ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 22, 2017

36

ಐದು ಮೂಲೆ ಮನೆ

‍ನಿಲುಮೆ ಮೂಲಕ

– ಗುರುರಾಜ ಕೊಡ್ಕಣಿ. ಯಲ್ಲಾಪುರ

images‘ಈ ಮನೆಯಲ್ಲಿ ಭೂತಾ ಇದೆ, ಇಲ್ಲಿ ಯಾರೂ ಬರಬೇಡಿ’…..

ಹೀಗೊ೦ದು ಸಾಲನ್ನು ಆ ಮನೆಯ ಬಾಗಿಲಿನ ಮೇಲೆ ನೋಡಿದಾಗ ನಾವ್ಯಾರೂ ತಲೆ ಕೆಡಿಸಿಕೊ೦ಡಿರಲಿಲ್ಲ.ಚಿಕ್ಕ ಮಕ್ಕಳ ಭಾಷೆಯಲ್ಲಿ ಕಾಗುಣಿತಗಳ ದೋಷದೊ೦ದಿಗೆ ಇದ್ದಲಿನಿ೦ದ ಬರೆದಿದ್ದ ಗೀಚು ಅಕ್ಷರಗಳ ಬಗ್ಗೆ ಉಡಾಫೆಯಾಗಿ ಮಾತನಾಡಿಕೊ೦ಡು ಮನೆ ಸೇರಿಕೊ೦ಡಿದ್ದಾಗ ನನಗಿನ್ನೂ ಹನ್ನೆರಡು ವರ್ಷ ವಯಸ್ಸು. ಹಳೆಯ ಮನೆಯ ಮಾಲೀಕ ಏಕಾಏಕಿ ಬಾಡಿಗೆ ಜಾಸ್ತಿ ಮಾಡಿದನ್ನೆನ್ನುವ ಕಾರಣಕ್ಕೆ ಅವಸವಸರವಾಗಿ ಮನೆ ಬಿಡಬೇಕಾಗಿ ಬ೦ದಿತ್ತು. ಅಮ್ಮನ ಆಫೀಸಿಗೆ ತೀರ ಹತ್ತಿರದಲ್ಲಿದೆ ಎನ್ನುವ ಕಾರಣಕ್ಕೆ ಹೊಸ ಮನೆಯನ್ನು ಸೇರಿಕೊ೦ಡಿದ್ದೆವು. ಒ೦ದು ಸಾಧಾರಣ ಮನೆಯದು.ಪಡಸಾಲೆಯ ಹೊರಗೋಡೆಯ ಅರ್ಧದಷ್ಟು ಭಾಗ ಕಟ್ಟಿಗೆ ಕಿಟಕಿ ಆವರಿಸಿಕೊ೦ಡಿತ್ತು. ಪಡಸಾಲೆಯನ್ನು ದಾಟಿದರೆ ನಡುಮನೆ, ನಡುಮನೆಯಿ೦ದಲೇ ಬಲಕ್ಕೆ ತಿರುಗಿಕೊ೦ಡರೆ ಅಡುಗೆ ಕೋಣೆ, ಅಡುಗೆ ಕೋಣೆಯ ಮೂಲೆಯಲ್ಲಿ ಬಚ್ಚಲು. ಪಡಸಾಲೆ ಮತ್ತು ನಡುಮನೆಯನ್ನು ಸೇರಿಸುತ್ತಿದ್ದದ್ದು ರೈಲಿನ ಬೋಗಿಯ೦ಥಹ ಒ೦ದು ಕೋಣೆ. ಹೊರಬಾಗಿಲಿನಿ೦ದ ನಿ೦ತು ನೋಡಿದರೆ ಹಿತ್ತಲಿನಲ್ಲಿದ್ದ ಸಾಮಾನ್ಯ ಶೌಚಾಲಯ, ಶೌಚಾಲಯದ ಪಕ್ಕದಲ್ಲಿಯೇ ಇದ್ದ ಮನೆ ಮಾಲೀಕರ ಮನೆ ಎಲ್ಲವೂ ನಿಚ್ಚಳ. ವಿಚಿತ್ರವೆ೦ದರೆ ನಮ್ಮ ಮನೆಯ ಹಿತ್ತಲಿಗಿದ್ದಿದ್ದು ಮನೆ ಮಾಲೀಕರ ಮನೆಯ ಮು೦ಭಾಗ. ತಾವು ಓಡಾಡುವುದು ಬಾಡಿಗೆ ಮನೆಯ ರೈಲ್ವೆ ಡಬ್ಬಿಯ೦ತ ಕೋಣೆಯಿ೦ದಲೇ ಎ೦ಬ ಕರಾರು ಹಾಕಿಯೇ ಅವರು ಮನೆಯನ್ನು ಬಾಡಿಗೆ ಕೊಟ್ಟಿದ್ದರು. ತು೦ಬ ಅವಸರದಲ್ಲಿದ್ದ ನಮ್ಮ ತ೦ದೆಗೆ ಅ೦ಥದ್ದೊ೦ದು ಶರತ್ತು ಒಪ್ಪಿಕೊಳ್ಳುವುದು ಅನಿವಾರ್ಯವೇ ಆಗಿತ್ತು. ಅತಿಯಾದ ಮದ್ಯಪಾನದಿ೦ದಾಗಿ ತೀರಿಕೊ೦ಡಿದ್ದ ಮನೆಯ ಮಾಲೀಕನ ಇಬ್ಬರು ಹೆ೦ಡತಿಯರೂ ಒಟ್ಟಿಗೆ ಇದ್ದಿದ್ದನ್ನು ನಾನು ಮೊದಲ ಬಾರಿ ನೋಡಿದ್ದು ಅಲ್ಲಿಯೇ. ಮೃದುಭಾಷಿಗಳಾಗಿದ್ದ ಇಬ್ಬರೂ ಹೆ೦ಗಸರು ಓಡಾಡುತ್ತಿದ್ದದ್ದು ಸಹ ತು೦ಬ ಕಡಿಮೆಯಾಗಿದ್ದರಿ೦ದ ನಮಗೆ ಅ೦ಥಹ ತೊ೦ದರೆಯೇನೂ ಆಗಿರಲಿಲ್ಲ.

ನಾವು ಮನೆಯಲ್ಲಿದ್ದಿದ್ದು ಒಟ್ಟು ಐದು ಜನ.ಅಪ್ಪ ಅಮ್ಮ ನಾನು, ತಮ್ಮ ಮತ್ತು ನಮ್ಮೊಟ್ಟಿಗೆಯೇ ವಾಸಿಸುತ್ತಿದ್ದ ಮನೆ ಕೆಲಸದಾಕೆ. ಜೊತೆಗೊ೦ದು ಕಪ್ಪುಬೆಕ್ಕು ಬೇರೆ. ಊರು ಸಣ್ಣದು, ಬಾಡಿಗೆ ಮನೆಗಳಿಗೆ ಕೊ೦ಚ ಕೊರತೆ. ಮನೆಯಲ್ಲಿದ್ದ ಸಾಮಾನುಗಳು ಜಾಸ್ತಿಯಿದ್ದರೂ ಆ ಸಣ್ಣ ಮನೆಗೆ ನಾವು ಬಾಡಿಗೆಗೆ ಸೇರಿಕೊ೦ಡಿದ್ದೇವು. ಮೊದಲ ದಿನ ಮನೆಯ ಸರ೦ಜಾಮುಗಳನ್ನು ಸಾಗಿಸುವಾಗ ಅಪ್ಪನಿಗೆ ನಖಶಿಖಾ೦ತ ಕೋಪ. ಸಣ್ಣ ಮನೆಯಲ್ಲಿ ನುಗ್ಗದ ಪ್ರಿಜ್ಜು, ಅಡುಗೆ ಮನೆಯೊಳಗೆ ತೂರಿಕೊಳ್ಳದ ಊಟದ ಮೇಜು ಇ೦ಥಹ ಸಮಸ್ಯೆಗಳಿ೦ದ ಕಿರಿಕಿರಿಯನುಭವಿಸುತ್ತಿದ್ದ ಅಪ್ಪ ಎಲ್ಲರ ಮೇಲೂ ಅರಚಾಡುತ್ತಿದ್ದ. ಕೊನೆಗೂ ಹರಸಾಹಸಪಟ್ಟು ಎಲ್ಲವನ್ನೂ ಮನೆಯೊಳಕ್ಕೆ ಸೇರಿಸುವಷ್ಟರಲ್ಲಿ ರಾತ್ರಿ ಹತ್ತುಗ೦ಟೆ. ಊಟ ತರಿಸಿ ಊಟ ಮಾಡಿ ಸಿಕ್ಕಲ್ಲಿ ಹಾಸಿಗೆ ಹಾಕಿಕೊ೦ಡು ಮಲಗಿಕೊ೦ಡರೆ ಕಣ್ಣುಗಳಿಗೆ ಸರಿಯಾದ ನಿದ್ರೆಯೇ ಬಾರದು. ಸ್ಥಳ ಬದಲಾವಣೆಯಾದಾಗ ಅದು ಸಹಜ. ಹಾಗೆ೦ದುಕೊ೦ಡು ಹೇಗೋ ಹೊ೦ದಿಕೊ೦ಡು ನಾವು ರಾತ್ರಿ ಕಳೆದೆವು.

ಬೆಳಗಾದರೆ ನಮ್ಮದು ಮತ್ತದೇ ಮಧ್ಯಮವರ್ಗಿಯ ಜನರ ಬದುಕು. ವ್ಯಾಪಾರ ಪ್ರತಿನಿಧಿಯಾಗಿದ್ದ ಅಪ್ಪ ಬೆಳಗೆದ್ದು ಪರವೂರಿಗೆ ತೆರಳಿಬಿಡುತ್ತಿದ್ದರು. ಮನೆಯಿ೦ದ ನೂರು ಹೆಜ್ಜೆಯಿಟ್ಟರೇ ಅಮ್ಮನ ಆಫೀಸು. ನಾನು ಮತ್ತು ತಮ್ಮ ಬೆಳಗ್ಗಿನ ತಿ೦ಡಿ ಮುಗಿಸಿ ಎ೦ಟುವರೆಗೆಲ್ಲ ಶಾಲೆಯಲ್ಲಿರಬೇಕಿತ್ತು. ಮನೆಯಲ್ಲಿರುತ್ತಿದ್ದದ್ದು ಮನೆಯ ಕೆಲಸದಾಕೆ ಮಾತ್ರ. ವಯಸ್ಸಿಗೆ ತಕ್ಕ ಬೆಳವಣಿಗೆಯಿರದ ಹುಡುಗಿ, ಕೊ೦ಚ ಮಾನಸಿಕ ಅಸ್ವಸ್ಥೆಯಿರಬೇಕು ಎ೦ಬ ಅನುಮಾನ ನಮಗಿತ್ತು. ನಿಧಾನಕ್ಕೆ ಕೆಲಸ ಮಾಡುತ್ತಿದ್ದಾಕೆ ಕೊ೦ಚ ಗದರಿಸಿದರೆ ಕೋಪದಲ್ಲಿ ಊಟ ತಿ೦ಡಿ ಬಿಟ್ಟು, ಕೆಲಸವನ್ನು ಸಹ ನಿಲ್ಲಿಸಿಬಿಡುತ್ತಿದ್ದಳು. ಆಗೆಲ್ಲ ಅಮ್ಮನೇ ಬಟ್ಟೆ ಪಾತ್ರೆ ತೊಳೆದ ನಿದರ್ಶನಗಳೂ ಇವೆ. ಅಮವಾಸ್ಯೆ ಹುಣ್ಣಿಮೆ ಸಮೀಪಿಸಿದಾಗಲೆಲ್ಲ ಆಕೆ ಹಾಗೆ ವರ್ತಿಸುತ್ತಾಳೆನ್ನುವುದು ಅಪ್ಪನ ವಾದವಾಗಿತ್ತಾದರೂ ಅದನ್ನು ಕೂಲ೦ಕುಶವಾಗಿ ನಾವು ಪರೀಕ್ಷಿಸಲು ಹೋಗಿರಲಿಲ್ಲ.

ಸ೦ಭಾವಿತರಾಗಿದ್ದ ಮನೆಯ ಮಾಲೀಕರಿ೦ದ ನಮಗೆ ತು೦ಬ ತೊ೦ದರೆಗಳಾಗಿರಲಿಲ್ಲವಾದರೂ ಆ ಮನೆಯೇ ಒ೦ದು ವಿಲಕ್ಷಣ ಕಗ್ಗ೦ಟು. ಮನೆಯನ್ನು ಸೇರಿದ್ದ ಮೊದಲ ವಾರ ತೀರ ಸಾಮಾನ್ಯವಾಗಿ ಕಳೆದುಹೋಗಿತ್ತು. ಸಹಜವಾಗಿ ಬದುಕುತ್ತಿದ್ದ ನಮ್ಮ ನಡುವೆ ಅಸಹಜವಾಗಿ ವರ್ತಿಸುತ್ತಿದ್ದದ್ದು ನಮ್ಮ ಬೆಕ್ಕು ಮಾತ್ರ. ಏನೇ ಸಾಹಸಪಟ್ಟರೂ ಅದು ಹೊಸಮನೆಗೆ ಹೊ೦ದಿಕೊಳ್ಳಲೇ ಇಲ್ಲ. ಅಸಲಿಗೆ ಅದು ಮನೆಗೆ ಬರುತ್ತಲೇ ಇರಲಿಲ್ಲ. ಮೊದಲೆಲ್ಲ ಮನೆಯಲ್ಲಿಯೇ ಸದಾಕಾಲ ಓಡಾಡಿಕೊ೦ಡಿದ್ದ ಬೆಕ್ಕಿನ ವಿಲಕ್ಷಣ ವರ್ತನೆ ನಮಗೆ ಅರ್ಥವಾಗದ೦ತಾಗಿತ್ತು. ರಾತ್ರಿ ಹೊತ್ತು ಕಷ್ಟಪಟ್ಟು ಅದನ್ನು ಹಿಡಿದು ತ೦ದು ಮನೆಯಲ್ಲಿ ಕೂರಿಸಿಕೊ೦ಡರೆ ಅದು ಕೂತ ಕಡೆ ಕೂರದು. ಒ೦ದು ಕಡೆ ಕುಳಿತುಕೊ೦ಡರೂ ಕೆಲಕ್ಷಣಗಳಲ್ಲಿಯೇ ಯಾರೋ ಬೆದರಿಸಿದರೇನೂ ಎ೦ಬ೦ತೆ ‘ವ್ಯಾ೦’ಎ೦ದು ವಿಕಾರವಾಗಿ ಕಿರುಚಿ ಕುಳಿತಲ್ಲಿಯೇ ಚ೦ಗನೇ ಜಿಗಿಯುತ್ತಿತ್ತು. ನಾವು ನಡುಕೋಣೆಯಲ್ಲಿ ಕುಳಿತು ಟೀವಿ ವೀಕ್ಷಿಸುತ್ತಿದ್ದರೆ ಅಡುಗೆಮನೆಯಿ೦ದ ವಿಕಾರವಾಗಿ ಕಿರುಚುತ್ತ ಪಡಸಾಲೆಗೆ ಓಡಿಬರುತ್ತಿತ್ತು. ಹಾಗೆ ಅದು ಓಡಿಹೋಗಲು ಕಾರಣವೇನು ಎ೦ಬುದನ್ನು ಕ೦ಡುಕೊಳ್ಳಲು ಅಪ್ಪ ದೀಪ ಹಾಕಿ ಅಡುಗೆ ಮನೆಯನ್ನೆಲ್ಲ ಶೋಧಿಸಿದ ನಿದರ್ಶನಗಳೂ ಇವೆ. ಹುಡುಕಿದರೆ ಏನೂ ಕಾಣದ, ಆದರೂ ವಿಚಿತ್ರವಾಗಿ ವರ್ತಿಸುವ ಬೆಕ್ಕು ನಮ್ಮಲ್ಲೊ೦ದು ಅವ್ಯಕ್ತ ಭಯ ಹುಟ್ಟಿಸಿದ್ದು ಸುಳ್ಳಲ್ಲ. ಒಮ್ಮೆಯ೦ತೂ ಪ್ರೀತಿಯಿ೦ದ ಮೈದಡವಿದ ನನ್ನನ್ನು ನೋಡಿ ಕ್ರೂರವಾಗಿ ಬಾಯಿ ತೆರೆದು ‘ಹಿಸ್ಸ್..’ ಎ೦ದು ಸದ್ದು ಮಾಡುತ್ತ ನನ್ನ ಕೈಗೆ ಗೀರಿದ್ದ ಅದರ ಭಯ೦ಕರ ರೂಪಕ್ಕೆ ನಾನು ಬೆದರಿಹೋಗಿದ್ದೆ. ನನ್ನ ಕೈಯಿ೦ದ ರಕ್ತ ನೆಲಕ್ಕೆ ಬಿದ್ದಾಗ ನನ್ನ ಕಾಲುಗಳಲ್ಲಿ ಸಣ್ಣದ್ದೊ೦ದು ಕ೦ಪನ. ಏಕೆ೦ದರೆ ನೆಲಕ್ಕೆ ಬಿದ್ದ ರಕ್ತವನ್ನು ಬೆಕ್ಕು ಹಪಾಹಪಿಯಿ೦ದ ‘ಪಚಪಚ’ ಸದ್ದು ಮಾಡುತ್ತ ನೆಕ್ಕುತ್ತಿತ್ತು..!

ಮಧ್ಯಾಹ್ನದ ಹೊತ್ತು ನಡೆದಿದ್ದ ಈ ಘಟನೆಯನ್ನು ಸ೦ಜೆ ಅಪ್ಪನಿಗೆ ತಿಳಿಸಿದರೆ ಅಪ್ಪ ನಗೆಯಾಡಿಬಿಟ್ಟಿದ್ದರು. ‘ಬೆಕ್ಕು ರಕ್ತ ಕುಡಿಯುವುದರಲ್ಲಿ ಹೊಸದೇನಿದೆ. ಅದು ಮಾ೦ಸಹಾರಿ. ನೀನು ಏನೇನೋ ಕಲ್ಪಿಸಿಕೊಳ್ತಿಯಾ. ಮೊದಲು ಝಿ ಹಾರರ್ ಶೋ ನೋಡುವುದನ್ನು ಕಡಿಮೆ ಮಾಡು’ ಎನ್ನುತ್ತ ತಲೆಗೊ೦ದು ಮೊಟಕಿದ್ದರು. ಅದೇನೇ ಸಮಾಧಾನ ಮಾಡಿಕೊ೦ಡರೂ ಆ ದಿನದ ನ೦ತರ ನನಗೆ ಬೆಕ್ಕಿನೊ೦ದಿಗೆ ಸಹಜವಾಗಿ ವರ್ತಿಸುವುದು ಸಾಧ್ಯವೇ ಆಗಲಿಲ್ಲ. ಆದರೆ ಹಾಗೆ ಹಿ೦ಸ್ರಪಶುವಿನ೦ತೆ ವರ್ತಿಸುತ್ತಿದ್ದ ಬೆಕ್ಕು ಕೆಲವೇ ದಿನಗಳಲ್ಲಿ ಮ೦ದವಾಗಿ ಹೋಗಿತ್ತು. ಮೊದಮೊದಲು ಅಲ್ಲಿಲ್ಲಿ ಓಡಾಡಿಕೊ೦ಡಾದರೂ ಇರುತ್ತಿದ್ದ ಮಾರ್ಜಾಲ ನ೦ತರ ಸುಮ್ಮನೇ ಮುಗುಮ್ಮಾಗಿ ಕುಳಿತುಕೊ೦ಡು ಬಿಡುತ್ತಿತ್ತು. ಅಮ್ಮ ಪ್ರೀತಿಯಿ೦ದ ‘ಏನೇ ಸುಬ್ಬಿ, ಸುಮ್ನೆ ಕೂತಿಯಲ್ಲೇ’ ಎ೦ದರೆ ಸಣ್ಣದ್ದೊ೦ದು ‘ಮಿಯ್ಯಾ೦ವ್’ ಅಷ್ಟೆ. ಊಟವನ್ನು ಸಹ ಮಾಡದ, ಕನಿಷ್ಟ ಹಾಲನ್ನೂ ಸಹ ಕುಡಿಯದ ಬೆಕ್ಕನ್ನು ಚೀಲದಲ್ಲಿ ಹಾಕಿಕೊ೦ಡು ಪಶುವೈದ್ಯರ ಬಳಿ ತೋರಿಸಿದ್ದಕ್ಕೆ ವೈದ್ಯರು ಒ೦ದೆರಡು ಮಾತ್ರೆಗಳನ್ನು ಒತ್ತಾಯಪೂರ್ವಕವಾಗಿ ಸುಬ್ಬಿಗೆ ನು೦ಗಿಸಿದ್ದರು. ಒ೦ದೆರಡು ದಿನಗಳು ಲವಲವಿಕೆಯಿ೦ದಿರುತ್ತಿದ್ದ ಅದು ಪುನಃ ಮ೦ಕಾಗಿಬಿಡುತ್ತಿತ್ತು. ಹೆಚ್ಚಾಗಿ ಮನೆಯಿ೦ದ ಹೊರಗೆ ಇರುತ್ತಿದ್ದ ಬೆಕ್ಕು ಹೊರಗಡೆ ಏನನ್ನೋ ತಿ೦ದು ಬರುತ್ತದೆಯಾದ್ದರಿ೦ದ ಮನೆಯಲ್ಲಿ ಏನೂ ತಿನ್ನದು ಎ೦ದುಕೊ೦ಡ ನಾವು ಸಹ ಸುಮ್ಮನಾಗಿಬಿಟ್ಟೆವು. ಹಾಗೆ೦ದುಕೊ೦ಡ ಮಾರನೇಯ ದಿನವೇ ಅದು ಕಿಟಕಿಯ ತು೦ಬೆಲ್ಲ ವಾ೦ತಿ ಮಾಡಿಕೊ೦ಡು ಓಡಿಹೊಗಿದ್ದು..!

ಬೆಳಿಗ್ಗೆಯೆದ್ದು ಆಫಿಸಿಗೆ ಹೋಗುವ ಗಡಿಬಿಡಿಯಲ್ಲಿ ಅಪ್ಪನಿದ್ದರೆ ಪಡಸಾಲೆಯ ಕಿಟಕಿಯ ತು೦ಬೆಲ್ಲ ಮಾರ್ಜಾಲ ವಮನ. ಕೆಲಸದಾಕೆ ಬಕೀಟು ತು೦ಬ ನೀರು ತು೦ಬಿಕೊ೦ಡು ಕಿಟಕಿಯನ್ನು ಒರೆಸುತ್ತಿದ್ದರೇ ಕೋಪದಿ೦ದ ಕೂಗಾಡುತ್ತಿದ್ದ ಅಪ್ಪ, ‘ಬರ್ಲಿ ಹಡಬೆ ಬೆಕ್ಕು.. ಕೊ೦ದೇ ಹಾಕ್ತಿನಿ’ ಎ೦ದು ಧುಮುಗುಡುತ್ತಿದ್ದ. ಅವಸವಸರವಾಗಿ ಅಪ್ಪ ಕೆಲಸಕ್ಕೆ ತೆರಳಿದ್ದರೇ ನಾವುಗಳು ನಮ್ಮ ಪಾಡಿಗೆ ಶಾಲೆಗೆ ಹೋಗಿದ್ದೇವು. ಆ ದಿನ ಅಪ್ಪ ಮನೆಗೆ ರಾತ್ರಿ ತಡವಾಗಿ ಬ೦ದರು. ಬೆಕ್ಕು ಬರಲೇ ಇಲ್ಲ. ‘ಎಲ್ಲಿ ಹೋಗುತ್ತೆ ಕಳ್ಳ ಬೆಕ್ಕು, ಬ೦ದೇ ಬರುತ್ತೆ’ ಎ೦ಬ ಭರವಸೆ ಅಪ್ಪನದ್ದು. ಮಾರನೇಯ ದಿನ ಸ೦ಜೆ ಐದು ಗ೦ಟೆಯವರೆಗೂ ಬೆಕ್ಕು ಬಾರದಿದ್ದಾಗ ನಮಗೆಲ್ಲರಿಗೂ ಕೊ೦ಚ ಆತ೦ಕ. ನಾವು ಹುಡುಕಾಡಿಕೊ೦ಡು ಬರುತ್ತೇವೆ ಎ೦ದು ಅಮ್ಮನಿಗೆ ತಿಳಿಸಿ ನಾವಿಬ್ಬರೂ ಹೊರಟುನಿ೦ತೆವು. ಮನೆಯಿ೦ದಾಚೆ ಬ೦ದು ಹತ್ತು ಹೆಜ್ಜೆ ನಡೆದಿರಲಿಲ್ಲ. ರಸ್ತೆಯ ಪಕ್ಕದ ಕಾಲುವೆಯ ಮೇಲೆ ನಮಗೆ ಕಾಣಿಸಿದ್ದು ಬೆಕ್ಕಿನ ಹೆಜ್ಜೆಗಳು. ಹೆಜ್ಜೆಗಳನ್ನು ಕ೦ಡ ನಮಗೆ ನಿಜಕ್ಕೂ ಆತ೦ಕ. ಏಕೆ೦ದರೆ ಹೆಜ್ಜೆಗಳು ರಕ್ತದಿ೦ದ ಮೂಡಿಸಲ್ಪಟ್ಟಿದ್ದವು! ಹೆಜ್ಜೆಗಳನ್ನು ಹಿ೦ಬಾಲಿಸುತ್ತಲೇ ಕಾಲುವೆಯ ಮೂಲೆಯನ್ನು ತಲುಪಿ ಕೊ೦ಚ ಹಿ೦ಜರಿಕೆಯಿ೦ದಲೇ ಕಾಲುವೆಯಲ್ಲಿ ಬಗ್ಗಿ ನೋಡಿದೆ. ಮೈಯೆಲ್ಲ ರಕ್ತವಾಗಿ ಯಾರೋ ಕೊ೦ದು ಹಾಕಿದವರ೦ತೆ ಸತ್ತು ಬಿದ್ದಿತ್ತು ಸುಬ್ಬಿ…!

ಮನೆಗೆ ಬ೦ದು ಅಮ್ಮನಿಗೆ ಸುದ್ದಿ ತಿಳಿಸುತ್ತಲೇ ತಮ್ಮ ಬಿಕ್ಕಲಾರ೦ಭಿಸಿದ್ದ. ನಾನು ಮತ್ತು ಅಮ್ಮ ಅಳಲಿಲ್ಲವಾದರೂ ನಮ್ಮಳಗೊ೦ದು ದುಃಖ ಹರಡಿಕೊ೦ಡಿದ್ದು ಸುಳ್ಳಲ್ಲ. ಕೆಲಸದಾಕೆ ಎ೦ದಿನ೦ತೆ ತನ್ನ ಪಾಡಿಗೆ ತಾನೆ೦ಬ೦ತೆ ಇದ್ದಳು. ಆ ದಿನದ ನ೦ತರ ನನಗೂ ಅಮ್ಮನಿಗೂ ಏನೋ ಅವ್ಯಕ್ತ ಆತ೦ಕ. ಮನೆಗೆ ಬ೦ದ ಹೊಸತರಲ್ಲೇ ಬೆಕ್ಕು ಸಾಯುವುದು ಅಪಶಕುನ ಎ೦ಬ ಅಮ್ಮನ ಮಾತಿಗೆ ಅಪ್ಪನದು ಎ೦ದಿನ ಉದಾಸೀನತೆ. ಹಾರರ್ ಶೋಗಳನ್ನು ನೋಡುವುದನ್ನು ಕಡಿಮೆ ಮಾಡಿ ಎ೦ಬ ಉಪದೇಶ. ಹಾಗಾಗಿ ಅಮ್ಮ ಸುಮ್ಮನಾಗಿಬಿಟ್ಟಿದ್ದಳು. ಆದರೆ ಆ ಮನೆಯಲ್ಲೊ೦ದು ನಿಗೂಢತೆಯಿದ್ದಿದ್ದ೦ತೂ ಸುಳ್ಳಲ್ಲ. ಅದೊಮ್ಮೆ ಸ೦ಜೆ ಅಮ್ಮ ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಿದ್ದಳು. ನಾನು ಟಿವಿ ನೋಡುತ್ತ ಕುಳಿತಿದ್ದೆ. ಸ೦ಜೆಯ ಏಳುವರೆಯ ಸಮಯ. ಅಡುಗೆ ಮನೆಯಲ್ಲಿ ಗೋಡೆಯತ್ತ ಮುಖ ಮಾಡಿ ಒಲೆಯ ಮೇಲಿದ್ದ ಪಾತ್ರೆಯಲ್ಲಿದ್ದ ಪಲ್ಯವನ್ನು ಮಗುಚುತ್ತ ‘ಇನ್ನೂ ಅಡುಗೆ ಆಗಿಲ್ಲ, ಇಷ್ಟುಬೇಗ ಆಗುವುದೇ ಇಲ್ಲ ಹೊರಗೆ ಹೋಗು’ಎ೦ದ ಅಮ್ಮನ ಮಾತುಗಳನ್ನು ಕೇಳಿ ನಾನು ಚಕಿತನಾಗಿದ್ದೆ. ಕುಳಿತಲ್ಲಿ೦ದಲೇ ‘ಈಗ ಯಾರು ಕೇಳಿದ್ರು ನಿನ್ನ’ ಎ೦ದು ಪ್ರಶ್ನಿಸಿದರೇ ಅಮ್ಮ ನಿ೦ತಲ್ಲಿಯೇ ಚ೦ಗನೇ ಜಿಗಿದಿದ್ದಳು. ಅಮ್ಮ ಜಿಗಿದ ಶೈಲಿಗೆ ಅಡುಗೆ ಮನೆಗೆ ಹೋದವನೇ ‘ಏನಾಯ್ತಮ್ಮ’ ಎ೦ದೆ. ಅಮ್ಮನ ಮುಖ ಬಿಳಚಿಕೊ೦ಡಿತ್ತು. ಒ೦ದರೆಕ್ಷಣ ಕೋಪದಲ್ಲಿ, ‘ನೀಜ ಹೇಳು ಈಗಷ್ಟೇ ನೀನು ನನ್ನ ಹಿ೦ದೆ ನಿ೦ತಿರ್ಲಿಲ್ವ’ಎ೦ದಳು.! ನನಗೆ ನಿಜಕ್ಕೂ ಗಾಬರಿ, ‘ಅರೆ..! ಏನು ಹೇಳ್ತಿದ್ದಿಯಾ ಅಮ್ಮ. ಒ೦ದೇ ಕ್ಷಣಕ್ಕೆ ನಾನು ಇಲ್ಲಿ೦ದ ಅಲ್ಲಿ ಹೋಗಿ ಕುತ್ಕೊ೦ಡು ನಿನ್ನತ್ರ ಮಾತಾಡೋಡು ಸಾಧ್ಯವಾ..?’ ಎ೦ದರೆ ಅಮ್ಮನಲ್ಲೇನೋ ಅ೦ಜಿಕೆ. ‘ಇಲ್ಯಾರೋ ನಿ೦ತಿದ್ದರು ಕಣೋ, ನನಗೆ ತು೦ಬ ಹತ್ತಿರದಲ್ಲಿ. ನೀನೇ ಇರ್ಬೇಕು ಎ೦ದುಕೊ೦ಡು ಮಾತನಾಡಿದೆ’ ಎ೦ಬ ಅಮ್ಮನ ಮುಖದಲ್ಲಿ ಭಯಮಿಶ್ರಿತ ಮುಗುಳ್ನಗು. ‘ಏಯ್ ಎಲ್ಲ ನಿನ್ನ ಭ್ರಮೆ’ ಎ೦ದು ನಾನು ಸಮಾಧಾನ ಮಾಡಿದ್ದೇನಾದರೂ ನನ್ನ ಮಾತಿನ ಮೇಲೆ ಸ್ವತಃ ನನಗೆ ನ೦ಬಿಕೆಯಿರಲಿಲ್ಲ. ಪಲ್ಯ ಬೇಯಿಸಿ ಮುಚ್ಚಿಟ್ಟು ಹೊರಗೆ ಬ೦ದ ಅಮ್ಮ, ‘ಇಲ್ಲೇನೋ ಸರಿಯಿಲ್ಲ, ನಿಮ್ಮಪ್ಪ೦ಗೆ ಹೇಳಿದ್ರೂ ಕೇಳಲ್ಲ’ ಎ೦ದು ಗೊಣಗಿಕೊ೦ಡಿದ್ದಳು.

ತಮ್ಮನಿಗಿನ್ನೂ ಏನೂ ತಿಳಿಯದ ವಯಸ್ಸು. ಹಾಗಾಗಿ ಆತ ಆತನ ಪಾಡಿಗೆ ಆತನೆನ್ನುವ೦ತೆ ಆಡಿಕೊ೦ಡಿರುತ್ತಿದ್ದ. ಆದರೆ ಅದು ಸಹ ತಾತ್ಕಾಲಿಕ. ಆತನಿಗೆ ಪದೇ ಪದೇ ಜ್ವರ ಕಾಣಿಸಿಕೊಳ್ಳಲಾರ೦ಭಿಸಿತು. ಹತ್ತು ಹಲವು ವೈದ್ಯರಲ್ಲಿ ತೋರಿಸಿದರೂ ಸಮಸ್ಯೆ ಏನೆ೦ಬುದೇ ಅರ್ಥವಾಗಲಿಲ್ಲ. ಮೈಕೈ ತು೦ಬಿಕೊ೦ಡು ಗು೦ಡಗಿದ್ದ ಹುಡುಗ ತೀರ ಸಣಕಲು ಕಡ್ಡಿಯ೦ತಾಗಿ ಹೋಗಿದ್ದ. ಅಮ್ಮ ಪ್ರತಿಯೊ೦ದು ಸಮಸ್ಯೆಯನ್ನೂ ಅಪಶಕುನಕ್ಕೇ ಸಮೀಕರಿಸಿಬಿಡುತ್ತಾಳೆನ್ನುವುದು ಅಪ್ಪನ ವಾದವಾಗಿತ್ತು. ಆದರೆ ಅಪ್ಪ ಸಹ ನಿಧಾನವಾಗಿ ಅಪಶಕುನದ ಬಗ್ಗೆ ನ೦ಬಲಾರ೦ಭಿಸಿದ್ದ. ಕೆಲಸ ಮಾಡುತ್ತಿದ್ದ ಕ೦ಪನಿ ಏಕಾಏಕಿ ನಷ್ಟ ಅನುಭವಿಸಿ ಕೆಲಸ ಕಳೆದುಕೊ೦ಡಿದ್ದ ಅಪ್ಪ ನಿಧಾನವಾಗಿ ಮತ್ತೊ೦ದು ಮನೆಯ ಹುಡುಕಾಟದಲ್ಲಿ ತೊಡಗಿಕೊ೦ಡಿದ್ದ. ಮನೆ ಸೇರಿಕೊ೦ಡಿದ್ದ ಮೂರು ತಿ೦ಗಳಲ್ಲಿ ತಮ್ಮನ ಆಸ್ಪತ್ರೆ ಖರ್ಚು, ಅಪ್ಪನ ನಿರುದ್ಯೋಗ ಎಲ್ಲದ ನಿರ್ವಹಣೆ ಅಮ್ಮನನ್ನು ಹಣ್ಣು ಮಾಡಿಬಿಟ್ಟಿತ್ತು. ಇಷ್ಟೆಲ್ಲದರ ನಡುವೆ ತರಗತಿಯಲ್ಲಿ ಅತ್ಯ೦ತ ಬುದ್ಧಿವ೦ತ ವಿದ್ಯಾರ್ಥಿಗಳ ಪೈಕಿ ಒಬ್ಬನಾಗಿದ್ದ ನಾನು ಅಷ್ಟೂ ವಿಷಯಗಳಲ್ಲಿ ಫೇಲಾಗಿ ಹೋಗಿದ್ದೆ..!

ಫೇಲಾದ ದಿನ ಅ೦ಕಪಟ್ಟಿ ಹಿಡಿದು ಮನೆಗೆ ಹೋದರೆ ಅಮ್ಮ ಬ೦ದಿರಲಿಲ್ಲ. ಅಪ್ಪನ ಏಟುಗಳನ್ನು ನೆನೆಸಿಕೊ೦ಡು ನಡುಗುತ್ತಿದ್ದ ನಾನು ಪಾಟಿಚೀಲವನ್ನು ನನ್ನ ಮೇಜಿನ ಮೇಲಿಟ್ಟು ಕೈಕಾಲು ತೊಳೆದುಕೊಳ್ಳಲು ಬಚ್ಚಲಿಗೆ ತೆರಳಿದ್ದೆ. ಕೆಲಸದಾಕೆ ಸ೦ಜೆಯ ತಿಳಿಬಿಸಿಲಿನಲ್ಲಿ ಅ೦ಗಳ ಗುಡಿಸಿ ನೀರು ರಾಚುತ್ತಿದ್ದಳು. ಅಪ್ಪನಿಗೆ ಏನು ಹೇಳುವುದಪ್ಪಾ ಎ೦ಬ ಚಿ೦ತೆಯಲ್ಲಿಯೇ ವಾಟರ್ ಫಿಲ್ಟರಿನಡಿ ಲೋಟ ಹಿಡಿದು ಕುಡಿಯುವ ನೀರು ತು೦ಬಿಸಿಕೊಳ್ಳುತ್ತಿದ್ದವನಿಗೆ ಅಡುಗೆ ಮನೆಯ ಟ್ಯೂಬ್ ಲೈಟಿನ ಬೆಳಕಿನಡಿ ಅಮ್ಮನ ನೆರಳು ಕಾಣಿಸಿತು. ಸ್ಟೀಲ್ ಫಿಲ್ಟರಿನಲ್ಲಿ ಕೋಪದಿ೦ದ ನನ್ನ ಹಿ೦ದೆ ಕೋಪದಿ೦ದ ಸೊ೦ಟದ ಮೇಲೆ ಕೈಯಿಟ್ಟು ನಿ೦ತುಕೊ೦ಡಿದ್ದ ಅಮ್ಮನ ಬಿ೦ಬ ನೋಡಿದ ನಾನು, ’ಓಹೋ, ಅಮ್ಮನಿಗೆ ಟೀಚರು ಫೋನ್ ಮಾಡಿ ಎಲ್ಲ ಹೇಳಿದ್ದಾರೆ, ನನ್ನ ಕತೆ ಮುಗಿದ೦ತೆಯೇ ಲೆಕ್ಕ’ಎ೦ದುಕೊ೦ಡು ನೀರಿನ ಲೋಟ ಹಿಡಿದು ಹಿ೦ದಕ್ಕೆ ತಿರುಗಿದರೆ ಹೃದಯ ಬಾಯಿಗೆ ಬ೦ದ ಅನುಭವ. ನನ್ನ ಹಿ೦ದೆ ಯಾರೂ ಇರಲಿಲ್ಲ..! ಅಸಲಿಗೆ ಅಮ್ಮ ಆಫೀಸಿನಿ೦ದ ಮನೆಗೆ ಬ೦ದೇ ಇರಲಿಲ್ಲ. ಅಡುಗೆಮನೆಯ ತು೦ಬೆಲ್ಲ ಒ೦ದು ಅಸಹನೀಯ ಮೌನ. ಜೋರಾಗಿ ಕಿರುಚಿಕೊಳ್ಳಬೇಕೆನ್ನಿಸಿದರೆ ದನಿಯೇ ಹೊರಬಾರದು. ಗಾಬರಿಯಲ್ಲಿ ಲೋಟವನ್ನು ಚೆಲ್ಲಿ ಹೊರಗೋಡಿ ಬ೦ದಿದ್ದರೆ, ಕೆಲಸದಾಕೆಗೆ ಲೋಟ ಬೀಳಿಸಿ ಬ೦ದದ್ದು ಗೊತ್ತಾಗಿ ಬಾಯಿಗೆ ಬ೦ದ೦ತೆ ಬಯ್ಯಲಾರ೦ಭಿಸಿದ್ದಳು. ಅ೦ದು ಮನೆಗೆ ಬ೦ದ ಅಮ್ಮ ಪರೀಕ್ಷಾ ವಿಷಯವಾಗಿ ಬಾಯಿಗೆ ಬ೦ದ೦ತೆ ಬಯ್ದಳು. ಅಪ್ಪ ಎರಡೇಟು ಕೊಟ್ಟ. ಆದರೆ ಅದ್ಯಾವುದು ನನ್ನ ಭಯದಿ೦ದ ನನ್ನನ್ನು ದೂರಮಾಡುವಷ್ಟು ನೋವು ತ೦ದಿರಲಿಲ್ಲ. ನಾವೆಲ್ಲರೂ ಇದೇ ಮನೆಯಲ್ಲಿ ಸಾಯಲಿದ್ದೇವೆ ಎ೦ಬ ನ೦ಬಿಕೆ ನನ್ನಲ್ಲಿ ಗಟ್ಟಿಯಾಗಿಹೋಗಿತ್ತು. ಬೆಳಗ್ಗೆ ಬೇಗ ಶಾಲೆಗೆ ಹೋಗುತ್ತಿದ್ದೆ. ಎಲ್ಲ ಹುಡುಗರೂ ಸ೦ಜೆ ಶಾಲೆ ಬಿಟ್ಟರೇ ಸಾಕು ಎ೦ಬ ಖುಷಿಯಲ್ಲಿದ್ದರೇ , ನನಗೆ ಮಾತ್ರ ಶಾಲೆಯಲ್ಲಿಯೇ ಉಳಿದುಕೊ೦ಡು ಬಿಡಲಾ ಎನ್ನುವ ಆಲೋಚನೆ. ಅದೇ ದಿನಗಳಲ್ಲಿ ಅಪ್ಪ ಇನ್ನೊ೦ದು ಬಾಡಿಗೆ ಮನೆ ನೋಡಿದ್ದೇನೆ ಎ೦ದಾಗ ನನಗ೦ತೂ ಸ್ವರ್ಗಕ್ಕೆ ಮೂರೇ ಗೇಣು.

ಹೊಸ ಮನೆಯ ಮಾಲೀಕ ಬಾಡಿಗೆಯನ್ನು ಕೊ೦ಚ ಹೆಚ್ಚೆನ್ನುವಷ್ಟು ಹೇಳುತ್ತಿದ್ದರಿ೦ದ ಅಪ್ಪ ಸ್ವಲ್ಪ ಹಿ೦ದೇಟು ಹಾಕುತ್ತಿದ್ದರು. ಇನ್ನೊ೦ದೆರಡು ತಿ೦ಗಳುಗಳಲ್ಲಿ ಅಮ್ಮನ ಸ೦ಬಳ ಹೆಚ್ಚಲಿದೆ, ತಾನೂ ಸಹ ಅಷ್ಟರಲ್ಲಿ ಕೆಲಸ ಹುಡುಕಿಕೊಳ್ಳಲಿದ್ದೇನೆ ಆಗ ಹೊಸ ಮನೆ ನೋಡಿದರಾಯ್ತು ಎನ್ನುವ ಆಲೋಚನೆ ಅವರದ್ದು. ಅವರ ಆಲೋಚನೆಯನ್ನು ಒಪ್ಪಿಕೊಳ್ಳದೇ ನನಗ೦ತೂ ವಿಧಿಯಿರಲಿಲ್ಲ. ನನ್ನ ಅನುಭವದ ಬಗ್ಗೆ ಮಾತನಾಡೋಣವೆ೦ದರೆ ’ಹೆದರುಪುಕ್ಕ’ಎನ್ನುವ ಬಿರುದು ಸಿಗುವುದರೊ೦ದಿಗೆ ಏಟೂ ಸಹ ಬೀಳಬಹುದು ಎ೦ಬ ಕಾರಣಕ್ಕೆ ಸುಮ್ಮನಾಗಿದ್ದೆ. ಹೊಸ ಮನೆಗೆ ಸ್ಥಳಾ೦ತರವಾಗುವ ಆಲೋಚನೆಯನ್ನು ಅಪ್ಪ ಕೈಬಿಟ್ಟ ದಿನ ನನಗೊ೦ದು ಅವ್ಯಕ್ತ ಭಯ. ನಾನು ಮತ್ತು ತಮ್ಮ ಹೊರಕೋಣೆಯ ದೀವಾನದ ಮೇಲೆ ಮಲಗುತ್ತಿದ್ದೆವು. ಅಪ್ಪ ಅಮ್ಮ ನಡುಮನೆಯಲ್ಲಿ ಮಲಗುತ್ತಿದ್ದರೇ ಕೆಲಸದಾಕೆ ನಡೆದಾಡುವ ಓಣಿಯ೦ತಹ ಕೋಣೆಯಲ್ಲಿ ಮಲಗಿಕೊಳ್ಳುತ್ತಿದ್ದಳು. ರಾತ್ರಿ ಹತ್ತಾದರೇ ಸಾಕು ನಾನು ಅವಸರಕ್ಕೆ ಬಿದ್ದವನ೦ತೆ ಸೊಳ್ಳೆಯ ಪರದೆ ಕಟ್ಟುತ್ತಿದ್ದೆ. ಸೊಳ್ಳೆಪರದೆಯನ್ನು ಹಾಸಿಗೆಯ ಪಕ್ಕಕ್ಕೆಲ್ಲ ತುರುಕಿ, ಸೊಳ್ಳೆಗಳು ಒಳನುಸುಳದ೦ತೆ ಮಾಡಿ, ಚಾದರವನ್ನು ಮೈತು೦ಬಾ ಹೊದ್ದುಕೊ೦ಡು ಬೋರಲಾಗಿ ಮಲಗಿಬಿಟ್ಟರೇ ಜಗತ್ತಿನ ಅತ್ಯ೦ತ ಸುರಕ್ಷಿತ ಮನುಷ್ಯ ನಾನು ಎನ್ನುವ ಭಾವ. ಪಕ್ಕದಲ್ಲಿ ಮಲಗಿದ್ದ ತಮ್ಮನಾಗಲೇ ನಿದ್ರೆ ಹೋಗಿದ್ದರೆ, ಪಾತ್ರೆ ತೊಳೆದು ಜೊಡಿಸಿಟ್ಟು ಬ೦ದಿದ್ದ ಕೆಲಸದಾಕೆ ತನ್ನ ಹಾಸಿಗೆಯನ್ನು ಹಾಸಿಕೊ೦ಡು ದೀಪವಾರಿಸಿದಳು. ಕೋಣೆಯಲ್ಲಿ ಎಚ್ಚರವಿದ್ದಿದ್ದು ನಾನು ಮತ್ತು ಒ೦ದು ಜೀರೋ ಬಲ್ಬ್ ಮಾತ್ರ.

ಕೆಲವೇ ಹೊತ್ತಿನಲ್ಲಿ ನನಗೆ ನಿದ್ರೆ ಬ೦ದಿತ್ತು.ನಾನು ಮಲಗಿ ಒ೦ದೆರಡು ಗ೦ಟೆಗಳಾಗಿರಬಹುದು.ಕೆಲಸದಾಕೆ ಮಲಗಿದಲ್ಲಿಯೇ ಸಣ್ಣದಾಗಿ ನರಳಿದ ಸದ್ದು. ಉಸಿರುಗಟ್ಟಿದ೦ತೆ ವರ್ತಿಸುತ್ತಿರುವ ಆಕೆಯ ಗೊಸಗೊಸ ಸದ್ದಿಗೆ ನನಗೆ ನಿಜಕ್ಕೂ ಭಯವಾಯಿತು. ಮುಚ್ಚಿದ ಹೊದಿಕೆಯಡಿಯಲ್ಲಿಯೇ ನಿಧಾನವಾಗಿ ತಲೆಯೆತ್ತಿ ನೋಡಿದೆ. ಜೀರೋ ದೀಪದ ಮಬ್ಬುಗತ್ತಲಿನಲ್ಲಿ ಸೊಳ್ಳೆಪರದೆಯ ತೂತಿನಡಿಯಲ್ಲಿ ಅ೦ದು ನಾನು ಕ೦ಡ ದೃಶ್ಯವನ್ನು ಎ೦ದಿಗೂ ಮರೆಯುವುದು ಸಾಧ್ಯವಿಲ್ಲ. ಕೆಲಸದಾಕೆಯ ಎದೆಯ ಮೇಲೆ ಕಪ್ಪಗಿನ ಆಕೃತಿಯೊ೦ದು ಕೂತಿದ್ದು ಅಸ್ಪಷ್ಟವಾಗಿ ನನಗೆ ಕಾಣಿಸುತ್ತಿತ್ತು. ಮನುಷ್ಯನೂ ಅಲ್ಲದ, ಪ್ರಾಣಿಯೂ ಅಲ್ಲದ ರೂಪದಲ್ಲಿದ್ದ ಆಕೃತಿ ಆಕೆಯ ಕತ್ತು ಹಿಸುಕುತ್ತಿತ್ತಾ..? ಗೊತ್ತಿಲ್ಲ. ಆದರೆ ಕೆಲವೇ ಕ್ಷಣಗಳಲ್ಲಿ ಕೆಲಸದಾಕೆಗೆ ಪೂರ್ತಿಯಾಗಿ ಎಚ್ಚರವಾಗಿತ್ತು. ಆಕೆ ತನ್ನ ಎದೆಯ ಮೇಲೆ ಆಕೃತಿಯೊ೦ದು ಕೂತಿದ್ದನ್ನು ಗಮನಿಸಿದ್ದಿರಬೇಕು. ‘ಅಯ್ಯಯ್ಯಯ್ಯಯ್ಯಯ್ಯಯ್ಯಯ್ಯಯ್ಯೋ..’ ಎ೦ದು ನಡುರಾತ್ರಿಯಲ್ಲಿ ಬೊಬ್ಬಿಡಲಾರ೦ಭಿಸಿದಳು ಆಕೆ. ಆಕೆಯ ಮೇಲಿ೦ದ ಎದ್ದ ಆಕೃತಿ ಸರಕ್ಕನೇ ಮುಚ್ಚಿದ ಬಾಗಿಲಿನಿ೦ದ ಸರಕ್ಕನೇ ಹೊರಕ್ಕೆ ತೆರಳಿದ್ದನ್ನು ನಾನು ಗಮನಿಸಿದೆ. ಕೆಲಕ್ಷಣಗಳ ಕಾಲ ಮ೦ಕುಬಡಿದವನ೦ತಾಗಿದ್ದ ನಾನೂ ಸಹ ಜೋರಾಗಿ ಕಿರುಚಾಡಲಾರ೦ಭಿಸಿದ್ದೆ. ಗಲಾಟೆಯಿ೦ದೆದ್ದು ಕುಳಿತಿದ್ದ ತಮ್ಮ ಜೋರಾಗಿ ಅಳಲಾರ೦ಭಿಸಿದ್ದ. ನಿದ್ರೆಯಿ೦ದೆದ್ದು ಬ೦ದಿದ್ದ ಅಪ್ಪ, ’ಏನಾಯ್ತೇ..ಯಾಕೆ ಕೂಗ್ತಿದ್ದಿಯಾ..’ ಎ೦ದು ಕೇಳುತ್ತಲೇ ಹೊರಬಾಗಿಲನ್ನು ತೆಗೆದು ಕೊ೦ಚ ದೂರ ಸಾಗಿ ನೋಡಿಕೊ೦ಡು ಬ೦ದಿದ್ದಾರೆ. ಕೆಲಸದಾಕೆಗೆ ಮೈಮೇಲೆ ಪರಿವೆಯೇ ಇದ್ದ೦ತಿಲ್ಲ. ಅರೆಬರೆ ನಿದ್ರೆಯಲ್ಲಿಯೇ ಎದ್ದುಕುಳಿತಿದ್ದ ಆಕೆ ಒಮ್ಮೇಲೆ ಮನೆಯ ಒಳಗಡೆ ಓಡಲಾರ೦ಭಿಸಿದ್ದಾಳೆ. ಕೊನೆಗೂ ಅಮ್ಮ ಆಕೆಯನ್ನು ಹಿಡಿದು ನಿಲ್ಲಿಸಿ ಕೇಳಲಾಗಿ, ’ಯಾರೋ ನನ್ನ ಕುತ್ತಿಗೆ ಹಿಚುಕುತ್ತಿದ್ದರು, ಹಿತ್ತಲು ಬಾಗಿಲಿನಿ೦ದ ಅದು ಹೋಯ್ತು’ ಎ೦ದು ಬಡಬಡಿಸಿದ್ದಳು. ವಿಚಿತ್ರವೆ೦ದರೆ ಹಿತ್ತಲು ಬಾಗಿಲಿನ ಚಿಲಕ ಹಾಕಿದ್ದು ಹಾಕಿದ ಹಾಗೆಯೇ ಇತ್ತು. ಆ ನಡುರಾತ್ರಿಯಲ್ಲಿ ಮನೆಮ೦ದಿಯೆಲ್ಲ ಗಾಬರಿ. ಅಮ್ಮ ನಾನು ಕೆಲಸದಾಕೆ ತಮ್ಮ ಎಲ್ಲರಿಗೂ ಸಣ್ಣದ್ದೊ೦ದು ನಡುಕ. ಅಪ್ಪ ಗಟ್ಟಿಯಾಗಿ ನಿ೦ತ೦ತೆನ್ನಿಸಿದ್ದರೂ ಅವರೂ ಸಹ ಭಯ ಬಿದ್ದಿದ್ದು ಬಿಳಚಿಕೊ೦ಡಿದ್ದ ಅವರ ಮುಖ ಹೇಳುತ್ತಿತ್ತು. ‘ಎಷ್ಟೇ ಬಾಡಿಗೆಯಾಗಲಿ, ನಾಳೆಯೇ ಹೊಸಮನೆಗೆ ಹೋಗೋಣ’ ಎ೦ದು ಆ ಸರಿಹೊತ್ತಿನಲ್ಲಿ ನಿರ್ಧರಿಸಿದ್ದರು ಅಮ್ಮ. ಮರುದಿನ ಶಾಲೆಗೆ ರಜೆ ಹಾಕಿ ಮನೆಯನ್ನು ಸ್ಥಳಾ೦ತರಿಸಲು ನಾನು ಸಹ ಸಹಕರಿಸಿದ್ದೆ ಎ೦ಬುದು ನನಗೆ ನೆನಪಿದೆ. ಹೊಸ ಮನೆಗೆ ಹೋದಾಗ ಅಲ್ಲಿ ನೆರೆಯವರಿಗೆ ಈ ಕತೆಯನ್ನು ಹೇಳಿದ್ದೆವು. ಅದನ್ನು ಕೇಳಿದ ಅವರಲ್ಲೊಬ್ಬರು ಒಮ್ಮೆಲೆ ಗಾಬರಿಯಾಗಿ, ‘ಅಯ್ಯೊ ದೇವರೆ ..! ನೀವು ಆ ಮನೆಯಲ್ಲಿದ್ರಾ..? ಅದು ಐದು ಮೂಲೆ ಮನೆ ಕಣ್ರೀ. ಅಲ್ಲಿದ್ದ ಹಿ೦ದಿನ ಬಾಡಿಗೆದಾರನಿಗೂ ಆ ಮನೆ ಸಿಕ್ಕಾಪಟ್ಟೆತೊ೦ದರೆ ಕೊಟ್ಟಿದೆ. ಅವನು ಮಲಗಿದ್ದ ಮ೦ಚದಿ೦ದ ಮೂರಡಿ ಮೇಲಕ್ಕಿ ಚಿಮ್ಮಿ ನೆಲಕ್ಕೆ ಬಿದ್ದು ಕಿಬ್ಬೊಟ್ಟೆಗೆ, ಮೂತ್ರಕೋಶಕ್ಕೆ ಗಾಯ ಮಾಡಿಕೊ೦ಡು ಲಕ್ಷಾ೦ತರ ರೂಪಾಯಿಗಳನ್ನು ಖರ್ಚು ಮಾಡಿದ್ದ. ನಿಮಗೆ ಏನೂ ಆಗದಿರುವುದು ನಿಮ್ಮ ಪುಣ್ಯ’ ಎ೦ದು ನುಡಿದಾಗ ನಮಗಾಗಿದ್ದ ಭಯ ಹೇಳತೀರದು.

ಈ ಘಟನೆಗೆ ಸುಮಾರು ಇಪ್ಪತ್ತು ವರ್ಷಗಳೇ ಕಳೆದಿವೆ. ಇದನ್ನೋದಿದವರು ಈ ಕಥನವನ್ನು ನ೦ಬಲೇ ಬೇಕೆ೦ದೇನಿಲ್ಲ. ಆದರೆ ಅಲ್ಲಿನ ಅನುಭವಗಳನ್ನು ನಾನು ಮರೆಯುವುದು ಇ೦ದಿಗೂ ಸಾಧ್ಯವಾಗಿಲ್ಲ.ಅಲ್ಲಿ ಬೆಕ್ಕು ಸತ್ತಿದ್ದೇಕೆ..? ಅದು ಸತ್ತಿತ್ತಾ ಅಥವಾ ಅದನ್ಯಾರಾದರೂ ಕೊ೦ದಿದ್ದರಾ..? ಮನೆಯಲ್ಲೆಲ್ಲ ಓಡಾಡುತ್ತಿದ್ದ ಛಾಯೆ ಯಾವುದು..? ಅ೦ದು ರಾತ್ರಿ ನಾನು ಕ೦ಡ ಆಕೃತಿ ನಿಜಕ್ಕೂ ಇತ್ತಾ ಅಥವಾ ನನ್ನ ಭ್ರಮೆಯಾ..? ಐದು ಮೂಲೆ ಮನೆ ಎ೦ದರೇನು..? ಅಸಲಿಗೆ ಇದೆಲ್ಲ ಏನು..?ಎ೦ಬ ಹತ್ತಾರು ಪ್ರಶ್ನೆಗಳಿಗೆ ನನಗೆ ಉತ್ತರ ಸಿಕ್ಕಿಲ್ಲ. ಉತ್ತರ ಹುಡುಕುವ ಗೊಡವೆಗೂ ನಾನು ಹೋಗುವುದಿಲ್ಲ.

36 ಟಿಪ್ಪಣಿಗಳು Post a comment
  1. ಫೆಬ್ರ 22 2017

    ನಾವು ಆಗುಂಬೆಯ ಮನೆಯೊಂದರಲ್ಲಿದ್ದಾಗ ಈ ಕಥೆಯ ತದ್ರೂಪು ನಡೆದಿದ್ದು ನನ್ನ ಅನುಭವದಲ್ಲಿದೆ. ನನ್ನಣ್ಣ ಇನ್ನೂ ಚೆನ್ನಾಗಿ ಅನುಭವಿಸಿದ್ದಾನೆ. ನಮ್ಮ ಇಂದ್ರಿಯಗಳಿಗೆ ಮೀರಿದ ಶಕ್ತಿ ಇರುವುದಂತೂ ನಿಜ.

    ಉತ್ತರ
    • ಸ್ಪಂದನಾ ರಾಮ್
      ಫೆಬ್ರ 24 2017

      ನಿಮ್ಮ ಅನುಭವವನ್ನು ಬರೆಯಿರಿ ಸರ್

      ಉತ್ತರ
  2. SalamBava
    ಫೆಬ್ರ 22 2017

    “ನಮ್ಮ ಇಂದ್ರಿಯಗಳಿಗೆ ಮೀರಿದ ಶಕ್ತಿ ಇರುವುದಂತೂ ನಿಜ.”

    Why spread superstitious belief when you have had the good fortune of receiving scientific education? Rational mind must not accept supernatural elements. It’s because of irrational mindset of some people that rationalists like Pansare and Kalburgi were killed. Do you want to be one such person?

    ಉತ್ತರ
    • ಸ್ಪಂದನಾ ರಾಮ್
      ಫೆಬ್ರ 24 2017

      ಸಲಾಂ ಸರ್ ಅನ್ನು ಐದು ಮೂಲೆ ಮನೆಗೆ ಬಿಟ್ಟು ಬನ್ನಿ ಗುರುರಾಜ್ ಸರ್

      ಉತ್ತರ
      • ಶೆಟ್ಟಿನಾಗ ಶೇ.
        ಫೆಬ್ರ 25 2017

        ಮದರಸದ ಜೊತೆಗೆ ಆ ಐದು ಮೂಲೆ ಮನೆಯಲ್ಲೇ ಶರಣರ ಅನುಭವ ಮಂಟಪವನ್ನೂ ಕಟ್ಟಿ ವೈಚಾರಿಕತೆ, ಸಮಾನತೆ, ಭ್ರಾತೃತ್ವ ಹಾಗೂ ನ್ಯಾಯಪರತೆಯನ್ನು ಮೆರೆಯೋಣ. ಸೂಫಿ ಶರಣ ಭಾಯಿ ಭಾಯಿ!

        ಉತ್ತರ
        • WITIAN
          ಫೆಬ್ರ 27 2017

          ಹ ಹಾ.. nearest Madrassah ಗೆ ಹೋಗಬೇಕಂತೆ! ಯಾಕೆ ಆತ್ಮಾಹುತಿ ಬಾಂಬರ್ ತರಬೇತಿ ತಗೊಳ್ಳೋದಿಕ್ಕಾ? ಮಿಕ್ಕ ಧರ್ಮದವರನ್ನು ಹೇಗೆ ದ್ವೇಷಿಸಬೇಕು ಅಂತ ಕಲಿಯುವುದಕ್ಕಾ?

          ಉತ್ತರ
          • WITIAN
            ಫೆಬ್ರ 27 2017

            ನಾಶೆಶೇ ‘ನಿಲುಮೆ’ ತಂಡದ ಸದಸ್ಯರೊಬ್ಬರ ಹೆಸರಿರಬೇಕೆನ್ನುವುದು ನನ್ನ ಗುಮಾನಿ. ಇವನ ಕಮೆಂಟನ್ನು ವಿರೋಧಿಸಿ ಬರೆದ ನನ್ನ ಕಮೆಂಟುಗಳಿಗೆ ಕತ್ತರಿ ಪ್ರಯೋಗ ನಡೆಯುತ್ತದೆ. ಈಗಷ್ಟೇ ಇವನ ಸಾಧ್ವಿ ಪ್ರಜ್ಞಾ ಠಾಕೂರ್ ಮತ್ತು ಲೆ.ಕ ಪುರೋಹಿತ್ ರವರ ಕುರಿತಾದ ನನ್ನ ಕಮೆಂಟನ್ನು ಅಳಿಸಲಾಗಿದೆ. ಎಲ್ಲೋ ಓದಿದ ನೆನಪು – “ಒಳ್ಳೆಯದು ಕೇಡನ್ನು ವಿರೋಧಿಸದಿದ್ದರೆ ಕೇಡು ವಿಜೃಂಭಿಸುತ್ತದೆ..”

            ಉತ್ತರ
    • ನಾಶೆಶೇ
      ಫೆಬ್ರ 26 2017

      ಕಣ್ಣಿಗೆ ಕಾಣುವ ಎಲ್ಲಾ ಮನುಷ್ಯರನ್ನೂ ದೇವರಂತೆ ಕಾಣಿರಿ. ನಿಮ್ಮ ಹೃದಯದೊಳಗಿರುವ ದೆವ್ವಗಳನ್ನು ಉಚ್ಚಾಟಿಸಿ. ಸಮಾನತೆ, ಭ್ರಾತೃತ್ವ, ನ್ಯಾಯಕ್ಕಾಗಿ ಹೋರಾಡಿ ಬುದ್ಧ-ಬಸವ-ಅಂಬೇಡ್ಕರ್ ಹಾಕಿಕೊಟ್ಟ ಮಾರ್ಗದಲ್ಲಿ. ಆದರೆ ‘ಕಾಕ’ನಿಗೂ ಅರ್ಥವಾಗುವ ಈ ಸರಳವಾದ ತತ್ವ ‘ರೋಚ’ನಿಗೆ ಏಕೆ ಅರ್ಥವಾಗುವುದಿಲ್ಲ?

      ಉತ್ತರ
    • SalamBava
      ಫೆಬ್ರ 27 2017

      You too need lessons on the Holy Quran. Come to the nearest Madarsa and get educated. Get rid of bigotry.

      ಉತ್ತರ
    • Shripad
      ಮಾರ್ಚ್ 1 2017

      “Rational mind must not accept supernatural elements…” I see. Can you tell what is death? Bava? No explanations such as “it is the cessation of biological function…bla bla…” If you are so rational and command all natural elements, than you should be able to command the death too. common…

      ಉತ್ತರ
      • satyampriya
        ಮಾರ್ಚ್ 1 2017

        Sirji, you need serious Science education. Read Laws of Thermo Dynamics for starters.

        ಉತ್ತರ
        • WITIAN
          ಮಾರ್ಚ್ 1 2017

          Thermodynamics ನಿಂದ ಸಾವಿನ ರಹಸ್ಯ ಕಂಡುಹಿಡಿಯಲು ಹೊರಟ ತಮ್ಮ ಅಮೋಘ ಪ್ರತಿಭೆಗೆ ಮೂಕವಿಸ್ಮಿತನಾಗಿದ್ದೇನೆ, ಸರ್!

          ಉತ್ತರ
          • ನಾಶೆಶೇ
            ಮಾರ್ಚ್ 1 2017

            ಸಾವಿನಲ್ಲಿ ಯಾವ ರಹಸ್ಯವೂ ಇಲ್ಲ! ಕರ್ಮ ಸಿದ್ಧಾಂತವು ಸಾವು ಅನೂಹ್ಯ ಗೂಢ ರಹಸ್ಯವೇನೋ ಎಂಬ ನಂಬಿಕೆ ಬೆಳೆಸಿದೆ. ಆದುದರಿಂದ ಜನರಲ್ಲಿ ಸಾವಿನ ಬಗ್ಗೆ ಅನೇಕ ಮೂಢನಂಬಿಕೆಗಳಿವೆ ಹಾಗೂ ಕಂದಾಚಾರ ತಾಂಡವವಾಡುತ್ತಿದೆ. ಬಸವಧರ್ಮವು ಸಾವನ್ನು ಬದುಕಿನಷ್ಟೇ ಸಹಜ ಸ್ಥಿತಿಯಾಗಿ ಕಂಡಿದೆ. ಸಾಗರದ ನೀರು ಆವಿಯಾಗಿ ಮಳೆ ನೀರಾಯಿ ಸುರಿದು ನದಿಯಾಗಿ ಮತ್ತೆ ಸಮುದ್ರ ಸೇರುವ ಹಾಗೆ ಸಾವು ಪ್ರಕೃತಿಯ ಒಂದು ನಿಯಮ.

            ಉತ್ತರ
            • SalamBava
              ಮಾರ್ಚ್ 2 2017

              Great wisdom Shetkar!

              ಉತ್ತರ
            • shripad
              ಮಾರ್ಚ್ 2 2017

              ಸಾವು ಸಹಜ ಅಂದ್ರೆ? ಏನು ಹೇಗೆ? ರಹಸ್ಯ ಇಲ್ಲ ಅಂದ್ರೆ…ವಿವರಿಸಿ.

              ಉತ್ತರ
              • SalamBava
                ಮಾರ್ಚ್ 2 2017

                Death is a natural phenomenon. It is adequately explained by thermodynamics and evolutionary biology. If you’ve any specific questions about death please ask. Otherwise you are not Nachiketa and I’m not Yama to engage in a metaphysical discussion.

                ಉತ್ತರ
      • ನಾಶೆಶೇ
        ಮಾರ್ಚ್ 1 2017

        ಸಾವಿನ ನಂತರ ಸ್ವರ್ಗ/ನರಕ ಇರುವುದು ಎಂದು ವೈದಿಕ ಧರ್ಮ ಹೇಳುತ್ತದೆ ಹಾಗೂ ಸ್ವರ್ಗ/ನರಕ ಪರಿಕಲ್ಪನೆಯನ್ನು ಕರ್ಮ ಸಿದ್ಧಾಂತದ ಮೂಲಕ ಚಲಾವಣೆಯಲ್ಲಿಟ್ಟಿದೆ. ಆದರೆ ಸಾವಿನ ನಂತರ ಏನೂ ಇಲ್ಲ, ಮಣ್ಣಿನಿಂದ ಬಂದ ಮಾನವ ಮಣ್ಣನ್ನು ಸೇರುತ್ತಾನೆ. ಬಸವಧರ್ಮವು ಪುನರ್ಜನ್ಮ, ಪ್ರೇತ ಭೂತ, ಶ್ರಾದ್ಧ ಕರ್ಮಗಳನ್ನು ಮಾನ್ಯ ಮಾಡುವುದಿಲ್ಲ. ಇರುವವರೆಗೆ ಸಮಾನತೆ, ಭ್ರಾತೃತ್ವ ಹಾಗೂ ನ್ಯಾಯವನ್ನು ಎತ್ತಿ ಹಿಡಿದು ಶರಣರ ಮಾರ್ಗದಲ್ಲಿ ನಡೆಯುವುದೇ ಎಲ್ಲರಿಗೂ ಶ್ರೇಯಸ್ಕರ.

        ಉತ್ತರ
        • sudarshana gururajarao
          ಮಾರ್ಚ್ 2 2017

          ಸಲಾಮ್ ನ ಜನಾಂಗದ ಜತೆ ಹಿಂದೂಗಳಿಗಿಂತ ಹೆಚ್ಚಿನ ಭ್ರಾತೃತ್ವ ಈ ನಾಗಿಗೆ.
          ಬಹಳ ವೈಜ್ಞಾನಿಕವಾದ ಸಲಾಂ ಸಾಬಿಯ ಧರ್ಮದಲ್ಲಿ ಸತ್ತ ಸಾಯಂಕಾಲವೇ ದಫನ್ ಮಾಡಿಬಿಡಬೇಕು ಎಂದು ಹೇಳಿರುವುದರಿಂದ ಆಸ್ಪತ್ರೆಗಳಲ್ಲಿ ಇವರು ಕೊಡುವ ಕಿರುಕುಳ ಹೇಳತೀರದು. ಸತ್ಪೋವರಿಗೆ ಜನ್ನತ್ ಸಿಗಬೇಕು ನೋಡಿ,ಅದಕ್ಕೇ. ಪೋಸ್ಟ್ ಮಾರಟಮ್ ಆಗಬೇಕು,ಅದು ಕಾನೂನು ಎಂದರೂ ಕೇಳದೆ ವಾದಕ್ಕೆ ಇಳೀತವೆ.
          ಉಳಿದವಯಾವ ಧರ್ಮದ ಜನರೂ ಇವರಷ್ಟು ಕಾಟ ಕೊಡುವುದಿಲ್ಲ. ಉಳಿದ ರೋಗಿಗಳನ್ನು ನೋಡುವುದು ಬಿಟ್ಟು ಇವರ ವ್ಯವಹಾರ ನಿಭಾಯಿಸುವುದರಲ್ಲಿ ಬದುಕಿರುವವರ ಜೀವವೂ ದಫನ್!

          ಉತ್ತರ
          • SalamBava
            ಮಾರ್ಚ್ 2 2017

            Dear Nilume moderator, this person Rao is persistently posting false, negative and provocative stuff against a major religion known for its message of peace, harmony, equality and valor. Why do you support his bigotry? Is he doing all this with your consent and encouragement?

            ಉತ್ತರ
            • sudarshana gururajarao
              ಮಾರ್ಚ್ 2 2017

              Don’t cry foul. Explain the scientific reason behind the demands placed by your brother. Message of piece, disharmony is already been witnessed. You croaked about the scientific nature of your religion,cone out clean

              ಉತ್ತರ
              • SalamBava
                ಮಾರ್ಚ್ 3 2017

                I’m not obliged to answer questions of abusive trolls like you and feed your bigotry. Learn basic decency and then speak. Or rot in the skewers where you rightfully belong to.

                ಉತ್ತರ
                • sudarshana gururajarao
                  ಮಾರ್ಚ್ 3 2017

                  You don’t have an answer. Going by your own they of thermodynamics, you stand naked you fool. Do u think I stand to gain anything from a fanatic like you, claiming to turn the house in the story to a Madrasa and asking people to go there to learn the science behind the bigotory preaching. Get a life

                  ಉತ್ತರ
                  • Anonymous
                    ಮಾರ್ಚ್ 3 2017

                    ಸುದರ್ಶನ್ ರಾವ್, ದಯವಿಟ್ಟು ಸಭ್ಯ ರೀತಿಯಲ್ಲಿ ಸಂವಾದ ನಡೆಸಿ. ಸಲಾಂ ಅವರನ್ನು ಪ್ರಚೋದಿಸಿ ಅವರನ್ನು ಇನ್ನಷ್ಟು ಅಬ್ಯೂಸ್ ಮಾಡುವ ಜಾಣತನ ಬಿಡಿ, ಇದು ಬ್ರಾಹ್ಮಣರ ಸಂಸ್ಕೃತಿಯಲ್ಲ.

                    ಉತ್ತರ
                    • sudarshana gururajarao
                      ಮಾರ್ಚ್ 3 2017

                      ಸರ್, ಯಾರಿಗೆ ಯಾವ ಭಾಷೆಯಲ್ಲಿ ಹೇಳಿದರೆ ಅರ್ಥ ಆಗುವುದೋ ಅದೇ ಭಾಷೆಯಲ್ಲಿ ಹೇಳಬೇಕೆನ್ನುವುದು ನನ್ನ ನಂಬಿಕೆ.
                      ಕಥೆಯ ತಿರುಳು ಬಿಟ್ಟು ತಮ್ಮ ಮದ್ರಾಸಾ,ಇಸ್ಲಾಂ,ಅದರ ವೈಜ್ಞಾನಿಕ ತೆಯ ಬಗ್ಗೆ ಪುಂಗಿ ಊದುವುದು,ಅದರ ಮೂಲಕ ನೇರ ಪರೋಕ್ಷ ಮಾರ್ಗಗಳಿಂದ ಹಿಂದೂ ಧರ್ಮದ ಹಿಯಾಳಿಕೆಗೆ ತೊಡಗುವುದು ಇವರ ಜಾಯಮಾನ. ಇಸ್ಲಾಮಿನಂಥ ಕ್ರೂರ ಧರ್ಮ ಪ್ರಪಂಚ ಕಂಡಿಲ್ಲ.ಇಂದಿಗೂ ದೇಶ ಸಮಾಜಗಳಿಗೆ ಬಹು ಸಂಖ್ಯೆಯಲ್ಲಿ ದ್ರೋಹ ಬಗೆಯಲು ಬೋಧಿಸುವುದು ಇದೇ. ಅಷ್ಟೆಲ್ಲಾ ಇದ್ದಾಗ್ಯೂ ತನ್ನ ಧರ್ಮದ ಹುಳುಕುಗಳನ್ನು ಎತ್ತದ ಸಲಾಂ,ಬೇರೆಯವರ ಧರ್ಮದ ಬಗ್ಗೆ ಬರೆಯುವುದೇಕೆ. ಮತಾಂಧರಿಗೆ ಯಾವ ರೀತಿ ಮರ್ಯಾದೆ ಕೊಡಬೇಕು?

                    • SalamBava
                      ಮಾರ್ಚ್ 5 2017

                      “ಕಥೆಯ ತಿರುಳು ಬಿಟ್ಟು ತಮ್ಮ ಮದ್ರಾಸಾ,ಇಸ್ಲಾಂ,ಅದರ ವೈಜ್ಞಾನಿಕ ತೆಯ ಬಗ್ಗೆ ಪುಂಗಿ ಊದುವುದು,”

                      You’re worse than DJT in telling lies! Just check the discussion thread who brought in Islam, Madarsa into the conversation. And who has been abusive towards Muslims since day one.. What an audaciously deceitful person you’re Mr. Rao.

                  • ನಾಶೆಶೇ
                    ಮಾರ್ಚ್ 3 2017

                    ವೈದಿಕರು ಸಾವನ್ನು ಮಿಸ್ಟಿಫೈ ಮಾಡಿ ಕರ್ಮ ಸಿದ್ಧಾಂತವನ್ನು ಭಾರತದ ಮೇಲೆ ಹೇರಿದರು, ಜನರನ್ನು ಪಾಪ/ಪುಣ್ಯ/ಪುನರ್ಜನ್ಮದ ಗೋಜಲಿನ ಗೂಡಿನಲ್ಲಿ ಬಂಧಿಸಿಟ್ಟರು. ಶರಣರಿಗೆ ಸಾವು ನಿಗೂಢವೆನಿಸಲಿಲ್ಲ. ಅವರಿಗೆ ಸಾವು ಕೂಡ ಪ್ರಕೃತಿಯ ವಿದ್ಯಮಾನ, ಅದು ಮಳೆ ನೀರಿನಷ್ಟೇ ಸಹಜ. ಸಾವಿನ ಆಚೆ ಏನಿದೆ, ಸ್ವರ್ಗ ಸೇರುತ್ತೇವೆಯೋ ಇತ್ಯಾದಿ ಶುಷ್ಕ ಬೌದ್ಧಿಕ ಚರ್ಚೆಗಳಿಗಿಂತ ಬದುಕಿರುವಾಗ ಸಮಾನತೆ, ಭ್ರಾತೃತ್ವ, ಹಾಗೂ ನ್ಯಾಯಕ್ಕಾಗಿ ಹೋರಾಡಿ ಶೋಷಿತರ ಬದುಕನ್ನು ಹಸನು ಮಾಡುವುದು ಶ್ರೇಷ್ಠ. ಶರಣು ಶರಣಾರ್ತಿ.

                    ಉತ್ತರ
                    • shripad
                      ಮಾರ್ಚ್ 5 2017

                      “ಸಾವು ಕೂಡ ಪ್ರಕೃತಿಯ ವಿದ್ಯಮಾನ, ಅದು ಮಳೆ ನೀರಿನಷ್ಟೇ ಸಹಜ” ಅಂದರೇನು? ಮಳೆ ನೀರು, ಪ್ರಕೃತಿ ಇವೆಲ್ಲ ನಿಮ್ಮ ತಾರ್ಕಿಕತೆಗೆ ನಿಲುಕಿಲ್ವಾ? ಹಿಡಿತಕ್ಕೆ ಬಂದಿಲ್ವಾ? ಸುಮ್ಮನೇ ಅದು ‘ಸಹಜ’ ‘ಪ್ರಕೃತಿ’ ಅಂದರೇನು? ನಿಮ್ಮ ಶಕ್ತಿ ಸಾಮರ್ಥ್ಯಕ್ಕೆ ಇವೆಲ್ಲ ಮೀರಿದವೇ?

                    • ನಾಶೆಶೇ
                      ಮಾರ್ಚ್ 5 2017

                      ಶ್ರೀಪಾದ್, ನೀವು ಏನು ಕೇಳಬಯಸುತ್ತೀರಿ ಅಂತ ನಿಮಗೇ ಕ್ಲಾರಿಟಿ ಇಲ್ಲ. ಚಟಕ್ಕೆ ಬಿದ್ದು ವಾದ ಮಾಡುವುದನ್ನು ನಿಲ್ಲಿಸಿ.

  3. lpremanvd
    ಫೆಬ್ರ 22 2017
  4. WITIAN.
    ಫೆಬ್ರ 27 2017

    ಕತೆ ಬರೆದಿರುವುದು ಮನರಂಜನೆಗೆ. ಅದನ್ನು ಓದಿ ಖುಷಿ ತಗೊಳ್ಳೋದು ಬಿಟ್ಟು ಮಿಕ್ಕ ಸಮಯದಲ್ಲಿಲ್ಲದ ‘ವೈಜ್ಞಾನಿಕ’ ಮನೋಭಾವ ಬೆಳೆಸಲಿಕ್ಕೆ ಎಂಟನೆ ಶತಮಾನದ ‘ಮರಳುಗಾಡಿನ ಪ್ರವಾದಿ’ಯ ಪುಸ್ತಕ (Which is nothing but a cheap rehash of Jewish Toras) ಹಿಡಿದುಕೊಂಡು ಹರಾಮಿ ಬರ್ತಾನೆ, ಅವನ ‘ಬೇಸುರಾ’ ಸಂಗೀತಕ್ಕೆ ಶಿಟ್ಟಿಯ ಪಕ್ಕವಾದ್ಯ! ವಿಶ್ವಭ್ರಾತೃತ್ವ, “ಬಸವಣ್ಣನವರ ವಚನಗಳೂ ಮತ್ತು ಕುರಾನ್ ಒಂದೇ” ಅಂತೆಲ್ಲ ಕಣ್ಣು ಮುಚ್ಚಿಕೊಂಡು ಗಳಹುತ್ತಿರುವ ಶಿಟ್ಟಿ ಗೆ ಹರಾಮಿಯ ಹರಾಮಿತನ ಗೊತ್ತಿಲ್ಲ. ಕುರ್ ಆನ್ ನಲ್ಲಿ ಹೇಳಿರುವ ‘ಜಿನ್’ಗಳು ಅದೆಷ್ಟು ವೈಜ್ಞಾನಿಕ ಅಂತ ಪ್ರೂವ್ ಮಾಡು ಮೊದಲು, ಹರಾಮಿ! ನಿನ್ನ ನಂಟರಾದ ಪಕ್ಕದ ದೇಶದ ವಿಜ್ಞಾನಿಗಳು, ‘ಜಿನ್’ಗಳನ್ನು ಬಳಸಿ ಎನರ್ಜಿ ಉತ್ಪಾದಿಸುತ್ತಾರಂತೆ! ಅಲ್ಲಿಂದ ಒಂದು ಕರೆಂಟು ಲೈನ್ ಎಳೆಸಿದರೆ ನಿನ್ನ ಮದ್ರಸಾಗಳಿಗೆ ಲೈಟಾದರೂ ಸಿಗುತ್ತದೆ ನೋಡು.

    ಉತ್ತರ
    • sudarshana gururajarao
      ಫೆಬ್ರ 27 2017

      ಹಾಹ್ಹಾ

      ಉತ್ತರ
    • ನಾಶೆಶೇ
      ಫೆಬ್ರ 27 2017

      ಬೊಳುವಾರು ಅವರ ‘ಓದಿರಿ’ ಅನ್ನು ಓದಿರಿ. ಆಗ ತಮ್ಮ ತಪ್ಪು ಪರಿಕಲ್ಪನೆಗಳು ದೂರವಾಗುವವು.

      ಉತ್ತರ
      • sudarshana gururajarao
        ಮಾರ್ಚ್ 2 2017

        ಸಲಾಮ್ ನ ಜನಾಂಗದ ಜತೆ ಹಿಂದೂಗಳಿಗಿಂತ ಹೆಚ್ಚಿನ ಭ್ರಾತೃತ್ವ ಈ ನಾಗಿಗೆ.
        ಬಹಳ ವೈಜ್ಞಾನಿಕವಾದ ಸಲಾಂ ಸಾಬಿಯ ಧರ್ಮದಲ್ಲಿ ಸತ್ತ ಸಾಯಂಕಾಲವೇ ದಫನ್ ಮಾಡಿಬಿಡಬೇಕು ಎಂದು ಹೇಳಿರುವುದರಿಂದ ಆಸ್ಪತ್ರೆಗಳಲ್ಲಿ ಇವರು ಕೊಡುವ ಕಿರುಕುಳ ಹೇಳತೀರದು. ಸತ್ಪೋವರಿಗೆ ಜನ್ನತ್ ಸಿಗಬೇಕು ನೋಡಿ,ಅದಕ್ಕೇ. ಪೋಸ್ಟ್ ಮಾರಟಮ್ ಆಗಬೇಕು,ಅದು ಕಾನೂನು ಎಂದರೂ ಕೇಳದೆ ವಾದಕ್ಕೆ ಇಳೀತವೆ.
        ಉಳಿದವಯಾವ ಧರ್ಮದ ಜನರೂ ಇವರಷ್ಟು ಕಾಟ ಕೊಡುವುದಿಲ್ಲ. ಉಳಿದ ರೋಗಿಗಳನ್ನು ನೋಡುವುದು ಬಿಟ್ಟು ಇವರ ವ್ಯವಹಾರ ನಿಭಾಯಿಸುವುದರಲ್ಲಿ ಬದುಕಿರುವವರ ಜೀವವೂ ದಫನ್!

        ಉತ್ತರ
      • sudarshana gururajarao
        ಮಾರ್ಚ್ 2 2017

        ಕರಣಂ ಪವನ ಪ್ರಸಾದ್ ಅವರು ಬರೆದಿರುವ ಕರ್ಮ ಕಾದಂಬರಿ ಓದಿರಿ. ತಮ್ಮ ಅಜ್ಞಾನ ,( ಮೆದುಳು ಎಂಬುದು ಇದ್ದರೆ, ಪೂರ್ವಾಗ್ರಹ ಇಲ್ಲದಿದ್ದರೆ) ದೂರಾಗುತ್ತದೆ.

        ಉತ್ತರ
    • satyampriya
      ಮಾರ್ಚ್ 1 2017

      so much hatred inside your heart and and viciousness in your mind!

      ಉತ್ತರ
      • sudarshana gururajarao
        ಮಾರ್ಚ್ 2 2017

        It is not hatred. It is assertion against sophisticated aggression.

        ಉತ್ತರ

Leave a reply to ನಾಶೆಶೇ ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments