ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 20, 2017

4

ಪ್ರಗತಿಪರ ಫ್ಯಾಸಿಸ್ಟುಗಳಿಂದ ಪ್ರಜಾಪ್ರಾಭುತ್ವವ್ವನ್ನು ರಕ್ಷಿಸಬೇಕಾಗಿದೆ

‍ನಿಲುಮೆ ಮೂಲಕ

– ರಾಕೇಶ್ ಶೆಟ್ಟಿ

ದೇಶದಾದ್ಯಂತ ಇಂದು ನಡೆಯುತ್ತಿರುವ Intellectual Intolerance ಹುಟ್ಟಿಕೊಂಡಿದ್ದು 16 May 2014 ರಂದು. ಆ ದಿನ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮತ್ತು ಎನ್.ಡಿ.ಎ ಪ್ರಚಂಡ ಬಹುಮತಗಳಿಸಿ ಅಧಿಕಾರ ಹಿಡಿಯದೇ ಹೋಗಿದ್ದರೆ ಇವತ್ತು ಭಾರತದ ಹಾದಿ ಬೀದಿಗಳಲ್ಲಿ ಗಂಜಿಗಿರಾಕಿಗಳು ಎದೆಬಡಿದುಕೊಂಡು ಅಳಬೇಕಿರಲಿಲ್ಲ. ಆದರೆ ಏನು ಮಾಡುವುದು ಹೇಳಿ? ಭಾರತದ ಪಾಲಿಗೆ ಅಚ್ಛೇ ದಿನಗಳು ನಿಕ್ಕಿಯಾಗಿದ್ದವಲ್ಲ ಹಾಗಾಗಿ ಮೋದಿಯವರೇ ಗೆದ್ದರು. ಅಷ್ಟಕ್ಕೂ ಮೋದಿಯವರು ಗೆದ್ದಿದ್ದಕ್ಕೆ, ಗೆದ್ದ ನಂತರ ಯಶಸ್ವಿ ಮತ್ತು ಮೂರು ವರ್ಷಗಳ ಜನಪ್ರಿಯ ಆಡಳಿತವನ್ನು ನೀಡಿ ನಾಲ್ಕನೇ ವರ್ಷದತ್ತ ಶರವೇಗದಲ್ಲಿ ಹೊರಟಿರುವಾಗ ಗಂಜಿಗಿರಾಕಿಗಳದೇಕೆ ಈ ಗೋಳು? ಅವರ ಗೋಳಿನ ಕಾರಣವನ್ನು ಸರಳೀಕರಿಸಿ ಮೂರು ಪ್ರಮುಖ ಕಾರಣಗಳನ್ನು ನೀಡಬಹುದು.

೧. ಮೋದಿ ಪ್ರಧಾನಿಯಾದರೆ ಆಗಬಾರದ್ದೆಲ್ಲ ಆಗುತ್ತದೆ ಎಂದು ಸೃಷ್ಟಿಸಲಾದ “ಸೆಕ್ಯುಲರ್ ಸುಳ್ಳುಗಳು” ಸುಳಾಗಿಯೇ ಉಳಿದಿದ್ದು.
೨. ದೇಶದಲ್ಲಿ ಉಳಿದಿರುವ ಏಕೈಕ ದೊಡ್ಡ ಗಂಜಿಕೇಂದ್ರವೂ ‘ಕೈ’ ತಪ್ಪಿಹೋಗುವ ಆತಂಕ.
೩. ಮುಂದಿನ ಲೋಕಸಭಾ ಚುನಾವಣೆಯಲ್ಲೂ ಮೋದಿಯವರು ವಿಜಯಪತಾಕೆ ಹಾರಿಸುವುದು ಖಾತ್ರಿಯಾಗಿರುವುದು.

೧. ಸೆಕ್ಯುಲರ್ ಸುಳ್ಳುಗಳು :
ದೇಶ-ವಿದೇಶದ ಗಂಜಿಗಿರಾಕಿಗಳು ಮೋದಿಯವರ ಬೆನ್ನು ಬಿದ್ದಿದ್ದು ಹದಿನೈದು ವರ್ಷಗಳ ಹಿಂದೆ. ಗುಜರಾತ್ ಗಲಭೆಯ ಭೂತವನ್ನಿಡಿದುಕೊಂಡು ಶುರುವಾದ ಇವರ ಹೇಟ್ ಕ್ಯಾಂಪೇನ್ ಅನ್ನು ಗುಜರಾತ್ ಮಟ್ಟದಲ್ಲಿ ಮೋದಿ ಸಮರ್ಥವಾಗಿ ಎದುರಿಸಿ ನಿಂತಿದ್ದರು. ಪ್ರತಿ ಚುನಾವಣೆಯಲ್ಲೂ ಮೋದಿಯವರನ್ನು ಗೆಲ್ಲಿಸುವ ಮೂಲಕ ಗುಜರಾತಿಗಳು, ಗಂಜಿಗಿರಾಕಿಗಳ ದ್ವೇಷದ ಚಿಂತನೆಗಳನ್ನು ತಿಪ್ಪೆಗೆಸೆದಿದ್ದರು. ಇಷ್ಟಾದರೂ ದೇಶದಾದ್ಯಂತ ವಿವಿಧ ಸ್ಲೀಪರ್ ಸೆಲ್ಲುಗಳಲ್ಲಿರುವ ಈ ಗಂಜಿಗಿರಾಕಿಗಳು ಮೋದಿಯವರ ವಿರುದ್ಧ ಅಪಪ್ರಚಾರವನ್ನು ಮುಂದುವರೆಸಿಕೊಂಡೇ ಬಂದಿದ್ದರು.(ಬಿಜೆಪಿಯ ನಿಷ್ಕ್ರಿಯತೆ ಮತ್ತು Defensive modeಗೆ ಇಳಿಯುವ ಸಂಘಪರಿವಾರದ ನಡೆಯೂ ಇವರ ಅಪಪ್ರಚಾರದ ಯಶಸ್ಸಿಗೆ ಕಾರಣ ಎನ್ನುವುದನ್ನು ಒಪ್ಪಿಕೊಳ್ಳಬೇಕು.) ಸಾಮಾಜಿಕ ಜಾಲತಾಣಗಳು ಸದ್ದು ಮಾಡಲಾರಂಭಿಸಿದ ದಿನದಿಂದಲೇ ಈ ಪ್ರಗತಿಪರ, ಸೆಕ್ಯುಲರ್, ಬುದ್ಧಿಜೀವಿ ಇತ್ಯಾದಿ ಹೆಸರಿನಿಂದ ಕರೆಯಲ್ಪಡುವ ವೈಚಾರಿಕ ಮಾಫಿಯಾಗಳಿಗೆ ಬಲವಾದ ಪೆಟ್ಟು ಬೀಳಲಾರಂಭಿಸಿತು. ಇವರ ಎಲ್ಲಾ ಪ್ರಯತ್ನಗಳು ವಿಫಲವಾಗಿ ನರೇಂದ್ರ ಮೋದಿಯವರನ್ನು ಬಿಜೆಪಿಯ ಪ್ರಧಾನಿ ಅಭ್ಯರ್ಥಿಯೆಂದು ಘೋಷಣೆ ಮಾಡಿದಾಗ ಈ ಗಂಜಿಗಿರಾಕಿಗಳಿಗೆ ಏನು ಮಾಡುವುದೆಂದು ತೋಚಲಿಲ್ಲ. ಆಗಲೇ ಜನರಲ್ಲಿ ಭಯ ಬಿತ್ತುವ ಕೆಲಸಕ್ಕೆ ಇಳಿದರು. ಮೋದಿ ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರು ಬದುಕಲು ಸಾಧ್ಯವಿಲ್ಲ, ಸಂವಿಧಾನ ಬದಲಾಗುತ್ತೆ,ದೇಶಕ್ಕೆ ಬೆಂಕಿ ಬೀಳುತ್ತದೆ, ಕಾರ್ಪೊರೇಟುಗಳಿಗೆ ದೇಶವನ್ನು ಅಡವಿಡಲಾಗುತ್ತದೆ, ಒಟ್ಟಾರೆ ಭಾರತ ಮುಳುಗಡೆಯಾಗುತ್ತದೆ ಎನ್ನುವಷ್ಟರ ಮಟ್ಟಿಗಿನ ಹೇಟ್ ಕ್ಯಾಂಪೇನನ್ನು ಕಾಕಗಳು(ಕಾಂಗಿ + ಕಮ್ಯುನಿಸ್ಟ್), ಗಂಜಿಗಿರಾಕಿಗಳು ಮಾಡಿದ್ದರು. ಆದರೆ ಚುನಾವಣಾ ಫಲಿತಾಂಶ ಬಂದ ದಿನ ಕಾಕ, ಗಂಜಿಗಿರಾಕಿಗಳನ್ನು ಮತ್ತದೇ ಮತದಾರ ತಿಪ್ಪೆಗೆಸೆದಿದ್ದ. ನರೇಂದ್ರ ಮೋದಿಯವರ ಆಡಳಿತ ಶುರುವಾಗಿತ್ತು.

ಮೋದಿಯವರ ವಿಜಯ ಯಾತ್ರೆ ಕೇವಲ ಲೋಕಸಭೆಗೆ ಸೀಮಿತವಾಗದೆ ಮಹಾರಾಷ್ಟ್ರ, ಹರಿಯಾಣ, ಜಮ್ಮುಕಾಶ್ಮೀರ ಅಂತೆಲ್ಲಾ ಹಬ್ಬಲು ಶುರುವಾದಾಗ ಕಾಕ-ಗಂಜಿಗಿರಾಕಿಗಳ ವರಸೆಯು ಬದಲಾಗಿತ್ತು. ಮೋದಿಯನ್ನು ನೇರ ಮಾರ್ಗದಲ್ಲಿ ಎದುರು ಹಾಕಿಕೊಳ್ಳುವ ಗಂಡಸರು ತಮ್ಮ ಕ್ಯಾಂಪಿನಲ್ಲಿ ಯಾರೂ ಇಲ್ಲವೆನ್ನುವುದು ಗೊತ್ತಿದ್ದ ಇವರು, ತಮ್ಮ ಪುರಾತನ ಚಾಳಿಯಾದ ದೊಡ್ಡ ಗಂಟಲಿನಲ್ಲಿ ಸುಳ್ಳನ್ನೇ ಬೊಬ್ಬೆ ಹೊಡೆಯುವ, ತಮಗೇ ತಾವೇ ಹೊಡೆದುಕೊಂಡು, ಅವ್ನು ಹೊಡೆದ ಎಂದು ಗೋಳೋ ಎನ್ನುವ ಅವ್ವಯ್ಯ ಆಟಗಳಿಗಿಳಿದರು. ಇವರ ಬ್ರಹನ್ನಾಟಕದ ಮೊದಲ ಭಾಗವಾಗಿ ಶುರುವಾಗಿದ್ದೇ Intolerance ಎಂಬ ಕೂಗುಮಾರಿ ಮತ್ತು ಅವಾರ್ಡ್ ವಾಪಸಿ. “ದೇಶದ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ತುರ್ತು ಪರಿಸ್ಥಿತಿಗಿಂತಲೂ ಭೀಕರವಾದ ಸನ್ನಿವೇಶವಿದೆ. ದಾದ್ರಿ ಹತ್ಯೆಯನ್ನು ವಿರೋಧಿಸಿ,ಕಲ್ಬುರ್ಗಿ ಕೊಲೆ ಪ್ರಕರಣದಲ್ಲಿ ಸಾಹಿತ್ಯ ಅಕಾಡೆಮಿಯ ಮೌನವನ್ನು ವಿರೋಧಿಸಿ, ಮೋದಿಯ ಮೌನವನ್ನು ವಿರೋಧಿಸಿ, ’ಇತ್ಯಾದಿ ಇತ್ಯಾದಿ ಕಾರಣಗಳನ್ನು ನೀಡಿ ದೇಶದ ಬೇರೆ ಬೇರೆ ಭಾಗದಿಂದ ಪ್ರಶಸ್ತಿ ವಾಪಸ್ “ಮಾಡಿಸಲಾಗಿತ್ತು”. ಮಾಡಿಸಲಾಗಿತ್ತು ಎನ್ನುವುದನ್ನು ನಾನು ಕೋಟ್ ಮಾಡಿದ್ದೇನೆ. ಕಾರಣವಿಷ್ಟೇ ಅದೊಂದು ರಾಜಕೀಯ ಪ್ರೇರಿತ ಕೂಗುಮಾರಿಗಳ ಕಿರುಚಾಟವಾಗಿತ್ತು. ಯುಪಿಎ ಸರ್ಕಾರವಿದ್ದಾಗಲೇ ಧಾಬೋಲ್ಕರ್, ಪನ್ಸಾರೆ ಹತ್ಯೆಯಾಗಿತ್ತು. ಆಗ ಈ ಗಂಜಿಗಿರಾಕಿಗಳು ಬಾಯಿ ಬಿಡಲಿಲ್ಲ, ಬೊಬ್ಬೆ ಹಾಕಲಿಲ್ಲ. ಯಾವನೂ ಪ್ರಶಸ್ತಿ ಹಿಂದಿರುಗಿಸಲಿಲ್ಲ. ಆದರೆ ಬಿಜೆಪಿ ಅವಧಿಯಲ್ಲಿ ಕಲ್ಬುರ್ಗಿ ಹತ್ಯೆಯಾದಾಗ ಬಿಲದೊಳಗಿದ್ದ ಹೆಗ್ಗಣಗಳೆಲ್ಲ ಹೊರ ಬಂದು ಗುಂಡಿ ತೋಡಲಾರಂಭಿಸಿದ್ದವು.

ಗಂಜಿಗಿರಾಕಿಗಳು ಹೇಳಿದಂತೆ ದೇಶದಲ್ಲಿ ನಿಜವಾಗಿಯೂ ದೇಶದಲ್ಲಿ ತುರ್ತು ಪರಿಸ್ಥಿತಿಯಂತಹ ಗಂಭೀರ ಸನ್ನಿವೇಶ ಸೃಷ್ಟಿಯಾಗಿದೆಯಾ? ಅಥವಾ ಸೆಕ್ಯುಲರ್ ಗುಂಪು ಸಮೂಹ ಸನ್ನಿಗೊಳಗಾಗಿದೆಯೇ ? ಊಹೂಂ. ಸನ್ನಿಗೊಳಗಾಗುವಷ್ಟು ಮುಗ್ದರೇನಲ್ಲ ಇವರು. Mass Hysteria ಸೃಷ್ಟಿಸುವಷ್ಟು ಸಾಮರ್ಥ್ಯವುಳ್ಳ ಜನರಿವರು. 2002ರ ಗುಜರಾತ್ ಗಲಭೆಯನ್ನು ನೆನಪು ಮಾಡಿಕೊಳ್ಳಿ. ಆಗ ಜನರು ಹುಟ್ಟು ಹಾಕಿದ ಸಮೂಹ ಸನ್ನಿಯೇನೂ ಕಡಿಮೆಯದೇ, ಒಬ್ಬ ಮುಖ್ಯಮಂತ್ರಿಯ ಮಿತಿಯಲ್ಲಿ ಏನೆಲ್ಲಾ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕಿತ್ತೋ ಅದನ್ನೆಲ್ಲಾ ಮಾಡಿಯೂ ನರೇಂದ್ರ ಮೋದಿಯವರಿಗೆ ನರಹಂತಕ ಪಟ್ಟ ಕಟ್ಟಿಸಿ, ಆಗಿನ ಪ್ರಧಾನಿ ವಾಜಪೇಯಿಯವರಿಂದಲೂ ’ರಾಜಧರ್ಮ ಪಾಲನೆ’ಯ ಮಾತನ್ನೂ ಆಡಿಸಿಬಿಟ್ಟಿತ್ತು ಈ ಸೆಕ್ಯುಲರ್ ಸಮೂಹ ಸನ್ನಿ. ಹಾಗೆಂದು ಗುಜರಾತ್ ಗಲಭೆಯನ್ನೂ ಸಮರ್ಥಿಸಬೇಕಿಲ್ಲ. ಅದಕ್ಕೂ ಮೊದಲು ಈ ದೇಶ ಅಂತ ಗಲಭೆಯನ್ನೇ ನೋಡಿರಲಿಲ್ಲವಾ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಿ.

2000ಕ್ಕೂ ಹೆಚ್ಚೂ ಮುಸ್ಲಿಂರನ್ನು ಬಲಿತೆಗೆದುಕೊಂಡ ಅಸ್ಸಾಂನ ನೆಲ್ಲಿ ಹತ್ಯಾಕಾಂಡ ನಡೆದ 1983 ಇಸವಿಯಲ್ಲಿ ರಾಷ್ಟ್ರಪತಿ ಆಳ್ವಿಕೆಯಿತ್ತು. 2000ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ಉತ್ತರ ಪ್ರದೇಶದ ಮೊರಾದಾಬಾದ್ ಗಲಭೆ ನಡೆದಾಗ (1980ನೇ ಇಸವಿ) ಅಧಿಕಾರದಲ್ಲಿದ್ದದ್ದು ಕಾಂಗ್ರೆಸ್ಸಿನ ವಿ.ಪಿ ಸಿಂಗ್(ಆಗ ಕಾಂಗ್ರೆಸ್ಸಿನಲ್ಲಿದ್ದರು). 2800ಕ್ಕೂ ಹೆಚ್ಚು ಸಿಖ್ಖರನ್ನು ಬಲಿತೆಗೆದುಕೊಂಡ 1984ರ ಸಿಖ್ ಹತ್ಯಾಕಾಂಡ ನಡೆದಿದ್ದು ಪ್ರಧಾನಿ ಶ್ರೀಮಾನ್ ರಾಜೀವ್ ಗಾಂಧಿಯವರ ಕಾಲದಲ್ಲಿ. (’ದೊಡ್ಡ ಮರವೊಂದು ಉರುಳಿದಾಗ ಭೂಮಿ ಕಂಪಿಸುವುದು ಸಹಜ’ ಎಂದು ಧಿಮಾಕಿನಿಂದ ಪ್ರತಿಕ್ರಿಯಿಸಿದ್ದು ನೆನಪಿರಬೇಕಲ್ಲವೇ ?)ಕಾಶ್ಮೀರ ಕಣಿವೆಯಿಂದ ಲಕ್ಷಗಟ್ಟಳೇ ಕಾಶ್ಮೀರಿ ಪಂಡಿತರನ್ನು ಮತ್ತು ಇತರೆ ಜಾತಿಯ ಹಿಂದೂಗಳನ್ನು ಕೊಲೆ, ಅತ್ಯಾಚಾರಗೈದು, ಹೊರಗಟ್ಟಿದಾಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದದ್ದು ಜನತಾದಳದ ವಿ.ಪಿ ಸಿಂಗ್. 1990ರ ಇಸವಿಯಲ್ಲಿ ಮುಂಬೈನಲ್ಲಿ ನಡೆದ ಭೀಕರ ಕೋಮುಗಲಭೆಯ ಕಾಲದಲ್ಲಿ ಅಧಿಕಾರದಲ್ಲಿದ್ದದ್ದು ಕಾಂಗ್ರೆಸ್ಸಿನ ಸುಧಾಕರ್ ನಾಯಕ್. 2000ನೇ ಇಸವಿ ಕರ್ನಾಟಕದ ಕಂಬಾಲಪಲ್ಲಿ ದುರಂತ ನಡೆದಾಗ ಅಧಿಕಾರದಲ್ಲಿದ್ದದ್ದು ಕಾಂಗ್ರೆಸ್ಸಿನ ಎಸ್.ಎಂ ಕೃಷ್ಣ (ಈಗ ಬಿಜೆಪಿಯಲ್ಲಿದ್ದಾರೆ). 2006ರಲ್ಲಿ ಮಹಾರಾಷ್ಟ್ರದ ಖೈರ್ಲಾಂಜಿಯ ದುರಂತ ನಡೆದಾಗ ಅಧಿಕಾರದಲ್ಲಿದ್ದದ್ದು ಕಾಂಗ್ರೆಸ್ಸಿನ ವಿಲಾಸ್ ರಾವ್ ದೇಶಮುಖ್ದೇಶದ. ಭದ್ರತಾ ವ್ಯವಸ್ಥೆಯನ್ನು ಹಾಸ್ಯಾಸ್ಪದವಾಗಿಸಿದ 2008ರ ಮುಂಬೈ ಉಗ್ರರ ದಾಳಿಯ ಸಮಯದಲ್ಲಿ ಅಧಿಕಾರದಲ್ಲಿದ್ದದ್ದು ಕಾಂಗ್ರೆಸ್ಸಿನ ವಿಲಾಸ್ ರಾವ್ ದೇಶಮುಖ್. ಇವೆಲ್ಲಾ ಕೆಲವೇ ಕೆಲವು ಉದಾಹರಣೆಗಳು. ಸ್ವಾತಂತ್ರ್ಯಾನಂತರ ಆದ ಗಲಭೆಗಳು, ಹತ್ಯಾಕಾಂಡಗಳೂ ಇನ್ನೂ ಬಹಳಷ್ಟಿವೆ. ಇದುವರೆಗೂ ಆಳ್ವಿಕೆ ನಡೆಸಿರುವ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳ ಮೇಲೂ ಇಂತಹ ಕಪ್ಪು ಚುಕ್ಕೆಗಳಿವೆ. ನರೇಂದ್ರ ಮೋದಿಯೆಂಬ ವ್ಯಕ್ತಿ ಮುಖ್ಯಮಂತ್ರಿಯಾಗುವ ಮೊದಲೂ, ಪ್ರಧಾನಮಂತ್ರಿಯಾಗುವ ಮೊದಲೂ ಈ ದೇಶದಲ್ಲಿ, ಅಷ್ಟೇ ಏಕೆ ಪ್ರಪಂಚದಲ್ಲಿ ಮನುಷ್ಯನೆಂಬ ಪ್ರಾಣಿ ಇರುವೆಡೆಯಲೆಲ್ಲಾ ಘಟಿಸುವಂತೆಯೇ ಹಿಂಸಾಚಾರದ ಘಟನೆಗಳೂ ನಡೆದಿವೆ ಮುಂದೆಯೂ ನಡೆಯುತ್ತಲೇ ಇರುತ್ತವೆ. ವಾಸ್ತವ ಹೀಗಿರುವಾಗ, ಈಗ ಭಾರತದಲ್ಲಿ ಭೂಮಿಯೇ ಬಾಯ್ದೆರೆದು ಕುಳಿತಿರುವಂತೆ, ಆಕಾಶವೇನೋ ತಲೆಯ ಮೇಲೆ ಉರುಳುತ್ತಿದೆಯೆಂಬಂತೆ ಈ ಜನರು ಬೊಬ್ಬೆ ಹೊಡೆಯುತ್ತಿರುವ ಕಾರಣವೇನು?

ಕಾರಣ ಸ್ಪಷ್ಟವಾಗಿದೆ. ಈ ದೇಶದ ಬುದ್ಧಿಜೀವಿಗಳ ನಿಂತ ನೆಲ ಕುಸಿದಿದ್ದು 2014ರ ಮೇ 16ರ ದಿನ. ನೆಹರೂ ಕಾಲದಿಂದ ಬುದ್ಧಿಜೀವಿಗಳ ಕಾಶಿ JNU ಇಂದ ಹಿಡಿದು ದೇಶದ ಮೂಲೆ ಮೂಲೆಯ ಸೆಕ್ಯುಲರ್ ಬಿಲಗಳಲ್ಲಿ ಸೇರಿಕೊಂಡಿದ್ದವರಿಗೆಲ್ಲ ಮುಳುಗು ನೀರಿನ ಅನುಭವವಾದ ದಿನವದು. ಜಾತಿ ಮತ್ತು ದ್ವೇಷದ ರಾಜಕೀಯಕ್ಕೆ ಕ್ಯಾರೇ ಎನ್ನದ ಜನರು ಮೋದಿಯವರ ಅಭಿವೃದ್ಧಿ ಮಂತ್ರಕ್ಕೆ ಮತ ನೀಡಿದ್ದು ಬುದ್ಧಿಜೀವಿಗಳನ್ನು ದಂಗುಬಡಿಸಿತು. ಸಾಮಾಜಿಕ ಜಾಲತಾಣಗಳು ಇನ್ನೂ ಕಣ್ಣು ಬಿಡುತ್ತಿರುವಾಗಲೇ, ಅಷ್ಟೆಲ್ಲಾ ವ್ಯವಸ್ಥಿತ ಹೇಟ್ ಕ್ಯಾಂಪೇನ್ ಮಾಡಿಯೂ ನಮ್ಮ ಕೈಯಿಂದ ತಪ್ಪಿಸಿಕೊಂಡ ಈ ಚಾಣಾಕ್ಷ ಮೋದಿ, ಇನ್ನೀಗ ಸಾಮಾಜಿಕ ಜಾಲತಾಣಗಳ ಅಬ್ಬರದ ದಿನಗಳಲ್ಲಿ ನಮ್ಮ ಕೈಗೆ ಸಿಗುತ್ತಾನೆಯೇ ಎಂಬುದೇ ಇವರ ಅಳಲು. ಇದರ ಜೊತೆಗೆ ಎನ್.ಜಿ.ಒ ಗಳ ಹೆಸರಿನಲ್ಲಿ ಇವರ ಐಡಿಯಾಲಜಿಯನ್ನು ಹರಡಲು ಮೊದಲೆಲ್ಲಾ ದಾರಿಗಳಿದ್ದವು. ಇವರ ಜೇಬಿಗೂ ಆಗ ಸುಭೀಕ್ಷದ ದಿನಗಳು, ಈ ಮಹಾನುಭಾವ ಮೋದಿ ಬಂದ ಮೇಲೆ ಅದಕ್ಕೂ ಕಲ್ಲು ಹಾಕಿದ್ದಾರೆ. ವಿದೇಶಿ ದೇಣಿಗೆ ಪಡೆಯುವ ಎನ್.ಜಿ.ಒ ಮೇಲೆ ಕಣ್ಗಾವಲಿದೆ, ಬೇನಾಮಿ ಎನ್.ಜಿ.ಒಗಳಿಗೆ ಬೀಗವನ್ನು ಜಡಿಯಲಾಗಿದೆ. ಇವರ ಗಂಜಿಕೇಂದ್ರದ ಶವಪೆಟ್ಟಿಗೆಗೆ ಮತ್ತೊಂದು ಬಲವಾದ ಮೊಳೆಯೆಂಬಂತೆ Demonetization ಎಂಬ ಅಸ್ತ್ರವನ್ನು ಮೋದಿ ಪ್ರಯೋಗಿಸಿಬಿಟ್ಟರು. ಯಾವ ಕಾರ್ಪೊರೇಟು, ಹಣವಂತರ ಪರ ಮೋದಿ ಎಂದು ಈ ಗಂಜಿಗಿರಾಕಿಗಳು ಜನರ ಎದುರು ಸುಳ್ಳಾಡುತ್ತ ಬಂದಿದ್ದರು ಆ ಪರದೆಯನ್ನು ಮೋದಿ ಕಿತ್ತೆಸೆದಿದ್ದರು. ಗಂಜಿ ಕೇಂದ್ರಗಳೆಲ್ಲ ಮುಚ್ಚಿದಾಗ ಬಂಡಾಯವೇಳುವುದೂ ಸಹಜವೇ. ಈಗ ಆಗುತ್ತಿರುವುದೂ ಅದೇ ತಾನೇ? ಅದಕ್ಕೂ ಮುಖ್ಯವಾಗಿ ಸೆಕ್ಯುಲರ್ ಭಯೋತ್ಪಾದನೆಯ ಸುಳ್ಳುಗಳ ಬಲೂನಿಗೆ ಮೋದಿಯವರು ಸೂಜಿ ಚುಚ್ಚುತ್ತ ಸಾಗುತ್ತಿರುವ ವೇದನೆ ಗಂಜಿಗಿರಾಕಿಗಳನ್ನು ಕಾಡುತ್ತಿದೆ.

೨. ದೇಶದಲ್ಲಿ ಉಳಿದಿರುವ ಏಕೈಕ ದೊಡ್ಡ ಗಂಜಿಕೇಂದ್ರವೂ ‘ಕೈ’ ತಪ್ಪಿಹೋಗುವ ಆತಂಕ.

ಇದು ಗಂಜಿಗಿರಾಕಿಗಳ ನಿಜವಾದ ಆತಂಕಕ್ಕೆ ಕಾರಣ. ಸದ್ಯಕ್ಕೆ ಉಳಿದಿರುವ ದೊಡ್ಡ ಗಂಜಿಕೇಂದ್ರಗಳಲ್ಲಿ ಕರ್ನಾಟಕದ್ದೇ ದೊಡ್ಡ ಪಾಲು. ಹೇಳಿಕೊಳ್ಳಲು ಪಂಜಾಬಿನಲ್ಲೊಂದು ಗಂಜಿಕೇಂದ್ರವಿದ್ದರೂ ಅದು ದೆಹಲಿಯಲ್ಲಿರುವ ಗಂಜಿಗಿರಾಕಿಗಳೆಂಬ ಕುಂಭಕರ್ಣರ ಪಾಲಿಗೆ ಅರೆಮಜ್ಜಿಗೆಯಂತಾಗುತ್ತದೆ. ಹೀಗಿದ್ದಾಗ ಅದು ದಕ್ಷಿಣ ಭಾರತಕ್ಕೆ ತಲುಪುತ್ತದೆಯೇ? ಇಂತಹ ಸ್ಥಿತಿಯಲ್ಲಿ ದಕ್ಷಿಣದಲ್ಲೊಂದು ಕೇಂದ್ರದ ಅಗತ್ಯವಿದೆಯೆನ್ನುವುದು ಗಂಜಿ ಲೆಕ್ಕಾಚಾರ. ಅದು ಉಳಿಯಬೇಕಾದರೆ ಅಡ್ಡ ದಾರಿಯನ್ನು ಹಿಡಿಯಲೇಬೇಕಲ್ಲ. ಆಗ ಇವರಿಗೆ ನೆನಪಾಗುವುದೇ ಹೆಣದ ರಾಜಕೀಯ. ಮೋದಿಯವರ ಸರ್ಕಾರ ಬಂದ ನಂತರ ದೇಶದ ಯಾವುದೇ ಮೂಲೆಯಲ್ಲಿ ಹೆಣ ಬಿದ್ದರು ಎಲ್ಲಿದ್ದರೂ ಈ ಪ್ರಗತಿಪರ ರಣ ಹದ್ದುಗಳು ಹಾರಿ ಹೋಗುತ್ತವೆ. ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ, ನನ್ನ ಸಾವಿಗೆ ಯಾರೂ ಕಾರಣರಲ್ಲವೆಂದು ಬರೆದಿಟ್ಟು ಹೋದ ರೋಹಿತ್ ವೆಮುಲಾನಿಂದ ಹಿಡಿದು ಅಖ್ಲಾಕ್, ಜುನೈದ್, ಕಲ್ಬುರ್ಗಿ, ಗೌರಿ ಯಾರೆಂದರೆ ಯಾರನ್ನೂ ಈ ಹೈನಾಗಳು ಬಿಡಲು ತಯಾರಿಲ್ಲ. ಇವರು ಬೊಬ್ಬೆ ಹೊಡೆದ ಒಂದೊಂದು ಸಾವು, ಹತ್ಯೆಗಳ ಸತ್ಯಾಂಶಗಳು ಈಗಾಗಲೇ ಸುಳ್ಳೆಂದು ಸಾಬೀತಾದರೂ ಇವರು ಮತ್ತೆ ಮತ್ತೆ ಅದೇ ಹೆಸರುಗಳನ್ನು ಬಳಸಿಕೊಳ್ಳುವುದು ನೋಡಿದಾಗ, ವೈಚಾರಿಕವಾಗಿ ಈ ಜನರು ನಯಾಪೈಸೆಗೆ ಬಾಳದವರು ಪ್ರಾಮಾಣಿಕ ಜೀವಿಗಳೂ ಅಲ್ಲವೆನ್ನುವುದು ಸಾಬೀತಾಗುತ್ತದೆ.

ಧಾಬೋಲ್ಕರ್, ಪನ್ಸಾರೆ ಹತ್ಯೆಯಾಗಿದ್ದು ಇವರದೇ ಕಾಂಗಿ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರವಿದ್ದ ಕಾಲದಲ್ಲಿ. ಆಗ ಬಾಯಿಗೆ ಬೆಣೆ ಹೊಡೆದುಕೊಂಡು ಕುಳಿತಿದ್ದ ಈ ಗಂಜಿಗಿರಾಕಿಗಳು ಮೋದಿಯವರ ಕೇಂದ್ರ ಸರ್ಕಾರ ಬಂದ ನಂತರ ಪ್ರತಿಯೊಂದು ಹೆಣ ಬಿದ್ದಾಗಲೂ ರಾಣಾ ಹದ್ದುಗಳಂತೆ ಗರಿಗೆದರುತ್ತಿವೆ. ಸಂಶೋಧಕ ಕಲ್ಬುರ್ಗಿ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿರುವುದು ಇವರ ನೆಚ್ಚಿನ ಸಿದ್ಧರಾಮಯ್ಯನವರ ಆಡಳಿತವಿರುವ ಕಾಂಗಿ ರಾಜ್ಯ ಸರ್ಕಾರದಡಿಯಲ್ಲಿ. ಆದರೆ ಈ ವೈಚಾರಿಕ ರಾಜಕಾರಣಿಗಳು ಬೊಟ್ಟು ಮಾಡುತ್ತಿರುವುದು ನರೇಂದ್ರ ಮೋದಿಯವರ ಮೇಲೆ? ಎಲ್ಲವನ್ನು ಮೋದಿಯವರೇ ಮಾಡುವುದಾದರೆ ರಾಜ್ಯಕ್ಕೊಬ್ಬ ಮುಖ್ಯಮಂತ್ರಿಯೇಕೆ? ಗೃಹ ಸಚಿವರೇಕೆ? ಅವರಿಗೆ ರಾಜೀನಾಮೆ ಕೊಟ್ಟು ರಾಷ್ಟ್ರಪತಿ ಆಳ್ವಿಕೆ ಜಾರಿಮಾಡಲು ಹೇಳಬೇಕಲ್ಲವೇ? ಈ ಪ್ರಗತಿಪರರು ನಿಜವಾಗಿಯೂ ಪ್ರಾಮಾಣಿಕರಾಗಿದ್ದರೆ, ರಾಜ್ಯದಲ್ಲಿ ಕುಸಿದು ಬಿದ್ದಿರುವ ಕಾನೂನು ಸುವ್ಯವಸ್ಥೆಯ ಬಗ್ಗೆ ಪ್ರಶ್ನಿಸಬೇಕಿತ್ತು. ಬಹುಶಃ ಪ್ರಗತಿಪರ-ಪ್ರಾಮಾಣಿಕತೆ ಎನ್ನುವುದು ವಿರುದ್ಧ ಪದಗಳಿರಬೇಕು ಹಾಗಾಗಿ ಇವರು ರಾಜ್ಯಸರ್ಕಾರವನ್ನು ಪ್ರಶ್ನಿಸಲಾರರು ಬಿಡಿ…

ಭ್ರಷ್ಟಾಚಾರವನ್ನು ಪ್ರಶ್ನಿಸಿದ್ದಾಕ್ಕಾಗಿ ಹತ್ಯೆಯಾದ ಹದಿಹರೆಯದ ದಲಿತ ಯುವಕ ಯಲ್ಲಾಲಿಂಗನಿಂದ ಹಿಡಿದು, ಐಎಎಸ್, ಕೆಎಎಸ್, ಪೊಲೀಸ್ ಅಧಿಕಾರಿಗಳು, ಹನ್ನೆರಡಕ್ಕೂ ಹೆಚ್ಚು ಆರೆಸ್ಸೆಸ್ ಕಾರ್ಯಕರ್ತರು, ಜೆಡಿಎಸ್ ಕಾರ್ಯಕರ್ತರು, ಎಸ್ಡಿಪಿಐನ ಅಶ್ರಫ್ ಮತ್ತು ಮೊನ್ನೆಯ ಗೌರಿ ಹತ್ಯೆಯಾಗುತ್ತಿರುವಾಗ ರಾಜ್ಯದ ಕಾನೂನು ಸುವ್ಯವಸ್ಥೆಯೆನ್ನುವುದು ಎಲ್ಲಿ ನೆಗೆದುಬಿದ್ದಿದೆ ಎಂದು ಮೊನ್ನೆ ಸಮಾವೇಶದಲ್ಲಿ ಪಾಲ್ಗೊಂಡ ಯಾವನಾದರೂ ಒಬ್ಬ ಕೇಳಿದನಾ? ಇಲ್ಲ ಕೇಳುವುದಿಲ್ಲ. ಅವರಿಗೆ ಬೇಕಿರುವುದು ಗೌರಿ ಹತ್ಯೆಯ ನ್ಯಾಯವಲ್ಲ. 2018ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆಯುವುದು ಮತ್ತು ತಮ್ಮ ಗಂಜಿಕೇಂದ್ರವನ್ನು ಉಳಿಸಿಕೊಳ್ಳುವುದಷ್ಟೇ. ಇವರ ಮನ ಮಿಡಿಯುವುದು ಗಂಜಿಗಾಗಿಯೇ ಹೊರತು ಅಗಲಿದ ಸಂಗಾತಿಗಾಗಿಯಲ್ಲ! ಕಷ್ಟಕಾಲದಲ್ಲಿ ಅಥವಾ ತಪ್ಪು ಮಾಡಿದಾಗ ತಮ್ಮವರನ್ನು ಬಿಟ್ಟುಕೊಡದ ಮತ್ತು ಕಾಪಾಡಿಕೊಳ್ಳುವ ಎಡಪಂಥೀಯರನ್ನು ನೋಡಿದಾಗಲೆಲ್ಲ, ಬಲಪಂಥೀಯರ ಕ್ಯಾಂಪಿನಲ್ಲಿ ನಿಂತು ನೋಡುವಾಗ ನಮ್ಮವರು ಹೀಗೇಕಿಲ್ಲ ಎಂದುಕೊಳ್ಳುತ್ತಿದ್ದವರು, ಇವತ್ತು ಈ ಎಡಪಂಥೀಯರು ತಮ್ಮ ಸಂಗಾತಿಗಳ ಹೆಣದ ಮೇಲೆ ರಾಜಕೀಯ ಮಾಡುವುದು ನೋಡಿದಾಗ ಸದ್ಯ ನಾವು ಅಲ್ಲಿಲ್ಲಪ್ಪ ಎಂದು ಸಮಾಧಾನ ಮಾಡಿಕೊಳ್ಳುತ್ತಿದ್ದಾರೆ.

ಇವರ ಏಕೈಕ ಗಂಜಿಕೇಂದ್ರವನ್ನು ಉಳಿಸಿಕೊಳ್ಳಲು ದೇಶ-ವಿದೇಶಗಳಲ್ಲಿರುವ ಇವರ ಮಾಧ್ಯಮಗಳನ್ನು ಇವರು ಖರೀದಿಸಿ ಬಳಸಿಕೊಂಡರೂ, ಕರ್ನಾಟಕದ ಸಾಮಾಜಿಕ ಜಾಲತಾಣಗಳು ಇವರಿಗೆ ಪ್ರಬಲ ಸವಾಲಾಗಿ ನಿಲ್ಲಲ್ಲಿವೆ. ಇವರ ಸುಳ್ಳಿನ ಮೂಟೆ, ಕೋಟೆಗಳನ್ನು ಬೇಧಿಸುವ ಕಲೆಯೂ ನಮಗೆ ಗೊತ್ತಿದೆ.

೩. ಮುಂದಿನ ಲೋಕಸಭಾ ಚುನಾವಣೆಯಲ್ಲೂ ಮೋದಿಯವರು ವಿಜಯಪತಾಕೆ ಹಾರಿಸುವುದು ಖಾತ್ರಿಯಾಗಿರುವುದು.

2018ರ ಕರ್ನಾಟಕ ವಿಧಾನಸಭಾ ಚುನಾವಣೆಗಿಂತಲೂ ಗಂಜಿಗಿರಾಕಿ ಮತ್ತು ಕಾಕಗಳ ನಿಜವಾದ ಚಿಂತೆ ಅಡಗಿರುವುದು 2019ರ ಲೋಕಸಭಾ ಚುನಾವಣೆಯಲ್ಲಿ. ಅಧಿಕಾರಕ್ಕೇರಿ ನಾಲ್ಕನೇ ವರ್ಷದತ್ತ ದಾಪುಗಾಲಿಟ್ಟಿದ್ದರೂ ನರೇಂದ್ರ ಮೋದಿಯವರ ಜನಪ್ರಿಯತೆಯಲ್ಲಿ ಒಂದಿಚು ಕಡಿಮೆಯಾಗಿಲ್ಲ. ದಿನೇ ದಿನೇ ಗ್ರಾಫು ಏರುತ್ತಲೇ ಇದೆ. ಪಾಕಿಸ್ತಾನಿಗಳಿಗೆ ಬುದ್ಧಿ ಕಲಿಸಲು ಬಳಸಿದ Surgical Strike, ತೆರಿಗೆ, ಕಪ್ಪು ಹಣದ ಕಳ್ಳರಿಗೆ ಬಿಸಿ ಮುಟ್ಟಿಸಿದ Demonetization ಆಗಿರಬಹುದು ಅಥವಾ ಮೊನ್ನೆ ಮೊನ್ನೆ ಕಾಲು ಕೆರೆದು ಯುದ್ಧಕ್ಕೆ ಬಂದಿದ್ದ ಚೀನಾ ಜೊತೆಗಿನ ಡೋಕ್ಲಾಮ್ ವಿವಾದವಿರಬಹುದು ಎಲ್ಲವನ್ನು ಮೋದಿಯವರು ನಿಭಾಯಿಸುತ್ತಿರುವ ಪರಿ ನೋಡಿದರೆ ಮತ್ತೊಮ್ಮೆ ಅವರೇ ಗೆದ್ದು ಬರುವುದು ಖಾತ್ರಿಯಾಗಿದೆ. ಇನ್ನು ಮೋದಿಯವರಿಗೆ ಸ್ವಲ್ಪಮಟ್ಟಿಗಿನ ಪ್ರತಿರೋಧ ತೋರಬಹುದಾಗಿದ್ದ ನಿತೀಶ್ ಕುಮಾರ್ ಅವರನ್ನು ಅಮಿತ್ ಶಾ – ಮೋದಿ ಜೋಡಿ ಈಗಾಗಲೇ ತಮ್ಮೆಡೆಗೆ ಸೆಳೆದುಕೊಂಡಿದೆ. ಇನ್ನು ರಾಹುಲ್ ಗಾಂಧೀ ಕಾಂಗ್ರೆಸ್ ಅಧ್ಯಕ್ಷರಾದರೆ ಬಿಜೆಪಿಗೆ ಬಂಪರ್ ಬೆಳೆ ಗ್ಯಾರಂಟಿ. ಹಾಗಾಗಿ ರಾಜಕಾರಣಿಗಳನ್ನು ನಂಬಿಕೊಂಡು ಮೋದಿಯವರನ್ನು ಕಟ್ಟಿಹಾಕುವುದು ಕಷ್ಟವೆಂದೇ, ದೇಶದ ಹಳೆ ವೈಚಾರಿಕ ಕಳ್ಳರೆಲ್ಲ ಸಂತೆಯಲ್ಲಿ ಒಂದಾಂತೆ ಒಂದಾಗಿ ಬೀದಿಗಿಳಿದು ಬೊಬ್ಬೆ ಹೊಡೆಯುತ್ತಿರುವುದು ಕಳೆದ ಚುನಾವಣೆಯಲ್ಲಿ ಮೋದಿ ಗೆದ್ದರೆ ಸಾಬರನ್ನು ಅರಬ್ಬೀ ಸಮುದ್ರಕ್ಕೆ ಎಸೆಯಲಾಗುತ್ತದೆನ್ನುವ ಲೆವೆಲ್ಲಿಗೆ ಅವರಲ್ಲಿ ಭಯ ಹುಟ್ಟಿಸಿದ್ದರು ಅಂತಾದ್ದೇನೂ ಆಗಲಿಲ್ಲ. ಬದಲಿಗೆ, ಮುಸ್ಲಿಂ ಹೆಣ್ಣು ಮಕ್ಕಳ ಬಾಳಲ್ಲಿ ಬೆಳಕು ತರುವಂತಹ ಟ್ರಿಪಲ್ ತಲಾಖ್ ರದ್ದುಗೊಂಡು, ಅವರಿಗೂ ಯಾರು ನಿಜವಾದ ವೈರಿಗಳು, ಯಾರು ನಮ್ಮನ್ನು ಬಳಸಿಕೊಳ್ಳುತ್ತಿದ್ದಾರೆ ಎನ್ನುವದು ಅರಿವಾಗುತ್ತಿದೆ. ಎಲ್ಲಿ ಅರಿವು ಹೆಚ್ಚಾಗುತ್ತದೆಯೋ ಅಲ್ಲಿ ಗಂಜಿಗಿರಾಕಿಗಳೇ ಜಾಗವಿರುವುದಿಲ್ಲ ನೋಡಿ. ಹಾಗಾಗಿ ಈಗ ಇವರ ಹೊಸ ವರಸೆಯೇನು ಗೊತ್ತೇ? ‘ಮೋದಿ ಮತ್ತೆ ಗೆದ್ದು ಬಂದರೆ ಅಂಬೇಡ್ಕರರ ಸಂವಿಧಾನವನ್ನೇ ಬದಲಾಯಿಸುತ್ತಾರೆ’ ಎನ್ನುವುದು. ಹೀಗೆ ಕೆಲ ದಿನಗಳ ಹಿಂದೆ ಕನ್ನಡದ ಹಿರಿಯ ಸಾಹಿತಿಯೊಬ್ಬರ ಜೊತೆ ಮಾತನಾಡುತ್ತಿರುವಾಗ, ಅವರು ಸಂವಿಧಾನ ಬದಲಾಗುವ ಅಪಾಯದ ಬಗ್ಗೆ ಹೇಳಿದರು.’ಸಂವಿಧಾನವೇನು ರಫ್ ಬುಕ್ಕಾ ಸರ್ ಬೇಕಾಬಿಟ್ಟಿ ಬದಲಾಯಿಸಲು? ಅಷ್ಟು ಖಚಿತವಾಗಿ ಬದಲಾಯಿಸುತ್ತಾರೆ ಎನ್ನುತ್ತೀರಲ್ಲ, ಯಾವ ಸೆಕ್ಷನ್ನನ್ನು ಬದಲಾಯಿಸುತ್ತಾರೆ,ಯಾವ ಕಾಯ್ದೆಯನ್ನು ಬದಲಾಯಿಸುತ್ತಾರೆ? ಅದನ್ನು ಹೇಳಿ ” ಎಂದೇ. ಅವೆಲ್ಲಾ ಗೊತ್ತಿಲ್ಲ ಆದರೆ ಬದಲಾಯಿಸೋದು ಗ್ಯಾರಂಟಿ ಎಂದು ಮಾತು ಬದಲಿಸಿದ್ದರು. ಇದೇ ರೀತಿಯ ವೈಚಾರಿಕ ಭಯೋತ್ಪಾದನೆಯನ್ನು ಉಳಿದ ಗಂಜಿಗಿರಾಕಿಗಳ ಗೋಡೆಯಲ್ಲೂ ನಾನು ನೋಡಿದ್ದೇನೆ.ಮೋದಿಯವರನ್ನು ನೇರವಾಗಿ ಎದುರಿಸಲು ಇವರಲ್ಲಿ ಸರಕಿಲ್ಲ. ಮೊದಲೇ ಅಡ್ಡಕಸುಬಿಗಳು ಅಡ್ಡದಾರಿಯಿಡಿಯದೇ ಇನ್ನೇನು ಮಾಡುತ್ತಾರೆ ಹೇಳಿ?

ಕಡೆಯದಾಗಿ: ಮಾತೆತ್ತಿದರೇ ಪ್ರಜಾಪ್ರಭುತ್ವ, ಸಂವಿಧಾನವೆಂದು ಬಡಬಡಿಸುವ ಈ ಗಂಜಿಗಿರಾಕಿಗಳಿಗೆ ನಿಜವಾಗಿಯೂ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯೆನ್ನುವುದು ಇದ್ದಿದ್ದರೆ ಜನರಿಂದ ಆಯ್ಕೆಯಾದ ಮೋದಿಯವರ ಬಗ್ಗೆ, ಅವರ ತಾಯಿಯ ತಲೆಕೆಟ್ಟ ಪಡ್ಡೆ ಹೈದನೊಬ್ಬ ಬಾಯಿಗೆ ಬಂದಂತೆ ಮಾತನಾಡುವಾಗ ತಡೆಯಬೇಕಿತ್ತು. ಆದರೆ ಇವರಿಗೆ ಮೋದಿಯವರ ಮೇಲೆ ಇರುವುದು ವಿರೋಧವಲ್ಲ, “ದ್ವೇಷ”. ಇವರ ದ್ವೇಷ ಮೋದಿಯವರ ಮೇಲೆ ಮಾತ್ರ ಸೀಮಿತವಾಗಿಲ್ಲ, ಮೋದಿಯವರನ್ನು ಗೆಲ್ಲಿಸಿದ ಈ ದೇಶದ ಮೇಲೂ ಇವರೀಗ ದ್ವೇಷ ಕಾರುತ್ತಿದ್ದಾರೆ. ಅಂತರರಾಷ್ಟ್ರೀಯ ಕಳ್ಳರ ಬೆಂಬಲಪಡೆದು ದೇಶದ ಹೊರಗಡೆಯೂ ಭಾರತಕ್ಕೆ ಕೆಟ್ಟ ಹೆಸರುತರುವ ಮಾಫಿಯಾವನ್ನು ಇವರು ಹುಟ್ಟುಹಾಕಿದ್ದಾರೆ.

ಹಾಗಾಗಿ, ಈ ಕಾಕ-ಗಂಜಿಗಿರಾಕಿಗಳ ಸುಳ್ಳುಗಳು, ಹೇಟ್ ಕ್ಯಾಂಪೇನ್ ಗಳನ್ನು ವಿರೋಧಿಸಿ ನಿಲ್ಲಬೇಕಿರುವುದು, ಪ್ರತಿಯೊಬ್ಬ ಭಾರತೀಯನ ಕರ್ತವ್ಯವೂ ಹೌದು. ಪ್ರಗತಿಪರ ಫ್ಯಾಸಿಸ್ಟುಗಳಿಂದ ಈ ದೇಶದ ಪ್ರಜಾಪ್ರಭುತ್ವವನ್ನು ಕಾಪಾಡುವ ಈ ಚಳವಳಿಯನ್ನು ಭಾರತದ ಬೌದ್ಧಿಕ ಸ್ವಾತಂತ್ರ್ಯ ಚಳವಳಿಯೆಂದೇ ತಿಳಿಯಿರಿ. ಸ್ವಾತಂತ್ರ್ಯ ಹೋರಾಟ, ತುರ್ತು ಪರಿಸ್ಥಿತಿಯ ಹೋರಾಟದಲ್ಲಿ ನಾವೆಲ್ಲ ಪಾಲ್ಗೊಳ್ಳದಿರಬಹುದು. ಆದರೆ ಈಗ ನಮ್ಮ ಪಾಲಿಗೆ ಅಂತಹುದೇ ಪುಣ್ಯ ಕಾರ್ಯ ಮಾಡುವ ಸಮಯವೊದಗಿ ಬಂದಿದೆ. ಇನ್ನೇಕೆ ತಡ, ಗಂಜಿಗಿರಾಕಿಗಳ ಸುಳ್ಳಿನ ಕೋಟೆಗೆ ಲಗ್ಗೆಯಿಡೋಣ ಬನ್ನಿ…

4 ಟಿಪ್ಪಣಿಗಳು Post a comment
  1. UVK
    ಸೆಪ್ಟೆಂ 20 2017

    ಉತ್ತಮ ಲೇಖನ as usual from ಶ್ರೀ.ರಾಕೇಶ್ ಶೆಟ್ಟಿ. . ದೊಡ್ಡ ಕಾಮಿಡಿ ಏನೆಂದರೆ, ಇಂಗ್ಲಿಷ್ ಚಾನೆಲ್ ನಲ್ಲೂ, ಗೌರಿ ಅವರನ್ನು ಬುದ್ಧೀಜ್ಜೀವಿ ಎಂದು ಕರೆಯುತ್ತಿರುವುದು. ಹೇಗೆ ಕರೆದವರು ಲಂಕೇಶ್ ಪತ್ರಿಕೆಯನ್ನು ಒಮ್ಮೆಯೂ ಓಡಾಡಿರುವುದು. Below belt ಪತ್ರಿಕೋದ್ಯಮ ಮಾಡಿದವರು ಇಂದು ಬುದ್ಧಿಜೀವಿಗಳು.

    ಉತ್ತರ
    • ಮಹೇಶ್
      ಸೆಪ್ಟೆಂ 20 2017

      ಬುದ್ಧಿಜೀವಿ ಪದಕ್ಕೆ ಇಂದು ನಯಾಪೈಸೆ ಬೆಲೆಯಿಲ್ಲ ಬಿಡಿ

      ಉತ್ತರ
  2. SalamBava
    ಸೆಪ್ಟೆಂ 23 2017

    Same old wine in new bottle by Rakesh. He doesn’t have guts to write even one line admitting or condemning failures of NaMo government. We’re heading towards disaster in economy according to all economists including RSS’s own Dr. Subramaniam Swamy. Yet Rajesh is busy hunting secular progressive activists. Shame!

    ಉತ್ತರ
    • sudarsakkat@yahoo.com
      ಸೆಪ್ಟೆಂ 23 2017

      It is an article on Sickulars. Confine your comment just for that topic.

      ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments