ಜನರಕ್ಷಾ ಯಾತ್ರೆ : ಕಮ್ಯುನಿಸ್ಟರ ಭದ್ರಕೋಟೆಯಲ್ಲಿ ಕಂಪನ
– ಅಂಜಲಿ ಜಾರ್ಜ್ ಮತ್ತು ಜಯಶಂಕರ್
ಮೂಲ ಲೇಖನ : https://swarajyamag.com/politics/kannurs-jana-raksha-yatra-turning-the-tide-on-the-communists
ಪಿಣರಾಯಿ, ಕೇರಳದ ಮಾರ್ಕ್ಸಿಸ್ಟರಿಗೆ ಬಹಳ ಪ್ರಮುಖವಾಗಿರುವ ಒಂದು ಸಣ್ಣ ಗ್ರಾಮ. ೧೯೩೯ರಲ್ಲಿ ಪಿಣರಾಯಿಗೆ ಸಮೀಪವಿರುವ ಪರಪ್ಪುರಂ ಎಂಬ ಸ್ಥಳದಲ್ಲಿ ಕಮ್ಯುನಿಸ್ಟರು ತಮ್ಮ ಕಾರ್ಯಚಟುವಟಿಕೆಯನ್ನು ಮೊದಲ ಬಾರಿಗೆ ಆರಂಭಿಸಿದರು. ಅಂದಿನಿಂದ ಇಂದಿನವರೆಗೆ ಪಿಣರಾಯಿ ಕೇರಳದ ಕಮ್ಯುನಿಸ್ಟರ ಭದ್ರಕೋಟೆ ಎಂದೇ ಕರೆಯಲ್ಪಡುತ್ತದೆ. ಒಂದು ಕಾಲದಲ್ಲಿ ಕೇವಲ ಕೆಂಪುದ್ವಜಗಳಷ್ಟೇ ಹಾರಾಡುತ್ತಿದ್ದ ಪ್ರದೇಶ ಇದಾಗಿತ್ತು. ಕಮ್ಯುನಿಸ್ಟ್ ಪಾರ್ಟಿಯ ಹತೋಟಿಯಲಿದ್ದ ಈ ಗ್ರಾಮದಲ್ಲಿ ವಿರೋಧಕ್ಕೆ ಆಸ್ಪದವೇ ಇರಲಿಲ್ಲ. ವಿರೋಧಿ ಧ್ವನಿಗಳನ್ನು ಯಾವುದೇ ಕರುಣೆಯಿಲ್ಲದೆ ಮೆಟ್ಟಿಹಾಕಲಾಗುತ್ತಿತ್ತು. ಬಿಜೆಪಿ ಹಾಗು ಸಂಘದ ಕಾರ್ಯಕರ್ತರಾದ ಹುತಾತ್ಮ ಉತ್ತಮನ್ ಹಾಗು ಅವರ ಮಗ ಹುತಾತ್ಮ ರೆಮಿತ್ ರನ್ನು ಇದೇ ಕಮ್ಯುನಿಸ್ಟರು ಕೊಂದದ್ದು ೧೪ ದಿನಗಳ ಜನರಕ್ಷಾಯಾತ್ರೆಗೆ ಮುನ್ನುಡಿ ಬರೆಯಿತು. ಕಮ್ಯುನಿಸ್ಟರು ಮಾಡಿರುವ ರಾಜಕೀಯ ಹತ್ಯೆಗಳನ್ನು ಎತ್ತಿ ತೋರಿಸುತ್ತಿರುವ ಈ ಯಾತ್ರೆ ಕೆಲವು ದಿನದ ಹಿಂದೆ ಪಿಣರಾಯಿ ಗ್ರಾಮವನ್ನು ಪ್ರವೇಶಿಸಿ ಮುಂದುವರೆಯಿತು. ಕೇರಳದ ರಾಜಕೀಯ ಚರಿತ್ರೆಯಲ್ಲಿ ಇದೊಂದು ಮಹತ್ತರ ತಿರುವು
೧೯೭೭ರ ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದ ಸಂಧರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಾಯಕತ್ವವನ್ನು ಕಂಡ ಬಹಳಷ್ಟು ಮಾರ್ಕ್ಸಿಸ್ಟ್ ನಾಯಕರು ಮತ್ತು ಕಾರ್ಯಕರ್ತರು ಸಂಘವನ್ನು ಸೇರಿಕೊಂಡರು. ಇದಕ್ಕೆ ಬಹುಮುಖ್ಯವಾಗಿ ಎರಡು ಕಾರಣಗಳಿದ್ದವು. ಮೊದಲನೆಯದ್ದು, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಭಾರತೀಯ ಕಮ್ಯುನಿಸ್ಟ್ ಪಾರ್ಟಿ (ಸಿಪಿಐಎಂ) ಕುಯುಕ್ತಿಯಿಂದ ಕಾಂಗ್ರೆಸ್ಸಿನ ಜೊತೆ ಸೇರಿಕೊಂಡು ಸರಕಾರ ರಚಿಸಿತ್ತು ಹಾಗು ಎರಡನೆಯದಾಗಿ, ಸಂಘ ಈ ಹೋರಾಟದ ಮುಂಚೂಣಿಯಲ್ಲಿದ್ದು,ಇಂದಿರಾ ಗಾಂಧಿಯನ್ನು ಎದುರಿಸುವ ಸಾಹಸ ಮಾಡಿತ್ತು, ಇದರ ಫಲ ಸ್ವರೂಪವಾಗಿ ಸಾವಿರಾರು ಸ್ವಯಂಸೇವಕರು ಬಂಧನಕ್ಕೆ ಒಳಗಾಗಿದ್ದರು.. ತಮ್ಮ ನಾಯಕರ ಹೊಣೆಗೇಡಿತನ ಹಾಗು ಕಪಟತನದಿಂದ ಬೇಸತ್ತ ಜನರನ್ನು ಸ್ವಯಂಸೇವಕ ಸಂಘದ ಸನ್ನದ್ಧತೆ ಹಾಗೂ ಜವಾಬ್ದಾರಿಯುತ ನಡವಳಿಕೆ ಆಕರ್ಷಿಸಿತು.
ಎಲ್ಲ ಕಮ್ಯುನಿಸ್ಟ್ ಬಾಹುಳ್ಯದ ಪ್ರದೇಶದಂತೆ ಇಲ್ಲಿಯೂ ಕೂಡಾ ಮಾರ್ಕಿಸ್ಟರು ಪ್ರತಿರೋಧ ತೋರಿದ ಕಾರ್ಯಕರ್ತರ ವಿರುದ್ಧ ರೊಚ್ಚಿಗೆದ್ದರು. ಆ ಪ್ರದೇಶದಲ್ಲಿ RSS ಸಂಘಟನೆಯನ್ನು ನಾಶಮಾಡಲೆಂದು ಸ್ಥಳೀಯ ಸಂಘಟನೆಯ ಪ್ರಬಲ ನಾಯಕರನ್ನು ಗುರಿಯಾಗಿಸಿ ಅವರನ್ನು ಹತ್ಯೆಗೈಯುವ ಕೆಲಸಕ್ಕೆ ಕಮ್ಯುನಿಸ್ಟರು ಕೈ ಹಾಕಿದರು. ೧೯೭೭ರಿಂದ ೧೯೮೦ರ ಮಧ್ಯೆ ೧೬ ಸಂಘದ ಸ್ವಯಂಸೇವಕರನ್ನು ಕ್ರೂರವಾಗಿ ಹತ್ಯೆಗೈಯ್ಯಲಾಯಿತು. ಸೆಪ್ಟೆಂಬರ್ ೨,೧೯೭೮ ಪಿಣರಾಯಿಯಿಂದ ಆರು ಕಿಲೋಮೀಟರ್ ದೂರದಲ್ಲಿ, ಶಾಖೆ ನಡೆಸುತ್ತಿದ್ದ ಸಂಧರ್ಭದಲ್ಲಿ, ಯುವ ಸ್ವಯಂಸೇವಕ ಪಿ ಚಂದ್ರನ್ ಅವರನ್ನು ಭೀಕರವಾಗಿ ಹತ್ಯೆಗೆಯ್ಯಲಾಯಿತು. ಇದಾದ ಬೆನ್ನಿಗೆ ಬಹಳಷ್ಟು ಹಿಂಸಾಚಾರ ನಡೆಯಿತು. ಮಾರ್ಕ್ಸಿಸ್ಟ್ ಪಾರ್ಟಿಯ ಸದಸ್ಯರು ಸಂಘದ ಸ್ವಯಂಸೇವಕರನ್ನು ಗುರಿಯಿಟ್ಟು ಹತ್ಯೆ ಮಾಡಿ ತಮ್ಮ ಕ್ರೌರ್ಯವನ್ನು ಪ್ರದರ್ಶಿಸಿದರು.ಬಹಳಷ್ಟು ನಿಷ್ಠಾವಂತ ಸ್ವಯಂಸೇವಕರು ತಮ್ಮದೇ ಗ್ರಾಮದಿಂದ ನಿರಾಶ್ರಿತರಾದರು.
ಇದಾದ ಸ್ವಲ್ಪ ಸಮಯದ ನಂತರ ಸಂಘದ ಪ್ರಮುಖ ಪಿಣರಾಯಿ ಚಂದ್ರನ್ ತನ್ನ ಮನೆಗೆ ವಾಪಸಾದರು. ಅವರ ಮನೆ ಇಂದಿನ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮನೆಯಿಂದ ಕೆಲವೇ ಹಜ್ಜೆಗಳಷ್ಟು ದೂರವಿತ್ತು.ಇದು ಅಜ್ಞಾತವಾಸದಲ್ಲಿದ್ದ ಸ್ವಯಂಸೇವಕರಿಗೆ ಹೊಸ ಹುರುಪನ್ನು ನೀಡಿ ಅವರುಗಳೂ ತಮ್ಮ ಗ್ರಾಮ ಪಿಣರಾಯಿಗೆ ವಾಪಸು ಬರಲು ಪ್ರೇರಣೆ ನೀಡಿತು. ಆದರೆ ೧೯೮೦ರಲ್ಲಿ ಮತ್ತೊಬ್ಬ ಸಕ್ರಿಯ ಸ್ವಯಂಸೇವಕ ಪಿ ಸುರೇಂದ್ರನ್ ಅವರನ್ನು ಕಮ್ಯುನಿಸ್ಟರು ಹತ್ಯೆಗೈದರು. ಅಲ್ಲಿಗೆ ನಿಲ್ಲದ ಈ ಕ್ರೌರ್ಯ,ಸಂಘದ ಸದಸ್ಯರಿಂದ ಗೌರವಾಧಾರಪೂರ್ವಕವಾಗಿ “ಗುರು”ಎಂದು ಕರೆಯಲ್ಪಡುತ್ತಿದ್ದ ಚಂದ್ರನ್ ಅವರನ್ನು ೧೯೮೪ರಲ್ಲಿ ಹತ್ಯೆಗೈವಲ್ಲಿಗೆ ಬಂದು ನಿಂತಿತು. ಹೋರಾಟದ ಹಾಗು ವಿರೋಧವನ್ನು ಮಾಡುವ ತಮ್ಮ ಹಕ್ಕಿಗಾಗಿ, ಕಣ್ಣೂರಿನ ರಕ್ತಸಿಕ್ತ ನೆಲದಲ್ಲಿ ಬಹಳಷ್ಟು ಧೈರ್ಯಶಾಲಿ ಯುವಕರು ತಮ್ಮ ಪ್ರಾಣವನ್ನು ಅರ್ಪಿಸಿದರು. ಒಂದು ರಾಜಕೀಯ ಸಿದ್ದಾಂತಕ್ಕಾಗಿ ದೇಶದ ಬೇರೆ ಯಾವುದೇ ಭಾಗದಲ್ಲಿ ಇಷ್ಟೊಂದು ಮುಗ್ದ ಜೀವಗಳು ಬಲಿಯಾಗಿಲ್ಲ.
ಇಂದು, ಅದೇ ಕಣ್ಣೂರಿನ ಬೀದಿಗಳಲ್ಲಿ, ಸಾವಿರಾರು ಬಿಜೆಪಿ ಕಾರ್ಯಕರ್ತರು ಪಾದಯಾತ್ರೆಯ ಮುಖಾಂತರ ಸಾಗಿದ್ದಾರೆ,ಕಮ್ಯುನಿಷ್ಟರು ಅಸಹಾಯಕರಾಗಿ ನೋಡುತ್ತಾ ನಿಂತಿದ್ದಾರೆ..
ಬಿಜೆಪಿಗೆ ಯಾತ್ರೆಯ ಪ್ರಾಮುಖ್ಯತೆ
ಭಾರತೀಯ ಜನತಾ ಪಾರ್ಟಿ (ಬಿಜೆಪಿ) ದೇಶದಾದ್ಯಂತ ರಾಜಕೀಯ ದ್ವೇಷ ಹಾಗೂ ಅಸಹಿಷ್ಣುತೆಯ ಬಲಿಪಶುವಾಗಿದೆ,ಅದರಲ್ಲಿಯೂ ಕೇರಳ ಬಿಜೆಪಿ ದೇಶದಲ್ಲೇ ಮೊದಲನೇ ಸ್ಥಾನದಲ್ಲಿದೆ.ಕಮ್ಯುನಿಸ್ಟರು ಕೇರಳದಲ್ಲಿ ಕಾಂಗ್ರೆಸ್ಸಿನ ಪ್ರಮುಖ ನಾಯಕರಿದ್ದಗ್ಯೂ ಕಾಂಗ್ರೆಸ್ ಸದಸ್ಯರನ್ನೂ ಹತ್ಯೆಗೈದಿದ್ದಾರೆ. ಆದರೆ ಕಾಂಗ್ರೆಸ್ ನಾಯಕತ್ವ ಕಮ್ಯುನಿಸ್ಟರ ಕ್ರೌರ್ಯವನ್ನು ಎತ್ತಿ ತೋರಿಸುವ ಕೆಲಸಕ್ಕೆ ಕೈ ಹಾಕಲೇ ಇಲ್ಲ. ಆದರೆ ಲೋಕಸಭೆಯಲ್ಲಿ ಕೇರಳ ಬಿಜೆಪಿಯ ಯಾವುದೇ ಸಂಸದರಿಲ್ಲವಾದರೂ,ಭಾರತದ ಇತರ ಭಾಗದ ಸಂಸದರು ಕೇರಳದ “ಕೆಂಪು” ಉಗ್ರರು ನಡೆಸಿದ ಹತ್ಯಾಕಾಂಡವನ್ನು ಜನರ ಮುಂದಿಡಲು ಯಾವ ಹಿಂಜರಿಕೆಯನ್ನು ತೋರಲಿಲ್ಲ.
ಸಂಸತ್ತಿನಲ್ಲಿ, ಸಂಸದೆ ಮೀನಾಕ್ಷಿ ಲೇಖಿ, ಸತತ ಐದು ಬಾರಿ ಕೇರಳದಲ್ಲಿ ಸಿಪಿಎಂ ಉಗ್ರರಿಂದ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಗಮನ ಸೆಳೆದರು. ಈಗ ಬಿಜೆಪಿಯ ರಾಷ್ಟ್ರೀಯ ನಾಯಕರು ಕಣ್ಣೂರಿನಲ್ಲಿ ಬೃಹತ್ ಪಾದಯಾತ್ರೆಯನ್ನು ಸಂಘಟಿಸುವ ಮೂಲಕ ಈ ದೌರ್ಜನ್ಯಕ್ಕೆ ಕೊನೆಹಾಡಿ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಕಾಳಜಿಯನ್ನು ತೋರಿಸಿದ್ದಾರೆ. ಕಾಲ ಕಾಲಕ್ಕೆ ಬಿಜೆಪಿ ತಾನು ಉಳಿದ ಪಕ್ಷಗಳಿಗಿಂತ ವಿಭಿನ್ನ ಪಕ್ಷ ಎಂದು ನಿರೂಪಿಸುತ್ತಾ ಬಂದಿದೆ. ಕೇವಲ ಮತಕ್ಕಾಗಿ ರಾಜಕೀಯ ನಡೆಸುವ ಪಕ್ಷವಲ್ಲ ಎಂಬುದನ್ನು ತೋರಿಸಿಕೊಟ್ಟಿದೆ. ತಾನು ಜನರ ಯೋಗಕ್ಷೇಮದ ಕುರಿತಾದ ಜವಾಬ್ದಾರಿಯನ್ನು ಹೊಂದಿದ ಪಕ್ಷ ಎಂಬುದನ್ನು ಸಾಬೀತುಪಡಿಸಿದೆ.ಚುನಾವಣೆ ಗೆಲ್ಲುತ್ತದೋ ಬಿಡುತ್ತದೋ ಕಾರ್ಯಕರ್ತ ಬಹಳ ಮುಖ್ಯ ಎಂಬುದನ್ನು ಸಾರಿ ಹೇಳುತ್ತಿದೆ.
ರಾಜ್ಯ ಬಿಜೆಪಿ ಅಧ್ಯಕ್ಷ ಕುಮ್ಮನಮ್ ರಾಜಶೇಖರನ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಇನ್ನುಳಿದ ಪ್ರಮುಖ ರಾಷ್ಟ್ರೀಯ ನಾಯಕರು ಪಕ್ಷದ ಕಾರ್ಯಕರ್ತರೊಂದಿಗೆ ಕಿಲೋಮೀಟರ್ ಗಟ್ಟಲೆ ಪಾದಯಾತ್ರೆ ನಡೆಸಿದರು. ಸ್ಥಳೀಯ ನಾಯಕರಿಗೆ ಹಾಗು ಕಾರ್ಯಕರ್ತರಿಗೆ ಇದೊಂದು ಹೊಸ ಅನುಭವವನ್ನೇ ನೀಡಿದೆ. ರಾಷ್ಟ್ರೀಯ ನಾಯಕರೆಂದರೆ ವಿಮಾನದಲ್ಲಿ ಬಂದಿಳಿದು, ಸಭೆಗಳನ್ನು ಉದ್ದೇಶಿಸಿ ಮಾತನಾಡಿ ವಾಪಸು ಹೋಗುವ ನಾಯಕರನ್ನು ಕಂಡಿದ್ದ ಕಾರ್ಯಕರ್ತರಿಗೆ ನಾಯಕರು ಅವರೊಂದಿಗೆ ಹೆಜ್ಜೆ ಹಾಕಿದ್ದು ಹೊಸ ಹುರುಪನ್ನೇ ನೀಡಿದೆ.
ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರ ಹೊಸ ದೃಷ್ಟಿಕೋನ ಮತ್ತು ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಅವರ ಸಂಘಟನಾ ಕಾರ್ಯತಂತ್ರಗಳು ಯಾತ್ರೆಯನ್ನು ಯಶಸ್ವಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ.ಕರ್ನಾಟಕದ ಸಂಘಟನಾ ಚಟುವಟಿಕೆಗಳ ಮುಖ್ಯಸ್ಥನಾಗಿ ಸಂತೋಷ್ ಅವರ ಅನುಭವಗಳು, ಅವರನ್ನು ಕೇರಳದ ಅಕ್ಕ ಪಕ್ಕದ ಪ್ರದೇಶಗಳಿಂದ ಅನೇಕ ನಾಯಕರನ್ನು ಕರೆತಂದು ಸಂಘಟನೆಯ ಕೆಲಸದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲು ಸಹಾಯ ಮಾಡಿತು. ನೆರೆಯ ರಾಜ್ಯದೊಂದಿಗೆ ನಡೆದ ಈ ಅರ್ಥಪೂರ್ಣ ಸಮನ್ವಯ ಪಾರ್ಟಿಯ ಮೇಲೆ ಬಹಳಷ್ಟು ಒಳ್ಳೆಯ ಪ್ರಭಾವವನ್ನು ಬೀರಿದೆ. ಮಲಬಾರ್ ಪ್ರದೇಶದ ನಾಡಿಮಿಡಿತ ಅರ್ಥಮಾಡಿಕೊಳ್ಳುವ ದಕ್ಷಿಣ ಕನ್ನಡದ ಸಂಸದ ನಳಿನ್ ಕುಮಾರ್ ಕಟೀಲ್ ಅವರಂತಹ ಹಿರಿಯ ನಾಯಕ ಇಲ್ಲಿನ ಸಂಘಟನಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದು ಸಿಪಿಐ (ಎಂ) ನ ಕಣ್ಣೂರು ನಾಯಕತ್ವಕ್ಕೆ ಬಿಸಿತುಪ್ಪವಾಗಿದೆ
ಇದಲ್ಲದೆ, ಮಾರ್ಕ್ಸಿಸ್ಟರಿಗೆ ತಲೆನೋವಾಗಿ ಪರಿಣಮಿಸಿರುವುದು ಕಣ್ಣೂರು ಜಿಲ್ಲೆಯ ಕಾರ್ಯದರ್ಶಿ ಜಯರಾಜನ್ ವಿರುದ್ಧ ಹೂಡಲಾದ ಮೊಕದ್ದಮೆಗಳು.. ಆತನ ವಿರುದ್ಧ ದಾಖಲಾದ ಮೊಕ್ಕದ್ದಮೆಗಳ ವಿಚಾರಣೆ ಮುಗಿಯುತ್ತಾ ಬಂದಿದ್ದು ಇನ್ನು ಕೆಲವೇ ದಿನಗಳಲ್ಲಿ ಕಂಬಿ ಎಣಿಸಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ. ಮುಖ್ಯವಾಹಿನಿಯ ಮಾಧ್ಯಮಗಳು ಕೇರಳದಲ್ಲಿ ಕಮ್ಯುನಿಸ್ಟರ ಹಿಂಸಾತ್ಮಕ ರಾಜಕೀಯವನ್ನು ಮುಚ್ಚಿಡುವ ಪ್ರಯತ್ನ ಮಾಡಿದರೂ,ರಾಜ್ಯದ ಒಳಗಿನಿಂದ ಹಾಗೂ ಹೊರಗಿನಿಂದ ಬಿಜೆಪಿ ಮುಖಂಡರ ನಿರಂತರ ಪ್ರಯತ್ನಗಳು ಸಿಪಿಎಂನ ಧೈರ್ಯ ಕುಂದುವ ಹಾಗೆ ಮಾಡಿದೆ.ಕಣ್ಣೂರಿನ ಮೂಲೆ ಮೂಲೆಗಳಲ್ಲಿ ನಡೆದ ಜನರಕ್ಷಾಯಾತ್ರೆಯಲ್ಲಿ ಸೇರಿದ ಜನಸ್ತೋಮ ಕೇರಳದ ಜನರಿಗೆ ದೇಶದ ಆಳ್ವಿಕೆ ಮಾಡುತ್ತಿರುವ ಪಕ್ಷದ ಮೇಲೆ ನಂಬಿಕೆ ಹೆಚ್ಚಿರುವುದನ್ನು ಶ್ರುತಪಡಿಸುತ್ತದೆ .
ಘೋಷಣೆಯ ಸ್ವರೂಪದಲ್ಲಾದ ಬದಲಾವಣೆ
ಕೇರಳ ಒಂದು ರೀತಿಯ ಸಾಮಾಜಿಕ ಪ್ರಕ್ಷುಬ್ಧತೆಯ ವಿಚಿತ್ರ ಪರಿಸ್ಥಿತಿಯ ಮೂಲಕ ಹಾದುಹೋಗುತ್ತಿರುವ ಸಂಧರ್ಭದಲ್ಲಿ ಈ ಯಾತ್ರೆ ಪ್ರಾರಂಭವಾಯಿತು. ಲವ್ ಜಿಹಾದ್ ಕೇರಳದ ಸಮಾಜವನ್ನು ಅಲ್ಲಾಡಿಸಿದಂತಹ ಸಂಧರ್ಭದಲ್ಲಿ, ಯಾತ್ರೆಯ ಒಂದು ದಿನ ಮುಂಚೆ ರಾಜ್ಯ ಬಿಜೆಪಿ ಅಧ್ಯಕ್ಷ ಲವ್ ಜಿಹಾದ್ ನ ಸಂತ್ರಸ್ತೆ ಅಖಿಲಾಳನ್ನು ಭೇಟಿ ಮಾಡಿದರು, ಅಖಿಲಾಳ ಮತಾಂತರ ಹಾಗು ವಿವಾಹದ ವಿವಾದ ಮೊದಲಿಂದಲೇ ನ್ಯಾಯಾಲದ ಮೆಟ್ಟಿಲು ಏರಿತ್ತು. ಈ ಪರಿಸ್ಥಿತಿಯಲ್ಲಿ ಜನ ರಕ್ಷಾ ಯಾತ್ರೆ ಜಿಹಾದಿ ಉಗ್ರಗಾಮಿತ್ವವನ್ನು ತನ್ನ ಯಾತ್ರೆಯ ಪ್ರಮುಖ ಅಂಶವಾಗಿ ತೆಗೆದುಕೊಂಡಿತು. ಎರಡನೆಯ ದಿನ ಯೋಗಿ ಆದಿತ್ಯನಾಥ್ ಯಾತ್ರೆಯಲ್ಲಿ ಪಾಲ್ಗೊಂಡಿದ್ದು ಕೇರಳದಲ್ಲಿ ಕೇಸರಿ ರಾಜಕೀಯಕ್ಕೆ ಬಿಜೆಪಿ ಬರುವ ಅಂಶವನ್ನು ಸ್ಪಷ್ಟಪಡಿಸಿತ್ತು. ಲವ್ ಜಿಹಾದ್ ಅನ್ನು ವಿವರಿಸಲು ರಾಮಾಯಣದ ಮಾರೀಚನ ಉದಾಹರಣೆಯನ್ನು ತೆಗೆದುಕೊಳ್ಳುವ ಮೂಲಕ,ಬಿಜೆಪಿ ಹಿಂದೂಗಳನ್ನು ಕಾಪಾಡಲು ತಾನು ಹಿಂದೆಂದೂ ಮಾಡದ ರೀತಿಯ ಪ್ರಯತ್ನ ಮಾಡಿದೆ.
ಅಖಿಲಾಳ ತಂದೆ ಅಶೋಕನ್, ಅವರ ಮಗಳು ಲವ್ ಜಿಹಾದ್ ಗೆ ಬಲಿಯಾದ ಕುರಿತಾಗಿ ತಾನೊಬ್ಬ ಕಮ್ಯುನಿಸ್ಟನಾಗಿದ್ದದ್ದರಿಂದಲೇ ತನ್ನ ಮಗಳು ಲವ್ ಜಿಹಾದ್ ಗೆ ಬಲಿಯಾದಳು ಎಂದು ವಿಷಾದ ವ್ಯಕ್ತ ಪಡಿಸಿದರು. ಕೇರಳದ ಹಿಂದುಗಳು ತಮ್ಮ ಸುತ್ತಲಿನ ಭೀಕರ ಘಟನೆಗಳ ಕುರಿತು ಆಲೋಚಿಸಲಾರಂಭಿಸಿದ್ದಾರೆ.ಹಿಂದೂ ಹುಡುಗಿಯನ್ನು ಹಕ್ಕುಗಳು ಮತ್ತು ಸ್ವಾತಂತ್ರ್ಯದ ಹೆಸರಿನಲ್ಲಿ ಉಗ್ರನೊಂದಿಗೆ ಕಳುಹಿಸಲು ವಿವಿಧ ಕಮ್ಯುನಿಸ್ಟ್ ಮುಖಂಡರು ಮತ್ತು ಎಡಪಂಥೀಯರ ಬುದ್ಧಿಜೀವಿಗಳು ಉದ್ದೇಶಪೂರ್ವಕ ಪ್ರಯತ್ನಗಳು ಮಾಡಿದ್ದಾರೆ ಎಂಬುದು ಕಮ್ಯುನಿಸ್ಟ್ ಪಕ್ಷದ ಹಿಂದು ಬೆಂಬಲಿಗರಲ್ಲಿ ದೊಡ್ಡ ಅಸಮಾಧಾನವನ್ನು ಸೃಷ್ಟಿಸಿದೆ.
ಕಮ್ಯುನಿಸ್ಟ್ ಪಕ್ಷ ಮುಸ್ಲಿಂ ಸಮುದಾಯದ ನಾಯಕರುಗಳಿಗೆ ನಮಾಜ್ ಮಾಡಲು ವಿಶೇಷ ಸೌಲಭ್ಯಗಳನ್ನು ಕಲ್ಪಿಸಿದೆ.ಕಮ್ಯುನಿಸ್ಟ್ ಪಕ್ಷ ಮತ್ತು ಅದರ ಮುಖಂಡರು ಪೋಪ್ ಮತ್ತು ಪಾದ್ರಿಗಳು ಎದುರು ಶಿರಬಾಗಿ, ಮೊಣಕಾಲು ಊರುತ್ತಾರೆ.ಆದರೆ ಅದೇ ಸಂಘಟನೆಯ ಕಾಮ್ರೆಡ್ ಗಳು,ಗುರುವಾಯೂರ್ ದೇವಸ್ಥಾನಕ್ಕೆ ಭೇಟಿ ನೀಡಿದ ಹಿಂದೂ ಸಚಿವ ಕದಕಂಪಲ್ಲಿ ಸುರೇಂದ್ರನ್ ಮತ್ತು ರಿತುಬ್ರತಾ ಬ್ಯಾನರ್ಜಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತಾರೆ. ಕೆಲವು ವರ್ಷಗಳ ಹಿಂದೆ, ಗಣಪತಿ ಹವನ್ ಮತ್ತು ಇನ್ನಿತರೆ ಹಿಂದೂ ಧಾರ್ಮಿಕ ಆಚರಣೆಗಳನ್ನು ನಡೆಸದಂತೆ ಪಕ್ಷವು ತನ್ನ ನಾಯಕರನ್ನು ನಿಷೇಧಿಸಿತು. ಆದರೆ, ಕ್ರಿಶ್ಚಿಯನ್ ನಾಯಕರು ಚರ್ಚುಗಳಿಗೆ ಹೋಗಲು ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಒಪ್ಪಿಗೆ ನೀಡಲಾಗಿದೆ.ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಪಕ್ಷದ ಈ ದ್ವಂದ್ವ ಹಿಂದೂ ಕಾಮ್ರೆಡ್ಗಳನ್ನು ರೊಚ್ಚಿಗೆಬ್ಬಿಸಿದೆ.
ಬಿಜೆಪಿ ಈ ಸಂಧರ್ಭವನ್ನು ಗುರುತಿಸಿ ಹಿಂದುತ್ವದ ಪರವಾದ ಘೋಷಣೆಗಳನ್ನು ಕೂಗುತ್ತಿದೆ. ಬಹುಸಂಖ್ಯಾತ ಸಮುದಾಯದ ಸಮಸ್ಯೆಗಳ ಕುರಿತು ಮಾತನಾಡಲು ಮತ್ತು ಅದನ್ನು ಪರಿಹರಿಸಲು ಬಿಜೆಪಿ ಸನ್ನದ್ಧವಾಗಿರುವುದು. ಹಿಂದುತ್ವದ ವಿರೋಧಿಗಳಾದ ಮಾಧ್ಯಮವನ್ನು ಮೀರಿ ಜನರಕ್ಷಾ ಯಾತ್ರೆ ಜನಸಾಮಾನ್ಯರ ಬಳಿ ತಲುಪುತ್ತಿದೆ.. ಅವರದ್ದೇ ಸಮಸ್ಯೆಗಳ ಕುರಿತಾಗಿ ಬಿಜೆಪಿ ಮಾತನಾಡುತ್ತಿರುವುದರಿಂದ ಜನರ ಭಾವನೆಗಳನ್ನು ತಟ್ಟುತ್ತಿದೆ.. ಮಲಯಾಳಿ ಮಾಧ್ಯಮ ಇಡೀ ಯಾತ್ರೆಯನ್ನು ಜನರಿಗೆ ತಲುಪದಂತೆ ಮಾಡಿದರೂ ಎಡಪಂಥಿಯರ ಗಲಿಬಿಲಿ ವಿದ್ಯುನ್ಮಾನ ಹಾಗೂ ಮುದ್ರಣ ಮಾಧ್ಯಮ ಎರಡರಲ್ಲೂ ಕಂಡುಬರುತ್ತಿದೆ. ಮಾಧ್ಯಮ ತನ್ನ ಸಂಪೂರ್ಣ ಶಕ್ತಿಯನ್ನು RSS ಹಾಗೂ ಯೋಗಿ ಆದಿತ್ಯನಾಥರ ಅವಹೇಳನ ಮಾಡುವುದಕ್ಕೆ ಸೀಮಿತವಾಗಿದೆ..
ಸಿಪಿಎಂ ನಾಯಕರು ಪದೇಪದೇ ಜನರಕ್ಷಾ ಯಾತ್ರೆಗೆ ತಾವು ಹೆದರುವುದಿಲ್ಲ ಎಂದು ಹೇಳಿದರೂ,ಯಾತ್ರೆಯ ಪಥದಲ್ಲಿ ರಾಷ್ಟ್ರೀಯ ಬಿಜೆಪಿ ಮುಖಂಡರನ್ನು ಗಮನದಲ್ಲಿಟ್ಟುಕೊಂಡು ಬ್ಯಾನರ್ ಹಾಗೂ ಆಂಗ್ಲ ಭಾಷೆಯ ಫಲಕಗಳನ್ನು ನೆಟ್ಟಿವೆ. ಈ ಫಲಕ ಹಾಗು ಬ್ಯಾನರ್ ಗಳು ಕೇರಳದ ಕಮ್ಯುನಿಷ್ಟ್ ಪಕ್ಷಕ್ಕೆ ಸಂಬಂಧಿಸಿದ್ದವಾಗಿದ್ದರೆ ಅವುಗಳು ಯಥಾ ಪ್ರಕಾರ ಮಲಯಾಳಂನಲ್ಲಿ ಇರುತ್ತಿದ್ದವು. ಆದಾಗ್ಯೂ, ಕೇರಳದ ಹಿಂದೂ ಇತಿಹಾಸದಲ್ಲಿ ಆದಿತ್ಯನಾಥರ ಭಾಷಣವು ಬಹಳ ಮಹತ್ವವನ್ನು ಪಡೆದಿದೆ. ಕೇರಳ ಮಹರ್ಷಿ ಪರಶುರಾಮನಿಂದ ನಿರ್ಮಿತವಾಗಿದ್ದು ಅನ್ನುವ ಪ್ರತೀತಿ ಇದೆ. ಇದನ್ನು ಗುರುತಿಸಿ ಮಾತನಾಡಿದ ಉತ್ತರಪ್ರದೇಶದ ಮುಖ್ಯಮಂತ್ರಿಗಳು ಈ ಪ್ರದೇಶದ ಮೌಲ್ಯವನ್ನು ಶ್ಲಾಘಿಸಿದರು.. ಕೇರಳದ ಮಹಾನ್ ಸಂತರರಾದ ಶ್ರೀ ಶಂಕರಚಾರ್ಯ, ಶ್ರೀ ನಾರಾಯಣ ಗುರು, ಚಟ್ಟಂಬಿ ಸ್ವಾಮಿ, ನಿತ್ಯಾನಂದ ಸ್ವಾಮಿ ಮತ್ತು ಮಾತಾ ಅಮೃತಾನಂದಮಯಿ ಮುಂತಾದ ಮಹಾನ್ ಗುರುಗಳು ಧರ್ಮದ ಬೆಳಕಲ್ಲಿ ವಿಶ್ವಕ್ಕೆ ನೀಡಿದ ಮಾರ್ಗದರ್ಶನವನ್ನು ಗುರುತಿಸಿ ಉಲ್ಲೇಖಿಸಿದರು.
ಸಂಸತ್ತಿಗೆ ಬಿಜೆಪಿಯ ಯಾವುದೇ ಸದಸ್ಯರನ್ನು ಕೇರಳ ಆಯ್ಕೆ ಮಾಡಿಲ್ಲವಾದರೂ, ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ‘ಬ್ರೇಕಿಂಗ್ ಇಂಡಿಯಾ’ದ ಸಾಲುಗಳಲ್ಲಿ’ ಕೇರಳ ಮಾಂಗೆ ಆಜಾದಿ’ಯಂತಹ ಘೋಷಣೆಗಳನ್ನು ಕಡೆಗಣಿಸಲಾಗುವುದಿಲ್ಲ ಎಂಬುದನ್ನು ಬಿಜೆಪಿ ಈ ಬೃಹತ್ ಯಾತ್ರೆಯನ್ನು ಆಯೋಜಿಸುವ ಮುಖಾಂತರ ಸ್ಪಷ್ಟಪಡಿಸಿದೆ.
ಜನ ರಕ್ಷಾ ಯಾತ್ರೆಯನ್ನು ಪ್ರಾರಂಭಿಸುವಾಗ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರು RSS -ಬಿಜೆಪಿ ಕಾರ್ಯಕರ್ತರ ರಾಜಕೀಯ ಕೊಲೆಗಳಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂಪೂರ್ಣ ಜವಾಬ್ದಾರ ಎಂದು ಘೋಷಿಸಿದ್ದರು.. ಕಮ್ಯುನಿಸ್ಟ್ ಪಕ್ಷದಿಂದ ನಿಯಂತ್ರಿಸಲ್ಪಟ್ಟಿರುವ ಕಣ್ಣೂರಿನ ಗ್ರಾಮಗಳು ಯಾರೇ ಹೊರಗಿನವರು ಮತ್ತು ಭಿನ್ನಾಭಿಪ್ರಾಯದವರನ್ನು ಒಳಗೊಳ್ಳುವಂತಿರಲಿಲ್ಲ. ಕೆಲವು ತಿಂಗಳುಗಳ ಹಿಂದೆ, ಮಾರ್ಕ್ಸಿಸ್ಟಗಳು ತಮ್ಮ ಮನೆಗಳನ್ನು ಮತ್ತು ಬೆಲೆಬಾಳುವ ವಸ್ತುಗಳನ್ನು ನಾಶಮಾಡಿದ್ದರಿಂದ ಬಿಜೆಪಿ ಕಾರ್ಯಕರ್ತರು ತಾತ್ಕಾಲಿಕ ಕ್ಯಾಂಪ್ನಲ್ಲಿ ಆಶ್ರಯ ಪಡೆಯಬೇಕಾಯಿತು. ಜನರಕ್ಷಾ ಯಾತ್ರೆಯು ಕಣ್ಣೂರಿನ ಹಳ್ಳಿಗಳಲ್ಲಿ ಕಮ್ಯುನಿಸ್ಟ್ ಪಕ್ಷದ ಅಧಿಕಾರಕ್ಕೆ ಹೆದರಿಕೆಯನ್ನುಂಟು ಮಾಡಿದೆ. ಛತ್ರಪತಿ ಶಿವಾಜಿ ಅವರ ಚಿತ್ರದೊಂದಿಗೆ ಕೇಸರಿ ಧ್ವಜಗಳು ಕಣ್ಣೂರಿನ ಪಟ್ಟಣಗಳಲ್ಲಿ ಹಾರುತ್ತಿವೆ.
ಈ ಜನರಕ್ಷಾ ಯಾತ್ರೆ ಕೇವಲ ಪ್ರಾರಂಭ – ಅನೇಕ ಮುಗ್ಧ ಜನರನ್ನು ಕೊಂದ ಕ್ರೂರ ರಾಜಕೀಯ ಐಡಿಯಾಲಜಿಯ ಅಂತ್ಯದ ಆರಂಭ.ಪಿಣರಾಯಿಯ ಮೂಲಕ ಯಾತ್ರೆಯನ್ನು ಮುನ್ನಡೆಸುವ ಉದ್ದೇಶ ಕೇವಲ ವಿಜಯನ್ ಗೆ ವಿರೋಧ ವ್ಯಕ್ತಪಡಿಸುವುದು ಮಾತ್ರವಲ್ಲ ಬದಲಾಗಿ ಪಿಣರಾಯಿ ಚಂದ್ರನ್ ಅವರಂತಹ ನಾಯಕರನ್ನು ನೆನಪಿಸಿಕೊಳ್ಳುವುದು ಮತ್ತು ಅವರಿಗೆ ಸಲ್ಲಬೇಕಾದ ಗೌರವವನ್ನು ಕೊಡುವುದೂ ಸಹ.