ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 9, 2016

28

ಯಾರಿಗೂ ಬೇಡವಾದ ಪಾತಕಿ.. ದಾವೂದ್..!

‍ನಿಲುಮೆ ಮೂಲಕ

– ಸಂತೋಷಕುಮಾರ ಮೆಹೆಂದಳೆ.

314922-dawood700( ಮೈಗಿಷ್ಟು ಪುಕ್ಕಟ್ಟೆ ಅನ್ನ, ತಂತಮ್ಮ ಮೋಜು ಮಸ್ತಿಯ ಚಟಕ್ಕಿಷ್ಟು ಯಾರದ್ದೋ ತಲೆ ಒಡೆದ ದುಡ್ಡು.. ಅದಕ್ಕೆ ಸರಿಯಾಗಿ ಮೆರೆಯೋದಕ್ಕೆ ಪಾಪಿಲೋಕದ ಕಡುಗತ್ತಲೆಯ ಸಾಮ್ರಾಜ್ಯ. ಕೊನೆಗೆ ಇದೆಲ್ಲದರಿಂದ ತಲೆ ತಪ್ಪಿಸಿಕೊಂಡು ಬದುಕಿಕೊಳ್ಳಲು ತೀರ ಪರಮ ನಿರ್ಲಜ್ಯ ಪಾಕಿಸ್ತಾನ. ಇಷ್ಟನ್ನಿಟ್ಟುಕೊಂಡು ಕತ್ತಲ ಲೋಕವನ್ನು ಆಳುತ್ತೇನೆಂದು ಹೊರಟು ಬಿಡುವವರು ತಮ್ಮ ಕೊನೆಯ ಕಾಲಾವಧಿಯುದ್ದಕ್ಕೂ ಇದೆಲ್ಲಾ ಶಾಶ್ವತ ಎಂದೇ ತಿಳಿದಿರುತ್ತಾರೆ. ದುರಾದೃಷ್ಟ ಮತ್ತು ನೂರಾರು ಹೆಣ್ಣುಮಕ್ಕಳ ಶಾಪ ಅವರನ್ನು ಜೀವಂತ ನರಕಕ್ಕೆ ನೂಕುತ್ತದೆ ಎನ್ನುವುದಕ್ಕೆ ಅಷ್ಟೆ ಉದಾಃ ಗಳು ನಮ್ಮ ಮುಂದಿವೆ. ಆದರೂ ಪಾತಕ ಲೋಕದ ಪಾತಕಿಗಳು ಬುದ್ಧಿ ಕಲಿತದ್ದೇ ಇಲ್ಲ. ಅದರಲ್ಲೂ ಪಾಕಿಸ್ತಾನದ ಕೊಚ್ಚೆಯಲ್ಲಿ ಹೊರಳುವ ಕ್ರಿಮಿಗಳಿಗೆ ಬುದ್ಧಿ ಮತ್ತು ವಿವೇಚನಾ ಶಕ್ತಿ ಬಿಟ್ಟು ಬೇರೆಲ್ಲ ಬೆಳೆಯುತ್ತದೆ. ಅದೇ ವಿನಾಶಕ್ಕೂ ಕಾರಣವಾಗುತ್ತದೆ. ಇಂಥ ಕೊಚ್ಚೆಯಂತಿರುವ ಕಥಾನಕದ ಕೊನೆಯ ತುಂಡು, ಅರೆಜೀವವಾಗಿರುವ ಪಾತಕಿ ತನಗೇ ತಾನೇ ಡಾನ್ ಎಂದು ಕರೆದುಕೊಂಡ ದಾವೂದ್ ಇಬ್ರಾಹಿಂ ಯಾವ ನೆಲಕ್ಕೆ ದ್ರೋಹ ಬಗೆದಿದ್ದನೋ ಅಲ್ಲಿವತ್ತು ಕಾಲೂರುವ ಬಗ್ಗೆ ಚಡಪಡಿಸುತ್ತಿದ್ದಾನೆ. ಆದರೆ ಊರಲು ಒಂದು ಕಾಲೇ ಉಳಿದಿಲ್ಲ. ಬದುಕಿನ ವಿಪರ್ಯಾಸ ಅಂದರೆ ಇದೇ ಅಲ್ಲವೇ..?)

ನಂ : 13. ಬ್ಲಾಕ್-4 ಕ್ಲಿಫ್ಟನ್, ಕರಾಚಿ, ಪಾಕಿಸ್ತಾನ.

ಇದು ಅವನ ಮನೆಯ ಅಡ್ರೆಸ್ಸು. ಹಾಗಂತ ಅವನ ಭೂಗತ್ತ ಜಗತ್ತಿನ ಬೆಂಬಲಿತ ಪಡೆ ಮತ್ತು ಪಾಕಿಸ್ತಾನ ಸರಕಾರ ಜಗತ್ತಿನ ಎಲ್ಲರ ಕಿವಿಗೂ ಹೂವಿಡುತ್ತಾ ಬಂದಿದೆ. ಕೊನೆಗೆ ಕತ್ತೆ ಕಾಲೆತ್ತಿದರೂ ಅದನ್ನು ಬ್ರೇಕಿಂಗ್‍ನ್ಯೂಸ್ ಮಾಡುವ ನಾನ್ಸೆನ್ಸ್ ಚಾನೆಲ್‍ಗಳವರೂ ಅದನ್ನೇ ನಂಬಿ ಬರೆಯುತ್ತಾ ಬಂದಿದ್ದಾರೆ. ಯಾವನಾದರೂ ಅಂತರಾಷ್ಟ್ರೀಯ ಮಟ್ಟದ ಕುಖ್ಯಾತಿ ಮತ್ತದಕ್ಕಿಂತಲೂ ಹೆಚ್ಚು, ಸತ್ತು ಹೋಗುವ ಪ್ರಾಣಭಯ ಇರುವ ಪಾತಕಿ, ಪಕ್ಕದಲ್ಲಿ ಮೈ ಕಾಯುವ ಬಂಟರಿದ್ದರೆ ಮಾತ್ರ ಬದುಕು ಎಂಬ ವ್ಯವಸ್ಥೆ ಸೃಷ್ಟಿಸಿಕೊಂಡಿರುವವರು ತಮ್ಮ ಅಡ್ರೆಸು, ಫೋನ್ ನಂ, ಕೊರಿಯರ್ ಆಫೀಸಿಗೆ ಕೊಟ್ಟಂತೆ ಕೊಟ್ಟು ಕೂತಿರುವ ಮೂರ್ಖ ಉದಾಃ ಯಾವ ಕಾಲದಲ್ಲೂ, ಯಾವ ದೇಶದಲ್ಲೂ ನಡೆದಿಲ್ಲ. ಪಾತಕ ಜಗತ್ತಿಗೇ ನಂ.ಒನ್ ಡಾನ್ ಎಂದು ಕರೆದುಕೊಂಡು ಅಕ್ಷರಶಃ ಕೆಲವೊಮ್ಮೆ ಅಂತಹ ಛಾಪನ್ನೂ ಮೂಡಿಸಿರುವ ಪಾತಕಿ, ಕೊನೆಗಾಲದಲ್ಲಿ ತನ್ನನ್ನು ಯಾವ ಮುಸ್ಲಿಂ ದೇಶ ರಕ್ಷಿಸುತ್ತದೆ ಎಂದು ನಂಬಿದ್ದನೋ, ಅಂತಹ ಪರಮ ನಿರ್ಲಜ್ಯ ಭಯೋತ್ಪಾದಕನಿಗೆ ಹಿಂದೂಸ್ತಾನದ ನೆಲದ ಅಸರೆ ಬೇಕಿದೆ. ನಂಬಿಸಿ ಕೈಬಿಡುವ ಪಾಕಿಸ್ತಾನದ ಹಣೆಬರಹ ಬಯಲಾಗಿದೆ.

ಬದುಕು ಕೊನೆಯ ಕ್ಷಣದಲ್ಲಿದೆ ಎಂದು ಪ್ರಾಣವನ್ನು ಅಂಗೈಯ್ಯಲ್ಲಿ ಹಿಡಿದು ಆತ ನಿಂತುಕೊಂಡಿದ್ದಾನೆ. ಆದರೆ ಯಾವ ಅಸ್ತ್ರಕ್ಕೂ ಬಗ್ಗದ ರೋಗಬಾಧಿತ ಜೀವಭಯ ಅವನನ್ನು ಇನ್ನಿಲ್ಲದಂತೆ ಹಣಿಯುತ್ತಿದೆ. ಇದು ಜಗತ್ತನ್ನೆ ಹೆದರಿಸಿ ಬದುಕುತ್ತೇನೆಂದು ಹೊರಟವನ ದಾರುಣ ಕಥೆ. ಅವನ ಇಂತಹ ಪಾತಕ ಬದುಕಿಗೆ ಹೆದರಿ ಬದುಕಿದವರೂ ತುಂಬ ಪ್ರಾಮಾಣಿಕರೇನಲ್ಲ. ಅಂಥವರನ್ನೇ ಹೆದರಿಸಿ ತನ್ನ ಹೆಸರನ್ನು ಭದ್ರಪಡಿಸಿಕೊಂಡಿದ್ದ ದಾವೂದ್‍ನಿಗಿಂತಲೂ ಮೊದಲೇ ಅವನ ಸಮಕಾಲೀನರು ಜಾಗ ಖಾಲಿ ಮಾಡಿದ್ದು, ಭ್ರಮೆಯಲ್ಲಿ ಬದುಕಿದ್ದ ದಾವೂದ್ ಇಬ್ರಾಹಿಂ ಎಂಬ ಪರಮ ಪಾತಕಿ ಮಾತ್ರ ಎಲ್ಲೂ ನೆಲೆ ಇಲ್ಲದಂತಾಗಿ ಭೂಮಿಗೆ ಭಾರವಾಗಿ ಬದುಕುತ್ತಿದ್ದಾನೆ. ಇದು ಅವನ ಕಂಪ್ಲೀಟ್ ಸ್ಟೋರಿ.

1955. ಡಿಸೆಂಬರ್ 26 ರಲ್ಲಿ ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯ ಖೇಡದ ಕೊಂಕಣಿ ಮುಸ್ಲಿಂ ಮನೆತನದಲ್ಲಿ ಹುಟ್ಟಿದ ದಾವೂದ್, ಪೋಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಇಬ್ರಾಹಿಂ ಕಸ್ಕರ್ ಮಗ. ಅಲ್ಲಿಂದ ಮುಂಬೈನ ಡೊಂಗ್ರಿಯಲ್ಲಿ ತನ್ನ ನೆಲೆ ಕಂಡುಕೊಂಡ. ಅದೂ ಹಾಜೀ ಮಸ್ತಾನ ಎಂಬ ಮಾಜಿ ಡಾನ್ ಒಬ್ಬನ ಕೆಳಗೆ ಅಕ್ಷರಶಃ ಮಾಲು ಡೆಲಿವರಿಯ ಹುಡುಗನಾಗಿ. ಮೊದಮೊದಲು ರಾಬರಿ ಮತ್ತು ಕೆಲವು ಕೇಸುಗಳಲ್ಲಿ ಖಬರಿಯಾಗಿಯೂ ಕ್ರಿಮಿನಲ್ ಧಂದೆಯ ನೀರಿಗಿಳಿದವ ಆಗೀಗ ಜೈಲುಪಾಲಾಗುತ್ತಿದ್ದ. ದಾವೂದ್‍ನ ಕ್ರಿಮಿನಲ್ ಫೈಲು ಬೆಳೆಯತೊಡಗುತ್ತಿದ್ದಾಗಲೇ ಅವನ ನಡುವನ್ನು ಮುರಿದಿದ್ದರೆ ಅದರ ಕಥೆಯೇ ಬೇರೆಯಾಗುತ್ತಿತ್ತು. ಆದರೆ ಅವನ ತಲೆಯ ಮೇಲೆ ಹಾಜಿ ಮಸ್ತಾನನ ಕೈ ಸೇರಿದಂತೆ ಮಹಾರಾಷ್ಟ್ರದ ಕೆಲವು ಪ್ರಬಲ ರಾಜಕಾರಣಿಗಳ ಬೆಂಬಲ ಅವನನ್ನು ಮುಟ್ಟದಂತೆ ಮಾಡಿತ್ತು.

ಅದರಲ್ಲೂ ಹಾಜಿ ಮಸ್ತಾನನ ಪ್ರಬಲ ವಿರೋಧಿಯಾಗಿದ್ದ ಪಠಾನ್ ಗ್ಯಾಂಗಿನೊಂದಿಗೆ ಯಾವಾಗ ಮುಖಾಮುಖಿ ಕದನಕ್ಕಿಳಿದನೋ, ಆಗ ದಾವೂದ್ ಒಂದು ರೇಂಜಿಗೆ ಗುರುತಿಸಿಕೊಂಡುಬಿಟ್ಟ. ಅದಕ್ಕೆ ಕಾರಣ ದಾವೂದನ ಸಹೋದರ ಸಬೀರ್‍ನನ್ನು ಪಠಾಣ ಗ್ಯಾಂಗಿನ ಮಾನ್ಯಸುರ್ವೇ ಎಂಬ ಇನ್ನೊಬ್ಬ ಪಾತಕಿ ಕೊಂದು ಹಾಕಿದ್ದ. (ಇವನ ಕಥೆಯ ಮೇಲೆ ಜಾನ್ ಅಬ್ರಾಹಂ ಚಿತ್ರ ಮಾಡಿದ) ಈ ಒಂದು ಪ್ರಬಲ ಕಾರಣವನ್ನಿಟ್ಟುಕೊಂಡು ಮುಂಬೈ ಕಂಡು ಕೇಳರಿಯದ ರೀತಿಯ ಬೀದಿಕಾಳಗ ಸಂಘಟಿಸಿದ ದಾವೂದ್ ಅನಾಮತ್ತಾಗಿ ಪಠಾಣನ ಟೀಮನ್ನೆ ಕತ್ತರಿಸಿದ. ಕ್ರಮೇಣ ಹಾಜಿ ರಾಜಕೀಯಕ್ಕಿಳಿದರೆ ದಾವೂದ್ ತೀರ ಅಲ್ಪ ಕಾಲಾವಧಿಯಲ್ಲಿ ಅಪಹರಣ, ಹಪ್ತಾ ಇತ್ಯಾದಿ ಕಾರ್ಯಗಳಿಂದ ಹಣಗಳಿಸತೊಡಗಿದನಲ್ಲದೆ ದುಬೈಗೆ ಶಿಪ್ಟಾಗಿಬಿಟ್ಟು, ಅಲ್ಲಿಂದಲೇ ಮುಂಬೈ ಮೇಲೆ ಹಿಡಿತ ಸಾಧಿಸಿದ.

ಸ್ಮಗ್ಲಿಂಗ್ ಪ್ರಮುಖ ದಂಧೆಯಾಯಿತಲ್ಲದೆ ಸುಲಭವಾಗಿ ಅವನ ಕೆಲಸವನ್ನು ಒಂದು ಫೋನಿನ ಇಶಾರೆಯ ಮೇರೆಗೆ ಮಾಡಿಕೊಡಬಲ್ಲ ಸಮರ್ಥ ಹುಡುಗರ ತಂಡವನ್ನೇ ದಾವೂದ ಮುಂಬೈ ಸುತ್ತಮುತ್ತಲಲ್ಲಿ ಕಟ್ಟಿ ಬೆಳೆಸಿದ್ದ. ಬರೀ ಮಹಾರಾಷ್ಟ್ರವಲ್ಲದೆ ಇತರ ರಾಜ್ಯಗಳ ಭೂಗತದ ಲೋಕದ ಮೇಲೂ ಕೈಯಿಟ್ಟು, ಯಾವ ಭಾಗದಲ್ಲಿ ಬೇಕಾದರೂ ಸಂಘಟಿತ ಅಪರಾಧ (ಆರ್ಗನೈಸ್ಡ್ ಕ್ರೈಂ) ಎಸಗುವ ವರ್ತುಲ ನಿರ್ಮಿಸಿಕೊಂಡಿದ್ದ. ಅದಕ್ಕಾಗಿ ಡ್ರಗ್ಸ್ ಪೆಡ್ಲಿಂಗ್ ಮತ್ತು ನಿಷೇಧಿತ ಹತ್ಯಾರುಗಳ ಸ್ಮಗ್ಲಿಂಗ್ ಅವನ ಪ್ರಮುಖ ದಂಧೆಯಾಗಿತ್ತು. ಮಿಲಿಟರಿ, ಪೋಲಿಸ್ ಇಲಾಖೆಯಲ್ಲಿಲ್ಲದ, ವಿದೇಶಿ ರಿವಾಲ್ವರುಗಳು ಅವನ ಹುಡುಗರ ಬಳಿ ಲಭ್ಯವಾಗುತ್ತಿದ್ದವು. ಕ್ರಿಕೆಟ್ ಬೆಟ್ಟಿಂಗ್ ಮತ್ತು ಹವಾಲ ದಂಧೆಯ ಮೇಲೆ ಕ್ರಮೇಣ ಹಿಡಿತ ಮತ್ತದಕ್ಕೊಂದು “ಅನಧೀಕೃತ ಕಾರ್ಪೋರೇಟ್” ಬಿಸಿನೆಸ್ಸಿನ ಟಚ್ ಕೊಟ್ಟ ಖ್ಯಾತಿ ದಾವೂದ್‍ನದ್ದು. ಅಲ್ಲಿಂದ ಹಿಂದಿ ಚಿತ್ರ ರಂಗದ ನಟನಟಿಯರನ್ನು ಮ್ಯಾನೇಜ್ ಮಾಡತೊಡಗಿದ ದಾವೂದ್ ನಂಬರ್ ಒನ್ ನಟನಟಿಯರ ಆಯ್ಕೆಯವರೆಗೂ ತನ್ನ ಹಿಡಿತ ಸಾಧಿಸುವರೆಗೂ ಬೆಳೆದ.(ದಾವೂದನೊಂದಿಗೆ ಸಂಬಂಧ ಬೆಳೆಸಿದ್ದಕ್ಕಾಗಿ ಕ್ರಿಕೆಟ್ಟಿಗ ಜಾವೆದ್ ಮಿಯಾಂದಾದ್‍ಗೆ ಅಜೀವ ಪರ್ಯಂತ ಭಾರತಕ್ಕೆ ಕಾಲಿಡದಂತೆ ನಿಷೇಧ ಹೇರಿಸಿಕೊಂಡ.)

ಎಲ್ಲದಕ್ಕೂ ಇದ್ದ ಒಂದೇ ಒಂದು ಕಾರಣ ಪ್ರಾಣ ಭಯ. ಜೀವಕ್ಕೆ ಹೆದರಿದ ಪ್ರತಿಯೊಬ್ಬನೂ ಅವನ ಕೈಯ್ಯಲ್ಲಿ ಶೋಷಿಸಲ್ಪಟ್ಟರು, ತಿರುಗಿಬಿದ್ದವರಲ್ಲಿ ಹೆಚ್ಚಿನವರೆಲ್ಲಾ ಅವನ ಬಾಡಿಗೆ ಬಂಟರ ಕೈಯ್ಯಲ್ಲಿ ಕೊಲೆಯಾಗಿ ಹೋದರು. ಇದೆಲ್ಲದಕ್ಕೂ ಕೊನೆಯಲ್ಲಿ ಆತ ನೀಡಿದ ಹೆಸರು ” ಡಿ-ಕಂಪೆನಿ “. ಅಂದ ಹಾಗೆ ಮೊದಲ ಬಾರಿಗೆ ಅವನ ನಡುವನ್ನು ಮುರಿದ ಖ್ಯಾತಿ ಸಲ್ಲುತ್ತದೆ ದಯಾನಾಯಕ್‍ಗೆ. ಸಾಲುಸಾಲಾಗಿ ಅವನ ಬಾಡಿಗೆ ಬಂಟರ ಹೆಣ ಕೆಡುವುತ್ತಿದ್ದರೆ ಅತ್ತ ದಾವೂದ್ ಸಾಮ್ರಾಜ್ಯ ಮೊದಲ ಬಾರಿಗೆ ಅಲುಗಾಡಿತ್ತು. ವಿಪರ್ಯಾಸವೆಂದರೆ ಅದಕ್ಕಾಗೇ ದಯಾನಾಯಕ್ ವರ್ಷಾನುಗಟ್ಟಲೇ ಇಲಾಖೆಯಿಂದಲೇ ಎನ್‍ಕ್ವಯಿರಿ ಎದುರಿಸಬೇಕಾಗಿ ಬಂತು. ಬೇರೆಯವರಾಗಿದ್ದರೆ ಆತ್ಮಹತ್ಯೆ ಮಾಡಿಕೊಂಡುಬಿಡುತ್ತಿದ್ದರು. ಅವನು ದಯಾ ಆಗಿದ್ದಕ್ಕೆ ಬದುಕಿಕೊಂಡ. ದಾವೂದ್ ಇಷ್ಟೆ ಮಾಡಿಕೊಂಡಿದ್ದರೆ ಬದುಕಿಕೊಂಡೂ ಈಗಲೂ ಚೆನ್ನಾಗಿರುತ್ತಿದ್ದನೇನೊ.? ಆದರೆ ಯಾವಾಗ ಇದರಿಂದ ಸಂಪಾದಿಸಿದ ಹಣವನ್ನು ಅಲ್-ಖೈದಾ ಮೂಲಕ ಭಯೋತ್ಪಾದನೆಗೆ ನೀಡತೊಡಗಿದನೋ ಜಾಗತಿಕವಾಗಿ ಮೊಸ್ಟ್‍ವಾಂಟೆಡ್ ಲಿಸ್ಟ್‍ನಲ್ಲಿ ಸೇರಿಹೋದ. ಅದರಲ್ಲೂ 1993 ರ ಮುಂಬೈ ಸ್ಪೋಟಕದಲ್ಲಿ ಅವನ ಹಸ್ತಕಾಣಿಸಿತ್ತು. 2003 ರಲ್ಲಿ ಅಮೇರಿಕೆ ಅವನನ್ನು “ಗ್ಲೋಬಲ್ ಟೆರರಿಸ್ಟ್” ಎಂದು ಘೋಷಿಸಿತು.

ಅಲ್ಲಿಯವರೆಗೂ ಬ್ಯಾಂಕಾಕ್, ದುಬೈ ಮತ್ತು ಆಗೀಗ ಇಂಡೊನೇಶಿಯಾದಲ್ಲೂ ಇರುತ್ತಿದ್ದ ದಾವೂದ್‍ನ ನೆರಳು ಯಾವಾಗ ಅಮೇರಿಕೆಯ 9/11 ರ ದಾಳಿಯಲ್ಲಿ ಕಾಣಿಸಿತೋ, ಶಾಶ್ವತವಾಗಿ ಪಾಪಿಗಳ ಲೋಕವಾದ ಪಾಕಿಸ್ತಾನ ಸೇರಿಕೊಂಡ. ಇಲ್ಲಿಯವರೆಗೂ ಪಾಪಿಸ್ತಾನ ಅವನನ್ನು ಜಗತ್ತಿನ ದಾಳಿಯ ಕಣ್ಗಳಿಂದ ರಕ್ಷಿಸುತ್ತಲೇ ಇದೆ. ಮೋದಿ ಮತ್ತು ಓಬಾಮ ಜಂಟಿಯಾಗಿ ಇವನ ಬೇಟೆಗೆ ಫೀಲ್ಡಿಗಿಳಿಯುತ್ತಿದ್ದಂತೆ 2014 ರ ಮಧ್ಯಭಾಗದಿಂದ ಅವನನ್ನು ಕರಾಚಿಯ ಬಂಗಲೆಯಿಂದ ನೇರ ಅಪಘಾನಿಸ್ತಾನ ಬಾರ್ಡರ್‍ಗೆ ಎತ್ತಂಗಡಿ ಮಾಡಲಾಯಿತು. ಅಲ್ಲಿ ಐ.ಎಸ್.ಐ. ಮತ್ತು ಪಾಕ್ ಮಿಲಿಟರಿಗಳ ಬಲವಾದ ನೆಲೆಯಿದ್ದು, ಯಾವ ಕಾರಣಕ್ಕೂ ದಾವೂದ್‍ನ ಮೇಲೆ ದಾಳಿ ಸಾಧ್ಯವಿಲ್ಲ ಎಂದು ನಂಬಲಾಗಿದೆ. ಇದಕ್ಕೆ ಪೂರಕವಾಗಿ ಅರಬ್ ಸರಕಾರ ಅವನ ಹದಿನೈದು ಸಾವಿರ ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಮಾಡಿಕೊಂಡು ಬೀದಿಪಾಲಾಗಿಸಿದ್ದು ಅವನ ಅರ್ಧ ಶಕ್ತಿ ಅಲ್ಲೇ ಕುಸಿದು ಹೋಗಿದೆ. ಮೊದಲಿದ್ದ ನಂಬಿಗಸ್ಥ ತಂಡದ ಇಬ್ಬರು ಸದಸ್ಯರೂ ಈಗ ಅವನ ಬಳಿ ಇಲ್ಲ.

ದಾವೂದ್‍ನಿಗೆ ಸುರಕ್ಷತೆಯ ವಿಷಯವಾಗಿ ಅಂಜಿಕೆ ಇಲ್ಲವೇ ಇಲ್ಲ. ಆದರೆ ಪಾಕಿಸ್ತಾನ ಉಪಾಯ ಪೂರ್ವಕವಾಗಿ ಅವನನ್ನು ಸಂಪೂರ್ಣವಾಗಿ ಮಾಫಿಯಾ ಮತ್ತು ಇನ್ನಿತರ ದಂಧೆಗಳಿಂದ ಹೊರಗಿಡುವುದರ ಮೂಲಕ ಕೊನೆಯ ಕಾಲದಲ್ಲಿ ಅನೀಸ್ ಇಬ್ರಾಹಿಂನ ಕೈಗೆ ಸರ್ವಾಧಿಕರ ಹಸ್ತಾಂತರಿಸುವ ತಂತ್ರ ಹೂಡಿದೆ. ಇದರಿಂದ ಅತನ ಕೈಯ್ಯಲ್ಲಿರುವ ನಿಯಂತ್ರಣ ತಪ್ಪಿಸುವುದರೊಂದಿಗೆ ಇವತ್ತಲ್ಲ ನಾಳೆ, ದಾವೂದ್ ಹೊರಜಗತ್ತಿನಲ್ಲಿ ಸಿಕ್ಕಿಬಿದ್ದರೂ ಅವನೊಬ್ಬ ರಿಯಲ್ ಎಸ್ಟೇಟ್ ದಂಧೆಗಾರ ಎಂದು ಬಿಂಬಿಸುವುದಕ್ಕೀಗ ಪಾಕಿಸ್ತಾನ ತಯಾರಾಗಿದೆ. ಹಾಗಾಗಿ ಅವನಿಗೆ ಮನೆಯಿಂದ ಹೊರಬರುವ ಅನುಮತಿಯನ್ನೂ ನಿರಾಕರಿಸಲಾಗಿದ್ದು, ಹೆಚ್ಚಿನಂಶ ಬದುಕಿನ ಭವ್ಯದಿನಗಳ ಕಾಲಾವಧಿ ಮುಗಿದು ಹೋಗಿದೆ. ಇದೆಲ್ಲದರೊಂದಿಗೆ ದಾವೂದ್ ಜೀವಂತವಾಗಿ ಭಾರತದ ಕೈಗೆ ಸಿಕ್ಕಿದ್ದೇ ಆದರೆ, ಭಾರತದ ಜೈಲುಗಳಲ್ಲಿ ಬೆಚ್ಚಗಿರುವ ಮಾಜಿ ಡಾನ್‍ಗಳಂತೆ ಇರಿಸುವ ಭರವಸೆಗೆ, ಪ್ರತ್ಯುಪಕಾರವಾಗಿ ಪಾಕಿಸ್ತಾನದ ಸಂಪೂರ್ಣ ಜಾತಕ ಬಿಚ್ಚಿಡುತ್ತಾನೆ. ಹಾಗಾದಲ್ಲಿ ಭಾರತಕ್ಕೆ ಅದಕ್ಕಿಂತ ದೊಡ್ಡ ಆಯುಧ ಬೇಕಾಗಲಿಕ್ಕಿಲ್ಲ. ಇದೇ ಅಮೇರಿಕೆಗೂ ಬೇಕಿದ್ದು ಅದಕ್ಕಾಗಿ ಅದು ಭಾರತವನ್ನು ಆಶ್ರಯಿಸದೆ ಬೇರೆ ದಾರಿ ಇಲ್ಲವಾಗಿದೆ. ತೀರ ತಲೆ ಮರೆಸಿಕೊಂಡು ಬದುಕುತ್ತಿರುವ ದಾವೂದ್ ಈಗ ಮೂಲ ಹೆಸರಿನಲ್ಲೂ ಇಲ್ಲದೆ ಇಸ್ಮಾಯಿಲ್ ಶೇಖ್ ಎನ್ನುವ ಮಾರುವೇಷದಲ್ಲಿದ್ದಾನೆ. ಸರ್ವ ರೀತಿಯ ದಾಖಲೆಗಳೂ ಈಗ ಅದೇ ಹೆಸರಿನಲ್ಲಿ ನಮೂದಿಸಲಾಗುತ್ತಿದೆ.

ಆದರೆ ಲಿಯಾಖತ್ ಆಸ್ಪತ್ರೆ ಸೇರಿಸಿರುವ ಅವನಿಗೆ ಅಲ್ಲೀಗ ಗ್ಯಾಂಗ್ರಿನ್‍ಗೆ ಒಳಗಾಗಿ ಕತ್ತರಿಸಿರುವ ಕಾಲನ್ನು ಕಳೆದುಕೊಂಡು ಕೂತಿದ್ದಾನೆ ಎನ್ನಲಾಗುತ್ತಿದೆ. ಆದರೆ ಅದೇನೂ ಪರಿಹರಿಸಲಾಗದ ಸಮಸ್ಯೆಯೇನೂ ಅಲ್ಲ ಎಂದರೂ ಕಳೆದುಕೊಂಡ ಕಾಲಿನ ಜತೆಗೆ ಹೈ ಶುಗರ್ ಮತ್ತು ಕಳೆದುಹೋಗಿರುವ ದೇಹಶಕ್ತಿ ಮೊದಲಿನ ಹುಮ್ಮಸಿಲ್ಲದಿರುವುದು ಅವನ ಹಾರಾಟದ ಬದುಕನ್ನು ಹಣ್ಣಾಗಿಸಿವೆ. ಅದಕ್ಕಾಗೇ ಕೊನೆಯಲ್ಲಿ ಎಲ್ಲಿ ತನ್ನನ್ನು ತೀರ ಬೀದಿಪಾಲಾದಂತೆ ಯಾವ ಬೆಂಬಲವಿಲ್ಲದೆ ಬದುಕಬೇಕಾಗುತ್ತದೋ ಎಂದು ಭಾರತಕ್ಕೆ ಶರಣಾಗಿ, ಟ್ರೀಟ್‍ಮೆಂಟು ಮತ್ತು ನೆಮ್ಮದಿಯ ಕೊನೆಯ ದಿನಗಳಿಗಾಗಿ ಪ್ರಯತ್ನಿಸುತ್ತಿದ್ದಾನೆ. ಆದರೆ ಪಾಕಿಸ್ತಾನವನ್ನು ಯಾಮಾರಿಸಿ ತಲುಪುವ ಸಾಧ್ಯತೆ ತೀರ ಕಡಿಮೆ ಇದೆ. ಅವನನ್ನು ತೀವ್ರ ನಿಗಾವಹಿಸಿ ನೋಡಿಕೊಳ್ಳಲಾಗುತ್ತಿದ್ದ ದಾವೂದ್ ನಂತರ ಅವನ ಜಾಗಕ್ಕೆ ಅಗ್ರೇಸಿವ್ ಡಾನ್ ಎಂದೇ ಗುರುತಿಸಿಕೊಂಡಿರುವ “ಚೋಟಾಶಕೀಲ್” ಬರುವ ಸಾಧ್ಯತೆ ದಟ್ಟವಾಗಿದೆ. ಮೊರೆಕ್ಕೊ, ಸ್ಪೇನ್, ಯುನೈಟೆಡ್ ಅರಬ್ ಎಮಿರೇಟಸ್, ಸಿಂಗಾಪುರ್, ಥೈಲಂಡ್, ಟರ್ಕಿ, ಭಾರತ, ಪಾಕಿಸ್ತಾನ ಮತ್ತು ಇಂಗ್ಲೆಂಡು ಸೇರಿದರೆ, ದಾವೂದ್‍ನ ಸುಮಾರು ಮೂವತ್ತು ಸಾವಿರ ಕೋಟಿ ರೂಪಾಯಿ ಆಸ್ತಿಯನ್ನು ಬೇನಾಮಿ ಹೆಸರಿನಲ್ಲಿ ಅವನು ಸಲಹುತ್ತಿದ್ದು ಸುಮಾರು ಮೂವತ್ತಕ್ಕೂ ಹೆಚ್ಚು ಬೇನಾಮಿ ಅಕೌಂಟುಗಳು ಮತ್ತು ಅಷ್ಟೆ ಸಂಖ್ಯೆಯ ಬ್ಯಾಂಕುಗಳಲ್ಲಿ ಅವನ ಹೂಡಿಕೆ ಪತ್ತೆಯಾಗಿದೆ.

ಜಾಗತಿಕವಾಗಿ ಅವನ ಹಣಕಾಸಿನ ಮೂಲಗಳನ್ನು ಕತ್ತರಿಸಿರುವ ಮೋದಿ ಮತ್ತವರ ತಂಡ ಈಗ ಕೊನೆಯದಾಗಿ ಅವನನ್ನೇ ಬೇಟೆಯಾಡಲು ಐವತ್ತು ಜನರ ತಂಡವನ್ನೇ ಸಜ್ಜುಗೊಳಿಸಿದ್ದಾರೆ. ಅವನ ಜತೆಗೆ ಇಕ್ಬಾಲ ಮತ್ತು ರಿಯಾಜ್ ಭಟ್ಕಳ್ ಎನ್ನುವ ಕ್ರಿಮಿಗಳೂ ಕೂಡಾ ಅಲ್ಲೇ ಇದ್ದಾರೆ ಎನ್ನುತ್ತದೆ ಗುಪ್ತ ವರದಿ. ಇವರೆಲ್ಲರನ್ನೂ ಒಮ್ಮೆಗೆ ಹೆಡೆಮುರಿ ಕಟ್ಟಿಯಾರು ಎನ್ನುವ ಭಯ ದಟ್ಟವಾಗಿ ಹರಡಿದೆ. ಅವನನ್ನು ರಕ್ಷಿಸುವ ತಂತ್ರದ ಅಂಗವಾಗಿ 8ನೇ ಮಹಡಿ, ಮೆಹ್ರಾನ್ ಸ್ಕೇಯರ್. ಪ್ಯಾರಾಡೈಸ್ ಹೌಸ್-3 ಮತ್ತು 6/ಏ ಕೌಬಾಯ್ ತಂಗ್ಝೀಮ್. ಫೇಸ್ -5 ಎಂಬೆಲ್ಲಾ ಖಚಿತ ಎನ್ನಿಸುವ ವಿಳಾಸಗಳನ್ನು ತೇಲಿ ಬೀಡಲಾಗಿದೆ. ಆದರೆ ಅವನು ಮಾತ್ರ ಅಪಘನ್ ಬಾರ್ಡರಿನಲ್ಲಿ ತೀರ ಐ.ಎಸ್.ಐ ಮತ್ತು ಮಿಲಿಟರಿ ಕಣ್ಗಾವಲಿನಲ್ಲಿ ಇದ್ದಾನೆ. ಅವನನ್ನು ಆರೈಕೆ ಮಾಡುತ್ತಿರುವ ವೈದ್ಯರೂ ಕೂಡಾ ಡಿಫೆನ್ಸ್ ಪಾಕಿಸ್ತಾನಕ್ಕೆ ಸೇರಿದವರಾಗಿದ್ದು ಬೇರೆ ಯಾವುದೇ ವೈದ್ಯಕೀಯ ಸೌಲಭ್ಯ ಖಾಸಗಿಯಾಗೂ ಪಡೆಯುವಂತಿಲ್ಲ. ಜಗತ್ತಿನ ಶ್ರೇಷ್ಠ ವೈದ್ಯರು ಕಾಲನ್ನು ಮರು ಸ್ಥಾಪಿಸುವ ಭರವಸೆ ನೀಡಿದ್ದರೂ ಅವನನ್ನು ದೈಹಿಕವಾಗೇ ಕುಂದಿಸಿಬಿಡುವ ಹುನ್ನಾರದಲ್ಲಿ ಪೂರ್ತಿ ಕಾಲನ್ನು ತೆಗೆದು ಹಾಕಲಾಗಿದೆ ಎನ್ನುತ್ತದೆ ಗುಪ್ತಚರ ವರದಿ. ಒಟ್ಟಾರೆ ಸತತವಾಗಿ ಅಂತರಾಷ್ಟ್ರೀಯ ಮಟ್ಟದ ಇಬ್ಬರೂ ಡಾನ್‍ಗಳು ಈಗಾಗಲೇ ಭಾರತದ ಜೈಲು ಸೇರಿರುವ ಕಾರಣ ಸ್ವತಃ ಭಾರತಕ್ಕೆ ಬರುವ ಇಚ್ಛೆ ವ್ಯಕ್ತಪಡಿಸಿದ್ದಾನೆ ದಾವೂದ್.

ಆದರೆ ಹಾಗೊಂದು ಅವಕಾಶ ಮಾಡಿಕೊಟ್ಟಿದ್ದೇ ಆದಲ್ಲಿ ಇನ್ನೊಬ್ಬ ಹುತಾತ್ಮನನ್ನು ನಾವೇ ಸೃಷ್ಟಿದಂತಾಗುತ್ತದಾ..? ಎನ್ನುವ ವರದಿ ಅಕ್ಷರಶಃ ಚರ್ಚೆಯಲ್ಲಿದೆ. ಕಾರಣ ಅವನ ಹೆಸರಲ್ಲೇ ಪ್ರಾಣ ಬಿಡುವ, ನಂಬುಗೆಗೆ ಒಳಗಾಗಲು ಸಿದ್ಧವಿರುವ ಅತಿ ದೊಡ್ಡ ಪಡೆ ಈಗಲೂ ಕರಾವಳಿ ಸರಹದ್ದಿನಲ್ಲಿದ್ದೇ ಇದೆ. ಅದಕ್ಕಿಂತಲೂ ಘೋರ ಎಂದರೆ ಈ ದೇಶದಲ್ಲಿ, ಯಾವ ರೀತಿಯ ದೇಶದ್ರೋಹಕ್ಕೂ ಸಿದ್ಧವಾಗಿ ಬಿಡುವವರ ಮಧ್ಯೆ ಅವನನ್ನು ಮರುಸ್ಥಾಪಿಸುವ ಕೆಲಸಕ್ಕೆ ಮುಂದಾಗದಿದ್ದರೇನೆ ಒಳ್ಳೆಯದು. ಕಾರಣ ಮಾನವ ಹಕ್ಕು, ಅವನೂ ಮನುಷ್ಯ, ಬದುಕಲು ಒಂದು ಹಕ್ಕು ಎಂಬೆಲ್ಲ ವಿತಂಡವಾದಗಳನ್ನು ಹಿಡಿದುಕೊಂಡು ಲಗ್ಗೆ ಇಡುವ ಬುಜೀಗಳಿಗೆ ಯಾವ ಜನ, ಧರ್ಮ ಅಥವಾ ಸಿದ್ಧಂತವನ್ನು ಬೆಂಬಲಿಸಬೇಕು, ಬೆಂಬಲಿಸಬಾರದೆನ್ನುವ ಕನಿಷ್ಠ ಕಾಳಜಿಯೂ ಇಲ್ಲ. ದೇಶದ್ರೋಹಕ್ಕೆ ಬೆಂಬಲಿಸುವ ಎಲ್ಲಾ ಕರ್ಮಗಳು ಅವರ ಗುತ್ತಿಗೆಯಲ್ಲವೇ..? ಅವರಿಗೆ ದಾವೂದ್ ಆದರೇನು..? ಯಾವುದೇ ಧರ್ಮದ ಲಂಪಟ ಧರ್ಮಾಧಿಕಾರಿಯಾದರೇನು..? ಇದೆಲ್ಲವನ್ನೂ ತೂಗಿಸಿಕೊಂಡು ದೇಶ ಕಟ್ಟುವ ಸ್ವಯಂ ಸೇವಕರು ಇವತ್ತು ಇಂತಹದ್ದೇ ನೀಚರ ಕೈಯ್ಯಲ್ಲಿ ಸಾಲುಸಾಲಾಗಿ ಬೀದಿ ಬೀದಿಗಳಲ್ಲಿ ಕೊಲೆಯಾಗುತ್ತಿದ್ದರೆ, ಅದನ್ನು ಖಂಡಿಸುವ ಮಾತೂ ಇಲ್ಲದೇ ತೌಡು ತಿನ್ನುತ್ತಿದ್ದಾರೆ. ಅಂತಹದರಲ್ಲಿ ಆ ಪರಮ ಲಂಪಟ ದಾವೂದ್‍ನನ್ನು ಒಳಗೆ ಬಿಟ್ಟುಕೊಳ್ಳಬೇಕೆ..?

28 ಟಿಪ್ಪಣಿಗಳು Post a comment
 1. ನವೆಂ 10 2016

  ಉತ್ತಮವಾದ ಬರಹ.
  ದರ್ಗಾ,ನಾಗಶೆಟ್ಟಿ,ಸಲಾಂ ಸಾಬಿ, ಇತ್ಯಾದಿ ಉಂಡಮನೆಗೆರೆಡು ಬಗೆವ ಸಿಕ್-ಊಳಿಡರ್ಗಳು ದಾವೂದ್ ಎಂಬ ಪಾತಕಿಯ ಬಗ್ಗೆ ತಮ್ಮ ನಿಲುವು ಏನೆಂಬುದನ್ನು ನೇರ ನಿರ್ದಿಷ್ಟ ಪದಗಳಿಂದ ವ್ಯಕ್ತಪಡಿಸತಕ್ಕದ್ದು. ಇಲ್ಲವಾದರೆ ತಾವು ಹೇತ್ಲಾಂಡಿಗಳೆಂದು ಒಪ್ಪಿಕೊಂಡು ಬಾಲ ಮುದುರಿಕೊಳ್ಳತಕ್ಕದ್ದು.

  ಉತ್ತರ
 2. sudarshana gururajarao
  ನವೆಂ 10 2016

  ಬಿಲದೊಳಗಡಗಿದ ಸರ್ಪ- ನಾಗಶೆಟ್ಟಿ ಎಂಬ ದರಿದ್ರವೇ,
  ಬಾ ಇಲ್ಲಿಯೂ ನಿನ್ನ ಅಭಿಪ್ರಾಯ ದಾಖಲಿಸು.
  ಪೇಜಾವರರ ಮೇಲೆ ಕುರ್ರೇರಿಕೊಂಡು ಬರುವ ನಿನ್ನ ಭ್ರಷ್ಟ ಮನಸ್ಥಿಯನ್ನು ಇಲ್ಲುಯೂ ತೋರಿಸು, ಧಮ್ಮುದೆಯೋ ಇಲ್ಲಾ ಮುಲ್ಲಾನ ಕತ್ತಿಗೆ ನಡುಗುತ್ತಿದ್ದೀಯೋ.

  ಉತ್ತರ
  • ಶೆಟ್ಟಿನಾಗ ಶೇ.
   ನವೆಂ 10 2016

   ದರಿದ್ರ ನೀನು ಅದಕ್ಕೆ ಲಂಡನ್ನಿಗೆ ಹೋಗಿದ್ದೀಯ ಕುನ್ನಿ ಮರಿಯೇ; ಬಿಳಿಯರು ತಿಂದೆಸದ ಬೀಫ್ ಚೂರು ತಿನ್ನಲು.

   ದಾವೂದ್ ಬಗ್ಗೆ ಹೇಳುವುದು ಇಷ್ಟೇ – ಕ್ರೈಂ ಲೋಕಕ್ಕೆ ಮತಧರ್ಮವಿಲ್ಲ. ಅರುಣ ಗಾವ್ಲಿ, ವರದುರಾಜನ್ ಮೊದಲಿಯಾರ್, ಶೆಟ್ಟಿ ಬ್ರದರ್ಸ್ ಇವರೆಲ್ಲ ನಿನ್ನ ಧರ್ಮದವರೇ; ಆದರೂ ಕ್ರೈಂ ವೃತ್ತಿಯಲ್ಲಿದ್ದಾರೆ. ದಾವೂದ್ ಕೂಡಸಾಚಾರ್ ಇವರ ಹಾಗೆ ಒಬ್ಬ ಕ್ರಿಮಿನಲ್. ಬಹುಶಹ ಬಡತನ ಕುಕ್ಕಿ ತಿನ್ನುತ್ತಿದ್ದರಿಂದ ಕ್ರೈಂಗೆ ಇಳಿದ ಅಂತ ಕಾಣುತ್ತದೆ. ನಿನ್ನ ಹಾಗೆ ಬಿಟ್ಟಿ ಶಿಕ್ಷಣ ಹೊಟ್ಟೆ ತುಂಬಾ ಆಹಾರ ಸಿಕ್ಕಿದ್ದರೆ ಆಟ ಕೂಡ ಡಾಕ್ಟರ್ ಆಗುತ್ತಿದನೋ ಏನೋ. ಸಾಚಾರ್ ವರದಿ ಅನುಷ್ಠಾನಕ್ಕೆ ಬರಲಿ, ಕ್ರೈಂ ಆಕರ್ಷಣೆ ಕಡಿಮೆಯಾಗುತ್ತದೆ.

   ಉತ್ತರ
   • sudarshana gururajarao
    ನವೆಂ 10 2016

    ಆಹಾ, ಬಿಟ್ಟ ಬಾಯಿ,ಹೊಲಸು ಮುಂಡೇದೆ. ಸವಲತ್ತಿರೋರೆಲ್ಲಾ ಸಾಧನೆ ಮಾಡಿಲ್ಲವೋ ಗೂಬೆ.ನಿನ್ನೇ ನೋಡು ,ಏನಾಗಿದೀಯ ನಾಯಿ ಹಂಗೆ ಎಂಜಲು ಗಿಬರ್ಕೊಂಡು. ಏನೇನೋ ಹೇಳ್ಬೇಡ. ಅವನೊಬ್ಬ ಪಾತಕಿ ಅಂತ ಹೇಳು ದಮ್ಮಿದ್ರೆ. ಅದಕ್ಕೂ ಬೇರೆ ಬ್ರಾಹ್ಮಣರ ಹೆಸರು ಧರ್ಮ ಎಲ್ಲಾ ಯಾಕೆ ತರ್ತೀಯ.
    ಹೊಟ್ಟೆ ಹಸಿವಿದ್ರೆ ಪುಡಿ ಕಾಸು ಕದೀಬೇಕಿತ್ತು. ಅದ್ಬಿಟ್ಟು ಡಾನ್ ಆಗೋದಲ್ಲ. ಅದಕ್ಕೆ ಕೆಟ್ಟ ರಕ್ತ ಅಂತ ಹೇಳೋದು. ನೀನಿದ್ಹಂಗೆ.
    ಗೂಬೆ ಮುಂಡೇದೆ. ಏನಾದ್ರೂ ಮೈ ಬಗ್ಸಿ ಓದುದ್ರೆ ತಾನೆ ಅದರ ಬೆಲೆ ತಿಳಿಯೋದು.

    ಉತ್ತರ
    • Salam Bava
     ನವೆಂ 10 2016

     “ಅರುಣ ಗಾವ್ಲಿ, ವರದುರಾಜನ್ ಮೊದಲಿಯಾರ್, ಶೆಟ್ಟಿ ಬ್ರದರ್ಸ್ ಇವರೆಲ್ಲ ನಿನ್ನ ಧರ್ಮದವರೇ; ಆದರೂ ಕ್ರೈಂ ವೃತ್ತಿಯಲ್ಲಿದ್ದಾರೆ. ದಾವೂದ್ ಕೂಡ ಇವರ ಹಾಗೆ ಒಬ್ಬ ಕ್ರಿಮಿನಲ್.”

     Exactly! So many devout Hindus have been Dawood’s assistants. Take Chota Rajan for instance. Isn’t he a Hindu? He is a big criminal and he sponsors half of Ganesh Utsav in Bombay. Third rate trolls are blind to reality as they’ve been lobotomised by Sanghi ideology.

     ಉತ್ತರ
     • sudarshana gururajarao
      ನವೆಂ 11 2016

      ಬೇರೆ ಯಾರ್ಯಾರ ಹೆಸರ್ಯಾಕೆ ಸಲಾಂಸಾಬಿಯೇ. ಸ್ವಮತೀಯನನ್ನು ದೂರಿದರೆ ಹರಾಂ ಆಗಿ ನರಕವೆಂಬ ಭಯವೋ? ಎಲ್ಲದಕ್ಕೂ ನಂದೆಲ್ಲಿಕ್ಲಿ ಅಂತ ಬರೋ ನಿಮಗೆ ನಾನು ಸವಾಲು ಹಾಕಿದರೂ ನೇರವಾಗಿ ದಾವುದ್ ಪಾತಕಿ ಅನ್ನಲು ನಾಲಿಗೆ ಏಳುವುದಿಲ್ಲವೋ? ಬೇರೆ ಯಾರೂ ಇವನ ಲೆವೆಲ್ಲಿಗೆ ಧ್ವಂಸ ಮಾಡ್ಲಿಲ್ಲ. ಚೋಟಾ ರಾಜ ಸಾಬಿ. ಹೆಸರು ನೋಡಿ ಮೋಸ ಮಾಡಕ್ಕೆ ಬರಬೇಡ. ಕಳ್ಳ.

      ಉತ್ತರ
      • Salam Bava
       ನವೆಂ 11 2016

       “ಚೋಟಾ ರಾಜ ಸಾಬಿ.”

       Hhha hhha! Like all third rate trolls scumbugs you are low on facts and high on viciousness. Chota Rajan is a Hindu and he sponsors the famous Tilak Nagar Chembur Ganapathi utsav. Ask your more informed Sanghi brothers for more details. Don’t make an ass of yourself.

       ಉತ್ತರ
    • Salam Bava
     ನವೆಂ 10 2016

     “ಅದಕ್ಕೆ ಕೆಟ್ಟ ರಕ್ತ ಅಂತ ಹೇಳೋದು.”

     Racist comment by Sudarshan Rao. Moderators beware this will get you into trouble again.

     ಉತ್ತರ
     • sudarshana gururajarao
      ನವೆಂ 11 2016

      ಯಾಕಪ್ಪ,bad blood ಅಂದ್ರೆ ನಿಂಗ್ಯಾಕೆ ಉರಿ.ನೀನೂ ಅವನ ರಕ್ತ ಹಂಚ್ಕೊಂಡಿದೀಯಾ? ಕೆಟ್ಟ ರಕ್ತ ಅಂದ್ರೆ ಕೆಟ್ಟ ರಕ್ತ.ಅದ್ರಲ್ಲಿ race ಎಲ್ಲಿ ಬಂತು. ಲೋ , ತಲೆತಿರುಗಿದ ನರಿಯೇ ನಿನ್ನಾಟ ನಡೆಯೋಲ್ಲಾ, ಹೋಗಮ್ಮಾ

      ಉತ್ತರ
    • ಶೆಟ್ಟಿನಾಗ ಶೇ.
     ನವೆಂ 11 2016

     ಸಾಚಾರ್ ವರದಿ ಅನುಷ್ಠಾನಕ್ಕೆ ಬರಲಿ.

     ಉತ್ತರ
 3. sudarshana gururajarao
  ನವೆಂ 10 2016

  ಬಿಟ್ಟಿ ವಿದ್ಯಾಭ್ಯಾಸ, ಅದೂ ಬ್ರಾಹ್ಮಣರಿಗೆ,?
  ಸಗಣಿ ಹುಳುವೇ,ಕಣ್ಬಿಟ್ಟು ನೋಡು.

  ಉತ್ತರ
  • ಶೆಟ್ಟಿನಾಗ ಶೇ.
   ನವೆಂ 11 2016

   ನೀನು ಕ್ಯಾಪಿಟೇಶನ್ ಕ್ಯಾಂಡಿಡೆಟ್ಆ? ಅಪ್ಪನ ಕಾಸು ದಂಡ ಮಾಡಿದೆಯಲ್ಲೋ ನಿಷ್ಪ್ರಯೋಜಕ ಮುಂಡೇದೆ!

   ಉತ್ತರ
   • ಶೆಟ್ಟಿನಾಗ ಶೇ.
    ನವೆಂ 11 2016

    ಮೆಡಿಕಲ್ ಕಾಲೇಜಿನಲ್ಲಿ ಹೆಣ ಕತ್ತರಿಸಿದಾಗಲೇ ನಿನ್ನ ಬ್ರಾಹ್ಮಣಿಕೆ ಕುಸಿದು ಬಿತ್ತು. ಡಿಗ್ರಿ ಪಡೆದ ಮೇಲೆ ಅದೆಷ್ಟು ಹೆಣ ಕತ್ತರಿಸಿದ್ದೀಯಾ ನೀನೇ ಹೇಳಬೇಕು. ಥೂ! ಆಂಗ್ಲರ ಹೆಣ ಕತ್ತರಿಸಿ ಹಣ ಮಾಡಬೇಕಿತ್ತೇ ನೀನು? ಎಲ್ಲಾದರೂ ಸಂಸ್ಕೃತ ಮೇಷ್ಟ್ರಾಗಿ ಬಾಯಿಗೆ ಬಂದಷ್ಟು ಮಂತ್ರ ಹೇಳಿ ಬ್ರಾಹ್ಮಣಿಕೆ ಉಳಿಸಿಕೊಂಡು ಬದುಕಬಹುದಿತ್ತು. ಎಂತಹ ಜನ್ಮ ನಿನ್ನದು! ಛೋಟಾ ರಾಜನ್ ನಿನಗಿಂತ ವಾಸಿ ಬಿಡು.

    ಉತ್ತರ
   • sudarshana gururajarao
    ನವೆಂ 11 2016

    ಪ್ರತಿಭೆ,ಪರಿಶ್ರಮ ಅಂತಾನೂ ಇರುತ್ತೆ ,ಗೂಬಾಳ್. ನಿನ್ಗೆಲಿ ತಿಳೀಬೇಕು ಬೇಕೂಪ

    ಉತ್ತರ
 4. Salam Bava
  ನವೆಂ 11 2016

  “ಎಲ್ಲಾದರೂ ಸಂಸ್ಕೃತ ಮೇಷ್ಟ್ರಾಗಿ ಬಾಯಿಗೆ ಬಂದಷ್ಟು ಮಂತ್ರ ಹೇಳಿ ಬ್ರಾಹ್ಮಣಿಕೆ ಉಳಿಸಿಕೊಂಡು ಬದುಕಬಹುದಿತ್ತು. ಎಂತಹ ಜನ್ಮ ನಿನ್ನದು!”

  Lol! This should silence any half decent person if he had any shame. But the Troll Third Rate Mr. Rao will hit back with more muck.

  ಉತ್ತರ
  • sudarshana gururajarao
   ನವೆಂ 11 2016

   ನಿನ್ನ ಬ್ರಾಹ್ಮಣಿಕೆ definition ಎಲ್ಲಿಂದ ಕದ್ದು ತಂದೆ ಗೂಬೆ

   ಉತ್ತರ
  • sudarshana gururajarao
   ನವೆಂ 11 2016

   ದಾವೂದ್ನ ಪಾತಕಗಳ ಬಗ್ಗೆ ನೇರವಾಗಿ ಕಾಣಮೆಂಟ್ ಮಾಡ್ರೋ ದರ್ವೇಸಿಗಳಾ ಅಂದ್ರೆ
   ೧. ಯಾರ್ಯಾರ್ದೋ ಹೆಸರ್ಹೇಳ್ತವೆ
   ೨. ನನ್ನಬ್ರಾಹಮಣಿಕೆ ಬಗ್ಗೆ ಮಾತಾಡ್ತವೆ
   ೩,. ಬಿಟ್ಟಿ ಎಜುಕೇಶನ್ ,ಕ್ಯಾಪಿಟೇಶನ್ ಅಂತವೆ.
   ಲೋ ದೇಶದ್ರೋಹಿಯೊಬ್ಬನನ್ನು ದೇಶದ್ರೋಹಿಯೆಂದು ಕರೆಯಲಾಗದ ನಿಮ್ಮ ಸಿಕ್ಉಲರ್,ಧೂರ್ತ ಮನಸ್ಥಿತಿಯನ್ನು ಬೆತ್ತಲು ಮಾಡಬೇಕಿತ್ತು. ಅದಾಯ್ತು.ರೈಟ್ ಹೇಳ್ರಿ .

   ಉತ್ತರ
   • ಶೆಟ್ಟಿನಾಗ ಶೇ.
    ನವೆಂ 11 2016

    ಮೊದಲು ಆದಿ ಶಂಕರಾಚಾರ್ಯ ಮಾಡಿದ ಅನ್ಯಾಯಗಳನ್ನು ಖಂಡಿಸು ಆಮೇಲೆ ತೆಗೆಯುವಿಯಂತೆ ದಾವೂದ್ ವಿಷಯವನ್ನ. ಆಚಾರ್ಯ ಕೆ. ಎಸ್. ಭಗವಾನ್ ಶಂಕರರ ಬಗ್ಗೆ ಬರೆದಿರುವ ಸಂಶೋಧನಾ ಗ್ರಂಥವನ್ನು ಅಧ್ಯಯನ ಮಾಡು ಮರಿಯೇ. ನಿನ್ನಾಟ ಎಲ್ಲ ಬೊಜ್ಜದೂಟಕ್ಕೆ ಇಟ್ಕೋ ಇಲ್ಲಿ ನಡೆಯಲ್ಲ ತಿಳ್ಕೋ.

    ಉತ್ತರ
    • sudarshana gururajarao
     ನವೆಂ 11 2016

     ದಾವೂದನ ಬಗ್ಎ ಇರು ಲೇಖನ.ಹೇತ್ಲಾಂಡಿ ಹೈದನೇ. ಅದರ ಬಗ್ಗೆ ಮಾತಾಡು. ಬುಡ ಗಡಗಡವಾ? ನಿನ್ನ ಜನ್ಮಕ್ಕಿಷ್ಟು.

     ಉತ್ತರ
     • ಶೆಟ್ಟಿನಾಗ ಶೇ.
      ನವೆಂ 12 2016

      ಅವನ್ಯಾವನೋ ದಾವೂದ್ ಅವನ ಕಂಡವರು ಯಾರು? ನಿನ್ನ ಮಾವನಾ ಅವನು ನೀನು ನೋಡಿದ್ದೀಯಾ? ಕಾಣದೆ ಇರುವವನ ಬಗ್ಗೆ ಏಕೆ ಮಾತು? ದಿನ ಮೀಡಿಯಾದಲ್ಲಿ ಮುಖ ತೋರಿಸುವ ಪೇಜಾವರ ಬಗ್ಗೆ ಮಾತಾಡೋಣ, ಪಂಕ್ತಿ ಭೇದ ಯಾವಾಗ ನಿಲ್ಲಿಸ್ತಾರೆ ಅಂತ ಕೇಳೋಣ. ಏನಂತೀಯ?

      ಉತ್ತರ
      • sudarshana gururajarao
       ನವೆಂ 12 2016

       ನೀನು ಶಂಕರಾಚಾರ್ಯರ ಕಂಡಿದ್ದೆಯಾ ಭಂಡ ಮುಂಡೇದೆ. ನಿನ್ನ ಜೀವಮಾನದಲ್ಲಿ ಇರುವ ಪಾತಕಿಯ ಬಗ್ಗೆ ಬಾಯಿಬಿಡಲು ಹೆದರುವ ಕೋಳಿಯೇ,ಎಂಟನೇ ಶತಮಾನದ ಯತಿವರ್ಯರ ಬಗ್ಗೆ ಮಾತಾಡ್ತೀಯ.ನಿನ್ನ ಎರಡುತಲೆ ಹಾವಿನ ಬುದ್ದಿ ತೋರ್ಸೇ ಬಿಟ್ಯಲ್ಲ, ಹೇತ್ಲಾಂಡಿ

       ಉತ್ತರ
       • Salam Bava
        ನವೆಂ 12 2016

        “ಅವನ್ಯಾವನೋ ದಾವೂದ್ ಅವನ ಕಂಡವರು ಯಾರು? ನಿನ್ನ ಮಾವನಾ ಅವನು ನೀನು ನೋಡಿದ್ದೀಯಾ?”

        Lol! One Shetkar is enough to give a hard time to the entire neo-Ghodse squad of Hindutva trolls!

        ಉತ್ತರ
        • sudarshana gururajarao
         ನವೆಂ 13 2016

         ಇದೂ ಒಂದು ಉತ್ರವೇ ಸಲಾಂಸಾಬಿ.ನಾಗನ ಚಪ್ಪಲಿಯಲ್ಲಿ ಅವನಿಗೇ ಬಾರಿಸಿದ್ದೇನೆ ಮೇಲೆ ನೋಡು,ಮುಂಡೇದೆ.

         ಉತ್ತರ
         • ಶೆಟ್ಟಿನಾಗ ಶೇ.
          ನವೆಂ 15 2016

          ೫೦೦/೧೦೦೦ ನೋಟುಗಳ ನಿಷೇಧದಿಂದ ಜೀವನ ಅಸ್ತವ್ಯಸ್ತವಾಗಿದೆ. ಸದ್ಯಕ್ಕೆ ಬ್ಯಾಂಕು ಓಡಾಟದಲ್ಲಿ ಬಿಸಿ ಆಗಿದ್ದೇನೆ, ಸಮಸ್ಯೆ ಬಗೆಹರಿದ ಮೇಲೆ ನಿಲುಮೆಯ ಹಿಂದುತ್ವ ಟ್ರಾಲ್ ತರಲೆಗಳಿಗೆ ಸರಿ ಬುದ್ಧಿ ಕಲಿಸುತ್ತೇನೆ.ನಾಡಿನ ಸಮಸ್ತ ಪ್ರಗತಿಪರರು ನೋಟು ನಿಷೇಧವನ್ನು ಜೀವವಿರೋಧಿ ಕ್ರಮ ಎಂದು ಘೋಷಿಸಿದ್ದೇವೆ ಹಾಗೂ ನಮೋ ಸರ್ಕಾರ ತಕ್ಷಣವೇ ರಾಜಿನಾಮೆ ಕೊಡತಕ್ಕದ್ದು ಎಂದು ಆಗ್ರಹಿಸುತ್ತಿದ್ದೇವೆ.

          ಉತ್ತರ
          • sudarshana gururajarao
           ನವೆಂ 16 2016

           ನಿನ್ನ ಬಾಲವನ್ನು ನೀನೇ ಕಚ್ಇಕೊಂಡು ಕುಂಯ್ಗುಟ್ಟಬೇಡ. ಯರ್ಯಾರ ಕರೀ ಹಣ ಬಿಳೀ ಮಾಡಲು ಅಂಡಲಿತಿದ್ದೀಯ ಭ್ರಷ್ಟ ನಾಗನೇ.
           ದಾವುದ್ನನ್ನು ಕಾಣದ ದ್ರೋಹಿ ಶಂಕರರನ್ನು ಕಂಡನೇ? ಭಗವಾನನ ಸಗಣಿ ತಂದ ನಿನಗೆ ಶಂಕರರು ಅರ್ಥ ಆಗುವುದೆಲ್ಲಿ.
           ನಿನ್ನ ತನುವ ಸಂತೈಸಿಕೊ ಸಾಕು.

          • sudarshana gururajarao
           ನವೆಂ 16 2016

           ಪ್ರಗತಿಪರ್ರರು ಘೋಷಿಸಿ ಯಾರೂ ಕ್ಯಾರೇ ಅನ್ಲಿಲ್ಲ. ಕ್ಯಾಮೇ ಇಲ್ಲದ ಬಡ್ಡೆತ್ವು ಅಂತ ಮೂಲೆಗುಂಪು ಮಾಡಿದಾರಲ್ಲೋ ನಿಮ್ಮನ್ನು.

 5. WITIAN
  ನವೆಂ 12 2016

  ರೀ ಶೆಟ್ಟರೆ, ಎಲ್ಲಿ ಮೀನು ತಿನ್ನುತ್ತಾ ಕೂತಿದ್ದೀರಿ? ನಾನು ಕಮೆಂಟ್ ಬರೆದರೆ ತಕ್ಷಣ ತೆಗೆದು ಹಾಕುತ್ತೀರಿ, ಇಲ್ಲಿ ಲೇಖನಕ್ಕೆ ಸಂಬಂಧಪಡದ ವಿಷಯವನ್ನೆಲ್ಲ ಕಮೆಂಟ್ ರೂಪದಲ್ಲಿ ಕೊಚ್ಚೆ ನಾಗ ಬರೆಯುತ್ತಿದ್ದರೂ ಎಂಜಾಯ್ ಮಾಡ್ತಾ ಕೂತಿದ್ದೀರಲ್ಲ, ಸೆಲೆಕ್ಟಿವ್ ಮಾಡರೇಟರ್ ಎಂದರೆ ನೀವೆ ಅನ್ನುವುದನ್ನು ಚೆನ್ನಾಗಿ ತೋರಿಸುತ್ತಿದ್ದೀರಿ.. ವೆರಿ ಗುಡ್! ಕೀಪ್ ಇಟ್ ಅಪ್…

  ಉತ್ತರ
 6. ರವಿಕುಮಾರ ಕಡುಮನೆ
  ನವೆಂ 12 2016

  ಒಳ್ಳೆಯ ಮಾಹಿತಿ..

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments