ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 6, 2017

19

ಸಾಹಿತ್ಯ ಪರಿಷತ್ ಯಾರೊಬ್ಬರ ಖಾಸಗಿ ಆಸ್ತಿಯಲ್ಲ..!

‍ನಿಲುಮೆ ಮೂಲಕ

ಕಿರಣ್ ಕಿಜೋ
ಸಂಶೋಧನಾ ವಿದ್ಯಾರ್ಥಿ
ದ್ರಾವಿಡ ವಿಶ್ವವಿದ್ಯಾಲಯ, ಕುಪ್ಪಂ.
ಆಂಧ್ರ ಪ್ರದೇಶ.

imagesಮೊದಲಿಗೆ ಭೈರಪ್ಪನವರನ್ನು ಶಿವಮೊಗ್ಗದ ಸಾಹಿತ್ಯ ಸಮ್ಮೇಳನದಿಂದ ದೂರವಿಡುವಲ್ಲಿ ಯಶಸ್ವಿಯಾದ ರಾಜೇಂದ್ರ ಚೆನ್ನಿ ಹಾಗೂ ಅವರ ಪರಮ ಸಹಿಷ್ಣತೆಯ ಎಲ್ಲಾ ಸಂಗಡಿಗರಿಗೂ ಅಭಿನಂದನೆಗಳು! ಕೆಲ ದಿನಗಳ ಹಿಂದಷ್ಟೆ, ಸಾಹಿತ್ಯ ಸಂಭ್ರಮದ ಅಂಗಳದಲ್ಲಿ ಚಪ್ಪಲಿಯ ಮೂಲಕ ತಮ್ಮ ಶಕ್ತಿ ಪಾರಮ್ಯದೊಂದಿಗೆ ಗೆಲುವಿನ ನಗೆ ಬೀರಿದ್ದ ಎಡ ಪಡೆ, ಇದೀಗ ಶಿವಮೊಗ್ಗದಲ್ಲಿ ಮತ್ತೊಂದು ಸುತ್ತಿನ ಯಶಸ್ಸನ್ನು ಸಾಧಿಸಿ, ಗೆಲುವಿನ ಕೇಕೆ ಹಾಕಿದೆ. ಧಾರವಾಡದ ಮ್ಯಾನ್ ಆಫ್ ದಿ ಸೀರಿಸ್ ಚಪ್ಪಲಿ ಚಂದ್ರಶೇಖರ ಹಾಗೂ ಕುಂ.ವೀರಭದ್ರಪ್ಪನವರಾದರೆ, ಶಿವಮೊಗ್ಗೆಯಲ್ಲಿ ರಾಜೇಂದ್ರ ಚೆನ್ನಿ! ಈ ರೀತಿಯ ಗೆಲುವುಗಳು ಅವರಿಗೇನು ಹೊಸದಲ್ಲ ಬಿಡಿ. ದೊಡ್ಡ ದಾಖಲೆಯ ಇತಿಹಾಸವೇ ಅವರ ಬೆನ್ನ ಹಿಂದಿದೆ!

ಕನ್ನಡ ಸಾಹಿತ್ಯ ಲೋಕ, ದಿನ ದಿನಕ್ಕೂ ಅಪಾಯದ ಹಂತವನ್ನು ತಲುಪುತ್ತಿದೆ. ಕನ್ನಡ ಸಾಹಿತ್ಯ ಪರಂಪರೆ ನೂರಾರು ಚರ್ಚೆ, ವಾಗ್ವಾದ ಹಾಗೂ ಅನುಸಂಧಾನಗಳಿಗೆ ಸಾಕ್ಷಿಯಾಗಿದ್ದಿದೆ. ಲೆಕ್ಕವಿಲ್ಲದಷ್ಟು ಭಿನ್ನ ಭಿನ್ನ ಧ್ವನಿಗಳು ಕನ್ನಡದ ನೆಲೆಯಿಂದ ಹೊಮ್ಮಿವೆ. ಭಿನ್ನ ಭಿನ್ನ ವಿಚಾರಗಳು ಧಾರೆಗಳಾಗಿ, ಧಾರೆಗಳು ತೊರೆಗಳಾಗಿ, ತೊರೆಗಳು ನದಿಗಳಾಗಿ ಹರಿದಿವೆ. ಎಲ್ಲ ರೀತಿಯ ವಿಚಾರಧಾರೆಗಳನ್ನು ಕನ್ನಡ ಸಾಹಿತ್ಯ ಪುರಸ್ಕರಿಸಿದೆ. ಭಿನ್ನ ಸ್ವರಗಳಿಗೂ ಅವಕಾಶ, ಸ್ಥಾನ ನೀಡಿದ್ದು ಕನ್ನಡ ಸಾಹಿತ್ಯ ಪರಂಪರೆಯ ಹೆಚ್ಚುಗಾರಿಕೆಯೇ ಸರಿ. ಇದನ್ನು ಕನ್ನಡದ ಮೊದಲ ಕೃತಿಯಾದ ಕವಿರಾಜಮಾರ್ಗದಲ್ಲೇ ಅದರ ಕತೃ “ಕಸವರಮೆಂಬುದು ನೆರೆ ಸೈರಿಸಲಾರ್ಪೊಡೆ ಪರಧರ್ಮಮಂ ಪರ ವಿಚಾರಮಂ” ಎಂದು ಹೇಳಿದ್ದಾನೆ. ಕನ್ನಡ ಸಾಹಿತ್ಯ ಪರಂಪರೆ ಎಷ್ಟು ವಾಗ್ವಾದ, ಚರ್ಚೆ, ಭಿನ್ನ ದನಿಗಳಿಗೆ ಸಾಕ್ಷಿಯಾಗಿದೆಯಲ್ಲವೇ? ಆದರೆ ಸದ್ಯ ಕನ್ನಡ ಸಾಹಿತ್ಯ ವಲಯ ಸಾಗುತ್ತಿರುವ ಹಾದಿ, ತಲುಪುತ್ತಿರುವ ಅಂಚನ್ನು ನೋಡುವುದಾದರೆ ಕನ್ನಡ ಸಾಹಿತ್ಯಕ್ಕಂತೂ ಇದೊಂದು ಕೇಡಿನ ಸಮಯವೆಂದೆ ಹೇಳಬೇಕಿದೆ.

ರಾಜೇಂದ್ರ ಚೆನ್ನಿ ಉತ್ತಮ ಪ್ರೊಫೆಸರ್‍ಗಳಲ್ಲೊಬ್ಬರು. ಅವರ ಕೆಲ ವಿಮರ್ಶಾ ಬರಹಗಳು ಖಂಡಿತವಾಗಿಯೂ ಮೇಲ್ ದರ್ಜೆಯವೇ. ಅದೆಲ್ಲದರ ಕುರಿತಾಗಿ ಗೌರವಾದರಗಳನ್ನಿಟ್ಟುಕೊಂಡೇ, ಅವರಲ್ಲಿಯ ಭೈರಪ್ಪರ ವಿರೋಧಿಯನ್ನು ಪ್ರಶ್ನಿಸಲೇಬೇಕಿದೆ. ರಾಜೇಂದ್ರ ಚೆನ್ನಿ ಸೇರಿದಂತೆ ಅವರ ಸಹಿಷ್ಣತೆಯ ಸಂಗಡಿಗರು ಎಲ್ಲ ರೀತಿಯಿಂದಲೂ ಭೈರಪ್ಪನವರ ಕೃತಿಗಳನ್ನು ಮತ್ತು ಚಿಂತನೆಗಳನ್ನು ಪ್ರಶ್ನಿಸಲು, ನಿರಾಕರಿಸಲು ಅರ್ಹರು. ಅವರ ಆ ಸ್ವಾತಂತ್ರ್ಯದ ಕುರಿತಾಗಿ ಗೌರವವಿದೆ. ಆದರೆ ಒಬ್ಬ ಲೇಖಕನನ್ನೇ ಬಹಿಷ್ಕರಿಸುವುದೆಂದರೇ? ಅವರನ್ನು ಸಾಹಿತ್ಯ ಸಮ್ಮೇಳನದಿಂದ ದೂರವಿಡುವುದಕ್ಕಾಗಿ ಹೋರಾಟಕ್ಕೆ ಮುಂದಾಗುವುದು, ಪ್ರತಿಭಟಿಸುವುದು ಯಾವ ಸೀಮೆಯ ಹೆಚ್ಚುಗಾರಿಕೆ? ಭಿನ್ನ ಧ್ವನಿಗಳಿಗೆ ಕಿವಿಯಾಗುವ ಸೈರಣೆಯನ್ನೇ ನೀವು ಕಳೆದುಕೊಂಡು ಹೋರಾಟವನ್ನೇ ಸಂಘಟಿಸುತ್ತಿನೆಂದರೆ, ನೀವು ಯಾವ ಮಾದರಿಯ ಸಾಹಿತ್ಯಿಕ ವಾತಾವರಣಕ್ಕೆ ಕಾರಣರಾಗುತ್ತಿದ್ದಿರೆಂಬ ಕನಿಷ್ಟ ಅರಿವಿದೆಯೇ? ನಿಮ್ಮ ನಿರೀಕ್ಷೆಯ ಸಾಹಿತ್ಯಿಕ ಜಗತ್ತಿನಲ್ಲಿ ಭಿನ್ನ ಸ್ವರಕ್ಕೆ, ಭಿನ್ನ ದನಿಗೆ ಜಾಗವೇ ಇಲ್ಲವೇ? ಕವಿರಾಜಮಾರ್ಗಕಾರನಿಂದ ಹಿಡಿದು ಪಂಪ, ಆಂಡಯ್ಯ, ಹರಿಹರ ವಚನ ಸಾಹಿತ್ಯಾದಿಗಳನ್ನು ಗಮನಿಸುವುದಾದರೆ ಇಡೀ ಕನ್ನಡ ಸಾಹಿತ್ಯವೇ ತನ್ನ ಒಡಲಾಳದಲ್ಲಿ ಪ್ರತಿರೋಧದ ಸಾಹಿತ್ಯವನ್ನೇ ತುಂಬಿಕೊಂಡಿದೆ. ಆದರೆ ಇವತ್ತಿನ ಸಂದರ್ಭದ ರೀತಿಯಲ್ಲಿ ಭಿನ್ನ ಧ್ವನಿಯ, ಭಿನ್ನ ಚಿಂತನೆಯ, ಭಿನ್ನ ಹಾದಿಯ ಬರಹಗಾರರಿಗೆ ಜಾಗವೇ ಇಲ್ಲ, ಸ್ಥಾನವೇ ಇಲ್ಲವೆಂಬಂತೆ ಪ್ರತಿಭಟಿಸುವುದು ಮತ್ತು ಈ ರೀತಿಯ ಪ್ರತಿಭಟನೆಯೇ ತಮ್ಮ ನೈತಿಕ ಅಡಿಪಾಯ ಎಂಬ ಚಿಂತನೆ ಬಲಗೊಳ್ಳುತ್ತಿರುವುದು ನಿಜಕ್ಕೂ ಆತಂಕಕಾರಿ. ಇದು ನಮ್ಮ ಪ್ರಜಾತಾಂತ್ರಿಕ ವ್ಯವಸ್ಥೆಗೂ ಮತ್ತು ನಮ್ಮ ನಾಡಿನ ಮುಕ್ತ ಸಾಹಿತ್ಯ ಚಿಂತನಾ ಪರಂಪರೆಗೂ ಮಾಡುತ್ತಿರುವ ಅನುಮಾನವೇ ಸರಿ.

ಒಬ್ಬ ಪ್ರಜ್ಞಾವಂತ ವಿಮರ್ಶಕರೆನಿಸಿದವರ ಪ್ರಶ್ನೆ, ಹೋರಾಟ, ಬಹಿಷ್ಕಾರಗಳು ಯಾವ ನೆಲೆಯಿಂದ ಹೊರಾಡಬೇಕೆಂಬುದು ಮುಖ್ಯವಾಗುತ್ತದೆಯಲ್ಲವೇ? ಸಾಹಿತ್ಯಿಕವಾಗಿ ಭೈರಪ್ಪರೊಂದಿಗೆ ಎದುರುಗೊಳ್ಳದೆ, ಕೇವಲ ಭಿನ್ನ ಚಿಂತನೆಯವರೆಂಬ ಕಾರಣವೇ ಮೊದಲುಮಾಡಿ ವಿರೋಧಿಸುವುದರಲ್ಲಿ ಯಾವ ಹೆಚ್ಚುಗಾರಿಕೆಯೂ ಕಾಣುವುದಿಲ್ಲ. ನನ್ನ ವೈಚಾರಿಕತೆಯನ್ನು ಒಪ್ಪುವವನಲ್ಲ, ನಮ್ಮ ಮಾರ್ಗದಲ್ಲಿ ವಿಶ್ವಾಸವಿಟ್ಟಿಲ್ಲ, ನಾನು ನಂಬಿಕೊಂಡ ತತ್ವ ಆದರ್ಶಗಳನ್ನು ಪ್ರಶ್ನಿಸುತ್ತಾನೆಂದ ಮಾತ್ರಕ್ಕೆ ಲೇಖಕನೊಬ್ಬನನ್ನು ಜೀವ ವಿರೋಧಿ, ಮನುಷ್ಯ ವಿರೋಧಿಯೆಂದು ಹಣೆಪಟ್ಟಿ ಹಚ್ಚುವುದು ವಿಮರ್ಶೆಯಾಗುವುದಿಲ್ಲ. ಬರೀ ಕಿಡಿಗೇಡಿತನವಷ್ಟೇ ಆದೀತು.

ರಾಜೇಂದ್ರ ಚೆನ್ನಿ, ಭೈರಪ್ಪನವರು ಜಾತಿ, ವರ್ಣ ವ್ಯವಸ್ಥೆ, ಅಸ್ಪರ್ಷತೆ ಮೊದಲಾದವುಗಳ ಸಮರ್ಥಕರೆಂದು, ಸ್ತ್ರೀ ದ್ವೇಷಿಯೆಂದು ಮತ್ತು ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸುಮುದಾಯದ ವಿರೋಧಿಯೆಂದು, ಆರೆಸ್ಸೆಸ್ ವಿಚಾರಗಳನ್ನು ಬೆಂಬಲಿಸುವವರೆಂದು, ಭೈರಪ್ಪನವರು ಮಾನವ ವಿರೋಧಿ, ಜೀವ ವಿರೋಧಿ ಎಂಬಿತ್ಯಾದಿ ಆರೋಪ ಪಟ್ಟಿಯನ್ನು ಜನತೆ ಮುಂದಿಟ್ಟಿದ್ದಾರೆ. ಭೈರಪ್ಪನವರು ಈ ರೀತಿಯ ಆರೋಪಗಳಿಗೆ ಗುರಿಯಾಗುವುದು ಇಂದು ನಿನ್ನೆಯದೇನಲ್ಲ. ಭೈರಪ್ಪನವರನ್ನು ಸಾಹಿತ್ಯಿಕವಾಗಿ, ವೈಚಾರಿಕವಾಗಿ ಎದುರಿಸಲಾರದ ಗುಂಪು ಇಂತಹ ಟೊಳ್ಳು ಕಥಾನಕಗಳನ್ನು ಹೆಣೆಯುತ್ತಲೇ ಅದನ್ನೇ ವಿಮರ್ಶೆಯೆಂದು ನಂಬಿಸುವ ಹೊಸ ಪ್ರಸ್ಥಾನವನ್ನೇ ಆರಂಬಿಸಿದ್ದಾರೆ! ಸವಕಲು ಪದಗಳು, ಚರ್ವಿತಚರ್ವಣ ಆರೋಪಗಳಿಂದ ಓದುಗರು ಬೇಸರಗೊಂಡಿದ್ದಾರೆ. ಕೊನೆ ಪಕ್ಷ ಭೈರಪ್ಪನವರನ್ನು ತೆಗಳುವಲ್ಲಿಯಾದರೂ ಈ ವರ್ಗ ಹೊಸತನವನ್ನಾದರೂ ತೋರಬೇಕಲ್ಲವೇ?!

ರಾಜೇಂದ್ರ ಚೆನ್ನಿ ಹಾಗೂ ಅದೇ ರೀತಿಯ ಮಾನಸಿಕತೆ, ಬೌದ್ಧಿಕತೆಯನ್ನು ಹೊಂದಿದ ಹಲವರು ನಮ್ಮ ವಿಮರ್ಶಾ ವಲಯದ ಪ್ರಧಾನ ಭೂಮಿಕೆಯಲ್ಲೇ ಕಾಣಸಿಗುತ್ತಾರೆ. ಈ ವರ್ಗದ ಹಲವರು ವಿಮರ್ಶೆಯನ್ನು ಆರಂಭಿಸಿ ನಾಲ್ಕೈದು ದಶಕಗಳು ಸಂದಿವೆಯಾದರೂ, ಇದುವರೆಗೂ ಭೈರಪ್ಪರ ಸಾಹಿತ್ಯದ ಪ್ರಧಾನ ಕಾಳಜಿಯಾಗಲಿ, ತಾತ್ವಿಕತೆಯಾಗಲಿ ಅರ್ಥವಾಗಿಲ್ಲ. ರಸಸೃಷ್ಟಿಯೇ ಅವರ ಸಾಹಿತ್ಯದ ಆತ್ಯಾಂತಿಕ ಗುರಿಯೆಂದು, ಯಾವುದೇ ಅಜೆಂಡಾ, ಹೋರಾಟ ಮೊದಲಾದವುಗಳು ತಮ್ಮ ಉದ್ದೇಶವಲ್ಲವೆಂದು ಹಲವು ಸಂದರ್ಭದಲ್ಲಿ ಸ್ವತಃ ಭೈರಪ್ಪನವರೇ ಸಾಕಷ್ಟೂ ಬಾರಿ ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲದೇ ಭಾರತೀಯ ಕಾವ್ಯ ಮೀಮಾಂಸೆಯ ಪರಂಪರೆ ದೃಷ್ಟಿಯಲ್ಲಿ ನೋಡಿದಾಗಿಯೂ ಅಲ್ಲೆಲ್ಲಾ ನಮಗೆ ಮುಖ್ಯವಾಗುವುದು ರಸಾನುಭವವೇ. ಭೈರಪ್ಪರ ಸಾಹಿತ್ಯಗಳನ್ನು ರಸ ಚಿಂತನೆಯ ಹಿನ್ನೆಲೆಯಲ್ಲಿ ಇವರಲ್ಲಿ ಎಷ್ಟು ಜನ ಅಭ್ಯಾಸಿಸಿದ್ದಾರೆ?

ಭೈರಪ್ಪನವರನ್ನು ಸ್ತ್ರೀ ದ್ವೇಷಿಯೆಂಬುದು ಹುಸಿ ಆರೋಪವಷ್ಟೇ. ಭೈರಪ್ಪನವರ ಎಲ್ಲಾ ಕಾದಂಬರಿಗಳಲ್ಲೂ ಪ್ರಮುಖವಾಗಿ ಕಾಣಿಸಿಕೊಳ್ಳುವುದು ಸ್ತ್ರೀ ಪಾತ್ರಗಳೇ. ಭೈರಪ್ಪನವರು ಸೃಷ್ಟಿಸಿದಷ್ಟು ಗಟ್ಟಿಯಾದ ಹೆಣ್ಣು ಪಾತ್ರಗಳನ್ನು ಕನ್ನಡ ಕಾದಂಬರಿಯಲ್ಲೇ ಬೇರೊಬ್ಬ ಕಾದಂಬರಿಕಾರ ಸೃಷ್ಟಿಸಿಲ್ಲವೆನ್ನಬಹುದು. ಕವಲು ಕಾದಂಬರಿ ಸ್ತ್ರೀ ದ್ವೇಷದಿಂದ ತುಂಬಿದೆ ಎನ್ನುವ ಆರೋಪಗಳು ಸಾಮಾನ್ಯವಾಗಿದೆ. ಆದರೆ ಕವಲು ಪ್ರಶ್ನಿಸುವುದು, ಮಹಿಳಾಪರವಾದ ಕಾನೂನುಗಳು ಇನ್ನೊಂದು ರೀತಿಯಲ್ಲಿ ಮಹಿಳೆಯನ್ನೇ ಹೇಗೆ ಶೋಷಣೆಗೆ ಕಾರಣವಾಗುತ್ತವೆಂಬುದನ್ನು ಮತ್ತು ಕಾನೂನುಗಳ ದುರ್ಬಳಕೆ ಕುರಿತಾಗಿ. ಈ ವಿಮರ್ಶಾ ಪಂಥೀಯರು ಸೊಸೆಯನ್ನು ಮಾತ್ರ ಮಹಿಳೆಯೆಂದು ಪರಿಗಣಿಸಿದಂತಿದೆ. ಹಾಗಾದರೆ ಮುದಿ ಅತ್ತೆ ಹೆಣ್ಣಲ್ಲವೇ? ಅವಳಿಗೆ ಆಗುವ ನೋವನ್ನು ಪ್ರಶ್ನಿಸಿದರೆ ಮಹಿಳಾ ವಿರೋಧಿ ಎನ್ನುವುದರಲ್ಲಿ ಅರ್ಥವಿದೆಯೇ?

ಭೈರಪ್ಪನವರನ್ನು ಜಾತಿವಾದಿಯೆಂದು, ಅಸ್ಪರ್ಷತೆಯ ಪ್ರತಿಪಾದಕರೆಂಬ ಆರೋಪಗಳು ಯಾವುದೋ ಕಾಲದಲ್ಲಿ ಮಣ್ಣು ಸೇರಿಯಾಗಿದೆ. ಭಾರತೀಯ ಸಮಾಜದಲ್ಲಿಯ ಜಾತಿ ವ್ಯವಸ್ಥೆಯ ಮಜಲುಗಳನ್ನು ‘ದಾಟು’ ಕಾದಂಬರಿ ಮೂಲಕ ಭೈರಪ್ಪ ಏಳೆಏಳೆಯಾಗಿ ಚಿತ್ರಸಿದ್ದಾರಲ್ಲದೇ, ಆ ರೀತಿಯ ವಸ್ತು ನಿಷ್ಠ ಜಾತಿ ವ್ಯವಸ್ಥೆಯ ವಿಶ್ಲೇಷಣೆ ಭಾರತೀಯ ಸಾಹಿತ್ಯದಲ್ಲೇ ನಡೆದಿಲ್ಲವೆಂದು ವಿಮರ್ಶಕರಿಂದ ಮೆಚ್ಚುಗೆಯನ್ನು ಪಡೆದಿದೆ. ಆ ವಿಮರ್ಶಾ ವಲಯದ ಮೇಲೆ ನಿಮಗೆ ವಿಶ್ವಾಸವಿಲ್ಲ ಬಿಡಿ. ಅಂತರ್ಜಾತಿ ವಿವಾಹಗಳ ಕುರಿತಾಗಿ ಭೈರಪ್ಪನವರ ಅಭಿಪ್ರಾಯವೆನೆಂದು ಭೈರಪ್ಪನವರ ಓದುಗರಿಗೆ ತಿಳಿದಿರುವುದರಂದ ನಿಮ್ಮ ವಿಮರ್ಶಾ ವರ್ಗದ ಮಾನ್ಯತೆಯೇನು ಸಾಹಿತ್ಯಾಭಿಮಾನಿಗಳಿಗೆ ಬೇಕಿಲ್ಲ.

ಭೈರಪ್ಪನವರನ್ನು ಕ್ರಿಶ್ಚಿಯನ್ ಮತ್ತು ಮುಸ್ಲಿಂ ಸಮುದಾಯಗಳ ವಿರೋಧಿಗಳೆಂದು ಹೇಳುವ ಕುತಂತ್ರವೂ ಇದೆ. ಭೈರಪ್ಪ ತಮ್ಮ ಮೊದಲ ಕಾದಂಬರಿ ‘ಧರ್ಮಶ್ರೀ’ಯಲ್ಲಿಯೇ, ಮಿಷಿನರಿಗಳು ನಡೆಸುವ ಆಮೀಷದ ಮತಾಂತರವನ್ನು ಪ್ರಶ್ನಿಸುತ್ತಾರೆಂಬ ಕಾರಣಕ್ಕೆ ಅವರನ್ನು ಕ್ರಿಶ್ಚಿಯನ್ ಸಮುದಾಯದ ವಿರೋಧಿಯೆಂದು ಬ್ರ್ಯಾಂಡ್ ಮಾಡುವುದು ಎಷ್ಟು ಸರಿ? ಹಾಗೇ ನೋಡುವುದಾರೆ, ಪುನರುತ್ಥಾನ ಕಾಲದಿಂದಲೂ ಮತಾಂತರವನ್ನು ವಿರೋಧಿಸುವವರಿದ್ದಾರೆ. ದಯಾನಂದ ಸರಸ್ವತಿ, ರಾಜಾರಾಂ ಮೋಹನರಾಯರು ಸೇರಿದಂತೆ ಮಹತ್ಮಾ ಗಾಂಧಿಯವರು ಸಹ ಮತಾಂತರವನ್ನು ವಿರೋಧಿಸಲಿಲ್ಲವೇ? ನೀವು ಮಾದರಿಯಾಗಿಟ್ಟುಕೊಳ್ಳುವ ಕನ್ನಡದ ಕುವೆಂಪು, ಕಾರಂತ ಹಾಗೂ ಮಾಸ್ತಿಯವರಲ್ಲಿ ಮತಾಂತರದ ವಿರೋಧಿ ಎಳೆಗಳು ಕಾಣುವುದಿಲ್ಲವೇ? ಹಾಗೆಂದ ಮಾತ್ರಕ್ಕೆ ಅವರೆಲ್ಲರನ್ನು ಸಾರಾಸಗಟಾಗಿ ಕ್ರಿಶ್ಚಿಯನ್ ಸಮುದಾಯದ ವಿರೋಧಿಗಳೆನ್ನುವುದು ಹುಂಬುತನವಾಗುವುದಿಲ್ಲವೇ? ಭೈರಪ್ಪನವರು ‘ಆವರಣ’ ಕಾದಂಬರಿಯಲ್ಲಿ ಮುಸ್ಲಿಂರ ಅರಸರ ದಬ್ಬಾಳಿಕೆ, ಹಿಂಸೆಯ ಪ್ರವೃತ್ತಿ, ಕಾಮುಕತನ ಇತ್ಯಾದಿಗಳನ್ನು ಸೂಕ್ತ ಸಾಕ್ಷ್ಯಾಧಾರಗಳ ಹಿನ್ನೆಲೆಯಲ್ಲಿ ಸೃಜನಾತ್ಮಕವಾಗಿ ಚಿತ್ರಿಸಿದ್ದಾರೆ. ಇತಿಹಾಸದ ಕಡು ವಾಸ್ತವಗಳನ್ನು ಹೇಗೆ ಗೋಚರಗೊಳ್ಳದೇ ಕತ್ತಲಲ್ಲಿಟ್ಟು ಸುಳ್ಳಿನ ಕತೆಗಳನ್ನೆ ನಿಜವೆಂದು ತೋರುತ್ತಿರುವ ಕಾಲದಲ್ಲಿ ವಾಸ್ತವದ ಇತಿಹಾಸವನ್ನು ಅನಾವರಣಗೊಳಿಸಿದ್ದಾರಷ್ಟೇ. ಯಾರದೋ ವಿರೋಧವನ್ನು ಎದುರಿಸಬೇಕಾದೀತೆಂದು ಕಣ್ಣೇದುರಿನ ಸತ್ಯಕ್ಕೆ ಬೆನ್ನು ತೋರುವ ಸಾಹಿತಿಯಂತೂ ಭೈರಪ್ಪನವರಲ್ಲ.

ಕನ್ನಡದ ಗಂಭೀರ ಓದುಗರು ಹಾಗೂ ವಿಮರ್ಶಕರು ಭೈರಪ್ಪನವರನ್ನು ಕನ್ನಡ ಬರಹದ ಹಾಗೂ ಚಿಂತನೆಯ ಮುಖ್ಯ ಪ್ರತಿನಿಧಿಯೆಂದು ಪರಿಗಣಿಸಿಲ್ಲವೆಂದು, ಚೆನ್ನಿಯವರು ಆಂತ್ಯಾಂತಿಕವಾಗಿ ಘೋಷಿಸಿಬಿಟ್ಟಿದ್ದಾರೆ. ಚೆನ್ನಿಯವರ ಈ ಘೋಷಣೆಯ ನೆಲೆ, ಭೈರಪ್ಪರ ಕಾದಂಬರಿ ಓದುಗರ ಕುರಿತಾಗಿನ ಉಡಾಫೆಯೊಂದೆ. ಭೈರಪ್ಪರ ಕಾದಂಬರಿಗಳನ್ನು ಬಿಡುಗಡೆ ಮೊದಲೇ ಕಾಯ್ದಿರಿಸಿ ಓದುವ ವಿಶಾಲ ವರ್ಗವನ್ನು ಹುಡುಗಾಟಿಕೆಯ ಓದುಗ ವರ್ಗವೆಂದೇ ಭಾವಿಸಿದ್ದಾರೆ. ಭೈರಪ್ಪರ ಸಾಹಿತ್ಯವನ್ನೇ ಲಘುವಾಗಿ ಸ್ವೀಕರಿಸುವವರು ಅವರ ಓದುಗರನ್ನು ಹಗುರವಾಗಿ ತಿಳಿಯುವುದರಲ್ಲೇನು ವಿಶೇಷವಿಲ್ಲ ಬಿಡಿ. ಆದರೆ ಚೆನ್ನಿಯವರು ಹೇಳುವಂತೆ, ಭೈರಪ್ಪರ ವಿಚಾರಗಳನ್ನು ಕನ್ನಡದ ವಿಮರ್ಶಾ ವರ್ಗ ಪ್ರಧಾನವಾಗಿ ಸ್ವೀಕರಿಸಿಲ್ಲ. ಅದಕ್ಕಿರುವ ಕಾರಣಗಳೆನೆಂಬುದು ಚೆನ್ನಿಯವರಿಗೇನೆ ಚೆನ್ನಾಗಿ ತಿಳಿದಿದೆ. ಭೈರಪ್ಪನವರು, ವೈಜ್ಞಾನಿಕ ಕಾದಂಬರಿ ‘ಯಾನ’ ಬರೆದಾಗ ಕನ್ನಡ ವಿಮರ್ಶೆಯ ಜಗತ್ತು ‘ಹಳೆಯ ಚೌಕಟ್ಟಿನಲ್ಲಿ ಹೊಸ ರಚನೆ’ ಎಂಬಲ್ಲಿಂದು ಒಂದಿನೀತೂ ಮುಂದೆ ಸಾಗಲೇ ಇಲ್ಲವಲ್ಲ?

ಭೈರಪ್ಪ ಹಾಗೂ ಭೈರಪ್ಪರನ್ನು ಬೆಂಬಲಿಸುವ ಸಾಹಿತಿಗಳ ಬರಹಗಳು ಕೂಡ ಕನ್ನಡ ಸಂಪ್ರದಾಯಕ್ಕೆ ಮುಖ್ಯವಾಗಿದ್ದನ್ನು ಏನು ಸೇರಿಸಿಲ್ಲವೆಂದು ಚೆನ್ನಿ ಹೇಳಿದ್ದಾರೆ. ದಟ್ಟ ಅನುಭವದ ಮೂಸೆಯಲ್ಲಿ ಕಾದಂಬರಿಗಳನ್ನು ಬರೆಯುವವರ ಪೈಕಿ ಕಾರಂತರ ನಂತರದ ಸ್ಥಾನ ಭೈರಪ್ಪನವರದ್ದೇ. ಇದು ಚೆನ್ನಿಯಂತವರಿಗೆ ತಿಳಿಯದ ವಿಚಾರವೇನಲ್ಲ. ಆದರೆ ಅವರು ನಂಬಿಕೊಂಡ ಐಡಿಯಾಲಜಿ ಅವರ ಪ್ರಜ್ಞೆಯನ್ನು ಕುರುಡಾಗಿಸಿದೆ ಅಷ್ಟೇ. ಚೆನ್ನಿಯವರು ಭೈರಪ್ಪರ ಕೊಡುಗೆಯ ಪ್ರಶ್ನೆಯೆತ್ತುವುದಕ್ಕಿಂತ ತಮ್ಮ ಕೊಡುಗೆಯ ಕುರಿತಾಗಿ ಪ್ರಶ್ನಿಸಿಕೊಂಡಿದ್ದರೆ ಇಷ್ಟೆಲ್ಲಾ ಚರ್ಚೆಯ ಅಗತ್ಯವೇ ಇರಲಿಲ್ಲವೆನಿಸುತ್ತದೆ. ಕನ್ನಡ ಸಾಹಿತ್ಯ ಪರಂಪರೆಗೆ ಎಡ ಸಂಗಡಿಗರು ಯಾವ ಮುಖ್ಯವಾದದ್ದನ್ನು ಸೇರಿಸಿದ್ದಾರೆ? ಕನ್ನಡ ಸಾಹಿತ್ಯದ ಓದುಗ ವರ್ಗವನ್ನು ಎಷ್ಟು ವಿಸ್ತರಿಸಿದ್ದಾರೆ? ನಿಮ್ಮ ವಿಮರ್ಶಾ ಪ್ರಸ್ಥಾನಗಳಲ್ಲಿ ಎಷ್ಟು ಹೊಸತನವನ್ನು ಕಾಣಿಸಿದ್ದೀರಿ? ಎಂಬುದು ಚರ್ಚೆಯಾಗಲಿ.

ಭೈರಪ್ಪನವರನ್ನು ಶಿವಮೊಗ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನದ ಉದ್ಘಾಟನೆಗೆ ಅಹ್ವಾನಿಸಿರುವುದು ರಾಜಕೀಯ ನಿರ್ಧಾರ, ಸಾಹಿತ್ಯಿಕ ನಿರ್ಧಾರವಲ್ಲ ಎನ್ನುತ್ತಿರಲ್ಲ. ಹಾಗಾದರೆ ನಿಮ್ಮ ಈ ಭೈರಪ್ಪನವರ ವಿರುದ್ಧದ ಹೋರಾಟಕ್ಕೆ ಮಾತ್ರ ಸಾಹಿತ್ಯಿಕ, ನೈತಿಕ ನೆಲೆಗಟ್ಟಿದೆಯೇ? ನಿಮ್ಮದು ರಾಜ್ಯದ ಮುಖ್ಯಮಂತ್ರಿಯನ್ನು ಓಲೈಸುವ, ಕಾಂಗ್ರೆಸ್ ಪಕ್ಷದ ಹಿತಾಸಕ್ತಿಗಳನ್ನು ಕಾಪಾಡುವ ಉಪಕ್ರಮಗಳಲ್ಲವೇ? ರಾಜಕೀಯೇತರವಾದ ಮಾಧ್ಯಮದ ಅಗತ್ಯತೆ ಕುರಿತು ಹವಣಿಸುತ್ತಾ ಪರ್ಯಾಯ ಮಾಧ್ಯಮ ಚಿಂತನೆಯನ್ನು ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿರುವ ಅಮೀನ್ ಮಟ್ಟುರವರ ಕೈಯಿಂದ ಉದ್ಘಾಟಿಸುವ ನಿರ್ಧಾರದ ಹಿಂದೆ ಯಾವ ನೈತಿಕ ಪ್ರಜ್ಞೆ ಕೆಲಸ ಮಾಡಿದೆಯೋ?

ಕೊನೆಯದಾಗಿ, ಕನ್ನಡ ಸಾಹಿತ್ಯ ಪರಿಷತ್ ಯಾರೊಬ್ಬರ ಖಾಸಗಿ ಆಸ್ತಿಯಲ್ಲ. ಯಾವೊಂದು ಸಾಹಿತ್ಯ ಪಂಥಕ್ಕೂ ಸಾಹಿತ್ಯ ಪರಿಷತ್‍ನ್ನು ಬರೆದುಕೊಟ್ಟಿಲ್ಲ. ಹಾಗೊಂದು ನಂಬಿಕೆ ನಿಮ್ಮಲ್ಲಿ ಮತ್ತು ನಿಮ್ಮ ಎಡ ಸಂಗಡಿಗರಲ್ಲಿದ್ದರೆ ಆದಷ್ಟೂ ಬೇಗ ನಿಮ್ಮ ಭ್ರಮೆಯಿಂದ ಹೊರಬನ್ನಿ. ಎಲ್ಲ ವರ್ಗ, ಪಂಥದ ಸಾಹಿತ್ಯಾಭಿಮಾನಿಗಳು ತಮ್ಮ ಸ್ವಂತ ಚಂದಾದ ಮೂಲಕ ಪರಿಷತ್‍ನ್ನು ಕಟ್ಟಿ ಬೆಳೆಸಿದ್ದಾರೆ. ಹೀಗಿರುವಾಗ ಎಡ ಪಡೆ, ಸಾಹಿತ್ಯ ಪರಿಷತ್ ತಮ್ಮ ಖಾಸಗಿ ಆಸ್ತಿಯಂತೆ ವರ್ತಿಸುವುದು ಸರ್ವಥಾ ಸಾದುವಲ್ಲ. ಭಿನ್ನ ವಿಚಾರಧಾರೆಯವರನ್ನು ಅಲ್ಲಿಗೆ ಕರೆತಂದರೆ ಅದನ್ನು ರಾಜಕೀಯವೆಂದು ಹಲಬುವುದು. ತಮ್ಮದು ಮಾತ್ರ ಸಾಹಿತ್ಯ, ಮಿಕ್ಕಿದ್ದೆಲ್ಲವೂ ನಗಣ್ಯ ಎಂಬ ಆಕ್ರಮಣಕಾರಿ ನಿಲುವುಗಳು ಕನ್ನಡ ಸಾಹಿತ್ಯವನ್ನು ಪಾತಾಳಕ್ಕೆ ಕರೆದುಕೊಂಡು ಹೋಗುವುದಂತೂ ಸರ್ವ ವಿಧಿತ. ಕನ್ನಡ ಸಾಹಿತ್ಯವೆಂದರೆ ಕೇವಲ ಒಂದು ಪಕ್ಷದ, ಒಂದು ವಿಚಾರದ, ಒಂದು ಪಂಥದ ಸಾಹಿತ್ಯವಲ್ಲ. ಬಹುಮುಖಿ ಚಿಂತನಾಧಾರೆ ಕನ್ನಡ ಸಾಹಿತ್ಯ ಪರಂಪರೆಯ ಉದ್ದಕ್ಕೂ ಹರಿದಿದೆ. ಎಲ್ಲ ವಿಚಾರಗಳಿಗೂ ಮಾನ್ಯತೆ ನೀಡಿದರೆ ಮಾತ್ರ ಆ ಪರಂಪರೆಯನ್ನು ಗೌರವಿಸಿದಂತಾಗುತ್ತದೆ. ಕೊನೆಗೆ ಕವಿರಾಜಮಾರ್ಗಕಾರನ, “ಕಸವರಮೆಂಬುದು ನೆರೆ ಸೈರಿಸಲಾರ್ಪೊಡೆ ಪರಧರ್ಮಂ ಪರ ವಿಚಾರಮಂ” ಎಂಬ ಮಾತನ್ನು ಮತ್ತೆ ಮತ್ತೆ ನೆನೆಪುಮಾಡಿಕೊಳ್ಳೊಣ.

19 ಟಿಪ್ಪಣಿಗಳು Post a comment
  1. ಶ್ರೀಧರ್
    ಫೆಬ್ರ 6 2017

    ಕಮ್ಯೂನಿಸ್ಟ್ ಸಾಹಿತಿಗಳಿಗೆ ಎಷ್ಟು ಉಗಿದ್ರೂ ಒರೆಸ್ಕೊತಾರೆ!

    ಉತ್ತರ
  2. Rajaram Hegde
    ಫೆಬ್ರ 6 2017

    ರಾಜೇಂದ್ರ ಚೆನ್ನಿಯವರಿಗೇನೋ ಸಮಸ್ಯೆ ಇದೆ ಅನ್ನಿಸುತ್ತದೆ. ಕನ್ನಡ ಚಿಂತನಾ ಜಗತ್ತಿಗೆ ಅವರ ಕೊಡುಗೆಯೇನು ಎಂಬುದರ ಕುರಿತು ಯಾರೂ ಚರ್ಚಿಸಿದಂತೆ ಕಾಣುವುದಿಲ್ಲ. ಆದರೆ ಅವರ ಮೆದುಳನ್ನೇ ಬಹುತೇಕವಾಗಿ ಆಧರಿಸಿಕೊಂಡಿರುವ ಕನ್ನಡ ಬುದ್ಧಿಜೀವಿಗಳ ಗುಂಪೊಂದಿದೆ. ಅವರಿಗೆ ಕುವೆಂಪು ವಿಶ್ವವಿದ್ಯಾಲಯದಲ್ಲಿ ನಮ್ಮ ಸಂಶೋಧನಾ ತಂಡದ ವಿರುದ್ಧ ವಿಕೃತ ಚಿತ್ರಣಗಳನ್ನು ನೀಡಿ ಎತ್ತಿ ಕಟ್ಟುವಲ್ಲಿ ಅವರು ಸಾಕಷ್ಟು ಶ್ರಮವಹಿಸಿದ್ದಾರೆ. ಸುಳ್ಳು ವದಂತಿಗಳನ್ನು ಹಬ್ಬಿಸುವ ಮೂಲಕ ಈ ಕೆಲಸ ಮಾಡುತ್ತಾರೆ. ಅವರು ಬಾಲಗಂಗಾಧರರ ಬರವಣಿಗೆಗಳನ್ನು ಎಷ್ಟು ಓದಿದ್ದಾರೆ, ಏನು ಅರ್ಥಮಾಡಿಕೊಂಡಿದ್ದಾರೆ ಎಂಬುದು ನನಗೆ ತಿಳಿಯದು. ಆದರೆ ‘ಇವರು ಜಾತಿ ಇಲ್ಲ ಎನ್ನುತ್ತಾರೆ’ ‘ದಲಿತ ಮುಸ್ಲಿಂ ವಿರೋಧಿಗಳು’ಎಂಬ ವದಂತಿಯನ್ನು ಮಾತ್ರ ಅವರ ಮೆದುಳನ್ನು ಅವಲಂಬಿಸಿಕೊಂಡವರಲ್ಲಿ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ. ನಾವು ಹಾಗೆ ಹೇಳುತ್ತಿಲ್ಲ ಎಂದು ಎಷ್ಟೇ ಬೊಬ್ಬೆ ಹೊಡೆದರೂ ಈ ಬುದ್ಧಿ(?)ಜೀವಿಗಳ ಗುಂಪು ಕೇಳಲು ತಯಾರಿಲ್ಲ. ಆ ಮಾತು ಚೆನ್ನಿಯವರ ಬಾಯಲ್ಲೇ ಬರಬೇಕು ಎಂದು ನಿರೀಕ್ಷಿಸುತ್ತಾರೆ. ನಮ್ಮ ಇಡೀ ಸಂಶೋಧನೆಯ ಕುರಿತು ಇವರ ಆಚಾರ್ಯ ಕೃತಿಯೊಂದು ಬರಲಿದೆ ಎಂದು ಇವರೆಲ್ಲ ಬೊಬ್ಬೆ ಹೊಡೆದು ಕೊನೆಗೆ ತುಮಕೂರು ವಿವಿಯ ಒಂದು ಪತ್ರಿಕೆಯಲ್ಲಿ ಸೆಗಣಿ ಸಾರಿಸಿದಂತೆ ಒಂದು ಲೇಖನ ಬಂತು. ತಮಗೇ ಸ್ಪಷ್ಟವಾಗದ ವಿಚಾರಗಳಕುರಿತು ಏಕೆ ಇವೆಲ್ಲ ಕಸರತ್ತುಗಳು ಎಂದು ನನಗೆ ಸೋಜಿಗವಾಗುತ್ತಿದೆ. ಇವರಿಗೆ ತಿಳಿದುಕೊಳ್ಳುವುದರಲ್ಲಿ ಆಸಕ್ತಿಯಿಲ್ಲ ಎಂಬುದಂತೂ ಸ್ಪಷ್ಟ.
    ತುಮಕೂರು ವಿಶ್ವವಿದ್ಯಾಲಯದಲ್ಲಿ ಒಂದು ಸಂಶೋಧನಾ ಪತ್ರಿಕೆಯಲ್ಲಿ ನಮ್ಮದೇ ಗುಂಪಿನ ಕೆಲವು ಸಂಶೋಧಕರ ಲೇಖನಗಳು ಪ್ರಕಟವಾದವು. ತಕ್ಷಣದಲ್ಲೇ ತುಮಕೂರು ವಿವಿಯು ಕೋಮುವಾದಿಗಳ ಪಾಲಾಗುತ್ತಿದೆ ಎಂಬ ಕೂಗು ಕನ್ನಡ ಚಿಂತನೆಯ ಕಾವಲು ಪಡೆಗೆ ಹೋಯಿತು, ಕುಲಪತಿಗಳಿಗೆ ಕರೆ ಹೋಗಿ ಬಂದೋಬಸ್ತು ಮಾಡಲು ನಿರ್ದೇಶನ ಕೂಡ ಹೋಯಿತು. ಕುಲಪತಿಗಳು ಸಂಪಾದಕರನ್ನು ಕರೆಸಿ ಚೆನ್ನಿ, ಅಸಾದಿ, ವಸು ಇತ್ಯಾದಿ ಸೆಕ್ಯುಲರ್ ಚಿಂತಕರ ಸಂಪಾದಕ ಮಂಡಳಿಯೊಂದನ್ನು ರಚಿಸಿ ಸಂಶೋಧನೆಯ ಆರೋಗ್ಯವನ್ನು ಕಾಪಾಡಲು ತಕ್ಷಣವೇ ಬಂದೋಬಸ್ತ ಮಾಡಿದರು. ಆದರೂ ಅಷ್ಟರ ನಂತರ ಕೂಡ ನಮ್ಮ ಗುಂಪಿನ ಸಂಶೋಧಕರದೇ ಕೆಲವು ಲೇಖನಗಳು ಮತ್ತೆ ಕಾಣಿಸಿಕೊಂಡವು. ಕಾರಣ ಇಷ್ಟೆ, ಸೆಕ್ಯುಲರ್ ಗುಂಪಿನವರು ಯಾರೂ ಸಂಶೋಧನಾ ಲೇಖನಗಳನ್ನು ಬರೆಯಲಿಲ್ಲ. ಈ ಲೇಖನಗಳನ್ನು ಸಂಪಾದಕ ಮಂಡಳಿಯ ಗಮನಕ್ಕೆ ಕೂಡ ತರಲಾಗಿತ್ತು. ಆದರೆ ಇತ್ತೀಚೆಗೆ ಚೆನ್ನಿಯವರು ಕುಲಪತಿಗಳಿಗೆ ಒಂದು ರಾಜಿನಾಮೆ ಪತ್ರ ಕಳುಹಿಸಿದ್ದಾರಂತೆ. ”ಒಂದೇ ಸ್ಕೂಲಿನ ಚಿಂತನೆಗಳಿಗೆ ಮಣೆ ಹಾಕುವ ಈ ಪತ್ರಿಕೆಗೆ ತಾನು ಸಂಪಾದಕ ಮಂಡಳಿಯ ಸದಸ್ಯನಾಗಿ ಇರಲು ಇಚ್ಛಿಸುವುದಿಲ್ಲ ” ಎಂಬುದೇ ಕಾರಣ! ನನಗಂತೂ ಇವೆಲ್ಲ ಸಂಶೋಧನೆಯ ಕುರಿತು ಗೌರವವಿರುವ ಗಂಭೀರ ಚಿಂತಕರೊಬ್ಬರ ಕ್ರಿಯೆಗಳಾಗಿ ಕಾಣದೇ ಭ್ರಮಾ ರೋಗಕ್ಕೆ ತುತ್ತಾದ ಒಬ್ಬನ ಹುಚ್ಚಾಟದ ಹಾಗೇ ಕಾಣಿಸುತ್ತಿದೆ. ಒಟ್ಟಿನಲ್ಲಿ ಯಾವುದೋ ದುಷ್ಟ ಶಕ್ತಿಯ ವಿರುದ್ಧ ಹೋರಾಡುತ್ತಿದ್ದೇನೆ ಎಂದು ಹೊಸ ಸಂಶೋಧನೆಗಳ ಸಾಧ್ಯತೆಯನ್ನು ಮುಚ್ಚಿಹಾಕಿ ಕೇಕೆ ಹೊಡೆಯುತ್ತಿದ್ದಾರೆ. ಇಂಥವರ ಬುದ್ದಿಯನ್ನೇ ಅವಲಂಬಿಸಿಕೊಂಡವರನ್ನು ನೋಡಿದರಂತೂ ನಗಬೇಕೋ ಅಳಬೇಕೋ ಎಂಬುದೂ ತಿಳಿಯುತ್ತಿಲ್ಲ. ಕನ್ನಡ ಬೌದ್ಧಿಕ ಪ್ರಪಂಚಕ್ಕೆ ಯಾವ ಸೇವೆ ಅಂತ ಇವರೆಲ್ಲ ಈ ಹೋರಾಟವನ್ನು ಮಾಡುತ್ತಿದ್ದಾರೋ? ತಮಗೆ ಯಾವ ಯೋಗ್ಯತೆ ಇದೆ ಎಂಬುದಾಗಿ ಭಾವಿಸಿ ಈ ಹೋರಾಟ ಮಾಡುತ್ತಿದ್ದಾರೆಯೋ? ಈ ಅಮೋಘ ಸೇವೆಗಾಗಿ ಇವರ ಮಕ್ಕಳು ಮೊಮ್ಮಕ್ಕಳನ್ನೂ ಒಳಗೊಂಡಂತೆ ಮುಂದಿನ ತಲೆಮಾರುಗಳು ಇವರಿಗೆಲ್ಲ ಋಣಿಗಳಾಗಿರಬೇಕು!

    ಉತ್ತರ
  3. SalamBava
    ಫೆಬ್ರ 6 2017

    Prof. Chenni is one of the beautiful minds of Kannada. This was acknowledged by none other than the great secular public intellectual Dr. URA. His secular and liberal credentials are second to none. It’s rather sad that petty academic rivalry is being pursued here to malign a good son of secular India, one who would have made Nehru proud. Chenni deserved to be in JNU but sacrificed opportunities to help Shivaprakash and Bilimale. His selflessness is such. Shame on Heggade for washing dirty linen in public.

    ಉತ್ತರ
  4. ಶೆಟ್ಟಿನಾಗ ಶೇ.
    ಫೆಬ್ರ 6 2017

    ಚೆನ್ನಿ ಸರ್ ಅವರ ಬಗ್ಗೆ ಹಿಂದುತ್ವವಾದಿಗಳು ನಿಲುಮೆಯಲ್ಲಿ ದಾಳಿ ನಡೆಸಿರುವುದು ಇದೇ ಮೊದಲ ಬಾರಿಯಲ್ಲ. ಹಿಂದೆ ಅವರ ಬಗ್ಗೆ ಚರ್ಚೆ ನಡೆದಾಗ ಕೆಲವರು ಚೆನ್ನಿ ಸರ್ ತಮ್ಮ ಡಿಪಾರ್ಟ್ಮೆಂಟ್ ಗೆ ಕಂಪ್ಯೂಟರ್ ಖರೀದಿಸುವಾಗ ಅವ್ಯವಹಾರ ನಡೆಸಿದ್ದಾರೆ ಎಂಬರ್ಥದ ಮಾತುಗಳನ್ನು ಆಡಿದ್ದರು. ಪುರಾವೆಯಾಗಿ ಅವ್ಯವಹಾರದ ತನಿಖೆಯ ಪತ್ರಿಕಾ ವರದಿಯನ್ನು ಕೊಟ್ಟಿದ್ದರು. ಆದರೆ ಆ ತನಿಖೆ ಮುಗಿದಿದ್ದು ಚೆನ್ನಿಯವರು ದೋಷಿಯಲ್ಲ ಎಂದು ರುಜುವಾತಾಗಿದೆ. ಚೆನ್ನಿ ಯಾವತ್ತೂ ಜಾತಿವಾದಿಗಳೊಡನೆ ಕೋಮುವಾದಿಗಳೊಡನೆ ಬಂಡವಾಳಶಾಹಿಗಳೊಂದಿಗೆ ರಾಜಿಯಾಗದೆ ಸಮಾಜವಾದ ಹಾಗೂ ಸೆಕ್ಯೂಲರಿಸಂನ ಭದ್ರ ನೆಲೆಗಟ್ಟಿನಲ್ಲೇ ಬೆಳೆದರು. ಆದುದರಿಂದಲೇ ಅನಂತಮೂರ್ತಿ ಸರ್ ಅವರ ನೆಚ್ಚಿನ ಶಿಷ್ಯರಲ್ಲೊಬ್ಬರಾಗಿ ಹೆಸರು ಪಡೆದರು. ಶಿವಮೊಗ್ಗೆ ಬಿಡುವ ಮನಸ್ಸು ಮಾಡಿದ್ದರೆ ಚೆನ್ನಿ ಪ್ರಗತಿಪರ ವಲಯದಲ್ಲಿ ಇನ್ನೂ ದೊಡ್ಡ ವ್ಯಕ್ತಿಯಾಗಿ ಬೆಳೆಯಬಹುದಿತ್ತು. ಆದರೆ ನೆಲದ ವಾಸನೆ ಅವರನ್ನು ಭದ್ರವಾಗಿ ಹಿಡಿದಿಟ್ಟಿತು. ಕುವೆಂಪು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಆದರ್ಶಪ್ರಾಯರಾದ ಚೆನ್ನಿ ಸರ್ ಅವರ ಬಗ್ಗೆ ರಾಜಾರಾಂ ಹೆಗಡೆ ಗೌರವ ಬೆಳೆಸಕೊಳ್ಳಬೇಕಿತ್ತು, ಆದರೆ ಪ್ರಗತಿಪರರೊಂದಿಗೆ ಮೊದಲು ಗುರುತಿಸಿಕೊಂಡು ಕೆಲಸಮಯದಿಂದ ಬಾಲಗಂಗಾಧರ ರಾವ್ ಅವರ ವಂದಿಮಾಗಧ ಗ್ಯಾಂಗ್ ಸದಸ್ಯರಾದ ಮೇಲೆ ಪ್ರಗತಿಪರ ಬಗ್ಗೆ ಹೆಗಡೆ ಅವರ ಅಸಹನೆ ಹೆಚ್ಚಾಗಿದೆ. ಶಿಷ್ಯನಿಂದ ಹೇಳಿ ಬರೆಸಿದ ಸದರಿ ಲೇಖನದಲ್ಲಿ ಆ ಅಸಹನೆ ಹೊಡೆದು ಕಾಣುತ್ತಿದೆ. ಅಸಹಿಷ್ಣುತೆಯ ಉರಿ ಹೆಗಡೆ ಅವರನ್ನು ಎಷ್ಟು ಉರಿಸುತ್ತಿದೆ ಅಂದರೆ ಶಿಷ್ಯನ ಲೇಖನಕ್ಕೆ ಕಮೆಂಟು ಬರೆದು ಚೆನ್ನಿ ಸರ್ ಬಗ್ಗೆ ನಂಜು ಕಾರಿಕೊಳ್ಳುವಷ್ಟು! ಛೆ! ಹೆಗ್ಡೇರೆ!

    ಉತ್ತರ
    • ಶೇ ನಾಗ ಶೆಟ್ಟಿ
      ಫೆಬ್ರ 6 2017

      ಕಂಪ್ಯೂಟರ್ ಖರೀದಿಯ ತನಿಖೆ ನಡೀಲೂ ಇಲ್ಲ! ವರದಿಯಂತೂ ಬರಲೇ ಇಲ್ಲ. ಕೇಸನ್ನೇ ಮುಚ್ಚಿ ಹಾಕಲಾಯ್ತು! ಅದು ಮಾತ್ರನಾ? ದೂರಶಿಕ್ಷಣ ನಿರ್ದೇಶಕನಾಗಿ ಚೆನ್ನಿ ಮಾಡಿರೋ ಬಾನಗಡಿಗಳಿಗೆ ಲೆಕ್ಕವಿಲ್ಲ. ಅಲ್ಲಿಂದ ಪದಚ್ಯುತಿ ಏಕಾದ್ರು ಅನ್ನೋದು ವಿ.ವಿ.ಲಿ ಓಪನ್ ಸೀಕ್ರೇಟಾಗಿದೆ. ಅದರ ತನಿಖೆ ಏನಾದ್ರೂ ನಡೆದ್ರೆ ಜೀವನ ಪೂರ್ತಿ ಕಂಬಿ ಎಣಿಸಬೇಕಷ್ಟೆ!

      ಉತ್ತರ
      • SalamBava
        ಫೆಬ್ರ 6 2017

        “ದೂರಶಿಕ್ಷಣ ನಿರ್ದೇಶಕನಾಗಿ ಚೆನ್ನಿ ಮಾಡಿರೋ ಬಾನಗಡಿಗಳಿಗೆ ಲೆಕ್ಕವಿಲ್ಲ. ”

        If you have proof make it public else tender apology to Chenny. You’ve no right to slander a luminary like Chenny just because he opposes your ideology. And stop using fake ids.

        ಉತ್ತರ
  5. ಅರ್ಪಿತಾ ಆರ್
    ಫೆಬ್ರ 6 2017

    ಉತ್ತಮ ಲೇಖನ

    ಉತ್ತರ
  6. M A Sriranga
    ಫೆಬ್ರ 6 2017

    -ಅಸಹಿಷ್ಣುತೆಯ ಬಗ್ಗೆ ವಿದ್ವತ್ ಪೂರ್ಣ ಭಾಷಣ ಮಾಡುವ,ಲೇಖನ ಬರೆಯುವ ‘ಕನ್ನಡ ಸಾಹಿತ್ಯ ಪರಂಪರೆಯನ್ನು ಶ್ರೀಮಂತಗೊಳಿಸಿರುವ’ ರಾಜೇಂದ್ರ ಚೆನ್ನಿ ಹಾಗೂ ಅವರ ಇತರ ಸಮಾನಮನಸ್ಕ ಸ್ನೇಹಿತರುಗಳು ಇನ್ನೊಂದು ಬದಿಯ ಮಾತನ್ನೇ ಕೇಳದಿರುವಷ್ಟು ಅಸಹಿಷ್ಣುತಾವಾದಿಗಳಾದರೆ ಹೇಗೆ? ಒಬ್ಬ ಕಾದಂಬರಿಕಾರನ ಕೃತಿಗಳನ್ನು ಏಕೆ ಅಷ್ಟೊಂದು ಜನ ಓದುತ್ತಿದ್ದಾರೆ? ಏಕೆ ಇತರ ಭಾರತೀಯ ಭಾಷೆಗಳಿಗೆ ಆ ಕಾದಂಬರಿಗಳು ಅನುವಾದವಾಗುತ್ತಿವೆ ಎಂಬ ಬಗ್ಗೆ ಇವರುಗಳಲ್ಲೆರೂ ಸೇರಿ ಒಂದು ವಿದ್ವತ್ ಪೂರ್ಣ ಸಮೀಕ್ಷೆ ಮಾಡಿದರೆ ಒಳ್ಳೆಯದಲ್ಲವೇ? ಭೈರಪ್ಪ ಕನ್ನಡದಲ್ಲಿ ಬರೆಯುತ್ತಿದ್ದಾರೆ, ನಮ್ಮವರು ಎಂದು ಕನ್ನಡಿಗರು ‘ಸಮೂಹ ಸನ್ನಿ’ಯಿಂದ ಅಷ್ಟೊಂದು ಸಂಖ್ಯೆಯಲ್ಲಿ ಓದುತ್ತಿದ್ದಾರೆ ಎಂದೇ ಭಾವಿಸೋಣ. ಶಿವಮೊಗ್ಗದ ಬೀದಿ ಬೀದಿಗಳಲ್ಲಿ ಭೈರಪ್ಪನವರ ಕೃತಿಗಳನ್ನು ತಾವು ವಿರೋಧಿಸುವ ‘ಬಲಪಂಥೀಯರು,ಸಂಘಪರಿವಾರ’ದವರು ಪುಕ್ಕಟೆ ಹಂಚುತ್ತಿದ್ದಾರೆ ಎಂದು ಒಬ್ಬ ಸಾಹಿತಿಗಳು ಎರಡುಮೂರು ವರ್ಷಗಳ ಹಿಂದೆ ಹೇಳಿದ್ದರು. ಅವರು ಅಖಿಲ ಕರ್ನಾಟಕ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಈ ಹಿಂದೆ ಅಲಂಕರಿಸಿದ್ದರು . ಆದರೆ ಮರಾಠಿ,ಹಿಂದಿ,ಪಂಜಾಬಿ,ತೆಲುಗು ಇತ್ಯಾದಿ ಭಾಷೆಗಳಿಗೂ ಭೈರಪ್ಪನವರ ಕಾದಂಬರಿಗಳು ಈ ಹಿಂದಿನಿಂದಲೂ ಅನುವಾದವಾಗುತ್ತಲೇ ಇವೆಯಲ್ಲ. ಹಾಗಾದರೆ ಭೈರಪ್ಪನವರನ್ನು ವಿರೋಧಿಸುವ ಒಂದಷ್ಟು ಕನ್ನಡಿಗ ಓದುಗರು,ಸಾಹಿತಿಗಳು,ವಿಚಾರವಂತರು ಮಾತ್ರ ಇಡೀ ಭಾರತದಲ್ಲಿ ‘ಜೀವಪರ,ಸ್ತ್ರೀ ಪರ ಇತ್ಯಾದಿ,ಇತ್ಯಾದಿಗಳು’ ಆದರೆ, ಅನುವಾದಗಳ ಮೂಲಕ ಅವರ ಕಾದಂಬರಿಗಳನ್ನು ಓದುವ ಇತರ ಭಾಷಿಕರನ್ನು ಯಾವ ಗುಂಪಿಗೆ ಈ ನಮ್ಮ ಪ್ರಗತಿಪರ ಚಿಂತಕರು ಸೇರಿಸುತ್ತಾರೆ? ನಾವೊಬ್ಬರೇ ಶ್ರೇಷ್ಠ ಉಳಿದವರೆಲ್ಲರೂ ನಿಕೃಷ್ಟ ಎಂಬ ನಿಲುವು ‘ಜೀವಪರವೇ?’ ಅದು ಈ ಚಿಂತಕರೇ ವಿರೋಧಿಸುವ ‘ಅಸಹಿಷ್ಣುತೆ’ ಹಾಗೂ ‘ಅಸಮಾನತೆ’ಯ ಚಿಹ್ನೆಯಲ್ಲವೇ?

    ಉತ್ತರ
    • ಫೆಬ್ರ 7 2017

      ವಿದ್ವತ್ತು ಇದ್ದರೆ ವಿದ್ವತ್ಪೂರ್ಣ ಸಮೀಕ್ಷೆ ಆಗಬಹುದು. ಅದೇ ಇಲ್ಲ ದಡ್ಡ ಮರಿಗಳಿಗೆ. ಬರೀ ಸಮಾನತೆ, ಸಹಿಷ್ಣುತೆ, ಸಮಾಜವಾದ, ಜಾತ್ಯಾತೀತ, ಕೋಮುವಾದ ವಿರೋಧ ಎಂಬ ಪದಗಳನ್ನು ಸರಿಯಾಗಿ ಅರ್ಥ ವೂ ಮಾಡಿಕೊಳ್ಳದೆ ಆಚರಣೆಯಲ್ಲಿ ಇಟ್ಟುಕೊಳ್ಳದೆ ಆಷಾಢಭೂತಿ ಬದುಕುವ ಹುಳುಗಳಿಂದ ಯಾವ ಸಾಧನೆ ತಾನೇ ಆಗಬಹುದು. ಷಂಡಸಂತಾನಗಳು

      ಉತ್ತರ
  7. satyampriya
    ಫೆಬ್ರ 7 2017

    “ಸಮಾನತೆ, ಸಹಿಷ್ಣುತೆ, ಸಮಾಜವಾದ, ಜಾತ್ಯಾತೀತ, ಕೋಮುವಾದ ವಿರೋಧ ಎಂಬ ಪದಗಳನ್ನು ಸರಿಯಾಗಿ ಅರ್ಥ ವೂ ಮಾಡಿಕೊಳ್ಳದೆ ಆಚರಣೆಯಲ್ಲಿ ಇಟ್ಟುಕೊಳ್ಳದೆ ಆಷಾಢಭೂತಿ”

    ree Mr. Rao, Prof. Chenni Sir avaranna avamaana maadalu nimage adhikaaravilla. Who are you to call him ಆಷಾಢಭೂತಿ? I don’t think you know him well to make such damning criticism. Hold your filthy tongue back.

    ಉತ್ತರ
    • ಫೆಬ್ರ 10 2017

      First,write in Kannada.next,who r you to tell me what to say or not. When Chenni could blame Bhairappa on false ground he exposed himself. He is not ashadha bhuti, then ಆಶಾಢಭೂತಿ ಅಲ್ವಾದರೆ ಕಾರ್ ತಿಕ ಭೂತಿ! ಮಾಡೋಣ ಬಿಡಿ.

      ಉತ್ತರ
    • ಶೆಟ್ಟಿನಾಗ ಶೇ.
      ಫೆಬ್ರ 10 2017

      ವಿಶ್ವಾರಾಧ್ಯ ಸರ್, ವ್ಹಾ! ನಿಮ್ಮ ನೇರ ನಿಷ್ಠುರ ಮಾತುಗಳಿಂದ ಹಿಂದುತ್ವ ಟ್ರಾಲ್ ರಾಯರಿಗೆ ಮರ್ಮಾಘಾತವನ್ನೇ ನೀಡಿದ್ದೀರಿ! ಶರಣರ ವಾಕ್ ಶಕ್ತಿಯ ರುಚಿಯನ್ನು ಬ್ರಾಹ್ಮಣ್ಯದ ಮರಿಸೇನೆಗೆ ತೋರಿಸಿದ್ದೀರಿ! ಬಸವವಾದವು ಅದಮ್ಯ ಎಂದು ಸಾಬೀತು ಪಡಿಸಿದ್ದೀರಿ! ಬಸವ ಬೆಳಗು ಹೀಗೆ ಯಶಸ್ಸು ಕಾಣುತ್ತಿರಲಿ. ಶರಣು ಶರಣಾರ್ಥಿ!

      ಉತ್ತರ
      • ಶೆಟ್ಟಿನಾಗ ಶೇ.
        ಫೆಬ್ರ 11 2017

        “ಶರಣರ ವಾಕ್ ಶಕ್ತಿಯ ರುಚಿಯನ್ನು ಬ್ರಾಹ್ಮಣ್ಯದ ಮರಿಸೇನೆಗೆ ತೋರಿಸಿದ್ದೀರಿ!”

        ಪಂಜಾಬ್ ಹಾಗೂ ಗೋವಾದಲ್ಲಿ ಆಮ್ ಆದಮೀ ಪಕ್ಷ ಹಾಗೂ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ಚುನಾವಣೆಯಲ್ಲಿ ಜಯಶೀಲರಾಗಿ ಅಧಿಕಾರವನ್ನು ಪಡೆದ ಮೇಲೆ ನಮೋ ಮರಿ ಸೇನೆ ಬಾಲ ಮುದುರಿ ಕೂರಲಿದೆ ಅಂತ ಕೇಳಿ ಬರುತ್ತಿದೆ. ಆಗ ನಿಲುಮೆ ಕತೆ ಏನಾಗುತ್ತದೆ?

        ಉತ್ತರ
  8. Ckvmurthy
    ಫೆಬ್ರ 7 2017

    To day’s Kannada Sahitis except few is filled with hypocrites, litrateillitrates, buckets of ruling government.They have not authored any valuable literary products. Critics are their Chelsea’s.They have occupied key positions,univesites, by virtue of cast, and by political gimmicks are looting the taxpayers money. No constructive work is been g done in universites.Ex. Kumarvysas manuscript written in palm leaves is biting dust in the siblings of Kumarvysas in Koliwada near Hubli.Inspite request by the family members of Kumarvysas to Kannada university at Hampi,and Kannada abhvriddi pradhikare and others no action has been taken to save it by electronic diztlisation or in microchip.Becuase the author is uppercaste . Tomorrow one teacher like the Kannada litrateillitrates discussed above may make research KKumarvysas was a fiction.

    ಉತ್ತರ
  9. Ckvmurthy
    ಫೆಬ್ರ 9 2017

    Mr satyaprya, donot be too much bucket.What is your Gurus contribution to Kannada literature .Has he authored any valuable research in internationally recognised Magazine.Only leftist junk thoughts borrowed here are there, some copied from other languageswritings are only his assets.Bhyrappa Ananthmurty areoriginal stalwarts.These people are nakali and no parallel to B&A. By virtue of vashiilibagi the are finding place in universities.

    ಉತ್ತರ
    • ಶೆಟ್ಟಿನಾಗ ಶೇ.
      ಫೆಬ್ರ 10 2017

      “What is your Gurus contribution to Kannada literature .”

      ವಿಶ್ವಾರಾಧ್ಯ ಸರ್ ಅವರ ಗುರುಗಳು ಕನ್ನಡ ಮಹತ್ವಪೂರ್ಣ ಬಂಡಾಯ ಕವಿ, ಸೂಫಿ ಹಿನ್ನೆಲೆಯ ಅನುಭಾವಿ, ಅದ್ವಿತೀಯ ವಚನ ವಿದ್ವಾಂಸ, ಮಾರ್ಕ್ಸ್ ವಾದ ಹಿನ್ನೆಲೆಯ ಪತ್ರಕರ್ತ, ರಾಜ್ಯೋತ್ಸವ ಹಾಗೂ ಬಸವಶ್ರೀ ಪ್ರಶಸ್ತಿ ವಿಜೇತ.

      ಉತ್ತರ
      • Ckvmurthy
        ಫೆಬ್ರ 11 2017

        Self declared and recognised by Indian universities by their siblings.Do you know our universities ranking in International level.From bottom they are 2nd or 3rd.Then think the level .Only you have to recognise.For what reasons who knows.?

        ಉತ್ತರ
        • ಶೆಟ್ಟಿನಾಗ ಶೇ.
          ಫೆಬ್ರ 11 2017

          “Do you know our universities ranking in International level.From bottom they are 2nd or 3rd.Then think the level .”

          ನಿಮ್ಮ ರಾಜಾರಾಮ ಹೆಗಡೆ ಅವರೂ ಇಂಥದ್ದೇ ಯೂನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿರುವರು ಎಂಬ ಸತ್ಯವನ್ನು ಮರೆಯಬೇಡಿ ಗೆಳೆಯರೇ. ನಿಮಗೆ ಒಳ್ಳೆಯದಾಗಲಿ. ಶರಣು ಶರಣಾರ್ಥಿ.

          ಉತ್ತರ
  10. Dash
    ಫೆಬ್ರ 10 2017

    Well said Murthy yavare

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments