕರ ಶೋಷಣೆಯ ವಿರುದ್ಧ ಶೂದ್ರರ ಬಂಡಾಯದ ಪ್ರತೀಕವಾಗಿ. ಈ ಮಾತನ್ನು ಅನೇಕ ಕಡೆ ನಾವು ಕೇಳಿದ್ದೇವೆ. ಭಾರತದ ಅತ್ಯಂತ ಶ್ರೇಷ್ಟ ವಿದ್ಯಾಲಯ ನಳಂದ. ಇದು ಬೌದ್ಧರ ಒಡೆತನದಲ್ಲಿತ್ತು. ಇಲ್ಲಿ ಬೌದ್ಧ ಮತ ತತ್ವಗಳ ಜೊತೆಗೆ ಭೂಗೋಳ, ಖಗೋಳ, ವಿಜ್ಞಾನ ,ತಂತ್ರಜ್ಞಾನ, ಆಯುರ್ವೇದ, ರಾಜನೀತಿ, ಅರ್ಥಶಾಸ್ತ್ರ ಹಾಗು ಇನ್ನಿತರ ಎಲ್ಲಾ ವಿಷಯ ಕಲಿಸಲ್ಪಡುತ್ತಿತ್ತು. ಹೆಚ್ಚಿನ ವ್ಯಾಸಂಗಕ್ಕಾಗಿ ಅನೇಕ ವಿದೇಶದ ವಿದ್ಯಾರ್ಥಿಗಳೂ ಇಲ್ಲಿ ಬರುತ್ತಿದ್ದರು. ಕಲಿಸುವ ಶಿಕ್ಷಕರು ಬೌದ್ಧರಾಗಿದ್ದರಲ್ಲದೇ ದತ್ತಿ, ದಾನ, ದೇಣಿಗೆ ನೀಡುವ ಪ್ರಭುಗಳು ಸಹ ಬೌದ್ಧರಾಗಿದ್ದರು. ನಮ್ಮ ಬುಜಿಗಳ ಪ್ರಕಾರ ಬೌದ್ಧರೆಲ್ಲಾ ಶೂದ್ರರು ಮತ್ತು ವೈದಿಕರ ವಿರುದ್ಧ ಬಂಡಾಯವೆದ್ದು ಸೃಷ್ಟಿಸಿಕೊಂಡ ಮತ. ಹೀಗಿದ್ದಾಗ ನಳಂದಾದಲ್ಲಿ ಕಲಿಯುವ ಎಲ್ಲಾ ವಿದ್ಯಾರ್ಥಿಗಳು ಬೌದ್ಧರಾಗಿದ್ದರು, ಅಂದರೆ ಶೂದ್ರರಾಗಿದ್ದರು. (10% ವಿದೇಶದ, ಹಾಗೂ ಇನ್ನಿತರ ಮತದವರಿದ್ದರೆನ್ನಿ) ಹೀಗಿದ್ದಾಗ ಶ್ರೇಷ್ಠ ವಿಶ್ವವಿದ್ಯಾಲಯದಲ್ಲಿ ಶೂದ್ರರಿಗೆ ಶಿಕ್ಷಣ ದೊರೆಯುತ್ತಿತ್ತೆಂದು ತಿಳಿಯುತ್ತದೆ. ಇಷ್ಟಿದ್ದರೂ ಶೂದ್ರರನ್ನು ವಿದ್ಯೆಯಿಂದ ವಂಚಿಸಿದರೆಂದರೆ ಏನರ್ಥ?!!ಇಂಥ ಹೇಳಿಕೆಗಳು ಸರಿಯೇ! ಇಲ್ಲಿ ಶಿಕ್ಷಣ ಪಡೆದ ಶೂದ್ರರು ತಮ್ಮವರೆಲ್ಲರಿಗೂ ಶಿಕ್ಷಣ ಹೇಳಿಕೊಟ್ಟು ಅವರನ್ನು ಸುಶಿಕ್ಷಿತರನ್ನೇಕೆ ಮಾಡಲಿಲ್ಲ? ಸಾವಿರಾರು ವರ್ಷಗಳ ಹಿಂದೆನೇ ಶೂದ್ರರಿಗೆ ಮನುಸ್ಮೃತಿಯ ಪ್ರಭಾವ ಗಾಢವಾಗಿದ್ದ ಕಾಲದಲ್ಲೇ ಶ್ರೇಷ್ಠ ಮಟ್ಟದ ಶಿಕ್ಷಣ ಸಿಕ್ಕಿದ್ದರೂ ಸಾವಿರ ಸಾವಿರ ವರ್ಷ ಕಳೆದ ಮೇಲೂ ಶೂದ್ರರು ಹಿಂದೆ ಬೀಳಲು ಕಾರಣವೇನು?
ಡಾ|| ಸರಜೂ ಕಾಟ್ಕರ್ ಅವರು ‘ಶಿವಾಜಿಯ ಮೂಲ ಕನ್ನಡ ನೆಲ’ ಪುಸ್ತಕದಲ್ಲಿ ಬರೆಯುತ್ತಾರೆ, “ಮಧ್ಯ ಯುಗದಲ್ಲಿನ ರಾಜರೆಲ್ಲಾ ಶೂದ್ರರೇ ಆಗಿದ್ದರು. ಅವರಿಗೆ ಬ್ರಾಹ್ಮಣರು ಗೊತ್ರ ಜಾತಿ ನೀಡಿ ಕ್ಷತ್ರಿಯರನ್ನಾಗಿಸುತ್ತಿದ್ದರು. ಹೊಯ್ಸಳರು, ಯಾದವರು, ಕುರುಬ ಅಥವಾ ಗವಳಿಗರಾಗಿದ್ದರು, ಗಂಗರು ಒಕ್ಕಲಿಗರಾಗಿದ್ದರು”.
ನಾನು 1990 ರಲ್ಲಿ ಕರ್ನಾಟಕ ಯುನಿವರ್ಸಿಟಿಯಲ್ಲಿ ಎಂ. ಎ ಕಲಿಯುತ್ತಿದ್ದಾಗ ಶ್ರೀ ಎಂ ಎಂ ಕಲಬುರ್ಗಿ ಅವರು ನನ್ನ ವಿದ್ಯಾ ಗುರುಗಳಾಗಿದ್ದರು. ತರಗತಿಯಲ್ಲಿ ಒಂದು ದಿನ ಅವರು ಹೀಗೆ ಹೇಳಿದರು. (ಇದನ್ನು ಅವರು ತಮ್ಮ ಯಾವುದಾದರೂ ಪುಸ್ತಕದಲ್ಲಿ ದಾಖಲಿಸಿರುವ ಬಗ್ಗೆ ನನಗೆ ಮಾಹಿತಿ ಇಲ್ಲ.) “ಶಾಸನಗಳಲ್ಲಿ ‘ಪುಲಿಕೇಶಿ’ ಹೆಸರನ್ನು ‘ಪೊಲ ಕೆಸ್ಸಿ’ ಅಂತಾ ಬರೆಯಲಾಗಿದೆ. ‘ಪೊಲ’ ಎಂದರೆ ಹೊಲ, ‘ಕೆಸ್ಸಿ’ ಅಂದರೆ ಮಾಡುವವ ಎಂದರ್ಥವಾಗುತ್ತದೆ. ಪುಲಿಕೇಶಿ ಇದರ ಅರ್ಥವನ್ನು ನಾವು ಹುಲಿಯಂತೆ ಕೂದಲಿರುವವ ಎಂದು ಅರ್ಥೈಸಿದ್ದೇವೆ. ಆದರೆ ಕೂದಲು (ಆಯಾಲ) ಇರುವದು ಸಿಂಹಕ್ಕೆ, ಹುಲಿಗೆಲ್ಲಿ ಕೂದಲಿರುತ್ತೆ?” ಎಂದು ಹೇಳಿದರು. ಇದರರ್ಥ ಚಾಲುಕ್ಯರು ಒಕ್ಕಲಿಗರೆಂದಾಯಿತು. ಅಂದರೆ ಶೂದ್ರರೆಂದು ಪ್ರತ್ಯೇಕ ಹೇಳಬೇಕಿಲ್ಲವಲ್ಲ.
ವಿಜಯನಗರದ ಅರಸರು ಬೇಡ ಕುರುಬರಾಗಿದ್ದರು. ಪಾಳೇಗಾರರು, ಮೈಸೂರು ಅರಸರು, ಕರಾವಳಿಯ ಅರಸರೆಲ್ಲಾ ಕೆಳಜಾತಿಯವರೇ ಆಗಿದ್ದರು. ಅಂದರೆ ಮಧ್ಯಯುಗದಲ್ಲೂ ಪ್ರಭುತ್ವ ಶೂದ್ರಾದಿಗಳ ಕೈಯಲ್ಲಿಯೇ ಇತ್ತು ಅಂತಾಯಿತು. ನನ್ನ ಪ್ರಶ್ನೆ ಅಧಿಕಾರ ಹಣ ತೋಳ್ಬಲ ಎಲ್ಲಾ ಇದ್ದೂ ಇವರೇಕೆ ಬ್ರಾಹ್ಮಣರ ತಾಳಕ್ಕೆ ತಕ್ಕಂತೆ ಕುಣಿದರು. ಇವರೇಕೆ ಬ್ರಾಹ್ಮಣರ ಮಾತು ಕೇಳಿ ತಮ್ಮವರನ್ನೇ ಶೋಷಿಸಿದರು. ಹಾಗೆ ಶೋಷಣೆ ಮಾಡಿದ್ದಾರೆ ಎನ್ನುವದೇ ನಿಜವಾದರೆ ತಪ್ಪು ಯಾರದು? ಪ್ರಭುತ್ವದ್ದು ತಾನೆ?
ಈ ಯಾವ ಅರಸರಿಗೂ ಬ್ರಾಹ್ಮಣರು ಪುರೋಹಿತರಾಗಿರಲಿಲ್ಲ. ಅವರವರ ಜಾತಿಯದೇ ಪುರೋಹಿತರು ಎಲ್ಲರಿಗೂ ಇದ್ದರು. ಬ್ರಾಹ್ಮಣರು ಸಂಖ್ಯಾ ಬಾಹುಳ್ಯ ಉಳ್ಳವರೂ ಅಲ್ಲ. ಬಾಹುಬಲದಿಂದ ಹಿಡಿತದಲ್ಲಿ ಇಟ್ಟುಕೊಂಡಿದ್ದರೆಂದರೆ ಅದೂ ಇಲ್ಲ. ಹಾಗಾದರೆ ಇವರೇಕೆ ಬ್ರಾಹ್ಮಣರ ಆಧೀನರಾಗಿ ತಮ್ಮವರನ್ನು ಶೋಷಿಸುತ್ತಾರೆ. ಇನ್ನು ಕೆಲವರು ಬುದ್ಧಿ ಬಲದಿಂದ ಎಲ್ಲರನ್ನೂ ಬ್ರಾಹ್ಮಣರು ಹಿಡಿತದಲ್ಲಿ ಇಟ್ಟುಕೊಂಡಿದ್ದರೆನ್ನಬಹುದು. ಆದರೆ ಸಾವಿರ ಸಾವಿರ ವರ್ಷಗಳ ಕಾಲ ಕೇವಲ ಬುದ್ಧಿ ಬಲದಿಂದಲೇ ಒಂದು ಜನಾಂಗ ಅದೂ 2% ಜನಾಂಗ 98% ಜನರನ್ನು ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯವೇ? ಸಾವಿರ ಸಾವಿರ ವರ್ಷ ಕಳೆದರೂ ಈ ಹುನ್ನಾರ ಶೂದ್ರರಿಗೆ ತಿಳಿಯಲೇ ಇಲ್ಲವೇ? ವರ್ಷಗಳು ಕಳೆದಂತೆ ಮಂಗ, ಚಿಂಪಾಂಜಿಗಳ ಮೆದುಳೇ ವಿಕಾಸವಾಗುತ್ತದೆಂದು ವಿಜ್ಞಾನ ಹೇಳುತ್ತದೆ. ಹಾಗಿದ್ದಾಗ ಶೂದ್ರನ ಮೆದಳು ವಿಕಾಸವೇ ಆಗಲಿಲ್ಲವೆ?! ಆತನ ಮೆದುಳಿನ ವಿಕಾಸವನ್ನೂ ಬ್ರಾಹ್ಮಣ ತಡೆ ಹಿಡಿದನೆ?! ಹಾಗೆ ತಡೆಹಿಡಿದಿದ್ದೇ ಆದರೆ ಒಂದು ಆತನು ಮಾನವಾತೀತನೆ ಆಗಿರಬೇಕು.!! ಅಂದರೆ ಭೂಸುರನು, ಇಲ್ಲ ದೇವರಾಗಿರಬೇಕಲ್ಲವೆ?! ಇದನ್ನಾದರೂ ಭಾರತದ ಬುಜಿಗಳು ಒಪ್ಪುವರೆ?
ಇನ್ನು ಕೆಲವರು ಶೂದ್ರರಿಗೆ ವಿದ್ಯೆ ನಿಷಿದ್ಧವಾಗಿದ್ದರಿಂದ ಮತ್ತು ಮನುಷ್ಯನ ಸರ್ವಾಂಗೀಣ ಪ್ರಗತಿಗೆ ಶಿಕ್ಷಣ ಅತೀ ಮಹತ್ವದ್ದಾಗಿದ್ದರಿಂದ ಬ್ರಾಹ್ಮಣರು ವಿದ್ಯೆಯನ್ನೇ ಮುಚ್ಚಿಟ್ಟಿದ್ದರಿಂದ ಅವರು ಶೋಷಣೆಗೆ ಒಳಗಾದರು. ಎಂದು ಹೇಳುವುದುಂಟು. ಸರಿ, ಬ್ರಾಹ್ಮಣರು ವಿದ್ಯೆಯನ್ನು ಶೂದ್ರರಿಂದ ಮುಚ್ಚಿಟ್ಟರು. ಸಂಸ್ಕೃತದಲ್ಲಿ ಅಪಾರ ಜ್ಞಾನವಿತ್ತು. ಅಂಥ ಸಂಸ್ಕೃತವನ್ನೇ ಅವರು ಮುಚ್ಚಿಟ್ಟರು ಮತ್ತು ಕಲಿತವರ ನಾಲಿಗೆ ಕತ್ತರಿಸುತ್ತಿದ್ದರು ಹಾಗು ಸೀಸ ಸುರಿಯುತ್ತಿದ್ದರು. (ಇದಕ್ಕೆ ಮಾರಮ್ಮದೇವಿ ಕತೆ ಹೇಳುತ್ತಾರೆ ಮತ್ತು ಸಿಖ್ ಮತದಲ್ಲಿ ಒಬ್ಬನ ನಾಲಿಗೆ ಕತ್ತರಿಸಿದ ಕತೆ ಹೇಳುತ್ತಾರೆ) ಹಾಗಿದ್ದರೆ ಶೂದ್ರರಾಜ ಹರ್ಷ ‘ರತ್ನಾವಳೀ ಕಲ್ಯಾಣ’ ಹೇಗೆ ಬರೆದ? ಶೂದ್ರರಾಜನಾದ ಪುಲಕೆಸಿಯ ಸೊಸೆ ವಿಜ್ಜಿಕೆ ಕವಿಯಿತ್ರಿ ಹೇಗೆ ಅನಿಸಿಕೊಂಡಳು? ಶೂದ್ರ ಕಾಳಿದಾಸ ಶ್ರೇಷ್ಟ ಕವಿ ಹೇಗಾದ? ಶೂದ್ರ ವಿಜಯನಗರದ ರಾಜ ಕೃಷ್ಣದೇವರಾಯ ‘ಆಮುಕ್ತ ಮೌಲ್ಯದ’ ಹೇಗೆ ಬರೆದ? ಶೂದ್ರ ಕಂಪಣರಾಯನ ಹೆಂಡತಿ ‘ಮಥುರಾ ವಿಜಯಂ’ ಹೇಗೆ ಬರೆದಳು? ಇವರಿಗೆಲ್ಲಾ ಏಕೆ ನಾಲಿಗೆ ಕತ್ತರಿಸಿ ಸೀಸ ಸುರಿಯಲಿಲ್ಲ.?? (ಕೆಲವು ಉದಾಹರಣೆ ನೀಡಿರುವೆ, ಇನ್ನೂ ಅನೇಕ ಉದಾಹರಣೆಗಳಿವೆ.)
ಹೋಗಲಿ, 12 ನೇ ಶತಮಾನದ ಬಸವಾದಿಗಳ ಚಳುವಳಿಯೂ ಶೂದ್ರ ಚಳವಳಿ ತಾನೆ? ಹಾಗಿದ್ದರೆ ಈ ಕಾಲದಲ್ಲಿ ಅನೇಕ ಶೂದ್ರಾತೀಶೂದ್ರರೂ ವಚನ ಬರೆದಿದ್ದಾರೆ? ಇವರೆಲ್ಲ ಹೇಗೆ ಕಲಿತರು? ಮುಂದೆ ತಾವು ಕಲಿತದ್ದನ್ನು ಮರೆತರೇಕೆ? ನಂತರದ 800 ವರ್ಷಗಳಲ್ಲಿ ಇವರೇಕೆ ಹಿಂದುಳಿದರು? ಔರಂಗಜೇಬನ ಅಣ್ಣ ಷಹಝಾನನ ಮಗ ದಾರಾ ಶುಕೋಹ್ ಅನ್ನುವವನು ಉಪನಿಷತ್ತುಗಳನ್ನು ಪರ್ಶಿಯನ್ ಭಾಷೆಗೆ ತುರ್ಜುಮೆ ಮಾಡಿದ. ಅವನಿಗೆ ಸಂಸ್ಕೃತ ಯಾರು ಕಲಿಸಿದರು? ಮ್ಯಾಕ್ಸ ಮುಲ್ಲರ ವೇದಗಳನ್ನು ಅನುವಾದಿಸಿದ. ಇವನಿಗಾರು ಸಂಸ್ಕೃತ ಕಲಿಸಿದರು? ನೀವು ಹೀಗೂ ಅನ್ನಬಹುದು ಅವರು ಪ್ರಭುಗಳಾದ್ದರಿಂದ ಅಧಿಕಾರವಿದ್ದರಿಂದ ಕಲಿಸಿದರೆನ್ನುತ್ತೀರಿ. ಸರಿ ಈ ಅಧಿಕಾರವನ್ನು ಭಾರತದ ಇತಿಹಾಸದುದ್ದಕ್ಕೂ ಶೂದ್ರರೇ ಅನುಭವಿಸಿದ್ದಾರಲ್ಲಾ? ಇವತ್ತಿಗೂ ಅನುಭವಿಸುತ್ತಿರುವರಲ್ಲಾ? ಮತ್ತೇಕೆ ವಿದ್ಯೆ ಮುಚ್ಚಿಟ್ಟು ಶೋಷಣೆ ಮಾಡಿದರೆಂದು ಇನ್ನೊಬ್ಬರನ್ನು ದೂರುವಿರಿ?
ಒಟ್ಟಾರೆ ಯಾರೇ ಹಿಂದುಳಿಯಲಾಗಲೀ ಮುಂದುವರಿಯಲಾಗಲೀ ಅವರೇ ಕಾರಣೀ ಕರ್ತರೆ ವಿನಃ ಇನ್ನೊಬ್ಬರಲ್ಲ. ಬಡತನದಲ್ಲಿರುವ ವ್ಯಕ್ತಿ ಯಾವ ಜಾತಿಯವನೇ ಆಗಿದ್ದರೂ ಹಿಂದೂ ಇವತ್ತೂ ಮುಂದೂ ಶೋಷಿತನಾಗುತ್ತಲೆ ಇರುತ್ತಾನೆ.
“ಬಲಿಷ್ಠ ಜೀವಿಗಳ ಉಳಿವು ಅಶಕ್ತ ಜೀವಿಗಳ ಅಳಿವು ಪ್ರಕೃತಿ ನಿಯಮ” ಇದಕ್ಕೆ ಬ್ರಾಹ್ಮಣ ದೂಷಣೆ ಸಲ್ಲ.
ಗ್ರಂಥ ಋಣ
1) ಡಾ|| ಸರಜೂ ಕಾಟ್ಕರ್ “ಶಿವಾಜಿ ಮೂಲ ಕನ್ನಡ ನೆಲ
2) ಶ್ರೀ ಸೂರ್ಯನಾಥ ಕಾಮತ್ ‘ಒಕ್ಕಲಿಗರು ಮತ್ತು ಒಕ್ಕಲುತನ’
3) ಶ್ರೀ ಭೈರಪ್ಪ ‘ದಾಟು’, ‘ಪರ್ವ’
4) ಶ್ರೀ ಎಸ್ ಎನ್ ಬಾಲಗಂಗಾಧರರ ಮತ್ತು ಶ್ರೀ ರಾಜಾರಾಂ ಹೆಗಡೆಯವರ ಎಲ್ಲಾ ಲೇಖನಗಳು
ಚಿತ್ರಕೃಪೆ :- yourarticlelibrary.com
ಒಬ್ಬರನ್ನೊಬ್ಬರು ಹೀಯಾಳಿಸಿ ಪ್ರಯೋಜನವಿಲ್ಲ. ಶೋಷಣೆ ಮಾಡಿದವರು ಎಷ್ಟು ಅವಿವೇಕಿಗಳೋ, ಶೋಷಣೆಗೊಂಡವರೂ ಕೂಡ ಅಷ್ಟೇ ಅವಿವೇಕಿಗಳು. “ಯಾರೇ ಹಿಂದುಳಿಯಲಾಗಲೀ, ಮುಂದುವರಿಯಲಾಗಲೀ ಅವರಿಗೆ ಅವರೇ ಕಾರಣಕರ್ತರೆ ವಿನಃ ಇನ್ನೊಬ್ಬರಲ್ಲ. ಬಡತನದಲ್ಲಿರುವ ವ್ಯಕ್ತಿ ಯಾವ ಜಾತಿಯವನೇ ಆಗಿದ್ದರೂ ಹಿಂದೆ, ಇಂದು, ಮುಂದೂ ಶೋಷಿತನಾಗುತ್ತಲೆ ಇರುತ್ತಾನೆ.” ಅವಿವೇಕಿಗಳಾಗಲು ಕಾರಣ ಪರಾವಲಂಬಿತನ, ಮೂಢ ನಂಬಿಕೆಗಳು, ಹೇಳಿದ್ದನ್ನೆಲ್ಲಾ ಪ್ರಶ್ನಿಸದೇ, ಹಿಂದುಮುಂದಾಲೋಚಿಸದೇ ವಿವೇಚಿಸದೇ ನಂಬುವುದು. ಪ್ರಕೃತಿಮಾತೆ ಎಲ್ಲರಿಗೂ ಮೆದುಳನ್ನು ದಯಪಾಲಿಸಿದ್ದಾಳೆ. ಅದನ್ನು ಸರಿಯಾಗಿ ಉಪಯೋಗಿಸದಿರುವುದು ಯಾರ ತಪ್ಪು?
100%
yes
ಹೇಮಾಪತಿಯವರೇ ಹುಟ್ಟಿನಿಂದಲೂ ಮಾವುತನ ಭರ್ಚಿ ಯ ರುಚಿಯನ್ನಂಡ ಆನೆಗೂ ಕಾಡಿನಲ್ಲಿ ಬಿಂದಾಸ್ ಆಗಿ ಅಲೆಯುವ ಸಲಗಕ್ಕೂ ಪ್ರಕೃತಿ ಮಾತೆ ದಯಪಾಲಿಸಿದ್ದು ಒಂದೇ ರೀತಿಯ ಮೆದುಳು….
ಭರ್ಚಿ ಯಿಂದ ತಿವಿದು ತಿವಿದೂ ಗಜ ನನ್ನು ಅಜ ನಾಗಿಸಿದ ತಪ್ಪು ಯಾರದು ಅಂತೀರಾ….
ಅದು ಭರ್ಚಿಯ ..ಭಯ…
..ಇದು ದೇವರ…..ಧರ್ಮದ. …ಸಂಪ್ರದಾಯದ….ಪಾಪ …ಪುಣ್ಯಗಳ …ಸ್ವರ್ಗ…ನರಕಗಳ…ಭಯ…ರಾಜಾಧಿರಾಜರನ್ನೂ ಅಂಕೆಯಲ್ಲಿಟ್ಟ ಭರ್ಚಿಗಳಿವು..ಈ ಮಾವುತರೂ ಭಯಂಕರರು…..
correct
ಈ ಶೋಷಣೆ ಅನ್ನೋದು ನಡೀತಿದ್ದದ್ದು,ನಡೀತಿರೋದು ಕೇವಲ ಬಡವ ಮತ್ತು ಶ್ರೀಮಂತರ ಮಧ್ಯೆಯೇ ಹೊರತು ಜಾತಿ ಜಾತಿಗಳ ಮಧ್ಯೆಯಲ್ಲ !!! ಹೆಚ್ಚಾಗಿ ಶ್ರೀಮಂತ ಬಡವನನ್ನು ಶೋಷಿಸುತ್ತಾನೆ! ಬಲಿಷ್ಠ ದುರ್ಬಲನನ್ನು ಶೋಶಿಸುತ್ತಾನೆ! ಶ್ರೀಮಂತ ದಲಿತ ,ಬಡ ಬ್ರಾಹ್ಮಣನನ್ನೂ , ಶ್ರೀಮಂತ ಬ್ರಾಹ್ಮಣ ಬಡ ದಲಿತನನ್ನು ಶೋಷಿಸುವುದು ಕಾಣಬಹುದು! ಇಲ್ಲಿ ದಲಿತ,ಬ್ರಾಹ್ಮಣ ಭೇದವಿಲ್ಲ! ಇರೋದು ಶ್ರೀಮಂತ ಮತ್ತು ಬಡವ ಎಂಬ ಭೇದ ಭಾವ!
ಬುದ್ದಿಜೀವಿಗಳು ಹೇಳುವಂತೆ ಹಿಂದೆ ದಲಿತನಿಗೆ ತೆಂಗಿನ ಚಿಪ್ಪಿನಲ್ಲಿ ನೀರು ಕೊಡುತ್ತಿದ್ದರು ಎಂಬಂತೆ ಶ್ರೀಮಂತನ ಮನೆಗೆ ಹೋದ ಬಡ ಬ್ರಾಹ್ಮಣನಿಗೂ ಅವರು ನೀರು ಕೊಟ್ಟರೆ ಕೊಡುತ್ತಿದ್ದುದು ತೆಂಗಿನ ಚಿಪ್ಪಿನಲ್ಲಿಯೇ! ಇದಕ್ಕೆ ತುಂಬಾ ಜನ ಹಿರಿ ಜೀವಗಳು ಸಾಕ್ಷಿಯಾಗಿದಾರೆ! ಬಡವ ಮತ್ತು ಶ್ರೀಮಂತ ರ ಮಧ್ಯೆಯ ಭೇಧ ಭಾವ ಈಗಿನ ಕಾಲದಲ್ಲೂ ಕಾಣಬೇಕಾದರೆ ಶ್ರೀಮಂತನ ಮನೆಗೆ ಬಡವನಾಗಿ ಹೋಗಿ ನೋಡಿ! ಬೇಕಾದರೆ ಬ್ರಾಹ್ಮಣರಾಗಿಯೇ ಹೋಗಿ…. ಅನುಭವ ಆಗಿಯೇ ಆಗುತ್ತದೆ!
ಹೌದಾ? ಹಾಗಾದ್ರೆ ಒಬ್ಬ ಬಡ ಬ್ರಾಹ್ಮಣನ ಮನೆ ಒಳಗೆ ಒಬ್ಬ ಬಡ ದಲಿತ ಹೋಗೋದಕ್ಕೆ ಯಾವತ್ತೂ ತೊಂದರೆಯೇ ಇರಲಿಲ್ಲ ಅಂತ ತಾವು ಹೇಳ್ತಾ ಇದ್ದೀರಾ. (ಹಿಂದಿನ ಕಾಲದಲ್ಲಿ ಎಷ್ಟು ಮಂದಿ ಹಣವಂತ ದಲಿತರಿದ್ದರು ಅನ್ನೋದು ಬೇರೆ ಪ್ರಶ್ನೆ). ಇವತ್ತು ನಿಮ್ಮ ಮನೆಯೊಳಗೆ ಕೊರಗ ಸಮುದಾಯದವರನ್ನು ಬಿಟ್ಟುಕೊಂಡು ಊಟ ಹಾಕುತ್ತೀರೋ? ಅವರ ಊಟದ ತಟ್ಟೆಯನ್ನು ನೀವು ತೊಳೆಯೋದಕ್ಕೆ ಏನೂ ಅಭ್ಯಂತರ ಇಲ್ಲವೋ? ಇಲ್ಲಿಯರೆಗೆ ಒಮ್ಮೆಯಾದರೂ ಕೊರಗರ ಕೇರಿಯೊಳಗೆ ಹೋಗಿದ್ದೀರೋ ನೀವು? ನಿಮ್ಮ ಮನಃಸಾಕ್ಷಿಯಾಗಿಟ್ಟುಕೊಂಡು ಹೇಳಿ!
ಎಲ್ಲಾ ಧರ್ಮಗಳಲ್ಲೂ ಈ ಜಾತಿ ವ್ಯವಸ್ಥೆ ಇದೆ, ಅದರಂತೆ ಹಿಂದೂ ಧರ್ಮದಲ್ಲಿಯೂ ಇದೆ. ಹಿಂದೂ ಧರ್ಮದಲ್ಲಿ ಜಾತಿ ತಾರತಮ್ಯವೇ ಇರಲಿಲ್ಲ, ಬರೇ ಧನಿಕ-ಬಡವ ತಾರತಮ್ಯ ಇತ್ತು, ಅಂತ ಹೇಳೋದು ಹಾಸ್ಯಾಸ್ಪದ. ನಗರಗಳಲ್ಲಿ ಇಂದು ಈ ತಾರತಮ್ಯ ಅಷ್ಟೊಂದು ಕಾಣದೇ ಇದ್ದರೂ ಹಳ್ಳಿಗಳಲ್ಲಿ ಇದಿನ್ನೂ ಢಾಳಾಗಿ ಕಾಣಿಸುತ್ತದೆ. ಅದನ್ನ ಒಪ್ಪಿಕೊಂಡು ಅದನ್ನ ನಿವಾರಿಸಿಕೊಳ್ಳೋದನ್ನ ಬಿಟ್ಟು ಅದು ಇಲ್ಲವೇ ಇಲ್ಲ ಅಂತ ಹುಂಬತನ ತೋರಬಾರದು. ಅದೇನೂ ಹತ್ತಿಪ್ಪತ್ತು ವರ್ಷಗಳಲ್ಲಿ ಹೋಗೋವಂಥದಲ್ಲ. ಇದು ಡಿಜಿಟಲ್ ಯುಗವಾಗಿದ್ದರೂ ಅನೇಕ ಹಳ್ಳಿಗಳಲ್ಲಿ ಈ ಬಗ್ಗೆ ಜಾಗರೂಕತೆ ಬರೋದು ಇನ್ನೂ ದೂರ ಇದೆ.
Sir Hoysalaru kurubaru atava gawaligalu endiruviralla , atava tegedu haaki , hoysalaru , vijayanagaradavaru gawaligale ,neeve suchisuva yadava ennuva padave yaavude sandehakke aaspada needade hoysalaru , vijayanagaradavaru gawali galendu tilisuttade , yadava ennuva padavu sri krishnana kuladavarige maatra upayoogisuvudu ellarigu tilide ide sri Krishna gawali embudu sarvaviditha , kurubaru taavu yadavaru endu ellu helikolluvudilla.
Navella jaati paddatiyannu meeri ondaagi baalabeku haage satyakke apachaaravaagabaaradu
ರಾಣಾ ಅವರೆ ಕುರುಬರೆಂದರೆ ಕುರಿಕಾಯುವದಷ್ಟೇ ಅವರ ಕಸುಬಾಗಿತ್ತು ಎಂದು ತಿಳಿದಿರುವಂತಿದೆ. ಆದರೆ ದನಗಳನ್ನು ಸಾಕುವದು ಕೂಡಾ ಕುರುಬರ ಕುಲಕಸುಬಾಗಿದೆ. ಮರಾಠಿಯಲ್ಲಿ ಕುರುಬರಿಗೆ ದನಗರ್ ಎನ್ನುತ್ತಾರೆ. ಇದು ಕನ್ನಡದ ದನಕರ ಎನ್ನುವದರಿಂದ ವ್ಯುತ್ಪತ್ತಿಯಾದ ಶಬ್ದವಾಗಿದೆ. ನಾನು ವಿಜಯಪುರದ ಗವಳಿ ಗಲ್ಲಿಯಲ್ಲೇ ಕೆಲಸ ಮಾಡುತ್ತಿರುವೆ. ಇಲ್ಲಿಯ ಜನರು ತಲೆತಲಾಂತರದಿಂದಲೂ ಗವಳಿ ವೃತ್ತಿಯಲ್ಲಿದ್ದಾರೆ. ಆದರೆ ಇವರ ಮಕ್ಕಳನ್ನು ಶಾಲೆಗೆ ಸೇರಿಸುವಾಗ ಜಾತಿಯ ಕಾಲಂ ನಲ್ಲಿ ಜಾತಿಯನ್ನು ಕುರುಬರೆಂದು ನಮೂದಿಸಲು ಹೇಳುತ್ತಾರೆ. ಇನ್ನೂ ಹೆಚ್ಚಿನ ಮಾಹಿತಿಗೆ ನೀವು ‘ ಶಿವಾಜಿಯ ಮೂಲ ಕನ್ನಡ ನೆಲ ‘ ಪುಸ್ತಕ ನೋಡಿ. ಡಾ. ಸರಜೂ ಕಾಟ್ಕರ್ ಈ ಪುಸ್ತಕ ಬರೆದಿದ್ದಾರೆ. ಇನ್ನು ಬಹಳ ಜನ ಈ ಲೇಖನಕ್ಕೆ ಮತ್ತು ಇದೇ ರೀತಿಯ ಕಮೆಂಟುಗಳನ್ನು ಬರೆದಾಗ ಹಿಂದೇನಾಗಿದೆ ಅದನ್ನು ಇವತ್ತೇಕೆ ಕೆದಕುವಿರಿ?? ಭಾರತದ ಇವತ್ತಿನ ಸಮಸ್ಯೆಗಳೇ ಸಾಕಷ್ಟಿವೆ. ಮೊದಲು ಅವುಗಳತ್ತ ಗಮನಿಸಿ. ಇಂಥ ಲೇಖನಗಳಿಂದ ಪ್ರಯೋಜನಗಳಿವೆಯಾ ಎಂದು ಕೇಳತೊಡಗುತ್ತಾರೆ. ಆದರೆ ಭಾರತದ ಬುಧ್ಧಿಜೀವಿಗಳು ಅವಕಾಶ ಸಿಕ್ಕಾಗಲೆಲ್ಲ ಬ್ರಾಹ್ಮಣರ ಶೋಷಣೆಯ ಕುರಿತು ಗಂಟಲು ಹರಿದುಕೊಳ್ಳುವದನ್ನು ನಿಲ್ಲಿಸುವದೇ ಇಲ್ಲ. ನಾವು ಕೆಲಸ ಮಾಡುವ ಪ್ರದೇಶಗಳಲ್ಲಿ, ಓದುವ ವಿದ್ಯಾಲಯಗಳಲ್ಲಿ, ಸುಮ್ಮನೆ ಕಾಡು ಹರಟೆ ಹೊಡೆಯುವ ಸ್ಥಳಗಳಲ್ಲಾಗಲೀ ಈ ವಿಷಯದ ಬಗ್ಗೆ ಪ್ರಸ್ತಾಪ ಬಂದೇ ಬರುತ್ತದೆ. ಆವಾಗೆಲ್ಲ ನಮ್ಮ ಬಾಯಿ ಕಟ್ಟಿ ಹೋಗಿ ನಾವು ವಿನಾಕಾರಣ ಅಪರಾಧಿ ಭಾವದಲ್ಲಿ ತಲೆ ತಗ್ಗಿಸಬೇಕಾಗುತ್ತದೆ. ಸತ್ಯ ಏನೆಂದು ಎಲ್ಲರೂ ತಿಳಿಯುವಂತಾಗಲಿ ಮತ್ತು ಬ್ರಾಹ್ಮಣರಿಗೆ ಆರೋಪ ಮಾಡಿದಾಗ ತಮ್ಮನ್ನು ಸಮರ್ಥಿಸಿಕೊಳ್ಳಲು ಅವರಿಗೆ ವಿಷಯ ತಿಳಿದಿರಲೆಂಬ ಕಾರಣಕ್ಕೆ ಈಲೇಖನ ಬರೆದಿರುವೆ. ಕೊನೆಯದಾಗಿ ನಾನು ಸರ್ ಅಲ್ಲಾರೀ ಮೆಡಂ. 🙂 🙂 🙂
ಮನುಸ್ಮೃತಿಯಲ್ಲಿ ಶಾಲೆಗೆ ಮಕ್ಕಳನ್ನು ಕಳುಹಿಸಿದ ಯಾವುದೇ ತಂದೆ ತಾಯಿಗಳಿರಲಿ ಅವರನ್ನು ನಿರ್ದಾಕ್ಷಿಣ್ಯವಾಗಿ ಜೈಲಿಗೆ ತಳ್ಳಬೇಕು ಎಂದು ಹೇಳಿರುವಾಗ ಮನುವು ಶೂದ್ರ ವಿರೋಧಿಯೇ? ಹುಟ್ಟಿನಿಂದ ಎಲ್ಲರೂ ಶೂದ್ರರೇ ಎಂದರೆ ಅಜ್ಞಾನಿಗಳು. ಸಂಸ್ಕಾರದಿಂದ ಮಾತ್ರವೇ ಅವರನ್ನು ಬ್ರಾಹ್ಮಣ ಇತ್ಯಾದಿ ವರ್ಣಗಳನ್ನು ಪಡೆಯುತ್ತಾರೆ ಎಂದು ಹೇಳಿರುವ ಮನುವು ಶೂದ್ರ ವಿರೋಧಿಯೇ? ಒಂದೇ ರೀತಿಯ ಅಪರಾಧ ಮಾಡಿರುವ ಬ್ರಾಹ್ಮಣ ಮತ್ತು ಶೂದ್ರ [ ತಿಳುವಳಿಕೆ ಇಲ್ಲದವನು] ರ ನಡುವೆ ಬ್ರಾಹ್ಮಣನಿಗೆ ಶೂದ್ರನಿಗಿಂತ ಹೆಚ್ಚಿನ ಮಟ್ಟಿಗೆ ಶಿಕ್ಷೆಯನ್ನು ವಿಧಿಸಬೇಕು ಎಂದು ಹೇಳಿರುವಾಗ ಮನುವು ಶೂದ್ರ ವಿರೋಧಿಯೇ? ನಿಜ. ಪುರಾಣ ಕಾಲದಲ್ಲಿ ಶೂದ್ರರಿಗೆ ವೇದಾಧಿಕಾರವನ್ನು ನಿರಾಕರಿಸಲಾಯಿತು. ಇದು ಅಕ್ಷಮ್ಯ ಅಪರಾಧ. ಆದರೆ ಶೂದ್ರಾತಿ ಶೂದ್ರರಿಗೆ ವೇದಗಳ ಅಧಿಕಾರವನ್ನು ಮತ್ತೊಮ್ಮೆ ಪ್ರಾಪ್ತಿ ಮಾಡಿದವರು ಸ್ವಾಮಿ ದಯಾನಂದರು. ಅವರು ಬರೆದ ಸತ್ಯಾರ್ಥ ಪ್ರಕಾಶದಲ್ಲಿ ಶೂದ್ರರು ಮತ್ತು ಸ್ತ್ರೀಯರಿಗೆ ಅನ್ಯರಂತೆ ಇವರಿಗೂ ವೇದಾಧಿಕಾರವಿದೆ ಎಂದು ಪ್ರತಿಪಾದಿಸಲಾಗಿದೆ. ಪರಿಣಾಮ ಈಗ ನೋಡಬಹುದು. ಯಾದವ ಕುಲದಲ್ಲಿ ಜನಿಸಿದ ರಾಮ ಕಿಷನ್ ಯಾದವ್ ಈಗ ಅರ್ಯಸಮಾಜ ಗುರುಕುಲದಲ್ಲಿ ಶಿಕ್ಷಣ ಪಡೆದು ಸ್ವಾಮಿ ರಾಮದೇವ್ ಆಗಿ ವೇದಗಳ ನಿಷ್ಟಾವಂತ ಭಕ್ತರಾಗಿ ವೇದ ಸಂದೇಶವನ್ನು ಎಲ್ಲೆಡೆಯೂ ಸಾರುತ್ತಿದ್ದಾರೆ.
100%
“ಸ್ವಾಮಿ ರಾಮದೇವ್ ಆಗಿ ವೇದಗಳ ನಿಷ್ಟಾವಂತ ಭಕ್ತರಾಗಿ ವೇದ ಸಂದೇಶವನ್ನು ಎಲ್ಲೆಡೆಯೂ ಸಾರುತ್ತಿದ್ದಾರೆ.”
Ramdev is an industrialist who has used yoga as front end to market his company’s products to the gullible. He is not a saint as Hondutva dolts would want us to believe; he is a pakka capitalist who is maximising profits for his company. He has amassed property in foreign lands like Malya and Lalit Modi. Why would a sanyasi who has renounced worldly life go behind money??? His property should be immediately ceased and nationalised.
you should be talking about Mullahs not Sanyasis Comred
Show one Mullah who has used Islam to build a mega industry and fool people into buying useless products? Show one Mullah who has become a capitalist profit maximizer?
who are you to Qn Sanyasis? are you Hindu? if you don’t want his product don’t buy it .whoever i sinterested they will buy it nd stop crying.go get some AZAADI
Truth about your Hindutva icon hurts you doesn’t it? Remain a dolt for the rest of your life.
my question is simple.why are you worried on something which you are not part of?
ಇಸ್ಲಾಮಿಕ್ ಬ್ಯಾಂಕ್ ಎಂಬುದನ್ನು ಕೇಳಿದ್ದೀಯಾ? ಇಸ್ಲಾಮಿನ ಹೆಸರಿನಲ್ಲಿ ಬಿಲಿಯನ್ ಡಾಲರ್‌ಗಟ್ಟಲೇ ವ್ಯವಹಾರ ಮಾಡುವ ದೊಡ್ಡ ಮುಲ್ಲಾ ಬ್ಯಾಂಕರ್‌ಗಳೆಲ್ಲಾ ಮುಸ್ಲಿಮರ ಅಂಧಶ್ರದ್ಧೆಯನ್ನು ತಮ್ಮ ಜೇಬು ತುಂಬಿಸಿಕೊಳ್ಳುವ ಸಲುವಾಗಿ ಬಳಕೆ ಮಾಡುತ್ತಿರುವವರೇ, ತಿಳಿದುಕೋ!
Mulla’s are good for nothing. Anyone worth their salt will not become Mulla’s.
Untouchability, Sati Burning, Widow tonsuring, Child Marriage, Superstitions, Exploitation of Dalits and Shoodras, Abysmal state of Women, etc are all bad dreams perceived as truth by the colonial powers who ruled India. All was well in Rama Rajya till the colonial rule; Seeta didn’t face Agni Pareeksha, Shabari didn’t wait for Rama, Draupadi didn’t have five husbands. It’s all colonial consciousness.
this is topic of HINDUs.what are you doing here Comred Salam. go and talk about Burkha,Talaakh,Shariyat law etc etc
Hindus are the majority community in india. So what they do matters to and affects minority communities. Hatred towards minorities is what Hindutva bigots are preaching. Hatred needs to be condemned, countered and negated.
Comred, do you understand Kannada? show me one word in this article which shows hatred towards so called minorities and then will talk further.
Minority? Second largest world population of Muslims ms in India you pig. Come out of that cushy cover and talk sense. 20% population does not make you minority sucker
ಎಂದರ್‌ಲಾ ಕಾಕಾ? ನಿನ್ನ ಇಸ್ಲಾಮಿನಲ್ಲಿ ದೊಡ್ಡ (ಕದ್ದ) ಕೋಣ ಬಿದ್ದು ನಾರುತ್ತಿದೆ, ನೀನು ಹಿಂದೂಗಳ ಮೇಲೆ ಸೊಳ್ಳೆ ಕೊಲ್ಲುವ ಅರೋಪ ಹೊರಿಸುತ್ತಿದ್ದೀಯ! ನೀನು ಹೇಳಿದ ಹೆಚ್ಚಿನ ಆಚರಣೆಗಳನ್ನು ಹಿಂದೂ ಸಮಾಜ ಗೊತ್ತಿದ್ದೋ ಗೊತ್ತಿಲ್ಲದೆಯೋ ನಿವಾರಿಸಿಕೊಂಡಿದೆ. ಜಾತಿ ಪದ್ಧತಿಯಂತ ಆಳವಾಗಿ ಬೇರುಬಿಟ್ಟ ಪದ್ಧತಿಗಳನ್ನು ಹೋಗಲಾಡಿಸುವುದು ಸುಲಭವಾಗಿ ಸಾಧ್ಯವಿಲ್ಲ. ಈ ಪದ್ಧತಿಯ ಕಡಕುಗಳ ಬಗ್ಗೆ ಹೆಚ್ಚು ಗೊತ್ತಾದಂತೆಲ್ಲಾ, ವೈಜ್ಞಾನಿಕ ಮನೋಭಾವ ಬೆಳೆದಂತೆಲ್ಲಾ ಕಾಲಾಂತರದಲ್ಲಿ ತನ್ನಿಂದ ತಾನೆ ಈ ಪದ್ದತಿಯೂ ಮರೆಯಾಗಲಿದೆ. ಮುಸ್ಲಿಮನಾಗಿ ನಿನಗೂ ಗೊತ್ತಿದೆ ಜಾತಿಯ ವಿಷಯ ಅಷ್ಟು ಸರಳವಲ್ಲ ಅಂತ. ಸರಿಯಾಗಿ ಕನ್ನಡ ಓದಲು ಮಾತನಾಡಲು ಬರೆಯಲು ಬಾರದ ಅರೇಬಿಕ್/ಮಲೆಯಾಳಿ ಬಾಂಧವನಾದ ನೀನು ಹಿಂದೂಗಳ ಆಚರಣೆ ಬಗ್ಗೆ ಮಾತಾಡೋದನ್ನ ನಿಲ್ಲಿಸು. ಎಂಟನೇ ಶತಮಾನದ ಖೊರಾನ್‌ಅನ್ನು ಅತ್ಯಂತ ಶ್ರೇಷ್ಠ ಅದಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ ಅಂತ ಇಪ್ಪತ್ತೊಂದನೇ ಶತಮಾನದಲ್ಲೂ ನಂಬಿರುವು ನೀನು ಬೇರೆ ಧರ್ಮದವರ ನಂಬಿಕೆಗಳ ಮೇಲೆ ಕಾಮೆಂಟ್ ಮಾಡೋದನ್ನ ನಿಲ್ಲಿಸು. ಯಃಕಶ್ಚಿತ್ ಒಬ್ಬ ಪ್ರವಾದಿಯ ಚಿತ್ರ ನೋಡೋವಷ್ಟು ಸಹನೆ ಇಲ್ಲದ ನಿನಗೆ ಹಿಂದೂಗಳ ಆಚರಣೆಯನ್ನ ಗೇಲಿ ಮಾಡೋ ಹಕ್ಕಿಲ್ಲ!
ಸುಂದರವಾಗಿದೆ.
Sri Bava has queried to show one Mullah who is operating business empire as being done by Swami Ramdev. I may point to him that there is one Moulana Ajmal Khan in Assam[ who is also M.P] is considered as Perfume Baron, a business, running into crores. Is this not business then what it is ?
Further, let us put the matter straight. Swami Ramdev is an Aryan sanyasi who has shunned three aspirations in life. First love for Money called Vittai shana . second, love for fame called Kirthi Ashana, third love for relations called Putraishana. ಕನ್ನಡದಲ್ಲಿ ಹೇಳುವುದಾದರೆ, ಸಂನ್ಯಾಸಿಯು ಮೂರು ಆಷಣಗಳನ್ನು ಬಿಡಬೇಕು. ಒಂದು ಪುತ್ರೈಶಣ,ಎಂದರೆ ಬಂಧು ಭಾಂದವರ ಬಗ್ಗೆ ಮೋಹ. ಎರಡನೆಯದಾಗಿ ವಿತ್ತೈಷಣ ಎಂದರೆ, ಹಣದ ಬಗ್ಗೆ ಮೋಹ, ಮೂರನೇಯದಾಗಿ, ಲೋಕೈಷಣ ಎಂದರೆ, ಕೀರ್ತಿಯ ಬಗ್ಗೆ ಆಸೆ. A Sanyasi must be away from these three temptations and Swami Ramdev is living to the Goal of Sanyasi to the extent possible. I may add here although Ramdev is popularising products brought out by M/S Patanjali he does have NO stake in the financial dealings of the company.
Besides, this he is also creating health awareness among people without bothering about the caste and creed of the participants. One may agree with him or not about the efficacy of Yoga but it is recognised by the W.H.O. as a discipline that tempers body and mind.
Now, Sri Bava should tell us which Mullah, Moulvi among Muslims is doing such work as being done by Ramdev. These Mullahs are more concerned, about cap. beard, Burkha, Uniform civil code and kicking dust about chanting r Vande Mataram by Muslims all useless except fomenting hatred and disaffection in the country. I am yet to come across one Muslim Moulvi, Mullah engaging in such constructive activity encompassing all Indians. The fact is they are not and they never will be.
Sri Bava should not compare a Sanyasi with Mullah or Maulvi. The latter is priestly people but Sanyasi is engaged in disseminating Knowledge among people showing them the correct code of conduct. A Sanyasi is not priest.
The MNCs are looting the country. But Swami Ramdev thru his efforts has caused the shiver in the spines of these MNCs with his Swadeshi products. He has braved all odds created by Congress and communists and shown how a person believing in efforts could show how one could become successful.
ಸಲಾಂ ಬಾವ ಉತ್ತರಕೊಡದಿರುವುದು ಎನನ್ನು ನಿರೂಪಿಸುತ್ತದೆಯೆಂದರೆ ನಿಮ್ಮ ಕಮೆಂಟಿನಿಂದ ಆಜಾದಿ ಪಡೆದುಕೊಂಡು ಕಾಲಿಗೆ ಬುದ್ಧಿ ಹೇಳಿರುವ ಸಾಧ್ಯತೆಗಳಿವೆ
ತರಲೆ ಬುದ್ಧಿಯ ನಮೋ ಪಡೆಯ ಕಾಲಾಳುಗಳು ತಮ್ಮನ್ನು ಕಾಮ್ರೇಡ್ ಎಂದು ಕರೆದುಕೊಂಡರೂ ಸಹ ಅವರು ಕಾಮ್ರೇಡ್ ಅಲ್ಲ ಎಂಬುದು ಸ್ಪಷ್ಟವಾಗಿದೆ. ಇನ್ನು ಕನ್ನಯ್ಯನಂತಹ ತತ್ವಬದ್ಧ ಕ್ರಿಯಾಶೀಲತೆ ಫೇಕ್ ಕನ್ನಯ್ಯರಿಗೆಲ್ಲಿ? ಬಾವ ಭಾಯಿ ಅವರ ಸ್ಟ್ರೇಟ್ ಬ್ಯಾಟಿಂಗ್ ನಿಂದ ನಮೋ ಕಾಲಾಳುಗಳು ತ್ರಸ್ತರಾಗಿದ್ದಾರೆ.
“ಬಾವ ಭಾಯಿ ಅವರ ಸ್ಟ್ರೇಟ್ ಬ್ಯಾಟಿಂಗ್ ನಿಂದ ನಮೋ ಕಾಲಾಳುಗಳು ತ್ರಸ್ತರಾಗಿದ್ದಾರೆ.”
You’re right. Look at the semi lunatic tirade of Sudharshna Rao below. Bigots like him will chew beef every day in London but prescribe vegetarian diet to non-Brahmins of India! Disgusting hypocrites these self proclaimed saviours of Hindu traditions are.They’ll never understand a Buddha or Basava or Babasaheb.
“They’ll never understand a Buddha or Basava or Babasaheb.”
_http://ladaiprakashanabasu.blogspot.in/2016/06/blog-post_78.html
Mu lla Bava the bullshit- no- pigshit shoots from his hips
ಇಲೆಕ್ಷನ್ ಮುಗಿದ ಕೂಡಲೆ ಕಲೆಕ್ಷನ್ ಮಾಡಿಕೊಂಡು ಕಾಲುಕಿತ್ತಿ ನಾಪತ್ತೆಯಾಗಿರುವ ಕನ್ನಯ್ಯನ ಕನ್ನಹಾಕಿದ ಕ್ರಿಯಾಶೀಲತೆ ಬಗ್ಗೆ ನಾಗಶೆಟ್ಟಿ ಎಂಬ ಕನ್ನಯ್ಯನ ಚೋರ ಶಿಷ್ಯ ಮಾತನಾಡದಿದ್ದರೆ ಚೆನ್ನ ಬಸವನ ಸೇವೆಯಾದೀತು. ಅವನೆಂಥ ತರಕಲಾಂಡಿ ಎಂದು ಇಡೀ ದೇಶ ನೋಡಿ ಉಗಿದು ಅವನನ್ನು ಮುಂದಿಟ್ಟು ಕೊಂಡು ದೊಂಬರಾಟ ಮಾಡಿದ ಕಮ್ಮಿನಿಷ್ಟರ ಕೈಗೆ ಚಿಪ್ಪು ಕೊಟ್ಟಿದ್ದು ಸಗಣಿ ತೊಪ್ಪೆ ಹಾಕುವ ಬ್ರದರ್ ಬಸವ ನಾಮಾಂಕಿತ ಅಭಿನಯವೂ ಬರದ ಅಭಿನಯ ಚೆನ್ನಾ ಎಂಬ ಕಳ್ಳಹೆಸರಿನ ಇನ್ನೊಬ್ಬ ತರಕಲಾಂಡಿ ವಿಷಯಾಂತರ ಮಾಡುತ್ತಿರುಔಮಾಡುತ್ತಿರುಉದು ನಮಗೆ ತಿಳಿಯದೇ?I can not keep quiet
ಇನ್ನೂ ಹಳೇರಾಗ ಹಾಡಬೇಡ. ಎಲ್ಲಾ ಸಂವಿಧಾನದ ಪ್ರಕಾರ ಇತ್ಯರ್ಥ ಆಗಿ ದೋಷಮುಕ್ತಿ ಸಿಕ್ಕಿದೆ. ಹಳವಂಡಗಳು ಕಾಂಗಿ ಕಮ್ಮಿನಿಷ್ಟಗಳ ಮೂಲಕ ಬರ್ತಾಇರೋದು ಕಾಣಲ್ವಾ ಕೊಚ್ಚೆ ಹುಳವೇ.
ಕನ್ನಯ್ಯನ ಮಾತು ತೆಗೆದ,ಅಲ್ಲಿ ಗುನ್ನ ಬಿತ್ತು,ಈಗ ಮೋದಿ ವಿಚಾರ. ಹೀಗೇ ಮಂಗನಂತೆ ವಿಚಾರ ಲಂಘನ ಮಾಡಬೇಡವೋ ಚೆನ್ನಬಸವನ ತುಂಡೇ
He is a good man
Not ಸಲಾಂ ಬಾವಾ ಸಾಬಿ,ಬಟ್ ರಾಂ ದೇವ್ ಬಾಬಾ. Lot of people are making their living. With ಸಾಬಿ ಭಯೋತ್ಪಾದನೆ,lot of people are being killed. All that is not constructive, ಓನ್ಲಿ ವಿಧ್ವಂಸಕ ಕೆಲಸಗಳು. ಲೋ ಸಾಬಿಯೇ, ಯಾರಿಗಾದರೂ ಹನಿ ನೀರು ಕೊಟ್ಟ ಪುಣ್ಯ ನಿನಗಿದೆಯೋ
Mr. Vasu, the Muslim gentleman you have quoted is not a Baba like Ramdev. He’s a business man like your own Vijay Malya and Lalit Modi. He has not fooled people saying he’s a Baba. By comparing him to Ramdev, you’ve admitted that Ramdev is basically a businessman. Why is he then fooling everyone acting as a Sanyasi? Kalla sanyasi.
Even so,Mulla’s are good for nothing but to issue outdated fatwas against mankind killing people all over the world. Shame on the name of peace. No one but no one would employ a mulla except to cut the throats of animals to bleed them to death.
Oh yeah.. That’s why thousands of your caste brothers have gone to Saudi Arabia, Qatar, UAE, and other Muslim countries to give jobs to Mullahs.
By the way does one remain a Brahmin even after migrating to Muslim countries and wearing Burkha and Hijab?
Our dharma says do your part of work,earn a living ,and unlike yours it is not set in stone. For the betterment, change for good -is what we follow.
Nobody wears burkhs in your own Muslim world. Lazy buggers need talent there so get other people to work for them. Here in India scums like you live on majority Hindu temple money to spit venom on them. Shame on you
ನಮ್ಮ ದೇಶದ ಆರ್ಥಿಕ ವ್ಯವಸ್ಥೆಗೆ ಮುಸಲ್ಮಾನರ ಕೊಡುಗೆ ಅಪಾರ. ಮುಸಲ್ಮಾನರಲ್ಲಿ ಬಹುತೇಕ ಮಂದಿ ಶ್ರಮಿಕ ವರ್ಗಕ್ಕೆ ಸೇರಿದವರಾಗಿದ್ದು ಪ್ರತಿ ದಿನ ಮೈ ಮುರಿದು ದುಡಿಯುತ್ತಾರೆ. ಮೈಗಳ್ಳತನ ಮಾಡದೆ ವೃತ್ತಿನಿಷ್ಠೆಯನ್ನು ಮೆರೆದಿದ್ದಾರೆ. ಮುಸಲ್ಮಾನ ಅಧಿಕಾರಿಗಳೂ ರಾಜಕಾರಣಿಗಳೂ ಭ್ರಷ್ಟಾಚಾರರಹಿತ ದಕ್ಷ ಆಡಳಿತಕ್ಕೆ ಹೆಸರಾಗಿದ್ದಾರೆ.
The Registrar of Lokayutha was a Muslim with a flowing beard. What he did is known to the entire country.
Pl check up the no of people in Prisons. You will know the truth. While Muslims are no doubt engaging in physical labour their quota of criminal elements among them is very huge compared to their quantum of population. Why? Dont bring Secularism here.
Read Sachar commission report. Most Muslims are poor and can’t afford to hire quality legal service like your own Jayalalitha, Yedyurappa, Katta Naidu and Mallya. There’s systemic bias in police department and judiciary against Muslims. While savvy brahmins and upper caste Hindus blatantly indulge in crime and fraud without getting punished, innocent Muslims are mercilessly and wrongly punished.
Sachar report was a doctored report. So quoting that biased report makes no sense here. Even S.C/ S.T ,men are also equally poor. But they don’t nurse the Criminal tendency as your esteemed brothers have. This is all because your esteemed friends and the cult they follow don’t have the openness of mind. Reformation is unheard of among them. Hindus with all their faults have thrown up hundreds of reformers and the Society is also reforming albeit late and slow. This is not so with your dear friends here. People with closed minds suffer and makes others also suffer. This is a phenomenon that we are witnessing in all Muslim Countries.
Dear friend, you’re completely indoctrinated with anti Muslim prejudices. This is what Hindutva does to otherwise normal and sensible young men. It reduces them to venom spewing communal robots. Sad to see you in this state.
“Sachar report was a doctored report.”
Justice Sachar is a well respected judicial expert who had a distinguished career as a judge. His devotion to truth and commitment to facts is undisputed. He has done a great job of researching the status of Muslims and reporting the same. As he has told truth that is not palatable to bigot Hindutva trolls like you, you call the report doctored. Shame on you. Your thinking is doctored by Muslim hatred.
Sounds like a liner from all useless dumb politicians,,. Oh I had forgotten, shitty nag is one among them
You must be a follower of Sadhwi Prachi. You too spew venom against Muslims like her. So much poison in your heart! Or do you even have.a heart?
“he does have NO stake in the financial dealings of the company”
His brother and other relatives own his company. Ramdev believes in Benami ownership.
You are absolutely wrong. His brother is like any employee. You can check up the details with the company.
The perfume boron I referred to is a Moulana. Otherwise, how he is addressed as such if he is not so?
To brand Ramdev as a thief is a height of your ignorance and arrogance. Have you noticed any thiefly behaviour in him? Smt Bridna of C.P.M levelled allegations against him. . Did she prove the allegations? on the contrary her allegations were found to be baseless and smacked of jealousy.
You need not be an admirer of Ramdev. The entire country barring some CPM and Congressmen are opposing him for political reasons. This is O.K But by calling him as thief You are showing how communal you are. One may agree with him or not but calling names is not justified.
Had he been a Benami owner, the Tax authorities would have hauled him before the court. They could do it as the then UPA govt was not in his favour and he was castigating the congress Govt. With all their efforts they could do little as there was no truth in calling him as benami owner.
.
Ramdev’s chela Balakrishna owns 94% of stake in Patanjali. Isn’t that as good as Ramdev owning the company? Even Balakrishna is a Baba.
“The perfume boron I referred to is a Moulana.”
Don’t be an ignoramus. Mowlana is a scholar of Islam like your Sanskrit scholars like Avdhani Ganesh. They’re are not Babas. They are not God men.
ಬೆರೆಯವರನ್ನು ಹೀಯಾಳಿಸುವವರು ಇನ್ನಾದರು ಇದನ್ನು ಅರ್ಥೈಸಿಕೊಂಡು ಬದಲಾಗಲಿ. ತುಂಬಾ ಒಳ್ಳೆಯ ಮಾಹಿತಿ ನೀಡಿದ್ದಿರಿ ದನ್ಯವಾದಗಳು.
Population 1:10:6. = 1 – poor (weak& very small in population ¬ in list of vote bank) Brahmana, 10 -brilliant others,(rulers, kings,East INDIA company, Muslim Kings, now politicians & very big vote bank) in 6-strong, Hard working, innocent, non vegetarians(less in population). So all 10 wants..1+ 6work for 10’s benefits ….. Now try to experience what 1 poor/weak Brahmana can do…. (same principal going on working…. IT was in past – is in present – must be in future… Continues…. please try to understand reality.. Generously….. Find reality….Continues….
ಇದೆಲ್ಲಾ ಮಾತುಕತೆಗಳಿಂದ ಹೊರ ಬಿದ್ದ ಸತ್ಯವೇನೆಂದರೆ, ನಾಗಶೆಟ್ಟಿ ಎಂಬ ಎಲ್ಲಿಯೂ ಸಲ್ಲದ ಅಗಸನ ಕತ್ತೆಯು ಸಲಾಂ ಬಾವಾ ಎಂಬ ರೂಪಾಂತರ ತಳೆದುದು. ಕತ್ತೆಗೆ ಹುಲಿಯ ಚರ್ಮ ಹಾಗೂ ಹಂದಿಯ ಚರ್ಮ ಸಿಕ್ಕಿತ್ತಂತೆ. ಆದರೆ ಹೆಡ್ಡ ಮುಂಡೇದು ಅಲ್ಲಿಯೂ ತನ್ನ ಹೆಡ್ಡತನ ತೋರಿ,ಹಂದಿಯ ಚರ್ಮವನ್ನು ಹೊದ್ದಿತಂತೆ. ಆದರೇನು? ಹುಟ್ಟುಗುಣ ಹೋಗುವುದೇ. ಸಿಕ್ಕಿಬಿತ್ತು. ಹಿಂದೆ ಬಸವನ ಚರ್ಮ ಹೊದ್ದಿತ್ತು.
Why are you not protesting the draconian initiatives of Sanghi governments to force Brahministic lifestyle on non-Brahmin majority of this country? Even Vedas and Smritis recognise the existence of non-Brahministic lifestyle but Sangh parivar doesn’t. The Talibanistic side of Nationalism is fully exposed by draconian initiatives of NaMo and his cronies.
ಅತ್ಯಂತ ತರ್ಕಬದ್ಧವಾದ, ಸಾಕಷ್ಟು ಉದಾಹಣೆಗಳನ್ನು ಉಲ್ಲೇಖಿಸಿ ಪ್ರಭಾವಶಾಲಿಯಾಗಿ ಬರೆದ ಲೇಖನ. ಅಭಿನಂದನೆಗಳು.
ಧರ್ಮಪಾಲ್ ಅವರ ದಿ ಬ್ಯೂಟಿಫುಲ್ ಟ್ರೀ ಕೃತಿಯಲ್ಲಿ ನೀಡುವ ೧೮೦೦ರ ವೇಳೆಗೆ ವಿದ್ಯಾಭ್ಯಾಸ ಮಾಡುತ್ತಿದ್ದ, ಬ್ರಾಹ್ಮಣರ ಸಂಖ್ಯೆಯನ್ನೂ ಮೀರಿಸಿದ ವಿವಿಧ “ಶೋಷಿತ ಸಮುದಾಯಗಳ” ಅಂಕಿಅಂಶಗಳನ್ನೂ ಬಳಸಿಕೊಂಡಿದ್ದರೆ ಚೆನ್ನಾಗಿತ್ತು.