ದೇವರ ನಾಡಿನಲ್ಲಿ ಮರಣ ಮೃದಂಗ
– ಮಲ್ಲಿ ಶರ್ಮ
ಬೋಟ್ ಹೌಸ್, ಸರೋವರಗಳು, ಅರಬೀ ಸಮುದ್ರ, ತೆಂಗು ಅಡಿಕೆ ಕೃಷಿ, ಆಹಾ ಈ “GOD’S OWN COUNTRY” ಇದೆಯಲ್ಲಾ, ಅಲ್ಲಿಯ ಟೂರಿಸಂ ಕುರಿತ HD ವಿಡಿಯೋ ಯೂಟ್ಯೂಬಲ್ಲಿ ನೋಡೋವಾಗ ಆಹಾ!!! ಇದಪ್ಪಾ ಸ್ವರ್ಗ ಅಂದ್ರೆ, ಅಂತ ಉದ್ಘಾರ ತೆಗೆದುಬಿಡ್ತಾರೆ ಪ್ರತಿಯೊಬ್ಬರೂ. ಆದರೆ ದೇವರ ಸ್ವಂತ ನಾಡಾದ ಕೇರಳದಲ್ಲಿ ಭಯಾನಕ ರಾಕ್ಷಸರು ಬೀಡು ಬಿಟ್ಟಿರೋ ಸಂಗತಿ ನಿಮಗೆಷ್ಟು ಗೊತ್ತು?
ಜಾತಿ ವ್ಯವಸ್ಥೆ, ಅಸ್ಪೃಷ್ಯತೆ ಇವೆಲ್ಲ ಒಂದಷ್ಟು ಕಡಿಮೆಯಾಗಿತ್ತಾದರೂ, ಸ್ವಾತಂತ್ರ್ಯ ಬಂದ ಸಮಯದಲ್ಲಿ ಕೇರಳದ ಕೆಲವು ಭಾಗದಲ್ಲಿ ಇವು ನೆಲೆಗೊಂಡಿತ್ತು ಅಂದರೆ ತಪ್ಪಾಗಲಾರದು. ಇಡೀ ಭಾರತದಾಧ್ಯಂತ ಪ್ರತಿಯೊಬ್ಬ ಜಾತಿಯವನನ್ನೂ ಒಂದುಗೂಡಿಸಲು ಗೋಖಲೆಯವರು ಸಾರ್ವಜನಿಕ ಗಣೇಶ ಚತುರ್ಥಿ ಆಚರಣೆ ಜಾರಿಗೆ ತಂದರೂ ಕೇರಳದಲ್ಲಿ ಅದು ನಡೆಯಲೇ ಇಲ್ಲ. ಯಾಕೆ ಗೊತ್ತಾ? ಮೇಲ್ಜಾತಿಯವನ ದಬ್ಬಾಳಿಕೆ, ಶ್ರೀಮಂತನ ದರ್ಪ, ಒಡೆದು ಆಳುವ ನೀತಿ, ಇವೆಲ್ಲದರಿಂತ ರೋಸಿ ಹೋಗಿದ್ದ ಕೇರಳದ ಜನತೆ ಅದ್ಹಂಗೋ ಕಮ್ಯೂನಿಸಂ ಕಡೆಗೆ ವಾಲಿಬಿಟ್ಟಿದ್ರು.. ಜಾತಿ ಇಲ್ಲ, ಮತಬೇಧವಿಲ್ಲ, ದೇವರಿಲ್ಲ ಎಂಬಂತಹ ಕಮ್ಯೂನಿಸ್ಟ್ ಚಿಂತನೆ ಬಹುಬೇಗನೆ ಕೇರಳೀಯರ ಮನಸ್ಸನ್ನ ಆಕ್ರಮಿಸಿಕೊಂಡಿತ್ತು. ಇಂದು ಬಹುತೇಕ ಜಾತಿ, ಮತ ಎಂಬ ಬೇಧ ಕೇರಳದಲ್ಲಿ ಕಡಿಮೆಯಾಗಿದೆ, ಆದರೆ……..
ಆದರೆ ಕೇರಳ ಕಮ್ಯೂನಿಸ್ಟ್ ಚಿಂತನೆಯನ್ನ ಮೈಗೂಡಿಸುವೂದರ ಮೊದಲೇ ಆರ್ ಎಸ್ ಎಸ್ ಚಿಂತನೆಯೆಡೆಗೆ ವಾಲಿತ್ತು ಎಂದರೆ ನೀವು ನಂಬಲೇ ಬೇಕು. ಸ್ವಾತಂತ್ರ್ಯ ಪೂರ್ವದಿಂದ ಹಿಡಿದು ಇಂದಿನವರೆಗೆ ಕೇರಳದಲ್ಲಿ ಅತ್ಯಂತ ಹೆಚ್ಚು ಶಾಖೆಗಳನ್ನ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹೊಂದಿದೆ. ಅಷ್ಟಾಗಿಯೂ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ನಾಶಗೊಂಡಿದ್ದು ಮಾತ್ರ ಕಮ್ಯೂನಿಷ್ಟರಿಂದ.. ಆದರೆ ಅದು ಕಮ್ಯೂನಿಷ್ಟರ ಎಡೆಯಲ್ಲಿ ಮಾತ್ರ.. ನೀವು ಕಮ್ಯೂನಿಷ್ಟ್ ಅಲ್ಲ ಎಂದಾದರೆ ನಿಮ್ಮ ಜಾತಿ ಮತ ಮೊದಲು ನೋಡ್ತಾರೆ ಜನ.. ಅಂತಹದೊಂದು ಪದ್ಧತಿ ದಶಕಗಳಿಂದ ಕೇರಳದಲ್ಲಿ ನಡೆದುಕೊಂಡು ಬಂದಿದೆ, ಅದಕ್ಕೂ ಕಾರಣ ಇದೆ. ಅದು ರಾಜಕೀಯ…
ಪ್ರತ್ಯೇಕ ಕೇರಳ ರಾಜ್ಯ ರೂಪುಗೊಂಡಾಗ ಮೊದಲು ಅಧಿಕಾರಕ್ಕೆ ಬಂದಿದ್ದು ಇಎಂಎಸ್ ನಂಬೂದರಿಪ್ಪಾಡ್ ನೇತೃತ್ವದ ಇದೇ ಕಮ್ಯೂನಿಸ್ಟ್ ಪಾರ್ಟಿ. ಕಮ್ಯೂನಿಸ್ಟ್ ಪಾರ್ಟಿ ಅಧಿಕಾರಕ್ಕೆ ಬಂದಾಗ ಆರ್ ಎಸ್ ಎಸ್ ಸಕ್ರೀಯವಾಗಿ ಕಾರ್ಯ ನಿರ್ವಹಿಸ್ತಾ ಇತ್ತು. ಇದು ಅಕ್ಷರಷಃ ಕಮ್ಯೂನಿಸ್ಟ್ ಪಾರ್ಟಿಗೆ ನುಂಗಲಾರದ ತುತ್ತಾಯಿತು. ಅಧಿಕಾರದ ಮದ ಏರಿಸಿಕೊಂಡ ಕಮ್ಯೂನಿಸ್ಟ್ ನಾಯಕರು ಇದಕ್ಕೊಂದು ಪರಿಹಾರ ಕಂಡು ಹಿಡಿಯಲೇಬೇಕಾದ ಅನಿವಾರ್ಯತೆಗೆ ಒಳಗಾದರು. ಆಗಲೇ ಶುರುವಾಗಿದ್ದು ನೋಡಿ ಹಿಂದೂಗಳ ಮಾರಣ ಹೋಮ.
ತಮಿಳಿನ #ವೇಟ್ಟೈಕಾರನ್ ಅನ್ನೋ ಸಿನೆಮಾದಲ್ಲಿ ಒಂದು ಡಯಲಾಗ್ ಬರುತ್ತೆ, “ವೇದನಾಯಗಂನ್ ಸೊನ್ನಾ #ಭಯಂ” ಅಂತ. ಭಯ ಅನ್ನೋದು ಇದ್ರೆ ಏನ್ ಬೇಕಾದ್ರೂ ಸಾಧಿಸಬಹುದು, ನಾವು ಹೇಳಿದ ಹಾಗೆ ಜನರನ್ನ ಕುಣಿಸಬಹುದು.. ಇದನ್ನ ಮಾಡಿ ತೋರಿಸಿದ್ದು ಕಮ್ಯೂನಿಸ್ಟ್ ಪಾರ್ಟಿ. ಕೇವಲ ಕೇರಳ ಮಾತ್ರವಲ್ಲ, ಅತ್ತ ಪ.ಬಂಗಾಳದಲ್ಲೂ ಕಮ್ಯೂನಿಸ್ಟ್ ಪಾರ್ಟಿ ದಶಕಗಳ ಕಾಲ ಆಡಳಿತ ನಡೆಸಿದ್ದು ಹೀಗೆಯೇ.. ಚೀನಾ, ರಷ್ಯಾ, ಕಮ್ಯೂನಿಷ್ಟರು ಎಲ್ಲೆಲ್ಲಿ ಆಡಳಿತ ನಡೆಸಿದ್ದಾರೋ ಅಲ್ಲೆಲ್ಲ ರಕ್ತದ ಓಕುಳಿ ಹರಿದಿದೆ, ಭಯ ಅನ್ನೋದು ಆವರಿಸಿದೆ. ಕೇರಳವೂ ಅದೇ ರೀತಿ ನಡೆದುಕೊಳ್ತು. ೧೯೬೯ ಡಿಸೆಂಬರ್ ೨೨ ರಂದು ಕೇರಳದಲ್ಲಿ ಮೊದಲ ರಾಜಕೀಯ ಕೊಲೆ ನಡೆದು ಹೋಯ್ತು.. ಅಲ್ಲಿ ತೀರಿಕೊಂಡಿದ್ದು ಓರ್ವ ಆರ್ ಎಸ್ ಎಸ್ ಸ್ವಯಂಸೇವಕ. ವಾಡಿಕ್ಕಲ್ ರಾಮಕೃಷ್ಣನ್ ಅಂತ ಆ ವ್ಯಕ್ತಿಯ ಹೆಸರು, ಹಗಲು ಹೊತ್ತಲ್ಲಿ ಟೈಲರ್ ಆಗಿದ್ದ ರಾಮಕೃಷ್ಣನನ್ನ.. ಆತನ ಟೈಲರಿಂಗ್ ಶಾಪ್‌ನಿಂದ ಹೊರಗೆಳೆದು ಕೊಚ್ಚಿ ಕೊಲೆ ಮಾಡಿದ್ದು ಇದೇ ಸಿಪಿಎಂ ಗೂಂಡಾಗಳು. ಅದರ ಮೊದಲ ಅಪರಾಧಿ ಯಾರು ಗೊತ್ತಾ? ಪ್ರಸ್ತುತ ಕೇರಳದ #ಮುಖ್ಯಮಂತ್ರಿ. ನೀವು ನಂಬಲೇಬೇಕು ಇದೆಲ್ಲ. ಅಂದು ವಾಡಿಕ್ಕಲ್ ರಾಮಕೃಷ್ಣನನ್ನ ನಗರ ಮಧ್ಯದಲ್ಲಿ ಕೊಚ್ಚಿ ಕೊಂದ ಕೇಸಿನ ಮೊದಲ ಅಪರಾಧಿ ಇಂದು ಕೇರಳದ ಮುಖ್ಯಮಂತ್ರಿ..
ವಾಡಿಕ್ಕಲ್ ರಾಮಕೃಷ್ಣನಿಂದ ಹಿಡಿದು ಮೊನ್ನೆ ಕೊಲ್ಲಂನಲ್ಲಿ ತೀರ್ಕೊಂಡ ರವೀಂದ್ರನಾಥ್ ಪಿಳ್ಳೈವರೆಗೆ ೨೦೦ಕ್ಕೂ ಅಧಿಕ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ಕಮ್ಯೂನಿಸ್ಟರ ರಕ್ತದಾಹಕ್ಕೆ ಬಲಿಯಾಗಿದ್ದಾರೆ. ಆದರಲ್ಲಿ ಡಿಸೆಂಬರ್ ೧ ೧೯೯೯ರಂದು ಕಣ್ಣೂರಿನ ಶಾಲೆಯೊಂದರಲ್ಲಿ ಪಾಠ ಮಾಡ್ತಾ ಇದ್ದ ಜಯಕೃಷ್ಣನ್ ಮಾಸ್ತರ್‌ರನ್ನ ಶಾಲಾತರಗತಿಯೊಳಗೆ ಮಕ್ಕಳ ಎದುರಲ್ಲೇ ಕೊಚ್ಚಿ ಕೊಲೆ ಮಾಡ್ತಾರೆ ಈ ಕಮ್ಯೂನಿಸ್ಟ್ ಕಿರಾತಕರು. ಜಯಕೃಷ್ಣನ್ ಮಾಸ್ತರ್ ಬಿಜೆಪಿ ಯುವ ಮೋರ್ಚಾದ ರಾಜ್ಯ ಉಪಾಧ್ಯಕ್ಷರಾಗಿದ್ದರು ಜೊತೆಗೆ ಸಂಘದ ಸಕ್ರೀಯ ಕಾರ್ಯಕರ್ತರೂ ಆಗಿದ್ದರು. ಕೇವಲ ಇಷ್ಟೇ ಕಾರಣ ಬೇಕಾಗಿದ್ದುದು ಕಮ್ಯೂನಿಷ್ಟರಿಗೆ, ಯಾವ ಜಾಗ, ಯಾರ ಮುಂದೆ ಅದ್ಯಾವುದೂ ಅವರಿಗೆ ಅಗತ್ಯವಿರಲಿಲ್ಲ. ಅವರು ಆಲೋಚಿಸಿದ್ದೊಂದೇ ಮಕ್ಕಳ ಎದುರಲ್ಲೇ ಕೊಂದರೆ ಮಕ್ಕಳು ಭಯಕ್ಕೆ ಮುಂದೆ ಸಂಘದ ಒಡನಾಟ ಇಟ್ಟುಕೊಳ್ಳಲಾರರು ಎಂದಷ್ಟೇ.. ಅಲ್ಲಿಗೆ ಓರ್ವ ಜನಮೆಚ್ಚಿದ ಶಿಕ್ಷಕ ಶಾಲಾ ತರಗತಿಯಲ್ಲಿ ಶವವಾಗಿ ಹೋಗಿದ್ದ..
ಮೊನ್ನೆಯಷ್ಟೇ ಕೇರಳದ ಗೃಹ ಮಂತ್ರಿ ಕೋಡಿಯೇರಿ ಬಾಲಕೃಷ್ಣನ್ ಒಂದು ಮಾತು ಹೇಳಿದ್ರು, “ಆರ್ ಎಸ್ ಎಸ್, ಮುಖ್ಯಮಂತ್ರಿ ಜೊತೆ ಚರ್ಚೆಗೆ ಬಂದರೆ ಈ ಕೊಲೆಗಳನ್ನ ರಾಜಕೀಯ ಧ್ವೇಷಗಳನ್ನ ನಿಲ್ಲಿಸುವತ್ತ ಗಮನಹರಿಸೋಣ” ಅಂತ. ಅದರರ್ಥ RSSನವರಿಗೆ ಜೀವ ಬೇಕಾದರೆ ಚರ್ಚೆಗೆ ಬರಲಿ, ಇಲ್ಲದೇ ಹೋದರೆ ನಾವು ನರಹತ್ಯೆ ಮಾಡುವೂದನ್ನ ನಿಲ್ಲಿಸಲಾರೆವು ಎಂದು. ಒಂದು ಅಧಿಕಾರದಲ್ಲಿರುವ ರಾಜಕೀಯ ಪಕ್ಷದ, ಮಹತ್ತರ ಹುದ್ದೆಯಲ್ಲಿರುವ ವ್ಯಕ್ತಿ ನುಡಿದ ಮಾತುಗಳಿವು ಎಂದರೆ ಸಿಪಿಎಂ ಎಂಬ ಪಕ್ಷ ಕೇರಳದಲ್ಲಿ ಎಂತಹ ಪರಿಸ್ಥಿತಿ ನಿರ್ಮಾಣ ಮಾಡಿದೆ, ಇನ್ನು ಮುಂದೆ ಯಾವ ಹಂತಕ್ಕೆಲ್ಲಾ ಹೋಗಬಹುದು ಎಂಬುದನ್ನ ಊಹಿಸಿ ನೋಡಿ. ಇದು ಕೇವಲ ರಕ್ತ ಚರಿತ್ರೆ, ಇದರ ಹೊರತಾಗಿ ಇವರಿಗೆ ಹೆದರಿ ಜೀವನ ಸಾಗಿಸುವ, ಅಕ್ಷರಷಃ ಜೀತದಾಳುಗಳಂತೆ ಬದುಕುವ ಸಾವಿರಾರು ಹಿಂದೂ ಕುಟುಂಬ ಕೇರಳದಲ್ಲಿದೆ, ಅದರಲ್ಲೂ ಬಹುತೇಕ ಕಣ್ಣೂರು ಜಿಲ್ಲೆಯೊಂದರಲ್ಲೇ ಇದೆ..
ಒಂದಷ್ಟು ಘಟನೆಗಳನ್ನ ನಿಮ್ಮ ಮುಂದೆ ಇಡ್ತೇನೆ ನೋಡಿ..
ನೀವು ಹಿಂದೂ ಆಗಿದ್ದು ಹಿಂದೂ ಆಚರಣೆಗಳನ್ನ ಮಾಡಿಕೊಂಡಿದ್ದು, ಅದರಲ್ಲಂತೂ RSSನ ಕಾರ್ಯಕರ್ತರು ಅಂತಾಗಿದ್ರೆ.
*ನಿಮ್ಮ ಮನೆಯ ಹೆಣ್ಮಗಳಿಗೆ ಮದುವೆ ಆಗಲ್ಲ ಅಂದ್ರೆ ಸಿಪಿಎಂನವರು ಮದುವೆ ಮಾಡಲು ಬಿಡಲ್ಲ.
*ನಿಮ್ಮ ಮನೆಯ ಮೇಲೆ ಯಾವಾಗ ಬೇಕಾದರೂ ದಾಳಿ ಆಗಬಹುದು.
*ನೀವು ಗುಂಪುಗೂಡಿ ನಿಲ್ಲಬಾರದು.
*ಒಂದಕ್ಕಿಂತ ಹೆಚ್ಚು ಜನ ಒಟ್ಟಿಗೆ ಕುಳಿತು ಊಟ ಮಾಡಬಾರದು.
*ನೀವು ಸಿಪಿಎಂ ಕಾರ್ಯಕರ್ತನಾಗಿದ್ದು, ನಿಮ್ಮ ಮಗ ಸಂಘದತ್ತ ಒಲವು ತೋರಿಸಿದ್ದಾನೆಂದರೆ ಆತನನ್ನ ಮನೆಯಿಂದ ಹೊರಗಟ್ಟಬೇಕು, ನಂತರ ಕುಟುಂಬಕ್ಕೆ ಸೇರಿಸಬಾರದು.
*ಸಿಪಿಎಂ ಆಡಳಿತ ನಡೆಸೋ ಪಂಚಾಯತ್‌ನಲ್ಲಿ ಹಿಂದೂ ಹಬ್ಬ ಹರಿದಿನಗಳನ್ನ ನಡೆಸಬಾರದು.
*ಸಿಪಿಎಂ ಆಡಳಿತ ನಡೆಸೋ ಪಂಚಾಯತ್‌ನಲ್ಲಿ ಶಾಖೆ ನಡೆಸಿದರೆ ಕಾರ್ಯಕರ್ತರ ಮೇಲೆ ಹಲ್ಲೆ ನಡೆಯುತ್ತೆ.
*ಯಾವುದೇ ಕಾರಣಕ್ಕೂ ಏನೇ ತೊಂದರೆ ಸಿಪಿಎಂನವರಿಂದ ಉಂಟಾದರೂ ಅವರನ್ನ ಪ್ರಶ್ನೆ ಮಾಡಬಾರದು, ಮಾಡಿದರೆ ಏಟು ಗ್ಯಾರಂಟಿ.
*ಅವರನ್ನ ಎದುರಿಸಿ ಚುನಾವಣೆ ನಿಂತರೆ ಅಪಹರಣ ಮಾಡಿ ಬೆದರಿಕೆ ಹಾಕಲಾಗುವೂದು.
*ಅವರ ಎದುರಿನಲ್ಲಿ ಕೇಸರಿ ಬಟ್ಟೆ ಹಾಕಿ ಓಡಾಡಬಾರದು.
ಓರ್ವ ಸಾಧಾರಣ ಉಪ್ಪು ಮೆಣಸು ಹಾಕಿ ಊಟ ಮಾಡುವ ವ್ಯಕ್ತಿಯಾದರೆ ಆತನಿಗೆ ಇಂತಹ ಅರಾಜಕತೆಗಳನ್ನ ಕಾಣೋವಾಗ ರಕ್ತ ಕುದಿಯಬಹುದು, ಆದರೆ ನಿಷ್ಠಾವಂತ ಸ್ವಯಂಸೇವಕರು ಅದೆಲ್ಲವನ್ನೂ ಸಹಿಸಿಕೊಂಡು ಎಲ್ಲಾ ದಬ್ಬಾಳಿಕೆಗಳನ್ನ ಸಹಿಸಿಕೊಂಡು ಬದುಕು ನಡೆಸ್ತಿದ್ದಾರೆ. ಕಣ್ಣೂರಿನ ಪಂಚಾಯತ್ ಒಂದರಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿದ ಬಿಜೆಪಿ ಕಾರ್ಯಕರ್ತರ ಜೀಪು ತಡೆದು ಅವರನ್ನ ಹೊಡೆದು ಬೆದರಿಸಿ, ಬಿಜೆಪಿ ಬಾವುಟ ಹಾರಾಡ್ತಾ ಇರೋ ಅದೇ ಜೀಪಲ್ಲಿ ಅದೇ ಬಿಜೆಪಿಯ ಪ್ರಚಾರಕರಿಂದ ಸಿಪಿಎಂ ಪರ ಮತ ಯಾಚನೆ ಮಾಡಿಸಿ ಊರಿನಿಂದ ಹೊರಗಟ್ಟಿದ ಪ್ರಸಂಗ ದೇಶದ ಎಷ್ಟು ಜನರಿಗೆ ಗೊತ್ತು? ಅಂತಹ ಸಂದರ್ಭಕ್ಕೆ ಸಾಕ್ಷಿಯಾದ ಆ ನಾಲ್ವರು ಬಿಜೆಪಿ ಕಾರ್ಯಕರ್ತರ ಮಾನಸಿಕ ಪರಿಸ್ಥಿತಿ ಎಂತಹ ಸ್ಥಿತಿಗೆ ತಲುಪಿರಬಹುದು ಎಂದು ಊಹಿಸಿ ನೋಡಿ. ಇಂತಹ ದಬ್ಬಾಳಿಕೆಗಳು ಒಂದಾ ಎರಡಾ?
ಆತನ ಹೆಸರು ಹೆಸರು ನಿಖಿಲ್ ಅಗಷ್ಟೇ ೨೦/೨೨ ವಯಸ್ಸಾಗಿತ್ತು. ತಂದೆ ಕಮ್ಯೂನಿಸ್ಟ್ ಕಾರ್ಯಕರ್ತ, ಮಗ ಮಾತ್ರ ಸಂಘದತ್ತ ಒಲವು ತೋರಿದ್ದ. ಸಿಪಿಎಂ ಗೂಂಡಾಗಳು ಮನೆಗೆ ಬಂದ್ರು, ವಿಚಾರಣೆ ನಡೆಸಿದ್ರು. ನಿಖಿಲ್ ಹೇಳಿದ್ದಿಷ್ಟೇ “ನಿಮಗೊಂದು ನಂಬಿಕೆ ಇದೆ, ನನಗೊಂದು ನಂಬಿಕೆ ಇದೆ, ನೀವು ನಿಮ್ಮ ನಂಬಿಕೆಯಂತೆ ಕಾರ್ಯಾಚರಣೆ ನಡೆಸುತ್ತೀರಿ, ನಾನು ನನ್ನ ನಂಬಿಕೆಯಂತೆ ಬದುಕುತ್ತೇನೆ”.. ಮಾರನೇ ದಿನ ಹೆತ್ತವರು ಆತನನ್ನ ಚಿತೆಯ ಮೇಲೇರಿಸಿದ್ದರು… ಕಮ್ಯೂನಿಸ್ಟ್ ಎಂದರೆ ಗೂಂಡಾಯಿಸಂ. ಅವರಿಗೆ ಅಧಿಕಾರ ಬೇಕೂ ಎಂದರೆ ಎಂತಹ ನೀಚ ಕೆಲಸ ಮಾಡಲೂ ಹೇಸುವವರಲ್ಲ. ಈಗ ೨೧ನೇ ಶತಮಾನದಲ್ಲಿದ್ದೇವೆ. ಕಳೆದ ಐದಾರು ದಶಕಗಳಲ್ಲಿ ನೂರಾರು ಬಡ ಹಿಂದೂ ಸ್ವಯಂಸೇವಕರ ರಕ್ತ ಕಮ್ಯೂನಿಸ್ಟ್ ರಕ್ತದಾಹಿಗಳಿಂದ ಹೊಳೆಯಾಗಿ ಹರಿದಿದೆ. ಎರಡೂ ಕಿಡ್ನಿ ಕಳೆದುಕೊಂಡು ಹಾಸಿಗೆ ಹಿಡಿದ ವ್ಯಕ್ತಿಯಿಂದ ಹಿಡಿದು ಪುಟ್ಟ ಪುಟ್ಟ ಮಕ್ಕಳಾದಿಯಾಗಿ, ವಯೋ ವೃದ್ಧೆಯನ್ನೂ ಬಿಡದೆ ಹಿಂದೂ, ಸಂಘದ ಕಾರ್ಯಕರ್ತ ಎಂಬ ಕಾರಣಕ್ಕೆ ಕೊಂದ ನೀಚರು ಕಮ್ಯೂನಿಸ್ಟರು. ಇಂದಿಗೂ ಜೀವಭಯದಿಂದ ಬದುಕುವ ಪರಿಸ್ತಿತಿ ಕಣ್ಣೂರು ಜಿಲ್ಲೆಯಾಧ್ಯಂತ ಹಿಂದೂ ಬಾಂಧವರಿಗಿದೆ. ಇಷ್ಟಾದರೂ ಹೋರಾಟದಿಂದ ಬದುಕು ನಡೆಸ್ತಿದ್ದಾರೆ ಅಲ್ಲಿಯ ಹಿಂದೂ ಬಂಧುಗಳು.
ಮೊತ್ತಮೊದಲ ನರಮೇಧ ನಡೆಸಿದ ಪಿಣರಾಯಿ ವಿಜಯ ಇಂದು ಅಧಿಕಾರ ಹಿಡಿದು ಆಳ್ತಾ ಇದ್ದಾನೆ. ಒಂದು ವರ್ಷ ಪೂರ್ಣಗೊಳ್ಳುವೂದರ ಒಳಗೆ ೮ ನರಮೇಧ ಕೇರಳದಾಧ್ಯಂತ ನಡೆದಿದೆ. ಇಷ್ಟರ ಹೊರತಾಗಿ ಇದೇ ೨೫ರಂದು ಮಂಗಳೂರಿನ ಪವಿತ್ರ ಭೂಮಿಯಲ್ಲಿ ಐಕ್ಯತಾ ರ‌್ಯಾಲಿಯಲ್ಲಿ ಭಾಗವಹಿಸ್ತಿದಾನೆ.. ಈಗ ನೀವೇ ಹೇಳಿ, ಹಿಂದೂಗಳ ಮಾರಣ ಹೋಮಮಾಡಿದ ವ್ಯಕ್ತಿ ಐಕ್ಯತೆಯ ಕುರಿತು ಏನು ಹೇಳಲಿದ್ದಾನೆ? ಆತನನ್ನ ವಿರೋಧಿಸಲೇಬೇಕು…
#GoBackPinarayi