ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 18, 2018

1

‘ಕೈ’ ಪಕ್ಷಕ್ಕೆ ಈ ಸಲ ಜನತೆ ‘ಕೈ’ ಕೊಡಬೇಕಿದೆ !

‍ನಿಲುಮೆ ಮೂಲಕ

– ಅಭಿಷೇಕ್ ಬಿ ಎಸ್
‘ಕರ್ನಾಟಕ ನಂಬರ್ 1 ರಾಜ್ಯ’ – ಮೇಲಿಂದಲೋ ಕೆಳಗಿಂದಲೋ ?

ಕರ್ನಾಟಕ ಮತ್ತೊಮ್ಮೆ ಚುನಾವಣೆಯ ಕಡೆ ಮುಖ ಮಾಡಿ ನಿಂತಿದೆ. ಒಂದು ಸರ್ಕಾರದ ಅಧಿಕಾರಾವಧಿ ಮುಗಿತಾ ಬರ್ತಾ ಇದೆ. ಹೊಸ ಸರ್ಕಾರವನ್ನ ನಿರ್ಧಾರ ಮಾಡುವ ಅಧಿಕಾರ ನೇರವಾಗಿ ಜನರ ಬಳಿಗೆ shift ಆಗತ್ತೆ. ಕಳೆದ ಮೂರು ಚುನಾವಣೆಗಳಲ್ಲಿ ಕರ್ನಾಟಕ ಮೂರೂ ಪಕ್ಷಗಳ ಅಧಿಕಾರವನ್ನ ನೋಡಾಗಿದೆ. ಹಾಗಿದ್ರೆ, ಈ ಸಲವೂ ಅದೇ ಮೂರು ಪಕ್ಷಗಳು, ಮತ್ತು ಅದೇ ಮೂರು ಪಕ್ಷಗಳ ನಾಯಕರು ಇದ್ದಾರಲ್ಲ, ಯಾರಿಗೆ ವೋಟ್ ಮಾಡಬೇಕು ಅನ್ನೋದನ್ನ ಕರ್ನಾಟಕದ ಸಾಮಾನ್ಯ ಮತದಾರ ಲೆಕ್ಕ ಹಾಕ್ತಾ ಇರ್ತಾನೆ.

ಯಶಸ್ವಿ ಐದು ವರ್ಷಗಳನ್ನ ಮುಗಿಸಿದ ಶ್ರೀಯುತ ಸಿದ್ದರಾಮಯ್ಯನವರ ಸರ್ಕಾರ ಜನರ ಆಶೋತ್ತರಗಳಿಗೆ ತಕ್ಕನಾಗಿ ಕೆಲಸ ಮಾಡಿದ್ಯಾ ? ನಾಡಿನ ಜನತೆ ಬಯಸಿದ್ದ ಆಡಳಿತದ ಗುರಿಯನ್ನ ತಲುಪಲಿಕ್ಕೆ ಸಾಧ್ಯ ಆಗಿದ್ಯಾ ? ಇದು ವಿಮರ್ಶೆಯ ಸಮಯ.

ಇಲ್ಲಿ ನಾನು ಹೇಳಬೇಕೆಂದಿರೋ ವಿಷಯ, ಯಾವ ಪಕ್ಷದ ಪರವಾಗಿ ಅಲ್ಲದಿದ್ರೂ, ಈಗ ಅಧಿಕಾರದಲ್ಲಿರುವ ಸರ್ಕಾರದ ಪರವಾಗಿಯಂತೂ ಇಲ್ಲ. ಈಗಿನ ಸರಕಾರ, ತನ್ನ ಮಹತ್ಸಾಧನೆಗಳನ್ನ ಪ್ರಚಾರ ಮಾಡಲು 100 ಕೋಟಿ ಜನರ ಹಣವನ್ನು ಖರ್ಚು ಮಾಡಲು ನಿರ್ಧಾರ ಮಾಡಿತ್ತು. ಹಾಗಿದ್ದ ಮೇಲೆ ಸರ್ಕಾರದ ವೈಫಲ್ಯಗಳನ್ನ ಎತ್ತಿ ಹಿಡಿಯೋ ಜವಾಬ್ದಾರಿ, ನಮ್ಮ ಮೇಲೆ ಇದೆ ಅಂತಾಯ್ತು !

2013 ರಲ್ಲಿ ಸಿದ್ದರಾಮಯ್ಯನವರಿಗೆ ಕರ್ನಾಟಕದ ಜನತೆ ಸ್ಪಷ್ಟ ಬಹುಮತ ನೀಡಿತ್ತು ಮತ್ತು ಅಷ್ಟೇ ನಿರೀಕ್ಷೆಗಳನ್ನೂ ಹೊಂದಿತ್ತು. ಸಿದ್ದರಾಮಯ್ಯನವರ ರಾಜಕೀಯ ಅನುಭವದ ಬಗ್ಗೆ ಜನರಿಗೆ ಸಹಜವಾಗಿಯೇ ವಿಶ್ವಾಸ ಇತ್ತು.

ಈ ವಿಶ್ವಾಸವನ್ನ ಅವರು ಉಳಿಸಿಕೊಳ್ಳಬಹುದಿತ್ತಾದರೂ ನನ್ನ ಪಾಲಿಗೆ ಅದು ಬಹಳ ಬೇಗ ಕಳೆದು ಹೋಯ್ತು.

ತಮಗೆ ತಾವೇ ‘ಸಮಾಜವಾದಿ’ ಮತ್ತು ‘ಜಾತ್ಯತೀತವಾದಿ’ ಅಂತ ಕರೆದುಕೊಳ್ಳೋ ಸಿದ್ದರಾಮಣ್ಣನವರಿಗೆ, ಕೈಗೆ ಕಟ್ಟಲಿಕ್ಕೆ 70 ಲಕ್ಷದ watch ಬೇಕಿತ್ತು, ಊಟ ಮಾಡಲು ಬೆಳ್ಳಿಯ ತಟ್ಟೆ ಬೇಕಿತ್ತು, ಯಾವುದೇ ಸಾರ್ವಜನಿಕ ಭಾಷಣಕ್ಕೆ ಹೋದ್ರೂ ಜಾತಿಯನ್ನ ಎಳೆದು ತರಲೇ ಬೇಕಿತ್ತು. ಅಧಿಕಾರ ಸ್ವೀಕರಿಸಿದ ದಿನವೇ ಒಂದು ರೂಪಾಯಿ ಅಕ್ಕಿಯ ಯೋಜನೆಯನ್ನ ಸನ್ಮಾನ್ಯ ಮುಖ್ಯಮಂತ್ರಿಗಳು ಜಾರಿಗೆ ತಂದು ‘ಹಸಿವು ಮುಕ್ತ ಕರ್ನಾಟಕ’ ಮಾಡಿದ್ದೀವಿ ಅಂತ ಐದೂ ವರ್ಷ ಹೇಳ್ತಾ ಬಂದ್ರು. ಅಂದರೆ ಮುಖ್ಯಮಂತ್ರಿಗಳ ಪ್ರಕಾರ ಈ scheme ಜಾರಿಗೆ ಬರೋದಕ್ಕೆ ಮುಂಚೆ ಕರ್ನಾಟಕ ಹಸಿವಿನಿಂದ ಬರಗೆಟ್ಟು ನರಳುತ್ತಾ ಇತ್ತು ಅಂತಾಯ್ತು. ಅನ್ನಭಾಗ್ಯಕ್ಕೆ ಮುಂಚೆ ration ಅಂಗಡಿಯಲ್ಲಿ ಅಕ್ಕಿಯ ಬೆಲೆ ಎಷ್ಟಿತ್ತು, ತಾವು ಎಷ್ಟು ದುಡ್ಡನ್ನ ಕಡಿಮೆ ಮಾಡಿದ್ರಿ ಮತ್ತು ಇದೊಂದೇ ವಿಷಯವನ್ನಿಟ್ಟುಕೊಂಡು ಅದೆಷ್ಟು ಪ್ರಚಾರ ಪಡೆದುಕೊಂಡಿರಿ ಅನ್ನೊದು ಜನ ಗಮನಿಸಿಲ್ಲ ಅಂತ ತಿಳಿದುಕೊಳ್ಳಬಾರದು ಅಷ್ಟೇ. ಇಷ್ಟು ಮಾಡಿದ್ರೂ, election ಇನ್ನು ಆರು ತಿಂಗಳು ಮಾತ್ರ ಇರಬೇಕಾದ್ರೆ ಕರ್ನಾಟಕದ ಹಸಿವು ಇನ್ನೂ ನೀಗಿಲ್ಲ ಅಂತ ಸರ್ಕಾರಕ್ಕೆ ಅನ್ನಿಸಿತು. ಆಗ ಹುಟ್ಟಿದ idea ನೇ ಇಂದಿರಾ ಕ್ಯಾಂಟೀನ್. ಬಡತನದ ಜೀವನ ನಡೆಸುತ್ತಿರುವವರಿಗೆ ಮಾತ್ರವೇ ಬಡತನ ನಿರ್ವಹಣೆ ಎಷ್ಟು ದುಬಾರಿ ಅನ್ನೋದು ಗೊತ್ತಾಗೋದು. ಬಡತನದಿಂದ ಹೊರಬರಲು, ತಮ್ಮ ಕುಟುಂಬಕ್ಕೆ ಒಂದು ಸ್ವಾಭಿಮಾನದ ಬದುಕು ಕಟ್ಟಿಕೊಡಲು ಹವಣಿಸುತ್ತಿರುವ ಸಾವಿರಾರು ಸ್ವಾಭಿಮಾನಿ ಯುವಕರ ಬಗ್ಗೆ ಯೋಚನೆ ಬಂದಿತ್ತೇನು ? ಯಾವುದೇ ಧರ್ಮದ, ಜಾತಿಯ ಯುವಕರೇ ಆಗಲಿ, ತಮ್ಮ ಸ್ವಂತ ಶಕ್ತಿಯಿಂದ ದುಡಿದು ೩೦ ರೂಪಾಯಿಯ ಅನ್ನವನ್ನು ತಮ್ಮ ತಾಯಿಯ ಕೈಗೊ ಹೆಂಡತಿಯ ಕೈಗೊ ಕೊಟ್ಟಿದ್ದಕ್ಕೆ ಹೆಮ್ಮೆ ಪಡುತ್ತಾರೆಯೇ ಹೊರತು, ಸಿದ್ದರಾಮಯ್ಯನವರೇ, ತಮ್ಮ ಒಂದು ರೂಪಾಯಿಯ ಅಕ್ಕಿಯನ್ನೋ, ೫ ರುಪಾಯಿಯ ತಿಂಡಿಯನ್ನೋ, ೧೦ ರುಪಾಯಿಯ ಊಟವನ್ನೋ ಬಯಸೊಲ್ಲ ! ಅವರ ಈ ಆಸೆಗಳನ್ನ ಈಡೇರಿಸುವ ಕೆಲಸ ಎಷ್ಟಾಗಿದೆ ? ೪೨೦೦ ಕೋಟಿಗಳು ಅನ್ನಭಾಗ್ಯಕ್ಕೆ ಖರ್ಚಾಗಿದೆ, ೧೦೦ ಕೋಟಿಗಳು ಇಂದಿರಾ ಕ್ಯಾಂಟೀನ್ ಗೆ ಬೆಂಗಳೂರಿನಲ್ಲೇ ಖರ್ಚಾಗಿದೆ ಅಂತ ಪೇಪರ್ ನಲ್ಲಿ ನೋಡಿದ್ದೀನಿ, ಎಷ್ಟು ಜನ ಬಡವರಿಗೆ ಉದ್ಯೋಗ ಸಿಕ್ಕಿದೆ, ಆ ಬಗ್ಗೆ ಈ ಐದು ವರ್ಷಗಳಲ್ಲಿ ಏನೇನು ಪ್ರಯತ್ನ ತಮ್ಮಿಂದಾಗಿದೆ ಅಂತ numbers ತಮ್ಮ ಹತ್ರ ಇರಬೇಕಲ್ಲ. ಈ ಬಗ್ಗೆ ಪೇಪರ್ ನಲ್ಲಿ ಎಲ್ಲೂ ಕಾಣಲಿಲ್ಲ. ಸರ್ಕಾರ ಸಾಧ್ಯವಾದ್ರೆ ತಿಳಿಸಿಕೊಡಬೇಕು.

ಪ್ರಜೆಗಳಿಗೆ ನೀವೇನೂ ಕೆಲಸ ಮಾಡೋದು ಬೇಡ, ನಾನು ಕುಂತಲ್ಲಿಗೆ ಅಕ್ಕಿ ಕೊಡ್ತೀನಿ, ಊಟ ಕೊಡ್ತೀನಿ, ನನ್ನ ನಿಸ್ವಾರ್ಥ ಸೇವೆಯನ್ನ ಸ್ವೀಕಾರ ಮಾಡಿ, ಐದು ವರ್ಷ ಕಳೆದ ಮೇಲೆ election ನಲ್ಲಿ ವೋಟ್ ಮಾಡಿ ಅಂತ ಪರೋಕ್ಷವಾಗಿ ಹೇಳೋದು, ಬಡತನವನ್ನ ಹಂಗಿಸಿದಂತೆ, ಯುವಕರ ಸಾಮರ್ಥ್ಯವನ್ನ ಕಡೆಗಣಿಸಿದಂತೆಯೇ !

ಮಹಾನ್ ಜಾತ್ಯತೀತವಾದಿ ಕಾಂಗ್ರೆಸ್ ಪಕ್ಷ, ರಾಜ್ಯದ ಜಾತಿಗಣತಿಗೆ ಮುಂದಾಯ್ತು. ಸರಕಾರಿ ನೌಕರರು, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರನ್ನೂ ಈ ಕೆಲಸಕ್ಕೆ ಹೆಚ್ಚಿತ್ತು. ಈ census ಮುಗಿದು ೨ ವರ್ಷಗಳು ಕಳೆದರೂ, census ನ ಫಲಿತಾಂಶಗಳೇನು ? ಉದ್ದೇಶವೇನೆಂದು ಸರ್ಕಾರ ಈವರೆಗೆ ಬಾಯ್ಬಿಟ್ಟಿಲ್ಲ. ಮುಂದಿನ election ತಯಾರಿಗಾಗಿ, ತಮ್ಮ ಸ್ವಾರ್ಥ ಸಾಧನೆಗಾಗಿ ನಮ್ಮ ನಿಮ್ಮ ತೆರಿಗೆ ಹಣ, ಯಾರಿಗೂ ಉಪಯೋಗವಾಗದೆ ೧೭೫ ಕೋಟಿ ರೂಪಾಯಿಗಳು ಪೋಲಾಗಿದೆ. ಮುಖ್ಯಮಂತ್ರಿಗಳು ಇದರ ಬಗ್ಗೆ ಎಲ್ಲೂ ಬಾಯಿ ಬಿಡಲಿಲ್ಲ. ಉದ್ದೇಶ ಸತ್ಯವಾಗಿದ್ದಿದ್ದರೆ ಈ census result announce ಮಾಡೋಕ್ಕೆ ಕಾಯಬೇಕಿರಲಿಲ್ಲ.

ಕಳೆದ ಐದೂ ವರ್ಷಗಳಲ್ಲಿ ಬಾಯಲ್ಲಿ secular ಮಂತ್ರವನ್ನ ಹೇಳ್ತಾ ಜಾತಿವಾದದ ಬದನೆಕಾಯಿಯನ್ನೇ ತಿನ್ನುತ್ತಾಯಿರೋದಕ್ಕೆ ಮತ್ತೊಂದು ಉದಾಹರಣೆ – ಪ್ರತ್ಯೇಕ ಲಿಂಗಾಯಿತ ಧರ್ಮದ ಸ್ಥಾಪನೆಯ ವಿಚಾರವಾಗಿ ಈ ಸರ್ಕಾರ ನಡೆದುಕೊಂಡ ರೀತಿ. ಪ್ರತ್ಯೇಕ ಲಿಂಗಾಯಿತ ಧರ್ಮದ ಹೋರಾಟಕ್ಕೆ ಹೆಚ್ಚಿನ ಕಾವು ಸಿಕ್ಕಿದ್ದು ಕಳೆದ ಒಂದು ವರ್ಷದಲ್ಲಿ ಮಾತ್ರ ಎನ್ನುವುದನ್ನು ಗಮನದಲ್ಲಿಡಬೇಕು. ಲಿಂಗಾಯಿತ ಪರಂಪರೆಯ ಗೌರವಾನ್ವಿತ ಮತ್ತು ವಿದ್ವತ್ಪೂರ್ಣ ಮಠಾಧೀಶರ ಅಭಿಪ್ರಾಯವನ್ನೂ ಲೆಕ್ಕಿಸದೆ ಸಚಿವರುಗಳಾದ ಎಂ. ಬಿ. ಪಾಟೀಲ್ ಮತ್ತು ವಿನಯ್ ಕುಲಕರ್ಣಿ ತಮ್ಮ ಮೂಗಿನ ನೇರಕ್ಕೆ ಷರಾ ಬರೆದ್ರು. ಜಾತಿಗಣತಿಯನ್ನು ಸರ್ಕಾರ ದುರುಪಯೋಗ ಪಡಿಸಿಕೊಂಡಿದ್ದು ಹೀಗೇನೆ. ತಮ್ಮ ಸಮುದಾಯದ ಬಗ್ಗೆ ಅಷ್ಟೊಂದು ಕಾಳಜಿಯಿರುವಂಥ ಈ ಸಚಿವರುಗಳು ಮೊದಲ ನಾಲ್ಕು ವರ್ಷಗಳಲ್ಲಿ ಈ ಬಗ್ಗೆ ಮಾತೇ ಆಡದಿದ್ದದ್ದು ಒಂದು ಥರದ ವಿಚಿತ್ರ. ನೂರಾರು ವರ್ಷಗಳ ಇತಿಹಾಸವಿರುವ ಬಸವಣ್ಣನವರಿಂದ ಪ್ರೇರಣೆ ಪಡೆದ ಲಿಂಗಾಯಿತ ಸಮುದಾಯವನ್ನು ಸರ್ಕಾರ election ನ ಆಧಾರದಲ್ಲಿ ಚರ್ಚೆಗೆ ತಂದಿದ್ದು, ಅವಸರದಲ್ಲಿ ಒಂದು committer ರಚನೆ ಮಾಡಿದ್ದೂ, ಆ committee ಯಲ್ಲಿ  ಒಬ್ಬ ಲಿಂಗಾಯಿತ ಪ್ರತಿನಿಧಿಯೂ ಇಲ್ಲದೆ ಇದ್ದದ್ದೂ, ನಿಮಗೆ ಬೇಕಾದ ಹಾಗೆ recommendation ಸೃಷ್ಟಿಸಿದ್ದೂ,  ಇದೆಲ್ಲವೂ  ಹಿಂದೂ ಧರ್ಮಕ್ಕೆ ಮಾಡಿದ ದೊಡ್ಡ ಅಪಮಾನ. ಒಂದು ಎಲೆಕ್ಷನ್ ಗೆಲ್ಲೋಕೆ ಕಾಂಗ್ರೆಸ್ ಯಾವ ಮಟ್ಟಕ್ಕೆ ಬೇಕಿದ್ರೂ ಇಳಿಯಕ್ಕೆ ಸಿದ್ಧವಾಗತ್ತೆ ಅನ್ನೋದು ಇವತ್ತು ಕಂಡುಕೊಂಡ ಸತ್ಯ ಏನಲ್ಲ. ೨೦೧೪ ರಲ್ಲಿ ಲೋಕಸಭೆ ಎಲೆಕ್ಷನ್ನಿಗೆ ಎರಡೇ ತಿಂಗಳು ಇದ್ದಾಗ ಆಂಧ್ರ ಪ್ರದೇಶವನ್ನ ಇಬ್ಭಾಗ ಮಾಡಿದವರಲ್ಲವೇ ಇವರು ? ಇವತ್ತು ಎಲೆಕ್ಷನ್ನಿಗೆ ಎರಡೇ ತಿಂಗಳಿದ್ದಾಗ, ಹಿಂದೂ ಧರ್ಮವನ್ನು ಇಬ್ಭಾಗ ಮಾಡಿದ್ದಾರಷ್ಟೇ.

ಆದರ್ಶ ಹಿಂದೂ ಧರ್ಮಕ್ಕಾಗಿ ಜಾತಿ ಪಂಥಗಳ ಸಂಕೋಲೆಗಳನ್ನು ಮೀರಿದ ಒಗ್ಗಟ್ಟು ಮುಖ್ಯ ಅನ್ನೋದನ್ನ ಎಲ್ಲರೂ ಒಪ್ಪಿಕೊಳ್ತಾರೆ. ಈ ವಿಚಾರದಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳು ಬಹಳಷ್ಟು ಪ್ರಗತಿ ಸಾಧಿಸಿವೆ. Private school ಗಳಲ್ಲಿ  ನಮ್ಮ ಮಕ್ಕಳ ಎಲ್ಲ ಸ್ನೇಹಿತರ ಜಾತಿಗಳು ಗೊತ್ತಿರತ್ತೇನು ? ಮಕ್ಕಳಿಗಂತೂ ಅದು ತಿಳಿಯುವ ಅವಶ್ಯಕತೆಯೂ ಇಲ್ಲ. Private ಕಂಪೆನಿಗಳಲ್ಲೂ ಸಹೋದ್ಯೋಗಿಗಳ ಜಾತಿ ಎಲ್ಲರಿಗೂ ತಿಳಿದಿರೋದಿಲ್ಲ. ಪೊಲೀಸ್ ಠಾಣೆಗಳಲ್ಲಿ, ಆಸ್ಪತ್ರೆಗಳಲ್ಲಿ, higher education ನಲ್ಲಿ, ಅಲ್ಲದೆ ಸಾವಿರಾರು ದೇವಸ್ಥಾನಗಳಲ್ಲೂ ಯಾರೂ ಇವತ್ತು ನಮ್ಮ ಜಾತಿಯನ್ನ ಕೇಳೋದಿಲ್ಲ. ಆ ನಿಟ್ಟಿನಲ್ಲಿ ನೋಡಿದ್ರೆ, ಇದು ಒಳ್ಳೆಯ ಬೆಳವಣಿಗೆ. ಇದನ್ನು ಮುಂದುವರೆಸಿಕೊಂಡು ಹೋಗಬೇಕಾದದ್ದೂ ಸಾಮಾಜಿಕ ಜವಾಬ್ದಾರಿಯಾಗಿದೆ. ಇದರಲ್ಲಿ ಸರಕಾರದ ಜವಾಬ್ದಾರಿಯೂ ಅಷ್ಟೇ ಮುಖ್ಯವಾಗಿರತ್ತೆ. ಸಮಾಜ ಒಗ್ಗಟ್ಟಿಗಾಗಿ ಹಾತೊರೆಯುತ್ತಿದ್ದರೂ, ಸರಕಾರಗಳು ಮಾತ್ರ ಜಾತೀಯತೆಯನ್ನು ಪೋಷಿಸುತ್ತಲೇ ಇರುತ್ತದೆ. ಜಾತಿಗಳ ಸಮೀಕರಣದಿಂದಲೇ, vote bank ಸೃಷ್ಟಿಯಾಗೋದು ಅಲ್ಲವೇ ? ಈ ವಿಚಾರದಲ್ಲಿ ಸಿದ್ದರಾಮಯ್ಯ ನವರು ಯಾವತ್ತೂ ಹಿಂದೆ ಬಿದ್ದಿಲ್ಲ. 1988 ರಲ್ಲಿ ಸರಕಾರಿ ಶಾಲೆಗಳಲ್ಲಿ ಯುನಿಫಾರ್ಮ್ ಗಳನ್ನ compulsory ಮಾಡಿ, ಬಸ್ ಪಾಸ್ ಗಳನ್ನ ಫ್ರೀಯಾಗಿ ಕೊಟ್ಟು ಅವತ್ತಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ಹೇಳಿದ್ರಂತೆ – school ಗೆ  ಬರುವ ಪ್ರತಿಯೊಂದು ಮಗುವಿಗೂ ನಾವೆಲ್ಲರೂ ಸಮಾನರು ಅನ್ನಿಸಬೇಕು ಅಂತ. ಇದಲ್ಲವೇ ಎಲ್ಲ ಸ್ಥರದ, ಎಲ್ಲ ಜಾತಿಯ ಮಕ್ಕಳನ್ನ ಬೆಸೆಯುವ ರೀತಿ ? ಆದರೆ ‘ಈ’ ಸರಕಾರ ಮಕ್ಕಳಿಗೆ ಉಚಿತವಾಗಿ ಬಸ್ ಪಾಸ್ ಕೊಡ್ತು, laptop ಕೊಡ್ತು, ಪ್ರವಾಸಕ್ಕೆ ಕರೆದುಕೊಂಡು ಹೋಯ್ತು. ಆದರೆ ಅದಕ್ಕೆ eligibility ಇದ್ದದ್ದು ಪರಿಶಿಷ್ಟ ವರ್ಗದ ಮಕ್ಕಳಿಗೆ ಮಾತ್ರ ! ಸರಕಾರಿ ಶಾಲೆಯ ಬಡ ಮಕ್ಕಳಿಗೆ, ದಲಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಸಿಗುವಂಥ ಕೆಲಸಗಳು ಒಪ್ಪುವಂಥದ್ದೇ. ಆದರೆ ಶಾಲೆಯ ಒಂದಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಸೌಲಭ್ಯ ಸಿಗುವಂತಾದರೆ, ಆ ಸೌಲಭ್ಯ ಪಡೆದುಕೊಳ್ಳುವ ಮತ್ತು ಪಡೆಯಲಾರದ ಇಬ್ಬರೂ ಎಳೆಯ ಮಕ್ಕಳಲ್ಲೂ ದ್ವಂದ್ವ ಸೃಷ್ಟಿಸಿದಂತಲ್ಲವೇ ? ಜಾತಿಯ ಪರಿವೆ ಇಲ್ಲದೆ ಜೊತೆಗಿದ್ದ ಸ್ನೇಹಿತರಲ್ಲಿ ಜಾತಿಯ ಬೀಜ ಬಿತ್ತಿ, ಜಾತೀಯತೆ ಜೀವಂತವಾಗಿ ಇರಿಸಿದಂತಾಗಲಿಲ್ಲವೇ ? ಇಂದಿರಾ ಕ್ಯಾಂಟೀನ್ ಗಳನ್ನ ಇಡೀ ರಾಜ್ಯಕ್ಕೆ ವಿಸ್ತರಿಸುವ ಶಕ್ತಿಯಿರುವ ಸರಕಾರಕ್ಕೆ ಈ ಎಲ್ಲ ಸೌಲಭ್ಯಗಳನ್ನು ಎಲ್ಲ ಮಕ್ಕಳಿಗೂ ಕಲ್ಪಿಸುವ ಶಕ್ತಿ ಇರಲಿಲ್ಲವಾ ? ಖಂಡಿತ ಇತ್ತು. ಆದರೆ ಜಾತೀಯತೆಯನ್ನೇ ಪೋಷಿಸುವ ಸರಕಾರಕ್ಕೆ ಅದು ಬೇಕಿರಲಿಲ್ಲ.

ಇವರ ರಾಜಕೀಯ, ಜಾತಿ ಜಾತಿಗಳಲ್ಲದೆ, ಧರ್ಮಗಳ ನಡುವೆಯೂ ಹೆಚ್ಚಾಗಿಯೇ ಕಂಡಿತ್ತು. ಮುಖ್ಯಮಂತ್ರಿಗಳು ಕೋಳಿ ಮಾಂಸವನ್ನು ತಿಂದು ಧರ್ಮಸ್ಥಳದ ಮಂಜುನಾಥನ ದರ್ಶನ ಮಾಡಿಕೊಂಡು ಬಂದದ್ದು ವಿವಾದವಾದಾಗ, ‘ಹೌದು ನಾನು ಕೋಳಿ ಮಾಂಸ ತಿಂದೇ ದೇವಸ್ಥಾನಕ್ಕೆ ಹೋಗಿದ್ದೆ. ಹಾಗೆ ಮಾಡಬಾರದು ಅಂತ ಎಲ್ಲಾದ್ರೂ ಬರ್ದವ್ರಾ ?’ ಅಂತ ಕೇಳಿದ್ರು. ಎಲ್ಲರೂ ದೇವಸ್ಥಾನಕ್ಕೆ ಹೋಗಲೇ ಬೇಕು ಎಂದೂ ಎಲ್ಲೂ ಬರೆದಿಲ್ಲ ಸ್ವಾಮಿ. ಅದೊಂದು ಹುಟ್ಟಿನಿಂದಲೇ ಬೆಳೆದು ಬರುವಂಥ ಧಾರ್ಮಿಕ ಶ್ರದ್ಧೆ ಮತ್ತು ಸಂಸ್ಕಾರ. ಹೋಗ್ಲಿ ಬಿಡಿ, ಆದ್ರೆ ಇದಾಗಿ ಕೆಲವೇ ದಿನಗಳಲ್ಲಿ, ಮುಖ್ಯಮಂತ್ರಿಗಳು ಕಾರ್ಯಕ್ರಮದಲ್ಲಿ ಭಾಷಣ ಮಾಡ್ತಾ ಇದ್ದಾಗ, aazaan ಕೇಳಿ ಬರತ್ತೆ. ಮಾತನ್ನು ಅಲ್ಲಿಗೇ ನಿಲ್ಲಿಸಿ, ಚಪ್ಪಲಿಯನ್ನು side ನಲ್ಲಿ ಬಿಟ್ಟು, aazaan ಗೆ ಗೌರವ ಸೂಚಿಸುವ ಪ್ರಯತ್ನ ಮಾಡ್ತಾರೆ. aazaan ಕೇಳಿದ ಕೂಡಲೇ ಚಪ್ಪಲಿ ಬಿಚ್ಚಿ , ಮಾತು ನಿಲ್ಲಿಸಿ ಗೌರವ ಸೂಚಿಸಬೇಕು ಅಂತ ಎಲ್ಲಾದ್ರೂ ಬರ್ದವ್ರಾ ? ಅಂತ ಕೇಳಿದ್ರೆ ಏನು ಉತ್ತರ ಕೊಡಬಹುದು ? ತಮ್ಮದೇ ಧರ್ಮದ ಧಾರ್ಮಿಕ ಸಂಸ್ಕಾರವನ್ನೇ ಮೀರಿ, ಬೇರೆ ಧರ್ಮದ ಆಚರಣೆಗಳಿಗೆ ಅತಿಯಾದ ಗೌರವವನ್ನು ಕೊಡುವುದನ್ನ ಗಮನಿಸಿದಾಗ, ಯಾರಿಗಾದ್ರೂ ಸಂದೇಹ ಬಂದ್ರೆ, ಅದು ಚುನಾವಣೆಯ gimmick ಥರ ಕಾಣಿಸಿದರೆ ಅದು ಅವರ ತಪ್ಪು ಖಂಡಿತ ಆಗಲಿಕ್ಕಿಲ್ಲ ಅನ್ಸತ್ತೆ.

ತಮ್ಮ ಕನ್ನಡದ ಕಾಳಜಿಯನ್ನ ತೋರಿಸಲಿಕ್ಕೆ ಹೊಸ ಬಾವುಟದ ಕಲ್ಪನೆಯನ್ನ ಈ ಸರ್ಕಾರ ತಂದಿತ್ತು. ನಾವೇನೂ ಸರಕಾರವನ್ನ ಹೊಸ ಬಾವುಟ ಬೇಕು ಅಂತ ಕೇಳಿರಲಿಲ್ಲ. ನಾವು ಕೇಳಿದ್ದು ಕುಡಿಯುವ ನೀರಿಗಾಗಿ  ಮಹದಾಯಿ project ಅನ್ನು ಮುಂದಕ್ಕೆ ತೆಗೆದುಕೊಂಡು ಹೋಗೋಕ್ಕೆ, ಎತ್ತಿನಹೊಳೆಯನ್ನ ಹರಿಸಲಿಕ್ಕೆ, ಬೆಂಗಳೂರಿನ ನೂರಾರು ಕೆರೆಗಳನ್ನ ಕಾಪಾಡಲಿಕ್ಕೆ. ಮಹದಾಯಿ ವಿಚಾರದಲ್ಲಿ ನಿಮ್ಮದು ಸಾಸಿವೆಯ ಕಾಣಿಕೆಯೂ ಇಲ್ಲ. ನೀವು ನಿಮ್ಮ ಗೋವಾದ ಕಾಂಗ್ರೆಸ್ ಮುಖಂಡರಾದ ಚಂದ್ರಕಾಂತ್ ಕವಲೇಕರ್ ಅವರನ್ನ ಒಪ್ಪಿಸಲಿಕ್ಕೆ ಒಂದು ಸಲವೂ ಹೋಗಲಿಲ್ಲವಲ್ಲ. ಮೋದಿ ಮಧ್ಯಸ್ತಿಕೆಯನ್ನ ವಹಿಸಬೇಕು ಅಂತ ಹೇಳಿಕೊಂಡು ಐದೂ ವರ್ಷಗಳನ್ನು ಉರುಳಿಸಿ ಬಿಟ್ಟಿರಲ್ಲ. ಮಹದಾಯಿಯ ವಿಷಯದಲ್ಲಿ ಕರ್ನಾಟಕದ ಹಿನ್ನಡೆಯನ್ನ ಮತ್ತೊಂದು ಪಕ್ಷಕ್ಕೆ ಕಟ್ಟೋಕ್ಕೆ ಅಧಿಕಾರದಲ್ಲಿರುವ ಸರಕಾರವೇ ರಾಜ್ಯವನ್ನ ಬಂದ್ ಮಾಡಿದಂಥ ಯಾವ ನಿದರ್ಶನಗಳೂ ಈ ಹಿಂದೆ ಸಿಗುವುದಿಲ್ಲ. ಕೇವಲ ರಾಜಕೀಯ ಲಾಭಕ್ಕಾಗಿ ಎತ್ತಿನಹೊಳೆಯ ಆಸೆಯನ್ನ ಬಯಲು ಸೀಮೆಯ ಜನರಲ್ಲಿ ಬಿತ್ತಿದ್ದೀರಿ. ಬೆಂಗಳೂರಿನ ಕೆರೆಗಳಲ್ಲಿ ಬೆಂಕಿ ಕಾಣುವಷ್ಟರ ಮಟ್ಟಿಗೆ ಅವುಗಳ ಉದ್ಧಾರ ಮಾಡಿದ್ದೀರಿ. ತಾವು ಕನ್ನಡ ಜಲದ ಬಗ್ಗೆ ತೋರಿಸಿದ ಕಾಳಜಿ ಕಂಡ ಮೇಲೆನೇ ನಾಡಿನ ಜನರು ನಿಮ್ಮ ಹೊಸ ಬಾವುಟದ ಯೋಚನೆಯನ್ನ ತಿರಸ್ಕರಿಸಿದ್ದು.

ಜನರೇ ವಿರೋಧಿಸಿದಂಥ ಸ್ಟೀಲ್ flyover ಕಟ್ಟಲಿಕ್ಕೆ ೧೮೦೦ ಕೋಟಿ ರೂಪಾಯಿ ತೆಗೆದಿಟ್ಟದ್ದು, second puc exam ಮೂರು ಮೂರು ಸಲ conduct ಮಾಡಿದ್ದು, ರಾಜ್ಯ ಸರ್ಕಾರವೇ ರಾಜ್ಯವನ್ನ ಬಂದ್ ಮಾಡಿ ೨೪೦೦೦ ಸಾವಿರ ಕೋಟಿ ರೂಪಾಯಿ ರಾಜ್ಯಕ್ಕೆ loss ಮಾಡಿದ್ದು, ರಾಜ್ಯದ high-profile ಭ್ರಷ್ಟಾಚಾರದ ಹಗರಣಗಳನ್ನು ಬಿಚ್ಚಿಟ್ಟಿದ್ದ ಲೋಕಾಯುಕ್ತ ಸಂಸ್ಥೆಯನ್ನೇ close ಮಾಡಿದ್ದು, D K ರವಿ ಅವರ ಸಾವಾದಾಗ ಅವರ ಪೋಷಕರನ್ನ ಅಮಾನುಷವಾಗಿ ನಡೆಸಿಕೊಂಡದ್ದು, DySP ಗಣಪತಿ ತನ್ನ ಸಾವಿಗೆ ಯಾರು ಕಾರಣರು ಅನ್ನೋದನ್ನ open ಆಗಿ news ಚಾನೆಲ್ ಗೆ ತಿಳಿಸಿದ್ದ ಮೇಲೂ, ಅವರ ಕುಟುಂಬಕ್ಕೆ ನ್ಯಾಯ ಒದಗಿಸದೆ ಇದ್ದದ್ದು,  ಒಬ್ಬ ಮಿನಿಸ್ಟರ್ phone call ಅನ್ನು hold ಗೆ ಹಾಕಿದ್ದಕ್ಕೆ DySP ಯನ್ನ suspend ಮಾಡಿದ್ದು, ಸ್ಟಿಂಗ್ operation ನಲ್ಲಿ minister ಆಂಜನೇಯ ಅವರ ಪತ್ನಿ ಲಂಚ ಸ್ವೀಕರಿಸುತ್ತಿರುವಾಗ ಸಿಕ್ಕಿ ಬಿದ್ದರೂ ಯಾವ ಕ್ರಮವೂ ಕೈಗೊಳ್ಳದೇ ಇದ್ದದ್ದು, ಮಳೆ ಬಂದು ಬೆಂಗಳೂರು ಮುಳುಗಿದ್ದಾಗ, ರಸ್ತೆ ಗುಂಡಿಗಳಲ್ಲಿ ಜನ ಸಾಯುತ್ತಿದ್ದಾಗ, ನಗರಾಭಿವೃದ್ಧಿ ಸಚಿವರು ‘ನಾವೇನು ಇಡೀ ಊರಿಗೆ ಕೊಡೆ ಹಿಡಿಯೊಕ್ಕಾಗತ್ತಾ ?’ ಅನ್ನೋ ಧಿಮಾಕಿನ ಉತ್ತರ ಕೊಟ್ಟಿದ್ದು, ಬಸವ ಜಯಂತಿಗಿಂತ, ಕನಕ ಜಯಂತಿಗಿಂತ ಹೆಚ್ಚಾಗಿ ಟಿಪ್ಪು ಜಯಂತಿಯ ಬಗ್ಗೆ ಅತಿಯಾದ ಉತ್ಸಾಹ ತೋರಿಸಿದ್ದು, ಕರ್ನಾಟಕ ಮಾಡಿರುವ ಸಾಲವನ್ನ ೧ ಲಕ್ಷ ಕೋಟಿಯಿಂದ ೨ ಲಕ್ಷ ಕೋಟಿಗೆ ಹೆಚ್ಚಿಸಿದ್ದು, ರಾಜಕಾಲುವೆ ಉದ್ಧಾರ ಮಾಡ್ತೀವಿ ಅಂತ ಬಡವರ ಮನೆಗಳನ್ನು ನಾಶ ಮಾಡಿದ್ದಾದ ಮೇಲೆ ಅವರದೇ minister ಗಳೂ, friend ಗಳೂ ಅದೇ ರಾಜಕಾಲುವೆಯ ಮೇಲೆ ದೊಡ್ಡ ದೊಡ್ಡ building ಗಳನ್ನೂ ಕಟ್ಟಿದರೆಂದು ಗೊತ್ತಾದ ಮೇಲೆ, ಆ ರಾಜಕಾಲುವೆಯ ಉದ್ದಾರದ ಕೆಲಸವನ್ನು ಅಲ್ಲಿಗೇ ಕೈಬಿಟ್ಟಿದ್ದು.. ಊಫ್.. – ಕಾಂಗ್ರೆಸ್ ನ ಈ ತುಘಲಕ್ ಸರಕಾರದ ವೈಫಲ್ಯಗಳು ಹೇಳಿದಷ್ಟೂ ಉದ್ದವಾಗ್ತಾ ಹೋಗತ್ತೆ. ಇಂತಹ ಆಟೋಟಪಗಳಿಗೆ ಕಡಿವಾಣ ಹಾಕಬೇಕೆಂದರೆ ಮತದಾರ ತನ್ನ ಹಕ್ಕನ್ನು ಪ್ರಜ್ಞಾಪೂರ್ವಕವಾಗಿ ಬಳಸಬೇಕು..

1 ಟಿಪ್ಪಣಿ Post a comment
  1. Sqthish
    ಏಪ್ರಿಲ್ 25 2018

    Definitely……

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments