ಕಥೆ – ಕವನ ಸ್ಪರ್ಧೆ ( ಪತ್ರಿಕಾ ಪ್ರಕಟಣೆ )
ಸಹಾಯಕ ನಿಲಯ ನಿರ್ದೇಶಕರು ಮತ್ತು ಕಾರ್ಯಕ್ರಮ ಮುಖ್ಯಸ್ಥರು,
ಆಕಾಶವಾಣಿ, ಮಂಗಳೂರು – 575 004.
ದೂರವಾಣಿ: (0824) 2211382
ಮಂಗಳೂರು ಆಕಾಶವಾಣಿ ನಿಲಯವು ಅನಂತಪ್ರಕಾಶ, ಕಿನ್ನಿಗೋಳಿ ಮತ್ತು ಅರೆಹೊಳೆ ಪ್ರತಿಷ್ಠಾನ, ಮಂಗಳೂರು ಇವರ ಸಹಯೋಗದಲ್ಲಿ ಕನ್ನಡ ಕತೆ ಮತ್ತು ಕವನ ಸ್ಪರ್ಧೆಗಳನ್ನು ಹಮ್ಮಿಕೊಂಡಿದೆ.
ವಿಜೇತರಿಗೆ ನಗದು ಪುರಸ್ಕಾರ, ಪ್ರಶಸ್ತಿ ಪತ್ರ ಮತ್ತು ಪುಸ್ತಕ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಗುವುದು. ಪ್ರತಿ ವಿಭಾಗದಲ್ಲಿ ಮೂರು, ಅಂದರೆ ಒಟ್ಟು ಆರು ಬಹುಮಾನಗಳು.
ಕತೆ ಮತ್ತು ಕವನ ಸ್ಪರ್ಧೆಗಳಲ್ಲಿ ಉಡುಪಿ, ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ 18 ರಿಂದ 30 ವರ್ಷ ವಯೋಮಿತಿಯ ಎಲ್ಲ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾಗವಹಿಸಬಹುದು. ಕತೆ ಮತ್ತು ಕವನ ಎರಡೂ ಸ್ಪರ್ಧೆಗಳಲ್ಲಿ ಅಭ್ಯರ್ಥಿಗಳು ಭಾಗವಹಿಸಬಹುದು. ಕತೆಗೆ ಪದಮಿತಿ 2000 ದಿಂದ 3000 ಪದಗಳು. ಕನಿಷ್ಠ 20 ಸಾಲುಗಳಿಗಿಂತ ಕಡಿಮೆಯಿರದ ಮೂರು ಕವನಗಳನ್ನು ಕಳುಹಿಸಬೇಕು. ಕತೆ-ಕವನಗಳು ಹೊಸದಾಗಿದ್ದು ಈ ಹಿಂದೆ ಎಲ್ಲಿಯೂ ಪ್ರಕಟವಾಗಿರಬಾರದು. ಕತೆ ಯಾ ಕವನಗಳನ್ನು ಬರೆದ ಕಾಗದದ ಮೇಲೆ ಹೆಸರು ಇತ್ಯಾದಿ ಮಾಹಿತಿಗಳನ್ನು ಬರೆಯಬಾರದು. ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಇತ್ಯಾದಿ ಮಾಹಿತಿಗಳನ್ನು ಪ್ರತ್ಯೇಕ ಹಾಳೆಯಲ್ಲಿ ಬರೆದು ಲಗತ್ತಿಸಬೇಕು. ಬಹುಮಾನಿತ ಕತೆ, ಕವನಗಳಲ್ಲದೆ ಪ್ರಕಟಣೆ, ಪ್ರಸಾರಯೋಗ್ಯ ಕತೆ-ಕವನಗಳಿಗೆ ಕೂಡಾ ಸೂಕ್ತ ಸಂಭಾವನೆ ನೀಡಿ ಧ್ವನಿಮುದ್ರಿಸಿಕೊಳ್ಳಲಾಗುವುದು.
ನಿಮ್ಮ ಕತೆ-ಕವನಗಳು ನಮ್ಮ ಕೈಸೇರಬೇಕಾದ ಕೊನೆಯ ದಿನಾಂಕ ಡಿಸೆಂಬರ್ 10, 2017. ಕತೆ, ಕವನಗಳನ್ನು ಕಳುಹಿಸಬೇಕಾದ ವಿಳಾಸ: ನಿಲಯ ನಿರ್ದೇಶಕರು, ಯುವವಾಣಿ ಕತೆ-ಕವನ ಸ್ಪರ್ಧೆ ವಿಭಾಗ, ಆಕಾಶವಾಣಿ, ಮಂಗಳೂರು – 575 004. ಕವನಗಳನ್ನು ಇ-ಮೈಲ್ ಮುಖಾಂತರ ಕೂಡಾ ಕಳುಹಿಸಬಹುದು.
ನಮ್ಮ ಇ-ಮೈಲ್ ವಿಳಾಸ airmangaluru.adp@gmail.com