ವಿಷಯದ ವಿವರಗಳಿಗೆ ದಾಟಿರಿ

ಜನವರಿ 29, 2018

1

ಸೈಮನ್ ಅಯೋಗಕ್ಕೆ ತೊಡೆ ತಟ್ಟಿದ ಪಂಜಾಬಿನ ಕೇಸರಿ.

‍ನಿಲುಮೆ ಮೂಲಕ

– ಶಿವಾನಂದ ಶಿವಲಿಂಗ ಸೈದಾಪೂರ

ಪಂಜಾಬ್‍ದ ಕೇಸರಿ ಎಂದೇ ಪ್ರಸಿದ್ದರಾದ ಲಾಲಾ ಲಜಪತ್ ರಾಯರು 1865 ರ ಜನೇವರಿ 28 ರಂದು ಪಂಜಾಬ್‍ ನ ಮುನ್ಷಿ ರಾದಾಕೃಷ್ಣ ಆಜಾದ್ ಮತ್ತು ಗುಲಾಬ್ ದೇವಿಯರ ಮಗನಾಗಿ ಜನಿಸಿದರು. ಸ್ವತಂತ್ರ ಹೋರಾಟದ ದಿಕ್ಕನ್ನೇ ಬದಲಿಸಿದ ಒಂದೇ ಹೆಸರಿನಿಂದ ಮೂವರು ಜನ ಗುರುತಿಸಿಕೊಂಡ “ಲಾಲಬಾಲಪಾಲ್” ರಲ್ಲಿ ಇವರು ಒಬ್ಬರು.

1905 ರ ವರೆಗೂ ಕಾಂಗ್ರೇಸ್‍ನ ನೀತಿಯಿಂದಾಗಿ ಮಂದಗತಿಯಲ್ಲಿಯೇ ಸಾಗುತ್ತಿದ್ದ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಕ್ರಾಂತಿಯ ಕಿಚ್ಚನ್ನು ಉದ್ದೀಪನಗೊಳಿಸಿದವರಲ್ಲಿ ಇವರು ಒಬ್ಬರು. ಪ್ರಖರ ವಾಗ್ಮಿಯಾದ ಇವರು ತಮ್ಮ ಭಾಷಣಗಳಲ್ಲಿ “ಜಗತ್ತಿನ ಇತಿಹಾಸ ರೂಪಗೊಂಡಿದ್ದೇ ರಕ್ತದಿಂದ. ನಮ್ಮ ಮಾತೃಭೂಮಿ ನಮ್ಮ ರಕ್ತವನ್ನು ಅಪೇಕ್ಷಿಸುತ್ತಾಳೆ. ರಾಷ್ಟ್ರಕ್ಕಾಗಿ ಅದನ್ನು ನೀಡಿಯೇ ಅಮರರಾಗೋಣ”. ಎಂದು ಸದಾಕಾಲ ಭಾರತೀಯ ಕ್ಷಾತ್ರ ಪರಂಪರೆಯನ್ನು ಎಚ್ಚರಗೊಳಿಸುತಿದ್ದರು. ಮಂದಗತಿಯಲ್ಲಿ ಸಾಗುತಿದ್ದ ಹೋರಾಟಕ್ಕೆ “ನಾವು ಒಂದು ಸಾಮ್ರಾಜ್ಯದ ಪ್ರಜೆಗಳು, ಭಿಕ್ಷುಕರಲ್ಲ. ಹೋರಾಟದ ಈ ಪ್ರಜ್ಞೆ ನಮ್ಮಲ್ಲಿರಬೆಕಾದದ್ದು ಅಗತ್ಯ. ನಮ್ಮ ಹಕ್ಕುಗಳನ್ನು ಪ್ರತಿಪಾದಿಸುವ ಪ್ರಜೆಗಳು ನಾವಾಗಿರಬೇಕು. ಒಂದು ದೃಢ ನಿಲುವನ್ನು ತಳೆದು ಅದಕ್ಕೆ ಅಂಟಿಕೋಳ್ಳಬೇಕು” ಎಂದು ಹೇಳುತಿದ್ದರು. “ಈ ಭೂಮಿಯ ಮೇಲೆ ಸೊಂಕಿರುವುದು ನಮ್ಮ ಪೂರ್ವಜರ ರಕ್ತ. ನಾವು ಅದರ ಮೇಲೆ ಬದುಕುತಿದ್ದೇವೆ. ಈ ಭೂಮಿ ನಮ್ಮದು ಇಲ್ಲವೇ ದೇವರದ್ದು” ಎಂದು ನಿರಂತರವಾಗಿ ಒತ್ತಿ ಒತ್ತಿ ಹೇಳಿದರು.

ಲಾಲಾ ಲಜಪತ್ ರಾಯರು ಕೇವಲ ಭಾಷಣಕಾರ ಮಾತ್ರರಾಗಿರಲಿಲ್ಲ. 1914 ರಲ್ಲಿ ಭಾರತೀಯರನ್ನು ಸಮಾಧಾನವಾಗಿರಿಸುವ ಉದ್ದೇಶದಿಂದ ರಾಜಕೀಯ ಸುಧಾರಣೆಯ ಎಂಬ ನೆಪದಲ್ಲಿ ಮಸೂದೆಯೊಂದನ್ನು ತಂದಾಗ ಇಂಗ್ಲೇಂಡಿಗೆ ಹೋಗಿ ಅದರ ವಿರುದ್ಧ ಅಭಿಪ್ರಾಯ ಮಂಡಿಸಿದ್ದರು. ಲಾಲಾ ಲಜಪತ್ ರಾಯರು ಸ್ವಾತಂತ್ರ್ಯ ಹೋರಾಟಗಾರ ಅಷ್ಟೇಯಲ್ಲ ಸಾಮಾಜಿಕ ಸಾಮರಸ್ಯದ ಹರಿಕಾರರು ಆಗಿದ್ದರು. ಭಾರತದಲ್ಲಿ ಆವತ್ತಿನ ದಿನಮಾನಗಳಲ್ಲಿದ್ದ ಅನಿಷ್ಠತೆಗಳನ್ನು ಹೊಗಲಾಡಿಸಲು ನಿರತರಾಗಿದ್ದರು. ವ್ಯಾಪಕವಾಗಿ ಹರಡಿದ್ದ ಜಾತಿ ಭೇದವನ್ನು ಉಗ್ರವಾಗಿ ಖಂಡಿಸಿದರು. ಶೋಷಿತ ವರ್ಗವನ್ನು ಸಮಾನದಿಂದ ಕಾಣದಿದ್ದರೆ ಮತಾಂತರವಾಗಿ ಬೇರೆ ಧರ್ಮದ ಪಾಲನೆಯನ್ನು ಜನ ಮಾಡುವರೆಂದು ಎಚ್ಚರಿಸಿದರು. ಇವರ ದೃಡ ನಿರ್ಧಾರದಿಂದಾಗಿಯೇ ಅಗ ನಡೆದ ಕಲ್ಕತ್ತಾದ ಅಖಿಲ ಭಾರತ ಹಿಂದು ಮಹಾಸಭಾದ ಎಂಟನೇಯ ಅಧಿವೇಶನದಲ್ಲಿ ಕೆಲವೊಂದು ಬದಲಾವಣೆಯನ್ನು ತರಲಾಯಿತು.

ಸೈಮನ್ ಅಯೋಗಕ್ಕೆ ತೊಡೆ ತಟ್ಟಿದ ಪಂಜಾಬಿನ ಕೇಸರಿ

1927ರ ಸಮಯದಲ್ಲಿ ಬ್ರಿಟೀಷ ಸರ್ಕಾರವು “ಜಾನ ಸೈಮನ”ನ್ನು ಭಾರತಕ್ಕೆ ಕಳುಹಿಸಿತು. ಅದೊಂದು ಜಾನ ಸೈಮನನ ಅಧ್ಯಕ್ಷತೆಯಲ್ಲಿ ಒಳಗೊಂಡ ಏಳು ಜನರ ಕಮೀಟಿಯಾಗಿತ್ತು. ಆ ಕಮೀಟಿಯ ಉದ್ದೇಶ ಪ್ರಸ್ತುತ ಭಾರತದಲ್ಲಿ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿ ವರದಿಯನ್ನು ರಚಿಸಬೇಕಿತ್ತು. ಇದಾದ ನಂತರ ಭಾರತೀಯರಿಗೆ ಪರಮಾಧಿಕಾರ ನೀಡುವುದೆಂದು ಬ್ರಿಟೀಷರು ಭಾರತೀಯ ಹೊರಟಗಾರರಿಗೆ ನೀಡಿದ ಸಮಾಧಾನಕರ ಉತ್ತರವಾಗಿತ್ತು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸಿಗರೂ ಮತ್ತು ಗಾಂಧೀಜಿಯವರು ಕೂಡ ಇದಕ್ಕೆ ಸಹಮತ ಸೂಚಿಸಿದರು.

ಅಲ್ಲಿಯವರೆಗೂ ನೇರವಾಗಿಯೇ ಭಾರತದ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿದ್ದ ಇಂಗ್ಲೀಷರು ಪರಮಾಧಿಕಾರದ ಆಸೆ ತೋರಿಸಿ ಭಾರತೀಯರಿಂದಲೇ ಪರೋಕ್ಷವಾಗಿ ಕೊಳ್ಳೆ ಹೊಡೆಯುವ ಉದ್ದೇಶ ಮುಂದಿನದಾಗಿತ್ತು. ಭಾರತೀಯರಿಂದಲೇ ಭಾರತದ ಮೇಲೆ ಅನಾಚಾರವೆಸಗುವ ಈ ಕೃತ್ಯವನ್ನು ಬಹು ತೀಕ್ಷ್ಣವಾಗಿ ಗಮನಿಸಿದ ಲಾಲಾ ಲಜಪತರಾಯರು ಹಿಂದಿನಕ್ಕಿಂತಲು ತಮ್ಮ ನಿಲುವನ್ನು ಮತ್ತಷ್ಟು ಬಿಗಿಗೊಳಿಸಿದರು. ಭಾರತೀಯರ ಮೇಲೆ ಅನಾಚಾರವಾಗುವುದನ್ನು ತಡೆಯುವುದಕ್ಕೆ ಸಿದ್ಧತೆ ಮಾಡಿದರು.

ಈ ಜಾನ ಸೈಮನನ ಕಾರ್ಯ ಮೊದಲ ಬಾರಿಗೆ 1927 ಅಕ್ಟೋಬರ 30 ರಂದು ಲಾಹೋರಿನಲ್ಲಿ ಅರಂಭವಾಗುದರಲ್ಲಿತ್ತು. ಪೂರ್ವ ಸಿದ್ಧತೆಯೊದಿಂಗೆ ಲಾಲಾ ಲಜಪತರಾಯರು ಮತ್ತು ಮದನ ಮೋಹನ ಮಾಳವಿಯವರು ನಾಯಕರಾಗಿ ಅವರೊಂದಿಗೆ “ನವ್ ಜವಾನ ತಂಡ”ದ ಯುವ ಜನತೆಯು ಜೊತೆಯಾದರು. ಲಾಲಾ ಲಜಪತರಾಯ “ಪೂರ್ಣಸ್ವರಾಜವೇ ನಮ್ಮಜನ್ಮ ಸಿದ್ಧ ಹಕ್ಕು” ಜಾನ ಸೈಮನ ಬರುವ ಅವಶಕತೆಯೇ ಇಲ್ಲೆಂದು ಕಪ್ಪು ಬಾವುಟ ಹಿಡಿದು “ಸೈಮನ್ ಹಿಂದುರುಗೂ”ಎಂದು ಮುಷ್ಕರ ಆರಂಬಿಸಿದರು. ಇದರಲ್ಲಿ ನವ್ ಜವಾನ ಸಭಾದ ಯುವಕರೇ ಅತಿ ಹೆಚ್ಚಾಗಿ ಪಾಲ್ಗೊಂಡಿದ್ದರು. ಪೋಲೀಸರುಗೆ ಯಾವ ರೀತಿಯಿಂದ ಪ್ರಯತ್ನಿಸಿದರೂ ಚಳುವಳಿಯನ್ನು ಹತೋಟಿಯಲ್ಲಿಡಲಾಗದೆ ಒಳ್ಳೆಯ ಪಿಕಲಾಟ ಶುರುವಾಯಿತು. ಜಾನ್ ಸೈಮನ ರೈಲಿನಿಂದ ಕೆಳಗೆ ಇಳಿಯುವ ಹೊತ್ತಿಗೆ ಎಲ್ಲಾ ಕ್ರಾಂತಿಕಾರಿಗಳು ತಮ್ಮ ಘೋಷಣೆಯನ್ನು ಕೂಗಲು ಪ್ರಾರಂಭಿಸಿದರು. ಆಗ ಕ್ರಾಂತಿಕಾರಿಗಳು ವಿರೋಧ ಉಗ್ರಸ್ವರೂಪ ಹೊಂದುವ ಪರಿಸ್ಥಿತಿಯು ಎದುರಾಯಿತು. ಆಗ ಪೋಲೀಸರು ಎಷ್ಟೇ ತಿಣಕಾಡಿದರೂ ಈ ಚಳುವಳಿಯನ್ನು ತಡೆಯಲು ಅಗಲೇ ಇಲ್ಲ. ಭಯಂಕರ ಕೋಪಿಷ್ಟನಾದ ಲಾಹೋರಿನ ಮುಖ್ಯ ಪೋಲೀಸ ಅಧಿಕಾರಿ ಸ್ಕಾಟ್ ಚಳುವಳಿಗಾರರ ಮೇಲೆ ಲಾಟಿ ಚಾರ್ಜಿಗೆ ಆಜ್ಞೆ ಹೊರಡಿಸಿದ. ಎಷ್ಟೇ ಪ್ರಯತ್ನಿಸಿದರು ಪರಸ್ಥಿತಿ ಹತೋಟಿಗೆ ಬರದೆ ಹೋಯಿತು. ಸ್ಯಾಂಡರ್ಸ ಎಂಬುವ ಕಿರಿಯ ಅಧಿಕಾರಿ ವಯೋವೃದ್ಧ ಲಾಲಾ ಲಜಪತ ರಾಯರಿಗೆ ಬಿರುಸಿನ ಹೊಡೆತಗಳನ್ನು ಕೊಟ್ಟ. ಏಟು ತಲೆಗೆ ಎದೆಗೆ ಬಿರುಸಾಗಿ ಬಿದ್ದುದ್ದರಿಂದ ಲಾಲಾಜಿ ಆಸ್ಪತ್ರೆಗೆ ಸೇರುವಂತಾಯಿತು. ಲಾಲಾಜಿ ಚೇತರಿಸಿಕೊಳ್ಳದೇ 1928ರ ನವಂಬರ 17 ರಂದು ದಿವಂಗತರಾದರು.

ಅವರ ಸಾವಿನ ಕಿಚ್ಚು ಭಗತ್ ಸಿಂಗ, ರಾಜಗುರು, ಸುಖದೇವರಂತಹ ದೇಶ ಭಕ್ತರಿಗೆ ಕ್ರಾಂತಿ ಮಾರ್ಗಕ್ಕೆ ನಾಂದಿಯಾಯಿತು. ಅವರ ಹೋರಾಟದ ತೀವ್ರತೆಯಿಂದಾಗಿಯೆ ಸ್ವಾತಂತ್ರ್ಯ ಹೋರಾಟಕ್ಕೆ ಒಂದು ಹೊಸ ಆಯಾಮ ದೊರಕಿದಂತಾಗಿತ್ತು. ಆವತ್ತಿನ ಹೋರಾಟದಲ್ಲಿ ಬಹುತೇಕ ಜನ ಬ್ರಿಟಿಷರ ಏಜೆಂಟರಂತೆ ವರ್ತಿಸುತಿದ್ದರೆ ಹೊರತು ಲಾಲಾ ಲಜಪತ್ ರಾಯರಂತೆ ಪ್ರಖರತೆ ಮತ್ತಿನಾರಲ್ಲಿಯೂ ಉಳಿದಿರಲಿಲ್ಲ.

1 ಟಿಪ್ಪಣಿ Post a comment
  1. vasu
    ಜನ 29 2018

    ಲಾಲಾ ಲಜಪತರಾಯರಿಗೆ ದೇಶಪ್ರೇಮವನ್ನು ಉಣಬಡಿಸಿದ್ದು ಆರ್ಯಸಮಾಜ. ಒಂದು ಕಾಲಕ್ಕೆ ಅವರು ಮುಸ್ಲಿಂ ಆಗಲು ಬಯಸಿದ್ದರು, ಈ ವಿಷಯವನ್ನು ಅವರ ಆತ್ಮಕಥನದಲ್ಲಿ ನೋಡಬಹುದು. ಆದರೆ ಅವರು ಆರ್ಯಸಮಾಜವನ್ನು ಸೇರಿದ ಮೇಲೆ ಅವರ ಚಿಂತನೆ ಮತ್ತು ಕಾರ್ಯಕ್ಷೇತ್ರಗಳೇ ಬದಲಾದವು. ಸ್ವಾತಂತ್ರ್ಯಕ್ಕೆ ಮೊದಲು ಕರೆ ಕೊಟ್ಟವರು ಸ್ವಾಮಿ ದಯಾನಂದರು. ಅವರು ಬರೆದ ಮಹಾನ್ ಕ್ರಾಂತಿ ಗ್ರಂಥ ” ಸತ್ಯಾರ್ಥ ಪ್ರಕಾಶ” ದಲ್ಲಿ ವಿದೇಶಿ ಆಡಳಿತದ ಬಗ್ಗೆ ತೀವ್ರ ಅಸಹನೆ ಮತ್ತು ಸ್ವಾತಂತ್ರ್ಯ ಪ್ರಾಪ್ತಿಗಾಗಿ ಕರೆ ಯ ಸ್ಪಷ್ಟ ಉಲ್ಲೇಖವಿದೆ. ಅವರು ಸ್ಥಾಪಿಸಿದ ಆರ್ಯಸಮಾಜ ಕಾಂಗ್ರೆಸ್ ಹುಟ್ಟುವ ಸುಮಾರು 50 ವರ್ಷಗಳ ಮುಂಚೆಯೇ ಸ್ವಾತಂತ್ರ್ಯ ಹೋರಾಟವನ್ನು ಆರಂಭಿಸಿತ್ತು ಎಲ್ಲಾ ಆರ್ಯಸಮಾಜ ಮಂದಿರಗಳು ಅಂದಿನ ಕಾಲದಲ್ಲಿ ಸ್ವದೇಶಿ, ವಸ್ತುಗಳನ್ನೇ ಬಿಕರಿ ಮಾಡುತ್ತಿದ್ದವು, ಇಂತಹ ಒಂದು ವಾತಾವರಣದಲ್ಲಿ ಲಾಲಾ ಲಜಪತರಾಯರ ಜನ್ಮವಾಯಿತು, ಆರ್ಯ ಸಮಾಜ ಸೇರಿದ ಮೇಲೆ ಅವರ ಸ್ವಾತಂತ್ರ್ಯ ಪರ ಹೋರಾಟ ತೀವ್ರಗೊಂಡಿತು, ಆರ್ಯಸಮಾಜವನ್ನುಮತ್ತು ಅದರ ಸಿದ್ದಾಂತಗಳನ್ನು ಎಂದರೆ ವೈದಿಕ ಸಿದ್ಧಾಂತಗಳನ್ನು ಪ್ರಚಾರ ಮಾಡಲು ಅವರು ಭಾಷಣ, ಪುಸ್ತಕರಚನೆಯ ಮೊರೆ ಹೋದರು, ಆರ್ಯಸಮಾಜದ ತತ್ವ ಮತ್ತು ಸಿದ್ಧಾಂತಗಳನ್ನು ವೈಕ್ತಪಡಿಸುವ ” What is Aryasamaj” ಎಂಬ ಸಾರ್ವಕಾಲಿಕ ಪುಸ್ತಕವನ್ನು ಬರೆದರು. ಈ ಪುಸ್ತಕ ಇಂದಿಗೂ ಜನಪ್ರಿಯವಾಗಿದೆ. ಇದಲ್ಲದೆ ಅಂದಿನ ಆರ್ಯಸಮಾಜ ದ ನಾಯಕರಾದ ಸ್ವಾಮಿ ಶ್ರದ್ದಾನಂದ, ಗುರುದತ್ತ ವಿದ್ಯಾರ್ಥಿಗಳ ಜೀವನ ಚರಿತ್ರೆಯನ್ನು ರಚಿಸಿದ್ದಾರೆ. ಮಹಾಭಾರತದ ಕೃಷ್ಣನ ಬಗ್ಗೆ [ ಪೌರಾಣಿಕ ಕೃಷ್ಣ ಅಲ್ಲ] ಯೂ ಅತಿ ಉತ್ತಮ ಪುಸ್ತಕವನ್ನು ರಚಿಸಿದ್ದಾರೆ. ಈಗಲೂ ಅದು ಜನಪ್ರಿಯ ಪುಸ್ತಕವಾಗಿದೆ. ಜನರಲ್ಲಿ ಸ್ವದೇಶ ಪ್ರೇಮ, ಮತ್ತು ಸ್ವಾತಂತ್ರ್ಯ ಹೋರಾಟಕ್ಕೆ ಜನಗಳನ್ನು ವಿಶೇಷವಾಗಿ ವಿದ್ಯಾರ್ಥಿಗಳನ್ನು ತಯಾರು ಮಾಡುವ ಉದ್ಧೇಶ್ಯದಿಂದ ಅವರು ಲಾಹೋರಿನಲ್ಲಿ ದಯಾನಂದ ಆಂಗ್ಲೋ ವೇದಿಕ್ ಕಾಲೇಜನ್ನು ಸ್ಥಾಪಿಸಿದರು, ಇದೇ ಕಾಲೇಜಿನಲ್ಲಿ ಶಿಕ್ಷಣ ಪಡೆದ ಭಗತ್ ಸಿಂಗ ತನ್ನನ್ನು ತಾನೇ ದೇಶದ ಬಲಿವೇದಿಕೆಯಲ್ಲಿ ಅರ್ಪಿಸಿಕೊಂಡ, ಲಜಪಾತರಾಯರು ಅವನಿಗೆ ರಾಜಕೀಯ ಗುರುಗಳಾಗಿದ್ದರು, ಅವರ ಹತ್ಯೆ ಅವನ ಹೋರಾಟದ ದಿಕ್ಕನ್ನೇ ಬದಲಿಸಿತು, ಇದಲ್ಲದೆ, ಲಜಪತರಾಯರು, ಪಂಜಾಬ ಕೇಸರಿ, ಟ್ರಿಬ್ಯೂನ್ ಪತ್ರಿಕೆಗಳನ್ನು ಸ್ಥಾಪಿಸಿ ಜನತೆಯನ್ನು ಸ್ವಾತಂತ್ರ್ಯ ಹೋರಾಟಕ್ಕೆ ಸಜ್ಜು ಮಾಡಿದರು, ಜನ ಜಾಗೃತಿಯನ್ನೂ ಮಾಡಿದರು, ಪಂಜಾಬ್ ನ್ಯಾಷನಲ್ಲ ಬ್ಯಾಂಕ್ ನ ಸ್ಥಾಪಕರೂ ಅವರಾಗಿದ್ದರು, ಆರ್ಯಸಮಾಜದ ಮಹಾನ್ ಕಲಿಗಳಲ್ಲಿ ಲಜಪತರಾಯರೂ ಒಬ್ಬರು, ಲೇಖಕರು ಇಂತಹ ವಿಷಯಗಳನ್ನು ಬರೆಯುವುದು ಉತ್ತಮ ಮತ್ತು ಅಗತ್ಯಕೂಡ.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments