ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 2, 2016

15

ಮೋದಿ ಭಾರತದಲ್ಲಿ ತೀವ್ರಗೊಂಡ ನಿರುದ್ಯೋಗ ಸಮಸ್ಯೆ : ಚಿಂತಾಜನಕ ಮಾಹಿತಿ (ಸುಳ್ಸುದ್ದಿ)

‍ನಿಲುಮೆ ಮೂಲಕ

ಪ್ರವೀಣ್ ಕುಮಾರ್, ಮಾವಿನಕಾಡು

sulsuddi-2ನವದೆಹಲಿ, ಡಿಸೆಂಬರ್ 2 : ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹಿಂದೆಂದಿಗಿಂತಲೂ ತೀವ್ರವಾಗಿದೆ. ಕಳೆದ ಹನ್ನೆರಡು ವರ್ಷಗಳಲ್ಲೇ ಅತ್ಯಧಿಕ ಪ್ರಮಾಣದ ನಿರುದ್ಯೋಗ ದೇಶದಲ್ಲಿ ತಾಂಡವವಾಡುತ್ತಿರುವುದು ಸಮೀಕ್ಷೆಯೊಂದರಿಂದ ಬಹಿರಂಗವಾಗಿದೆ.

ಕಳೆದ ನವೆಂಬರ್.8 ನೇ ತಾರೀಕಿನಿಂದ ದೇಶದಲ್ಲಿ ಇಲ್ಲಿಯವರೆಗೆ 15 ರಿಂದ 65 ರ ವಯಸ್ಸಿನ ಸುಮಾರು 8% ಜನರು ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಸೆಂಟ್ರಲ್‌ ಗಂಜಿ ಬ್ಯೂರೋ ನಡೆಸಿದ ಉದ್ಯೋಗ-ನಿರುದ್ಯೋಗ ಸಮೀಕ್ಷಾ ವರದಿಯಲ್ಲಿ ಹೇಳಲಾಗಿದೆ.

ಈ ಸಮೀಕ್ಷಾ ವರದಿಯಲ್ಲಿ ಪ್ರಸ್ತಾಪಿಸಿದ ಕೆಲವು ಕುತೂಹಲಕಾರೀ ಅಂಶಗಳು ಇಲ್ಲಿವೆ:

ಕಾಶ್ಮೀರವೊಂದರಲ್ಲೇ ಸುಮಾರು 6373 ಅನಕ್ಷರಸ್ಥ ನಿರುದ್ಯೋಗಿ ಯುವಕರುಗಳಿಗೆ ಅಲ್ಲಿನ ಪ್ರತ್ಯೇಕತಾವಾದೀ ಮುಖಂಡರುಗಳು ಉದ್ಯೋಗವನ್ನು ಕಲ್ಪಿಸಿಕೊಟ್ಟಿದ್ದರು. ಭಾರತೀಯ ಸೈನಿಕರಿಗೆ ಕಲ್ಲು ಹೊಡೆಯಲು ದಿನವೊಂದಕ್ಕೆ 100 ರಿಂದ 500 ರೂ.ಗಳ ವರೆಗೆ ನೀಡಲಾಗುತ್ತಿತ್ತು. ಅವರ ಆಯುಧಗಳನ್ನು ಕದಿಯಲು ಒಂದು ಆಯುಧಕ್ಕೆ 500ರಿಂದ 1000 ರೂ.ವರೆಗೆ ನೀಡಲಾಗುತ್ತಿತ್ತು. ಅಲ್ಲದೆ ಆ ಯುವಕರಿಗೆ “ಕಾಶ್ಮೀರದ ಸ್ವಾತಂತ್ರ್ಯ ಹೋರಾಟಗಾರರು” ಎನ್ನುವ ಗೌರವಯುತ ಹುದ್ದೆಯನ್ನೂ ನೀಡಲಾಗಿತ್ತು. ಆದರೆ ನೋಟು ನಿಷೇಧದ ಪರಿಣಾಮ ಆ “ಕಾಶ್ಮೀರದ ಸ್ವಾತಂತ್ರ್ಯ ಹೋರಾಟಗಾರರು” ತಮ್ಮ ಕೆಲಸವನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಆ ಮೂಲಕ ಯೋಧರ ಮೇಲೆ ಕಲ್ಲು ತೂರುವ ಆ ಯುವಕರ ಸಂಪಾದನೆಯನ್ನೇ ಆಶ್ರಯಿಸಿದ್ದ ಅವರ ವಯಸ್ಸಾದ ತಂದೆ ತಾಯಿಯರೂ ಸಹಾ ಬೀದಿಗೆ ಬಿದ್ದಿದ್ದಾರೆ.

ರಾಜಕೀಯ ಪಕ್ಷಗಳ ರ್ಯಾಲಿ ಮತ್ತು ಹೋರಾಟಗಳು ಈ ದೇಶದ ಸುಮಾರು 6,24,65,348 ಜನರಿಗೆ ಉದ್ಯೋಗ ಕಲ್ಪಿಸಿಕೊಟ್ಟಿದ್ದವು. ಪ್ರತೀ ತಿಂಗಳೂ ಪ್ರತೀ ವ್ಯಕ್ತಿಗೆ ಹೋರಾಟ ಮತ್ತು ರ್ಯಾಲಿಯಲ್ಲಿ ಪಾಲ್ಗೊಳ್ಳಲು ಒಂದು ದಿನಕ್ಕೆ 400 ರಿಂದ 500 ರೂ.ಗಳು ಸಿಗುತ್ತಿತ್ತು. ಅಲ್ಲದೇ ಆ ದಿನಗಳ ಊಟ ಮತ್ತು ತಿಂಡಿಯ ಖರ್ಚುಗಳೂ ಸಹಾ ಆಯಾ ಪಕ್ಷಗಳ ಮುಖಂಡರೇ ಹೊತ್ತುಕೊಳ್ಳುತ್ತಿದ್ದರು. ಇದರಿಂದಾಗಿ ಮೂರು ಜನರ ಕುಟುಂಬವೊಂದು ತಿಂಗಳಿಗೆ ಸರಾಸರಿ 6 ಸಾವಿರದಿಂದ 7500 ರೂ.ಗಳ ವರೆಗೆ ಗಳಿಸುತ್ತಿತ್ತು. ಈ ಮೊತ್ತ ಸರ್ಕಾರ ಗುರುತಿಸಿದ ಬಡತನ ರೇಖೆಗಿಂತಾ ಮೇಲಿದೆ ಎನ್ನುವುದು ಆಶ್ಚರ್ಯವಾದರೂ ಸತ್ಯ. ಆದರೆ ಒಬ್ಬ ವ್ಯಕ್ತಿಗೆ ತಿಂಗಳಿಗೆ ಸರಾಸರಿ 5 ದಿನಗಳ ಉದ್ಯೋಗ ನೀಡುತ್ತಿದ್ದ ಈ ಉದ್ಯಮ ಈಗ ನೋಟು ನಿಷೇಧದ ನಂತರ ಬಹುತೇಕ ಮುಚ್ಚುವ ಹಂತ ತಲುಪಿದೆ. ಇದಕ್ಕೆ ಸ್ಪಷ್ಟ ಉದಾಹರಣೆಯೆಂದರೆ ಇತ್ತೀಚೆಗಷ್ಟೇ ಹತ್ತಕ್ಕೂ ಹೆಚ್ಚು ಪಕ್ಷಗಳು ನೀಡಿದ ಭಾರತ್ ಬಂದ್ ನಲ್ಲಿ ಆ ಪಕ್ಷಗಳ ಪರವಾಗಿ ಯಾವೊಬ್ಬ ಹೋರಾಟಗಾರನೂ ರಸ್ತೆಗಿಳಿಯಲಿಲ್ಲ. ಆದ್ದರಿಂದ ಭಾರತ್ ಬಂದ್ ಸಂಪೂರ್ಣ ವಿಫಲವಾಯಿತು. ಬಹುತೇಕ ಭಾರತೀಯರಿಗೆ ಆ ದಿನ ಬಂದ್ ಇತ್ತು ಎನ್ನುವುದೇ ಗೊತ್ತಾಗಲಿಲ್ಲ. ಯಾಕೆಂದರೆ ರಾಜಕಾರಣಿಗಳ ಕೈಲಿ ಟೈರು ಸುಡುವ, ಬಸ್ಸಿಗೆ ಕಲ್ಲು ತೂರುವ ಪ್ರತಿಭಟನಾಕಾರರಿಗೆ ಕೊಡಲು ಹಣವೇ ಇರಲಿಲ್ಲ! ಆದ್ದರಿಂದ ಪ್ರತಿಭಟನಾಕಾರರು ಮನೆ ಬಿಟ್ಟು ಹೊರಬರಲೇ ಇಲ್ಲ!!

ದೇಶದಲ್ಲಿ ಸುಮಾರು ಅರವತ್ತು ಸಾವಿರಕ್ಕೂ ಹೆಚ್ಚು ನಕ್ಸಲರು ಇದ್ದಾರೆ ಎಂದು ಅಂದಾಜಿಸಲಾಗಿದೆ. ಅವರಲ್ಲಿ ಸುಮಾರು 83% ನಕ್ಸಲರು 20 ರಿಂದ 45 ರ ಆಸುಪಾಸಿನ ವಯಸ್ಸಿನವರಾಗಿದ್ದಾರೆ. ಇಂದಿಗೂ ಕಾಡಿನಲ್ಲಿಯೇ ವಾಸಿಸುವ ಅವರು ಇದುವರೆಗೂ ತಮ್ಮಲ್ಲಿರುವ ಬಂದೂಕುಗಳಿಂದ ಬೆದರಿಸಿ ಕೃಷಿಕರ, ಜಮೀನು ಹೊಂದಿರುವವರ, ಅಂಗಡಿ ಮಾಲೀಕರ ಬಳಿ ಸುಲಭವಾಗಿ ಹಣ ವಸೂಲಿ ಮಾಡುತ್ತಿದ್ದರು. ಹಾಗೆ ವಸೂಲಿ ಮಾಡಿದ ಹಣವನ್ನು ನಗರಗಳಲ್ಲಿ ವಾಸಿಸುವ ತಮ್ಮ ಸಹೋದ್ಯೋಗಿಗಳಿಗೆ ಮತ್ತು ಹಳ್ಳಿಗಳಲ್ಲಿ ವಾಸಿಸುವ ತಮ್ಮ ವೃದ್ಧ ತಂದೆ ತಾಯಿಗಳಿಗೆ ಕಳಿಸುತ್ತಿದ್ದರು. ಇನ್ನುಳಿದ ಹಣವನ್ನು ದೊಡ್ಡ ದೊಡ್ಡ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಅದೇ ಕಾಡಿನಲ್ಲಿಯೇ ಹೂತಿಡುತ್ತಿದ್ದರು. ಆ ಹಣವನ್ನು ಮುಂದೆ ತಮಗೆ ಬೇಕಾದ ಅಕ್ರಮ ಶಸ್ತ್ರಾಸ್ತ್ರಗಳನ್ನು ಕೊಳ್ಳಲು ಬಳಸಿಕೊಳ್ಳುತ್ತಿದ್ದರು. ಆದರೆ ನೋಟು ನಿಷೇಧದ ನಂತರ ಅವರು ಬಚ್ಚಿಟ್ಟಿದ್ದ ಹಣವೆಲ್ಲಾ ಮಣ್ಣು ಪಾಲಾಗಿದೆ. ಹಳ್ಳಿಯ ಜನರ ತಲೆಗೆ ಬಂದೂಕು ಹಿಡಿದು ಬೆದರಿಸಿದರೂ ಇವರಿಗೆ ಕೊಡಲು ಅವರ ಬಳಿ ಕಾಸಿಲ್ಲ. ನಗರಗಳಲ್ಲಿ ವಾಸಿಸುವ ತಮ್ಮ ಸಹೋದ್ಯೋಗಿ ಮಿತ್ರರಿಂದ ಪಡೆಯೋಣವೆಂದರೆ ಅಕೌಂಟ್ ಮೂಲಕ ಹಣ ಪಡೆದರೆ ಸಿಕ್ಕಿ ಬೀಳುತ್ತೇವೆ ಎನ್ನುವ ಭಯ. ಇದೆಲ್ಲದರಿಂದ ಬೇಸತ್ತ ಅವರು ನಿತ್ಯವೂ ನೂರಾರು ಸಂಖ್ಯೆಯಲ್ಲಿ ಬಂದು ಪೊಲೀಸರ ಮುಂದೆ ಶರಣಾಗುತ್ತಿದ್ದಾರೆ. ಇದರಿಂದಾಗಿ ಈ ನಕ್ಸಲರ ಆದಾಯವನ್ನೇ ನಂಬಿಕೊಂಡಿದ್ದ ಅವರ ವಯಸ್ಸಾದ ತಂದೆ ತಾಯಿಯರು ಬೀದಿಗೆ ಬಿದ್ದಿದ್ದಾರೆ. ಅದೇ ರೀತಿ ನಗರದಲ್ಲಿ ವಾಸಿಸುತ್ತಿದ್ದ ನಕ್ಸಲರೂ ಕೂಡಾ ಈಗ ನಿರುದ್ಯೋಗಿಗಳಾಗಿದ್ದಾರೆ. ಜೊತೆಗೆ ಶಸ್ತ್ರಾಸ್ತ್ರ ಮಾರಾಟಗಾರರು, ಸರಬರಾಜುದಾರರು ಸೇರಿದಂತೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸುಮಾರು ಒಂದು ಕೋಟಿಗೂ ಹೆಚ್ಚು ಜನರು ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ.

ಪಾರ್ಲಿಮೆಂಟ್ ಚಲೋ: ಸೆಂಟ್ರಲ್‌ ಗಂಜಿ ಬ್ಯೂರೋ ನಡೆಸಿದ ಈ ಸಮೀಕ್ಷಾ ವರದಿ ಬಹಿರಂಗವಾಗುತ್ತಿದ್ದಂತೆಯೇ ರಾಜ್ಯದ ಇಪ್ಪತ್ಮೂರಕ್ಕೂ ಹೆಚ್ಚು ಸಂಘಟನೆಗಳ ಹತ್ತಕ್ಕೂ ಹೆಚ್ಚು ನಾಯಕರು ಸಭೆ ಸೇರಿ ನಿರುದ್ಯೋಗ ಸಮಸ್ಯೆಯ ವಿರುದ್ಧ ಸಂಘಟಿತ ಹೋರಾಟ ನಡೆಸಲು ತೀರ್ಮಾನಿಸಿದ್ದಾರೆ. ಡಿಸೆಂಬರ್ 28 ರಂದು ಈ ಸಮಸ್ಯೆ ನಿವಾರಿಸುವಂತೆ ಆಗ್ರಹಸಿ “ಬೃಹತ್ ಪಾರ್ಲಿಮೆಂಟ್ ಚಲೋ” ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ. ಆದರೆ ಸಂಘಟನೆಗಳ ಈ ಕಾರ್ಯಕ್ರಮಕ್ಕೆ ತೀವ್ರ ಹಣದ ಸಮಸ್ಯೆ ಎದುರಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಸಂಘಟನೆಯ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.

ವಿ.ಸೂ: ಇದೊಂದು ಕಾಲ್ಪನಿಕ ಸುದ್ದಿ(ಸುಳ್ಸುದ್ದಿ)ಯಾಗಿದ್ದು ಇದು ಕೇವಲ ಮನರಂಜನೆಗಾಗಿ ಮಾತ್ರ. ಇದರಲ್ಲಿ ಯಾವುದೇ ವ್ಯಕ್ತಿ ಅಥವಾ ಸಂಘಟನೆಗಳ ಹೋಲಿಕೆಗಳು ಕಂಡು ಬಂದರೆ ಅದು ಕೇವಲ ಕಾಕತಾಳೀಯ ಮಾತ್ರ.

ಚಿತ್ರ ಕೃಪೆ: shutterstock.com

15 ಟಿಪ್ಪಣಿಗಳು Post a comment
 1. ಡಿಸೆ 2 2016

  ಇದೇ ಪರಿಸ್ಥಿತಿಯನ್ನು ತಲುಪಿದ ಬ್ರದರ್ ಬಸವ, ಅಭಿನಯ ಚೆನ್ನ ಬಸ್ವ, ಸೆಟ್ಟಿ,ಬಿಟ್ಟಿ,ನಾಗ, ಪೋಗವಿತ್ಯಾದಿ ಬೇನಾಮಿ ಹೆಸರಿಟ್ಟುಕೊಂಡ ಗಂಜಿಗಿರಾಕಿಯೊಂದು ತಮ್ಮ ಚೋರರಗುರುವಾದ ಡ್ರಗಿಸ್ಟ್ ಸಾರ್ ಹತ್ರ ಹೋಗಿ ತಮಗೆ ಬಂದಿರುವ ತತ್ವಾರಕ್ಕೊಂದು “ಗತಿಗಾಣಿಸತಕ್ಕದ್ದು” ಎಂದು ಕೇಳಲಾಗಿ, ಹತಾಷೆಯಿಂದ ಸಿಟ್ಟಿಗೆ ತಿರುಗಿದ ಡ್ರಗ್ಗಾ ಸರ್ ಮೂಡು,ದನಿಯೇರಿಸಿ
  ” ಹೋಗು ಹೋಗಯ್ಯಾ,ಹನುಮಂತನೇ ಹಗ್ಗ ಜಗಿಯುತ್ತಿರವಾಗ ಇವನ್ಯಾವನೋ ಪೂಜಾರಿ…” ಎನ್ನುತ್ತಿರುವಾಗಲೇ ಸನಾತನ ಧರ್ಮದವರ ದೇವರಾದ ಹನುಮಂತನ ಹೆಸರ್ಹೇಳಿ, ನಾಲಿಗೆ ಕಚ್ಚಿಕೊಂಡು *ತೋಬಾ ತೋಬಾ” ಅಂದದ್ದು ವಾಂತಿಭಾರತಿಯಲ್ಲಿ ಪ್ರಿಂಟಾಗಲಿಲ್ವಂತೆ.

  ಉತ್ತರ
  • ಶೆಟ್ಟಿನಾಗ ಶೇ.
   ಡಿಸೆ 2 2016

   ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳಿಗೆ ಅಭಿಮಾನಿಗಳಿಗೆ ದರ್ಗಾ ಅವರ ಸಾಹಿತ್ಯಕ ಸಾಧನೆಗಳ ಅರಿವು ಇದೆ. ಈ ಬಾರಿ ಬಂಡಾಯ ಸಾಹಿತಿ ಬರಗೂರ ರಾಮಚಂದ್ರಪ್ಪನವರಿಗೆ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುವ ಗೌರವ ಸಂದಿದೆ. ದರ್ಗಾ ಸರ್ ಅವರದ್ದು ಬಂಡಾಯ ಸಾಹಿತ್ಯದಲ್ಲಿ ಬರಗೂರ ರಾಮಚಂದ್ರಪ್ಪನವರಷ್ಟೇ ದೊಡ್ಡ ಹೆಸರು. ಆದುದರಿಂದ ಮುಂದಿನ ವರ್ಷ ದರ್ಗಾ ಸರ್ ಅವರಿಗೆ ಈ ಗೌರವ ಸಲ್ಲಲಿ ಎಂದು ಕನ್ನಡ ಸಾಹಿತ್ಯಾಭಿಮಾನಿಗಳು ಹಾರೈಸಿದ್ದಾರೆ. ಹಾಗೂ ದರ್ಗಾ ಸರ್ ಅವರ “ವಚನ ವಿವೇಕ” ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡ ಸಲ್ಲತಕ್ಕದ್ದು. ಬಂಡಾಯ ಸಾಹಿತ್ಯದ ಮತ್ತೊಬ್ಬ ದಿಗ್ಗಜ ಬೋಳುವಾರು ಕುಂಞ್ ಅವರ ‘ಓದಿರಿ’ ಕೃತಿಗೆ ಕೂಡ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡ ಸಲ್ಲತಕ್ಕದ್ದು. ಇದು ಕನ್ನಡಾಭಿಮಾನಿಗಳ ಹೃದಯದ ಕೋರಿಕೆ.

   ಉತ್ತರ
   • sudarshana gururajarao
    ಡಿಸೆ 2 2016

    ತಾತ ಬರಗೂರು,ಭಾವ ದರ್ಗಾ, ಮಾಯಾವತಿ ಅಕ್ಕ,ಅರವಿಂದಣ್ಣ, ಷಡ್ಕ ಚಿಕ್ಕರಾಯಪ್ಪ, ಚಿಕ್ಕಪ್ಪ ಜಯಚಂದ್ರ, ದಾವುದ್ ಮಾರ್ಗದರ್ಶಕ, ಇತ್ಯಾದಿಗಳಿಗೆ ಯಾವ ಯಾವ ಮರ್ಯಾದೆ ಸಿಗಬೇಕು ಅಂತಲೂ ಕನಸು ಕಾಣತಕ್ಕದ್ದು.
    ಅಂದಹಾಗೆ ಗೌರಿ ಗೆ ಏನು ಮರ್ಯಾದೆ ಮಾಡುವಿರಿ?

    ಉತ್ತರ
    • ಶೆಟ್ಟಿನಾಗ ಶೇ.
     ಡಿಸೆ 2 2016

     ಪ್ರಗತಿಪರರೆಲ್ಲರೂ ಗೌರವಾನ್ವಿತರು, ಪ್ರಶಸ್ತಿ ಪುರಸ್ಕಾರ ಮನ್ನಣೆ ಸನ್ಮಾನಗಳಿಗೆ ಅರ್ಹರು. ಜನಪ್ರಿಯತೆಗೆ ತೆಕ್ಕು ಬಿದ್ದು ಸಾಹಿತ್ಯ ರಚಿಸುವವರು ಪ್ರಗತಿಪರರಲ್ಲ. ದರ್ಗಾ ಸರ್ ಅವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದರೆ ಅದು ಕನ್ನಡ ಸಾಹಿತ್ಯಕ್ಕೇ ಸಂದ ಗೌರವ. ಬೊಳುವಾರು ಮಹಮ್ಮದ್ ಅವರಿಗೆ ಸಿಕ್ಕರೂ ಕನ್ನಡ ನಾಡಿನ ಸಾಹಿತ್ಯಾಭಿಮಾನಿಗಳಿಗೆ ಸಿಕ್ಕ ಗೆಲುವು.

     ಉತ್ತರ
     • ಶೆಟ್ಟಿನಾಗ ಶೇ.
      ಡಿಸೆ 3 2016

      ಓ! ಭೈರಪ್ಪನಂತಹ ಜನಪ್ರಿಯ ಸಾಹಿತಿಗೆ ಸರಸ್ವತಿ ಸನ್ಮಾನ ಸಿಕ್ಕಾಗ ಅನಾವರಣ ಆಗಿದ್ದು ಏನು ರಾಯರೇ?

      ಉತ್ತರ
  • Simha SN
   ಡಿಸೆ 2 2016

   ಗಂಧದೊಂದಿಗೆ ಗುದ್ದಾಡಿ ರಾಯರೇ. ವೃಥಾ ಈ ಹೊಲಸು ಹಂದಿಗಳೊಂದಿಗೆ ಯಾಕೆ ಹೋರುತ್ತೀರಿ !

   ಉತ್ತರ
   • sudarshana gururajarao
    ಡಿಸೆ 3 2016

    ನಿಜ.

    ಉತ್ತರ
    • ಶೆಟ್ಟಿನಾಗ ಶೇ.
     ಡಿಸೆ 3 2016

     ನಿತ್ಯ ಅವಾಚ್ಯ ಪದಗಳನ್ನೇ ಉಗುಳುತ್ತಾ ಅಲ್ಪಸಂಖ್ಯಾತರನ್ನು ಹರಾಮಿ ಎಂದು ಲೇವಡಿ ಮಾಡುತ್ತಾ ಬಸವಧರ್ಮಿಗಳನ್ನು ಶಿಟ್ಟಿ ಎಂದು ಹೀಯಾಳಿಸುತ್ತಾ ಪ್ರಗತಿಪರರನ್ನು ಗಂಜಿ ಗಿರಾಕಿ ಎಂದು ಅವಮಾನಿಸುತ್ತಾ ನೋಟು ನಿವೃತ್ತಿಯನ್ನು ಸಕಾರಣವಾಗಿ ವಿರೋಧಿಸುವವರನ್ನು ಖಂಡಿಸುತ್ತಾ ಕಾಲಕಳೆಯುವ ‘ರಾಯರು’ ಚಂದನ ಕೊರಡೋ ಗಂಧದ ಕಟ್ಟಿಗೆಯೋ ಎಂಬ ಸತ್ಯವನ್ನು ಹಂದಿ ಸಾಕಾಣಿಕೆ ಪರಿಣತ ಸಿಂಹ ಅವರೇ ಬಲ್ಲರು!

     ಉತ್ತರ
     • Anonymous
      ಡಿಸೆ 3 2016

      “ಹಿಂದೊಂದು ವಾದ ವಿವಾದದಲ್ಲಿ ನಿನ್ನ ಹೊಲಸು ಬಾಯಿ ಕೈಗಳಿಂದ ಅತಿ ಕೀಳಮಟ್ಟದ ಪದಗಳನ್ನು ಬರೆಯಬಲ್ಲ ಗೋಮುಖ ವ್ಉಅಘ್ರ ನೀನೆಂಬುದನ್ನೂ ನಿರೂಪಿಸಿಕೊಂಡು ಬಿಟ್ಟಿದ್ದೀಯ.”

      ನಿಮ್ಮ ದುರ್ವರ್ತನೆಗೆ ಶೆಟ್ಕರ್ ಅನ್ನು ದೂರಿ ಪ್ರಯೋಜನವಿಲ್ಲ. ನೀವೇನು ಪುಟ್ಟ ಹುಡುಗನಲ್ಲ, ಸುಶಿಕ್ಷಿತ ಪ್ರೌಢ ವ್ಯಕ್ತಿ. ನಿಮ್ಮ ತಂದೆ ತಾಯಿ ನಿಮಗೆ ಉತ್ತಮ ಸಂಸ್ಕಾರವನ್ನು ಕೊಟ್ಟೇ ಬೆಳೆಸಿದ್ದಾರೆ. ಆದರೆ ನಿಲುಮೆಯಲ್ಲಿ ನೀವು ದುರ್ವರ್ತನೆಯ ಪಾತಾಳ ಮುಟ್ಟಿದ್ದೀರಿ. ಶೆಟ್ಕರ್ ಕಮೆಂಟುಗಳು ಸಿಲ್ಲಿ ಆಗಿರುತ್ತವೆ ನಿಜ ಆದರೆ ಆತ ನಿಮ್ಮ ಮಟ್ಟದಲ್ಲಿ ಹೊಲಸು ಮಾತುಗಳನ್ನು ಬಳಸಿ ಎಂದೂ ಕಮೆಂಟು ಮಾಡಿಲ್ಲ. ಪದೇ ಪದೇ ಶೆಟ್ಕರ್ ಅನ್ನು ಕೆಟ್ಟ ಮಾತುಗಳಿಂದ ಬೈದು ಆತನ ಮೇಲೆ ಎಗರಿ ಜಗಳ ಶುರು ಮಾಡಿದ್ದು ನೀವು ಅಂತ ಎಲ್ಲರಿಗೂ ಗೊತ್ತಿದೆ. ನಾನು ಕೆಲ ಸಮಯದ ಹಿಂದೆ ನಿಮಗೆ ತಿಳಿ ಹೇಳಿದೆ. ಆದರೆ ಅದನ್ನು ನೀವು ಲೆಕ್ಕಕ್ಕೆ ತೆಗೆದುಕೊಳ್ಳಲೇ ಇಲ್ಲ. ಆದುದರಿಂದ ನಿಮ್ಮನ್ನು ಬ್ಯಾನ್ ಮಾಡಬೇಕು ಎಂದು ಮತ್ತೊಮ್ಮೆ ನಿಲುಮೆಯ ಸಂಪಾದಕರನ್ನು ಆಗ್ರಹಪಡಿಸುತ್ತಿದ್ದೇನೆ.

      ಉತ್ತರ
      • sudarshana gururajarao
       ಡಿಸೆ 4 2016

       ಗಣಿಗಾರಿಕೆ ಮಾಡು ದೊರೆ,ಸಿಗುತ್ತೆ.
       ನಾನು ಸಭ್ಯತೆಯ ಸೋಗು ಹಾಕುವ ಮನುಷ್ಯ ಅಲ್ಲ. ನಾಗಸೆಟ್ಟಿಯಂತಹವರಿಗೆ ನಾನು ಉತ್ತರಿಸುವ ಪರಿ ಹಾಗೆಯೇ ಇರುತ್ತದೆ. ಅವನು ಬಳಸಿರುವ ಪದಗಳ ಆಳ ಹಿಂದಿನ ಪೋಸ್ಟ್ ಒಂದರಲ್ಲಿ ಸಿಗುತ್ತದೆ. ನೋಡಿಕೋ. ನನಗಿಂತಲೂ ರೋಷಭರಿತವಾಗಿ witian ಅನ್ನುವವರಿಗೆ ಬರೆದಿದ್ದಾನೆ. ನಿಮ್ಮಿಂದ ಸಭ್ಯ,ಎಂಬ ಬಿರುದು ನನಗೆ ಬೇಡ. ಅಪದ್ದಕ್ಕೆ ಅಪದ್ದವೇ ಉತ್ತರ.
       ಸಂಸ್ಕಾರ ಕೇವಲ ಮಾತಿನಿಂದಲ್ಲ,ಕೃತಿಯಿಂದಲೂ,ವಿಶಾಲ ದೃಷ್ಟಿಕೋನದಿಂದಲೂ ಕೂಡಿರಯತ್ತದೆ.

       ಉತ್ತರ
 2. laxmikanth
  ಡಿಸೆ 3 2016

  Though the article is written in a lighter note, the fact is there is huge decline in job creation in Modi regime as per reports. Leaving aside the discussion happening in this forum on the subject matter of decline is job creation…The following are few facts.

  # Job creation has hit 7 years low during 2015 and touched 8 year low in 2016.

  # Job creation in 8 prominent sectors is the lowest in 8 years.

  # One of the biggest industry house L&T sent 14500 employees home recently in a biggest downsizing in recent history.

  # According to a report, hiring from top four Indian IT companies is 43 percent less than last year.Hiring in the first half of this financial year also showed 24 percent decline compared to last year

  ( With inputs from reports on economics and major dailies on finance and economics)

  ಉತ್ತರ
  • sudarshana gururajarao
   ಡಿಸೆ 4 2016

   Jobs ,should be ofvrwal value ones for the benefit of longterm outcome. Useless in effective jobs are harmful.

   ಉತ್ತರ
   • SalamBava
    ಡಿಸೆ 4 2016

    In the long run we’re all dead. So said the greatest economist of 20th century.

    ಉತ್ತರ
    • sudarshana gururajarao
     ಡಿಸೆ 5 2016

     Q:Greatest ,by what standards?
     Answer: by propagandists’ standards.
     The greatest economist was also the weakest leader. So his comments without credible explanations are discounted,disregarded and disposed.
     No one gave a hoot to his mumbling.

     ಉತ್ತರ
     • Anonymous
      ಡಿಸೆ 6 2016

      John Meynard Keynes is undoubtedly the greatest economist of 20th century. Was he a weak leader?!

      ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments