ವಿಷಯದ ವಿವರಗಳಿಗೆ ದಾಟಿರಿ

ಜನವರಿ 6, 2017

9

ಬಡವರ ಮಕ್ಕಳ ಭವಿಷ್ಯದ ಜೊತೆಗೆ ಬರಗೂರು ಭಂಡಾಟ

‍ನಿಲುಮೆ ಮೂಲಕ

– ರಾಕೇಶ್ ಶೆಟ್ಟಿ

baraguruಕಾಲಕ್ಕೆ ತಕ್ಕಂತೆ ಮನುಷ್ಯ Update ಆಗಲಿಲ್ಲಾಂದ್ರೆ Outdated ಆಗಿಬಿಡ್ತಾನೆ ಎನ್ನುವುದಕ್ಕೆ ರಾಜ್ಯದ ಬುದ್ಧಿಜೀವಿಗಳೇ ಸಾಕ್ಷಿ. ಉದಾಹರಣೆಗೆ, ಪಠ್ಯಪುಸ್ತಕ ಪುನರ್ ರಚನಾ ಸಮಿತಿಯ ಅಧ್ಯಕ್ಷರಾಗಿರುವ ಬರಗೂರು ರಾಮಚಂದ್ರಪ್ಪ ಅವರನ್ನೇ ತೆಗೆದುಕೊಳ್ಳಬಹುದು. ಬರಗೂರು ಅವರೇ ಯಾಕೆಂದರೆ, ಸಿದ್ಧರಾಮಯ್ಯನವರ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ,ಬಿಜೆಪಿಯ ಕಾಲದಲ್ಲಿ ಪಠ್ಯಪುಸ್ತಕಗಳ ಕೇಸರಿಕರಣವಾಗಿದೆ ಎಂಬ ಬುದ್ಧಿಜೀವಿಗಳ ಹುಯಿಲನ್ನು ಬೆಂಬಲಿಸಿ, ತಮ್ಮ ಆಸ್ಥಾನ ಸಾಹಿತಿಗಳಲ್ಲೊಬ್ಬರಾದ ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ೨೦೧೪ರಲ್ಲಿ ರಚಿಸಿದ್ದರು.ಈ ಸಮಿತಿಯ ಕೆಲಸ ಮುಗಿಯಬೇಕಾದ ಸಮಯಕ್ಕೆ ಮುಗಿದ್ದರಿಂದ ಅವಧಿಯ ವಿಸ್ತರಣೆಯನ್ನೂ ಮಾಡಲಾಯಿತು. ಸಮಿತಿಯೊಂದರ ಅವಧಿಯ ವಿಸ್ತರಣೆಯಾಗುವಾಗ ಅಲ್ಲಿಯವರೆಗೂ ಆಗಿರುವ ಕಾರ್ಯಗಳ ವರದಿ ನೀಡುವುದು ವಾಡಿಕೆ.ಆದರೆ,ಮುಖ್ಯಮಂತ್ರಿಗಳ ಆಸ್ಥಾನ ಸಾಹಿತಿಗಳ ನೇತೃತ್ವದ ಈ ಸಮಿತಿಯನ್ನು ಹಾಗೆಲ್ಲ ಪ್ರಶ್ನಿಸಲಾದೀತೆ? ಈ ಸಮಿತಿ ರಚನೆಯಾದ ನಂತರ, ಹಿಂದಿನ ಪಠ್ಯಗಳಲ್ಲಿನ ಯಾವೆಲ್ಲ ಲೋಪದೋಷಗಳನ್ನು ಪತ್ತೆ ಮಾಡಲಾಗಿದೆ,ಏನನ್ನು ಪುನರ್ ರಚನೆ ಮಾಡುತ್ತಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿಯನ್ನು ಕೊಡದೆ ಎಲ್ಲವನ್ನೂ ನಿಗೂಢವಾಗಿಡಲಾಗುತ್ತಿದೆ.

ಈ ಪರಿ ನಿಗೂಢತೆಯನ್ನಿಟ್ಟುಕೊಂಡು ಬರಗೂರು ರಾಮಚಂದ್ರಪ್ಪನವರೇನು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಲು ಹೊರಟಿದ್ದಾರೆಯೇ? ಎಲ್ಲಾ ಪಠ್ಯ ಪುಸ್ತಕಗಳ ಪರಿಷ್ಕರಣೆಯಾದರೂ ಆಗಿದೆಯೇ ಎಂದರೆ ಅದೂ ಇಲ್ಲ ಜನವರಿ ೧೫ರೊಳಗೆ ನೀಡುತ್ತಾರಂತೆ.ಬಹುಶಃ ಎಲ್ಲಾ ಪ್ರಿಂಟ್ ಆದ ನಂತರವೇ ಬರಗೂರರ ನಿಗೂಢ ಪ್ರಪಂಚದಿಂದ ಈ ಪುಸ್ತಕ ಹೊರಬರುತ್ತದೆನಿಸುತ್ತದೆ. ಇಂತಹ ನಿಗೂಢತೆಯನ್ನಿಟ್ಟುಕೊಂಡೇನೂ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಲು ಹೊರಟಿದ್ದರೆಯೇ ಎಂದು ನಿರೀಕ್ಷೆಯಿಟ್ಟುಕೊಂಡರೇ ಆಘಾತವಾಗುತ್ತದೆ.

ಬರಗೂರರ ಸಮಿತಿ ಪಠ್ಯಪುಸ್ತಕ ಪುನರ್ ರಚನೆಗೆ ಮಾನದಂಡವಾಗಿಟ್ಟುಕೊಂಡಿರುವುದು,NCF 2005 (National Curriculum Framework) ಮತ್ತು KCF 2007 (Karnataka Curriculum Framework) ಮಾರ್ಗಸೂಚಿಯನ್ನು.ಲೋಕವೆಲ್ಲ ಮುಂದೆ ಚಲಿಸುವಾಗ, Outdated ಬಂಡಾಯ ಸಾಹಿತಿಗಳ ಅಧ್ಯಕ್ಷತೆಯ ಸಮಿತಿಯನ್ನು ನಂಬಿಕೊಂಡು ಸಿಎಂ ಸಿದ್ದರಾಮಯ್ಯನವರ ಸರ್ಕಾರ ಬಡವರ ಮಕ್ಕಳ ಭವಿಷ್ಯದ ಮೇಲೆ ಬಂಡೆಗಲ್ಲನ್ನೆಳೆಯಲು ಹೊರಟುನಿಂತಿದೆ. NCF 2005ರ ನಂತರ ಯುಪಿಎ ಸರ್ಕಾರ 2012ರಲ್ಲಿ ಮತ್ತೊಂದು ಶಿಕ್ಷಣ ನೀತಿಯನ್ನು ತಂದಿತಾದರೂ, ಎನ್ಡಿಎ ಸರ್ಕಾರ ಹೊಸ ನೀತಿಯನ್ನು ಮಾಡುವುದಾಗಿ ಹೇಳಿತ್ತು,ಆ ಹೊಸ ಶಿಕ್ಷಣ ನೀತಿ ಇದೇ ವರ್ಷ ಜಾರಿಗೆ ಬರುವ ನಿರೀಕ್ಷೆಯಿದೆ.ಕೇಂದ್ರದ ನೀತಿ ಬಂದ ನಂತರ ರಾಜ್ಯಗಳೂ ಅದೇ ಹಾದಿಯನ್ನು ಹಿಡಿಯಬೇಕಾಗುತ್ತದೆ.ದೇಶದ ಉಳಿದ ರಾಜ್ಯಗಳ ಮಕ್ಕಳು 2017ರ ಶಿಕ್ಷಣ ನೀತಿಯ ಲಾಭ ಪಡೆದರೆ,ನಮ್ಮ ರಾಜ್ಯದ ಮಕ್ಕಳು ಮಾತ್ರ ಬರಗೂರರ ಭಂಡತನ, ಸಿದ್ಧರಾಮಯ್ಯನವರ ಹಠಮಾರಿತನಗಳಿಗೆ ಬಲಿಯಾಗಿ 2007ರಲ್ಲೇ ಉಳಿಯಬೇಕೇನು? Ideological War ನಡೆಸಲು ಬರಗೂರರಿಗೆ,ಸಿಎಂ ಸಿದ್ಧರಾಮಯ್ಯನವರಿಗೆ ಬೇರೆ ಅಖಾಡವೇ ಸಿಗುತ್ತಿಲ್ಲವೇ? ಬೆಳಗಾವಿ ಅಧಿವೇಶನದಲ್ಲಿ ಖುದ್ದು ಶಿಕ್ಷಣ ಸಚಿವರೇ, ಪಠ್ಯಪುಸ್ತಕ ಪುನರ್ ರಚನಾ ಸಮಿತಿ ಸೂಚಿಸುವ ಬದಲಾವಣೆ ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಸಾಧ್ಯವಿಲ್ಲವೆಂದು ಮತ್ತು ಕೇಂದ್ರದ ಹೊಸ ಶಿಕ್ಷಣ ನೀತಿಯನ್ನು ಅಳವಡಿಸಿಕೊಳ್ಳಗಾವುದು ಎಂದು ಹೇಳಿದ್ದಾರಾದರೂ, ಮುಖ್ಯಮಂತ್ರಿಗಳ ಜೊತೆ ಆಪ್ತವಾಗಿರುವ ಬಂಡಾಯ ಸಾಹಿತಿಗಳು ಶಿಕ್ಷಣ ಸಚಿವರು,ಇಲಾಖೆಯ ಮೇಲೆ ಬಂಡೆಯನ್ನಿಟ್ಟು ಮುಂದಿನ ವರ್ಷವೇ ಬದಲಾವಣೆಯಾಗಬೇಕೆಂದು ಹಠಕ್ಕೆ ಬಿದ್ದಿದ್ದಾರೆ. ಚುನಾವಣಾ ಸಮಯದಲ್ಲಿ ಮತ್ತು ನಂತರ ಮುಖ್ಯಮಂತ್ರಿ ಹುದ್ದೆ ಪಡೆಯುವಾಗ ತಮ್ಮ ಬೆನ್ನಿಗೆ ನಿಂತ ಬುದ್ಧಿಜೀವಿಗಳ ಋಣಸಂದಾಯ ಮಾಡಲು ಸಿಎಂ ಸಿದ್ಧರಾಮಯ್ಯನವರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಡಲಿಪೆಟ್ಟು ನೀಡಲು ಹೊರಟು ನಿಂತಿದ್ದಾರೆಯೇ? ಕಾಂಗ್ರೆಸ್ಸ್ ಪಕ್ಷ ಮತ್ತು ಸರ್ಕಾರದೊಳಗೆ ಸಿದ್ಧರಾಮಯ್ಯನವರ ಈ ಧೋರಣೆಗೆ ಅಪಸ್ವರವಿರುವುದೇನು ಗುಟ್ಟಾಗಿ ಉಳಿದಿಲ್ಲ.

ಇತ್ತೀಚೆಗೆ NEET ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅನುಮತಿಯಿಲ್ಲ ಎನ್ನುವುದರ ಕುರಿತು ವಿವಾದವಾಗಿದ್ದು ತಿಳಿದಿದೆಯಲ್ಲ. ರಾಷ್ಟ್ರೀಯ ಮಟ್ಟದ ಪರೀಕ್ಷಗೆಳಲ್ಲಿ ಕನ್ನಡದ ಮಕ್ಕಳೇಕೆ ಹಿಂದೆ ಉಳಿಯುತ್ತಾರೆ ಎಂದು ಅಧ್ಯಯನ ನಡೆಸಿದ್ದ ಖ್ಯಾತ ವಿಜ್ಞಾನಿ ಡಾ.ಕಸ್ತೂರಿ ರಂಗನ್ ಅವರ ನೇತೃತ್ವದ ಕರ್ನಾಟಕ ಜ್ಞಾನ ಆಯೋಗ,ರಾಜ್ಯ ಸರ್ಕಾರಕ್ಕೆ 09,10,11,12 ತರಗತಿಯಲ್ಲಿ CBSEಯ ಪಠ್ಯ ಪುಸ್ತಕಗಳನ್ನೇ ಕನ್ನಡಕ್ಕೆ ಅನುವಾದಿಸಿಕೊಳ್ಳುವಂತೆ ಶಿಫಾರಸ್ಸು ಮಾಡಿತ್ತು ಮತ್ತು ಆ ಶಿಫಾರಸ್ಸಿನಂತೆ ಶಿಕ್ಷಣ ಇಲಾಖೆಯ ದಕ್ಷ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿರುವಾಗಲೇ,ಇತ್ತ ಐಡಿಯಾಲಜಿಯ ಅಮಲೇರಿಸಿಕೊಂಡಿರುವ ಬರಗೂರು,ಸಿದ್ದರಾಮಯ್ಯನವರು ಸ್ಪರ್ಧಾತ್ಮಕವಾಗಿ ಅಖಿಲ ಭಾರತ ಮಟ್ಟದ ಪಠ್ಯಕ್ರಮವನ್ನು ಬಲಿಕೊಡಲು ಹೊರಟಿರುವುದು ಸರಿಯೇ? ಬಡವರ ಮಕ್ಕಳ ಭವಿಷ್ಯವೆಂದರೆ ಇಷ್ಟೊಂದು ಅಸಡ್ಡೆಯೇ ಮುಖ್ಯಮಂತ್ರಿಗಳೇ? ಇಷ್ಟರ ಮಟ್ಟಿಗಿನ ಸಂವೇದನ್ ಇಲ್ಲದವರೂ ಸಾಹಿತಿ ಎನಿಸಿಕೊಳ್ಳುತ್ತಾರೇನೂ ಬರಗೂರು ಸಾಹೇಬರೆ?

ಬರಗೂರು ರಾಮಚಂದ್ರಪ್ಪನವರು,ಸಿಎಂ ಸಿದ್ದರಾಮಯ್ಯನವರು ತಮ್ಮ ಈ ನಡೆಯನ್ನು ಸಮರ್ಥಿಸಿಕೊಳ್ಳಲು,”ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಠ್ಯ ಪುಸ್ತಕದ ಕೇಸರಿಕರಣವಾಗಿದೆ” ಎಂಬ ಬೊಬ್ಬೆಹೊಡೆಯುವ ಎಲ್ಲಾ ಸಾಧ್ಯತೆಗಳಿರುವುದರಿಂದ ಒಂದು ಮಾತನ್ನು ಅವಶ್ಯವಾಗಿ ದಾಖಲಿಸಬೇಕು. ಬಿಜೆಪಿ ಸರ್ಕಾರವನ್ನು ಇನ್ನಿಲ್ಲದಂತೆ ಕಾಡಿದ್ದ ಮಾಜಿ ರಾಜ್ಯಪಾಲ ಹಂಸರಾಜ್ ಭಾರಧ್ವಜ್ ಅವರೇ ಖುದ್ದು ಈ ಪಠ್ಯಕ್ರಮವನ್ನು ಜಾರಿ ಮಾಡಲು ಒಪ್ಪಿಗೆ ಸೂಚಿಸಿದ್ದರು ಮತ್ತು ಆ ಮೂಲಕ “ಕೇಸರಿಕರಣ”ವೆನ್ನುವ ಬುದ್ಧಿಜೀವಿಗಳ ಹಳದಿ ಕನ್ನಡಕವನ್ನು ಕಿತ್ತೆಸೆದಿದ್ದರು. ಬರಗೂರರಂತ ಆಸ್ಥಾನ ಸಾಹಿತಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಸಿಎಂ ಸಾಹೇಬರಿಗಾದರೂ ಭಾರಧ್ವಜ್ ಅವರು ಒಪ್ಪಿಗೆ ಸೂಚಿಸಿರುವುದು ಮರೆತು ಹೋಗಿದೆಯೇ? ಕೇವಲ ತಮ್ಮ ಐಡಿಯಾಲಜಿಯ ಅಹಂ ತಣಿಸಿಕೊಳ್ಳಲಿಕ್ಕಾಗಿ ಬಡ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಳ್ಳಿಯಿಡಲು ಹೊರಟಿರುವ ಬಂಡಾಯ ಸಹಿತಿ ಬರಗೂರು ರಾಮಚಂದ್ರಪ್ಪನವರ ಹಟಮಾರಿ ಧೋರಣೆಯ ವಿರುದ್ಧ ರಾಜ್ಯದ ಪೋಷಕರು,ಶಿಕ್ಷಕರು,ವಿದ್ಯಾರ್ಥಿಗಳು ಮತ್ತು ಪ್ರಜ್ಞಾವಂತ ನಾಗರೀಕರು ತುರ್ತಾಗಿ ದನಿಯೆತ್ತಬೇಕಾಗಿದೆ.

9 ಟಿಪ್ಪಣಿಗಳು Post a comment
  1. ಶೆಟ್ಟಿನಾಗ ಶೇ.
    ಜನ 6 2017

    ಅತ್ತ ಪೂರ್ಣ ರಾಜಕಾರಣಿಯೂ ಅಲ್ಲದ ಇತ್ತ ಪರಿಪೂರ್ಣ ಸಾಹಿತಿಯೂ ಆಗದ , ರಾಜಕಾರಣಿಗಳ ನಡುವೆ ಸಾಹಿತಿಯಾಗಿ ಸಾಹಿತಿಗಳ ನಡುವೆ ರಾಜಕಾರಣಿಯಾಗಿ ಗೋಚರಿಸುವ ಈ ಮನುಷ್ಯನ ಬದಲು ಬಂಡಾಯ ಸಾಹಿತ್ಯದ ಅಧ್ವರ್ಯು ಶರಣಾಗ್ರೇಸರ ದರ್ಗಾ ಸರ್ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿದ್ದರೆ ಈ ವಿವಾದ ಉದ್ಭವಿಸುತ್ತಲೇ ಇರಲಿಲ್ಲ! ಮಂಕುದಿಣ್ಣೆಗಳಿಗೆ ಮಂಕುಬೂದಿ ಎರಚಿ ವ್ಯಾವಹಾರಿಕ ಲಾಭವನ್ನು ಪೂರ್ಣವಾಗಿ ಪಡೆಯುವ ದುರ್ಬುದ್ಧಿಜೀವಿಗಳಿಂದಲೇ ಶರಣ ಸಜ್ಜನ ಸಾಧು ಪ್ರಗತಿಪರರಿಗೆ ಕೆಟ್ಟ ಹೆಸರು ಬಂದಿರುವುದು. ಎಂಜಲು ಕಾಸಿಗೆ ಆಸೆ ಪಡದೆ ಸಿಗದ ಮನ್ನಣೆಗೆ ಹಾತೊರೆಯದೆ ತನ್ನ ಪಾಡಿಗೆ ಲೋಕ ಕಲ್ಯಾಣದ ಕಾಯಕದಲ್ಲಿ ತೊಡಗಿರುವ ದರ್ಗಾ ಸರ್ ಹಾಗೂ ಶರಣ ಸಜ್ಜನ ಸಾಧು ಪ್ರಗತಿಪರರು ವಿವಾದಗಳಿಂದ ದೂರವಿದ್ದಾರೆ. ಶರಣು ಶರಣಾರ್ಥಿ.

    ಉತ್ತರ
  2. SalamBava
    ಜನ 7 2017

    Our CM is doing good work, but cultural affairs have been handed over to one man. There are deserving writers and intellectuals who need to be involved. Baragur is overloaded with responsibilities. Others can do good job if given opportunity.

    ಉತ್ತರ
    • ಶೆಟ್ಟಿನಾಗ ಶೇ.
      ಜನ 7 2017

      “Others can do good job if given opportunity”

      ಕರಾರುವಾಕ್ಕಾಗಿ ಹೇಳಿದಿರಿ ಬಾವ ಭಾಯಿ. ಆದರೆ ಎಲ್ಲಾ ಅವಕಾಶಗಳೂ ಒಬ್ಬರಿಗೆ ಮೀಸಲಾಗಿವೆ. ಕೇವಲ ಒಬ್ಬ ವ್ಯಕ್ತಿಯ ಅಧಿಕಾರ ಹಾಗೂ ವರ್ಚಸ್ಸಿನ ವೃದ್ಧಿಗೆ ಪೂರಕವಾಗಿದೆ. ಇದು ಪ್ರಗತಿಪರ ವಲಯದ ಬಹುಮುಖೀ ಪ್ರತಿಭೆಯ ಪೂರ್ಣ ಲಾಭವನ್ನು ಪಡೆದುಕೊಳ್ಳುವ ಸುವರ್ಣ ಅವಕಾಶವನ್ನು ಹಾಳು ಮಾಡಿದೆ.

      ಉತ್ತರ
      • SalamBava
        ಜನ 7 2017

        Correct Shetkar. Why Baragur should be part of text book committee at the expense of more talented writers and experienced educationists is a question our honorable CM must answer. Especially when Baragur is so busy with so many activities.

        ಉತ್ತರ
  3. Narayana Rao Sharma
    ಜನ 7 2017

    ದೇಶ ಮು೦ದೆ ಹೋಗುತ್ತಾ ಇರುವಾಗ ಕರ್ನಾಟಕ ಹಿ೦ದೆ ಉಳಿಯುತ್ತದೆ.ಅ೦ದ ಹಾಗೆ ಪಠ್ಯ ಪುಸ್ತಕಗಳ ನಿರ್ಧಾರಿಸುವಿಕೆಯಲ್ಲಿ ಪೋಷಕರನ್ನು ಏಕೆ ಸೇರಿಸಿಕೊಳ್ಳುತ್ತಿಲ್ಲ?ಪೋಷಕರು ದಡ್ಡರೇ?

    ಉತ್ತರ
  4. SalamBava
    ಜನ 7 2017

    “Sait said the committee had told him two months ago that they would give him the textbooks soon. “I had also written to Prof Ramachandrappa in this regard and he had written back that the books would be given to me in Raichur. But that did not happen. I can’t let anything proceed without once checking at least the font and a few other basic things,” the minister said”

    This what happens when you feed one man too much. He becomes too fat, too lazy, too slow and too arrogant! Honourable Tanveer Sait Saab should do what is best for the state of Karnataka and take strict action against the committee for its failure.

    ಉತ್ತರ
    • ಶೆಟ್ಟಿನಾಗ ಶೇ.
      ಜನ 8 2017

      ಖರೆ ಮಾತು ನಿಮ್ಮದು ಬಾವ ಭಾಯಿ! ತನ್ವೀರ್ ಸೇಠ್‌ ಅವರು ಬರಗೂರು ವಿಷಯದಲ್ಲಿ ಅತ್ಯಂತ ಸಂಯಮದಿಂದ ಜವಾಬ್ದಾರಿಯುತವಾಗಿ ವರ್ತಿಸಿದ್ದಾರೆ. ತನ್ವೀರ್ ಸೇಠ್‌ ಅವರು ಪಠ್ಯಪುಸ್ತಕಗಳು ಆತುರದಲ್ಲಿ ಪರಿಷ್ಕರಣೆಗೊಂಡಾಗ ಆಗುವ ತಪ್ಪುಗಳ ಬಗ್ಗೆ ಕಾಳಜಿ ಉಳ್ಳವರಾಗಿದ್ದು ದೋಷಪೂರಿತ ಪುಸ್ತಕಗಳ ಬಿಡುಗಡೆ ಆಗಕೂಡದು ಎಂಬ ಅಭಿಪ್ರಾಯವುಳ್ಳವರಾಗಿದ್ದಾರೆ. ಆದರೆ ಬರಗೂರು ಮಾತ್ರ “ಶಾಲೆ ಅಥವಾ ಕಾಲೇಜಿನ ಪಠ್ಯಪುಸ್ತಕಗಳನ್ನು ಪುನಾರಚಿಸಿದಾಗ ಅಥವಾ ಪರಿಷ್ಕರಿಸಿದಾಗ ಕರಡು ಪ್ರತಿಗಳನ್ನು ಬಹಿರಂಗ ಚರ್ಚೆಗೆ ಒಳಪಡಿಸುವುದಿಲ್ಲ” ಎಂದು ಮಂತ್ರಿಗಳಿಗೆ ಸೆಡ್ಡು ಹೊಡೆದು ಮೊಂಡು ಹಠ ಮಾಡುತ್ತಿದ್ದಾರೆ. ಇದು ಸರಿಯಲ್ಲ.

      ಉತ್ತರ
      • SalamBava
        ಜನ 8 2017

        You’re right Shetkar. Tanveer Sait Saab deserves our support. Baragur should admit his mistakes and apologise to the minister as well as citizens of Karnataka state.

        ಉತ್ತರ
  5. Ckvmurthy
    ಜನ 8 2017

    What was the basis for selecting Textbook commmitee Chairman, A literate cannot be an edcucatnalist.Just because he has written,some books relating to bandayasahitya.He cannot be considered as Sarvajna. Bandya,shitya alone cannot be be paripoorna shiaaytiya. People who do not know the ABC of Education, are prospering by virtue of their different qualities. Jai Karnataka mate.

    ಉತ್ತರ

ನಿಮ್ಮದೊಂದು ಉತ್ತರ Ckvmurthy ಗಾಗಿ ಪ್ರತ್ಯುತ್ತರವನ್ನು ರದ್ದುಮಾಡಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments