ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 11, 2017

ರಕ್ತ ಸಿಕ್ತ ಕಮ್ಯುನಿಷ್ಟ ಕುಡುಗೋಲಿಗೆ ಇನ್ನೆಷ್ಟು ಬಲಿ? ಅದನ್ನು ತಡೆಯಲು ಕೇರಳ ಚಲೋ!

‍ನಿಲುಮೆ ಮೂಲಕ

ಶಿವಾನಂದ ಶಿವಲಿಂಗ ಸೈದಾಪೂರ
ವಿಭಾಗ ಸಂಚಾಲಕ,
ಎಬಿವಿಪಿ ಬೆಳಗಾವಿ.

ಬರ್ಬರವಾಗಿ ಹತ್ಯೆ ಮಾಡುವ ಜನರಿಂದ ಶಾಂತಿ ಸೌಹಾರ್ದತೆಯನ್ನು ಬಯಸುವುದು ಬಿಡಿ, ಅದರ ಬಗ್ಗೆ ಕನಸಿನಲ್ಲಿಯೂ ಸಹ ನೆನಪಾದರೆ ಬೆಚ್ಚಿ ಬೀಳುವುದು ಸಹಜ. ಜೀವಂತವಾಗಿರುವ ಮನುಷ್ಯನನ್ನು ಎರ್ರಾಬೀರಿ ಇರಿದು ಕೊಲೆ ಮಾಡಿ ಸೌಮ್ಯವಾದದ ಕತೆ ಹೇಳಲು ಬಂದರೆ ಕೇಳಲು ನಿಲ್ಲುವವರಾದರೂ ಯಾರು? ಈ ದೇಶದಲ್ಲಿ ಎಲ್ಲಲ್ಲಿ ಕಮ್ಯುನಿಷ್ಠ ಪಕ್ಷ ಆಡಳಿತದಲ್ಲಿದೆಯೋ ಅಲ್ಲಲ್ಲಿ ಶಾಂತಿ, ಸೌಹಾರ್ದತೆ ರಾತ್ರಿ ಕನಸಿನಲ್ಲಯೂ ಕಾಣುವಂತಿಲ್ಲ. ಸರ್ವರೂ ಸಮಾನರು ಎನ್ನುವ ಕಮ್ಯುನಿಸಂನ ನೀತಿ ಅಧಿಕಾರ ವಹಿಸಿಕೊಂಡು ಕುರ್ಚಿಯಲ್ಲಿ ಕುಳಿತುಕೊಳ್ಳುವವರಿಗೆ ಮಾತ್ರವೇ ಎಂಬುದನ್ನು ಕೇರಳ ನೋಡಿದರೆ ಗೊತ್ತಾಗುತ್ತದೆ. ಒಟ್ಟಾರೆ ಹೇಳಬೇಕೆಂದರೆ ಕಮ್ಯುನಿಷ್ಠ ಆಡಳಿತದಿಂದ ದೇವರ ನಾಡು ನರಹಂತಕರ ನಾಡಾಗಿದೆ.

2016 ರಲ್ಲಿ ಪಿಣರಾಯಿ ವಿಜಯನ್ ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆ ಏರಿದ ಒಂದೇ ವರ್ಷದಲ್ಲಿ ಸ್ವಂತ ಕ್ಷೇತ್ರವಾದ ಕಣ್ಣೂರಿನಲ್ಲಿ 11 ರಾಜಕೀಯ ಪ್ರೇರಿತ ಕೊಲೆಗಳು ನಡೆದಿವೆ. ಅಂದರೆ ಕೇರಳ ಸರ್ಕಾರದಿಂದ ಮುಂದೊಂದು ದಿನಗಳಲ್ಲಿ ಟೆಂಡರ್ ಮೂಲಕ ರಾಜಕೀಯ ಕೊಲೆಗಳಿಗೆ ಆಹ್ವಾನ ನೀಡಿದರೂ ಅಚ್ಚರಿ ಪಡಬೇಕಿಲ್ಲ. ಯಾಕೆಂದರೆ ಇದೆ ಪಿಣರಾಯಿ ವಿಜಯನ್ ಮತ್ತು ಅPಒIಓನ ರಾಜ್ಯ ಕಾರ್ಯದರ್ಶಿ ಕೊಡೆಯೇರಿ ಬಾಲಕೃಷ್ಟನ್ 1969 ರಲ್ಲಿ ನಡೆದ ಸಿಹಿ ತಿಂಡಿ ವ್ಯಾಪಾರಿ ವಾಡಿಕಲ್ ರಾಮಕೃಷ್ಟರ ಹತ್ಯೆಯ ಪ್ರಮುಖ ಆರೋಪಿಗಳಾಗಿದ್ದರು. ಆದರೇನು? ಕಾನೂನನ್ನು ತಮಗೆ ಬೇಕಾದಂತೆ ಬಳಸಿಕೊಂಡರು. ಸಾಕ್ಷಾಧಾರಗಳ ಕೊರತೆಯಿಂದಲೋ, ನಾಶದಿಂದಲೋ ಇಬ್ಬರು ಖುಲಾಸೆಗೊಂಡರು.

ರಕ್ತಪಾತವೇ ಮುಖ್ಯವೆಂದು ನಂಬಿಹೋದವರು ತದನಂತರ ದಿನಗಳಲ್ಲಿ ಅದರ ಆಳ ಮತ್ತು ಅಂತರವನ್ನು ಕಂಡು ಅದರ ಹಂಗಿನಿಂದ ಹೊರಬಿದ್ದು ಸಂಘದತ್ತ ಮುಖ ಮಾಡಿದವರು ಸಾಕಷ್ಟಿದ್ದಾರೆ. ಸುಜೇಶ್, ಸುನಿಲನಂತವರು ಬಹಳಷ್ಟು ಜನ ಕಮ್ಯುನಿಷ್ಠನಿಂದ ಬೇಸತ್ತು ಸಂಘ ಪರಿವಾರದತ್ತ ಮುಖ ಮಾಡಿ ಬಂದವರು! ಆದರೆ ರಕ್ತಪಾತವೇ ತಮ್ಮ ಮೂಲ ಧ್ಯೇಯ ಎಂದು ತಿಳಿದಿರುವ ಇವರು ರಾಷ್ಟ್ರೀಯ ವಿಚಾರಧಾರೆತ್ತ ಬಂದವರ ಉಸಿರು ನಿಲ್ಲಿಸದೆ ಬಿಟ್ಟವರಲ್ಲ ಈ ಕಮ್ಯುನಿಷ್ಠರು! 2012ರಲ್ಲಿ ತಲಶ್ಯೇರಿಯಲ್ಲಿ ಅತ್ಯಂತ ಭೀಕರವಾಗಿ ಹತ್ಯೆ ಮಾಡಿದ್ದಾರೆ. ಕಮ್ಯುನಿಷ್ಠ ಚಿಂತನೆಯನ್ನು ದಿಕ್ಕರಿಸಿ ನಡೆದವರ ಜೀವವನ್ನೇ ನಾಶಗೊಳಿಸಿದ್ದಾರೆ. ರಾಷ್ಟ್ರೀಯತೆ ಹಾಗೂ ಅದರ ವಿಚಾರಧಾರೆನ್ನೂ ಹರಡುವ ಯಾರೇ ಇದ್ದರೂ ಸಹ ಬರ್ಬರವಾಗಿ ಹತ್ಯೆ ಮಾಡದೆ ಬಿಟ್ಟವರಲ್ಲ. ಈ ಮಾಕ್ರ್ಸವಾದಿಗಳು ಇದುವರೆಗೂ ಯಾವ ದೇಶವನ್ನು ಅಭಿವೃದ್ದಿಯತ್ತ ಸಾಗಿಸಿಲ್ಲ. ಸಾಕ್ಷರತೆಯಲ್ಲಿ ನಂಬರ್ ಒನ್ ಇದ್ದರೂ ಉದ್ಯೋಗ ಸೃಷ್ಟಿಸುವಲ್ಲಿ ಅತ್ಯಂತ ದುರ್ಬಲ ಸ್ಥಿತಿಯಲ್ಲಿರುವುದನ್ನು ಕೇರಳದ ಕಮ್ಯುನಿಷ್ಠ ಒಂದು ಜೀವಂತ ನಿದರ್ಶನ. ಶಾಂತಿ, ಸೌಹಾರ್ದತೆ ಸಮಾನತೆ, ಸೌಜನ್ಯತೆ, ಸೌಮ್ಯವಾದವೆಂದು ಪುಂಗಿ ಉದುವ ಇವರು ಹಿಟ್ಲರನ ದಾರಿಯನ್ನು ಹೊರತುಪಡಿಸಿ ಮತ್ಯಾವ ದಾರಿಯನ್ನು ತುಳಿದಿಲ್ಲ. ತಲೆಯಲ್ಲಿ ಕ್ರೂರತೆಯನ್ನೆ ತುಂಬಿಸಿಕೊಂಡಿದ್ದ ಇವರು ಅಮಾಯಕರನ್ನು ನಯ, ನಾಜೂಕಿನ ಮಾತಿನಿಂದ ಸೆಳೆದು ದಾರಿ ತಪ್ಪಿಸುವಲ್ಲಿ ನಿಸ್ಸಿಮತನವನ್ನು ಹೊಂದಿದ್ದಾರೆ.

ದೇವರ ನಾಡು ಇಂದು ಭಯಂಕರ ಭೂತದ ನಾಡಾಗಿದೆ. ಸಿಪಿಎಂನ ಭದ್ರ ಕೋಟೆಯೆಂದೆ ಕರೆಯಲ್ಪಡುವ ಕಣ್ಣೂರಿನಲ್ಲಿ ಇದುವರೆಗೆ 100ಕ್ಕೂ ಅಧಿಕ ಸಂಘ ಕಾರ್ಯಕರ್ತರ ಕೊಲೆಗಳಾಗಿವೆ. ಪ್ರಸ್ತುತ ಕೇರಳದ ಕಮ್ಯುನಿಷ್ಠ ಸರ್ಕಾರದ ಅವಧಿಯ ಕಗ್ಗೊಲೆಗಳನ್ನು ನೊಡಿದರೆ ಕಮ್ಯುನಿಸಂನ ವಿಕೃತ ದರ್ಶನ ಹೇಗೆಂಬುದು ಅರ್ಥವಾಗುತ್ತದೆ. ಬಾಯಲ್ಲಿ ಬಂಡವಾಳ ಶಾಹಿಯ ವಿರೋಧವೆಂದು ಬೊಗಳೆ ಬಿಡುತ್ತಿರುವ ಇವರ ಸೌಮ್ಯವಾದ ಯಾವಾಗಲೊ ಸತ್ತು ಗೋರಿ ಸೇರಿದೆ. ಅಧಿಕಾರಕ್ಕೆ ಬಂದ ಮಾಕ್ರ್ಸ್‍ವಾದಿ ಸರ್ಕಾರದ ಸಾಧನೆ ಎಂದರೆ 20ಕ್ಕೂ ಹೆಚ್ಚು ರಾಜಕೀಯ ಕಗ್ಗೊಲೆ, 4399 ಸಾರ್ಕೊಟಿಕ್ ಡ್ರಗ್ಸ್ ಪ್ರಕರಣ, 1100 ಕ್ಕೂ ಅಧಿಕ ಬಲತ್ಕಾರಗಳು, 7200 ದಲಿತರ ಮೇಲಿನ ದೌರ್ಜನ್ಯ ಮತ್ತು 1.75 ಲಕ್ಷಕ್ಕೂ ಅಧಿಕ ಕ್ರಿಮಿನಲ್ ಪ್ರಕರಣಗಳು ದಾಖಲು. ಅತಿ ಸಣ್ಣ ರಾಜ್ಯ ಕೇರಳದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ದೇವರ ನಾಡಲ್ಲಿ ನರಹಂತಕರ ಕೃತ್ಯಗಳೆಂದರೂ ತಪ್ಪಾಗಲಾರದು.

ಜಾರ್ ದೊರೆಗಳ ಪಾಪಕ್ಕೆ ಹುಟ್ಟಿದ ಕಮ್ಯುನಿಸಂ ಪಿಂಡ ಪ್ರಜಾತಂತ್ರ ವ್ಯವಸ್ಥೆಯನ್ನು ಒಳಗಿನಿಂದಲೇ ನಾಶ ಮಾಡಲು ಹವನಿಸುತ್ತಿದೆ. ಯಾವುದೋ ಕಾಲಘಟ್ಟಕ್ಕೆ ಜನ್ಮ ತಾಳಿದ ಈ ಪಿಂಡ ಇಂದು ದೇವರ ನಾಡಲ್ಲಿ ನರಹಂತಕರನ್ನು ಪೋಷಣೆ ಮಾಡುತ್ತಿದೆ. ಕಷ್ಟ ಜೀವಿಗಳು, ಶೋಷಿತ ವರ್ಗದ ಪರವೆಂದು ಬಿಂಬಿಸಲು ವಿವಿಧ ಬಗೆಯ ನಾಟಕಗಳು ನಡೆಯುತ್ತಲೆ ಇವೆ. ಕಮ್ಯುನಿಸಂ ಈ ದೇಶಕ್ಕೆ ಒಗ್ಗುವುದಿಲ್ಲವೆಂದು ಗೊತ್ತಿದ್ದರೂ ಕೇರಳವನ್ನು ನುಂಗಲು ಹಪಹಪಿಸುತ್ತಿದೆ. ತಮ್ಮ ನಿಲುವು ಒಪ್ಪದಿರುವವರನ್ನು ಭೀಕರವಾಗಿ ಕೊಲೆಗೆಯುವ ಮೂಲಕ ಸರ್ವಾಧಿಕಾರತ್ವಕ್ಕೆ ಬೆಂಬಲಿಸಲಾತ್ತಿದೆ. ರಾಷ್ಟ್ರೀಯತೆ ವಿಚಾರಗಳನ್ನು ಬಿತ್ತುವಲ್ಲಿ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿರುವ ಆರೆಸ್ಸೆಸ್, ಎಬಿವಿಪಿ, ಬಿಎಂಎಸ್ ಮತ್ತಿತರ ಸಂಘ ಪರಿವಾರದ ಕಾರ್ಯಕರ್ತರನ್ನು ಹತ್ಯೆಗೈಯುತ್ತಿರುವ ಕೊಲೆಗಡುಕರಿಗೆ ಆಶ್ರಯ ತಾಣವಾಗಿ ನಿಂತಿರುವುದು ಕೇರಳದ ಪಿಣರಾಯಿ ವಿಜಯನ್ ಸರ್ಕಾರವೇ ಹೊರತು ಮತ್ಯಾರು ಅಲ್ಲ. ಇಂತಹವರ ಕೈಯಲ್ಲಿ ಸಿಕ್ಕು ದೇವರ ನಾಡು ನಾಲ್ಕು ದಶಕಗಳಿಂದ ಮುಮ್ಮಲವಾಗಿ ಮರುಗುತ್ತಿದೆ.

ಕೇರಳದಲ್ಲಿ ಯಾವಾಗ ಸಂಘದ ಸಿಳ್ಳೆ ಮುಂಜಾನೆ ಹೊತ್ತಿಗೆ ದೇವರ ನಾಡಿನಲ್ಲಿ ಮೊಳಗಲಾರಂಭಿಸಿತೋ ಆವಾಗಿನಿಂದಲೇ ಕಮ್ಯುನಿಸಂನ ಒಲವು ಜನರಲ್ಲಿ ನಶಿಸಲಾರಂಭಿಸಿತು. ಅPIಒ ತನ್ನ ಅಸ್ತಿತ್ವಕ್ಕಾಗಿ ಹಿಂಸಾಚಾರದ ಮಾರ್ಗ ತುಳಿಯಲಾರಂಭಿಸಿತು. 1990ರ ಹೊತ್ತಿನಲ್ಲಿ ಎಬಿವಿಪಿ ಕಾಲೇಜು ಕ್ಯಾಂಪಸಗಳಲ್ಲಿ ತನ್ನ ಕಾರ್ಯಚಟುವಟಿಕೆಯನ್ನು ಆರಂಭಿಸಿದಾಗ ಕಮ್ಯುನಿಷ್ಠ ನೀತಿಗೆ ಅದು ನುಂಗಲಾರದ ತುತ್ತಾಯಿತು. ರಾಷ್ಟ್ರೀಯತೆ ವಿಚಾರಗಳನ್ನು ಪಸರಿಸುವ ತನ್ನ ಕಾರ್ಯ ಚಟುವಟಿಕೆಯನ್ನು ಆರಂಭಿಸಿದಾಗ ಕಮ್ಯುನಿಷ್ಠರಿಗೆ ನಡುಕ ಹುಟ್ಟಿಕೊಂಡಿತು. ಎಂದಿನಂತೆ ದೇಶ ವಿರೋಧಿ ಚಟುವಟಿಕೆ ತಾಯಿಯಾಗಿದ್ದ ಕಮ್ಯುನಿಸಂ ಹತ್ಯೆಗಳಿಗೆ ಬೆಂಬಲ ನೀಡಲಾರಂಭಿಸಿತು. ಪಿ ಎಸ್ ಅನು, ಕಿಮ್ ಕರುಣಾಕರನ್, ಎಸ್ ಸುಜಿತರಂತಹ ದೇಶಭಕ್ತ ವಿದ್ಯಾರ್ಥಿಗಳನ್ನು ಪಂಪಾನದಿಯಲ್ಲಿ ಮುಳುಗಿಸಿ ಕಲ್ಲು ಹೊಡೆದು ಸಾಯಿಸಿತು. ರಕ್ತಪಾತದಿಂದಲೆ ತನ್ನ ನೆಲೆಯನ್ನು ಭದ್ರಪಡಿಸಿಕೊಳ್ಳಲು ಹೆಣಗಾಡಲಾರಂಭಿಸಿತು.

ರಕ್ತ ಪಾತವನ್ನೇ ತಮ್ಮ ಮೂಲ ಗುರಿಯಾಗಿಸಿಕೊಂಡ ಕಮ್ಯುನಿಸಂ, ಅದರ ರಕ್ಕಸಿಯ ಕೃತ್ಯಗಳ ವಿರುದ್ದ ಧ್ವನಿ ಎತ್ತಿದವರ ಧ್ವನಿ ಅಡಗಿಸಲು ಸಿದ್ದವಾಗಿ ನಿಂತಿತು. ಪದೇ ಪದೇ ಅವರು ಹೇಳುವ ಶಾಂತಿ, ಸೌಹಾರ್ದತೆ, ಸಮತಾವಾದಗಳು ಕಮ್ಯುನಿಸಂನ ದೃಷ್ಟಿಯಲ್ಲಿ ರಕ್ಕಸಿಯ ಕೃತ್ಯಗಳೇ ಶಾಂತಿ, ಸೌಹಾರ್ದತೆಯಾಗಿ ಬಿಟ್ಟಿವೆ.
ಕೇರಳದಲ್ಲಿ ಕೆಲವೊಂದು “ಪಾರ್ಟಿ ವಿಲೇಜ್” ಎಂಬ ಕಮ್ಯುನಿಸಂನ ಸರ್ವಾಧಿಕಾರತ್ವದ ಹಳ್ಳಿಗಳಿವೆ. ಅಂತಹ ಹಳ್ಳಿಗಳಲ್ಲಿ ಸಾಮಾನ್ಯ ಜನರು ಯಾವುದೇ ರೀತಿಯ ಸ್ವ-ನಿರ್ಧಾರ ತೆಗೆದುಕೊಳ್ಳುವಂತಿಲ್ಲ. ಕಾನೂನು ಪರಿಪಾಲಕರು ಕೂಡ ಅಲ್ಲಿ ಅನುಮತಿ ಇಲ್ಲದೆ ಪ್ರವೇಶಿಸುವಂತಿಲ್ಲ. ಈ ವ್ಯವಸ್ಥೆಯನ್ನು ಒಂದು ಬಾರಿ ಅಚಲೋಕಿಸಿದರೆ ಅಜ್ಜಿ ಹೇಳುವ ಯಾವುದೋ ಕಾಲದ ರಾಕ್ಷಸ ಸಾಮ್ರಾಜ್ಯದ ಕಥೆಯಂತಿದೆ ದೇವರ ನಾಡಿನ ಪರಿಸ್ಥಿತಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಪ್ರಜೆಯು ಅರಸನಂತಿದ್ದರೆ ಕೆಲವು ಹಳ್ಳಿಗಳಿಗೆ ಆ ಭಾಗ್ಯವೇ ಇದ್ದಂತಿಲ್ಲ. ಆ ಹಳ್ಳಿಗೆ ಹೋಗಬೇಕಿದ್ದರೆ ಕಮ್ಯುನಿಷ್ಠನಿಂದ ಅನುಮತಿ ಪಡೆದು ಹೋಗಬೇಕು. ಸೈದಾಂತಿಕವಾಗಿ ಗೆಲ್ಲಲಾರದೆ, ಭಯಗ್ರಸ್ಥರನ್ನಾಗಿ ಹೆಸರಿಸುವಿಕೆ ನಿರಂತರವಾಗಿ ನಡೆಯುತ್ತಲೇ ಇದೆ. ನೂರಕ್ಕೂ ಅಧಿಕ ಮಾರಣಹೋಮ ನಡೆದಿರುವುದಕ್ಕೆ ಸಾಕಷ್ಟು ಸಾಕ್ಷಾಧಾರಗಳಿದ್ದರೂ ಕಾನೂನು ವ್ಯವಸ್ಥೆಗೂ ಧೈರ್ಯದ ಕೊರತೆ ಇದೆ.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಇದೆ ನವೆಂಬರ್ 11ಕ್ಕೆ ಕೇರಳ ಚಲೋ ಹೋರಟಿದೆ. ಕೇರಳ ಚಲೋ ಎಂದರೆ ಅದು ಮಲಯಾಳಿಗಳ ವಿರುದ್ದ ನಡೆಯುವ ಚಳುವಳಿಯಲ್ಲ! ಕಮ್ಯುನಿಷ್ಠ ಹಿಂಸಾಚಾರದಿಂದ ತತ್ತರಿಸಿ ಹೋಗಿರುವ ಮಲಯಾಳಿ ಜನತೆಗೆ ಜಾಗೃತಿ ಮೂಡಿಸಲು ಹೊರಟಿರುವ ಆಂದೋಲನ. ರಾಜಕೀಯ ಬಲದಿಂದ, ಹಣದ ಮದದಿಂದ ರಾಷ್ಟ್ರೀಯತೆಯ ವಿಚಾರಗಳನ್ನು ಬಿತ್ತರಿಸುವ ಧ್ವನಿಗಳನ್ನು ಹಿಸುಕುತ್ತಿರುವ ಲಾಲ್ ಸಲಾಮಿಗಳ ಬಂಡವಾಳವನ್ನು ಬಯಲಿಗೆ ಎಳೆಯುವ ಶಾಂತಿಯುತ ಪ್ರತಿಭಟನೆ. 232ಕ್ಕೂ ಹೆಚ್ಚಿನ ಜನರ ಜೀವ ಹೊಸಕಿರುವ ಕೆಂಪು ರಾಕ್ಷಸರ ಅಟ್ಟಹಾಸಕ್ಕೆ ಅಂತಿಮ ಯಾತ್ರೆ ಮುಗಿಸಲು, ಕಮ್ಯುನಿಸಂನ ಅಟ್ಟಹಾಸಕ್ಕೆ ನಲಗುತ್ತಿರುವ ನಮ್ಮ ಅಣ್ಣ, ತಮ್ಮಂದಿರರಿಗೆ ನೈತಿಕ ಬೆಂಬಲ ನೀಡಲು ದೇಶದ ವಿವಿಧ ಭಾಗಗಳಿಂದ ವಿದ್ಯಾರ್ಥಿ ಸಮುದಾಯ “ವಂದೇ ಮಾತರಂ”, “ಭಾರತ ಮಾತಾ ಕೀ ಜೈ” ಘೋಷಣೆಯೊಂದಿಗೆ ವಿದ್ಯಾರ್ಥಿ ಸಮೂಹದಿಂದ ದೇವರ ನಾಡಿಗೆ ಉತ್ಸಾಹದಿಂದ ನಡೆಯುತ್ತಿರುವ ಶಾಂತಿಯ ನಡಿಗೆ.

Read more from ಲೇಖನಗಳು

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments