ಜಮ್ಮು-ಕಾಶ್ಮೀರ : ಐತಿಹಾಸಿಕ ಸತ್ಯಗಳು ಮತ್ತು ವರ್ತಮಾನದ ತಲ್ಲಣಗಳು
28th ಆಗಸ್ಟ್,ಅಂದರೆ ಮುಂದಿನ ಭಾನುವಾರದ ಬೆಳಗ್ಗೆ 10.30 -1.30 ವರೆಗಿನ ಸಮಯ “ನಿಲುಮೆ ಬಳಗ”ದ ಜೊತೆ ಮೀಸಲಿಡಿ…
(ಸ್ಥಳ : ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ, opp RBI,ಬೆಂಗಳೂರು)
ಕಳೆದ ಕೆಲವು ದಿನಗಳಿಂದ “ಕಾಶ್ಮೀರ” ಸಮಸ್ಯೆಯ ಬಗ್ಗೆ ದೇಶದ ವಿವಿಧ ನಗರಗಳಲ್ಲಿ ಅತ್ಯಂತ ವ್ಯವಸ್ಥಿತವಾಗಿ ಭಾರತ ವಿರೋಧಿ ಮನಸ್ಥಿತಿಯನ್ನು ಉತ್ತೇಜಿಸುವ ವಿಧ್ವಂಸಕ ಕೆಲಸ ನಡೆಯುತ್ತಿದೆ.ದೇಶ ವಿರೋಧಿ ಕೂಗುಗಳು,ಸುಳ್ಳು ಇತಿಹಾಸದ ವೈಭವೀಕರಣವಾಗುತ್ತಿರುವ ಈ ಸಮಯದಲ್ಲಿ ರಾಷ್ಟ್ರೀಯ ಹಿತಾಸಕ್ತಿಗೆ ಬದ್ಧವಾಗಿ,ಜನ ಸಾಮಾನ್ಯರಿಗೆ ಮತ್ತು ಯುವ ಜನತೆಗೆ ಸತ್ಯವೇನು ಎಂದು ತಿಳಿಸಬೇಕಾದದ್ದು ಜವಬ್ದಾರಿಯುತ ಸಮೂಹವಾಗಿ ನಮ್ಮ ಕರ್ತ್ಯವ್ಯ.
“ಜಮ್ಮು-ಕಾಶ್ಮೀರ : ಐತಿಹಾಸಿಕ ಸತ್ಯಗಳು ಮತ್ತು ವರ್ತಮಾನದ ತಲ್ಲಣಗಳು” ಎಂಬ ಶೀರ್ಷಿಕೆಯಡಿಯಲ್ಲಿ ವಿಚಾರ ಸಂಕಿರಣ ಮತ್ತು ಸಂವಾದ ಕಾರ್ಯಕ್ರಮವನ್ನು “ನಿಲುಮೆ ಬಳಗ” ಆಯೋಜಿಸುತ್ತಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು, ನಿವೃತ್ತ ಪೊಲೀಸ್ ಮಹಾ ನಿರ್ದೇಶಕರಾದ ಶ್ರೀ.ಶಂಕರ ಬಿದರಿಯವರು ಮಾಡಲಿದ್ದಾರೆ.
ಜಮ್ಮು ಕಾಶ್ಮೀರದ ಐತಿಹಾಸಿಕ ಸತ್ಯಗಳ ಬಗ್ಗೆ ವಿಜಯವಾಣಿಯ ಅಂಕಣಕಾರರು ಮತ್ತು ಅಂತರಾಷ್ಟ್ರೀಯ ವಿದ್ಯಾಮಾನಗಳ ವಿಶ್ಲೇಷಕರಾದ ಶ್ರೀ ಪ್ರೇಮಶೇಖರ ಅವರು ಬೆಳಕು ಚೆಲ್ಲಲ್ಲಿದ್ದಾರೆ.
ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ವೀರ ಸೇನಾನಿ ಕ್ಯಾಪ್ಟನ್ ನವೀನ್ ನಾಗಪ್ಪ ಅವರು ಕಾರ್ಗಿಲ್ ಯುದ್ಧದ ಅನುಭವಗಳು, ಸ್ಥಳೀಯರು ಮತ್ತು ಯೋಧರ ಬಾಂಧವ್ಯಗಳ ಬಗ್ಗೆ ಬೆಳಕಲು ಚೆಲ್ಲಲ್ಲಿದ್ದಾರೆ.
ಸುಳ್ಳುಗಳಿಂದ ಆಜಾದಿ ಪಡೆಯಲು ಬರ್ತೀರಲ್ವಾ?
Event Link : https://www.facebook.com/events/288173218211336/?ti=icl
ನಿಮ್ಮೊಲುಮೆಯ,
ನಿಲುಮೆ ಬಳಗ
ಆಗಾಗ್ಗೆ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಭಾರತದಲ್ಲಿನ ನಾಗರೀಕರ ಗಮನಕ್ಕೆ ಸತ್ಯವಾದ ವಿಷಯಗಳನ್ನು ತರುತ್ತಿರಲೇಬೇಕಾದ ಪರಿಸ್ಥಿತಿ ಒದಗಿ ಬಂದಿದೆ. ಅದರಲ್ಲೂ ಯುವಜನತೆಯನ್ನು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಅವರನ್ನು ಎಚ್ಚರಿಸುವುದು ಒಳ್ಳೆಯದು.