ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 24, 2016

26

ಪ್ರೊ.ಪ್ರೇಮಶೇಖರ್ ಮೇಲೆ ಎಡಪಂಥೀಯರ Intolerance!

‍ನಿಲುಮೆ ಮೂಲಕ
– ರಾಜೇಶ್ ನರಿಂಗಾನ
14714991_1280214385356966_1251239982088350838_o
%e0%b2%8b
ಕಳೆದ ಅಕ್ಟೋಬರ್ 21ರಂದು ಮಂಗಳೂರು ವಿ.ವಿ.ಯ ಮಂಗಳಾ ಸಭಾಂಗಣದಲ್ಲಿ ನಡೆದ ವಿದ್ಯಾರ್ಥಿ ಸಂಘದ ಉದ್ಘಾಟನೆಗೆ ಅಂತರರಾಷ್ಟ್ರೀಯ ವಿದ್ಯಮಾನಗಳ ವಿಶ್ಲೇಷಕ, ಖ್ಯಾತ ಅಂಕಣಕಾರರಾದ ಪ್ರೊ.ಪ್ರೇಮಶೇಖರ ಅವರನ್ನು ವಿದ್ಯಾರ್ಥಿ ಸಂಘ ಆಹ್ವಾನಿಸಿತ್ತು. ಅಲ್ಲಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಯಾಗಿರುವ ಉದಯ್ ಬಾರ್ಕೂರ್ ಅವರು ಇದನ್ನು ವಿರೋಧಿಸಿದ್ದರು. ಆದರೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಪಟ್ಟು ಹಿಡಿದ ಕಾರಣ, ಪ್ರೊ.ಪ್ರೇಮಶೇಖರ ಅವರನ್ನು ಉದ್ಘಾಟಕರಾಗಿ ಕರೆಯಲು ಒಲ್ಲದ ಮನಸ್ಸಿನಿಂದ ಒಪ್ಪಿಗೆ ನೀಡಿದರು. ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಪ್ರೊ.ಪ್ರೇಮಶೇಖರ ಅವರನ್ನು ಉದ್ಘಾಟನೆಗೆ ಆಹ್ವಾನಿಸಿದಾಗ ಅವರು ಬಹಳ ಖುಷಿಯಿಂದಲೇ ಬರುತ್ತೇನೆ ಎಂದು ಹೇಳಿದರು. ಅಂತೂ ಕಾರ್ಯಕ್ರಮದ ದಿನ ಬಂದೇ ಬಿಟ್ಟಿತು.

ಪ್ರತೀ ವರ್ಷ ವಿದ್ಯಾರ್ಥಿ ಸಂಘದ ಉದ್ಘಾಟನೆಗೆ ಬರುವ ಅತಿಥಿಗಳನ್ನು ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಯೇ ಸ್ವಾಗತಿಸುವುದು ವಾಡಿಕೆ. ಆದರೆ ಈ ಬಾರಿ ಹಾಗಾಗಲಿಲ್ಲ. ಉದ್ಘಾಟನೆಗೆ ಆಗಮಿಸಿದ ಪ್ರೊ.ಪ್ರೇಮಶೇಖರ ಅವರನ್ನು ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಯವರು ಸೌಜನ್ಯಕ್ಕಾದರೂ ಭೇಟಿ ಮಾಡಲಿಲ್ಲ. ಉದ್ಘಾಟನೆಗೆ ವೇದಿಕೆ ಮೇಲೆ  ಹತ್ತುವಾಗಲೂ ಕುಲಪತಿಗಳು ಮತ್ತು ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಯವರು ಉದ್ಘಾಟಕರನ್ನು ಕರೆಯಲಿಲ್ಲ. ಆದರೂ ಉದ್ಘಾಟಕರು ಕಿಂಚಿತ್ತೂ ಬೇಸರಿಸದೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳೊಂದಿಗೆ ನಗುಮೊಗದಿಂದಲೇ ವೇದಿಕೆ ಹತ್ತಿದ್ದರು.

ಅದಾದನಂತರ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಮಾತಿಗಿಳಿದರು. ಆಗ ಪ್ರೇಮಶೇಖರ ಅವರು ಹಿಂದೊಮ್ಮೆ ವಿ.ವಿ.ಯ ಪ್ರೊಫೆಸರ್ ಹುದ್ದೆಗೆ ಸಂದರ್ಶನಕ್ಕೆ ಬಂದಿದ್ದರು. ಅದೇ ಹುದ್ದೆಗೆ ನಾನು ಸೆಲೆಕ್ಟ್ ಆದೆ. ಅವರು ಸೆಲೆಕ್ಟ್ ಆಗಲಿಲ್ಲ ಎಂದು ಹೇಳುವ ಮೂಲಕ ತನ್ನ ಅಸಹನೆಯನ್ನು ಹೊರಹಾಕಿದರು. ಅಷ್ಟು ಮಾತ್ರವಲ್ಲದೆ ವಿದ್ಯಾರ್ಥಿಗಳನ್ನು ಕುರಿತು ನಿಮ್ಮನ್ನು ದಾರಿ ತಪ್ಪಿಸುವ ವ್ಯವಸ್ಥಿತ ಷಡ್ಯಂತ್ರವನ್ನು ಕೆಲವು ವಿದ್ಯಾರ್ಥಿಗಳು ಮಾಡುತ್ತಿದ್ದಾರೆ. ಆ ಷಡ್ಯಂತ್ರಕ್ಕೆ ನೀವು ಬಲಿಯಾಗಬೇಡಿ ಎಂದು ಹೇಳುವ ಮೂಲಕ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಮೇಲೆ ಪರೋಕ್ಷವಾಗಿ ವಾಗ್ಧಾಳಿಯ‌ನ್ನೂ ನಡೆಸಿದ್ದರು.

ತದನಂತರ‌ ಪ್ರೊ.ಪ್ರೇಮಶೇಖರ ಅವರು ಉದ್ಘಾಟನಾ ಭಾಷಣ ಮಾಡುತ್ತಾ, ಯುವ ಜನತೆ ಹೇಗಿರಬೇಕು? ಎಂಬ ವಿಚಾರವನ್ನು ಮಾತಾಡುತ್ತಿದ್ದರು.  ಆ ಸಮಯದಲ್ಲಿ ಬ್ಲೂಫಿಲಂ ನೋಡುವುದು ತಪ್ಪಲ್ಲ ಎಂದು ಹೇಳಿದ್ದು ನಿಜ. ಅದು ಯಾವ ದೃಷ್ಟಿಕೋನದಿಂದ ಹೇಳಿದ್ದರು ಎಂಬುದನ್ನು ನಾವು ಗಮನಿಸಬೇಕು. “ನೀವು ಚಿಕ್ಕವರಿದ್ದಾಗ ಚಿನ್ನಿದಾಂಡು ಆಡುತ್ತಿರುವುದನ್ನು 25ನೇ ವಯಸ್ಸಿನಲ್ಲೂ ಆಡುತ್ತಿದ್ದರೆ ನೀವು ಬೆಳೆದಿಲ್ಲ ಎಂದರ್ಥ. ಅದೇ ರೀತಿ ನೀವು ಹದಿನೆಂಟನೆಯ ವಯಸ್ಸಿನಲ್ಲಿ ಬ್ಲೂಫಿಲಂ ನೋಡುವುದನ್ನು ಇಪ್ಪತ್ತಾರನೇ ವಯಸ್ಸಿನಲ್ಲೂ ಮುಂದುವರಿಸಿದರೆ ಸಮಸ್ಯೆಯಾಗಬಹುದು” ಎಂದು ಹೇಳಿದ್ದರು. ಮನುಷ್ಯ ತನ್ನ ಅನುಭವದ ಮೂಲಕ ಬೆಳೆಯುತ್ತಾ ಹೋಗಬೇಕೇ ಹೊರತು, ನಿಂತ ನೀರಾಗಬಾರದು ಎಂಬುದು ಅವರ ನಿಲುವಾಗಿತ್ತು. ಅದಾದನಂತರ ಕಾಶ್ಮೀರದ ಸಮಸ್ಯೆಯ ಕುರಿತು ಚುಟುಕಾಗಿ ವಿಶ್ಲೇಷಣೆಯನ್ನು ಮಾಡಿದರು. ಪಾಕಿಸ್ತಾನದ ಈಗಿನ ಪರಿಸ್ಥಿತಿಯನ್ನು ಅವಲೋಕನ ಮಾಡಿದ್ದರು. ನಮ್ಮ ಪ್ರಧಾನಮಂತ್ರಿಗಳ ಕಾರ್ಯವೈಖರಿ ಹೇಗಿದೆ ಎಂಬ ವಿಚಾರದ ಬಗ್ಗೆಯೂ ಮಾಹಿತಿಯನ್ನು ಹಂಚಿದ್ದರು. ಇಷ್ಟೆಲ್ಲ ವಿಚಾರಗಳನ್ನು ವಿದ್ಯಾರ್ಥಿಗಳ ಮುಂದೆ ಮಂಡಿಸಿದ ನಂತರ, ವಿ.ಸಿ.ಯವರು ಮಾತನಾಡಿ, ಕಾರ್ಯಕ್ರಮ ಮುಗಿಯಿತು. ಕಾರ್ಯಕ್ರಮ ಮುಗಿದ ನಂತರ, ಬಂದ ಅತಿಥಿಗಳನ್ನು ಅತಿಥಿಗೃಹಕ್ಕೆ, ವಿ.ಸಿ. ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳು ಕರೆದುಕೊಂಡು ಹೋಗಿ ಸತ್ಕರಿಸುವುದು ವಿ.ವಿ.ಯ ನಿಯಮ. ಆದರೆ ಪ್ರೇಮಶೇಖರ ಅವರನ್ನು ವೇದಿಕೆಯಲ್ಲೇ ಬಿಟ್ಟು, ಅವರಿಬ್ಬರೂ ಸರಸರನೆ ಹೊರನಡೆದರು. ಕೊನೆಗೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳೇ ಪ್ರೇಮಶೇಖರ ಅವರನ್ನು ಅತಿಥಿಗೃಹಕ್ಕೆ ಕರೆದುಕೊಂಡು ಹೋಗಿ ಸತ್ಕರಿಸಿದರು. ಇವೆಲ್ಲವನ್ನೂ ತಮ್ಮ ಎಂದಿನ ಶಾಂತರೂಪದ ನಗುಮೊಗದಿಂದಲೇ ಸಹಿಸಿಕೊಂಡಿದ್ದರು ಪ್ರೇಮಶೇಖರ್.
ಆ ಭಾಷಣದಲ್ಲಿ ಅವರು ಬ್ಲೂಫಿಲಂ ಕುರಿತು ಆಡಿದ ಮಾತುಗಳನ್ನೇ ಹಿಡಿದುಕೊಂಡು ಚಾರಿತ್ರ್ಯವಧೆಗೆ ವ್ಯವಸ್ಥಿತ ಷಡ್ಯಂತ್ರ ರೂಪಿಸಲಾಯಿತು. ಅದಕ್ಕೆ ಸಾಥ್ ಕೊಟ್ಟಿದ್ದು ಪಬ್ಲಿಕ್ ಟಿವಿಯ ಸುಬಗ ವರದಿಗಾರ ಸುಖಪಾಲ್ ಪೊಳಲಿ. ಆತ ಅತಿಥಿಗಳು ಆಡುವ ಮಾತುಗಳಲ್ಲಿ ಅರ್ಧ ತೆಗೆದು ಅದನ್ನೇ ವಿವಾದಾತ್ಮಕ ವಿಷಯವನ್ನಾಗಿ ಪರಿವರ್ತಿಸಿ ತನ್ನ ಚಾನೆಲ್’ನ ಟಿ.ಆರ್.ಪಿ. ಹೆಚ್ಚಿಸುವ ವಿಷಯದಲ್ಲಿ ನಿಸ್ಸೀಮ. ಇಲ್ಲೂ ಅದನ್ನೇ ಮುಂದುವರಿಸಿದ. ಅದಕ್ಕೆ ಪಬ್ಲಿಕ್ ಟಿವಿಯ ಆಲ್ ರೈಟ್ ರಂಗಣ್ಣ ಸಾಥ್ ಕೊಟ್ಟರು. ಪ್ರೊ.ಪ್ರೇಮಶೇಖರ ಅವರನ್ನು ಪೋಲಿ ಪ್ರೊಫೆಸರ್ ಎಂದು ಕರೆದರು; ಅವರು ಯಾವ ಯೂನಿವರ್ಸಿಟಿಯಲ್ಲಿ ಉಪನ್ಯಾಸಕರಾಗಿದ್ದರು ಎಂಬ ಅರಿವಿಲ್ಲದೆ ಮಂಗಳೂರು ವಿ.ವಿ.ಯ ಇತಿಹಾಸ ಉಪನ್ಯಾಸಕ ಎಂದು ಹೇಳುವ ಮೂಲಕ ನಗೆಪಾಟಲಿಗೆ ಒಳಗಾದರು. ಈ ರೀತಿಯಾಗಿ ವಿ.ವಿ.ಯ ಕೆಲವು ಎಡಪಂಥೀಯ ಉಪನ್ಯಾಸಕರು ಹೆಣೆದ ವ್ಯವಸ್ಥಿತ ಷಡ್ಯಂತ್ರಕ್ಕೆ ಪಬ್ಲಿಕ್ ಟಿವಿ ಸಾಥ್ ಕೊಟ್ಟು ಪ್ರೊ. ಪ್ರೇಮಶೇಖರ ಅವರ ಚಾರಿತ್ರ್ಯ ವಧೆ ಮಾಡಿತು.
ಪ್ರೊ.ಪ್ರೇಮಶೇಖರ ಅವರನ್ನು ಟಾರ್ಗೆಟ್ ಮಾಡಲು ಕಾರಣಗಳೇನು?
ಪ್ರೇಮಶೇಖರ ಅವರು ಬರೆಯುತ್ತಿರುವ ಪ್ರತಿ ಅಂಕಣಗಳಲ್ಲಿ ಎಡಪಂಥೀಯ ಸಿದ್ದಾಂತವನ್ನು ಖಂಡ ತುಂಡವಾಗಿ ಖಂಡಿಸುತ್ತಿದ್ದಾರೆ. ಪೊಳ್ಳು ಕಮ್ಯುನಿಸ್ಟ್ ಸಿದ್ಧಾಂತದ ಹುಳುಕುಗಳನ್ನು ಜನರ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟು ಯುವಜನತೆಯನ್ನು ಎಡಪಂಥೀಯ ಸಿದ್ಧಾಂತದ ದೂರವಿಡುವ ಪ್ರಯತ್ನದಲ್ಲಿ ಯಶಸ್ವಿಯಾದರು. ಇದು ಪ್ರಸಕ್ತ ಕಾಲಘಟ್ಟದಲ್ಲಿ ಅಳಿದು ಹೋಗುತ್ತಿರುವ ಎಡಪಂಥೀಯ ಚಿಂತನೆಗೆ ಮತ್ತು ಚಿಂತಕರಿಗೆ ನುಂಗಲಾರದ ತುತ್ತಾಯಿತು.
ಇನ್ನು ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳು ಪಕ್ಕಾ ಎಡಪಂಥೀಯ ಚಿಂತಕರು. ಅವರಿಗೆ ರಾಷ್ಟ್ರೀಯ ವಿಚಾರಗಳ ಪ್ರತಿಪಾದಕರನ್ನು ಕಂಡರೆ ಆಗಲ್ಲ. ಅವರ ವಿದ್ಯಾರ್ಥಿಗಳೇನಾದರೂ ರಾಷ್ಟ್ರೀಯ ವಿಚಾರಗಳನ್ನು ಪ್ರತಿಪಾದಿಸಿದರೆ ಆ ವಿದ್ಯಾರ್ಥಿಗಳ ಭವಿಷ್ಯವೇ ಮುಗಿದು ಹೋಯಿತು; ಅವರನ್ನು ವ್ಯವಸ್ಥಿತವಾಗಿ ಟಾರ್ಗೆಟ್ ಮಾಡಿ ಇಲ್ಲದ ಹಿಂಸೆ ನೀಡುತ್ತಿದ್ದ ಉದಾಹರಣೆಗಳು ಸಾಕಷ್ಟಿವೆ. ಈ ರೀತಿಯ ಅಸಹನೆ ಹೊಂದಿರುವ ಉಪನ್ಯಾಸಕರು ಪ್ರೊ.ಪ್ರೇಮಶೇಖರ ಅವರಂಥ ಖಟ್ಟರ್ ರಾಷ್ಟ್ರೀಯ ವಿಚಾರಗಳ ಪ್ರತಿಪಾದಕರನ್ನು ಸಹಿಸುತ್ತಾರೆಯೇ.? ಯಾವುದಾದರೂ ವಿಷಯವನ್ನು ಹಿಡಿದುಕೊಂಡು ಅವರ ಚಾರಿತ್ರ್ಯ ವಧೆ ಮಾಡಬೇಕು ಎಂದು ಹವಣಿಸುತ್ತಿದ್ದರು. ಆಗ ಸಿಕ್ಕಿದ್ದೇ ಬ್ಲೂಫಿಲಂ ವಿಷಯ.
ಇನ್ನು ಎಡಪಂಥೀಯರ ಸಿದ್ಧಾಂತಕ್ಕೆ ಜ್ಞಾನಮಾರ್ಗದಿಂದಲೇ ಕೊಡಲಿ ಏಟು *ನಿಲುಮೆ* ಬಳಗದ ಜೊತೆ ಗುರುತಿಸಿಕೊಂಡ ಪ್ರೊ. ಪ್ರೇಮಶೇಖರ ಅವರು ನಿಲುಮೆ ವಿಚಾರಸಂಕಿರಣದಲ್ಲಿ ಸಕ್ರಿಯವಾಗಿ ಭಾಗವಹಿಸಿ ವಿಚಾರಗಳನ್ನು ಮಂಡಿಸುತ್ತಿದ್ದಾರೆ. ಇದೂ ಈ ಎಡಪಂಥೀಯ ಚಿಂತಕರ ಕೆಂಪು ಕಣ್ಣಿಗೆ ಗುರಿಯಾಯಿತು. ಕಳೆದ ವರ್ಷ ನಿಲುಮೆ ಗುಂಪನ್ನು ಮುಚ್ಚಿಸಲು ಹೋಗಿ ನಾಡಿನ ಪ್ರಜ್ಞಾವಂತ ಜನರಿಂದ ಛೀಮಾರಿಗೊಳಗಾದ ಪಕ್ಕಾ ಎಡಪಂಥೀಯ ಚಿಂತಕ, ಮುಖ್ಯಮಂತ್ರಿ ಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಹಿಂದೊಮ್ಮೆ ಪ್ರೊ.ಪ್ರೇಮಶೇಖರ ಅವರನ್ನು ಫೇಸ್ಬುಕ್ಕಿನಲ್ಲಿ ತುಚ್ಛ ಪದಗಳಿಂದ ನಿಂದಿಸಿದ್ದರು.
ಒಟ್ಟಿನಲ್ಲಿ ಎಡಪಂಥೀಯ ಚಿಂತನೆಯನ್ನು ವಿರೋಧಿಸುವವರನ್ನು ಅವರೆಂದೂ ಸಹಿಸುವುದಿಲ್ಲ‌. ಕೇರಳದಲ್ಲಿ ಅಂಥವರನ್ನು ಟಾರ್ಗೆಟ್ ಮಾಡಿ ಅವರ ಜೀವವನ್ನೇ ತೆಗೆಯುತ್ತಾರೆ. ಕರ್ನಾಟಕದಲ್ಲಿ ಇನ್ನೂ ಅಷ್ಟಾಗಿ ಬೆಳೆಯದ ಅವರುಗಳು ಈಗ ಚಾರಿತ್ರ್ಯ ವಧೆಯ ತನಕ ಮಾತ್ರ ಇಳಿದಿದ್ದಾರೆ. ಅದಕ್ಕೆ ಪಬ್ಲಿಕ್ ಟಿ.ವಿ.ಯಂಥ ಟಿ.ಆರ್.ಪಿ.ಗೋಸ್ಕರ ಇರುವ ಸುದ್ದಿ ಮಾಧ್ಯಮಗಳು ಕೂಡ ಸಾಥ್ ಕೊಟ್ಟಿವೆ‌. ನಾಡಿ‌ನ ಪ್ರಜ್ಞಾವಂತ ನಾಗರಿಕರು ಈ ಎರಡೂ ಜನರನ್ನೂ ಕಡೆಗಣಿಸಬೇಕು. ಇವರ ಸತ್ತು ಹೋದ ಸಿದ್ಧಾಂತವನ್ನು ತಿಪ್ಪೆಗೆಸೆಯಬೇಕು. ಇಲ್ಲವಾದಲ್ಲಿ ಕೇರಳದ ಪರಿಸ್ಥಿತಿ ಕರ್ನಾಟಕಕ್ಕೂ ಬರಬಹುದು.
Read more from ಲೇಖನಗಳು
26 ಟಿಪ್ಪಣಿಗಳು Post a comment
 1. Ganapathi. M.M
  ಆಕ್ಟೋ 25 2016

  ಮಾನ್ಯರೇ ಒಬ್ಬರನ್ನು ಅಥವಾ ಒಂದು ಗುಂಪನ್ನು ಖಂಡಿಸುವ ಭರದಲ್ಲಿ ಇನ್ನೊಂದು ಗುಂಪು, ವ್ಯಕ್ತಿಗಳಿಗೆ ಅವಮಾನವಾಗುವ ತಲೆಬರಹ ಕೊಡುವುದನ್ನು ನಿಲ್ಲಿಸಿ. ಪ್ರಸ್ತುತ ಈ ಬರಹಕ್ಕೆ ಎಡಚರು ಎನ್ನುವುದನ್ನು ತಲೆ ಬರಹದಲ್ಲಿ ಕೊಟ್ಟಿದ್ದೀರಿ. ನನ್ನಂತಹ ಹಲವರಿಗೆ ಎಡಗೈ ಪ್ರಮುಖ, ಬಲಗೈ ಅಲ್ಲ. ನಮಗೆ ಎಡಚರು, ರೊಡ್ಡರೂ ಅಂತ ಗುರುತಿಸುತ್ತಾರೆ. ಹಾಗಾಗಿ ವಾಮ ಪಂಥೀಯರು ಅಥವಾ ನೇರವಾಗಿ ಕಮ್ಯೂನಿಷ್ಟರು ಎಂದು ಬರೆದು ನಿಮ್ಮ ವಿಷಯವನ್ನು ಬರೆಯಿರಿ.
  ಗಣಪತಿ. ಎಂ.ಎಂ

  ಉತ್ತರ
  • sudarshana gururajarao
   ಆಕ್ಟೋ 26 2016

   ಸಂದರ್ಭಾನುಸಾರ ಪದಗಳ ಅರ್ಥ ಮಾಡಿಕೊಳ್ಳಬೇಕಾಗಿ ವಿನಂತಿ. ನನ್ನ ಮಗನೂ ಎಡಗೈ ಬಳಸುವವನೇ.leftist ಅನ್ನುವುದು ಹಾಸುಹೊಕ್ಕಾಗಿ ‌ಬಳಸುವ ಪದ.

   ಉತ್ತರ
  • ನಿಲುಮೆ
   ಆಕ್ಟೋ 26 2016

   ಬದಲಾಯಿಸಿದ್ದೇವೆ. ಧನ್ಯವಾದಗಳು.

   ಉತ್ತರ
   • ಶೆಟ್ಟಿನಾಗ ಶೇ.
    ಆಕ್ಟೋ 26 2016

    intolerance ಅನ್ನು ‘ಸೈದ್ಧಾಂತಿಕ ಭಿನ್ನಮತ’ ಅಂತ ಬದಲಾಯಿಸುವುದು ಸೂಕ್ತ ಶೆಟ್ಟರೆ.

    ಉತ್ತರ
 2. Prakash Marpady
  ಆಕ್ಟೋ 25 2016

  ವಿಶ್ವವಿದ್ಯಾಲಯವನ್ನು ದೂರದಿಂದ ನೋಡಿ, ಊಹಿಸಿ ಬರೆದ ಲೇಖನದಂತಿದೆ, ಬಹುಷ: ವಸ್ತು ಸ್ಥಿತಿಯನ್ನು ವಿವರಿಸುವ ಬದಲು ಎಡಪಂಥೀಯರನ್ನು ವಿರೋಧಿಸುವ ಬಯಕೆ ಅನಿಸುತ್ತೆ. ಕಾಲೇಜು, ವಿಶ್ವವಿದ್ಯಾಲಯ ಅಂದ ಮೇಲೆ ಎಲ್ಲ ಸಿದ್ಧಾಂತ, ವಿಚಾರಧಾರೆಯ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳಿರುತ್ತಾರೆ. ಎಡಪಂಥೀಯ ಉಪನ್ಯಾಸಕರಿಗೆ ರಾಷ್ಟ್ರೀಯ ವಿಚಾರಧಾರೆಯ ವಿದ್ಯಾರ್ಥಿಗಳನ್ನು ಕಂಡರೆ ಆಗುವುದಿಲ್ಲವೆಂಬ ಮಾತು ಸುಳ್ಳು. ಯಾಕಂದ್ರೆ, ಎಡಪಂಥೀಯ ಘಟಾನುಘಟ ಉಪನ್ಯಾಸಕರಿದ್ದ ವಿಭಾಗದಲ್ಲಿ ಮಹಾನ್ ರಾಷ್ಟ್ರೀಯ ಚಿಂತನೆಯುಳ್ಳ ವಿದ್ಯಾರ್ಥಿಗಳು ಆಗಿಹೋಗಿದ್ದಾರೆ. ಅವರೆಂದಿಗೂ ಇಂದಿನ ಸುಳ್ಳು ಎಡ-ಬಲ/ರಾಷ್ಟ್ರೀಯ ಚಿಂತನೆಯನ್ನು ಒಪ್ಪಿಕೊಂಡವರಲ್ಲ. ಎಡಪಂಥೀಯ ಉಪನ್ಯಾಸಕರಿದ್ದಲ್ಲಿ ಬಲಪಂಥೀಯ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆಯೆಂದಾದರೆ, ಬಲಪಂಥೀಯ ಉಪನ್ಯಾಸಕರಿದ್ದ ವಿಭಾಗದಲ್ಲಿ ಎಡಪಂಥೀಯ ವಿದ್ಯಾರ್ಥಿಗಳಿಗೂ ಅನ್ಯಾಯವಾಗದೇ ಇರ್ರುತ್ತದೆಯೆ?

  ಉತ್ತರ
  • ravikumar
   ನವೆಂ 4 2016

   nadeda sathya ghataneyannu barediruvudu uhisi bareyuvantha anivarya illa

   ಉತ್ತರ
 3. ಶೆಟ್ಟಿನಾಗ ಶೇ.
  ಆಕ್ಟೋ 25 2016

  ಲೇಖಕರು ಎಡಚ ಅನ್ನುವ ಬದಲು ಪ್ರಗತಿಪರರು ಅಂತ ಹೇಳಿದ್ದರೆ ಸಮಂಜಸವಾಗುತ್ತಿತ್ತು. ಪ್ರೊ. ಪ್ರೇಂ ನೀಲಿ ಚಿತ್ರಗಳ ಬಗ್ಗೆ ವ್ಯಾಖ್ಯಾನ ಮಾಡುವ ಬದಲು ನೀಲ ಗಗನದ ಬಗ್ಗೆ ಪದ್ಯ ವಾಚನ ಮಾಡಿದ್ದರೆ ಸಮಂಜಸವಾಗುತ್ತಿತ್ತು.

  ಉತ್ತರ
 4. ಶೆಟ್ಟಿನಾಗ ಶೇ.
  ಆಕ್ಟೋ 25 2016

  ಪ್ರೊ. ಪ್ರೇಂ ಅವರು ಪೋಲಿ ಪ್ರೊಫೆಸರ್ ಅಲ್ಲ ಅನ್ನುವುದಕ್ಕೆ ಯಾವ ಪುರಾವೆಗಳಿವೆ? ಬಹುತೇಕ ಪ್ರೊಫೆಸರ್ ಗಳು ಪೋಲಿಗಳೇ ಆಗಿರುತ್ತಾರೆ. ನಮ್ಮ ನೆಚ್ಚಿನ ಡಾ. ಯೂ ಆರ್ ಅನಂತಮೂರ್ತಿಜಿ ಸರ್ ಅವರೂ ಪೋಲಿ ಪ್ರೊಫೆಸರ್ ಆಗಿದ್ದರು ಎನ್ನುವುದು ಲೋಕಮಾನ್ಯ ಸತ್ಯವಾಗಿದೆ. ನಮ್ಮೆಲ್ಲರ ಕಣ್ಣು ತೆರೆಸಿದ ಮೇಷ್ಟ್ರು ಲಂಕೇಶರಂತೂ ಮಹಾಪೋಲಿ. ನಿಲುಮೆಯ ದಾರ್ಶನಿಕ ಬ್ರಹ್ಮಜ್ಞಾನಿ ಬಾಲಗಂಗಾಧರ ಅವರ ಬಗ್ಗೆ ನನಗೆ ಗೊತ್ತಿಲ್ಲ, ಬಹುಶಃ ಅವರು ಪೋಲಿ ಅಲ್ಲದ ಪ್ರೊಫೆಸರ್ ಇರಬಹುದು.

  ಉತ್ತರ
  • sudarshana gururajarao
   ಆಕ್ಟೋ 26 2016

   ನೀನಂತೂ ಪೋಲಿಯೂ ಆಗದ, ಹೋಲಿಯೂ ಆಗದ,ಎಲ್ಲಿಯೂ ಸಲ್ಲದ ಹುಳುವಾದೆಯೆಲ್ಲೋ ಖೂಳ ನಾಗ ನೇ

   ಉತ್ತರ
   • ಶೆಟ್ಟಿನಾಗ ಶೇ.
    ಆಕ್ಟೋ 26 2016

    ಹೋಗಯ್ಯ ಟೈಮ್ ಪಾಸ್ ಗಿರಾಕಿ! ಕನ್ನಡಿ ಮುಂದೆ ನಿಂತು ನಿನ್ನ ಖೂಳ ಹೂಳ ಮೊಗವ ನೋಡು.

    ಉತ್ತರ
    • ಆಕ್ಟೋ 27 2016

     ಖೊಟ್ಟಿನಾಗ.

     ಉತ್ತರ
    • sudarshana gururajarao
     ಆಕ್ಟೋ 27 2016

     ಅಲ್ಲಿಲ್ಲಿ ಡೀಲ್ ಮಾಡಿಕಿಂಡು ಭಂಡಬಾಳು ಬದುಕುವ ಪತ್ರಕಾರನಾದ ,ಬಿಟ್ಟಿಕೂಳು ಸಿಕ್ಕಲ್ಲಿ ಓಡಿ ಹಲ್ಲು ಗಿಂಜುವ ಮೊಂಡು ನಾಗನೇ, ನಿನ್ ಇಡೀ ಜೀವನದಲ್ಲಿ ಏನನ್ನೂ ಕಿಸಿಯದ ಟೈಂ ಪಾಸ್ ಗಿರಾಕಿ ನೀನೆಲೋ ಅಧಮಾ. ಹೋಗ್ಹೋಗು ದರ್ಗಾ ಸರ್ ಉಳಿಸಿರುವ ಅಳಿದುಳಿದ ಗಾಂಜಾ ಸೇದಿ ಬಿದ್ಕೋ

     ಉತ್ತರ
     • ಶೆಟ್ಟಿನಾಗ ಶೇ.
      ಆಕ್ಟೋ 28 2016

      ದರ್ಗಾ ಸರ್ ಅವರ ಯೋಗ್ಯತೆ ಏನೆಂಬುದು ನಿನ್ನ ಬಾಯಿಂದ ನಾನು ಕೇಳಿ ತಿಳಿದುಕೊಳ್ಳಬೇಕೇ?! ಅಭಿನವ ಚನ್ನಬಸವಣ್ಣ ಎಂಬ ಬಿರುದು ಪುಕ್ಕಟೆ ಪಡೆದುದಲ್ಲ!

      ಉತ್ತರ
      • sudarshana gururajarao
       ಆಕ್ಟೋ 30 2016

       ಹೌದ್ಹೌದು. ನಿನ್ ಬೆನ್ಉ ನಾನು ಕೆರೆವೆ ನನ್ನ ಬೆನ್ನು ನೀನು ಕೆರಿ ಎಂಬ ಒಳ ಸುಳಿ ಒಪ್ಪಂದಗಳು ತಿಳಿಯದ್ದೇನಲ್ಲ ಹೋಗಲೇ ಖೊಟ್ಟಿ ನಾಗನೇ.

       ಉತ್ತರ
       • ಶೆಟ್ಟಿನಾಗ ಶೇ.
        ಆಕ್ಟೋ 30 2016

        ರಾಯರೇ, ನಿಮ್ಮಂತಹ ವೈದಿಕರು ಕೆರೆದುಕೊಳ್ಳುವುದು ಬೆನ್ನನಲ್ಲ, ಗುದದ್ವಾರವನ್ನು – ಮಿತಿಮೀರಿ ವಡೆ ಪಾಯಸ ತಿನ್ನುವ ಕಾರಣದಿಂದ.

        ಉತ್ತರ
  • ಶೆಟ್ಟಿನಾಗ ಶೇ.
   ನವೆಂ 2 2016

   ನಿಲುಮೆಯ ದಾರ್ಶನಿಕ ಬಾಲಗಂಗಾಧರ ಅವರು ಪ್ರೊಫೆಸರ್ ವೃತ್ತಿಯಿಂದ ನಿವೃತ್ತರಾಗಿದ್ದಾರಾ? ಇತ್ತೀಚಿಗೆ ಬ್ರಹ್ಮಜ್ಞಾನಿಯ ಸೊಲ್ಲೂ ಕೇಳಿಬರುತ್ತಿಲ್ಲವಲ್ಲ! ಅವರನ್ನು ನಂಬಿ ಕೆಟ್ಟ ನಮ್ಮ ಹೆಗಡೆಯವರೂ ಮೌನರಾಗಿದ್ದಾರೆ! ವಾಟ್ಸ್ ರಾಂಗ್?

   ಉತ್ತರ
   • ಶೆಟ್ಟಿನಾಗ ಶೇ.
    ನವೆಂ 2 2016

    ಬ್ರಹ್ಮಜ್ಞಾನಿ ಬಾಲು ಹಾಗೂ ಇತಿಹಾಸ ತಜ್ಞ ಹೆಗಡೆ – ಇವರನ್ನು ನಂಬಿ ರಾಕೇಶ್ ಶೆಟ್ಟಿ ಮತ್ತು ಬಾಂಧವರು ಪುಸ್ತಕ ಪ್ರಕಾಶನಕ್ಕೆ ಇಳಿದು ಕೆಟ್ಟರು! ಆರಂಭಶೂರತ್ವದಲ್ಲಿ ಪ್ರಕಟಿಸಿದ ಬಲಪಂಥೀಯ ಪುಸ್ತಕಗಳನ್ನು ಬಲಪಂಥೀಯರೇ ಕೊಂಡುಕೊಳ್ಳದೆ ಆ ಪುಸ್ತಕಗಳು ಖರ್ಚಾಗದೇ ಉಳಿದವು (ಅಂತ ಕೇಳಿಬಂತು). ಅಲ್ಲಿಗೆ ಪ್ರಕಟನಮಾಲೆ ತೊಡರಿ ಬಿತ್ತು. ಸಂಸ್ಕೃತಿ ಚಿಂತನೆ ಬದಲು ಪ್ರೇಮಶೇಖರ್ ಅವರ ಕತೆಗಳನ್ನೇ ಪ್ರಕಟಿಸಿದ್ದರೆ ಜನ ಕೊಂಡುಕೊಳ್ಳುತ್ತಿದ್ದರೋ ಏನೋ (ಅಂತ ಕೇಳಿಬಂತು). ಅದೇನೇ ಇರಲಿ ಕನ್ನಡ ಪ್ರಕಟನಮಾಲೆಯೊಂದು ಅಲ್ಪಾಯುಷಿಯಾಗಿದ್ದು ದುಃಖ ನೀಡಿತು.

    ಉತ್ತರ
    • sudarshana gururajarao
     ನವೆಂ 4 2016

     ನಿನಗೆ ಅಲ್ಲಿ ಇಲ್ಲಿ ಕೇಳಿದ ಮಾತು ಗಳು ಮಾತ್ರವೇ ಗೊತ್ತು. ಹುಟ್ಟು ಸೋಂಬೇರಿಯಾದ ನೀನ್ ಶ್ರಮವಹಿಸಿ ,ಗ್ರಹಿಸಿ ಅರಿತಿದ್ದಾದರೆ ಬೊಗಳು. ಧೂರ್ತನೇ ಅವರಿವರ ಮಾತು ಕೇಳ್ಬೇಡ.ಸ್ವಂತ ಪ್ರಮಾಣಿಸಿ ಆದ ಮೇಲೆ ಬಾಯಿಬಿಡು. ನಿನ್ನ ದರ್ಗಾ ಇದೇನ ನಿನಗೆ ಕಲಿಸಿರೋದು? ಮರ್ತೋಗಿತ್ತು. ನಿಮ್ಮಂತಹ ಎಡಚರಿಗೆ ಮೈ ಬಗ್ಗಿಸಿ ಓದಲು, ಕಿಸಿಯಲು ಆಗುವುದಿಲ್ಲ.ಅದಕ್ಕೇ ಅವರಿವರು ಹೇಳಿದ್ದು ಕೇಳಿ ನಿಮ್ಮ ತನವನ್ನೇ ಮರೆತು ಕುಂಯ್ಗುಟ್ಟ್ತಿಯಾ

     ಉತ್ತರ
     • ಶೆಟ್ಟಿನಾಗ ಶೇ.
      ನವೆಂ 4 2016

      ವಚನ ಸಾಹಿತ್ಯದ ಮೇಲೆ ದಂಡೆತ್ತಿ ಬಂದವರ ಬಗ್ಗೆ ದರ್ಗಾ ಸರ್ ಅವರು ಬರೆದ ಪುಸ್ತಕ ಆರೇ ತಿಂಗಳುಗಳಲ್ಲಿ ಹತ್ತು ಮರುಮುದ್ರಣಗಳನ್ನು ಕಂಡಿತು.

      ಉತ್ತರ
      • sudarshana gururajarao
       ನವೆಂ 4 2016

       ಹೌದು, ಗಂಜಿ ಕೇಂದ್ರದ ಗಿರಾಕಿಗಳು ಸರಕಾರಿ ದುಡ್ಡಲ್ಲಿ ಖರೀದಿಸಿ ಗ್ರಂಥಾಲಯಗಳಲ್ಲಿ ಧೂಳು ತಿನ್ನುತ್ತಿರುವುದು ಕುರುಡು ಹಾವಿನ ಕಣ್ಣಿಗೆ ಕಾಣುತ್ತಿಲ್ಲ.

       ಉತ್ತರ
       • ಶೆಟ್ಟಿನಾಗ ಶೇ.
        ನವೆಂ 5 2016

        ದರ್ಗಾ ಸರ್ ಅವರ ಕೃತಿಗಳನ್ನು ಪ್ರಗತಿಪರ ಧೋರಣೆಯ ಸಹಸ್ರಾರು ಪ್ರಜ್ಞಾವಂತ ಜನರು ದುಡ್ಡು ಕೊಟ್ಟು ಖರೀದಿಸಿದ್ದಾರೆ. ಸರಕಾರೀ ಗ್ರಂಥಾಲಯಗಳಲ್ಲೂ ಲಕ್ಷಾಂತರ ಜನ ಸಾಮಾನ್ಯರು ದರ್ಗಾ ಸರ್ ಅವರ ಕೃತಿಗಳನ್ನು ಓದಿ ಧನ್ಯರಾಗಿದ್ದಾರೆ. ನಿಲುಮೆ ಪ್ರಕಾಶನದ ಪುಸ್ತಕಗಳು ಸಂಘ ಪರಿವಾರದವರಿಗೂ ಬೇಡವಾಗಿವೆ! ಸತ್ಯಮೇವ ಜಯತೆ!

        ಉತ್ತರ
      • sudarshana gururajarao
       ನವೆಂ 4 2016

       ಒಂದೊಂದು ಪುಸ್ತಕ ಪ್ರಿಂಟ್ ಆಗಿದ್ದಾ?

       ಉತ್ತರ
   • sudarshana gururajarao
    ನವೆಂ 4 2016

    ಅವರು ಗೌರವ ಪ್ರಾಧ್ಯಾಪಕರು. ಅವರಿಗೆ ನಿವೃತ್ತಿ ಇರದು,ನೀಚ ನಾಗ. ನಿನಗೇನು ಗೊತ್ತು ಉತ್ತಮರ ಸ್ವತ್ತು.

    ಉತ್ತರ
    • ಶೆಟ್ಟಿನಾಗ ಶೇ.
     ನವೆಂ 4 2016

     ಪ್ರಾಧ್ಯಾಪಕರು ವೃತ್ತಿಯಿಂದ ನಿವೃತ್ತಿ ಪಡೆದು ಮಠಮಾನ್ಯಗಳಲ್ಲಿ ಸೇವೆ ಸಲ್ಲಿಸುವುದು ಉಂಟು. ಇವರೂ ಹಾಗೆ ಏನಾದರೂ ಮಾಡುತ್ತಿರಬಹುದೇ?

     ಉತ್ತರ
     • sudarshana gururajarao
      ನವೆಂ 4 2016

      ನಿನಗ್ಯಾಕೆ ಕಂಡವರ ಉಸಾಬರಿ. ನಿಂದು ನೀನು ನೋಡ್ಕೋ.ದರ್ಗಾನಿಗೆ ಗಾಂಜಾ ಬೇಕಿರಬಹುದು.ಹೋಗು ತಂದುಕೊಡು

      ಉತ್ತರ
 5. M A Sriranga
  ಆಕ್ಟೋ 30 2016

  ಪ್ರೊಫೆಸರ್ ಪ್ರೇಮಶೇಖರ ಅವರ ಮಾತುಗಳಲ್ಲಿ ಶೈಕ್ಷಣಿಕವಾಗಿ ಅಂತಹ ತಪ್ಪುಗಳು ಇಲ್ಲವಾದರೂ ಸಹ, ನಮ್ಮ ಯಾವುದೇ ಮಾತುಗಳನ್ನು ಎಲ್ಲಿ,ಯಾರ ಮುಂದೆ ಆಡುತ್ತಿದ್ದೇವೆ ಎಂಬ ಔಚಿತ್ಯಜ್ಞಾನವೂ ಮುಖ್ಯ ಎಂಬುದನ್ನು ನಾವುಗಳು ಗಮನಿಸ ಬೇಕಲ್ಲವೇ? ಇನ್ನು ಮಾಧ್ಯಮಗಳ ಅದರಲ್ಲೂ ಟಿ ವಿ ಸುದ್ದಿ ವಾಹಿನಿಗಳ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಯಾಗಿದೆ. ಅವುಗಳು ಟಿ ಆರ್ ಪಿ ಸಲುವಾಗಿ ಸುದ್ದಿಗಳನ್ನು ವೈಭವೀಕರಿಸುತ್ತವೆ ಎಂಬುದು ಪ್ರಮುಖ ಆಪಾದನೆ. ಇರಬಹುದು. ಆದರೆ ಮಾಡಿದ ಭಾಷಣ, ನಡೆದ ಘಟನೆ ಬಿಟ್ಟು ಅವುಗಳು ‘ಸುದ್ದಿಗಾಗಿ ಹೊಸ ತಲೆ ಬರಹ’ ಕೊಟ್ಟರೆ ಅವುಗಳ ಬಗ್ಗೆ ಆಕ್ಷೇಪಿಸುವುದು ಸರಿ. ಪ್ರಸ್ತುತ ಘಟನೆಯಲ್ಲಿ ‘ಪೋಲಿ’ ಎಂಬ ಶಬ್ದವಿದ್ದಾಗ, ಅದನ್ನು ಆಡಿದವರು ಒಬ್ಬ ಪ್ರೊಫೆಸರ್ ಆಗಿರುವಾಗ ತಲೆ ಬರಹದಲ್ಲಿ ಅಂತಹ ಪ್ರಮಾದವಾಗಿದೆ ಎಂದು ದೂರುವುದು ಸರಿಯೇ? ಜಾಹೀರಾತುಗಳಿಲ್ಲದೆ ಮೂರ್ನಾಲಕ್ಕು ರೂಪಾಯಿಗಳಿಗೆ ನಾವು ಓದುವ ಹದಿನೈದು ಇಪ್ಪತ್ತು ಪುಟದಷ್ಟು ಸುದ್ದಿ ಪತ್ರಿಕೆಗಳ ಖಾಲಿ ನ್ಯೂಸ್ ಪ್ರಿಂಟ್ ಕಾಗದವೂ ಸಿಗುವುದಿಲ್ಲ. ಅದೇ ರೀತಿ ಟಿ ಆರ್ ಪಿ ನೋಡಿಯೇ ಟಿ ವಿ ಗಳಿಗೆ ಜಾಹೀರಾತು ಸಿಗುವುದು. ಹೀಗಾಗಿ ಸುದ್ದಿವಾಹಿನಿಗಳ ಬಗ್ಗೆ ಮಡಿವಂತಿಕೆಯ ವಟುಗಳ ರೀತಿ ಮಾತಾಡುವುದು ನಮ್ಮ ಬೂಟಾಟಿಕೆಯನ್ನು ತೋರಿಸುತ್ತದೆ ಅಷ್ಟೇ.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments