ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 31, 2017

ದೇವರ ನಾಡಿನಲ್ಲಿ ನಾ ಕಂಡ ಮನುಷ್ಯರು

‍ನಿಲುಮೆ ಮೂಲಕ

– ಅನಿಲ್ ಚಳಗೇರಿ

ದೇವರ ನಾಡಿನಲ್ಲಿ ನಾ ಕಂಡ ಮನುಷ್ಯರು – 1

ಕೈಯಲ್ಲಿ ಉದ್ದನೇಯ ಕೋಲು, ಹೆಗಲಿಗೊಂದು ಚೀಲ, ಕಾಲಲ್ಲಿ ಸ್ಪೋರ್ಟ್ಸ್ ಶೂಸ್ ಹಾಕಿಕೊಂಡ ಹಿರಿಯರೊಬ್ಬರು ಆಗಲೇ ನಮ್ಮ ಜೊತೆ 23 ಕಿಲೋ ಮೀಟರಿನಿಂದ ನಡೆದುಕೊಂಡು ಬಂದಿದ್ದರು (ಹತ್ತಾರು ಸಾವಿರ ಕಾರ್ಯಕರ್ತರ ಮಧ್ಯೆ ಅದೆಲ್ಲೋ ಹತ್ತಿಪತ್ತನೇ ಸಾಲಿನಲ್ಲಿ ಯಾರಿಗೂ ಕಾಣದೆ), ನಾವು ಅವರನ್ನು ಕುತೂಹಲದಿಂದ ನೋಡುತ್ತಿರುವದನ್ನು ಗಮನಿಸಿದ ಅವರು, ತಮ್ಮನ್ನು ತಾವು ಪರಿಚಯಿಸಿಕೊಂಡರು. ” I am captain Pillai, retired army officer, I am 71 years young and I have been walking from the day one and covered 150 kms today” ಅಂತ ಹೇಳಿದರು. ನಿಮಗೆ ಪ್ರೇರಣೆಯೇನು ? ನಿಮ್ಮ ಅಥವಾ ಮೇಲೆ ಏನಾದ್ರೂ ಅಟ್ಯಾಕ್ ಆಗಿತ್ತಾ?, ಅಂತ ಕೇಳಿದರೆ, “ನಾನು ದೇಶಕ್ಕೋಸ್ಕರ ದುಡಿದವನು, ನನಗೆ ಕಳ್ಳ ಕಮ್ಯುನಿಸ್ಟರ ನರಿ ಬುದ್ಧಿಯ ಬಗ್ಗೆ ತುಂಬಾ ಚೆನ್ನಾಗಿ ಗೊತ್ತು, ” ನನ್ನ ಕೊನೆಯ ಉಸಿರಿರುವವರೆಗೆ ಅವರನ್ನು ವಿರೋಧಿಸುವೆ” ಅಂದಾಗಲೇ ನೆನಪಾಗಿದ್ದು ಅಕ್ಷಯ್ ಕುಮಾರ್ ನಟಿಸಿದ ” ಹಾಲಿಡೇ” ಚಿತ್ರ. “a soldier never takes rest” ಶೀರ್ಷಿಕೆ…. ಮುಂದೆರಡು ದಿನ ಎಪ್ಪತ್ತರ ಹರೆಯದ ಆ ಮಾಜಿ ಸೈನಿಕನ ದಿಟ್ಟ ಹೆಜ್ಜೆಗಳೇ ನಮ್ಮೆಲ್ಲರ ನಡಿಗೆಗೆ ಪ್ರೇರಣೆಯಾಯಿತು …

ದೇವರ ನಾಡಿನಲ್ಲಿ ನಾ ಕಂಡ ಮನುಷ್ಯರು – 2

ಆಗ ತಾನೇ ಊಟ ಮುಗಿಸಿ ಕುಳಿತಿದ್ದ ನಮ್ಮನ್ನು ದೂರದಿಂದ ನೋಡಿದ ಒಬ್ಬ ಮಹಿಳೆ ನಮಸ್ಕರಿಸಿದರು ( ಹೊರಗಡೆಯಿಂದ ಬಂದವರು ಅಂತ ಗೊತ್ತಾಗಿ). ಹೋಗಿ ಪರಿಚಯ ಮಾಡಿಕೊಂಡೆ. ಆ ಮಹಿಳೆ, “ಸರ್, ನನ್ನ ಹೆಸರು ರೇಣು ಕುಮಾರಿ ಅಂತ” ಅಂದ್ರು. ಒಂದಿಷ್ಟು ಮಾತಿಗೆಳೆದಾಗ, “ಸರ್, ಕಳೆದ ಮೂರೂ ವರ್ಷಗಳಿಂದ ಮೋದಿ ಜೀ ಜಾರಿಗೆ ತಂದ ಯೋಜನೆಗಳನ್ನ ನಮ್ಮೂರಿನ ಜನರಿಗೆ ಅದರಲ್ಲೂ ವಿಶೇಷವಾಗಿ ದಲಿತ ಕಾಲೋನಿಗಳಲ್ಲಿ ಫಾರಂ ಕೊಡೋದರಿಂದ, ಅದನ್ನ ತುಂಬಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮುಟ್ಟಿಸುತಿದ್ದೆ.. ನಾನಾಗಲೇ ಗೊತ್ತಾಗಿತ್ತು, ನಾನು ಕಮ್ಯುನಿಸ್ಟರ ಕಣ್ಣಿಗೆ ಗುರಿಯಾಗಬಹುದೆಂದು.. ಆದರೂ ಬಿಡಲಿಲ್ಲ ನಮ್ಮದು ಸಂಘದ ಮನೆ, ಮುಂದುವರಿಸಿದೆ… ಅದೊಂದು ದಿನ ಸಾಯಂಕಾಲ ಆಟೋದಲ್ಲಿ ಮನೆ ಕಡೆ ಹೊರಟಿದ್ದೆ. ಸುಮಾರು ಮೂವತ್ತರಿಂದ ನಲವತ್ತು ಜನ ಕಮ್ಯುನಿಸ್ಟ್ ಗುಂಡಾಗಳು ನನ್ನನ್ನು ಆಟೋದಿಂದ ಹೊರಗೆಳೆದು, ನನ್ನ ಮೇಲೆ ಹಲ್ಲೆ ಮಾಡಿದರು.. ಹೆಣ್ಣುಮಗಳು ಅಂತ ನೋಡದೆ, ನನ್ನ ಬಟ್ಟೆ ಹರಿದರು… ನಾನು ಮಾತ್ರ ಬಿಡಲಿಲ್ಲ, ಪೊಲೀಸ್, ಕೋರ್ಟು ಕಚೇರಿಯಿಂದ ಅಲೆದಾಡಿ, ಇವತ್ತು ಆ 30 ಜನ ಪ್ರತಿವಾರ ಕೋರ್ಟ್ ಅಳೆಯುವಹಾಗೆ ಮಾಡಿದ್ದೇನೆ, ಇವತ್ತು ಕೂಡ ನಾನು ನಡಿಗೆಯಲ್ಲಿ ಇದೀನಿ, ಆ 30 ಜನ ಮಾತ್ರ ಕೋರ್ಟ್ ಕೇಸು ಅಟೆಂಡ್ ಆಗ್ತಾ ಇದ್ದಾರೆ” ಅಂತ ಹೇಳಿದಾಗ ಅವರ ಮುಖದಲ್ಲೇನೋ ಗೆಲುವಿನ ಭಾವನೆಯಿತ್ತು. ಮತ್ತೆ ಸಿಗೋಣ ಅನ್ನುವ ಮೊದಲು ಆ ಮಹಿಳೆ ಹೇಳಿದ್ದು ” I will never stop fighting against those communist hooligans, let them kill me”… ಅದೆಲ್ಲಿಂದ ದೇವರು ಇವರಿಗೆ ಇಷ್ಟೊಂದು ಹೋರಾಟದ ಛಲ ಕೊಟ್ಟರೋ ? ಅನ್ನೋ ಪ್ರಶ್ನೆ ಇವತ್ತಿಗೂ ಕಾಡುತ್ತಿದೆ …

ದೇವರ ನಾಡಿನಲ್ಲಿ ನಾ ಕಂಡ ಮನುಷ್ಯರು – 3 –

ನಮ್ಮ ತಂಡದ ಕೈಯಲ್ಲಿ ಇದ್ದ ದೊಡ್ಡ ಓಂ ಧ್ವಜವನ್ನ ನೋಡಿ ಹತ್ತಿರ ಬಂದ ಹತ್ತಾರು ಕುಡಿ ಮೀಸೆಯ ಯುವಕರು ” ಸಂಘ “??!!! “ಸಂಘ” ??!!(ನೀವು RSS ನವರಾ) ಅಂತಾ ಮಲಯಾಳಂ ನಲ್ಲಿ ಕೇಳಿದರು (ನಮಗೆ ಅರ್ಥವಾಗಲಿಯೆಂದು ಸನ್ನೆ ಮಾಡಿ ತೋರಿಸದರು ). ಬೇರೆಲ್ಲವು ಬಿಜೆಪಿ ಧ್ವಜಗಳಾಗಿದ್ದರಿಂದ ಅವರಿಗೆ ಈ ಧ್ವಜ ನೋಡಿ ಇನ್ನು ಹೆಚ್ಚು ಹೆಮ್ಮೆ ಅನ್ನುವ ವಿಷಯ ಅವರ ಕಣ್ಣುಗಳಲ್ಲಿ ಎದ್ದು ಕಾಣಿಸುತ್ತಿತ್ತು…. ಅವರೊಡನೆ ಬಂದ ನಲವತ್ತರಿಂದ ನಲವತ್ತೈದರ ತರುಣ ಪ್ರವೀಣ್, ವೃತ್ತಿಯಲ್ಲಿ ಬ್ಯಾಂಕ್ ಮ್ಯಾನೇಜರ್, ಊರು ಅಲ್ಲಪಿ ಸಮೀಪದ ಅಳದುರ್, ಅವರೊಡನೆ ಮಾತಿಗಿಳಿದಾಗ ಅವರು ನಮ್ಮ ಬಗ್ಗೆ ಕೇಳಿದ್ದೆ ಹೆಚ್ಚು, ನಿಧಾನಕ್ಕೆ ಅವರ ಬಗ್ಗೆ ಮಾತಾಡಿದೆವು.. ಆಗ ಅವರು ಹೇಳಿದ್ದು “ನಾನು ವೃತ್ತಿಯಲ್ಲಿ ಬ್ಯಾಂಕ್ ಮ್ಯಾನೇಜರ್, ನನಗೆ ನನ್ನ ಭಾಗದ ಸಂಘದ ಜವಾಬ್ದಾರಿಯಿದೆ, ನಮ್ಮೂರ ಯುವಕರು ನಮ್ಮೊಡನೆಯಿದ್ದಾರೆ. ಆದರೆ ಒಂದು ಇಪ್ಪತ್ತೈದು ಕಮ್ಯುನಿಸ್ಟ್ ಗುಂಡಾಗಳಿಗೆ ಸದಾ ನಮ್ಮನ್ನು ಮತ್ತು ನಮ್ಮ ಹುಡುಗರನ್ನು ಕಂಡಾಗ ಮೈಯುರಿ” ಅನ್ನುತ್ತಾ ತಮ್ಮ ಮುಂಡ(ಪಂಚೆ) ಮೇಲೆ ಮಾಡಿ, ಮೋಣ ಕಾಲಿನ ಕೆಳಭಾಗದಕಡೆ ಇದ್ದ ಗಾಯವನ್ನು ನಮಗೆ ತೋರಿಸಿದರು.. “ಕಳೆದ ವರ್ಷ ಕಮ್ಯುನಿಸ್ಟ್ ಗುಂಡಾಗಳು ನನ್ನ ಮೇಲೆ ಅಟ್ಯಾಕ್ ಮಾಡಿದ್ದರು, ನಾನು ಶಾಖೆಗೆ ಹೋಗಬಾರದು, ಊರಿನ ಇತರ ಯುವಕರನ್ನ ಪ್ರೇರೇಪಿಸಬಾರದು ಎನ್ನುವ ಏಕೈಕ ಉದ್ದೇಶದಿಂದ, ನನ್ನ ಕಾಲುಗಳಿಗೆ ಕಬ್ಬಿಣದ ರಾಡ್ ನಿಂದ ಹೊಡೆದಿದ್ದರು.. ಸರಿಸುಮಾರು ಒಂದು ವರ್ಷ ನಡೆಯುವುದಕ್ಕೂ ಕಷ್ಟಪಡಬೇಕಾಯಿತು.. ಆದರೆ ಇಲ್ಲಿ ನೋಡಿ ಸರ್, ಇವತ್ತು ನಾನು ಮತ್ತೆ ಶಾಖೆ ಜವಾಬ್ದಾರಿ ತೆಗೆದುಕೊಂಡಿದ್ದೆನೆ” ಎಂದು ಗರ್ವದಿಂದ ಹೇಳಿದರು. ಅವರ ಆ ಗಾಯದ ಗುರುಗಳನ್ನು ತೋರಿಸುತ್ತ ಮಲಯಾಳಂ ನಲ್ಲಿ ಇನ್ನು ಏನೇನೋ ಹೇಳಿದರು.. ಆದರೆ ನನಗೆ ಅವನ ಭಾವನೆಗಳು ಅರ್ಥವಾದವು ಹೊರತು, ಅವನ ಭಾಷೆ ಒಂದಿಷ್ಟು ಆಗಲಿಲ್ಲ.. ಫೋಟೋ ತೆಗೆದುಕೊಳ್ಳೋಣ ಅನ್ನೋದರಲ್ಲಿ ಆ ಹತ್ತಾರು ಸಾವಿರ ಪ್ರವೀಣ್ ನಂತಹ ಕಾರ್ಯಕರ್ತರಲ್ಲಿ ಇವರು ಒಬ್ಬರಾಗಿ ಹೋಗಿದ್ದರು.. ಕಾಲು ಮುರಿದರು ತಮ್ಮ ಹಠ ಬಿಡದ, ಪ್ರವೀಣ್ ಜೀ ಸಾಹಸ ಮೆಚ್ಚಲೇ ಬೇಕು….

ದೇವರ ನಾಡಿನಲ್ಲಿ ನಾ ಕಂಡ ಮನುಷ್ಯರು – 4

ಸತ್ಯ ಒಪ್ಪಿಕೊಳ್ಳುತ್ತಿದ್ದೇನೆ, ನಳಿನ್ ಕುಮಾರ್ ಕಟೀಲ್ ಬಗ್ಗೆ ನನಗೇ ಎಳ್ಳಷ್ಟೂ ತಿಳಿದಿರಲಿಲ್ಲ… ಬಹುಷಃ ಕೇರಳಕ್ಕೆ ಹೋಗದಿದ್ದರೆ, ಅವರ ಸಾಮರ್ಥ್ಯದ ಬಗ್ಗೆ ಅಷ್ಟು ಅರಿವು ನನಗಾಗುತ್ತಿರಲಿಲ್ಲ… ತುಂಬಾ ಮೃದು ಸ್ವಭಾವದ ಈ ವ್ಯಕ್ತಿಯನ್ನು ಕೇರಳದ ಕಟುಕ ಕಮ್ಯುನಿಸ್ಟ್ ರಾಜ್ಯಕ್ಕೆ ಉಸ್ತುವಾರಿ ನೀಡಿರುವ ಉದ್ದೇಶವೇನಾದರೇನೆಂದು ಸದಾ ಯೋಚಿಸುತ್ತಿದ್ದೆ.. ಮಲಬಾರ್ ಪ್ರದೇಶದ ರಾಜಕೀಯ ಮತ್ತು ಕಮ್ಯುನಿಸ್ಟರ ಕ್ರೌರ್ಯ ಈತಿಹಾಸ ಸಂಪೂರ್ಣವಾಗಿ ಅರಿತ ನಳಿನ್ ಜನ ರಕ್ಷಾ ಯಾತ್ರೆಪ್ರಮುಖ ರೂವಾರಿ… ಸಂಪೂರ್ಣ ಜನ ರಕ್ಷಾ ಯಾತ್ರೆಯ ಪ್ರಮುಖ ಸಾರಥಿಯಾಗಿ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.. ಸಣ್ಣ ಪುಟ್ಟ ಬೈಠಕ್ ಗಳಿಂದ ಹಿಡಿದು, ವೇದಿಕೆಯ ಕಾರ್ಯಕ್ರಮದವರೆಗೆ ಅವರ ಜವಾಬ್ದಾರಿಯೇ ಅತೀ ಮುಖ್ಯ… ಮಲಯಾಳಂ ಭಾಷೆಯನ್ನು ಬೈಠಕ್ ತೆಗೆದುಕೊಳ್ಳುವದರ ಮಟ್ಟಿಗೆ ಮಾತ್ರ ಕಲಿತಿದ್ದಾರೆ.. ಇವರ ಭಾಷಣಗಳೆಲ್ಲವೂ ಕನ್ನಡದಲ್ಲೇ, ಮಲಯಾಳಂ ಅನುವಾದ ಬೇಕೇ ಬೇಕು… ಅಲ್ಲೆಪ್ಪಿಯ ಸಾರ್ವಜನಿಕ ವೇದಿಕೆಯಲ್ಲಿ ಆವೇಶಭರಿತ ಏರು ಧ್ವನಿಯಲ್ಲಿ ” ಪಯ್ಯನೂರಿಂದ ಪ್ರಾರಂಭವಾದ ನಮ್ಮ ಯಾತ್ರೆ ತಿರುವನಂತಪುರಂ ನಲ್ಲಿ ಬೃಹದಾಕಾರದ ಕಮ್ಯುನಿಸ್ಟರ ವಿರುದ್ಧ ಹೋರಾಡುವ ಚಂಡಮಾರುತವಾಗಿ ಪರಿವರ್ತನೆಗೊಂಡಿದೆ, ಈ ಚಂಡಮಾರುತ ಪಿಣರಾಯಿ ಸರ್ಕಾರವನ್ನು ಅರಬ್ಬೀ ಸಮುದ್ರಕ್ಕೆ ಕಿತ್ತೊಸೆಯುತ್ತೇವೆ” ಅಂದಾಗ ಒಂದು ನಿಮಿಷ ಸ್ಥಬ್ದವಾಗಿತ್ತು.. ಹತ್ತಾರು ಸಾವಿರ ಜನರಿರುವ ಆ ವೇದಿಕೆ, ಆಮೇಲೆ ಚಪ್ಪಾಳೆಗಳ ಸುರಿಮಳೆ.. ಆಗಲೇ ಗೊತ್ತಾಗಿದ್ದು ಅಮಿತ್ ಶಾ ಇವರನ್ನ ಸುಮ್ಮನೆ ಕೇರಳಕ್ಕೆ ಕಳುಹಿಸಿಲ್ಲವೆಂದು… ರಾಜ್ಯ ಉಸ್ತುವಾರಿಯಾಗಿದ್ದರೂ ಒಂದಿಷ್ಟು ಅಹಂ ಇಲ್ಲದೆ, ಸದಾ ಸಾಧಾರಣ ಕಾರ್ಯಕರ್ತರೊಡನೆಯಿರುವ ನಳಿನ್ ಕೇರಳದ ರಾಜಕಾರಣಕ್ಕೆ ಒಂದು ಮಾಣಿಕ್ಯವೇ ಸರಿ….

ಜನರಕ್ಷೆಯ ಯಾತ್ರೆಯಲ್ಲಿ ಭಾಗವಹಿಸಿದ ಯಾವ ಕಾರ್ಯಕರ್ತರನ್ನಾದರೂ ತೆಗೆದಿಕೊಳ್ಳಿ.. ಅದರಲ್ಲಿ ಪ್ರತಿಯೊಬ್ಬರೂ ನಾ ದೇವರನಾಡಿನಲ್ಲಿ ಕಂಡ “ಅತ್ಯದ್ಭುತ ಮನುಷ್ಯ”.. ಪುಳಿಯೋಗರೆ ಪ್ರಸಾದವಿಲ್ಲವೆಂದರೆ ದೇವಸ್ಥಾನಕ್ಕೆ ಬರದ ಜನರಿರುವ ಈ ಕಾಲದಲ್ಲಿ ಸಂಘಟನೆ ಹೇಳಿದಂತೆ ತಮ್ಮ ಮನೆಗಳಿಂದಲೇ ಊಟ ಮುಗಿಸಿಕೊಂಡು(ಯಾವ ಸ್ಥಳೀಯ ಕಾರ್ಯಕರ್ತರಿಗೂ ಸಂಘಟನೆ ಊಟದ ವ್ಯವಸ್ಥೆ ಮಾಡುತ್ತಿರಲಿಲ್ಲ ) ಧ್ವಜದೊಡನೆ ಕಾರ್ಯಕ್ರಮದ ನಿಗದಿತ ಸ್ಥಳಕ್ಕೆ ಒಂದು ಗಂಟೆ ಮುಂಚೆಯೇ ಬರುತ್ತಿದ್ದದ್ದು ನೋಡಿ ಅತ್ಯಂತ ಸಂತೋಷವಾಗುತ್ತಿತ್ತು… ವಿಶೇಷವೆಂದರೆ ಅವರು ಧ್ವಜ ಹಿಡಿಯುವ ಶೈಲಿ ಮತ್ತು ಆ ಹುಮ್ಮಸ್ಸು, ಸಂಪೂರ್ಣ ಕಾರ್ಯಕ್ರಮ ಮುಗಿಯುವವರೆಗೆ(ಮೂರ್ನಾಲ್ಕು ಗಂಟೆಗಳವರೆಗೆ) ಆ ಧ್ವಜಗಳು ಕೆಳಗೆ ಬರುತ್ತಲೇ ಇರಲಿಲ್ಲ… ರಾಜಕೀಯ ಕಾರ್ಯಕರ್ತರು ಶಾಲಾ ಮಕ್ಕಳಂತೆ ಅಷ್ಟು ಶಿಸ್ತಿನಿಂದ ಸಾಲು ಮಾಡಿ ನಿಂತಿದ್ದು ನಾನಂತೂ ನನ್ನ ರಾಜಕೀಯ ಜೀವನದಲ್ಲೆಂದು ನೋಡಿರಲಿಲ್ಲ… ಇನ್ನು ಆ ಆವೇಶಭರಿತ ಘೋಷಣೆಗಳೂ…. ನರೇಂದ್ರ ಮೋದಿ, ಅಮಿತ್ ಶಾ ಅದರಲ್ಲೂ ಅವರ ಪ್ರೀತಿಯ ನಾಯಕ ಕುಮ್ಮನಮ್ಮ್ ರಾಜಶೇಖರನ್ ಹೆಸರು ಬಂದಾಗಲೆಲ್ಲ ಎಲ್ಲಿಲ್ಲದ ಉತ್ಸಾಹ…. ಹಣ ಕೊಟ್ಟು ಕರೆದುಕೊಂಡು ಬಂದರು ಜನ ಅರ್ಧಕ್ಕೆ ಮನೆಕಡೆ ಹೆಜ್ಜೆ ಹಾಕುವ ಕಾಲದಲ್ಲಿ ಪ್ರತಿಯೊಬ್ಬ ಕಾರ್ಯಕರ್ತನು (ವಿಶೇಷವಾಗಿ ೫೦% ಇದ್ದ ಮಹಿಳೆಯರು ಸೇರಿ) ಹನ್ನೆರಡು ಹದಿಮೂರು ಕಿಲೋಮೀಟರು ಪಾದಯಾತ್ರೆ ಮಾಡುತ್ತಿದ್ದದ್ದು ಅವರ ಹಠ ಎತ್ತಿ ತೋರಿಸುತ್ತದೆ.. ಸಾಯಂಕಾಲದ ಕಾರ್ಯಕ್ರಮ ಮುಗಿದಮೇಲೆ, ಕಿಲೋಮೀಟರಿನ ವರೆಗೆ ರೋಡಿನುದ್ದಕ್ಕೂ ಜನರು ಅವರ ಅವರ ಮನೆಗಳಿಗೆ ಕಾಲ್ನಡಿಗೆಯಲ್ಲಿ ಯಾವುದೇ ಬೇಸರವಿಲ್ಲದ ಹೋಗುತ್ತಿರುವ ದೃಶ್ಯ ಕಮ್ಯುನಿಷ್ಟರ ವಿರುದ್ಧ ಅವರ ಕಮಿಟ್ಮೆಂಟ್ ತೋರಿಸುತ್ತೆ… ಕ್ರೂರಿ ಕಮ್ಯುನಿಸ್ಟರನ್ನು ಕೇರಳದಿಂದ ಕಿತ್ತೆಸೆಯಬೇಕುನ್ನುವ ಈ ಮುಗ್ದ ಮನಸುಗಳ ಕನಸು ಒಂದಲ್ಲ ಒಂದು ಒಂದು ದಿನ ನನಸಾಗಲೆಂದು ನಾವುಗೆಳಲ್ಲ ಆ ಅನಂತ ಪದ್ಮನಾಭನಲ್ಲಿ ಬೇಡಿಕೊಳ್ಳಬಹುದಷ್ಟೇ…

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments