ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 11, 2017

ಆಳ್ವರ ವಿರುದ್ಧ ವ್ಯವಸ್ಥಿತ ಪಿತೂರಿ ನಡೆಯುತ್ತಿದೆಯೇ!?

‍ನಿಲುಮೆ ಮೂಲಕ

– ಹರೀಶ್ಚಂದ್ರ ಶೆಟ್ಟಿ

ಕಾವ್ಯಶ್ರೀ ಎಂಬ ಹೆಣ್ಣುಮಗಳ ಆತ್ಮಹತ್ಯೆಯ ಪ್ರಕರಣದಲ್ಲಿ ಮೋಹನ ಆಳ್ವರನ್ನು ಸಿಕ್ಕಿ ಹಾಕಿಸಲು ಪಟ್ಟಭದ್ರ ಹಿತಾಸಕ್ತಿಗಳು ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿವೆ.ಜನರ ಭಾವನೆಗಳನ್ನು “ಎನ್ಕ್ಯಾಶ್” ಮಾಡಿಕೊಳ್ಳುವುದರಲ್ಲಿ ಪರಿಣಿತರಾದ ವ್ಯಕ್ತಿಗಳು ಪರದೆಯ ಹಿಂದೆ ನಿಂತುಕೊಂಡು ಪ್ರತಿಭಟನೆಯ ಮೂಲಕ” ಮೈಲೇಜ್ ” ಗಿಟ್ಟಿಸಿಕೊಳ್ಳುತ್ತಿದ್ದಾರೆ.ಮಣಿಪಾಲದಲ್ಲಿ ವಿದ್ಯಾರ್ಥಿನಿಯೊಬ್ಬಳನ್ನು ಅಪಹರಿಸಿ ಅತ್ಯಾಚಾರ ಮಾಡಿದ ಪ್ರಕರಣವೊಂದು ಸುಮಾರು ಸಮಯದ ಹಿಂದೆ ಸಾಕಷ್ಟು ಸುದ್ದಿ ಎಬ್ಬಿಸಿತ್ತು.ಮೊನ್ನೆ ಮೊನ್ನೆ ಮಂಗಳೂರಿನ ಪ್ರಸಿದ್ಧ ವೈದ್ಯಕೀಯ ಕಾಲೇಜ್ ನ ವೈದ್ಯರೊಬ್ಬರನ್ನು ಅಪಹರಿಸಿ ಕೊಲ್ಲಲು ಪ್ರಯತ್ನಿಸಲಾಯಿತು..ಇನ್ನೊಂದು ವೈದ್ಯಕೀಯ ಕಾಲೇಜ್ ನ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ.. ಒಂದೆರಡು ತಿಂಗಳ ಹಿಂದೆ,ಮತ್ತೊಂದು ಪ್ರತಿಷ್ಠಿತ ಕಾಲೇಜ್ ನ ವಿದ್ಯಾರ್ಥಿನಿಯೂ ಆತ್ಮಹತ್ಯೆ ಮಾಡಿಕೊಂಡಳು..ಆವಾಗಿನ ಎಲ್ಲಾ ಪ್ರಕರಣಗಳಲ್ಲಿ ಸಂಬಂಧಪಟ್ಟ ಶಿಕ್ಷಣ ಸಂಸ್ಥೆಗಳ ಒಡೆಯರುಗಳ ಬಗ್ಗೆ ತಪ್ಪಿಯೂ ಪ್ರಸ್ತಾಪಗಳು ಬರಲಿಲ್ಲ…ಯಾವ ಮಾಧ್ಯಮಗಳೂ ಅಂತಹ ಶಿಕ್ಷಣ ಸಂಸ್ಥೆಗಳ ಮಾಲೀಕರ ವಿಡಿಯೋ ಕಾನ್ಫರೆನ್ಸ್ ಮಾಡಿಸಿ,ವಕೀಲರಂತೆ ಲೈವ್ ಕ್ರಾಸ್ ಎಕ್ಸಾಮಿನೇಷನ್ ಮಾಡಲಿಲ್ಲ..

ಇಂತಹ ಘಟನೆ ನಡೆಯಲು ನಿಮ್ಮಂತ ಶಿಕ್ಷಣ ಸಂಸ್ಥೆಯ ಮಾಲೀಕರ ಪರೋಕ್ಷ ಕುಮ್ಮಕ್ಕು ಎಂದು ಯಾವ ಅಬ್ಬೆ ಪಾರಿಯೂ ಹೇಳುವ ಧೈರ್ಯ ತೋರಿಸಲಿಲ್ಲ ..ಯಾವುದೇ ಲೆಟರ್ ಹೆಡ್ ಸಂಘಟನೆಗಳ ನಾಯಕರುಗಳು ಜನರನ್ನು ಒಟ್ಟುಮಾಡಿಸಿಕೊಂಡು ಬಂದು ಪ್ರತಿಭಟನೆ ಮಾಡಲಿಲ್ಲ..ಆದರೆ ಆಳ್ವರ ಬಗ್ಗೆ ಎಲ್ಲವೂ ಕ್ರಮಬದ್ಧವಾಗಿ ನೆಡೆಯುತ್ತಿದೆ..ಈಗಿನ ಎಲ್ಲಾ ಪ್ರತಿಭಟನೆಗಳ ನೇತೃತ್ವ ವಹಿಸಿಕೊಂಡಿರುವ ವ್ಯಕ್ತಿಗಳು ಪ್ರತಿಭಟನೆಯ ನಾಯಕತ್ವ ವಹಿಸಿಕೊಳ್ಳುವ ಮೊದಲು ತಾವುಗಳು ಈ ತನಕ ಮಾಡಿರುವ ಒಂದಾದರೂ ಜನಪರ ಕೆಲಸಗಳನ್ನು ಜನರ ಮುಂದಿರಿಸಿಕೊಂಡು ಪ್ರತಿಭಟಿಸಲಿ….

ಸುಮಾರು ಮೂರು ನಾಲ್ಕು ವರ್ಷಗಳ ಹಿಂದೆ ಮೂಡುಬಿದರೆಯಲ್ಲಿ ನಡೆಯುವ “ಆಳ್ವಾಸ್ ನುಡಿ ಸಿರಿ ” ಮತ್ತು “ಆಳ್ವಾಸ್ ವಿರಾಸತ್ ” ಎಂಬ ಅಪೂರ್ವ ಕಾರ್ಯಕ್ರಮಗಳ ಬಗ್ಗೆ ಎಡಪಂಥೀಯ ಬುದ್ಧಿ ಜೀವಿಗಳು ಧ್ವನಿ ಎಬ್ಬಿಸಿ ಸಾಕಷ್ಟು ರಾದ್ಧಾಂತ ಮಾಡಿದ್ದರು..ಆವಾಗ ಸಾಮಾಜಿಕ ಜಾಲತಾಣಗಳಾದ ವಾಟ್ಸ್ ಆಪ್ ಮತ್ತು ಫೇಸ್ ಬುಕ್ ಗಳಲ್ಲಿ ಈಗಿನಂತೆ ಜನ ಸಂದಣಿ ಇರಲಿಲ್ಲ.. .ಹಾಗಾಗಿ ಅಂದು ಅವರಿಗೆ ತಮ್ಮ “ಹಿಡನ್ ಅಜೆಂಡಾ”ಗಳನ್ನು ಜನ ಸಾಮಾನ್ಯರ ನಡುವೆ ಹರಿಯಲು ಬಿಟ್ಟು ರಾಷ್ಟ್ರೀಯವಾದಿಗಳನ್ನು ಕಟ್ಟಿ ಹಾಕಲು ಆಗಿರಲಿಲ್ಲ..ಆದುದರಿಂದ ಈ ಬಾರಿ ಅವರೆಲ್ಲ ವ್ಯವಸ್ಥಿತವಾಗಿ ತಮಗಿರುವ ರಾಜಕೀಯ ವಶೀಲಿ ಬಾಜಿಗಳನ್ನು ಉಪಯೋಗಿಸಿಕೊಂಡು ಕೆಲಸ ಮಾಡುತ್ತಿದ್ದಾರೆ..ಆಗ ಆಳ್ವರ ಪರವಾಗಿ ನಾನೊಂದು ಲೇಖನ ಬರೆದಿದ್ದೆ..ಅದನ್ನು ಮತ್ತೊಮ್ಮೆ ನಿಮ್ಮ ನಡುವೆ ಹಂಚಿಕೊಂಡಿದ್ದೇನೆ. ಸ್ವಂತ ಬುದ್ದಿ ಮತ್ತು ವಿವೇಚನೆ ಇರುವವರಿಗೆ,ಆಳ್ವರ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ಬಗ್ಗೆ ಸ್ವಲ್ಪವಾದರೂ ಅರ್ಥವಾದೀತು. ಸಾಧ್ಯವಾದರೆ ಒಮ್ಮೆ ಓದಿಕೊಳ್ಳಿ…
………………………………………………………………………………….

ಮೋಹನ ಆಳ್ವರ ನಾಡು ನುಡಿಯ ಕಂಪಿನ ಕನ್ನಡ ನುಡಿಸಿರಿ ಅದ್ದೂರಿಯ ಮುಕ್ತಾಯ ಕಂಡಿದೆ…ಒಬ್ಬ ವ್ಯಕ್ತಿ ತನ್ನ ಇಚ್ಛಾಶಕ್ತಿಯಿಂದ ಇಂತಹದೊಂದು ಕಾರ್ಯ ನಡೆಸುವುದು ಸಾಧ್ಯವೇ ಎನ್ನುವ ಸಾರ್ವಜನಿಕರ ಆಶ್ಚರ್ಯದ ನಡುವೆ ಕೆಲವು ಹುಳುಕಿನ ಮನಸ್ಸುಗಳು ತಮ್ಮ ವಿತಂಡ ವಾದವನ್ನು ಆಳ್ವರತ್ತ ಹರಿಸಿ ಬಿಟ್ಟಿವೆ….ಕಳೆದ ವರ್ಷ ಮೋಹನ ಆಳ್ವರಿಂದ ಸಮ್ಮಾನ ಮಾಡಿಸಿಕೊಂಡು,ಶಾಲು ಹೊದಿಸಿಕೊಂಡು ಒಟ್ಟಿಗೆ ನೋಟಿನ ದಪ್ಪ ಕಟ್ಟನ್ನು ಕಿಸೆಗೇರಿಸಿಕೊಂಡು ಹೋದ ಸಾರಸ್ವತ ಲೋಕದ ಮಹಾಶಯರೊಬ್ಬರು ನಂತರ ತಮ್ಮ ಅಸಲಿ ಬುದ್ಧಿಯ ” ಜಾತಿ” ವಾದವನ್ನು ಸಾಬೀತು ಪಡಿಸಿದ್ದರು… ಅಂತಹ ಸಾಹಿತಿಗೆ,” ಓತಿಕ್ಯಾತನಿಗೆ ಬೇಲಿ ಸಾಕ್ಷಿ ” ಎನ್ನುವಂತೆ,ಕಳೆದ ಹಲವಾರು ವರ್ಷಗಳಿಂದ ನುಡಿಸಿರಿಯ ಹೆಸರಿನಲ್ಲಿ ಕುತ್ತಿಗೆ ಮಟ್ಟ ತಿಂದು ತೇಗಿದ ಬುದ್ಧಿಜೀವಿ ಪೀಡೆಗಳು ಸಹಕಾರ ವಾಣಿಯನ್ನು ಒದಗಿಸಿದ್ದವು….ಈ ಸಲವೂ ಇವುಗಳಿಗೆ ಏನೋ ಒಡಕು ಕಂಡಿದೆಯಂತೆ….ಆಳ್ವರ ಕನ್ನಡ ಮನಸ್ಸು ಪ್ರೀಯವಾಗುವ ಬದಲು ,ಅವುಗಳಿಗೆ ಎಲ್ಲೋ ಬಿದ್ದಿದ್ದ ಕೊಳಚೆ ಆಪ್ಯಾಯಮಾನವಾಗಿ ಕಂಡಿದೆ….ಜನಪದ ನೃತ್ಯಗಳೂ ಜಾತಿ ಪದ್ಧತಿಯ ಓಣಿಯಲ್ಲಿಯೇ ಸಾಗ ಬೇಕೆಂಬ ಇವುಗಳು ಮಾತ್ರ ಜಾತಿ ಪದ್ದತಿ ನಿವಾರಣೆಗೆ ತಾವೇನು ಘನ ಕಾರ್ಯ ಮಾಡಿದ್ದೇವೆ ಎಂದು ಹೇಳುವುದಿಲ್ಲ…ಇವರುಗಳ ಕೆಲಸ ಏನಿದ್ದರೂ ಬರವಣಿಗೆ ಮೂಲಕ ಘರ್ಷಣೆಯ ಕಿಡಿ ಹೊತ್ತಿಸುವುದು ಮತ್ತು ಆ ಮೂಲಕ ಉದರ ಪೋಷಣೆ ಮಾಡಿಕೊಳ್ಳುವುದು….

ಕಳೆದ 11 ವರ್ಷಗಳಿಂದ ರಾಜ್ಯ ಸರಕಾರ ಮಾಡಲು ಸಾಧ್ಯವಿಲ್ಲದ ಕೆಲಸವೊಂದನ್ನು ಕೇವಲ ಆಳ್ವರೊಬ್ಬರೇ ಮಾಡಿ ತೋರಿಸುತ್ತಿದ್ದಾರೆ.. ಪ್ರತಿ ವರ್ಷವೂ ವಿಶ್ವ ಕನ್ನಡ ಸಮ್ಮೇಳನ ನಡೆಸಿ, ಅದನ್ನು ಅವ್ಯವಸ್ಥಿತವಾಗಿ ಸಂಘಟಿಸಿ ಸಾರ್ವಜನಿಕರ ಹಣ ಪೋಲು ಮಾಡುವ ಸರಕಾರಿ ಅಧಿಕಾರಿಗಳು ಒಮ್ಮೆ ಆಳ್ವರ ನುಡಿಸಿರಿಯ ಅಚ್ಚುಕಟ್ಟುತನವನ್ನು ನೋಡಿ ಕಲಿಯಬೇಕು….ಏಕ ಕಾಲಕ್ಕೆ ಐದಾರು ಕಡೆ ವೇದಿಕೆ ನಿರ್ಮಿಸಿ ನಾನಾ ರೀತಿಯ ಕಾರ್ಯಕ್ರಮಗಳು ನಡೆಯುತ್ತಿದ್ದರೂ ಎಲ್ಲಿಯೂ ಆಳ್ವರು ಕಾಣಿಸುವುದಿಲ್ಲ.

ಕಾರ್ಯಕ್ರಮ ಕ್ಲಪ್ತ ಸಮಯಕ್ಕೆ ಆರಂಭಗೊಂಡು ನಿಗದಿತ ವೇಳೆಯಲ್ಲಿ ಮುಕ್ತಾಯಗೊಳ್ಳುತ್ತದೆ.ಸಮಯದ ಶಿಸ್ತು ಪಾಲನೆಯ ವಿಚಾರದಲ್ಲಿ ಅವರು ಯಾವುದೇ ವಂಧಿ ಮಾಗಧ ದೊರೆಗಳಿಗೆ ಕಾಯುವುದಿಲ್ಲ. ಅಲ್ಲಿ ಯಾವುದೇ ಹಿಂಬಾಲಕ ವರ್ಗದ ವಶೀಲಿ ಭಾಜಿಗೆ ಅವಕಾಶ ಇಲ್ಲ. ಯಾಂತ್ರೀಕ್ರತವಾಗಿ ನಿರ್ವಹಣೆ ಮಾಡುವ ಕಾರ್ಯಕ್ರಮದಂತೆ ಎಲ್ಲವೂ ಶಿಸ್ತು ಬದ್ಧ.ಪ್ರತಿ ವರ್ಷವೂ ವೈವಿಧ್ಯಮಯ ಕಾರ್ಯಕ್ರಮ ಸಂಘಟಿಸಿದರೂ ಎಲ್ಲಿಯೂ ಸಂಸ್ಕೃತಿಯ ಅವಹೇಳನೆ ನಡೆಯುವುದಿಲ್ಲ. ಮೋಹನ ಆಳ್ವರ ನುಡಿಸಿರಿಯಲ್ಲಿ ನಡೆಯುವುದು ಕನ್ನಡ ಮನಸ್ಸಿನ ಜ್ಞಾನ ಯಜ್ಞ .. ..ದೀನ ದಲಿತ,ಶ್ರೀಮಂತ ಎಂಬ ಭೇಧ ಭಾವವನ್ನು ಭಾಷೆ ಮತ್ತು ಕಲೆಯಲ್ಲಿ ಅವೆರೆಲ್ಲೂ ತೋರಿಸಿಲ್ಲ. ಬುಡಬುಡಿಕೆಯವರು,ಸುಡುಗಾಡು ಸಿದ್ಧರು,ಮಲೆಕುಡಿಯರು,ಹಾಲಕ್ಕಿಗಳು,ಹರಿಜನ ಗಿರಿಜನ ಆದಿಯಾಗಿ ಎಲ್ಲ ವರ್ಗಗಳಲ್ಲಿರುವ ಸಾಂಸ್ಕ್ರತೀಕವಾಗಿ ಮತ್ತು ಜಾನಪದೀಯವಾಗಿ ಒಳ್ಳೆಯದೆಂದು ಕಂಡ ಎಲ್ಲವನ್ನೂ ತಮ್ಮ ನುಡಿಸಿರಿಯಲ್ಲಿ ಆಳ್ವರು ಅಳವಡಿಸಿಕೊಂಡರು.

ಅವರ ಕನ್ನಡ ಸಮ್ಮೇಳನದಲ್ಲಿ ಬಲಪಂಥೀಯರು,ಎಡಪಂಥೀಯರು,ಬಂಡಾಯ ಸಾಹಿತಿಗಳು ಮತ್ತು ಬುದ್ಧಿಜೀವಿ ಸಾರಸ್ವತರ ಆದಿಯಾಗಿ ಎಲ್ಲರೂ ಒಮ್ಮೊಮ್ಮೆ ಅಧ್ಯಕ್ಷರಾಗಿ ಮೆರೆದವರೇ. ಮೂರು ದಿನದ ಉತ್ಸವಕ್ಕೆ ಬರುವ ಅಷ್ಟೂ ಜನ ಸಾಗರಕ್ಕೆ ಹೊಟ್ಟೆ ತುಂಬಾ ಅತ್ಯುತ್ತಮವಾದ ಊಟ ಉಪಚಾರ ನೀಡಿ ಸತ್ಕರಿಸುವ ಆಳ್ವರು ಸಹಾಯಕ್ಕಾಗಿ ಯಾರಲ್ಲೂ ಕೈ ಚಾಚಿದವರಲ್ಲ.ತುಳು ಭಾಷಿಗರ ಕನ್ನಡವನ್ನು ಅವಹೇಳನಕಾರಿಯಾಗಿ ಮತ್ತು ಅಪಹಾಸ್ಯವಾಗಿ ಕಂಡ ಇನ್ನಿತರ ಕನ್ನಡಿಗರು ನಿಬ್ಬೆರಗಾಗುವ ಮಟ್ಟಿಗೆ ಕನ್ನಡ ಬೆಳೆಸಿದ ಕೀರ್ತಿ ಮೋಹನ ಆಳ್ವರದ್ದು….ಇಂದು ರಂಗ ಸಜ್ಜಿಕೆಗೆ ಮತ್ತು ಪ್ರಾದೇಶಿಕ ಸಂಸ್ಕೃತಿಯನ್ನು ಮೇಳೈಸಿಕೊಂಡ ವೇದಿಕೆ ನಿರ್ಮಾಣಕ್ಕೆ ದೇಶದಲ್ಲೇ ಒಂದು ಹೊಸ ಆಯಾಮ ನೀಡಿದ ಶ್ರೇಷ್ಟತೆಯ ಹೆಸರೂ ಇವರಿಗೆ ಸಲ್ಲಬೇಕು…

ಆಳ್ವಾ’ಸ್ ವಿರಾಸತ್ ಎಂಬ ಅವರ ಕಾರ್ಯಕ್ರಮ ಮೂಡಬಿದರೆಯಂತ ಊರಿನಲ್ಲಿ ದೇಶದ ಎಲ್ಲಾ ಅತ್ಯುತ್ತಮ ಕಲಾವಿದರನ್ನು ಕರೆಸಿ ಕಲೆಯ ರಸದೌತಣವನ್ನು ಜನತೆಗೆ ನೀಡಿದೆ…. ಇಂದು ಕರಾವಳಿ ಕಡೆಯ ಸಾಮಾನ್ಯ ಜನರು, ಕೊನ್ನುಕುಡಿ ವೈದ್ಯನಾಥನ್, ಯೇಸುದಾಸ್,ಜ಼ಾಕಿರ್ ಹುಸ್ಸೈನ್, ಅಮ್ಜದ್ ಆಲಿ ಖಾನ್, ಬಾಲ ಮುರಳಿ ಕೃಷ್ಣನ್ ,ಎಸ್ ರಮಣಿ ,ಪ್ರವೀಣ್ ಗೋಡ್ಕಿಂಡಿ ಮುಂತಾದ ಕಲಾವಿದರ ಕಾರ್ಯಕ್ರಮಗಳನ್ನು ಅಸ್ವಾದಿಸಿದ್ದರೆ ಅದು ಆಳ್ವರ ಕಲಾ ಪ್ರೇಮದ ನಿಸ್ವಾರ್ಥ ಕಾರಣದಿಂದ…

ಎಡಬಿಡಂಗಿ ಬುದ್ಧಿಜೀವಿಗಳ ಈ ರೀತಿಯ ಚೀರಾಟ ಆಳ್ವರ ಕನ್ನಡ ಪ್ರೇಮಕ್ಕೆ ಮತ್ತು ಸಾಂಸ್ಕೃತಿಕ ಕಲಾ ಪ್ರೇಮಕ್ಕೆ ಯಾವ ತೊಡಕನ್ನೂ ಮಾಡುವುದಿಲ್ಲ…ಆನೆ ಕುಳಿತರೂ ಆಡಿಗಿಂತ ಎತ್ತರವೇ ಎಂಬ ಮಾತಿನಂತೆ,ಮೋಹನ ಆಳ್ವರ ಎತ್ತರವನ್ನು ಯಾರಿಗೂ ಏರಲು ಸಾಧ್ಯವಿಲ್ಲ….ಬಹುಶಃ ಅಳ್ವರಿಗೆ, ಅಳ್ವರೆ ಸಾಟಿ …ಅವರನ್ನು ಮೀರಿಸುವ ಇನ್ನೊಂದು ವ್ಯಕ್ತಿತ್ವನ್ನು ಕಲ್ಪಿಸಿಕೊಳ್ಳುವ ಮುಂಚೆ ಎಲ್ಲರೂ ಒಮ್ಮೆ ಅವರ ನುಡಿಸಿರಿಯ ಮತ್ತು ವಿರಾಸತ್ ನ ಸೊಗಸನ್ನು ನೋಡಿ ಸವಿಯಬೇಕು… ಬುದ್ಧಿಜೀವಿ ಸಾರಸ್ವತರು ಮತ್ತು ಅವರುಗಳ ಹಿಂಬಾಲಕ ಪೀಡೆಗಳು ತಮ್ಮ ಮನಸ್ಸಿನಲ್ಲಿ ಅಂಟಿ ಕುಳಿತಿರುವ ಕಪ್ಪಿನ ಕೊಳೆಯನ್ನು,ನುಡಿಸಿರಿಯ ಶುಭ್ರತೆಯ ಬಟ್ಟೆಯಲ್ಲೊಮ್ಮೆ ಒರೆಸಿ ನೋಡಿದರೆ,ಆಳ್ವರ ಅನನ್ಯತೆಯ ಬಿಳುಪು ಅವರಿಗೂ ಕಾಣಿಸಿತು.ಇಲ್ಲದಿದ್ದರೆ ಕೇವಲ ತಮ್ಮ ಹೊಟ್ಟೆ ಹೊರೆಯುವ ಉದ್ದೇಶಕ್ಕೆ ಎಲ್ಲವನ್ನೂ ವಿರೋಧಿಸುವ ಇಂತಹ ಬುದ್ಧಿ ಜೀವಿಗಳು ಕನ್ನಡ ನಾಡು ನುಡಿ ಮತ್ತು ನೆಲದ ಸಂಸ್ಕೃತಿಗೆ ಅಪಾಯ ಒಡ್ಡುವ ಭಯೋತ್ಪಾದಕರು ಎನ್ನದೇ ಬೇರೆ ದಾರಿಯಿಲ್ಲ…

ಆಳ್ವರು ನಿಜ ಅರ್ಥದಲ್ಲಿ “ಕರ್ನಾಟಕ ಮಾತೆಯ ತನು ಜಾತರು”…ಸಿರಿಗನ್ನಡಂ ಗೆಲ್ಗೆ…

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments