ವಿಷಯದ ವಿವರಗಳಿಗೆ ದಾಟಿರಿ

ಜನವರಿ 15, 2017

1

ವೇಮುಲ ಸಾವಿನ ಬಗ್ಗೆ ಮಾತಾಡಿದವರು ಈಗೆಲ್ಲಿಹರು..?

‍ನಿಲುಮೆ ಮೂಲಕ

– ಶಾರದ ಡೈಮಂಡ್

15966189_1689221931091685_622901462958428392_nನೂರಾರು ಕನಸುಗಳನ್ನು ಕಟ್ಟಿಕೊಂಡಿದ್ದ ಮುಗ್ದ ಜೀವಿಯೊಂದು ಕಾಣದ ಕೈಗಳ ಕೈವಾಡಕ್ಕೆ ಬಲಿಯಾಗಿದೆ. ಕಾಂಗ್ರೆಸ್ ಸರಕಾರದ ದುರಾಡಳಿತಕ್ಕೆ ಮತ್ತೊಂದು ಜೀವ ಮಣ್ಣಾಗಿಹೋಯಿತು. ಓದುವುದರಲ್ಲಿ ಬುದ್ಧಿವಂತನಾಗಿದ್ದ, ಸೌಮ್ಯ ಸ್ವಭಾವದವನಾದ ಅಭಿಷೇಕ್ ಮೂರು ಕುಟುಂಬಗಳಿಗೆ ಸ್ವಂತ ಮಗನಂತೆಯೇ ಇದ್ದ. ಸರ್ಕಾರಿ ಕೆಲಸವೊಂದಕ್ಕೆ ಸೇರಿ ತನ್ನನ್ನು ಕಷ್ಟಪಟ್ಟು ಸಾಕುತ್ತಿರುವ ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬುದೇ ಅವನ ಕನಸಾಗಿತ್ತು. ಶೃಂಗೇರಿಯ ಜೆಸಿಬಿಎಮ್ ಕಾಲೇಜಿನ ಬಿ.ಕಾಂ ಕೊನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ಅಭಿಷೇಕ್ ಎಂ.ಕೆ ಎಂಬ ಹುಡುಗ ಪ್ರಸಕ್ತ ವರ್ಷದ ಕಾಲೇಜಿನ ವಾಣಿಜ್ಯ ಸಂಘದ ಅಧ್ಯಕ್ಷ! ಚೆನ್ನಾಗಿ ಓದುತ್ತಿರುವ ಆಲ್ ರೌಂಡರ್ ವಿದ್ಯಾರ್ಥಿಗಳನ್ನು ಕಾಲೇಜಿನ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಸಂಘಗಳಿಗೆ ಅಧ್ಯಕ್ಷ – ಉಪಾಧ್ಯಕ್ಷರನ್ನಾಗಿ ಕಾಲೇಜಿನವರೇ ನೇಮಿಸುತ್ತಾರೆ. ನೇಮಿಸುವಾಗ ಅವನು ಯಾವ ಸಂಘಟನೆಯವನೆಂದು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಇಂತಹ ಉತ್ತಮ ವಿದ್ಯಾರ್ಥಿಯಾದ ಅಭಿಷೇಕ್ ವಾಣಿಜ್ಯ ಸಂಘವನ್ನು ಹೊರತುಪಡಿಸಿ ತನ್ನನ್ನು ತಾನು ಎಬಿವಿಪಿ ಯಲ್ಲಿ ಗುರುತಿಸಿಕೊಂಡಿದ್ದೇ ಜೀವಕ್ಕೆ ಮುಳ್ಳಾಗುವ ಹಾಗಾಯಿತು. ಜನವರಿ ಏಳರಂದು ಎನ್.ಸಿ.ಸಿ ಮತ್ತು ಎನ್.ಎಸ್.ಎಸ್ ಜಂಟಿಯಾಗಿ ಸೈನಿಕರಿಗೆ ಗೌರವ ಸಲ್ಲಿಸುವ “ಯೋಧನಮನ” ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಚಕ್ರವರ್ತಿ ಸೂಲಿಬೆಲೆಯವರನ್ನು ಈ ಕಾರ್ಯಕ್ರಮಕ್ಕೆ ಮುಖ್ಯ ಭಾಷಣಕಾರರನ್ನಾಗಿ ಕರೆಸಬೇಕೆಂದು ಕಾಲೇಜು ಮಂಡಳಿ ತೀರ್ಮಾನಿಸಿದ್ದರು. ಈ ಕಾಲೇಜಿನ ಕಾರ್ಯಕ್ರಮಗಳಿಗೆ ಚಕ್ರವರ್ತಿಯವರು ಬರುವುದು ಹೊಸದೇನಲ್ಲ. ಎನ್.ಎಸ್.ಯು.ಐ ಸಂಘಟನೆ ತನ್ನ ಅಸ್ತಿತ್ವವನ್ನು ತೋರಿಸಿಕೊಳ್ಳುವುದಕ್ಕಾಗಿಯೇ ಈ ಕಾರ್ಯಕ್ರಮವನ್ನು ವಿರೋಧಿಸಿತು. ಪೊಲೀಸರಿಗೆ ಹಾಗೂ ಕಾಲೇಜು ಆಡಳಿತ ಮಂಡಳಿಗೆ ದೂರು ಸಲ್ಲಿಸಿದ್ದರಿಂದ ಚಕ್ರವರ್ತಿ ಸೂಲಿಬೆಲೆಯವರು ಕಾರ್ಯಕ್ರಮಕ್ಕೆ ಬರುವುದು ಹಿಂದಿನ ದಿನವೇ ರದ್ದಾಗಿದ್ದು ತಿಳಿದಿದ್ದರೂ ಸಹ ಉದ್ಧೇಶಪೂರ್ವಕವಾಗಿ ಕಾರ್ಯಕ್ರಮದ ದಿನ ಬೆಳಿಗ್ಗೆ ಪ್ರತಿಭಟನೆ ಮಾಡಿಸಿದ್ದಾರೆ. ಎನ್.ಎಸ್.ಯು.ಐ ಸಂಘಟನೆಗೆ ಕಾಂಗ್ರೆಸ್ನವರೂ ಬೆನ್ನೆಲುಬಾಗಿ ನಿಂತಿದ್ದು ದುರಾದೃಷ್ಟಕರ.

ದೇಶಭಕ್ತ ತರುಣರು ಒಂದೊಂದು ತಂಡವನ್ನು ಕಟ್ಟಿಕೊಂಡು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತಿದ್ದರೆ ಇನ್ನೊಂದೆಡೆ ಅಭಿವ್ಯಕ್ತಿ ಸ್ವಾತಂತ್ರ್ಯ, ಮಾನವೀಯತೆ, ದಲಿತರ ಶೋಷಣೆ ಎಂದು ಬೊಬ್ಬೆ ಹೊಡೆಯುವ ಕೆಲವೊಂದು ಸಂಘಟನೆಗಳು, ವ್ಯಕ್ತಿಗಳು ಹಾಗೂ ವೆಬ್ ಪೋರ್ಟಲ್ ಗಳಿಗೆ ಇಂತವರನ್ನು ವಿರೋಧಿಸುವುದೇ ಒಂದು ದೊಡ್ಡ ಕೆಲಸವೆಂದರೆ ತಪ್ಪಾಗಲಾರದು. ಈ ವಾಮ ಪಂಥಗಳಿಗೆ ಒಂದೆಡೆ ಬಡಾವಣೆಗಳ ಮೇಲೆ ಬಾಂಬ್ ಹಾಕಲು ಕರೆ ಕೊಡುವ ದೇವನೂರ ಮಹಾದೇವರವರಂತವರು ಮಾನವೀಯ ವ್ಯಕ್ತಿಯಾಗಿ ಕಂಡರೆ ಇನ್ನೊಂದೆಡೆ ದೇಶ ಕಟ್ಟುವ ಕೆಲಸ ಮಾಡುತ್ತಿರುವ ತರುಣರು ಕೋಮುವಾದಿಗಳ ಹಾಗೆ ಕಾಣುತ್ತಾರೆ. ಮಾನವೀಯತೆ ಹೆಸರಲ್ಲಿ ಉಗ್ರತ್ವವನ್ನು ಪ್ರತಿಪಾದಿಸುವ ಇಂತವರು ಗೋಮುಖ ವ್ಯಾಗ್ರತನಕ್ಕೆ ಉತ್ತಮ ಉದಾಹರಣೆ. ದುರಂತವೆಂದರೆ ಕಾಲೇಜ್ ಒಳಗಿನ ಸಮಸ್ಯೆಗೆ ರಾಜಕೀಯ ವ್ಯಕ್ತಿಗಳು ಹೊಕ್ಕಿದ್ದು. ತನ್ನ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ನಂತಹ ರಾಜಕೀಯ ಪಕ್ಷಗಳು ಎನ್.ಎಸ್.ಯು.ಐ ಸಂಘಟನೆಗೆ ಬೆಂಬಲ ನೀಡಲು ಕೊಪ್ಪದಿಂದಲೂ ಕಾರ್ಯಕರ್ತರನ್ನು ಕರೆಸಿಕೊಂಡು ಕಾಲೇಜಿನ ಮುಂದೆ ಪ್ರತಿಭಟನೆ ಮಾಡಿಸಿ, ಸ್ಟೇಷನ್ನಿನಲ್ಲಿ ಕಂಪ್ಲೆಂಟು ಕೊಟ್ಟು, ಚಕ್ರವರ್ತಿಯವರು ಕಾರ್ಯಕ್ರಮಕ್ಕೆ ಬರುವುದನ್ನು ತಡೆಯುವಲ್ಲಿ ಯಶಸ್ವಿಯೂ ಆದರು.

ಕಾರ್ಯಕ್ರಮಕ್ಕೆ ತೊಂದರೆಯಾಗಕೂಡದು, ಯಾವುದೇ ಜಗಳ ಮಾಡಿಕೊಳ್ಳಬಾರದು ಎಂದು ಈ ಗುಂಪುಗಳಿಗೆ ಬುದ್ಧಿ ಹೇಳಿದ್ದರ ಪರಿಣಾಮ, ಕಾರ್ಯಕ್ರಮವು ಯಾವುದೇ ತೊಂದರೆ ಇಲ್ಲದೇ ಜರುಗಿತು. ಆದರೆ ಚಕ್ರವರ್ತಿಯವರನ್ನು ಭಾಷಣ ಮಾಡುವುದರಿಂದ ತಡೆದೆವು, ಇದೇ ತಮ್ಮ ದೊಡ್ಡ ವಿಜಯವೆಂಬಂತೆ ಈ ಖುಷಿಯನ್ನು ಎಡ ಪಂಥವನ್ನು ಬೆಂಬಲಿಸುವ ವೆಬ್ ಪೋರ್ಟಲ್ ಗಳು ಮತ್ತು ಕೆಲವು ಪತ್ರಿಕೆಗಳು ಬಿತ್ತರಿಸಿದವು ಕೂಡಾ. ಇಷ್ಟಾದ ಮೇಲೂ ಸುಮ್ಮನಿರದ ಕೆಲವು ಎನ್.ಎಸ್.ಯು.ಐ ಹುಡುಗರು ಫೇಸ್ ಬುಕ್ ನಲ್ಲಿ ಪ್ರಚೋದನಾಕಾರಿ ಪೋಸ್ಟುಗಳನ್ನು ಹಾಕಿಕೊಂಡರು. ಅಂತಹ ಪೋಸ್ಟ್ ಗಳಿಗೆ ಕಾಮೆಂಟ್ ಮಾಡಿದ ಎಬಿವಿಪಿ ಹುಡುಗರನ್ನು ಕೆಟ್ಟ ಪದಗಳಿಂದ ನಿಂದಿಸಿದ್ದಾರೆ. ಎಬಿವಿಪಿ ಹುಡುಗರನ್ನು ಬಿಟ್ಟೂಬಿಡದಂತೆ ಕಿಚಾಯಿಸಿಯೂ ಇದ್ದಾರೆ. ಅಲ್ಲಿಯವರೆಗೂ ಸುಮ್ಮನಿದ್ದ ಎಬಿವಿಪಿ ಹುಡುಗರು, ಎನ್.ಎಸ್.ಯು.ಐ ಹುಡುಗರನ್ನು ಪ್ರಶ್ನಿಸಿದ್ದಾರೆ ಹಾಗೂ ಎರಡೂ ಗುಂಪಿನವರು ಗಲಾಟೆ ಮಾಡಿಕೊಂಡಿದ್ದಾರೆ. ಸ್ಥಳೀಯರು ಹೇಳುವಂತೆ ಈ ಹಿಂದೆ ಇದಕ್ಕಿಂತಾ ಹೆಚ್ಚಿನ ಮಟ್ಟದಲ್ಲಿ ಗುಂಪುಗಳ ನಡುವೆ ಜಗಳವಾಗಿದ್ದಿದೆ. ಅದಕ್ಕೆ ಹೋಲಿಸಿದರೆ ಈ ಬಾರಿ ಅಂಥಾ ಗಲಾಟೆಯೇನೂ ಆಗಿರಲೇ ಇಲ್ಲ. ಒಬ್ಬರನ್ನೊಬ್ಬರು ತಳ್ಳಾಡಿಕೊಂಡಿದ್ದಾರಷ್ಟೇ! ಇದೆಲ್ಲದಕ್ಕೂ ಅಭಿಷೇಕ್ ಮೂಕ ಪ್ರೇಕ್ಷಕನಾಗಿದ್ದನೇ ಹೊರತು, ಯಾರ ಮೇಲೂ ಕೈ ಮಾಡಿರಲಿಲ್ಲ ಎಂದು ಅವನ ಸ್ನೇಹಿತರೇ ಹೇಳಿದ್ದಾರೆ. ಇದನ್ನು ಕಾಲೇಜಿನ ಸಿಸಿಟಿವಿಯಲ್ಲೂ ವೀಕ್ಷಿಸಬಹುದು. ಅಷ್ಟೇ ಅಲ್ಲದೇ ಅಭಿಷೇಕ್ ತನ್ನ ಸೂಸೈಡ್ ನೋಟ್ ನಲ್ಲೂ ಅದನ್ನೇ ದಾಖಲಿಸಿದ್ದಾನೆ.

ಸಣ್ಣ ಗಲಾಟೆಗೆ ಎನ್.ಎಸ್.ಯು.ಐ ಹುಡುಗರು ಐಬಿಯಲ್ಲಿ ಕಾಂಗ್ರೆಸ್ ಸದಸ್ಯರ ಜೊತೆಗೆ ಮೀಟಿಂಗ್ ಮಾಡಿ, ಸುಳ್ಳು ಮೆಡಿಕಲ್ ಸರ್ಟಿಫಿಕೇಟ್ ಗಳನ್ನು ಸೃಷ್ಟಿಸಿ, ನಾಲ್ಕೈದು ಸೆಕ್ಷನ್ಗಳನ್ನು ಬಳಸಿ ಎಬಿವಿಪಿ ಹುಡುಗರ ಮೇಲೆ ಎಫ್.ಐ.ಆರ್ ದಾಖಲಿಸಿದ್ದಾರೆ. ಈ ಎಫ್.ಐ.ಆರ್ ಅಸ್ತ್ರ ಬಳಸುವುದು ಕಾಂಗ್ರೆಸ್ಸಿಗರಿಗೆ ಹೊಸದಲ್ಲ. ಇದಕ್ಕಿಂತ ಮುಂಚೆ ಹಲವು ಯುವಕರ ಮೇಲೆ ಪ್ರಯೋಗವೂ ಆಗಿದೆ. ಕಾಂಗ್ರೆಸ್ ಪಕ್ಷದ ವಿರುದ್ಧ ಯಾರೇ ಬರೆದರೂ ಅವರ ಮೇಲೆ ಮುಖ್ಯಮಂತ್ರಿಗಳ ಮಾದ್ಯಮ ಸಲಹೆಗಾರರು ಒಂದು ಕಣ್ಣಿಟ್ಟಿರುತ್ತಾರೆ. ಸ್ಕ್ರೀನ್ ಶಾಟ್ ಸಂಗ್ರಹಿಸುವಲ್ಲಿ, ಯುವಕರ ಮೇಲೆ ಕೇಸ್ ದಾಖಲಿಸುವಲ್ಲಿ ಸದಾ ಬ್ಯುಸಿಯಾಗಿರುತ್ತಾರೆ. ಸಣ್ಣ ಕಮೆಂಟುಗಳನ್ನೇ ಸಹಿಸದ ಇವರು ಸಣ್ಣ ನೂಕಾಟವನ್ನು ಬಿಡುವರೇ ? ಸಿದ್ದಾಂತಗಳ ಭಿನ್ನಾಭಿಪ್ರಾಯವನ್ನು ಗೌರವಿಸುವುದನ್ನು ಬಿಟ್ಟು ಎಫ್.ಐ.ಆರ್ ದಾಖಲಿಸಿ ತಮ್ಮ ದ್ವೇಷವನ್ನು ಮುಗ್ಧರ ಮೇಲೆ ಕಾರುತ್ತಾರೆ. ಸಣ್ಣ ಬುದ್ದಿವಾದದೊಂದಿಗೆ ಮುಗಿಯಬೇಕಿದ್ದ ಸಮಸ್ಯೆ ಸಾವಿನೊಂದಿಗೆ ಅಂತ್ಯ ಕಂಡಿದ್ದು ದುರಂತ.

ತನ್ನ ಭವಿಷ್ಯದ ಕುರಿತು, ಸರ್ಕಾರಿ ಕೆಲಸಕ್ಕಾಗಿ ಕನಸಿಟ್ಟುಕೊಂಡಿದ್ದ ಅಭಿಷೇಕ್, ಸುಳ್ಳು ಕೇಸ್ ದಾಖಲಾದ್ದರಿಂದ ತನ್ನ ಜೀವನವೇ ಹಾಳಾಗಿಹೋಗುತ್ತದೆ ಎಂದು ಖಿನ್ನತೆಗೊಳಗಾಗಿದ್ದಾನೆ. ಮೊನ್ನೆ ಕೆಲವರ ಹತ್ತಿರ ಎಫ್.ಐ.ಆರ್ ದಾಖಲಾಗಿದೆ, ಅದರಿಂದೇನಾದರೂ ತೊಂದರೆಯಿದೆಯೇ ಎಂದೂ ವಿಚಾರಿಸಿದ್ದಾನೆ. ಸುಳ್ಳು ಕೇಸ್ ದಾಖಲಿಸಿದ್ದ ಗುಂಪಿನವರಲ್ಲೊಬ್ಬರಾದ ಅನುಷ್ ಶೆಟ್ಟಿ ಗೆ ಅಭಿಷೇಕ್ ಕರೆ ಮಾಡಿದಾಗ ವಿಶಲ್, ಚಪ್ಪಾಳೆ ಹೊಡೆದು, ಕೂಗುವ ಮುಖಾಂತರ ವ್ಯಂಗ್ಯವಾಡಿದ್ದಾರೆ ಎಂದು ಅಭಿಷೇಕ್ ತನ್ನ ಸ್ನೇಹಿತರ ಬಳಿ ಹೇಳಿಕೊಂಡಿದ್ದಾನೆ. ಈ ಘಟನೆಯಿಂದ ತೀರ್ವವಾಗಿ ನೊಂದಿದ್ದಾನೆ. ಬೇಲ್ ಗೆ ಪಹಣಿ ತೆರೆಸಿ ಎಲ್ಲ ವ್ಯವಸ್ಥೆಯನ್ನೂ ಮಾಡಿಕೊಂಡು ಮನೆಗೆ ಬಂದ ಅಭಿಷೇಕ್, ಡೆತ್ ನೋಟ್ ಬರೆದಿಟ್ಟು ಮನೆಯ ಹಿಂದಿನ ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸರಿಯಾಗಿ ಒಂದು ವರ್ಷದ ಹಿಂದೆ ರೋಹಿತ್ ವೇಮುಲ ತನ್ನ ಸಾವಿಗೆ ಯಾರೂ ಕಾರಣವಲ್ಲವೆಂದು ಡೆತ್ ನೋಟ್ ಬರೆದಿದ್ದರೂ ಅವನ ಸಾವನ್ನು ತಮ್ಮ ರಾಜಕೀಯಕ್ಕೆ, ಮೊಸಳೆ ಕಣ್ಣೀರಿಗೆ ಬಳಸಿಕೊಂಡ ಸಂಘಟನೆಗಳು ಅಭಿಷೇಕ್ ಪ್ರಕರಣದಲ್ಲಿ ಯು ಟರ್ನ್ ತೆಗೆದುಕೊಂಡಿದ್ದಾರೆ. ವೇಮುಲನ ಆತ್ಮಹತ್ಯೆಯನ್ನು ಶೈಕ್ಷಣಿಕ ಹತ್ಯೆ ಎಂದು ಗಂಟಲು ಹರಿದು ಬೊಬ್ಬಿಕ್ಕಿದವರೇ ಇಂದು ಅಭಿಷೇಕ್ ನ ಆತ್ಮಹತ್ಯೆಗೆ ಕಾರಣರಾಗಿದ್ದಾರೆ. ಎನ್.ಎಸ್.ಯು.ಐ ಸಂಘಟನೆಯ ಪ್ರತಿಭಟನೆಗೆ, ಸುಳ್ಳು ಕೇಸಿಗೆ ಬೆಂಬಲ ನೀಡಿದ್ದ ಇವೇ ಸಂಘಟನೆಗಳು, ತನ್ನ ಸಾವಿಗೆ ಸುಳ್ಳು ಕೇಸ್ ಕಾರಣ ಎಂದು ಅಭಿಷೇಕ್ ಸ್ಪಷ್ಟವಾಗಿ ಬರೆದಿದ್ದರೂ ಅದನ್ನು ಮರೆಮಾಚಿ ಬೇರೆಯವರೆಡೆ ಬೊಟ್ಟು ಮಾಡಿ ನುಣುಚಿಕೊಳ್ಳಲು ಪ್ರಯತ್ನಿಸುತ್ತಿವೆ.

ದೇಶ ದ್ರೋಹ ಹೇಳಿಕೆಗಳ ವೀಡಿಯೊ ಸಾಕ್ಷಿ ಇದ್ದೂ ಕನ್ನಯ್ಯ ನಂತವರನ್ನು ಪೋಲಿಸರು ವಿಚಾರಣೆಗೆ ಒಳಪಡಿಸಿದರೆ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೃದಯ ಮಮ್ಮಲ ಮರುಗುತ್ತದೆ. ಆ ಸಮಯದಲ್ಲಿ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮೇಲೆ ಪೋಸ್ಟ್ ಹಾಕಿ ತಮ್ಮ “ದುಃಖ್ಖ”ವನ್ನು ವ್ಯಕ್ತಪಡಿಸಿದ್ದರು. ಸಿದ್ದರಾಮಯ್ಯನವರ ಆಪ್ತರು ಭ್ರಷ್ಟಾಚಾರ ಎಸಗಿ ಸಿಕ್ಕಿ ಬಿದ್ದಾಗ ಅವರೆಲ್ಲ ನನ್ನ ಆಪ್ತರಲ್ಲ, ಕರ್ನಾಟಕದ ಪ್ರಜೆಗಳೆಲ್ಲರೂ ನನ್ನ ಆಪ್ತ ಅಂತ ಘೋಷಿಸಿದ್ದರು. ನಮ್ಮ ಕರ್ನಾಟಕದ ಭಾಗವೇ ಆಗಿರುವ ಶೃಂಗೇರಿಯಲ್ಲಾದ ಘಟನೆಗೆ ಸಿಎಂ ಪ್ರತಿಕ್ರಿಯೆ ನೀಡುವ ಮನಸ್ಸೇ ಮಾಡುತ್ತಿಲ್ಲ. ಅವರಿಗೆ “ದುಃಖ್ಖ”ವೂ ಆಗುತ್ತಿಲ್ಲ. ಬಹುಶಃ ಆಪ್ತರ ಕುಟುಂಬದಲ್ಲಿ ಅಭಿಷೇಕ್ ಮತ್ತವನ ಕುಟುಂಬ ಇಲ್ಲವೇನೋ !! ಇದನ್ನೆಲ್ಲಾ ಕೇಳಲು ವಿರೋಧ ಪಕ್ಷವೂ ನಮ್ಮ ರಾಜ್ಯದಲ್ಲಿ ಇಲ್ಲ. ಪ್ರತಿಪಕ್ಷವಂತೂ ಬ್ರಿಗೇಡ್ ಗೊಂದಲಗಳಲ್ಲೇ ಮುಳುಗಿ ಅಭಿಷೇಷಕ್ ನ ಮರೆತುಬಿಟ್ಟಿವೆ. ಅಭಿಷೇಕ್ ನಂತಹ ವಿದ್ಯಾರ್ಥಿಗಳ ಸಮಸ್ಯೆ, ದುಃಖ ಯಾರಿಗಿಲ್ಲಿ ಅರ್ಥವಾಗುವುದಕ್ಕೆ ಸಾಧ್ಯ !!

– ವಿಶ್ವವಾಣಿಯಲ್ಲಿ 14.01.2017 ರಂದು ಪ್ರಕಟವಾದ ಲೇಖನ –

1 ಟಿಪ್ಪಣಿ Post a comment
  1. Vikas Nayak
    ಜನ 22 2017

    The suicide of the student Abhishek must be condemned with high voice first apart from condolence to his parents. Of course antisocial activities are fostered and hence hailing with tough challenges to our weak and corrupt system, but the matter should be dealt shrewdly by pervading mass awareness and encouraging as well strongly supporting proactive demeanor among youths to combat the evil and the influences thereof.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments