ಪ್ರಾರ್ಥನಾ ಮಂದಿರ ವಶಕ್ಕೆ ಸರ್ಕಾರದ ಚಿಂತನೆ: ಭುಗಿಲೆದ್ದ ಆಕ್ರೋಶ (ಸುಳ್ಸುದ್ದಿ)
– ಪ್ರವೀಣ್ ಕುಮಾರ್, ಮಾವಿನಕಾಡು
ಕಲಾಸಿಪಾಳ್ಯದಲ್ಲಿರುವ ಪ್ರಾರ್ಥನಾ ಮಂದಿರವೊಂದನ್ನು ಸರ್ಕಾರ ವಶಕ್ಕೆ ಪಡೆಯಲು ತೀರ್ಮಾನಿಸಿದೆ. ಈ ಬಗ್ಗೆ ಗುರುವಾರ ನೋಟೀಸ್ ನೀಡಲಾಗಿದ್ದು ನಾಲ್ಕು ದಿನಗಳ ಒಳಗಾಗಿ ಉತ್ತರಿಸುವಂತೆ ಸೂಚಿಸಲಾಗಿದೆ. ಈ ಪ್ರಾರ್ಥನಾ ಮಂದಿರವನ್ನು ಹೇಗಾದರೂ ಮಾಡಿ ವಶಪಡಿಸಿಕೊಳ್ಳಲೇಬೇಕು ಎನ್ನುವ ಹಠವಿದ್ದು ಅದೇ ಕಾರಣಕ್ಕೆ ಕೇವಲ ನಾಲ್ಕೇ ದಿನ ಸಮಯ ನೀಡಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ನೋಟೀಸ್ ನೀಡಿದ್ದಾರೆ ಎಂದು ಸೌಹಾರ್ದಗೇಡು ವೇದಿಕೆ ದೂರಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸದ್ಯದಲ್ಲೇ ನಿವೃತ್ತರಾಗಲಿದ್ದು ಈ ಹಂತದಲ್ಲಿ ಪ್ರಾರ್ಥನಾ ಮಂದಿರವನ್ನು ವಶಕ್ಕೆ ಪಡೆಯುವ ಕುರಿತು ನೋಟೀಸ್ ನೀಡಿರುವುದು ಕರ್ನಾಟಕದ ಹಲವು ಬುದ್ದಿಜೀವಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ನಿವೃತ್ತಿಯ ಹಂತದಲ್ಲಿ ಇಂತಹಾ ಪ್ರಮುಖ ನಿರ್ಧಾರಗಳನ್ನು ಯಾರೂ ತೆಗೆದುಕೊಳ್ಳುವುದಿಲ್ಲ. ಆದರೆ ಒಮ್ಮೆ ಪ್ರಾರ್ಥನಾ ಮಂದಿರವನ್ನು ವಶಕ್ಕೆ ಪಡೆದ ನಂತರ ನಿವೃತ್ತಿಯಾದರೆ ಅದರಿಂದ ಮುಂದೆ ಆಗಬಹುದಾದ ಅಪಾಯಗಳಿಂದ ತಪ್ಪಿಸಿಕೊಳ್ಳುವ ಹುನ್ನಾರ ಇದರಲ್ಲಿದೆ ಎಂದು ಜಾತ್ಯತೀತ ಸಂಘಟನೆಯ ಪ್ರಮುಖರು ತಮ್ಮ ಅನುಮಾನ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಈ ಕ್ರಮ ವಿರೋಧಿಸಿ ಮುಂದಿನ ಶುಕ್ರವಾರದಂದು ಬೃಹತ್ ಉಡುಪಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿಯೂ ಮತ್ತು ಆ ಕಾರ್ಯಕ್ರಮದಲ್ಲಿ ಇಪ್ಪತ್ಮೂರಕ್ಕೂ ಹೆಚ್ಚು ಸಂಘಟನೆಗಳ ಮೂವತ್ಮೂರಕ್ಕೂ ಹೆಚ್ಚು ಸದಸ್ಯರು ಭಾಗವಹಿಸಲಿದ್ದಾರೆ ಎಂದು ಸಂಘಟನೆಯ ಹದಿಮೂರಕ್ಕೂ ಹೆಚ್ಚು ನಾಯಕರು ಬೆಂಗಳೂರಿನಲ್ಲಿ ಶುಕ್ರವಾರ ಬೆಳಿಗ್ಗೆ ನಡೆದ ಸುದ್ದಿಗೋಷ್ಠಿಯಲ್ಲಿ ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.
ಇನ್ನೊಂದೆಡೆ ಅದೇ ದಿನ ಬಿಜಾಪುರದಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಮಾನ್ಯ ಮುಖ್ಯಮಂತ್ರಿಗಳು ಕಾವೇರಿ ಕಣಿವೆ ಪ್ರದೇಶದಲ್ಲಿ ಬರಗಾಲ ತಲೆದೋರಿರುವ ಹಿನ್ನೆಲೆಯಲ್ಲಿ ಈ ಬಾರಿಯ ಟಿಪ್ಪು ಜಯಂತಿಯನ್ನು ಆಚರಿಸದಿರಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ಅನ್ಯ ಕೋಮಿನವರ ಧಾರ್ಮಿಕ ಪ್ರವಾಸಕ್ಕಾಗಿ ನೀಡಲಾಗುತ್ತಿದ್ದ ಸಬ್ಸಿಡಿ ಹಣವನ್ನು ಕಡಿತಗೊಳಿಸಿ ಆ ಹಣವನ್ನು ನಮ್ಮ ರಾಜ್ಯದ ರೈತರ ಬೆಳೆ ನಷ್ಟ ಪರಿಹಾರಕ್ಕೆ ಬಳಸಿಕೊಳ್ಳಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ. ಮುಖ್ಯಮಂತ್ರಿಗಳ ಈ ಅಭಿಪ್ರಾಯಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ, ಇತ್ತ ಬೆಂಗಳೂರಿನಲ್ಲಿ ಪ್ರಾರ್ಥನೆ ಮುಗಿಸಿ ಹೊರ ಬರುತ್ತಿದ್ದ ಯುವಕರ ಗುಂಪುಗಳು ಮನೆ, ವಾಹನ ಹಾಗೂ ವಾಣಿಜ್ಯ ಮಳಿಗೆಗಳ ಮೇಲೆ ಕಲ್ಲು ತೂರಾಟ ನಡೆಸಿದವು. ಸ್ಥಳಕ್ಕೆ ಮಾನ್ಯ ಗೃಹ ಸಚಿವರೇ ಖುದ್ದು ಧಾವಿಸಿದ್ದು ಸಮುದಾಯದ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದಾರೆ. ಕಲ್ಲು ತೂರುತ್ತಿದ್ದ ಉದ್ರಿಕ್ತ ಯುವಕರನ್ನು ಲಾಠಿಯಿಂದ ಹೊಡೆದ ಎಸ್ ಐ ಮತ್ತು ಮೂರು ಜನ ಮುಖ್ಯ ಪೇದೆಗಳನ್ನು ಸ್ಥಳದಲ್ಲೇ ಅಮಾನತುಪಡಿಸಿದ ಮಾನ್ಯ ಗೃಹ ಸಚಿವರು ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯುವುದಾಗಿ ಸಮುದಾಯದ ಮುಖಂಡರಿಗೆ ಭರವಸೆ ನೀಡಿದ್ದಾರೆ. ಇದೇ ವೇಳೆ ಸಮುದಾಯದ ಜನರ ಮನಸ್ಸಿನಲ್ಲಿ ಗೊಂದಲ ಉಂಟುಮಾಡಿದ್ದಕ್ಕಾಗಿ ತಾವು ಸರ್ಕಾರದ ಪರವಾಗಿ ಬೇಷರತ್ ಕ್ಷಮೆ ಯಾಚಿಸುವುದಾಗಿ ತಿಳಿಸಿದ್ದಾರೆ.
ಇದೇ ವೇಳೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಗುರುವಾರ ಸಂಜೆಯಿಂದಲೇ ಹಲವು ಬೆದರಿಕೆ ಕರೆಗಳು ಬರುತ್ತಿದ್ದು ಅವರ ಮನೆಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಸರ್ಕಾರ ತನ್ನ ತೀರ್ಮಾನದಿಂದ ಹಿಂದೆ ಸರಿಯದೇ ಇದ್ದರೆ ಸರ್ಕಾರೀ ಕಟ್ಟಡಗಳನ್ನು ಉಡಾಯಿಸಲಾಗುವುದು ಎಂದು ಬರೆಯಲಾದ ಪೋಸ್ಟರ್ ಗಳನ್ನು ಶಾಂತಿಪ್ರಿಯ ಸಮಾಜದ ಕೆಲವು ಯುವಕರು ಇನ್ನೊಬ್ಬ ಹಿರಿಯ ಸಚಿವರ ಮನೆಯ ಮುಂದೆ ಎಸೆದು ಹೋಗಿದ್ದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಮಾತನಾಡಿದ ಸಚಿವರು ಕೇವಲ ಹಿಂದೂ ದೇವಾಲಯ/ಮಠ ಗಳನ್ನು ಮಾತ್ರ ವಶಕ್ಕೆ ಪಡೆಯುವ ಹಕ್ಕು ಸರ್ಕಾರಕ್ಕಿದೆ. ಅನ್ಯ ಧರ್ಮದ ಪ್ರಾರ್ಥನಾ ಮಂದಿರಗಳನ್ನು ಸರ್ಕಾರ ವಶಪಡಿಸಿಕೊಳ್ಳುವುದು ಸರಿಯಲ್ಲ. ಇದು ಸಂವಿಧಾನಕ್ಕೆ ವಿರುದ್ಧವಾಗಿದ್ದು ಈ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲಾಗುವುದು. ಹಾಗೆಯೇ ಸರ್ಕಾರದ ಈ ನಿರ್ಧಾರವನ್ನು ಪುನಃ ಪರಿಶೀಲಿಸಿ ವಶಪಡಿಸಿಕೊಳ್ಳುವ ನಿರ್ಧಾರವನ್ನು ಕೈ ಬಿಡಲಾಗುವುದು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಈ ನಡುವೆ ಮಾನ್ಯ ಮುಖ್ಯಮಂತ್ರಿಗಳಿಗೆ ದೆಹಲಿಗೆ ಬರುವಂತೆ ಹೈ ಕಮಾಂಡ್ ಬುಲಾವ್ ನೀಡಿದೆ. ಜೊತೆಗೆ ಮುಖ್ಯಮಂತ್ರಿಗಳಿಗೆ ಎಚ್ಚರಿಕೆ ಸಂದೇಶವೊಂದನ್ನು ಕಳುಹಿಸಿದ್ದು, ನಮ್ಮ ಪಕ್ಷದ ಸರ್ಕಾರವಿರುವುದು ಹಿಂದೂ ದೇವಾಲಯಗಳ ದುಡ್ಡು ಹೊಡೆಯುವುದಕ್ಕೇ ಹೊರತೂ ಅನ್ಯ ಕೋಮಿನ ಪ್ರಾರ್ಥನಾ ಮಂದಿರಗಳನ್ನು ವಶಪಡಿಸಿಕೊಳ್ಳುವುದಕ್ಕಲ್ಲ. ಇದು ನಮ್ಮ ಪಕ್ಷದ ತತ್ವ-ಸಿದ್ಧಾಂತಕ್ಕೆ ಸಂಪೂರ್ಣ ವಿರುದ್ಧವಾದದ್ದು. ಇಷ್ಟು ಕನಿಷ್ಠ ತಿಳುವಳಿಕೆ ಇಲ್ಲದಿದ್ದರೆ ಖುರ್ಚಿ ಬಿಟ್ಟು ಹೊರಡಿ ಎಂದು ಖಡಕ್ ಸಂದೇಶ ರವಾನಿಸಿದೆ.
ಈಗಾಗಲೇ ಡ್ಯಾಮೇಜ್ ಕಂಟ್ರೋಲ್ ಪ್ರಾರಂಭಿಸಿರುವ ಮುಖ್ಯಮಂತ್ರಿಗಳು ದೆಹಲಿಯ ಮಾರ್ಗ ಮದ್ಯೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ನಾನೊಬ್ಬ ಪ್ರಾಮಾಣಿಕ ಅಹಿಂದ ಮುಖ್ಯಮಂತ್ರಿಯಾಗಿದ್ದು, ಪ್ರಾಣ ಕೊಟ್ಟಾದರೂ ನಮ್ಮ ಸರ್ಕಾರ ಅನ್ಯ ಕೋಮಿನ ಹಿತ ಕಾಯುತ್ತದೆ. ಈ ಗೊಂದಲಗಳಿಗೆಲ್ಲಾ ಮೇಲ್ಜಾತಿಯ ಒಬ್ಬ ಅಧಿಕಾರಿಯೇ ಕಾರಣವಾಗಿದ್ದು ಆತನನ್ನು ಈ ಕೂಡಲೇ ಅಮಾನತು ಗೊಳಿಸುವುದಾಗಿ ತಿಳಿಸಿದರು. ಅದೇ ರೀತಿ ಅನ್ಯ ಕೋಮಿನ ಜೊತೆ ನಾವಿದ್ದೇವೆ, ನಮ್ಮಿಂದಾಗಿರುವ ಅಚಾತುರ್ಯಕ್ಕಾಗಿ ಅನ್ಯ ಕೋಮಿನವರ ಕಾಲಿಗೆ ಬಿದ್ದು ಬೇಷರತ್ ಕ್ಷಮೆ ಕೋರುವುದಾಗಿಯೂ ಅವರು ತಿಳಿಸಿದರು. ಗಲಭೆಯಲ್ಲಿ ಪಾಲ್ಗೊಂಡು ಆಸ್ತಿ ಪಾಸ್ತಿ ಹಾನಿ ಮಾಡಿದ ಯುವಕರಿಗೆ ಸರ್ಕಾರದಿಂದ ತಲಾ ಹತ್ತು ಲಕ್ಷ ಪರಿಹಾರ ಕೊಡುವುದರ ಜೊತೆಗೆ ಅವರ ಮೇಲಿನ ಎಲ್ಲಾ ಕೇಸುಗಳನ್ನೂ ಹಿಂತೆಗೆದುಕೊಳ್ಳುವಂತೆ ದೂರವಾಣಿಯ ಮೂಲಕ ಮಾನ್ಯ ಗೃಹ ಸಚಿವರಿಗೆ ಇದೇ ಸಂದರ್ಭದಲ್ಲಿ ಅವರು ಸೂಚಿಸಿದರು.
*ವಿ.ಸೂ: ಈ ಸುದ್ದಿಯು ಕೇವಲ ಸುಳ್ಸುದ್ದಿ ಹಾಗೂ ಕಾಲ್ಪನಿಕವಾಗಿದ್ದು ಇತ್ತೀಚಿಗೆ ಸರ್ಕಾರ ಹಿಂದೂ ಮಠ ಮಂದಿರಗಳನ್ನು ವಶಪಡಿಸಿಕೊಳ್ಳುವ ಪ್ರಯತ್ನ ನಡೆಸಿದ್ದು, ಅದೇ ರೀತಿ ಇತರ ಧರ್ಮೀಯರ ಪ್ರಾರ್ಥನಾ ಮಂದಿರಗಳನ್ನು ಸರ್ಕಾರ ವಶಪಡಿಸಿಕೊಳ್ಳಲು ಪ್ರಯತ್ನಿಸಿದರೆ ಏನೇನು ನಡೆಯಬಹುದು ಎನ್ನುವುದನ್ನು ಕಲ್ಪಿಸಿಕೊಂಡು ಬರೆದಿದ್ದಾಗಿರುತ್ತದೆ. ಈ ಸುದ್ದಿಯು ಕೇವಲ ಮನರಂಜನೆಗಾಗಿ ಮಾತ್ರ.
ನಾಗಸೆಟ್ಟಿಯು ಬಿಟ್ಟಿ ಸಲಹೆ ಕೊಡತಕ್ಕದ್ದು
ಸಲಾಂ ಬಾವಾನು ಹೊಲಿದ ತುಟಿಗಳನ್ನು ಬಿಚ್ಚಿ ಬಡಬಡಿಸತಕ್ಕದ್ದು.