ಹಳಿ ತಪ್ಪಿರುವ ಚಾಲಕನಿಗೆ ತಿಳಿಹೇಳುವವರು ಯಾರು?
– ರೋಹಿತ್ ಚಕ್ರತೀರ್ಥ
ಮೂಕಂ ಕರೋತಿ ವಾಚಾಲಂ. ಹಾಗಾಗಿದೆ ನನಗೆ. ಬರೆಯಬೇಕಿದ್ದ ಕೈ ಓಡುತ್ತಿಲ್ಲ. ಮನಸ್ಸು ಹೆಪ್ಪುಗಟ್ಟಿ ಕೂತಿದೆ. ಏನು ಅಂತ ಬರೆಯಲಿ? ಏನನ್ನು ಹೇಳಲಿ? ಕತ್ತಲಿಗೆ ಹತ್ತೆ ತಲೆ? ನೂರಾರೆ? ಅದು ಅಸಂಖ್ಯ! ಕತ್ತರಿಸಿದರೆ ಬೆಳೆವ, ಬೆಳೆದು ಕತ್ತಿಗೆ ಬರುವ ಅನಾದಿ; ಕೋದಂಡದಂಡವೂ ಹೀಗೆ ದಂಡ ಎನ್ನುವ ಗೋಪಾಲಕೃಷ್ಣ ಅಡಿಗರ ಸಾಲುಗಳು ತಲೆಯೊಳಗೆ ಅಪ್ಪಾಲೆತಿಪ್ಪಾಲೆಯಂತೆ ಸುತ್ತುತ್ತಿವೆ. ಮಳೆಗಾಲದ ಕಾರ್ಮೋಡಗಳು ಸುತ್ತ ಇಳಿಬಿದ್ದಿರುವಂತೆ ಹೃದಯದ ತುಂಬೆಲ್ಲ ಕತ್ತಲೆ ತೂಗುತ್ತಿದೆ. ಮೈ ಮಂಜುಗಟ್ಟಿದೆ. ಬರೆಯುವುದನ್ನು ಉಸಿರಾಟದಷ್ಟೇ ಸಹಜವಾಗಿ ಮಾಡಬಲ್ಲ ನನಗೂ ಕೈಯನ್ನು ಯಾರೋ ಎಳೆದುಕಟ್ಟಿರುವಂಥ ಭಾವ.
ಮತ್ತೊಂದು ಹೆಣ, ಇನ್ನೊಂದು ರಾಜೀನಾಮೆ, ಮಗದೊಂದು ಸಸ್ಪೆಂಡ್… ಈ ವಿಷಚಕ್ರ ಕೊನೆಯಿಲ್ಲದೆ ಸುತ್ತುತ್ತಿದೆ ಕರ್ನಾಟಕದಲ್ಲಿ. ಎಂಬತ್ತರ ದಶಕದಲ್ಲಿ ಬರೆದು ಆಡಿಸಿದ “ಮುಖ್ಯಮಂತ್ರಿ” ನಾಟಕ ಇದುವರೆಗೆ ಕಂಡಿರುವುದು 600 ಪ್ರದರ್ಶನಗಳನ್ನು. ಆದರೆ ಸಿದ್ದರಾಮಯ್ಯನವರು ತನ್ನ ಕುರ್ಚಿಯನ್ನೂ ಸರಕಾರವನ್ನೂ ಉಳಿಸಿಕೊಳ್ಳಲು ಆಡುತ್ತಿರುವ ದೊಂಬರಾಟಗಳನ್ನು ಆಧರಿಸಿ ನಾಟಕ ಆಡಿಸಿದರೆ ಒಂದೇ ವರ್ಷದಲ್ಲಿ ಅದು ಸಾವಿರ ಹೌಸ್‍ಫುಲ್ ಪ್ರದರ್ಶನಗಳನ್ನು ಕಾಣಬಹುದು! ಪರಮಕೊಳಕರ ಕೊಟ್ಟಕೊನೆಯ ತಾಣ ರಾಜಕೀಯ ಎಂಬ ಮಾತಿನ ಅಂತರಾರ್ಥವನ್ನು ನಿಜ ಮಾಡಲೆನ್ನುವಂತೆ ಸಿದ್ದರಾಮಯ್ಯ ರಾಜಕಾರಣ ಮಾಡುತ್ತಿದ್ದಾರೆ. ಹಿಟ್ಲರ್, ಸ್ಟಾಲಿನ್, ಈದಿ ಅಮೀನ್, ಕಿಮ್ ಜಾಂಗ್-ಉಲ್, ಪಾಲ್‍ಪಾಟ್ ಮುಂತಾದ ದುಷ್ಟ ಸರ್ವಾಧಿಕಾರಿಗಳನ್ನು ಕಂಡುಗೊತ್ತಿಲ್ಲದ ನನ್ನ ತಲೆಮಾರಿನವರಿಗೆ ಅಂಥದೊಂದು ಸರ್ವಾಧಿಕಾರದ ದಿನಗಳ ಝಲಕ್ ತೋರಿಸುತ್ತಿದ್ದಾರೆ ಇವರು. ಮುಖ್ಯಮಂತ್ರಿಯ ಹುದ್ದೆಯುಳಿಸಿಕೊಳ್ಳಲು ಇಷ್ಟೊಂದು ಭಂಡತನದಿಂದ ಬಾಳಬೇಕೆಂದು ನಮಗೆ ಗೊತ್ತಿರಲಿಲ್ಲ!
ಮುಖ್ಯಮಂತ್ರಿಗಳೇ, ಪ್ರಕರಣಗಳು ಒಂದಾ ಎರಡಾ? ಮಲ್ಲಿಕಾರ್ಜುನ ಬಂಡೆಯವರ ಪೂರ್ವಯೋಜಿತ ಕೊಲೆಯನ್ನು ವ್ಯವಸ್ಥಿತವಾಗಿ ಮುಚ್ಚಿಹಾಕಿದಿರಿ. ಡಿ.ಕೆ.ರವಿಯವರ ಅಂತ್ಯಸಂಸ್ಕಾರವನ್ನು ತರಾತುರಿಯಲ್ಲಿ ನಡೆಸಿ, ಬಳಿಕ ನೀವೇ ಮುಂದೆ ನಿಂತು ನಿಮಗೆ ಬೇಕಾದಂತೆ ಮರಣೋತ್ತರ ಪರೀಕ್ಷೆಯ ವರದಿ ಬರೆಸಿದಿರಿ. ಕುಟ್ಟಪ್ಪ, ಪ್ರಶಾಂತ್ ಪೂಜಾರಿ, ಮೈಸೂರು ರಾಜು ಮುಂತಾದವರ ಕೊಲೆಗಳಿಗೆ ಒಂದು ಹನಿ ಕಣ್ಣೀರೂ ಹಾಕದೆ ಧಿಮಾಕಿನಿಂದ ಶಾಲು ಕೊಡವಿದಿರಿ. ಕಲ್ಬುರ್ಗಿ ಕೊಲೆಯ ಕೊಲೆಯನ್ನು ಬಲಪಂಥೀಯರ ಹಣೆಗೆ ಉಜ್ಜಲು ಇನ್ನಿಲ್ಲದಂತೆ ಪ್ರಯತ್ನಿಸಿದಿರಿ. ಭಗವಾನ್, ಮಾಲಗತ್ತಿ, ಪಟ್ಟಣಶೆಟ್ಟಿ, ಅಮೀನ್‍ಮಟ್ಟು ಮುಂತಾದ ಪ್ರಭೃತಿಗಳನ್ನು ಪಕ್ಷದ ಅಪ್ಪುಗೆಯೊಳಗೆ ಬಚ್ಚಿಟ್ಟು ರಕ್ಷಿಸಿದಿರಿ. ರಾಜಕೀಯ ಕೊಲೆಗಳಾದಾಗೆಲ್ಲ ಸರಕಾರದ ಪರವಾಗಿ ತುತ್ತೂರಿ ಊದಲು; ತನಿಖೆಯ ದಾರಿ ತಪ್ಪಿಸಿ ನಿಮ್ಮವರನ್ನು ಬಚಾವ್ ಮಾಡಲು ಅನುಕೂಲವಾಗಲಿ ಎಂಬ ಏಕೈಕ ಕಾರಣಕ್ಕೆ ಭಟ್ಟಂಗಿ ಬುದ್ಧಿಜೀವಿಗಳ ಬಳಗ ಕಟ್ಟಿಕೊಂಡಿರಿ. ಹಿಂದೂ ಪದ್ಧತಿ-ಆಚರಣೆಗಳನ್ನಷ್ಟೇ ಪ್ರಶ್ನಿಸುವ ಮೌಢ್ಯ ಪ್ರತಿಬಂಧಕ ಕಾಯ್ದೆಯನ್ನು ನಿಮ್ಮ ಚಮಚಾಗಳ ಮೂಲಕ ಬರೆಸಿ ಜಾರಿಗೊಳಿಸಲು ತುದಿಗಾಲಲ್ಲಿ ನಿಂತಿದ್ದೀರಿ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ನೀವು ಅಧಿಕಾರಕ್ಕೆ ಬಂದಾಗಿನಿಂದ ಕರ್ನಾಟಕ ದಾಪುಗಾಲಿನಲ್ಲಿ ಹಿಂದೋಡುತ್ತಿದೆ. ಐದು ವರ್ಷಗಳ ಆಡಳಿತ ಮುಗಿಸಿ ಪಟ್ಟದಿಂದ ಇಳಿಯುವಷ್ಟರಲ್ಲಿ ರಾಜ್ಯವನ್ನು ಶಿಲಾಯುಗಕ್ಕೆ ತಂದು ನಿಲ್ಲಿಸಬೇಕು ಎಂದು ಶಪಥ ಮಾಡಿದ್ದೀರಾ? ಏಕೆ ಹೀಗಾಗಿದ್ದೀರಿ? ನೀವು ಸಮಾಜವಾದದ ಹಿನ್ನೆಲೆಯಿಂದ ಬಂದವರು; ಸಾಮಾಜಿಕ ಹೋರಾಟಗಳಿಂದ ರೂಪುಗೊಂಡ ನಾಯಕರು ಎಂದು ಈಗೇನಾದರೂ ಹೇಳಿದರೆ ರಾಮಮನೋಹರ ಲೋಹಿಯಾ ಅವರ ಆತ್ಮ ಪಕಪಕನೆ ನಗಬಹುದು. ಹೇಳಿ, ನೀವು ಇಷ್ಟೊಂದು ಭಂಡರಾಗಲು ಏನು ಕಾರಣ? ಅಧಿಕಾರಕ್ಕೇರಿದ ಕೇವಲ ಮೂರು ವರ್ಷಗಳಲ್ಲಿ ಇನ್ನೆಂದೂ ಸರಿಪಡಿಸಲಾಗದ ಹಲವು ಗಂಭೀರ ತಪ್ಪುಗಳನ್ನು ಮಾಡಿ ರಾಜ್ಯವನ್ನು ಅಧೋಗತಿಗೆ ತಂದುನಿಲ್ಲಿಸಿದ್ದೀರಲ್ಲ, ಯಾವ ಭೂತ ನಿಮ್ಮೊಳಗೆ ನಿಂತು ಈ ಕೃತ್ಯಗಳನ್ನು ಮಾಡಿಸುತ್ತಿದೆ?
2013ರ ಮೇ ತಿಂಗಳಿಂದ ನಿಮ್ಮ ಸಾಧನೆಗಳನ್ನು ನೋಡುತ್ತ ಬರೋಣ. ನಿಮ್ಮ ಮಗ ರಾಕೇಶ್ ಗಂಭೀರ ಹಲ್ಲೆ ನಡೆಸಿದರೆಂದು ಕೆಜೆಪಿ ಪಕ್ಷದ (ಮತ್ತು ನಿಮ್ಮ ವಿರುದ್ಧ ಚುನಾವಣೆಯಲ್ಲಿ ಸೆಣಸಿದ್ದ) ಅಭ್ಯರ್ಥಿ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ದೂರು ಪಡೆದವರು ಯಾರೋ, ನೀವು ಸಸ್ಪೆಂಡ್ ಮಾಡಿದವರು ಯಾರೋ! ಜಿ.ಎನ್. ಮೋಹನ್ ಎಂಬ ಪೊಲೀಸ್ ಅಧಿಕಾರಿಯ ಮೇಲೆ ನಿಮಗೇನು ದ್ವೇಷವಿತ್ತೋ ಏನೋ, ಮುಖ್ಯಮಂತ್ರಿಯಾಗಿ ಬಂದ ಮರುದಿನವೇ ಆ ಅಧಿಕಾರಿಯನ್ನು ಸಸ್ಪೆಂಡ್ ಮಾಡಿಸಿ ಹದಿನಾರು ತಿಂಗಳು ಕತ್ತಲೆಯಲ್ಲಿ ಕೂರಿಸಿದಿರಿ. ಧೃತರಾಷ್ಟ್ರನನ್ನೂ ಮೀರಿಸುವ ಪುತ್ರವಾತ್ಸಲ್ಯ ನಿಮ್ಮದು! ಅದೇ ಮಮಕಾರ ಮುಂದುವರಿದು ನಿಮ್ಮ ಇನ್ನೊಬ್ಬ ಮಗನಿಗಾಗಿ ರಾತ್ರೋರಾತ್ರಿ ಟೆಂಡರ್ ಸಿದ್ಧವಾಗಿ ಕೋಟ್ಯಂತರ ರುಪಾಯಿಗಳ ವ್ಯವಹಾರ ಆತ ನಡೆಸುವ ಕಂಪೆನಿಯ ಉಡಿಗೆ ಬಂದುಬಿತ್ತು. ವಿರೋಧದ ಕೂಗು ಹೆಚ್ಚಾದಾಗ ಆತ ಕಂಪೆನಿಯ ನಿರ್ದೇಶಕ ಹುದ್ದೆಗೆ ರಾಜೀನಾಮೆ ಕೊಟ್ಟು ತಲೆ ಉಳಿಸಿಕೊಂಡರು. ಆದರೆ ಆ ಕಂಪೆನಿಯ ಆಸ್ತಿಪಾಸ್ತಿಯಲ್ಲಿ ನಿಮ್ಮ ಕುಟುಂಬದ ಪಾಲು ಇಂದಿಗೂ ಹಾಗೇ ಇದೆ! ಹಾಗಾದರೆ ಇದು ಕೂಡ ಒಂದು ಭ್ರಷ್ಟಾಚಾರದ ಪ್ರಕರಣವೇ ತಾನೇ? ನಾನು ಬದುಕಿರುವವರೆಗೆ ಮಕ್ಕಳು ರಾಜಕೀಯಕ್ಕೆ ಬರುವುದಿಲ್ಲ ಎನ್ನುವ ನೀವು ಮಕ್ಕಳನ್ನು ಹೀಗೆಲ್ಲ ನಿಮ್ಮ ಅಥರ್ವಣ ಕೆಲಸಗಳಿಗೆ ಬಳಸುವುದು ಸರಿಯೇ? ಅನುಪಮಾ ಶೆಣೈಯವರನ್ನು ವರ್ಗ ಮಾಡಿಸಿದ ಪರಮೇಶ್ವರ್ ನಾಯ್ಕ್ ವಿರುದ್ಧ ನೀವು ಕ್ರಮ ಕೈಗೊಳ್ಳಲಾರಿರಿ. ಯಾಕೆಂದರೆ ಆತ ಬಳ್ಳಾರಿಯಲ್ಲಿ ಮಾಡುವ ಮರಳು ವ್ಯವಹಾರದ ದುಪ್ಪಟ್ಟನ್ನು ನೀವು ಮೈಸೂರಿನಲ್ಲಿ ಸಂಬಂಧಿಕರ, ಮಕ್ಕಳ ಮೂಲಕ ನಡೆಸುತ್ತಿದ್ದೀರಿ! ಸ್ವಂತ ಕೈಗಳನ್ನು ಮಲದ ಗುಂಡಿಯಲ್ಲಿ ಮುಳುಗಿಸಿಟ್ಟವನು ಇನ್ನೊಬ್ಬ ಕೆಸರಿನ ಗುಂಡಿಗೆ ಕಾಲು ಹಾಕಿದಾಗ ಹೇಗೆ ಆಕ್ಷೇಪಿಸಿಯಾನು!
ಸಿದ್ದರಾಮಯ್ಯನವರೇ, ಇತ್ತೀಚೆಗೆ ಮೈಸೂರಿನ ಮರಿಗೌಡ ಎಂಬ ಪುಢಾರಿಯ ಆಟಾಟೋಪಗಳ ಬಗ್ಗೆ ಕೇಳಿದೆವು. ನೀವು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿ ಮೊದಲ ಬಾರಿಗೆ ಮೈಸೂರಿಗೆ ಹೋಗಿ ಇಳಿದಾಗ ಸ್ವಗೃಹಕ್ಕೂ ಹೋಗುವ ಮೊದಲು ಮರಿಗೌಡರ ಮನೆಗೆ ಹೋಗಿದ್ದಿರಿ, ಮರೆತುಹೋಯಿತೇ? ಈಗ ಅದ್ಯಾವ ಬಾಯಿಯಿಂದ ಆತನ ಬಗ್ಗೆ ತಿಳಿದೇ ಇಲ್ಲ ಎನ್ನುತ್ತೀರಿ? ಇತ್ತೀಚೆಗೆ ಬಂದಿರುವ ಮಾಹಿತಿಗಳ ಪ್ರಕಾರ ಮರಿಗೌಡರು ನಿಮ್ಮದೇ ತೋಟದ ಮನೆಯಲ್ಲಿ ಬಚ್ಚಿಟ್ಟುಕೊಂಡಿದ್ದಾರಂತೆ! ನಿಮ್ಮ ರಾಷ್ಟ್ರೀಯ ನಾಯಕ ದೆಹಲಿಯಲ್ಲಿ ಮಹಿಳಾ ಸಬಲೀಕರಣದ ಮಾತಾಡುತ್ತ ಕೂತಿದ್ದರೆ ಇಲ್ಲಿ ನಿಮ್ಮ ಸರಕಾರ ಅನುಪಮಾ ಶೆಣೈ, ಸೋನಿಯಾ ನಾರಂಗ್, ಸಿ. ಶಿಖಾ, ರಶ್ಮಿ ಮಹೇಶ್ ಎನ್ನುತ್ತಾ ಒಬ್ಬರಾದ ಮೇಲೊಬ್ಬರು ಮಹಿಳೆಗೆ ಕಿರುಕುಳ ಕೊಡುವುದರಲ್ಲಿ ನಿರತವಾಗಿದೆ. ಉತ್ತರ ಕರ್ನಾಟಕದ ಜನ ಅತ್ತ ಕಳಸಾ ಬಂಡೂರಿಯ ಕೆಲಸವೂ ಕೈಗೂಡದೆ ಇತ್ತ ಮಹದಾಯಿ ಯೋಜನೆಯೂ ಪೂರ್ತಿಗೊಳ್ಳದೆ ನಿಡುಸುಯ್ಯುತ್ತ ಕೂತಿದ್ದಾರೆ. ರಾಜ್ಯಾದ್ಯಂತ ಕಳೆದೆರಡು ವರ್ಷಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಸಂಖ್ಯೆ 1529. ಅದು ಸರಕಾರದ ಫೈಲುಗಳಲ್ಲಿ ಬರೆದಿಟ್ಟ ಲೆಕ್ಕ. ಸಾವಿನ ಪ್ರಕರಣಗಳನ್ನು ಮುಚ್ಚಿಹಾಕುವುದರಲ್ಲಿ ನಿಸ್ಸೀಮರಾದ ಅಧಿಕಾರಿಗಳು ಬೆಳಕಿಗೆ ತರದ ಸಾವುಗಳನ್ನಿಷ್ಟೋ ದೇವರೇ ಬಲ್ಲ! ಶಿಕ್ಷಣ ಕ್ಷೇತ್ರದ ಅಪಸವ್ಯಗಳನ್ನಂತೂ ಹೇಳಿ ಮುಗಿಯದು. ಪಿಯುಸಿ ಪರೀಕ್ಷೆಗಳ ವಿಷಯದಲ್ಲಿ ಸರಕಾರ ಮುಖಕ್ಕೆ ಮಸಿ ಬಳಿದುಕೊಂಡಿತು. ಗಣಿತ ಪ್ರಶ್ನೆಪತ್ರಿಕೆಯನ್ನು ಶಿಕ್ಷಕರು ತಯಾರಿಸಿಲ್ಲ ಎಂಬ ಹೊಸ ಗುಸುಗುಸು ಕೇಳಿಬಂದಿದೆ. ಕಾಲೇಜುಗಳಿಗೆ ಪ್ರಾಧ್ಯಾಪಕರನ್ನು ನೇಮಿಸಲು ನಡೆಸಿದ ಪರೀಕ್ಷೆಯಲ್ಲಿ ವ್ಯಾಪಕ ಅವ್ಯವಹಾರ ನಡೆಯಿತು; ವೆಬ್‍ಸೈಟಿನಿಂದ ಇಳಿಸಿದ ಮೂರನೇ ದರ್ಜೆಯ ಪ್ರಶ್ನೆಗಳನ್ನು ಪತ್ರಿಕೆಯಲ್ಲಿ ತುಂಬಿ ಪರೀಕ್ಷೆ ನಡೆಸಿದರು. ಇದುವರೆಗೆ ಆ ವಿಷಯದಲ್ಲಿ ವಿಚಾರಣೆಯೂ ಇಲ್ಲ; ಶಿಕ್ಷೆಯೂ ಆಗಿಲ್ಲ! ಪ್ರೌಢಶಾಲೆಗಳಲ್ಲಿ ಖಾಲಿ ಬಿದ್ದಿರುವ ಸ್ಥಾನಗಳಿಗೆ ಶಿಕ್ಷಕರನ್ನು ಭರ್ತಿ ಮಾಡಿಕೊಳ್ಳದೆ ಒಂದೂವರೆ ವರ್ಷ ಮುಗಿಯಿತು. ಕಾಲೇಜುಗಳ ಅತಿಥಿ ಉಪನ್ಯಾಸಕರಂತೂ ಸರಕಾರದ ತಲೆಕೆಟ್ಟ ನೀತಿಗಳಿಗೆ ರೋಸಿಹೋಗಿ ಬೂಟ್‍ಪಾಲಿಶ್ ಪ್ರತಿಭಟನೆ ಮಾಡಿದ್ದಾರೆ! ಸಿದ್ದರಾಮಯ್ಯನವರೇ, ಇನ್ನೂ ಏನೇನು ಆಗಬೇಕು ಸ್ವಾಮಿ!
ಕರ್ನಾಟಕ ಸರಕಾರದ ಮೂರು ವರ್ಷಗಳ ಸಾಧನೆ ಏನು ಗೊತ್ತೆ? ಪ್ರಶಾಂತ್ ಪೂಜಾರಿ, ಕುಟ್ಟಪ್ಪ, ರಾಜು ಮುಂತಾದ ನಾಗರಿಕರ ಕೊಲೆ. ಡಿ.ಕೆ. ರವಿ, ಕಲ್ಲಪ್ಪ ಹಂಡಿಬಾಗ್, ಎಂ.ಕೆ. ಗಣಪತಿ ಮುಂತಾದ ನಿಷ್ಠಾವಂತ ಮತ್ತು ದಕ್ಷ ಅಧಿಕಾರಿಗಳ ಕೊಲೆ. ಇಡೀ ರಾಜ್ಯದ ವಿರೋಧದ ನಡುವೆಯೂ ಟಿಪ್ಪುವಿನ ಜಯಂತಿ. ಭದ್ರಗಿರಿ ಬೆಟ್ಟದಲ್ಲಿ ಜೆಸಿಬಿ ತಂದು ಜೈನರ ಪವಿತ್ರಕ್ಷೇತ್ರದ ಕಲ್ಲುಕಂಬಗಳನ್ನು ಎಳೆದಾಡಿದ್ದು. ಲೋಕಾಯುಕ್ತವನ್ನು ಮುಚ್ಚಿದ್ದು. ಮಾನವ ಹಕ್ಕುಗಳ ಆಯೋಗಕ್ಕೆ ಮೂರು ವರ್ಷವಾದರೂ ಅಧ್ಯಕ್ಷರನ್ನು ನೇಮಿಸದೆ ದಯಾಮರಣ ಕೊಟ್ಟಿರುವುದು. ಇನ್ನು ವಿವಿಧ ಇಲಾಖೆಗಳಲ್ಲಿ ಸಚಿವರು ಮಾಡಿಟ್ಟಿರುವ ಭ್ರಷ್ಟಾಚಾರದ ಕೊಳೆಯ ಬಗ್ಗೆ ಹೇಳಹೋದರಂತೂ ಲೇಖನವಲ್ಲ; ಪುಸ್ತಕ ಬರೆಯಬೇಕಾಗಬಹುದು! ಇವೆಲ್ಲ ವೈಫಲ್ಯಗಳ ಜವಾಬ್ದಾರಿಯನ್ನೂ ಸ್ವತಃ ಮುಖ್ಯಮಂತ್ರಿಗಳೇ ಹೊರಬೇಕು. ಒಂದು ರಾಜ್ಯಕ್ಕೆ ಸಮರ್ಥ ನಾಯಕತ್ವವಿಲ್ಲದೇ ಹೋದರೆ ಎಂಥ ಅರಾಜಕತೆ ಸೃಷ್ಟಿಯಾಗುತ್ತದೆ ಎಂಬುದಕ್ಕೆ ನಿದರ್ಶನವೆನ್ನುವಂತೆ ಕರ್ನಾಟಕವನ್ನು ರೂಪಿಸಿದ್ದಾರವರು. ಕಾಡಿನ ರಾಜ್ಯದಲ್ಲೂ ಒಂದಷ್ಟು ವ್ಯವಸ್ಥೆ ಇದ್ದೀತೇನೋ; ಆದರೆ ಸಿದ್ದರಾಮಯ್ಯನವರ ಆಡಳಿತದಲ್ಲಿ ರಾಜ್ಯವ್ಯವಸ್ಥೆ ಸಂಪೂರ್ಣ ಕುಸಿದಿದೆ. ಜನರಂತೂ ರೋಷ, ಹತಾಶೆ, ಭ್ರಮನಿರಸನಗಳಿಂದ ಕುದಿಯುತ್ತಿದ್ದಾರೆ. “ನೀನೊಮ್ಮೆ ಮತ ಹಾಕಿನೋಡು. ಮುಂದಿನ ಐದು ವರ್ಷಗಳ ಕಾಲ ನಿನ್ನನ್ನು ಹಲ್ಲು ಕಿತ್ತ ಹಾವಿನಂತೆ ಬೇಕಾಬಿಟ್ಟಿ ಆಡಿಸಬಲ್ಲೆ” ಎಂದು ಪ್ರಜಾಪ್ರಭುತ್ವವು ಪ್ರಜೆಯನ್ನು ಅಣಕಿಸಲೂ ಸಾಧ್ಯವೆಂಬುದನ್ನು ಮತ್ತೆ ನೆನಪಿಸುವಂತಿದೆ ಸದ್ಯದ ಕಾಂಗ್ರೆಸ್ ಆಡಳಿತ.
ಇದನ್ನು ಕೇವಲ ರಾಜಕೀಯ ಅನನುಭವ ಎಂದಷ್ಟೇ ಹೇಳಲು ಸಾಧ್ಯವಿಲ್ಲ. ಸಿದ್ದರಾಮಯ್ಯನವರಲ್ಲಿ ಮಾನವೀಯತೆಯ ಒರತೆ ಸಂಪೂರ್ಣ ಬತ್ತಿಹೋಗಿರುವುದೇ ಈ ಅವ್ಯವಸ್ಥೆಗೆ ಕಾರಣ. ಅವರು ಯಾವ ಸಮಸ್ಯೆಯನ್ನೂ ಭಾವನಾತ್ಮಕ ನೆಲೆಯಿಂದ ನೋಡುತ್ತಿಲ್ಲ. ರಾಜ್ಯದಲ್ಲಾಗಿರುವ ಕೊಲೆಗಳು ಮತ್ತು ಅವಕ್ಕೆ ಮುಖ್ಯಮಂತ್ರಿಗಳು ನೀಡಿರುವ ಪ್ರತಿಕ್ರಿಯೆಗಳನ್ನು ನೋಡಿದರೆ ಇವರು ರಕ್ತಮಾಂಸಗಳುಳ್ಳ ಮನುಷ್ಯರು ಹೌದೇ ಎಂದು ಕೇಳಿಕೊಳ್ಳಬೇಕು! ಕುಟ್ಟಪ್ಪನವರು ಸತ್ತುಬಿದ್ದಾಗ, “ಕಾಲುಜಾರಿ ಚರಂಡಿಯಲ್ಲಿ ಬಿದ್ದು ಸತ್ತರು. ಅದನ್ನು ಕೊಲೆಯತ್ನ ಎನ್ನಬರುವುದಿಲ್ಲ” ಎಂದರು. ಹನುಮಂತಪ್ಪ ಕೊಪ್ಪದ್‍ನಂಥ ಧೀಮಂತ ಸೈನಿಕನ ಶವ ರಾಜ್ಯಕ್ಕೆ ಬಂದಾಗ “ಇಂದು ಬಂದರೆ ಅಂತ್ಯಸಂಸ್ಕಾರದಲ್ಲಿ ಭಾಗವಹಿಸುತ್ತೇನೆ, ನಾಳೆ ಬೇರೆ ಕೆಲಸವಿದೆ” ಎಂದರು. ರೈತರು ಸಾಲೋಸಾಲಾಗಿ ನೇಣಿಗೆ ಕೊರಳೊಡ್ಡಿದಾಗ “ಸಾಲ ಮಾಡಿ ಸತ್ತರೆ ನಾವೇನು ಮಾಡೋಕಾಗುತ್ತೆ?” ಎಂಬ ಉಡಾಫೆ ಆಡಿದರು. ಮಗನ ಮೇಲೆ ಕೇಸ್ ಹಾಕಿದರೆಂದು ಮೋಹನ್‍ರನ್ನು ಒಂದು ವರ್ಷಕ್ಕೂ ಹೆಚ್ಚುಕಾಲ ಸಸ್ಪೆಂಡ್ ಮಾಡಿ ಕೂರಿಸಿದ್ದನ್ನು ಸಮರ್ಥಿಸಿಕೊಳ್ಳುತ್ತ “ಸುಳ್ಳು ಕೇಸ್ ಹಾಕಿದ್ರೆ ಸುಮ್ನಿರಕಾಯ್ತಾದಾ?” ಎಂದು ಕೇಳಿ ತಾನು ಹಗೆ ಸಾಧಿಸಬಲ್ಲ ಹೆಡೆಹಾವು ಎಂದು ತೋರಿಸಿಕೊಟ್ಟರು. ಇವೆಲ್ಲ ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿ ಕೂತಿರುವ ಮುಖ್ಯಮಂತ್ರಿ ಆಡುವ ಮಾತುಗಳಾ ಎಂದು ರಸ್ತೆಬದಿ ಪಾನಿಪೂರಿ ಮಾರುವ ಹುಡುಗನೂ ಅಚ್ಚರಿಪಟ್ಟಾನು.
ರಾಜನಿಗೆ ಧಿಮಾಕು (ಅಡಾಸಿಟಿ) ಇರಬೇಕು ನಿಜ; ಆದರೆ ಒಣಜಂಬ, ಅಹಂಕಾರಗಳಿರಬಾರದು. ಹಿಂದಿನ ನಿಜಲಿಂಗಪ್ಪ, ಗುಂಡೂರಾಯರು, ವಿರೇಂದ್ರ ಪಾಟೀಲ್, ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್ ಮುಂತಾದವರಿಗಿದ್ದ ಮಾನವೀಯ ಸೆಲೆಯ ಒಂದು ಸೆಳಕು ಕೂಡ ಸಿದ್ದರಾಮಯ್ಯನವರಲ್ಲಿ ಕಾಣುತ್ತಿಲ್ಲ ಎಂಬುದು ಸ್ಪಷ್ಟ. ಈ ರಾಜ್ಯ ಐದು ವರ್ಷಗಳಲ್ಲಿ ಏನಾಗಬೇಕು, ಹೇಗೆ ರೂಪುಗೊಳ್ಳಬೇಕು, ಯಾವ್ಯಾವ ಅಭಿವೃದ್ಧಿಗಳನ್ನು ತರಲು ತನಗೆ ಆಸೆಯಿದೆ, ಅಧಿಕಾರದಿಂದ ಇಳಿವಷ್ಟರಲ್ಲಿ ಎಂಥ ಭವ್ಯತೆಯನ್ನು ಉಳಿಸಿಹೋಗುತ್ತೇನೆ ಎಂಬುದನ್ನೆಲ್ಲ ಅವರು ಮನಸುಬಿಚ್ಚಿ ಎಂದಾದರೂ ಮಾತಾಡಿದ್ದಾರೆಯೇ? ಮೂರು ವರ್ಷಗಳಲ್ಲಿ ನಮಗೆ ನೆನಪುಳಿಯುವಂಥ ಒಂದೇ ಒಂದು ಭಾಷಣವನ್ನಾದರೂ ಅವರು ಮಾಡಿದ್ದಾರೆಯೇ? ಒಂದಾದರೂ ಜನಮೆಚ್ಚುವ ತೀರ್ಮಾನ ತೆಗೆದುಕೊಂಡಿದ್ದಾರೆಯೇ? ಒಂದು ಉಪಕಾರವನ್ನಂತೂ ಮಾಡಿದ್ದಾರೆ. ಜನ ಚುನಾವಣೆಯ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳದೇ ಇದ್ದರೆ ಐದು ವರ್ಷಗಳಲ್ಲಿ ರಾಜ್ಯ ಎಷ್ಟು ಹಿಂದುಳಿಯುತ್ತದೆ; ಹಿಂದೆ ಹೋಗುತ್ತದೆ; ಅವುಗಳಿಂದ ತಾವೆಷ್ಟು ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂಬುದನ್ನು ಮಾತ್ರ ಸಿದ್ದರಾಮಯ್ಯ ಬಹಳ ಚೆನ್ನಾಗಿ ಮನವರಿಕೆ ಮಾಡಿಕೊಟ್ಟಿದ್ದಾರೆ. ಇದುವರೆಗೆ ಒಂದೇ ಒಂದು ಉದ್ದಿಮೆ ಕರ್ನಾಟಕಕ್ಕೆ ಬರದ ಕಾರಣ ಸಾವಿರಗಟ್ಟಲೆ ಕನ್ನಡಿಗರು ಇಂದು ಪಕ್ಕದ ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರಗಳನ್ನು ಅಥವಾ ದೂರದ ದೆಹಲಿಯನ್ನು ಅರಸಿಹೋಗಬೇಕಾದ ಪರಿಸ್ಥಿತಿ ಬಂದಿದೆ. ಸಿದ್ದರಾಮಯ್ಯನವರು ಸೃಷ್ಟಿಸಿದ ಕರಾಳ ಕರ್ನಾಟಕದ ಭೀಕರ ಚಿತ್ರ 2018ರ ನಂತರ ಮುಂದುವರಿಯುವುದಿಲ್ಲ ಎಂಬ ಭರವಸೆ ಏನೂ ಇಲ್ಲ. ಯಾಕೆಂದರೆ ಕಾಂಗ್ರೆಸ್‍ಅನ್ನು ಪಕ್ಕಕ್ಕಿಟ್ಟು ಉಳಿದವರತ್ತ ನೋಡಿದರೂ ಅಲ್ಲಿ ಜನರ ನಾಡಿಮಿಡಿತಕ್ಕೆ ವಿಮುಖರಾಗಿ ತಮಗಿಷ್ಟ ಬಂದಂತೆ ಸಾಗುತ್ತಿರುವ ನಾಯಕರೇ ಕಾಣಿಸುತ್ತಾರೆ. ಅಲ್ಲದೆ ಮುಂದೆ ಬರುವ ನಾಯಕರ ಜವಾಬ್ದಾರಿ ಸಿದ್ದರಾಮಯ್ಯನಿಗಿಂತ ಎರಡುಪಟ್ಟು ಹೆಚ್ಚು. ಯಾಕೆಂದರೆ ಸಿದ್ದರಾಮಯ್ಯನವರು ಮಾಡಿಟ್ಟಿರುವ 39,161.44 ಕೋಟಿ ರುಪಾಯಿಗಳ ಸಾಲದ ಹೊಂಡದಲ್ಲಿ ಕರ್ನಾಟಕದ ಬಾವುಟವನ್ನು ಸುಭದ್ರವಾಗಿ ಎತ್ತಿನಿಲ್ಲಿಸುವ ಹೊಣೆಗಾರಿಕೆ ಅವರ ಹೆಗಲ ಮೇಲಿರುತ್ತದೆ. ಅಂಥ ಎದೆಗಾರಿಕೆಯ ನಾಯಕರು ಸದ್ಯಕ್ಕಂತೂ ವಿಪಕ್ಷದಲ್ಲಿ ಕಾಣಿಸುತ್ತಿಲ್ಲ. ಒಬ್ಬ ಮಹಾನ್ ನಾಯಕನ ನಂತರ ನಿರ್ವಾತ ತುಂಬಲು ಅಧಿಕಾರಕ್ಕೆ ಬರುವವರಿಗೆ ಅದೆಷ್ಟು ಅಳುಕು, ಅಂಜಿಕೆ ಮತ್ತು ಬೆಟ್ಟದಂಥ ಉತ್ತರದಾಯಿತ್ವ ಇರುತ್ತದೋ ಅಂಥಾದ್ದೇ ಮಹತ್ತರ ಜವಾಬುದಾರಿ ಪರಮ ಅಸಮರ್ಥ ನಾಯಕ ಕೆಳಗಿಳಿದ ಬಳಿಕ ಪಟ್ಟವೇರುವ ನಾಯಕರಿಗೂ ಇರುತ್ತದೆ. ಆ ಹೊಣೆಯ ಅಗಾಧತೆಯನ್ನು ವಿಪಕ್ಷದ ನಾಯಕರು ಇನ್ನೂ ಅರ್ಥ ಮಾಡಿಕೊಂಡಿಲ್ಲ ಎನ್ನುವುದು ಮಾತ್ರ ನಿಚ್ಚಳವಾಗಿದೆ.
Sooper article sir
ಬಿಜೆಪಿ ಮತ್ತು ಮೇಲ್ವರ್ಗದ ಚೆಲಗಳಾಗಿರುವ ನೀನು ,ನಿನ್ನಿಂದ ನೆನ್ನೆನು ನಿರೀಕ್ಷಿಸಲು ಸಾಧ್ಯ ,ಮುಖ್ಯಮಂತ್ರಿಯ ಒಳ್ಳೆಯ ಕೆಲಸದ ಬಗ್ಗೆ ಬರಿ ಅದನ್ನು ಬಿಟ್ಟು ಸಿದ್ದರಾಮಯ್ಯ ಮುಖ್ಯಮಂತ್ರಿ ಅಗಿರುದನ್ನ ಸಯಿಸದೆ ಬರಿ ಸುಳ್ಳಾಗಿ ಬರೆದಿದ್ದಿಯ. ಈಗೆ ನೀನು ಮುಂದು ವರೆದರೆ ಜನರೇ ನಿನಗೆ ಬುದ್ಧಿಕಲಿಸುತ್ತಾರೆ. ಸಾಮಾಜಿಕ ನ್ಯಾಯದ ಮುಖ್ಯಮಂತ್ರಿ ಅಂದ್ರೆ ಅದು ಸಿದ್ದರಾಮಯ್ಯ ಮಾತ್ರ ಜೈ ಸಿದ್ದರಾಮಯ್ಯ, stupiಡ್.
ಧರ್ಮದ ಗಾಂಜಾ ಹೊಡೆದು ಅಮಲಿನಲ್ಲಿ , ಕಿಕ್ ನಲ್ಲಿ , ನಶೆಯಲ್ಲಿ ತೇಲುವ ಸ್ಯಾಡಿಸ್ಟ್ ಗಳೆಲ್ಲಾ ಸಿದ್ದರಾಮಯ್ಯನವರಿಗೆ ಸರ್ಟಿಫಿಕೇಟ್ ಕೊಡುವುದಕ್ಕೆ ಬಂದ್ದಿದ್ದಾರೆ …. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಮಾತನಾಡುವುದಕ್ಕೂ ಕೂಡ ಒಂದು ಯೋಗ್ಯತೆ ಬೇಕು …. ಯಡ್ಡಿ ಕುಮ್ಮಿ ರೇಂಜ್ ನಲ್ಲಿ ಸಿದ್ದರಾಮಯ್ಯನವರನ್ನ ಕಾಣಬೇಡಿ ….
ನಿನ್ನಂಥ ಮಲ ನಿವಾಸಿಗೆ ಆ ಯೋಗೈತ ಇದೆಯಾ :)?
ಅಧಿಕಾರದ ಗಾಂಜಾ ಹೊಡೆದು ಅನ್ಯಾಯದ ಪರಾಕಾಷ್ಠೆ ತಲುಪಿರುವ ಸಿದ್ದ ಮತ್ತವನ ಪಟಾಲಂ, ಹಾಗೆ ಡೀಲ್ ಕುದುರಿಸಿ ಗಂಜಿ ಬಾಚಿಕೊಳ್ಳ್ಉವ ಪಡಪೋಷಿಗಳೆಲ್ಲಾ ಉರಿದುಕೊಳ್ಳುವ ವಿಪರ್ಯಾಸ ನೋಡೊ. ಸತ್ಯ ಕಹಿಯೇ.
……..ಹಿಂದಿನ ನಿಜಲಿಂಗಪ್ಪ, ಗುಂಡೂರಾಯರು, ವಿರೇಂದ್ರ ಪಾಟೀಲ್, ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್ ಮುಂತಾದವರಿಗಿದ್ದ …….
ಲೇಖಕರು ಯಡಿಯೂರಪ್ಪ ನವರನ್ನು ಯಾಕೆ ಬಿಟ್ಟರೋ….
ನೀವು ಕೇಳಲಿ ಅಂತ ಬಿಟ್ಟಿದ್ರು ಅನ್ಸುತ್ತೆ. ಮುಂದೆ ಸೇರಿಸ್ತಾರೆ ಅಳ್ಬೇಡಿ
*ರೋಹಿತ್ ಚಕ್ರತೀರ್ಥರ ಲೇಖನಕ್ಕೆ ನನ್ನದೊಂದು ಪ್ರತಿಕ್ರಿಯೆ:
ಲೇಖನ ಮನಮುಟ್ಟುವಂತಿದೆ. ಸಿದ್ದರಾಮಯ್ಯನವರ ವಿರುದ್ದ ಜನರನ್ನು ರೊಚ್ಚಿಗೇಳಿಸುವಂತೆ ಲೇಖನದಲ್ಲಿನ ಪದಬಳಕೆ ಮಾಡಿದ್ದೀರಿ. ನಿಮಗೆ ನನ್ನದೊಂದು ಸಲಾಂ. ಆದೇ ರೀತಿ ವಿನಾಯಕ ಬಾಳಿಗ ಕೊಲೆ ಮತ್ತು ಕೊಲೆ ಆರೋಪಿ ನಮೋ ಬ್ರಿಗೇಡ್ ನ ನರೇಶ್ ಶೆಣೈ ಮತ್ತು ಶೆಣೈನನ್ನು ಶಿಕ್ಷೆಯಿಂದ ತಪ್ಪಿಸಲು ಪ್ರಯತ್ನಿಸಿದ ಸಂಘಪರಿವಾರ ಮತ್ತು ಪ್ರಭಾವಿ ರಾಜಕಾರಣಿಗಳ ಬಗ್ಗೆಯೂ ಬರೆಯಬೇಕಿತ್ತು. ಹಾಗೆಯೇ, ಕಲ್ಲಪ್ಪ ಹಂಡಿಬಾಗ್ ರವರನ್ನು ತಮ್ಮ ಡೀಲಿಂಗ್ ವ್ಯವಹಾರಕ್ಕೆ ಬಳಸಿಕೊಂಡು ಕಲ್ಲಪ್ಪ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣನಾದ ಭಜರಂಗದಳದ ಪ್ರವೀಣ್ ಖಾಂಡ್ಯ ತಲೆತಪ್ಪಿಸಿಕೊಂಡಿರುವ ಬಗ್ಗೆ, ಆತನಿಗೆ ಆಶ್ರಯ ಕೊಟ್ಟಿರುವ ಪ್ರಭಾವಿಗಳ ಬಗ್ಗೆ ಮತ್ತು ಆತನನ್ನು ಇನ್ನೂ ಬಂದಿಸದ ಬಗ್ಗೆಯೂ ಬರೆಯಬೇಕಿತ್ತು. ಗಣಪತಿ ಪ್ರಕರಣದ ಸಂಬಂದ ಹೋರಾಡುವ ಅದಕ್ಕಾಗಿ ಬಂದ್ ನಡೆಸುವ ಬಿಜೆಪಿ ಮತ್ತು ಸಂಘಪರಿವಾರ, ಕಲ್ಲಪ್ಪನ ವಿಷಯಕ್ಕೆ ಪ್ರಾಮುಖ್ಯ ಕೊಡದ ಬಗ್ಗೆಯೂ ಬರೆಯಬೇಕಿತ್ತು. ಇನ್ನು ಅನುಪಮಾ ಶೆಣೈ ರ ಫೇಸ್ಬುಕ್ ಅಕೌಂಟ್ ನ ವಾರಸುದಾರರ ರಹಸ್ಯದ ಬಗ್ಗೆಯೂ ಬರೆಯಬೇಕಿತ್ತು. ಸಿಬಿಐನಿಂದ ಡಿ.ಕೆ. ರವಿ ಸಾವಿನ ತನಿಖೆಯ ವರದಿ ಇನ್ನೂ ಬಾರದಿರುವ ಬಗ್ಗೆಯೂ ಬರೆಯಬೇಕಿತ್ತು. ಕಳೆದೆರಡು ವರ್ಷಗಳಲ್ಲಿ 1529 ರೈತರ ಆತ್ಮಹತ್ಯೆ ಪ್ರಕರಣದ ಬಗ್ಗೆ ನಿಮಗಿರುವ ಸಂಕಷ್ಟ ನನಗೂ ಇದೆ. ಗಣಪತಿ ಪ್ರಕರಣ ಸಂಬಂದ ಹಗಲು ರಾತ್ರಿ ಧರಣಿ, ಪ್ರತಿಭಟನೆ ನಡೆಸುವ ವಿರೋದ ಪಕ್ಷಗಳು, ರೈತರ ಆತ್ಮಹತ್ಯೆ ಸಂಬಂದ ಪ್ರತಿಭಟನೆ ಮಾಡದ ಬಗ್ಗೆಯೂ ಬರೆಯಬೇಕಿತ್ತು. ರೈತರ ಆತ್ಮಹತ್ಯೆ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲ. ದೇಶದ ಬಹುತೇಕ ರಾಜ್ಯಗಳಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರದ ಕೃಷಿಕ್ಷೇತ್ರದ ಕಡೆಗಣಿಸುತ್ತಿರುವ ನೀತಿಗಳು ಮತ್ತು ಆ ನೀತಿಯನ್ನೇ ಅನುಕರಿಸುತ್ತಿರುವ ರಾಜ್ಯ ಸರ್ಕಾರದ ನೀತಿಗಳೇ ಕಾರಣ. ಈ ಬಗ್ಗೆಯೂ ಬರೆಯಬೇಕಿತ್ತು. ಇನ್ನು ಹಿಂದೂ ಪದ್ದತಿ-ಆಚರಣೆಗಳನ್ನಷ್ಟೇ ಪ್ರಶ್ನಿಸುವ ಮೌಡ್ಯ ಪ್ರತಿಬಂದಕ ಕಾಯ್ದೆ ತರಲು ಪ್ರಯತ್ನ ಪಡುತ್ತಿರುವ ಬಗ್ಗೆ ಕೋಪ ವ್ಯಕ್ತಪಡಿಸಿದ್ದೀರಿ. ಇದು ನಿಮ್ಮ ಕಲ್ಪನೆಯೋ ಅಥವಾ ಉದ್ದೇಶಪೂರ್ವಕ ಆರೋಪವೋ ಗೊತ್ತಿಲ್ಲ. ಮೌಡ್ಯ ಪ್ರತಿಬಂದಕ ಕಾಯ್ದೆ ಎಲ್ಲಾ ಧರ್ಮಗಳಲ್ಲಿರುವ ಮೌಡ್ಯತೆಗಳನ್ನೂ ಒಳಗೊಂಡಿರುತ್ತದೆ.
Siddayya chikkamadegouda
ನಿನ್ನಂತ ಗಟಾರದ ಹಂದಿಗೆ ಇದು ಅರ್ಥವಾಗದು ಆದರೊ ಇಲ್ಲಿ ಕಮೆಂಟ ಮಾಡಿದ್ದೆನೆ
ಗೌಡರೆ, ಸರಿಯಾಗೇ ಕೇಳಿದ್ದೀರಿ.ಈ ಪ್ರಶ್ನೆಗಳೆಲ್ಲಾ ನಮ್ಮವೂ ಕೂಡಾ ಹೌದು.
Shivu ಸರ್, ಇದು ಸೂಪರ್ ಕಮೆಂಟ್. ನೀವು ತಿಳಿಸಿರುವ ವಿಷಯಗಳು ರೋಹಿತ್ ರವರಿಗೆ ಅಥ೯ವಾಗಿರುತ್ತದೆ.
ನಿಮ್ಮ ಪಕ್ಷಪಾತ ಧೋರಣೆ ಗಮನಿಸಿದಾಗ ನಂಗೊಂದು ಕಥೆ ನೆನಪಾಯ್ತು, ಒಂದಿನ ಹಂದಿ ಮತ್ತು ಅದರ ಮರಿಗಳು ಮನುಷ್ಯನ ಹೇಸಿಗೆ ತಿನ್ನುತ್ತಿತ್ತಂತೆ. ಸ್ವಲ್ಪ ಹೊತ್ತಿನಲಿ ಅದರ ಮರಿಯೊಂದು ಕೇಳಿತು. ” ಅಮ್ಮಅಮ್ಮಾ ಮನುಷ್ಯರದ್ದೆಲ್ಲಾ ನಾವು ತಿನ್ತೀವಿ ಆದ್ರೆ …. ನಮ್ಮ ಹೇಸಿಗೆನ ಯಾರು ತಿಂತಾರೆ … ಹೇಳಮ್ಮಾ ? ಅನ್ನೋ ಅಷ್ಟರಲ್ಲೆ ತಲೆಗೆ ರಪ್ಪಂತ ಬಿತ್ತು ಏಟು….. ‘ ಥೂ ಅಸಹ್ಯ ಊಟ ಮಾಡುವಾಗೆಲ್ಲಾ ಈತರ ಮಾತಾಡ್ಬೇಡ ಅಂತಾ ಎಷ್ಟು ಸಾರಿ ಹೇಳ್ಬೇಕು .. ತಿನ್ನು ಮುಚ್ಕೊಂಡು ಅಂತಾ ಅಮ್ಮನ ಕಡೆಯಿಂದ ಆ ದ್ವನಿ ಬಂತು. ನೀವು ಇನ್ನೊಂದು ಪಕ್ಷದ ಬಗ್ಗೆ ತಳೆದಿರೋ ಮೌನಕ್ಕೆ ಉತ್ತರ ಸಿಕ್ತೂ
.
ಚೇತನ ಪುತ್ತೂರ್ ಚೆನ್ನಾಗಿದೆ ನೀನು ಹೇಳಿದ್ದು ಆದ್ರೆನೀನು ಹಂದಿಯೋ ಅಥ್ವಾ ಹಂದಿ ಮರಿಯೊ ಅಂತ ಗೊತ್ತಾಗ್ಲಿಲ್ಲ
sir tavu yake bejar madkondri anta gottaglilla
ಚೇತನ್ ಸರ್, ಕೆಲವರು ಹಾಗೆ
ಸೇಮ ಟು ಚಕ್ರ ತೀರ್ಥ
ಥೂ ಹಾಳಾದವ್ನೇ….ಕಲ್ಲಪ್ಪನಿಗೆ ನಿನ್ನ ಹೃದಯ ಮಿಡಿಯಲಿಲ್ಲವಲಗಲ್ಲಾ?. ವಿನಾಯಕ ಬಾಳಿಗಾ ಕೊಲೆ ನಡೆದಾಗ ನಿನ್ನ ಕೈಗೆ ಪೆನ್ನು ಹಿಡಿಬಾರದ ರೀತಿ ಹಾಗಿತ್ತಾ?
ಅದ್ಸರಿ, ಗಣಪತಿಯವರನ್ನ ಬಿಜೆಪಿ ಸರ್ಕಾರವಿದ್ದಾಗ ಯಾಕೆ ಅಮಾನತು ಮಾಡಿದ್ರು ಅಂತ ನಿನ್ನ ಈ ಲೇಖನದಲ್ಲಿ ಯಾಕಪ್ಪಾ ಬರೆದಿಲ್ಲ?
reshme batteli chapli sutti hod dange ide nimma lekhana.. next election alli yuva janathe miss mad dira vote mado hange uttejana kodo antha artical bareeri.. all the best.. olledagli..
“ಇದ್ದಿದ್ದು ಇದ್ದ್ಹಾಂಗೆ ಹೇಳಿದ್ರೆ ಸಿದ್ದ್ರಾಮನಿಗೆ ಸಿಡ್ಲು ಬಡೀತು” ಅಂತ ಗಾದೆನೇ ಇದೆ. ಸಿದ್ದನಿಗೆ ಸಿಡ್ಲು ಬಡೀತೋ ಇಲ್ವೋ ಇಲ್ಲಿ ಅಂಡಿನಲ್ಲಿ ಮೆಣಸಿನಕಾಯಿ ಟ್ ಅಂಗದ ಎಗರಾಡಿರೋ ಚೇಲಾಗಳು,ಪಟಾಲಂಗಳು,ಡೀಲ್ ರಾಜರು, ಪಾರ್ಟ್ ಟೈಂ /ಫುಲ್ ಟೈಂ ಗಂಜಿ ಗಿರಾಕಿಗಳು ಮಾತ್ರ ಸಿಡ್ಲು ಬಡದೋರಂಗೆ ಆಡದ್ ನೋಡ್ರಪ್ಪ.