ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 4, 2016

7

ಕಲೆಕ್ಷನ್ ಹಣ ಹಂಚಿಕೆ ವಿಚಾರಕ್ಕೆ ಗಂಜಿ ಚಲೋ ನಾಯಕರ ಮಾರಾಮಾರಿ: ಐವರಿಗೆ ಗಾಯ (ಸುಳ್ಸುದ್ದಿ)

‍ನಿಲುಮೆ ಮೂಲಕ

– ಪ್ರವೀಣ್ ಕುಮಾರ್, ಮಾವಿನಕಾಡು

%e0%b2%ae%e0%b2%be%e0%b2%b0%e0%b2%be%e0%b2%ae%e0%b2%be%e0%b2%b0%e0%b2%bfಕೆಲವು ದಿನಗಳ ಹಿಂದೆ “ಗಂಜಿಗಾಗಿ ಚಲೋ” ಎನ್ನುವ ಕಾರ್ಯಕ್ರಮ ಮಾಡಿದ್ದ ತಂಡವೊಂದು ಆ ಕಾರ್ಯಕ್ರಮಕ್ಕೆಂದು ಕಲೆಕ್ಷನ್ ಮಾಡಿದ್ದ ಹಣವನ್ನು ಹಂಚಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಕಿರಿಕ್ ಮಾಡಿಕೊಂಡು ಪರಸ್ಪರ ಬಡಿದಾಡಿ ಆಸ್ಪತ್ರೆ ಸೇರಿದ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ.

ಘಟನೆಯ ಹಿನ್ನೆಲೆ: ಕೆಲವು ದಿನಗಳ ಹಿಂದೆ ನಕ್ಸಲ್ ಹೋರಾಟಗಾರರು, ಅನ್ಯ ಕೋಮಿನ ಕೆಲವರ ಬೆಂಬಲದೊಂದಿಗೆ ಕೆಲ ದಪಹೋಗಾರರ ಜೊತೆ ಸೇರಿ ಗಂಜಿಗಾಗಿ ಚಲೋ ಎನ್ನುವ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದರು. ಕಾರ್ಯಕ್ರಮಕ್ಕೆ ಒಂದು ಲಕ್ಷ ಜನರನ್ನು ಸೇರಿಸುವುದಾಗಿ ಹೇಳಿಕೊಂಡಿದ್ದ ಆ ಹೋರಾಟಗಾರರು ತಳಮಟ್ಟದ ಶೋಷಿತರಷ್ಟೇ ಅಲ್ಲದೇ ರಾಜಕಾರಣಿಗಳೂ ಸೇರಿದಂತೆ ಹಲವಾರು ಜನರಿಂದ ರೂ.500 ರಿಂದ ಐವತ್ತು ಸಾವಿರದವರೆಗೆ ಹಣವನ್ನು ಕಲೆಕ್ಷನ್ ಮಾಡಿದ್ದರು. ಕಲೆಕ್ಷನ್ ಆದ ಆ ಹಣದ ಒಟ್ಟು ಮೊತ್ತ ಸುಮಾರು ಎರಡು ಕೋಟಿಗೂ ಮೀರಿತ್ತು. ಆದರೆ ಒಂದು ಲಕ್ಷ ಜನರು ಸೇರುತ್ತಾರೆ ಎಂದು ಬಿಂಬಿತವಾಗಿದ್ದ ಆ ಕಾರ್ಯಕ್ರಮಕ್ಕೆ ಸೇರಿದ್ದು ಕೇವಲ 632 ಜನ ಮಾತ್ರ! ಕಾರ್ಯಕ್ರಮಕ್ಕೆ ಖರ್ಚಾಗಿದ್ದು ಕೇವಲ ನಾಲ್ಕೂವರೆ ಲಕ್ಷಗಳು! ಇದರಿಂದಾಗಿ ಬರೋಬ್ಬರಿ ಎರಡು ಕೋಟಿ ರೂಪಾಯಿಗಳಷ್ಟು ಹಣ ಹೋರಾಟಗಾರರ ಬಳಿಯೇ ಉಳಿಯಿತು. ಇದನ್ನು ಮೊದಲೇ ಯೋಚಿಸಿದ್ದ ಕಾರ್ಯಕ್ರಮದ ಆಯೋಜಕರಾದ ಹೋರಾಟಗಾರರು ಮುಂದಿನ ವಾರ ಎಲ್ಲರೂ ತುಮಕೂರು ರಸ್ತೆಯ “ಫಿಶ್ ಲ್ಯಾಂಡ್ ಢಾಬಾ” ದಲ್ಲಿ ಕೂತು ಹಂಚಿಕೊಳ್ಳುವುದೆಂದು ತೀರ್ಮಾನಿಸಿ ಕಾರ್ಯಕ್ರಮಕ್ಕೆ ತಮ್ಮ ತನು-ಮನವನ್ನು ಅರ್ಪಿಸಿದ್ದ ರಾಜಕಾರಣಿಯೊಬ್ಬರ ಸಲಹೆಗಾರರ ಕೈಲಿ ಆ ಹಣವನ್ನು ಕೊಟ್ಟು ತಮ್ಮ ತಮ್ಮ ಮನೆಗಳನ್ನು ತಲುಪಿದ್ದರು.

ಮೊದಲೇ ನಿಶ್ಚಯಿಸಿದ್ದಂತೆ ಮೊನ್ನೆ ಗುರುವಾರದಂದು ರಾತ್ರಿ ಹತ್ತು ಗಂಟೆಯ ಸುಮಾರಿಗೆ ಎಲ್ಲರೂ ತುಮಕೂರು ರಸ್ತೆಯ “ಫಿಶ್ ಲ್ಯಾಂಡ್ ಢಾಬಾ” ದಲ್ಲಿ ಸಲಹೆಗಾರರ ಬಳಿಯಿದ್ದ ಆ ಹಣವನ್ನು ಹಂಚಿಕೊಳ್ಳಲು ಸೇರಿದ್ದರು. ಇಷ್ಟ ಬಂದಷ್ಟು ಮೀನು ಖಾದ್ಯ ಸೇವಿಸಿ ಕಂಠ ಮಟ್ಟ ಕುಡಿದಾದ ನಂತರ, ಕಾರ್ಯಕ್ರಮದ ಪ್ರಮುಖ ರೂವಾರಿ ನಾನೇ ಆಗಿರುವುದರಿಂದ ಐವತ್ತು ಲಕ್ಷ ರೂ.ಗಳನ್ನೂ ನಾನು ಇಟ್ಟುಕೊಂಡಿದ್ದೇನೆ. ಉಳಿದ ಒಂದೂವರೆ ಕೋಟಿ ಹಣವನ್ನು ನೀವೆಲ್ಲಾ ಹಂಚಿಕೊಳ್ಳಿ ಎಂದು ಹೇಳಿ ಯಾರ ಉತ್ತರಕ್ಕೂ ಕಾಯದೇ ಸಲಹೆಗಾರರು ಹೊರಟು ಹೋದರು. ಅವರನ್ನು ವಿರೋಧಿಸಿದರೆ ತಮ್ಮ ಅಧಿಕಾರ ಬಳಸಿ ನಮ್ಮನ್ನು ಜೈಲಿಗಟ್ಟಬಹುದು ಎಂದು ಹೆದರಿದ ಇತರ ಹೋರಾಟಗಾರರು ಆಕ್ಷೇಪವೆತ್ತಲಿಲ್ಲ.

ಅದಾದ ನಂತರ ತಾನೊಬ್ಬ ಪತ್ರಕರ್ತೆ ಎಂದು ಹೇಳಿಕೊಳ್ಳುವ ಗೌಸಿಯಾ ಲಿಂಗೇಶ್ ಎಂಬಾಕೆ ಒಂದೂವರೆ ಕೋಟಿಯಲ್ಲಿ ನನಗೆ ಮೂವತ್ತೈದು ಲಕ್ಷ ಸಿಗಬೇಕು ಎಂದು ಪಟ್ಟು ಹಿಡಿದಳು. ಇದರಿಂದ ಕೆರಳಿದ ಮತ್ತೊಬ್ಬ ಪ್ರಮುಖ ದಪಹೋಗಾರ ಬಾಕ್ಸರ್ ಸಾಧು ಎನ್ನುವವರು ಆಕೆಯ ತಲೆಗೆ ಬಿಯರ್ ಬಾಟಲಿಯಿಂದ ಹೊಡೆಯಲು ಮುಂದಾದರು. ಕೂಡಲೇ ಗೌಸಿಯಾ ಲಿಂಗೇಶ್ ಅವರ ಶಿಷ್ಯರಾದ ಇನ್ನೂರ್ ಶ್ರೀಧರ್ ಎನ್ನುವ ನಕ್ಸಲರೊಬ್ಬರು ತಮ್ಮಲ್ಲಿದ್ದ ಹಳೆಯ ಅಕ್ರಮ ಬಂದೂಕನ್ನು ಹೊರಗೆಳೆದು ಮೂರು ಸುತ್ತು ಗುಂಡು ಹಾರಿಸಿಯೇ ಬಿಟ್ಟರು. ಇನ್ನೂರ್ ಶ್ರೀಧರ್ ಬಂದೂಕಿನಿಂದ ಹಾರಿದ ಒಂದು ಗುಂಡು ಬಾಕ್ಸರ್ ಸಾಧುವಿನ ಎಡ ಭುಜವನ್ನು ಸವರಿಕೊಂಡು ಹೋಗಿ ಝಲ್ ಎಂದು ರಕ್ತ ಚಿಮ್ಮಿತು.ಆಗ ಅಲ್ಲಿ ಗುಂಡು ಹಾಕುತ್ತಿದ್ದ ಗಿರಾಕಿಗಳೆಲ್ಲಾ ಆ ಗುಂಡಿನ ಶಬ್ದಕ್ಕೆ ಹೆದರಿ ದಿಕ್ಕಾಪಾಲಾಗಿ ಓಡಿದರು.

ನಕ್ಸಲ್ ನಾಯಕರು ಮತ್ತು ದಪಹೋಗಾರರ ನಡುವೆ ಕಿತ್ತಾಟ ಪ್ರಾರಂಭವಾದ ನಂತರ ಅಲ್ಲೇ ಖುರ್ಚಿಯ ಮೇಲೆ ಇಟ್ಟಿದ್ದ ದುಡ್ಡಿನ ಚೀಲದಿಂದ ನೋಟುಗಳು ಢಾಬಾದ ಎಲ್ಲ ಕಡೆ ಹಾರಾಡತೊಡಗಿದವು. ಹಣ ಮಾಡುವುದಕ್ಕಾಗಿಯೇ ನಾನು ನನ್ನ ಧರ್ಮವನ್ನೇ ಬದಲಾಯಿಸಿಕೊಂಡಿದ್ದೇನೆ. ಈ ಕಾರ್ಯಕ್ರಮಕ್ಕೂ ನಾನು ಬಹಳಷ್ಟು ಮಣ್ಣು ಹೊತ್ತಿದ್ದೇನೆ. ಆದ್ದರಿಂದ ನನಗೆ ಕನಿಷ್ಠ ಇಪ್ಪತ್ತು ಲಕ್ಷ ಹಣ ಬೇಕೇಬೇಕು ಎಂದು ಪಾಟಿಕಳ್ಳ ಎನ್ನುವ ಹುಡುಗ ಚೆಲ್ಲಾಡಿದ್ದ ಹಣವನ್ನೆಲ್ಲಾ ಎತ್ತಿಕೊಂಡು ತಾನು ತಂದಿದ್ದ ತೊಟ್ಟೆಗೆ ತುಂಬಲು ಪ್ರಾರಂಭಿಸಿದ. ಇದನ್ನು ಕಂಡ ನಕ್ಸಲ್ ಮತ್ತು ದಪಹೋಗಾರರಿಬ್ಬರಿಗೂ ‘ಲಾ’ ಹೇಳಿಕೊಟ್ಟು ಹಣ ಮಾಡುವ ಕಾರ್ಯಕ್ರಮದ ಯಶಸ್ಸಿಗೆ ಅತೀ ಹೆಚ್ಚು ಬೆವರು ಸುರಿಸಿದ ಹೋಗಾಚೇ ಜೋಯ್ಸ ಎನ್ನುವ ಮಹಿಳೆ ತನ್ನ ವೇಲನ್ನು ಪಾಟಿಕಳ್ಳನ ಕುತ್ತಿಗೆಗೆ ಬಿಗಿದು, ಗಂಟೆಗೊಮ್ಮೆ ಘಳಿಗೆಗೊಮ್ಮೆ ತತ್ವ-ಸಿದ್ಧಾಂತಗಳನ್ನು ಬದಲಾಯಿಸುವ ನನಗೇ ಇಲ್ಲದ ಇಪ್ಪತ್ತು ಲಕ್ಷ ನಿನ್ನೆ ಮೊನ್ನೆ ಬಂದ ನಿನಗೆ ಹೇಗೆ ಕೊಡಲು ಸಾಧ್ಯ ಎನ್ನುತ್ತಾ ತಲೆಯ ಮೇಲೆ ಬಲವಾಗಿ ಗುದ್ದಿದಳು, ಒದೆ ಬಿದ್ದ ರಭಸಕ್ಕೆ ಪಾಟಿಕಳ್ಳನ ಕಿವಿಯಿಂದ ರಕ್ತ ಒಸರಲಾರಂಭಿಸಿತು. ರಕ್ತವನ್ನು ಕಂಡ ನಕ್ಸಲರು LOL Salam ಎಂದು ಕಿಟಾರನೆ ಕಿರುಚಿದ್ದಾಗಿ ವರದಿಯಾಗಿದೆ.

ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಗಮನಿಸಿದ ಢಾಬಾ ಮಾಲೀಕ ಕೂಡಲೇ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಸಣ್ಣ ಪುಟ್ಟ ಗಾಯಾಳುಗಳನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದ್ದು ತೀವ್ರವಾಗಿ ಗಾಯಗೊಂಡ ಇಬ್ಬರನ್ನು ನಿಮ್ಹಾನ್ಸ್ ನ ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸ್ಥಳದಲ್ಲಿ ಸಿಕ್ಕಿದ ಒಂದೂವರೆ ಕೋಟಿ ರೂ.ಗಳನ್ನು ಸಲಹೆಗಾರರ ವಶಕ್ಕೆ ಒಪ್ಪಿಸಲಾಗಿದ್ದು ದೂರು ನೀಡಿದ್ದ “ಫಿಶ್ ಲ್ಯಾಂಡ್ ಢಾಬಾ” ಮಾಲೀಕನ ಮೇಲೆ ಕೊಲೆ ಯತ್ನ, ಸಂಚು, ಗಲಭೆಗೆ ಪ್ರಚೋದನೆ ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಹೊರಿಸಿ ದೂರು ದಾಖಲಿಸಿಕೊಳ್ಳಲಾಗಿದೆ. ತನಿಖೆ ಪ್ರಗತಿಯಲ್ಲಿದೆ.

ವಿ.ಸೂ: ಇದೊಂದು ಕಾಲ್ಪನಿಕ ಸುದ್ದಿ(ಸುಳ್ಸುದ್ದಿ)ಯಾಗಿದ್ದು ಇದು ಕೇವಲ ಮನರಂಜನೆಗಾಗಿ ಮಾತ್ರ. ಇದರಲ್ಲಿ ಯಾವುದೇ ವ್ಯಕ್ತಿ ಅಥವಾ ಸಂಘಟನೆಗಳ ಹೋಲಿಕೆಗಳು ಕಂಡು ಬಂದರೆ ಅದು ಕೇವಲ ಕಾಕತಾಳೀಯ ಮಾತ್ರ.

ಚಿತ್ರಕೃಪೆ :Cliparts.com

7 ಟಿಪ್ಪಣಿಗಳು Post a comment
 1. ನವೆಂ 4 2016

  ಕಣ್ ಮುಂದೆ ನಡೆದ ಹಾಗಿದೆ. 😀

  ಉತ್ತರ
 2. sudarshana gururajarao
  ನವೆಂ 5 2016

  ಆ ಜಗಳ ನಡೆಯುವಲ್ಲಿ ಮೂಲೆಯಲ್ಲಿ ಅಳಿದುಳಿದ ಎಂಜಲೂಟದ ಆಸೆಗೆ ಜೊಲ್ಲು ಸುರಿಸಿ ನಿಂತದ್ದ ನಾಗಶೆಟ್ಟಿ ಎಂಬ ನಾಯಿಯನ್ನು ಲೇಖಕರು ಕಡೆಗಣಿಸಿದ್ದಕ್ಕಾಗಿ ಸಮಾನತೆ ಸಂಹಿತೆಯ ಅಡಿಯಲ್ಲಿ ಕ್ಷಮೆ ಕೇಳತಕ್ಕದ್ದು.

  ಉತ್ತರ
  • ಶೆಟ್ಟಿನಾಗ ಶೇ.
   ನವೆಂ 7 2016

   ಬಾಬಾಸಾಹೇಬ್, ಪುಲೆ, ಪೆರಿಯಾರ್, ಕಾನ್ಶೀರಾಂ, ಮಾಯಾವತಿ ಮೊದಲಾದ ಸಾಮಾಜಿಕ ಕ್ರಾಂತಿಯ ಹರಿಕಾರನ್ನು ಬ್ರಾಹ್ಮಣ್ಯದ ವಾರಸುದಾರು ಇದೆ ರೀತಿ ಅವಮಾನಕರವಾಗಿ ನಿಂದಿಸಿದ್ದರೂ ಅವರು ಎದೆಗುಂದದೆ ತಮ್ಮ ಹೋರಾಟವನ್ನು ನಿಲ್ಲಿಸಲಿಲ್ಲ. ನಿಲುಮೆಯಲ್ಲೂ ಸಾಮಾಜಿಕ ನ್ಯಾಯದ ಬಾವುಟವನ್ನು ಎತ್ತಿ ಹಿಡಿಯುವ ಕೆಲಸವನ್ನು ಮುಂದುವರೆಸೋಣ ಸ್ನೇಹಿತರೆ. ಲಂಡನ್ನಿನಲ್ಲಿ ಬೀಫ್ ತಿಂದು ನಿಲುಮೆಯಲ್ಲಿ ಹೂಸು ಬಿಡುವ ಥರ್ಡ್ ರೇಟ್ ಟ್ರಾಲ್ ವಟುಗಳಿಗೆ ಜಾಡಿಸಿ ಒದೆಯೋಣ.

   ಉತ್ತರ
 3. ಶೆಟ್ಟಿನಾಗ ಶೇ.
  ನವೆಂ 7 2016

  ಪ್ರವೀಣ ಕುಮಾರ ಅವರೇ, ನಿಮ್ಮ ಸದರಿ ಬರಹ ತೀಟೆ ತೀರಿಸಕೊಳ್ಳುವುದಕ್ಕೆ ಬರೆದ ಹಾಸ್ಯಾಸ್ಪದ ಬರಹವಾಗಿದ್ದು ಮೌಲಿಕವಾಗಿ ಸೊನ್ನೆಯಾಗಿದೆ. ಇನ್ನಾದರೂ ಸುಧಾರಿಸಿ, ಸುಳ್ಳು ಸುದ್ದಿ ಬಿಡಿ ಸಾಮಾಜಿಕ ನ್ಯಾಯದ ಬಗ್ಗೆ ವಸ್ತುನಿಷ್ಠ ಬರಹಗಳನ್ನು ಕೊಡಿ.

  ಉತ್ತರ
  • ಪ್ರವೀಣ್ ಕುಮಾರ್ ಮಾವಿನಕಾಡು
   ನವೆಂ 8 2016

   ಕೇವಲ ಮನರಂಜನೆಗಾಗಿ ಬರೆದ ಹಾಸ್ಯ ಬರಹ ಎನ್ನುವ ಸೂಚನೆಯನ್ನು ಕೊಟ್ಟ ಮೇಲೂ ನೀವು ಇಲ್ಲಿ ಬಂದು ಇದನ್ನು ಹಾಸ್ಯಾಸ್ಪದ ಬರಹ,ಮೌಲಿಕವಾಗಿ ಸೊನ್ನೆ ಎನ್ನುತ್ತಿರುವುದನ್ನು ನೋಡಿದರೆ ನಿಮ್ಮ ತೀಟೆ ತೀರಿಸಿಕೊಳ್ಳುವುದಕ್ಕೋಸ್ಕರವೇ ನೀವಿಲ್ಲಿ ಕಾಮೆಂಟ್ ಮಾಡಿದಂತಿದೆ.

   ಅಷ್ಟಕ್ಕೂ ನನಗೆ ಇಂಥದ್ದನ್ನೇ ಬರೆಯಿರಿ ಎನ್ನಲು ತಾವು ಯಾರು?

   ಉತ್ತರ
   • Salam Bava
    ನವೆಂ 8 2016

    This idiot of a writer doesn’t know the difference between ಹಾಸ್ಯ ಬರಹ and ಹಾಸ್ಯಾಸ್ಪದ ಬರಹ!!! But has audacity to ask informed readers “ನನಗೆ ಇಂಥದ್ದನ್ನೇ ಬರೆಯಿರಿ ಎನ್ನಲು ತಾವು ಯಾರು?” No wonder he supports Modi and Trump!

    ಉತ್ತರ
    • ಪ್ರವೀಣ್ ಕುಮಾರ್ ಮಾವಿನಕಾಡು
     ನವೆಂ 9 2016

     ಮೊದಲನೆಯದಾಗಿ ಇದು ಪ್ರಕಟವಾಗಿದ್ದು ಮನರಂಜನೆ ವಿಭಾಗದಲ್ಲಿ.
     ಎರಡನೆಯದಾಗಿ ತಲೆಬರಹದಲ್ಲೇ ಸ್ಪಷ್ಟವಾಗಿ “ಸುಳ್ಸುದ್ದಿ” ಎಂದು ಬರೆಯಲಾಗಿದೆ.
     ಮೂರನೆಯದಾಗಿ “ಇದು ಕೇವಲ ಮನರಂಜನೆಗಾಗಿ ಮಾತ್ರ”ಎಂದು ಸ್ಪಷ್ಟ ಸೂಚನೆ ನೀಡಲಾಗಿದೆ.

     ಇಷ್ಟಾಗಿಯೂ ನಿಮಗೆ ಇದನ್ನು ಓದಿದಾಗ ಅದೆಲ್ಲೋ ಉರಿಯುತ್ತಿದೆ ಎಂದರೆ ಈ ಬರಹದಲ್ಲಿ ನಿಮ್ಮ ಆ ಉರಿಗೆ ಕಾರಣವಾದ ಅಂಶ ಯಾವುದು ಎಂದು ತಿಳಿದು ಕೊಳ್ಳುವ ಕುತೂಹಲವಿದೆ ನನಗೆ.

     ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments