ಮೋದಿಯಂತವರು ರಾಜಕೀಯಕ್ಕೆ ಬರಬೇಕು..
– ರಾಕೇಶ್ ಶೆಟ್ಟಿ
ದೇಶದ ಪಾಲಿಗೆ ಮಹತ್ವದ ದಿನಗಳಾಗಿ ಇತಿಹಾಸದ ದಿಕ್ಕು ದೆಸೆಯನ್ನೇ ಬದಲಿಸಿದ ಆಗಸ್ಟ್ ೧೫, ಜನವರಿ ೨೬, ಅಕ್ಟೋಬರ್ ೨, ಜನವರಿ ೨೩ರ ಸಾಲಿಗೆ ನಿಶ್ಚಿತವಾಗಿ ನವೆಂಬರ್ ೮ರ ದಿನವನ್ನು ಸೇರಿಸಬಹುದೆನಿಸುತ್ತದೆ. ನವೆಂಬರ್ ೮ರ ಮಧ್ಯರಾತ್ರಿಯಿಂದ ೫೦೦, ೧೦೦೦ ರೂಪಾಯಿಗಳ ಹಳೆಯ ನೋಟುಗಳ ಚಲಾವಣೆಯನ್ನು ನಿಲ್ಲಿಸುವ ನಿರ್ಧಾರ ತೆಗೆದುಕೊಳ್ಳುವ ಮೂಲಕ ದೇಶದ ಆರ್ಥಿಕ ವ್ಯವಸ್ಥೆಯ ಮಗ್ಗಲು ಬದಲಿಸಲು ಹೊರಟ ದಿನ.
ಹೌದು! ನೋಟ್ ರದ್ದಾದ ನಂತರ ಕೆಲ ದಿನಗಳು ಜನರ ದೈನಂದಿನ ಕೆಲಸ ಕಾರ್ಯಗಳಿಗೆ ಅಡೆ-ತಡೆಯುಂಟಾಗಿದೆ. ಹೀಗೆ ಆಗುತ್ತದೆ ಎಂಬುದನ್ನೂ ಪ್ರಧಾನಿಯವರೇ ಹೇಳಿದ್ದರು. ಆದರೆ, ಜನರ ಬದುಕನ್ನು ಇನ್ನಷ್ಟು ಅಸಹನೀಯಗೊಳಿಸಲು ಭ್ರಷ್ಟರ ಕಾರ್ಯಪಡೆಯೇ ಕಾರ್ಯಾಚರಣೆಗಿಳಿಯಿತು. ಇವರಿಗೆ ಬೆಂಬಲವಾಗಿ ಬ್ಯಾಂಕಿನ ಕೆಲವು ನಮಕ್ ಹರಾಮ್ ಅಧಿಕಾರಿಗಳು ಕೈ ಜೋಡಿಸಿದರು. ಗಂಟೆಗಟ್ಟಲೆ ಎಟಿಎಂ ಮುಂದೆ ನಿಂತು ಎರಡು ಸಾವಿರ ಪಡೆಯುವುದೇ ಕಷ್ಟವಾಗಿದ್ದ ದಿನಗಳಲ್ಲೇ ೨೦೦೦ ಮುಖಬೆಲೆಯ ಹೊಸ ನೋಟುಗಳು ಕೋಟಿಗಟ್ಟಲೇ ರಾಜ್ಯದ ಇಬ್ಬರು ಭ್ರಷ್ಟ ಅಧಿಕಾರಿಗಳು ಮತ್ತು ಹವಾಲ ಏಜೆಂಟಿನಿಂದಲೇ ಸಿಕ್ಕಿವೆ. ಕೇವಲ ಕರ್ನಾಟಕ ಮಾತ್ರವಲ್ಲ, ತಮಿಳುನಾಡು, ಆಂಧ್ರ, ಮಧ್ಯಪ್ರದೇಶ, ಮುಂಬೈ ಹೀಗೆ ದೇಶದ ನಾನಾ ಭಾಗಗಳಲ್ಲಿ ಆದಾಯ ತೆರಿಗೆ, ಇಡಿ, ಸಿಬಿಐ ದಾಳಿಯಲ್ಲಿ ಹಲವು ಕಳ್ಳರು ಪಕ್ಷಾತೀತವಾಗಿ ಸಿಕ್ಕಿಬಿದ್ದಿದ್ದಾರೆ. ಕರ್ನಾಟಕದಲ್ಲಿ ಸಿಕ್ಕಿಬಿದ್ದಿರುವ ಇಬ್ಬರು ಭ್ರಷ್ಟ ಅಧಿಕಾರಿಯ ಪೈಕಿ ಒಬ್ಬನ ಡೈರಿಯಲ್ಲಿರೋ ಮಾಹಿತಿಯಿಂದಲೇ ರಾಜ್ಯ ಸರ್ಕಾರದ ಪ್ರಭಾವಿ ಸಚಿವರ ಬಣ್ಣವೂ ಬಯಲಾಗಲಿದೆ ಎಂಬ ಸುದ್ದಿಯಿದೆ.
ಬೆಂಗಳೂರಿನಲ್ಲಿ ಸಿಕ್ಕಿ ಬಿದ್ದ ಕಳ್ಳರು ಬೇರೆ ಬೇರೆ ರಾಜ್ಯದ ಬ್ಯಾಂಕುಗಳಿಂದ ಹಣ ತರಿಸಿಕೊಂಡಿದ್ದಾರೆ. ಅದರಲ್ಲೂ ಮುಖ್ಯವಾಗಿ ತಮಿಳುನಾಡಿನ ಈರೋಡಿನಿಂದ. ನೋಟ್ ಬ್ಯಾನಿನಿಂದಾಗಿ ಬಡವರಿಗೆ ಕಷ್ಟವಾಗಿದೆ ಎಂದು ಊಳಿಡುತ್ತಿದ್ದ ನರಿಗಳು ಅರ್ಥ ಮಾಡಿಕೊಳ್ಳಬೇಕಾಗಿರುವ ಅಂಶವೊಂದಿದೆ. ಈರೋಡು ಜಿಲ್ಲೆಯಲ್ಲಿ ದಿನಗೂಲಿ, ವಾರದ ಕೂಲಿ ಕಾರ್ಮಿಕರು ಹೆಚ್ಚಿದ್ದು ಅವರ ಸಂಬಳ ವಿತರಣೆಯಾಗುವುದೆಲ್ಲ ಕ್ಯಾಷ್ ಮೂಲಕವೇ. ಬಡವರಿಗೆ ಸೇರಬೇಕಿದ್ದ ಹಣವನ್ನು ಕೆಲವು ನಮಕ್ ಹರಾಮ್ ಬ್ಯಾಂಕಿನ ಅಧಿಕಾರಿಗಳ ಸಹಾಯದಿಂದ ಭ್ರಷ್ಟರ ಮನೆಗೆ ಸೇರಿಸಲಾಗಿದೆ. ಕರ್ನಾಟಕದಲ್ಲಿ ಸಿಕ್ಕಿಬಿದ್ದಿರುವ ಭ್ರಷ್ಟರಿಗೇ ತಲುಪಿರುವುದು ಇಲ್ಲಿನ ಹಣವೇ. ಈ ಭ್ರಷ್ಟರಿಂದ ಯಾವ ಪಕ್ಷದ ನಾಯಕರ ಕಪ್ಪುಹಣ ಬಿಳಿಯಾಗಿರುತ್ತದೆಯೆಂಬುದೇನೂ ಈಗ ಗುಟ್ಟಾಗಿ ಉಳಿದಿಲ್ಲ. ಎಟಿಎಂ ಮುಂದೆ ನಿಂತು ಸತ್ತರು, ರೈತರ ಬಿತ್ತನೆ ನೀಜಕ್ಕೆ ದುಡ್ಡಿಲ್ಲ, ಬಡವರಿಗೆ ಹಣವಿಲ್ಲವೆಂದು ಮೊಸಳೆ ಕಣ್ಣೀರು ಸುರಿಸಿದವರ ಪಕ್ಷದ ನಾಯಕರೇ ಬಡವರ ಪಾಲಿನ ಹಣವನ್ನು ತಮ್ಮ ಹಾಸಿಗೆಯಡಿಯಿಟ್ಟು ಗೊರಕೆಯೊಡೆದಿದ್ದಾರೆ.
ನೋಟ್ ರದ್ದಾದ ನಂತರ, ಕಪ್ಪುಹಣ ನಿಯಂತ್ರಣಕ್ಕಾಗಿ ಸರ್ಕಾರದ ಆಗಾಗ್ಗೆ ಪ್ರಕಟಿಸಿದ ನಿರ್ಧಾರಗಳು, ನೋಟ್ ಸೈಜ್ ಬದಲಾವಣೆಯಿಂದ ಎಟಿಎಂಗಳಿಗೆ ಸಕಾಲಕ್ಕೆ ಹಣ ತಲುಪದೇ ಇದ್ದದ್ದು ಇತ್ಯಾದಿಗಳ ಬಗ್ಗೆ ನಾವು ಬಹಳಷ್ಟು ಚರ್ಚೆ ಮಾಡಬಹುದು. ಆದರೆ, ಅವೆಲ್ಲಕ್ಕಿಂತಲೂ ಮುಖ್ಯವಾಗಿ ನಾವು ಗಮನಿಸಬೇಕಾದದ್ದು ಇಂತಹದ್ದೊಂದು ನಿರ್ಧಾರವನ್ನು ತೆಗೆದುಕೊಳ್ಳುವ ಛಾತಿ ಈ ದೇಶವನ್ನಾಳಿದ ಹಿಂದಿನ ಯಾವ ಪ್ರಧಾನ ಮಂತ್ರಿಗೂ ಇರಲಿಲ್ಲವೆಂಬುದು! ಕಠಿಣ ನಿರ್ಧಾರಗಳನ್ನು ಕೈಗೊಳ್ಳುವ ಛಾತಿಯಿದ್ದ ಇಂದಿರಾ ಗಾಂಧಿಯಂತವರು ಹಿಂಜರಿದಿದ್ದ ಕೆಲಸಕ್ಕೆ ಕೈ ಹಾಕಿದವರು ನರೇಂದ್ರ ಮೋದಿ.
ಇಂದಿರಾ ಗಾಂಧಿಯವರ ಸಾಧನೆಯ ಬಗ್ಗೆ ಮಾತನಾಡುವಾಗ ಬ್ಯಾಂಕುಗಳ ರಾಷ್ಟ್ರೀಕರಣದ ಮೂಲಕ ಉಳ್ಳವರ ಪಾಲಿಗಿದ್ದ ಬ್ಯಾಂಕುಗಳು ಜನಸಾಮಾನ್ಯರ ಬಳಿಗೆ ಬರುವಂತಾಯಿತು ಎಂದು ಬರೆಯುವುದನ್ನು ನಮ್ಮ ಬುದ್ಧಿಜೀವಿಗಳು ಮರೆಯುವುದಿಲ್ಲ. ಅದು ನಿಜವೇ. ಆದರೆ, ಅದು ಮಧ್ಯಮ ವರ್ಗದವ ಜನರಿಗೆ ನಿಲುಕುವಷ್ಟು ಹತ್ತಿರವಾಗಿತ್ತಷ್ಟೇ (ಅದೂ ಪೂರ್ಣ ಪ್ರಮಾಣದಲ್ಲೇನೂ ಅಲ್ಲ!), ಅಂತ ಬ್ಯಾಂಕುಗಳು ಸಮಾಜದಲ್ಲಿ ಆರ್ಥಿಕವಾಗಿ ಕೆಳವರ್ಗವೆಂದು ಗುರುತಿಸಬಹುದಾದವರಿಗೂ ತಲುಪಿದ್ದು ಜನ್-ಧನ್ ಯೋಜನೆಯ ಮೂಲಕ ಎಂಬುದನ್ನು ಒಪ್ಪಲು ಮಾತ್ರ ಅವರು ತಯಾರಿಲ್ಲ.
ಜನ್ ಧನ್, ಮುದ್ರಾ ಬ್ಯಾಂಕ್ ಯೋಜನೆಯ ಮೂಲಕ ಬಡವರನ್ನು ಬ್ಯಾಂಕ್ ಕಡೆಗೆ ಮುಖ ಮಾಡುವಂತೆ ಮಾಡಿದ ಪ್ರಧಾನಿ ಮೋದಿ ಸರ್ಕಾರ ಮತ್ತೊಂದೆಡೆ ಅಧಿಕಾರಕ್ಕೆ ಬಂದ ತಕ್ಷಣವೇ ಮಾಡಿದ ಪ್ರಮುಖ ಕಾರ್ಯಗಳಲ್ಲಿ ಕಪ್ಪುಹಣ ಪತ್ತೆಗಾಗಿ SIT ಮಾಡಿದ್ದು. ಕಾಳ ಧನಿಕರು ತಾವಾಗಿಯೇ ಮುಂದೆ ಬಂದು ತಮ್ಮಲ್ಲಿರುವ ಕಪ್ಪುಹಣವನ್ನು voluntary ಯಾಗಿ ಘೋಷಿಸಿಕೊಂಡು ದಂಡ ಕಟ್ಟಿ ಉಳಿದ ಹಣವನ್ನು ಸಕ್ರಮ ಮಾಡಿಕೊಳ್ಳುವ ನಾಲ್ಕು ಯೋಜನೆಗಳನ್ನು ಎರಡೂವರೆ ವರ್ಷಗಳಲ್ಲಿ ತಂದರು. ಈ ಯೋಜನೆಗಳಲ್ಲಿ ಮುಂದೆ ಬಂದು ತಮ್ಮಲ್ಲಿದ್ದ ಬೇನಾಮಿ ಸ್ವತ್ತನ್ನು ಸರ್ಕಾರದ ಮುಂದೆ ತೆರೆದಿಟ್ಟವರ ಹೆಸರನ್ನು ಸಾರ್ವಜನಿಕಗೊಳಿಸದೇ ದಂಡ ಕಟ್ಟಿಸಿಕೊಂಡು ಕ್ಷಮಾದಾನ ನೀಡುವ ಮೂಲಕ ಅವರನ್ನೂ ಅರ್ಥಿಕ ವ್ಯವಸ್ಥೆಯ ಮುಖ್ಯಧಾರೆಯಲ್ಲಿ ಕೊಂಡೊಯ್ಯುವ ಸರ್ಕಾರದ ನಿರ್ಧಾರವೂ ಶ್ಲಾಘನೀಯ.
ಮೊನ್ನೆ ಬಿಜೆಪಿ ಸಂಸದರ ಸಭೆಯಲ್ಲಿ ಪ್ರಧಾನಿಯವರು ಮಾಡಿದ ಭಾಷಣದಲ್ಲೂ, ಈ ಹಿಂದೆ ಕಡಿಮೆ ಲೆಕ್ಕ ತೋರಿಸುತ್ತಿದ್ದ ವ್ಯಾಪಾರಿಗಳ ಹಿಂದೆ ಬಿದ್ದು ಹಿಂದಿನ ಲೆಕ್ಕ ಕೇಳಬೇಡಿ ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೇ. ಹಿಂದಿನ ಬಾಕಿಯನ್ನು ಕೆದಕುತ್ತ ಕುಳಿತರೆ ಜನರು ಮುಖ್ಯಧಾರೆಗೆ ಬರಲಾರರು ಎನ್ನುವ ಮೂಲಕ, ಮೋದಿಯವರು ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂಬ ತಮ್ಮ ಸರ್ಕಾರದ ಧ್ಯೇಯ ವಾಕ್ಯವನ್ನು ಪಾಲಿಸುತ್ತಿರುವ ಸೂಚನೆಯನ್ನು ನೀಡಿದರು. ಅಷ್ಟಕ್ಕೂ ಈ ದೇಶದಲ್ಲಿ ಕಪ್ಪುಹಣ ಇರುವಂತೆಯೇ, ಅನ್-ಅಕೌಂಟೆಡ್ ಹಣವೂ ಇದ್ದರೆ ಅದರ ಪಾಲು ನಮ್ಮ ತೆರಿಗೆ ವ್ಯವಸ್ಥೆಯ ನ್ಯೂನ್ಯತೆಯಲ್ಲೂ ಇದೆ ಎಂಬುದನ್ನು ಮೋದಿಯವರ ಸರ್ಕಾರ ಅರಿತಂತೆ ಕಾಣುತ್ತದೆ. “ನಾವು ಚಿಕ್ಕ ಚಿಕ್ಕ ಯೋಜನೆ/ಯೋಚನೆಗಳನ್ನು ಮಾಡುವುದಿಲ್ಲ. ಹೊರಡುವಾಗ ದೊಡ್ಡ ಯೋಜನೆಯನ್ನೇ ತಲೆಯಲ್ಲಿಟ್ಟುಕೊಂಡರೂ ಒಂದೊಂದೇ ಕಾರ್ಡ್ ಅನ್ನು ಚಲಾಯಿಸುತ್ತ ಹೋಗುತ್ತೇವೆ” ಎನ್ನುವ ಮೂಲಕ ಪ್ರಧಾನಿ ಮೋದಿಯವರು ಈ ದೇಶದ ತೆರಿಗೆ ವ್ಯವಸ್ಥೆಯನ್ನು ಬದಲಿಸುವ ಇರಾದೆಯಿರುವುದನ್ನು ಸೂಚ್ಯವಾಗಿ ಹೇಳಿದಂತಿದೆ.
ನೈಜ ಇಚ್ಚಾಶಕ್ತಿಯುಳ್ಳ ನಾಯಕನೊಬ್ಬನಿಗೆ ಅಧಿಕಾರ ಸಿಕ್ಕರೆ ಏನಾಗಬಹುದು ಎಂಬುದಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ಸಾಕ್ಷಿ. ಯುಪಿಎ ಸರ್ಕಾರದ ಬ್ರಹ್ಮಾಂಡ ಭ್ರಷ್ಟಚಾರ, ಜಡ್ಡುಗಟ್ಟಿದ ಭ್ರಷ್ಟ ಅಧಿಕಾರಶಾಹಿ-ರಾಜಕಾರಣಿ-ಮಾಫಿಯಾ ಜುಗಲ್ ಬಂಧಿಯನ್ನು ಎದುರು ಹಾಕಿಕೊಂಡು ನಿಲ್ಲುವ ಕೆಲಸವನ್ನು ಕೇವಲ ಸಂತನಾದವನಷ್ಟೇ ಮಾಡಬಲ್ಲ. ಭಾಷಣವೊಂದರಲ್ಲಿ ಪ್ರಧಾನಿ “ನನ್ನನ್ನೇನು ಮಾಡುತ್ತೀರಿ ನಾನು ಫಕೀರನಂತೆ ಹೊರಟು ಬಿಡುತ್ತೇನೆ” ಎನ್ನುವ ಮೂಲಕ ಅದನ್ನು ಹೇಳಿಕೊಂಡೂ ಬಿಟ್ಟರು. ಸ್ವಾಮಿ ವಿವೇಕಾನಂದರು, ಅರಬಿಂದೋರಂತ ಸಂತರು ಈ ದೇಶವನ್ನಾಳುವ ನಾಯಕನಿಗೆ ಅಧ್ಯಾತ್ಮದ ಸೆಳೆತವಿರಬೇಕು ಎಂದಿದ್ದರಲ್ಲ, ನಮಗೆ ಸಿಕ್ಕಿರುವ ಪ್ರಧಾನಿ ಅಂತವರೇ. ಎಲ್ಲವನ್ನು ಬಿಟ್ಟು ಹಿಮಾಲಯ ಸೇರಿಕೊಳ್ಳಲು ಹೋಗಿದ್ದ ವ್ಯಕ್ತಿಯನ್ನು ನಿನ್ನ ಕಾರ್ಯಕ್ಷೇತ್ರ ಸನ್ಯಾಸವಲ್ಲ, ರಾಜಕಾರಣವೆಂದು ರಾಮಕೃಷ್ಣ ಆಶ್ರಮದ ಗುರುಗಳು ಹಿಂದೆ ಕಳುಹಿಸಿದ್ದು ವ್ಯರ್ಥವಾಗಿಲ್ಲ. ಈ ದೇಶ ಬಹಳಷ್ಟು ಪ್ರಧಾನಿಗಳನ್ನು, ರಾಜಕಾರಣಿಗಳನ್ನು ನೋಡಿದೆ. ಆದರೆ ತನ್ನನ್ನು ಪ್ರಧಾನ ಸೇವಕ, ಫಕೀರನೆಂದು ಹೇಳಿಕೊಳ್ಳುವ ಪ್ರಧಾನಿಯನ್ನು/ರಾಜಕಾರಣಿಯನ್ನು ನೋಡಿರಲಿಲ್ಲ.
“ರಾಜಕಾರಣಕ್ಕೆ ಯುವಕರು ಬರಬೇಕು” ಎನ್ನುವ ಚರ್ಚೆಗಳು ಪದೇ ಪದೇ ನಡೆಯುತ್ತಲೇ ಇರುತ್ತವೆ. ನನ್ನ ಪ್ರಕಾರ ಯುವಕರು ರಾಜಕೀಯಕ್ಕೆ ಬಂದರೆ/ಯುವಕರ ಕೈಗೆ ಅಧಿಕಾರ ಸಿಕ್ಕರೆ ಎಲ್ಲವೂ ಬದಲಾಗುತ್ತದೆ ಅನ್ನುವುದು ಒಂದು ’ಮಿಥ್’ ಅಷ್ಟೇ. ನಿಜಕ್ಕೂ ಬದಲಾವಣೆ ತರಲಿಕ್ಕೆ “ಮೋದಿಯಂತವರು ರಾಜಕೀಯಕ್ಕೆ ಬರಬೇಕು”. ನಾಳೆ ‘ಪ್ರಧಾನಿ’ ಖುರ್ಚಿಯಿಂದ ಇಳಿಸಿದರೆ “ಫಕೀರ”ನಂತೆ ಕೈ ಮುಗಿದು ಹೊರಡುತ್ತೇನೆ ಎನ್ನಲಿಕ್ಕೆ ಗುಂಡಿಗೆ ಬೇಕು ಮತ್ತು ಅಂತ ಗುಂಡಿಗೆ ಇದ್ದವರಷ್ಟೇ ಒಂದಿಡಿ ದೇಶದ ಅರ್ಥ ವ್ಯವಸ್ಥೆಯನ್ನು ಬದಲಾಯಿಸುವಂತಹ ಕಠಿಣ ಕೆಲಸಕ್ಕೆ ಕೈ ಇಟ್ಟು ಭ್ರಷ್ಟ ವ್ಯವಸ್ಥೆಯ ವಿರುದ್ಧ ಈಜಲು ಸಾಧ್ಯ. ಮೋದಿಯವರು ಕೇವಲ ಅರ್ಥ ವ್ಯವಸ್ಥೆಯ ಬದಲಾವಣೆಗೆ ಹೊರಟು ನಿಂತಿಲ್ಲ, ಬೇನಾಮಿಯಾಗಿ ಎಕರೆಗಟ್ಟಲೇ ಭೂಮಿ ನುಂಗಿರುವವರು ವಿರುದ್ಧವೂ ಇಳಿದಿದ್ದಾರೆ. ಇವೆಲ್ಲಕ್ಕಿಂತ ಹೆಚ್ಚಾಗಿ ಭ್ರಷ್ಟಚಾರಕ್ಕೆ ಮೂಲವಾದ ಚುನಾವಣ ವ್ಯವಸ್ಥೆಯ ಬಗ್ಗೆಯೂ ದನಿಯೆತ್ತಿದ್ದಾರೆ.
ಅಧಿಕಾರಕ್ಕೆ ಬಂದಾಗಿನಿಂದ ಪದೇ ಪದೇ ಬರುವ ಚುನಾವಣೆಗಳ ಬದಲಿಗೆ ಏಕಕಾಲದಲ್ಲೇ ದೇಶದಾದ್ಯಂತ ಚುನಾವಣೆಗಳನ್ನು ನಡೆಸಿದರೆ ಆರ್ಥಿಕ, ಮಾನವ ಸಂಪನ್ಮೂಲಗಳ ಉಳಿತಾಯವಾಗುವುದರಿಂದ ಈ ಬಗ್ಗೆ ಚರ್ಚೆಯಾಗಲಿ ಎಂದು ಹೇಳುತ್ತಲೇ ಬಂದಿದ್ದಾರೆ. ಖುದ್ದು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಸಹ ಪ್ರಧಾನಿಯವರ ಮಾತಿಗೆ ದನಿಗೂಡಿಸಿದ್ದಾರೆ. ಮೊನ್ನೆ ಮೊನ್ನೆ ತಾನೇ ಚುನಾವಣೆಗಳಿಗೆ State Funding ಮಾಡುವ ಸುಧಾರಣ ಕ್ರಮದ ಚರ್ಚೆಗೆ ನಾನು ಮುಕ್ತವಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ರಾಜಕೀಯ ಪಕ್ಷಗಳಿಗೆ ಬರುವ ಹಣದ ಮೂಲದಲ್ಲೂ ಕಪ್ಪುಹಣ ಹರಿಯುತ್ತದೆ ಎನ್ನುವುದೇನೂ ಗುಟ್ಟಲ್ಲ. ಹೀಗಿರುವಾಗ ಚುನಾವಣೆಗೆ ಸ್ಟೇಟ್ ಫಂಡಿಂಗ್ ಎಂಬುದು ಹಣಬಲ, ತೋಳ್ಬಲವಿಲ್ಲದ ಸಭ್ಯ ಮತ್ತು ಅರ್ಹರು ರಾಜಕೀಯಕ್ಕೆ ಬರುವಲ್ಲಿ ಇದು ಬಹುಮುಖ್ಯ ಪಾತ್ರವಹಿಸಲಿದೆ. (Of-course ಸ್ಟೇಟ್ ಫಂಡಿಂಗ್ ಮಾಡಲು ಬೇಕಾದ ಪಾರದರ್ಶಕ ವ್ಯವಸ್ಥೆಯ ನಮ್ಮಲ್ಲಿ ಇನ್ನಷ್ಟೇ ಸೃಷ್ಟಿಯಾಗಬೇಕಿದೆ)
ಏಕರೂಪ ನಾಗರೀಕ ಸಂಹಿತೆಯ ಚರ್ಚೆಯೂ ಮುನ್ನೆಲೆಗೆ ಬಂದು ನಿಂತಿದೆ. ಬಹುಶಃ ಮೋದಿಯವರ ಬದಲು ಬೇರೆ ಇನ್ಯಾರೇ ಬಿಜೆಪಿಯ ಪ್ರಧಾನಿ ಬಹುಮತ ಪಡೆದು ಬಂದಿದ್ದರೂ ಏಕರೂಪ ನಾಗರೀಕ ಸಂಹಿತೆಯ ಬಗ್ಗೆ ಮಾತನಾಡಿರುತ್ತಿದ್ದರು. ಆದರೆ ಜನ್-ಧನ್, ನೋಟ್ ಬ್ಯಾನ್, ಪ್ಲಾಸ್ಟಿಕ್ ಮನಿ, ಸ್ಟೇಟ್ ಫಂಡಿಂಗ್ ನಂತಹ ವ್ಯವಸ್ಥೆಯ ಬದಾಲವಣೆಯ ಕ್ರಮಕ್ಕೆ ಕೈ ಹಾಕುತ್ತಲಿರಲಿಲ್ಲ. ಬೆರಳ ತುದಿಯಲ್ಲಿ ತನ್ನ ಪಕ್ಷದವರನ್ನು ಕುಣಿಸುತ್ತಿದ್ದ ಇಂದಿರಾಗಂಧಿಯಂತವರೇ, ನೋಟ್ ಬ್ಯಾನ್ ಪ್ರಸ್ತಾಪ ಮುಂದಿಟ್ಟ ವೈ.ಬಿ ಚವ್ಹಾಣರಿಗೆ “ಇನ್ನು ಮುಂದೆ ಕಾಂಗ್ರೆಸ್ ಪಕ್ಷ ಚುನಾವಣೆಯನ್ನೇ ಎದುರಿಸುವುದು ಬೇಡ ಎಂದು ಹೇಳುತಿದ್ದೀರೆ ಚವ್ಹಾಣ್ಜೀ” ಎಂದಿದ್ದರಂತೆ! ಅದಕ್ಕೆ ಹೇಳಿದ್ದು, ಮೋದಿಯಂತಹ ನೈಜ ಇಚ್ಚಾಶಕ್ತಿ ಮತ್ತು ಸ್ವಚ್ಚ ವ್ಯಕ್ತಿತ್ವವಿರುವಂತವರು ರಾಜಕೀಯಕ್ಕೆ ಬರಬೇಕೆ ಹೊರತು, ಹಣ ಮಾಡಲೆಂದೋ, ಅಧಿಕಾರ ಪಡೆಯಲೆಂದೋ, ದರ್ಬಾರ್ ನಡೆಸಲೆಂದೋ ಯುವಕರು/ಮಧ್ಯವಯಸ್ಕರು/ಮುದುಕರು ರಾಜಕೀಯಕ್ಕೆ ಬಂದರೆ ಸಮಾಜಕ್ಕೆ ನಯಾ ಪೈಸೆಯ ಉಪಯೋಗವೇನಿಲ್ಲ. ಬೇರೆ ಬೇರೆ ರಾಜಕೀಯ ಪಕ್ಷಗಳಲ್ಲಿ ಸಕ್ರಿಯರಾಗಿರುವ, ಹುದ್ದೆಗಳನ್ನು ಪಡೆದು ಮುಂದಿನ ಶಾಸಕ/ಸಂಸದ ಸ್ಥಾನಕ್ಕೆ ಟವೆಲ್ ಹಾಕಿಕೊಂಡಿರುವ ನನ್ನ ಓರಗೆಯ ಗೆಳೆಯರು, ಸಹಪಾಠಿಗಳು, ಕಾಲೇಜಿನಲ್ಲಿ ನನ್ನ ಸೀನಿಯರ್/ಜ್ಯೂನಿಯರ್ ಗಳಾಗಿದ್ದವರನ್ನು ನೋಡುತ್ತಿದ್ದೇನೆ. ಅವರಲ್ಲಿ ಬಹುತೇಕರಿಗೆ ರಾಜಕಾರಣ ಎನ್ನುವುದು ಮುಖ್ಯವಾಗಿ ಹಣ/ಆಸ್ತಿ/ಅಧಿಕಾರ ಪಡೆಯುವ ಭಾಗವೇ ಹೊರತು ಜನ ಸೇವೆಯಲ್ಲ. ಇಂತಹ ವಯಸ್ಸಿನ ಕಿರಿಯರನ್ನು ಕಟ್ಟಿಕೊಂಡೇನು ಉಪ್ಪಿನಕಾಯಿ ಹಾಕೋಣವೇ?
ರಾಜಕಾರಣಿಗಳಲ್ಲಿ ಯುವಕ ಎಂದು ಪರಿಗಣಿಸಲಾಗುವ ವಯೋಮಿತಿಯನ್ನು 50ರ ಕೆಳಗೆ ಇಟ್ಟುಕೊಂಡು ನೋಡಿದರೆ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ, ಸೋ-ಕಾಲ್ಡ್ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿ(46), ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (48), ಉ.ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ (43), ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ (46) ಪ್ರಮುಖವಾಗಿ ಕಾಣುತ್ತಾರೆ. ಈ ಯುವನಾಯಕರೆಲ್ಲ ತಮ್ಮ ಅಧಿಕಾರವಧಿಯಲ್ಲಿ, ಸಾರ್ವಜನಿಕ ಜೀವನದಲ್ಲಿ ಏನೇನು ಜನಕಲ್ಯಾಣ ಕೆಲಸ ಮಾಡಿದ್ದಾರೆ ಹೇಳಿ ನೋಡೋಣ?
ರಾಹುಲ್-ಕೇಜ್ರಿವಾಲರಂತೂ ರಾಹು-ಕೇತುವಿನ ಜೋಡಿಯಂತೆ ಹೆಣ ಬಿದ್ದೆಡೆ ಹಾರಾಡುವ ರಣಹದ್ದುಗಳ ರಾಜಕೀಯ ಮಾಡುತ್ತಿದ್ದಾರೆ. ಸಂಪೂರ್ಣ ಬಹುಮತ ಪಡೆದಿದ್ದರೂ ಇವತ್ತಿಗೂ ಟ್ವೀಟರಿನಲ್ಲಿ ಮೋದಿಯವರನ್ನು ಬಯ್ಯುವುದೇ ಆಡಳಿತವೆಂದುಕೊಂಡಿರುವ ಕೇಜ್ರಿವಾಲ್ ಸಾಹೇಬರ ಬಹಳಷ್ಟು ಶಾಸಕರು ಜೈಲಿನಲ್ಲಿದ್ದಾರೆ. ದೇಶದ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದ ಮುಖ್ಯಮಂತ್ರಿ ಹುದ್ದೆಯನ್ನು ಐದು ವರ್ಷಗಳ ಕಾಲ ನಿರ್ವಹಿಸಿರುವ ಅಖಿಲೇಶ್ ಯಾದವರದ್ದು ಅಪ್ಪ-ಚಿಕ್ಕಪ್ಪನಿಂದ ಕುರ್ಚಿ ಉಳಿಸಿಕೊಂಡಿದ್ದಷ್ಟೇ ಸಾಧನೆ. ಇನ್ನು ಜಮ್ಮುಕಾಶ್ಮೀರದ ಮುಖ್ಯಮಂತ್ರಿಯಾಗಿದ್ದಾಗ, ತನ್ನ ತಾತ-ಅಪ್ಪನ ದುರುಳ ನೀತಿಯಾದ ಕಾಶ್ಮೀರಿ ಸೆಂಟಿಮೆಂಟಿನ ಜೊತೆ ಆಟವಾಡಿಕೊಂಡು ಬಂದಿದ್ದೇ ಓಮರ್ ಅಬ್ದುಲ್ಲ ಸಾಧನೆ. ಒಬ್ಬ ಯುವ ನಾಯಕನಾಗಿ ಜಮ್ಮುಕಾಶ್ಮೀರ ಸಮಸ್ಯೆಗೆ ಪರಿಹಾರ ಕಂಡುಹಿಡಿಯಬೇಕೆಂದು ಓಮರ್ ಸಾಹೇಬರಿಗೆ ಅನ್ನಿಸಲಿಲ್ಲ, ಅವರ ಗುರಿಯಿದ್ದಿದ್ದು ಅಜ್ಜ ಹಾಕಿಕೊಟ್ಟಿರೋ ಆಲದ ಮರದಡಿ ಬಿರಿಯಾನಿ-ಕಬಾಬ್ ತಿನ್ನುತ್ತ ಕೂರುವುದಷ್ಟೇ. ಇನ್ನು ರಾಹುಲ್ ಗಾಂಧಿಯವರ ಸಾಧನೆಗಳ ಬಗ್ಗೆ ಮಾತನಾಡಿ ಈ ಬರಹವನ್ನು ಹಾಸ್ಯ ಬರಹವನ್ನಾಗಿಸುವ ಯೋಚನೆ ನನ್ನದಲ್ಲ.
ಇನ್ನು 50ಕ್ಕೆ ಮೇಲ್ಪಟ್ಟ ವಯಸ್ಸಿನ ಕೆಲವು ನಾಯಕರನ್ನು ಪಟ್ಟಿ ಮಾಡುವುದಾದರೇ, ಓಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ (70), ತ್ರಿಪುರದ ಮಾಣಿಕ್ ಸರ್ಕಾರ್(67), ಬಿಹಾರದ ನಿತೀಶ್ ಕುಮಾರ್ (64), ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್ (57), ಚತ್ತೀಸ್ ಗಢದ ರಮಣ್ ಸಿಂಗ್ (63), ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು (66), ಪ್ರಧಾನಿ ನರೇಂದ್ರ ಮೋದಿ (66) ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ (61), ರೈಲ್ವೆ ಸಚಿವ ಸುರೇಶ್ ಪ್ರಭು (63). ಇವರ ಸಾಧನೆಗಳನ್ನು ಮೇಲಿನ ಸೋ-ಕಾಲ್ಡ್ ಯುವ ನಾಯಕರೊಂದಿಗೆ ತಾಳೆ ಹಾಕಿ ನೋಡಿದಾಗ, “ಯುವಕರು ರಾಜಕೀಯಕ್ಕೆ ಬಂದರೆ ಬದಲಾವಣೆಯಾಗುತ್ತದೆ” ಎನ್ನುವದೆಷ್ಟು ಮಿಥ್ ಎಂದು ಅರ್ಥವಾಗುತ್ತದೆ. ಹಾಗಾದರೇ ಮೋದಿಯಂತವರೇ ಏಕೆ ಬರಬೇಕು “ವಯಸ್ಸಿನ ಹಿರಿಯರು” ಬಂದರೆ ಸಾಕಲ್ಲವೇ? ಎನ್ನಬಹುದು. ಮೋದಿಯವಂತವರೇ ಏಕೆ ಬರಬೇಕೆಂದರೇ, ನವೀನ್ ಪಟ್ನಾಯಕ್, ನೀತಿಶ್ ಕುಮಾರ್, ಶಿವರಾಜ್ ಸಿಂಗ್, ರಮಣ್ ಸಿಂಗ್ ತರದವರು ಉತ್ತಮ ಆಡಳಿತವನ್ನು ನೀಡಬಲ್ಲರೇ ವ್ಯವಸ್ಥೆಯನ್ನು ಬದಲಾಯಿಸುವಂತ ರಾಜಕೀಯವಾಗಿ ಮಾರಣಾಂತಿಕವಾಗಬಲ್ಲಂತಹ ಆಟಕ್ಕೆ ಕೈ ಹಾಕುವಂತ ವ್ಯಕ್ತಿತ್ವವನ್ನು ಉಳ್ಳವರಲ್ಲ. ಇಂತಹವರ ಸಂಖ್ಯೆಯೂ ನಿಶ್ಚಿತವಾಗಿಯೂ ರಾಜಕೀಯದಲ್ಲಿ ಹೆಚ್ಚಬೇಕು ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ದೊಡ್ಡ ಮಟ್ಟದ ಬದಲಾವಣೆಯೆಂಬುದು ಕೇವಲ ನರೇಂದ್ರ ಮೋದಿಯಂತವರಿಂದ ಮಾತ್ರ ಸಾಧ್ಯ. ಈ ನಾಯಕರೆಲ್ಲ ಇಂತಹದ್ದೊಂದು ನಿರ್ಧಾರಕ್ಕೆ ಹೆಗಲು ಕೊಟ್ಟು ನಿಲ್ಲಬಲ್ಲವರಷ್ಟೇ. ಚಾಲಕನೊಬ್ಬ ಬೇಕೆ ಬೇಕಲ್ಲ! ಸಜ್ಜನಿಕೆ, ಸಭ್ಯತೆಯ ಜೊತೆಗೆ ಕಾರ್ಯಕ್ಷಮತೆ, ಖಡಕ್ ವ್ಯಕ್ತಿತ್ವವೂ ಬೇಕಾಗುತ್ತದೆ.
ಅಧ್ಯಾತ್ಮದ ಸೆಳೆತವಿರುವವರು ಈ ದೇಶದ ರಾಜಕೀಯ ರಂಗದೊಳಗೆ ಪ್ರವೇಶಿಸಿದಾಗಲೆಲ್ಲ ದೇಶ ಮಹತ್ತರವಾದ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಅಲ್ಲಿಯವರೆಗೂ ಕೇವಲ ರಾಜ-ಮಹಾರಾಜರ ರಾಜ್ಯಗಳ ಅಸ್ತಿತ್ವದ ವಿಷಯವಾಗಿದ್ದ ಸ್ವಾತಂತ್ರ್ಯ ಹೋರಾಟವೆಂಬುದು ಮಹಾತ್ಮ ಗಾಂಧೀಜಿಯವರ ಆಗಮನದೊಂದಿಗೆ ಜನ ಸಾಮಾನ್ಯರ ಸ್ವಾತಂತ್ರ್ಯ ಹೋರಾಟದ ಬೃಹತ್ ಸ್ವರೂಪ ಪಡೆದುಕೊಂಡಿತು. ಸಾವರ್ಕರ್ ಅವರಿಂದ ಹೊತ್ತಿಕೊಂಡ ಕ್ರಾಂತಿಯ ಕಿಡಿಯನ್ನು ಅಂತಿಮವಾಗಿ ಭಾರತದ ಸ್ವಾತಂತ್ರ್ಯಗೊಳಿಸುವಲ್ಲಿ ಕೊಂಡೊಯ್ದು ನಿಲ್ಲಿಸಿದವರು ಮತ್ತೊಬ್ಬ ಅಧ್ಯಾತ್ಮ ಯಾತ್ರಿಯಾಗಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್. ಮಹಾತ್ಮ ಗಾಂಧೀಜಿಯವರನ್ನು ಸ್ವಾತಂತ್ರ್ಯ ಹೋರಾಟದ ಶಾಂತಿ ಪರ್ವದ ಪ್ರವರ್ತಕರೆನ್ನಬಹುದಾದರೇ, ನೇತಾಜಿಯವರನ್ನು ಕ್ರಾಂತಿ ಪರ್ವದ ಪ್ರವರ್ತಕರೆನ್ನಬಹುದು. ಈ ಇಬ್ಬರ ನಂತರ ಆಧ್ಯಾತ್ಮದ ಸೆಳೆತವಿರುವ ಸಾವಿರಾರು ಮಂದಿ ಈ ದೇಶದ ರಾಜಕೀಯ ಅಂಗಳಕ್ಕೆ ಬಂದು ಹೋಗಿರಬಹುದು. ಆದರೆ ಅವರ್ಯಾರು ತಮ್ಮ ಹೆಜ್ಜೆ ಗುರುತನ್ನು, ಇರುವಿಕೆಯನ್ನು ಇವರಿಬ್ಬರಷ್ಟು ದಾಖಲಿಸಿ ಹೋಗಿಲ್ಲ. ಈ ಇಬ್ಬರ ನಂತರ ಕಾಣುತ್ತಿರುವ ಫಕೀರ ನರೇಂದ್ರ ಮೋದಿಯವರು. ಹಾಗಂತ ಮೋದಿಯವರನ್ನು ಈ ಗಾಂಧೀಜಿ, ನೇತಾಜಿಯವರೊಂದಿಗೆ ಹೋಲಿಸುವ ಮೂರ್ಖತನವನ್ನು ಮಾಡುತ್ತಿಲ್ಲ. ಹಾಗೊಂದು ಹೋಲಿಕೆಯ ಅವಶ್ಯಕತೆಯೂ ಮೋದಿಯವರಿಗಿಲ್ಲ. ಮೋದಿಯವರ ಕಾಲಘಟ್ಟದ ಧರ್ಮವೇ ಬೇರೆಯದು.
ಈ ದೇಶದ ಸಂಸತ್ತಿನೊಳಗೆ ದೇಶದ ಮೂಲೆ ಮೂಲೆಯಿಂದ ಬಹಳಷ್ಟು ರಾಜಕಾರಣಿಗಳು ಬಂದು ಹೋಗಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ಸಂಸತ್ತಿನೊಳಗೊಬ್ಬ ಸಂತ ಬಂದು ಕುಳಿತಿದ್ದಾರೆ. ಮತ್ತೆ ಸ್ವಾಮಿ ವಿವೇಕಾನಂದ, ಅರಬಿಂದೋ ಅವರು ಮಾತು ನೆನಪಾಗುತ್ತದೆ. ಅವರು ಬಯಸಿದ್ದು ರಾಜಕಾರಣಿಯೊಳಗೊಬ್ಬ ಸಂತನನ್ನೇ. ಅದಕ್ಕೆ ಹೇಳಿದ್ದು ” ಮೋದಿಯಂತವರು ರಾಜಕೀಯಕ್ಕೆ ಬರಬೇಕು”. ಆಗಷ್ಟೇ ಬದಲಾವಣೆ ಸಾಧ್ಯ.
ಒಬ್ಬ ನಮೋನಿಂದಲೇ ಈ ನಾಡಿನ ಬಡವರ ಶೋಷಿತರ ಅಲ್ಪಸಂಖ್ಯಾತರ ಸ್ತ್ರೀಯರ ಬದುಕು ದುಸ್ತರವಾಗಿದೆ. ಇನ್ನು ನಿಮ್ಮ ಆಸೆ ಈಡೇರಿದರೆ ಈ ದೇಶದಲ್ಲಿ ಕೇವಲ ಬ್ರಾಹ್ಮಣ್ಯ ತಾಂಡವವಾದುತ್ತದೆ ಕೊನೆಗೆ!
Get well soon
ನಿನ್ನ ‘ಅಕ್ಕ’ ಮಾಯಾವತಿಯ ಸೋದರನ ಖಾತೆ, ಮತ್ತೊಂದು ‘ಬಸಪಾ’ ಕ್ಕೆ ಸಂಬಂಧಪಟ್ಟ ಖಾತೆಯಿಂದ ಕೋಟಿಕೋಟಿ ರೂಪಾಯಿಗಳ ಯಾವುದೇ ಖಚಿತ ಆದಾಯ ಮೂಲವಿಲ್ಲದ ಹಣ ಸಿಕ್ಕಿದೆಯಂತೆ! ನಿನ್ನ ಖಾತೆಯೂ ಜಪ್ತಿಯಾದರೆ ಯಾವುದಾದರೂ ಕಳ್ಳಲೆಕ್ಕದ ದುಡ್ಡು ಎಣಿಕೆಗೆ ಸಿಗಬಹುದು ಅಂತ ಯಾರಿಗೂ ಅನ್ನಿಸುತ್ತದೆ. ಇದಕ್ಕೇ ಇರಬೇಕು ನಿನ್ನ ‘ಸಂತಾ’ ದೇಮ “ಸಂಬಂಜ ಅನ್ನೋದು ದೊಡ್ಡದು ಕನಾ..” ಅಂತ!
ನಿಮ್ಮ ಸಂತನ ಖಾತೆಗೆ ಸಹರಾ ಹಣ ಬಂದಿಲ್ಲವೇ? ಅದರ ತನಿಖೆ ನಡೆಸಿ ಮೊದಲು.
ಸುಪ್ರೀಮ್ ಕೋರ್ಟಿನ ತೀರ್ಪು ಈ ವಿಷಯವಾಗಿ ಏನಿದೆ ಅಂತ ತಿಳಿದಿಲ್ಲದಿದ್ದರೂ (ಅಥವಾ ತಿಳಿದಿದ್ದರೂ ಊದಿದ ಕೆನ್ನೆ ಜೇನು ಕುಟುಕಿದ್ದರಿಂದ, ಕೆನ್ನೆಗೆ ಬಾರಿಸಿದ್ದರಿಂದ ಅಲ್ಲ, ಎಂದು ನಟಿಸುತ್ತಾ) ಅಮಾವಾಸ್ಯೆಗೊಂದು ಪೌರ್ಣಮಿಗೊಂದು ಸಂತಾ-ಬಂತಾ ಜೋಕ್ ಬರೆದು ಸಂಡೇ ಪತ್ರಕರ್ತನಾಗುವ ಖ್ಯಾತಿ ಖೋಟಾಶರಣನಿಗೆ ಕಣ್ಣು ತೆರೆಸುವವರ್ಯಾರು?
Supreme Court hasn’t said that Namo has not taken bribe. It has only said it needs more documents to order probe. How’ll more documentary evidence come without proper investigation? If Namo has not taken bribe why doesn’t order cbi probe and come out unscathed? Ram bhakt must emulate what Ram did in Seeta’s case – go through agnipareekshe.
ಬಾವ ಭಾಯಿ, demonetisation ಕಾರಣ ಬೇಳೆ ಬೆಲೆ ಸಿಕ್ಕಾಪಟ್ಟೆ ಇಳಿದಿದೆ. ಇದರಿಂದ ರೈತರಿಗೆ ಬಹುದೊಡ್ಡ ಹೊಡೆತ ಬೀಳಲಿದೆ. ಇವರಲ್ಲಿ ೯೯% ಮಂದಿ ಬಡವರು ಬ್ಲಾಕ್ ಮನಿ ಸಂಗ್ರಹ ಮಾಡುವ ಖೂಳರಲ್ಲ. ಆದರೂ ತಾವು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಾರೆ – ಇವರ ಪಾಲಿಗೆ ಹೊಸ ವರ್ಷ ಕರಾಳ ವರ್ಷವಾಗಲಿದೆ. ಬ್ಲಾಕ್ ಮನಿ ವ್ಯವಹಾರ ಮಾಡುವವರೆಲ್ಲ ವರ್ಷಾಂತ್ಯದ ವೆಕೇಶನ್ ಆಚರಿಸುತ್ತಾ ದೇಶ ವಿದೇಶಗಳ ರೆಸಾರ್ಟುಗಳಲ್ಲಿ ಮಜಾ ಮಾಡುತ್ತಿದ್ದಾರೆ. ಬೇಳೆ ಬೆಲೆ ಕಡಿಮೆಯಾದರೂ ತಮ್ಮ ಬೇಳೆ ಬೇಯಿಸಿಕೊಳ್ಳುವುದು ಇವರಿಗೆ ಗೊತ್ತಿದೆ. ಕಾಯಕ ಯೋಗಿಗಳಾದ ರೈತರ ಜೀವನವನ್ನು ದುಸ್ತರವಾಗಿಸಿರುವ ನಮೋ ಸರಕಾರ ಈ ಕಾಲದ ಬಿಜ್ಜಳನ ಸರಕಾರವೇ ಆಗಿದೆ. ಕಲ್ಯಾಣ ಕ್ರಾಂತಿ ಮತ್ತೆ ಆಗಬೇಕಾಗಿದೆ ಮತ್ತು ಅದಕ್ಕೆ ದರ್ಗಾ ಸರ್ ಅವರ ಮಾರ್ಗದರ್ಶನ ಹಾಗೂ ನಿಮ್ಮಂತಹ ಜನಹಿತಚಿಂತಕರ ಬೆಂಬಲ ಬೇಕಾಗಿದೆ.
ನಿನ್ನ ಡ್ರಗ್ಗಾ ಸರ್ ಮಾರ್ಗದರ್ಶನ ಸಿಕ್ಕರೆ ಇಡೀ ದೇಶ ಮತ್ತು ರಾಜ್ಯ ಗಾಂಜಾ ಹೊಡೆಯುವುದರಲ್ಲಿ ತರಬೇತಿ ಪಡೆಯುತ್ತದೆ, ಅಷ್ಟೆ! ಬೇಳೆ ಬೆಲೆ ಗಗನಕ್ಕೇರಿದಾಗ ‘ಮೋದಿಯೇ ಕಾರಣ’ ಅಂತ ಬೊಬ್ಬೆ ಹೊಡೆದು, ಈಗ ಬೆಲೆ ಕಡಿಮೆಯಾದರೆ ‘ರೈತರು ಸಾಯುತ್ತಾರೆ, ಇದಕ್ಕೆ ಮೋದಿಯೇ ಕಾರಣ’ ಅಂತ ಬೊಬ್ಬೆ ಹೊಡೆಯುತ್ತಾನೆ, ಶಿಟ್ನಾಗ! ಧಾನ್ಯಗಳ ಬೆಲೆ ರೈತನಿಗೆ ತಲುಪಬೇಕಾದರೆ ಅದಕ್ಕೆ ಬೇಕಾದ ವಿಷಯಗಳ ತಕ್ಕ ರೀತಿಯ ಕಾನೂನು/ ನಿಯಮಗಳ ಅನುಷ್ಠಾನ ಬೇಕಾಗುತ್ತದೆ. ಕೇವಲ ನಿನ್ನ ಡ್ರಗ್ಗಾ ಸರ್ ಬರೆದ ವಚನಗಳ ಘೋರಭಾಷ್ಯ ಓದಿ ಅರ್ಥವಾಗುವ ವಿಷಯಗಳಲ್ಲ ಇವು.
“ಸರ್ ಬರೆದ ವಚನಗಳ ಘೋರಭಾಷ್ಯ”
ವಚನಗಳ ಬಗ್ಗೆ ಲಘುವಾಗಿ ಮಾತನಾಡುವುದನ್ನು ನಿಲ್ಲಿಸಿ. ಇಲ್ಲಿ ನೋಡಿ:
_https://www.facebook.com/photo.php?fbid=1258844747509222&set=a.173864062673968.43753.100001511264863&type=3
Shetkar, you can only take the horse to water..
ಹಹಹ! ಮಗದೊಮ್ಮೆ ಕರಾರುವಾಕ್ಕಾಗಿ ಹೇಳಿದಿರಿ ಬಾವ ಭಾಯಿ!
ಸೀದಾ ಸಾದಾ ಬರೆದದ್ದು ಅರ್ಥವಾಗದಿದ್ದರೆ ಪ್ರತಿಕ್ರಿಯಿಸಬೇಡ, ಹರಾಮ್. ನಾನು ಬರೆದಿದ್ದು ವಚನಗಳನ್ನು ಕುರಿತ ‘ಘೋರಭಾಷ್ಯ’ ಎನ್ನುವುದು ನಿನ್ನಚೋರಗುರುವಿನ ಭಾಷ್ಯದ ಬಗ್ಗೆಯೇ ಹೊರತು, ವಚನಗಳ ಬಗ್ಗೆ ಅಲ್ಲ. ಹೋಗಲಿ, ಕನ್ನಡದಲ್ಲೇ ಪ್ರತಿಕ್ರಿಯೆ ಬರೆದರೆ ಈ ತೊಂದರೆಯೇ ಇರುತ್ತಿರಲಿಲ್ಲ. ತಪ್ಪಾಗಿ ಅರ್ಥೈಸಿಕೊಳ್ಳುವ ನಿನ್ನ ‘ಕೆಪ್ಯಾಸಿಟಿ’ ಕಂಡು ನಿನ್ನ ಸಹಚೋರ ಶಿಷ್ಯ ಶಿಟ್ಟಿನಾಗ ಬಟ್ಟೆ ಹರಿದುಕೊಂಡು ನಗುತ್ತಿದ್ದಾನೆ, ನೋಡು.
ಬೆಪ್ಪು ತಕ್ಕಡಿ ಟ್ರಾಲ್ ಜೊತೆ ಏನು ಚರ್ಚೆ! ನಿನ್ನಂತಹ ಭಾಜಪ ಸಾಕು ನಾಯಿಗಳ ಜಾತಕವನ್ನು ಧೀಮಂತ ಪತ್ರಕರ್ತೆ ಸ್ವಾತಿ ಚತುರ್ವೇದಿ ತಮ್ಮ ಪುಸ್ತಕದಲ್ಲಿ ಬಿಡಿಸಿದ್ದಾರೆ. ಹೋಗಾಚೆ ಛೂ!
ಪತ್ರಕರ್ತೆ ಸ್ವಾತಿ ಚತುರ್ವೇದಿ ಏನು ಬರೆದಿದ್ದಾರೆ ಅಂತ ಓದಿದ್ದೀಯಾ, ಖೊಟ್ಟಿಶರಣ? ಅದನ್ನು ಓದುವುದಕ್ಕೆ ಕನಿಷ್ಠ ಪಕ್ಷ ಎಂಟನೆಯ ಕ್ಲಾಸಿನ ಮಕ್ಕಳಿಗೆ ಬರುವಷ್ಟಾದರೂ ಇಂಗ್ಲಿಷ್ ಬರಬೇಕು. ನಿನ್ನ ದಪ್ಪ ಮೂಳೆಯ ಬುರುಡೆಯಲ್ಲಿ ಮಿದುಳಿನ ಬದಲು ನೀನೇ ಬರೆದುಕೊಂಡಂತೆ ಬಸವ ತೊಪ್ಪೆ ತುಂಬಿದೆ ಎನ್ನುವುದು ಈಗಾಗಲೇ ‘ಸಾಬೀ’ತಾಗಿದೆ. ಆದ್ದರಿಂದ ನಿನ್ನ ಅಜ್ಞಾನವನ್ನು ಮತ್ತಷ್ಟು ಬಯಲುಮಾಡಿಕೊಳ್ಳಬೇಡ.
ಕಂಡಲ್ಲಿ ಕಾಲೆತ್ತಿ ಮೂತ್ರ ಮಾಡುವ ಟ್ರಾಲ್ ಹೋಗಾಚೆ! ಛೂ!
ಮಾತನಾಡಲು ಸರಕು ಮುಗಿದು ಇನ್ನೇನೂ ಮೌಲಿಕ ವಾದದ ಜ್ಞಾನ ಉಳಿದಿಲ್ಲವಾದಾಗ ಹೇಲು, ಮೂತ್ರ, ಕಸ ಇತ್ಯಾದಿಗಳನ್ನು ಬಳಸಿ ಚರ್ಚೆಯನ್ನು ಮುಗಿಸಲು ಪ್ರಯತ್ನಿಸುತ್ತಿರುವೆಯಾ ಶಿಟ್ನಾಗ, ನಿನ್ನ intellect ಎಂಥದ್ದು ಅಂತ ಓದುಗರಿಗೆಲ್ಲ ಪರಿಚಯ ಎಂದೋ ಆಗಿದೆ. ಆದ್ದರಿಂದ ಮೊದಲು ಹೋಗಿ ಸ್ನಾನ ಮಾಡಿಕೊಂಡು ಬಾ. ಅಷ್ಟು ಆಗದಿದ್ದರೆ, ನಿನ್ನ ನೆಚ್ಚಿನ ಪ್ರಶಾಂತ್ ಭೂಷಣನೋ ಇಲ್ಲಾ ನಿನ್ನ ಡ್ರಗ್ಗಾ ಸರ್ ದೋ ಕಾಲಕಸ (ಅವರೂ ನಿನ್ನಂತೆಯೆ ದುರ್ನಾತ ಬೀರುವವರಾದ್ಧರಿಂದ ಈ ಐಟಮ್ ಅವರ ಬಳಿ ಧಂಡಿಯಾಗೇ ಇರಬಹುದು)ದಲ್ಲಿ ಸ್ವಲ್ಪ ಹೊರಳಿ ಬಾ..
ಸುಪ್ರೀಮ್ ಕೋರ್ಟಿನ ತೀರ್ಪಿನ ಬಗ್ಗೆ ಬರೆಯ ಬಲ್ಲ ದೀಡು ಪಂಡಿತನೇ, ಪ್ರಧಾನ ಮಂತ್ರಿಗಳನ್ನು ವಿಚಾರಣೆಗೆ ಒಳಪಡಿಸಲು ರಾಷ್ಟ್ರಪತಿಗಳ ಒಪ್ಪಿಗೆಯೂ, ಮತ್ತು cognizable evidence ಎಂದರೆ ಕಣ್ಣಿಗೆ ರಾಚುವಂತಹ ಸಾಕ್ಷಿ ಬೇಕಾಗುತ್ತದೆ. ಇದ್ಯಾವುದನ್ನೂ ಕೋರ್ಟಿಗೆ ಒಪ್ಪಿಸದೆ, ಯಾವುದೋ ಎಂಟ್ರಿಯಲ್ಲಿ ಸಿ ಎಮ್ ಗುಜರಾತ್ ಅಂತ ಬರೆದಿದ್ದನ್ನೆ ಎವಿಡೆನ್ಸ್ ಅಂತ ಹೇಳಿದರೆ ಕೋರ್ಟ್ ಒಪ್ಪುವುದಿಲ್ಲ. ಮತ್ತೆ ಇದೇ ಕಾರಣಕ್ಕೆ ಸಮಯ ಕೇಳಿದ್ದಕ್ಕೆ ಪ್ರಶಾಂತ್ ಭೂಷಣ್ ಎಂಬ ವಕೀಲನಿಗೆ ಸಾಕಷ್ಟು ಸಮಯ ಕೊಟ್ಟೂ ಖಚಿತ ಸಾಕ್ಷಿ ತರದೆ ಇದ್ದದ್ದಕ್ಕೆ ಸುಪ್ರೀಮ್ ಕೋರ್ಟ್ ಇನ್ನು ಸಮಯ ಕೊಡಲು ಸಾಧ್ಯವಿಲ್ಲ, ದಯಮಾಡಿಸಿ ಅಂತ ಹೇಳಿದೆ. ನಿನ್ನ ಹತ್ತಿರ ಇನ್ನೂ ಹೆಚ್ಚಿನ ಖಚಿತವಾದ ಮಾಹಿತಿ ಇದ್ದರೆ ಕೋರ್ಟಿಗೆ ಕೊಟ್ಟುನೋಡು.
“ಯಾವುದೋ ಎಂಟ್ರಿಯಲ್ಲಿ ಸಿ ಎಮ್ ಗುಜರಾತ್ ಅಂತ ಬರೆದಿದ್ದನ್ನೆ ಎವಿಡೆನ್ಸ್ ಅಂತ ಹೇಳಿದರೆ ಕೋರ್ಟ್ ಒಪ್ಪುವುದಿಲ್”
Why fear CBI investigation into the case then? Rama knew very well that mere words of Agasa doesn’t prove anything about Seeta. But..
ಬಾವ ಭಾಯಿ! ತನಿಖೆ ನಡೆದರೆ ಸಹರಾ ಅಷ್ಟೇ ಅಲ್ಲ ಇನ್ನೂ ಅನೇಕ ಭ್ರಷ್ಟಾಚಾರ ಪ್ರಕರಣಗಳ ಎಲ್ಲಾ ದಾಖಲೆಗಳೂ ಹೊರಬೀಳುತ್ತವೆ ಹಾಗೂ ಅದರಿಂದ ಜೈಲು ಕಂಬಿ ಎಣಿಸಬೇಕಾಗುತ್ತದೆ ಎಂಬ ಭಯ! ಮೀಡಿಯಾ ಮುಂದೆ ರಾಮನ ಜಪ ಮಾಡುತ್ತಾರೆ ಆದರೆ ಪ್ರಾಕ್ಟಿಕಲ್ ಲೈಫಿನಲ್ಲಿ ರಾಮನ ಹಾಗೆ ವರ್ತಿಸಲ್ಲ!
All jhumlebazi Shetkar. What else can you expect from him!
ಅಯ್ಯಾ ಬುದ್ಧಿವಂತ! ನೀನು ಹೆಸರಿಸಿದ (ಹಾಗೂ ನಿನ್ನ ಸಹಾನುಭೂತಿಗೆ ಪಾತ್ರನಾದ ಪ್ರಶಾಂತ್ ಭೂಷಣ್ ಒದಗಿಸಿದ) ಸಾಕ್ಷಿಗಳು ಗುರುತರವಾಗಿದೆ ಅಂತ ಸುಪ್ರೀಮ್ ಕೋರ್ಟಿಗೆ ಮನವರಿಕೆಯಾಗಿದ್ದರೆ, ಸ್ವತಃ ಕೋರ್ಟೇ ಸಿಬಿಐ ಗೆ ತನಿಖೆ ನಡೆಸಲು ಆದೇಶ ನೀಡುತ್ತಿತ್ತು. ಈ ಕೇಸಿನಲ್ಲಿ, ಕೇಂದ್ರಸರ್ಕಾರವನ್ನಾಗಲೀ, ಅಥವಾ ಪ್ರಧಾನಮಂತ್ರಿಗಳನ್ನಾಗಲೀ ಪ್ರತಿವಾದಿಯಾಗಿ ಗುರುತಿಸಿಲ್ಲ. ಸ್ವಲ್ಪ ಟಿ ಎನ್ ಸೀತಾರಾಮ್ ರ ಟಿವಿ ಸೀರಿಯಲ್ ನೋಡಿ ಕಾನೂನು ಕಲಿಯುವುದನ್ನು ಬಿಟ್ಟು ಬಲ್ಲ ಮೂಲಗಳಿಂದ ಕೊಂಚ ವಿನಯದಿಂದ ಪ್ರಶ್ನೆಕೇಳಿ ತಿಳಿದುಕೋ.
ಪ್ರಖ್ಯಾತ ಜನಹಿತಚಿಂತಕ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರಿಂದಲೇ ಕಾನೂನು ಕಲಿತಿರುವುದು. ಅವರ ಕಾಲಿನ ಕಸ ಮುಟ್ಟುವುದಕ್ಕೂ ನಿನಗೆ ಯೋಗ್ಯತೆ ಇಲ್ಲ, ನೀನೊಬ್ಬ ಯಕಶ್ಚಿತ್ ಟ್ರಾಲ್, ಅಂದರೆ ಸಾಕು ನಾಯಿ. ಹೋಗಾಚೆ ಛೂ!
ಪ್ರಶಾಂತ್ ಭೂಷಣನ ಕಾಲಿನ ಕಸ ನೀನೇ ನೆಕ್ಕಿಕೋ. ಕಾಲಕಸ, ಎಲ್ಲೋ ಹರಾಮಿಯಂತಹವರು ಹೇಳಿಕೊಟ್ಟ, ‘ಟ್ರಾಲ್’, ಇಂತಹ ಕಡ ಹಿಡಿದ ಪದಸಂಪತ್ತು ಮೀರಿ ನಿನಗೇನು ತಿಳಿದಿದೆ, ಮಂದಮತಿ ಶಿಟ್ನಾಗ? ಓಹ್, ಮರೆತಿದ್ದೆ, ನಿನ್ನ ಚೋರಗುರು ‘ಡ್ರಗ್ಗಾ ಸರ್’ ಗಾಂಜಾ ಮತ್ತಿನಲ್ಲಿ ಬರೆದ ವಚನವಾಣಿ…
ನಾಯಿ ನೆಕ್ಕುವುದು ಹೇಲನ್ನು. ಆದುದರಿಂದ ನಿನ್ನಂತವರು ಇಲ್ಲಿ ಸುಳಿಯಕೂಡದು. ಹೋಗಾಚೆ ಛೂ!
ಸ್ವಾತಿ ಚತುರ್ವೇದಿ ಅಂತ ಧೀಮಂತ ಪತ್ರಕರ್ತೆಯನ್ನು ಪರಿ ಪರಿಯಾಗಿ ಹಿಂಸಿಸಿದ್ದ ಹೇಲು ನೆಕ್ಕುವ ಟ್ರಾಲ್ ನಾಯಿಗಳನ್ನು ಸಾಕಿದವರು ಯಾರು ಎಂದು ಅವರ ಪುಸ್ತಕ ಸವಿವರವಾಗಿ ವರ್ಣಿಸಿದೆ. ಈ ವಿಟಿಯನ್ ಕೂಡ ಇಂಥದ್ದೇ ಒಬ್ಬ ಟ್ರಾಲ್. ನಿಲುಮೆಯ ಓದುಗರೆಲ್ಲ ಸ್ವಾತಿ ಅವರ ಪುಸ್ತಕವನ್ನು ಖರೀದಿಸಿ ಓದತಕ್ಕದ್ದು.
ಕಾಲ ಕಸ, ಹೇಲು ಇಂಥದ್ದೆಲ್ಲವನ್ನೂ ಕೈಗೆತ್ತಿ ಮೈಗೆ ಬಳಿದುಕೊಂಡು ಸಾರ್ವಜನಿಕ ಚರ್ಚೆಗೆ ತರುವುದು ಹಿಟ್ಟು ತಿನ್ನುವ ಬದಲು ‘ಶಿಟ್’ ತಿನ್ನುವ ನಾಗಶಿಟ್ಟಿಯಂತಹ ‘ಅಮಾದಿ ಪುರುಷ’ರು. ಅಷ್ಟೇಕೆ, ನಿನ್ನಹೆಸರಿನಲ್ಲೇ ‘ಶಿಟ್’ ಇದೆಯಲ್ಲ, ‘ಶಿಟ್ನಾಗ’, ಬಹುಶಃ ನಿನಗೆ ಬಳಿದುಕೊಳ್ಳುವ ಕೆಲಸವೂ ಇಲ್ಲ, ನೀನು ಅದರಲ್ಲೆ ಹುಟ್ಟಿ ಬೆಳೆಯುವ ಹುಳು.
ನಿನ್ನ ವಾದವೆಲ್ಲ ಹೊಲಸು ಮೇಲೋಗರ. ನಿನ್ನ ಒಡನಾಡಿ ಸಾಕು ನಾಯಿಗಳ ಜೊತೆಗೆ ಹೇಲುಕೋಟೆಯಲ್ಲಿ ಮೆಲ್ಲು. ಛೂ! ತೊಲಗಾಚೆ.
ನಾಗಶಿಟ್ಟಿ ಎಂಬ ಮಲದ ಹುಳವೇ ಬಾಯಿಮುಚ್ಚು
Shetkar, Why are you arguing with a paid troll like Witian? More you feed them more anal they become. Forgive and forget them. Let them rot in scum bags.
ಎಂದಿನಂತೆ ಇಂದೂ ನಿಖರವಾಗಿ ಹೇಳಿದಿರಿ ಬಾವ ಭಾಯಿ. ಕನ್ನಡ ಅಂತರ್ಜಾಲ ಲೋಕದಲ್ಲಿ ಬಸವಾದ್ವೈತಿಗಳಿಗೆ ಟ್ರಾಲ್ ಕಾಟ ಅಧಿಕವಾಗಿದೆ. ಉತ್ತಮ ಚರ್ಚೆಯ ಹಳಿ ತಪ್ಪಿಸಿ ವೈಯಕ್ತಿಕ ನಿಂದನೆಗೆ ಇಳಿಸುವ ಕೆಲಸವನ್ನು ಟ್ರಾಲ್ ಮೂಲಕ ಬಸವದ್ವೇಷಿಗಳು ಮಾಡಿಸುತ್ತಿದ್ದಾರೆ. ಹಿಂದೆ ಅವಧಿಯಲ್ಲಿ ದರ್ಗಾ ಸರ್ ಅವರ ಲೇಖನಮಾಲೆಯ ಸಂದರ್ಭದಲ್ಲಿ ಇವರುಗಳ ಉಪಟಳ ತೀವ್ರವಾಗಿ ಬಸವಾದ್ವೈತಿಗಳ ಸಂಯಮವನ್ನು ಪ್ರಶ್ನಿಸಿತ್ತು. ಆದರೂ ದರ್ಗಾ ಸರ್ ಅವರು ಇವರ ಬಗ್ಗೆ ಚೂರೂ ಸಿಟ್ಟುಗೆಡದೆ ಪ್ರೀತಿಯಿಂದ ವಿಧಾರ್ಥಿಗಳಿಗೆ ಹೇಳಿಕೊಡುವ ರೀತಿಯಲ್ಲಿ ಇವರ ಎಲ್ಲಾ ಕುಹುಕಚಟಾಕಿಗಳಿಗೆ ಉತ್ತರ ನೀಡಿದರು. ದರ್ಗಾ ಸರ್ ಅವರ ನುಡಿ ನಡವಳಿಕೆಯನ್ನೇ ಆದರ್ಶವಾಗಿಸಿಕೊಂಡು ಈ ಟ್ರಾಲ್ ಗಳ ಟ್ರ್ಯಾಪ್ಗೆ ಬೀಳದಿರೋಣ.
ನಿಜವಾಗಲು ನಿಮ್ಮ ಬರಹ ಬಹಳ ಉತ್ತಮ.ಯಾರು ಏನೇ ಹೇಳಲಿ ಮೋದಿ ಅಂತವರು ರಾಜಕೀಯವಾಗಿ ತುಂಬಾ ಅವಶ್ಯಕತೆ ಇದೆ.