7ನೇ ವರ್ಷದ ಹೊಸ್ತಿಲಲ್ಲಿ ನಿಲುಮೆ…
ನಿಲುಮೆ ವೆಬ್ ತಾಣ ಶುರುವಾಗಿ 6ವರ್ಷಗಳನ್ನು ಪೂರೈಸಿ 7ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂಕ್ರಮಣದ ದಿನವಿದು. 5ನೇ ವರ್ಷದ ಸಂಭ್ರಮದಲ್ಲಿ,ನಿಲುಮೆ ಪ್ರಕಾಶನ ಶುರುವಾಗುವ ಹಂತದಲ್ಲಿದ್ದಾಗ,ನಿಲುಮೆಯ ಮೇಲೆ ಕರ್ನಾಟಕದ ಬೌದ್ಧಿಕ ಫ್ಯಾಸಿಸಂನ ದಾಳಿಯಾಗಿತ್ತು.ಹಾಗೇ ದಾಳಿ ಮಾಡಿದವರ ಪೈಕಿ ಹೇಗಿದೆ 5ನೇ ವರ್ಷದ ಗಿಫ್ಟು ಎಂದು ಕುಹುಕವಾಡಿದ್ದರು.ಅದಾದ ನಂತರದ ವಿಷಯಗಳೆಲ್ಲ ನಿಮಗೇ ತಿಳಿದಿವೆ.ಕನ್ನಡ ಪ್ರಭ ಪತ್ರಿಕೆಯೂ ಆ ಎಪಿಸೋಡಿನ ಬಗ್ಗೆ ವಿಸ್ತೃತ ವರದಿ ಮಾಡಿತು.ಸುವರ್ಣ ನ್ಯೂಸ್ ಚಾನೆಲ್ಲಿನಲ್ಲಿ ಮುಖಾಮುಖಿ ಚರ್ಚೆಯೂ ನಡೆಯಿತು.
ಆ ಚರ್ಚೆಯ ಅಂತ್ಯದಲ್ಲಿ, ”ಇವರಂತೆ ನಮ್ಮದು ವಿಧ್ವಂಸಕ ಮಾರ್ಗವಲ್ಲ;ನಮ್ಮದು ಜ್ಞಾನ ಮಾರ್ಗ” ಎಂದು ಹೇಳಿ,ನಿಲುಮೆಯು ಸಾಗಿ ಬಂದ ಮತ್ತು ಸಾಗಲಿರುವ ಮಾರ್ಗದ ಬಗ್ಗೆ ಸ್ಪಷ್ಟ ಸಂದೇಶವನ್ನು ಕೊಟ್ಟೆವು. ನಾವು ಹೇಳಿದ ಮಾರ್ಗದಲ್ಲಿಯೇ ಸಾಗುತಿದ್ದೇವೆ.ಎನ್ನುವುದಕ್ಕೆ ಸಾಕ್ಷಿಯಾಗಿ,5ನೇ ವರ್ಷಾಚರಣೆಯ ಸಂದರ್ಭದಲ್ಲಿ,ನಾಡಿನ ಬೌದ್ಧಿಕ ಕ್ಷೇತ್ರಕ್ಕೆ ನಿಲುಮೆಯಿಂದ 3 ಪುಸ್ತಕಗಳನ್ನು ನಿಮ್ಮ ಕೈಯಲ್ಲಿಟ್ಟಿದ್ದೇವೆ.ಕನಿಷ್ಟ ಐದು ಪುಸ್ತಕಗಳನ್ನಾದರೂ ನಾವು ಪ್ರಕಟಿಸುವ ಇರಾದೆಯಿತ್ತು. ಆದರೆ,ನಮ್ಮ ಇತರೆ ಕೆಲಸ-ಕಾರ್ಯಗಳು ಮತ್ತು ಪುಸ್ತಕ ಮುದ್ರಣಕ್ಕೆ ಬೇಕಾಗುವ ಸಂಪನ್ಮೂಲಗಳ ಕೊರತೆ ಇತ್ಯಾದಿ ಕಾರಣಗಳಿಂದ ಮೂರು ಪುಸ್ತಕಗಳಷ್ಟೇ ಸಾಧ್ಯವಾಗಿದ್ದು. 2016ರಲ್ಲಿ ನಿಲುಮೆ ಪ್ರಕಾಶನ ಸ್ತಬ್ಧವಾಗಿತ್ತು ಎಂಬುದನ್ನು ನಿಮ್ಮ ಮುಂದೆ ಮಂಡಿಯೂರಿ ಒಪ್ಪಿಕೊಳ್ಳುತ್ತೇವೆ.
ಈ ವರ್ಷ ನಿಲುಮೆಯ ಹೆಜ್ಜೆ ಗುರುತುಗಳು….
1.ಹೈದರಾಬಾದಿನ ಯುನಿವರ್ಸಿಟಿಯಲ್ಲಿ ರೋಹಿತ್ ವೇಮುಲಾ ಎಂಬ ವಿದ್ಯಾರ್ಥಿಯ ಆತ್ಮಹತ್ಯೆ ಪ್ರಕರಣವನ್ನಿಡಿದುಕೊಂಡು ದೇಶಾದಾದ್ಯಂತ ಗಂಜಿಗಿರಾಕಿಗಳು ಬೊಬ್ಬೆಯಿಟ್ಟಾಗ,ನಿಲುಮೆ ಬಳಗ ಸಾಮಾಜಿಕ ಜಾಲತಾಣಗಳಲ್ಲಿ ಸತ್ಯಾಂಶವನ್ನು ಓದೌಗರ ಮುಂದೆ ಇಡುವ ಕೆಲಸವನ್ನು ಮಾಡಿದೆ.
2.ಉಗ್ರ ಅಫ್ಜಲ್ ಗುರುವನ್ನು ಬೆಂಬಲಿಸಿ,ಕಾಶ್ಮೀರದ ಆಜಾದಿ ಘೋಷಣೆಗಳನ್ನು ಕೂಗಿದ್ದ ಜೆ.ಎನ್.ಯು ವಿವಿಯ ಕನ್ನಯ್ಯ ಕುಮಾರನ ಪಟಾಲಂನ ವಿರುದ್ಧ ನಡೆದ ಆನ್ಲೈನ್ ಹೋರಾಟದಲ್ಲು ನಿಲುಮೆ ಬಳಗ ಸಕ್ರೀಯವಾಗಿತ್ತು.
3.೨೦೧೬ರ ಫೆಬ್ರವರಿ ತಿಂಗಳಿನಲ್ಲಿ ದೆಹಲಿಯ JNUವಿನಲ್ಲಿ ದೇಶವಿರೋಧಿ ಘೋಷಣೆಗಳು ಕೇಳಿ ಬಂದಾಗ ದೇಶದಾದ್ಯಂತ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು.ಅದಾದ ಕೆಲವೇ ದಿನಗಳಲ್ಲಿ ಬಂಗಾಳದಲ್ಲೂ ಇದೇ ಬಗೆಯ ಘೋಷಣೆಗಳ ಸುದ್ದಿಯಾಗಿತ್ತು. ಜುಲೈ ೯ನೇ ತಾರೀಖು ಜಮ್ಮುಕಾಶ್ಮೀರ ರಾಜ್ಯದಲ್ಲಿ ಉಗ್ರ ಬರ್ಹನ್ ವಾನಿಯ ಹತ್ಯೆಯಾದ ನಂತರ,ಆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಪಾಕಿಸ್ತಾನಿ ಪ್ರಾಯೋಜಿತ ಗಲಭೆ ಶುರುವಾಗಿ ಒಂದು ವಾರ ಕಳೆಯುವಷ್ಟರಲ್ಲೇ, ಕೆಲವು ಅರ್ಬನ್ ನಕ್ಸಲರು ನಮ್ಮ ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ (ಜುಲೈ15,16) We Stand with Kashmir ಎನ್ನುವ ಹೆಸರಿನೊಂದಿಗೆ ಟೌನ್ ಹಾಲ್ ಮುಂದೆ ನಿಂತು “ಕಾಶ್ಮೀರದ ಆಜಾದಿ” ಕೇಳಲು ತಯಾರಾಗಿದ್ದ ಹೊರಟಿದ್ದರು. ಇವರ ಆಸೆಗೆ ನಾವೊಂದಿಷ್ಟು ಜನರು ಸೇರಿ ತಣ್ಣಿರೇರಚಿದ್ದೆವು.
ಇಷ್ಟು ದಿನ ಶ್ರೀನಗರದಲ್ಲೋ,ದೆಹಲಿಯ JNUವಿನಲ್ಲೋ,ಉತ್ತರ ಭಾರತದಲ್ಲೆಲ್ಲೋ ಕಾಣಿಸಿಕೊಳ್ಳುತ್ತಿದ್ದ ಈ Urban Naxalರು ಈಗ ನಮ್ಮ ಬೆಂಗಳೂರಿಗೂ ಕಾಲಿಟ್ಟರು.ಜುಲೈ ತಿಂಗಳಿನಲ್ಲಿ ಮಾಡಲಾಗದಿದ್ದ ಕೆಲಸವನ್ನು ಮಾನವ ಹಕ್ಕುಗಳ ಝಂಡಾ ಹಿಡಿದು,ಸೈನಿಕರನ್ನು ರಾಕ್ಷಸರಂತೆ,ಉಗ್ರರನ್ನು ರಕ್ಷಕರಂತೆ ಚಿತ್ರಿಸುವಲ್ಲಿ ಕುಖ್ಯಾತಿಗಳಿಸಿರುವ ಅಮ್ನೆಸ್ಟಿ ಇಂಡಿಯಾ ಎಂಬ NGO ಹೆಸರಿನಡಿಯಲ್ಲಿ,ಕಳ್ಳರೆಲ್ಲಾ ಸಂತೆಯಲ್ಲಿ ಒಂದಾಗುವಂತೆ ಬಂದು ಸೇರಿಕೊಂಡರು.ಅದಾದ ನಂತರದ ಘಟನೆಗಳು ನಿಮಗೆ ಗೊತ್ತಿವೆ. “ಭಾರತ್ ಕಿ ಬರ್ಬಾದಿ ಕರೇಂಗೆ” ಎಂದವರು ಇಂದಿಗೂ ಬೆಂಗಳೂರಿನಲ್ಲಿ ಆರಾಮವಾಗಿ ಓಡಾಡಿಕೊಂಡಿದ್ದರೇ, “ಭಾರತ್ ಮಾತಾ ಕಿ ಜೈ” ಎಂದ ವಿದ್ಯಾರ್ಥಿಗಳ ತಲೆ ಒಡೆಯಲಾಯಿತು.ಇವೆಲ್ಲದರ ನಡುವೆ, ಕಳೆದ ಅರವತ್ತು ವರ್ಷಗಳಲ್ಲಿ ಕಾಶ್ಮೀರದ ಕುರಿತು ಜನರಲ್ಲಿ ಹಬ್ಬಿಸಲಾಗುತ್ತಿದ್ದ ಸುಳ್ಳು ಸುದ್ದಿಗಳು, ೨೦೧೫ರಿಂದ ಈಚೇಗೆ ಈ ಅರ್ಬನ್ ನಕ್ಸಲರ ಸುಳ್ಳುಗಳು ವೇಗ ಹೆಚ್ಚಿಸಿಕೊಳ್ಳುತ್ತಿವೆ.ಅತ್ಯಂತ ವ್ಯವಸ್ಥಿತವಾಗಿ ಭಾರತ ವಿರೋಧಿ ಮನಸ್ಥಿತಿಯನ್ನು ಉತ್ತೇಜಿಸುವ,ದೇಶ ವಿರೋಧಿ ಘೋಷಣೆಗಳಿಗೆಂದೇ ಕಾರ್ಯಕ್ರಮದ ಆಯೋಜನೆ ಮಾಡುತ್ತ,ಸುಳ್ಳು ಇತಿಹಾಸಗಳ ವೈಭವೀಕರಿಸುತ್ತ ಯುವಕರನ್ನು ಹಾದಿ ತಪ್ಪಿಸುತ್ತಿದ್ದಾರೆ.
ಇಂತಹ ಸಮಯದಲ್ಲಿ ಜಮ್ಮು-ಕಾಶ್ಮೀರ ರಾಜ್ಯ ಭಾರತದ ಒಕ್ಕೂಟಕ್ಕೆ ಸೇರುವ ಕಾಲಘಟ್ಟದ ಸತ್ಯಗಳೇನು,ಈ ದೇಶದ ಉಳಿದ Princely ಸ್ಟೇಟುಗಳು ಒಕ್ಕೂಟ ಸೇರಿದ್ದಕ್ಕೂ ಈ ರಾಜ್ಯಕ್ಕೂ ಏನೂ ವ್ಯತ್ಯಾಸವಿತ್ತು? ನಮ್ಮ ನೆಮ್ಮದಿಯ ನಾಳೆಗಳಿಗಾಗಿ ತಮ್ಮ ಭವಿಷ್ಯವನ್ನೇ ಮುಡಿಪಾಗಿಡುವ ಯೋಧರನ್ನು ರಾಕ್ಷಸರಂತೆ ಬಿಂಬಿಸಲು ಹೊರಟಿದ್ದಾರಲ್ಲ,ನಮ್ಮ ಯೋಧರು ಕಾಶ್ಮೀರಿ ನೆಲದಲ್ಲಿ ನಿಂತು ಬಡಿದಾಡುವಂತೆ ಮಾಡಿದ್ದು ಯಾರು?ಯೋಧರು ಹಾಗೂ ಕಾಶ್ಮೀರಿಗಳ ಸಂಬಂಧ ಹೇಗಿದೆ?ಅಮ್ನೆಸ್ಟಿಯಂತಹ MNC/NGO ಗಳು ಅಭಿವೃದ್ಧಿಶೀಲ ದೇಶಗಳ ಹಿಂದೆ ಬೀಳುವುದೇಕೆ? ಇಂತಹ ಪ್ರಶ್ನೆಗಳ ಬಗ್ಗೆ ತಜ್ನರಿಂದ ವಿಚಾರ ಸಂಕಿರಣ ಏರ್ಪಡಿಸಿ ಯುವ ಸಮೂಹಕ್ಕೆ ಸತ್ಯವೇನು ಎಂದು ತಿಳಿಸಿದರೆ ಈ ಸುಳ್ಳುಗಳ ವಿರುದ್ಧ ಹೋರಾಡಲು ಬೌದ್ಧಿಕ ಅಸ್ತ್ರ ಕೊಟ್ಟಂತೆ ಆಗುತ್ತದೆ ಮತ್ತು ರಾಷ್ಟ್ರೀಯ ಹಿತಾಸಕ್ತಿಗೆ ಇದು ಪೂರಕವೂ ಹೌದು ಎಂಬ ಉದ್ದೇಶದಿಂದ ನಿಲುಮೆ ಬಳಗ ಈ “ಜಮ್ಮುಕಾಶ್ಮೀರ ವಿಚಾರ ಸಂಕಿರಣ”ವನ್ನು ಆಯೋಜಿಸಲು ನಿರ್ಧರಿಸಿತ್ತು. ಇದರ ಅಂಗವಾಗಿ ಆಗಸ್ಟ್ 28ರಂದು ಬೆಂಗಳೂರಿನಲ್ಲಿ ಮೊದಲ ಕಾರ್ಯಕ್ರಮವನ್ನು ಆಯೋಜಿಸಿದ್ದೆವು. ನಂತರ ಸಮಾನ ಮನಸ್ಕ ಸಂಘಟನೆಗಳ ಸಹಯೋಗದಲ್ಲಿ ನಿಲುಮೆ – ಜಮ್ಮುಕಾಶ್ಮೀರ ಜ್ಞಾನದ ತೇರು”, ಮಂಗಳೂರು, ತೀರ್ಥಹಳ್ಳಿ, ಶಿವಮೊಗ್ಗ, ಸಾಗರ, ಕುಮಟಾ,ಚಿಕ್ಕಮಗಳೂರಿಗೆ ತಲುಪಿತ್ತು. ನಮ್ಮ ವಿಚಾರ ಸಂಕಿರಣ ನಡೆಯುವಾಗಲೇ ಬೇರೆ ಬೇರೆ ಸಂಘಟನೆಗಳು ಇದೇ ವಿಷಯದ ಕುರಿತು ಕಾರ್ಯಕ್ರಮಗಳನ್ನು ನಡೆಸಿದ್ದು ನಮಗೆ ಖುಷಿಯ ವಿಷಯವೇ. ಜಮ್ಮುಕಾಶ್ಮೀರ ನಿಲುಮೆ ವಿಚಾರ ಸಂಕಿರಣ ಮೊದಲನೇಯ ಹಂತವನ್ನು ಚಿಕ್ಕಮಗಳೂರಿನ ಕಾರ್ಯಕ್ರಮದೊಂದಿಗೆ ಮುಕ್ತಾಯಗೊಳಿಸಿದ್ದೇವೆ.ಹಾಗಂತ ಜಮ್ಮುಕಾಶ್ಮೀರದ ವಿಷಯವಿನ್ನೂ ನಮ್ಮ ಅಜೆಂಡಾದಲ್ಲಿಯೇ ಇದೆ. ಈ ರಾಜ್ಯದ ಕುರಿತಂತೆ ತಲುಪಿಸಬೇಕಾದ ಇನ್ನಷ್ಟು ಸತ್ಯಗಳಿವೆ.ಸಮಯ-ಸಂದರ್ಭ ನೋಡಿಕೊಂಡು ಮತ್ತೊಮ್ಮೆ ಈ ಸರಣಿಯನ್ನು ಶುರು ಮಾಡುತ್ತೇವೆ.
4.ನಿಲುಮೆಯ ವಾರ್ಷಿಕೋತ್ಸವದ ಅಂಗವಾಗಿ ಕಳೆದ 14 ದಿನಗಳಿಂದ ಜಮ್ಮು ಕಾಶ್ಮೀರಕ್ಕೆ ಸಂಬಂಧ ಪಟ್ಟಂತೆ ಹದಿನಾಲ್ಕು ಪ್ರಶ್ನೆಗಳನ್ನು ನಿಲುಮೆಯ ಫೇಸ್ಬುಕ್ ಪೇಜ್ ಮತ್ತು ಗುಂಪಿನಲ್ಲಿ ಕೇಳಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ನಿಲುಮಿಗರು ಪಾಲ್ಗೊಂಡು, ಇದನ್ನು ಯಶಸ್ವೀಗೊಳಿಸಿದ್ದೀರ. ಸಧ್ಯದಲ್ಲಿಯೇ ವಿಜೇತರನ್ನು ಘೋಷಿಸುತ್ತೇವೆ ..
ಇನ್ನು ಈ ವರ್ಷ ನಿಲುಮೆಯಿಂದಾಗಬೇಕಾದ ಕೆಲಸಗಳು ಚರ್ಚೆಯ ಹಂತದಲ್ಲಿರುವುದರಿಂದ,ಆ ಕುರಿತು ಸಮಯ ಬಂದಾಗ ತಿಳಿಸುತ್ತೇವೆ. ನಮ್ಮ ಈ ಸಾಂಸ್ಕೃತಿಕ ಚಳುವಳಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಯೋಜನೆಗಳು ಅಂತಷ್ಟೇ ಸದ್ಯಕ್ಕೆ ಹೇಳಬಯಸುತ್ತೇವೆ.
ನಿಲುಮೆಯ ಇಲ್ಲಿಯವರೆಗ ಸಾಗಿ ಬಂದಿರುವುದು ಸಾಂಘಿಕ ಪ್ರಯತ್ನದ ಫಲವಾಗಿ.ಇದರ ಯಶಸ್ಸಿನ ದೊಡ್ಡ ಪಾಲು ನಿಲುಮೆಯ ಬರಹಗಾರರು ಮತ್ತು ಓದುಗರಿಗೇ ಸಲ್ಲುತ್ತದೆ.ಬನ್ನಿ,ನಾವೆಲ್ಲಾ ಜೊತೆಯಾಗಿ ಭಾರತವನ್ನು ಬೌದ್ಧಿಕ ದಾಸ್ಯದಿಂದ ಮುಕ್ತವಾಗಿಸುವತ್ತ ಹೆಜ್ಜೆಯಿಡೋಣ
ನಿಮ್ಮೊಲುಮೆಯ,
ನಿಲುಮೆ ಬಳಗ
ಶೆಟ್ಟರೆ, ಅಂತೂ ನಿಮ್ಮ ಸೈಟನ್ನು ಇಷ್ಟು ವರ್ಷ ನಡೆಸಿಯೇ ಬಿಟ್ಟಿರಿ! ಬಲಪಂಥೀಯ ರಾಜಕಾರಣವು ಕಳೆದ ದಶಕದಲ್ಲಿ ದೇಶಾದ್ಯಂತ ಪಸರಿಸಿ ಆನ್ ಲೈನ್ ಲೋಕವನ್ನೂ ಆವರಿಸಿದೆ. ನಿಮ್ಮ ಸೈಟೂ ಈ ಪ್ರಕ್ರಿಯೆಯ ಒಂದು ಭಾಗವೇ ಆಗಿದೆ. ಜ್ಞಾನಮಾರ್ಗ ಎಲ್ಲ ಬೊಗಳೆ, ಬಲಪಂಥೀಯ ರಾಷ್ಟ್ರವಾದದ ನಶೆ ತೋರಿಸಿದ ದಾರಿಯೇ ನಿಮ್ಮದು. ನಿಮ್ಮ ವಾದವನ್ನು ವಿರೋಧಿಸುವವರ ತುಚ್ಚೀಕರಣ ಹಾಗೂ ಬ್ಯಾನ್ ಮಾಡುವ ಸೆನ್ಸಾರ್ ಬುದ್ಧಿಯನ್ನು ಅನೇಕ ಬಾರಿ ತೋರಿಸಿದ್ದೀರಿ. ಎಡಪಂಥೀಯರನ್ನು ಗಂಜಿ ಗಿರಾಕಿ ಎಂದು ಪ್ರತಿ ಲೇಖನದಲ್ಲೂ ನಿಕೃಷ್ಟವಾಗಿ ನೋಡದಿದ್ದರೆ ನಿಮಗೆ ತಿಂದ ಗಂಜಿ ಅರಗುವುದಿಲ್ಲವೇನೋ. ಶೆಟ್ಟರೆ ಅಧಿಕಾರ ಸಿಕ್ಕಿತು ಎಂದು ಇಂದು ಬಲಪಂಥೀಯರು ಮೆರೆದಾಡುತ್ತಿದ್ದಾರೆ. ಆದರೆ ಅಧಿಕಾರ ಶಾಶ್ವತ ಅಲ್ಲ, ಮಹಾಭಾರತ ಯುದ್ಧದಲ್ಲಿ ಗೆಲುವ ಸಿಕ್ಕ ಸ್ವಲ್ಪ ಕಾಲದಲ್ಲೇ ಯಾದವರು ನಾಶವಾಗಿ ಹೋದರು, ಕುರು ವಂಶ ನಿರ್ವಂಶವಾಯಿತು – ಕೃಷ್ಣನ ಕೈಲೂ ಏನು ಮಾಡೋದಕ್ಕೆ ಆಗ್ಲಿಲ್ಲ. ಅಂಡ್ ಮೋದಿ ಈಸ್ ನಾಟ್ ಕೃಷ್ಣ. ಎಡಪಂಥೀಯ ಚಿಂತನೆ ಮತ್ತೆ ಪ್ರವರ್ಧಮಾನಕ್ಕೆ ಬರುತ್ತದೆ. ನೋಟ್ ಮೈ ವರ್ಡ್ಸ್.
ಸಹೋದರ ಶೆಟ್ಕರರ ಸಂಕಟಕ್ಕೆ ನಮ್ಮ ಸಹಾನುಭೂತಿಯಿದೆ
‘ಬಾವ’ ಇನ್ನೂ ಪುಂಗಿಯೂದಿಯೇ ಇಲ್ಲ; ‘ನಾಗ’ ನರ್ತಿಸುತ್ತಿದೆ!
Sripad, why this kiddish behaviour from you towards me? I’ve congratulated Rakesh but you write nonsense about me. Ideological hatred has reduced you to a kid who wants to start a fight. It’s a pity that you chose this occasion for displaying your pettiness.
Right observation.
s.dinni ಬಹಳೇ ಚೆನ್ನಾಗಿದೆ.ನಿಮ್ಮ ಬಳಗ ಇನ್ನು ಬೆಳೆಯಲಿ.
Congratulations Rakesh!
ಪ್ರಿಯ ಮಿತ್ರ ಶೆಟ್ಕರ್ ಅವರಿಗೆ ಸಪ್ರೇಮ ವಂದನೆಗಳು —-ಒಂದು ಬ್ಲಾಗ್ ಅನ್ನು ಆರು ವರ್ಷಗಳ ಕಾಲ (ತಮ್ಮ ದಿನನಿತ್ಯದ ಅನಿವಾರ್ಯವಾದ ಹತ್ತು ಹನ್ನೆರೆಡು ಗಂಟೆಗಳ ಕೆಲಸದ ನಡುವೆಯೂ) ನಿರಂತರವಾಗಿ ನಡೆಸಿರುವುದು ಹೆಮ್ಮೆ ಪಡಬೇಕಾದ ಸಂಗತಿ. ಈ ಹೊತ್ತಿನಲ್ಲಿ ತಮಗೆ ‘ನಿಲುಮೆ’ ಬಗ್ಗೆ ಇರುವ ಭಿನ್ನಾಭಿಪ್ರಾಯದ ದೆಸೆಯಿಂದ ಧನ್ಯವಾದ ಹೇಳುವುದು ಸಾಧ್ಯವಾಗದೆ ಇರಬಹುದು. ನಿಮ್ಮ ‘ವೈಚಾರಿಕ ಸಂಕಟವನ್ನು’ ನಾನು ಅರ್ಥಮಾಡಿಕೊಳ್ಳಬಲ್ಲೆ. ನೀವು ಬೆನ್ನುತಟ್ಟದಿದ್ದರೆ ಪರವಾಗಿಲ್ಲ; ಆದರೆ ಇಂದೂ ಸಹ ಕಾಲೆಳೆಯುವುದು, ಕುಹಕವಾಡುವುದು, ಕುಚೇಷ್ಟೆ ಮಾಡುವುದು ತರವೇ? ಅದನ್ನು ಮಾಡುವುದಕ್ಕೆ ಇನ್ನೂ ಮುನ್ನೂರ ಅರವತ್ತು ನಾಲ್ಕು ದಿನಗಳು ಇದೆಯಲ್ಲ. ಅಂದು ಮಾಡಿ. ಇಂದೇಕೆ ಮನಸ್ಸನ್ನು,ಮಾತನ್ನು ಕಹಿ ಮಾಡಿಕೊಂಡಿದ್ದೀರಿ? ‘ಮಾತಾಡಿದರೆ ಲಿಂಗ ಮೆಚ್ಚಿ ಅಹುದಹುದೆನ್ನಬೇಕು’, ‘ಮಾತೇ ಜ್ಯೋರ್ತಿಲಿಂಗ’ ಎಂಬುದನ್ನು ತಾವು ಬಲ್ಲಿರಲ್ಲವೇ? ತಾವು ಮತ್ತು ತಮ್ಮ ಸಮಾನ ಮನಸ್ಕ ಗೆಳೆಯರು ಸೇರಿಕೊಂಡು ಹೊಸ ಹಾದಿಯ, ಹೊಸ ಹೊಸ ಯೋಚನೆ ಯೋಜನೆಗಳ ಬ್ಲಾಗು ಶುರುಮಾಡಿ; ಇಲ್ಲ ‘ನಿಲುಮೆ’ಯಲ್ಲೇ ಸಕಾರಣವಾಗಿ, ತರ್ಕ ಬದ್ಧವಾಗಿ ಲೇಖನಗಳನ್ನು ಬರೆಯಲು ಪ್ರಾರಂಭಿಸಿ. ಕೇವಲ ‘ಪ್ರತಿಕ್ರಿಯೆ’,’ಟೀಕೆ’ಗಳಿಗೆ ಮಾತ್ರ ತಮ್ಮ ಅಮೂಲ್ಯ ವೇಳೆ, ಪದ ಸಂಪತ್ತು ಹಾಗೂ ವಿದ್ವತ್ತನ್ನು ವ್ಯರ್ಥಮಾಡಿಕೊಳ್ಳುತ್ತಿದ್ದೀರಿ? ಮತ್ತೆ ಭೇಟಿಯಾಗೋಣ. —ಎಂದಿನಂತೆ ಇಂದೂ ತಮ್ಮವನೇ ಆದ –ಶ್ರೀರಂಗ
ಅಯ್ಯಯ್ಯ, ಶ್ರೀರಂಗರೇ…ನಿಮ್ಮ ಕರುಣಾಮಯ ಮನಸ್ಸಿಗೆ ನನ್ನ ಅನುಕಂಪವಿದೆ. ಈ ಶೆಟ್ಕರ್ ಎಂಬವರು ಎಂದೂ ಸ್ವತಂತ್ರ ಲೇಖನ ಬರೆದ ದಾಖಲೆ ಇಲ್ಲ. ಹಾಗೆ ಬರೆಯುವುದು ಅವರಿಂದ ಆಗುವುದೂ ಇಲ್ಲ. ನಾನಂತೂ ‘ಅಭಿಮಾನಿ’ಯಾಗಿ ಈ ಪುಣ್ಯಾತ್ಮನನ್ನು ಕೇಳಿ ಸಾಕಾಗಿಹೋಗಿದೆ! -ಈ ಜನ್ಮದಲ್ಲಿ ನನ್ನ/ನಿಮ್ಮ ಆಸೆ ಈಡೇರುವುದಿಲ್ಲ-ಬಿಡಿ.
ಈಗ ನೀವು ಬರೆದಿದ್ದೀರಲ್ಲ-ಈ ಮಾತು ಇದಕ್ಕೆ ಇನ್ನೇನೋ ಕಕ್ಕುವ ಕೆಲಸ ಅವರಿಂದಾಗುತ್ತದೆ. ಬ್ಲಾಗ್ ನಡೆಸುವುದಿರಲಿ, ಒಂದು ಸ್ವತಂತ್ರ ಲೇಖನ ಬರೆಯಲೂ ಕೆಲವು ಕನಿಷ್ಠ ಅರ್ಹತೆ/ಯೋಗ್ಯತೆ ಇರಬೇಕಾಗುತ್ತದೆ. ಯಾರೋ ಬರೆದುದನ್ನು ಟೀಕಿಸಲು ಅವರವರು ಕಲಿತ ಮಾತು/ಭಾಷೆಯಷ್ಟೇ ಸಾಕಾಗುತ್ತದೆ.
“ತಾವು ಮತ್ತು ತಮ್ಮ ಸಮಾನ ಮನಸ್ಕ ಗೆಳೆಯರು ಸೇರಿಕೊಂಡು ಹೊಸ ಹಾದಿಯ, ಹೊಸ ಹೊಸ ಯೋಚನೆ ಯೋಜನೆಗಳ ಬ್ಲಾಗು ಶುರುಮಾಡಿ;”
ವಚನಗಳು ಓದಿದ ಮೇಲೆ ಇನ್ನಾವ ಓದಯ್ಯಾ ?
ವಚನಗಳು ಪಚನವಾದ ಮೇಲೆ ಇನ್ನಾವ ಧರ್ಮಗ್ರಂಥವಯ್ಯಾ ?
ವಚನಗಳು ನುಡಿಗೀಲಾಗಿದ ಮೇಲೆ ಇನ್ನಾರ ನೀತಿಯಯ್ಯಾ ?
ವಚನವೆ ದೇವರಾದ ಮೇಲೆ ಇನ್ಯಾಕೆ ದೇವರಯ್ಯಾ ?
ವಿಶ್ವ ಸತ್ಯಂ ಪ್ರಿಯ ಬಸವಣ್ಣ
ವಚನಗಳನ್ನು ಓದಿ ಜಾತಿ ಪದವು ಎಷ್ಟು ಬಾರಿ ವಚನ ಸಾಹಿತ್ಯದಲ್ಲಿ ಬಳಸಲ್ಪಟ್ಟಿದೆ ಎಂದು ಥೀಸಿಸ್ ಬರೆದು ಪಿ ಎಚ್ ಡಿ ಗಿಟ್ಟಿಸುವವರೂ ಇದ್ದಾರೆ ವಿಶ್ವಾರಾಧ್ಯ ಸರ!
ಹಿರಿಯ ಜೀವ ಶ್ರೀರಂಗ ಅವರೇ, ನಿಮ್ಮ ಪ್ರೀತಿ ವಿಶ್ವಾಸಗಳಿಗೆ ಋಣಿ. ನಿಲುಮೆಯ ಬಗ್ಗೆ ನನಗೆ ಯಾವ ಕಹಿ ಭಾವನೆಯಿಲ್ಲ. ನಿಲುಮೆ ಪ್ರಗತಿಪರ ವೇದಿಕೆಯಾಗಿ ಆನ್ಲೈನ್ ಲೋಕದಲ್ಲಿ ವಿಜ್ರುಂಭಿಸಬೇಕು ಶೋಷಿತರ ದಲಿತರ ಸ್ತ್ರೀಯರ ಧ್ವನಿಯಾಗಬೇಕು ಎಂದು ನಿಸ್ಪೃಹವಾಗಿ ಹಾರೈಸುವವರಲ್ಲಿ ನಾನೂ ಒಬ್ಬ. ನಿಲುಮೆಯ ಹುಡುಗರು ಒಳ್ಳೆಯ ಹೃದಯದವರು ಆದರೆ ಬಲಪಂಥೀಯ ಪ್ರಭಾವಕ್ಕೆ ಒಳಗಾಗಿ ಕುರುಡಾಗಿದ್ದಾರೆ ಪಥಭ್ರಷ್ಟರಾಗಿದ್ದಾರೆ. ಅವರನ್ನು ತಿದ್ದಿ ಸರಿಯಾದ ದಾರಿಗೆ ತರುವ ಕೆಲಸವನ್ನು ನಿಮ್ಮಂತಹ ಹಿರಿಯರು ಮಾಡಬೇಕಿತ್ತು. ನಿಮ್ಮ ಕೆಲಸವನ್ನು ನಾನು ಮಾಡುತ್ತಿದ್ದೇನೆ.
ಕುರುಡ ದಾರಿ ತೋರಿದಂತಾಯ್ಯತಯ್ಯ
ಇಂದು ಅಮೆರಿಕೆಯ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ಟ್ರಂಪ್ ಮಹಾಶಯನ ಬಗ್ಗೆ ನನ್ನದೂ ಇದೇ ಅಭಿಪ್ರಾಯವಾಗಿದೆ. ಮಾನವೀಯತೆಯ ಮಾನವ ರೂಪವೇ ಆಗಿರುವ ಒಬಾಮಾ ನಂತರ ಅಮೆರಿಕೆಯ ಕರಿಯರನ್ನೂ ಬಡವರನ್ನೂ ಅಲ್ಪಸಂಖ್ಯಾತರನ್ನೂ ಸ್ತ್ರೀಯರನ್ನೂ ಕಾಪಾಡುವವರು ಯಾರು ಎಂದು ಕಳವಳಗೊಂಡಿದ್ದೇನೆ. ಅಮೆರಿಕೆಯ ಹಿಂದೂ ಸಂಘಟನೆಗಳು ಮಾತ್ರ ಟ್ರಂಪ್ ಬಾಲಂಗೋಚಿಗಳಾಗಿ ಧನ್ಯತೆಯ ಭಾವದಲ್ಲಿ ಅವನ ಗುಣಗಾನ ಮಾಡುತ್ತಿವೆ.
ನಿಲುಮೆ ಪ್ರಗತಿಪರ ವೇದಿಕೆಯಾಗಿ ಆನ್ಲೈನ್ ಲೋಕದಲ್ಲಿ ವಿಜ್ರುಂಭಿಸಬೇಕು ಶೋಷಿತರ ದಲಿತರ ಸ್ತ್ರೀಯರ ಧ್ವನಿಯಾಗಬೇಕು
Gowtham, This is the view of most readers of Nilume except Hindutva trolls. Shetkar has done a great job of conscientious dissenter. Shetkar is the reason why most readers visit Nilume. Sripad and Sriranga must not underestimate the contribution of Shetkar and other conscientious readers to Nilume’s growth.
Well said Gowtham! This is indeed the wish of most readers of Nilume.
ಓತಿಕಾಟಕ್ಕೆ ಬೇಲಿಯೂ
ಹಾಗಲಕಾಯಿಗೆ ಬೇವಿನಕಾಯಿಯೂ ಭೇಷ್ ಎಂದುಕೊಂಡಂತೆ ನಾಗಿ, ಗೌತಂ ,ಸಲಾಮ ಅವರ ಕೂಟ!
+1111111111111111
good job mr.rakesh shetty