ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 23, 2016

6

“ಭಾರತ್ ಕಿ ಬರ್ಬಾದಿ” ಕೂಗಿನ ಹಿಂದಿರುವ ಕೈಗಳು ಯಾರದ್ದು?

‍ನಿಲುಮೆ ಮೂಲಕ

– ರಾಕೇಶ್ ಶೆಟ್ಟಿ

downloadಉಗ್ರ ಬರ್ಹನ್ ವಾನಿಯ ಹತ್ಯೆಯಾಗಿ ಒಂದು ತಿಂಗಳು ಕಳೆದು ಕಾಶ್ಮೀರ ಕಣಿವೆಯ ಒಂದೆರಡು ಜಿಲ್ಲೆಗಳನ್ನು ಬಿಟ್ಟು ಉಳಿದೆಲ್ಲವೂ ತಣ್ಣಗಾಗಿದ್ದರೂ ಕಾಶ್ಮೀರಿ ಪ್ರತ್ಯೇಕತಾವಾದಿಗಳಿಗೆ ಬೆಂಬಲ ನೀಡುತ್ತಿರುವ ದೇಶದ್ರೋಹಿಗಳ ಕೂಗು ಇನ್ನು ತಣ್ಣಗಾಗಿಲ್ಲ. ಇಷ್ಟು ದಿನ ಶ್ರೀನಗರದಲ್ಲೋ, ದೆಹಲಿಯ JNUವಿನಲ್ಲೋ, ಉತ್ತರ ಭಾರತದಲ್ಲೆಲ್ಲೋ ಕಾಣಿಸಿಕೊಳ್ಳುತ್ತಿದ್ದ ಈ Urban Naxalರು ಈಗ ನಮ್ಮ ಬೆಂಗಳೂರಿಗೂ ಕಾಲಿಟ್ಟಿದ್ದಾರೆ. ಕಾಶ್ಮೀರದಲ್ಲಿ ಪಾಕಿಸ್ತಾನಿ ಪ್ರಾಯೋಜಿತ ಗಲಭೆ ಶುರುವಾಗಿ ಒಂದು ವಾರ ಕಳೆಯುವಷ್ಟರಲ್ಲೇ (ಜುಲೈ15,16) We Stand with Kashmir ಎನ್ನುವ ಹೆಸರಿನೊಂದಿಗೆ ಬೆಂಗಳೂರಿನ ಟೌನ್ ಹಾಲ್ ಮುಂದೆ ನಿಂತು “ಕಾಶ್ಮೀರದ ಆಜಾದಿ” ಕೇಳಲು ಹೊರಟಿದ್ದ ಈ ಅರ್ಬನ್ ನಕ್ಸಲರ ಆಸೆಗೆ ನಾವೊಂದಿಷ್ಟು ಜನರು ಸೇರಿ ತಣ್ಣಿರೇರಚಿದ್ದೆವು. ಅದಾದ ನಂತರ, ‘ತಾತ್ಕಾಲಿಕವಾಗಿ’ ನಾವು ಅವರನ್ನು ತಡೆದಿದ್ದೇವೆ ಅಂತಲೇ ನಾನು ಬರೆದಿದ್ದೆ. ಆ ಆತಂಕ ನಿಜವೆಂಬಂತೆ ಮೊನ್ನೆ ಆಗಸ್ಟ್ 13ರಂದು ಅಮ್ನೆಸ್ಟಿ ಇಂಡಿಯಾ ಎಂಬ NGO ಹೆಸರಿನಡಿಯಲ್ಲಿ, ಕಳ್ಳರೆಲ್ಲಾ ಸಂತೆಯಲ್ಲಿ ಒಂದಾಗುವಂತೆ ಬಂದು ಸೇರಿಕೊಂಡಿದ್ದಾರೆ.

ಮಾನವ ಹಕ್ಕುಗಳ ಝಂಡಾ ಹಿಡಿದು, ಸೈನಿಕರನ್ನು ರಾಕ್ಷಸರಂತೆ, ಉಗ್ರರನ್ನು ರಕ್ಷಕರಂತೆ ಚಿತ್ರಿಸುವ ನಾಟಕ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟು, ಸೈನಿಕರ ಬಗ್ಗೆ ಒಂದೇ ಒಂದು ಮಾತು ಒಳ್ಳೆಯ ಮಾತು ಕೇಳಿದಾಕ್ಷಣ ಮೈ ಮೇಲೆ ಪಾಕಿಸ್ತಾನಿ ಭೂತ ಆವರಿಸಿದಂತೆ, “ಭಾರತ್ ಕಿ ಬರ್ಬಾದಿ ತಕ್ ಜಂಗ್ ರಹೇಗಿ, ಚೀರ್ ಕೆ ಲೇಂಗೆ ಆಜಾದಿ” ಅಂತೆಲ್ಲಾ ಘೋಷಣೆಗಳನ್ನು ಬೆಂಗಳೂರಿನಲ್ಲಿ ನಿಂತು ಕೂಗುತ್ತಾರೆಂದರೆ, ಇದು ರಾಜ್ಯದ ಗುಪ್ತಚರ ಇಲಾಖೆಯ ವೈಫಲ್ಯವಲ್ಲದೇ ಮತ್ತೇನು? ಅಷ್ಟಕ್ಕೂ ಜುಲೈ ತಿಂಗಳಿನ ವಿಫಲ ಯತ್ನದ ನಂತರ ಈ ಬಗ್ಗೆ ಪೋಲಿಸರಿಗೆ ಸಾಮಾಜಿಕ ಜಾಲತಾಣಗಳು, ಪತ್ರಗಳ ಮೂಲಕ ಇಂತಹ ದೇಶವಿರೋಧಿ ಕಾರ್ಯಕ್ರಮಕ್ಕೆ ಕರ್ನಾಟಕದ ನೆಲದಲ್ಲಿ ಅವಕಾಶ ಕೊಡಬೇಡಿ ಎಂದು ಮನವಿ ಸಲ್ಲಿಸಲಾಗಿದ್ದರೂ ಇಂತದ್ದೊಂದು ದುರ್ಘಟನೆ ನಡೆದಿದ್ದು ಹೇಗೆ ? ಗುಪ್ತಚರ ಇಲಾಖೆಯ ವೈಫಲ್ಯವೇ ಅಥವಾ ಕರ್ನಾಟಕದ ಸರ್ಕಾರದ ಉಡಾಫೆ ಧೋರಣೆ ಕಾರಣವೇ?

ನಿಜಕ್ಕೂ, ಸರ್ಕಾರದ ತೋರಿಸುತ್ತಿರುವಷ್ಟು ಉಡಾಫೆಯಂತಿದೆಯೇ ಈ ಕೇಸು ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕು. ಬೆಂಗಳೂರಿನ ನೆಲದಲ್ಲಿ ಇಂತದ್ದೊಂದು ವಿದ್ವಂಸಕ ಕಾರ್ಯಕ್ರಮಕ್ಕೆ ಇವರು ಮೊದಲು ಕೈ ಹಾಕಿದ್ದು ಜುಲೈ ತಿಂಗಳಿನಲ್ಲಿ. ಕಾರ್ಯಕ್ರಮದ ಆಯೋಜನೆಗೆ ಇವರು ಅನುಮತಿ ಪಡೆದ ಪತ್ರದಲ್ಲಿ ಇದ್ದದ್ದು ‘ಮಹಿಳಾ ದೌರ್ಜನ್ಯ, ಮಾನವ ಹಕ್ಕು” ಎಂಬ ಉಲ್ಲೇಖಗಳೇ ಹೊರತು ಕಾಶ್ಮೀರದ ಆಜಾದಿಯಾಗಿರಲಿಲ್ಲ. ಆದರೆ ಇವರ ಫೇಸ್ಬುಕ್ ಇವೆಂಟ್ ಪೇಜಿನಲ್ಲಿ ತಮ್ಮ ನಡೆಯನ್ನು ಸ್ಪಷ್ಟವಾಗಿ ನಮೂದಿಸಿದ್ದರು. ಯಥಾಪ್ರಕಾರ ಭಾರತೀಯ ಸೈನ್ಯವನ್ನು ರಾಕ್ಷಸರಂತೆಯೂ, ಉಗ್ರಗಾಮಿಗಳನ್ನು ರಕ್ಷಕರಂತೆಯೂ ಚಿತ್ರಿಸಿಕೊಂಡಿದ್ದರು. ಹೇಗಿದೆ ನೋಡಿ ಅನುಮತಿ ಪಡೆಯಲು ಕೊಟ್ಟಿದ್ದೇ ಬೇರೆ, ಪ್ರತಿಭಟನೆಯ ಉದ್ದೇಶವೇ ಬೇರೆ! ಪಾಪ, ನಮ್ಮ ಪೋಲಿಸರಿಗೆ ನಾವು ತಿಳಿಸುವವರೆಗೂ ವಿಷಯದ ಸಂಪೂರ್ಣ ಚಿತ್ರಣವಿರಲಿಲ್ಲವೇ? ನಾಳೆ ಯಾರಾದರೂ ದೀಪ ಹಚ್ಚುತ್ತೇವೆ ಎಂದು ಪರ್ಮಿಶನ್ ಪಡೆದು ಬಾಂಬ್ ಹಚ್ಚಿಟ್ಟುಹೋಗಬಹುದಲ್ಲವೇ? ಗಮನಿಸಬೇಕಾದ ಇನ್ನೊಂದು ವಿಷಯವೆಂದರೆ, ಕಾರ್ಯಕ್ರಮದ ಆಯೋಜಕರ ಹೆಸರುಗಳೆಲ್ಲವೂ ಹೆಚ್ಚಾಗಿ ಹಿಂದೂಗಳದ್ದೇ ಆಗಿತ್ತು. ನಾವು ಟೌನ್ ಹಾಲ್ ಎದುರು ನಿಂತು ಯಾರು ಬರಬಹುದು ಎಂದು ನೋಡುವಾಗ ಬಂದಿಳಿದ ಆರೇಳು ಜನರು ಕಾಶ್ಮೀರಿ ಮುಸ್ಲಿಮರು. ಆದರೆ, ಅಲ್ಲಿ ಬಂದಿಳಿದವರು ಕೇವಲ ಪಾತ್ರಧಾರಿಗಷ್ಟೇ, ಸೂತ್ರಧಾರಿಗಳು ಬೆಂಗಳೂರಿನಲ್ಲೋ ಅಥವಾ ಭಾರತದ ಹೊರಗಡೆಯೂ ಇದ್ದಿರಬಹುದು ಮತ್ತು ಇದಕ್ಕಾಗಿ ಕೈ ಬದಲಾಗುವ ಸೂಟ್ ಕೇಸುಗಳು ತೂಕದ್ದೇ ಆಗಿರಬಹುದು ಎಂಬ ನಮ್ಮ ಊಹೆ, ಸರಿಯಾಗಿ ಒಂದು ತಿಂಗಳ ನಂತರ ಇದೇ ಜನರು ಅಮ್ನೆಸ್ಟಿ ಇಂಟರ್ನ್ಯಾಷನಲ್ ಬ್ಯಾನರಿನಡಿಯಲ್ಲಿ ಬಂದು ನಿಂತಾಗಲೇ ತಿಳಿಯಿತು.

ಜಗತ್ತಿನಾದ್ಯಂತ ಅಭಿವೃದ್ಧಿಶೀಲ ದೇಶಗಳನ್ನು ಗೋಳು ಹುಯ್ದುಕೊಳ್ಳುವಲ್ಲಿ ಅಮ್ನೆಸ್ಟಿ ಕುಖ್ಯಾತಿ ಪಡೆದಿದೆ. 2012ರವರೆಗೂ ಭಾರತಕ್ಕೆ ಕಾಲಿಡಲೂ ಬಿಡದಿದ್ದ ಈ NGO ಸೋಗಿನ MNC ಮಾರಿಯನ್ನು ಒಳಬಿಟ್ಟುಕೊಂಡಿದ್ದು ಶ್ರೀಮತಿ ಸೋನಿಯಾ ಗಾಂಧಿಯವರ ಯುಪಿಎ. ಯುಪಿಎ ಸರ್ಕಾರ ಅಧಿಕಾರದಲ್ಲಿ ಇರುವವರೆಗೂ ತೆಪ್ಪಗಿದ್ದ ಇವರು ಮೋದಿ ಸರ್ಕಾದ ಅಧಿಕಾರಕ್ಕೆ ಬಂದ ತಕ್ಷಣ ತನ್ನ ಅಸಲಿ ಆಟ ಶುರುವಿಟ್ಟುಕೊಂಡಿತು. ಈ ಸಂಸ್ಥೆಯ ಇಂಡಿಯಾ ಅಧ್ಯಕ್ಷ ಆಕಾರ್ ಪಟೇಲ್ ಅವರ ಮೋದಿ ದ್ವೇಷಿಗಳ ಸಾಲಿನಲ್ಲಿ ಅಗ್ರಸ್ಥಾನ ಪಡೆದವರು. ಇನ್ನು ಈ ಸಂಸ್ಥೆಯ ಮುಖ್ಯ ಹುದ್ದೆಯಲ್ಲಿರುವ ಇತರ ಪ್ರಮುಖರ ಪ್ರೊಫೈಲುಗಳನ್ನು ಅವರ ಹಿನ್ನೆಲೆಯನ್ನೂ ಜಾಲಾಡಿದರೇ, ಈ ಸಂಸ್ಥೆಯ ಉದ್ದೇಶ ಅರಿವಾಗಬಲ್ಲದು ಮತ್ತು ಈ ಸಂಸ್ಥೆಯ ಕೈಗಳು ಎಷ್ಟು ಆಳದಲ್ಲಿವೆ ಎಂಬುದಕ್ಕೆ ಉದಾಹರಣೆಯೆಂದರೇ, ಕರ್ನಾಟಕದ ಪೋಲಿಸರು ಅಮ್ನೆಸ್ಟಿ ವಿರುದ್ಧ FIR ದಾಖಲಿಸಿದ್ದಾರೆ ಎಂದಾಕ್ಷಣ ಕಾಂಗ್ರೆಸ್ಸಿನ ದಿಗ್ವಿಜಯ್ ಸಿಂಗ್, ಮನೀಶ್ ತಿವಾರಿಯಂತವರು ಕನಲಿ ಕೆಂಡವಾದರು. ಹೈಕಮಾಂಡ್ ರಾಜ್ಯ ಸರ್ಕಾರದ ಮೇಲೆ ಗರಂ ಆಗಿದೆ ಎಂದು ಸುದ್ದಿಯಾಯಿತು. ದಿಗ್ವಿಜಯ್ ಸಿಂಗ್ ಒಂದು ಹೆಜ್ಜೆ ಮುಂದೆ ಹೋಗಿ “ಭಾರತ ಆಕ್ರಮಿತ ಕಾಶ್ಮೀರ” ಎಂದು ಪಾಕಿಗಳಂತೆಯೇ ಮಾತನಾಡಿಬಿಟ್ಟರು. ಇಷ್ಟೆಲ್ಲಾ ಆದರೂ ಅಮ್ನೆಸ್ಟಿ ಸಂಸ್ಥೆ ಸೃಷ್ಟೀಕರಣ ನೀಡಿ ಸುಮ್ಮನಾದರೆ, ದೇಶದ ಮೂಲೆ ಮೂಲೆಯಲ್ಲಿರುವ ಫಲಾನುಭವಿಗಳು ಊಳಿಡುತ್ತಿವೆ. ಬಿಸ್ಕೆಟ್ ಎಸೆದ ಮಾಲೀಕ ಸುಮ್ಮನಾದರೆ, ಬಿಸ್ಕೆಟ್ ತಿಂದವರು ಊಳಿಡುವುದು ನ್ಯಾಯವೇ ಅಲ್ಲವೇ?

ಇವರ ಮಾನವ ಹಕ್ಕು ಉಲ್ಲಂಘನೆ ಊಳಿಡುವಿಕೆಯನ್ನು ಪಾಕ್ ಆಕ್ರಮಿತ ಕಾಶ್ಮೀರ, ಗಿಲ್ಗಿಟ್-ಬಾಲ್ಟಿಸ್ಥಾನ, ಬಲೂಚಿಸ್ಥಾನಗಳಿಗೆ ಹೋಗಿ ಮಾಡಲು ಹೇಳಿನೋಡಿ. ಮಾಡಲಾರರು. ಈ ಸಂಸ್ಥೆಗಳ ನಿಗೂಢ ಸೂತ್ರಧಾರರ ಮೂಲ ಉದ್ದೇಶವೇ ಅಭಿವೃದ್ಧಿ ಶೀಲ ದೇಶಗಳು ಬೆಳೆದು ಸೂಪರ್ ಪವರ್ರುಗಳಾಗಬಾರದು, ಜಗತ್ತು ಒಂದೆರಡು ದೇಶಗಳ ನಿಯಂತ್ರಣದಲ್ಲಿಯೇ ಇದ್ದು ರಾಜಕೀಯ, ಸಾಮರಿಕ, ವ್ಯಾವಹಾರಿಕ ಮತ್ತು ರಿಲಿಜಿಯನ್ ಲಾಭಗಳನ್ನು ಪಡೆಯಲು ಸಾಧ್ಯವಾಗುವುದು ಆಗಲೇ ತಾನೇ? ಇಂದು ಕಾಶ್ಮೀರದ ವಿಷಯ ಮಾತನಾಡುತಿದ್ದಾರೆ, ನಾಳೆ ಕೇರಳ, ತಮಿಳುನಾಡು ದೇಶವನ್ನು ಒಡೆಯಲು ಬೇಕಾದ ಎಲ್ಲಾ ಹಂತಗಳನ್ನು ಇಂತ ಎನ್ಜಿಓಗಳು ಮಾಡಬಲ್ಲವು. ಹೀಗಿರುವಾಗ, ಇಂತಹ ಕೇಸಿನ ಬಗ್ಗೆ ಉದಾಸೀನ ಧೋರಣೆ ತಾಳುತ್ತಿರುವ ಕಾಂಗ್ರೆಸ್ಸ್ ಸರ್ಕಾರದ ಮೇಲೆ ನಂಬಿಕೆಯಿಡುವುದು ಹೇಗೆ? ಈ ಪ್ರಕರಣವನ್ನು NIAಗೆ ಒಪ್ಪಿಸುವುದೇ ಸೂಕ್ತ. ಕೇಂದ್ರ ಸರ್ಕಾರ ಆದಷ್ಟು ಬೇಗ ಮಧ್ಯಪ್ರವೇಶ ಮಾಡಿ ಅಮ್ನೆಸ್ಟಿಯಂತಹ ಸಂಸ್ಥೆಗಳನ್ನು ದೇಶದಿಂದ ಹೊರಹಾಕಬೇಕಾಗಿದೆ.

ಭಾರತ್ ಕಿ ಬರ್ಬಾದಿ ಕೂಗಿನ ಹಿಂದಿರುವ ಕೈಗಳು ಯಾರದ್ದು ಎನ್ನುವುದನ್ನು ಬಹಿರಂಗಗೊಳಿಸಬೇಕಾದ ಸಮಯವಿದು. ಅದರ ಜೊತೆ ಜೊತೆಗೆ ದೇಶದಾದ್ಯಂತ ಜಾತಿ-ಜಾತಿಗಳ ನಡುವೆ ವೈಷಮ್ಯ ಮೂಡಿಸುವಂತಹ ಕೆಲಸಕ್ಕೆ ಗುಜರಾತಿನ ಉನಾದಿಂದ ಚಾಲನೇ ನೀಡಲಾಗಿದೆ. ಇಂತಹ ವಿಷಯದಲ್ಲಿ Defensive Modeಗಿಳಿಯದೇ Aggressive ಆಗದೇ ಇದ್ದರೇ ಮೋದಿ ಸರ್ಕಾರಕ್ಕೇ ಈ ದೇಶ ವಿರೋಧಿ ವ್ರಣಗಳು ದಿನನಿತ್ಯ ಕಾಡಲಿದ್ದಾರೆ.

ಕೆಂಪು ಕೋಟೆಯಲ್ಲಿ ನಿಂತು ಪಾಕ್-ಆಕ್ರಮಿತ ಕಾಶ್ಮೀರ, ಗಿಲ್ಗಿಟ್-ಬಾಲ್ಟಿಸ್ತಾನ್, ಬಲೂಚಿಸ್ತಾನದ ಬಗ್ಗೆ ಮಾತನಾಡಿ ಪಾಕಿಗಳಿಗೆ ಮತ್ತು ಪಾಕಿ ಗಂಜಿ ಗಿರಾಕಿಗಳಿಗೆ Master Stroke ನೀಡಿ ಕಾಶ್ಮೀರ ಸಮಸ್ಯೆಯ ಚರ್ಚೆಯ ದಿಕ್ಕನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಬದಲಾಯಿಸಿರುವ ಪ್ರಧಾನಿ ಮೋದಿಯವರು ಆಂತರಿಕ ಪಾಕಿಸ್ತಾನಿಗಳಿಗೂ ಶಾಕ್ ಟ್ರೀಟ್ಮೆಂಟ್ ಕೊಡಬೇಕಾಗಿರುವುದು ಈ ಸಮಯದ ತುರ್ತು.

6 ಟಿಪ್ಪಣಿಗಳು Post a comment
 1. Rohit Vemula
  ಆಗಸ್ಟ್ 24 2016

  Actor Ramya (Divya Spandana) has been charged of sedition for not agreeing with BJP minister Parrikar on Pakistan. Is difference of opinion a crime? Why does Sangh parivar want to crush everyone who disagrees with it? Even in Amnesty India’s case Amnesty has said none of its members raised anti India slogans. Why is it then charged of sedition? Is sedition charge the new weapon of mass suppression?

  ಉತ್ತರ
  • ಕಾಮ್ರೇಡ್ ಕನ್ನಯ್ಯ
   ಆಗಸ್ಟ್ 25 2016

   Hey Rohit, I am your successor. Don’t worry I will take on these Manuvaadis.You enjoy your stay over there

   ಉತ್ತರ
 2. Rohit Vemula
  ಆಗಸ್ಟ್ 24 2016

  To be noted by Sangh supporters: UPA government under the secular and liberal leadership of Dr. Manmohan Singhji did not charge Advaniji of sedition when he praised Pakistan founder Jinnahji.

  ಉತ್ತರ
  • Rohit Vemula
   ಆಗಸ್ಟ್ 26 2016

   Dear Sanghis, will your lawyers file a sedition case against your PM who went to Pakistan on his way back from Afghanistan to eat Punjabi style wedding food? He was served food by none other than India’s enemy #1 Janab Nawaz Sharif. Why isn’t ABVP and Bhajarangdal demanding action against the PM?

   ಉತ್ತರ
 3. Goutham
  ಆಗಸ್ಟ್ 25 2016

  ಅನಗತ್ಯವಾಗಿ JNU ಪ್ರಸ್ತಾಪವೇಕೆ ಶೆಟ್ಟರೆ?

  ಉತ್ತರ
  • ಕಾಮ್ರೇಡ್ ಕನ್ನಯ್ಯ
   ಆಗಸ್ಟ್ 26 2016

   ಕಾಮ್ರೇಡ್ ಗೌತಮ್,ಜೆನ್ಯೂ ಹೆಸರು ತೆಗೆಯುವುದು ಆಜಾದಿಗಳನ್ನು ಗುರುತಿಸುವ ಹೆಜ್ಜೆಯೆಂದು ಹೆಮ್ಮೆಪಡೋಣ

   ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments