ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 16, 2016

1

ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ

‍ನಿಲುಮೆ ಮೂಲಕ

ದಿನ – 7:
ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಅಷ್ಫಾಕ್ ಉಲ್ಲಾ ಖಾನ್

– ರಾಮಚಂದ್ರ ಹೆಗಡೆ

collage_305_121915014504ಭಾರತ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಅಷ್ಫಾಕ್ ಉಲ್ಲಾ ಖಾನ್ ರದ್ದು ಒಂದು ವಿಶೇಷ ಅಧ್ಯಾಯ. ಹಿಂದೂ ಮುಸ್ಲಿಂ ಭ್ರಾತೃತ್ವದ ಒಂದು ಅಪರೂಪದ ಉದಾಹರಣೆ ಈ ಇಬ್ಬರದು. ಇವರಿಬ್ಬರ ಮಧ್ಯೆ ಮತೀಯ ಸಂಘರ್ಷ ತಂದಿಡುವ ಬ್ರಿಟಿಷರ ಹುನ್ನಾರಕ್ಕೆ ದಿಟ್ಟ ಉತ್ತರವಾಗಿ ನೇಣಿಗೇರುವವರೆಗೂ ಒಂದಾಗಿ ರಾಷ್ಟ್ರೀಯ ಚಿಂತನೆಗೆ ತಮ್ಮನ್ನು ಅರ್ಪಿಸಿಕೊಂಡ ಮಹಾನ್ ದೇಶಭಕ್ತರು. ತಮ್ಮ ತಮ್ಮ ಧರ್ಮಗಳಿಗೆ ಬದ್ಧರಾಗಿಯೂ ಈ ದೇಶಕ್ಕೆ ನಿಷ್ಠರಾಗಲು ಸಾಧ್ಯ ಎಂಬುದನ್ನು ಈ ದೇಶಭಕ್ತ ಜೋಡಿ ತೋರಿಸಿಕೊಟ್ಟಿದೆ ಹಾಗೂ ಇಂದಿನ ಪ್ರತ್ಯೇಕತಾವಾದಿಗಳಿಗೆ ಇವರ ಬದುಕು ಒಂದು ಪಾಠ.

ಅಷ್ಫಾಕ್ ಉಲ್ಲಾ ಉತ್ತರಪ್ರದೇಶದ ಶಹಜಾನ್ ಪುರದ ಶ್ರೀಮಂತ ಕುಟುಂಬದ ಸುಶಿಕ್ಷಿತ ತರುಣ. ಪರಿವಾರದ ಹಲವಾರು ಬ್ರಿಟಿಷ್ ಸರ್ಕಾರದ ಉಚ್ಚ ಸ್ಥಾನಗಳಲ್ಲಿ ಕೆಲಸ ಮಾಡುತ್ತಿದ್ದರು. ಆದರೂ ದೇಶದೆಡೆಗೆ ಅಷ್ಫಾಕನಿಗಿದ್ದ ಅದಮ್ಯ ದೇಶಭಕ್ತಿ ಅವನನ್ನು ಮತ್ತೊಬ್ಬ ದೇಶಭಕ್ತ ಕ್ರಾಂತಿಕಾರಿ, ಕವಿ ರಾಮಪ್ರಸಾದ್ ಬಿಸ್ಮಿಲ್ಲಾನೆಡೆಗೆ ಕರೆತಂದಿತು. ರಾಮ್ ಪ್ರಸಾದ್ ಆರ್ಯಸಮಾಜಿ, ಆಷ್ಫಾಕ್ ನಾದರೂ ನಿಷ್ಠಾವಂತ ಮುಸ್ಲಿಂ. ರಾಮ್ ಪ್ರಸಾದ್ ಜೈಲಿನಲ್ಲೇ ಹೋಮ ಹವನ ಮಾಡಿದರೆ ಆಷ್ಫಾಕ್ ದಿನಕ್ಕೆ ಐದು ಬಾರಿ ನಮಾಜ್ ಮಾಡುತ್ತಿದ್ದ. ಆದರೂ ಅವರಿಬ್ಬರೂ ಪರಸ್ಪರ ಸೋದರರಂತೆ ಇದ್ದರು. ಅವರಿಬ್ಬರನ್ನು ಬೇರೆ ಮಾಡುವ, ಅವರ ಮಧ್ಯೆ ಜಗಳ ತಂದುಹಾಕುವ ಬ್ರಿಟಿಷರ ಪ್ರಯತ್ನವೆಲ್ಲ ವಿಫಲವಾಯ್ತು. ಈ ಜೋಡಿ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿತ್ತು. ಇವರ ಕ್ರಾಂತಿಕಾರಿ ಚಟುವಟಿಕೆಗಳು ಬ್ರಿಟಿಷ್ ಸಾಮ್ರಾಜ್ಯದ ನಿದ್ದೆಗೆಡಿಸಿತ್ತು.

ಕಾಕೋರಿ ರೈಲು ದರೋಡೆ ಪ್ರಕರಣದಲ್ಲಿ ಕೊನೆಗೂ ಸಿಕ್ಕಿಬಿದ್ದ ಈ ಜೋಡಿಗೆ ಡಿಸೆಂಬರ್ ೧೯, ೧೯೨೭ ರಂದು ಗಲ್ಲು ಶಿಕ್ಷೆ ಯ ಭಾಗ್ಯ. ಅತ್ಯಂತ ಆನಂದದಿಂದ ಇಬ್ಬರೂ ಜತೆಯಾಗಿಯೇ ನೇಣುಗಂಬವೇರಿ ಭಾರತೀಯ ಯುವಕರಿಗೆ ಸ್ನೇಹ ಭ್ರಾತೃತ್ವದ ಅನುಪಮ ಉದಾಹರಣೆಯಾಗಿದೆ ಈ ದೇಶಭಕ್ತ ಜೋಡಿ. ಸ್ವತಃ ಕವಿಯೂ ಆಗಿದ್ದ ಅಶ್ಪಾಕ್ ತನ್ನ ಒಂದು ನೀಳ್ಗವಿತೆಯಲ್ಲಿ ಹೇಳುತ್ತಾನೆ: “ಜೀವನ ಮರಣಗಳೆಂಬುವುದು ನಿಜವಲ್ಲ ಎಂದು ಯುದ್ಧದ ನಡುವೆ ಅರ್ಜುನನಿಗೆ ಕೃಷ್ಣ ಹೇಳಲಿಲ್ಲವೇ? ಅಯ್ಯೋ, ಆ ಅರಿವು ಎಲ್ಲಿ ಹೋಯಿತು? ಒಮ್ಮೆ ಹೇಗೊ ಸಾವು ಬರಲಿದೆ. ಅದಕ್ಕೇಕೆ ಹೆದರೋಣ? ದೇಶದ ಭವಿಷ್ಯ ಉಜ್ವಲವಾಗಿ, ಸ್ವತಂತ್ರವಾಗಿರಲಿ. ನಮ್ಮದ್ದೇನು ಮಹಾ! ನಾವು ಇದ್ದರೇನು, ಇಲ್ಲದಿದ್ದರೇನು?”. ರಾಮ್ ಪ್ರಸಾದ್ – ಅಷ್ಫಾಕ್ ಉಲ್ಲಾ ಜೋಡಿಯ ನೆನಪು ನಮ್ಮೆಲ್ಲರಿಗೆ ಹೊಸ ಸ್ಫೂರ್ತಿ ತರಲಿ.

ಮಾಹಿತಿ ಕೃಪೆ : ಕಣಜ.ಇನ್ , ವಿಕಿಪಿಡೀಯಾ ಹಾಗೂ ಇತರ ಮೂಲಗಳಿಂದ.

1 ಟಿಪ್ಪಣಿ Post a comment
  1. ವಲವಿ
    ಆಗಸ್ಟ್ 19 2016

    ರಾಮ ಪ್ರಸಾದರ ಮುಂದಿನ ಬಿಸ್ಮಿಲ್ಲಾ ಏನು. ವಿವರಿಸಿ.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments