ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 8, 2017

17

ಈ ಪ್ರತ್ಯೇಕತಾ ಭಾವ ಹುಟ್ಟುತ್ತಿರುವುದು ಎಲ್ಲಿಂದ..?

‍ನಿಲುಮೆ ಮೂಲಕ

– ಡಾ. ಮೋಹನ್ ತಲಕಾಲುಕೊಪ್ಪ

ನಮ್ಮ ಸಾಗರದ ಸುಹಾನಾ ಅವರ ಸುಶ್ರಾವ್ಯ ಗಾಯನ, ಅದಕ್ಕೆ ತೀರ್ಪುಗಾರರ ಹಾಗೂ ನಿರೂಪಕಿಯ ನಾಟಕೀಯ, ಧಾರ್ಮಿಕ ಹಾಗೂ ಟಿಆರ್ ಪಿ ಪ್ರೇರಿತ ಮಾತುಗಳ ಹಿನ್ನೆಲೆಯಲ್ಲಿ ಈ ಪೋಸ್ಟ್.

ಅಲ್ಲ ಮಾರಾಯರೆ, ಬ್ರಾಹ್ಮಣರು, ಲಿಂಗಾಯಿತರು, ಗೌಡರು, ಕುರುಬರು, ದಲಿತರು, ಜೈನರು, ಸಿಖ್ಖರು, ಬೌದ್ಧರು, ಜಾಟರು ಇತ್ಯಾದಿ ಸಮುದಾಯಗಳು ಇದ್ದ ಹಾಗೆ ಭಾರತದಲ್ಲಿರುವ ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರು ಕೂಡಾ ಒಂದೊಂದು ಸಮುದಾಯ, ಅವರಿಗೆ ಎಲ್ಲ ಸಮುದಾಯಗಳಂತೆ, ದೇವರು, ಸಂಪ್ರದಾಯ, ರೀತಿ-ರಿವಾಜು, ಉಡುಗೆ-ತೊಡುಗೆ, ಆಹಾರ ವಿಶೇಷಗಳಿವೆ ಎಂದು ಭಾವಿಸಿದರೆ ಈಗಿನ ಸಮಸ್ಯೆಗಳೆಲ್ಲಾ ಪರಿಹಾರ ಅಂತ ನನಗನ್ನಿಸುತ್ತದೆ. ಅವರು ಎಲ್ಲರಂತೆ ಅಂತ ತಿಳಿದು ವರ್ತಿಸಿದರೆ ಏನು ತೊಂದರೆ? ಅವರಿಗೆ ವಿಶೇಷ ಗಮನವೂ ಬೇಡ. ನಿರ್ಲಕ್ಷ್ಯವೂ ಸಲ್ಲದು. ಸಹಜವಾಗಿ ಮನುಷ್ಯರಂತೆ ಭಾವಿಸಿದರೆ ಏನಾಗುತ್ತದೆ?

ನಿಜವಾಗಿ, ಬಹುತೇಕ ಹಿಂದೂಗಳು (ಹಿಂದಿನಿಂದ ಇವತ್ತಿನವರೆಗೂ) ಹಾಗೇ ಭಾವಿಸುತ್ತ ಬಂದಿದ್ದಾರೆ. ಒಂದು ವೇಳೆ ಹಿಂದೂಗಳಿಗೆ ಈ ಸಮುದಾಯಗಳ ಮೇಲೆ ಪ್ರತ್ಯೇಕ ದ್ವೇಷವಿದ್ದಿದ್ದರೆ, ಒಂದಾನೊಂದು ಕಾಲದಲ್ಲಿ ಬಹಳ ಕಡಿಮೆ ಸಂಖ್ಯೆಯಲ್ಲಿದ್ದ್ಪಮುಸ್ಲಿಂ ಹಾಗೂ ಕ್ರಿಶ್ಚಿಯನ್ನರು ನೆಮ್ಮದಿಯಾಗಿ ಬಾಳಿ ಬದುಕುವುದಕ್ಕೆ ಸಾಧ್ಯವಿತ್ತಾ? ಅಲ್ಲಿಗೆ ಹಿಂದೂ ಜೀವನ ವಿಧಾನ ಎಲ್ಲರನ್ನು ಒಳಗೊಳ್ಳುವಷ್ಟು ಸಹಿಷ್ಣುವಾಗಿದೆ ಅಂತ ಗೊತ್ತಾಗುತ್ತದೆ. ಜೊತೆಗೆ ಬಹುತೇಕ ಮುಸ್ಲಿಂ ಮತ್ತು ಕ್ರಿಶ್ಚಿಯನ್ನರೂ ಕೂಡ ಇಲ್ಲಿನ ಜೀವನ ವಿಧಾನದೊಂದಿಗೆ, ಸಂಸ್ಕೃತಿಯ ಜೊತೆಗೆ ಬೆರೆತು ಹೋಗಿದ್ದಾರೆ. ಅವರ ಪವಿತ್ರ ಗ್ರಂಥಗಳು ಹಾಗೆ ಹೇಳುತ್ತವೆ ಹೀಗೆ ಹೇಳುತ್ತವೆ (ನಾನು ಕುರಾನ್, ಬೈಬಲ್ ಓದಿಲ್ಲ. ಹಾಗಾಗಿ ನನಗೆ ಹೊತ್ತಿಲ್ಲ) ಹಾಗಾಗಿ ಅವರು ಬೆರೆಯುವುದಿಲ್ಲ ಅಂತ ಕೆಲವರು ಹೇಳಬಹುದು. ಬಹಳ ಬಹಳ ಕಡಿಮೆ ಸಂಖ್ಯೆಯ ಮುಸ್ಲಿಂ ಮತ್ತು ಕ್ರಿಶ್ಚಿಯನ್ನರು ನಮ್ಮದು ಮತನಿಷ್ಠೆ ಅಂತ ಹೇಳಬಹುದು. ಆದರೆ ಬಹುತೇಕರು ಈ ರೀತಿ ಮಾಡಿದ್ದು ನನ್ನ ಗಮನಕ್ಕೆ ಬಂದಿಲ್ಲ. ನನ್ನ ಮಟ್ಟಿಗೆ ಅವರು ಯಾವತ್ತಿಗೂ ಭಾರತೀಯರೆ.

ಇನ್ನೂ ಹೇಳುವುದಾದರೆ, ನನ್ನ ಕ್ಲಾಸ್ ಮೇಟ್ ಗಳು ಸಾಕಷ್ಟು ಜನ ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರಿದ್ದರು. ನಾವು ಯಾವತ್ತೂ ಅವರನ್ನು ಪ್ರತ್ಯೇಕಿಸಿ ನೋಡಿದ್ದೆ ನನಗೆ ನೆನಪಿಲ್ಲ. ನಾನು ಪಾಠ ಮಾಡಿದ ವಿದ್ಯಾರ್ಥಿಗಳಲ್ಲೂ ಸಾಕಷ್ಟು ಜನ ಇದ್ದರು. ಯಾವತ್ತೂ ಅವರಿಗೆ ಭೇದ ಭಾವ ಎಣಿಸಿದ್ದಿಲ್ಲ. ಅದು ಮನಸ್ಸಿಗೂ ಬಂದಿಲ್ಲ. ಇವತ್ತಿಗೂ ಇಲ್ಲ. ನಾನು ಮಸೀದಿಗೂ, ಚರ್ಚಿಗೂ ಹೋಗಿದ್ದೇನೆ. ನನಗೆ/ ನನ್ನಂತ ಹಲವರಿಗೆ ಏನೂ ಅನಿಸಿಲ್ಲ.

ಹಾಗಾದರೆ ಸಮಸ್ಯೆ ಎಲ್ಲಿಂದ ಉದ್ಭವವಾಗುತ್ತಿರುವುದು? ಈ ಪ್ರತ್ಯೇಕತಾ ಭಾವ ಹುಟ್ಟುತ್ತಿರುವುದು ಎಲ್ಲಿಂದ? ಹಿಂದೂಗಳು ಕೆಲವರು ತಾವು ‘ಓವರ್ ಸೆಕ್ಯುಲರ್’ ಅನ್ನುವ ರೀತಿಯಲ್ಲಿ ನಾಟಕದ ಹಾದಿ ಹಿಡಿದಿರುವುದು ಯಾಕೆ? ಕೆಲ ಹಿಂದೂಗಳು ಅವರನ್ನು ನಖಶಿಖಾಂತ ದ್ವೇಷಿಸಲು ಶುರು ಮಾಡಿರುವುದು ಏಕೆ? ಸಹಜವಾಗಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ನರನ್ನೂ ಮನುಷ್ಯರೆಂದು ನೋಡುವ ಪ್ರವೃತ್ತಿ ಯಾಕೆ ನಶಿಸುತ್ತಿದೆ? ಜೊತೆಗೆ ಅವರೂ – ‘ಹಿಂದೂಗಳು’ ನಮ್ಮ ವಿರೋಧಿಗಳು ಎನ್ನುವ ಮನೋಭಾವನೆ, ಹಿಂದೆಂದೂ ಇಲ್ಲದ ಅಸಹನೆ ಬೆಳೆಸಿಕೊಳ್ಳುತ್ತಿರುವುದಕ್ಕೆ ಕಾರಣವೇನು?

ನನಗೆ ಬಹಳ ತೀವ್ರವಾಗಿ ಅನ್ನಿಸುತ್ತದೆ. – ಈ ಮಾಧ್ಯಮಗಳು, ರಾಜಕಾರಿಣಿಗಳು ಹಾಗೂ ಹುಸಿ ಸೆಕ್ಯೂಲರಿಷ್ಟರ ಕೆಲವು ಸಮುದಾಯಗಳ ಒಲೈಸುವಿಕೆಯಿಂದಾಗಿ ಎಂದೂ ರಿಲಿಜಿನ್ ಹಾದಿ ಹಿಡಿಯದ ಹಿಂದೂ ಜೀವನ ವಿಧಾನ (ನನಗೆ ತಿಳಿದಂತೆ ಹಿಂದೂ ಧರ್ಮ ಎನ್ನುವುದಿಲ್ಲ) ಸಕಾರಣವಾಗಿ ರಿಲಿಜನ್ ಆಗುವತ್ತ ಸಾಗಿದೆ. ಬಹುಸಂಖ್ಯಾಂತ ನಿರ್ಲಕ್ಷ್ಯಕ್ಕೆ ತುತ್ತಾಗಿರುವುದು, ಅವರ ಸಂಪ್ರದಾಯಗಳು, ರೀತಿ-ರಿವಾಜುಗಳು ಅವಹೇಳನಕ್ಕೆ ಸಿಲುಕಿರುವುದು ಹಿಂದೂಗಳಿಗೆ ಸಿಟ್ಟು ತರಿಸಿದೆ. ನೀವು ‘ಅಸಹಿಷ್ಣು’ ಅಂತ, ಅದಲ್ಲದಿದ್ದರೂ ಪದೇ ಪದೇ ಆರೋಪ ಮಾಡಿದರೆ ಯಾರಿಗಾದರೂ ಕೋಪ ಬರುವುದಿಲ್ಲವೇ? ಹಿಂದೂ ಸಂಸ್ಕೃತಿಯನ್ನು ಮಾತ್ರ ಹೀಗಳೆದರೆ, ಉಳಿದವುಗಳನ್ನು ವಿನಾಕಾರಣ ಹೊಗಳಿದರೆ.. ಹೇಗಾಗಬೇಡ? ಹೀಗಾದಾಗ ಎಲ್ಲವನ್ನು ಮತೀಯ ಕನ್ನಡಕವನ್ನು ಹಾಕಿಕೊಂಡು ವಿಶ್ಲೇಷಿಸುವ ಪ್ರವೃತ್ತಿ ಬೆಳೆಯುತ್ತದೆ. ಇದಕ್ಕೆ ಹಿಂದೂಗಳನ್ನು ದೂರಿದರೆ ಪ್ರಯೋಜನವಿಲ್ಲ.

ಇವೆಲ್ಲದಕ್ಕೆ ಪರಿಹಾರ-

೧) ಹುಸಿ ಸೆಕ್ಯೂಲರಿಷ್ಟರ ಬಂಡವಾಳ ಬಯಲು ಮಾಡುವುದು (ಇದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಆಗುತ್ತಿದೆ). ಎಲ್ಲ ಸುಧಾರಣೆಗಳು ಹಿಂದೂಗಳಲ್ಲೇ ಬರಬೇಕು ಅಂತ ಉಳಿದವರನ್ನು ಒಲೈಸುವ ಪ್ರವೃತ್ತಿ, ಅವರ ಸಂಪ್ರದಾಯಗಳ ಬಗ್ಗೆ ಏನನ್ನೂ ಹೇಳದೆ ಜಾಣ ಮೌನ ವಹಿಸಿರುವ ಇವರ ನಡೆ ತೀವ್ರ ಟೀಕೆಗೆ ಗುರಿಯಾಗುತ್ತಲಿದೆ. ಇನ್ನಾದರೂ ಅವರು ಬದಲಾದರೆ ಒಳ್ಳೆಯದು. ಇಲ್ಲದಿದ್ದರೆ ಸಮಸ್ಯೆಯನ್ನು ಜೀವಂತವಾಗಿಡುವ ಆ ಮೂಲಕ ತಮ್ಮ ಗಂಜಿ ಕಂಡುಕೊಳ್ಳುವ ಅವರ ಹುನ್ನಾರ ಬಯಲಿಗೆ ಬಂದೇ ಬರುತ್ತದೆ.

೨) ಎಲ್ಲ ಸಮುದಾಯಗಳೂ ವಿದ್ಯೆ, ಉದ್ಯೋಗ ಪಡೆದು ಅನುಷಂಗಿಕವಾಗಿ ಸುಧಾರಿಸುತ್ತಲೇ ಹೋಗಬೇಕು. ಇಲ್ಲದಿದ್ದರೆ ಹಿಂದುಳಿಯುವುದೊಂದೇ ದಾರಿ!!

೩) ಸರ್ಕಾರಗಳು ಕೆಲವು ಸಮುದಾಯಗಳನ್ನು ಓಟ್ ಬ್ಯಾಂಕಿಗಾಗಿ ಒಲೈಸುವುದನ್ನು ಬಿಡಬೇಕು. ಎಲ್ಲ ಸಮುದಾಯಗಳು ಸಮಾನ ಅವಕಾಶವುಳ್ಳವು ಅನ್ನುವ ರೀತಿಯಲ್ಲಿ ಆಡಳಿತ ನಡೆಸಬೇಕು. ಸರ್ಕಾರಕ್ಕೆ ಎಲ್ಲರೂ ಸಮಾನರು. ಜಾತಿ, ಮತಗಳಾಧಾರದ ಮೇಲೆ ಜನರನ್ನು ಒಡೆಯಬಾರದು (ಇದು ಅಸಾಧ್ಯ ಅಂತ ಗೊತ್ತು. ಆದರೆ ನನ್ನ ಇಂಗಿತ!). ಜನರು ಅರಿವು ಬೆಳೆಸಿಕೊಂಡರೆ ಇದನ್ನು ಸಾಧಿಸಬಹುದು. ರಾಜಕಾರಿಣಿಗಳ ಬೇಳೆ ಬೇಯದಂತೆ ನೋಡಿಕೊಳ್ಳಬಹುದು.

೪) ಎಲ್ಲಾ ಮಾಧ್ಯಮಗಳು ಬೆಂಕಿ ಹಚ್ಚುವ ಕೆಲಸ ಮಾಡದೆ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. (ಇಲ್ಲದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಮಾನ ಹರಾಜಾಗುತ್ತದೆ. ಗೊತ್ತಿದ್ದೂ ಆರ್ಥಿಕ ಲಾಭಕ್ಕೋಸ್ಕರ ಮಾಡಬಾರದ್ದನ್ನೆಲ್ಲಾ ಮಾಡುವ, ಯಾವುದೋ ಪಕ್ಷದ ಮುಖವಾಣಿಯಂತೆ ವರ್ತಿಸುವುದರಿಂದ ಸಮಾಜ ಇನ್ನಷ್ಟು ಹದಗೆಡುತ್ತದೆ. ಉದ್ಧಾರವಾಗುವುದಿಲ್ಲ.

ಇವಿಷ್ಟು ನನ್ನ ಅನಿಸಿಕೆಗಳು. ಆರೋಗ್ಯಕರ ಚರ್ಚೆಗೆ (ಗಮನಿಸಿ: ವಾದ-ವಿವಾದಕ್ಕಲ್ಲ) ಸ್ವಾಗತ. ನನ್ನರಿವಿಗೆ ಬರದೇ ಇರುವ ವಿಷಯಗಳಿರಬಹುದು. ಅಥವಾ ನನ್ನ ಚಿಂತನೆಯಲ್ಲಿ ತಪ್ಪಿರಬಹುದು. ಯಾವುದಕ್ಕೂ ಸಂವಾದ ನಡೆಸೋಣ ಮಿತ್ರರೇ.

17 ಟಿಪ್ಪಣಿಗಳು Post a comment
  1. ಸ್ಪಂದನಾ ರಾಮ್
    ಮಾರ್ಚ್ 8 2017

    ಆಕೆಯನ್ನು ಉಳಿದ ಸ್ಪರ್ಧಿಗಳಂತೆ ವಾಹಿನಿಯವರು ಮತ್ತು ತೀರ್ಪುಗಾರರು ಪರಿಗಣಿಸಿದಂತಿಲ್ಲ.ಪರಿಗಣಿಸಿದ್ದರೆ ಕೇವಲ ಆಕೆಯ ಸಂಗೀತದ ಬಗ್ಗೆಯಷ್ಟೆ ಚರ್ಚೆಯಾಗಬೇಕಿತ್ತು. ಮೂಲಭೂತವಾದಿಗಳಿಗೆ ಆಮಂತ್ರಣ ಕೊಟ್ಟಿರುವುದೇ ವಾಹಿನಿಯವರು

    ಉತ್ತರ
  2. sudarshana gururajarao
    ಮಾರ್ಚ್ 8 2017

    ಪ್ರತಿಭೆಯೊಂದು ಮತೀಯ ರಾಜಕಾರಣದ ದಾಳವಾಗಿ ಹೇಳಹೆಸರಿಲ್ಲದಂತೆ ನಶಿಸಿಹೋಗಲು ವೇದಿಕೆಯೊಂದು ಸಿದ್ಧವಾಯಿತಷ್ಟೇ. ಆದ್ಯತೆಗಳ ಅರಿವಿಲ್ಲದ ಅಧ್ಯಯನ ಹೀನ ,ಸಂಸ್ಕಾರಹೀನ ವ್ಯಕ್ತಿಗಳು ತೀರ್ಪುಗಾರರಾಗಿ,ನಿರೂಪಕರಾಗಿ ವೇದಿಕೆಯಲ್ಲಿ ವಿರಾಜಮಾನರಾದರೆ ಇದೇ ಗತಿ

    ಉತ್ತರ
  3. ಮಾರ್ಚ್ 9 2017

    ವಿಶ್ವಭ್ರಾತೃತ್ವ ವಿದೂಷಕ ದ್ವಯರು ತಮ್ಮ ಫರ್ಮಾನು ಹೊರಡಿಸಿಲ್ಲವಲ್ಲ. ಕಲೆಗೂ ಕಲೆ ಹಚ್ಚುವ ಇರಾದಾ ಇದೆಯೋ ಹೇಗೆ

    ಉತ್ತರ
  4. Shripad
    ಮಾರ್ಚ್ 9 2017

    ಇಲ್ಲಿ ನೋಡಿ ಅಂಬೇಡ್ಕರ್ ಏನು ಹೇಳಿದ್ದಾರೋ…”ವಿಶ್ವಭ್ರಾತೃತ್ವದ” ಬಗ್ಗೆ: “The brotherhood of Islam is not the universal brotherhood of man. It is brotherhood of Muslims for Muslims only”

    ಉತ್ತರ
    • sudarshana gururajarao
      ಮಾರ್ಚ್ 9 2017

      ಅದು ಗೊತ್ತಿಲ್ಲದೇ ಹೋದರೆ ಕಡೆಗೆ ಜನ್ನತಿಯೇ ಗತಿ, ಜಂಗಮನಿಗೆ

      ಉತ್ತರ
    • ನಾಶೆಶೇ
      ಮಾರ್ಚ್ 9 2017

      ಬಾಬಾಸಾಹೇಬರು ಹಿಂದೂ ಧರ್ಮದ ಬಗ್ಗೆ ಏನು ಹೇಳಿದ್ದಾರೆ?

      ಉತ್ತರ
      • ಶೆಶೆಶೇ
        ಮಾರ್ಚ್ 9 2017

        ನಾಶೆಶೇ ಅಂತವರನ್ನು ನಂಬಬೇಡಿ ಎಂದಿದ್ದಾರೆ

        ಉತ್ತರ
        • SalamBava
          ಮಾರ್ಚ್ 10 2017

          You despicable SheSheShe see what Swami Vivekananda has said:

          I believe it (Advaitism) is the religion of future enlightened humanity. The Hindus may get the credit of arriving at it earlier than other races, they being an older race than either the Hebrew or the Arab; yet practical Advaitism, which looks upon and behaves to all mankind as one’s own soul, was never developed among Hindus… If ever any religion approached to this equality in an appreciable manner, it is Islam and Islam alone. (VI. 415)
          -Swami Vivekananda

          ಉತ್ತರ
          • ನಾಶೆಶೇ
            ಮಾರ್ಚ್ 10 2017
          • ನಾಶೆಶೇ
            ಮಾರ್ಚ್ 10 2017

            ಸ್ವಾಮಿ ವಿವೇಕಾನಂದರಿಗೆ ಬಸವಧರ್ಮದ ಪರಿಚಯವಿರಲಿಲ್ಲ. ಶರಣರು ಬಸವಾದ್ವೈತದ ಮೂಲಕ ಸಮಾನತೆ, ಭ್ರಾತೃತ್ವ ಹಾಗೂ ನ್ಯಾಯವನ್ನು ಎತ್ತಿ ಹಿಡಿಯುವ ಸಮಾಜ ಕಟ್ಟಲು ಹೊರಟಿದ್ದು ವಿವೇಕಾನಂದರಿಗೆ ಗೊತ್ತಿರಲಿಲ್ಲ. ಗೊತ್ತಿದ್ದರೆ ಇಸ್ಲಾಮಿಗೆ ಕೊಟ್ಟ ಹಿರಿಯ ಸ್ಥಾನವನ್ನು ಬಸವಧರ್ಮಕ್ಕೂ ಕೊಡುತ್ತಿದ್ದರು ಎಂಬುದು ನಿಸ್ಸಂಶಯ.

            ಉತ್ತರ
      • shripad
        ಮಾರ್ಚ್ 9 2017

        ಬೌದ್ಧ ಧರ್ಮ ಭಾರತದಿಂದ ಇಲ್ಲವಾಗಲು ಮುಸ್ಲಿಂ ದಾಳಿಯೇ ಕಾರಣ, ಹಿಂದೂ ಧರ್ಮವಲ್ಲ ಅಂದಿದ್ದಾರೆ.

        ಉತ್ತರ
  5. ನಾಶೆಶೇ
    ಮಾರ್ಚ್ 9 2017

    ಇಂದು ಪ್ರಪಂಚದ ಎಲ್ಲಾ ಕಡೆ ಮುಸಲ್ಮಾನರು ಅಪಾರ ಒತ್ತಡದಲ್ಲಿ ಇದ್ದಾರೆ. ಬಹುಸಂಖ್ಯಾತರಾಗಿರುವಲ್ಲಿ ಪಶ್ಚಿಮದ ಧಾಳಿ (ಉದಾ ಇರಾಕ್), ಅಲ್ಪಸಂಖ್ಯಾತರಾಗಿರುವಲ್ಲಿ (ಉದಾ ಭಾರತ) ಬಹುಸಂಖ್ಯಾತರ ದೌರ್ಜನ್ಯ. ಆದುದರಿಂದ ಕೆಲವೊಮ್ಮೆ ಮುಸಲ್ಮಾನರಲ್ಲಿ ಕೆಲವರು ಮತೀಯತೆಯನ್ನು ಅಭಿವ್ಯಕ್ತಿಸಿರಬಹುದು. ಆದರೆ ಇದನ್ನು ದೊಡ್ಡ ಇಶ್ಯೂ ಮಾಡುವುದು ಸರಿಯಲ್ಲ. ಮುಸಲ್ಮಾನರು ಪರಕೀಯರಲ್ಲ ಅವರೂ ಭಾರತೀಯರು ಎಂಬ ಭಾವನೆ ಬಹುಸಂಖ್ಯಾತರಲ್ಲಿ ಬೇರುಬಿಟ್ಟಾಗ ಎಲ್ಲವೂ ಸರಿ ಹೋಗುತ್ತದೆ.

    ಉತ್ತರ
    • shripad
      ಮಾರ್ಚ್ 9 2017

      “ಮುಸಲ್ಮಾನರು ಪರಕೀಯರಲ್ಲ ಅವರೂ ಭಾರತೀಯರು ಎಂಬ ಭಾವನೆ ಬಹುಸಂಖ್ಯಾತರಲ್ಲಿ ಬೇರುಬಿಟ್ಟಾಗ ಎಲ್ಲವೂ ಸರಿ ಹೋಗುತ್ತದೆ”
      ಮುಸಲ್ಮಾನರಿಗೆ ಭಾರತೀಯರು ಬೇರೆಯಲ್ಲ, ನಾವು ಬೇರೆಯಲ್ಲ ಅನಿಸುವುದು ಯಾವಾಗ? ಆಗ ಏನೂ ಸರಿ ಹೋಗಲ್ವಾ?

      ಉತ್ತರ
      • ಮಾರ್ಚ್ 10 2017

        ದೇಶಕ್ಕಿಂತ ಧರ್ಮದ ಅಮಲು ಏರಿಸಿಕೊಳ್ಳುವ ಯಾವನೂ ಸಮಷ್ಟಿಯ ಭಾಗವಾಗಲಾರ. ಸಲಾಂ ಸಾಬಿಯ ಬಾಂಧವರ ಪ್ರಾಬ್ಲಂ ಅದೇ

        ಉತ್ತರ
      • ನಾಶೆಶೇ
        ಮಾರ್ಚ್ 10 2017

        ಮುಸಲ್ಮಾನರು ನೀವೆಷ್ಟರ ಮಟ್ಟಿಗೆ ಭಾರತೀಯರೋ ಅಷ್ಟರ ಮಟ್ಟಿಗೆ ಭಾರತೀಯರೇ ಆಗಿದ್ದಾರೆ. ಮುಸಲ್ಮಾನರನ್ನು ತುರುಕರೆಂದೂ ಅರಬ್ಬರೆಂದೂ ಹಿಂದುತ್ವವಾದಿಗಳು ಕರೆಯುತ್ತಾರೆ/ಹೀಯಾಳಿಸುತ್ತಾರೆ, ಮುಸಲ್ಮಾನರು ಎಂದೂ ತಮ್ಮನ್ನು ಹಾಗೆ ಕರೆದುಕೊಂಡಿಲ್ಲ! ಮುಸಲ್ಮಾನರನ್ನು ಮೀಸಲಾತಿ ಮೂಲಕ ದೇಶದ ಸೇವೆಗೆ ಸೇನೆ, ಪೋಲೀಸ್, ಬ್ಯಾಂಕು, ಸರಕಾರೀ ಕಚೇರಿಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನಿಯುಕ್ತಿ ಮಾಡಿದರೆ ಅವರು ದೊಡ್ಡ ಮಟ್ಟದಲ್ಲಿ ದೇಶ ಸೇವೆ ಮಾಡುತ್ತಾರೆ ಅನುಮಾನವೇ ಇಲ್ಲ.

        ಉತ್ತರ
        • Shripad
          ಮಾರ್ಚ್ 10 2017

          ” ಮುಸಲ್ಮಾನರನ್ನು ಮೀಸಲಾತಿ ಮೂಲಕ ದೇಶದ ಸೇವೆಗೆ ಸೇನೆ, ಪೋಲೀಸ್, ಬ್ಯಾಂಕು, ಸರಕಾರೀ ಕಚೇರಿಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನಿಯುಕ್ತಿ ಮಾಡಿದರೆ ಅವರು ದೊಡ್ಡ ಮಟ್ಟದಲ್ಲಿ ದೇಶ ಸೇವೆ ಮಾಡುತ್ತಾರೆ” ಮಾಡದಿದ್ದರೆ? ನಿರುದ್ಯೋಗದಿಂದ ಜನಸಂಖ್ಯೆ ಹೆಚ್ಚಿಸುತ್ತಾರೆ!

          ಉತ್ತರ
    • ಮಾರ್ಚ್ 10 2017

      ಹಿರಿಯ ನಾಗನ ನಂಜು ಕಿರಿಯ ನಾಗನ ಪಾಲು,ತಂದೆ ಮಾಡಿದ ಪಾಪ ಕುಲದ ಪಾಲು.
      ಜೆಂಗಿಸ್,ಖಿಲ್ಜಿ,ಘೋರಿ,ಗಜ್ನಿ,ಔರಂಗ ಜೇಬ, ಕಾಶ್ಮೀರದ ಬಹುಸಂಖ್ಯಾತರು, ಬಾಂಗ್ಲಾದ ಬಹುಸಂಖ್ಯಾತರು,ಪಾಪಿಸ್ತಾನದ ಬಹುಸಂಖ್ಯಾತರು ಎಲ್ಲರೂ ಸಂಚಯಿಸಿದ ಸಂಚಿತಾದ ಪಾಪಗಳು ಕಳೆಯುವುದಾದರೂ ಹೇಗೆ? ಕರ್ಮ ಸಿದ್ಧಾಂತ.

      ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments