ಬ್ರಹ್ಮಚರ್ಯವೇ ಅಸಹಜವೆಂದ ದಾರ್ಶನಿಕ, ಸನ್ಯಾಸಿನಿಯನ್ನು ವಂಚಕಿ ಎಂದ….!!
– ಗುರುರಾಜ ಕೋಡ್ಕಣಿ. ಯಲ್ಲಾಪುರ
“ನಾನು ಯಾರನ್ನೂ ಸಹ ಆದರ್ಶವ್ಯಕ್ತಿಯಾಗಿ ಸ್ವೀಕರಿಸಲಾರೆ. ನನ್ನನ್ನೂ ಸಹ ಯಾರೂ ಆದರ್ಶವಾಗಿ ಸ್ವೀಕರಿಸಬಾರದು. ಆದರ್ಶ ವ್ಯಕ್ತಿತ್ವಗಳಲ್ಲಿ ಮೇಲು ಕೀಳು ಎಂಬ ಭೇದವಿರಬಾರದು. ಮೊದಲು ಜನಿಸಿದ್ದ ಆದರ್ಶ ವ್ಯಕ್ತಿ, ನಂತರ ಜನಿಸಿದ ಮಹಾನ್ ವ್ಯಕ್ತಿಗಿಂತ ಶ್ರೇಷ್ಟವೆನ್ನುವುದು ಅರ್ಥಹೀನ. ವ್ಯಕ್ತಿತ್ವಗಳಲ್ಲಿನ ಮಹಾನತೆ ಸಮಾನಾಂತರ ರೇಖೆಯಂಥದ್ದು. ಮಹಾತ್ಮಾ ಗಾಂಧಿ, ಮದರ್ ತೆರೆಸಾರಂಥಹ ವ್ಯಕ್ತಿತ್ವಗಳ ಮೇಲೆ ನನಗೆ ತೀರ ಕಡಿಮೆ ಗೌರವವಿದೆ ಎಂಬುದು ಅನೇಕರ ಅಂಬೋಣ. ಅಂಥಹ ಅಭಿಪ್ರಾಯಗಳು ಸಂಪೂರ್ಣ ತಪ್ಪು. ಅಸಲಿಗೆ ನನಗೆ ಇಂಥವರ ಮೇಲೆ ಗೌರವವೇ ಇಲ್ಲ. ಅಂದ ಮೇಲೆ ಹೆಚ್ಚು ಗೌರವ, ಕಡಿಮೆ ಆದರ ಎನ್ನುವ ಪ್ರಶ್ನೆಯೇ ನಿರರ್ಥಕ. ಇವರೆಲ್ಲರೂ ಆದರ್ಶವಾದಿ ಅಪರಾಧಿಗಳು ಎನ್ನುವುದು ನನ್ನ ಅಭಿಪ್ರಾಯ. ನಮ್ಮ ಕಾನೂನು ಮರಣದಂಡನೆ ವಿಧಿಸುವ ದುಷ್ಕರ್ಮಿಗಳ ಅಪರಾಧಕ್ಕಿಂತಲೂ ಇಂಥಹ ಆದರ್ಶವಾದಿ ಅಪರಾಧಿಗಳ ಅಪರಾಧ ಘೋರವೆನ್ನುವುದು ನನ್ನ ವಾದ. ಒಂದರ್ಥದಲ್ಲಿ ನಿಜವಾದ ಅಪರಾಧಿಗಳೆಂದರೆ ಇಂಥವರೇ. ಮದರ್ ತೆರೆಸಾರ ಉದಾಹರಣೆಯನ್ನೇ ತೆಗೆದುಕೊಳ್ಳಿ. ಆಕೆಗೆ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು. ವಿಶ್ವದ ಹತ್ತಾರು ರಾಷ್ಟ್ರಗಳು ಆಕೆಯ ಸಾಧನೆಯನ್ನು ಮೆಚ್ಚಿ ಪ್ರಶಸ್ತಿಗಳ ಸುರಿಮಳೆಗೈದವು. ಇಂದಿಗೂ ವಿಶ್ವವಿದ್ಯಾಲಯಗಳು ಆಕೆಗೆ ಒಂದರ ಹಿಂದೊಂದರಂತೆ ಗೌರವ ಡಾಕ್ಟರೇಟ್ ನೀಡುತ್ತಲೇ ಇವೆ. ಇಷ್ಟಾಗಿಯೂ ಆಕೆಯ ಸಾಧನೆಯೇನು ಎಂಬುದು ನನಗರ್ಥವಾಗದ ವಿಷಯ. ಕೈಗೆ ಸಿಕ್ಕ ಅನಾಥರನ್ನೆಲ್ಲ ಎಳೆದುಕೊಂಡು ಹೋಗಿ ಅವರೆಲ್ಲರನ್ನು ಕ್ಯಾಥೋಲಿಕ್ಕರನ್ನಾಗಿ ಪರಿವರ್ತಿಸಿದ್ದೇ ಆಕೆಯ ಸಾಧನೆ.
ಅದೊಮ್ಮೆ ವ್ಯಕ್ತಿಯೊಬ್ಬ ಕಲ್ಕತ್ತಾದ ತೆರೆಸಾರ ಅನಾಥಾಲಯಕ್ಕೆ ತೆರಳಿ, ಅಲ್ಲಿದ್ದ ಸಹಾಯಕಿಯ ಬಳಿ, ‘ನಾನೊಂದು ಮಗುವನ್ನು ದತ್ತು ತೆಗೆದುಕೊಳ್ಳಬೇಕಿದೆ. ದಯವಿಟ್ಟು ಸಹಕರಿಸಿ’ ಎಂದು ಕೇಳಿಕೊಂಡಿದ್ದ. ಬಂದಿದ್ದ ಬಿಳಿಯ ವ್ಯಕ್ತಿಯನ್ನು ನೋಡಿದ ಸಹಾಯಕಿ ಆತ ಕ್ರೈಸ್ತಮತೀಯನೇ ಇರಬೇಕೆಂದು ಊಹಿಸಿ, ‘ನಿಜಕ್ಕೂ ನಮಗಿದು ಸಂತಸದ ವಿಷಯ ಸರ್, ನಮ್ಮಲ್ಲಿ ಸುಮಾರು ಏಳುನೂರು ಅನಾಥ ಮಕ್ಕಳಿದ್ದಾರೆ. ನೀವು ಯಾರನ್ನು ಬೇಕಾದರೂ ದತ್ತು ಪಡೆದುಕೊಳ್ಳಬಹುದು. ಮೊದಲು ಈ ಅರ್ಜಿಯನ್ನು ತುಂಬಿ’ ಎಂದು ಅರ್ಜಿಯೊಂದನ್ನು ಆತನ ಕೈಗಿತ್ತಳು. ಅರ್ಜಿಯಲ್ಲಿದ್ದ ‘ಧರ್ಮ’ ಎನ್ನುವ ಸಾಲಿನಲ್ಲಿ ‘ಪ್ರಾಟೆಸ್ಟಂಟ್ ಕ್ರೈಸ್ತ’ ಎಂದು ತುಂಬಿದ ವ್ಯಕ್ತಿಯತ್ತ ಕೊಂಚ ಗಲಿಬಿಲಿಯಿಂದ ನೋಡಿದ ಸಹಾಯಕಿ, ‘ಒಂದು ನಿಮಿಷ ಇರಿ ಸರ್, ನಾನೊಮ್ಮೆ ತೆರೆಸಾರನ್ನು ಕರೆದುಕೊಂಡು ಬರುತ್ತೇನೆ’ ಎನ್ನುತ್ತ ಅವಸರವಸರವಾಗಿ ಒಳಕ್ಕೆ ಹೋದಳು. ಒಂದೆರಡು ನಿಮಿಷಗಳ ನಂತರ ಸಹಾಯಕಿಯೊಂದಿಗೆ ಹೊರಬಂದ ತೆರೆಸಾ, ‘ದಯವಿಟ್ಟು ಕ್ಷಮಿಸಿ, ಸಧ್ಯಕಂತೂ ನಮ್ಮಲ್ಲಿ ಯಾವುದೇ ಅನಾಥ ಮಗುವಿಲ್ಲ. ನೀವು ನಿಮ್ಮ ವಿಳಾಸವನ್ನು ನಮ್ಮ ಕಚೇರಿಯಲ್ಲಿ ನಮೂದಿಸಿರಿ. ಮುಂದೆ ಮಗುವಿನ ಲಭ್ಯತೆಯಿದ್ದಾಗ ನಿಮಗೆ ಖಂಡಿತವಾಗಿಯೂ ತಿಳಿಸುತ್ತೇವೆ’ ಎಂದು ನುಡಿದರು. ವಿಚಿತ್ರ ನೋಡಿ ಒಂದು ಕ್ಷಣದ ಹಿಂದೆ ಏಳೂನೂರಕ್ಕಿದ್ದ ಮಕ್ಕಳ ಸಂಖ್ಯೆ ಏಕಾಏಕಿ ಶೂನ್ಯವಾಗಿ ಹೋಯಿತು.! ಬಂದಿದ್ದ ವ್ಯಕ್ತಿಯದ್ದು ಕ್ಯಾಥೋಲಿಕ್ ವಿರೋಧಿ ಪಂಥವೆನ್ನುವ ಏಕೈಕ ಕಾರಣಕ್ಕೆ ಆತನನ್ನು ಸಂತಾನ ಸೌಖ್ಯದಿಂದ ವಂಚಿಸಲಾಯಿತು.
ಆ ವ್ಯಕ್ತಿ ನಡೆದ ಘಟನೆಯನ್ನು ಸವಿಸ್ತಾರವಾಗಿ ಪತ್ರಿಕೆಯೊಂದರಲ್ಲಿ ವಿವರಿಸಿದ್ದ. ಅವನ ಮಾತುಗಳ ಆಧಾರದ ಮೇಲೆ ನಾನು ತೇರೆಸಾರನ್ನು ತೀವ್ರವಾಗಿ ಟೀಕಿಸಲಾರಂಭಿಸಿದೆ. ನನ್ನ ಖಂಡನೆಗಳಿಗೆ ಉತ್ತರವಾಗಿ ಪತ್ರ ಬರೆದಿದ್ದ ತೆರೆಸಾ, ‘ನಮ್ಮ ಕ್ಯಾಥೋಲಿಕ್ ಧಾರ್ಮಿಕ ವಾತಾವರಣದಲ್ಲಿ ಬೆಳೆದ ಮಗುವಿನ ಮಾನಸಿಕತೆಗೆ, ಪ್ರಾಟೆಸ್ಟಂಟ್ ರ ಮನೆಯ ವಾತಾವರಣ ಹೊಂದಿಕೆಯಾಗದು ಎನ್ನುವುದು ನನ್ನ ನಂಬಿಕೆ. ಹಾಗಾಗಿ ಮಗುವಿನ ದತ್ತು ನೀಡುವಿಕೆಗೆ ನಾನು ನಿರಾಕರಿಸಿದೆ’ ಎಂದು ವಿವರಿಸಿದ್ದರು. ಆಕೆಯ ವಿವರಣೆಯನ್ನು ಪ್ರಶ್ನಿಸುತ್ತ, ‘ನಿಮ್ಮ ಆಶ್ರಮದಲ್ಲಿರುವ ಪ್ರತಿಯೊಬ್ಬ ಅನಾಥ ಮಕ್ಕಳು ಭಾರತೀಯರು. ಅವರ ಮೂಲ ಧರ್ಮ ಹಿಂದೂ, ಮುಸ್ಲಿಮ್ ಅಥವಾ ಇನ್ನಾವುದೇ ಭಾರತೀಯ ಮತವೇ ಅಗಿರುತ್ತದೆ ಹೊರತು ಕ್ಯಾಥೋಲಿಕ್ ಧರ್ಮವಾಗಿರುವುದಂತೂ ಅಸಾಧ್ಯ. ವಸ್ತುಸ್ಥಿತಿ ಹೀಗಿರುವಾಗ ಯಾವ ಅಧಾರದಲ್ಲಿ ನೀವು ಮಕ್ಕಳನ್ನು ಕ್ಯಾಥೋಲಿಕ್ ಧಾರ್ಮಿಕ ವಾತಾವರಣದಲ್ಲಿ ಬೆಳೆಯಿಸಿದಿರಿ..? ನೀವು ನಿಜಕ್ಕೂ ಮುಕ್ತ ಮನಸ್ಸಿನ ಸೇವಕಿಯೇ ಆಗಿದ್ದಲ್ಲಿ, ಹಿಂದೂ ಮಕ್ಕಳನ್ನು ಹಿಂದೂಗಳ ಧಾರ್ಮಿಕತೆಯೊಂದಿಗೂ, ಉಳಿದ ಮತಗಳ ಕೂಸುಗಳನ್ನು, ಅವರವರ ಮತಗಳ ಧಾರ್ಮಿಕ ವಾತಾವರಣದಲ್ಲಿ ಬೆಳೆಸಿ, ಆಯಾ ಧರ್ಮದ ಪರಿಪಾಲಕರಿಗೆ ಮಕ್ಕಳನ್ನು ದತ್ತು ನೀಡುತ್ತಿದ್ದೀರಿ. ಈಗಿನಂತೆ ಕೇವಲ ಕ್ಯಾಥೋಲಿಕ್ ಕ್ರೈಸ್ತರಿಗೆ ಮಾತ್ರ ನೀಡುತ್ತಿರಲಿಲ್ಲ’ ಎಂದು ಪ್ರತಿಕ್ರಯಿಸಿದೆ. ಅದಕ್ಕೊಂದು ಮರು ಉತ್ತರವನ್ನು ಗೀಚಿದ ತೆರೆಸಾ, ‘ದೇವರು ನಿಮ್ಮನ್ನು ಕ್ಷಮಿಸಲೆಂದು ನಾನು ದಯಾಮಯನಾದ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಬರೆದಿದ್ದರು. ತೆರೆಸಾರ ಉತ್ತರ ನನಗೆ ತೀರ ಬಾಲಿಶವೆನ್ನಿಸಿತ್ತು. ಅವರ ಮರು ಉತ್ತರಕ್ಕೊಂದು ಪ್ರತ್ಯುತ್ತರವನ್ನು ನೀಡುತ್ತ, ‘ನಿಮ್ಮ ಎರಡನೆಯ ಪತ್ರದ ಬಗ್ಗೆ ನನಗೆ ವಿರೋಧವಿದೆ. ನೀವು ಕ್ಷಮೆ ಕೇಳದಿದ್ದರೆ ನಿಮ್ಮ ಮೇಲೆ ನಾನು ದಾವೆ ಹೂಡುವುದಂತೂ ಖಚಿತ. ಮೂಲತಃ ನಾನು ನಾಸ್ತಿಕ. ನನ್ನ ಬಗ್ಗೆ ದೇವರಲ್ಲಿ ಪ್ರಾರ್ಥಿಸುವುದಕ್ಕೆ ನೀವು ಯಾರು? ನನ್ನ ಕುರಿತು ಪ್ರಾರ್ಥಿಸುವಂತೆ ನಾನೇನಾದರೂ ನಿಮಗೆ ಅನುಮತಿ ಪತ್ರ ಬರೆದು ಕೊಟ್ಟಿದ್ದೇನೆಯೇ ? ಇಷ್ಟಕ್ಕೂ ದೇವರು ನನ್ನನ್ನು ಕ್ಷಮಿಸಲು ನಾನು ಮಾಡಿರುವ ಅಪರಾಧವಾದರೂ ಏನು? ನಿಜ ಹೇಳಬೇಕೆಂದರೆ ದೇವರೆನ್ನುವವನು ನಿಜವಾಗಿಯೂ ಇದ್ದರೆ ತನ್ನ ತಪ್ಪಿಗಾಗಿ ಆತ ನಮ್ಮೆಲ್ಲರ ಕ್ಷಮೆ ಕೇಳಬೇಕು. ಏಕೆಂದರೆ ಸೃಷ್ಟಿಯನ್ನು ಕುರೂಪಿಯಾಗಿಸಿದ ಸೃಷ್ಟಿಕರ್ತನಾತ. ಕೋಟಿ ಜನರನ್ನು ಹತ್ಯೆಗೈದ ಹಿಟ್ಲರನನ್ನು ಸೃಷ್ಟಿಸಿದ್ದು ಅವನೇ ಅಲ್ಲವೇ? ಸ್ಟಾಲಿನ್, ಮುಸೋಲಿನಿಯಂತಹ ಭಯಂಕರ ಸರ್ವಾಧಿಕಾರಿಗಳ ಜನ್ಮದಾತನೂ ಅವನೇ. ನಿಜಕ್ಕೂ ಭಗವಂತ ಸೃಷ್ಟಿಕರ್ತನೆನ್ನುವುದು ಸತ್ಯವಾಗಿದ್ದರೆ ಇಂಥಹ ವಿಷಜಂತುಗಳನ್ನು ಏಕೆ ಸೃಷ್ಟಿಸಿದ ಎನ್ನುವುದಕ್ಕೆ ಆತ ವಿವರಣೆ ನೀಡಬೇಕು. ನಾನು ಯಾವ ಅಪರಾಧವನ್ನು ಮಾಡಿಲ್ಲ. ನಿಮ್ಮನ್ನು ಪ್ರಶ್ನಿಸುವುದೇ ಅಪರಾಧವೆಂದಾದಲ್ಲಿ ನಿಮ್ಮ ಆಲೋಚನೆಯೂ ಸರ್ವಾಧಿಕಾರದ ಧೋರಣೆಗಿಂತ ಭಿನ್ನವೇನಲ್ಲ’ ಎಂದು ಕೊಂಚ ತೀಕ್ಷ್ಣವಾಗಿಯೇ ಪತ್ರ ಬರೆದೆ.
ತೆರೆಸಾರ ವಾದಗಳು ನಿಜಕ್ಕೂ ಆಘಾತಕಾರಿ. ಆಕೆ ಭಾರತದಂತಹ ಬಡ ರಾಷ್ಟ್ರಗಳಲ್ಲಿ ಜನಸಂಖ್ಯಾ ನಿಯಂತ್ರಣದ ವಿರುದ್ಧವಾಗಿ ಮಾತನಾಡುತ್ತಾರೆ. ಗರ್ಭನಿರೋಧಕ ಮಾತ್ರೆಗಳ ಬಳಕೆಯನ್ನು ವಿರೋಧಿಸುತ್ತಾರೆ. ಗರ್ಭಪಾತವನ್ನು ಖಂಡಿಸುತ್ತಾರೆ. ಇದಕ್ಕೆ ಕಾರಣವೂ ಸ್ಪಷ್ಟವಾಗಿದೆ. ಹೆಚ್ಚುಹೆಚ್ಚು ಹೊಸಜೀವಗಳು ಹುಟ್ಟದಿದ್ದರೆ, ಹೊಸಹೊಸ ಅನಾಥ ಮಕ್ಕಳು ಸಿಗುವುದಾದರೂ ಹೇಗೆ..?? ಕ್ಯಾಥೋಲಿಕ್ಕರ ಸಂಖ್ಯೆಯನ್ನು ಹೆಚ್ಚಿಸಲು ತೆರೆಸಾರಿಗೆ ಬಹಳಷ್ಟು ಅನಾಥ ಮಕ್ಕಳ ಅವಶ್ಯಕತೆಯಿದೆ. ಹಾಗಾಗಿಯೇ ಈ ಮಹಿಳೆಯನ್ನು ನಾನು ವಂಚಕಿ ಎಂದು ಕರೆಯುತ್ತೇನೆ. ಆಕೆ ಮಾತ್ರವಲ್ಲ ಆಕೆಯಂತಹ ಪ್ರತಿಯೊಬ್ಬ ಸನ್ಯಾಸಿನಿಯರೂ ನನ್ನ ಪ್ರಕಾರ ಅಪರಾಧಿಗಳೇ. ಇಂಥವರು ಆಚರಿಸುವ ಬ್ರಹ್ಮಚರ್ಯ, ಸಲಿಂಗಕಾಮದ ಹುಟ್ಟಿಗೆ ಕಾರಣವಾಗುತ್ತದೆನ್ನುವುದು ನನ್ನ ಅಭಿಮತ. ಸಲಿಂಗಕಾಮವೇ ಏಡ್ಸ್ ನಂತಹ ಭಯಾನಕ ಮಾರಿಗಳ ಹುಟ್ಟಿಗೆ ಕಾರಣವೆನ್ನುವುದು ಗೊತ್ತಿರದ ವಿಷಯವೇನಲ್ಲ. ಅನೇಕ ಮಾರಣಾಂತಿಕ ಲೈಂಗಿಕ ಕಾಯಿಲೆಗಳ ಹೆಚ್ಚಳಕ್ಕೂ ಇಂತಹ ದಾದಿಯರು ಕಾರಣರಾಗುತ್ತಾರೆನ್ನುವುದು ನನ್ನ ಬಲವಾದ ನಂಬಿಕೆ.
ಇಷ್ಟಕ್ಕೂ ಬ್ರಹ್ಮಚರ್ಯವೆನ್ನುವುದು ವೈಜ್ನಾನಿಕವಲ್ಲ. ಅದೊಂದು ಪ್ರಕೃತಿವಿರೋಧವಾದ ಅಸ್ವಾಭಾವಿಕ ಪ್ರಕ್ರಿಯೆ. ಜಗತ್ತಿನಲ್ಲಿ ಲಕ್ಷಾಂತರ ವೈದ್ಯರಿದ್ದಾರೆ, ಸಾವಿರಾರು ವಿಜ್ನಾನಿಗಳಿದ್ದಾರೆ. ಆದರೆ ಸಂಪೂರ್ಣ ಬ್ರಹ್ಮಚರ್ಯವೆನ್ನುವುದು ತೀರ ಅಸಹಜ ಮತ್ತು ಅಸಾಧ್ಯವೆನ್ನುವ ಸತ್ಯವನ್ನು ಇದುವರೆಗೂ ಒಬ್ಬನೇ ಒಬ್ಬ ಪ್ರಭೃತಿಯೂ ಧೈರ್ಯವಾಗಿ ನುಡಿಯದಿರುವುದು ನನ್ನಲ್ಲಿ ನಿಜಕ್ಕೂ ಸೋಜಿಗವನ್ನುಂಟುಮಾಡಿದೆ. ಲೈಂಗಿಕತೆಯೆನ್ನುವುದು ಜೀವಶಾಸ್ತ್ರದ ಬಹುಮುಖ್ಯ ಚರ್ಯೆ. ಸೃಷ್ಟಿಯ ಪ್ರಕ್ರಿಯೆಯ ಇಂಥಹ ಅನೇಕ ಅಂಶಗಳು ನಮ್ಮ ಮನಸ್ಸಿನ ನಿಯಂತ್ರಣದಲ್ಲಿಲ್ಲ. ಕನಿಷ್ಟ ಪಕ್ಷ ನೀವು ಬೆವರುವುದನ್ನು ಸಹ ನಿಯಂತ್ರಿಸಲಾರಿರಿ. ‘ನಾನು ಇನ್ಮೇಲೆ ಎಂದಿಗೂ ಬೆವರುವುದೇ ಇಲ್ಲ’ ಎಂದು ಪ್ರತಿಜ್ನೆ ಮಾಡುವುದನ್ನೇ ನೀವು ಶ್ರೇಷ್ಟತೆಯೆಂದುಕೊಂಡರೆ ಅದು ನಿಮ್ಮ ಮೂರ್ಖತನವಷ್ಟೇ. ದೇಹಕ್ಕೆ ತನ್ನದೇ ಆದ ಕಾರ್ಯವೈಖರಿಯಿದೆ. ಹುಟ್ಟಿನಿಂದಲೂ ತನ್ನ ಕಾರ್ಯವೈಖರಿಯ ಬಗ್ಗೆ ದೇಹಕ್ಕೊಂದು ಸ್ಪಷ್ಟತೆಯಿದೆ. ಹಾಗಾಗಿಯೇ ದೇಹದ ಪ್ರಮುಖ ಕಾರ್ಯವಾಗಿರುವ ಲೈಂಗಿಕತೆಯನ್ನು ತಡೆಹಿಡಿದು ಬ್ರಹ್ಮಚರ್ಯವನ್ನಾಚರಿಸುವ ಎಲ್ಲ ಸನ್ಯಾಸಿಗಳು ನನಗೆ ಆಷಾಢಭೂತಿಗಳಾಗಿ ಗೋಚರಿಸುತ್ತಾರೆ.
ನೈಸರ್ಗಿಕವಾಗಿ ಬ್ರಹ್ಮಚರ್ಯವೆನ್ನುವುದು ಅಸ್ತಿತ್ವದಲ್ಲಿರಲೇ ಇಲ್ಲ. ಭವಿಷ್ಯದಲ್ಲಿಯೂ ಅದರ ಸ್ವಾಭಾವಿಕ ಅಸ್ತಿತ್ವ ಸಾಧ್ಯವಿಲ್ಲ. ಬ್ರಹ್ಮಚರ್ಯವೆನ್ನುವುದು ದೈವತ್ವದ ಇನ್ನೊಂದು ಮುಖ, ಅತಿಮಾನುಷ ಅನುಭವ ಎಂದುಕೊಳ್ಳುತ್ತ ಮೂರ್ಖನಂತೆ ಆಲೋಚಿಸುವ ಸನ್ಯಾಸಿಗಳು, ದಾದಿಯಂದಿರು ಮತ್ತು ಕೆಲವು ಅರಿವುಗೇಡಿ ಮಾನವರು ಮಾತ್ರ ಕೃತಕವಾಗಿ ಬ್ರಹ್ಮಚರ್ಯವನ್ನು ಸೃಷ್ಟಿಸಿಕೊಳ್ಳುತ್ತಿದ್ದಾರಷ್ಟೇ. ಇದರ ಪರಿಣಾಮವಾಗಿ ಸಲಿಂಗಕಾಮ, ವಿಕೃತಕಾಮ, ಹಸ್ತಮೈಥುನದಂತಹ ಅಸಹಜ ಕ್ರಿಯೆಗಳ ಜನ್ಮಕ್ಕೆ ಸನ್ಯಾಸಿಗಳು ಪರೋಕ್ಷವಾಗಿ ಕಾರಣರಾಗುತ್ತಿದ್ದಾರೆ. ರಾಷ್ಟ್ರಪಿತ ಎಂದು ಗುರುತಿಸಿಕೊಳ್ಳುವ ಮಹಾತ್ಮ ಗಾಂಧಿ, ತನ್ನ ಹದಿನಾಲ್ಕರ ಅನುಯಾಯಿಗೆ ಬ್ರಹ್ಮಚರ್ಯದ ಪಾಲನೆಗೆ ಒತ್ತಾಯಿಸುತ್ತಿದ್ದರು. ಆದರೆ ನಿಮಗೆ ಗೊತ್ತೆ..? ತಮ್ಮ ಎಪ್ಪತ್ತನೆಯ ವಯಸ್ಸಿನಲ್ಲಿಯೂ ಸ್ವತಃ ಗಾಂಧಿ ಸ್ಪಪ್ನಸ್ಖಲನವನ್ನು ಅನುಭವಿಸುತ್ತಿದ್ದರಂತೆ. ಹೀಗಿರುವಾಗ ತನ್ನ ಲೈಂಗಿಕಾಭಿವ್ಯಕ್ತಿಯ ಉತ್ಕಟತೆಯ ವಯೋಮಾನದ ಹೊಸ್ತಿಲಲ್ಲಿರುವ ಹದಿಹರೆಯದ ಯುವಕನಿಗೆ ಬ್ರಹ್ಮಚರ್ಯದ ಪಾಠವನ್ನು ಬೋಧಿಸುವುದರಲ್ಲಿ ಅರ್ಥವಿದೆಯೇ..? ತಮ್ಮನ್ನು ತಾವು ಮಹಾನ್ ವ್ಯಕ್ತಿತ್ವವೆಂದು ಕರೆದುಕೊಳ್ಳುವ ಜನರ ಇಂಥಹ ಇಬ್ಬಂದಿತನವನ್ನು ಕಂಡಾಗ ನನಗೆ ಕೋಪಿಸಿಕೊಳ್ಳುವುದೋ, ನಗುವುದೋ ಎಂದು ತಿಳಿಯುವುದಿಲ್ಲ” ಎನ್ನುತ್ತ 1979ರಲ್ಲಿ ಮದರ್ ತೆರೆಸಾರ ನೊಬೆಲ್ ಪ್ರಶಸ್ತಿಯ ಕುರಿತಾಗಿ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿದವರು ದಾರ್ಶನಿಕ ರಜನೀಶ್ ಓಶೋ.
ಕಳೆದ ಕೆಲವು ದಿನಗಳಿಂದ ಮದರ್ ತೆರೆಸಾರ ಕುರಿತು ಚರ್ಚೆಗಳಾಗಿದ್ದು ನಿಮಗೆ ನೆನಪಿರಬಹುದು. ಸಂತ ಎಂದು ಮದರ್ ತೆರೆಸಾರನ್ನು ಗುರುತಿಸಿದ್ದ ವ್ಯಾಟಿಕನ್, ಇದೇ ಸೆಪ್ಟೆಂಬರ್ ತಿಂಗಳಿನಲ್ಲಿ ಅಧಿಕೃತವಾಗಿ ಆಕೆಯನ್ನು ಸಂತ ಪದವಿಗೇರಿಸಿತು. ಆಕೆ ಮಾನವತಾವಾದದ ಮಹಾನ್ ನಾಯಕಿ ಎಂಬುದು ಹಲವರ ವಾದವಾಗಿದ್ದರೆ, ಆಕೆಯ ಸಮಾಜಸೇವೆ ಕೇವಲ ವಂಚನೆಯಷ್ಟೇ, ಮತಪ್ರಚಾರವೇ ಆಕೆಯ ಪ್ರಮುಖ ಉದ್ದೇಶವಾಗಿತ್ತೆನ್ನುವುದು ಕೆಲವರ ತರ್ಕ. ಇವೆಲ್ಲದರ ನಡುವೆ ನನ್ನ ಆಧ್ಯಾತ್ಮಿಕ ಗುರು ಆಚಾರ್ಯ ರಜನೀಶ್ ಆಕೆಯ ಬಗ್ಗೆ ಏನು ಹೇಳಿರಬಹುದೆನ್ನುವ ಕುತೂಹಲಕ್ಕೆ ಹುಡುಕಿಕೊಂಡಾಗ ಕೈಗೆ ಸಿಕ್ಕ ಪ್ರವಚನವನ್ನು ನಿಮ್ಮೆದುರಿಗಿಡುವ ಮನಸ್ಸಾಗಿ ಅನುವಾದಿಸಿದ್ದೇನೆ. ಸುಮ್ಮನೇ ಓದಿಕೊಳ್ಳಿ. ಓದಿದ ಮಾತ್ರಕ್ಕೆ ಓಶೋರವರ ವಾದವನ್ನು ಒಪ್ಪಲೇಬೇಕೆನ್ನುವ ಒತ್ತಾಯವೇನಿಲ್ಲ. ರಜನೀಶರ ವಿಲಕ್ಷಣವೆನ್ನಿಸಬಹುದಾದ ಈ ವಿಭಿನ್ನ ಅಭಿಪ್ರಾಯವನ್ನು ಒಪ್ಪಿಕೊಳ್ಳುವ, ಒಪ್ಪಿಕೊಳ್ಳದೇ ಇರುವ ಎಲ್ಲ ಸ್ವಾತಂತ್ರ್ಯವೂ ನಿಮಗಿದೆಯಲ್ಲವೇ…?
100% Oppabahudada Lekhana .. thumba adhbuthavagi explain madidiraa ..
ಕೇವಲ ಮದರ್ ತೆರೇಸಾ ರನ್ನು ವಿರೋಧಿಸಿದ ಕಾರಣಕ್ಕೆ ಓಶೋರನ್ನು ಸಮರ್ಥಿಸಿಕೊಳ್ಳುವ ಅಗತ್ಯವಿಲ್ಲ. ರಜನೀಶ್ ತಮ್ಮ ಆಶ್ರಮದ ಶಾಖೆಯೊಂದನ್ನು ಅಮೆರಿಕದ ಓರೆಗಾನ್ ಪ್ರ್ಯಾಂತ್ಯದಲ್ಲಿ ತೆಗೆದು, ಅಲ್ಲಿಯ ಕಾನೂನುಗಳ ದುರುಪಯೋಗ ಮಾಡಿಕೊಂಡು ‘ರಜನೀಶ್ ಬಾಯೊಟೆರರಿಸಮ್’, ಮತ್ತು ‘ಯು ಎಸ್ ಅಟಾರ್ನಿ ಚಾರ್ಲ್ಸ್ ಟರ್ನರ್ ರ ಹತ್ಯೆಯ ಸಂಚು’ ಮುಂತಾದ ಕ್ರೈಮ್ ಗಳಲ್ಲಿ ಸಿಕ್ಕಿಕೊಂಡು ಅಲ್ಲಿಂದ ಓಡಿಹೋಗುವ ಪ್ರಯತ್ನದಲ್ಲಿದ್ದಾಗ ಸೆರೆಹಿಡಿಯಲ್ಪಟ್ಟು ‘ಪ್ಲೀ ಬಾರ್ಗೇನ್’ ನ ಫಲಿತ, ಬಿಡುಗಡೆ ಹೊಂದಿದ್ದರು. ಈ ಪ್ರಕರಣದಲ್ಲಿ ಅವರ ಶಿಷ್ಯೆ ‘ಮಾ ಆನಂದ್ ಶೀಲಾ’ ಮತ್ತು ಇತರ ಕುಟಿಲ ಅನುಯಾಯಿಗಳ ಮೇಲೆ ಅಪವಾದ ಹೊರೆಸಿ, ಅಂಥವರ ಗುರುವಾಗಿ ತನಗಿರುವ ಜವಾಬ್ದಾರಿಯನ್ನು ಹೊರದೇ ಅಮೆರಿಕದಿಂದ ಗಡಿಪಾರಾಗಿ ಭಾರತಕ್ಕೆ ಬಂದರು. ಭಾರತದ ಅಧ್ಯಾತ್ಮಿಕತೆಯನ್ನು ಈ ಪರಂಪರೆಯ ಹೊರಗೆ ಜನ್ಮತಾಳಿ ಬೆಳೆದ ಕುತೂಹಲಿಗಳಿಗೆ ಅರ್ಥ ಮಾಡಿಸುವಲ್ಲಿ ರಜನೀಶ ಅತ್ಯಂತ ಭಾವಪೂರ್ಣ ಸಂವಹನಕಾರರಾದರೆ ಹೊರತು, ಅಂಥ ಸಂವಹನಕಾರ/ ಗುರು ಆಗಲು ಅತ್ಯಂತ ಮುಖ್ಯವಾದ ಶೀಲ (character)ವನ್ನು ಅವರು ಹೊಂದಿರಲಿಲ್ಲ ಎನ್ನುವುದು ಖೇದಕರ ವಿಷಯ!
‘ನೈಸರ್ಗಿಕವಾಗಿ ಬ್ರಹ್ಮಚರ್ಯ ಎನ್ನುವುದು ಅಸ್ತಿತ್ವದಲ್ಲಿರಲೇ ಇಲ್ಲ..’ ಎನ್ನುವ Dogmatic ಹೇಳಿಕೆಯನ್ನೇ ಗಮನಿಸಿ, ರಜನೀಶ್ ರ ‘ಚಳುವಳಿ’ಯಂತಹ ಉನ್ಮಾದ ಉತ್ತುಂಗದಲ್ಲಿದ್ದಾಗ ಪಾಶ್ಚಿಮಾತ್ಯ ದೇಶಗಳು ಸಲಿಂಗ ಕಾಮದ ಅಸ್ತಿತ್ವದ ಬಗ್ಗೆ ಇನ್ನೂ ಕಣ್ಣು ಬಿಡುತ್ತಿದ್ದವು, ಮತ್ತದರ ಬಗ್ಗೆ ಭಯದ ಹೊರತಾಗಿ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಅಧ್ಯಯನ ನಡೆಸುತ್ತಿದ್ದವು. ಆದರೆ, ಸಲಿಂಗಕಾಮದ ಬಗ್ಗೆ ರಜನೀಶ್ ರ ಅಭಿಪ್ರಾಯ ಹಾಸ್ಯಾಸ್ಪದ ಮಾತ್ರವಲ್ಲ, ಡೇಂಜರಸ್ ಕೂಡಾ! ‘ಅದು ಹುಟ್ಟಿಕೊಂಡಿರುವುದು ಧಾರ್ಮಿಕ ಪ್ರವೃತ್ತಿಯನ್ನು ಬಲವಂತವಾಗಿ ಹೊರಿಸುವುದರಿಂದ..’ ಎಂದು ನಂಬಿದ್ದಲ್ಲದೇ ತನ್ನ ಅನುಯಾಯಿಗಳಿಗೂ ಅದನ್ನೇ ಉಪದೇಶ ಮಾಡುತ್ತಿದ್ದರು, ಓಶೋ!
ಮುಂದುವರಿದು ಹೇಳುವುದಾದರೆ, ಲೈಂಗಿಕ ಪ್ರವೃತ್ತಿಯ ಬಗ್ಗೆ ಸಂಶೋಧನೆ/ ಅಧ್ಯಯನ ನಡೆಸುವವರು ಜನರ ನಡುವೆ ಅತ್ಯಂತ ಕಡಿಮೆ ಪ್ರಮಾಣದಲ್ಲಿರುವ ‘asexual’ (ಅಲೈಂಗಿಕ, ಎಂದರೆ ಸೆಕ್ಸ್ ಬಗ್ಗೆ ಆಸಕ್ತಿಯೇ ಇಲ್ಲದ) ವ್ಯಕ್ತಿಗಳ ಅಸ್ತಿತ್ವವನ್ನು ಇಂದಿನ ದಿನಗಳಲ್ಲಿ ಗಂಭೀರವಾಗಿ ಪರಿಗಣಿಸುತ್ತಿದ್ದಾರೆ. ಸಾಧಾರಣ ‘ಹುಲುಮಾನವ’ರಲ್ಲಿ ಲೈಂಗಿಕ ಬೆಳವಣಿಗೆಯ ನಂತರ ಸೆಕ್ಸ್ ಗೆ ಸಂಬಂಧ ಪಟ್ಟ ವಿಷಯಗಳಿಂದ ನಮ್ಮ ಇಂದ್ರಿಯಗಳು ಪ್ರಚೋದಿತವಾದರೆ (ಬೆತ್ತಲೆ ದೇಹದ ನೋಟ, ಸೆಕ್ಸ್ ಗೆ ಸಂಬಂಧಿಸಿದ ಸದ್ದುಗಳು, ಸ್ಪರ್ಶ, ಅಷ್ಟೇಕೆ ಅದರ ಬಗ್ಗೆ ಯೋಚನೆ ಬಂದರೂ) ಮಿದುಳು ಪ್ರತಿಕ್ರಿಯಿಸುವುದು ಹೃದಯದ ಬಡಿತದ ಏರಿಳಿತ, ಉಸಿರಾಟದ ತೀವ್ರತೆ, ಬೆವರು, ಮತ್ತು ಕಡೆಗೆ ಸ್ಖಲನ, ಇವುಗಳ ಮೂಲಕ್. ಆದರೆ ಇದ್ಯಾವುದೂ ಆಗದ ಜನರು ಲಿಂಗಭೇದವಿಲ್ಲದೆ ನಮ್ಮ ನಡುವೆ ಇದ್ದಾರೆ. ಅವರೂ ಕೂಡಾ ನಮ್ಮಂತೆ ಮನುಷ್ಯರೇ, ಮಿಕ್ಕ ಪ್ರಾಣಿಸಹಜ ವ್ಯಾಪಾರಗಳಾದ, ಹಸಿವು, ನಿದ್ದೆ ನೀರಡಿಕೆ, ಮತ್ತು ಭಯಗಳು ಅವರನ್ನೂ ಕಾಡುತ್ತವೆ. ಆದರೆ ಸೆಕ್ಸ್ ಸಂಬಂಧಿಸಿದಂತೆ ಅವರ ಪ್ರತಿಕ್ರಿಯೆ ತಣ್ಣನೆಯದು. ಇವರು ಕೂಡಾ ನಮ್ಮಷ್ಟೇ ನೈಸರ್ಗಿಕ. ಈ ಹಿನ್ನೆಲೆಯಲ್ಲಿ ಕಾಮ ಮಾತ್ರ ನೈಸರ್ಗಿಕ, ಬ್ರಹ್ಮಚರ್ಯ ಅಲ್ಲ ಎನ್ನುವುದನ್ನು ವೈಜ್ಞಾನಿಕ ಅಂತ ವಾದಿಸಿದರೆ, ಆ ವಾದವನ್ನು ಒಂದು ಚಿಟಿಕೆ ಉಪ್ಪಿನ ಜತೆ ತೆಗೆದುಕೊಳ್ಳಬಹುದು.
ಓಶೋ ಅವರು ಮೇಲ್ಮಧ್ಯಮವರ್ಗದ ತೆವಲುಗಳಿಗೆ ತಕ್ಕಂತೆ ಅಧ್ಯಾತ್ಮವನ್ನು ವಿತರಿಸುವ ಸ್ಪಿರಿಚುಯಲ್ ಸೇರ್ವೀಸ್ ಪ್ರೊವೈಡರ್ ಆಗಿದ್ದರು. ಓಶೋ ಅವರ ಕಾಮಚಿಂತನೆಗಳು ಲೋಲುಪರಿಗೆ ಹಿತವೆನಿಸುತ್ತವೆ. ಮದರ್ ತೆರೇಸಾ ನಿಜಕ್ಕೂ ಕಾರುಣ್ಯಮಾಯಿ ನಿಸ್ಸ್ವಾರ್ಥ ಸೇವಕಿ ಅಸಹಾಯಕರ ಆಶಾಕಿರಣವಾಗಿದ್ದಾರೆ. ಮದರ್ ತೆರೇಸಾ ಅವರು ದೇಶದ ತಳವರ್ಗದವರಿಗೆ ಮಾಡಿದ ಸೇವೆಯ ೧% ಕೂಡ ಸ್ವಘೋಷಿತ ಆಚಾರ್ಯ ರಜನೀಶ್ ಮಾಡಲಿಲ್ಲ.
“ಆಕೆಯ ಸಾಧನೆಯೇನು ಎಂಬುದು ನನಗರ್ಥವಾಗದ ವಿಷಯ”
ಓಶೋ ಯಶಸ್ಸಿನ ನಶೆಯಲ್ಲಿ ಹೇಳಿದ ಮಾತು ಇದು. ಈ “ಆಚಾರ್ಯ” ಒಬ್ಬಾನೊಬ್ಬ ದೀನದಲಿತನ ಸೇವೆ ಮಾಡಿದ ಉದಾಹರಣೆಯೂ ಇಲ್ಲ. ಇಂಥವರ ವೈಭವೀಕರಣವನ್ನು ಮಾಡುವುದು ಸರಿಯಲ್ಲ.
ಓಹೋ,ಡೊಂಕುಬಾಲದ ನಾಯಕರು ಬ್ಯಾಂಕಿಂದ ಕಾಯಕದಿಂದ ಬಿಡುಗಡೆಗೊಂಡು ಇಲ್ಲಿ ಬಂದು ಕುಂಯ್ ಕುಂಯ್ವರಾಗವ ಹಾಡಲು ಬಂದಿರುವರೇ!!
ದಾವುದನ ಬಗೆಗೆ ದಿವ್ಯ ಮೌನವನ್ನು ತಳೆದು ಅವನನ್ನು ಕಂಡವನು ಯಾರು ಎಂದು ತೊಪ್ಪೆ ಹಾಕಿದ ಬ್ರದರ್ ಬಸವ ತನ್ನ ಸಗಣಿಯ ಮೇಲೆ ತಾನೇ ಕಾಲಿಟ್ಟು ಜಾರುತ್ತಿರುವ ತಮಾಸೆ ನೋಡಾ ಅಮಾಸೆ ಚನ್ನ ಬಸವಾ!!
ಶಂಕರರನ್ನು ಪೇಜಾವರರನ್ನು,ಇಡೀ ಸನಾತನ ಪರಂಪರೆಯನ್ನು ಯಾವ ತಾವುದೋ ಬಿಕನಾಸಿಗಳ ಪುಸ್ತಕ ಅರ್ಧಂಬರ್ದ ಓದಿ ಬಾಯಿಗೆ ಬಂದಂತೆ ಮಾತು,ಅಂಡು ಹೋದಂತೆ ಹೂಸು ಬಿಡುವ ತಾವು ಎಷ್ಟು ಕಪ್ಪು ಹಣ ಬಿಳಿಗೊಳಿಸಿಕೊಂಡಿರಿ
ದಾವೂದ ನಿನ್ನ ಮಾವನಾ? ;-P ಅದ್ಯಾಕೆ ಯಾವಾಗಲೂ ಅವನದ್ದೇ ಜಪ ಮಾಡ್ತೀ ಮಾರಾಯ?
ದಾವೂದನ ಬಗ್ಗೆ ಸದಾ ಕುತೂಹಲಿ ಆಗಿರುವ ನೀನು ಸಹರಾ ಡೈರಿಯಲ್ಲಿ ದಾಖಲಾಗಿರುವ ನಮೋ ಭ್ರಷ್ಟಾಚಾರದ ಬಗ್ಗೆ ದಿವ್ಯ ಮೌನವಹಿಸಿರುವುದು ಏತಕ್ಕೆ? ನಿನ್ನವರು ಹೇಲು ತಿನ್ನುತ್ತಿದ್ದರೂ ಮಿಕ್ಕವರ ಬಾಯಿಯಲ್ಲಿ ಜಿರಳೆ ಹಾಕುವ ದುಷ್ಟ ಬುದ್ಧಿ ಬಿಡು.
Ha ha! !! Shetkar in one sweep demolishes Hindutva trolls. Lajawab!!
ಅವನ ಹಳವಂಡಗಳ ಬಗ್ಗೆ ನಿನ್ನ ನಿರ್ದಿಷ್ಟ ಅಭಿಪ್ರಾಯ ದಾಖಲಿಸು ಗೂಬೆ ಮುಂಡೇದೆ.ವಿಷಯಾಂತರ ಮಾಡಬೇಡ.
ಶಂಕರಾಚಾರ್ಯರನ್ನು ಕಂಡಿಲ್ಲದೇ ಕಮೆಂಟಿಸುವ ನಿನ್ನ ದುಷ್ಟ ಎಡಬಿಡಂಗಿತನವನ್ನು ಬೆತ್ತಲುಗೊಳಿಸಿಕೊಂಡಿದ್ದೀಯ ಅನ್ನುವುವುದನ್ನು ಒಪಗಪಿಕೋ ಎಂಜಲು ಗಿರಾಕಿ.
ಹೇತ್ಲಾಂಡಿಗಳು,ಸಾಮಾಜಿಕ ನ್ಯಾಯದ ಬಗ್ಗೆ ಬೊಗುಳ್ತವೆ!
500,1000 ನೋಟಿನ ತರಕಲಾಂಡಿ ಕಾರಣ ಕೊಟ್ಟು ಓಡಿಹೋಗುವ ನಿಮ್ಮಂಥ ಪ್ರಗತಿ ಪರರ ಬುದ್ಈ ಗೊತ್ತಿಲ್ಲವೇ ನಮಗೆ. ಬಿಕನಾಸಿ.
ರಾಯರೇ, ನಾವೂ ತಮಗೆ ಹೇಳುವುದು ಇದನ್ನೇ “ಅವನ ಹಳವಂಡಗಳ ಬಗ್ಗೆ ನಿನ್ನ ನಿರ್ದಿಷ್ಟ ಅಭಿಪ್ರಾಯ ದಾಖಲಿಸು ಗೂಬೆ ಮುಂಡೇದೆ.” ಅವನು ಎಂದರೆ ಯಾರು ಗೊತ್ತಾಯ್ತಲ್ಲ, ಸಹರಾ ಡೈರಿಯಲ್ಲಿ ಗುಜರಾತ್ ಮುಖ್ಯಮಂತ್ರಿಗೆ ೫೦ ಕೋಟಿ ನಗದು ಕೊಟ್ಟಿರುವುದರ ಪುರಾವೆ ಇದೆಯಲ್ಲ, ಆ ಮಹಾಪುರುಷನೇ.
ಮೊದಲು ದಾವುದನ ಲೆಕ್ಕ ಚುಕ್ತಾ ಮಾಡು ಗೂಬೆಯೇ.ಅಲ್ಲಿ ನೀನು ಕಂಡಿಲ್ಲದ ಶಂಕರಾಚಾರ್ಯರ ಎಳೆತಂದು,ಆಮೇಲೆ ನೀನು ದಾವುದನ್ನ ಕಂಡಿದೀಯಾ?ಕಂಡಿರುವುದರ ಮೇಲೆ ಕಾಮೆಂಟ್ ಮಾಡು ಅಂತ ಬೊಗಳೆ ಬಿಟ್ಟು ದಾರಿ ತಪ್ಪಿಸಲಿಕ್ಕೆ ಬರಬೇಡ ಎಡಬಿಡಂಗಿ. ಮೊದಲು ಹಿಡಿದ ವಿಷಯದ ತಾರ್ಕಿಕ ಅಂತ್ಯ ಕಾಣಿಸು. ಆಮೇಲೆ ಮೋದಿ,ಸಹಾರಾ, ಥಾರ್ ,ಅಟಕಮ ಮರುಭೂಮಿಗಳ ಬಗ್ಗೆ ಮಾತನಾಡುವಿಯಂತೆ.
ನಿನಗೆ ದಾವುದನ ಬಗ್ಗೆ ಚಕಾರ ಎತ್ತುವ ಧಮ್ಮಿಲ್ಲ,ಅಂಡಿನಲ್ಲಿ ನರವಿಲ್ಲ ಅಂತ ಗೊತ್ತು. ಏನೂ ಮಾಡಲಾರರು ಎಂದೇ ಪೇಜಾವರರ ಮೇಲೆ ಕುರ್ರೇರಿಕೊಂಡು ಹೋಗುವುದೂ ಗೊತ್ತು.
ಕುರಿಯ ತುಪ್ಪಟ ಹೊದ್ದಾಕ್ಷಣ ತೋಳ ಕುರಿಯಾಗದು.
ದಾವೂದನ ಬಗ್ಗೆ ನಿನಗೆ ತುರಿಕೆ ಇದ್ದರೆ ಪ್ರಗತಿಪರರೇಕೆ ತುರಿಸಬೇಕು?!! ಕಾನೂನು ಪ್ರಕಾರ ದಾವೂದನ ಮೇಲೆ ಕ್ರಮ ತೆಗೆದುಕೊಳ್ಳಲು ಗೃಹಮಂತ್ರಿಗೆ ಹೇಳು. ದಾವೂದ್ ಜನಪ್ರತಿನಿಧಿಏನಲ್ಲ ಅವನ ಬಗ್ಗೆ ನಾವೆಲ್ಲಾ ಸ್ಟೇಟ್ಮೆಂಟ್ ಕೊಡಲು! ಸಹಾರ ಭ್ರಷ್ಟಾಚಾರ ಖಾಂಡದಲ್ಲಿ ದಾವೂದ್ ಕೂಡ ಭಾಗಿಯಾಗಿದ್ದರೆ ಅವನನ್ನು ಖಂಡಿಸೋಣ.
ಶಂಕರಾಚಾರ್ಯರನ್ನು ನಿಮ್ಮ ರಾಮಚಂದ್ರಾಪುರ ಮಠದವರೇ ಎಳೆದು ತಂದಿದ್ದಾರೆ ನಿನ್ನೆ ಇವತ್ತಿನ ಪೇಪರ್ ನೋಡು.
ಪೇಜಾವರ ತಮ್ಮನ್ನು ತಾವೇ ಎಳೆದು ತಂದಿದ್ದಾರೆ – ಪಂಕ್ತಿಭೇದ ಸಮರ್ಥನೆ.
ಆತ್ಮಸಾಕ್ಷಿ ನಮೋಗೆ ಇದ್ದರೆ ತಕ್ಷಣ ರಾಜಿನಾಮೆ ನೀಡಿ ಸಹಾರ ಭ್ರಷ್ಟಾಚಾರ ಖಾಂಡದ ತನಿಖೆಯನ್ನು ಎದುರಿಸಲಿ.
ಸುದರ್ಶನ್ ರವರೆ,
ನೀವಾಡುವ ಮಾತುಗಳನ್ನೂ, ಬರೆಯುವ ಬರವಣಿಗೆಯನ್ನೂ ನೋಡಿದರೆ, ನೀವು ಯಾವ ಆಚಾರ್ಯರ ಬಗ್ಗೆಯೂ ಹೇಳುವ ನೈತಿಕತೆ ಹೊಂದಿಲ್ಲ ಎನಿಸುತ್ತದೆ. ಅಸಹ್ಯಕರ ಪದಗಳನ್ನು ಬಳಸಿ ನಿಮ್ಮ ಸಹಮಾನವರನ್ನು ಹೀಯಾಳಿಸುವ ನೀವು, ಎಷ್ಟು ಶಾಸ್ತ್ರಗಳನ್ನು ಓದಿದ್ದರೂ ದೊಡ್ಡ ಸೊನ್ನೆಯೇ. ಹೇಳಲೇ ಬೇಕಾದ ಮಾತುಗಳನ್ನು ಹೇಳಿದ್ದೇನೆ. ಕ್ಷಮಿಸಿ. ನನ್ನ ಮೇಲೂ ಕೆಸರೆರಚಲು ಬರುವ ಮುಂಚೆ ನಿಮ್ಮ ಮನಸ್ಥಿತಿಯ ಬಗ್ಗೆ ಯೋಚಿಸಿ.
BNS, ಅಲೈಂಗಿಕ ಜನರ ಬಗೆಗಿನ ವಿವರಣೆ ಕುತೂಹಲಕಾರಿಯಾಗಿದೆ. ಈ ಹಿಂದೆ ಕನ್ನಡಪ್ರಭದಲ್ಲಿ ಪ್ರತಾಪ್ ಸಿಂಹ ರ ‘ಇಂಡಿಯನ್ ಪೀನಲ್ ಕೋಡ್ ಸೆಕ್ಷನ್ 377’ ಕುರಿತಾದ ಲೇಖನಕ್ಕೆ ಒಂದು ಉದ್ದನೆಯ ಉತ್ತರ ಓದಿದ್ದ ನೆನಪು.. ಆ BNS ನೀವೇನಾ?
ಹೌದು, ಆದರೆ ಅದು ಬಹಳ ದಿನಗಳ ಹಿಂದೆ, ಕನಿಷ್ಠ ಪಕ್ಷ ಮೂರು ವರ್ಷಗಳಾದರೂ ಆಗಿರಬಹುದು, ಆ ಪ್ರತಿಕ್ರಿಯೆ ಬರೆದು..
ಆತ ಹಾಗೆಂದನೆ? ಈ ದೇಶಕ್ಕೆ ಆಕೆ ಸಲ್ಲಿಸಿರುವ ಸೇವೆ ಆ “ದಾರ್ಶಕ ” ನಿಗೆ ಅರ್ಥವಾಗಿದ್ದಿದ್ದರೆ ಹಾಗೆನ್ನಲು ಸಾದ್ಯವಾಗುತ್ತಿರಲಿಲ್ಲ