ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 31, 2018

1

ದಲಿತ-ಮುಸ್ಲಿಂ ರಾಜಕಾರಣದ ‘ಭ್ರಮೆ’ ಮತ್ತು J.N ಮಂಡಲ್ ಎಂಬ ‘ವಾಸ್ತವ’- ಭಾಗ 2

‍ನಿಲುಮೆ ಮೂಲಕ

– ರಾಕೇಶ್ ಶೆಟ್ಟಿ

ದಲಿತ-ಮುಸ್ಲಿಂ ರಾಜಕಾರಣದ ‘ಭ್ರಮೆ’ ಮತ್ತು J.N ಮಂಡಲ್ ಎಂಬ ‘ವಾಸ್ತವ’- ಭಾಗ 1

ದಲಿತ-ಮುಸ್ಲಿಂ ಇತಿಹಾಸ ಲೇಖನದ ಮೊದಲ ಭಾಗದಲ್ಲಿ ಮುಸ್ಲಿಂ ಲೀಗ್ ಹೇಗೆ ದಲಿತರನ್ನುತಮ್ಮ ರಾಜಕೀಯಕ್ಕಾಗಿ ಹೇಗೆ ಬಳಸಿಕೊಂಡಿತ್ತು  ಎನ್ನುವುದನ್ನು ದಲಿತನಾಯಕ ಮಂಡಲ್ ಅವರ ಮಾತಿನಲ್ಲೇ ಕೇಳಿದ್ದೀರಿ.ಈ ಭಾಗದಲ್ಲಿ ಹಿಂದೂಗಳ ಮೇಲೆ ನಡೆದ ಸರಣಿ ದೌರ್ಜನ್ಯವನ್ನು ಮಂಡಲ್ ಅವರು ಹೀಗೆ ಹೇಳುತ್ತಾ ಸಾಗುತ್ತಾರೆ… 

  1. ವಿಭಜನೆ: ಭಾರತದ ವಿಭಜನೆಯ ನಿರ್ಧಾರವಾಗುತ್ತಿದ್ದಂತೆ, ದಲಿತರಿಗೆ ಭವಿಷ್ಯದ ಚಿಂತೆ ಉಧ್ಭವವಾಯಿತು. ಆಗಿನ ಮುಖ್ಯಮಂತ್ರಿ ಸುಹ್ರವಾಡಿಯವರ ಬಳಿಗೆ ದಲಿತರ ಪರವಾಗಿ ನಿಯೋಗಗಳು ಹೋದಾಗ,ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ, ದಲಿತರಿಗೆ ಭಾರತದಲ್ಲಿ ಸಿಗುವ ಎಲ್ಲಾ ಸ್ಥಾನ-ಮಾನಗಳು ಪಾಕಿಸ್ತಾನದಲ್ಲೂ ಸಿಗಲಿವೆ ಎಂದು ಭರವಸೆ ನೀಡಲಾಯಿತು. ಆದರೆ, ವಿಭಜನೆಯ ನಂತರ, ಅದರಲ್ಲೂ ಜಿನ್ನಾ ಅವರ ಮರಣಾನಂತರ ದಲಿತರಿಗೆ ನ್ಯಾಯವಾಗಿ ದಕ್ಕಬೇಕಾದ್ದು ದಕ್ಕಲೇ ಇಲ್ಲ. ನಿಮಗೆ ಈಗ ನೆನಪಾಗುತ್ತಿರಬಹುದು, ನಾನು ಆಗಾಗ್ಗೆ ಪೂರ್ವ ಬಂಗಾಳದ ಭ್ರಷ್ಟ ಆಡಳಿತದಿಂದ ದಲಿತರು ಅನುಭವಿಸುತ್ತಿರುವ ಸಂಕಷ್ಟ, ಪೊಲೀಸ್ ಮತ್ತು ಮುಸ್ಲಿಂ ಲೀಗ್ ಮುಖಂಡರ ಹಿಂದೂ ವಿರೋಧಿ ಧೋರಣೆಗಳನ್ನೂ ನಿಮ್ಮ ಗಮನಕ್ಕೆ ತರುತ್ತಲೇ ಇದ್ದೆ.
  2. ಕೆಲವು ಘಟನೆಗಳು: ನನಗೆ ಮೊದಲ ಆಘಾತ ನೀಡಿದ ಘಟನೆ ನಡೆದಿದ್ದು ಗೋಪಾಲ್ ಗಂಜ್ ಕ್ಷೇತ್ರದ ದೀಘರಕುಲ್ ಊರಿನಲ್ಲಿ. ಮುಸ್ಲಿಮನೊಬ್ಬ ನೀಡಿದ ಸುಳ್ಳು ದೂರಿನ ಮೇಲೆ ನಾಮಶೂದ್ರರ ಮೇಲೆ ಭೀಕರ ದೌರ್ಜನ್ಯವೆಸಗಲಾಗಿತ್ತು. ಅಸಲಿಗೆ ನಡೆದಿದ್ದು ಏನೆಂದರೆ, ಮುಸ್ಲಿಂ ಮೀನುಗಾರನೊಬ್ಬ ಮೀನು ಹಿಡಿಯಲು ಬಲೆ ಹಾಕಲು ಬಂದಿದ್ದನ್ನು, ಈ ಮೊದಲೇ ಬಲೇ ಹಾಕಿ ಕಾಯುತ್ತಿದ್ದ ನಾಮಶೂದ್ರ ವಿರೋಧಿಸಿದ್ದ. ಅಲ್ಲಿ ನಡೆದ ಸಣ್ಣ ವಾಕ್ಸಮರವನ್ನೇ ನೆಪ ಮಾಡಿಕೊಂಡು, ಆತ ಹತ್ತಿರದ ಮುಸ್ಲಿಂ ಹಳ್ಳಿಗೆ ಹೋಗಿ, ತನ್ನ ಹಾಗೂ ತನ್ನ ಮಡದಿಯ ಮೇಲೆ ನಾಮಶೂದ್ರ ಹಲ್ಲೆ ಮಾಡಿದ್ದಾನೆ ಎಂದು ದೂರು ನೀಡಿದ. ಅದೇ ಸಮಯಕ್ಕೆ ಗೋಪಾಲ್ ಗಂಜ್ ನಲ್ಲಿ ಸಾಗುತ್ತಿದ್ದ ಅಧಿಕಾರಿಯು ದೂರಿನ ಸತ್ಯಾಸತ್ಯತೆಯನ್ನು ಪರೀಕ್ಷಿಸದೆ,ನಾಮಶೂದ್ರರನ್ನು ದಂಡಿಸಲು ಸಶಸ್ತ್ರ ಪೊಲೀಸ್ ಪಡೆಯನ್ನು ಕಳುಹಿಸಿದ. ಪೊಲೀಸರೊಂದಿಗೆ ಕೆಲವು ಮುಸ್ಲಿಮರು ಸೇರಿಕೊಂಡರು. ನಾಮಶೂದ್ರರ ಮನೆಗಳ ಮೇಲೆ ದಾಳಿ ಮಾಡಿ,ಹೆಂಗಸರು ಮಕ್ಕಳೆನ್ನದೆ ಕೈಗೆ ಸಿಕ್ಕವರ ಮೇಲೆ ಮುಗಿಬಿದ್ದು, ಧನ-ಧಾನ್ಯ ಲೂಟಿ ಮಾಡಿದರು. ಅವರ ದೌರ್ಜನ್ಯ ಯಾವ ಪರಿ ಇತ್ತೆಂದರೆ,ಅವರಿಂದ ಏಟು ತಿಂದ ಗರ್ಭಿಣಿಯೊಬ್ಬಳಿಗೆ ಅಲ್ಲೇ ಗರ್ಭಪಾತವಾಯಿತು.
  3. ಎರಡನೇ ಪೊಲೀಸ್ ದೌರ್ಜನ್ಯ ನಡೆದಿದ್ದು ಬಾರಿಸಾಲ್ ಜಿಲ್ಲೆಯ ಗೌರ್ನಡಿಯಲ್ಲಿ. ಯೂನಿಯನ್ ಬೋರ್ಡಿನ ಇಬ್ಬರು ಸದಸ್ಯರ ನಡುವೆ ಸಣ್ಣದೊಂದು ಜಟಾಪಟಿ ನಡೆದಿತ್ತು. ಇಬ್ಬರಲ್ಲಿ ಒಬ್ಬ ಪೋಲೀಸರ ಜೊತೆ ಚೆನ್ನಾಗಿದ್ದ. ಪೊಲೀಸರ ಬಳಿ ಇನ್ನೊಬ್ಬ ಕಮ್ಯುನಿಸ್ಟ್ ಅಂತಲೂ, ಆತ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡುವ ಯೋಜನೆ ಮಾಡಿದ್ದಾನೆ ಅಂತಲೂ ಚಿತಾವಣೆ ಮಾಡಿದ. ಆತನ ಮಾತನ್ನು ನಂಬಿದ ಪೊಲೀಸ್ ಅಧಿಕಾರಿ ಹೆಚ್ಚಿನ ಪೊಲೀಸ್ ಪಡೆಯನ್ನು ಕರೆಸಿಕೊಂಡ. ನಂತರ ಅವರು ಹಳ್ಳಿಯ ಮೇಲೆ ದಾಳಿ ಮಾಡಿ ಸಿಕ್ಕ ಸಿಕ್ಕದ್ದನ್ನು ದೋಚಿದರು. ಕಮ್ಯುನಿಸ್ಟ್ ಪಕ್ಷ ಬಿಡಿ ರಾಜಕೀಯದಲ್ಲಿ ಇಲ್ಲದವರ ಮನೆಯನ್ನೂ ಬಿಡಲಿಲ್ಲ. ಶಿಕ್ಷಕರು, ವಿದ್ಯಾರ್ಥಿಗಳನ್ನೆಲ್ಲ ಕಮ್ಯುನಿಸ್ಟರೆಂದು ಬಂಧಿಸಿ ಚಿತ್ರಹಿಂಸೆ ನೀಡಲಾಯಿತು. ನಾನು ಪಕ್ಕದ ಹಳ್ಳಿಯವನೇ ಆಗಿದ್ದರಿಂದ ನನಗೆ ವಿಷಯ ತಿಳಿಸಲಾಯಿತು. ನಾನು, ಜಿಲ್ಲಾ ಮ್ಯಾಜಿಸ್ಟ್ರೇಟ್ ಹಾಗೂ ಎಸ್. ಪಿ ಯವರಿಗೆ ತನಿಖೆ ಮಾಡುವಂತೆ ಪತ್ರ ಬರೆದೆ. ಸ್ಥಳೀಯರು ತನಿಖೆಗೆ ಆಗ್ರಹಿಸಿದರು. ಆದರೆ ಯಾವುದೇ ಮನವಿಗಳಿಗೂ ಉತ್ತರ ಸಿಗಲಿಲ್ಲ. ನಂತರ ನಾನು ಈ ಘಟನೆಯನ್ನು ಪಾಕಿಸ್ತಾನದ ಉನ್ನತ ಮಟ್ಟಕ್ಕೂ, ನಿಮ್ಮ ಗಮನಕ್ಕೂ ತಂದೆ. ಯಾವುದೇ ಪ್ರಯೋಜನವಾಗಲಿಲ್ಲ.

12.ಹಬಿಬ್ಘರ್ ಜಿಲ್ಲೆಯ ಸಿಯಲೆಟ್ ನಲ್ಲಿ ಹಿಂದೂಗಳ ಮೇಲೆ ನಡೆದ ದೌರ್ಜನ್ಯದ ಬಗ್ಗೆಯೂ ಹೇಳಬೇಕು. ಪೊಲೀಸ್ ಮತ್ತು ಮುಸ್ಲಿಂ ಪಡೆಯ ದೌರ್ಜನ್ಯದ ನಂತರ ಈ ಜಾಗದಲ್ಲಿ ಮಿಲಿಟರಿ ಪಹರೆ ಹಾಕಲಾಯಿತು. ಮಿಲಿಟರಿಯವರು ಹಿಂದೂಗಳ ಮನೆಗಳ ಕೊಳ್ಳೆ ಹೊಡೆಯುತ್ತಿದ್ದರು, ಹೆಣ್ಣುಮಕ್ಕಳನ್ನು ಕ್ಯಾಮ್ಪಿಗೆ ಕೊಂಡೊಯ್ಯುತ್ತಿದ್ದರು. ನಾನು ಈ ಎಲ್ಲಾ ದೌರ್ಜನ್ಯಗಳನ್ನು ನಿಮ್ಮ ಗಮನಕ್ಕೆ ತಂದೆ. ತಾವು ವರದಿ ಪಡೆಯುವೆ ಎಂದಿರಿ, ಮತ್ತೇನೂ ಆಗಲಿಲ್ಲ.

  1. ಅದಾದ ನಂತರ ರಾಜಶಾಹಿ ಜಿಲ್ಲೆಯ ನಾಚೋಲಿಯಲ್ಲಿ ಕಮ್ಯುನಿಸ್ಟರನ್ನು ಹಣಿಯುವ ನೆಪದಲ್ಲಿ, ಪೊಲೀಸ್ ಹಾಗೂ ಮುಸ್ಲಿಮರು ಒಟ್ಟಾಗಿ, ಹಿಂದೂಗಳ ಮೇಲೆ ಯಾವ ಪರಿ ದಾಳಿ ನಡೆಸಿದರೆಂದರೆ, ಸಂತಾಲರು ದೇಶವನ್ನೇ ಬಿಟ್ಟು ಪಶ್ಚಿಮ ಬಂಗಾಳಕ್ಕೆ ಬಂದು ಜೀವ ಉಳಿಸಿಕೊಂಡರು.
  2. 14. ಕಾಲಶಿರ ಎಂಬ ಹಳ್ಳಿಯ ಮನೆಯೊಂದರಲ್ಲಿ ಅಡಗಿರುವ ಕಮ್ಯುನಿಸ್ಟರನ್ನು ಬಂಧಿಸಲು ಪೊಲೀಸರು ಬಂದಿದ್ದರು. ಪೊಲೀಸರನ್ನು ನೋಡಿ ಮನೆಯೊಳಗಿದ್ದ ಆರೇಳು ಶಂಕಿತ ಕಮ್ಯುನಿಸ್ಟರು ಓಡಿ ಹೋದರು. ಮನೆಯೊಳಗೇ ನುಗ್ಗಿದ ಪೊಲೀಸರು ಮನೆಯಲ್ಲಿದ್ದ ಮಹಿಳೆಗೆ ಬಡಿಯಲಾರಂಭಿಸಿದ್ದರು. ಆಕೆಯ ಕಿರುಚಾಟ ಕೇಳಿ ಮಹಿಳೆಯ ಗಂಡ ಹಾಗೂ ಓಡಿ ಹೋದ ಇತರರು ಹಿಂತಿರುಗಿ ಮನೆಗೆ ಬಂದಾಗ, ಅವರಿಗೆ 1 ಗನ್ ಇದ್ದ 4 ಜನ ಪೊಲೀಸರು ಎದುರಾದರು. ಗನ್ ಕಸಿದುಕೊಂಡು ಒಬ್ಬ ಪೇದೆಯನ್ನು ಕೊಂದು, ಮತ್ತೊಬ್ಬನ ಮೇಲೆ ಮುಗಿಬಿದ್ದಾಗ ಉಳಿದ ಪೊಲೀಸರು ಸಹಾಯಕ್ಕಾಗಿ ಕೂಗಿಕೊಂಡರು, ಪೊಲೀಸರ ಸಹಾಯಕ್ಕೆ ಅಕ್ಕಪಕ್ಕದ ಮನೆಯವರು ಬಂದಿದ್ದನ್ನು ನೋಡಿ ಕಮ್ಯುನಿಸ್ಟರು ಓಡಿ ಹೋದರು. ಮರುದಿನ ಹೆಚ್ಚುವರಿ ಸೇನಾಪಡೆಯೊಂದಿಗೆ ಬಂದ ಪೊಲೀಸರು, ಗ್ರಾಮದ ನಿರಪರಾಧಿಗಳ ಮನೆಗೂ ನುಗ್ಗಿ ದಾಂಧಲೆ ಮಾಡಿ, ಹೆಂಗಸರು ಮಕ್ಕಳೆನ್ನದೆ ದೌರ್ಜನ್ಯವೆಸಗಿದ್ದಾರೆ. ಅಕ್ಕಪಕ್ಕದ ಮುಸ್ಲಿಮರನ್ನು ಬೆಲೆಬಾಳುವ ಸಂಪತ್ತನ್ನು ಲೂಟಿ ಮಾಡಲು ಪ್ರೇರೇಪಿಸಿ, ಹಲವಾರು ಜನರನ್ನು ಬಲವಂತವಾಗಿ ಮತಾಂತರಿಸಿದ್ದಾರೆ. ಒಂದೂವರೆ ಮೈಲಿಯಷ್ಟು ಉದ್ದವಿರುವ ಆ ಊರಿನಲ್ಲೆಲ್ಲಾ ಇದೆ ರೀತಿಯ ನರಕ ಸದೃಶ್ಯ ವಾತಾವರಣ ನಿರ್ಮಾಣವಾಗಿತ್ತು. ದೌರ್ಜನ್ಯಕ್ಕೆ ತುತ್ತಾದ ಊರುಗಳಿಗೆ ನಾನು ಭೇಟಿ ನೀಡಿದಾಗ ತಿಳಿದು ಬಂದಿದ್ದೇನೆಂದರೆ, 350 ಮನೆಗಳಿದ್ದ ಊರಿನಲ್ಲಿ ಕೇವಲ 3 ಮನೆಗಳನ್ನು ಬಿಟ್ಟು ಉಳಿದೆಲ್ಲವನ್ನೂ ಧ್ವಂಸ ಮಾಡಲಾಗಿದ್ದು, ನಾಮ ಶೂದ್ರರಿಗೆ ಸೇರಿದ ದೋಣಿಗಳು, ದನ-ಕರುಗಳನ್ನು ಹೊತ್ತೊಯ್ದಿದ್ದಾರೆ. ನಾನು ಈ ಎಲ್ಲ ವರದಿಯನ್ನು ಮುಖ್ಯಮಂತ್ರಿ, ಉನ್ನತ ಪೊಲೀಸ್ ಅಧಿಕಾರಿಗಳಿಗೆ ಸಲ್ಲಿಸಿದೆ. ಮುಂದೇನೂ ಕ್ರಮ ಕೈಗೊಳ್ಳಲಿಲ್ಲ. ಘಟನೆಯಲ್ಲಿ ಬದುಕುಳಿದವರು ಆಶ್ರಯ ಬೇಡಿ ಪಶ್ಚಿಮ ಬಂಗಾಳಕ್ಕೆ ಓಡಿ ಹೋದರು. ತಾವು ಅನುಭವಿಸಿದ ನರಕಯಾತನೆಯನ್ನು ಅಲ್ಲಿನವರಿಗೆ ತಿಳಿಸಿದ ಪರಿಣಾಮ, ಪಶ್ಚಿಮ ಬಂಗಾಳದ ಕೆಲವೆಡೆಯೂ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
  3. ಫೆಬ್ರವರಿ 1950ರ ಗಲಭೆಗಳ ಕಾರಣ: ಪಶ್ಚಿಮ ಬಂಗಾಳದಲ್ಲಿ ನಡೆದ ಕೋಮುಗಲಭೆಗಳಿಗೆ ವಿಪರೀತ ಬಣ್ಣ ಕಟ್ಟಿ ಪೂರ್ವಬಂಗಾಳದ ಪತ್ರಿಕೆಗಳು ಬರೆದಿದ್ದವು. ಫೆಬ್ರವರಿ ತಿಂಗಳ ಎರಡನೇ ವಾರ ಅಧಿವೇಶನ ಶುರುವಾದಾಗ, ಕಾಂಗ್ರೆಸ್ಸಿನ ಸದಸ್ಯರು ನಾಚೋಲೆ ಮತ್ತು ಕಲಷಿರದ ಪರಿಸ್ಥಿತಿಯ ಬಗ್ಗೆ ನಿಲುವಳಿ ಮಂಡನೆಗೆ ಅನುಮತಿ ಕೇಳಿದ್ದರು.ಅನುಮತಿ ಸಿಗದೇ ಇದ್ದಿದ್ದರಿಂದ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದ್ದರು.ಸದನದ ಹಿಂದೂ ಸದ್ಯಸರ ಈ ನಡವಳಿಕೆ ಉಳಿದ ಸಚಿವರು,ಮುಸ್ಲಿಂ ಲೀಗ್ ಮುಖಂಡರು ಹಾಗೂ ಸರ್ಕಾರದ ಉನ್ನತ ಹುದ್ದೆಗಳಲ್ಲಿದ್ದವರಿಗೆ ಸಹಿಸಲಾಗಲಿಲ್ಲ. ಮುಂದೆ ಢಾಕಾ ಹಾಗೂ ಪೂರ್ವ ಬಂಗಾಳದಲ್ಲಿ ನಡೆದ ಗಲಭೆಗೆ ಇದು ಮುನ್ನುಡಿ ಬರೆದಿತ್ತು.
  4. ಫೆಬ್ರವರಿ 10, 1950ರ ಬೆಳಗ್ಗೆ, ಮಹಿಳೆಯೊಬ್ಬಳ ಸ್ತನಗಳಿಗೆ ಕೆಂಪು ಬಣ್ಣ ಬಳಿದು, ಪಶ್ಚಿಮ ಬಂಗಾಳದ ಗಲಭೆಯಲ್ಲಿ ಕತ್ತರಿಸಲಾಗಿದೆ ಎಂಬ ಸುದ್ದಿಯನ್ನು ಹಬ್ಬಿಸಿ ಆಕೆಯನ್ನು ಢಾಕಾದ ಮುಖ್ಯ ಕಾರ್ಯದರ್ಶಿ ಕಚೇರಿಗೆ ಕರೆದೊಯ್ಯಲಾಯಿತು. ಕೂಡಲೇ ಅಧಿಕಾರಿಗಳೆಲ್ಲ ಕಚೇರಿಯನ್ನು ಬಹಿಷ್ಕರಿಸಿ ಹಿಂದೂಗಳ ವಿರುದ್ಧ ಪ್ರತಿಕಾರ ತೆಗೆದುಕೊಳ್ಳಿ ಎಂದು ಪ್ರತಿಭಟನಾ ಮೆರವಣಿಗೆ ನಡೆಸಿದರು. ದೊಡ್ಡ ದೊಡ್ಡ ಅಧಿಕಾರಗಳಿದ್ದ ಸಭೆಯಲ್ಲೇ ಹಿಂದೂಗಳ ವಿರುದ್ಧ ಹಿಂಸಾತ್ಮಕ ಹಾಗೂ ಪ್ರಚೋದನಕಾರಿ ಭಾಷಣಗಳನ್ನು ಮಾಡಲಾಯಿತು. ಹಾಸ್ಯಾಸ್ಪದ ವಿಷಯವೇನೆಂದರೆ, ಈ ಸಭೆ ನಡೆಯುತ್ತಿದ್ದ ಜಾಗದ ಹತ್ತಿರವೇ ಪೂರ್ವ-ಪಶ್ಚಿಮ ಬಂಗಾಳದ ಅಧಿಕಾರಿಗಳು ಕೋಮು ಸಂಘರ್ಷವನ್ನು ಕೊನೆಗಾಣಿಸುವ ಬಗ್ಗೆ ಚರ್ಚಿಸುತ್ತಿದ್ದರು!

ಮಧ್ಯಾಹ್ನ ಒಂದು ಗಂಟೆಯ ವೇಳೆಗೆ ಗಲಭೆಗಳು ಶುರುವಾದವು. ಪೊಲೀಸ್ ಅಧಿಕಾರಿಗಳ ಕಣ್ಣೆದುರಿಗೆ ಹಿಂದೂ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ಮಾಡಿ ಲೂಟಿ ಮಾಡಲಾಯಿತು. ಒಡವೆ ಅಂಗಡಿಗಳನ್ನು ದೋಚಲಾಯಿತು, ರಸ್ತೆಯಲ್ಲಿ ಸಿಕ್ಕ ಸಿಕ್ಕ ಹಿಂದುಗಳನ್ನು ಬಡಿಯಲಾಯಿತು ಮತ್ತು ಇದೆಲ್ಲವೂ ಸರ್ಕಾರಿ ಸುಪರ್ಧಿಯಲ್ಲೇ ನಡೆದವು. ನೂರಾರು ಹಿಂದುಗಳನ್ನು ರೈಲು, ರೈಲ್ವೆ ಲೈನುಗಳಲ್ಲೆಲ್ಲ ಕೊಲ್ಲಲಾಗಿತ್ತು. ಬಾರಿಸಾಲ್, ಕಲಷಿರ, ಲಕುಟಿಯ ಹೀಗೆ ಎಲ್ಲ ಕಡೆಯೂ ಮಾರಣ ಹೋಮ ನಡೆದಿತ್ತು. ಮಾದಬ್ಪಾಶ ಊರಿನ ಜಮೀನ್ದಾರನ ಮನೆಯಲ್ಲಿ 300 ಜನರನ್ನು ಕೊಲ್ಲಲಾಗಿತ್ತು,40 ಜನರಿಗೆ ಗಂಭೀರ ಗಾಯಗಳಾಗಿದ್ದವು. ಮುಲಾಡಿ ಹಳ್ಳಿಯಲ್ಲಂತೂ ಮಾನವ ಅಸ್ತಿಪಂಜರಗಳನ್ನು, ಹೆಣ್ಗಳನ್ನು ಕುಕ್ಕಿ ತಿನ್ನುತ್ತಿದ್ದ ನಾಯಿ, ರಣಹದ್ದುಗಳನ್ನು ನೋಡಿದ್ದೇನೆ. ಗಂಡಸರನ್ನೆಲ್ಲ ಕೊಂದು ಹೆಣ್ಣುಮಕ್ಕಳನ್ನು ಗಲಭೆಕೋರರು ತಮ್ಮ ತಮ್ಮೊಳಗೆ ಹಂಚಿಕೊಂಡಿದ್ದರು. ಬರಿಸಾಲ್ ಜಿಲ್ಲೆಯೊಂದರಲ್ಲೇ 2500 ಜನರ ಹತ್ಯೆಯಾಗಿದ್ದರೆ, ಇಡೀ ಢಾಕಾ, ಪೂರ್ವ ಬಂಗಾಳದ ಗಲಭೆಯಿಂದಾಗಿ 10000 ಕ್ಕೂ ಹೆಚ್ಚು ಹಿಂದೂಗಳ ಹತ್ಯೆಯಾಗಿತ್ತು. ನನ್ನವರ ಮೇಲೆ ನಡೆದ ಈ ದೌರ್ಜನ್ಯ, ಅಪಾರ ಸಾವು-ನೋವು ನೋಡಿ ನನ್ನನೇ ನಾನು ಕೇಳಿಕೊಂಡೆ “ಇಸ್ಲಾಮ್ ಹೆಸರಿನಲ್ಲಿ ಪಾಕಿಸ್ತಾನಕ್ಕೆ ಏನು ಬರುತ್ತಿದೆ?”

  1. ಮಾರ್ಚ್ ತಿಂಗಳ ವೇಳೆಗೆಲ್ಲ ಹಿಂದೂಗಳು ತಂಡೋಪತಂಡವಾಗಿ ಪಶ್ಚಿಮ ಬಂಗಾಳಕ್ಕೆ ಆಶ್ರಯ ಬೇಡಿ ಹೋಗಲು ಶುರು ಮಾಡಿದರು. ಪೂರ್ವ ಬಂಗಾಳದ ಅಷ್ಟೂ ಹಿಂದೂಗಳು ಖಾಲಿಯಾಗುತ್ತಾರೆ ಎನ್ನುವಂತ ವಾತಾವರಣ ಸೃಷ್ಟಿಯಾಗಿತ್ತು. ಇತ್ತ ಭಾರತದಲ್ಲಿ ಯುದ್ಧ ಘೋಷಣೆಯ ಕೂಗುಗಳು ಕೇಳಿ ಬರುತ್ತಿತ್ತು. ಈ ನಡುವೆ ಏಪ್ರಿಲ್ ತಿಂಗಳಲ್ಲಿ ‘ದೆಹಲಿ ಒಪ್ಪಂದ’ಕ್ಕೆ ಸಹಿ ಬಿತ್ತು. ದೆಹಲಿ ಶಾಂತಿ ಒಪ್ಪಂದದ ಆಧಾರದ ಮೇಲೆ ನಾನು ಪೂರ್ವ ಬಂಗಾಳದಾದ್ಯಂತ ಸಂಚರಿಸಿ ಹಿಂದೂಗಳಿಗೆ ಧೈರ್ಯ ತುಂಬಿ, ನಿಮ್ಮ ಪೂರ್ವಜರು ಹುಟ್ಟಿ ಬೆಳೆದ ಜಾಗ ಬಿಟ್ಟು ಹೋಗಬೇಡಿ ಎಂದು ಕರೆಕೊಟ್ಟೆ. ದೆಹಲಿ ಒಪ್ಪಂದವನ್ನು ನಂಬಿ ವಾಪಸು ಬಂದ ಹಿಂದೂಗಳ ಆಸ್ತಿ-ಪಾಸ್ತಿಯನ್ನು ಕಬಳಿಸಿದವರು ಬಿಟ್ಟುಕೊಡಲಿಲ್ಲ. ವಾಸ್ತವದಲ್ಲಿ ಮುಸ್ಲಿಂ ಲೀಗ್ ಮತ್ತು ಪೂರ್ವ ಬಂಗಾಳ ಸರ್ಕಾರ ದೆಹಲಿ ಒಪ್ಪಂದಕ್ಕೆ ಮಾನ್ಯತೆಯನ್ನೇ ನೀಡಲಿಲ್ಲ…”

… ಮುಂದುವರಿಯುವುದು

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments