ಉತ್ತರ ಸಿಗದ ನನ್ನ ಪ್ರಶ್ನೆಗಳು
– ವಿದ್ಯಾ ಕುಲಕರ್ಣಿ
ಜಿಜ್ಞಾಸು, ಪ್ರಬುದ್ಧರ ಚಿಂತನೆ, ಕುಲುಮೆ, ನಿಲುಮೆ ಈ ಗುಂಪುಗಳಲ್ಲಿ ನಾನು ಕೆಲವು ಪ್ರಶ್ನೆಗಳನ್ನು ಕೇಳುತ್ತಲೇ ಬಂದಿದ್ದೇನೆ. ಅವುಗಳಿಗೆ ಯಾರೂ ಸಮರ್ಪಕ ಉತ್ತರ ಕೊಡದೇ ಪುನಃ ಬೇರೆ ಬೇರೆ ಪ್ರಶ್ನೆ ಕೇಳುತ್ತಲೇ ಹೋಗುತ್ತಾರೆ.
ನನ್ನ ಪ್ರಶ್ನೆಗಳಿಗೆ ಉತ್ತರಿಸಿ ಎಂದರೆ “ಉತ್ತರಿಸಿದ್ದೇನೆ. ನಿಮಗೆ ತಿಳಿಯದಿದ್ದರೆ ಏನು ಮಾಡಲಿ??” “ನಿಮಗೆ ಗ್ರಹಿಸುವ ಶಕ್ತಿ ಇಲ್ಲ ಏನು ಮಾಡಲಿ?” ಇತ್ಯಾದಿ ಹಾರಿಕೆಯ ಉತ್ತರ ಕೊಡುತ್ತಾರೆ. ಹಾಗಿದ್ದರೆ ನನ್ನ ಪ್ರಶ್ನೆಗಳಾದರೂ ಏನು??
ಪುನಃ ಅದೇ ಪ್ರಶ್ನೆಗಳನ್ನು ಕ್ರೋಢೀಕರಿಸಿ ನಂಬರ್ ಕೊಟ್ಟು ಕೇಳುತ್ತಿದ್ದೇನೆ. ಈಗಲಾದರೂ ಉತ್ತರಿಸುವ (ನಂಬರ್ ಪ್ರಕಾರ ಉತ್ತರಿಸುವ) ಸೌಜನ್ಯ ಯಾರಾದರೂ ತೋರಿಸುತ್ತೀರಾ??
೧) ಭಾರತದಲ್ಲಿ ಹಿಂದೂ ಅಂತಾ ಒಂದು ಧರ್ಮ( ಸೆಮೆಟಿಕ್ ಅರ್ಥದಲ್ಲಿ) ಸಾಮಾಜಿಕವಾಗಿ ಅಸ್ತಿತ್ವದಲ್ಲಿದೆಯಾ?? ( ಸಂವಿಧಾನಾತ್ಮಕ ಮಾನ್ಯತೆ ಪಡೆದ ಧರ್ಮ ಹಿಂದೂ ಅಂತಾ ಇದೆ. ಅದನ್ನು ಪ್ರಶ್ನಿಸುತ್ತಿಲ್ಲವೆಂದು ತಿಳಿಯಿರಿ.)
೨) ಇದ್ದರೆ ಹಿಂದೂ ಧರ್ಮದ ಪವಿತ್ರ ಗ್ರಂಥಗಳಾವುವು?? ಪುರೋಹಿತರಾರು?? ಧಾರ್ಮಿಕ ಸಂಸ್ಥೆಗಳಾವುವು?? ಧಾರ್ಮಿಕ ಕಾನೂನು ಗ್ರಂಥ ಯಾವುದು??
೩) ನೀವು ಮೇಲಿನ ಪ್ರಶ್ನೆಗೆ ಕೆಲವು ಹೆಸರು ಹೇಳುತ್ತೀರಿ. ಆದರೆ ಎಲ್ಲಾ ಹಿಂದುಗಳೆಂದು ಈಗ ಗುರುತಿಸುವವರಿಗೆ ಇವು ಪವಿತ್ರ ಗ್ರಂಥಗಳಾ? ಇವರೇ ಪುರೋಹಿತರಾ?? ಎಲ್ಲರೂ ಇದೇ ಧಾರ್ಮಿಕ ಕಾನೂನು ಓದಿ ನ್ಯಾಯ ತೀರ್ಮಾನಿಸಿದ್ದಾರಾ ಹಿಂದಿನ ದಿನಗಳಲ್ಲಿ??
೪) ಭಾರತದಲ್ಲಿ ಹಿಂದೂ ಅಂತಾ ಧರ್ಮವೇ ಇಲ್ಲ ಅಂತಾ ಹೇಳಿದ ಮೇಲೆ ಅದರ ಸಂವಿಧಾನ ಮಾನ್ಯತೆ ಯಾಕೆ?? ಈ ಪ್ರಶ್ನೆ ಯಾರೂ ಎತ್ತುತ್ತಿಲ್ಲವೇಕೆ??
೫) ಭಾರತದಲ್ಲಿ ಹಿಂದೂ ಅಂತಾ ಧರ್ಮ ಇಲ್ಲ ಇಲ್ಲಿರುವದು ಮತ, ಜಾತಿಗಳು ಅಂದಾಗ ಅವರವರ ಜಾತಿಯ ಸಮುದಾಯದ ಅಗತ್ಯಕ್ಕೆ ತಕ್ಕಂತೆ ಅವರವರು ಕಾನೂನು, ಧಾರ್ಮಿಕ ನೀತಿಗಳು ನಿಯಮಗಳು, ವಿಧಾನಗಳು ತಮಗೆ ಹೇಗೆ ಬೇಕೋ ಹಾಗೆ ಮಾರ್ಪಡಿಸಿಕೊಂಡರು. ಪ್ರತಿ ಜಾತಿ, ಮತದವರೂ ಹಾಗೇ ತಮಗೆ ಬೇಕಾದಂತೆ ಮಾರ್ಪಡಿಸಿಕೊಂಡರು. ಇದು ತಪ್ಪು ಹೇಗೆ??
೬) ಭಾರತದಲ್ಲಿರುವ ಇತರ ಜಾತಿಗಳಂತೆ ಬ್ರಾಹ್ಮಣವೂ ಒಂದು ಜಾತಿ ಅಥವಾ ಮತ ಹೌದಲ್ಲವೇ?
೭) ಅವರು ತಮಗೆ ಅನುಕೂಲವಾಗುವಂತೆ ವರ್ಣಾಶ್ರಮ ಪದ್ಧತಿ ತಂದರು. ಅವರಿಗೆ ಅದರ ಅಗತ್ಯವಿರಬಹುದು. ಅವತ್ತಿನ ಕಾಲ, ಪರಿಸರ, ಹಾಗೂ ಆ ಸಮುದಾಯದ ಅಗತ್ಯ ಅದಾಗಿರಬಹುದು. ಅದಕ್ಕಾಗಿ ವರ್ಣಾಶ್ರಮ ಪದ್ಧತಿ ತಂದರು. ಇದು ತಪ್ಪಾ??
೮) ಈ ಪದ್ಧತಿಯನ್ನು ಎಲ್ಲ ಮತದವರೂ ಅನುಸರಿಸುವ ಅಗತ್ಯವೇನಿತ್ತು??
೯) ಹಾಗೆ ಅನುಸರಿಸಿದ್ದರೆ, ಅನುಸರಿಸಿದವರ ತಪ್ಪೇ ವಿನಃ ತಮ್ಮ ಅನುಕೂಲತೆಗಾಗಿ ಆ ಪದ್ಧತಿ ರೂಢಿಗೆ ತಂದವರ ತಪ್ಪು ಹೇಗಾಗುತ್ತದೆ??
ಉದಾ: ವೃದ್ಧಾಶ್ರಮ, ಬೇಬಿ ಸಿಟ್ಟಿಂಗ್ ಇವು ಹೊರದೇಶದವು. ಅವರು ತಮ್ಮ ಅಗತ್ಯಕ್ಕೆ ಇವನ್ನು ಮಾಡಿಕೊಂಡಿದ್ದು. ಅವನ್ನು ಕಣ್ಣು ಮುಚ್ಚಿ ಭಾರತೀಯರು ಅನುಸರಿಸಿದರೆ ತಮ್ಮ ಅಗತ್ಯವಲ್ಲದ್ದನ್ನು ಅಳವಡಿಸಿಕೊಂಡರೆ ತಪ್ಪು ಭಾರತೀಯರದ್ದೇ ಅಲ್ಲವೇ?? ಹೊರದೇಶದವರ ತಪ್ಪೇನಿದೆ ಇಲ್ಲಿ??( ಅವು ಬಾಧಕಗಳು ಎಂಬುದನ್ನು ಒಪ್ಪುತ್ತೆನೆ.)
೧೦) ಭಾರತದಲ್ಲಿ ಪ್ರತಿ ಜಾತಿಯೂ ಒಂದು ಧರ್ಮ ಅಂತಾದ ಮೇಲೆ ವಿದ್ಯೆ ಕಲಿಸುವ ಹೊಣೆ ಬ್ರಾಹ್ಮಣನ ತಲೆಗೇ ಯಾಕೆ??
೧೧) ಬ್ರಾಹ್ಮಣನೇ ಯಾಕೆ ಎಲ್ಲರಿಗೂ ವಿದ್ಯೆ ಕಲಿಸಬೇಕಿತ್ತು?? ಅವರವರ ಜಾತಿಗಳ ಮುಖಂಡರು, ಧರ್ಮದ ಗುರುಗಳು, ಅವರವರ ಪುರೋಹಿತರು ತಮ್ಮ ಜಾತಿ, ಮತಕ್ಕೆ ತಾವು ಏನು ಕಲಿಸಬೇಕು? ಹೇಗೆ ಕಲಿಸಬೇಕು ತೀರ್ಮಾನಿಸಬೇಕಲ್ಲವೇ?? ಹಾಗೆ ವಿದ್ಯೆ ಕಲಿಸುವ ತೀರ್ಮಾನ ತಗೊಂಡಿಲ್ಲವೆಂದಾದರೆ ಅದು ಆಯಾ ಜಾತಿಯ ಮುಖ್ಯಸ್ಥರ ತಪ್ಪೆ ವಿನಃ ಬ್ರಾಹ್ಮಣರ ತಪ್ಪು ಹೇಗೆ??
೧೨) ಕೆಳವರ್ಗದವರು ವಿದ್ಯೆ ಕಲಿತರೆ ಬ್ರಾಹ್ಮಣರು ಶಿಕ್ಷಿಸುತ್ತಿದ್ದರು ಎಂದು ಕೆಲವರ ವಾದವಾಗಿದೆ. ಹಾಗಾದರೆ ನಳಂದ ವಿಶ್ವವಿದ್ಯಾಲಯದಲ್ಲಿ ಬ್ರಾಹ್ಮಣರು ಮಾತ್ರ ಕಲಿಯುತ್ತಿದ್ದರೆ?? ಅಲ್ಲಿಯೂ ವೈದಿಕ ಧರ್ಮಗ್ರಂಥ ಮಾತ್ರ ಕಲಿಸುತ್ತಿದ್ದರಾ?? ನಳಂದಾಕ್ಕೆ ಭಾರತದ ಹೊರಗಿನ ವಿದ್ಯಾರ್ಥಿಗಳು ಬಂದು ಕಲಿತಿದ್ದು ಸುಳ್ಳಾ?? ಹೊರಗಿನ ದೇಶದವರಿಗೆ ಕಲಿಸಿದ ವಿದ್ಯೆ ಭಾರತೀಯರಿಗೆ ಕಲಿಸಲಿಲ್ಲವಾ?? ಹೊರಗಿನ ವಿದ್ಯಾರ್ಥಿಗಳಿಗೆ ನಿಷಿದ್ಧವಿರದ್ದು, ಶಿಕ್ಷಾರ್ಹವಾಗದ್ದು ಭಾರತೀಯರಿಗೇಕೆ ಶಿಕ್ಷಾರ್ಹವಾಯಿತು??
೧೩) ಕೆಲವರು ಹೇಳುತ್ತಾರೆ ನಳಂದಾ ಇರುವವರೆಗೂ ನಾವು ಓದು ಕಲಿತು ಅಕ್ಷರಸ್ಥರಾಗಿದ್ದೆವು. ನಳಂದ ಹಾಳಾದಾಗ ನಾವೂ ಹಾಳಾದೆವು. ನಮಗೆ ಅಕ್ಷರ ವಿದ್ಯೆ ಹೇಳುವವರಿರಲಿಲ್ಲ.
ಆದರೆ………
ಹಾಳಾಗಿದ್ದು ನಳಂದ ಒಂದೇ ಅಲ್ಲ. ಅದಕ್ಕೂ ಮೊದಲೇ ವೈದಿಕ ಪ್ರಾಬಲ್ಯದ ತಕ್ಷಶಿಲೆಯೂ ಹಾಳಾಗಿತ್ತಲ್ಲವೆ?? ನಳಂದ ಜೊತೆಗೆ ಭಾರತದ ಇನ್ನೂ ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ವೈದಿಕ, ಬೌದ್ಧ, ಜೈನ, ವೀರಶೈವ ವಿದ್ಯಾಲಯಗಳೂ ಹಾಳಾದವು. ಆಗ ಕಂಠಪಾಠಕ್ಕೆ ಪ್ರಾಧಾನ್ಯತೆ ಕೊಟ್ಟು ಪ್ರತಿ ಮನೆಯನ್ನೂ ಪಾಠಶಾಲೆ ಮಾಡಿ ಅಕ್ಷರ ಕಲಿಕೆಯನ್ನು ಎಲ್ಲರೂ ಮತ್ತೆ ಪುನರುಜ್ಜೀವನಗೊಳಿಸಿದರು. ಹಾಗೇನೇ ನಳಂದದವರೂ ಪುನರುಜ್ಜೀವನಗೊಳಿಸಿಕೊಳ್ಳಲಿಲ್ಲ ಏಕೆ??
೧೪) ಅಕ್ಷರ ಕಲಿಕೆ ಅನ್ನದ ಪೂರೈಕೆಗೆ ರಹದಾರಿ ಆಗಿರಲಿಲ್ಲವಾದ್ದರಿಂದ ಶ್ರಮಿಕ ವರ್ಗ ತಾವೇ ಅಕ್ಷರ ಕಲಿಕೆಯಿಂದ ವಿಮುಖರಾದರೆಂದು ಕೆಲವರು ಹೇಳಿದರು. ಹಾಗಾದರೆ ಕಲಿಸಲಿಲ್ಲ ವಿದ್ಯೆ ಮುಚ್ಚಿಟ್ಟರೆಂಬ ಗೂಬೆ ಬ್ರಾಹ್ಮಣನ ತಲೆಗೆ ಯಾಕೆ??
೧೫) ವಿದ್ಯೆ ಕಲಿತವರನ್ನು ಬ್ರಾಹ್ಮಣರು ಸೀಸ ಸುರಿದು ಶಿಕ್ಷಿಸುತ್ತಿದ್ದರೆ, ಹನ್ನೆರಡನೇ ಶತಮಾನದ ಶೂದ್ರ ವಚನಕಾರರು ಹೇಗೆ ವಚನ ರಚಿಸಿದರು?? ನಳಂದದಲ್ಲಿ ಬೌದ್ಧರು ಶಿಕ್ಷಣ ಹೇಗೆ ಪಡೆದರು?? ಅವರಿಗೇಕೆ ಸೀಸದ ಶಿಕ್ಷೆ ಆಗಲಿಲ್ಲ??
೧೬) ನಳಂದದಲ್ಲಿ ಕಲಿಯಬೇಕೆಂದರೆ ಪೂರ್ವದಲ್ಲಿ ವೇದ, ಆಗಮ, ಶಾಸ್ತ್ರ, ಪುರಾಣ ಇವೆಲ್ಲಾ ಓದಿರಬೇಕಾಗಿತ್ತು ಹೀಗೆಂದು ಒಬ್ಬ ಇತಿಹಾಸಕಾರ ಬರೆದಿದ್ದಾರಂತೆ. ಅಂಬೇಡ್ಕರ್ ಹೇಳುತ್ತಾರಂತೆ ಭಾರತದ ಸಂಘರ್ಷವೆಂದರೇನೆ ಅದು ವೈದಿಕರು ಮತ್ತು ಬುದ್ಧರ ನಡುವಿನ ಸಂಘರ್ಷ. ಹಾಗಾದರೆ ಬೌದ್ಧ ದರ್ಶನ ಕಲಿಯಲು ವೈದಿಕದ ಶಿಕ್ಷಣ ಕಲಿಯುವ ಕಡ್ಡಾಯ ಏಕಿತ್ತು?? ಬೌದ್ಧರ ಧರ್ಮಶಾಸ್ತ್ರ ವೈದಿಕದ ಮೆಟ್ಟಿಲಿಂದ ಕಲಿಯುವದೆಂದರೆ ಬೌದ್ಧದ ಭಿನ್ನತೆ ಏನು?? ಇದು ವಿರೋಧಾಭಾಸವಲ್ಲವೇ?? ಇಲ್ಲಿ ಯಾವುದನ್ನು ನಂಬಬೇಕು?? ವೈದಿಕರ ವಿರುದ್ಧ ಬೌದ್ಧರ ಬಂಡಾಯ ಸುಳ್ಳು ಎನ್ನಬೇಕಾ ಅಥವಾ ವೈದಿಕ ಗ್ರಂಥ ಕಲಿಕೆ ಕಡ್ಡಾಯ ಎಂಬುದು ಸುಳ್ಳಾ?
೧೭) ಜಗತ್ತಿನಲ್ಲಿ ಭಾರತದ ದಲಿತವರ್ಗ ಶೋಷಣೆ ಅನುಭವಿಸಿದಷ್ಟು ಯಾರೂ ಅನುಭವಿಸಿಲ್ಲ. ಅದಕ್ಕೇ ನಾವು ಅತ್ಯಂತ ಹಿಂದುಳಿದಿದ್ದೇವೆ. ಹಾಗಾದರೆ ಯಹೂದಿಗಳಿಗಾದ ನೋವು ಕಡಿಮೆಯಾ?? ಎಷ್ಟು ಸಲ ಅವರು ದೇಶಭ್ರಷ್ಟರಾಗಿ ಅಲೆದರು?? ಇವತ್ತು ಇಡೀ ಜಗತ್ತೇ ಅವರತ್ತ ನೋಡುವಂತೆ ಅವರು ಬೆಳೆದು ನಿಂತಿಲ್ಲವಾ??
೧೮) ಹತ್ತು ಸಾವಿರ ವರ್ಷಗಳಿಂದ ನಮ್ಮನ್ನು ಶೋಷಣೆ ಮಾಡಲಾಗಿದೆ. ನಾವು ಕೇವಲ ಎಪ್ಪತ್ತು ವರ್ಷಗಳಲ್ಲಿ ಉದ್ಧಾರ ಆಗೋದು ಹೇಗೆ?? ಇದು ಕೆಲವರ ವಾದವಾಗಿದೆ. ಆದರೆ ಹುಲಿಹೊನ್ನ( ಅವರ ಮೂಲ ಹೆಸರು ತಿಳಿದಿಲ್ಲ) ಅವರು ಹೊಲಯ ಮಾದಿಗರ ಹಿರಿಮೆ ಗರಿಮೆ ಅನ್ನುವ ಪೇಜಿನಲ್ಲಿ ಹೇಳುತ್ತಾರೆ ಚಾಲುಕ್ಯರು ಹಾರೀತಿ ಎಂಬ ಮಾತೃಕುಲದವರು. ಅಂದರೆ ಇವತ್ತಿನ ದಲಿತ ಕುಲಮೂಲದವರು. ಹಾಗೇ ಪಲ್ಲವರು, ಚೇರರು, ಕದಂಬರು ಇನ್ನೂ ಅನೇಕರನ್ನು ಹೆಸರಿಸುತ್ತಾರೆ. ಹಾಗಿದ್ದರೆ, ಅಧಿಕಾರ ಪ್ರಭುತ್ವ ಎಲ್ಲವೂ ನಿಮ್ಮದೇ ಇರುವಾಗ ಶೋಷಣೆ ಹೇಗಾಗಲು ಸಾದ್ಯ?? ಆದರೆ ಅದಕ್ಕೂ ಕೆಲವರು ಅರಸರನ್ನು ವೈದಿಕರು ತಾವು ಹೇಳಿದಂತೆ ಕೇಳಿಕೊಂಡಿರುವಂತೆ ನಿಯಂತ್ರಿಸುತ್ತಿದ್ದರೆಂಬ ಉತ್ತರ ಕೊಡುತ್ತಾರೆ. ಯಾವ ಭಯ ತೋರಿಸಿ ವೈದಿಕರು ಸಮಾಜವನ್ನು ನಿಯಂತ್ರಿಸಿದರು?? ವೈದಿಕರಿಗೆ ಇಡೀ ಭಾರತ ಸಮಾಜ ಹೆದರಿಹೋಗಲು ಕಾರಣಗಳೇನು??
೧೯) ಸಮಾಜವನ್ನು ಕೆಳಗಿನ ಕಾರಣಗಳಿಂದ ಕೆಲವರು ಅಂಕೆಯಲ್ಲಿ ಇಟ್ಟುಕೊಳ್ಳಬಹುದಾಗಿದೆ.
ಕಾರಣ ೧) ದೇವರ ಭಯ, ಸ್ವರ್ಗ ನರಕದ ಭಯ, ಪಾಪ ಪುಣ್ಯಗಳ ಭಯ, ಪವಿತ್ರ ಗ್ರಂಥಗಳಲ್ಲಿ ಹಾಗೆ ಹೇಳಿದೆ ಮಾಡಲೇಬೇಕೆಂಬ ಭಯ ಹುಟ್ಟಿಸಬಹುದು. ಆದರೆ ಬ್ರಾಹ್ಮಣರ ದೇವರಿಗೆ ಎಲ್ಲಾ ಜಾತಿಯವರೂ ಹೆದರುತ್ತಿರುವ ಕಾರಣವೇ ಇಲ್ಲ. ಯಾಕೆಂದರೆ ಭಾರತದ ಎಲ್ಲಾ ಜಾತಿಯವರಿಗೂ ಒಬ್ಬನೇ ದೇವರಿಲ್ಲ. ಅವರವರ ದೇವರೆಲ್ಲಾ ಬೇರೇನೇ ಇರುವಾಗ ಬ್ರಾಹ್ಮಣರ ದೇವರಿಗೆ ಯಾಕೆ ಭಯ ಪಟ್ಟರು?? ಪಾಪ ಪುಣ್ಯಗಳ ಕಲ್ಪನೆ ಎಲ್ಲರಿಗೂ ಇತ್ತು. ಅದನ್ನು ಬ್ರಾಹ್ಮಣರೆ ಹೇಳಿ ಹೆದರಿಸುವ ಸಾಧ್ಯತೆಗಳಿಲ್ಲ. ಇನ್ನು ಬ್ರಾಹ್ಮಣ ನಂಬುವ ಪವಿತ್ರ ಗ್ರಂಥಗಳನ್ನು ಎಲ್ಲರೂ ಪವಿತ್ರ ಎಂದು ನಂಬುವದಿಲ್ಲ. ಹಾಗಿದ್ದಾಗ ಪವಿತ್ರ ಗ್ರಂಥಗಳ ಉಲ್ಲೇಖ ಉದಾಹರಣೆಗಳಿಂದ ಹೆದರಿಸುವದು ಸಾಧ್ಯವಿಲ್ಲಾ ಎಂದಾಯಿತು.
ಕಾರಣ ೨) ಧರ್ಮ ಗುರುಗಳಿಂದ ಬಹಿಷ್ಕಾರ ಹಾಕಿಸುವುದು. ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಅಂದರೆ ಹುಟ್ಟಿದಾಗ, ಸತ್ತಾಗ, ವಿವಾಹ ಕಾರ್ಯಗಳಲ್ಲಿ ಬರುವುದಿಲ್ಲ ಎಂದು ಹೆದರಿಸಬಹುದಿತ್ತು.
ಆದರೆ, ಬ್ರಾಹ್ಮಣರು ಎಲ್ಲಾ ಜಾತಿಗಳ ಪುರೋಹಿತರಲ್ಲ ಮತ್ತು ಧರ್ಮ ಗುರುಗಳೂ ಅಲ್ಲ. ಹೀಗಿದ್ದಾಗ ಬಹಿಷ್ಕಾರ ಹಾಕಲಾಗಲೀ ಅಥವಾ ಧಾರ್ಮಿಕ ಕೆಲಸಕ್ಕೆ ಬರುವುದಿಲ್ಲ ಎಂದು ಹೆದರಿಸಲು ಬ್ರಾಹ್ಮಣನಿಗೆ ಹೇಗೆ ಸಾಧ್ಯ??
ಕಾರಣ ೩) ಪ್ರಭುತ್ವದಲ್ಲಿ ಬ್ರಾಹ್ಮಣರೇ ಇದ್ದಾಗ ಅವರಿಗೆ ಹೇಳಿ ಶಿಕ್ಷಿಸುವ ಭಯ ತೋರಬಹುದಿತ್ತು. ಆದರೆ ಚರಿತ್ರೆಯುದ್ದಕ್ಕೂ ೯೦% ರಾಜರು ಬ್ರಾಹ್ಮಣೇತರರಾದ ಶೂದ್ರರೇ ಆಳಿದ್ದಾರೆ. ಇಲ್ಲಿ ಬ್ರಾಹ್ಮಣರೇ ಭೀತಿಯಿಂದ ಬಾಳಬೇಕಿತ್ತು. ಅದು ಹೇಗೆ ಉಳಿದವರನ್ನ ಅಂಕೆಯಲ್ಲಿಟ್ಟುಕೊಳ್ಳಲು ಸಾಧ್ಯ??
ಕಾರಣ ೪) ಬಾಹುಬಲ, ಸಂಖ್ಯಾ ಬಾಹುಳ್ಯದಿಂದ ಇಟ್ಟುಕೊಳ್ಳಬಹುದು. ಆದರೆ ನಮಗೆ ಗೊತ್ತಿರುವಂತೆ ಬ್ರಾಹ್ಮಣರು ಬೌದ್ಧಿಕ ಸಂಪತ್ತು ಹೊಂದಿದವರೇ ವಿನಃ ಬಾಹುಬಲಿಗಳಲ್ಲ. ಇತಿಹಾಸದುದ್ದಕ್ಕೂ ಅತೀ ಕಡಿಮೆ ಸಂಖ್ಯೆಯವರು. ಹಾಗಿದ್ದಾಗ ಈ ರೀತಿ ಶೋಷಣೆ ಮಾಡಿದ್ದಾರೆನ್ನುವ ವಾದ ತನ್ನಷ್ಟಕ್ಕೇ ಬಿದ್ದು ಹೋಯಿತು.
ಹಾಗಿದ್ದಾಗ ಬ್ರಾಹ್ಮಣರು ಹೇಳಿದಂತೆ ಕೇಳಿ ಅವರಿಂದ ಶೋಷಿಸಿಕೊಳ್ಳಲು ಇತರರಿಗೆ ಇರುವ ಅತ್ಯಂತ ಮಹತ್ವದ ಕಾರಣವಾದರೂ ಯಾವುದು??
೨೦) ಪುರಾಣಗಳೆಲ್ಲ ಸುಳ್ಳು ಎಂದು ಹೇಳುತ್ತಾರೆ. ರಾಮ ಕೃಷ್ಣ ಇದ್ದದ್ದಕ್ಕೆ ಸಾಕ್ಷಿ ಏನು ಎಂದು ಕೆಲವರು ಕೇಳುತ್ತಾರೆ. ರಾಮ ಕೃಷ್ಣ ಇಲ್ಲವೆಂದರೆ ರಾವಣ, ನರಕ ಇದ್ದದ್ದೂ ಸುಳ್ಳಲ್ಲವೆ? ಶಂಬುಕನ ಕತೆಯೂ ಸುಳ್ಳಲ್ಲವೇ?? ಅವರನ್ನು ಮೋಸದಿಂದ ಕೊಂದಿದ್ದೂ ಸುಳ್ಳಲ್ಲವೆ?? ಪುರಾಣಗಳು ಸುಳ್ಳಾದರೆ ಬಲಿ, ಮಹಿಷ, ಹೋಲಿಕಾ ಹೇಗೆ ಸತ್ಯ?? ಪುರಾಣಗಳು ಸತ್ಯ ಎಂದಾದರೆ ಅದೇ ಪುರಾಣಗಳ ಪ್ರಕಾರ ಬಲಿ, ಬಾಣ, ಹಿರಣ್ಯಾಕ್ಷ, ಹಿರಣ್ಯ ಕಶಿಪು, ರಾವಣ, ನರಕ, ಇವರು ಬ್ರಾಹ್ಮಣರು. ಇದು ಬ್ರಾಹ್ಮಣರ ಪುರಾಣಗಳಲ್ಲಿ ಅವರವರ ಹೋರಾಟವನ್ನು ಹೇಳುವ ಕತೆ. ಅದನ್ನು ಉಳಿದವರೇಕೆ ಪ್ರಶ್ನಿಸಬೇಕು??!! ಅದವರ ಕತೆಯೇ ಅಲ್ಲವಲ್ಲ? ಅಲ್ಲದೇ ಅಲ್ಲಿಯ ಪಾತ್ರಗಳೂ ತಾವಲ್ಲವಲ್ಲ?
೨೧) ಬ್ರಾಹ್ಮಣರು ತಮ್ಮ ಸಂಸ್ಕೃತಿಯನ್ನು ನಮ್ಮ ಮೇಲೆ ಹೇರಿದರು. ನೆಲಮೂಲ ಸಂಸ್ಕೃತಿ ಹಾಳಾಯಿತು, ಎಂದು ಕೆಲವರು ಅಲವತ್ತುಕೊಳ್ಳುತ್ತಾರೆ. ಈಗ ಭಾರತದಲ್ಲಿ ಬ್ರಿಟೀಷರು ಇಲ್ಲ. ನಿಮ್ಮ ನೆತ್ತಿಯ ಮೇಲೆ ಕತ್ತಿ ಊರಿ ನಮ್ಮ ಸಂಪ್ರದಾಯ ಅನುಸರಿಸಿ ಎಂದು ಒತ್ತಾಯಿಸುವವರೂ ಇಲ್ಲ. ಆದರೂ ನೀವೇಕೆ ಹೊಸವರ್ಷಾಚರಣೆ ಮಧ್ಯರಾತ್ರಿ ಪಟಾಕಿ ಹೊಡೆದು ಬಲೂನು ಒಡೆದು , ಕುಣಿದು ಕುಪ್ಪಳಿಸಿ ಆಚರಿಸುವಿರಿ?? ಹುಟ್ಟುಹಬ್ಬದ ದಿನ ದೀಪ ಆರಿಸುವಿರೇಕೆ?? ಪ್ರೇಮಿಗಳ ದಿನ, ಮಿತ್ರದಿನ ಏಕೆ ಆಚರಿಸುವಿರಿ?? ಅವರ ಉಡುಪು ಏಕೆ ಧರಿಸುವದು? ಅವರಂತೆ ಸ್ಪೂನ್ ಫೋರ್ಕಿನಿಂದ ಟೇಬಲ್ ಮುಂದೆ ಕುಳಿತು ಏಕೆ ಉಣ್ಣುವಿರಿ?? ನೀವಾಗಿ ಇವೆಲ್ಲ ಆಚರಿಸಿ ಅವರನ್ನು ಬೈದರೆ ತಪ್ಪಲ್ಲವೇ?? ಹೋದವರುಷ ನಟ ಶಿವರಾಜ ಕುಮಾರರ ಮಗಳ ಮದುವೆ ಆಯಿತು. ಅದು ಸಂಪೂರ್ಣ ವೈದಿಕ ಪದ್ಧತಿಯಂತೆ ನಡೆಯಿತು. ಹಾಗೇ ಇತ್ತೀಚೆಗೆ ಜನಾರ್ಧನ ರೆಡ್ಡಿ ಅವರ ಮಗಳ ಮದುವೆ ಕೂಡಾ ವೈದಿಕ ಪದ್ಧತಿಯಂತೆ ನಡೆಯಿತು. ಇಲ್ಲಿ ಶಿವರಾಜರಿಗೆ, ರೆಡ್ಡಿ ಅವರಿಗೆ ಯಾವ ವೈದಿಕ ಒತ್ತಡ ಹೇರಿದ್ದ?? ನಮ್ಮ ಪದ್ಧತಿಯಂತೇ ಮದುವೆ ಮಾಡಿ ಎಂದು?? ಅವರೇಕೆ ವೈದಿಕ ವಿವಾಹ ಆಯ್ದುಕೊಂಡರು?? ಅವರದೆ ಜಾತಿಯ ಪುರೋಹಿತರ ಕರೆಸಿ ಅವರದೇ ಪದ್ಧತಿಯಲ್ಲಿ ವಿವಾಹ ಮಾಡಿದ್ದರೆ ವೈದಿಕರು ಯುದ್ಧ ಸಾರುತ್ತಿದ್ದರೆ?? ಇಲ್ಲಾ ಮದುವೆ ಮನೆಮೇಲೆ ಬಾಂಬ್ ಹಾಕುತ್ತಿದ್ದರಾ?? ತಮಗೆ ಬೇಕಾಗಿ ವೈದಿಕ ಸಂಸ್ಕೃತಿ ಅನುಸರಿಸಿ ಮತ್ತೆ ಅವರ ಮೇಲೆ ಸಂಸ್ಕೃತಿ ಹೇರಿದರೆಂಬ ಗೂಬೆ ಕೂಡಿಸುವದ್ಯಾಕೆ??
ಮೇಲಿನ ಪ್ರಶ್ನೆಗಳಿಗೆ ಪ್ರಜ್ಞಾವಂತರು ಒಂದೊಂದಾಗಿ ನಂಬರ್ ನೀಡಿ ಉತ್ತರಿಸಿ.
ಈ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದವರನ್ನು ನಾನು ನನ್ನ ಗುರು ಎಂದು ಭಾವಿಸಿ ನಡೆದುಕೊಳ್ಳುತ್ತೇನೆ.
ನಾನೂ ನಿಮ್ಮಂತೆ ರಾಘಣ್ಣ
ನಿಮ್ಮ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರವಿಲ್ಲ. ನಿಮಗೆ ಇವು ಪ್ರಶ್ನೆ ಎನಿಸಿದರೆ ನನಗೆ ಆಶ್ಚರ್ಯ ಹುಟ್ಟು ಹಾಕಿದ ಸಂಗತಿಗಳು.
ಮತಿಹೀನ ನಾಗಿಸೆಟ್ಟಿ,ಮತಾಂಧ ಬಾವಾ ಸಲಾಂ, ಮತಿಭ್ರಮಿತ ಕಿರಣ್ಬಟಾಣಿಗಳು ಉತ್ತರಿಸತಕ್ಕದ್ದು.
ಈ ಎಲ್ಲಾ “ಪ್ರಶ್ನೆ” ಗಳಿಗೆ ನೀವೇಕೆ “ಉತ್ತರ”…ಹುಡುಕ್ತಾ ಇದೀರಾ??
ನಿಮ್ಮ Email ನ್ನು ಕಳಿಸಿ ನಾವು ಒಟ್ಟು ಆದ್ಯಾತ್ಮ/ಧರ್ಮದ ಬಗ್ಗೆ ಹಂಚಿ ಕೊಳ್ಳೋಣ.
ಜೆ.ಕೃಷ್ಣಮೂರ್ತಿ ಟೀಚಿಂಗ್ಸ್ ಓದಿದ್ದೀರಾ ? ಅವರ ಟೀಚಿಂಗ್ಸ್ ನಲ್ಲಿ ನೇರ.ಸ್ಪಷ್ಟ ,ಎಲ್ಲ ಟ್ರಡಿಶನ ಎಲ್ಲ ಧರ್ಮಗಳನ್ನು ಅರ್ಥವಿಲ್ಲದವೆಂದು ತೋರಿಸಲಾಗಿದೆ.
ನನ್ನ ಇಮೇಲ್ ಗೆ ಬರೆಯಿರಿ – sdd2025 @ಯಾಹೂ .ಕೋ.ಆನ್
ಧನ್ಯವಾದಗಳು
ನಿಮ್ಮ ಪ್ರೀತಿಯ
ಎಸ್. ದಿನ್ನಿ
ನೀವು ಕೇಳಿರುವ ಪ್ರಶ್ನೆಗಳು ಸಮಂಜಸವಾಗಿವೇ ಆದರೂ ನಾವು ಗೊಂದಲವಿಲ್ಲದೆ ಕೆಲವನ್ನು ಒಪ್ಪಿ ಅನುಸರಿಸುತ್ತೀದ್ದೇವೆ ಗೊಂದಲ ಸೃಷ್ಟಿಸಲು ಪ್ರಯತ್ನ ಪಡುತ್ತಿರುವ ಬುದ್ಧಿಜೀವಿಗಳೆಂದು ತಮ್ಮನ್ನು ತಾವೇ ಕರೆದುಕೊಳ್ಳುವವರಿಗೆ ಈ ಪ್ರಶ್ನೆಗಳು ಮುಟ್ಟಲಿ
Respected Madam,
With good day greetings from s.dinni Bengaluru
Ref: yesterday i talked to you about Blue whale monster.
I am tired of writing…..writing. Knowledge is enemy of man and prevents understanding.
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
Origin and Etymology of vedanta
borrowed from Sanskrit vedānta, literally, “end of the Veda,” from veda- veda + anta-“end, limit,” akin to antya- “located at the end, last,” Germanic *andja- “end, extreme” (whence Gothic andeis “end,” Old English ende) — more at 1end
,,,,,,,,,,,,,,,,,,,,,,,,,,,,,,,,,,,,,,,,,,
Origin and Etymology of veda
borrowed from Sanskrit veda- “knowledge, insight, sacred writings,” derivative from the base of veda “(he/she) knows,” vid-“knowledge”; akin to Greek oîde “(he/she) knows,” Old English witan “to know” — more at 1wit
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
When knowledge is to be ended, why accumulate it at all?
Please excuse me for the same………..knowledge….knowledge…. i personally feel sick of that word.
Knowledge…ideology without prajna/awareness/sensitivity/arivu is garbage of words.
Hence i want to talk on phone whenever convenient for both.
Please read the following,if it interests you.
There is some relationship with dangerous technology that we are surrounded and this reading.
Rest i wish to share on phone. 94498 90981
Regards.
s.dinni