ಕೈದಾಳ..!
– ರವಿಶಂಕರ್
ಹೊಯ್ಸಳರ ಕಾಲದ ಶಿಲ್ಪ ಕಲೆಗೆ ಪ್ರಸಿದ್ದವಾದ ಬೇಲೂರು, ಹಳೇಬೀಡು ಇವುಗಳ ಹೆಸರನ್ನು ಎಲ್ಲರೂ ಕೇಳೇ ಇರುತ್ತೀರಿ! ಅದರ ಶಿಲ್ಪಿ ಜಕಣಾಚಾರಿಯ ಹೆಸರನ್ನು ಕೇಳದೇ ಇರುವವರೂ ಕಡಿಮೆ ಎಂದೇನನ್ನ ಅನಿಸಿಕೆ! ಇದರ ಹೊರತಾಗಿ ಜಕಣಾಚಾರಿಯ ಹುಟ್ಟೂರಾದ “ಕೈದಾಳ”ದ ಬಗ್ಗೆ ಕೇಳಿರುವುದು/ತಿಳಿದಿರುವುದು ಕಡಿಮೆ ಎಂದು ನನ್ನ ಬಲವಾದ ನಂಬಿಕೆ ;)! ಪ್ರೂವ್ ಮೀ ರಾಂಗ್!
“ಕ್ರೀಡಾಪುರ” ಇದು ಕೈದಾಳದ ಮೊದಲ ಹೆಸರು! ಇಲ್ಲಿ ಜನಿಸಿದ ಜಕಣಾಚಾರಿ ಶಿಲ್ಪಕಲೆಯಲ್ಲಿ ಪಳಗಿ, ಸ್ಥಳೀಯ ಮುಖ್ಯಸ್ಥನಾದ ‘ನೃಪ ಹಾಯ’ ಎಂಬುವನಲ್ಲಿ ತನ್ನ ವೃತ್ತಿಜೀವನವನ್ನು ಶುರು ಮಾಡಿದಎಂದು ತಿಳಿದು ಬಂದಿದೆ! ವೃತ್ತಿ ಜೀವನದ ಮಹತ್ವಾಕಾಂಕ್ಷೆಯಿಂದ ಮದುವೆಯ ನಂತರ ಮನೆ ಬಿಟ್ಟ ಯುವಕನಾದ ಜಕಣಾಚಾರಿ, ನಾಡಿನ ಉದ್ದಗಲಕ್ಕೂ ತಿರುಗಿ ತನ್ನ ಅಸ್ತಿತ್ವ ಹಾಗೂ ಖ್ಯಾತಿಯನ್ನು ಗಳಿಸಿದ್ದು ಹೊಯ್ಸಳರ ನಾಡಿನಲ್ಲಿ. ಇದರ ಸಾಕ್ಷಿಗಳೇ ಬೇಲೂರು ಹಾಗೂ ಹಳೇಬೀಡಿನ ದೇವಾಲಯಗಳು!
ಶಿಲ್ಪ ಕಲೆಯನ್ನೇ ತನ್ನ ಉಸಿರಾಗಿಸಿಕೊಂಡ ಜಕಣಾಚಾರಿಗೆ ಮನೆ ಹೆಂಡತಿ ಎಲ್ಲಿಂದ ಜ್ಞಾಪಕ ಬರಬೇಕು ಹೇಳಿ! ಇತ್ತ ಕ್ರೀಡಾಪುರದಲ್ಲಿ ಜಕಣಾಚಾರಿಯ ಮಗ ಡಂಕಣಾಚಾರಿ ದೊಡ್ಡವನಾಗಿ, ಅವನೂ ತನ್ನತಂದೆಯಂತೆ ಶಿಲ್ಪಕಲೆಯಲ್ಲಿ ಆಸಕ್ತಿ ಹೊಂದಿ, ಕಲಿತು, ಸ್ವತಃ ತಾನು ಒಬ್ಬ ಉತ್ತಮ ಶಿಲ್ಪಿಯಾಗಿ ಪರಿಣಿತಿ ಹೊಂದುತ್ತಾನೆ! ತನ್ನ ತಂದೆಯನ್ನು ಹುಡುಕಿಕೊಂಡು ಹೊರಟ ಡಂಕಣಾಚಾರಿ ಬಂದುತಲುಪುವುದು ಬೇಲೂರಿನ ಚೆನ್ನಕೇಶವ ದೇವಸ್ಥಾನಕ್ಕೆ!
ಯಾಸ್ ಯೂಶುಯಲ್ ಜೂನಿಯರ್ ಎಕ್ಸ್ಪರ್ಟ್ ಡಂಕಣಾಚಾರಿಯವರಿಗೆ ದೇವಸ್ಥಾನದ ಮೂಲ ವಿಗ್ರಹದಲ್ಲಿ ನ್ಯೂನತೆ ಕಂಡು ಬಂದು ಇದಕ್ಕೆ ಪೂಜಿಸುವುದು ಕಳಂಕ ಎಂದು ಅಭಿಪ್ರಾಯ ಪಡುತ್ತಾರೆ! ಇದರಿಂದ ನಮ್ಮ ಸೀನಿಯರ್ ಸ್ಟಾರ್ ಇಗೋಗೆ ಹರ್ಟ್ ಆಗಿ, ಜಕಣಾಚಾರಿಯವರು ಹಿಂದೆ ಮುಂದೆ ಯೋಚಿಸದೆ ತುರಾತುರಿಯಿಂದ, ಈ ವಿಗ್ರಹದಲ್ಲಿ ನ್ಯೂನತೆ ಇರುವುದೇ ಹೌದಾದರೆ ನಾನು ನನ್ನ ಕೈಗಳನ್ನು ಕತ್ತರಿಸಿಕೊಳ್ಳಲು ಸಿದ್ಧ ಅಂತ ಹೇಳಿಕೆ ಕೊಟ್ಟು ಬಿಡುತ್ತಾರೆ!
ಸರಿ, ಇದನ್ನ ಟೆಸ್ಟ್ ಮಾಡೋಕೆ ಇಡೀ ವಿಗ್ರಹವನ್ನು ಶ್ರೀಗಂಧದಿಂದ ಲೇಪಿಸಲಾಗುತ್ತದೆ. ವಿಗ್ರಹದ ಮೇಲೆ ಎಲ್ಲ ಕಡೆ ಒಣಗಿದ ಶ್ರೀ ಗಂಧ, ಮೂರ್ತಿಯ ಹೊಕ್ಕುಳಿನ ಬಳಿ ತೇವವಾಗಿಯೇ ಇರುವುದು ಕಂಡುಬರುತ್ತದೆ! ಅಲ್ಲಿ ಸಣ್ಣದಾಗಿ ಹುಳಿಯಿಂದ ಹೊಡೆಯಲಾಗಿ, ಅಲ್ಲಿ ಸಣ್ಣ ಕುಳಿಯಿದ್ದು ಒಳಗೆ ಮರಳು ಹಾಗೂ ನೀರಿನಿಂದ ಸುತ್ತುವರಿದ ಕಪ್ಪೆ ಕಂಡು ಬರುತ್ತದೆ! ಇದನ್ನ ನೋಡಿ ಜಕಣಾಚಾರಿಯವರು ತಮ್ಮಮಾತಿನಂತೆ ಕೈಗಳನ್ನು ಕಡಿದುಕೊಂಡು ಬಿಡುತ್ತಾರೆ! ಮುಂದೆ ಜೂನಿಯರ್-ನ ವಿಚಾರಿಸಲಾಗಿ ಡಂಕಣಾಚಾರಿಯವರು, ನಮ್ಮ ಜಕಣಾಚಾರಿಯವರ ಮಗ ಎಂದು ತಿಳಿದು ಬರುತ್ತದೆ! ಇಲ್ಲಿಗೆರಿಯೂನಿಯನ್ ಒಂದು ಸ್ಟೇಜ್ ಮುಗಿಯುತ್ತದೆ!
ಹೀಗೆ ಒಂದಾದ ತಂದೆ-ಮಗ ಹುಟ್ಟೂರಾದ ಕ್ರೀಡಾಪುರದಲ್ಲಿ ಒಂದು ದೇವಸ್ಥಾನವನ್ನು ಕಟ್ಟಲು ತೀರ್ಮಾನಿಸುತ್ತಾರೆ! ಹೀಗೆ ನಿರ್ಮಾಣ ಗೊಂಡ ದೇವಸ್ಥಾನವೇ ಈಗಿರುವ ದೇವಸ್ಥಾನ! ಈ ರೀತಿ ಭಕ್ತಿಯಿಂದನಿರ್ಮಾಣಗೊಂಡ ದೇವಸ್ಥಾನ ಮತ್ತು ಪ್ರೀತಿಗೆ ಕರಗಿ ದೇವರು ಜಕಣಾಚಾರಿಯವರಿಗೆ ಕೈಗಳನ್ನು ಪುನಃ ಕರುಣಿಸಿದ ಹಾಗೂ ಇದರಿಂದ ಕ್ರೀಡಾಪುರವಾಗಿದ್ದ ಊರು ಕೈದಾಳ ಎಂದು ಹೆಸರು ಪಡೆಯುತ್ತದೆ!
ಇದು ಫ್ಲಾಶ್ ಬ್ಯಾಕ್…!
ದೇವಸ್ಥಾನಕ್ಕೆ ದರ್ಶನಕ್ಕೆಂದು ಬಂದ ಡಿ. ಸಿ. ಯವರು ಅಲ್ಲಿನ ಸುತ್ತಲಿನ ಜಮೀನಿಗೆ ತಂತಿ ಬೇಲಿ ಹಾಕಿದ್ದನ್ನು ಕಂಡು ವಿಚಾರಿಸಲಾಗಿ, ಈ ಜಮೀನನ್ನು ~ ಮಲ್ಲಿಕಾರ್ಜುನ ಸ್ವಾಮಿ ಎನ್ನುವ ಮನುಷ್ಯ ತನ್ನದುಎಂದು ಕ್ಲೇಮ್ ಮಾಡುತ್ತಿರುವ ವಿಷಯವನ್ನು ಕಂಡು ಕೊಳ್ಳುತ್ತಾರೆ! ವಿಷಯದ ಆಳಕ್ಕಿಳಿದ ಅವರು ಇದು ಫೇಕ್ ಕ್ಲೇಮ್ ಎಂದು ಕಂಡು ಕೊಂಡು ಅವನಿಗೆ ವಾರ್ನಿಂಗ್ ಮಾಡಿ (ವಿಷಯ ಕೋರ್ಟ್ ನಲ್ಲಿತೀರ್ಮಾನ ಆಯ್ತು ಅಂತ alternate ಥಿಯರಿ ಇದೆ ಬಿಡಿ), ಸದರಿ ಜಮೀನು ಸರಕಾರದ್ದು ಎಂದು ತಿಳಿಸಿ ಸ್ವಾಧೀನ ಪಡಿಸಿಕೊಳ್ಳುತ್ತಾರೆ!
ಇದರಿಂದ ತಲೆ ಕೆಟ್ಟ ಮಲ್ಲಿಕಾರ್ಜುನ ಸ್ವಾಮಿ, ಒಂದು ರಾತ್ರಿ ಕುಡಿದು ಟೈಟ್ ಆಗಿ ಒಂದು ಹಾರೆಯಿಂದ ಮೂಲ ವಿಗ್ರಹ ವನ್ನು ಪೀಸ್ ಪೀಸ್ ಮಾಡಿ (೨೨ ಪೀಸ್ ಮಾಡಿದ್ದ ಅಂತ ನಮಗೆ ತಿಳಿದಿದ್ದು) ಪುಣ್ಯಕ್ಕೆ ಆ ಪೀಸ್ ಗಳನ್ನ ಅಲ್ಲೇ ಬಿಸಾಕಿ ಹೋಗುತ್ತಾನೆ! ಮುಜರಾಯಿ ಇಲಾಖೆಗೆ ಒಳಪಡುವ ಈ ದೇವಸ್ಥಾನದ/ವಿಗ್ರಹದ ಜೀರ್ಣೋದ್ಧಾರದ ಕಾರ್ಯ ಎಲ್ಲೆಲ್ಲಿಂದಲೋ ಕೊನೆಗೆ ವೀರೇಂದ್ರ ಹೆಗ್ಗಡೆಯವರ ಕಿವಿಗೆ ಬೀಳುತ್ತದೆ! ಇವರ ಬಳಿ ಇರುವ ಹರಿರಾಮ ಶೆಟ್ಟರ ಮುಖಾಂತರ ವಿಗ್ರಹದ ಸಂಪೂರ್ಣ ರಿಪೇರಿ ಕೆಲಸದ ನಿರ್ವಹಣೆ ಕೊನೆಗೆ ಬರುವುದು ಜಯಣ್ಣಾಚಾರ್ಯ-ರಿಗೆ! ಸ್ವತಃ ಕೆ ಇ ಬಿ ಯಲ್ಲಿ ಕೆಲಸಕ್ಕಿದ್ದಅವರು ಸ್ವಯಂ ಪ್ರೇರಣೆಯಿಂದ ಇದರ ಉಸ್ತುವಾರಿಯನ್ನು ಒಪ್ಪಿಕೊಂಡು, ಬಾಲಕೃಷ್ಣ ಎಂಬ ಬೆಂಗಳೂರಿನ ಕಂಟ್ರಾಕ್ಟರ್ ಒಬ್ಬರ ಹಣ ಕಾಸಿನ ನೆರವಿನಿಂದ ಮತ್ತು ಊರಿನ ಯುವಕರ ಹಾಗೂ ಜನರಸಹಕಾರದಿಂದ ವಿಗ್ರಹದ ರಿಪೇರಿ ಕೆಲಸವನ್ನ ಮುಗಿಸುತ್ತಾರೆ! ಇದೆಲ್ಲ ನಡೆದದ್ದು ೨೦೦೫-೨೦೦೬ ನಲ್ಲಿ ಬಹುಷಃ!
ಪಾಪ, ಇದರ ಉಸ್ತುವಾರಿ ಹೊತ್ತ ಇವರ ಪಡಿ ಪಾಟಲನ್ನು ಬರೆದರೆ ಅದೇ ಒಂದು ಕಥೆ ಆಗುತ್ತದೆ! ಮೇಲೆ ವಿಷಯಗಳೆಲ್ಲವನ್ನು ನಾನು ತಿಳಿದುಕೊಂಡಿದ್ದು ಅರ್ಚಕರಾದ ಪಾರ್ಥಸಾರಥಿ(೯೭೪೧೩೨೮೦೮೮) ಅವರಿಂದ ಮತ್ತು ಅವರು ಕೊಟ್ಟ ಜಯಣ್ಣಾಚಾರ್ಯರ ನಂಬರ್-ಗೆ (೯೩೪೩೫೫೩೪೯೪) ಫೋನ್ ಮಾಡಿ ಸ್ವತಃ ಮಾತನಾಡಿ ಕಂಡು ಕೊಂಡದ್ದರಿಂದ! ಇದರ ಕುರಿತ ಫೋಟೋಗಳುವಿಡಿಯೋ ಗಳು ಅವರ ಹತ್ತಿರ ಇದ್ದು, ಟೆಕ್ನಾಲಾಜಿಯಲ್ಲಿ ಸ್ವಲ್ಪ ಹಿಂದೆ ಹಾಗೂ ವ್ಹಾಟ್ಸಪ್ಪ್ ನಲ್ಲಿ ಶೇರ್ ಮಾಡಲು ಆಗದೆ ಇರುವ ಅಸಹಾಯಕತೆಯನ್ನು ತಿಳಿಸಿದರು. ನಾನಂತೂ ನೆಕ್ಸ್ಟ್ ಚಿಕ್ಕಮಗಳೂರಿಗೆ ಹೋದಾಗ ರಿಟೈರ್ ಆದ ಇವರನ್ನು ಭೇಟಿ ಮಾಡಿ ಇನ್ನೊಂದಷ್ಟು ಮಾಹಿತಿ ತಿಳಿದುಕೊಳ್ಳಲು ಡಿಸೈಡ್ ಮಾಡಿದ್ದೀನಿ!
ಇನ್ನೊಂದು ವಿಷಯ ಏನೆಂದರೆ ಪ್ರಸ್ತುತ ಸಿದ್ದಗಂಗಾ ಸಂಸ್ಥೆಯಲ್ಲಿ ಪ್ರಾಂಶುಪಾಲರಾಗಿರುವ Yogeeswarappa ಅವರು ಬರೆದಿರುವ ‘ಕಲ್ಪಶೋಧ’ ಎನ್ನುವ ಪುಸ್ತಕದಲ್ಲಿ (ತುಮಕೂರು ಜಿಲ್ಲೆಯ ಸಂಶೋಧನಾಲೇಖನಗಳ ಸಂಕಲನ) ಕೈದಾಳದ ಬಗ್ಗೆ ವಿವರಗಳಿವೆಯಂತೆ! ಆದರೆ ಅವರು ಜೀರ್ಣೋದ್ದಾರದ ಕಾರ್ಯದ ಬಗ್ಗೆ ಬರೆದಿರುವುದು ಎರಡೇ ಸಾಲು ಎಂದು ಜಯಣ್ಣ ವಿಷಾದಿಸಿದರು! Yogeeswarappa ಅವರresume ಆನ್ಲೈನ್ ನಲ್ಲಿ ಸಿಕ್ಕು/ಫೋನ್ ಮಾಡಿ ತಿಳಿದಿದ್ದೇನೆಂದರೆ ಅವರ ಹತ್ತಿರ ಲೇಖನದ ಸಾಫ್ಟ್ ಕಾಪಿ ಇಲ್ಲಎಂದು! ತುಮಕೂರಿಗೆ ಬಂದರೆ ೨೮ ಪೇಜಿನ ಡೀಟೇಲ್ಸ್ ಕೊಡುವುದಾಗಿ ಪ್ರಾಮಿಸ್ ಮಾಡಿದರುಮತ್ತು ಸಪ್ನಾ ದಲ್ಲಿ ಪುಸ್ತಕ (ISBN:978-93-81441-26-8) ಸಿಕ್ಕರೂ ಸಿಗಬಹುದು ಅಂದರು! ನಮ್ಮ Ra-Jo ಸರ್ ಹೇಳಿದ ಹಾಗೆ ಅರ್ಜೆಂಟ್ ಆಗಿ ಬರೆದು ಮುಗಿಸುವ ಹಪಾಹಪಿಯಲ್ಲಿ ಇನ್ನಷ್ಟು ವಿಷಯಗಳನ್ನುತಿಳಿದು ಕೊಂಡು ಬರೆಯುವ ಅವಕಾಶವನ್ನು ಕೈ ಚೆಲ್ಲುತ್ತಿದ್ದೇನೆ!
ಹೊರಗಿನಿಂದ ಬಹಳ ಸಾಮಾನ್ಯವಾಗಿ ಕಾಣುವ ಈ ದೇವಸ್ಥಾನದ ಚೆನ್ನಕೇಶವ ಸ್ವಾಮಿ ಮಾತ್ರ ಅದ್ಭುತವಾಗಿದೆ! ಗರ್ಭಗುಡಿಯಲ್ಲಿರುವ ಚೆನ್ನಿಗರಾಯನ ವಿಗ್ರಹ ಬೇಲೂರು ಚೆನ್ನಿಗರಾಯನ ಪ್ರತಿರೂಪ. 5ಅಡಿ 4 ಇಂಚು ಎತ್ತರವಿರುವ ಈ ಮೂರ್ತಿಯನ್ನು ಎರಡಡಿ ಪೀಠದ ಮೇಲೆ ಪ್ರತಿಷ್ಠಾಪಿಸಲಾಗಿದೆ. ವಿಗ್ರಹದ ಪ್ರಭಾವಳಿಯಲ್ಲಿ ದಶಾವತಾರದ ಕೆತ್ತನೆಗಳಿವೆ. ಎರಡಡಿ ಪೀಠದ ಮೇಲೆ ಇರುವ ಚೆನ್ನಕೇಶವನಅಕ್ಕ ಪಕ್ಕ ಬ್ರಹ್ಮ ಹಾಗೂ ಈಶ್ವರರಿದ್ದು, ಈ ರೀತಿಯ ಕೆತ್ತನೆ ಅಪರೂಪವಾದದ್ದು! ದೇವಸ್ಥಾನದ ಇನ್ನೊಂದು ವೈಶಿಷ್ಟ್ಯ ಏನೆಂದರೆ ವಿಗ್ರಹ ಇಲ್ಲಿಯೇ ಪಾಶ್ಚಿಮಾಭಿಮುಖ ಆಗಿದ್ದು, ಇದು ಪರಕೀಯರದಾಳಿಯನ್ನು ತಡೆಯಲು ಉದ್ದೇಶಿದ್ದು ಎನ್ನಲಾಗಿದೆ!
ಪಕ್ಕದಲ್ಲೇ ಗಂಗಾಧರೇಶ್ವರ ದೇವಸ್ಥಾನವಿದ್ದು, ಬರೀ ಸೋಮವಾರ ಮಾತ್ರ ಅರ್ಚಕರು ಬಾಗಿಲು ತೆಗೆಯುವ ಕಾರಣ, ಹೊರಗಿನ ಪ್ರಾಂಗಣದ ದರ್ಶನವಷ್ಟೇ ಸಾಧ್ಯವಾಯಿತು! ತುಮಕೂರಿನಿಂದ ಕುಣಿಗಲ್ಮಾರ್ಗವಾಗಿ ಕೇವಲ ೮-೯ ಕಿ ಮೀ ದೂರದಲ್ಲಿರುವ ಈ ಸ್ಥಳ ನಿಜವಾಗಿಯೂ ಒಂದು ಮಸ್ಟ್ ವಿಸಿಟ್ ಪ್ಲೇಸ್! ಬೆಂಗಳೂರಿನಿಂದ ಹೋಗಿ ಬರಲು ಅರ್ಧ ದಿನ ಸಾಕು! ಆಸಕ್ತಿಯುಳ್ಳವರು ಟ್ರೈ ಮಾಡಿ – ಯುವಿಲ್ ನಾಟ್ ಬಿ ಡಿಸ್-ಅಪ್ಪೊಇಂಟೆಡ್! ಕೆಲ ಚಿತ್ರಗಳನ್ನು ಇಲ್ಲಿ ಹಾಕಿರುವೆ! ಎಂಜಾಯ್ ಮಾಡಿ!
“…ಅಲ್ಲಿ ಸಣ್ಣದಾಗಿ ಹುಳಿಯಿಂದ ಹೊಡೆಯಲಾಗಿ…” ಇದು ಹುಳಿ ಅಲ್ಲ, ಉಳಿ.
ಧನ್ಯವಾದ.