ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 16, 2016

42

ಪ್ರಧಾನಿಯೊಂದಿಗೆ ನಾವು..!

‍ನಿಲುಮೆ ಮೂಲಕ

15037212_10154870173830649_2292180280785604817_nನವೆಂಬರ್ 8ನೇ ತಾರೀಖಿನ ರಾತ್ರಿ, ಪ್ರಧಾನಿ ನರೇಂದ್ರ ಮೋದಿಯವರು ಭಾರತದ ರಾಜಕೀಯ ಇತಿಹಾಸದಲ್ಲೇ ಅತ್ಯಂತ ಕಠಿಣ ನಿರ್ಧಾರ ಕೈಗೊಂಡು ಕಪ್ಪು ಹಣದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಮಾಡಿರುವುದು ನಿಮಗೆಲ್ಲ ತಿಳಿದಿದೆ.

ಕಪ್ಪು ಹಣದ ವಿರುದ್ಧ ದಾಳಿ ಶುರು ಮಾಡಿರುವ ಪ್ರಧಾನಮಂತ್ರಿಯವರ ವಿರುದ್ಧ ದುಷ್ಟಕೂಟಗಳೆಲ್ಲಾ ಒಂದಾಗುತ್ತಿವೆ. ಇಂತಹ ಸಮಯದಲ್ಲಿ ಪ್ರಧಾನಿಯವರಿಗೆ ನೈತಿಕ ಬೆಂಬಲ ನೀಡುವುದು ಪ್ರಜೆಗಳಾದ ನಮ್ಮೆಲ್ಲರ ಕರ್ತವ್ಯ. ಪ್ರಧಾನಿಗೆ ಬೆಂಬಲ ನೀಡಲು ನಿಲುಮೆ ಗುಂಪಿನಿಂದ ಪತ್ರವೊಂದನ್ನು ಬರೆದಿದ್ದೇವೆ. ಈ ಸಮಯದಲ್ಲಿ ಪ್ರಧಾನಿಯವರಿಗೆ ನಮ್ಮ ಬೆಂಬಲದ ಅಗತ್ಯವಿದೆ ಮತ್ತು ಜವಾಬ್ದಾರಿಯುತ ಭಾರತೀಯರಾಗಿ ಇದು ನಮ್ಮ ಕರ್ತವ್ಯವೂ ಹೌದು.ಇದಕ್ಕೆ ನಿಮ್ಮೆಲ್ಲರ ಬೆಂಬಲವನ್ನು ಬಯಸುತ್ತೇವೆ.

ಈ ಕೆಳಗಿನ ಪ್ರತಿಯನ್ನು ನಕಲಿಸಿ ನೀವು ಪೋಸ್ಟ್ ಮುಖಾಂತರ ಅಥವಾ ಆಪ್ mygov ಅಥವಾ http://www.pmindia.gov.in/ ತಾಣದ ಮುಖಾಂತರ ಪ್ರಧಾನಿಯವರಿಗೆ ತಲುಪಿಸಬಹುದು. mygov.in ಆಪ್ ನಲ್ಲಿ ಹಾಗು http://www.pmindia.gov.in/ ನಲ್ಲಿ ಪದಗಳ ಬಳಕೆಗೆ ಮಿತಿ ಇರುವುದರಿಂದ ಯಾವುದಾದರು ಒಂದು ಭಾಷೆಯಲ್ಲಿ ಹಾಕಬಹುದು. ಪತ್ರ ಮುಖೇನವಾದರೆ ಎರಡೂ ಭಾಷೆಯಲ್ಲಿ ಕಳುಹಿಸಿ. ಹಾಗೆಯೇ ಪತ್ರವನ್ನು ನಕಲಿಸುವಾಗ ಕೊನೆಯಲ್ಲಿ ನಿಮ್ಮ ಹೆಸರನ್ನೂ ಸೇರಿಸಿ.

ಪತ್ರ ಕಳುಹಿಸುವ ವಿಳಾಸ

Prime Minister’s Office
Office Address 152, South Block, Raisina Hill, New Delhi-110011

ಧನ್ಯವಾದಗಳು.
– ನಿಲುಮೆ ತಂಡ
——————————————-

“ಮನ್ವಂತರಕ್ಕೊಬ್ಬ ಮೋದಿ ಹಾಗೂ ಮೋದಿಯವರಿಗೊಂದು ಅಭಿವಂದನೆ”

ಪ್ರೀತಿಯ ಮೋದಿಜೀ,

ಸಂಸತ್ ಭವನಕ್ಕೆ ನಮಸ್ಕರಿಸಿಯೂ ಪ್ರವೇಶಿಸಬಹುದು ಎಂದು ತೋರಿಸಿಕೊಟ್ಟಿದ್ದಕ್ಕೆ ಧನ್ಯವಾದ!
ಹಗರಣಗಳೇ ತುಂಬಿದ್ದ ಈ ದೇಶದಲ್ಲಿ, ಹಗರಣವೇ ಇಲ್ಲದೆಯೂ ಸರ್ಕಾರ ನಡೆಯಬಲ್ಲುದು ಎಂದು ತೋರಿಸಿಕೊಟ್ಟಿದ್ದಕ್ಕೆ ಧನ್ಯವಾದ!
ಎದುರಾಳಿ ಬಂದು ದಾಳಿ ಮಾಡಿದರೂ, ಕೈಕಟ್ಟಿ ಕೂರದೇ ಉತ್ತರವನ್ನೂ ಕೊಡಬಹುದು ಎಂದು ತೋರಿಸಿಕೊಟ್ಟಿದ್ದಕ್ಕೆ ಧನ್ಯವಾದ!
ಒಂದೇ ಒಂದು ದಿನವೂ ರಜೆತೆಗೆದುಕೊಳ್ಳದೇ ರಾಜಕಾರಣಿಯೊಬ್ಬ ದೇಶಕ್ಕಾಗಿ ದುಡಿಯಬಲ್ಲ ಎಂದು ತೋರಿಸಿಕೊಟ್ಟಿದ್ದಕ್ಕೆ ಧನ್ಯವಾದ!
ದೊಡ್ಡದಾಗಿ ಯೋಚಿಸಬಲ್ಲೆವು, ಅಷ್ಟೇ ಭವ್ಯವಾಗಿ ನಿರೂಪಿಸಲೂಬಲ್ಲೆವು ಎಂದು ತೋರಿಸಿಕೊಟ್ಟಿದ್ದಕ್ಕೆ ಧನ್ಯವಾದ!
ವಿಶ್ವವೂ ನಮ್ಮೆಡೆಗೆ ಹೆಮ್ಮೆಯಿಂದ ನೋಡಬಲ್ಲುದು ಎಂದು ತೋರಿಸಿಕೊಟ್ಟಿದ್ದಕ್ಕೆ ಧನ್ಯವಾದ!
ಯೋಗ ದಿನ, ಭಗವದ್ಗೀತೆ, ದೀಪಾವಳಿ, ಪ್ಯಾರೀಸ್ ಒಪ್ಪಂದ…ಹೀಗೇ ವಿಶ್ವಸಂಸ್ಥೆಯೂ ನಮ್ಮನ್ನು ನೆನಪಿಸಿಕೊಳ್ಳಬಲ್ಲುದು ಎಂದು ತೋರಿಸಿಕೊಟ್ಟಿದ್ದಕ್ಕೆ ಧನ್ಯವಾದ!
ಪ್ರತಿಯೊಬ್ಬ ನಾಗರೀಕನೂ ಸೈನಿಕರಿಗೊಂದು ಕಾಣಿಕೆ, ಅವರ ತ್ಯಾಗಕ್ಕಾಗಿ ನಮನಸಲ್ಲಿಸಲು ಸಾಧ್ಯ ಎಂದು ತೋರಿಸಿಕೊಟ್ಟಿದ್ದಕ್ಕೆ ಧನ್ಯವಾದ!
ಕಪ್ಪುಹಣವೂ ಅದರಡಿ ಕೂತಿದ್ದ ಖೂಳರನ್ನೂ ಹೆಡೆಮುರಿಕಟ್ಟಬಹುದು ಎಂದು ತೋರಿಸಿಕೊಟ್ಟಿದ್ದಕ್ಕೆ ಧನ್ಯವಾದ!
.
.
.
ಎಲ್ಲಕ್ಕಿಂತ ಮುಖ್ಯವಾಗಿ ಸರ್ಕಾರವನ್ನೂ ನಂಬಬಹುದು ಎಂದು ತೋರಿಸಿಕೊಟ್ಟಿದ್ದಕ್ಕೆ ಧನ್ಯವಾದ ಮೋದೀಜೀ!

ಕಾಳಧನ ನನ್ನದೇಶವನ್ನು ಕೊರೆಯುತಿದ್ದ ಮುಖ್ಯ ಸಮಸ್ಯೆಗಳಲ್ಲೊಂದು. ಅದನ್ನು ನಿರ್ಮೂಲನೆಗೊಳಿಸುವಲ್ಲಿ ನೀವು ತೆಗೆದುಕೊಂಡ ದಿಟ್ಟನಿರ್ಧಾರ ನಿಜಕ್ಕೂ ಪ್ರಶಂಸಾರ್ಹವಾದದ್ದು. ಸಮಸ್ಯೆಗಳಿಗೆ ಬೆನ್ನುತೋರಿಸದೇ, ಎದೆಕೊಟ್ಟು ನಿಂತು ಎದುರಿಸುವ ನಿಮ್ಮ ಛಾತಿ ಹಾಗೂ ಸ್ಥೈರ್ಯ ನನ್ನಂತಹ ಕೋಟ್ಯಾಂತರ ಭಾರತೀಯರ ಹೆಮ್ಮೆ ಹಾಗೂ ನಮಗೆಲ್ಲರಿಗೂ ಉದಾಹರಣೆ. ಧೀಶಕ್ತಿಯೊಂದಿದ್ದರೆ ಎಂತಹ ಕೆಲಸವೂ ಅಸಾಧ್ಯವಲ್ಲ ಎಂಬುದನ್ನು ಮತ್ತೆ ಮತ್ತೆ ನಿರೂಪಿಸಿದ್ದೀರಿ. ನಿಮ್ಮ ನವೆಂಬರ್ 8ರ ಭಾಷಣದ ನಂತರ ನಡೆದ ಘಟನೆಗಳಲ್ಲಿ ಕೆಲವೆಡೆ ನಮಗೆ ಅನಾನುಕೂಲಗಳಾಗಿದ್ದಿರಬಹುದು. ಸರತಿಯ ಸಾಲುಗಳಲ್ಲಿ ನಿಂತು ನಮ್ಮ ಸಮಯಕ್ಕಾಗಿ ಕಾದಿರಬಹುದು. ಆದರೆ ಇದು ದೇಶಸೇವೆಯೆಡೆಗೆ ನನ್ನ ಕನಿಷ್ಟ ಕಾಣೆಕೆಯೆಂದು ಸಂತಸಪಡುತ್ತೇನೆ. ನನಗೆ ಸ್ವಾತಂತ್ರ್ಯಹೋರಾಟದಲ್ಲಿ ಭಾಗವಹಿಸಲಾಗಲಿಲ್ಲ, ನನಗೆ ಸೈನ್ಯದಲ್ಲಿ ನಿಂತು ದೇಶಕಾಯಲಾಗಲಿಲ್ಲ. ಆದರೇನು, ದೇಶೋದ್ಧಾರದ ನಿಮ್ಮ ಪ್ರತಿಹೆಜ್ಜೆಯಲ್ಲೂ ನಾನು ನಿಮಗೆ ಸಹಾಯಕನಾಗಿ ನಿಂತು ಭಾರತದ ಋಣವನ್ನು ತೀರಿಸುತ್ತೇನೆ. ನನ್ನ ದೇಶವನ್ನು ಅಭಿವೃದ್ಧಿಯ ಮುಂಚೂಣಿಗೆ ಕೊಂಡೊಯ್ಯುವ ನಿಮ್ಮ ಕನಸಿನ ಪ್ರತೀ ಯೋಜನೆಯ ಯಶಸ್ಸಿಗಾಗಿ ಇಂತಹ ಇನ್ನೂ ಎರಡು ಸಾಲಿನಲ್ಲಿ ನಿಲ್ಲಲು ನಾನು ತಯಾರಿದ್ದೇನೆ. ನೀವು ಧೈರ್ಯವಾಗಿ ಮುನ್ನಡೆಯಿರಿ.

ನೀವು ಹಾಗೂ ನಾವು ಈ ಕಪ್ಪುಹಣದ ವಿರುದ್ಧದ ಹೋರಾಟದಲ್ಲಿ ಬಹಳಷ್ಟು ಪಾಠಗಳನ್ನು ಕಲಿತಿದ್ದೇವೆ. ಇದು ಖಂಡಿತಾ ಸುಲಭದ ಕೆಲಸವಾಗಿರಲಿಲ್ಲ. ಆದರೆ ಯೋಜನೆಯೊಂದನ್ನು ಸುಲಭ ಅಥವಾ ಕಷ್ಟವಾಗಿಸುವುದು ನಮ್ಮ ಧೈರ್ಯ ಮತ್ತು ಬದ್ಧತೆಗಳು ಎಂಬುದನ್ನು ಕಲಿತಿದ್ದೇವೆ. ಮುಂದಿನ ಬೃಹತ್ ಯೋಜನೆಗಳಲ್ಲಿ ಈ ಕೆಲಸಗಳನ್ನು ಇನ್ನೂ ಹೆಚ್ಚು ಸುವ್ಯವಸ್ಥಿತ ಹಾಗೂ ಸುಲಲಿತವಾಗಿಸುವತ್ತ ನಮ್ಮೆಲ್ಲರ ಪ್ರಯತ್ನವಿರಲಿ. ಇಂತದ್ದೊಂದು ವಿಶ್ವಮಟ್ಟದ ಯೋಜನೆಯನ್ನು ಸಾಕಾರಗೊಳಿಸಿದ ನಿಮಗೂ, ನಿಮ್ಮ ಕಾರ್ಯಾಂಗ ವ್ಯವಸ್ಥೆಯ ತಂಡಕ್ಕೂ ಇದನ್ನು ಕಾರ್ಯರೂಪಕ್ಕಿಳಿಸಿದ ಎಲ್ಲಾ ಬ್ಯಾಂಕುಗಳ ಪ್ರತಿಯೊಬ್ಬ ಉದ್ಯೋಗಿಗೂ ಇಡೀ ದೇಶದ ಜನತೆಯ ಹೃದಯಾಂತರಾಳದ ನಮನಗಳು.

ದೇಶವನ್ನು ಎಲ್ಲಕ್ಕಿಂತ ಮುಂದಿಟ್ಟು, ನೀವು ದೇಶದ ಪ್ರಧಾನಸೇವಕನಾಗಿ ದುಡಿಯುತ್ತೇನೆ ಹಾಗೂ ದೇಶದ ಅಭ್ಯುದಯಕ್ಕೆ ಸಾಧ್ಯವಿರುವ ಪ್ರತಿಯೊಂದನ್ನೂ ಮಾಡುತ್ತೇನೆ ಎಂದು ನೀವು ಹೇಳಿದ್ದಿರಿ. ದೇಶೋದ್ಧಾರಕ್ಕಾಗಿ ನೀವು ಮಾಡಿರುವ ದೃಡಸಂಕಲ್ಪಗಳು ಹಾಗೂ ಅವನ್ನು ಕಾರ್ಯರೂಪಕ್ಕಿಳಿಸುವ ಎಲ್ಲಾ ಹಂತದಲ್ಲೂ ನಾನು ನನ್ನಿಂದ ಸಾಧ್ಯವಿರುವ ಅಲ್ಪಕೊಡುಗೆಯನ್ನು ಮಾಡುತ್ತೇನೆ ಎಂದು ಈ ಮೂಲಕ ಪ್ರಮಾಣ ಮಾಡುತ್ತಾ ಇನ್ನೊಮ್ಮೆ ನನ್ನಲ್ಲಿ, ನನ್ನ ದೇಶದಲ್ಲಿ ಹೊಸ ಚೈತನ್ಯ ತುಂಬಿರುವ ನಿಮಗೆ ಧನ್ಯವಾದ ತಿಳಿಸುತ್ತಾ, ಹೃದಯಪೂರ್ವಕವಾಗಿ ಹೇಳುತ್ತೇನೆ…. “ಭಾರತ್ ಮಾತಾ ಕೀ ಜೈ”

“ವಂದೇ ಮಾತರಂ”


ಇಂತಿ ನಿಮ್ಮ ವಿಶ್ವಾಸಿ,
ಹೆಮ್ಮೆಯ ಭಾರತೀಯ ನಾಗರೀಕ

ನಿಲುಮೆ ಬಳಗ (www.nilume.net)
( ನಿಮ್ಮ ಹೆಸರು )

———————————–

“A Modi for a millenia and a Thanks to Mr. Modi”

Dear ModiJi,

Thanks for demonstrating that you can enter the Parliament by paying respect to the stepping stone!
Thanks for demonstrating that this country can live without a single scam for 2 consecutive years and counting!
Thanks for demonstrating that we too can retaliate when we are attacked at the bordered!
Thanks for demonstrating that a politician can work without taking a single day break for more than 2 years!
Thanks for demonstrating that that we too can think big and implement grandly!
Thanks for demonstrating that the world too can look at us with pride and appreciation!
Thanks for demonstrating that even the UN can remember India through the Yoga day, Bhagavadgeeta and Deepawali!
Thanks for demonstrating that every citizen can say thanks to our soldiers in their own possible ways! Be it the Army welfare account or OROP!
Thanks for demonstrating that a menace like Blackmoney can too be tackled!
.
.
.
Above all, THANKS MODIJI for demonstrating that in India citizens too can trust the government!

Blackmoney was one of the biggest menaces my country was facing. The steps you have taken and the determination you have shown in implementing those steps are not just commendable but are exemplary too. You chose to take the bull by its horns, rather ignoring it. The fortitude, the fearlessness and the fervor you showed in mitigating this mammoth of a problem is definitely a matter of pride and examples to quote in the coming days. You showed us “Nothing Is Impossible, if you have the determination to achieve it”. After your speech on Nov 8, we may have faced a few inconveniences. We may had to wait in long queues for a few days. But I will definitely take this as my small gift towards my county’s better tomorrow. I couldn’t be a part of the freedom struggle, I couldn’t be a part of my armed forces to protect my land. But I would pledge that I will be with you in every step you take towards a bright future for my India. For every dream project you have which will promise a better days for my children, I am ready to stand in one more queue like this. You continue your march with all the bravery I can emulate.

Yes, we have learnt a few lessons along the way, in this war against blackmoney. This was not an easy project. But we have also learnt that a project is easy or difficult based on the courage and commitment to make it see the end. In the future mega projects let us all make efforts to make this more smoother and more effective. Having said that I can end my appreciation and thanks for making such a world class project come true, to you and the team behind it. I would thank and salute each and every bank employee who stood for implementation of this project.

Two years ago, you said, “I will keep the country first and work as Chief-Servant of this country and I will do everything that is possible for the development of this country”.
Today, I make a promise “to stand with you in every decision and the projects you take for the development and strengthening of my country. I will also help in whatever smaller ways possible to make those projects better”. With this promise, I would like to thank you once again for injecting a new dose of energy in every citizen of this country and I wholeheartedly want to say “Bharat Mata Ki Jai…..”

VANDE MATARAM

Sincerely yours,
A Proud Citizen of India
nilume team ( http://www.nilume.net )
( Your name )

Read more from ಲೇಖನಗಳು
42 ಟಿಪ್ಪಣಿಗಳು Post a comment
  1. ನವೆಂ 16 2016

    jai modhi ji…..

    ಉತ್ತರ
  2. Keerthi C N
    ನವೆಂ 16 2016

    One and only NaMoJi ki Jai…….

    ಉತ್ತರ
  3. ನವೆಂ 16 2016

    ನನ್ನ ಪ್ರಧಾನಿಗೆ ಜಯವಾಗಲಿ

    ಉತ್ತರ
  4. ananth MN
    ನವೆಂ 16 2016

    Jai modi ji

    ಉತ್ತರ
  5. Preeti
    ನವೆಂ 16 2016

    #I am with modi..jai modiji…vande mataram

    ಉತ್ತರ
  6. Archana Fasi
    ನವೆಂ 16 2016

    We are with u sir.jai hind.

    ಉತ್ತರ
  7. venkata giriappa
    ನವೆಂ 17 2016

    Oh I just obey .this a millennium solution for the indian mindset .I stand with modi

    ಉತ್ತರ
  8. NAGARAJA
    ನವೆಂ 17 2016

    I suported to modi aims.keep itup MODIJI.

    ಉತ್ತರ
  9. Niketha Kumari
    ನವೆಂ 17 2016

    Good going modiji… keep it up. we are alwys with you

    ಉತ್ತರ
  10. Srinivas
    ನವೆಂ 17 2016

    Very good decision
    Should ban the illegal properties n moneys of all bloody humans who treat poor people litely.
    This is swachch Bharath abhiyan act
    We all support Modi
    No one can shake him

    ಉತ್ತರ
  11. Yashwanth kulal
    ನವೆಂ 17 2016

    ವಿಶ್ವಗುರು ಭಾರತ

    ಉತ್ತರ
  12. Kiran k g
    ನವೆಂ 17 2016

    Next PM modi ki jai jai

    ಉತ್ತರ
  13. Shashidhara M s
    ನವೆಂ 17 2016

    Dear modi ji,
    I am supporting your move. I am ready to support for this.
    Jai ho modi ji.

    Shashidhara ms

    ಉತ್ತರ
  14. Veeranna
    ನವೆಂ 17 2016

    Modiji Sir, very well done.

    ಉತ್ತರ
  15. Hemanarh
    ನವೆಂ 17 2016

    I like modi

    ಉತ್ತರ
  16. Anonymous
    ನವೆಂ 17 2016

    ಕಪ್ಪು ಹಣದ ಮೂರ್ತ ರೂಪವೇ ಆಗಿರುವ ಮಾಜಿ ಮಂತ್ರಿ ಹಾಗೂ ಜೈಲು ಹಕ್ಕಿ ಜನಾರ್ಧನ ರೆಡ್ಡಿಯ ಮಗಳ ಮದುವೆ ಕಾರ್ಯಕ್ರಮಕ್ಕೆ ಹೋದ ಭಾಜಪ ಮುಖಂಡರನ್ನು ಮೋದಿ ತಕ್ಷಣವೇ ಪಕ್ಷದಿಂದ ಹೊರಹಾಕಬೇಕು ಅಂತ ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರಿಗೆ ಆಗ್ರಹ ಪಡಿಸೋಣ ಮಿತ್ರರೇ. ಹಾಗೂ ಜನಾರ್ಧನ ರೆಡ್ಡಿ ಅವರಿಗೆ ಅತ್ಯಂತ ಆಪ್ತರಾಗಿದ್ದ ಸುಷ್ಮಾ ಸ್ವರಾಜ್ ಅವರು ರೆಡ್ಡಿ ಅವರಿಂದ ಪಡೆದಿರುವ ದೇಣಿಗೆ ಬಗ್ಗೆ ಮೋದಿಯವರು ಶ್ವೇತ ಪತ್ರವನ್ನು ಹೊರಡಿಸಲಿ.

    ಉತ್ತರ
    • Salam Bava
      ನವೆಂ 17 2016

      Ha ha! How about white paper on the 25 lacs given to Gujarat CM as detailed in Sahara diaries?

      ಉತ್ತರ
      • ಶೆಟ್ಟಿನಾಗ ಶೇ.
        ನವೆಂ 18 2016

        ೨೫ ಲಕ್ಷ ಅಲ್ಲ, ೨೫ ಕೋಟಿ.

        ಉತ್ತರ
  17. ಧನಂಜಯ
    ನವೆಂ 17 2016

    ಜೀ ನಿಮ್ಮ ಕನಸು ನಮ್ಮ ಕನಸು ನಿಮ್ಮ ಜೊತೆ ನಾವು ಜೀವದ ಕೂನೆ ಉಸಿರರು ಇರುವ ತನಕ ಇರುತ್ತವೆ

    ಉತ್ತರ
  18. Naveen Achar
    ನವೆಂ 17 2016

    Naveen Achar Addoor

    ಉತ್ತರ
  19. ನವೆಂ 17 2016

    ಪ್ರದಾನ ಮಂತ್ರಿ ಮೋದಿಯವರ ಎಲ್ಲ ಕೆಲಸಗಳಿಗೆ ನಮ್ಮ ಬೆಂಬಲ ಇದೆ

    ಉತ್ತರ
  20. Anantharam KS
    ನವೆಂ 17 2016

    Dear prime minister,
    We are all with you.

    ಉತ್ತರ
  21. A S RAVINDRA
    ನವೆಂ 17 2016

    ಪ್ರದಾನ ಮಂತ್ರಿ ಮೋದಿಯವರ ಎಲ್ಲ ಕೆಲಸಗಳಿಗೆ ನಮ್ಮ ಬೆಂಬಲ ಇದೆ

    ಉತ್ತರ
  22. GIRISH
    ನವೆಂ 17 2016

    You are taken very good decision and you are the man can change the economy.and you are the man for revulsion. And you’re the man perfect for block money. Do not care for opsitions party. Jai Bharat Mathaki. Jai……

    ಉತ್ತರ
  23. ನವೆಂ 17 2016

    We r with u Modi ji do what ever u want

    ಉತ್ತರ
  24. Chandrashekhar
    ನವೆಂ 17 2016

    Great historical move. I am with Modi

    ಉತ್ತರ
  25. Bharath Kumar. V
    ನವೆಂ 17 2016

    Modi ji pls don’t take ur Decision back pls pls pls… Ur in write way always we ll with u

    ಉತ್ತರ
  26. Salam Bava
    ನವೆಂ 17 2016

    Even Tughlaq had his squad of brainless supporters..

    ಉತ್ತರ
  27. Sandhya
    ನವೆಂ 18 2016

    Great job modi ji

    ಉತ್ತರ
  28. ನವೆಂ 18 2016

    That is modi..jai modi ji

    ಉತ್ತರ
  29. Shekar
    ನವೆಂ 18 2016

    Please support PM

    ಉತ್ತರ
  30. ನವೆಂ 18 2016

    anytime anyhow I supporting you sir whole india with u

    ಉತ್ತರ
  31. Sathish madival
    ನವೆಂ 18 2016

    Great historical move. I am with Modi

    ಉತ್ತರ
  32. Sathish madival
    ನವೆಂ 18 2016

    I am with Modi

    ಉತ್ತರ
  33. Raghavendra
    ನವೆಂ 18 2016

    ಮೋದಿಜಿ, ನೀವು ಭಾರತದ ವ್ಯಕ್ತಿ ಅಲ್ಲ, ‘ಶಕ್ತಿ’
    ನಿಮ್ಮ ಈ ಒಳ್ಳೆಯ ಕೆಲಸಕ್ಕೆ, ನೂರಾರು ವಿಘ್ನ..
    ಅವುಗಳು ಕೇವಲ ಸ್ವಲ್ಪ ಸಮಯದವರೆಗೂ.
    ನೂರು ಕೋಟಿ ಭಾರತೀಯರು ನಿಮ್ಮ ಜೊತೆಗಿದ್ದಾರೆ,
    ನಿಮಗೆ ದೇವರು ಹೆಚ್ಚಿನ ಆರೋಗ್ಯ ಮತ್ತು ಆಯಸ್ಸನ್ನು ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಕೊಳ್ಳುತ್ತೇನೆ.
    “ಜೈ ಹಿಂದ್ ಜೈ ಮೋದಿ”

    ಉತ್ತರ
  34. vijay more
    ನವೆಂ 18 2016

    Really good job

    ಉತ್ತರ
  35. Rakesh s m
    ನವೆಂ 19 2016

    Jai modhi ji…..v love u our modhi sir

    ಉತ್ತರ
  36. Dinesh Kumar M S
    ಫೆಬ್ರ 22 2017

    I support this move

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments