ವಿಷಯದ ವಿವರಗಳಿಗೆ ದಾಟಿರಿ

ಜನವರಿ 6, 2018

ಸಂಘಟನೆಯನ್ನು ನಿಷೇಧಿಸಬಹುದು.ಆದರೆ ಮನಸ್ಥಿತಿಯನ್ನು ಏನು ಮಾಡುವುದು?

‍ನಿಲುಮೆ ಮೂಲಕ

– ರಾಕೇಶ್ ಶೆಟ್ಟಿ

ಸಂಘಟನೆಯನ್ನು ನಿಷೇಧಿಸಬಹುದು.ಆದರೆ,ಮನಸ್ಥಿತಿಯನ್ನು ಏನು ಮಾಡುವುದು? ಇಂತಹದ್ದೊಂದು ಪ್ರಶ್ನೆಯನ್ನು ಫೇಸ್ಬುಕ್ಕಿನಲ್ಲಿ ಗೆಳೆಯ ಸಂದೀಪ್ ಕೇಳಿದ್ದರು.ಅವರ ಪ್ರಶ್ನೆಯಿದ್ದಿದ್ದು  Ban PFI ಎಂಬ ಹೋರಾಟದ ಕುರಿತು. ವಾಜಪೇಯಿಯವರ ಕಾಲದಲ್ಲಿ ಸಿಮಿ ಸಂಘಟನೆಯನ್ನು ನಿಷೇಧಿಸಲಾಯಿತು. ಆಮೇಲೇನಾಯ್ತು? ರಕ್ತಬೀಜಾಸುರರಂತೆ ನಾನಾ ಹೆಸರು,ಸಂಘಟನೆಗಳನ್ನು ಮಾಡಿಕೊಂಡು ಇಸ್ಲಾಮೀಕರಣದ ತಮ್ಮ ಅಜೇಂಡಾವನ್ನು ಇವರು ಒಂದಲ್ಲ ಒಂದು ರೀತಿಯಲ್ಲಿ ಮುಂದುವರೆಸಿಕೊಂಡು ಬಂದರು.ಮುಂಬೈ ಸರಣಿ ಬಾಂಬ್ ಬ್ಲಾಸ್ಟ್ ನಿಂದ ಹಿಡಿದು ಇತ್ತೀಚಿನ ದಿನಗಳವರೆಗೂ ದೇಶದಲ್ಲಿ ನಡೆದ ಬಾಂಬ್ ಸ್ಪೋಟದ ಆರೋಪಿಗಳು ಒಂದೋ ನಿಷೇಧಿತ ಸಿಮಿಯ ಕಾರ್ಯಕರ್ತರಾಗಿದ್ದವರು ಅಥವಾ ಹೊಸತೊಂದು ಸಂಘಟನೆಯ ಬ್ಯಾನರಿನಡಿಯಲ್ಲಿ ಸಿಮಿಯ ಕಾರ್ಯವನ್ನೇ ಮುಂದುವರೆಸಿದ್ದವರು.ಅಂದರೆ ಒಂದು ವಿಷಯ ಸ್ಪಷ್ಟವಾಗಿದೆ. ಸಂಘಟನೆ ನಿಷೇಧವಾದರೂ, ಹೆಸರು ಬದಲಾದರೂ ಅವರ “ಉದ್ದೇಶ” ಬದಲಾಗಲಿಲ್. ಏಕೆ? ಈ ಪ್ರಶ್ನೆಗೆ ಉತ್ತರ ಡಾ.ಬಿ.ಆರ್ ಅಂಬೇಡ್ಕರ್ ಅವರ “Pakistan or Partition of India” ಪುಸ್ತಕದಲ್ಲಿ ಸಿಗುತ್ತದೆ. ಆ ಪುಸ್ತಕದಲ್ಲಿ ಅಂಬೇಡ್ಕರ್ ಅವರು ಭಾರತದ ವಿಭಜನೆ ಮತ್ತು ಪಾಕಿಸ್ತಾನದ ಬಗ್ಗೆ ಮಾತ್ರ ಮಾತನಾಡಿಲ್ಲ,ಅವೆರಡರ ಜೊತೆಗೆ ಮುಖ್ಯವಾಗಿ,ಇಸ್ಲಾಮ್ ಹಾಗೂ ಭಾರತೀಯ ಮುಸ್ಲಿಂರ ಮನಸ್ಥಿತಿಯ ಬಗ್ಗೆಯೂ ವಿವರವಾಗಿ ಬರೆದಿದ್ದಾರೆ.

ಇಂತಹ ಸಂಘಟನೆಗಳ ಬಹುಮುಖ್ಯ ಉದ್ದೇಶ,ಒಂದು ದೇಶವನ್ನು ದಾರ್-ಉಲ್-ಅರ್ಬ್ ನಿಂದ ದಾರ್-ಉಲ್-ಇಸ್ಲಾಮ್ ಮಾಡುವುದೇ ಆಗಿರುತ್ತದೆ. ಏನಿದು ದಾರ್-ಉಲ್-ಅರ್ಬ್/ದಾರ್-ಉಲ್-ಇಸ್ಲಾಮ್? ಅಂಬೇಡ್ಕರ್ ಅವರ ಮಾತನ್ನೇ ಕೋಟ್ ಮಾಡುತ್ತೇನೆ. “… According to Muslim Canon Law the world is divided into two camps, Dar-ul-lslam (abode of Islam), and Dar-ul-Harb (abode of war). A country is Dar-ul-lslam when it is ruled by Muslims. A country is Dar-ul-Harb when Muslims only reside in it but are not rulers of it. That being the Canon Law of the Muslims, India cannot be the common motherland of the Hindus and the Musalmans. It can be the land of the Musalmans—but it cannot be the land of the ‘Hindus and the Musalmans living as equals…” ಅಂದರೆ, ಯಾವ ದೇಶವು ಸಂಪೂರ್ಣವಾಗಿ ಇಸ್ಲಾಮ್ ಅನ್ನು ಒಪ್ಪಿಕೊಂಡು ಮುಸ್ಲಿಮರಿಂದ ಆಳಲ್ಪಡುತ್ತಿದೆಯೋ ಅದು ದಾರ್-ಉಲ್-ಇಸ್ಲಾಮ್ ಎಂದು ಕರೆಸಿಕೊಳ್ಳುತ್ತದೆ. ಯಾವ ದೇಶವು ಮುಸ್ಲಿಮೇತರರಿಂದ ಆಳಲ್ಪಡುತ್ತಿದೆಯೋ ಅದು ದಾರ್-ಉಲ್-ಅರ್ಬ್ ಆಗಿರುತ್ತದೆ.

ಮೂಲಭೂತವಾಗಿ Semitic Religionಗಳು “ತನ್ನ ಮಾರ್ಗವೊಂದೇ ಸತ್ಯ ಉಳಿದವೆಲ್ಲ ಮಿಥ್ಯಾ” ಎನ್ನುತ್ತವೆ.ಅಷ್ಟು ಹೇಳಿ ನಿಲ್ಲುವುದಿಲ್ಲ,ಮಿಥ್ಯದ ಹಾದಿಯಲ್ಲಿರುವವರನ್ನು ಸತ್ಯದ ಹಾದಿಗೆ ತರುವುದೂ ಅವರ ಕರ್ತವ್ಯವೆಂದೇ ಭಾವಿಸುತ್ತಾರೆ. ಕ್ರಿಶ್ಚಿಯನ್ ಮಿಷನರಿಗಳು ಇದನ್ನು ಬೆಣ್ಣೆಯಿಂದ ಕೂದಲು ತೆಗೆದಂತೆ ಮಾಡಿದರೆ (Inquisition ಕಾಲವನ್ನು ಬಿಟ್ಟು), ಮುಸ್ಲಿಂರು ಬಲಪ್ರಯೋಗ,ಭಯದ ಮೂಲಕ ಸಾಧಿಸಲು ಪ್ರಯತ್ನಿಸುತ್ತಾರೆ. ಜೋರಾಷ್ಟ್ರಿಯನ್ ದೇಶವಾಗಿದ್ದ ಇರಾನ್ ಅನ್ನು ಪ್ರವೇಶಿಸಿದ ಇಸ್ಲಾಮ್, ಇಡೀ ದೇಶವನ್ನು ಕೇವಲ 15 ವರ್ಷಗಳಲ್ಲಿ ಇಸ್ಲಾಮೀಕರಣ ಮಾಡಿಬಿಟ್ಟಿತು. ಮೆಸಪಟೋಮಿಯಾ,ಬ್ಯಾಬಿಲೋನಾಗಳ ಇಸ್ಲಾಮೀಕರಣ 17 ವರ್ಷಗಳೊಳಗೆ ನಡೆದರೇ, ಈಜಿಪ್ಟ್ 21 ವರ್ಷಗಳಲ್ಲಿ ಶರಣಾಯಿತು.ಹೀಗೆ ತಾನು ಕಾಲಿಟ್ಟ ಕಡೆಯಲ್ಲೆಲ್ಲಾ, ದಾರ್-ಉಲ್-ಅರ್ಬ್  ನಿಂದ ದಾರ್-ಉಲ್-ಇಸ್ಲಾಮ್ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಮಾಡಿಕೊಂಡು ಬಂದವರಿಗೆ ಭಾರತ ಮಾತ್ರ ಸವಾಲು ಹಾಕಿ ನಿಂತಿದ್ದು.840 ವರ್ಷಗಳಷ್ಟು ಪ್ರಯತ್ನದ ನಂತರವೂ ಭಾರತವಿನ್ನೂ “ದಾರ್-ಉಲ್-ಅರ್ಬ್” ಆಗಿಯೇ ಉಳಿದುಕೊಂಡಿದೆ. ಹಾಗಾಗಿ ಈ ದೇಶ ಇನ್ನೂ ಅದಿನ್ನೆಷ್ಟು ರಕ್ತಪಾತ ನೋಡಲಿಕ್ಕಿದೆಯೋ? ಇದೆಲ್ಲ ಭಯ ಬೀಳಿಸಲು ಹೇಳುವ ಮಾತಲ್ಲ. ಭಾರತದ ವಿಭಜನೆ, ನಂತರ ಪಾಕಿಸ್ತಾನ,ನಂತರದ ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಏನಾಯಿತೆಂದು ಇತಿಹಾಸ ನೋಡಿದರೆ ವಾಸ್ತವ ಪರಿಸ್ಥಿತಿ ಅರ್ಥವಾದೀತು.

ಬ್ರಿಟಿಷರ ಜೊತೆ ಸೇರಿಕೊಂಡ ಮುಸ್ಲಿಂ ಲೀಗ್ (ಇಲ್ಲಿನ ಜಾತ್ಯಾತೀತರ ಬೆಂಬಲದೊಂದಿಗೆ) ಭಾರತವನ್ನು ವಿಭಜಿಸಿದ್ದು ಗೊತ್ತೇ ಇದೆ.ವಿಭಜನೆಗಾಗಿ ನಡೆದ ದೊಡ್ಡ ರಕ್ತಪಾತ ಮತ್ತು ಅದು ಜಾರಿಯಾದ ರೀತಿಯನ್ನೂ ನಾವು ಗಮನಿಸಬೇಕು. ಡೈರೆಕ್ಟ್ ಆಕ್ಷನ್ ಡೇ ಹೆಸರಿನಲ್ಲಿ ಕೋಲ್ಕತ್ತಾದಲ್ಲಿ ಹಿಂದೂಗಳ Ethnic Cleansing ಮಾಡಲಾಯಿತು.ಹಿಂದುಗಳಿದ್ದರೆ ತಾನೇ ಪ್ರತ್ಯೇಕ ಭೂ ಭಾಗ ಕೇಳಲು ಸಮಸ್ಯೆ! ಮುಸ್ಲಿಂ ಲೀಗಿನ ಜಿಹಾದ್ ನಿಂತಿದ್ದು ಸ್ವಯಂ ರಕ್ಷಣೆಗಾಗಿ  ಹಿಂದುಗಳೂ ಶಸ್ತ್ರವೆತ್ತಿಕೊಂಡಾಗಲೇ… ! ವಿಭಜನೆಯ ನಂತರ ಪಾಕಿಸ್ತಾನದಲ್ಲಿದ್ದ ಹಿಂದೂ ಅಲ್ಪಸಂಖ್ಯಾತರ ಕತೆ ಏನಾಯಿತು ಹೇಳಿ? ಅರಬ್ಬೀ ಸಮುದ್ರ ಬಾಯಿಬಿಟ್ಟು ಅವರನ್ನು ನುಂಗಿ ಹಾಕಿತೇ? ಇಲ್ಲ,ಅವರು ದಾರ್-ಉಲ್-ಇಸ್ಲಾಂ ಕಾರ್ಯಾಚರಣೆಯ ಬಲಿಪಶುಗಳಾದರು. ಬಾಂಗ್ಲಾದೇಶದಲ್ಲೂ ಆಗಿದ್ದು ಇದೆ.ಅಂದರೆ,ಕೇವಲ ರಾಜ್ಯಾಡಳಿತ ಮುಸಲ್ಮಾನರ ಕೈಯಲ್ಲಿದ್ದರೇ ಸಾಲದು,ದೇಶದಲ್ಲಿರುವ ಪ್ರತಿಯೊಬ್ಬರೂ ಇಸ್ಲಾಂ ಅನ್ನು ಒಪ್ಪಿಕೊಳ್ಳಲೇಬೇಕು.”ಸಾವು ಅಥವಾ ಮತಾಂತರ” ಎರಡರಲ್ಲಿ ಒಂದು ಆಯ್ಕೆ.

ಇಸ್ಲಾಮಿಕ್ ಸ್ಟೇಟ್ ಸ್ಥಾಪನೆ ಅಂತಿಮಗುರಿ… ಇಂತಹದ್ದೇ ಯೋಚನೆಯ ತಳಹದಿಯಲ್ಲಿ ಕೆಲಸ ಮಾಡುತ್ತಿರುವುದು PFI ನಂತಹ ಸಂಘಟನೆಗಳು.ಈ ಮಾತನ್ನು ನಾನು ಹೇಳುತ್ತಿಲ್ಲ. ಇಂಡಿಯಾ ಟುಡೇ ವಾಹಿನಿಯು ಮಾಡಿದ ಸ್ಟಿಂಗ್ ಆಪರೇಷನ್ನಿನಲ್ಲಿ ಖುದ್ದು ಆ ಸಂಘಟನೆಯ ಅಧ್ಯಕ್ಷನೇ ಅದನ್ನು ಒಪ್ಪಿಕೊಂಡಿದ್ದಾನೆ. “PFI ಮತ್ತು ಸತ್ಯಸಾರಿಣಿ” ಸಂಘಟನೆಯ ಗುರಿ ಭಾರತವನ್ನು ಇಸ್ಲಾಮಿಕ್ ಸ್ಟೇಟ್ ಮಾಡುವುದೇ? ಅಥವಾ ಇಡೀ ಜಗತ್ತನ್ನೇ ಇಸ್ಲಾಮಿಕ್ ರಾಷ್ಟ್ರ ಮಾಡುವುದೇ? ಎಂದು ಮಫ್ತಿಯಲ್ಲಿದ್ದ ವಾಹಿನಿಯ ವರದಿಗಾರ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ಕೇವಲ ಭಾರತವೇಕೆ,ಇಡೀ ಜಗತ್ತಿನ ಇಸ್ಲಾಮೀಕರಣವೇ ಅಂತಿಮ ಗುರಿ.ಮೊದಲು ಭಾರತವನ್ನು ಇಸ್ಲಾಮಿಕ್ ಸ್ಟೇಟ್ ಮಾಡುತ್ತೇವೆ ನಂತರ ಉಳಿದ ದೇಶಗಳತ್ತ ಹೋಗುತ್ತೇವೆ ಎನ್ನುತ್ತಾನೆ….

ಇಸ್ಲಾಮಿಕ್ ಸ್ಟೇಟ್ ನಿರ್ಮಾಣಕ್ಕೆ ನೀವು ಅನುಸರಿಸುತ್ತಿರುವ ಮಾರ್ಗ ಯಶಸ್ವಿಯಾಗುವುದೇ ಎನ್ನುವ ಪ್ರಶ್ನೆಗೆ, ಖಂಡಿತ ಆಗುತ್ತದೆ,ಆಗುತ್ತಲಿದೆ,ಇದೊಂದು ಧೀರ್ಘ ಕಾಲೀನ ಯೋಜನೆ ಎನ್ನುತ್ತಾನೆ.

ಸತ್ಯಸಾರಿಣಿ ಹೆಸರಿನಲ್ಲಿ “ಧಾರ್ಮಿಕ ಶಿಕ್ಷಣ ಕೇಂದ್ರ”ದ  ಲೈಸೆನ್ಸ್ ಪಡೆದುಕೊಂಡು  ಮತಾಂತರ ಕೆಲಸವನ್ನು ವ್ಯಾಪಕವಾಗಿ ಮಾಡುತ್ತಿರುವುದನ್ನು ಖುದ್ದು ಅದೇ ಸಂಘಟನೆಯ ಮಹಿಳಾ ಘಟಕದ ಅಧ್ಯಕ್ಷೆ,ಅದೇ ವಾಹಿನಿಯ ಸ್ಟಿಂಗ್ ಆಪರೇಷನ್ನಿನಲ್ಲಿ ಬಾಯಿ ಬಿಟ್ಟಿದ್ದಾರೆ. ಬ್ರೈನ್ ವಾಷ್ ಮಾಡಿ,ಮತಾಂತರಿಸಿ,ಕಡೆಗೆ ಮತಾಂತರವಾಗಿದ್ದರೆ ಎಂದು ಸರ್ಟಿಫಿಕೇಟನ್ನು ಕೊಡುತ್ತೇವೆ ಎನ್ನುತ್ತಾರೆ.

ಲವ್ ಜಿಹಾದ್ ಕೂಡ ಮತಾಂತರದ ಇನ್ನೊಂದು ಭಾಗವೇ ಹೌದು. ಅದನ್ನು NIA ತನಿಖೆ ಕೂಡ ಧೃಢಪಡಿಸಿದೆ.ಲವ್ ಜಿಹಾದ್ ಹೆಸರಿನಲ್ಲಿ ವ್ಯಾಪಕವಾದ ಸಂಚು ಹೇಗೆ ನಡೆಯುತ್ತಿದೆ,ಯಾವ ಜಾತಿಯವರಿಗೆ ಯಾವ ರೇಟ್ ಕಾರ್ಡ್ ಕೂಡ ಇದೆ. ಇಂತಹ ಹೀನ ಕೃತ್ಯವನ್ನೂ ಪ್ರೇಮದ ಹೆಸರಿನಲ್ಲಿ ಸಮರ್ಥಿಸಿಕೊಳ್ಳುವ ಸೆಕ್ಯುಲರ್ ಮೂರ್ಖರು ಇದ್ದಾರೆ. ಕೇರಳದ ಕಾಂಗ್ರೆಸ್ ಮುಖ್ಯಮಂತ್ರಿಯಾಗಿದ್ದ ಅಚ್ಯುತಾನಂದನ್ ಅವರು ಕೂಡ PFI,ಕೇರಳದ ಇಸ್ಲಾಮೀಕರಣ ಹಾಗೂ  ಮತ್ತು ಲವ್ ಜಿಹಾದ್ ಮೂಲಕ ಮತಾಂತರದ ಕೆಲಸ ನಡೆಸುತ್ತಿದೆ ಎಂದಿದ್ದರು.ಕೇರಳದ ಚರ್ಚ್,ಕ್ರೈಸ್ತ ಸಂಘಟನೆಗಳೂ ಕೂಡ ಈ ಲವ್ ಜಿಹಾದ್ ವಿರುದ್ಧ ದನಿಯೆತ್ತಿವೆ.

ಕರ್ನಾಟಕದಲ್ಲೂ ಈ ಸಂಘಟನೆಯ ಅಟ್ಟಹಾಸದ ಇತಿಹಾಸವಿದೆ. ಶಿವಮೊಗ್ಗ,ಮೈಸೂರಿನಲ್ಲಿ ನಡೆದ ಕೋಮುಗಲಭೆ, ಹುಣಸೂರಿನಲ್ಲಿ ವಿದ್ಯಾರ್ಥಿಗಳ ಅಪಹರಣ ಮತ್ತು ಕೊಲೆ ಹೀಗೆ ಸುಮಾರು 175 ಕೇಸುಗಳು PFI ಮೇಲೆ ದಾಖಲಾಗಿದ್ದವು. ಸಿದ್ದರಾಮ್ಯಯ್ಯನವರ ತುಘಲಕ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ 175 ಕೇಸುಗಳನ್ನೂ ಹಿಂಪಡೆದುಕೊಂಡಿತು, ಖುದ್ದು ಮುಖ್ಯಮಂತ್ರಿಯೇ,ಹಿಂದೂ ಸಂಘಟನೆಗಳ ವಿರುದ್ಧ ಹೋರಾಡಿ ನನ್ನ ಬೆಂಬಲವಿದೆ ಎಂದು ಬಹಿರಂಗವಾಗಿಯೇ ಹೇಳಿದ್ದರು.

ಇವೆಲ್ಲದರ ಫಲಿತಾಂಶವೆನ್ನುವಂತೆ,ಮೂಡಬಿದಿರೆಯಲ್ಲಿ ಅಕ್ರಮಕಸಾಯಿಖಾನೆಯ ವಿರುದ್ಧ ಹೋರಾಡಿದ ಕಾರಣಕ್ಕೆ ಪ್ರಶಾಂತ್ ಪೂಜಾರಿಯ ಹತ್ಯೆಯಾಯಿತು.ಕಾನೂನು ಸುವ್ಯವಸ್ಥೆ ಕಾಪಾಡುವ ಯೋಗ್ಯತೆಯಿಲ್ಲದ, ಈ ಅಯೋಗ್ಯ ಸರ್ಕಾರ “ಕ್ರೈಮ್” ಅನ್ನು ರಾಜಕೀಯ ಕಾರಣವೆಂದು ಉಡಾಫೆ ಮಾಡಿದ್ದು ಜಿಹಾದಿಗಳಿಗೆ ಇನ್ನಷ್ಟು ಉಮೇದಿ ನೀಡಿತು,ಹತ್ಯೆಗಳ ಸರಣಿ ಮುಂದುವರೆಯಿತು. ಮೊನ್ನೆ ಮೊನ್ನೆಯಷ್ಟೇ ಪರೇಶ್ ಮೇಸ್ತಾ ಎಂಬ ಹದಿಹರೆಯದ ಯುವಕನ ಬರ್ಬರ ಹತ್ಯೆ ಮತ್ತು ನಂತರದ ಗಲಭೆಯಲ್ಲಿ ಪೋಲೀಸ್ ವೈಫಲ್ಯ,ದೌರ್ಜನ್ಯಗಳು ಮರೆಯಾಗುವ ಮುನ್ನವೇ ಯಾವ ಸಂಘಟನೆಗೂ ಸೇರದ ದೀಪಕ್ ರಾವ್ ಹತ್ಯೆಯಾಗಿದೆ.

90ರ ದಶಕದಲ್ಲೇ ಭಟ್ಕಳ ಮತ್ತು ಕರಾವಳಿ ಮಿನಿ ಪಾಕಿಸ್ತಾನವಾಗುತ್ತಿದೆ ಎಂದು ನ್ಯಾ.ಜಗನ್ನಾಥ ಶೆಟ್ಟಿ ಆಯೋಗ ಎಚ್ಚರಿಸಿತ್ತು. ಆದರೆ ಯಾವುದೇ ರಾಜಕೀಯ ಪಕ್ಷ ,ನಾಯಕನು ತಲೆಕೆಡಿಸಿಕೊಳ್ಳಲಿಲ್ಲ. ಉತ್ತರ-ದಕ್ಷಿಣ ಕನ್ನಡ ಜಿಲ್ಲೆಗಳೆರಡೂ ಇಂದು ಅದನ್ನು ಕಣ್ಣಾರೆ ನೋಡುತ್ತಿವೆ. ಕೇವಲ “ಹಿಂದೂ” ಎನ್ನುವ ಕಾರಣಕ್ಕಾಗಿಯೇ “ಶರತ್ ಮಡಿವಾಳ,ಪರೇಶ್ ಮೇಸ್ತಾ,ದೀಪಕ್ ರಾವ್’ ಎಂಬ ಹದಿಹರೆಯ ಯುವಕರ ಹತ್ಯೆಯಾಗುತ್ತದೆ ಎಂದರೇ ಪರಿಸ್ಥಿತಿ ಯಾವ ಮಟ್ಟಕ್ಕೆ ಭೀಕರವಾಗಿದೆ ಯೋಚಿಸಿ ನೋಡಿ. ಮೊನ್ನೆ ಕೊಲೆಯಾದ ದೀಪಕ್ ಸೂರಿಂಜೆಯಂತೂ ಕೆಲಸ ಮಾಡುತ್ತಿದ್ದಿದ್ದೇ ಮುಸ್ಲಿಂ ಮಾಲೀಕನ ಬಳಿ. ಆತನ ದಿನನಿತ್ಯದ ವ್ಯವಹಾರ,ಒಡನಾಟಗಳು ಮುಸ್ಲಿಂರ ನಡುವೆಯೇ ಇತ್ತು. ಅವೆಲ್ಲದರ ಜೊತೆಗೆ ಆತ ತನ್ನ ಊರಿನ ಧಾರ್ಮಿಕ ಕಾರ್ಯಕ್ರಮಗಳು,ಸಮಾನ ಮನಸ್ಕ ಸಂಘಟನೆಗಳ ಕಾರ್ಯಕ್ರಮಗಳಿಗೆ ಹೋಗುತ್ತಿದ್ದ,ತನ್ನ ಕೈಲಾದ ಕೆಲಸವನ್ನು ಮಾಡುತ್ತಿದ್ದ.ಅಂತಹ ಹುಡುಗನನ್ನು ಕೇವಲ “ಹಿಂದೂ” ಎನ್ನುವ ಕಾರಣಕ್ಕಾಗಿಯೇ ಕೊಲ್ಲಲಾಗುತ್ತಿದೆಯೆಂದರೇ,ಕೊಲೆಗಾರರ ಮನಸ್ಥಿತಿಗೆ ಯಾರು ಕಾರಣ? ಮನೆಗೆ ಆಧಾರವಾಗಿದ್ದ ದೀಪಕ್ ಸತ್ತಿದ್ದಾನೆ,ಆತನ ಮಾತು ಬಾರದ ತಮ್ಮ ಮತ್ತು ಅಮ್ಮನನ್ನು ನೋಡಿಕೊಳ್ಳುವವರು ಯಾರು?

ಬೆಂಗಳೂರಿನ ಜನಜಂಗುಳಿಯಿರುವ ಕಮರ್ಷಿಯಲ್ ಸ್ಟ್ರೀಟಿನಲ್ಲಿ ಹಾಡಹಗಲೇ ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಹತ್ಯೆಯಾಯಿತು, ಪ್ರಕರಣದ ತನಿಖೆ ಮಾಡಿದ NIA 4 ಜನರನ್ನು ಬಂಧಿಸಿತ್ತು.ಬಂಧಿತರೆಲ್ಲರೂ PFI ಸಂಘಟನೆಗೆ ಸೇರಿದವರೆಂದು ಚಾರ್ಜ್ ಶೀಟ್ ಹೇಳಿತ್ತು.ಚಾರ್ಜ್ ಶೀಟಿನಲ್ಲಿರುವ ಪ್ರಮುಖ ಅಂಶಗಳನ್ನು ಗಮನಿಸಬೇಕು. ಕೊಲೆಯಾದ ರುದ್ರೇಶ್,ಕೊಲೆಗಾರರಿಗೆ ವೈಯುಕ್ತಿಕವಾಗಿ ಪರಿಚಯವೇ ಇರಲಿಲ್ಲ.ಆದರೂ ಕೊಲ್ಲಲು ಅವರಿಗಿದ್ದ ಕಾರಣಗಳು ಎರಡು. ಆತ ಆರೆಸ್ಸೆಸ್ ಸಂಘಟನೆಗೆ ಸೇರಿದವನು ಮತ್ತೊಂದು ಆತ “ಕಾಫೀರ”.ಕಾಫಿರನನ್ನು ಕೊಲ್ಲುವುದು ದಾರ್-ಉಲ್-ಇಸ್ಲಾಮ್ ಕಡೆಗೆ ಹೋಗುವ ಜಿಹಾದಿನ ಭಾಗ. ಆರೆಸ್ಸೆಸ್ ಸಮವಸ್ತ್ರದಲ್ಲಿರುವವರನ್ನು ಕೊಂದರೆ,ಸಮಾಜದಲ್ಲಿ ಭಯದ ವಾತಾವರಣ ನಿರ್ಮಿಸಬಹುದು. ಈ ಸಮವಸ್ತ್ರ ಧರಿಸಿದರೆ,ಇವರ ಜೊತೆಗೆ ಕೆಲಸ ಮಾಡಿದರೆ “ನಿಮಗೂ ಇದೆ ಗತಿ” ಎನ್ನುವ ಸಂದೇಶ ಜನರಿಗೆ ಹೋಗಬೇಕು.ಆರೆಸ್ಸೆಸ್  ಸಂಘಟನೆ ದುರ್ಬಲವಾದರೇ, PFIನವರಿಗೆ ಎದುರಾಳಿಯಾಗಿ ಉಳಿಯುವುದು ಸೆಕ್ಯುಲರ್/ಕಮ್ಯುನಿಸ್ಟರು (ಪೂರ್ವ ಬಂಗಾಳದ ಇತಿಹಾಸ ಗೊತ್ತಿದ್ದವರಿಗೆ ಅರ್ಥವಾದೀತೂ). ಇಂದು ಕೋಮುವಾದಿಗಳು,ನಾಳೆ ಕಮ್ಯುನಿಸ್ಟರು,ನಾಳಿದ್ದು ಸೆಕ್ಯುಲರ್  ಗಳು.ದಾರ್-ಉಲ್-ಅರ್ಬ್ ಹೋಗಿ ದಾರ್-ಉಲ್-ಇಸ್ಲಾಮ್ ಆಗುವಲ್ಲಿಗೆ ಕಾರ್ಯಾಚರಣೆ ಖತಂ…!

ಈ ಅಸಲಿ ಉದ್ದೇಶಕ್ಕೆ “ರಾಜಕೀಯ ದ್ವೇಷ”ದ ಲೇಪವನ್ನು ಕಟ್ಟಲಾಗುತ್ತಿದೆ ಅಷ್ಟೇ. ಇದು ತಾನೊಬ್ಬ “ಕಮ್ಯುನಿಸ್ಟ್, ಸೆಕ್ಯುಲರ್, ಜಾತ್ಯಾತೀತ,ಮಾನವ ಧರ್ಮ,ಮಾನವ ಜಾತಿ” ಎಂದೆಲ್ಲ ಬಡಬಡಿಸುತ್ತಿರುವವರಿಗೆ ಎಂದು ಅರ್ಥವಾಗುಬಹುದು?

ಮೊದಲು ಅವರು ಆರೆಸ್ಸೆಸ್,ಹಿಂದೂವಾದಿಗಳನ್ನು ಕೊಂದರು

ನಾನು ಕಮ್ಯುನಿಸ್ಟ್,ಸೆಕ್ಯುಲರ್,ಜಾತ್ಯಾತೀತನಾಗಿದ್ದೆ ತಲೆಕೆಡಿಸಿಕೊಳ್ಳಲಿಲ್ಲ…

ನಂತರ ಅವರು ಕಮ್ಯುನಿಸ್ಟರನ್ನು ಕೊಂದರು

ನಾನು ಸೆಕ್ಯುಲರ್,ಜಾತ್ಯಾತೀತನಲ್ಲವೇ ತಲೆಕೆಡಿಸಿಕೊಳ್ಳಲಿಲ್ಲ …

ಆ ನಂತರ ಅವರು ಸೆಕ್ಯುಲರ್,ಜಾತ್ಯಾತೀತರನ್ನು ಕೊಂದರು

ನಾನು ಮಾನವ ಧರ್ಮ,ಜಾತಿಯವನಲ್ಲವೇ ತಲೆಕೆಡಿಸಿಕೊಳ್ಳಲಿಲ್ಲ…

ಕಡೆಗೆ ಅವರು ನನ್ನನ್ನೇ ಕೊಲ್ಲಲು ಬಂದರು

ನನಗಾಗಿ ತಲೆ ಕೆಡಿಸಿಕೊಳ್ಳುವವರು ಯಾರೂ ಉಳಿದಿರಲಿಲ್ಲ…

ಇಷ್ಟೆಲ್ಲಾ ಹೇಳಿದ ನಂತರವೂ, ಮುಂದಿನ ಹಾದಿಯೇನು ಎನ್ನುವ ಪ್ರಶ್ನೆ ಕಾಡುತ್ತದೆಯಲ್ಲವೇ? ಉತ್ತರವನ್ನು ನಮ್ಮ ಪೂರ್ವಜರೇ ನೀಡಿ ಹೋಗಿದ್ದಾರೆ. ಹೊರಗಿನಿಂದ ಬಂದ ಇಸ್ಲಾಮ್,ಕ್ರಿಶ್ಚಿಯಾನಿಟಿಯಂತಹ ರಿಲಿಜನ್ ಗಳು ಈ ಮಣ್ಣಿನ ವೈಶಿಷ್ಟ್ಯತೆಗೆ ಸಿಲುಕಿ,ಇಲ್ಲಿನ ಸಾವಿರಾರು ಜಾತಿಗಳೊಂದಿಗೆ ಸೇರಿಕೊಂಡು ಜಾತಿಗಳೇ ಆಗಿ  ಹೋಗಿದ್ದವು. ಬ್ರಿಟಿಷರ ಕಾಲದಲ್ಲಿ ಗಾಂಧೀಜಿಯವರ ಎಡವಟ್ಟಿನಿಂದ ಶುರುವಾದ ಖಿಲಾಫತ್ ಚಳವಳಿ,ಮುಸ್ಲೀಂ ಲೀಗ್  ನಿಂದ ಶುರುವಾದ ಅರಬ್ಬೀಕರಣ ಇವತ್ತು ಇಲ್ಲಿಗೆ ಬಂದು ನಿಂತಿದೆ.ಅದರಲ್ಲೂ ಅರಬ್ಬಿನ ವಹಾಬಿಸಂನ ಪ್ರಭಾವದಿಂದ ಹೊರಬಂದು ತಮ್ಮ ಪೂರ್ವಜರು ಈ ನೆಲದಲ್ಲಿ ಬದುಕಿದ ಬಗೆ ಹೇಗೆ ಎನ್ನುವುದನ್ನು, ಇಂತಹ ಸಂಘಟನೆಗಳ ಪ್ರಭಾವಕ್ಕೆ ಸಿಲುಕಿರುವ ಯುವಕರು ಪ್ರಶ್ನಿಸಿಕೊಳ್ಳಬೇಕು. ಅದರ ಜೊತೆಗೇ, ದೀಪಕ್ ರಾವ್ ಮಾಲೀಕರಾಗಿದ್ದ ‘ಮಜೀದ್’ ಅವರಂತಹ ಸಹೃದಯರ ಸಂಖ್ಯೆಯೂ ನನ್ನ ಕರಾವಳಿಯಲ್ಲಿ ಅಗಾಧವಾಗಿದೆ ಅಂತವರನ್ನು ಹಾಗೆಯೇ ಉಳಿಸಿಕೊಳ್ಳುವ ಹೊಣೆ ಹಿಂದೂ ಸಂಘಟನೆಗಳ ಮುಖಂಡರ ಮೇಲೂ ಇದೆ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments