ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 30, 2016

14

ದೀಪಾವಳಿಯ ಬೆಳಕಿಗೆ ಶಾಶ್ವತ ಕತ್ತಲೆ ತುಂಬಿದ ಸೈತಾನ

‍ನಿಲುಮೆ ಮೂಲಕ

– ಸಂತೋಷ್ ತಮ್ಮಯ್ಯ

dsc8476_tipu_sultan_mಮಂಡ್ಯದಲ್ಲಿ ಅಕಸ್ಮಾತ್ತಾಗಿ ಪರಿಚಯವಾದ ಒಬ್ಬರು ತನ್ನನ್ನು ಸೂರಜ್ ರಂಗಯ್ಯನ್ ಎಂದು ಹೇಳಿಕೊಂಡರು. ಕನ್ನಡದ್ದಲ್ಲದ ಕನ್ನಡದ ಹೆಸರು. ಕನ್ನಡದಂತೆಯೇ ಕೇಳಿಸುವ ಆ ಹೆಸರಿನ ಮೂಲವನ್ನು ಹೇಳುತ್ತಾ ಹೋದಂತೆ ಅದೊಂದು ಕಥೆಯೇ ಆದೀತು. ಆ ಕಥೆ ಮತ್ತೆಲ್ಲಿಗೋ ತಿರುವನ್ನು ಪಡೆದುಕೊಳ್ಳತೊಡಗಿತು. ಆ ಕಥೆ ಇತಿಹಾಸವಾಯಿತು. ಇತಿಹಾಸ ಭೀಕರತೆಯನ್ನು ಹೇಳಿತು. ಭೀಕರತೆ ಸೂತಕವನ್ನು ಹೇಳಿತು. ಆ ಇತಿಹಾಸ ವಿಚಿತ್ರವಾಗಿತ್ತು. ಅಪರೂಪವಾಗಿತ್ತು. ನೋವಿನಿಂದ ಕೂಡಿತ್ತು. ಆ ಇತಿಹಾಸ, ಭೀಕರತೆ, ನೋವಿನ ಉಳಿಕೆಯಂತೆ ಸೂರಜ್ ರಂಗಯ್ಯನ್ ಕಂಡರು. ಸೂಕ್ಷ್ಮವಾಗಿ ನೋಡಿದರೆ ಇನ್ನೂರು ವರ್ಷಗಳ ಹಿಂದಿನ ನೋವು ಇಂದೂ ಅವರ ಮುಖದಲ್ಲಿ ಇಣುಕುತ್ತಿತ್ತು. ಇತಿಹಾಸವನ್ನು ಹೇಳುತ್ತಾ ಹೇಳುತ್ತಾ ಸೂರಜ್ “ಹಾಗಾಗಿ ನಾವು ಇಂದಿಗೂ ದೀಪಾವಳಿ ಆಚರಿಸುತ್ತಿಲ್ಲ” ಎಂದು ಮುಗಿಸಿದರು. ಸೌಜನ್ಯಕ್ಕೂ ಹಬ್ಬಕ್ಕೆ ಕರೆಯಲಾರದ ಸ್ಥಿತಿ ಅವರದ್ದು. ಅವರು ಮಂಡ್ಯದ ಸದ್ಗಹಸ್ಥರು. ಅತಿ ವಿರಳ ಸಂಖ್ಯೆಯಲ್ಲಿರುವ ಮಂಡಯಂ ಅಯ್ಯಂಗಾರರರು ಎಂಬ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು.

ಅಷ್ಟಕ್ಕೂ ಸೂರಜ್ ರಂಗಯ್ಯನ್ ಹೇಳಿದ್ದು ಇಷ್ಟು.

ಅವರ ಪೂರ್ವಿಜರು ಉತ್ತರದ ತಿರುಪತಿಯಿಂದ ಬಂದ ಶ್ರೀವೈಷ್ಣವರು. ವಿಪರೀತ ಬುದ್ದಿಶಾಲಿಗಳೂ ಸಂಸ್ಕ್ರತದಲ್ಲಿ ಪಂಡಿತರೂ ಆಗಿದ್ದ ಇವರು ಆಡಳಿತಜ್ಞರೂ ಆಗಿದ್ದರು. ಹೀಗೆ ಮೈಸೂರು ಸಂಸ್ಥಾನಕ್ಕೆ ಬಂದ ಇವರ ಬುದ್ಧಿ ಶಕ್ತಿಯ ಮೇಲೆ ಮೈಸೂರು ಒಡೆಯರ ಕಣ್ಣು ಸಹಜವಾಗಿ ಬಿತ್ತು. ಸಂಸ್ಥಾನದ ಅನ್ಯಾನ್ಯ ಕಡೆಗಳಲ್ಲಿ ಮಹಾರಾಜರು ನೆಲೆಗಳನ್ನು ಒದಗಿಸಿದರು. ಅರಸರಿಗೆ ವಿಧೇಯರಾದ ಮಂಡಯಂ ಅಯ್ಯಂಗಾರರು ತಮ್ಮ ಪಾಡಿಗೆ ತಾವು ವಿದ್ಯಾದಾನ ಮಾಡುತ್ತ ಅರ್ಚಕ ವೃತ್ತಿ ಕೈಗೊಳ್ಳುತ್ತಾ ಜೀವನ ಕಂಡುಕೊಂಡರು. ಜೊತೆಜೊತೆಗೆ ಮೈಸೂರು ಸಂಸ್ಥಾನದ ಏಳಿಗೆಗೂ ತಮ್ಮನ್ನು ತೊಡಗಿಸಿಕೊಂಡರು. ಸಂಸ್ಥಾನದಲ್ಲಿ ಕರ್ನಾಟಕಿ ಸಂಸ್ಕ್ರತಿ, ಕಲೆ, ಸಾಹಿತ್ಯ ಕ್ಷೇತ್ರಗಳು ಬೆಳೆಯಲು ಇವರೂ ಕಾರಣರಾದರು. ಸಂಸ್ಥಾನದ ಏಳಿಗೆಗೆ ತಮ್ಮ ಕೈಲಾದ ಕೊಡುಗೆಗಳನ್ನು ನೀಡಿದರು. ಸಂಸ್ಥಾನದ ಪ್ರಮುಖ ಕೇಂದ್ರಗಳಾದ ಶ್ರೀರಂಗಪಟ್ಟಣ, ಮೇಲುಕೋಟೆ, ಮಂಡ್ಯಗಳಲ್ಲಿ ನೆಲೆನಿಂತ ಇವರು ಮೂಲತಃ ತಮಿಳು ಭಾಷಿಕರಾದರೂ ಕ್ರಮೇಣ ಕನ್ನಡಿಗರೇ ಆಗಿಹೋದರು. ತಮ್ಮ ಪ್ರಾಮಾಣಿಕತೆಯಿಂದ, ಸ್ನೇಹಪರ ಗುಣಗಳಿಂದ ಸ್ಥಳೀಯರ ಜೊತೆ ಬೆರೆತರು. ಕನ್ನಡಿಗರೂ ಅವರನ್ನು ಗೌರವಿಸಿ ಸ್ವೀಕರಿಸಿದರು. ಭಾರಧ್ವಾಜ ಗೋತ್ರದ ಇವರು ಧರ್ಮಭೀರುಗಳೂ ಕರ್ನಾಟಕದ ಪ್ರಮುಖ ವೈಷ್ಣವ ಮತಸ್ಥರಾಗಿ ಸಂಸ್ಥಾನದ ಅನ್ಯಾನ್ಯ ಜವಾಬ್ದಾರಿಗಳನ್ನು ಹೊತ್ತು ಬೆಳೆಯುತ್ತಿದ್ದರು.

ಆಗ ತಾನೇ ಮೈಸೂರಿಗೆ ಸಾಬಿಗಳ ಉಪಟಳ ಪ್ರಾರಂಭವಾಗಿತ್ತು. ಹೈದರಾಲಿ ಮೈಸೂರಿನ ಒಡೆಯರನ್ನು ಮೂಲೆಗುಂಪು ಮಾಡಿ ಅವರನ್ನು ಅರಮನೆಗಷ್ಟೇ ಸೀಮಿತಗೊಳಿಸಿದ್ದ. ಹಿತ್ತಾಳೆ ಕಿವಿಯ ಮಹಾರಾಜರು ಹೈದರನನ್ನು ನಂಬಿ ಕೆಟ್ಟಿದ್ದರು. ಆದರೆ ಮಹಾರಾಣಿ ಲಕ್ಷ್ಮಮ್ಮಣ್ಣಿ ಮೊದಲಿನಿಂದಲೂ ಹೈದರಾಲಿಯ ಮೇಲೆ ಒಂದು ಕಣ್ಣಿಟ್ಟೇ ಇದ್ದರು. ಹೈದರನಿಗೆ ತಿಳಿಯದಂತೆ ಬ್ರಿಟಿಷರನ್ನು ಸಂಪರ್ಕಿಸಿದಳು, ಪರಂಪರೆಯನ್ನು ಉಳಿಸಲು ಆಕೆ ಪ್ರಯತ್ನ ಪಡುತ್ತಲೇ ಇದ್ದಳು. ಇನ್ನೊಂದು ಕಡೆ ರಾಜ ಮನೆತನದ ಕುಡಿಗಳು ನಿಗೂಢವಾಗಿ ಸಾವನ್ನಪ್ಪುತ್ತಿದ್ದರು. ಆದರೂ ರಾಣಿ ಪುಟ್ಟ ಮಕ್ಕಳಿಗೆ ಪಟ್ಟ ಕಟ್ಟುತ್ತಲೇ ಇದ್ದಳು. ಸಾಮ್ರಾಜ್ಯ ಉಳಿಸುವ ಎಲ್ಲಾ ಪ್ರಯತ್ನಗಳನ್ನು ಆಕೆ ಮಾಡುತ್ತಿದ್ದಳು. ಹೈದರ್ ಸತ್ತ ಅನಂತರ ಮಗ ಟಿಪ್ಪು ಕಾಲದಲ್ಲಿ ಅರಮನೆಗೆ ಮತ್ತಷ್ಟು ಕಂಟಕಗಳು ಎರಗಿದವು. ಮಹಾರಾಣಿ ಆಗಲೂ ಬ್ರಿಟಿಷರೊಡನೆ ಸಂಪರ್ಕ ಸಾಧಿಸಿದ್ದಳು. ಮಹಾರಾಣಿ ಲಕ್ಷ್ಮಮ್ಮಣ್ಣಿಯ ನಿಗೂಢ ಕಾರ್ಯ ವೈಖರಿಯಿಂದ 1790–92ರಲ್ಲಿ ಮೂರನೇ ಮೈಸೂರು ಯುದ್ದ ನಡೆಯಿತ್ತಲ್ಲದೆ ಟಿಪ್ಪು ಹೀನಾಯವಾಗಿ ಸೋತು ಸುಣ್ಣವಾಗಿದ್ದ. ಅಂಥ ಹೊತ್ತಲ್ಲಿ ಮಹಾರಾಣಿಯ ಬೆನ್ನ ಹಿಂದೆ ಇದ್ದವರು ಈ ಮಂಡಯಂ ಅಯ್ಯಂಗಾರರು.

ತಿರುಮಲ ರಾವ್ ಅಯ್ಯಂಗಾರ್ ಮತ್ತು ನಾರಾಯಣ ರಾವ್ ಅಯ್ಯಂಗಾರ್ ಎಂಬ ಸೋದರರು ಮಹಾರಾಣಿ ಲಕ್ಷ್ಮಮ್ಮಣ್ಣಿಯ ನಿಷ್ಠಾವಂತ ಪ್ರಧಾನರಾಗಿದ್ದರು. ಅರಮನೆಯ ಬಗ್ಗೆ ಭಕ್ತಿ ಇಟ್ಟುಕೊಂಡಿದ್ದ ಇವರು ಮಹಾರಾಣಿ ಮತ್ತು ಬ್ರಿಟಿಷರ ನಡುವೆ ಸೇತುವೆಯಾದರು. ಹೈದರ್-ಟಿಪ್ಪು ಸಾಮ್ರಾಜ್ಯದಲ್ಲಿ ಮಾಡುತ್ತಿದ್ದ ಆವಾಂತರಗಳನ್ನು ಮಹಾರಾಣಿಗೆ ಮುಟ್ಟಿಸುತ್ತಿದ್ದರು. ತಿರುಮಲ ರಾವ್ ಮತ್ತು ನಾರಾಯಣ ರಾವ್ ಅವರ ಸಹಕಾರ ಇಲ್ಲದಿರುತ್ತಿದ್ದರೆ ಮಹಾರಾಣಿ ಲಕ್ಷ್ಮಮ್ಮಣ್ಣಿ ಇತಿಹಾಸದಿಂದ ಎಂದೋ ಮರೆಯಾಗಿ ಹೋಗುತ್ತಿದ್ದಳು. ಮೈಸೂರು ಎಂದೋ ಬಲಿಯಾಗಿ ಹೋಗುತ್ತಿತ್ತು. ಹೀಗೆ ಸಂಸ್ಥಾನವನ್ನು ರಕ್ಷಿಸಿದ ಶ್ರೇಯಸ್ಸು ಈ ಮಂಡಯಂ ಅಯ್ಯಂಗಾರರಿಗೆ ಸಲ್ಲಬೇಕು.

ಹೈದರ್ ಬದುಕಿದ್ದಾಗಲೂ ಆತನಿಗೆ ಇವರಿಬ್ಬರ ಸಂಗತಿ ತಿಳಿದಿತ್ತು. ಅವರಿಗೆ ಒಂದು ಗತಿ ಮಾಡಬೇಕೆಂದು ಚಿಂತಿಸುತ್ತಿದ್ದಾಗಲೇ ಆತ ಸತ್ತಿದ್ದ. ನಂತರ ಅಪ್ಪನಿಗಿಂತ ಕ್ರೂರಿಯೂ ಮತಾಂಧನೂ ಆಗಿದ್ದ ಮಗ ಟಿಪ್ಪು ಬಹುಬೇಗನೆ ಇವರಿಬ್ಬರ ಅರಮನೆ ಭಕ್ತಿಯನ್ನು ಅರಿತಿದ್ದ. ಸಮಯ ಕಾಯುತ್ತಲೇ ಇದ್ದ. ಅಷ್ಟರಲ್ಲಿ ಟಿಪ್ಪುವಿನ ಮೇಲೆ ಬ್ರಿಟಿಷರು ಎರಗಿದ್ದರು. ಯುದ್ದಾನಂತರ ಇವರಿಬ್ಬರನ್ನು ಮುಗಿಸಲೇಬೇಕೆಂದು ಮಹಾ ಕ್ರೌರ್ಯಯೊಂದಕ್ಕೆ “ಶಾಂತಿದೂತ” ಟಿಪ್ಪು ಯೋಜನೆ ಹಾಕಿಕೊಂಡ.

ಅದೊಂದು ನರಕ ಚತುರ್ಥಿಯ ಪುಣ್ಯ ದಿನ. ಮೇಲುಕೋಟೆಯಲ್ಲಿ ಹಬ್ಬ ಕಳೆಗಟ್ಟುತ್ತಿತ್ತು. ಊರಿಗೆ ಊರೇ ಸಿಂಗಾರಗೊಂಡಿತ್ತು. ಚೆಲುವನಾರಾಯಣನ ಸನ್ನಿಧಿಗೆ ಸುತ್ತಲಿನ ಊರ ಜನರು ಬಂದುಹೋಗುತ್ತಿದ್ದರು. ಮೇಲುಕೋಟೆ ಕೇರಿಗಳಲ್ಲಿ ಮಂಡಯಂ ಅಯ್ಯಂಗಾರರೇ ಹೆಚ್ಚಿದ್ದರು. ಟಿಪ್ಪು ಏಕಾಏಕಿ ಅಲ್ಲಿಗೆ ಎರಗಿದ. ಅಯ್ಯಂಗಾರರು ಆಚರಣೆ ನಿಮಿತ್ತ ಓಣಿಗಳಲ್ಲಿ ನೆರೆದಿದ್ದರು. ಮುಸಲ್ಮಾನ ಸೈನ್ಯ ನೆರೆದಿದ್ದ ಅಯ್ಯಂಗಾರರನ್ನು ಸುತ್ತುವರಿತು. ಡಾ.ನರಸಿಂಹನ್ ಎಂಬ ಸಂಶೋಧಕರ ಪ್ರಕಾರ ಅಂದು ನೆರೆದಿದ್ದ ಮಂಡಯಂ ಅಯ್ಯಂಗಾರರ ಸಂಖ್ಯೆ ಸುಮಾರು ೭೦೦.

ಅಯ್ಯಂಗಾರರನ್ನು ಸುತ್ತುವರಿದ ಮುಸಲ್ಮಾನರು ಮೊದಲು ಪ್ರಧಾನ ಸೋದರರ ಸಂಬಂಧಿಗಳನ್ನು ಮುಂದೆ ಬರುವಂತೆ ಆದೇಶಿಸಿತು. ಯಾರೂ ಮುಂದೆ ಬರದಿದಾಗ ಯಾರನ್ನೋ ಎಳೆದು ತರಲಾಯಿತು. ಕುದುರೆ ಮೇಲಿಂದಲೇ ಟಿಪ್ಪು ಕತ್ತಿ ಬೀಸಿದ. ಬ್ರಾಹ್ಮಣನ ತಲೆ ಬಿತ್ತು. ಅದು ಉದ್ಘಾಟನೆ. ಮುಂದೆ ನಡೆದಿದ್ದು ಮಹಾ ಮಾರಣ ಹೋಮ. ಅಟ್ಟಾಡಿಸಿ ಅಯ್ಯಂಗಾರರನ್ನು ಕತ್ತರಿಸಲಾಯಿತು. ತಮ್ಮ ಪ್ರಾಮಾಣಿಕತೆಗೆ, ಅರಮನೆ ಭಕ್ತಿಗೆ ಮಂಡಯಂ ಅಯ್ಯಂಗಾರರು ಪ್ರಾಣ ತೆತ್ತರು. ಹಬ್ಬದ ಸಡಗರ ಸ್ಮಶಾನವಾಗಿ ಬದಲಾಯಿತು. ಬೀದಿ ಬೀದಿಯಲ್ಲಿ ರಕ್ತ ಹರಿಯಿತು. ಮಂಡಯಂ ಅಯ್ಯಂಗಾರರು ಹಬ್ಬಕ್ಕೆ ಸಜ್ಜಾಗಿದ್ದು ಅದೇ ಕೊನೆ. ಹೆಂಗಸರು-ಮಕ್ಕಳನ್ನೂ ತರಿದುಹಾಕಲಾಯಿತು. ಹೆಂಗಸರ ಮಾನ ಸೂರೆ ಮಾಡಲಾಯಿತು. ದೇವಸ್ಥಾನಗಳ ಊರು ಮೇಲುಕೋಟೆ ಮುಸ್ಲಿಮರ ಕ್ರೌರ್ಯದಿಂದ ಸಂಪೂರ್ಣ ಬದಲಾಯಿತು. ಊರಿನ ೨೯ ಕಲ್ಯಾಣಿಗಳಲ್ಲೂ ಹೆಣಗಳು ಕಂಡುಬಂದವು. ಸಂಸ್ಕ್ರತ ಗ್ರಾಮದಲ್ಲಿ ಸಂಸ್ಕ್ರತವೂ ಸತ್ತುಹೋಯಿತು.

ಕಥೆ ಹೇಳುತ್ತಿದ್ದ ಸೂರಜ್ ರಂಗಯ್ಯನ್ ಅಂದು ಮತಾಂಧತೆಗೆ ಬಲಿಯಾದ ಕುಟುಂಬದ ಏಳನೇ ಪೀಳಿಗೆಯವರು. ಪೀಳಿಗೆ ಏಳಾದರೂ ಆ ನೋವು ಇನ್ನೂ ಆ ಮಂಡಯಂ ಅಯ್ಯಂಗಾರರಲ್ಲಿ ಮಾಸಿಲ್ಲ. ಇಂದಿಗೂ ಅವರು ದೀಪಾವಳಿ ಆಚರಿಸಿಕೊಳ್ಳುತ್ತಿಲ್ಲ. ಮಡಿ ಉಡುತ್ತಿಲ್ಲ. ಪಟಾಕಿ ಸಿಡಿಸುತ್ತಿಲ್ಲ. ಹೊಸ ಬಟ್ಟೆ ತೊಡುತ್ತಿಲ್ಲ. ಎಣ್ಣೆಸ್ನಾನ ಮಾಡುತ್ತಿಲ್ಲ. ಪ್ರತೀ ದೀಪಾವಳಿಯೂ ಅವರಿಗೆ ಸೂತಕವೇ.

ಕಥೆ ಹೇಳುತ್ತಿದ್ದವರಲ್ಲೂ ಸೂತಕದ ಛಾಯೆ ಕಾಣುತ್ತಿತ್ತು. ಇಂದು ಸೂರಜ್ ಇಡೀ ಮಂಡ್ಯದಲ್ಲಿ ಇರುವ ಏಕೈಕ ಮಂಡಯಂ ಅಯ್ಯಂಗಾರರು. ಪ್ರತೀ ದೀಪಾವಳಿ ಅವರ ಕುಟುಂಬವನ್ನು ಎರಡು ಶತಮಾನಗಳ ಹಿಂದಿನ ನೋವಿಗೆ ಕೊಂಡೊಯ್ಯುತ್ತದೆ. ಊರಿಗೆ ಊರೇ ದೀಪ ಹೊತ್ತಿಸುವಾಗ ಇವರ ಮನೆಯಲ್ಲಿ ಕತ್ತಲಿರುತ್ತದೆ. ಅವರ ಮನೆಯ ಮಕ್ಕಳು ಪಟಾಕಿಗೆ ಅಳುತ್ತವೆ. ನೆರೆಮನೆಯ ಮಕ್ಕಳು ಹೊಸ ಬಟ್ಟೆ ಉಟ್ಟು ಓಡಾಡುವುದನ್ನು ನೋಡಿ ಅವು ಗಲಾಟೆ ಮಾಡುತ್ತವೆ. ಟಿಪ್ಪು ಕಿತ್ತುಕೊಂಡಿದ್ದು ಎಷ್ಟೊಂದು? ಎರಡು ಶತಮಾನಗಳ ನಂತರವೂ ಅದರ ನೋವು ಮಾಸಿಲ್ಲವೆಂದರೆ ಆತನ ಕ್ರೌರ್ಯ ಎಂಥದ್ದಿರಬಹುದು? ಸೂರಜ್ ಹೇಳಿದ ಕಥೆ ಪಾಠ ಪುಸ್ತಕದಲ್ಲಿ ಸಿಕ್ಕುವುದಿಲ್ಲ. ಅವರದ್ದೇ ಮನೆಯ ಮಕ್ಕಳು ಕೂಡಾ ಟಿಪ್ಪುವನ್ನು ಮೈಸೂರಿನ ಹುಲಿ ಎಂದು ಓದಬೇಕು. ದಸರಾ ಬಂದಾಗಲೂ ಬೇಡಬೇಡವೆಂದರೂ ನೆನಪಾಗುವ ಟಿಪ್ಪು ದೀಪಾವಳಿ ಬಂದಾಗಲೂ ಮರೆಯಾಗುವುದಿಲ್ಲ.

ಇತಿಹಾಸಕಾರರು ಟಿಪ್ಪು ಹುಲಿ ಕೊಂದದ್ದನ್ನು ಕಾಣಲಿಲ್ಲ. ಆದರೂ ಆತ ಹುಲಿಕೊಂದ ಶೂರನೆಂದು ಬರೆದರು. ಆದರೆ ಅಯ್ಯಂಗಾರರನ್ನು ಕೊಂದ ಸಾಕ್ಷಿಗಳಿದ್ದರೂ ಅದನ್ನು ಬರೆಯಲಿಲ್ಲ. ಅಯ್ಯಂಗಾರರನ್ನು ಕೊಂದ ಟಿಪ್ಪು ಹಲವಾರು ವರ್ಷ ಬದುಕಿದ್ದ. ಮೂರನೇ ಮೈಸೂರು ಯುದ್ಧದ ನಂತರ ಅಂದರೆ ಮೇಲುಕೋಟೆ ಹತ್ಯಾಕಾಂಡದ ನಂತರ ಆತನಿಗೆ ಮೈ ಪೂರ್ತಿ ತುರಿಕೆಯ ಕಜ್ಜಿ ಶುರುವಾತು. ಯಾರೋ ಬ್ರಾಹ್ಮಣರು ಅದು ಅಯ್ಯಂಗಾರರನ್ನು ಕೊಂದ ಪಾಪಕ್ಕೆ ಶಿಕ್ಷೆ ಎಂದೂ ಮೇಲುಕೋಟೆ ಚೆಲುವನಾರಾಯಣನಿಗೆ ದಾನ ಮಾಡಬೇಕೆಂದೂ ಟಿಪ್ಪುವಿಗೆ ತಿಳಿಸಿದರು. ಅದರಂತೆ ಟಿಪ್ಪು ತನ್ನ ಕಜ್ಜಿ ವಾಸಿಯಾಗಲು ಮೇಲುಕೋಟೆಗೆ ಪಾತ್ರೆ-ಪಗಡಗಳನ್ನೂ, ಡೋಲು-ಡಮರುಗವನ್ನೂ ದಾನವಾಗಿ ನೀಡಿದ. ಆದರೆ ಕೊಂದ ಪಾಪ ದಾನದಿಂದ ಪರಿಹಾರವಾಗುವುದೇ? ಕೆಲವೇ ದಿನಗಳಲ್ಲಿ ನಾಲ್ಕನೆ ಮೈಸೂರು ಯುದ್ಧ ನಡೆತು. ಟಿಪ್ಪು ಬೀದಿ ನಾಯಂತೆ ಸತ್ತ. ವಿಪರ್ಯಾಸವೆಂದರೆ ಇಂದು ಇತಿಹಾಸ ಪುಸ್ತಕದಲ್ಲಿ ಮೇಲುಕೋಟೆಗೆ ಕೊಟ್ಟ ದಾನದ ಉಲ್ಲೇಖಗಳು ಮಾತ್ರ ಸಿಗುತ್ತವೆ. ಆದರೆ ಅಯ್ಯಂಗಾರರ ಮಾರಣಹೋಮ, ಟಿಪ್ಪುವಿನ ಕಜ್ಜಿಯ ಉಲ್ಲೇಖಗಳಿಲ್ಲ!

ಈ ವರ್ಷ ಕರ್ನಾಟಕ ಸರ್ಕಾರ ಈ ಮಂಡಯಂ ಅಯ್ಯಂಗಾರರಿಗೆ ಡಬಲ್ ಆಫರ್ ನೀಡಿದೆ. ಹೇಗೂ ಈ ಅಯ್ಯಂಗಾರಿಗಳಿಗೆ ದೀಪಾವಳಿಯಂತೂ ಇಲ್ಲ. ಅದಾಗಿ ಹತ್ತು ದಿನಗಳಲ್ಲೇ ಕಡ್ಡಾಯವಾಗಿ ಅವರ ದೀಪಾವಳಿ ನಿಲ್ಲಿಸಿದವನ ಬರ್ತ್ ಡೇ ಆಚರಣೆ!

ಮತ್ತೆ ಟಿಪ್ಪು ಜಯಂತಿ ಬರುತ್ತಿದೆ. “ದೇಶಪ್ರೇಮಿ”ಯ ಆಚರಣೆಯಲ್ಲಿ ತಪ್ಪೇನು ಎಂದು ರಾಜ್ಯದ ಮುಖ್ಯಮಂತ್ರಿಯೇ ಪ್ರಶ್ನಿಸುತ್ತಿದ್ದಾರೆ. ಸಾಹಿತಿಗಳು, ಸರ್ಕಾರಿ ಕೃಪಾಪೋಷಿತ ಬುದ್ಧಿಜೀವಿಗಳು ಫ್ರೆಂಚ್ ಪುಸ್ತಕಗಳನ್ನು ತೆರೆದು ಭಾಷಣಕ್ಕೆ ಸಿದ್ಧರಾಗುತ್ತಿದ್ದಾರೆ. ಇವರಿಗೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಷಣ ಮಾಡಿ ಇಲಾಖೆಗಳಿಂದ ಟಿಪ್ಸು ಪಡೆಯುವ ತವಕ. ಇವರು ಶತಾಯಗತಾಯ ಟಿಪ್ಪುವನ್ನು ಸಮರ್ಥಿಸುವವರು. ಅಂದರೆ ಸಕ್ರೀಯ ಬುದ್ಧಿಜೀವಿಗಳು.

ರಾಜ್ಯದಲ್ಲಿ ಇನ್ನೂ ಒಂದು ವರ್ಗದ ಬುದ್ಧಿಜೀವಿಗಳಿದ್ದಾರೆ. ಅವರು ಗಾಳಿಬಂದ ದಿಕ್ಕಿಗೆ ತೂರಿಕೊಳ್ಳುವವರು. ಸಕ್ರೀಯ ಬುದ್ಧಿಜೀವಿಗಳ ಭಾಷಣ ಕೇಳಿ ಟಿಪ್ಪುವನ್ನು ಹೊಗಳುವವರು. “ಯಾವ ರಾಜನ ಕಾಲದಲ್ಲಿ ತಾನೇ ಸಾಮಾನ್ಯರು ಸತ್ತಿಲ್ಲ” ಎನ್ನುವವರು, ಆತನ ಸುಧಾರಣೆಯ ಬೊಗಳೆಗಳನ್ನೆಲ್ಲಾ ಹಿಂದೆ ಮುಂದೆ ಚಿಂತಿಸದೆ ಒಪ್ಪಿಬಿಡುವ ಮೂರ್ಖರು. ಈ ಎರಡನೆ ವರ್ಗದ ಜನ ಒಂದು ಮಾತನ್ನಂತೂ ತಪ್ಪದೆ ಆಡುತ್ತಾರೆ “ಟಿಪ್ಪು ನಾಯರ್ ಗಳನ್ನು, ಕೊಡವರನ್ನು ಕೊಂದ. ಆದರೆ ಬ್ರಾಹ್ಮಣರು ಮಾತ್ರ ಎಲ್ಲೂ ಸಾಯಲಿಲ್ಲ ಏಕೆಂದರೆ ಟಿಪ್ಪು ಕಾಸು ಕೊಟ್ಟು ಬ್ರಾಹ್ಮಣರನ್ನು ಸಾಕಿಕೊಂಡಿದ್ದ” ಎನ್ನುವ ವಿತಂಡವಾದಿಗಳು.

14 ಟಿಪ್ಪಣಿಗಳು Post a comment
  1. Punith
    ಆಕ್ಟೋ 31 2016

    great information ..thank u

    ಉತ್ತರ
  2. Goutham
    ನವೆಂ 1 2016

    ದಿವಾನ್ ಪೂರ್ಣಯ್ಯನವರು ಟಿಪ್ಪುವಿನ ಬಳಿ ಮಂತ್ರಿಯಾಗಿದ್ದರು ಎಂಬುದು ನಿಜ . ಅಷ್ಟಕ್ಕೆ “ಟಿಪ್ಪು ಕಾಸು ಕೊಟ್ಟು ಬ್ರಾಹ್ಮಣರನ್ನು ಸಾಕಿಕೊಂಡಿದ್ದ” ಎಂದು ಹಗುರವಾಗಿ ಮಾತನಾಡುವುದು ತಪ್ಪು

    ಉತ್ತರ
    • ಶೆಟ್ಟಿನಾಗ ಶೇ.
      ನವೆಂ 2 2016

      ಕಾಸು ಕೊಟ್ಟವರ ಕಾಲಿಗೆ ಬೀಳುವ, ಕಾಸು ಕೊಡದವರ ಕಾಲನ್ನು ಎಳೆದು ಬೀಳಿಸುವ “ಆ” ಜನ ಕಾಸು ಕೊಡದಿದ್ದರೆ ಟಿಪ್ಪುವಿನ ಸೇವೆಯಲ್ಲಿರುತ್ತಿದ್ದರೆ ಎಂಬುದೂ ಒಂದು ಪ್ರಶ್ನೆ!

      ಉತ್ತರ
  3. ಶೆಟ್ಟಿನಾಗ ಶೇ.
    ನವೆಂ 2 2016

    ಟಿಪ್ಪು ಸಾಹೇಬ್ ಅವರ ಜಯಂತಿಯನ್ನು ಸರಕಾರ ಆಚರಿಸದಂತೆ ಒತ್ತಡ ಹೇರಲು ಹಿಂದುತ್ವವಾದಿಗಳು ಸುಲ್ತಾನರ ತಥಾಕಥಿತ ಕ್ರೌರ್ಯದ ನಯೇ ನಯೇ ಕಹಾನಿಗಳನ್ನು ಹೊಸೆಯುತ್ತಿದ್ದಾರೆ. ಮೇಲುಕೋಟೆಯಲ್ಲಿ ಅಯ್ಯಂಗಾರ್ ನರಮೇಧ ನಡೆಯಿತು ಎಂಬುದು ಸತ್ಯವೇ ಆಗಿದ್ದರೆ, ಸುಲ್ತಾನರು ಮೇಲುಕೋಟೆಯ ದೇವಸ್ಥಾನವನ್ನೇಕೆ ಭಗ್ನಗೊಳಿಸದೆ ಹಾಗೆ ಬಿಟ್ಟರು, ಹಾಗೂ ಅದರ ಪೌರೋಹಿತ್ಯವನ್ನು ಅಯ್ಯಂಗಾರ್ ಜಾತಿಯ ಜನರ ವಶದಲ್ಲೇ ಇಟ್ಟರು? ಇನ್ನೂರು ವರ್ಷಗಳ ಹಿಂದಿನ “ನೋವು” ಇಂದೂ ಮುಖದಲ್ಲಿ ಹೊತ್ತು ತಿರುಗುವ ಸೂರಜ್ ರಂಗಯ್ಯನ್ ಅವರೇ ಮೇಲುಕೋಟೆ ದೇವಸ್ಥಾನದಲ್ಲಿ ಸಹಸ್ರಾರು ವರ್ಷಗಳ ಅವಮಾನದಿಂದ ನೊಂದ ದಲಿತರಿಗೆ ಪ್ರವೇಶವುಂಟೆ?

    ಉತ್ತರ
    • Ckvmurthy
      ನವೆಂ 2 2016

      In melukote everyday anybody ,irrespective of their cast and creed can visit and can do pooja.It is monitored by mujrai department.Without knowing things people talk non sense and culminate the harmony of society.

      ಉತ್ತರ
      • ಶೆಟ್ಟಿನಾಗ ಶೇ.
        ನವೆಂ 2 2016

        ಮುಜರಾಯಿ ಇಲಾಖೆಯ ವಶಕ್ಕೆ ಬರುವ ಪೂರ್ವದಲ್ಲಿ ದಲಿತರಿಗೆ ಪ್ರವೇಶವಿತ್ತೋ?

        ಉತ್ತರ
      • ಶೆಟ್ಟಿನಾಗ ಶೇ.
        ನವೆಂ 2 2016

        Any answer for these question too please?

        ಮೇಲುಕೋಟೆಯಲ್ಲಿ ಅಯ್ಯಂಗಾರ್ ನರಮೇಧ ನಡೆಯಿತು ಎಂಬುದು ಸತ್ಯವೇ ಆಗಿದ್ದರೆ, ಸುಲ್ತಾನರು ಮೇಲುಕೋಟೆಯ ದೇವಸ್ಥಾನವನ್ನೇಕೆ ಭಗ್ನಗೊಳಿಸದೆ ಹಾಗೆ ಬಿಟ್ಟರು, ಹಾಗೂ ಅದರ ಪೌರೋಹಿತ್ಯವನ್ನು ಅಯ್ಯಂಗಾರ್ ಜಾತಿಯ ಜನರ ವಶದಲ್ಲೇ ಇಟ್ಟರು?

        ಉತ್ತರ
        • Ckvmurthy
          ನವೆಂ 2 2016

          Because Melukote was nearer to Mysore,and some daliths of nearby melukote and other major cast were staunch believers of diety of Melukote since from Ramanuja period, i.e,from 12 th century he had no metre touch the temple.Like the present day situation,other cast people were not interested in the thanklessjob of pujaris,he handedover it to them with the dire consequences.Brhamins,less in number,without having muscle power resorted to the unwanted poojari job for their bread and butter.Becuase they were not landlords at that time.Their needs were also limited to two spare meals.Dalita,shudra,brhamana, all these people were peacefully existed centuries in this country by doing their assigned jobs without any grumbling.The leftists,perverted class of so called intelluctals have created and ruing the country by sowing seeds of hatredness in the i moment mass.They will not realise until their annihilation.Plese think positively,Donot put sover inthe milk of united society.

          ಉತ್ತರ
          • ಶೆಟ್ಟಿನಾಗ ಶೇ.
            ನವೆಂ 3 2016

            ಹಹಹ! ಕೇಳುವವರಿದ್ದರೆ ಚೆನ್ನಾಗಿ ಕತೆ ಹೇಳುತ್ತೀರಿ ನೀವು ಮೂರ್ತಿಗಳೇ!

            ಉತ್ತರ
            • Ckvmurthy
              ನವೆಂ 3 2016

              It is bitter for the budhijivs who acquired knowledge by the great Yellow “JankishPatrike”.Becuase they donot read books.or time refer books or writings of great historiens.There main reference is the above document. Hence they feel uncomfortable for truth.

              ಉತ್ತರ
              • ಶೆಟ್ಟಿನಾಗ ಶೇ.
                ನವೆಂ 3 2016

                ಹೌದು ರಾಯರೇ, ರಾಮಚಂದ್ರಾಪುರ ಮಠದವರ ಮಾಸಿಕ ಪತ್ರಿಕೆ ಬಿಟ್ಟರೆ ಮಿಕ್ಕೆಲ್ಲವೂ ಜಂಕ್ ಪತ್ರಿಕೆಗಳೇ! ಹಿಂದಿನ ಇಂದಿನ ಸ್ವಾಮಿಗಳ ಜೀವನಚರಿತ್ರೆಯನ್ನು ಎಲ್ಲಾ ಡೀಟೈಲ್ ಒಂದಿಗೆ ಅದರಲ್ಲಿ ಸರಣಿಯಾಗಿ ಪ್ರಕಟಿಸುತ್ತಿದ್ದಾರಾ ಫಾರ್ ನಾಲೆಜ್ ಸೇಕ್? ಅವೈದಿಕರುಗಳಾದ ನಾವೂ ಆ ಪತ್ರಿಕೆಗೆ ಚಂದಾದಾರ ಆಗಲು ಅವಕಾಶವಿದೆಯಾ? ಅಥವಾ ಕೇವಲ ಸ್ಮಾರ್ತ ವೈದಿಕರಿಗೆ ಮಾತ್ರ ಚಂದಾಭಾಗ್ಯವಾ?

                ಉತ್ತರ
                • Ckvmurthy
                  ನವೆಂ 3 2016

                  The verdict proves how the yellow papers are publishing false news.That is why the ciculation of them has reduced _0.Such publishers are leading life on roll call.

                  ಉತ್ತರ
  4. Ckvmurthy
    ನವೆಂ 6 2016

    The followers,enriched by their knowledge by writings of great Burdeshbeedikattu, and JankishPatrike have no answer for genuine facts.Hit and runners.

    ಉತ್ತರ
    • ಶೆಟ್ಟಿನಾಗ ಶೇ.
      ನವೆಂ 7 2016

      ತಮ್ಮ ಮಿತಿಮೀರಿದ ಅಜ್ಞಾನಕ್ಕೆ ನಗಬೇಕೋ ಅಳಬೇಕೋ ತಿಳಿಯದಾಗಿದೆ ಬ್ರಾಹ್ಮಣ್ಯದ ನವವಕ್ತಾರರೆ!

      ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments