ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 9, 2016

3

ಕಾವೇರಿ ವಿವಾದ : ನಾಲಾಯಕ್ ನಾಯಕರ ನಡುವಿನ ಜನನಾಯಕರು

‍ನಿಲುಮೆ ಮೂಲಕ

800x480_image57629329ಕಾವೇರಿ ವಿವಾದ ಮತ್ತೆ ಭುಗಿಲೆದ್ದಿದೆ. ಸೆಪ್ಟಂಬರ್ ೯ರಂದು ಕರ್ನಾಟಕ ಬಂದ್ ಗೂ ಕರೆ ನೀಡಲಾಗಿದೆ. ನಮಗೆ ಕುಡಿಯಲಿಕ್ಕೇ ನೀರಿಲ್ಲದಿರುವಾಗ ಕೈಲಾಗದ ಸರ್ಕಾರ ತಮಿಳುನಾಡಿನ ಬೆಳೆಗಳಿಗೆ ನೀರು ಹರಿಸುತ್ತಿದೆ. ನಮ್ಮಲ್ಲೇ ಹೆಚ್ಚಾಗಿರುವ ನಾಲಾಯಕ್ ನಾಯಕರ ನಡುವೆ, ಅಪರೂಪಕ್ಕೆ ದಿಟ್ಟತನ ಹಾಗೂ ಚಾಣಾಕ್ಷತನ ತೋರಿದ ಇಬ್ಬರು ಜನನಾಯಕರ ನೆನಪುಗಳು ನಿಮಗಾಗಿ – ನಿಲುಮೆ

ನೆನಪು ೧ :
ನಿಜವಾದ ಗಂಡಸು ಎಂದರೆ ಅದು ಬಂಗಾರಪ್ಪ
1991ರಲ್ಲಿ, ತಮಿಳುನಾಡಿಗೆ 205 ಟಿಎಂಸಿ ನೀರು ಬಿಡುವಂತೆ ಕಾವೇರಿ ನ್ಯಾಯಾಧಿಕರಣವು ಮಧ್ಯಂತರ-ತೀರ್ಪನ್ನು ನೀಡಿತು. ಈ ತೀರ್ಪಿಗೆ ವಿರುದ್ಧವಾಗಿಯೇ ಮುಖ್ಯಮಂತ್ರಿ ಬಂಗಾರಪ್ಪನವರು ಸುಗ್ರೀವಾಜ್ಞೆ ಹೊರಡಿಸಿ ಕಾವೇರಿ ಕೊಳ್ಳದ ಅಣೆಕಟ್ಟುಗಳಲ್ಲಿನ ನೀರನ್ನು ರಕ್ಷಿಸಿ, ನಮ್ಮ ರಾಜ್ಯದ ರೈತರಿಗೇ ಉಳಿಸಿಕೊಳ್ಳುವಂತೆ ಅಣೆಕಟ್ಟುಗಳ ಉಸ್ತುವಾರಿಯ ಅಧಿಕಾರಿಗಳಿಗೆ ಆದೇಶಿಸಿದರು.

ಇದರ ವಿರುದ್ಧ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಗೆ ಹೋದರೂ ಬಂಗಾರಪ್ಪನವರು ಜಗ್ಗಲಿಲ್ಲ. ನಂತರ ಕೇಂದ್ರ ಸರ್ಕಾರವು ಕಾವೇರಿ ನ್ಯಾಯಾಧಿಕರಣದ ಮಧ್ಯಂತರ ತೀರ್ಪನ್ನು ಗೆಜೆಟ್ ನಲ್ಲಿ ಹೊರಡಿಸಿತು. ಇದನ್ನು ಧಿಕ್ಕರಿಸಿ ಬಂಗಾರಪ್ಪನವರ ಸರ್ಕಾರವೇ ‌1991ನೇ ಇಸವಿ ಡಿಸೆಂಬರ್ 13ರ “ಕರ್ನಾಟಕ ಬಂದ್”ಗೆ ಬಾಹ್ಯವಾಗಿಯೇ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿತು. ಅಲ್ಲಿಂದ ಎರಡು ವಾರ ಈ ನಮ್ಮ ರಾಜ್ಯದಲ್ಲಿ ಕನ್ನಡಿಗರ ಶಕ್ತಿಪ್ರದರ್ಶನ ಹೇಗಿತ್ತೆಂದರೆ 1,00,000 ತಮಿಳಿಗರು ಬೆಂಗಳೂರು, ಮೈಸೂರು ಮತ್ತಿತರ ಊರುಗಳಿಂದ ತಮಿಳುನಾಡು ಮತ್ತು ಕೇರಳಕ್ಕೆ ಓಡಿಹೋದರು. ದೇಶ-ವಿದೇಶಗಳ ಮಾಧ್ಯಮಗಳಿಂದ ಅಪಾರ ಟೀಕೆ ವ್ಯಕ್ತವಾದರೂ ಆಗಲೂ ಬಂಗಾರಪ್ಪನವರು ಕನ್ನಡಿಗರನ್ನ ಸಮರ್ಥಿಸಿಕೊಂಡರು.

ಎಲ್ಲಿಯೂ ಬಿಟ್ಟುಕೊಡಲಿಲ್ಲ! “ರೈತರ ತಂಟೆಗೆ ಬಂದ್ರೆ ನಿಮ್ಮ ಮನೆ ಬಳಿಯ ಗೂಟ ತೆಗೆದು ಹೊಡಿರಿ. ರೈತರಿಲ್ಲದೆ ಯಾವ ಸರ್ಕಾರವೂ ಇಲ್ಲ” ಎಂದು ಹೇಳುತ್ತಿದ್ದ ಮಹಾವ್ಯಕ್ತಿ ಎಸ್. ಬಂಗಾರಪ್ಪನವರು. ನಾಡಿನ ನೆಲ-ಜಲದ ವಿಚಾರಗಳಲ್ಲಿ ಯಾವ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳದೆ ನಪುಂಸಕರಂತೆ ವರ್ತಿಸುವ ದಿಲ್ಲಿಯ ಗುಲಾಮರಾದ ಇಂದಿನ ನಮ್ಮ ನಾಡಿನ ರಾಜಕಾರಣಿಗಳನ್ನು ನೋಡಿದಾಗ ಬಂಗಾರಪ್ಪನವರು ಎಷ್ಟು ಎತ್ತರದಲ್ಲಿದ್ದರು ಎಂದು ನೆನಪಾಗುತ್ತಿದೆ.

-ಸತೀಶ್ ಗೌಡ

ನೆನಪು ೨ :
ಬಂಗಾರಪ್ಪ – ಎಂ.ಡಿ.ನಂಜುಂಡಸ್ವಾಮಿ

1991ರಲ್ಲಿ, ತಮಿಳುನಾಡಿಗೆ 205 ಟಿಎಂಸಿ ಅಡಿ ನೀರು ಬಿಡುವಂತೆ ಕಾವೇರಿ ನ್ಯಾಯಾಧಿಕರಣವು ಮಧ್ಯಂತರ-ತೀರ್ಪನ್ನು ನೀಡಿತು. ವಿಧಾನಸಭೆಯಲ್ಲಿ ಕಾವೇರಿದ ಚರ್ಚೆ. ಯಾವ ಕಾರಣಕ್ಕೂ ಕಾವೇರಿ ನೀರು ಬಿಡಕೂಡದು. ಒಬ್ಬೊಬ್ಬರದೂ ವೀರಾವೇಶದ ಮಾತು, ಆರ್ಭಟ, ನಿತ್ಯ ಬಾಯಿ ಬಡಿದುಕೊಳ್ಳುವವನು ಹೋಳಿ ಬಂದರೆ ಬಿಟ್ಟಾನೆಯೇ ? ವಾಟಾಳ್ ಆರ್ಭಟಿಸಿದರು. ” ಸಾವಿರ ತೊಟ್ಟು ರಕ್ತವನ್ನಾದರೂ ಕೊಟ್ಟೇವು. ಆದರೆ ಒಂದು ತೊಟ್ಟು, ಒಂದೇ ಒಂದು ತೊಟ್ಟು ನೀರನ್ನೂ ಬಿಡಲಾರೆವು ” ಅವರ ಘರ್ಜನೆಗೆ ದೊಡ್ಡ ಚಪ್ಪಾಳೆ.
ನಂತರದ ಸರದಿ ಪ್ರೊ. ಎಂ. ಡಿ. ನಂಜುಂಡಸ್ವಾಮಿಯವರದು. ಅವರ ಮಾತು ಅಂದೊಡನೆ ಸಭೆಯ ಕಲರವ ತಂತಾನೇ ಸ್ತಬ್ಧಗೊಂಡಿತು. ರೈತಸಂಘದ ಪ್ರೊಫೆಸರ್ ಏನು ಹೇಳುತ್ತಾರೋ ಎಂದು ಕೇಳುವ ಕುತೂಹಲ, ಕಾತರ.

ಎಂಡಿಎನ್ ಹೆಚ್ಚು ಮಾತಾಡಲಿಲ್ಲ. ತಣ್ಣನೆಯ ದನಿಯಲ್ಲಿ ಅಂದರು. : ” ನೀರು ಬಿಡಿ ಅಂತ ನ್ಯಾಯಾಧಿಕರಣ ಆದೇಶ ನೀಡಿದೆ. ಅದು ಆದೇಶವೇ ಹೊರತು ಜಡ್ಜ್’ಮೆಂಟ್ ಅಲ್ಲ. ನ್ಯಾಯಾಧಿಕರಣ ಅನ್ನೋದು ಕೋರ್ಟ್ ಅಲ್ಲ. ಅದರದು ಬರೀ ಆದೇಶ ಮಾತ್ರ. ಜಡ್ಜ್’ಮೆಂಟ್ ಆದರೆ ಪಾಲಿಸಬೇಕಾಗುತ್ತೆ.. ಪಾಲಿಸಿದ ನಂತರ ಅಪೀಲ್ ಹೋಗಬೇಕಾಗುತ್ತೆ.
ಆದರೆ ಆದೇಶವನ್ನು ಪಾಲಿಸಬೇಕಾಗಿಲ್ಲ. ಧಿಕ್ಕರಿಸಬಹುದು!. ಆದ್ದರಿಂದ ಎಲ್ಲರೂ ಧಿಕ್ಕರಿಸೋಣ” ಅಂದರು.

ಈ ಮಾತೇ ಮುಂದಿನ ಚರಿತ್ರೆಗೆ ಕಾರಣವಾಯಿತು!

ನೆನಪು _ ೨
ಅದೇ ೧೯೯೧. ಮೈಸೂರಿನ ಲಲಿತಮಹಲ್ ನಲ್ಲಿ ಕಾವೇರಿ ನ್ಯಾಯಾಧಿಕರಣದ ಸಭೆ, ನ್ಯಾಯಮೂರ್ತಿ ಮುಖರ್ಜಿ ಅಧ್ಯಕ್ಷತೆಯಲ್ಲಿ ನಡೆಯಿತು. ಎರಡೂ ರಾಜ್ಯದ ತಜ್ಞರ ಸಭೆ ಅದು. ಕಾವೇರಿ ಕೊಳ್ಳದ ಮುಖ್ಯ ಪ್ರದೇಶಗಳನ್ನೆಲ್ಲ ಖುದ್ದು ನೋಡಿ ಪರಿಶೀಲಿಸಲು ನ್ಯಾಯಮೂರ್ತಿಗಳು ಬಂದಿದ್ದರು. ಸಭೆಯಲ್ಲಿ ದೊಡ್ಡ ನಕ್ಷೆಯನ್ನು ಟೇಬಲ್ ಮೇಲೆ ಹಾಸಲಾಗಿತ್ತು. ಅದರಲ್ಲಿ ಕೊಡಗಿನ ಗಡಿಭಾಗದಲ್ಲಿ ಒಂದು ಚಿಕ್ಕ ಕಾಲುವೆ ಸೂಚಿಸುವ ಗೆರೆ ಇತ್ತು. “ಇದೇನಿದು ? ” ನ್ಯಾಯಮೂರ್ತಿಗಳು ಕೇಳಿದರು. ನಮ್ಮ ಕರ್ನಾಟಕದ ತಜ್ಞರಿಗೆ ಆ ಕಾಲುವೆ ಯಾವುದು ಅಂತ ತಕ್ಷಣ ಹೇಳಲು ಕೊಂಚ ಗೊಂದಲವಾಗಿ, ನೋಡಿ ಹೇಳಲು ಫೈಲ್ ತೆಗೆದರು. ಅಷ್ಟರಲ್ಲಿ ತಮಿಳುನಾಡಿನ ತಜ್ಞರು, ” ಅದು ಕುಶಾಲನಗರದ ಕುಡಿಯುವ ನೀರಿನ ಕಾಲುವೆ” ಅಂತ ತಕ್ಷಣವೇ ಹೇಳಿಬಿಟ್ಟರು!

ಅದೇ ಸಂಜೆ ಅರಮನೆ ಎದುರಿಗೆ ಪೋಲೀಸ್ ಬ್ಯಾಂಡ್ ಕಾರ್ಯಕ್ರಮವನ್ನು ನ್ಯಾಯಾಧಿಕರಣದವರಿಗಾಗಿ ಏರ್ಪಡಿಸಿದ್ದರು. ನನ್ನದೇ ವೀಕ್ಷಕ ವಿವರಣೆ. ಬ್ಯಾಂಡ್ ಮುಗಿಯಿತು. ತಂಡವನ್ನು ಬಂಗಾರಪ್ಪ ನಗುತ್ತಾ ಖುದ್ದು ಬೀಳ್ಕೊಟ್ಟರು. ನಂತರ ಅದೆಲ್ಲಿತ್ತೋ ದೂರ್ವಾಸನ ಸಿಟ್ಟು? ಕರ್ನಾಟಕದ ತಜ್ಞರ ತಂಡದ ಮುಖ್ಯರಿಗೆ ಉಗಿದು ಉಪ್ಪು ಹಾಕಿದರು.
“ಕಾವೇರಿ ನೀರು ಕೊಡಗಿನಲ್ಲಿ ಎಷ್ಟು ಬಳಕೆ ಆಗುತ್ತೆ ಅಂತ ಹೇಳೋದಿಕ್ಕೆ ತಡಬಡಾಯಿಸುತ್ತೀರಲ್ಲಾ? ಅದನ್ನು ಹೇಳೋದಿಕ್ಕೂ ತಮಿಳುನಾಡಿನವರೇ ಬರಬೇಕಾ? ನಿಮ್ಮ ಯೋಗ್ಯತೆಗೆ ಬೆಂಕಿ ಹಾಕಬೇಕು . . . . ”
ಅಂತೆಲ್ಲಾಸಿಕ್ಕಾಪಟ್ಟೆ ಕೂಗಾಡಿದರು.

– JB ರಂಗಸ್ವಾಮಿ

ನೆನಪು ೩ :
ತಮಿಳುನಾಡಿನಲ್ಲಿ ಜಯಲಲಿತಾ ಮುಖ್ಯಮಂತ್ರಿಯಾದಗಲೆಲ್ಲ ರಾಜ್ಯದಲ್ಲಿ ಮಳೆಯೂ ಕಮ್ಮಿಯಾಗುತ್ತದೆ ಅಥವಾ ಕಾವೇರಿ ವಿವಾದ ಭುಗಿಲೇಳುತ್ತದೆ. ಪಾಕಿಸ್ತಾನಿ ಸೇನಾ ಜನರಲ್/ಪಾಕಿ ರಾಜಕಾರಣಿಗಳು ಕಾಶ್ಮೀರ ವಿವಾದ/ಭಾರತದ ಶತ್ರುತ್ವವನ್ನು ಹೇಗೆ ಓಟ್ ಬ್ಯಾಂಕ್ ಮತ್ತು ಅಸ್ತಿತ್ವದ ಪ್ರಶ್ನೆಯನ್ನಾಗಿ ಮಾಡಿಕೊಂಡಿದ್ದಾರೋ, ಅದೇ ರೀತಿ ಈ ಜಯಲಲಿತಾ ಪಾಲಿಗೆ ಕಾವೇರಿ ಎಂಬುದು ಓಟ್ ಬ್ಯಾಂಕ್ ರಾಜಕಾರಣದ ಜೊತೆಗೆ, ತನ್ನ ಮೂಲ ಕರ್ನಾಟಕವಾದರೂ ತಾನೂ ತಮಿಳರವಳು ಎಂದು ತೋರಿಸಿಕೊಳ್ಳುವ ಉಮ್ಮೇದಿ ಎದ್ದು ಕಾಣುತ್ತದೆ. ಮತಾಂತರಗೊಂಡವರು ಮೂಲ ಧರ್ಮಿಯರಿಗಿಂತ ಹೆಚ್ಚು ಕರ್ಮಠರಾಗುತ್ತಾರೆ ಅಥವಾ ಹಾಗೇ ವರ್ತಿಸಿ ತಮ್ಮ ಅಸ್ತಿತ್ವವನ್ನು ಸಾಬೀತು ಮಾಡುತ್ತಾರಲ್ಲ, ಈಕೆಯ ವರ್ತನೆಯೂ ಹಾಗೇ.

ಈಕೆಯ ಆರ್ಭಟಕ್ಕೆ ತಗ್ಗಿ ನಡೆದ ಮುಖ್ಯಮಂತ್ರಿಗಳೇ ಕರ್ನಾಟಕದಲ್ಲಿ ಹೆಚ್ಚು ಕಾಣಿಸಿಕೊಂಡಿದ್ದರೂ, ಈಕೆಯ ನೀರಿನ ದಾಹಕ್ಕೆ ತಕ್ಕ ಮಟ್ಟಿಗೆ ಬಿಸಿ ಮುಟ್ಟಿಸಿದವರು ಬಂಗಾರಪ್ಪ ಮತ್ತು ದೇವೆಗೌಡರು. ದೇವೆಗೌಡರು ಮುಖ್ಯಮಂತ್ರಿಯಾಗಿದ್ದಾಗಲೂ ತಮಿಳುನಾಡು ಸರ್ಕಾರ ತಮ್ಮ ಬೆಳೆಗಳು ಒಣಗುತ್ತಿವೆ, ಡ್ಯಾಂಗಳಲ್ಲಿ ನೀರಿಲ್ಲ ಅಂತ ಖ್ಯಾತೆ ತೆಗೆದು ಕೇಂದ್ರ ಸರ್ಕಾರಕ್ಕೆ ಮೊರೆ ಹೋಗಿದ್ದರು. ಇತ್ತ ದೇವೆಗೌಡರು ಅಧಿಕಾರಿಗಳ ಎರಡು ತಂಡವನ್ನು ಮಫ್ತಿಯಲ್ಲಿ ತಮಿಳುನಾಡಿಗೆ ಕಳುಹಿಸಿ ಅಲ್ಲಿನ ಡ್ಯಾಂ ಹಾಗೂ ಬೆಳೆಗಳ ಸ್ಥಿತಿಯ ಬಗ್ಗೆ ವಿಡಿಯೋ ವರದಿ ತರಿಸಿಕೊಂಡರು. ಖುದ್ದು ತಾವೇ ವೈಮಾನಿಕ ಸಮೀಕ್ಷೆಯನ್ನು ನಡೆಸಿ ವಿಡಿಯೋ ಮಾಡಿಕೊಂಡು ಅಂದಿನ ಪ್ರಧಾನಿ ನರಸಿಂಹರಾವ್ ಅವರಿಗೆ ತಮಿಳುನಾಡಿನ ಸುಳ್ಳಿನ ಬಗ್ಗೆ ಸಾಕ್ಷಿ ಸಮೇತ ವಿವರಿಸಿ ತಮಿಳುನಾಡು ಸರ್ಕಾರಕ್ಕೆ ಮುಖಭಂಗ ಮಾಡಿದ್ದರು.

ಇನ್ನು ಬಂಗಾರಪ್ಪನವರು ತೊಡೆ ತಟ್ಟಿ ನಿಂತಿದ್ದರು. ಹಾಗೆ ನಿಲ್ಲಲಿಕ್ಕೆ ಖುರ್ಚಿ ಹೋದರೂ ಪರವಾಗಿಲ್ಲ ಎಂಬ ಗಂಡೆದೆ ಬೇಕಾಗುತ್ತದೆ. ಈಗಿನ ಮುಖ್ಯಮಂತ್ರಿಗಳಿಗೆ ನಿದ್ದೆಗೆ ಸಮಯವೂ ಇಲ್ಲ, ಕುರ್ಚಿಯ ಮೇಲಿನ ಪ್ರೀತಿಯ ಬಗ್ಗೆ ಬಿಡಿಸಿ ಹೇಳಲೂ ಬೇಕಿಲ್ಲ.

– ರಾಕೇಶ್ ಶೆಟ್ಟಿ

ಚಿತ್ರಕೃಪೆ:- m.dailyhunt.in

3 ಟಿಪ್ಪಣಿಗಳು Post a comment
 1. Ckvmurthy
  ಸೆಪ್ಟೆಂ 9 2016

  Hablot watch, Cartier cooling glass , drowsiness, utternegligence, dictatorship, “uadafe ” cast politcs ,all these are moulded in our capiton.There is no body to question him.All leaders have become “buckets” for cheap positions of “nigama “& “mandalis” for the sake of money.They are ready to sell any thing for this.What can we ecpect from them ? Nothing expect caveri like disputes.

  ಉತ್ತರ
 2. Gotham
  ಸೆಪ್ಟೆಂ 13 2016

  ” ದೇವೆಗೌಡರು ಅಧಿಕಾರಿಗಳ ಎರಡು ತಂಡವನ್ನು ಮಫ್ತಿಯಲ್ಲಿ ತಮಿಳುನಾಡಿಗೆ ಕಳುಹಿಸಿ ಅಲ್ಲಿನ ಡ್ಯಾಂ ಹಾಗೂ ಬೆಳೆಗಳ ಸ್ಥಿತಿಯ ಬಗ್ಗೆ ವಿಡಿಯೋ ವರದಿ ತರಿಸಿಕೊಂಡರು. ಖುದ್ದು ತಾವೇ ವೈಮಾನಿಕ ಸಮೀಕ್ಷೆಯನ್ನು ನಡೆಸಿ ವಿಡಿಯೋ ಮಾಡಿಕೊಂಡು ಅಂದಿನ ಪ್ರಧಾನಿ ನರಸಿಂಹರಾವ್ ಅವರಿಗೆ ತಮಿಳುನಾಡಿನ ಸುಳ್ಳಿನ ಬಗ್ಗೆ ಸಾಕ್ಷಿ ಸಮೇತ ವಿವರಿಸಿ ತಮಿಳುನಾಡು ಸರ್ಕಾರಕ್ಕೆ ಮುಖಭಂಗ ಮಾಡಿದ್ದರು.” ಅಂದಿನ ಪ್ರದಾನಮಂತ್ರಿಗಳು ದೇವೇಗೌಡರ ಮನವಿಯನ್ನು ಸ್ವೀಕರಿಸಿದರು. ಆದರೆ ಕಾವೇರಿ ಮತ್ತು ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಇಂದಿನ ಪ್ರದಾನ ಮಂತ್ರಿಗಳಿಗೆ ಏಳು ಪತ್ರಗಳನ್ನು ಬರೆದಿದ್ದು, ಒಂದು ಪತ್ರಕ್ಕೂ ಉತ್ತರ ಬಂದಿಲ್ಲವೆಂದು ಸಿದ್ದರಾಮಯ್ಯನವರು ಹೇಳಿರುವುದು ಪತ್ರಿಕೆಯಲ್ಲಿ ವರದಿಯಾಗಿದೆ. ಇಂದಿನ ಪ್ರಧಾನ ಮಂತ್ರಿಗಳಿಗೆ ಸಮಯವೂ ಇಲ್ಲ, ಕನಾ೯ಟಕ ಮೇಲಿನ ಪ್ರೀತಿಯ ಬಗ್ಗೆ ಬಿಡಿಸಿ ಹೇಳಲೂ ಬೇಕಿಲ್ಲ.

  ಉತ್ತರ
  • ಕಾಮ್ರೇಡ್ ಕನ್ನಯ್ಯ
   ಸೆಪ್ಟೆಂ 15 2016

   ಇವರು ಸಲ್ಮಾನ್ ಖಾನ್.ಅವರು ಭಾಗ್ಯಶ್ರೀ. ಕಬೂತರ್ ಜಾ ಜಾ ಕಬೂತರ್ ಜಾ ಜಾ ಅಂತ ಪತ್ರ ಕಳಿಸಿದರಂತೆ.
   ವಾಟ್ ನಾನ್ಸೆನ್ಸ್! ಪೋನ್ ಮಾಡಿ ಮಾತಾಡಿದ್ರೆ ಮುಖ್ಯಮಂತ್ರಿಗಳ ಮುತ್ತು ಉದುರಿ ಹೋಗುತಿತ್ತೇನು

   ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments