ನಾವೆಲ್ಲರೂ ಒಂದೇ...
– ಗೀತಾ ಹೆಗ್ಡೆ
ಒಂದಿಲ್ಲೊಂದು ಕಾರಣಗಳಿಂದ ನೀನು ಹಿಂದು, ನೀನು ಕ್ರಿಶ್ಚಿಯನ್, ನೀನು ಮುಸ್ಲಿಂ ಹೀಗೆ ಅವರವರ ಧರ್ಮದ ಹೆಸರಲ್ಲಿ, ಒಂದಿನಿತೂ ಅವರ ಮನಸ್ಸಿನಲ್ಲಿ ನಾವೆಲ್ಲ ಒಂದೇ ಅನ್ನುವ ಭಾವನೆ ಬೆಳೆಯಲು ಈ ಸಮಾಜ ಯಾಕೆ ಅನುವು ಮಾಡಿಕೊಡುತ್ತಿಲ್ಲ.. ಇದು ಸದಾ ಕಾಡುವ ನನ್ನೊಳಗಿನ ಪ್ರಶ್ನೆ. ಎಷ್ಟೋ ಸಾರಿ ಜೀವನದ ಅನೇಕ ವೇಳೆಯಲ್ಲಿ ಎದುರಾಗುವ ಮಾನವೀಯ ಜನರು ನಮ್ಮ ಕಷ್ಟ ಸುಃಖಕ್ಕೆ ಸ್ಪಂಧಿಸಿರುತ್ತಾರೆ. ಅವರ ಒಡನಾಟದಲ್ಲಿ ನಾವು ಜಾತಿಯ ಬಗ್ಗೆ ಯೋಚನೆಯನ್ನೆ ಮಾಡುವುದಿಲ್ಲ. ಅಷ್ಟು ನಮ್ಮೊಳಗಿನ ಮನಸ್ಸು ಬೇಧ ಭಾವ ಮರೆತು ಕೇವಲ ಅವರ ಒಳ್ಳೆಯ ನಡೆ ನುಡಿಗಳಲ್ಲಿ ತಲ್ಲೀನವಾಗಿರುತ್ತದೇ. ಆದರೆ ಸಮಾಜದ ಕೆಲವು ವ್ಯಕ್ತಿಗಳು ಇಷ್ಟು ಮುಕ್ತ ಮನಸ್ಸಿನಿಂದ ಬದುಕಲು ಬಿಡುವುದಿಲ್ಲ. ಆಗಾಗ ಅವರ ಚುಚ್ಚು ಮಾತುಗಳನ್ನು ಕೇಳಬೇಕಾಗುತ್ತದೆ. ಅಲ್ಲಿ ನಮ್ಮ ಬದುಕಿನ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದನ್ನು ಪ್ರತಿಭಟಿಸುವಷ್ಟು ಶಕ್ತಿ ಎಲ್ಲರಲ್ಲೂ ಇರುವುದಿಲ್ಲ. ಸಮಾಜದ ಕಟ್ಟು ಕಟ್ಟಳೆಗೆ ತಲೆ ಬಾಗಲೇ ಬೇಕಾಗುತ್ತದೆ. ಅಂಥದೊಂದು ಘಟನೆ ಎದುರಿಸಿದ ಸಂದರ್ಭವಿದು.
ನಾನು ಆಗಷ್ಟೆ ಬ್ಯಾಂಕಿಗೆ ಸೇರಿದ ಹೊಸತು. 1981ನೇ ಇಸವಿ. ಸಿರ್ಸಿಯಿಂದ ನಮ್ಮ ಹಳ್ಳಿ ಹನ್ನೆರಡು ಕಿ.ಮೀ. ಈಗಿನಂತೆ ಬಸ್ ಪಾಸ್, ಬಸ್ಸಿನ ಅನುಕೂಲವಿಲ್ಲ. ಹಳ್ಳಿಯಿಂದ ಬಸ್ ಸ್ಟಾಪ್ ಗೆ ಬರಲು ಒಂದೂವರೆ ಕಿ.ಮೀ. ನಡೆಯಬೇಕು. ಹತ್ತೂವರೆಗೆಲ್ಲ ಬ್ಯಾಂಕಿಗೆ ಹಾಜರಾದರೆ ಸಾಯಂಕಾಲ ಐದೂವರೆಗೆ ಮತ್ತೆ ಇದೆ ರಿಪೀಟ್. ಕತ್ತಲಾದಗುವ ವೇಳೆ ನನ್ನನ್ನು ಕರೆದೊಯ್ಯಲು ಮನೆಯಿಂದ ಅಪ್ಪನೊ, ಅಣ್ಣನೊ ಬಸ್ ಸ್ಟಾಪಲ್ಲಿ ಕಾಯುತ್ತ ಕುಳಿತುಕೊಳ್ಳಬೇಕು. ಬಸ್ ಬರುವುದಕ್ಕೆ ನಿಯಮಿತ ವೇಳೆ ಇಲ್ಲ. ಹೀಗೆ ಒಂದು ತಿಂಗಳು ನಡೆಯುತ್ತಲೆ ಇತ್ತು. ಸಿರ್ಸಿಯಲ್ಲಿ ಉಳಿಯುವ ವ್ಯವಸ್ಥೆಗೆ ಪರದಾಟ. ನನ್ನ ಕಷ್ಟ ತಿಳಿದ ಟೈಪಿಂಗ್ ಕಲಿಯುವಾಗಿನ ನನ್ನ ಕ್ರಿಶ್ಚಿಯನ್ ಗೆಳತಿ ಮೇರಿ, “ಬಾರೆ ನಮ್ಮನೆ ಮೇಲ್ಗಡೆ ದೊಡ್ಡದಾಗಿ ಖಾಲಿ ಜಾಗ ಇದೆ; ಅಲ್ಲಿರು ಬಾ” ಅಂತ ಆತ್ಮೀಯವಾಗಿ ಅಂದಾಗ ನನಗೆ ನಿಜಕ್ಕೂ ಆಶ್ಚರ್ಯ ಆಗಿತ್ತು. ಕಾರಣ ಎಷ್ಟೆಲ್ಲಾ ಆತ್ಮೀಯರು, ಬಂಧುಗಳು ಇದ್ದರೂ ಯಾರೂ ಈ ಮಾತು ಹೇಳಿರಲಿಲ್ಲ, ಎಲ್ಲಿ ತಮ್ಮನೆಯಲ್ಲಿ ವಕ್ಕರಿಸಿಕೊಂಡರೆ ಅನ್ನುವ ಭಾವನೆಗಳನ್ನೇ ಕಂಡಿದ್ದೆ. ನಿಜಕ್ಕೂ ಅವಳು ಮಾಡಿದ ಉಪಕಾರ ಇಂದಿಗೂ ಮರೆತಿಲ್ಲ. ಒಂದೂವರೆ ತಿಂಗಳು ಅವರ ಮನೆಯಲ್ಲಿ ಅವರ ಮನೆ ಮಗಳಂತೆ ಕಂಡರು. ಒಬ್ಬಳೇ ರಾತ್ರಿ ಅಷ್ಟು ದೊಡ್ಡ ಜಾಗದಲ್ಲಿ ಮಲಗಲು ಭಯವೆಂದು ಅವಳೊಟ್ಟಿಗೆ ನನ್ನ ನಿದ್ದೆ. ಕ್ರಿಸ್ಮಸ್ ಹಬ್ಬದ ಪ್ರತಿ ಕ್ಷಣ ಅವಳೊಂದಿಗೆ ಕಳೆದು ಚಂದದ ಹಬ್ಬ ಅನುಭವಿಸಿದೆ. ಶುದ್ಧ ಶಾಖಾಹಾರಿಯಾದ ನನಗೆ ಜೂಸು, ಹಣ್ಣು ಕೊಟ್ಟು ಹಬ್ಬದಲ್ಲಿ ಪಾಲ್ಗಳ್ಳುವಂತೆ ಮಾಡಿದ್ದರು. ಅತ್ಯಂತ ಭಕ್ತಿಯಿಂದ ಮಾಡುವ ಅವರ ಪ್ರಾರ್ಥನೆ ನನಗೆ ಇಷ್ಟವಾಗಿತ್ತು.
ಆದರೆ ಅಕ್ಕ ಪಕ್ಕದ ಕಂಡ ಜನ ಬೀದಿಯಲ್ಲಿ ನಡೆದಾಡುವಾಗ ತಮ್ಮ ಮನಸಿನ ಒಂದೊಂದೇ ಮಾತು ಉದುರಿಸುತ್ತಿದ್ದರು. “ಪುಕ್ಕಟೆ ಊಟ, ಕೈ ತುಂಬಾ ಸಂಬಳ”.. “ಒಂದಿನ ಆ ಧರ್ಮಕ್ಕೆ ಸೇರಿಕೊಳ್ತಿಯಾ ಬಿಡು.” ಇತ್ಯಾದಿ.
ಈ ಮಾತುಗಳನ್ನು ಮನೆಯಲ್ಲಿ ಹೇಳಿದಾಗ ಬೇರೆ ಕಡೆ ರೂಮು ಹುಡುಕಿ ಉಳಿಯುವ ವ್ಯವಸ್ಥೆ ಮಾಡಿದರು. ಇದು ವಾಸ್ತವ. ನನಗೆ ಪ್ರತಿಭಟಿಸುವ ಶಕ್ತಿ ಕೂಡಾ ಇರಲಿಲ್ಲ. ಯಾಕೆಂದರೆ ನೀನು ಹೆಣ್ಣು, ನೀನು ತಗ್ಗಿ ಬಗ್ಗಿ ನಡೆಯಬೇಕು. ಎದುರುತ್ತರ ಕೊಟ್ಟು ಅವಮಾನಿಸಿಕೊಂಡು ಜನರ ಬಾಯಿಗೆ ತುತ್ತಾಗ ಬೇಡಾ. ಸುಮ್ಮನಿರು ಇದು ಪಾಲಕರ, ಹಿತೈಷಿಗಳ ಕಿವಿ ಮಾತು. ಪಾಲಿಸಿದೆ.
ಇನ್ನು ಕನ್ನಡ ಶಾಲೆ ನಿಲೇಕಣಿ ಸರಕಾರಿ ಶಾಲೆಯ ಮುಸ್ಲಿಂ ಗೆಳತಿ ಕಥೆ. ಆಗಲೂ ಅಷ್ಟೇ.. ಅವಳ ಮನೆ ಶಾಲೆಯ ಪಕ್ಕದಲ್ಲೆ ಇತ್ತು. ನಾವೆಲ್ಲ ಗೆಳತಿಯರು ದಿನಾ ಅವರ ಮನೆಗೆ ಹೋಗಿ ಸ್ವಲ್ಪ ಹೊತ್ತು ಇದ್ದು ಬರುತಿದ್ದೆವು. ಅವರಮ್ಮ ಮಕ್ಕಳು ಬಂದಿದಾರೆ ಅಂತ ಅದೇನೇನೊ ತಿನ್ನಲು ಕೊಟ್ಟರೆ ನಾವು ಯಾವತ್ತೂ ಬೇಡಾ ಎಂದು ಹೇಳುತ್ತಿರಲಿಲ್ಲ. ಯಾವತ್ತೂ ನಮಗೆ ಜಾತಿ ಧರ್ಮದ ಬಗ್ಗೆ ಯೋಚನೆಯೆ ಬರುತ್ತಿರಲಿಲ್ಲ. ಇಂದಿಗೂ ನನ್ನ ಮನಸ್ಸು ಹಾಗೆಯೆ ಇದೆ. ಈಗ ಹತ್ತು ವರ್ಷದ ಹಿಂದಿನ ನನ್ನ ಮೊಬೈಲ್ ಸಿಮ್ ಕೊನೆಯ ನಂ.786. ಯಾವಾಗಾದರೊಮ್ಮೆ call ಮುಸ್ಲಿಂ ರಿಂದ ಬರುತ್ತದೆ. ರಾಂಗ್ ನಂಬರ್ ಅಂದು ಕಟ್ ಮಾಡುತ್ತೇನೆ ನಗುತ್ತ ಹೆಮ್ಮೆಯಿಂದ.
ಕಾಲ ಕಳೆಯುತ್ತಿದ್ದಂತೆ ಎಲ್ಲಾ ಪಂಗಡದವರ ಸಹವಾಸ ಒಂದಲ್ಲಾ ಒಂದು ಸಮಯದಲ್ಲಿ ಒದಗಿ ಬಂದೇ ಬರುತ್ತದೆ. ಅವರೊಂದಿಗೆ ನಾವು ಪ್ರೀತಿ ವಿಶ್ವಾಸದಿಂದ ನಡೆದುಕೊಂಡರೆ ಅಲ್ಲಿ ಆತ್ಮೀಯ ಸಂಬಂಧ ಏರ್ಪಡುತ್ತದೆ; ಹೊರತೂ ಜಾತಿ ಭಾವನೆ ಬರೋದಿಲ್ಲ. ನಾವೆಲ್ಲರೂ ಒಂದೇ ಅನ್ನುವ ಭಾವನೆ ಏರ್ಪಡುತ್ತದೆ.
ಕಷ್ಟಕ್ಕಾಗುವವನು ನಿಜವಾದ ಬಂದು. ಅದು ಬಿಟ್ಟು ಜಾತಿಯ ಭಾವನೆ ಎಲ್ಲಿವರೆಗೆ ಜನರ ತಲೆಯಲ್ಲಿ ತುಂಬಿರುತ್ತದೆ ಅಲ್ಲಿಯವರೆಗೂ ಈ ಕೋಮು ಭಾವನೆ ಅಳಿಯೋದಿಲ್ಲ. Atleast ಯಾರು ಈ ನಿಟ್ಟಿನಲ್ಲಿ ಬದುಕು ನಡೆಸುತ್ತಾರೊ ಅವರಿಗೆ ಅಡ್ಡಿ ಪಡಿಸದೆ ಇರುವಷ್ಟು ಸ್ವಲ್ಪ ತಿಳುವಳಿಕೆ ಜನರಲ್ಲಿ ಬಂದರೆ ಸಾಕಪ್ಪಾ ಅನಿಸುತ್ತದೆ.
ಇನ್ನು ಅವರುಗಳು ಯಾವುದೇ ಕ್ಷೇತ್ರದಲ್ಲಿ ಮುಂದುವರಿಯಲ್ಲಿ ಬೆನ್ನು ತಟ್ಟಿ ಹುರಿದುಂಬಿಸಬೇಕು. ಹರಿವುದೊಂದೆ ರಕ್ತ, ಇರುವುದೊಂದೆ ಜೀವ, ಇರುವಷ್ಟು ಕಾಲ. ಯಾವುದೆ ಜಾತಿ ಭೇದ ಭಾವವಿಲ್ಲದೆ ಒಬ್ಬರನ್ನೊಬ್ಬರು ಅವಲಂಬಿಸಿ ಪ್ರೀತಿ ಸೌಹಾರ್ದತೆಯಿಂದ ಬಾಳೋಣ. ಅವರಲ್ಲಿರೊ ಕಲೆ ಕಂಡು ಗೌರವಿಸೋಣ. ಜಾತಿಯ ಹಣೆ ಪಟ್ಟಿ ನೋಡಿ ಹೊಗಳುವುದರಲ್ಲಿ ಅರ್ಥ ಇಲ್ಲ. ಅವರುಗಳು ನಮ್ಮ ದೇಶದ ಪ್ರತಿಭಾವಂತರೆಂದು ಪರಿಗಣಿಸಿ ಆ ಕ್ಷೇತ್ರದಲ್ಲಿ ಮುಂದುವರಿಯಲು ಸಹಕರಿಸುವುದು ಸೂಕ್ತ.
The more we try to artificially to unite people on the basis of ideology the more we divide them. Unity should happen naturally and harmoniously. Not all differences need to be wiped out. That’s why uniform civil code is such a bad idea. So is rainbow coalition.
ತಮ್ಮ ಅಭಿಪ್ರಾಯ ಸರಿಯಾಗಿದೆ.
ಬರಹ ಓದಿ ಸ್ಪಂಧಿಸಿರುವುದಕ್ಕೆ ಧನ್ಯವಾದಗಳು
Differential treatment and appeasement is Okey?
Salam.
“ನಾವೆಲ್ಲರೂ ಒಂದೇ” ಎಂಬ ಪ್ರಣಾಳಿಕೆ ಪ್ರಕಾರ ತೀರ್ಥಯಾತ್ರೆಗಳಿಗೆ ಸಬ್ಸಿಡಿ ಕೊಡುವುದನ್ನು ನಿಲ್ಲಿಸುವುದಕ್ಕಿಂತ ಮುಸಲ್ಮಾನರನ್ನು ಮೆಕ್ಕಾ/ಮದೀನಾಗೆ ಹಿಂದೂಗಳನ್ನು ವೈಕುಂಠ/ಕೈಲಾಸಕ್ಕೆ ಕಳುಹಿಸಲು ಸಬ್ಸಿಡಿ ಕೊಡುವುದು ಉತ್ತಮವಲ್ಲವೇ ಗೆಳೆಯರೇ?
ಇಲ್ಲಿ ಸರಕಾರ ಸಮಾನತೆಯನ್ನು ತೋರಿಸಿದೆ. ತಪ್ಪೇನು?
Thank you Sudarshana