ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 19, 2016

18

ಪ್ರಧಾನಿಗಳ ನಡೆಯ ಹಿಂದೆ ಎಷ್ಟೆಲ್ಲ ಚಿಂತನೆ ಇದೆಯೆಂದರೆ…

‍ನಿಲುಮೆ ಮೂಲಕ

– ರೋಹಿತ್ ಚಕ್ರತೀರ್ಥ

maxresdefaultಪ್ರಧಾನಿ ನರೇಂದ್ರ ಮೋದಿ ನವೆಂಬರ್ 8ರಂದು ಸಂಜೆ ಮಾಡಿದ ಭಾಷಣದಲ್ಲಿ ಐನೂರು ಮತ್ತು ಸಾವಿರ ರುಪಾಯಿ ಮುಖಬೆಲೆಯ ನೋಟುಗಳನ್ನು ಸರಕಾರ ವಾಪಸು ಪಡೆಯಲಿದೆ ಎಂಬ ಘೋಷಣೆ ಮಾಡಿದರು. ಈ ಕಾರ್ಯಾಚರಣೆ 4 ವಿಷಯಗಳನ್ನು ಗುರಿಯಾಗಿಟ್ಟುಕೊಂಡಿದೆ: ಭ್ರಷ್ಟಾಚಾರ, ಕಪ್ಪುಹಣ, ಭಯೋತ್ಪಾದನೆ ಮತ್ತು ಖೋಟಾನೋಟು. ಈ ನಾಲ್ಕೂ ವಿಷಯಗಳು ಒಂದಕ್ಕೊಂದು ತಳುಕು ಹಾಕಿಕೊಂಡಿರುವುದರಿಂದ ಅವನ್ನು ಒಟ್ಟಾಗಿ ಪರಿಹರಿಸುವ ಇಲ್ಲವೇ ನಿಶ್ಶಕ್ತಗೊಳಿಸುವ ಅತ್ಯಂತ ಪ್ರಬಲ, ಪರಿಣಾಮಕಾರಿ ಪರಿಹಾರದ ಅಗತ್ಯ ಹಲವು ವರ್ಷಗಳಿಂದ ಇತ್ತು. ಹತ್ತು ವರ್ಷ ದೇಶವನ್ನು ಆಳಿದ ನಾಮಕಾವಾಸ್ತೆ ಆರ್ಥಿಕತಜ್ಞರಿಗಾಗದ ಗಟ್ಟಿ-ದಿಟ್ಟ ನಡೆಯನ್ನು ಮೋದಿ ತೋರಿಸಿ ನಾಯಕತ್ವದಲ್ಲಿ ಜ್ಞಾನದ ಜೊತೆ ಧೈರ್ಯವೂ ಬೇಕೆಂಬ ಸಂದೇಶ ರವಾನಿಸಿದ್ದಾರೆ.

ಪ್ರಸ್ತುತ ಲೇಖನದಲ್ಲಿ ಖೋಟಾನೋಟು ಮತ್ತು ಭಯೋತ್ಪಾದನೆಯ ಮುಖವನ್ನಷ್ಟೇ ಸಂಕ್ಷಿಪ್ತವಾಗಿ ಚರ್ಚೆಗೆತ್ತಿಕೊಂಡಿದ್ದೇನೆ. ಭಾರತದಲ್ಲಿ, ಚಲಾವಣೆಯಲ್ಲಿರುವ ಪ್ರತಿ ಹತ್ತು ಲಕ್ಷ ನೋಟುಗಳಲ್ಲಿ 250 ಖೋಟಾನೋಟುಗಳು ಸಿಗುತ್ತವೆ ಎಂದು ಇಂಡಿಯನ್ ಸ್ಟಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ಒಂದು ವಿಸ್ತೃತವಾದ ಅಧ್ಯಯನ ಮಾಡಿ ವರದಿ ಒಪ್ಪಿಸಿತ್ತು. ದೇಶದೊಳಗೆ ಯಾವುದೇ ಸಮಯದಲ್ಲಿ ಚಲಾವಣೆಯಲ್ಲಿರುವ ಒಟ್ಟು ಮೊತ್ತ ಅಜಮಾಸು 400 ಕೋಟಿ ರುಪಾಯಿ. ಇದರಲ್ಲಿ 70 ಕೋಟಿಯಷ್ಟು ಮೌಲ್ಯದ ದುಡ್ಡಿನ ಅಸಲಿಯತ್ತು ಪ್ರಶ್ನಾರ್ಹ. ಭಾರತದಲ್ಲಿರುವ ಖೋಟಾನೋಟುಗಳ ಪೈಕಿ 50%ಕ್ಕೂ ಹೆಚ್ಚಿರುವುದು 1000 ರೂ. ಮುಖಬೆಲೆಯವು. ಎರಡನೇ ಸ್ಥಾನದಲ್ಲಿರುವುದು 500 ರೂ. ಬೆಲೆಯ ನೋಟುಗಳು. ಇವುಗಳಲ್ಲಿ ಹೆಚ್ಚಿನವು ಬಂದು ಸೇರುತ್ತಿರುವುದು ಪಾಕಿಸ್ತಾನದಿಂದ; ಅಲ್ಲಿನ ಇಂಟರ್-ಸರ್ವಿಸ್ ಇಂಟೆಲಿಜೆನ್ಸ್ (ಐಎಸ್‍ಐ) ಎಂಬ ಸರಕಾರೀ ಸಂಸ್ಥೆಯಿಂದ ಎಂದು ಭಾರತದ ಗುಪ್ತಚರ ಇಲಾಖೆ, ರಾ, ಡೈರೆಕ್ಟೊರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ ಮತ್ತು ಸಿಬಿಐ ಜಂಟಿಯಾಗಿ ತನಿಖೆ ನಡೆಸಿ ಸರಕಾರಕ್ಕೆ ವರದಿ ಕೊಟ್ಟಿದ್ದವು. ಈ ಸಂಸ್ಥೆಗಳ ಮಾಹಿತಿಗೆ ಪೂರಕವೆನ್ನುವಂತೆ 2015ರ ಒಂದೇ ವರ್ಷದಲ್ಲಿ ಪೊಲೀಸರು ದೇಶದೊಳಗೆ 30.43 ಕೋಟಿ ರುಪಾಯಿ ಮೌಲ್ಯದ ಒಟ್ಟು 6.32 ಲಕ್ಷ ಖೋಟಾನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಚಲಾವಣೆಯಲ್ಲಿರುವ ಖೋಟಾನೋಟುಗಳ ಪೈಕಿ ಹೆಚ್ಚೆಂದರೆ ಮೂರನೇ ಒಂದು ಭಾಗದಷ್ಟನ್ನು ಮಾತ್ರ ಪತ್ತೆ ಹಚ್ಚಲು ಸಾಧ್ಯ ಎಂಬ ಸಂಭವನೀಯತೆಯನ್ನು ಪರಿಗಣಿಸಿದರೆ ನಮ್ಮ ದೇಶದಲ್ಲಿ 100 ಕೋಟಿ ರುಪಾಯಿ ಮೌಲ್ಯದ ಖೋಟಾನೋಟುಗಳು ಯಾವುದೇ ಕ್ಷಣದಲ್ಲಿ ಚಲಾವಣೆಯಲ್ಲಿರುತ್ತವೆ ಎನ್ನಬಹುದು. ದೇಶದ ಆರ್ಥಿಕತೆಯ ಬೆನ್ನು ಮುರಿಯಲು ಇದಕ್ಕಿಂತ ದೊಡ್ಡ ಹೊಡೆತ ಬೇಕೆ?

ಭಾರತವನ್ನು ದ್ವೇಷಿಸಲೆಂದೇ ಹುಟ್ಟಿದ ದೇಶದಿಂದ ಬೇರೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಪಾಕಿಸ್ತಾನ ಮತ್ತು ಅದರ ಕೈಕೆಳಗಿನ ಸಂಸ್ಥೆಯಾದ ಐಎಸ್‍ಐ, ಭಾರತದ ಆರ್ಥಿಕ ವ್ಯವಸ್ಥೆಯನ್ನು ಕುಸಿಯುವಂತೆ ಮಾಡಲು ಮೂರ್ನಾಲ್ಕು ದಶಕಗಳಿಂದ ಕಂಕಣಬದ್ಧವಾಗಿ ದುಡಿಯುತ್ತಿವೆ. ಪಾಕಿಸ್ತಾನದ ಕರಾಚಿ, ಲಾಹೋರ್, ಪೇಶಾವರ್ ಮತ್ತು ಮುಲ್ತಾನ್‍ಗಳಲ್ಲಿ ಭಾರತದ ನೋಟುಗಳನ್ನು ಮುದ್ರಿಸಲಾಗುತ್ತದೆ ಎಂಬ ಬಲವಾದ ಶಂಕೆ ಇದೆ. ಪಾಕಿಸ್ತಾನದ ಈ ತಂತ್ರವನ್ನು ಭಾರತ ಸಾಕ್ಷಿಸಮೇತ ತೋರಿಸಿ ಮಾನ ಹರಾಜಿಗಿಡಲು ತೊಡಗಿದ ಮೇಲೆ ಐಎಸ್‍ಐ ನೋಟು ಮುದ್ರಿಸುವ ಕೆಲಸವನ್ನು ಯುಎಇ, ಒಮಾನ್‍ನಂತಹ ಗಲ್ಫ್ ರಾಷ್ಟ್ರಗಳಿಗೆ ವರ್ಗಾಯಿಸಿತು. ಅಲ್ಲಿ ಮುದ್ರಿಸಿದ ನೋಟುಗಳನ್ನು ಶ್ರೀಲಂಕಾ, ನೇಪಾಳ, ಬಾಂಗ್ಲಾ ದೇಶ, ವಿಯಟ್ನಾಮ್, ಥಾಯ್ಲಾಂಡ್, ಚೀನಾ, ಸಿಂಗಾಪುರ, ಮಲೇಷ್ಯಾ ದೇಶಗಳ ಮೂಲಕ ಭಾರತಕ್ಕೆ ಹರಿಸಲಾಗುತ್ತದೆ. ನಾಲ್ಕೈದು ವರ್ಷಗಳ ಹಿಂದೆ ಸುಬ್ಬಾಭಾಯ್ ಎಂಬಾತ ನೇಪಾಳದಿಂದ; ಇಕ್ಬಾಲ್ ಖಾನಾ ಎಂಬವನು ಉತ್ತರ ಪ್ರದೇಶ, ದೆಹಲಿಯಿಂದ; ಮುಹಮ್ಮದ್ ಸಫಿ ಎಂಬಾತ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೂಲಕ; ಇಮ್ರಾನ್ ಅಹಮದ್ ಎಂಬವನು ಬಾಂಗ್ಲಾದೇಶ, ಪಶ್ಚಿಮ ಬಂಗಾಳ, ಅಸ್ಸಾಮ್, ಮಣಿಪುರಗಳ ಮೂಲಕ ದೇಶದೊಳಗೆ ಖೋಟಾನೋಟು ಸಾಗಿಸುವ ಹೊಣೆ ಹೊತ್ತಿದ್ದರು. ಎಲ್ಲರೂ ದಾವೂದ್ ಇಬ್ರಾಹಿಂನ ಡಿ-ಕಂಪೆನಿಯ ಮೊದಲ ವರ್ತುಲದ ಸದಸ್ಯರಾಗಿದ್ದರು. ಹೀಗೆ ಒಳ ಬಂದ ಹಣವನ್ನು ದಾರಿ ತಪ್ಪಿದ ಯುವಕರ ತಲೆ ಕೆಡಿಸಿ, ದುಡ್ಡಿನ ಆಮಿಷ ತೋರಿಸಿ ಲಷ್ಕರೆ ತಯ್ಬಾ, ಇಂಡಿಯನ್ ಮುಜಾಹಿದೀನ್, ಹರ್ಕತ್ ಉಲ್ ಜಿಹಾದ್ ಇಸ್ಲಾಮಿ, ಖಾಲಿಸ್ತಾನ್ ಕಮಾಂಡೋ ಫೋರ್ಸ್ ಮುಂತಾದ ಭಯೋತ್ಪಾದಕ ಸಂಘಟನೆಗಳಿಗೆ ಸೇರಿಸಿಕೊಳ್ಳಲು ಬಳಸಲಾಗುತ್ತಿತ್ತು. ದುಡ್ಡಿನ ಕಂತೆಗಳನ್ನು ಗಡಿ ದಾಟಿಸಿ ದೇಶದ ಒಳಸೇರಿಸುವುದೇ ಈ ಇಡೀ ಯೋಜನೆಯ ಪ್ರಮುಖ ಭಾಗವಾಗಿದ್ದುದರಿಂದ ಉಗ್ರರು ಜಮ್ಮು, ಪಶ್ಚಿಮ ಬಂಗಾಳದ ಮಾಲ್ದಾ ಮತ್ತು ಬಿಹಾರದ ಜೋಗ್‍ಬಾನಿ – ಈ ಮೂರು ಜಿಲ್ಲೆಗಳನ್ನು ತಮ್ಮ ಪ್ರಮುಖ ಕೇಂದ್ರಗಳಾಗಿ ಇಟ್ಟುಕೊಂಡಿದ್ದರು. ಇವು ಕ್ರಮವಾಗಿ ಪಾಕಿಸ್ತಾನ, ಬಾಂಗ್ಲಾ ದೇಶ ಮತ್ತು ನೇಪಾಳದ ಗಡಿರೇಖೆಗಳಿಗೆ ಅಂಟಿಕೊಂಡಿವೆ. ಭಾರತಕ್ಕೆ ಇಂದಿಗೂ ಈ ಮೂರು ನೆಲೆಗಳಿಂದಲೇ ಹೆಚ್ಚಿನ ಸಂಖ್ಯೆಯ ಖೋಟಾನೋಟುಗಳು ಹರಿದುಬರುತ್ತಿವೆ. ಹಾಗಾಗಿ, ಭಾರತದೊಳಗಿರುವ ನಕಲಿ ನೋಟುಗಳ ಕಾರಸ್ಥಾನ ಪಾಕಿಸ್ತಾನ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ.

ಒಂದು ಕಾಲದಲ್ಲಿ ಪಾಕಿಸ್ತಾನಕ್ಕೆ ಭಾರತದೊಳಗೆ ಡ್ರಗ್ಸ್ ಮಾಫಿಯಾ ನಡೆಸಿ ಯುವಕರ ದಾರಿ ತಪ್ಪಿಸುವುದು ಪ್ರಮುಖ ಅಜೆಂಡಾ ಆಗಿತ್ತು. ಗಡಿಗುಂಟ ಸೈನಿಕರ ಕಣ್ಣು ತಪ್ಪಿಸಿ ಹಲವು ನೂರು ಕೆಜಿಗಳಷ್ಟು ಹೆರಾಯಿನ್ ಅನ್ನು ಭಾರತದೊಳಗೆ ಹಂಚಲು ಬರುತ್ತಿದ್ದರು ಪಾಕಿಸ್ತಾನದ ವಿವಿಧ ಉಗ್ರಸಂಘಟನೆಗಳ ಜೆಹಾದಿಗಳು. ದೇಶದ ಸೇನೆಗೆ ಹೆಚ್ಚು ಯೋಧರನ್ನು ಕೊಡುತ್ತಿದ್ದ ಹರ್ಯಾಣ, ದೆಹಲಿ, ಪಂಜಾಬ್, ರಾಜಸ್ಥಾನದಂತಹ ರಾಜ್ಯಗಳಲ್ಲಿ ಮಾದಕ ದ್ರವ್ಯದ ಚಟ ಹತ್ತಿಸಿ ಇಡೀ ಯುವಸಮುದಾಯವನ್ನೇ ದಾರಿತಪ್ಪಿಸುವ ಯೋಜನೆಯನ್ನು ಐಎಸ್‍ಐ ಹಾಕಿತ್ತು. ಆ ಪ್ರಯತ್ನದಲ್ಲಿ ಸ್ವಲ್ಪಮಟ್ಟಿಗೆ ಯಶಸ್ವಿಯಾಯಿತು ಕೂಡ. ಹೆರಾಯಿನ್ ಮಾರಿ ಬಂದ ದುಡ್ಡನ್ನು ಈ ಸಂಘಟನೆಗಳು ಭಾರತದ ವಿರುದ್ಧ ಉಗ್ರ ತರಬೇತಿಗೆ, ಭಾರತದಲ್ಲೇ ಉಗ್ರರನ್ನು ಆಯ್ದು ಕೈಗೆ ಬಂದೂಕು ಕೊಡುವುದಕ್ಕೆ ಬಳಸುತ್ತಿದ್ದವು. ಅದಾಗಿ ಒಂದೆರಡು ದಶಕಗಳಲ್ಲಿ ಡ್ರಗ್ಸ್ ಮಾಫಿಯಾವನ್ನು ಭಾರತ ಸರಕಾರ ಉಗ್ರವಾಗಿ ಹತ್ತಿಕ್ಕುತ್ತಿದೆ ಎಂದು ತಿಳಿದ ಮೇಲೆ ಭಾರತದ ನೋಟುಗಳನ್ನು ಪಾಕಿಸ್ತಾನದಲ್ಲೇ ಮುದ್ರಿಸಿ ತಂದು ಹಂಚುವ ಕೆಲಸಕ್ಕೆ ಚಾಲನೆ ಸಿಕ್ಕಿತು. ಈ ಹಣವನ್ನು ದೇಶದೊಳಗೆ ಉಗ್ರತರಬೇತಿಗೆ, ಆಮಿಷ ತೋರಿಸಿ ಯುವಕರನ್ನು ಸಂಘಟನೆಗೆ ಸೆಳೆಯುವ ಕೆಲಸಕ್ಕೆ ಬಳಸಲಾಯಿತು. ಪಾಕಿಸ್ತಾನದ ಸರಕಾರವೇ ಮುಂದೆ ನಿಂತು ತನ್ನ ಮುದ್ರಣಾಲಯಗಳಲ್ಲೇ ಭಾರತದ ಖೋಟಾನೋಟುಗಳನ್ನು ಮುದ್ರಿಸುತ್ತಿತ್ತು ಎಂಬುದಕ್ಕೆ ನೂರಾರು ಸಾಕ್ಷ್ಯಗಳನ್ನು ಕೊಡಬಹುದು. ಭಾರತದಲ್ಲಿ ವಶಪಡಿಸಿಕೊಂಡ ಖೋಟಾನೋಟುಗಳಿಗೂ ಪಾಕಿಸ್ತಾನ ರುಪಾಯಿ ನೋಟುಗಳಿಗೂ ಪೇಪರ್‍ನ ಗುಣಮಟ್ಟದಲ್ಲಿ ಅಸದೃಶ ಸಾಮ್ಯವಿದೆ. ಎರಡಕ್ಕೂ ಬಳಸಿರುವ ಪಾಲಿವಿನೈಲ್ ಆಲ್ಕೋಹಾಲ್ ಮತ್ತು ಪಿಎಚ್ ಮೌಲ್ಯ ಒಂದೇ. ನೋಟುಗಳಲ್ಲಿ ಕಾಣಿಸಿಕೊಳ್ಳುವ ಕೆಲವು ಸೂಕ್ಷ್ಮ ಅಂಶಗಳನ್ನು ಸರಕಾರದ ಕೈಯಲ್ಲಿರುವ ಅತ್ಯಾಧುನಿಕ ಪ್ರೆಸ್‍ಗಳಲ್ಲಿ ಮಾತ್ರ ಮುದ್ರಿಸುವುದು ಸಾಧ್ಯ. ಮೇಲಾಗಿ ಲಷ್ಕರ್ ತಯ್ಬಾ, ಅಲ್ ಬದ್ರ್ ಮತ್ತಿತರ ಸಂಘಟನೆಗಳ ಉಗ್ರರು ಭಾರತೀಯ ಯೋಧರಿಗೆ ಸೆರೆ ಸಿಕ್ಕಿದಾಗ ಅವರಲ್ಲಿದ್ದ ನೋಟುಗಳು ಕೂಡಾ ಇವೇ. ಪಾಕಿಸ್ತಾನದಿಂದ ಹೊರಟ ಕಾಳಧನ ಬಾಂಗ್ಲಾ ದೇಶ, ಶ್ರೀಲಂಕಾ, ಥಾಯ್ಲಾಂಡ್, ಮಲೇಷ್ಯ, ನೇಪಾಳ, ಚೀನಾದ ಷೆಂಝೆನ್, ಹಾಂಗ್‍ಕಾಂಗ್ ಮುಂತಾದ ದೇಶ/ಊರುಗಳಿಗೆ ಹೋಗಿ ಅಲ್ಲಿಂದ ಭಾರತಕ್ಕೆ ನೆಲ, ಜಲ, ವಾಯು ಮಾರ್ಗಗಳ ಮೂಲಕ ಪ್ರವೇಶ ಪಡೆಯತೊಡಗಿದವು. ಚಲಾವಣೆಯಲ್ಲಿ ಸಿಗುವ ನಕಲಿನೋಟುಗಳ ಮೌಲ್ಯ 100 ಕೋಟಿ ಆದರೂ ದೇಶದ ಹಣಕಾಸು ವ್ಯವಸ್ಥೆಯೊಳಗೆ ಐಎಸ್‍ಐ ಪ್ರತಿವರ್ಷ 1500ರಿಂದ 2500 ಕೋಟಿ ರುಪಾಯಿಗಳ ಮೌಲ್ಯದ ಖೋಟಾನೋಟುಗಳನ್ನು ತುಂಬಿಸುತ್ತಿದೆ ಎಂಬುದು ನಮ್ಮ ಗುಪ್ತಚರ ಇಲಾಖೆಗಳು ಸರಕಾರಕ್ಕೆ ಕೊಟ್ಟಿರುವ ಮಾಹಿತಿ. ಚಲಾವಣೆಯಲ್ಲಿರುವ ದುಡ್ಡು 100 ಕೋಟಿಯಾದರೆ ಮಿಕ್ಕಿದ್ದು ಹೋಗುವುದೆಲ್ಲಿಗೆ?

ಲೆಕ್ಕಕ್ಕೆ ಸಿಗದ ಆ ಹೆಚ್ಚುವರಿ ದುಡ್ಡು ಭಾರತದೊಳಗೆ ಹಲವು ವಿಧಗಳಲ್ಲಿ ಬಳಕೆಯಾಗಿ, ಪಾಯಸದೊಳಗಿನ ವಿಷದಂತೆ, ಕರಗಿಹೋಗುತ್ತದೆ. ಆ ಖೋಟಾನೋಟುಗಳನ್ನು ಬಳಸಿಕೊಂಡು ದೇಶದೊಳಗೆ ಲವ್ ಜಿಹಾದ್, ಲ್ಯಾಂಡ್ ಜಿಹಾದ್‍ಗಳನ್ನು ನಡೆಸಲಾಗುತ್ತದೆ. ಮುಂದುವರಿದ ಭಾಗವಾಗಿ, ಈ ಭಯೋತ್ಪಾದಕರು ಈಗ ತಾವು ಪರದೆಯ ಹಿಂದೆ ನಿಂತು ಕಮ್ಯುನಿಸ್ಟರು, ಮಾಧ್ಯಮಗಳು ಮತ್ತು ಬುದ್ಧಿಜೀವಿಗಳನ್ನು ಮುಂದಿಟ್ಟು ಕೆಲಸ ತೆಗೆಯುತ್ತಿದ್ದಾರೆ. ದೇಶದೊಳಗೆ ಸದಾಸರ್ವದಾ ಅಶಾಂತಿ ಮತ್ತು ಅರಾಜಕತೆಯ ವಾತಾವರಣವಿರಬೇಕು; ಕೋಮುಗಲಭೆಗಳು ದಿನನಿತ್ಯದ ಸುದ್ದಿಯಾಗಬೇಕು; ಸರಕಾರಕ್ಕೆ ಯಾವುದೇ ಅಭಿವೃದ್ಧಿ ಕೆಲಸಗಳನ್ನು ನೆಮ್ಮದಿಯಿಂದ ಮಾಡಿಮುಗಿಸಲು ಅನುಕೂಲವಾದ ವಾತಾವರಣವಿರಕೂಡದು; ಸರಕಾರದ ಪ್ರತಿ ನಡೆಯನ್ನೂ ಪ್ರಶ್ನಿಸುವ ತುಚ್ಛೀಕರಿಸುವ ಅಡ್ಡಗಾಲುಹಾಕುವ ಬುದ್ಧಿಜೀವಿ ವರ್ಗ ಬೆಳೆಯಬೇಕು – ಹೀಗೆ ಪಾಕಿಸ್ತಾನ ಈಗ ಮೂರನೇ ಹಂತದ ಭಯೋತ್ಪಾದನೆಯಲ್ಲಿದೆ. ದೇಶದ ಒಟ್ಟು ಆರ್ಥಿಕತೆಯಲ್ಲಿ ಈ ಖೋಟಾನೋಟುಗಳ ಪ್ರಮಾಣ 0.21-0.30%ರಷ್ಟು ಮಾತ್ರ. ಆದರೆ ಆ ಅಷ್ಟೂ ದುಡ್ಡು ಇಂಥ ಕಲ್ಲು ಹಾಕುವ ಕೆಲಸಗಳಿಗೇ ಬಳಕೆಯಾಗುತ್ತಿದೆ.

ಕರ್ನಾಟಕವನ್ನೇ ತೆಗೆದುಕೊಳ್ಳಿ. ಇಲ್ಲಿ ಕಳೆದ ವರ್ಷದ ಜೂನ್‍ನಲ್ಲಿ ಪಿಎಫ್‍ಐ ಎಂಬ ಮುಸ್ಲಿಂ ಉಗ್ರವಾದಿ ಸಂಘಟನೆಯ ಮೇಲಿದ್ದ 175 ಪ್ರಕರಣಗಳನ್ನು ಕೈಬಿಟ್ಟು 1700ಕ್ಕೂ ಹೆಚ್ಚು ಮಂದಿಯನ್ನು ಖುಲಾಸೆಗೊಳಿಸಲಾಯಿತು. ವ್ಯಾಪಕ ವಿರೋಧದ ನಡುವೆಯೂ ಟಿಪ್ಪು ಜಯಂತಿಯಂಥ ವಿವಾದಾತ್ಮಕ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ಹತ್ತಕ್ಕೂ ಹೆಚ್ಚು ಯುವಕರನ್ನು ಬರ್ಬರವಾಗಿ ಕೊಲೆ ಮಾಡಲಾಯಿತು. ಮತ್ತು ಬಹುತೇಕ ಕೊಲೆಗಳ ಹಿಂದೆ ಉಗ್ರಗಾಮಿ ಸಂಘಟನೆಯೊಂದು ಕಾರ್ಯ ನಿರ್ವಹಿಸುತ್ತಿರುವ ಸಂಶಯವನ್ನು ಪೊಲೀಸರು ವ್ಯಕ್ತಪಡಿಸಿದರು. ಇವೆಲ್ಲ ಚುಕ್ಕಿಗಳನ್ನು ನಾವು ಸೇರಿಸುತ್ತಾ ಹೋದರೆ ಖಜಾನೆ ಖಾಲಿಯಾಗಿರುವ ಕರ್ನಾಟಕ ಸರಕಾರ ಕೂಡ ಯಾವುದೋ ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಭಾರತದೊಳಕ್ಕೆ ಕಳ್ಳದಾರಿಯಲ್ಲಿ ಸಾಗಿಸಿ ತಂದ ದುಡ್ಡಿನ ಬಲದಲ್ಲೇ ನಡೆಯುತ್ತಿದೆಯಾ ಎಂಬ ಅನುಮಾನ ಬಲವಾಗುತ್ತದೆ. ಅದು ನಿಜವೇ ಆದರೆ, ಪಾಕಿಸ್ತಾನದ ಉಗ್ರರು ತಮ್ಮ ಕಾಳಧನದ ಬಲ ಬಳಸಿ ಸರಕಾರಗಳನ್ನು ಕೂಡ ನಿಯಂತ್ರಿಸುವ ನಾಲ್ಕನೇ ಹಂತರ ಭಯೋತ್ಪಾದನೆಗೆ ಇಳಿದಿದ್ದಾರೆ ಎಂದು ಭಾವಿಸಬೇಕಾಗುತ್ತದೆ. ಪಾಕಿಸ್ತಾನದಲ್ಲಿ ಹೀರೋ ಆಗಿರುವ ಅರವಿಂದ್ ಕೇಜ್ರಿವಾಲ್‍ರ ವರ್ತನೆಗಳು ಕೂಡ ಈ ನಿಟ್ಟಿನಲ್ಲಿ ಸಂಶಯಾಸ್ಪದವೇ.

ವಿಷಯ ಇಷ್ಟೊಂದು ಗಂಭೀರವಾಗಿರುವಾಗ, ಭಯೋತ್ಪಾದನೆ ಮತ್ತು ಆರ್ಥಿಕ ಅಭದ್ರತೆಗೆ ಕಾರಣವಾಗಿರುವ ಕಪ್ಪುಧನ ಹಾಗೂ ಖೋಟಾನೋಟುಗಳ ಹಾವಳಿಯನ್ನು ತಡೆಯಲು ದೇಶದ ಪ್ರಧಾನಿಗಳು ಅತ್ಯಂತ ಗಂಭೀರ, ದಿಟ್ಟ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿತ್ತು. ಅದನ್ನೀಗ ಪ್ರಧಾನಿ ಮೋದಿ ಮಾಡಿದ್ದಾರೆ. ಇದರ ಮುಂದಿನ ಬೆಳವಣಿಗೆಗಳನ್ನು ನಾವೆಲ್ಲ ಕುತೂಹಲದ ಜೊತೆ ಎಚ್ಚರಿಕೆಯಿಂದ ಗಮನಿಸಬೇಕಾಗಿದೆ.

18 ಟಿಪ್ಪಣಿಗಳು Post a comment
  1. :(
    ನವೆಂ 19 2016

    ಇಂಗ್ಲಿಷ್ ನಲ್ಲಿ ಈ ರೀತಿಯ ಲೇಖನಗಳನ್ನು “fear mongering or scaremongering” ಲೇಖನ ಎಂದು ಕರೆಯಲಾಗುತ್ತದೆ. ಹೇಳುವ ಯಾವ ವಿಚಾರಗಳಿಗೂ ಯಾವುದೇ ಆಧಾರಗಳಿರುವುದಿಲ್ಲ. ಉದ್ದೇಶ ಒಂದೇ: ಗುಮ್ಮನನ್ನು ತೋರಿಸಿ ತುತ್ತನ್ನು ಗಂಟಲಿನೊಳಗೆ ತುರುಕುವುದು. ಉದಾಹರಣೆಗೆ ಇದನ್ನು ನೋಡಿ: “ಇವೆಲ್ಲ ಚುಕ್ಕಿಗಳನ್ನು ನಾವು ಸೇರಿಸುತ್ತಾ ಹೋದರೆ ಖಜಾನೆ ಖಾಲಿಯಾಗಿರುವ ಕರ್ನಾಟಕ ಸರಕಾರ ಕೂಡ ಯಾವುದೋ ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಭಾರತದೊಳಕ್ಕೆ ಕಳ್ಳದಾರಿಯಲ್ಲಿ ಸಾಗಿಸಿ ತಂದ ದುಡ್ಡಿನ ಬಲದಲ್ಲೇ ನಡೆಯುತ್ತಿದೆಯಾ ಎಂಬ ಅನುಮಾನ ಬಲವಾಗುತ್ತದೆ.” ಇದು ವಸ್ತುನಿಷ್ಠತೆಯೂ ಅಲ್ಲ, ಜನರ ಕುರಿತ ಕಾಳಜಿಯೂ ಅಲ್ಲ. ಇಲ್ಲ ಇದು ಆಜ್ಞಾದ ಪರಮಾವಧಿ, ಇಲ್ ಸಾಹುಕಾರ ತುಂಡು ಮೂಲೆ ಹಾಕಲಿ ಎಂದು ಹಲ್ಲುಗಿಂಜುತ್ತಾ, ಬಂದವರ ಮೇಲೆ ಬೊಗಳುವ ನಾಯಿಯ ಜೀವನ.

    ಉತ್ತರ
    • Kashyap
      ನವೆಂ 19 2016

      Firstly I would like to ask a question to you….. You said that, this is called scaremongering because there are no proves. The same question to you dear, what kind of proof do you have to call this is a scaremongering….???

      ಉತ್ತರ
    • sudarshana gururajarao
      ನವೆಂ 20 2016

      Really!
      This is ,in English called rubbishing something for the sake of it and Ostriching!!

      There is something called extrapolation in mathematics and statistical methods where ,based on available data people (real ones,not wasters) deduce the results for unmeasurable factors.
      ಈಗ,ಸುಮ್ಮನೆ ಬೊಗಳುವ ನಾಯಿಗಳು ಯಾವುವು ಅಂತ deduce ಮಾಡಿದ್ದಾಯ್ತು.

      ಉತ್ತರ
    • sudarshana gururajarao
      ನವೆಂ 20 2016

      Oh really!!
      Extrapolation ಅನ್ನುವ ವಿಧಾನವಿದೆ. ಅದನ್ನೇ ಚುಕ್ಕೆಗಳನ್ನು ಕೂಡಿಸಿ ಕಣ್ಣಿಗೆ ಕಾಣದ, ಅನುಸಂಧಾನಕ್ಕೆ ಸಿಕ್ಕದ ವಿವರಗಳನ್ನು ಅಂದಾಜಿಸುವುದು ಅಂತ.
      ಅದು ಮಾಡದೆ scaremongering ಅನ್ನುವುದಾದರೆ,ನಿಮ್ಮಂಥವರು ಮಾಡುವುದನ್ನು Ostriching ಅಂತಾರೆ.

      ಉತ್ತರ
    • Sharath Sharma
      ನವೆಂ 20 2016

      ಬಹಳ ಒಳ್ಳೆಯ ಹಾಗು ಅರ್ಥಪೂರ್ಣ ಲೇಖನ. ಇದ್ದದ್ದು ಇದ್ದ ಹಾಗೆ ಹೇಳಿದರೆ, ಎದ್ದು ಬಂದು ಎದೆಗೆ ಒದ್ದರು ಎಂಬ ಇಂತಹ ಮಂದಿ ಖಂಡಿತ ಖಾನ್ಗ್ರೆಸ್ಸ್, ಅಥವಾ ಇಟಲಿಯ ಪಂತೀಯರೇ ಸರಿ.

      “fear mongering or scaremongering” ಎಂದು ಅಲ್ಲಗಳೆಯುವ ಇಂತಹ ದೇಶದ್ರೋಹಿಗಳು, ಆರ್ ಎಸ್ ಎಸ್ ಅಂತಹ ಸೇವಾಮನೋಭಾವಕ್ಕೆ ಹೆಸರಾದ ಸಂಸ್ಥೆಯನ್ನು ‘ಸ್ಯಾಫ್ರನ್ ಟೆರ್ರೊರಿಸಂ’, ದೇವರಂತಹ ಮೋದಿಯವರನ್ನು ಕೊಲೆಗಾರ ಎಂದು ಬಿಂಬಿಸಿ, ಹಿಂದುಸ್ತಾನವನ್ನು, ಹಿಂದುರಹಿತ ರಾಷ್ಟ್ರ ಮಾಡಲು ಕಾಯುತ್ತಿರುವ ಇಂತಹ ಮಂದಿಯಿಂದ ಬೇರೇನೂ ತಾನೇ ಬಯಸಬಹುದು.

      ದೇವರೇ ನಮ್ಮ ಪಾಲಿಗೆ ಮೋದಿಯನ್ನು ಕಳುಹಿಸಿದ್ದಾರೆ. ನಾವೆಲ್ಲಾ ಮೋದಿಯ ಹಿಂದೆ ಇದ್ದೇವೆ.

      ಉತ್ತರ
    • Pradeep
      ನವೆಂ 22 2016

      after commenting read your comment. Well Said.

      ಏನೆ ವಿಷಯ ಸಿಕ್ಕರೂ ರೋಚಕವಾಗಿ ಬರೆಯುವುದು ಇವರ ಶೈಲಿ. ಒಳಗಿರುವ entertainment ಅಂಶಗಳಿಂದಾಗಿ ಇಂತಹ ಲೇಖನ ಗಳು ಓದುಗರನ್ನು ಸೆಳೆಯುತ್ತವೆ. ದುರ್ಬಲ ಮನಸ್ಸಿನವರನ್ನು ಆಕರ್ಷಿಸಲು ಅಷ್ಟು ಸಾಕು, ಅದೇ ಇವರ ಲೇಖನಗಳ ಚಲಾವಣೆ ಶಕ್ತಿ ಕೂಡ. ಆಸ್ತಾನ ವಿಧೂಷಕ ಅನ್ನಬಹುದು.

      ಉತ್ತರ
  2. ಮೋಹನ
    ನವೆಂ 20 2016

    ‘ಅನುಮಾನ’ ಎಂದಾಗ ಅದು ವಸ್ತುನಿಷ್ಠ ಅಲ್ಲ ಎನ್ನುವುದು ಸ್ವಯಂವೇದ್ಯವಲ್ಲವೇ ? ನಂತರದ ಸಾಲು ಆ ವ್ಯಕ್ತಿಯ ಮಟ್ಟವನ್ನು ಸೂಚಿಸುತ್ತದೆ.

    ಉತ್ತರ
  3. Ramen
    ನವೆಂ 20 2016

    ಕಪ್ಪುಹಣ ಮತ್ತು ಮೋದಿ ನಂಟು : http://thewire.in/58640/black-money-investigation

    ಉತ್ತರ
    • Ramen
      ನವೆಂ 20 2016

      ಜೊತೆಗೆ ಇದನ್ನೂ ಓದಿಕೂಳ್ಳಿ. ಮೋದಿ-ಅದಾನಿ-ಕಪ್ಪುಹಣ… http://m.timesofindia.com/india/Centre-clears-370-acre-forest-land-for-Adanis-power-project-in-Maharashtra/articleshow/44925053.cms

      ಉತ್ತರ
      • Ramen
        ನವೆಂ 20 2016

        An excerpt: “Ironically, the biggest black money case that has come up before the SIT so far is that of the Adani group, promoted by Gautam Adani, one of Modi’s closest associates. It is in his chartered aircraft that the soon-to-be prime minister zipped around India, accusing the incumbent government of not fighting corruption. The Adani group allegedly took out over Rs 5,000 crore to tax havens, using inflated bills for the import of power equipment from South Korea and China, the SIT on black money was told by the Directorate of Revenue Intelligence (DRI) and the Enforcement Directorate (ED).” (http://thewire.in/58640/black-money-investigation)

        ಉತ್ತರ
        • Salam Bava
          ನವೆಂ 25 2016

          Good point! Corporate crooks are pampered while helpless common man is punished by demonetisation. MMSji exposed the PM yesterday in parliament.

          ಉತ್ತರ
  4. Hari Prakash
    ನವೆಂ 20 2016

    I guess the numbers in this article have to be corrected. The total economy of India is about 150 Lakh Crores. About 10-12% of this is in Cash, which translates to about 15 lakh crores. 80% of this was in denominations of 500 and 1000. This translates to about 12 Lakh crores. 3% is the fake currency. About 70 crores worth fake currency supplied by Pakistan, every year ( Excerpts from various sources)

    ಉತ್ತರ
  5. Pradeep
    ನವೆಂ 22 2016

    ಮೋದಿ ದೇಶದ ಒಬ್ಬ ಸ್ವಯಂ ಘೋಷಿತ ವಿಧೂಷಕ ಅಂತ ಹೇಳಬಹುದು ರೋಹಿತ್ ಚಕ್ರತೀರ್ಥ ನಿಗೆ.
    ರೋಚಕತೆಯೇ ಪ್ರಧಾನವಾಗಿರುವ ಇಂತಹ ಬರಹಗಳನ್ನು ಗಂಭೀರವಾಗಿ ಓದುವ ಅವಶ್ಯಕತೆ ಇಲ್ಲ. ಆದರೆ ಇಂತಹ ಸರಕುಗಳನ್ನು ಓದಿ ಸನ್ನಿವೇಶದ ಸೂಕ್ಷ್ಮತೆ ಅರಿಯದೆ ಜೈಕಾರ ಕೂಗುವವರ ಬಗ್ಗೆ ಬೇಸರವಾಗುತ್ತದೆ.

    ಉತ್ತರ
    • ಶೆಟ್ಟಿನಾಗ ಶೇ.
      ನವೆಂ 23 2016

      ಈ ಚಕ್ರತೀರ್ಥ ಯಡಿಯೂರಪ್ಪನವರ ಮಾಧ್ಯಮ ಸಲಹೆಗಾರ ಹುದ್ದೆಗೆ ಸ್ಪರ್ಧಾಕಾಂಕ್ಷಿ. ಸ್ಪೀಚ್ ರೈಟಿಂಗ್ ಪ್ರಾಕ್ಟೀಸ್ ಮಾಡುತ್ತಿದ್ದಾನೆ ಇಲ್ಲಿ.

      ಉತ್ತರ
      • Anonymous
        ನವೆಂ 24 2016

        “ಪ್ರತಿಷ್ಠಿತ ಕಂಪನಿಗೆ ಆತ ಕನ್ಸಲ್ಟೆಂಟ್. ಗಣಿತದಲ್ಲಿ ಸ್ನಾತಕೋತ್ತರ ಪದವಿ ಇದೆ.”

        ಈ ಕಾಲದಲ್ಲಿ ಇದೊಂದು ಮಹತ್ತರ ಸಾಧನೆಯೇ?! ಜರ್ನಲಿಸ್ಟರೂ ಸ್ನಾತಕೋತ್ತರ ಪದವಿ ಪಡೆದವರಾಗಿದ್ದಾರೆ!

        ಉತ್ತರ
        • sudarshana gururajarao
          ನವೆಂ 24 2016

          ನಾಗಶೆಟ್ಟಿ ಗೆ ಇದು ಅನ್ವಯವಾಗುತ್ತದೆ.ಗಣಿತ ಬಲ್ಲವನು ಪ್ತರಕೋದ್ಯಮ ಮಾಡಬಲ್ಲ.ರೋಹಿತ್ ಒಂದು ಉದಾಹರಣೆ. ಪ್ರತಿಕೋದ್ಯಮ ಓದಿದವನು ಗಣಿತವನ್ನೂ ಕಲಿಯಬಲ್ಲನೇ ಎಂಬ ಪ್ರಶ್ನೆಗೆ ನಿಮ್ಮ “ಯೋಗ್ಯತೆ”ಗನುಸಾರವಾಗಿ ಉತ್ತರ ಹೇಳಿ.
          ಸಾಧನೆ ಕೇವಲ ವಿದ್ಯಾರ್ಹತೆ ಅಷ್ಟೇ ಅಲ್ಲ.ಅದು ಕೊಡುವ ಸಂಸ್ಕಾರ,ಗಂಜಿ ಗುಂಜದ ವ್ಯಕ್ತಿತ್ವ, ತನ್ನಬಜಾಲಮೇಲೆ ನಿಂತು ಸಮಾಜಕ್ಕೆ ಹೊರೆಯಾಗದ ಬಾಧ್ಯತೆ ಇವುಗಳ ಒಟ್ಟುಮೊತ್ತ. ಈ ನಿಟ್ಟಿನಲ್ಲಿ ರೋಹಿತ್ ಮೇಲೆ ನಾಗಶೆಟ್ಟಿ ಯಂತಹ ಕೊಚ್ಚೆ ಹುಳಗಳ ಲೇವಡಿ ಕುರಿತಾದ ಕಮೆಂಟ್ ಅದು

          ಉತ್ತರ
      • sudarshana gururajarao
        ನವೆಂ 25 2016

        ಅದೆಲ್ಲಾ ನಿನ್ನಂತಹ ಎಲ್ಲಿಯೂ ಸಲ್ಲದ ನಿಷ್ಪ್ರಯೋಜಕ ಹುಳುಗಳಿಗೆ

        ಉತ್ತರ
  6. Devu Hanehalli
    ಡಿಸೆ 1 2016

    I would like to ask people like Pradeep, Naga Setty, Salam Bawa and :), one thing. OK agreed. ISI, Pakistan etc are all saints. This terrorism, LoC etc are all the making of BJP and its chamchas. ISI is a harmless, sweet Pizza hut. Fine. Please answer me. Have you ever received or accepted Rs. 500 and 1000 denomination currency notes from anybody (except bank) without checking their authenticity? genuineness? How many times you rubbed it!! Whetted it!! Held against the sun! And the data Mr Chakrateertha used in his article. It is not his research. They are very old data. Quoted by all and sundry for the last 10 years or so. Modi was nowhere in the picture then. People hand picked by Mrs. Sonia were at the helms of financial affairs of this country when that data was generated or researched. Tell me frankly, friends, am I right, you were the first people to heave a sigh of relief when these two currency notes were recalled!!!

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments