ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 8, 2017

42

ಅಸಹಿಷ್ಣುತೆ, ಅನೈತಿಕತೆ ಮತ್ತು ನಮ್ಮ ಬೌದ್ಧಿಕ ಜಗತ್ತು

‍ನಿಲುಮೆ ಮೂಲಕ

– ಎಂ. ಎಸ್. ಚೈತ್ರ
ನಿರ್ದೇಶಕರು, ಆರೋಹಿ ಸಂಶೋಧನಾ ಸಂಸ್ಥೆ.
ಬೆಂಗಳೂರು.

ಧಾರವಾಡದ ಸಾಹಿತ್ಯ ಸಂಭ್ರಮದ ಗೋಷ್ಠಿಯೊಂದರಲ್ಲಿ ಕಲಬುರ್ಗಿಯವರ ಹತ್ಯೆಯನ್ನು ಕುರಿತು ಅಜ್ಜಂಪುರ ಮಂಜುನಾಥ್‍ರವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರಗತಿಪರರ ದಾಂಧಲೆಯನ್ನು ಎದುರಿಸಬೇಕಾಯಿತು. ಈ ಕುರಿತು ಪ್ರಜಾವಾಣಿಯಲ್ಲಿ ಪದ್ಮರಾಜ್ ದಂಡಾವತಿಯವರು (ದಿನಾಂಕ 29 ಜನವರಿ 2017), ನಮ್ಮ ಕನ್ನಡದ ಪ್ರಗತಿಪರ ಬುದ್ಧಿಜೀವಿಗಳು, ಕಲ್ಬುರ್ಗಿಯವರ ಹತ್ಯೆ ಬಲಪಂಥೀಯರಿಂದಲೇ ನಡೆದದ್ದು ಎಂಬ ಬಿಂಬವೊಂದನ್ನು ಕಾಯ್ದಿಟ್ಟುಕೊಳ್ಳುವ ಭರದಲ್ಲಿ ಘಟನೆಯೊಂದರ ಸತ್ಯಾಸತ್ಯತೆ ಮತ್ತು ಅದಕ್ಕೆ ಇರಬಹುದಾದ ವಿವಿಧ ಆಯಾಮಗಳನ್ನು ಮಾತನಾಡಲೂ ಅವಕಾಶ ಕೊಡದೆ, ಅಸಹಿಷ್ಣುಗಳಾಗುತ್ತಿದ್ದಾರೆಂದು ಟೀಕಿಸಿದ್ದರು. ಈ ಲೇಖನಕ್ಕೆ ಪ್ರತಿಕ್ರಿಯೆಯಾಗಿ ಸಾಮಾಜಿಕ ಜಾಲತಾಣವೊಂದರಲ್ಲಿ (ಮಾಧ್ಯಮನೆಟ್.ಕಾಂ) ರಾಜೇಂದ್ರ ಚೆನ್ನಿಯವರು ದಂಡಾತಿಯವರ ಮೇಲೆ ತೀವ್ರವಾಗಿ ಹರಿಹಾಯ್ದಿದ್ದಾರೆ. ಚೆನ್ನಿಯವರ ಪ್ರತಿಕ್ರಿಯೆಯು ಕನ್ನಡದ ಬೌದ್ಧಿಕ ಜಗತ್ತಿನ ಕುರಿತು ಏನನ್ನು ಹೇಳುತ್ತಿದೆ ಎಂಬುದನ್ನು ಈ ಲೇಖನ ಅರ್ಥೈಸಿಕೊಳ್ಳಲು ಪ್ರಯತ್ನಿಸುತ್ತದೆ.

ಚೆನ್ನಿಯವರ ಪ್ರಕಾರ ದಂಡಾವತಿಯವರು ಹಾಗೂ ಅವರು ಕೆಲಸಮಾಡುವ ಪತ್ರ್ರಿಕೆಯಾದ ಪ್ರಜಾವಾಣಿ ಈ ಲೇಖನವನ್ನು ಪ್ರಕಟಿಸುವ ಮೂಲಕ ಅನೈತಿಕ ಕೃತ್ಯವೆಸಗಿದೆ ಎನ್ನುವುದೇ ಅವರ ಆರೋಪ. ಚೆನ್ನಿಯವರ ಪ್ರಕಾರ ಪ್ರಜಾವಾಣಿ ಸಂಸ್ಥೆಯವರು ಸಾಹಿತ್ಯ ಸಂಭ್ರಮದಂತಹ ಸಾಂಸ್ಕೃತಿಕ ಕಾರ್ಯಕ್ರಮವೊಂದಕ್ಕೆ ಸಹಪ್ರಾಯೋಜಕರಾಗಿದ್ದೇ ಅನೈತಿಕ ಹಾಗೂ ಇದು ಪ್ರಜಾವಾಣಿಯು ಹಿಂದಿನಿಂದ ಬೆಳೆಸಿಕೊಂಡು ಬಂದಿರುವ ಸಾಂಸ್ಕೃತಿಕ ಬ್ರಾಹ್ಮಣಶಾಹಿಯ ಮುಂದುವರೆದ ಭಾಗ. ನಮಗೆಲ್ಲಾ ತಿಳಿದಂತೆ ಕನ್ನಡದ ಹಲವಾರು ಪತ್ರಿಕೆಗಳು ನಮ್ಮ ನಡುವೆ ನಡೆಯುವ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರಾಯೋಜಕತ್ವವನ್ನು ವಹಿಸುವುದು ತಿಳಿದೇ ಇದೆ. ಈ ರೀತಿ ಕಾರ್ಯಕ್ರಮಗಳ ಪ್ರಾಯೋಜನೆಯ ಮೂಲಕ ಕನ್ನಡದ ದಿನಪತ್ರಿಕೆಗಳು ನಮ್ಮ ಸಾಂಸ್ಕೃತಿಕ ಜಗತ್ತನ್ನು ಶ್ರೀಮಂತಗೊಳಿಸಿವೆ. ಹಾಗಿದ್ದ ಪಕ್ಷದಲ್ಲಿ ಈ ಪರಂಪರೆಯ ಭಾಗವಾಗಿ ಪ್ರಜಾವಾಣಿ ಪತ್ರಿಕೆಯು ಸಾಂಸ್ಕೃತಿಕ ಕಾರ್ಯಕ್ರಮವೊಂದಕ್ಕೆ ಸಹಪ್ರಾಯೋಜಕತ್ವ ವಹಿಸುವುದು ಹೇಗೆ ಅನೈತಿಕ? ಪ್ರಜಾವಾಣಿಯ ಸಹಪ್ರಾಯೋಜಕತ್ವ ಒಂದರ್ಥದಲ್ಲಿ ಸಾಂಸ್ಕೃತಿಕ ಬ್ರಾಹ್ಮಣಶಾಹಿಯ ಮುಂದುವರಿಕೆ ಹೇಗಾಗುತ್ತದೆ? ಬ್ರಾಹ್ಮಣಶಾಹಿ ಎಂದರೇನು ಎಂಬುದೇ ಅರ್ಥವಾಗದಿರುವಾಗ ಚೆನ್ನಿಯವರು ಬ್ರಾಹ್ಮಣಶಾಹಿತ್ವವನ್ನು ಪ್ರಜಾವಾಣಿಗೆ ಆರೋಪಿಸುವ ಮೊದಲು ಬ್ರಾಹ್ಮಣಶಾಹಿ ಎಂದರೇನೆಂದು ಹೇಳಬೇಕಾಗುತ್ತದೆ. ಇಷ್ಟಕ್ಕೂ ಅರ್ಥವಾಗದಿರುವ ಬ್ರಾಹ್ಮಣಶಾಹಿಯಲ್ಲಿ ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ, ಮನೋವೈಜ್ಞಾನಿಕ ಇತ್ಯಾದಿ ಬ್ರಾಹ್ಮಣಶಾಹಿಗಳಿವೆ ಎಂಬುದು ಚೆನ್ನಿಯವರ ಅಭಿಪ್ರಾಯವೇ?

ಚೆನ್ನಿಯವರ ಪ್ರಕಾರ ಗೋಷ್ಠಿಯಲ್ಲಿ ನಡೆದದ್ದು ದಾಂಧಲೆಯಲ್ಲ ಮತ್ತು ಅದೊಂದು ಪ್ರತಿಭಟನೆ. ಅದರ ಕುರಿತು ವಿಶ್ಲೇಷಣೆಯನ್ನು ಮಾಡಿ ಪ್ರಜಾವಾಣಿಯಲ್ಲೇ ಬರುವ ಅಂಕಣದಲ್ಲಿ ಬರೆದದ್ದು ದಂಡಾವತಿಯವರ ಅನೈತಿಕತೆ. ದಂಡಾವತಿಯವರು ಈ ಲೇಖನವನ್ನು ಪ್ರಜಾವಾಣಿಯಲ್ಲಿ ಬಿಟ್ಟು ಬೇರೆಲ್ಲಾದರೂ ಬರೆದಿದ್ದರೆ ನೈತಿಕವಾಗುತ್ತಿತ್ತು! ದಂಡಾವತಿಯವರು ಗೋಷ್ಠಿಯಲ್ಲಿ ನಡೆದ ವಿಚಾರಗಳ ಆತ್ಮಾವಲೋಕನವನ್ನು ಅಥವಾ ಮಂಜುನಾಥರ ಬಲಪಂಥೀಯತೆಯನ್ನು ಪ್ರಜಾವಾಣಿಯಲ್ಲೇ ಟೀಕಿಸಿದ್ದರೆ ಅದು ನೈತಿಕವಾಗುತ್ತಿತ್ತು!! ಆದರೆ ಈ ದಾಂಧಲೆ ಕುರಿತು ಪ್ರಜಾವಾಣಿಯಲ್ಲಿ ಬರೆದಿದ್ದಕ್ಕಾಗಿ ಅದು ಪ್ರಜಾವಾಣಿಯವರ ಮತ್ತು ದಂಡಾವತಿಯವರ ಅನೈತಿಕತೆಯೇ ಆಗಿಬಿಟ್ಟಿದೆ.

ಚೆನ್ನಿಯವರ ಆರೋಪಗಳಿಂದ ಪ್ರಜಾವಾಣಿಯಾಗಲೀ ದಂಡಾವತಿಯವರಾಗಲೀ ಯಾಕೆ ಅನೈತಿಕರಾಗುತ್ತಾರೆ ಎಂಬುದಂತೂ ಅರ್ಥವೇ ಆಗುತ್ತಿಲ್ಲ. ಅವರು ಯುರೋಪಿಯನ್ನರ ನಾರ್ಮೆಟಿವ್ (ಅಥವಾ ಪ್ರೊಫೆಷನಲ್) ಎಥಿಕ್ಸ್ ಕುರಿತು ಮಾತನಾಡುತ್ತಿದ್ದಾರೆ ಎಂದು ಭಾವಿಸಿದರೂ ನಿಶ್ಚಿತವಾಗಿ ದಂಡಾವತಿಯವರಾಗಲೀ ಪ್ರಜಾವಾಣಿಯಾಗಲೀ ಯಾವುದೇ ಎಥಿಕಲ್ ನಿಯಮವನ್ನು ಮುರಿದಿದ್ದಾರೆಂದು ಅನಿಸುವುದಿಲ್ಲ ಅಥವಾ ಸಾಧಾರಣವಾಗಿ ಭಾರತೀಯರೆಲ್ಲರೂ ತಮ್ಮ ಜೀವನಾನುಭವದಿಂದ ಅರಿಯುವಂತೆ ಇದು ಸರಿ ಇದು ತಪ್ಪು ಎನ್ನುವ ಕ್ರಮದಿಂದ ಗುರುತಿಸಿದರೂ ಪ್ರಜಾವಾಣಿಯವರಾಗಲೀ ದಂಡಾವತಿಯವರಾಗಲೀ ಅನೈತಿಕರು ಎಂದು ಹೇಳಲಾಗುವುದಿಲ್ಲ. ಹಾಗಿದ್ದ ಪಕ್ಷದಲ್ಲಿ, ಒಂದೋ ಚೆನ್ನಿಯವರು ನೈತಿಕತೆಯ ಕುರಿತು ಗಂಭೀರವಾದದ್ದೇನನ್ನೂ ಹೇಳುತ್ತಿಲ್ಲ ಅನ್ನಬೇಕಾಗುತ್ತದೆ; ಇಲ್ಲವೇ ಈ ಆರೋಪಗಳನ್ನು ಸಾಬೀತುಪಡಿಸಬೇಕಾಗುತ್ತದೆ. ಇಲ್ಲವಾದಲ್ಲಿ ಇದು ಒಬ್ಬ ಚಿಂತಕನ ಬೇಜವಾಬ್ದಾರಿಯುತ ನಡವಳಿಕೆಯಾಗುತ್ತದೆ. ಯಾಕೆಂದರೆ, ವೈಯಕ್ತಿಕ ಅಭಿಪ್ರಾಯಗಳಾಚೆಗೆ ಕೇವಲ ವ್ಯಕ್ತಿಯೊಬ್ಬನ ಅನಿಸಿಕೆಯಿಂದಾಗಿ ಯಾವುದೇ ಸಂಸ್ಥೆ ಮತ್ತು ವ್ಯಕ್ತಿ ನೈತಿಕವೋ ಅನೈತಿಕವೋ ಆಗುವುದಿಲ್ಲ. ಚೆನ್ನಿಯವರಿಗೆ ಇಷ್ಟವಾದದನ್ನು ಬರೆಯಲಿಲ್ಲವೆಂದ ಮಾತ್ರಕ್ಕೆ ಪ್ರಜಾವಾಣಿಯವರಾಗಲೀ ದಂಡಾವತಿಯವರಾಗಲೀ ಅನೈತಿಕರಾಗುವುದಿಲ್ಲ. ಈ ಘಟನೆಯನ್ನು ಪ್ರಶ್ನಿಸುವ ಬದಲು ಹೊಗಳಿ ಬರೆದರೆ ಮಾತ್ರ ಪ್ರಜಾವಾಣಿ ಮತ್ತು ದಂಡಾವತಿಯವರು ನೈತಿಕವಾಗುತ್ತಿದ್ದರೇ? ಚೆನ್ನಿಯವರ ಆಶಯ ಹೀಗೆಯೆ ಇರುವಂತಿದೆ. ಹೀಗೆ ತಮಗಿಷ್ಟವಿಲ್ಲದ್ದನ್ನು ಬರೆದರೆ ಅನೈತಿಕವೆಂದೋ ಪುರೋಹಿತಶಾಹಿ ಎಂದೋ ಕರೆಯುವುದು ಕನ್ನಡದ ಪ್ರಗತಿಪರರಿಗೆ ಹೊಸತಲ್ಲ. ಈ ಆಪಾದನೆಗಳಿಂದ ಸ್ವತಃ ಅನಂತಮೂರ್ತಿಯವರಿಂದ ಹಿಡಿದು ದೇಶಕಾಲದಂತಹ ಪತ್ರಿಕೆಯವರಗೆ ಅನೇಕರು ಬಲಿಯಾದುದ್ದನ್ನು ಕನ್ನಡದ ಸಾರಸ್ವತ ಲೋಕ ಇನ್ನೂ ಮರೆತಿಲ್ಲ.

ಚೆನ್ನಿಯವರ ಪ್ರಕಾರ ಕಲ್ಬುರ್ಗಿಯವರ ಸಾವಿನ ಪ್ರಕರಣವನ್ನು ಒಂದು ಬಿಂಬವಾಗಿ ನೋಡಲಾಗುವುದಿಲ್ಲ, ಏಕೆಂದರೆ ಬಿಜೆಪಿಯವರ ಅಧಿಕಾರದ ನಂತರ ಬಲಪಂಥೀಯ ಸಂಘಟನೆಗಳು ರಾಜಕೀಯ ಬೆಂಬಲದೊಂದಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿವೆ ಮತ್ತು ಕಲ್ಬುರ್ಗಿಯವರ ಸಾವು ಈ ಅಸಹಿಷ್ಣುತೆಯ ರಾಜಕೀಯ ಸನ್ನಿವೇಶವೊಂದರ ಮೂರ್ತ ಉದಾಹರಣೆಯಾಗಿದೆ. ಚೆನ್ನಿಯವರ ಮಾತನ್ನೇ ಒಪ್ಪಿಕೊಳ್ಳುವುದಾದರೆ ಬಿಜೆಪಿ ಸರ್ಕಾರಕ್ಕೂ ಬಲಪಂಥೀಯರ ಅಸಹಿಷ್ಣ್ಣುತೆಗೂ ಸಂಬಂಧವಿದೆ ಹಾಗೂ ಭಾರತದಲ್ಲಿ ಬಲಪಂಥೀಯರು ಮಾತ್ರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿದ್ದಾರೆ ಎಂದಾಗುತ್ತದೆ. ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸವನ್ನು ಗುರುತಿಸಿದವರಿಗೆ ಈ ಅಭಿಪ್ರಾಯವನ್ನು ಒಪ್ಪಿಕೊಳ್ಳುವುದು ಕಷ್ಟವಾಗುತ್ತದೆ. ಕಳೆದ 70 ವರ್ಷಗಳಲ್ಲಿ ಸಮಾಜವಾದಿಗಳು, ಉದಾರ(ಲಿಬರಲ್)ವಾದಿಗಳೆನಿಸಿಕೊಂಡವರು, ಕಾಂಗ್ರೆಸ್ ಮತ್ತಿತರ ಎಡ ಚಿಂತನೆಯ ಒಲವುಳ್ಳ ಪಕ್ಷಗಳಿಗೆ ಸಂಬಂಧಪಟ್ಟವರು ನಡೆಸಿದ ತಮ್ಮ ವಿರೋಧಿಗಳ ಮೇಲಿನ ಆಕ್ರಮಣಗಳನ್ನು ಗಣನೆಗೆ ತೆಗೆದುಕೊಂಡರೆ ಕಳೆದ ಎರಡು ಮೂರು ವರ್ಷಗಳಲ್ಲಿ ಭಾರತದಲ್ಲಿ ಹೊಸದಾಗಿ ಏನೂ ಆಗಿಲ್ಲವೆನ್ನುವುದು ಅರ್ಥವಾಗುತ್ತದೆ. ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಸ್ಟರು, ಕಾಶ್ಮೀರದಿಂದ ನಿರಾಶ್ರಿತರಾದ ಪಂಡಿತರ ನರಮೇಧ… ಇತ್ಯಾದಿಗಳು ಭಾರತದ ಸಹಿಷ್ಣುತೆಗೆ ದೊಡ್ಡ ಉದಾಹರಣೆಗಳೇನೂ ಅಲ್ಲ! ಮತ್ತು ಈ ದೌರ್ಜನ್ಯಗಳಿಗೂ ಬಲಪಂಥೀಯರಿಗೂ ಯಾವ ಸಂಬಂಧವೂ ಇಲ್ಲ.

ಇಷ್ಟಾಗಿಯೂ ಕಲ್ಬುರ್ಗಿಯವರನ್ನು ಕೊಂದವರಾರೆಂದು ಪೊಲೀಸರು ಇನ್ನೂ ಸ್ಪಷ್ಟವಾಗಿ ಗುರುತಿಸಿಲ್ಲ. ಹಾಗಿದ್ದೂ ಚೆನ್ನಿಯವರಿಗೆ ಇದು ಬಲಪಂಥೀಯರದ್ದೇ ಕೃತ್ಯವೆಂದು ಸಾರುವ ಅವಸರವ್ಯಾಕೋ ತಿಳಿಯುತ್ತಿಲ್ಲ. ಇಷ್ಟಕ್ಕೂ ದಂಡಾವತಿಯವರು ಕಲ್ಬುರ್ಗಿಯವರ ಮೇಲೆ ಹಿಂದೆ ಲಿಂಗಾಯತರು ನಡೆಸಿದ ಹೋರಾಟದ ಕಡೆ ಗಮನ ಸೆಳೆದಿದ್ದಾರೆ. ಆ ತಕ್ಷಣ ಲಿಂಗಾಯತರು ಬಿಂಬ ರಾಜಕಾರಣ ಮಾಡುವುದಿಲ್ಲ ಮತ್ತು ಕಲ್ಬುರ್ಗಿಯವರನ್ನು ಕೊಂದವರು ಲಿಂಗಾಯತರಲ್ಲ ಮತ್ತು ಅದು ಬಲಪಂಥೀಯ ವೈಚಾರಿಕ ಅಸಹಿಷ್ಣುಗಳದ್ದೇ ಕೆಲಸ ಎಂದು ವಾದಿಸುವಾಗ ‘ಜಾತ್ಯತೀತರಾದ’ ಚೆನ್ನಿಯವರಿಗೆ ದಿಢೀರನೆ ಲಿಂಗಾಯತ ಜಾತಿ ಪ್ರೇಮ ಜಾಗೃತವಾದಂತೆ ಕಾಣಿಸುತ್ತಿದೆ!

ಇದನ್ನೆಲ್ಲ ನೋಡಿದರೆ ಚೆನ್ನಿಯವರಿಗೆ ನಿಜವಾಗಿಯೂ ಕಲ್ಬುರ್ಗಿಯವರನ್ನು ಕೊಂದವರಾರೆಂದು ತಿಳಿದಂತಿದೆ ಎಂಬ ಅನುಮಾನ ಬರುವುದಂತೂ ಸಹಜ. ಹಾಗಿದ್ದ ಪಕ್ಷದಲ್ಲಿ ಅದನ್ನು ಸರ್ಕಾರ ಮತ್ತು ಪೊಲೀಸರ ಮುಂದೆ ಸಾಕ್ಷಿಸಹಿತ ಬಹಿರಂಗ ಪಡಿಸಲು ಸಮಸ್ಯೆ ಏನು? ಚೆನ್ನಿಯವರೇ ಹೇಳುವಂತೆ ಪ್ರಗತಿಪರ ಸಂಘಟನೆಗಳ ಬಲವು ಈ ಬಿಂಬಗಳ ಮೇಲೆ ನಿಂತಿಲ್ಲವಾದ ಪಕ್ಷದಲ್ಲಿ ಅವರಿಗ್ಯಾಕೆ ದಂಡಾವತಿಯವರ ಲೇಖನ ಕಳವಳಕಾರಿಯಾಗಿ ಕಾಣಿಸುತ್ತಿದೆ? ಅಷ್ಟು ಮಾತ್ರವಲ್ಲ ಒಂದು ರೀತಿಯಲ್ಲಿ ಲೇಖಕರನ್ನು ಬಂಧಿಸಬಹುದು, ಪ್ರಜಾವಾಣಿ ಕಲ್ಲಿನ ಕಂಬವಾಗುತ್ತಿದೆ, ಸಾಹಿತ್ಯ ಸಂಭ್ರಮದಲ್ಲಿ ಭಾಗವಹಿಸುವುದಿಲ್ಲವೆನ್ನುವುದು ಬೆದರಿಕೆಯಲ್ಲವೇ? ಗೋಷ್ಠಿಯಲ್ಲಿ ನಡೆದದ್ದು ಪ್ರಗತಿಪರರ ಅಸಹಿಷ್ಣುತೆಯ ಪ್ರದರ್ಶನವಲ್ಲ ಅದೊಂದು ನೈತಿಕ ಪ್ರತಿಭಟನೆಯೆಂದು ಚೆನ್ನಿಯವರು ಪ್ರಗತಿಪರರ ಅನೈತಿಕತೆಯನ್ನು ಸಮರ್ಥಿಸುತ್ತಿಲ್ಲವೇ? ಚೆನ್ನಿಯಂತಹ ವಿದ್ವಾಂಸರು, ಲೇಖಕರೊಬ್ಬರು ಘಟನೆಯೊಂದನ್ನು ವಿಮರ್ಶೆಗೊಳಪಡಿಸುವುದರ ಕುರಿತು ಹತಾಶೆಗೊಳಗಾಗಿ ಯಾವುದನ್ನು ಸಮರ್ಥಿಸಲು ಸಾಧ್ಯವಿಲ್ಲವೋ ಅದನ್ನು ಸಮರ್ಥಿಸಲು ಹೋಗಿ ವಿಚಿತ್ರವಾದ ಅನೈತಿಕತೆಯ ಕಥೆಯೊಂದನ್ನು ಹೊಸೆದು ದಂಡಾವತಿಯವರಿಗೆ ಮತ್ತು ಪ್ರಜಾವಾಣಿಯವರಿಗೆ ಬೆದರಿಕೆಯೊಡ್ಡಲು ಕಾರಣವೇನು? ಇದು ನಿರ್ದಿಷ್ಟ ಐಡಿಯಾಲಜಿಗೆ ಜೋತು ಬಿದ್ದವರ ರೋಗವಲ್ಲದೇ ಇನ್ನೇನು?
ಚೆನ್ನಿಯವರಂಥ ಚಿಂತಕರಿಗೆ ತಿಳಿದಂತೆ ನಾವು ಬೌದ್ಧಿಕ ಜಿಜ್ಞಾಸೆಗಳನ್ನು ಸಿದ್ಧಾಂತಗಳ (ಥಿಯರಿ) ಮೂಲಕ ಮಾಡುತ್ತೇವೆ. ಈ ಥಿಯರಿಗಳು ನಮಗೆ ಜಗತ್ತಿನಲ್ಲಿ ನಡೆಯುವ ಭಿನ್ನ ಭಿನ್ನ ವಿದ್ಯಮಾನಗಳ ಬಗ್ಗೆ ಹೊಸ ರೀತಿಯ ಪ್ರಶ್ನೆಗಳನ್ನು ಉತ್ಪತ್ತಿ ಮಾಡುವ ಮೂಲಕ ಹೊಸ ಜ್ಞಾನದ ಅನ್ವೇಷಣೆಗೆ ನಾಂದಿ ಹಾಡುತ್ತವೆ. ಈ ಅನ್ವೇಷಣೆಯ ಮಾರ್ಗದಲ್ಲಿ ನಾವು ಬಳಸುವ ಥಿಯರಿಗಳು ಅನೇಕ ಬಾರಿ ತಪ್ಪೆಂದು ಸಾಬೀತಾಗಿ ಹೊಸ ಥಿಯರಿಗಳನ್ನು ಉತ್ಪತ್ತಿ ಮಾಡುವ ಸಾಧ್ಯತೆಗಳನ್ನು ಹುಟ್ಟು ಹಾಕಿರುತ್ತವೆ. ಹಾಗಾಗಿ ಈ ಥಿಯರಿಗಳು ಪರಮ ಸತ್ಯಗಳೇನೂ ಅಲ್ಲ, ಕಾಲ ಕಾಲಕ್ಕೆ ಅವು ಮಾರ್ಪಾಡಾಗುತ್ತಿರುತ್ತವೆ ಅಥವಾ ಹೊಸ ಥಿಯರಿಗಳು ಹಳೆಯ ಥಿಯರಿಗಳ ಜಾಗಕ್ಕೆ ಬಂದು ಬಿಡುತ್ತವೆ. ಇದಕ್ಕೆ ವಿರುದ್ಧವಾಗಿ ಐಡಿಯಾಲಜಿಗಳು ಶೋಧಕನೊಬ್ಬನ ಸಂಪೂರ್ಣ ಬದ್ಧತೆಯನ್ನು ಬೇಡುತ್ತವೆ. ಐಡಿಯಾಲಜಿಗಳು ಥಿಯರಿಗಳಲ್ಲ. (ಕನ್ನಡದಲ್ಲಿ ಐಡಿಯಾಲಜಿ ಮತ್ತು ಥಿಯರಿಗಳಿಗೆರಡಕ್ಕೂ ‘ಸಿದ್ಧಾಂತ’ ಎಂದೇ ಬಳಸುವ ಪರಿಪಾಠವಿದೆ). ಐಡಿಯಾಲಜಿ ಮತ್ತು ಥಿಯರಿಗಿರುವ ಒಂದು ಸಾಮ್ಯವೆಂದರೆ ಇವೆರಡೂ ಪರಸ್ಪರ ಸಂಬಂಧವುಳ್ಳ ವಿಚಾರ(ಐಡಿಯಾ)ಗಳ ಸರಮಾಲೆಗಳು. ಐಡಿಯಾಲಜಿ ಅನ್ನುವುದು ಥಿಯರಿಗಿಂತ ಹೇಗೆ ಭಿನ್ನವಾಗುತ್ತದೆ ಎಂಬ ಪ್ರಶ್ನೆ ಎದುರಾಗಬಹುದು. ಥಿಯರಿಯಂತೆ ಐಡಿಯಾಲಜಿಯಿಂದ ಯಾವುದೋ ಒಂದು ವಿದ್ಯಮಾನ ಕುರಿತ ವಿವರಣೆಯನ್ನು ಸರಿ-ತಪ್ಪು ಎಂದು ವಿಶ್ಲೇಷಿಸಲಾಗುವುದಿಲ್ಲ. ಬದಲಿಗೆ ಐಡಿಯಾಲಜಿ ಒಂದು ವಿದ್ಯಮಾನವನ್ನು ನಿರ್ದಿಷ್ಟ ಕ್ರಮದಲ್ಲಿ ಸಮರ್ಥಿಸುತ್ತದೆ. ಅಂದರೆ ಐಡಿಯಾಲಜಿಯು ವ್ಯಕ್ತಿಯೊಬ್ಬನಿಗೆ ಘಟನೆಯೊಂದರ ಪುನರ್ ನಿರೂಪಣೆಯ ಮೂಲಕ ಅದನ್ನು ಸಮರ್ಥಿಸಲು ಅವಕಾಶ ಮಾಡಿಕೊಡುತ್ತದೆ. ಅಂದರೆ ವ್ಯಕ್ತಿಯೊಬ್ಬನಿಗೆ ವಿದ್ಯಮಾನದ ಸಮರ್ಥನೆಗೆ ಬೇಕಾದ ಯಾವುದೋ ಒಂದು ವಿಚಾರವನ್ನು ಹುಡುಕಲು ಐಡಿಯಾಲಜಿ ಸಹಾಯ ಮಾಡುತ್ತದೆ.

ಉದಾಹರಣೆಗೆ ಬಲಪಂಥೀಯರು ಅಥವಾ ರಾಷ್ಟ್ರೀಯವಾದಿಗಳು ಮೂಲಭೂತವಾದಿಗಳು ಹಾಗೂ ಫ್ಯಾಸಿಸ್ಟರು ಹಾಗೂ ಅವರು ಪ್ರಜಾಪ್ರಭುತ್ವದ ನಿರಾಕರಣೆ ಮಾಡುವವರು ಎಂದು ಲಿಬರಲ್ ಅಥವಾ ಸೆಕ್ಯುಲರ್ ಐಡಿಯಾಲಜಿ ಗುರುತಿಸುತ್ತದೆ. ಹಾಗಾಗಿ ಭಾರತದಲ್ಲಿ ಹಿಂದೂ ರಾಷ್ಟ್ರೀಯವಾದಿಗಳು ಮೂಲಭೂತವಾದಿಗಳು, ಫ್ಯಾಸಿಸ್ಟರು, ದಲಿತ ವಿರೋಧಿಗಳು, ಮನುವಾದಿಗಳು, ಪುರೋಹಿತಶಾಹಿ ಇತ್ಯಾದಿ ಎಂಬುದು ಭಾರತೀಯ ಸೆಕ್ಯುಲರ್ ಚಿಂತಕರ ಪ್ರಶ್ನಾತೀತ ತೀರ್ಮಾನ. ಆದಕಾರಣ ಕಲ್ಬುರ್ಗಿ ಹತ್ಯೆ ಬಲಪಂಥೀಯರ ಮೂಲಭೂತವಾದವನ್ನು, ಫ್ಯಾಸಿಸ್ಟ್ ಧೋರಣೆಯನ್ನು ತೋರಿಸುತ್ತದೆಯೆಂದು ಅವರು ವಿವರಿಸುತ್ತಾರೆ. ಇಲ್ಲಿ ಕಲ್ಬುರ್ಗಿಯವರ ಹತ್ಯೆ ಪ್ರಗತಿಪರರಿಗೆ ಅಷ್ಟು ಮುಖ್ಯವಾದ ಸಂಗತಿಯಲ್ಲ; ಹಾಗಿದ್ದ ಪಕ್ಷದಲ್ಲಿ ಎಲ್ಲ ಬಗೆಯ ಹತ್ಯೆಗಳು (ಉದಾ: ಕೇರಳದಲ್ಲಿ, ಪಶ್ಚಿಮ ಬಂಗಾಳದಲ್ಲಿ, ಇತ್ತೀಚೆಗೆ ಕರ್ನಾಟಕದಲ್ಲಿ ಹತ್ಯೆಗೊಳಗಾದ ಆರ್.ಎಸ್.ಎಸ್ ಕಾರ್ಯಕರ್ತರ ಕೊಲೆ ಕುರಿತು ಈ ಎಲ್ಲರೂ ಪ್ರಶ್ನೆ ಎತ್ತ ಬೇಕಿತ್ತು) ಪ್ರಗತಿಪರರಿಗೆ ಕಳವಳಕಾರಿಯಾಗಬೇಕಿತ್ತು. ಅದೇ ಕಾರಣಕ್ಕಾಗಿ ಬಲಪಂಥೀಯರು ಘಟನೆಯೊಂದರ ಸತ್ಯಾಸತ್ಯತೆಯ ಬಗ್ಗೆ ಮಾತನಾಡುವುದು ಪ್ರಗತಿಪರರ ಒಂದಲ್ಲಾ ಒಂದು ಐಡಿಯಾಲಾಜಿಕಲ್ ನಿಲುವಿಗೆ ವಿರುದ್ಧವಾದ್ದರಿಂದ ಅದನ್ನು ದಮನಿಸಬೇಕಾದ ಅನಿವಾರ್ಯತೆ ಇರುತ್ತದೆ. ಕಲ್ಬುರ್ಗಿಯವರ ಹತ್ಯೆ ಕುರಿತ ಪ್ರಗತಿಪರ ಚಿಂತನೆಗಳು ಸಾಮಾನ್ಯರಿಗೆ ಸತ್ಯವನ್ನು ಕುರಿತ ಪ್ರಗತಿಪರರ ತಾತ್ಸಾರವನ್ನು ತೋರಿಸಿದರೆ, ಪ್ರಗತಿಪರರಿಗೆ ಅದು ತಮ್ಮ ಐಡಿಯಾಲಾಜಿಕಲ್ ನಿಲುವಿಗೆ ಸಾಕ್ಷಿಯಾದಂತೆ ತೋರುತ್ತದೆ. ಧಾರವಾಡದಲ್ಲಿ ಅಜ್ಜಂಪುರ ಮಂಜುನಾಥರ ಮೇಲೆ ಮಾಡಿದ ಆಕ್ರಮಣ ಸಾಮಾನ್ಯರಿಗೆ ಪ್ರಗತಿಪರರ ಅಸಹಿಷ್ಣುತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹಲ್ಲೆಯಂತೆ ಕಂಡರೆ ಪ್ರಗತಿಪರರಿಗೆ ತಮ್ಮ ಐಡಿಯಾಲಾಜಿಕಲ್ ನಿಲುವಿನ ಸಮರ್ಥನೆಗಾಗಿ ನಡೆಸಿದ ಪ್ರಬಲ ಹೋರಾಟವಾಗಿ ಕಾಣುತ್ತದೆ. ಈ ಕಾರಣಕ್ಕಾಗಿಯೇ ಚೆನ್ನಿಯವರಿಗೆ ದಂಡಾವತಿಯವರ ಲೇಖನ ಅನೈತಿಕವೆಂದೂ ಸೂಕ್ತ ಕಾರಣವಿಲ್ಲದಿದ್ದರೂ ಆರೋಪಿಸಲೇಬೇಕಾದ ಅತ್ಯಂತ ಪವಿತ್ರವೂ ಸಮರ್ಥನೀಯವೂ ಆದ ಕಾರ್ಯವಾಗುತ್ತದೆ.

ಹಾಗಾಗಿ ದಂಡಾವತಿಯವರ ಲೇಖನಕ್ಕೆ ಚೆನ್ನಿಯವರ ಪ್ರತಿಕ್ರಿಯೆ ಯಾವ ಜ್ಞಾನವನ್ನೂ, ಸತ್ಯವನ್ನೂ ತೋರಿಸುವುದಿಲ್ಲ. ಐಡಿಯಾಲಜಿಯ ಕಾಮಾಲೆ ರೋಗ ಬಡಿದಾಗ ಸತ್ಯವನ್ನೂ ಮರೆತು ತಮ್ಮ ವಿಚಾರಗಳ ಭಂಡತನದ ಸಮರ್ಥನೆ ಮಾಡುವ ಬೌದ್ಧಿಕ ದಾರಿದ್ಯಕ್ಕೆ ಇದು ಕೈಗನ್ನಡಿ ಅನ್ನಬಹುದಷ್ಟೇ. ಒಟ್ಟಾರೆ ಅನೈತಿಕತೆ ಇರುವುದು ಪ್ರಜಾವಾಣಿಯಲ್ಲಾಗಲೀ, ದಂಡಾವತಿಯವರ ಲೇಖನದಲ್ಲಾಗಲೀ ಅಲ್ಲ; ಬದಲಿಗೆ ಬೌದ್ಧಿಕತೆಯ ಹೆಸರಿನಲ್ಲಿ ತಮ್ಮ ಐಡಿಯಾಲಜಿಯನ್ನು ಸಮರ್ಥಿಸುವ ಕೊಳಕು ಮನಸ್ಸುಗಳಲ್ಲಿ ಅನ್ನದೇ ವಿಧಿಯಿಲ್ಲ.

42 ಟಿಪ್ಪಣಿಗಳು Post a comment
 1. ಸುರೇಶ್ ಮುಗಬಾಳ್
  ಮಾರ್ಚ್ 8 2017

  ಬ್ರಾಹ್ಮಣಶಾಹಿತ್ವ ಪತ್ರಿಕೆ ಎಂದು ಪ್ರಜಾವಾಣಿಗೆ ಬೊಟ್ಟು ಮಾಡಿಬತೋರಿದ ಚೆನ್ನಿಯವರಿಗೆ ಬೇರೆ ಪತ್ರಿಕೆಗಳ ಅಪ್ಪಟ ಬ್ರಾಹ್ಮಣಶಾಹಿತ್ವ ಕಾಣಲೇ ಇಲ್ಲವಲ್ಲಾ? ವಿಪರ್ಯಾಸ.

  ಉತ್ತರ
 2. Rajaram Hegde
  ಮಾರ್ಚ್ 8 2017

  ಇಂಥ ಅತ್ಯುತ್ತಮ ವಿಶ್ಲೇಷಣೆಗಾಗಿ ಚೈತ್ರ ಅವರನ್ನು ಅಭಿನಂದಿಸುತ್ತೇನೆ.

  ಉತ್ತರ
  • M A Sriranga
   ಮಾರ್ಚ್ 10 2017

   ಎಂ ಎಸ್ ಚೈತ್ರ ಅವರಿಗೆ–ರಾಜೇಂದ್ರ ಚೆನ್ನಿ ಅವರ ಲೇಖನ ಓದೋಣವೆಂದು ಮಾಧ್ಯಮನೆಟ್.ಕಾಂ ಹುಡುಕಿದರೆ this site cannot be reached ಎಂದು ಬರುತ್ತಿದೆ. ದಯವಿಟ್ಟು ಆ ಬ್ಲಾಗ್ ನ ಹೆಸರನ್ನು ಮತ್ತೊಮ್ಮೆ ಪರಿಶೀಲಿಸಿ ತಿಳಿಸಲು ಆಗುತ್ತದೆಯೇ?

   ಉತ್ತರ
 3. Shripad
  ಮಾರ್ಚ್ 9 2017

  ಈ ಬಾರಿಯ ಸಂಕ್ರಮಣದಲ್ಲಿ ಚಂಪಾ ಅಲವತ್ತುಕೊಂಡಿದ್ದನ್ನು ಗಮನಿಸಿ. ಧಾಸಾಸಂಭ್ರಮದ ಮಂಡಳಿಯಲ್ಲಿ ಅಕಸ್ಮಾತ್ ಕಾರ್ನಾಡೋ ತಾವೋ ಮತ್ಯಾರೋ ತಮ್ಮ ಥರದವರು ಇದ್ದಿದ್ದರೆ…ಇಂಥವರಿಗೆಲ್ಲ ವೇದಿಕೆ ಸಿಗದಂತೆ ಆಗುತ್ತಿತ್ತು ಎಂದು ಬಡಬಡಿಸಿಕೊಂಡಿದ್ದಾರೆ…ಅಂದ್ರೆ…ಇವರು, ಇವರ ಗುಂಪು/ಭಜನಾ ಮಂಡಳಿ ಇದ್ದರೆ ಅದು ಸರ್ವಸ್ವ…ಎಲ್ಲವನ್ನೂ ಒಳಗೊಳ್ಳುತ್ತದೆ…ಇಲ್ಲವಾದಲ್ಲಿ ಕೇಸರಿ ವಿಜೃಂಭಿಸುತ್ತದೆ! ಆರೋಗ್ಯಕರ ಚರ್ಚೆಯಂತೆ, ಅಭಿವ್ಯಕ್ತಿ ಸ್ವಾತಂತ್ರ್ಯವಂತೆ…ಸಂವಾದವಂತೆ!!!

  ಉತ್ತರ
  • M A Sriranga
   ಮಾರ್ಚ್ 10 2017

   ‘ಗುದ್ದೋಡು ಪ್ರತಿಕ್ರಿಯಾ ಪ್ರವೀಣರ’ (ಗು.ಪ್ರ.ಪ್ರ.) ನಡುವೆ ಸಿಕ್ಕಿಹಾಕಿಕೊಂಡದ್ದರಿಂದ ಚೈತ್ರ ಅವರ ಲೇಖನದ ಬಗ್ಗೆ ಹೇಳುವುದೇ ತಡವಾಯಿತು. ರಾಜೇಂದ್ರ ಚೆನ್ನಿ ಅವರಿಗೆ ಪ್ರಜಾವಾಣಿಯ ಸಂಪಾದಕರಾದ ಪದ್ಮರಾಜ ದಂಡಾವತಿಯವರ ‘ನಾಲ್ಕನೇ ಆಯಾಮ’ ಅಂಕಣದಲ್ಲಿ (೨೯-೧-೧೭) ಧಾರವಾಡದ ಸಾಹಿತ್ಯ ಸಂಭ್ರಮದಲ್ಲಿ ನಡೆದ ಚಪ್ಪಲಿ ಪ್ರದರ್ಶನದ ಹಿನ್ನೆಲೆಗಳನ್ನು ವಿವರವಾಗಿ ಚರ್ಚಿಸಿದ್ದೇ ಅಕ್ಷಮ್ಯ ಅಪರಾಧವಾಗಿ ಕಂಡಿದೆ!. ಪ್ರಜಾವಾಣಿ ಪತ್ರಿಕೆಯ ಬಗ್ಗೆ ಕೆಲವರಿಗೆ ನಾನಾ ಕಾರಣಗಳಿಂದ ಅಸಮಾಧಾನವಿರಬಹುದು. ಅದು ಅವರ ಇಷ್ಟಕ್ಕೆ ಬಿಟ್ಟ ವಿಷಯ. ಆದರೆ ಆ ಪತ್ರಿಕೆಯ ಸುದ್ದಿಗಳು ಸಮತೂಕವಾಗಿರುತ್ತವೆ. ಪ್ರತಿ ದಿನ ಪ್ರಕಟವಾಗುವ ಅಂಕಣಗಳ ಬರಹಗಳ ಬಗ್ಗೆ, ಓದುಗರ ಅಭಿವ್ಯಕ್ತಿಗಾಗಿ ಇರುವ ‘ವಾಚಕರವಾಣಿ’ ಮತ್ತು ,’ಸಂಗತ’ ಗಳಲ್ಲಿ ಪ್ರಕಟವಾಗುವ ಅಭಿಪ್ರಾಯಗಳ ಬಗ್ಗೆ ಕೆಲವು ಓದುಗರಿಗೆ ಭಿನ್ನಾಭಿಪ್ರಾಯಗಳಿರಬಹುದು. ಅದು ಸಹಜ. ಒಂದು ಪತ್ರಿಕೆಯು ಸಾದ್ಯವಾದ ಮಟ್ಟಿಗೆ ಎಲ್ಲಾ ರೀತಿಯ ಅಭಿಪ್ರಾಯಗಳಿಗೂ ವೇದಿಕೆಯಾಗಬೇಕು. ಆ ಕೆಲಸವನ್ನು ಆ ಪತ್ರಿಕೆ ಮಾಡುತ್ತಿದೆ. ರಾಜೇಂದ್ರ ಚೆನ್ನಿ ಮತ್ತಿತರರ ಅಭಿಪ್ರಾಯಗಳಿಗೆ ತಕ್ಕಂತೆ ಮಾತ್ರ ‘ಪ್ರಜಾವಾಣಿ’ ಯ ಬರಹಗಳು ಇರಬೇಕೆನ್ನುವುದು ಅಭಿವ್ಯಕ್ತಿ ಸ್ವಾತಂತ್ರ್ಯ ಹೇಗಾಗುತ್ತದೆ? ಅದು ಭಿನ್ನ ಅಭಿಪ್ರಾಯಗಳನ್ನು ದಮನಿಸುವ ‘ಪ್ಯಾಸಿಸಂ’ ಆಗುವುದಿಲ್ಲವೇ? ‘ಪ್ರಜಾವಾಣಿ’ಯನ್ನು ಕೆಲವು ಕಾರಣಗಳಿಂದ ದಿನ ನಿತ್ಯ ಓದದೇ ಇರುವವರು ಪದ್ಮರಾಜ ದಂಡಾವತಿಯರ ಅಂಕಣ ‘ನಾಲ್ಕನೇ ಆಯಾಮ’ ವನ್ನು (೨೯-೧-೧೭) (ಪ್ರಜಾವಾಣಿಯ ಇಂಟರ್ನೆಟ್ ಆವೃತ್ತಿಯ ‘ಅಂಕಣಗಳು’ ವಿಭಾಗದಲ್ಲಿ ಇದೆ) ಈಗಲಾದರೂ ಓದುವುದು ಒಳಿತು.

   ಉತ್ತರ
 4. ಮಾರ್ಕ್ಸ್ ಮಂಜು
  ಮಾರ್ಚ್ 9 2017

  ಒಂದು ಬೂರ್ಜ್ವಾಗಳ ಸಂಭ್ರಮ,ಅದಕ್ಕೊಂದು ವಾದ-ವಿವಾದ ಚರ್ಚೆಗಳು. ಉಹ್! ಮಹರ್ಷಿ ಮಾರ್ಕ್ಸ್ ಅವರೇ ನಿಮಗೆ ಬುದ್ಧಿ ಹೇಳಬೇಕಿದೆ

  ಉತ್ತರ
  • ಎಂ ಎ. ಶ್ರೀರಂಗ
   ಮಾರ್ಚ್ 9 2017

   ಮಾರ್ಕ್ಸ್ ಮಂಜು ಅವರಿಗೆ— ನನ್ನ ವಾದ ಏಷ್ಯಾ ಮತ್ತು ಆಫ್ರಿಕಾ ಖಂಡಗಳಿಗೆ ಅನ್ವಯಿಸುವುದಿಲ್ಲ ಎಂದು ಮಾರ್ಕ್ಸ್ ಮಹರ್ಷಿಗಳು ತಮ್ಮ ಕಾಲದಲ್ಲೇ ಹೇಳಿದ್ದರು. ಕನ್ನಡ ಸಾಹಿತ್ಯದಲ್ಲಿ ಮೊದಲಿಗೆ ಪ್ರಗತಿಶೀಲರು ನವೋದಯದವರನ್ನು ಹಣಿಯಲು ಅರೆ ಬೆರೆ ಬಂದ ಸಮಾಜವಾದವನ್ನು ಹಸಿಬಿಸಿಯಾಗಿ ಬಡಿಸಿದರು. ಅದು ಹಳಸಿಹೋದಮೇಲೆ ಅವರಿಗಿಂತ ಜಾಸ್ತಿ ಓದಿಕೊಂಡ ನವ್ಯದವರು ನವಿರಾಗಿ ತಮ್ಮ ಸಾಹಿತ್ಯದಲ್ಲಿ ಮುಂದುವರಿಸಿದರು. ಇದಕ್ಕೆ ಆಗ ಅಧಿಕಾರದಲ್ಲಿದ್ದವರಿಂದ ‘ಶಾಖಾಯ ಲವಣಾಯ’ ಪಡೆಯುವ ಗುಪ್ತ ಹುನ್ನಾರೂ ಇತ್ತು. ನಂತರ ಬಂದ ಬಂಡಾಯ, ದಲಿತ ಸಾಹಿತ್ಯದವರು ನವ್ಯರ ಜತೆ ಸೇರಿಕೊಂಡು ರಾಜಕೀಯದ ಶಕ್ತಿ ಕೇಂದ್ರಗಳ ಆಯಕಟ್ಟಿನ ಜಾಗ ಹಿಡಿದು ಮಾರ್ಕ್ಸ್ ವಾದದ ತುತ್ತೂರಿಯನ್ನು ಊದತೊಡಗಿದರು. ನಮ್ಮಲ್ಲಿ ಸಾಹಿತಿಗಳನ್ನು ಸಕಲ ತತ್ವಗಳನ್ನು ಅರೆದು ಕುಡಿದ ನವ ಭಾರತದ ಮಹರ್ಷಿಗಳೆಂದು ಭಾವಿಸುವ ಮುಗ್ಧರಿದ್ದಾರೆ. ‘ ಹೆಳವನ ಹೆಗಲಮೇಲೆ ಕುರುಡಕೂತಿದ್ದಾನೆ ದಾರಿ ಸಾಗುವುದೆಂತೋ ನೋಡಬೇಕು’

   ಉತ್ತರ
  • Shripad
   ಮಾರ್ಚ್ 9 2017

   ಭಯಂಕರ ವಾಸ್ತವವಾದಿ ಮಾರ್ಕ್ಸ್ ಗೆ ಮತ್ತೆ ಭಾರತೀಯ ಗೊಡ್ಡು ಸಂಪ್ರದಾಯದ ‘ಮಹರ್ಷಿ’ ಪಟ್ಟ ಬೇರೆ!

   ಉತ್ತರ
  • Shripad
   ಮಾರ್ಚ್ 9 2017

   ತಮ್ಮ ಮಹರ್ಷಿ ಮಾರ್ಗದ ಬಗ್ಗೆ ಅಂಬೇಡ್ಕರ್ ಹೇಳಿದ್ದು: The Communists say that there are the only two means of establishing communism. The first is violence. Nothing short of it will suffice to break up the existing system. The other is dictatorship of the proletariat. Nothing short of it will suffice to continue the new system. ಇನ್ನೇನೂ ಬೇಕಿಲ್ಲ. ತಮ್ಮ ದಿವ್ಯತೆಯ ದರ್ಶನಕ್ಕೆ!

   ಉತ್ತರ
   • ಎಂ ಎ. ಶ್ರೀರಂಗ
    ಮಾರ್ಚ್ 9 2017

    ಎಲ್ಲವೂ ಬದಲಾಗಬೇಕೆನ್ನುತ್ತಾರೆ. ಆದರೆ ಇವರ ಮಾರ್ಕ್ಸ್ ವಾದ ಮಾತ್ರ ಅಚಲವಂತೆ !!

    ಉತ್ತರ
    • shripad
     ಮಾರ್ಚ್ 9 2017

     ಹಾಗಾಗಿಯೇ ಅಂಬೇಡ್ಕರ್ ಇವರನ್ನು ಡ್ರಮ್ಮರ್ಸ್ ಅಂದಿದ್ದು!

     ಉತ್ತರ
     • SalamBava
      ಮಾರ್ಚ್ 9 2017

      Why do you indulge in cherry picking what Babasahebji said? What he said on Hinduism and Brahmins you’re never interested in thinking about. In your hate war against Muslims and liberals you’re using Babasahebji as a tool. How despicable you’re do you even realise?

      ಉತ್ತರ
    • SalamBava
     ಮಾರ್ಚ್ 9 2017

     Mr. Sriranga, don’t make foolish comments without really understanding Marx. Do laws of physics change even though the physical world is changing every moment? Marxist theory is like the laws of Physics with respect to human societies. Do you get it?

     ಉತ್ತರ
     • M A Sriranga
      ಮಾರ್ಚ್ 9 2017

      ಮಾನ್ಯ ಸಲಾಂ ಬಾವಾ ಅವರೆ ನನ್ನ foolishness ಅನ್ನು ತೋರಿಸಿಕೊಟ್ಟಿದ್ದಕ್ಕೆ ವಂದನೆಗಳು. ಫಿಸಿಕ್ಸ್ ನ ನಿಯಮಗಳೂ ಬದಲಾಗುತ್ತಿರುತ್ತವೆ. ವಿಜ್ಞಾನ ಎಂದರೆ ಬದಲಾವಣೆಗೆ ತೆರೆದುಕೊಂಡ ಒಂದು ಜ್ಞಾನ ಶಾಖೆ. ಬೆಳಕನ್ನು (light) ಒಂದೇ ರೀತಿಯಲ್ಲಿ ನೇರವಾಗಿ ಚಲಿಸುವ ಕಿರಣ ಎಂದು ಕೊಂಡಿದ್ದರು. ನಂತರದಲ್ಲಿ. ಅದು ಕೆಲವೊಮ್ಮೆ ಕಿರಣದ ರೂಪದಲ್ಲೂ ಮತ್ತೆ ಕೆಲವು ಸಲ ತರಂಗದ ರೂಪದಲ್ಲೂ ಚಲಿಸುತ್ತದೆ ಎಂದು ಪ್ರಯೋಗಗಳಿಂದ ಕಂಡು ಹಿಡಿದರು. ನಂತರ ಫೋಟಾನ್ ಎಂಬ ಬೆಳಕಿನ ಅತಿ ಸಣ್ಣ ಸಣ್ಣ ಪೊಟ್ಟಣಗಳ ಮೂಲಕ ಚಲಿಸುವ ವಸ್ತು ಎಂದು ಕಂಡುಹಿಡಿದರು. ಹಿಂದೆ ಸೂರ್ಯ ಭೂಮಿಯ ಸುತ್ತಾ ಸುತ್ತುತ್ತಾನೆ ಎಂದು ಕೊಂಡಿದ್ದರು. ನಂತರದಲ್ಲಿ ಭೂಮಿಯೇ ಸೂರ್ಯನ ಸುತ್ತಾ ಸುತ್ತುತ್ತದೆ ಎಂದು ಕಂಡುಹಿಡಿದರು. ಸೌರ್ಯವ್ಯೂಹದಲ್ಲಿ ಒಂಭತ್ತು ಗ್ರಹಗಳು ಮಾತ್ರ ಇದೆ ಅಂದುಕೊಂಡಿದ್ದರು. ಈಗ ಇನ್ನೂ ಕೆಲವು ಗ್ರಹಗಳು ಇವೆ ಎಂದು ನಾಸಾದವರು ಕಂಡುಹಿಡಿದಿದ್ದಾರೆ. ಮಾರ್ಕ್ಸ್ ವಾದ ಮನುಷ್ಯನಿಗೆ, ಸಮಾಜಕ್ಕೆ ಸಂಬಂಧಿಸಿದ್ದು. ನಾವುಗಳು ಬದಲಾದ ಹಾಗೆ ಅದೂ ಬದಲಾಗಬೇಕಲ್ಲವೇ? ಅದು ಸ್ಥಿರ ಅಂದರೆ ಒಂದೋ ಅದನ್ನು ಪೂಜ್ಯ ಭಾವದಿಂದ ನೋಡುತ್ತಿರುವವರ ಮುಗ್ಧತೆಯ ಆರಾಧಾನಾ ಭಾವ ಅಥವಾ ಮನುಷ್ಯನಲ್ಲಿ, ಸಮಾಜದಲ್ಲಿ ಆಗುತ್ತಿರುವ ಬದಲಾವಣೆಯನ್ನು ಒಪ್ಪಿಕೊಂಡರೆ ತಮ್ಮ ಅಸ್ಥಿತ್ವಕ್ಕೆ ಎಲ್ಲಿ ಧಕ್ಕೆ ಬರುತ್ತದೋ ಎಂದು ಅಂಜುತ್ತಿರುವವರ ಸಮಯಸಾಧಕತನ. ಈ ಎರಡು ಗುಂಪಿನಲ್ಲಿ ತಾವು ಎಲ್ಲಿದ್ದೀರಿ ಎಂದು ಗುರುತಿಸಿಕೊಳ್ಳುವುದು ಅಥವಾ ಬಿಡುವುದು ನಿಮ್ಮ ಇಷ್ಟ.

      ಉತ್ತರ
      • BNS
       ಮಾರ್ಚ್ 10 2017

       ಹಿರಿಯರಾದ ಶ್ರೀರಂಗ ಅವರೆ, ಈ ವಿಷಯದಲ್ಲೇ ಎಲ್ಲರೂ ಎಡವುವುದು ಸಹಜ ಎಂದುಕೊಂಡಿದ್ದೇನೆ. ಸಮಾಜ ಶಾಸ್ತ್ರ, ಅರ್ಥಶಾಸ್ತ್ರ, ಮತ್ತು ರಾಜಕೀಯ ಶಾಸ್ತ್ರಗಳಂತಹ ‘ಸೋಷಿಯಲ್ ಸೈನ್ಸಸ್’ ಎಂದರೆ ಸಾಮಾಜಿಕ ವಿಜ್ಞಾನದ ಶಾಖೆಗಳು ಭೌತಿಕ ಶಾಸ್ತ್ರಗಳಾದ ಫಿಸಿಕ್ಸ್, ಕೆಮಿಸ್ಟ್ರಿ, ಅಸ್ಟ್ರಾನಮಿ, ಅಥವಾ ಗಣಿತ ಗಳಂತೆ ‘ಎಕ್ಸಾಕ್ಟ್ ಸೈನ್ಸಸ್’ ಅಲ್ಲ. ಏಕೆಂದರೆ ಈ ಡಿಸಿಪ್ಲಿನ್ ಗಳಲ್ಲಿ ಗಣನೆಗೆ ಕಾಣುವಂತಹ ವೇರಿಯಬಲ್ಸ್ ಹಲವಿದ್ದರೆ, ಅಧ್ಯಯನದ ಸಂದರ್ಭದಲ್ಲಿ ಗಣನೆಗೆ ಕಾಣದ, ಆದರೆ ಅಂತಿಮ ಪರಿಣಾಮದ ಮೇಲೆ ಪ್ರಭಾವ ಬೀರುವ ಹಲವು ವೇರಿಯಬಲ್ ಗಳು ಇರುತ್ತವೆ. ಹೀಗಾಗಿ ನೈಸರ್ಗಿಕ ಮತ್ತು ಭೌತಿಕ ವಿಜ್ಞಾನಗಳನ್ನು ಸಾಮಾಜಿಕ ವಿಜ್ಞಾನದ ಶಾಖೆಗಳ ಜತೆ ಹೋಲಿಸಿ ನೋಡುವ ಕ್ರಮ ಬಹಳಷ್ಟು ಬಾರಿ ತಪ್ಪಾಗಿ ಕಂಡುಬರುತ್ತದೆ. ಬರೆಯುವ ಓಘದಲ್ಲಿ ತಕ್ಷಣಕ್ಕೆ ಇಂಗ್ಲಿಷಿನ ಪದಗಳಿಗೆ ಸಂವಾದಿಯಾದ ಕನ್ನಡ ಪದಗಳು ಹೊಳೆಯದೇ ಹೋದದ್ದರಿಂದ ಕೆಲವು ಇಂಗ್ಲಿಷಿನ ಪದಗಳನ್ನೇ ಬಳಸಿದ್ದೇನೆ. ಅನ್ಯಥಾ ಭಾವಿಸಬೇಡಿ.

       ಉತ್ತರ
      • ನಾಶೆಶೇ
       ಮಾರ್ಚ್ 10 2017

       ಶ್ರೀರಂಗ ಅವರೇ, ನಿಮ್ಮ ವಿಜ್ಞಾನ ಜ್ಞಾನಕ್ಕೆ ಬಿ ಏನ್ ಎಸ್ ಚೆನ್ನಾಗಿ ಮಂಗಳಾರತಿ ಎತ್ತಿದ್ದಾರೆ. ಮಾರ್ಕ್ಸ್ ವಾದ ಎನ್ನುವುದು ಕಳ್ಳೆಪುರಿ ತಿಂದ ಹಾಗೆ ಅಲ್ಲ. ಅದು ತತ್ವಶಾಸ್ತ್ರ-ಅರ್ಥಶಾಸ್ತ್ರ-ಸಮಾಜಶಾಸ್ತ್ರ-ರಾಜ್ಯಶಾಸ್ತ್ರ-ಮನಸ್ಶಾಸ್ತ್ರ ಇವೆಲ್ಲವನ್ನೂ ಒಳಗೊಂಡ ಕಾಂಪ್ರಹೆನ್ಸಿವ್ ಹಾಗೂ ಮೂಲಭೂತವಾದ ಹೊಳಹು. ನಿಮ್ಮ ಪಿಳ್ಳೆ ತಕರಾರಿಗೆ ಬಿದ್ದು ಪುಡಿಯಾಗುವ ಗಾಜಿನ ಬೊಂಬೆಯಲ್ಲ.

       ಉತ್ತರ
       • ಮಾರ್ಚ್ 10 2017

        ಆದರೂ ಜಗದಾದ್ಯಂತ ಧೂಳಿಪಟವಾಗಿ, ಜನರ ತಿರಸ್ಕಾಕ್ಕೆ ಗುರಿಯಾಗಿ ಹಲವಾರು ನರಹಂತಕ ರಾಕ್ಷಸರನ್ನು ಮನುಜಕುಲಕ್ಕೆ ಕಾಣಿಕೆಯಾಗಿ ನೀಡಿ ದಾರುಣಸಾವು ಅಪ್ಪುತ್ತಿದೆ, ಮಾರ್ಕ್ಸ್ ವಾದ. No marks for it

        ಉತ್ತರ
       • WITIAN
        ಮಾರ್ಚ್ 10 2017

        ಶಿಟ್ಟಿ, ಇನ್ನೊಬ್ಬರ ಭುಜದ ಮೇಲೆ ಬಂದೂಕಿಟ್ಟು ಗುಂಡು ಹಾರಿಸುವುದು ನಿನ್ನಂತಹ ಅಲ್ಪರಿಗೆ ಹೇಳಿಕೊಡುವುದೇನೂ ಬೇಕಿಲ್ಲ ಅಂತ ನಮಗೆ ಗೊತ್ತಿದೆ. ಬಿಎನ್ನೆಸ್ ಹೇಳಿದ್ದು ಏನು ಅಂತ ಮತ್ತೊಮ್ಮೆ ಓದಿ ನೋಡು. ಶ್ರೀರಂಗರಿಗೆ ಬಿಎನ್ನೆಸ್ ಸೋಶಿಯಲ್ ಸೈನ್ಸಸ್ ಮತ್ತು ಫಿಸಿಕಲ್ ಸೈನ್ಸಸ್ ನಡುವೆ ಹೋಲಿಕೆ ತಪ್ಪು ಅಂತ ಅಷ್ಟೇ ಹೇಳಿದ್ದಾರೆಯೇ ಹೊರತು ನೀನಂದುಕೊಂಡಂತೆ ಅಲ್ಲ. ನಿನ್ನ ಹಿರಿಹಿರಿ ಹಿಗ್ಗುವಿಕೆಯಿಂದಲೇ ಅರ್ಥವಾಗುತ್ತದೆ, ನಿನಗೆ ಸೈನ್ಸ್ ಬಗ್ಗೆ ಏನೂ ಗೊತ್ತಿಲ್ಲ ಅನ್ನುವುದು..

        ಉತ್ತರ
       • WITIAN
        ಮಾರ್ಚ್ 10 2017

        ಮಾರ್ಕ್ಸ್ ಮಹರ್ಷಿಯ ಕಣಿಗಳೆಲ್ಲ ನಿಖರತೆಯಿಂದ ಹಲವು ಗಾವುದ ದೂರದಲ್ಲೇ ಇದ್ದವು. ಔದ್ಯಮೀಕರಣ ಮಿತಿಮೀರಿದ ದೇಶಗಳಲ್ಲಿ ದುಡಿಯುವ ವರ್ಗಗಳ ಕೈಗೆ ರಾಜಕೀಯ ಅಧಿಕಾರ ಬರುವುದರಿಂದ ಕಮ್ಯುನಿಷ್ಟ್ ಸರ್ಕಾರಗಳ ಉದಯವಾಗುತ್ತದೆ ಅಂತ ಕನವರಿಸಿದ.. ಔದ್ಯಮೀಕರಣದ ಉತ್ತುಂಗಕ್ಕೇರಿದ ಬ್ರಿಟನ್, ಫ್ರಾನ್ಸ್, ಜರ್ಮನಿ, ಇಡೀ ಪಶ್ಚಿಮ ಯೂರೋಪಿನಲ್ಲಿ ಕಮ್ಮಿನಿಷ್ಟರಿಗೆ ಒಂದು ನೆಲೆಯೂ ಸಿಕ್ಕಲಿಲ್ಲ. ಬದಲಿಗೆ ಕೃಷಿ ಪ್ರಧಾನ ದೇಶವಾಗಿದ್ದ ರಷ್ಯಾ, ಚೀನಾ ಮತ್ತು ಪೂರ್ವ ಯೂರೋಪಿನ ದೇಶಗಳಲ್ಲಿ ಕಮ್ಮಿನಿಷ್ಟರು ಅಧಿಕಾರಕ್ಕೆ ಬಂದರು. ವರ್ಗ ಸಂಘರ್ಷದಿಂದ ಕ್ರಾಂತಿ ಆಗುತ್ತದೆ ಅಂತ ಬಡಬಡಿಸಿದ. ಕ್ರಾಂತಿಯ ನಂತರ ವರ್ಗ ಸಂಘರ್ಷವಾಗಿ ಬೋಲ್ಷೆವಿಕರಿಂದ ಕಮ್ಮಿನಿಷ್ಟರು ಅಧಿಕಾರವನ್ನು ಸೋವಿಯೆಟ್ ರಷ್ಯಾದಲ್ಲಿ ಕಸಿದುಕೊಂಡರು. ಜಾರ್ಜ್ ಆರ್ವೆಲ್ ಬರೆದಿರುವ ‘ಅನಿಮಲ್ ಫಾರ್ಮ್’ ಎಂಬ ಮಹತ್ವದ ಪುಸ್ತಕ ಓದಿ ನೋಡು, ನಿನ್ನ ಮಾರ್ಕ್ಸ್ ವಾದದ ಹುಸಿ ಘೋಷಣೆ, ಪೊಳ್ಳು ಸಮತಾವಾದ ಇದೆಲ್ಲ ಅರ್ಥವಾದೀತು (ಶಿಟ್ಟಿ/ ಹರಾಮಿ ಅನಿಮಲ್ ಫಾರ್ಮ್ ಎಂದರೆ ಪ್ರಾಣಿಶಾಸ್ತ್ರದ ಪುಸ್ತಕ ಅಂತ ಅಂದುಕೊಳ್ಳುತ್ತಾರಾ ಅಂತ ನನಗೆ ಗುಮಾನಿ).

        ಉತ್ತರ
        • SalamBava
         ಮಾರ್ಚ್ 10 2017

         Marxism and Communist rule are not one and the same. Ideals of Marxism are relevant even now though communist behemoths have been decimated by capitalist forces of the West. Bernie Sanders owes his political ideology and consequent popularity to Marxist ideals. If he were Democratic Party candidate then Trump would have bitten dust in the November polls. Marx is widely misunderstood in capitalist countries. Anyone who reads Marx without prejudice will appreciate Marx’s theory and get inspired by it to make the world more equitable and just. Those of you who argue that Marxism is bad, you’re ignorant and uneducated fools.

         ಉತ್ತರ
         • ನಾಶೆಶೇ
          ಮಾರ್ಚ್ 10 2017

          ಮಾರ್ಕ್ಸ್ ವಾದದ ಹಲವು ಮುನ್ಸೂಚನೆಗಳು ಶರಣರ ವಚನಗಳಲ್ಲಿ ಕಂಡುಬರುತ್ತವೆ. ದರ್ಗಾ ಸರ್ ಅವರು ಮಾರ್ಕ್ಸ್ ವಾದ ಹಾಗೂ ಬಸವಧರ್ಮದ ಸಾದೃಶ್ಯದ ಬಗ್ಗೆ ಬಹಳ ಚೆನ್ನಾಗಿ ಬರೆದಿದ್ದಾರೆ.

          ಉತ್ತರ
          • Shripad
           ಮಾರ್ಚ್ 10 2017

           “ಮಾರ್ಕ್ಸ್ ವಾದದ ಹಲವು ಮುನ್ಸೂಚನೆಗಳು ಶರಣರ ವಚನಗಳಲ್ಲಿ ಕಂಡುಬರುತ್ತವೆ”
           ಅಲ್ಲಲ್ಲ, ಮಾರ್ಕ್ಸ್ ವಾದವನ್ನೇ ವಚನಗಳು ಹೇಳಿವೆ, ಅದು ಇಲ್ಲದ ಕಡೆ ಇಸ್ಲಾಂ ಬೋಧನೆಗಳಿವೆ. ಹೀಗಾಗಿ ಬಸವಣ್ಣ ದೊಡ್ಡವರು!!

          • ಅನಂತ ಹೋರಾಟ
           ಮಾರ್ಚ್ 11 2017

           “ಬಸವಣ್ಣ ದೊಡ್ಡವರು!!”

           ವಚನಕಾರರು ಹುಟ್ಟು ಹಾಕಿದ ಸಮಾನತೆ/ಭ್ರಾತೃತ್ವ/ನ್ಯಾಯದ ಕನಸುಳ್ಳ ಕಲ್ಯಾಣ ಕ್ರಾಂತಿ ಇನ್ನೂ ಸಂಪೂರ್ಣವಾಗಿಲ್ಲ. ಅಣ್ಣ ಬಸವಣ್ಣನವರ ಕನಸನ್ನು ನನಸು ಮಾಡಲು ನಾವು ಪ್ರಗತಿಪರರು ಹೋರಾಟ ಮಾಡುತ್ತಿದ್ದೇವೆ, ಆದರೆ ಈ ನಮೋ ಸುನಾಮಿ ಪ್ರಗತಿಪರ ಕನಸನ್ನು ಮುಳುಗಿಸಿ ಶೋಷಿತರ ಬಾಳಿನ ದುಸ್ಸ್ವಪ್ನವಾಗಿಬಿಟ್ಟಿದೆ.

          • shripad
           ಮಾರ್ಚ್ 12 2017

           ನನ್ನ ಪುರಾತನ ಪ್ರಶ್ನೆಗೆ ನೀವಿನ್ನೂ ಉತ್ತರಕೊಟ್ಟಿಲ್ಲ ನಾಶೇಶೆ…ವಚನಕಾರರಲ್ಲಿ ವೀರಶೈವ ವಚನಕಾರರು ಯಾರು, ಲಿಂಗಾಯತ ವಚನಕಾರರು ಯಾರು? ನಿಮ್ಮ ದರ್ಗ ಪಟ್ಟಿಮಾಡಿದ್ದರೂ ಸರಿ…ಸ್ವಲ್ಪ ಕೊಡಿ.

          • ಅನಂತ ಹೋರಾಟ
           ಮಾರ್ಚ್ 12 2017

           ಅಣ್ಣ ಬಸವಣ್ಣನವರ ಬಸ್ವಾದ್ವೈತವನ್ನು ಒಪ್ಪಿಕೊಂಡು ಅವರ ತತ್ವಾದರ್ಶಗಳನ್ನು ಚಾಚೂ ತಪ್ಪದೆ ಪಾಲಿಸುವವರೆಲ್ಲರೂ ಲಿಂಗಾಯತರೇ ಆಗಿದ್ದಾರೆ. ಇವರೆಲ್ಲರೂ ಸಮಾನತೆ/ಭ್ರಾತೃತ್ವ/ನ್ಯಾಯಕ್ಕಾಗಿ ಜೀವವನ್ನು ಮುಡಿಪಾಗಿಟ್ಟಿದ್ದಾರೆ. ಸರಳ ವಿಚಾರವಿದು ಬೇಕಂತಲೇ ಕಾಂಪ್ಲಿಕೆಟ್ ಮಾಡುತ್ತಿರುವುದರ ಹಿಂದಿನ ಹುನ್ನಾರ ಯಾವುದು ಶ್ರೀಪಾದ್?

          • Shripad
           ಮಾರ್ಚ್ 13 2017

           ನೀವು ಇಲ್ಲಿನ ಚರ್ಚೆಗೆ ಹೊಸಬರು ಅನಂತ ‘ಹೋರಾಟ’ದವರೇ. ನಿಮಗೆ ಅದೆಲ್ಲ ಪುರಾಣ ಹೇಳಲಾಗದು. ಶೇಟ್ಕರ್ ಹೇಳ್ತಾರೆ ಬಿಡಿ. ನಿಮಗ್ಯಾಕೆ?

        • WITIAN
         ಮಾರ್ಚ್ 10 2017

         ತಿದ್ದುಪಡಿ: ಬೋಲ್ಷೆವಿಕರಿಂದ ಮಿಕ್ಕ ಕಮ್ಮಿನಿಷ್ಟರ ದಮನವಾಯಿತು (ಬೋಲ್ಷೆವಿಕರಿಂದ ಕಮ್ಮಿನಿಷ್ಟರು ಅಧಿಕಾರ ಕಿತ್ತುಕೊಳ್ಳಲಿಲ್ಲ)

         ಉತ್ತರ
         • SalamBava
          ಮಾರ್ಚ್ 13 2017

          “ಸಮಾನತೆ/ಭ್ರಾತೃತ್ವ/ನ್ಯಾಯಕ್ಕಾಗಿ ಜೀವವನ್ನು ಮುಡಿಪಾಗಿಟ್ಟಿದ್ದಾರೆ”

          Yes Shetkar we have to carry on this fight into these dark days of fascism. Remember how Hitler became #1 leader of Germany and how it led to Concentration Camps. Today the alarming rise of extreme right wing nationalism is a call for resistance. Let’s light the lamp of love, knowledge and freedom to drive away the darkness.

          ಉತ್ತರ
  • SalamBava
   ಮಾರ್ಚ್ 9 2017

   Mr. Manju, why are you misusing the name of Marx and masquerading as Marxist? Do you even realise how despicable yore as an imposter? Go get a life.

   ಉತ್ತರ
   • Shripad
    ಮಾರ್ಚ್ 10 2017

    ಬಾವಾರಿಗೆ ಸಲಾಂ. ತಾವು ಕನ್ನಡದಲ್ಲಿ ಬರೆದರೆ ಒಳ್ಳೆಯದು.

    ಉತ್ತರ
    • WITIAN
     ಮಾರ್ಚ್ 11 2017

     ನ್ಯಾಯಯುತವಾದ ಪ್ರಶ್ನೆಗಳನ್ನು ಕೇಳಿದವರಿಗೆ Bigot ಎಂದು ಕರೆಯುವ ಈ ಹರಾಮಿ ಶಿಟ್ಟಿಯ ಕಣ್ಣುಗಳಲ್ಲಿ ‘ಕನ್ನಡದ ಅತ್ಯುತ್ತಮ ಮನಸ್ಸು..’ (!?). ಸಂವಾದ ಎಂದರೆ ಕೇಳಿದ ಪ್ರಶ್ನೆಗೆ ಪೃಚ್ಛಕನಿಗೆ ಸಮಾಧಾನವಾಗುವಂತಹ ಉತ್ತರವನ್ನು ಕೊಡುವುದು. ಇವನ ಬಳಿ ಕುರ್ ಆನ್ ಬಗ್ಗೆ ಕೇಳಿದ ಪ್ರಶ್ನೆಗೆ ಕನಿಷ್ಠ ಪಕ್ಷ “ಹದೀಸ್ ನಲ್ಲಿ ಹೀಗೆ ಹೇಳಿದೆ..” ಅಂತಲೋ, ಅಥವಾ “ಇಂಥ ಫತ್ವಾ ವನ್ನು ಈ ವಿಷಯಕ್ಕೆ ಕೊಡಲಾಗಿದೆ..” ಅಂತಲೋ ಹೇಳುವಷ್ಟು ಕೂಡಾ ಪಾಂಡಿತ್ಯವಿಲ್ಲ. ಒಂದೇ ಸ್ಟಾಕ್ ಉತ್ತರ..”ಗೋ ಟು ನಿಯರೆಷ್ಟ್ ಮದ್ರಸಾ”.. ಹಿಂದೂ ಧರ್ಮಗ್ರಂಥಗಳ ಬಗ್ಗೆ, ಅಥವಾ ಮತ್ಯಾವುದೇ ಪುಸ್ತಕದ ಬಗ್ಗೆ ಹಲವಾರು ಪ್ರಶ್ನೆಗಳನ್ನು ಓದುಗರು ಈ ವೇದಿಕೆಯಲ್ಲಿ ನಿಯಮಿತವಾಗಿ ಕೇಳಿದ್ದಾರೆ. ನೈಜ ಕುತೂಹಲದಿಂದ, ಅಥವಾ ಜ್ಞಾನವೃದ್ಧಿಗಾಗಿ ಕೇಳಲ್ಪಟ್ಟ ಪ್ರಶ್ನೆಗಳಿಗೆ ಆಯಾ ಲೇಖನಗಳ ಲೇಖಕರೋ ಅಥವಾ ಮಿಕ್ಕ ಓದುಗರೋ ಉತ್ತರವನ್ನು ಕೊಟ್ಟಿದ್ದಾರೆ. ಯಾರೂ “ನಿಯರೆಷ್ಟ್ ದೇವಸ್ಥಾನಕ್ಕೆ” ಹೋಗಲು ಅಥವಾ ಬೇರೊಂದು ಕಡೆಗೆ ಹೋಗಲು ಹೇಳಲಿಲ್ಲ. ಅಸಲಿಗೆ ವಚನಗಳ ಬಗ್ಗೆ ಶಿಟ್ಟಿಗಾಗಲೀ, ಕುರ್ ಆನ್ ಬಗ್ಗೆ ಹರಾಮಿಗಾಗಲೀ ಕನಿಷ್ಠ ಜ್ಞಾನವೂ ಇಲ್ಲ. ಆದರೂ ಶ್ರೀರಂಗರು ಹೇಳಿದಂತೆ “ಮನಸ್ಸಿನಲ್ಲಿ ಮೂಡಿಸಿಕೊಂಡ ಬಿಂಬಕ್ಕೆ ಹೊಂದದ ಚಿತ್ರ”ದ ವಾಸ್ತವವನ್ನು ಮಿಕ್ಕ ಓದುಗರು ಮುಖಕ್ಕೆ ರಾಚಿದಾಗ ತಮ್ಮ ಅಜ್ಞಾನ ಮುಚ್ಚಿಕೊಳ್ಳಲು ಮಿಕ್ಕವರ ನಿಂದನೆ ಶುರುಮಾಡುತ್ತಾರೆ.

     ಉತ್ತರ
    • WITIAN
     ಮಾರ್ಚ್ 13 2017

     ಶ್ರೀಪಾದ ರವರೆ, ಈ ‘ಅನಂತ ಹೋರಾಟ’ ದ ಪದಗಳ ಬಳಕೆ, ಮತ್ತು ಅಜೆಂಡಾ ನೋಡಿದರೆ, ನಾಶೆಶೇ ಎಂಬ ಕ್ರಿಮಿಯ ಮತ್ತೊಂದು ಐ ಡಿ ಯಂತೆ ಕಾಣುತ್ತದೆ. ಕೇವಲ ತನ್ನ ಹಳಸಲು ಪ್ರತಿಕ್ರಿಯೆಗಳ ರೀತಿಯಲ್ಲಿ ಮಾತನಾಡುವವರು ಹಲವರಿದ್ದಾರೆ ಎಂದು ತೋರಿಸುವ ಹತಾಶ ಪ್ರಯತ್ನ ಅಷ್ಟೇ!

     ಉತ್ತರ
     • SalamBava
      ಮಾರ್ಚ್ 13 2017

      I thought Witian was banned from Nilume after his recent profanity laden abusive tirade against progressive opinionators like Shetkar. Now he’s back again! So much for moderation!

      ಉತ್ತರ
      • WITIAN
       ಮಾರ್ಚ್ 14 2017

       ಇಂಗ್ಲಿಷಿನಲ್ಲೊಂದು ಸೊಗಸಾದ ನುಡಿಗಟ್ಟಿದೆ.. “what you sow you will reap”. ಇದುವರೆಗೆ ನನ್ನ ಪ್ರತಿಕ್ರಿಯೆಗಳನ್ನು ಗಮನಿಸಿದವರಿಗೆ ಅದು ಚೆನ್ನಾಗಿ ಗೊತ್ತಾಗುತ್ತದೆ. ಅತಿ ಬುದ್ಧಿವಂತಿಕೆಯ, ಅಪ್ರಾಮಾಣಿಕವಾದ ಕಮೆಂಟುಗಳನ್ನು ಅವರ ಭಾಷೆಯಲ್ಲೇ ಖಂಡಿಸುತ್ತಿದ್ದೆ, ಇನ್ನು ಮುಂದೆ ಕೂಡಾ ಮಾಡುತ್ತೇನೆ. ಖಂಡಿಸಿದ ತಕ್ಷಣ ವೈಯುಕ್ತಿಕ ದಾಳಿ ಮಾಡಿ ಹೊಲಸು ಕಮೆಂಟುಗಳನ್ನು ಬರೆಯುವುದು ನಾಶೆಶೇ ಎಂಬ ವ್ಯಕ್ತಿಯ ಹಳೆಯ ಚಾಳಿ. ಅವನು ಹೊಲಸು ಮಾತನಾಡಿದ ತಕ್ಷಣ ಅದನ್ನು ಅವನಿಗೇ ಬಳಿಯುವುದು ಸಭ್ಯವಾಗಿ ಬರೆಯುವ ಹಲವರಿಗೆ ಮನಸ್ಸಿಗೆ ಕಷ್ಟವಾಗುವ ವಿಷಯ. ಹೀಗಾಗಿ ಇವನು ವಿಜೃಂಭಿಸುತ್ತಿದ್ದ. ನಿಲುಮೆಯ ಮಾಡರೇಟರ್ ಗಳಿಗೂ ಇವನು ಬರೆಯುವ ಕಮೆಂಟುಗಳನ್ನು ಅಳಿಸುವ ಮನಸ್ಸಾಗದೆ ಹೋದದ್ದು ಖೇದದ ವಿಷಯ. ಕನಿಷ್ಠ ಪಕ್ಷ ನನ್ನ ಕಮೆಂಟುಗಳ ಘಾಟು ತಟ್ಟಿ ನನ್ನ ಕಮೆಂಟಿನ ಜತೆ ಅವನ ಹೊಲಸನ್ನೂ ಅಳಿಸುವ ಕೆಲಸ ನಡೆಯುತ್ತದೆ. ನನಗೆ ಅದರಿಂದ ಬೇಸರವೇನೂ ಇಲ್ಲ. ಇನ್ನು ‘ಸಲಾಮ್ ಬಾವಾ’ ಹೆಸರಿನ ಹರಾಮ್, ನಿನಗೆ ನನ್ನ ಅಚ್ಚ ಕನ್ನಡದ ಪ್ರತಿಕ್ರಿಯೆಗಳನ್ನು ನೋಡಿದಾಗ ನಿನ್ನ ಕೀಳರಿಮೆ ಜಾಗೃತಗೊಂಡು ಇಂಗ್ಲಿಷಿನಲ್ಲಿ ಬರೆಯಲು ಪ್ರಾರಂಬಿಸುತ್ತೀಯೆ, ಒಳ್ಳೆಯದೇ! ಇದರಿಂದ ನಿನ್ನ ಅಜ್ಞಾನ ಇನ್ನಷ್ಟು ಸ್ಫುಟವಾಗಿ ಕಾಣುತ್ತದೆ. ನಿನ್ನ ಅಪ್ರಾಮಾಣಿಕತೆಗೆ ಸಾಕ್ಷಿಯೆಂದರೆ, ಇದುವರೆಗೂ ಕುರ್ ಆನ್ ಬಗ್ಗೆಯಾಗಲೀ ಇಸ್ಲಾಮ್ ಬಗ್ಗೆ ಯಾಗಲೀ ಕೇಳಿದ ಒಂದೇ ಪ್ರಶ್ನೆಗೂ ನಿನ್ನಿಂದ ಉತ್ತರವೇ ಇಲ್ಲ! ಏಕೆಂದರೆ, ಪವಿತ್ರ ಕುರ್ ಆನ್ ಅನ್ನು ನನ್ನಷ್ಟೂ ನೀನು ಓದಿಲ್ಲ. ಒಂದು ಪೂಜ್ಯ ಗ್ರಂಥವಾಗಿ ಅದನ್ನು ಶ್ರದ್ಧೆಯಿಂದ ಓದಿದವನೇ ಆಗಿದ್ದರೆ, ನಿನಗೆ ಅದರ ಬಗ್ಗೆ ಬರುವ ಪ್ರಶ್ನೆಗಳಿಗೆ ಉತ್ತರಿಸಲು ಅಳುಕು ಇರಬಾರದು. ಇರಲಿ, ನನ್ನ ಈ ಪ್ರತಿಕ್ರಿಯೆ ಸಭ್ಯವಾಗೇ ಇರುವುದರಿಂದ ಮಾಡರೇಟರ್ ಮಹೋದಯರು ಅಳಿಸಲಾರರು ಎಂದುಕೊಂಡಿದ್ದೇನೆ.

       ಉತ್ತರ
       • SalamBava
        ಮಾರ್ಚ್ 14 2017

        Same old troll vitriol. What else can be expected from you Mr. Rao? Get a life.

        ಉತ್ತರ
        • WITIAN
         ಮಾರ್ಚ್ 14 2017

         ಹ ಹಾ.. ರಾವ್!

         ಉತ್ತರ
     • Shripad
      ಮಾರ್ಚ್ 14 2017
   • ಮಾರ್ಕ್ಸ್ ಮಂಜು
    ಮಾರ್ಚ್ 13 2017

    Mr.Salam

    Are yo follower of Communisim Religion of Maharshi Marx? If not,don’t interfere in my Religious ideology, go and talk about your Religion

    ಉತ್ತರ
 5. M A Sriranga
  ಮಾರ್ಚ್ 10 2017

  ಗುದ್ದೋಡು ಪ್ರತಿಕ್ರಿಯಾ ಪ್ರವೀಣರಿಗೆ(ಗು.ಪ್ರ.ಪ್ರ.)— ಪದ್ಮರಾಜ ದಂಡಾವತಿಯವರ ‘ನಾಲ್ಕನೇ ಆಯಾಮ’ ಅಂಕಣದಿಂದ (ಪ್ರಜಾವಾಣಿ ೨೯-೧-೧೭) ಆಯ್ದ ಕೆಲವು ವಾಕ್ಯಗಳು ಸರಿಯಾಗಿ ಹೊಂದುತ್ತವೆ. ಆದ್ದರಿಂದ ಇಲ್ಲಿ ಕೊಟ್ಟಿರುವೆ. ಓದುವುದು,ಬಿಡುವುದು ಅವರ ಇಷ್ಟ. ‘ನಾವು ನಮ್ಮ ಒಳಗೆ ಕಾಪಾಡಿಕೊಂಡು ಬಂದ ಪ್ರತಿಮೆಗಳು, ಬಿಂಬಗಳು ಹಾಗೆಯೇ ಇರಬೇಕು ಎಂದು ಬಯಸುತ್ತೇವೆ. ಆ ಬಿಂಬಕ್ಕೆ ಎಲ್ಲಿಯೋ ಮುಕ್ಕು ಆಗುತ್ತದೆ ಎಂದು ಅನಿಸಿದರೆ ಅದು ಸತ್ಯವಾಗಿದ್ದರೂ ಅದನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಕಳೆದುಕೊಳ್ಳುತ್ತೇವೆ’.
  ನಾನು ಸಾಮಾನ್ಯವಾಗಿ ಈ ಗು.ಪ್ರ.ಪ್ರ. ಕೆಸರೆರಚಾಟದಲ್ಲಿ ಭಾಗವಹಿಸುವುದಿಲ್ಲ. ಈ ಸಲ ಏಕೆ ಸೇರಿಕೊಂಡೆನೋ ತಿಳಿಯುತ್ತಿಲ್ಲ. ನಾನು ಈ ಆಟದಿಂದ ನಿವೃತ್ತಿ ಹೊಂದುತ್ತಿದ್ದೇನೆ . ಇಷ್ಟವಿದ್ದವರು ಮುಂದುವರಿಸಿ. ಒಳ್ಳೆಯದಾಗಲಿ.

  ಉತ್ತರ
  • BNS
   ಮಾರ್ಚ್ 11 2017

   ಶ್ರೀರಂಗರವರೆ, ನಿಮ್ಮ ಅನೇಕ ಲೇಖನಗಳನ್ನು ಓದಿದ್ದೇನೆ ಮತ್ತು ನಿಮ್ಮ ಚಿಂತನೆಯ ಗಹನತೆಯ ಹಿಂದೆ ಇರುವ ನಿಮ್ಮ ಅಧ್ಯಯನವನ್ನು ಮೆಚ್ಚಿಕೊಂಡಿದ್ದೇನೆ. ನಾನು ನಿಮ್ಮನ್ನು ಉದ್ದೇಶಿಸಿ ಬರೆದ ಒಂದು ಪ್ರತಿಕ್ರಿಯೆಯ ಹಿಂದೆ ಇದ್ದ ನನ್ನ ಕಳಕಳಿಯನ್ನು ನೀವು ಅರ್ಥ ಮಾಡಿಕೊಂಡಿದ್ದೀರಿ ಎಂದು ನಂಬಿದ್ದೇನೆ. ನನ್ನ ಪ್ರತಿಕ್ರಿಯೆಯಿಂದಾಗಿ ನೀವು ಒಂದು ವ್ಯರ್ಥ ವಾಗ್ಯುದ್ಧದಲ್ಲಿ ಸಿಲುಕಿಹಾಕಿಕೊಳ್ಳುವಂತೆ ಆಗಿದ್ದಕ್ಕೆ ದಯವಿಟ್ಟು ಕ್ಷಮಿಸಿ.

   ಉತ್ತರ
  • ಅನಂತ ಹೋರಾಟ
   ಮಾರ್ಚ್ 11 2017

   ನಮೋ ಅಲೆ ದೇಶವನ್ನೇ ಮುಳುಗಿಸುತ್ತಿರುವ ಈ ಸಂದರ್ಭದಲ್ಲಿ ಪ್ರಜಾವಾಣಿಯ ದಂಡಾವತಿ ಪ್ರಗತಿಪರ ಹಡಗನ್ನು ಬಿಟ್ಟು ಸುನಾಮಿ ಜೊತೆ ಕೈಗೂಡಿಸಿರುವುದು ಆಶ್ಚರ್ಯಕರ ಸಂಗತಿಏನಲ್ಲ.

   ಉತ್ತರ
 6. Ckvmurthy
  ಮಾರ್ಚ್ 11 2017

  Mr Chaitraji why do waste your talent and precious time to comment of an unknown hypocrite’s valueless writings.They are famous for their loose thinkings.They donot know any thing except finding “Brhaminsatam” in each and every point.They are in their seat not by virtue of their talent,on the other hand they have to please their bosses to gain Monterey benefits.Hence they float the antibrhamin slogans and thinking’s.This is the only their “Bandavala”.If they donot renew this time to time they cannot retain their position.Hence don’t give much importance for bucket writings.But Padmraja Dandavathi is impartial gentleman..These hypocrites donot spare him also.

  ಉತ್ತರ

ನಿಮ್ಮದೊಂದು ಉತ್ತರ BNS ಗಾಗಿ ಪ್ರತ್ಯುತ್ತರವನ್ನು ರದ್ದುಮಾಡಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments