ಕಮ್ಯುನಿಸಂ ಎಂಬ ಕಾಡಿನ ಬೆಂಕಿಗೆ ಅಂಬೇಡ್ಕರ್ ಸುಟ್ಟು ಹೋಗಬೇಕೆ?
– ಡಾ. ರೋಹಿಣಾಕ್ಷ ಶಿರ್ಲಾಲು,ಸಹಾಯಕ ಪ್ರಾಧ್ಯಾಪಕ
ಕನ್ನಡ ವಿಭಾಗ, ವಿವೇಕಾನಂದ ಕಾಲೇಜು,ಪುತ್ತೂರು.
ಒಂದೆಡೆ ರಕ್ತಕ್ರಾಂತಿಯನ್ನು ಆಹ್ವಾನಿಸುವ ಕಮ್ಯುನಿಸಂ, ಇನ್ನೊಂದಡೆ ರಕ್ತರಹಿತ ಬದಲಾವಣೆಯನ್ನು ನಿರೀಕ್ಷಿಸುವ ಬೌದ್ಧ ತತ್ವ. ಒಂದೆಡೆ ನೂರಾರು ವರ್ಷಗಳಿಂದ ಶೋಷಣೆ, ಅನ್ಯಾಯಗಳಿಗೆ ಒಳಗಾದ ದಲಿತ ಸಮಾಜ, ಇನ್ನೊಂದೆಡೆ ದಲಿತರೊಳಗೆ ಕಾಣಿಸಿಕೊಳ್ಳಲಾರಂಭಿಸಿದ ಎಚ್ಚರ , ಆವೇಶಗಳು ಸುಲಭದಲ್ಲಿ ಕಮ್ಯೂನಿಸಂನ ತೋಪಿಗೆ ಸಿಡಿಮದ್ದಾಗುವ ಅಪಾಯ, ಇದು ಅಂಬೇಡ್ಕರ್ ಮುಂದಿದ್ದ ಸನ್ನಿವೇಶದ ಕಿರು ಚಿತ್ರಣ. ಒಂದು ಬುದ್ಧನ ಮಾರ್ಗ , ಇನ್ನೊಂದು ಕಾರ್ಲ್ ಮಾರ್ಕ್ಸ್ ನ ಮಾರ್ಗ. ವಿಶ್ವ ತನ್ನ ಮಾರ್ಗವನ್ನು ಈಗ ಆಯ್ಕೆ ಮಾಡಿಕೊಳ್ಳಬೇಕು ಎನ್ನುತ್ತಲೇ ಬೌದ್ಧಧರ್ಮದ ಮಾರ್ಗದಲ್ಲೇ ಉನ್ನತಿಯನ್ನು ಸಾಧಿಸಲು ಸಾಧ್ಯವೆಂದು ಆತ್ಮವಿಶ್ವಾಸದಿಂದ ನುಡಿದ, ನಡೆದ ಅಂಬೇಡ್ಕರ್. ಇದು ಅಂಬೇಡ್ಕರ್ ಮುಂದಿದ್ದ ಕವಲು ದಾರಿ ಮಾತ್ರವಲ್ಲ, ವರ್ತಮಾನದಲ್ಲಿನ ದಲಿತ ಚಳವಳಿಗಳ, ವಿಚಾರವಾದಿಗಳ ಮುಂದಿನ ಕವಲು ದಾರಿಯೂ ಹೌದು. ಅಂಬೇಡ್ಕರ್ ಅವರ ಅಂತಿಮ ಆಯ್ಕೆ ಬುದ್ಧನೋ? ಕಾರ್ಲ್‍ಮಾಕ್ರ್ಸೋ? ಈ ಪ್ರಶ್ನೆ ಬಹಳ ಮುಖ್ಯವಾದುದು ಕೂಡ. ಒಂದೆಡೆ ಮಾರ್ಕ್ಸ್ ವಾದಿಗಳು ಮರೆಯಿಂದ ಅಂಬೇಡ್ಕರ್ ವಿಚಾರಗಳನ್ನು ಮಾತನಾಡುತ್ತಾ , ಕಾರ್ಲ್ ಮಾರ್ಕ್ಸ್ನ ವಿಚಾರಗಳೇ ಅಂಬೇಡ್ಕರ್ ವಿಚಾರವೂ ಆಗಿತ್ತು ಎಂಬಂತೆ ತೋರಿಸುತ್ತಿದ್ದಾರೆ. ಇನ್ನೊಂದೆಡೆ ಕರ್ನಾಟಕವೂ ಸೇರಿದಂತೆ ದೇಶದೆಲ್ಲೇಡೆ ದಲಿತ ಚಳವಳಿಗಳು ಹುಟ್ಟಿ , ಉತ್ಕರ್ಷಕ್ಕೆ ತಲುಪಿ , ಹತ್ತಾರು ಚೂರುಗಳಾಗಿ ಒಡೆದು ಈ ಚಳವಳಿಗಳ ಮುಖ ಅಂಬೇಡ್ಕರ್ ಬದಲು ಮಾರ್ಕ್ಸ್, ಲೆನಿನ್‍ಗಳಾಗಿ, ಕ್ರಾಂತಿ, ಬೆಂಕಿಯ ವಿಚಾರಕ್ಕೆ ಅಂಬೇಡ್ಕರ್ ಮುಖವಾಡವನ್ನು ತೊಡಿಸುತ್ತಿದ್ದಾರೆ. ಹಾಗಾದರೆ ಸ್ವತಃ ಅಂಬೇಡ್ಕರ್ ಕಾರ್ಲ್ ಮಾರ್ಕ್ಸ್, ಕಮ್ಯುನಿಸಂ ಬಗೆಗೆ ತಳೆದಿದ್ದ ನಿಲುವು ಏನು? ಎನ್ನುವುದನ್ನು ಪರಿಶೀಲಿಸುತ್ತಾ, ನಮ್ಮ ಬೌದ್ಧಿಕ ವಲಯ ಅಂಬೇಡ್ಕರ್ ಅವರನ್ನು ಅರ್ಥೈಸಿಕೊಂಡ ಬಗೆಯನ್ನು ಚರ್ಚಿಸುವುದೇ ಈ ಬರವಣಿಗೆಯ ಉದ್ದೇಶ.
ಕಳೆದು ಹೋಗಿದ್ದ ಆತ್ಮಗೌರವವನ್ನು ಮತ್ತೆ ಸಂಪಾದಿಸಲು ಸ್ವಾಭಿಮಾನದ ಸಂಘರ್ಷ ನಡೆಸಿದ ಅಂಬೇಡ್ಕರ್ ಕಾರ್ಲ್ ಮಾರ್ಕ್ಸ್ನ ಕ್ರಾಂತಿಯ ಆವೇಶಕ್ಕೆ ಒಪ್ಪಿಸಿಕೊಳ್ಳುವ ಅವಕಾಶಗಳು ಆ ಕಾಲದಲ್ಲಿತ್ತು. ಆದರೆ ಅಂಬೇಡ್ಕರ್ ಪ್ರಜ್ಷಾಪೂರ್ವಕವಾಗಿ ಮಾರ್ಕ್ಸ್ನ ದಾರಿಯನ್ನು ನಿರಾಕರಿಸಿದ್ದರು. ಬದಲಾಗಿ ಬುದ್ಧನ ದಾರಿಯನ್ನು ಆಯ್ಕೆಮಾಡಿಕೊಂಡಿದ್ದರು. ಮಾರ್ಕ್ಸ್ನ ದಾರಿಯನ್ನು ನಿರಾಕರಿಸಿದ್ದು ಅದು ಸಮರ್ಥಿಸುವ ಹಿಂಸೆಯ , ಸರ್ವಾಧಿಕಾರದ ಕಾರಣಕ್ಕೆ. ‘ ಕಮ್ಯುನಿಷ್ಟ್ ವ್ಯವಸ್ಥೆಯಲ್ಲಿ ಸ್ವಾತಂತ್ರ್ಯಕ್ಕೆ ಸ್ಥಾನವಿಲ್ಲ.ಅಲ್ಲಿ ಪರೋಕ್ಷ ಸರ್ವಾಧಿಕಾರ ಸ್ಥಾಪನೆಯಾಗಿರುತ್ತದೆ. ಆದರೆ ಬೌದ್ಧಧರ್ಮ ಸ್ವಾತಂತ್ರ್ಯವನ್ನು ಮೂಲಭೂತ ಬಿಂಧುವಾಗಿ ಒಪ್ಪಿಕೊಂಡಿದೆ. ಅಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಯಾಗುತ್ತದೆ.ಕಮ್ಯುನಿಸ್ಟ್ ಕ್ರಾಂತಿಗಿಂತ ಬೌದ್ಧ ಮಾರ್ಗದ ಪರಿವರ್ತನೆ ಸುರಕ್ಷಿತವಾದುದು, ಬಹುಜನರ ಹಿತವನ್ನು ರಕ್ಷಿಸುವಂತಹುದು ಎನ್ನುವುದು ಅಂಬೇಡ್ಕರ್ ನಿಲುವಾಗಿತ್ತು ಎಂದು ಧನಂಜಯ ಖೀರ್ ಬರೆಯುತ್ತಾರೆ.( ಧನಂಜಯ ಖೀರ್ ,ಪುಟ: 450) ಮಾರ್ಕ್ಸ್ನ ಮಾರ್ಗದಲ್ಲಿ ಅನ್ಯಾಯ, ಬಲತ್ಕಾರ,ಅವಮಾನಗಳು ಸೇರಿಕೊಂಡಿರುವುದನ್ನು ಗುರುತಿಸುತ್ತಾ ಈ ಮಾರ್ಗದ ಫಲಿತಾಂಶ ಶಾಶ್ವತವಲ್ಲ ಎನ್ನುತ್ತಾರೆ. ವ್ಯಕ್ತಿಗಳ ಪಾಲನೆ ಮಾತ್ರವಲ್ಲ, ಒಂದು ರಾಷ್ಟ್ರವಾಗಿಯೂ ಕಮ್ಯುನಿಸಂನ್ನು ಸ್ವೀಕಾರ ಮಾಡುವುದು ತರವಲ್ಲ. ಕಾರಣ ಕಮ್ಯುನಿಸಂ ಕಾಡಿನ ಬೆಂಕಿಯಂತೆ, ಎದುರಾದವರನೆಲ್ಲ ಅದು ನುಂಗಿ ಹಾಕುತ್ತದೆ.ಇಂಥ ಕಾಡಿನ ಅಕ್ಕಪಕ್ಕದಲ್ಲಿರುವ ಗ್ರಾಮಗಳಿಗೆ ಹೇಗೆ ಅಪಾಯ ಇರುತ್ತದೋ ಹಾಗೇಯೇ ಕಮ್ಯುನಿಸಂ ರಾಷ್ಟ್ರಗಳನ್ನು ನೆರೆ ರಾಷ್ಟ್ರಗಳನ್ನಾಗಿ ಹೊಂದಿದ ಎಲ್ಲಾ ರಾಷ್ಟ್ರಗಳಿಗೆ ಅಪಾಯ ಕಟ್ಟಿಟ್ಟದ್ದು ಎಂದು ಎಚ್ಚರಿಸಿದರು.( ಧನಂಜಯ ಖೀರ್ ,ಪುಟ 423) ಅಷ್ಟೇ ಅಲ್ಲದೆ ಕಮ್ಯುನಿಷ್ಟ್ ರಾಷ್ಟ್ರವೊಂದು ನಂಬಿಕೆಗೆ ಅರ್ಹವಲ್ಲ. ಏಕೆಂದರೆ ನೈತಿಕತೆಯನ್ನು ಬದಲಾಯಿಸುವುದು ಕಮ್ಯುನಿಷ್ಟ್ ರಾಷ್ಟ್ರಗಳ ಕುಖ್ಯಾತ ವರಸೆ ಎಂದು ಸ್ಪಷ್ಟವಾಗಿ ನುಡಿಯುತ್ತಾರೆ. ಹಿಂದೂ ಸಮಾಜದೊಳಗಿನ ಅಸ್ಪೃಶ್ಯತೆಯ ರೋಗಕ್ಕೆ ಔಷಧಿಯನ್ನು ಶೋಧಿಸಿ ಹಿಂದುಗಳಿಗೆ ಸತ್ಯದ ಅರಿವನ್ನು ಮೂಡಿಸುವ ಪ್ರಯತ್ನವನ್ನು ಮಾಡಿದ ಅಂಬೇಡ್ಕರ್ ಮಾರ್ಕ್ಸ್ವಾದಿಗಳ ಕೈಗೆ ಸಿಕ್ಕಿ ಹಿಂದೂ ವಿರೋಧಿಯಾಗಿ, ಅರಾಷ್ಟ್ರೀಯವಾದಿಯಾಗಿ, ಪ್ರತ್ಯೇಕ ‘ದಲಿತ್ ಸ್ಥಾನ್’ ಬಯಸಿದರೆನ್ನುತ್ತಾ, ( ಜಿನ್ನಾ ಮುಸಲ್ಮಾನರಿಗೆ ಪಾಕಿಸ್ಥಾನವನ್ನು ಬಯಸಿದಂತೆ) ರಾಷ್ಟ ಘಾತುಕ ವ್ಯಕ್ತಿಯೋ ಎಂಬಂತೆ ಚಿತ್ರಿಸಲ್ಪಡುತ್ತಾರೆ. ಹಿಂದೂ ಧರ್ಮದ ವಿರೋಧ, ದಲಿತ್ ಸ್ಥಾನ್‍ನ ಬೇಡಿಕೆಗಳೇ ಅಂಬೇಡ್ಕರ್ ಕುರಿತ ಹೆಮ್ಮೆಯೆನ್ನುವಂತೆ ಬಿಂಬಿಸುತ್ತಾ, ದೇಶವಾಸಿಗಳ ಮನಸ್ಸಿನೊಳಗೆ ಅಂಬೆಡ್ಕರ್ ಎಂಬ ಶ್ರೇಷ್ಠ, ನಿಷ್ಕಳಂಕಿತ ವ್ಯಕ್ತಿತ್ವಕ್ಕೆ ‘ ಭಂಜಕನ’ ವ್ಯಕ್ತಿತ್ವದ ಕಳಂಕವನ್ನು ಹಚ್ಚುತ್ತಾರೆ.
ಅಂಬೇಡ್ಕರ್ ದೇಶದ ಅಗ್ರಗಣ್ಯ ಕಾರ್ಮಿಕ ನೇತಾರ ದತ್ತೋಪಂತ ಠೇಂಗಡಿಯವರ ಜತೆಗೆ ಮಾತನಾಡುತ್ತಾ, ಕಮ್ಯುನಿಸಂ ಮತ್ತು ದಲಿತ ಸಮಾಜದ ಕುರಿತು ಆಡಿದ ಮಾತುಗಳು ನಮ್ಮ ಕಣ್ತೆರೆಸುವಂತಿದೆ. ದಲಿತರಲ್ಲಿ ಕಾಣಿಸಿಕೊಳ್ಳುತ್ತಿರುವ ಜಾಗೃತಿ, ಒಂದಿಷ್ಟು ಕೋಪ, ಆವೇಶಗಳು ಸುಲಭದಲ್ಲಿ ಕಮ್ಯುನಿಸಂನ ತೋಪಿಗೆ ಸಿಡಿಮದ್ದಾಗುತ್ತದೆ ಎಂಬ ಅರಿವಿನಿಂದ “ ನನ್ನ ಶೆಡ್ಯುಲ್ಡ್ ಕ್ಯಾಸ್ಟ್ ಸಮಾಜ ಕಮ್ಯುನಿಸಂಗೆ ತುತ್ತಾಗುವುದು ನನಗಿಷ್ಟವಿಲ್ಲ. ಹೀಗಾಗಿ ಅದಕ್ಕೊಂದು ದಾರಿ ತೋರಿಸಬೇಕಾದುದು ರಾಷ್ಟ್ರದ ಹಿತ ದೃಷ್ಟಿಯಿಂದ ಅಗತ್ಯವೆನಿಸಿದೆ. ಸಮಾಜ ಕಮ್ಯುನಿಸಂ ಕಡೆಗೆ ತಿರುಗಿದಲ್ಲಿ ಅವರನ್ನು ಮುಂದೆ ಪುನಃ ರಾಷ್ಟ್ರೀಯ ಪ್ರವಾಹದಲ್ಲಿ ಸೇರಿಸುವುದು ಸಾಧ್ಯವಾಗದು. ಪರಿಶಿಷ್ಟ ವರ್ಗದವರು ಮತ್ತು ಕಮ್ಯುನಿಸಂ ನಡುವೆ ಅಂಬೇಡ್ಕರ್ ಅಡ್ಡಗೋಡೆ ” ಎಂದಿದ್ದರು.(ಸಾಮಾಜಿಕ ಕ್ರಾಂತಿಸೂರ್ಯ: ಡಾ. ಅಂಬೇಡ್ಕರ್,ದತ್ತೋಪಂಥ ಠೇಂಗಡಿ, ಪುಟ :173) ಆದರೆ ಇಂದು ಕಮ್ಯುನಿಷ್ಟರಿಂದ ಮಾತ್ರ ದಲಿತೋದ್ಧಾರ ಸಾಧ್ಯ ಎಂಬ ಭ್ರಮೆಯನ್ನು ದಲಿತ ಸಮುದಾಯದ ನಡುವೆ ವ್ಯವಸ್ಥಿತವಾಗಿ ಬಿತ್ತಲಾಗಿದೆ. ಪರಿಣಾಮವಾಗಿ ಯಾವ ಅಂಬೇಡ್ಕರ್ ಕಮ್ಯುನಿಸಂಗೆ ಅಡ್ಡಗೋಡೆಯಾಗಬಯಸಿದ್ದರೋ ಅದೇ ಅಂಬೇಡ್ಕರ್ ಹೆಸರಿನ ದಲಿತ ಚಳವಳಿಗೆ ಮಾರ್ಕ್ಸ್ ವೇಷತೊಡಿಸಿ ಮೆರವಣಿಗೆ ಮಾಡಿಸಲಾಗಿದೆ.
ಅಂಬೇಡ್ಕರ್ ರ ಬಹುಪ್ರಸಿದ್ಧ ಕೃತಿ ‘ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್’ನಲ್ಲಿ ‘ಬುದ್ಧನನ್ನು ಲೇವಡಿ ಮಾಡಬಯಸಿದ ಮಾರ್ಕ್ಸ್ವಾದಿಗಳಿಂದ ಬುದ್ಧನ ಬಗೆಗೆ ಗೌರವ ನಿರೀಕ್ಷಿಸುವುದು ಅತಿಯಾಗುತ್ತದೆ. ಇಂದು ಮಾರ್ಕ್ಸ್ ಹೇಳಿದ ‘ನನ್ನ ಸಮಾಜವಾದ ಅನಿವಾರ್ಯ’ ಎಂಬ ಮಾತು ಸಂಪೂರ್ಣವಾಗಿ ಸುಳ್ಳಾಗಿದೆ.ಇತಿಹಾಸದ ಆರ್ಥಿಕ ವ್ಯಾಖ್ಯಾನ ಒಂದೇ ಇತಿಹಾಸದ ವ್ಯಾಖ್ಯಾನ ಎಂಬ ವಾದವನ್ನು ನಿರಾಕರಿಸುತ್ತಾ, ಮಾರ್ಕ್ಸ್ವಾದ ಹುಸಿಯಾಗುತ್ತಾ ಬಂದುದನ್ನು’ ವಿವರಿಸುತ್ತಾರೆ. ಹಿಂಸಾಚಾರ ಮತ್ತು ಶ್ರಮಿಕರ ಸರ್ವಾಧಿಕಾರ ಕಮ್ಯುನಿಸಂಗೆ ಸಾಮ್ಯವಾದ ಸ್ಥಾಪಿಸಲು ಇರುವ ಎರಡು ದಾರಿ ಎಂದು ಗುರುತಿಸುತ್ತಾರೆ. ಈ ದಾರಿಯಲ್ಲಿ ತಮ್ಮ ಗುರಿಯನ್ನು ಈಡೇರಿಸುವಲ್ಲಿ ಇತರರ ಅಮೂಲ್ಯ ಗುರಿಗಳನ್ನು ನಾಶಮಾಡಿಲ್ಲವೆಂದು ಕಮ್ಯುನಿಸ್ಟರು ಹೇಳಬಲ್ಲರೇ? ಎಂದು ಕೇಳುವ ಅಂಬೇಡ್ಕರ್ ಕಮ್ಯುನಿಸ್ಟರ ಈ ರಕ್ತಮಾರ್ಗಕ್ಕಿಂತ, ಬಲಪ್ರಯೋಗದ ದಾರಿಗಿಂತ ರಾಜ್ಯವನ್ನು ಉಳಿಸುವ ಏಕೈಕ ಶಕ್ತಿಯಾಗಿ ‘ಧರ್ಮ’ ವನ್ನು ಕಾಣುತ್ತಾರೆ. ಕಮ್ಯುನಿಷ್ಟರ ಪಾಲಿಗೆ ಧರ್ಮವು ಅಫೀಮು ಎನ್ನುವ ಕಾರಣದಿಂದ ತಿರಸ್ಕರಣಿಯವಾಗಿ ಮನುಷ್ಯರು ಕಮ್ಯುನಿಷ್ಟರ ಪಾಲಿಗೆ ಹಂದಿಗಳಿಗಿಂತ ಹೆಚ್ಚಲ್ಲ ಎನ್ನುವ ಅಂಬೇಡ್ಕರ್ ‘ ಮನುಷ್ಯನನ್ನು ಹಂದಿಗಳಂತೆ ಕೊಬ್ಬಿಸುವುದೇ ಕಮ್ಯುನಿಷ್ಟ್ ಸಿದ್ಧಾಂತವಾಗಿದೆ’ (ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್) ಎಂದು ಕಮ್ಯುನಿಸ್ಟ್ ಸಿದ್ಧಾಂತವನ್ನು ತಿರಸ್ಕರಿಸುತ್ತಾರೆ. ಆದರೆ ಕಮ್ಯುನಿಸಂನ್ನು ತಿರಸ್ಕರಿಸಿದ ಅಂಬೇಡ್ಕರ್ ವಿಚಾರಧಾರೆಯನ್ನು ವಿರೂಪಗೊಳಿಸಿದ ಎಡಪಂಥೀಯ ಚಿಂತಕರು ಕನ್ನಡವೂ ಸೇರಿದಂತೆ ಭಾರತದಾದ್ಯಂತ ಮಾರ್ಕ್ಸ್ನ ಮುಖವಾಣಿ ಎಂಬಂತೆ ಅಂಬೇಡ್ಕರ್‍ನ್ನು ಬಿಂಬಿಸಿದ್ದು ಅಕ್ಷಮ್ಯ ದ್ರೋಹವಾಗಿದೆ.
‘ಮಾವೋನಲ್ಲಿ ಬುದ್ಧನ ದಿವ್ಯತೆ ಕಾಣುವ ಕಾರ್ಲ್ ಮಾರ್ಕ್ಸ್ನ ಉತ್ಪಾಧನೆಯ ನೈತಿಕತೆ ಹಾಗೂ ಸಮಾನ ಹಂಚಿಕೆಯ ದಿವ್ಯತೆಗೂ, ಬುದ್ಧನ ಮಾನವೀಯತೆ, ಅಂಬೇಡ್ಕರ್ ಸಾಮಾಜಿಕ ನ್ಯಾಯದ ಆಕ್ರಂಧನಕ್ಕೂ ಸಂಬಂಧ ಕಾಣುವ (ದಲಿತ ಕಥನ,ಪುಟ: 262)ಮೊಗಳ್ಳಿ ಗಣೇಶ್ ದಲಿತ ಸಂಘಟನೆಗಳು ಎಲ್ಲಾ ಬಗೆಯ ಎಡಪಂಥೀಯ ಸಂಘಟನೆಗಳ ಜೊತೆ ಅಲ್ಪಸಂಖ್ಯಾತರನ್ನು ಸೇರಿಕೊಂಡು ಮುಂದುವರೆದರೆ ಅದು ನಿಜಕ್ಕೂ ಬುದ್ಧನ ಕ್ರಾಂತಿಯನ್ನು ಮರುರೂಪಿಸುವಷ್ಟು ದೊಡ್ಡದಾಗಬಲ್ಲುದು’ ಎಂಬ ನಿಲುವು ದಲಿತ ತಿಳುವಳಿಕೆಯನ್ನು ದಿಕ್ಕು ತಪ್ಪಿಸಬಲ್ಲ ನಿಲುವಾಗಿದೆ.
ಅಂಬೇಡ್ಕರ್ ವಿಚಾರವನ್ನು ರಕ್ತಗತವಾಗಿಸಿಕೊಳ್ಳಲಾರದ ಸಿದ್ಧಾಂತ ಮಾರ್ಕ್ಸ್ವಾದ. ಅಂಬೇಡ್ಕರ್ ಹೆಸರು ಹೇಳುವ ಎಡಪಂಥೀಯರು ಅಂಬೇಡ್ಕರ್ ವಿಚಾರಗಳನ್ನು ದಲಿತರ ಬದುಕಿಗೆ ಸ್ಪರ್ಶಿಸಲೇ ಇಲ್ಲ. ಅಂಬೇಡ್ಕರ್ ವಿಚಾರಗಳನ್ನು ಹೊರಗಿಟ್ಟೇ ದಲಿತ ಚಳವಳಿಯನ್ನು ಮಾರ್ಕ್ಸ್ವಾದಿಗಳು ಹೈಜಾಕ್ ಮಾಡಿದರು. ಹಿಗಾಗಿ ದಲಿತ ಚಳವಳಿ ಅಂಬೇಡ್ಕರ್ ಚಳವಳಿಯಾಗುವ ಬದಲು ಮಾರ್ಕ್ಸ್ ಚಳವಳಿಯಾಯಿತು. ಯಾವ ಅಂಬೇಡ್ಕರ್ ದಲಿತರನ್ನು ಮಾರ್ಕ್ಸ್ವಾದ ಎಂಬ ಕಾಡಿನ ಬೆಂಕಿಯಿಂದ ಪಾರುಮಾಡಲು ಅಡ್ಡಗೋಡೆಯಾಗಿ ನಿಲ್ಲಲು ಬಯಸಿದ್ದರೋ ಅದೇ ಮಾರ್ಕ್ಸ್ವಾದೀ ವಿಚಾರವಾದಿಗಳು ದಲಿತ ಚಳವಳಿಯನ್ನು ಅಂಬೇಡ್ಕರ್ ವಿಚಾರಗಳಿಂದ ಹೊರಹೋಗುವಂತೆ ಮಾಡಿದರು.
ಧರ್ಮದ ಹಾದಿಯನ್ನು ಅವಶ್ಯಕವಾಗಿ ಮನಗಂಡಿದ್ದ ಅಂಬೇಡ್ಕರ್ ಬುದ್ಧನ ಮಾರ್ಗವನ್ನು ಆಯ್ದುಕೊಳ್ಲುತ್ತಾರೆ. ಆದರೆ ಕಾಲಾನಂತರದಲ್ಲಿ ಉಂಟಾದ ದಲಿತ ಜಾಗೃತಿಯ ಚಳವಳಿಗಳು ಅಂಬೇಡ್ಕರ್ ಮಾರ್ಗದಿಂದ ಮಾರ್ಕ್ಸ್ ದಾರಿಗೆ ಹೊರಳಿಕೊಂಡಿತು. ಪರಿಣಾಮವಾಗಿ ಅಂಬೇಡ್ಕರ್ ಹಚ್ಚಿದ ಬೆಳಕಿನ ಯಾತ್ರೆಯ ಪಂಜುಗಳನ್ನು ತಯಾರಿಸಬೇಕಾಗಿದ್ದ ದಲಿತ ಚಳವಳಿಯು ಮಾರ್ಕ್ಸ್ವಾದಿ ರಕ್ತಕ್ರಾಂತಿಯ ಮಾರ್ಗಕ್ಕೆ ಆಹುತಿಗಳನ್ನು ಸಿದ್ಧಪಡಿಸುತ್ತಿದೆ. ಮನೆಗೆ, ಸಮಾಜಕ್ಕೆ, ದೇಶಕ್ಕೆ ಬೆಳಕಾಗಬೇಕಾಗಿದ್ದ ದಲಿತ ಯುವಕ ಯುವತಿಯರನ್ನು ಮಾರ್ಕ್ಸ್ವಾದ ಮಾವೋವಾದದ ಅಫೀಮನ್ನು ತುಂಬಿಸಿ ನಕ್ಸಲರಾಗಿ ಬೀದಿಹೆಣವಾಗುವಂತೆ ಮಾಡಿರುವುದು ಮಾರ್ಕ್ಸ್ವಾದಿಗಳ ಸಾಧನೆ.
ಇಂದಿಗೂ ಮಾರ್ಕ್ಸ್ವಾದಿಗಳ ಪಾಲಿಗೆ ಅಂಬೇಡ್ಕರ್ ಅವರು ಮಾಡಿದ ಹಿಂದೂ ಧರ್ಮದ ಟೀಕೆ, ವಿಮರ್ಶೆಗಳು ಪ್ರಿಯವಾದಂತೆ ಅವರು ಬೌದ್ಧಧರ್ಮವನ್ನು ಸ್ವೀಕಾರ ಮಾಡಿದ್ದು ಅಪ್ರಿಯವಾದ ಸಂಗತಿಯಾಗಿಯೇ ಉಳಿದಿದೆ. ಧರ್ಮವನ್ನು ಅಫೀಮು ಎಂದವರಿಗೆ ಅಂಬೇಡ್ಕರ್ ಅವರ ಬೌದ್ಧ ಧರ್ಮದ ಸ್ವೀಕಾರದ ನಿಲುವು ಅರಗಿಸಿಕೊಳ್ಳಲಾರದ ಸಂಗತಿಯೇ ಆಗಿದೆ. ಹೀಗಾಗಿ ಎಸ್. ಚಂದ್ರಶೇಖರ್‍ರಂಥ ವಿದ್ವಾಂಸರು “ ಅಂಬೇಡ್ಕರ್ ಕೊನೆಗೆ ಭ್ರಮನಿರಸನಗೊಂಡು ಆಧ್ಯಾತ್ಮ- ಧರ್ಮಗಳಲ್ಲಿ ಲೀನವಾದರು. ಬೌದ್ಧ ಧರ್ಮವನ್ನು ಆದರ್ಶಿಕರಿಸಿ ಅದು ಮಾರ್ಕ್ಸ್ವಾದಕ್ಕೆ ಪರ್ಯಾಯವಾಗುತ್ತದೆ ಎನ್ನುವ ಅವರ ವಾದ ಅಚಾರಿತ್ರಿಕವಾಗುತ್ತದೆ.” ಎನ್ನುತ್ತಾರೆ.( ಅಂಬೇಡ್ಕರ್ ಮತ್ತು ಗಾಂಧಿ, ಪುಟ: 69). ಅಂಬೇಡ್ಕರಂಥ ಮಹಾನ್ ವ್ಯಕ್ತಿ ಧರ್ಮದ ಹಾದಿಯನ್ನು ಬಿಡದೆ ಹಿಂದೂ ಧರ್ಮದಿಂದ ಬೌದ್ಧರ ಕಡೆಗೆ ಹೊರಳಿಕೊಂಡದ್ದು ಮನುಕುಲ ಕ್ರಮಿಸಬಹುದಾದ ದಾರಿಯಾಗಿ ಕಾಣುವ ಬದಲು ‘ಭ್ರಮೆ’ ಯಾಗಿ ಪರಿಭಾವಿಸುವುದು ಮಾರ್ಕ್ಸ್ವಾದದ ಮಿತಿಯೂ ಹೌದು.
ಮಾರ್ಕ್ಸ್ನ ಮಾತು ಸಂಪೂರ್ಣ ಸುಳ್ಳಾಗಿದೆ ಎಂದು ಹೇಳಿದ್ದ ಅಂಬೇಡ್ಕರ್ ಮಾತನ್ನು ಮರೆಮಾಚಿ “ಅಂಬೇಡ್ಕರ್ ತಮ್ಮ ಜೀವನದ ಅಂತಿಮ ಘಟ್ಟದಲ್ಲಿ ಮಾರ್ಕ್ಸ್ವಾದ ಮತ್ತು ಬೌದ್ಧಧರ್ಮವನ್ನು ಸಮತೋಲನ ಮಾಡಲು ಪ್ರಯತ್ನಿಸಿದರು” (ವಿ.ಲಕ್ಷ್ಮಿನಾರಾಯಣ : ಡಾ.ಅಂಬೇಡ್ಕರ್ ಮತ್ತು ಸಮಕಾಲೀನ ದಲಿತರು, ಪುಟ: 320)ಎಂದು ವ್ಯವಸ್ಥಿತವಾಗಿ ಪ್ರಚಾರ ಮಾಡುತ್ತಾ ಬರಲಾಗಿದೆ. ಅಂಬೇಡ್ಕರ್ ತನ್ನ ‘ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್’ ಪ್ರಬಂಧದಲ್ಲಿ “ ಬುದ್ಧ ಏನನ್ನು ಪ್ರತಿನಿಧಿಸಿದ ಎಂಬುದನ್ನು ಅರ್ಥಮಾಡಿಕೊಂಡರೆ ಅವರು(ಮಾರ್ಕ್ಸ್ವಾದಿಗಳು)ತಮ್ಮ ಧೋರಣೆ ಬದಲಾಯಿಸಿಕೊಳ್ಳುವುದರಲ್ಲಿ ನನಗೆ ಅನುಮಾನವಿಲ್ಲ” ಎನ್ನುತ್ತಾರೆ.(ಅಂಬೇಡ್ಕರ್ ಸಮಗ್ರ ಸಂ.3,ಪುಟ: 463) ಸತ್ಯ ಹೀಗಿದ್ದೂ ಸಮತೋಲನದ ಮಾತು ಹುಟ್ಟುವುದು ಮಾರ್ಕ್ಸ್ವಾದದ ಶ್ರೇಷ್ಠತೆಯ ಅಮಲಿನಲ್ಲಿ. ಅಂಬೇಡ್ಕರ್ ಪುನರ್ ವ್ಯಾಖ್ಯಾನ ಮಾಡುವ ಆನಂದ ತೇಲ್‍ತುಂಬ್ಡೆಯಂಥ ವಿದ್ವಾಂಸರು ಮಾರ್ಕ್ಸ್ ಎಂಬ ಕೇಂದ್ರ ಅಚ್ಚೊಂದನ್ನು ಸಿದ್ಧಮಾಡಿಟ್ಟುಕೊಂಡು ಅಂಬೇಡ್ಕರರನ್ನು ಅದರ ಸುತ್ತ ಅದೇ ಅಚ್ಚಿಗೆ ಎರಕ ಹೊಯ್ಯುವ ಕೆಲಸವನ್ನು ಮಾಡುತ್ತಾರೆ. ಹೀಗಾಗಿ ಅವರು ಮಾರ್ಕ್ಸ್ನನ್ನು ಒಬ್ಬ ದೃಷ್ಟಾರನನ್ನಾಗಿ ಕಾಣುತ್ತಾ, ಬಾಬಾಸಾಹೇಬರು ಒಬ್ಬ ಮಹಾನಿರ್ಮಾಪಕ ಎನ್ನುವ ಮೂಲಕ ಅಂಬೇಡ್ಕರ್‍ನ್ನು ಮಾರ್ಕ್ಸ್ನ ಒಳಗೆ ಎಳೆದು ತಂದು ಜೋಡಿಸುತ್ತಾರೆ.
“ಬಾಬಾಸಾಹೇಬರಿಗೆ ಏನು ಮಾಡಲು ಸಾಧ್ಯವಾಯಿತೋ ಅಷ್ಟರಿಂದಲೇ ಅವರ ಆದರ್ಶ ರಾಜ್ಯದ ಪರಿಕಲ್ಪನೆಯನ್ನು ಕಟ್ಟಿಕೊಡಲು ಪ್ರಯತ್ನಿಸುವುದು ಅಪಾಯಕಾರಿ. ಯಾಕೆಂದರೆ ಮುಂದಿನ ಜನಾಂಗ ತಮ್ಮ ಪರಿಸರ ಪರಿಸ್ಥಿತಿಗಳಿಗೆ ಅನುಗುಣವಾಗಿ ಅದನ್ನು ತಾನೇ ರೂಪಿಸಿಕೊಳ್ಳುವುದಕ್ಕೆ ಅವರು ಸ್ವಾತಂತ್ರ್ಯ ಕಲ್ಪಿಸಿಕೊಟ್ಟಿದ್ದಾರೆ. ತಮಗೆ ಬೇಕಾದುದನ್ನು ರೂಪಿಸಿಕೊಳ್ಳುವುದನ್ನು ಅವರ ಮುಂದಿನ ಪೀಳಿಗೆಗೆ ಬಿಟ್ಟು ಬಿಟ್ಟಿದ್ದಾರೆ. ಆದರೆ ತಾರ್ಕಿಕವಾಗಿ ನೋಡಿದಾಗ, ಬಾಬಾ ಸಾಹೇಬರ ದೃಷ್ಟಿ-ಧೋರಣೆಗಳು , ಅವರ ಕನಸಿನ ಸಮಾಜ ಇತ್ಯಾದಿಗಳು ಮಾರ್ಕ್ಸ್ನ ಪರಿಕಲ್ಪನೆಯ ಕಮ್ಯುನಿಸ್ಟ್ ವ್ಯವಸ್ಥೆಯಲ್ಲಿಯೇ ನಿಜಗೊಳ್ಳಬಹುದು. ಯಾಕೆಂದರೆ ಅಲ್ಲಿ ಮಾತ್ರ ಎಲ್ಲ ಅಲ್ಲದಿದ್ದರೂ ಹೆಚ್ಚಿನ ವೈರುಧ್ಯಗಳು, ಮಾನವ ಸಮಾಜದ ದ್ವಂದ್ವಗಳು ಪರಿಹಾರ ಕಂಡಿರುತ್ತದೆ” (ಡಾ.ಅಂಬೇಡ್ಕರ್ ಮತ್ತು ಸಮಕಾಲೀನ ದಲಿತರು, ಪುಟ: 375) ಎನ್ನುವ ಮೂಲಕ ಅಂಬೇಡ್ಕರ್ ಕಂಡ ಸಮಾನತೆಯ, ಸಹೋದರತೆಯ, ಭ್ರಾತೃತ್ವದ ಸಮಾಜ ನಿರ್ಮಾಣದ ಆಶಯ ನನಸಾಗಿಸಲು ಅಂಬೇಡ್ಕರ್ ವಿಚಾರದ ಮಾರ್ಗಕ್ಕಿಂತ ಕಮ್ಯುನಿಸ್ಟ್ ಮಾರ್ಗದಲ್ಲಿ ಸಾದ್ಯವೆನ್ನುತ್ತಾ, ಕಮ್ಯುನಿಸ್ಟ್ ಎಂಬ ಕಾಡಿನ ಬೆಂಕಿಯಲ್ಲಿ ಅಂಬೇಡ್ಕರನ್ನು ಸುಟ್ಟು ಹಾಕುವ ಪ್ರಯತ್ನ ಮಾಡುತ್ತಾರೆ. ದಲಿತರ ಕೈಗೆ ಅಧಿಕಾರವನ್ನು ಕೊಡಬೇಕು ಎಂದು ಹೇಳುವ ವಾದಗಳೆಲ್ಲಾ ಹೋಗಿ ನೆಲೆ ನಿಲ್ಲುವುದು ಕಾರ್ಲ್ ಮಾರ್ಕ್ಸ್ನ ‘ ಸ್ಟೇಟ್ ವೀದರ್ಸ್ ಅವೇ’ (ರಾಜ್ಯ ನಶಿಸುತ್ತದೆ) ಎಂಬಲ್ಲಿಯೇ ಹೊರತು ಅಂಬೇಡ್ಕರರ ಹೃದಯ ಪರಿವರ್ತನೆಯ ಭ್ರಾತೃತ್ವದ ಬಗೆಯಲ್ಲಲ್ಲಾ ಅನ್ನುವುದೇ ಆಶ್ಚರ್ಯ.
ಅಂಬೇಡ್ಕರ್ ಅವರಿಗೆ ಮಾರ್ಕ್ಸ್ವೇಶ ತೊಡಿಸುವ ಎಲ್ಲಾ ಪ್ರಯತ್ನಗಳ ಬಗೆಗೆ ನಾವು ಅಂಬೇಡ್ಕರ್‍ವಾದಿಗಳು , ದಲಿತ ಚಳವಳಿಗಾರರು ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಆಗುವ ಅನಾಹುತಕ್ಕೆ ನಾವೇ ಹೊಣೆಯಾಗುತ್ತೇವೆ. ಅಂಬೇಡ್ಕರ್ ಅವರ ನೈಜ ವಿಚಾರಗಳನ್ನು ಮುನ್ನೆಲೆಗೆ ತರಲು ಇನ್ನಷ್ಟು ಕ್ರಿಯಾಶೀಲರಾಗಬೇಕಾಗಿದೆ. ದಶಕಗಳಿಂದ ಅಂಬೇಡ್ಕರ್ ಹೆಸರಿನಲ್ಲಿ ನಡೆಸಿಕೊಂಡು ಬಂದ ಇಂಥ ಅಪಚಾರಗಳಿಗೆ ಬಿಡುಗಡೆಯನ್ನು ನೀಡಬೇಕಾಗಿದೆ. ಯುವಜನರು ಅಂಬೇಡ್ಕರ್ ಅವರ ಮೂಲ ಕೃತಿಗಳ ಅಧ್ಯಯನದ ಮೂಲಕವೇ ಅಂಬೇಡ್ಕರ್ ಅವರನ್ನು ಅರಿಯುವ ಪ್ರಯತ್ನವನ್ನು ಮಾಡಬೇಕಾಗಿದೆ.
ಚಿತ್ರಕೃಪೆ : in.com
ನೀವು ಹೀಗೆಲ್ಲ ಮೂಲ ನೋಡಿ ಸತ್ಯಾಂಶ ಬಯಲಿಗೆಳೆದು ಅಂಬೇಡ್ಕರ್ ಚಿಂತನೆಗೂ ಲಾಲ್ ಝಂಡಾಗೂ ಆಗಿಬರುವುದಿಲ್ಲ ಎಂದು ತೋರಿಸಿದರೆ…ಗಂಜಿಕೇಂದ್ರಗಳು ನಡೆಯುವುದಾದರೂ ಹೇಗೆ? ಬಸವಣ್ಣ ಹೇಳಿದ್ದು ಮಾರ್ಕ್ಸ್ ವಾದವನ್ನೇ ಎನ್ನುತ್ತ ಸೋ ಕಾಲ್ಡ್ ಜಾತ್ಯತೀತ “ವೀರಶೈವ-ಲಿಂಗಾಯತ ಪ್ರಗತಿಪರರನ್ನು” ನಂಬಿಸಿದಂತೆ ದಲಿತರನ್ನು ನಂಬಿಸುವುದು ಹೇಗೆ?
Shripad, you seem to be more concerned about denigrating Liberals than finding solutions for the problems of caste prejudice, communal hatred, and economic disparity. What has you or any of SNB’s shishyavarga offered to the policy makers that can solve these problems? Nothing except making noise in seminars and social media. SNB called Babasahebji an idiot in a seminar and never offered apology. And he calls himself Brahmajnaani! Hell with his Brahmajnana it’s Brahmanya in a new bottle. Ramjan Darga has done good job of making positive contributions to the health of our society. His blending of Vachana Jnana, Marxism and Soofy mysticism has the ability to carry all exploited sections of Indian society together. It’s integrative socio-political activism and not divisive communal propaganda of his detractors.
+೧
ಕುರ್’ಆನ್ ನ ಬಗ್ಗೆ ಪ್ರಶ್ನೆ ಕೇಳಿದರೆ ಹರಾಮ್ ಯಾವತ್ತೂ ಉತ್ತರ ಕೊಡುತ್ತಿರಲಿಲ್ಲ. ಏಕೆಂದು ಅರ್ಥವಾಗುತ್ತಿರಲಿಲ್ಲ (ಏಕೆಂದರೆ ಕುರ್ ಆನ್ ಅಂತ ಹೇಗೆ ಬರೆಯುವುದು ಅಂತಲೂ ಗೊತ್ತಿಲ್ಲದ ನಾಶೆಶೇ ಹರಾಮಿಯ ಹೆಸರಿನಲ್ಲಿ ಕಮೆಂಟು ಹಾಕುತ್ತಾನೆ). ಇಂದು ಹರಾಮಿಯ ಒಂದು ತಲೆಬುಡವಿಲ್ಲದ ಕಮೆಂಟಿಗೆ ೧+ ಅಂತ ಶಿಟ್ಟಿಯ ಪಕ್ಕವಾದ್ಯ ನೋಡಿ ಮತ್ತೊಮ್ಮೆ ಕಮೆಂಟನ್ನು ಓದಿದೆ. ಕಷ್ಟಪಟ್ಟು ಇಂಗ್ಲಿಷಿನಲ್ಲಿ ‘ಚೋರಗುರು’ವನ್ನು ಕೊಂಡಾಡಿರುವುದು ಗೊತ್ತಾಯಿತು. “ಆಹಾ! ಇದು ಶಿಟ್ಟಿಯದ್ದೇ ಮತ್ತೊಂದು ರೂಪ” ಅಂತ ತಡವಾಗಿ ಗೊತ್ತಾಯಿತು! “ಛೇ, ಇಷ್ಟುದಿನ ಇವೆರಡೂ ಪ್ರತ್ಯೇಕ ವ್ಯಕ್ತಿಗಳು ಅಂತ ತಿಳಿದುಕೊಂಡಿದ್ದೆನಲ್ಲ!” ಎಂದು ಬೇಸರವಾಯಿತು.
‘ವಿಟ’ಯನ್ ಎಂಬ ಟ್ರಾಲ್ ಕ್ರಿಮಿಯೇ, ಕೇಳು. ನೀನು ಯಾರೋ ನನಗೆ ವೈಯಕ್ತಿಕ ಪರಿಚಯವಿಲ್ಲ. ಆದರೆ ನಿಲುಮೆ ತಾಣದಲ್ಲಿ ನಿನ್ನ ಪ್ರತಿಕ್ರಿಯೆಗಳ ಮೂಲಕ ನೀನೂ ನನಗೆ ಪರಿಚಿತನಲ್ಲವೇ? ಹಾಗೆ ಬಾವ ಭಾಯಿಯ ವೈಯಕ್ತಿಕ ಪರಿಚಯ ನನಗಿಲ್ಲ. ಅವರು ವರ್ತಮಾನ ಬ್ಲಾಗಿನಲ್ಲಿ ಪ್ರಬುದ್ಧ ಕಾಮೆಂಟುಗಳ ಮೂಲಕ ನನಗೆ ಪರಿಚಯವಾದವರು ನಿಲುಮೆಯಲ್ಲೂ ಪ್ರಬುದ್ಧತೆ ಮೆರೆದಿದ್ದಾರೆ. ಇನ್ನು ದರ್ಗಾ ಸರ್ ಅವರಾದರೋ ನಮಗೆಲ್ಲರಿಗೂ ಆದರ್ಶಪ್ರಾಯರು. ಅವರು ರಾಜ್ಯೋತ್ಸವ ಪ್ರಶಸ್ತಿ, ಬಸವಶ್ರೀ ಪುರಸ್ಕಾರ ಮೊದಲಾದವುಗಳಿಂದ ಶೋಭಿತರಾದ ನಾಡಿನ ಹಿರಿಯ ಪತ್ರಕರ್ತ, ಬಸವಜ್ಞಾನಿ, ಬಂಡಾಯ ಕಾವ್ಯದ ಅಧ್ವರ್ಯು. ಅವರು ಮಾರ್ಕ್ಸ್ ಬುದ್ಧಿಯ, ಬಸವನ ಮನಸ್ಸಿನ, ಹಜರತ್ ನಿಜಾಮುದ್ದೀನ್ ಚಿಸ್ತಿ ಚಿತ್ತದ ಸಾಕ್ಷಾತ್ ಜೀವಂತ ರೂಪ! ಅವರನ್ನು ಮೆಚ್ಚಿದರೆ ‘ಬಾಲಂ’ಗೋಚಿಗಳಿಗೆ ತೊಣಚಿ ಮುಟ್ಟಿದ ಹಾಗೆ ಏಕೆ ಆಗುತ್ತದೆ?
“ತನ್ನಂತೆ ಪರರ ಬಗೆದೊಡೆ ಕೈಲಾಸವೇ ಬಿನ್ನಾಣವಕ್ಕು ಸರ್ವಜ್ಞ..” ಶಿಟ್ಟಿಯೇ, ಕ್ರಿಮಿ ಎನ್ನುವ ಟೈಟಲ್ ಅತ್ಯುತ್ತಮವಾಗಿ ಹೊಂದುವುದು ನಿನಗೆ. “ಪ್ರಬುದ್ಧ”ವಾಗಿ ಬರೆಯುವವರ ಪ್ರಬುದ್ಧತೆ ನೋಡಿ ಆಯಿತು. ಕೇಳಿದ ಪ್ರಶ್ನೆಗೆ ಉತ್ತರ ಕೊಡದೆ ಅಸಂಬದ್ಧ ಪ್ರಲಾಪ ಮಾಡುವ ನಿನ್ನಂತಹ ಮತ್ತು ನಿನ್ನ ಹಲವಾರು ರೂಪಗಳಲ್ಲಿ ಇನ್ನೊಂದಾದ ಹರಾಮಿಯಂತಹ ಜನರ ‘ಪಾಂಡಿತ್ಯ’ದ ಪರಿಚಯ ನಿಲುಮೆಯ ಓದುಗರೆಲ್ಲರಿಗೂ ಪರಿಚಯವಿದೆ. ನಿನ್ನಂತಹವರು ಮೌನವಾಗಿದ್ದರೇ ಒಳ್ಳೆಯದು, ಬಾಯಿಬಿಟ್ಟರೆ ಬಣ್ಣಗೇಡು ಎನ್ನುವ ಗಾದೆ ನಿನ್ನ ಎಲ್ಲ ರೂಪಗಳಿಗೂ ಒಪ್ಪುತ್ತದೆ.
‘ವಿಟ’ಯನ್ ಎಂಬ ಟ್ರಾಲ್ ಕ್ರಿಮಿಯೇ, ಕೇಳು. ವಚನಗಳಲ್ಲಿ ಜಾತಿ/ಕುಲ ಪದವನ್ನು ಎಣಿಸಲು ಹೊರಟಾಗ ಪ್ರಬುದ್ಧತೆ ಎಲ್ಲಿತ್ತು? ಬ್ರಹ್ಮಜ್ಞಾನಿಯು ಬಾಬಾಸಾಹೇಬರ ಬಗ್ಗೆ ಮಾತನಾಡುವಾಗ ಪ್ರಬುದ್ಧತೆ ಎಲ್ಲಿತ್ತು? ವಚನಗಳ ಮೇಲೆ ದಂಡೆತ್ತಿ ಬಂದವರಿಗೆ ದರ್ಗಾ ಸರ್ ಅವರು ಪ್ರತ್ಯುತ್ತರ ಕೊಟ್ಟಾಗ ನಡೆದ ಚರ್ಚೆಯಲ್ಲಿ ಭಾಗವಹಿಸುವಾಗ ಪ್ರಬುದ್ಧತೆ ಎಲ್ಲಿತ್ತು? ಪ್ರಬುದ್ಧತೆ ಎಂಬುದು ‘ಬಾಲಂ’ಗೋಚಿಗಳಿಗೆ ಹುಳಿ ದ್ರಾಕ್ಷಿ. ನಿಜವಾದ ಪ್ರಬುದ್ಧತೆಯು ಪ್ರಭು-ಬುದ್ಧರನ್ನು ಮಾನ್ಯ ಮಾಡುವ ಶರಣರಲ್ಲಿ ಉಂಟು ಕಾಣಯ್ಯ!