ಪೇಜಾವರ ಶ್ರೀಗಳು ಬಸವಣ್ಣನವರ ಕುರಿತು ಹೇಳಿದ್ದೇನು?
– ವಿನಾಯಕ ಹಂಪಿಹೊಳಿ
ಪ್ರಜಾವಾಣಿಯ ಅಂಕಣವೊಂದರಲ್ಲಿ (http://www.prajavani.net/news/article/2016/10/26/447756.html) ಅಂಕಣಕಾರರು ಪೇಜಾವರ ಶ್ರೀಗಳನ್ನು ತಪ್ಪಾಗಿ ಅರ್ಥೈಸುವುದರ ಜೊತೆಗೆ ಬಸವಣ್ಣನವರನ್ನೂ ತಪ್ಪಾಗಿ ಅರ್ಥೈಸಿದ್ದಾರೆ. ದೇವಸ್ಥಾನಗಳಲ್ಲಿ ಊಟದ ವ್ಯವಸ್ಥೆಯ ಕುರಿತು ತಪ್ಪು ದೃಷ್ಟಿಕೋನವೊಂದನ್ನು ಬೆಳೆಸಿಕೊಂಡಿದ್ದಾರೆ. ಅದು ಹೇಗೆ ಎಂಬುದನ್ನು ನೋಡೋಣ. ಹಾಗೆಯೇ ಪೇಜಾವರ ಶ್ರೀಗಳು ಯಾವ ಸಂದರ್ಭದಲ್ಲಿ ಬಸವಣ್ಣನವರನ್ನು ನೆನೆಪಿಸಿದರು ಎನ್ನುವದನ್ನೂ ನೋಡೋಣ. ಮೊದಲು ಈ ಅಂಕಣಕಾರರು ಬಸವಣ್ಣನವರ ಒಂದು ವಚನವನ್ನು ಹಾಕಿದ್ದಾರೆ. ಅದು ಇಲ್ಲಿದೆ:
ದಾಸೀಪುತ್ರನಾಗಲಿ, ವೇಶ್ಯಾಪುತ್ರನಾಗಲಿ
ಶಿವದೀಕ್ಷೆಯಾದ ಬಳಿಕ ಸಾಕ್ಷಾತು ಶಿವನೆಂದು ವಂದಿಸಿ, ಪೂಜಿಸಿ,
ಪಾದೋದಕ ಪ್ರಸಾದವ ಕೊಂಬುದೆ ಯೋಗ್ಯ.
ಹೀಗಲ್ಲದೆ ಉದಾಸೀನವ ಮಾಡಿ ಬಿಡುವವರಿಗೆ
ಪಂಚಮಹಾಪಾತಕ ನರಕ ಕಾಣಾ,
ಕೂಡಲಸಂಗಮದೇವಾ.
ಈ ವಚನವನ್ನು ಆಧಾರವಾಗಿಟ್ಟುಕೊಂಡು ಅಂಕಣಕಾರರು ಶಿವದೀಕ್ಷೆ ಎನ್ನುವುದು ಸಮಾನತೆಯನ್ನು ಸಾಧಿಸುವ ಸಾಧನ ಎಂದು ಅರ್ಥೈಸುತ್ತಾರೆ. ಮೇಲ್ನೋಟಕ್ಕೆ ಇವರು ಬಸವಣ್ಣನವರು ಯಾವ ಸಮಾನತೆಯ ಕುರಿತು ಮಾತನಾಡುತ್ತಿದ್ದಾರೋ, ಅದನ್ನೇ ಇವರೂ ಹೇಳುತ್ತಿದ್ದಾರೆ ಎಂದೇ ನಮಗೆ ಅನಿಸುತ್ತದೆ. ಆದರೆ ಆ ವಚನದಲ್ಲಿ ಹೇಳಿದಂತೆ ಅಂತಹ ಶಿವದೀಕ್ಷೆ ಪಡೆದ ಸಾಧಕರ “ಪಾದೋದಕ”ವನ್ನು ನೀಡಿದರೆ ಈ ಅಂಕಣಕಾರರು ಸ್ವೀಕರಿಸುವರೇ? ಬಹುಶಃ ಇಲ್ಲವೆಂದು ನನ್ನ ಊಹೆ. ಏಕೆಂದರೆ ಪಾದಪೂಜೆಯನ್ನೇ ಸಮರ್ಥಿಸದ ಇಂತಹ ಬುದ್ಧಿಜೀವಿಗಳು ಪಾದೋದಕವನ್ನು ಸ್ವೀಕರಿಸುವುದು ಹೇಗೆ ಸಾಧ್ಯ?
ಅಂದರೆ ಈ ಅಂಕಣಕಾರರು ಭಾವಿಸಿಕೊಂಡಿರುವ ಸಮಾನತೆಯ ಪರಿಕಲ್ಪನೆ ಬಸವಣ್ಣನವರು ಮೇಲಿನ ವಚನದಲ್ಲಿ ಹೇಳಿರುವ ಸಮಾನತೆಯ ಪರಿಕಲ್ಪನೆಗಿಂತ ಭಿನ್ನವಾಗಿದೆ ಎಂದು ಇಲ್ಲಿ ಸ್ಪಷ್ಟವಾಗುತ್ತದೆ. ಏಕೆಂದರೆ ಬ್ರಾಹ್ಮಣ ಮಠಗಳಲ್ಲಿ ಅಡುಗೆ ಮಾಡಿ ಬಡಿಸುವವರು ಎಲ್ಲ ಪ್ರಸಾದಾರ್ಥಿಗಳನ್ನೂ ಏಕಪ್ರಕಾರವಾಗಿಯೇ ಭಾವಿಸಿ ಎಲ್ಲರಿಗೂ ಒಂದೇ ಅಡುಗೆಯನ್ನೇ ಬಡಿಸಿರುತ್ತಾರೆ. ಈ ಸಮಾನತೆಯು ಅಲ್ಲಿ ಬರುವ ಪ್ರಸಾದಾರ್ಥಿಗಳಿಗೆ ಕಂಡು ಬರುತ್ತದೆ. ಹೀಗಾಗಿ ಅವರು ಯಾವ ತಕರಾರನ್ನೂ ಮಾಡದೇ ಪ್ರಸಾದ ಸ್ವೀಕರಿಸುತ್ತಾರೆ. ಬ್ರಾಹ್ಮಣ ಯುವಕರು ತಮ್ಮ ಪರಿವಾರದೊಡನೆ ಅಲ್ಲಿ ಹೋದಾಗ ಪಂಚೆಯುಟ್ಟು ಸಂಪ್ರದಾಯಸ್ಥರ ಸಾಲಿನಲ್ಲಿ ಕುಳಿತು ಊಟ ಮಾಡಿದರೆ, ತಮ್ಮ ಮಿತ್ರ ಮತ್ತು ಸಹೋದ್ಯೋಗಿಗಳೊಡನೆ ಹೋದಾಗ, ಪ್ಯಾಂಟು ತೊಟ್ಟು ಉಳಿದ ಸಾಲಿನಲ್ಲಿ ಕುಳಿತು ಊಟ ಮಾಡುತ್ತಾರೆ.
ಈ ಸಮಾನತೆಯು ಅಂಕಣಕಾರರಿಗೆ ಕಾಣಿಸುವುದಿಲ್ಲ. ಇವರಿಗೆ ಒಂದು ಸಾಲಿನಲ್ಲಿ ಕೇವಲ ಒಂದು ಜಾತಿಯ ಜನರಷ್ಟೇ ಕುಳಿತುಕೊಳ್ಳುವುದು ಅಸಹನೀಯವಾಗಿರುತ್ತದೆ. ಇವರಿಗೆ ಅದು ಅಸಹನೀಯವಾಗಲು ಕಾರಣ, ಅಂಕಣಕಾರರು ಪಾಶ್ಚಿಮಾತ್ಯ ಸೆಕ್ಯುಲರ್ ವಿಚಾರವಂತರು ಹೇಳುವ “ಎಲ್ಲರೂ ಸಮಾನರು” ಎಂಬ ಪರಿಕಲ್ಪನೆಯನ್ನೇ ಇಟ್ಟುಕೊಂಡು ನಮ್ಮ ದೇವಸ್ಥಾನಗಳ ಆಚರಣೆಗಳನ್ನು ಅರ್ಥೈಸಿಕೊಳ್ಳಲು ಯತ್ನಿಸುತ್ತಿದ್ದಾರೆ. ದೇವಸ್ಥಾನವೆಂದರೆ ಹಿಂದೂ ರಿಲಿಜನ್ನಿನ ಜನರ ಪ್ರಾರ್ಥನಾ ಸ್ಥಳವಾಗಿರುವುದರಿಂದ ಆ ದೇವರ ಮುಂದೆ ಬರುವ ಭಕ್ತರೆಲ್ಲರೂ ಸಮಾನರಾಗಿರುತ್ತಾರೆ. ಹೀಗಾಗಿ ಈ ರೀತಿಯ ಜಾತಿಯಾಧಾರಿತ ಪಂಕ್ತಿಭೇದವನ್ನು ಪುರೋಹಿತಶಾಹಿಯ ಹುನ್ನಾರ ಎಂದು ಭಾವಿಸುತ್ತಾರೆ. ಆದ್ದರಿಂದ ಜನಸಾಮಾನ್ಯರಿಗೆ ಬಾರದ ಆಕ್ಷೇಪ ಇವರಿಗೆ ಕಂಡು ಬರುತ್ತದೆ.
ವಚನಕಾರರು ಹೇಳುವ “ನೆಲನೊಂದೆ ಹೊಲಗೇರಿ-ಶಿವಾಲಯಕ್ಕೆ; ಜಲವೊಂದೆ ಶೌಚ ಮಜ್ಜನಕ್ಕೆ; ಕುಲವೊಂದೆ ತನ್ನ ತಾನರಿದವಂಗೆ’ ಅಥವಾ ‘ಕುಲಕ್ಕೆ ತಿಲಕ ನಮ್ಮ ಮಾದಾರ ಚೆನ್ನಯ್ಯ; ನಿಮ್ಮಿಂದಧಿಕ ಕೂಡಲ ಸಂಗಮದೇವಾ’ ಅಥವಾ ‘ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯಾ; ಇವ ನಮ್ಮವ ಇವ ನಮ್ಮವ ಇವ ನಮ್ಮವನೆಂದೆನಿಸಯ್ಯಾ; ಕೂಡಲಸಂಗಮದೇವಾ, ನಿಮ್ಮ ಮನೆಯ ಮಗನೆನಿಸಯ್ಯಾ’ ಎಂಬ ಮುಂತಾದ ವಚನಗಳು ಈ ಬುದ್ಧಿಜೀವಿಗಳ “ಎಲ್ಲರೂ ಸಮಾನರು” ಎಂಬ ಪ್ರೊಟೆಸ್ಟಂಟ್ ಐಡಿಯಾಲಜಿಯೊಂದಿಗೆ ಸರಿಹೊಂದುವುದರಿಂದ, ಈ ವಚನಕಾರರು ಬುದ್ಧಿಜೀವಿಗಳ ಪಾಲಿಗೆ ಸಾಮಾಜಿಕ ಚಳುವಳಿಗಾರರಾಗಿ ಹೋಗುತ್ತಾರೆ.
ಆದರೆ ಬಸವಣ್ಣನವರು ಶಿವದೀಕ್ಷೆಯಾದ ಬಳಿಕ ಶಿವನೆಂದು ವಂದಿಸಬೇಕೆಂದು ಹೇಳಿದ್ದಾರೆ ಹಾಗೂ ಉಳಿದ ವಚನಕಾರರು ಲಿಂಗದೀಕ್ಷೆಯನ್ನು ಅರಸುವ ಭಕ್ತರನ್ನು ಕುರಿತು ಈ ಸಮಾನತೆಯ ವಾಕ್ಯಗಳನ್ನು ಹೇಳಿದ್ದಾರೆಯೇ ವಿನಃ ಶಿವದೀಕ್ಷೆಯನ್ನೇ ಪಡೆಯದವರ ಜೊತೆ ಭಕ್ತರು ಯಾವ ನಿಲುವು ತಾಳಬೇಕು ಎಂದು ಬಸವಣ್ಣ ಹೇಳಿದ್ದಾರೆ ಹಾಗೂ ಪಂಚಮಹಾಪಾತಕಗಳೆಂದು ಉಳಿದ ವಚನಕಾರರು ಯಾವುದನ್ನೆಲ್ಲ ಕರೆದಿದ್ದಾರೆ ಎನ್ನುವುದನ್ನು ಅಂಕಣಕಾರರು ಗಮನಿಸಿದಂತಿಲ್ಲ.
ಆದರೆ ಈ ಸೂಕ್ಷ್ಮವನ್ನು ಪೇಜಾವರ ಶ್ರೀಗಳು ಗಮನಿಸಿದ್ದಾರೆ. ಆದ್ದರಿಂದಲೇ ಅವತ್ತು “ಲಿಂಗ ದೀಕ್ಷೆ ಪಡೆಯದವರ ಜೊತೆ ಭೋಜನ ಮಾಡುವುದು ಏಳು ಜನ್ಮಗಳ ನರಕಕ್ಕೆ ಕಾರಣ ಆಗುತ್ತದೆ ಎಂದು ಬಸವಣ್ಣನವರು ಹೇಳಿದ್ದರು” ಎಂದು ಹೇಳಿದರು. ಆದರೆ ಈ ಹೇಳಿಕೆಯನ್ನು ಅವರು ಬಸವಣ್ಣನವರನ್ನು ಹಳಿಯಲೆಂದಾಗಲೀ ಅಥವಾ ನಮ್ಮಂತೆಯೇ ಬಸವಣ್ಣನವರೂ ಅಸಮಾನತೆಯನ್ನೇ ಸಾರಿದ್ದರು ಎಂದು ತಿಳಿಸಲೆಂದಾಗಲೀ ನೀಡಿಲ್ಲ. ಈ ಅಂಕಣಕಾರರು ಹಾಗೆ ಭಾವಿಸಿದ್ದಾರೆ ಅಷ್ಟೇ.
ಪೇಜಾವರ ಶ್ರೀಗಳು ಬಸವಣ್ಣನವರು ಸಾರಿದ ಸಮಾನತೆಯ ಪರಿಕಲ್ಪನೆಯು ಈ ಬುದ್ಧಿಜೀವಿಗಳು ಇಟ್ಟುಕೊಂಡಿರುವ ಪ್ರೊಟೆಸ್ಟಂಟರ ಪರಿಕಲ್ಪನೆಗಿಂತ ಭಿನ್ನವಾಗಿದೆ ಎನ್ನುವುದನ್ನು ತಿಳಿಸಲು ಈ ವಾದವನ್ನು ಬಳಸಿಕೊಂಡಿದ್ದಾರೆ ಎನ್ನಬಹುದು. ಬಹುಶಃ ಪೇಜಾವರರು ಬಸವಣ್ಣನವರ ಈ ವಚನವನ್ನು ಆಧಾರವಾಗಿಟ್ಟುಕೊಂಡು ತಮ್ಮ ವಾದವನ್ನು ಪ್ರತಿಪಾದಿಸಿರಬಹುದು. ಅದು ಇಲ್ಲಿದೆ:
ಲಿಂಗಪ್ರಸಾದಿಗಳಲ್ಲದವರ ಸಂಗ
ಭಂಗವೆಂದುದು ಗುರುವಚನ.
ಲಿಂಗಪ್ರಸಾದಿಗಳಲ್ಲದವರ ಸಂಗಗ
ಪಂಚಮಹಾಪಾತಕವೆಂದುದು ಲಿಂಗವಚನ.
ಆಸನೇ ಶಯನೇ ಯಾನೇ ಸಂಪರ್ಕೇ ಸಹಭೋಜನೇ
ಸಂಚರಂತಿ ಮಹಾಘೋರೇ ನರಕೇ ಕಾಲಮಕ್ಷಯಂ
ಇಂತೆಂದುದಾಗಿ ಕೂಡಲಸಂಗಮದೇವಾ,
ನಿಮ್ಮ ಶರಣರಿಗೆ ಶರಣೆಂದು ಶುದ್ಧನಯ್ಯಾ.
ಲಿಂಗಪ್ರಸಾದಿಗಳಲ್ಲದವರ ಜೊತೆ, ಕೂಡುವುದು, ಮಲಗುವುದು, ಪಯಣಿಸುವುದು, ಸಂಪರ್ಕಿಸುವುದು, ಒಟ್ಟಿಗೆ ಊಟಮಾಡುವುದು, ತಿರುಗಾಡುವುದು ಕೊನೆಯಿಲ್ಲದ ಮಹಾಘೋರ ನರಕಕ್ಕೆ ದಾರಿ ಎಂಬರ್ಥ ನೀಡುವ ಶ್ಲೋಕವನ್ನು ಬಸವಣ್ಣನವರು ಇಲ್ಲಿ ಉದ್ಧರಿಸಿರುವದು ಸ್ಪಷ್ಟ. ಅಂದರೆ ಶಿವದೀಕ್ಷೆ ಪಡೆದವರು ಆ ದೀಕ್ಷೆ ಪಡೆಯದವರ ಜೊತೆ ಹೇಗೆ ವರ್ತಿಸಬೇಕು ಎನ್ನುವುದನ್ನು ಬಸವಣ್ಣನವರು ಇಲ್ಲಿ ಹೇಳುತ್ತಾರೆ. ಬುದ್ಧಿಜೀವಿಗಳು ಬಸವಣ್ಣನವರಿಂದ ಸಾರಲ್ಪಟ್ಟದ್ದೆಂದು ಹೇಳುವ ಸಮಾನತೆಯ ಪರಿಕಲ್ಪನೆಯು ಬಸವಣ್ಣನವರ ವಚನಗಳೊಂದಿಗೆ ಸರಿಹೊಂದುವುದಿಲ್ಲ ಎನ್ನುವುದನ್ನು ತಿಳಿಸಲು ಪೇಜಾವರರು ಮೇಲಿನ ವಾಕ್ಯವನ್ನು ಹೇಳಿದ್ದಾರೆ.
ಅಂಕಣಕಾರರು ತಮ್ಮ ಪ್ರೊಟೆಸ್ಟಂಟರ ಸಮಾನತೆಯ ಪರಿಕಲ್ಪನೆ ಇಟ್ಟುಕೊಂಡು ಈ ವಚನವನ್ನು ಅರ್ಥೈಸುವಾಗ ದಯನೀಯವಾಗಿ ಸೋಲುತ್ತಾರೆ. ಹೀಗಾಗಿಯೇ ಪಲಾಯನವಾದವನ್ನು ಹಿಡಿಯುತ್ತಾರೆ. ಈ ವಚನದಲ್ಲಿರುವ ಸಂಸ್ಕೃತವು ಬಸವಣ್ಣನವರದ್ದಲ್ಲ. ನಂತರ ಪುರೋಹಿತರು ತಮ್ಮ ಹುನ್ನಾರದಿಂದ ಸೇರಿಸಿದ್ದು ಅಂತೆಲ್ಲ ಪುರಾವೆಗಳಿಲ್ಲದ ಕತೆಗಳನ್ನೇ ವಾದಗಳೋ ಎಂಬಂತೆ ಮಂಡಿಸುತ್ತಾರೆ.
ಬಸವಣ್ಣನವರ ವಚನಗಳಾಗಲೀ, ಪೇಜಾವರರ ಸಂಪ್ರದಾಯವಾಗಲೀ ಎರಡೂ ಕೂಡ ಸಮಾನತೆಯ ತತ್ತ್ವಗಳನ್ನು ಹೊಂದಿರುವ ದರ್ಶನಗಳೇ ಆಗಿವೆ ಎಂಬುದು ಇಲ್ಲಿ ನಾವು ನೋಡಬೇಕಾಗಿರುವ ಸತ್ಯ. ಆದರೆ ಈ ಭಾರತೀಯ ದರ್ಶನಗಳು ತಿಳಿಸುವ ಸಮಾನತೆಯ ಪರಿಕಲ್ಪನೆಯು ಪಾಶ್ಚಿಮಾತ್ಯರಿಂದ ಎರವಲು ಪಡೆದ ಸಮಾನತೆಯ ಪರಿಕಲ್ಪನೆಗಿಂತ ಭಿನ್ನವಾಗಿದೆ. ಶಿವದೀಕ್ಷೆಯನ್ನು ಪಡೆದ ಎಲ್ಲರನ್ನೂ ಸಮಾನರಾಗಿ ನೋಡಬೇಕು ಎನ್ನುವಾಗ ಆ “ಶಿವದೀಕ್ಷೆ”ಯ ಸಂದರ್ಭವನ್ನೂ, “ಆಗಿ ನೋಡಬೇಕು” ಎನ್ನುವ ವಿಧಿಯನ್ನೂ ತೆಗೆದು “ಎಲ್ಲರೂ ಸಮಾನರು” ಎಂದು ಸೆಕ್ಯುಲರ್ ತತ್ತ್ವದೊಡನೆ ಸಮೀಕರಿಸುವದು ಸರಿಯಲ್ಲ. ‘ಭಕ್ತರಾದವರಿಗೆ ಶಿವದೀಕ್ಷೆ ಪಡೆದವರಲ್ಲಿ ಭೇದಭಾವ ಮಾಡಬಾರದು ಎಂಬುದು ಎಷ್ಟು ಮುಖ್ಯವೋ, ತನ್ನ ಆಚರಣೆಗಳನ್ನು ಸುಲಲಿತವಾಗಿ ಪಾಲಿಸಲು ಶಿವದೀಕ್ಷೆ ಪಡೆಯದವರೊಂದಿಗೆ ಅಂತರ ಕಾಯ್ದುಕೊಳ್ಳುವುದೂ ಅಷ್ಟೇ ಮುಖ್ಯ ಎನ್ನುವುದು ಬಸವಣ್ಣನವರ ವಾದ’ ಎನ್ನುವದು ಮೇಲಿನ ಎರಡೂ ವಚನಗಳನ್ನು ಒಟ್ಟಿಗೇ ಗ್ರಹಿಸಿದಾಗ ತಿಳಿಯುವ ಸತ್ಯ.
ಪೇಜಾವರ ಶ್ರೀಗಳ ಮಾತಿನಲ್ಲಿಯೂ ಇದೇ ಭಾವವೇ ಇದೆ. ಮಠಕ್ಕೆ ಪ್ರಸಾದಾರ್ಥಿಯಾಗಿ ಬರುವ ಭಕ್ತರಲ್ಲಿ ಯಾವ ಭೇದವನ್ನೂ ಮಾಡದೇ ಎಲ್ಲರಿಗೂ ಒಂದೇ ಪ್ರಸಾದವನ್ನೇ ಆ ಮಠವು ನೀಡುತ್ತದೆ ಮತ್ತು ಆ ಮಠದ ಸಂಪ್ರದಾಯದ ವಿಧಿ/ನಿಷೇಧ ಹಾಗೂ ಆಹಾರ ಕ್ರಮಕ್ಕನುಸಾರವಾಗಿ ಪ್ರಸಾದ ಸ್ವೀಕರಿಸುವವರಿಗೆ ಅಗತ್ಯ ಸೌಕರ್ಯವನ್ನು ಒದಗಿಸುತ್ತಲ್ಲದೇ, ಆ ಸಂಪ್ರದಾಯವನ್ನು ಪಾಲಿಸಲೇಬೇಕೆಂಬ ಒತ್ತಾಯವನ್ನು ಮಠವು ಹೇರದಿರುವ ಕಾರಣ ಅದನ್ನು ಪಾಲಿಸಲು ಇಚ್ಛೆಯಿಲ್ಲದ ಜನರಿಗೆ ಅವರಿಗೆ ಅನುಕೂಲವಾಗುವಂತೆ ಇನ್ನೊಂದು ಮುಕ್ತ ಸೌಕರ್ಯವನ್ನು ಒದಗಿಸುತ್ತದೆ. ಆ ಮಠದ ಸಂಪ್ರದಾಯವನ್ನು ಪರಂಪರಾಗತವಾಗಿ ಪಾಲಿಸಿಕೊಂಡು ಬಂದ ಜನರು ಅಲ್ಲಿ ತಮ್ಮ ಆಚರಣೆಗೆ ಅನುಗುಣವಾಗಿ ಪ್ರಸಾದ ಸ್ವೀಕರಿಸಲು ಅವರದೇ ಸಾಲಿನಲ್ಲಿ ಕುಳಿತುಕೊಳ್ಳುತ್ತಾರೆ. ತಮ್ಮ ಆಚರಣೆಗಳನ್ನು ಪಾಲಿಸಲು ಅನುಕೂಲವಾಗುವ ದೃಷ್ಟಿಯಿಂದ ಉಳಿದ ಸಾಲಿನ ಜನರಿಂದ ಅಂತರ ಕಾಯ್ದುಕೊಳ್ಳುತ್ತಾರೆ.
ಪೇಜಾವರ ಶ್ರೀಗಳ ಹೇಳಿಕೆಗೆ ಈಗ ಸರಿಯಾದ ರೂಪವನ್ನು ಪಡೆದುಕೊಳ್ಳುತ್ತದೆ. ಬ್ರಾಹ್ಮಣ ಸಂಪ್ರದಾಯಗಳಾಗಲೀ, ವಚನ ಪರಂಪರೆಗಳಾಗಲೀ ಅಸಮಾನತೆಯನ್ನು ಪ್ರತಿಪಾದಿಸುವ ತತ್ತ್ವಗಳನ್ನು ಹೊಂದಿಲ್ಲ. ಎರಡೂ ಸಮಾನತೆಯನ್ನೇ ಒಂದು ಆದರ್ಶವಾಗಿ ಬೋಧಿಸುವ ತತ್ತ್ವಗಳೇ. ಆದರೆ ಸಮಾನತೆಯ ಕುರಿತು ಅವುಗಳು ಯಾವ ದೃಷ್ಟಿಕೋನವನ್ನು ಹೊಂದಿದ್ದವೋ, ಯಾವ ಪರಿಕಲ್ಪನೆಯನ್ನು ಇಟ್ಟುಕೊಂಡಿದ್ದವೋ ಅದು ಪಾಶ್ಚಿಮಾತ್ಯರಿಂದ ಬುದ್ಧಿಜೀವಿಗಳು ಎರವಲು ಪಡೆದ ಸಮಾನತೆಯ ಪರಿಕಲ್ಪನೆಗಿಂತ ಸಂಪೂರ್ಣ ವಿರುದ್ಧವಾಗಿದೆ. ಪಾಶ್ಚಾತ್ಯರ ಸಮಾನತೆಯ ಪರಿಕಲ್ಪನೆ ಇಟ್ಟುಕೊಂಡು ಬ್ರಾಹ್ಮಣ ಸಂಪ್ರದಾಯಗಳನ್ನು ಅಸಮಾನತೆಯ ಹುನ್ನಾರವೆಂದೂ ಮತ್ತು ಬಸವಣ್ಣನವರ ವಚನ ಪರಂಪರೆಯನ್ನು ಸಮಾನತೆಯ ಚಳುವಳಿಯೆಂದೂ ವಿಭಾಗಿಸುವದು ತಪ್ಪು ಎಂಬುದನ್ನು ತಾರ್ಕಿಕವಾಗಿ ತೋರಿಸಲು ಪೇಜಾವರರು ಬಸವಣ್ಣನವರನ್ನು ನೆನಪಿಸಿಕೊಂಡಿದ್ದಾರೆ. ಅಂಕಣಕಾರರು ಮತ್ತು ಇಂತಹ ಬುದ್ಧಿಜೀವಿಗಳೂ ಇದನ್ನು ಅರಿಯಲು ಬಹುಶಃ ಇನ್ನೂ ಹಲವಾರು ವರ್ಷಗಳು ಬೇಕಾಗುತ್ತವೆ.
ಇಪ್ಪತ್ತೆರಡನೆ ಶತಮಾನ ಬಂದರೂ ಈ ಪೇಜಾವರ ಹಾಗೂ ಗಿಂಡಿಮಾಣಿಗಳು ಮಧ್ವರ ಕಾಲದ ಪೂರ್ವಗ್ರಹಗಳಿಂದ ಮುಕ್ತರಾಗುವುದಿಲ್ಲ!
ಮಧ್ವಕಾಲದ ಪೂರ್ವಗ್ರಹಗಳು ಯಾವವು?
ನಿನ್ನಂಥ ಭಂಡ ಮಾಣಿಗಳು ಇನ್ನೂ ಗಂಜಿಕೇಂದ್ರದ ಮುಂದೆ ಚಿಪ್ಪಿಡಿದು ನಿಂತಿರುವುದಾ ಖೊಟ್ಟಿ ನಾಗ
ಧಿಕ್ ವೈದಿಕಶಾಹಿ!
Ganji Kendra da bhikaarigalige dhikkara..Madhwa ra hesaru kareyalu ninage yogyathe illa
ಸಮಾನಿ ಪ್ರಪಾ ಸಮಾನೋ ಅನ್ನ ಭಾಗಃ [ ಅಥರ್ವ] ನಮ್ಮ ಜಲಾಶಯಗಳು ಸಮಾನವಾಗಿರಲಿ, ನಮ್ಮ ಅನ್ಬಭಾಗಗಳು ಸಮಾನವಾಗಿರಲಿ ಎಂಬುದು ಈ ವೇದ ಮಂತ್ರದ ಅರ್ಥ. ಹೀಗಿರುವಾಗ ನಾವು ಸೇವಿಸುವ ನೀರು ಮತ್ತು ಆಹಾರ ಸಮಾನವಾಗಿದ್ದು ಅವುಗಳನ್ನು ಒಟ್ಟಿಗೆಯೇ ಸೇವಿಸಬೇಕು. ಋಗ್ವೇದದ ಕೊನೆಯ ನಾಲ್ಕು ಮಂತ್ರಗಳು ಸಂಘಟನಾ ಮಂತ್ರಗಳೆಂದು ಪ್ರಸಿದ್ಧವಾಗಿವೆ. ಅವುಗಳಲ್ಲಿ ಒಂದು ಹೀಗಿದೆ.
ಸಂಗಚ್ಛದ್ವಃ ಸಂವದದ್ವಃ ಸಂ ವೋ ಮನಾಂಸಿ ಜಾನಾತಂ |
ದೇವಾ ಭಾಗಂ ಯಥಾ ಪೂರ್ವೇ ಸಂಜಾನಾನಾ ಉಪಾಸತೇ || ಋ.10.191.2
ಎಂದರೆ, ಪರಸ್ಪರ ಸೇರಿಕೊಂಡು ಜೀವಿಸಿರಿ. ಪರಸ್ಪರ ಪ್ರೇಮದಿಂದ ಒಟ್ಟಿಗೆ ವಾರ್ತಾಲಾಪವನ್ನು ಮಾಡಿರಿ, ನಿಮ್ಮೆಲ್ಲರ ಮನಸ್ಸು ಒಂದೇ ಆಗಿರಲಿ, ಯಾವ ರೀತಿ ವಿದ್ವಾಂಸರು ತಮ್ಮ ಕರ್ತವ್ಯಗಳನ್ನು ಚೆನ್ನಾಗಿ ಪಾಲನೆ ಮಾಡುತ್ತಾ ಬಂದಿರುವರೋ ಅದೇ ರೀತಿ ಕರ್ತವ್ಯ, ಉಪಾಸನೆ ಮಾಡಿರಿ. ಮುಂದುವರೆದು,
ಸಂಜೀವಾ ಸ್ಥ [ಅಥರ್ವ
ಎಂದರೆ ನೀವೆಲ್ಲರೂ ಒಟ್ಟಿಗೆ ಬದುಕಿರಿ.
ಸಹ ಭಕ್ಷ್ಯಾ ಸ್ಯಾಮ
ನಾವೆಲ್ಲರೂ ಒಟ್ಟಿಗೆ ಭೋಜನ ಮಾಡುವವರಾಗಲಿ
ಹೀಗೆ ವೇದಗಳಲ್ಲಿ ಸಮಾನತೆ ಓತ ಪ್ರೋತವಾಗಿದೆ. ವೇದಗಳ ಆದೇಶವೇ ಅಂತಿಮ.
ಹೀಗಿರುವಾಗ ಪಂಕ್ತಿ ಭೇದ ವೇದಾನುಕೂಲವಲ್ಲ. ಪ್ರತಿಯಾಗಿ ಅದು ವೇದ ವಿರುದ್ಧ. ಹೀಗಾಗಿ ಪಂಕ್ತಿ ಭೇದವನ್ನು ಖಂಡಿಸಬೇಕು. ಆದರೆ ಇದರಲ್ಲಿ ಒಂದು ಮಾತು, be roman while in rome. ಎನ್ನುವ ಇಂಗ್ಲೀಷ್ ಹೇಳಿಕೆಯಂತೆ ಮಠದಲ್ಲಿರುವಾಗ ಅಲ್ಲಿನ ನಿಯಮಗಳನ್ನು ಪಾಲಿಸುವ ಅವಶ್ಯಕತೆಯಿರುತ್ತದೆ. ಮಠಗಳಲ್ಲಿ ಸಸ್ಯಾಹಾರವಿದೆ. ಮತ್ತು ಪಂಕ್ತಿಗಳಲ್ಲಿ ಭಾಗವಹಿಸುವವರು ಸಾಮಾನ್ಯವಾಗಿ ಯಜ್ಞೋಪವೀತ ದಾರಿಗಳಾಗಿರುತ್ತಾರೆ. ಹೀಗಾಗಿ ಪಂಕ್ತಿ ಭೇದವನ್ನು ಅಳಿಸಿಹಾಕಲು ಪ್ರಯತ್ತಿಸುವವರು ಮಠದ ಸಂಪ್ರದಾಯವಾದ ಸಸ್ಯಾಹಾರಿಗಳಾಗಬೇಕು ಮತ್ತು ಯಜ್ಞೋಪವೀತ ಧಾರಿಗಳಾಗಬೇಕು ಬಸವಣ್ಣನವರು ಶಿವ ಧೀಕ್ಷೆಯನ್ನು ಪಡೆಯದಿರುವವರ ಮದ್ಯೆ ಹೇಗೆ ವ್ಯವಹರಿಸಬೇಕೆಂದು ಮೇಲಿನ ವಚನಗಳಲ್ಲಿ ತಿಳಿಸಿದ್ದಾರೆ. ಅದರಂತೆ ಸಮಾನ ಪಂಕ್ತಿಯನ್ನು ಇಚ್ಛಿಸುವ ಜನ, ಸಸ್ಯಾಹಾರಿಗಳಾಗಿ ಯಜ್ಞೋಪವೀತ ಧಾರಿಗಳಾಗಬೇಕು ಅಗ ಪಂಕ್ತಿ ಭೇದ ವಿರುವುದಿಲ್ಲ. ಸಸ್ಯಾಹಾರಿಗಳಾಗಿ ಮತ್ತು ಜನಿವಾರ ಧರಿಸಿದ ಯಾವುದೇ ದಲಿತನನ್ನು ಪಂಕ್ತಿಯಿಂದ ದೂರವಿಡಲು ಮಠಗಳಿಗೆ ಸಾಧ್ಯವಾಗದು. ಒಂದು ವೇಳೆ ಇಲ್ಲಿಯೂ ಪಂಕ್ತಿ ಭೇದ ಮಾಡಿದರೆ ಅದು ಖಂಡನಾರ್ಹ.
ಇಲ್ಲಿ ಒಂದು ಪ್ರಶ್ನೆ. ಧಲಿತರು ಸಸ್ಯಾಹಾರಿಗಳಾಗಬಹುದು. ಆದರೆ ಮಠಗಳು ದಲಿತರಿಗೆ ಯಜ್ಞೋಪವೀತ ಧಾರಣೆ ಮಾಡಿಸುವವರೆ? ಖಂಡಿತಾ ಇಲ್ಲ. ಯಜ್ಞೋಪವೀತ ಒಂದು ಕರ್ತವ್ಯ ಸೂತ್ರ ಜಾತಿ ಸೂತ್ರವಲ್ಲ. ಪಿತೃಋಣ, ಅಚಾರ್ಯ ಋಣ, ಮತ್ತು ದೇವ ಋಣವನ್ನು ತೀರಿಸುತ್ತೇನೆಂಬ ಪ್ರತಿಜ್ಞೆಯನ್ನು ಹೊತ್ತು ಅದನ್ನು ನಿರಂತರ ಜ್ಞಾಪಿಸುತ್ತಿರುವ ಸೂತ್ರವೇ ಈ ಮೂರೆಳೆ ಜನಿವಾರ. ಇದನ್ನು ಯಾರು ಬೇಕಾದರೂ, ಲಿಂಗ, ಜಾತಿ, ಪಕ್ಷ, ಪಂಗಡ ಭೇದ ವಿಲ್ಲದೆ ಇಚ್ಛುಕರು ಧರಿಸಬಹುದು. ಮಠಗಳು ದಲಿತರಿಗೆ ಯಜ್ಞೋಪವೀತವನ್ನು ತೊಡಿಸುವ ಉದಾರತೆ ತೋರದು. ಅವರೇನಿದ್ದರೂ ದೀಕ್ಷೆ ಕೊಡುವವರು ಮಾತ್ರ. ಹಾಗಾಗಿ ದಲಿತರು ಅಥವಾ ಇನ್ನಾರಾದರೂ ತಾವು ಯಜ್ಞಫವೀತವನ್ನು ಧರಿಸುವ ಅಭಿಲಾಷೆ ಹೊಂದಿದಲ್ಲಿ ಅವರು ಹತ್ತಿರದ ಆರ್ಯಸಮಾಜವನ್ನು ಸಂಪರ್ಕಿಸಬೇಕು, ಜಾತಿ ಮತ, ಪಕ್ಷ ಪಂಗಡ ಎನ್ನುವ ಭೇದ ಭಾವವಿಲ್ಲದೆ ಎಲ್ಲರಿಗೂ ಈ ವೈದಿಕ ಸಂಸ್ಕಾರವನ್ನು ಆರ್ಯಸಮಾಜ ನೀಡುತ್ತದೆ. ಈ ವೈದಿಕ ಸಂಸ್ಕಾರವನ್ನು ಪಡೆದು, ಸಸ್ಯಾಹಾರಿಗಳಾಗಿ ಪಂಕ್ತಿ ಭೇದದ ವಿರುದ್ಧ ಹೋರಾಟವನ್ನು ನಡೆಸಿದರೆ ಅದಕ್ಕೊಂದು ಅರ್ಥ ಬರುತ್ತದೆ. ಇಲ್ಲವಾದಲ್ಲಿ ಇದೊಂದು ಜಾತಿ ಸಂಘರ್ಷವನ್ನು ಉಂಟು ಮಾಡುವ ಪ್ರಯತ್ನವೆಂದು ಭಾವಿಸಲು ಅವಕಾಶವಿದೆ.
“ನಾವು ಸೇವಿಸುವ ನೀರು ಮತ್ತು ಆಹಾರ ಸಮಾನವಾಗಿದ್ದು ಅವುಗಳನ್ನು ಒಟ್ಟಿಗೆಯೇ ಸೇವಿಸಬೇಕು”
ಇಲ್ಲಿ ನಾವು == ಬ್ರಾಹ್ಮಣರು?
ಹಾಗೆ ಎಂದು ನೀವು ಕುತರ್ಕದಿಂದ ಅರ್ಥೈಸುತ್ತೀರಿ, ವೇದಗಳಲ್ಲಿ ಈ ರೀತಿಯ ಅರ್ಥವಿಲ್ಲ. ವೇದಗಳಲ್ಲಿ ಬ್ರಾಹ್ಮಣರು ಒಂದು ಜಾತಿಯೆಂದು ಎಲ್ಲೂ ಹೇಳಿಲ್ಲ. ಬ್ರಾಹ್ಮಣ, ಕ್ಷತ್ರಿಯ ಶೂದ್ರ ಮತ್ತು ವೈಶ್ಯರೆಂಬ ನಾಲ್ಕು ವರ್ಣಗಳಿವೆ. ಇವು ಹುಟ್ಟಿನಿಂದ ಬರುವುದಿಲ್ಲ. ಇವು ಜಾತಿಗಳಲ್ಲ. ಇರುವುದು ಒಂದೇ ಜಾತಿ, ಅದು ಮಾನವ ಜಾತಿ, ಪಶು, ಪಕ್ಷಿಗಳು ಒಂದು ಜಾತಿಯಿರುವಂತೆ ಮನುಷ್ಯರು ಸಹ ಒಂದು ಜಾತಿ. ಯಾವ ಜಾತಿ ಹುಟ್ಟಿನಿಂದ ಸಾಯುವವರಗೂ ಬದಲಾಗದೋ ಅದೆ ಒಂದು ಜಾತಿ. ವರ್ಣ ಅವರ ರವರ ಆಯ್ಕೆ ಬಿಟ್ಟಿದ್ದು. ಮೂಲಾರ್ಥವನ್ನು ಕಳಚಿ ಬೇರೊಂದು ಅರ್ಥವನ್ನು ಈಗ ಬಂದಿರುವುದಿಕ್ಕೆ ವೇದಗಳು ಜವಾಬ್ದಾರಿಯಲ್ಲ. ಸಂವಿಧಾನವನ್ನು ತಿರುಚಿ ಎಷ್ಟೋ ಅಕ್ರಮಗಳು ನಡೆಯುತ್ತಿವೆ. ಅಂದಹಾಗೆ ಅದಕ್ಕೆಲ್ಲಾ ಸಂವಿಧಾನವನ್ನು ಧೂಷಣೆ ಮಾಡಲು ಬರುವುದಿಲ್ಲ.
ಕೋಣನ ಮುಂದೆ ಕಿನ್ನರಿ ಬಾರಿಸಿದರೇನು ಪ್ರಯೋಜನ ಸಾರ್. ಈ ಮುಂಡೇದಕ್ಕೆ ಕುಚೇಷ್ಟೆ ಬಿಟ್ಟು ಮತ್ತೇನೂ ತಿಳಿಯದು. ಇನ್ನೊಂದು ಪದ ಗೊತ್ತು – ಅದೇ ದರ್ಗಾ ರಂಜನ್,
ಹುಳುನಾಗನೇ, ಕೋಣ=brotherಬಸವ. ,ನಿನಗೆ ಇಷ್ಟ ಆಗಿಲ್ಲ ಅಂದ್ರೆ
ಕತ್ತೆ ಮುಂದೆ ಕಿನ್ನರಿ ಅಂತ ಬದ್ಲಾಯಿಸ್ಕೋ.
Since you mentioned Ranjan Darga, just a few comments on him. Ranjan Darga has original insights about Vachana literature and has made appreciable contributions to the advancement of Vachana studies. He was a honest and humanist journalist who never sold himself to politicians and business men. He’s a popular speaker and his popularity cuts across religion and caste. How many of you who make fun of him here can claim to be 1) insightful 2) honest and 3) secular like Ranjan Darga?
How many of you have insights into manu smriti?
How many of you have interacted with brahmins and vaidikas who served the nation
How many if you have opened eyes to the work patriots like chakravarty sulibele are doing. Have u dine a single positive work in your life? Go get a life scum bags
Your language reflects your heart which is a toxic gutter. Who can beat you in the art of licking your own arse! No wonder your tongue is laced with filth. What moral authority you’ve to talk about Ranjan Darga???
“ವೇದಗಳಲ್ಲಿ ಈ ರೀತಿಯ ಅರ್ಥವಿಲ್ಲ”
We can definitely comment on what Vaidikas have been practising. If you consider Pejavar Swami as a Vaidika then obviously he doesn’t believe all are equal; hence he implemented Pankti Bheda in Udupi Math.
Yes. Pejavar Swami is not hundred percent Vedic. He is brought up in traditions which are at variance with the extreme liberalism and humanity that are the hall marks of Veda. But to the extent he is not opposed to Veda and helpless in following the Vedic tenets he cannot be called Anti Vedic. Some years ago while talking in Aryasamaj he expressed that he could not go fully Vedic since he is bound by tradition of the Mutt. But that apart he is far better and more humane than those who keep on opposing him on one pretext or the other.
Definitely can we conclude that Basaveshwar was communal and Castiest based on what Lingayats are doing now. Basava was for formless worship and did not believe birth based caste system. But this is a tall order for the present day Lingayats. Similarly Vedas do not believe in Form worship and caste system is not mentioned at all in Vedas.. But the present day traditional Hindus are totally lost in image worship and casteless society is unthinkable for them. But you cannot conclude the Vedas based on what our Mutts and pontiffs do in this matter.
ಈ ಎಡಬಿಡಂಗಿ ಕಮ್ಮಿನಿಷ್ಟ ಪಡಪೋಷಿಗಳಿಗೆ ಕಾರ್ಯಕಾರಣ ವಿವೇಚಿತ ತಿಳುವಳಿಕೆ ಕೊಡುವುದು waste of time.
ತುರುಕರ ಬಾಲ ಹಿಡಿಯುವ ಬಡ್ಡೆತ್ವು.