ವಿಷಯದ ವಿವರಗಳಿಗೆ ದಾಟಿರಿ

ಜುಲೈ 26, 2016

1

ಅರಿವೇ ಗುರು

‍ನಿಲುಮೆ ಮೂಲಕ

– ಗೀತಾ ಹೆಗ್ಡೆ

imagesಗುರು ಬ್ರಹ್ಮ ಗುರು ವಿಷ್ಣುಃ ಗುರು ದೇವೊ ಮಹೇಶ್ವರಃ
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುಭ್ಯೋನಮಃ

ಕೆಲವೊಮ್ಮೆ ಅನಿರೀಕ್ಷಿತವಾಗಿ ಮನಸ್ಸನ್ನು ಕಲಕುವ ಬೇಸರದ ಸಂಗತಿಗಳು ಎದುರಾದಾಗ ಯಾವ ರೀತಿ ಸ್ವೀಕರಿಸಬೇಕು ಎನ್ನುವ ಗೊಂದಲ ಕಾಡುತ್ತದೆ. ತಪ್ಪು ಎಲ್ಲಿ ನಡೆದಿದೆ ಅನ್ನುವ ಹುಡುಕಾಟದಲ್ಲಿ ಅರಿವಾಗದೆ ಕಣ್ಣು ಮಂಜಾಗುವುದು ಸ್ವಾಭಾವಿಕ. ಇದುವರೆಗೆ ಸ್ನೇಹಿತರಂತೆ, ಹಿತೈಷಿಗಳಂತೆ ಜೊತೆಯಾಗಿದ್ದವರ ನಡೆ ಒಗಟಾಗಿ ಕಾಣುತ್ತದೆ. ನಾನು ನನ್ನವರು ಅನ್ನುವ ಮಮಕಾರ ಹೃದಯದಲ್ಲಿ ಮನೆ ಮಾಡಿ ಅನೇಕ ಸಂತಸದ ಕ್ಷಣಗಳು, ಮಾತುಗಳು ಮನಃಪಟದಲ್ಲಿ ಸರಿದಾಡಿ ದುಃಖಿಸಲು ಎಡೆಮಾಡಿಕೊಡುತ್ತದೆ. “ಹೊಡೆದವನಿಗೆ ನೋವು ಗೊತ್ತಾಗುವುದೇ ಇಲ್ಲ. ಆದರೆ ಹೊಡೆಸಿಕೊಂಡವನಿಗೆ ಮೌನದ ಪೆಟ್ಟು ಮನಸ್ಸನ್ನು ಘಾಸಿಗೊಳಿಸುತ್ತದೆ.”

ಏಕೆಂದರೆ ಈ ದ್ವೇಷ, ಮೋಸ, ವಂಚನೆ, ಹಿಂಸೆ ಯಾವುದಕ್ಕೂ ಎಡೆ ಮಾಡಿಕೊಡದೆ ಎಲ್ಲರೂ ತನ್ನವರು, ಎಲ್ಲರೊಂದಿಗೆ ಬೆರೆತು ಭಾವನೆಗಳನ್ನು ಹಂಚಿಕೊಂಡು ಬದುಕುತ್ತಿರುವ ನಿಷ್ಕಲ್ಮಷ ಹೃದಯಕ್ಕೆ ಅವಮಾನ, ತಿರಸ್ಕಾರ ಸಹಿಸಿಕೊಳ್ಳುವುದು ತುಂಬಾ ಕಷ್ಟ. ಇಂಥವರು ಸಮಾಜದಲ್ಲಿ ವಿರಳವೂ ಹೌದು. ತಮ್ಮಷ್ಟಕ್ಕೆ ಯಾವ ತಿಕ್ಕಾಟಕ್ಕೂ ಆಸ್ಪದ ಕೊಡದೆ ಜೀವನ ನಡೆಸುವ ನಡೆ ಇವರದು.  ತಾನಾಯಿತು ತನ್ನ ಕೆಲಸವಾಯಿತು ಎಂದು ಬದುಕಿನ ಸಂಕಟ ನೋವುಗಳನ್ನೆಲ್ಲ ನುಂಗಿ ನಿಲಿ೯ಪ್ತ ಭಾವನೆ ಮೈಗೂಡಿಸಿಕೊಂಡು ಸಮಾಜದಲ್ಲಿ ದೇವನಿತ್ತ ಮಾನವ ಜನ್ಮ ಕಾಲನ ಕೋಲು ಬೀಸುವವರೆಗೂ ಯಾರಿಗೂ ಹೊರೆಯಾಗದೆ ಜೀವ ಕೈಯಲ್ಲಿ ಹಿಡಿದು ಅಂತ್ಯದ ದಿನಕ್ಕಾಗಿ ಕಾಯುತ್ತ ಕೂತಿರುವ ಜನ ಎಂದರೂ ತಪ್ಪಾಗಲಾರದು. ಆದರೆ ಎಷ್ಟೋ ಜನಕ್ಕೆ ಇವುಗಳು ಅಥ೯ವಾಗುವುದಿಲ್ಲ. ಯಾರು ಸಮಾಜದ ನಿಂದನೆಗೆ ಒಳಗಾಗಿ, ಬಯಸದ ಬದುಕು ಸಿಗದೆ, ಇಷ್ಟವಿಲ್ಲದ ಸಂಸಾರ ಜಂಜಡದಲ್ಲಿ ಸಿಲುಕಿ ವಿಲಿ ವಿಲಿ ಒದ್ದಾಡಿ ಎಲ್ಲವನ್ನೂ ಮೂಖವಾಗಿ ಸೈರಿಸಿಕೊಂಡು ಜೀವನ ಕಟ್ಟಿಕೊಂಡವರಿಗೆ ಮಾತ್ರ ಇನ್ನೊಬ್ಬರ ಕುರಿತು ಅಥೈ೯ಸಿಕೊಳ್ಳುವ ಮನಸ್ಸಿರುತ್ತದೆ. ಇಂಥವರು ಯಾವತ್ತೂ ಯಾರಿಗೂ ನೋವು ಮಾಡದೆ ಬೇರೆಯವರ ಕಷ್ಟ ನನ್ನದು ಎನ್ನುವ ಮನಸ್ಥಿತಿ ಹೊಂದಿರುತ್ತಾರೆ. ಇವರೇ ಅಲ್ಲವೆ ಸಮಾಜದ ಭಾಂದವರು?

ಹಣ, ಆಸ್ಥಿ, ಸೌಂದರ್ಯ, ವಿದ್ಯೆ, ಕಲೆ, ಬರಹ, ಜಾಣ್ಮೆ ಏನಿದ್ದರೇನು?  ಹೃದಯ ಶ್ರೀಮಂತಿಗೆ ಇಲ್ಲದಿದ್ದರೆ “ಸವ೯ಗುಣ ಮಷಿ ನುಂಗಿತ್ತು” ಎಂಬ ಗಾದೆಯಂತೆ ಇಂಥವರಿಂದ ಸಮಾಜಕ್ಕೆ ಯಾವ ಪ್ರಯೋಜನವೂ ಇಲ್ಲ. ಅಲ್ಪದರಲ್ಲೇ ಅಹಂಕಾರ ಮನೆ ಮಾಡಿದರೆ ಅದವರಿಗಷ್ಟೇ ಚಂದ. ಏನೋ ಘನ ಕಾಯ೯ ಸಾಧಿಸಿದ್ದೇನೆನ್ನುವ ಒಣ ಜಂಬದಲ್ಲಿ ಬೀಗಿದರೇನು ಪ್ರಯೋಜನ?  ನಾವು ಏನೆ ಮಾಡಲಿ ಅದನ್ನು ಬೇರೆಯವರು ಗುರುತಿಸಿ ಮೆಚ್ಚುವಂತಿರಬೇಕು. ಅಹಂಕಾರ, ಗುಂಪುಗಾರಿಕೆ, ಇನ್ನೊಬ್ಬರನ್ನು ನೋಯಿಸುವ ನಡೆ, ಅವಮಾನ ಮಾಡುವ ಕೆಟ್ಟ ಮನಸ್ಸು ಮನುಷ್ಯನಲ್ಲಿ ಎಲ್ಲಿಯವರೆಗೆ ಮನೆ ಮಾಡಿರುತ್ತದೊ ಆ ಮನುಷ್ಯ ಯಾವತ್ತೂ ಉದ್ಧಾರ ಆಗೋದಿಲ್ಲ.

“ನಮಗೆ ನಾವೇ ಮಿತ್ರ, ನಮಗೆ ನಾವೇ ಶತ್ರು” ಈ ನಾನ್ಣುಡಿ ಪ್ರತಿಯೊಬ್ಬ ಮನುಷ್ಯ ಅರಿತಿರಬೇಕು. ಯಾರು ಎಷ್ಟು ವಷ೯ ಬದುಕಿರುತ್ತಾರೊ ಯಾರಿಗೂ ಗೊತ್ತಿರೋದಿಲ್ಲ.  ಆದುದರಿಂದ ಇರುವಷ್ಟು ಕಾಲ ಯಾರಿಗೂ ಬೇಜಾರು ಮಾಡದೆ, ದ್ವೇಷದ ಕಿಡಿ ಹೊತ್ತಿಸದೆ ಎಲ್ಲರೊಂದಿಗೆ ಪ್ರೀತಿ, ವಿಶ್ವಾಸದಿಂದ ಜೀವನ ನಡೆಸುವ ನಡೆ ನಮ್ಮದಾದರೆ, ಜೀವನದಲ್ಲಿ ರೂಢಿಸಿಕೊಂಡರೆ ಇದರಿಂದ ಬೇರೆಯವರನ್ನು ಸಂತೋಷ ಪಡಿಸುವುದರ ಜೊತೆಗೆ ನಮ್ಮ ಆರೋಗ್ಯ, ಮನಸ್ಸು ಸುಸ್ತಿತಿಯಲ್ಲಿ ಇಡಲು ನೆರವಾಗುತ್ತದೆ.

ಕಳಬೇಡ ಕೊಲಬೇಡ
ಹುಸಿಯ ನುಡಿಯಲು ಬೇಡ
ಮುನಿಯ ಬೇಡ
ಅನ್ಯರಿಗೆ ಅಸಹ್ಯಪಡ ಬೇಡ
ತನ್ನ ಬಣ್ಣಿಸ ಬೇಡ
ಇದಿರ ಹಳಿಯಲು ಬೇಡ
ಇದೇ ಅಂತರಂಗ ಶುದ್ಧಿ
ಇದೇ ಬಹಿರಂಗ ಶುದ್ಧಿ!

ಮಹಾ ಸಂತ ಬಸವಣ್ಣನವರ ಈ ಚಿನ್ನದಂತ ವಾಕ್ಯವನ್ನು ಗುರು ಪೂರ್ಣಿಮೆ ಮರಳಿ ಪ್ರಾಮುಖ್ಯತೆ ಪಡೆಯುತ್ತಿರುವ ಈ ದಿನಗಳಲ್ಲಿ ಎಲ್ಲರೂ ಪರಿಪಾಲಿಸುವಂತಾಗಲಿ!

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments