ವಿಷಯದ ವಿವರಗಳಿಗೆ ದಾಟಿರಿ

ಜೂನ್ 1, 2016

4

ಇಂದಿನವರೆಗೂ ಬುದ್ದಿಜೀವಿಗಳ ಬುದ್ಧಿ ನೆಟ್ಟಗಾಗಿಲ್ಲ. ಮುಂದಾದರೂ ಆದೀತಾ?

‍ನಿಲುಮೆ ಮೂಲಕ

-ಶ್ರೀಕಾಂತ್ ಆಚಾರ್ಯ

1ಇಲ್ಲೇ ಹುಟ್ಟಿ, ಇಲ್ಲೇ ಬೆಳೆದು ಈ ದೇಶದ ಅಷ್ಟೂ ಸವಲತ್ತನ್ನ ಚಪ್ಪರಿಸಿಕೊಂಡು ಅನುಭವಿಸಿದವರಿಂದ ಭಾರತದ ‘ಬರ್ಬಾದಿಗೆ’ ಜಂಗ್(?) ಶುರುವಾಯ್ತಲ್ಲ. ಆಶ್ಚರ್ಯ ಅನ್ನಿಸಿತಾ? ಬಹುಶಃ ಇರಲಿಕ್ಕಿಲ್ಲ. ಈ ದೊಂಬರಾಟಗಳನ್ನ ನಾವೆಲ್ಲಾ ಕಂಡವರೇ. ಬದುಕಿನಲ್ಲಿ ತನಗೊಂದು ‘ಐಡೆಂಟಿಟಿ’ಯೇ ಇಲ್ಲದೇ ಪರಿತಪಿಸುವ ಮಂದಿ ಬಹಳಷ್ಟು ಬಾರಿ ಹೀಗೆಲ್ಲ ಮಾಡಿಯೇ ಹೆಸರಿಗೆ ಬರೋದಿದೆ. ಹಾಗಂತ ಇವರನ್ನ ಅಸಡ್ಡೆ ಮಾಡಿ ಬದಿಗಿಡುವಂತಿಲ್ಲ. ಯಾಕೆಂದರೆ ಇವರೆಲ್ಲರ ಹೋರಾಟ ಇರೋದು ಕೆಟ್ಟದರ ಬಗ್ಗೆಯಲ್ಲ, ಈ ದೇಶಕ್ಯಾವುದೋ ಮಾರಕವಾಗಿದ್ದರೆ ಅದರ ಬಗ್ಗೆಯೂ ಅಲ್ಲ. ಇವರ ‘ಜಂಗ್’ ಇರೋದು ಈ ದೇಶದ ಸಮಗ್ರತೆಯ ಬಗ್ಗೆ. ಈ ದೇಶದ ಸನಾತನತೆಯ ಬಗ್ಗೆ. ಒಟ್ನಲ್ಲಿ ಈ ದೇಶದ ಬಗ್ಗೆಯೇ. ಇವೆಲ್ಲಾ ‘ಬುದ್ಧಿಮಾಂದ್ಯ’ ಜೀವಗಳಿಗೆ ಹೆಗಲಾಗಿ ನಿಂತು ಪೋಷಿಸುತ್ತಿರುವುದು ಇಲ್ಲಿನ ಬುದ್ಧಿ ಜೀವಿಗಳೆಂಬ ಅಡಕಸುಬಿಗಳು. ಅದಲ್ಲದೇ ಇನ್ನೇನು? ಮತಿ ತಪ್ಪಿದವ ಮಾಡಿದ ತಪ್ಪನ್ನ, ತಪ್ಪು ಅನ್ನೋದು ಬಿಟ್ಟು ಅವರೊಲ್ಲಬ್ಬರಾಗಿ ನಿಂತು ಗುರಾಣಿ ಹಿಡಿದು ಮತ್ತಷ್ಟು ಇನ್ನಷ್ಟು ಪ್ರಪಾತಕ್ಕೆ ಇಳಿಯೋಕೆ, ಎಳೆಯೋಕೆ ತಯಾರಾದರೆ?

ಈ ದುರ್ಬುದ್ಧಿ ಜೀವಿಗಳಿಗೆ ಇರೋ ಅಜೇಂಡಾ ಒಂದೇ. ಯಾರಾದರೂ ಮೋದಿಯವರ ವಿರುದ್ಧ ಮಾತಾಡುತ್ತಾರಾ? ಯಾರಾದರೂ ಬಿಜೆಪಿಯವರ ವಿರುದ್ಧ ಇದ್ದಾರ? ಅವರನ್ನೆಲ್ಲಾ ಅಂಬೋ ಅಂತ ಬಾಚಿ ತಬ್ಬಿಕೊಳ್ಳಬೇಕು. ಅಷ್ಟೇ! At least ಕೊಚ್ಚೆಗೆ ಬಿದ್ದ ಹಂದಿಯಾದರೂ ಸರಿ, ಎತ್ತಿ ಹಿಡಿದು ಅನಾಮತ್ತಾಗಿ ಮುದ್ದಾಡುತ್ತಾರೆ. ಈ ‘ಅವಿವೇಕಿ’ಗಳಿಗೆ ಬುದ್ಧಿಜೀವಿಗಳೆಂಬ ಪಟ್ಟ ಬೇರೆ. ಗೀಚಿದ ಒಂದಷ್ಟು ಸಾಹಿತ್ಯಕ್ಕೆ ಪ್ರಶಸ್ತಿ ಸಿಕ್ಕಿದೆ ಅನ್ನೋದು ಇವರ ಅಹಂ’ಗೆ ಬೆನ್ನೆಲುಬು. ಹುಟ್ಟಿದ ದೇಶಕ್ಕೆ, ಮೆಟ್ಟಿದ ನೆಲಕ್ಕೆ  ಆಗೋ ಅಪಚಾರವನ್ನೂ ಧರಣಿ ಕುಂತಾದರೂ,  ಸರಿ ಅಂತ ಕೂಗಾಡೋದು ಇವರ ಐಡಿಯಾಲಜಿ.

ಆಗಾಗ ಬಂದು ‘Town Hall’ ಮುಂದೆ ಜಮಾಯಿಸುವ ಇವರನ್ನೆಲ್ಲಾ ಕಂಡಾಗ, ಅಕ್ಷರಶಃ ಒಂದು ಗಾದೆ ಹಾಗೆ ನೆನಪೊತ್ತರಿಸಿ ಬರುತ್ತೆ. ಹಾಂ! ಗಾದೆ ಯಾವುದು ‍ಅಂದಿರಾ? ಅದೇ ರೀ! ನಾಯಿಯನ್ನ ಎಳೆದು ತಂದು ‘ಪೀಠ(?)’ದ ಮೇಲೆ ಕೂರಿಸಿದರೆ ಅದೆಂತದೋ(?) ಕಂಡು ಕೆಳಗೆ ಹಾರಿತಂತೆ. ಇವರನ್ನೆಲ್ಲಾ ಪ್ರಗತಿಪರರು ಅಂತ ಅಂದ್ಕೊಂಡಿದ್ದೇ ತಪ್ಪಾಗಿ ಹೋಯ್ತು. ಪ್ರಗತಿಪಥದಿಂದ ‘ಪಥಭೃಷ್ಟ’ರಾಗಿ ಇಡೀ ದೇಶಕ್ಕೇ ಕ್ಯಾನ್ಸರ್ ಆಗಿರುವ ಇಂತವರನ್ನ ಹೇಗಾದರೂ ಸಹಿಸಿಕೊಳ್ಳೋದು? ಅಜೆಂಡಾ ಇರಬೇಕು. ಒಂದೊಳ್ಳೆ ಉದ್ದೇಶಕ್ಕಾಗಿ! ಒಬ್ಬ ಮನುಷ್ಯನನ್ನೋ, ಒಂದು ಸಮುದಾಯವನ್ನೋ ಕಾರಣ ಇಲ್ಲದೇ ಸುಖಾ ಸುಮ್ಮನೆ ಕೆದಕಿಕೊಂಡು ಕುಳಿತರೆ? ಪ್ರಸ್ತುತ ಬುದ್ಧೀಜೀವಿಗಳ ಆಷಾಡಭೂತಿತನ ಇರೋದು ಇಲ್ಲಿಯೇ. ಸರಿಯೋ, ತಪ್ಪೋ – ದ್ವೇಷಿಸಬೇಕು ಅನ್ನೋ ಕಾರಣಕ್ಕಾಗಿ ದ್ವೇಷಿಸೋದು. ಬೇಕಿದ್ದರೆ ಮೂರಕ್ಕೇ ಮೂರು ಸೇರಿಸಿದರೆ ಆರಾಗುತ್ತದನ್ನೀ – ನೀವು ವಿರೋಧೀ ಪಾಳ್ಯದವರು ಅಂತಾದರೆ, ಬೆಳ್ಳಂಬೆಳ್ಳಗೆ ಧರಣಿ ಕೂತಿರುತ್ತಾರೆ. ಆರೇ ಸರೀ ಅನ್ನೋದು ಅವರಿಗೂ ಗೊತ್ತಿರುವ ವಿಚಾರ. ಆದರೇನು ಮಾಡೋದು? ಹೇಳಿದ್ದು ನೀವಲ್ಲವ? ವಿಧಿಯಿಲ್ಲ; ಅರಚಲೇಬೇಕು! ಮತ್ತು ಅರಚುತ್ತಾರೆ ಕೂಡ. ಇವರೆಲ್ಲಾ ದೇಶಕ್ಕೆ ವ್ಯಾಧಿಗಳಲ್ಲದೇ ಮತ್ತಿನ್ನೇನು?

ದೇಶದ ಸಮಗ್ರತೆಯಲ್ಲಿಯೇ ಬಿರುಕು ಮೂಡಿಸಿ, ಅದರಲ್ಲೇ ಗಂಜೀ ವ್ಯವಸ್ಥೆ ಮಾಡಿಕೋಳ್ಳೋದು ಎಷ್ಟರ ಮಟ್ಟಿಗೆ ಸರಿ? ಯಾವುದರಲ್ಲಿ ಬೇಕಾದರೂ ರಾಜಿ ಮಾಡಿಕೊಂಡು ಸಾಯಲಿ. ಆದರೆ ದೇಶ ಅಂತ ಬಂದಾಗಾದರೂ ಇವರುಗಳ ಆತ್ಮಸಾಕ್ಷಿ ನೆಟ್ಟಗಾಗಬಾರದಾ? ಆಗೋದಿಲ್ಲ-ದೇಶಭಕ್ತರೆಲ್ಲ ದೇಶದ ಜೊತೆಗಿದ್ದಾರೆ ಅಂದ ಮೇಲೆ ಅದನ್ನೆಲ್ಲಾ ವಿರೋಧಿಸೋಕೆ ಅಂತಾನೆ ಒಂದು ‘ಲಾಜಿಕ್ಕೇ’ ಇರದ ಪ್ರಖಾಂಡ(?) ಪಂಡಿತರ ಗುಂಪೊಂದು ಬೇಕಲ್ಲಾ? ಅದಕ್ಕೇ ಜೊತೆಯಾಗಿ ಸೇರಿ ದೇಶದ ಬರ್ಬಾದಿಗೆ ನಿಂತು ಬಿಟ್ಟಿದ್ದಾರೆ. ಬಿಡಿ! ರಾವಣ ಆವತ್ತಿಗೂ ಇದ್ದ. ಇವತ್ತೂ ಇದ್ದಾನೆ. ಆದರೆ ಲಂಕಾದ ರಾವಣನಿಗಿಂತ ಇಲ್ಲಿರುವ ‘ಲಂಕಿಣಿ’ಯರೇ ಶ್ಯಾನೆ ನಟೋರಿಯಸ್. ಉಪ್ಪು ತಿಂದ ಮನೆಗೆ ತೆಪ್ಪಗೆರಡು ಬಾರಿಸಿ ಬಿಡೋದರಲ್ಲಿ ನಿಸ್ಸೀಮರಿವರು. ಒಮ್ಮೆ ಇವರನ್ನೆಲ್ಲಾ ಬೀದಿ ಬದಿಯಲ್ಲಿ ಅಡ್ಡಗಟ್ಟಿ ನಿಂತು ಈ ದೇಶದ ಬಗ್ಗೆ ಒಂದಷ್ಟು ಒಳ್ಳೆಯದೇನಾದರೂ ಹೇಳಿ ಅಂತ ಕೇಳಿ ನೋಡಿ. ದೇವರಾಣೆಗೂ ಬಾಯೇ ಬರದ ಮೂಖರಂತೆ ಸುಮ್ಮನೆ ನಡೆದುಬಿಡುತ್ತಾರೆ. ಯಾವತ್ತಿಗೂ ಅದವರಿಗೆ ಬೇಕಿಲ್ಲ. ಎಲ್ಲರೂ ಹೊಡೆಯುವ ಗುರಿಯೆಡಗೆ ನನ್ನದೂ ಒಂದಿರಲಿ ಅನ್ನೋ destructive attitude ಅದು. ಇನ್ನು ದೇಶ construct ಮಾಡೋದು ಇವರಿಂದಾಗುವ ಕೆಲಸವಲ್ಲ.

ಈ ದೇಶದಲ್ಲಿ ಧ್ವಜ ಹಾರಿಸೋದು, ವಂದೇ ಮಾತರಂ’ಗೆ ದನಿಯಾಗೋದು ಕೋಮು ಸೌಹಾರ್ದಕ್ಕೆ ಧಕ್ಕೆ ತರಬಲ್ಲುದು. But Eating Beef? ಅದು ಕೋಮು ಸೌಹಾರ್ದಕ್ಕೆ ವೇದಿಕೆಯಾಗಬಲ್ಲದು. ಇವರೆಲ್ಲರನ್ನ ಎಲ್ಲಿ ತಂದು ನಿಲ್ಲಿಸುತ್ತೀರಿ? ಎಡ – ಬಲ ಯಾವುದಕ್ಕೂ ಹೊಂದದವರು. ಮತ್ತೆ ಇವರನ್ನ ಎಡಬಿಡಂಗಿಗಳು ಅಂತ ಕರೆಯದೇ ಇನ್ನೇನು ಮಾಡಬೇಕಿತ‌್ತು ಹೇಳಿ. ಹಾಗಂತ ನೀವು ಎಡ-ಬಿಡಂಗಿ ಅಂತ ಕರೆದಿರೋ ಮತ್ತದೇ ವರಾತ ತೆಗೀತಾರೆ. ‘ಭಕ್ತ’ರೆಲ್ಲಾ ಸೇರಿ ‘ಎಲ್ಲ ತತ್ವದ ಎಲ್ಲೆ ಮೀರಿ’ ಛೇಡಿಸಿದ್ದಾರೆ ಅಂತ.

ವಾಕ್ ಸ್ವಾತಂತ್ರ್ಯ, Freedom of Expression ಹೆಸರಲ್ಲಿ ಇವರು ಬೇಕಾದ್ದನ್ನೆಲ್ಲಾ ಮಾತಾಡಬಲ್ಲರು. ಹಾಗಂತ ಹೆತ್ತ ತಾಯಿಗೇ ಅವಮಾನ ಮಾಡೋದು ಸರಿಯಾ? ದೇಶದ್ರೋಹಿಗಳೇ ‘ಭಾರತ ಬಿಟ್ಟು ತೊಲಗಿ’ ಅಂದಾಗ ಹೆಗಲು ಮುಟ್ಟಿ ನೋಡಿ ಇದೇನು ನಿಮ್ಮಪ್ಪನ ಆಸ್ತಿಯಾ? ಅಂತ ನೆಲ – ಮುಗಿಲು ಒಂದಾಗುವಂತೆ ಅರಚುವವರಿಗೆ ಏನಂತ ಉತ್ತರ ಕೊಡೋದು? ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅಷ್ಟೂ ಜನ ಹೋರಾಟಗಾರರು ಅದ್ಯಾರ ಅಪ್ಪನ ಆಸ್ತಿಗಾಗಿ ಹೋರಾಟ ಮಾಡಿದ್ದು? ಅಂದಿಗಾದರೂ ಹೊರಗಿನಿಂದ ಬಂದವರನ್ನ ಜಾಡಿಸಿ ಓಡಿಸಿದ್ದಾಯ್ತು. ಆದರೇ ಈಗ ಇಲ್ಲಿನವರೇ ದೇಶದ ಅವನತಿಗೆ ಸನ್ನದ್ಧರಾಗಿ ನಿಂತು ಬಿಟ್ಟರೆ? ಇದ್ಯಾವ ಕರ್ಮ?

ಅಂದು ಅವರೆಲ್ಲಾ ಬಲಿಯಾಗಿದ್ದು ನಮಗೊಂದು ಸುಂದರ ಸ್ವಾತಂತ್ರ್ಯದ  ಸೂರು ಕೊಡೋದಕ್ಕಾಗಿ. ಇಂದಿಗೂ ಅಷ್ಟೇ – ಒಂದಷ್ಟು ಜನ ಸೇರಿ ಇಲ್ಲಿನ ಬುದ್ಧಿ(ಬುದ್ಧು)ಜೀವಿಗಳ ಭಟ್ಟಂಗಿತನ ಬಯಲು ಮಾಡಿದ್ದು, ಮಾಡುತ್ತಿರೋದು ಈ ದೇಶ ಅಖಂಡವಾಗಿ ಉಳಿಯಲಿ ಅನ್ನೋ ಆಸೆಗೋಸ್ಕರವೇ. ಅದೆಲ್ಲಾ ಈ ಬುದ್ದುಗಳಿಗೆ ಎಲ್ಲಿಂದ ಅರ್ಥವಾಗಬೇಕು? ‘ದೇಶ’ಕ್ಕಾಗಿ ಮಡಿದ ಯೋಧನನ್ನ ಹುತಾತ್ಮ ಅಂತ ಕರೀತಾರೋ ಇಲ್ಲವೋ, ಗಂಜಿ ಸಿಗೋದು ಖಾತ್ರಿಯಾದರೆ ಒಬ್ಬ ದೇಶದ್ರೋಹಿಯನ್ನ ಎಳೆದು ತಂದು ‘ಸೆಲೆಬ್ರಿಟಿ’ಯಾಗಿಸಿ ಬಿಟ್ಟಿಯಾಗಿ ‘ಹುತಾತ್ಮ’ಗಿರಿ ದಕ್ಕಿಸಿಕೊಡುತ್ತಾರೆ.

ವೈಚಾರಿಕ ಭಿನ್ನಾಭಿಪ್ರಾಯ, ಸೈದ್ಧಾಂತಿಕ ಭಿನ್ನಾಭಿಪ್ರಾಯ ಎಲ್ಲವೂ ಒತ್ತಟ್ಟಿಗಿರಲಿ. ಅ‌ದರೆ ದೇಶದ ಸಮಗ್ರತೆಯಲ್ಲಿ ರಾಜಿಯಾಗಲೇಬಾರದಿತ್ತು.
ಕೊನೆಗೂ ಕೇಳಿಕೊಳ್ಳೋದಿಷ್ಟೇ. ಇಂದಿನವರೆಗೂ ಬುದ್ದಿಜೀವಿಗಳ ಬುದ್ಧಿ ನೆಟ್ಟಗಾಗಿಲ್ಲ. ಮುಂದಾದರೂ ಆದೀತಾ?

4 ಟಿಪ್ಪಣಿಗಳು Post a comment
  1. ದ್ಯಾವನೂರು ಮಂಜುನಾಥ್
    ಜೂನ್ 1 2016

    ಲೇಖನ ಚೆನ್ನಾಗಿದೆ

    ಉತ್ತರ
  2. laxmikanth
    ಜೂನ್ 1 2016

    ಆಚಾರ್ಯ ರೇ…..ಟೌನ್ ಹಾಲ್ ನ ಅಕ್ಕ ಪಕ್ಕದಲ್ಲಿ ಆಗಾಗ್ಗೆ ಬಂದು ಕೂಗಾಡುವ “ಬುದ್ದಿ ಜೀವಿ”ಗಳ ….”ಲದ್ದಿಜೀವಿ”ಗಳ ಕತೆ ಬಿಡಿ. ..ಅವರು ಬದಲಾದರೆ ಆಗ್ತಾರೆ…ಇಲ್ಲಾಂದರೆ ಗಂಟಲು ಹರಿದುಕೊಂಡು ಸಾಯಲಿ ಬಿಡಿ …..

    ಈ ಭೀಫ್ ತಿನ್ನುವ ಬಗ್ಗೆ ನಿಮಗೇನನ್ನಿಸುತ್ತೆ…ನಾನು ತಿನ್ನದಿದ್ದರೂ ತಿಂಗಳ ನಾಲ್ಕು ಭಾನುವಾರ ಗಳಲ್ಲಿ ಕೋಳಿ….ಕುರಿ. …ಮೀನು. . ತಿನ್ನುವ ನನಗೆ ಇತರರು ಅವರಿಗೆ ಇಷ್ಟವಾದರೆ ಭೀಫ್….ಹಂದಿ… ತಿಂದರೆ ಅದೇನೂ ದೊಡ್ಡ ವಿಷಯ ಅಲ್ಲ ಅನ್ಸುತ್ತೆ….

    ….ಮತ್ತೆ ನಿಮ್ಮ ಲೇಖನದಲ್ಲಿ ಭೀಫ್ ತಂದಿದ್ದಕ್ಕೆ ಕೇಳಿದೆ ಅಷ್ಟೇ. …

    ಹಾಗೇನೇ….ವಂದೇ ಮಾತರಮ್ಮು….ಜನಗಣ ಮನ…ಭಾರತ್ ಮಾತಾಕಿ…ಸಾರೆ ಜಹಾಸೆ….ಇವು ನನಗೆ ಮೈಯಲ್ಲಿ ಮಿಂಚು ತರುತ್ತವೆ….ನಿಮಗೂ ಹಾಗೇ ಅಂದುಕೊಂಡಿದ್ದೇನೆ….ವರ್ಷಕ್ಕೊಮ್ಮೆ ಮಗನ ಸ್ಕೂಲಿಗೆ ಹೋಗಿ ಜನಗಣಮನ ಹೇಳಿ ಬರ್ತೇನೆ…. ಆಗಸ್ಟ್ 15 ರ ನಂತರವೂ ಅಲ್ಲಿ….ಇಲ್ಲಿ. ..ಹಾರಾಡುತ್ತಿರುವ “ತ್ರಿವರ್ಣ” ವನ್ನು ಕಂಡರೆ ಹಾರಿಸಿ ತೆಗೆದಿಡಲು ಮರೆತವರನ್ನು ನಯವಾಗಿ ಎಚ್ಚರಿಸುತ್ತೇನೆ….ಇದನ್ನು ತಡೆಯುವಂತೆ ಒಮ್ಮೆ ರಾಷ್ಟ್ರಪತಿಗೇ ಬರೆದಿದ್ದೆ…ಈಗ…ಅಲ್ಲಿಂದ ಬಂದ ಉತ್ತರದಂತೆ “ತ್ರಿವರ್ಣ” ಕ್ಕೆ ಅಗೌರವ ಆಗ್ತಾ ಇದೆ ಅಂತ ಅನ್ನಿಸಿದರೆ ಪೋಲಿಸರಿಗೆ ಫೋನ್ ಮಾಡ್ತೇನೆ….

    ಅಲ್ಲ ಇದೆಲ್ಲ ಯಾಕೆ ಹೇಳ್ದೆ ಅಂದರೆ…ಭೀಫ್ ತಿನ್ನುವವರ ಬಗ್ಗೆ ಆಕ್ಷೇಪ ಇಲ್ಲ ಅಂದ್ನಲ್ಲ….ಎಲ್ಲಿ ದೇಶದ್ರೋಹಿ ಅಂದ್ಕೂಂಡ್ ಬಿಡ್ತೀರೋ ಅನ್ನಿಸ್ತು….

    ಉತ್ತರ
    • ಜೂನ್ 1 2016

      ಪ್ರೀತಿಯ ಲಕ್ಷ್ಮಿಕಾಂತರೆ .,

      ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು. ಈ ರಾಷ್ಟ್ರದ ಗೀತೆಯ ಬಗೆಗೆ ನಿಮಗಿರೋ ಅಭಿಮಾನಕ್ಕೆ, ಧ್ವಜದ ಮೇಲಿರೋ ಕಾಳಜಿಗೆ ನನ್ನದೊಂದು ಸಲಾಮ್!

      ನೀವೇ ಅಂದಂತೆ, ತೀರಾ ಸಲೀಸಾಗಿ ನಿಮಗೆ ದೇಶದ್ರೋಹಿಯ ಪಟ್ಟ ಯಾಕಾದರೂ ಕಟ್ಟಬೇಕು? ಅದು ನನ್ನ ಕೆಲಸವಲ್ಲ.

      ಇನ್ನು ‘ಭೀಫ್’ ಬಗ್ಗೆ ಕೇಳಿದಿರಿ. ಈ ದೇಶದಲ್ಲಿ ಗೋ ಹತ್ಯೆ ನಿಷೇಧ ಆಗಬೇಕೋ? ಬೇಡವೋ? ಅನ್ನೋದು ಬಹುದಿನಗಳ – ದಶಕಗಳ ಜಗ್ಗಾಟ. ಬಹುಶಃ ಈ ದೇಶದ ನ್ಯಾಯಾಲಯ ಕೂಡ ಸಮರ್ಥವಾಗಿ ಅದಕ್ಕೊಂದು ಉತ್ತರ ಕಂಡಂತಿಲ್ಲ. ನಾನು – ನೀವು ಇಲ್ಲಿ ಕೂತು ತೀರ್ಪು ಹೇಳೋದು ಶುದ್ಧ ಅಪರಾಧ. ಅದಾಗ್ಯೂ ‘ಭೀಫ್’ ವಿಷ್ಯ ಬಂದಿದ್ದಕ್ಕೆ ಇವ್ಯಾವುದೂ ಕಾರಣವಲ್ಲ. ಅದಕ್ಕೆ ಕಾರಣೀಭೂತರು once again ಬುದ್ಧಿಜೀವಿಗಳು. ಯಾವುದೋ ಒಂದು ಕೋಮಿನ ಓಲೈಕೆಗಾಗಿ ರಸ್ತೆ ಮಧ್ಯದಲ್ಲಿ ಕೂತು ನಾನದು ತಿನ್ನುತ್ತೀನಿ, ನಾನಿದು ತಿನ್ನುತ್ತೀನಿ ಅಂತ ತಿಣುಕಾಡೋದು ಸರೀ ಅಂತ ನನಗನ್ನಿಸಿಲ್ಲ.

      ಇದೇ ಬುದ್ಧಿಜೀವಿಗಳು ಆಹಾರ ”ಹಕ್ಕಿ”ನ ಬಗ್ಗೆ ಹೋರಾಡುತ್ತಾ ಬೇಕಾದ್ದನ್ನೆಲ್ಲಾ ತಿನ್ನುವಾಗ, ಈ ದೇಶದಲ್ಲಿದ್ದು ನಾವು ಮಾಡಬೇಕಾದ ಕರ್ತವ್ಯಗಳಲ್ಲಿ ಲೋಪವೆದ್ದಾಗ ನಿಂತು ತಪರಾಕಿ ಕೊಟ್ಟು ಸರಿ ದಾರಿಗೆ ತಂದಿದಿದ್ದೆಯಾ? ಯಾಕೀ ಇಬ್ಬಂದಿತನ ಅಂತ ನಿಮಗೆ ಅನಿಸೋದಿಲ್ಲವಾ?

      ಹಾಗಂತ ‘ಭೀಫ್’ ತಿಂದದ್ದಕ್ಕೆ ಪ್ರಾಯಶ್ಚಿತವಾಗಿ ‘ವಂದೇ ಮಾತರಂ’ಗೆ ಜೊತೆಯಾಗೋದು ಸರೀ ಅಂತ ಅಂದುಕೋಬೇಡಿ ಮತ್ತೆ!

      ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments