ಉಗ್ರಾಧಿಪತಿ ಹಫೀಜನಿಗೇಕೆ ಮೋದಿಯ ಮೇಲೆ ದ್ವೇಷ!
– ಶಿವೂ ವೆಂಕಟೇಶ್ ಗೌಡ (ಎಸ್.ವಿ.ಜಿ)
ರಕ್ತ ಪಿಪಾಸು ಹಫೀಜ್ ಮುಹಮ್ಮದ್ ಸಯೀದ್ ಅಂದರೆ ಯಾರಿಗೆ ತಿಳಿದಿಲ್ಲ ಹೇಳಿ, ಇವನ ಹೆಸರನ್ನೊಮ್ಮೆ ಕೇಳಿದರೆ ದೇಶೀಯರ ಎದೆಯಲ್ಲಿ ನೋವಿನ ಜೊತೆ ಬೆಂಕಿಯ ಜ್ವಾಲೆ ಪುಟಿದೇಳುತ್ತದೆ, ೨೦೦೧ ರ ಭಾರತದ ಸಂಸತ್ ದಾಳಿಯ ರೂವಾರಿ, ೨೦೦೬ ರ ಮುಂಬೈ ರೈಲು ಸ್ಪೋಟದ ರೂವಾರಿ ಹಾಗೆಯೆ ೨೦೦೮ ರ ಮುಂಬೈ ಭಯೋತ್ಪಾದನಾ ದಾಳಿಗಳಲ್ಲಿ ಇವನ ಕರಿ ನೆರಳು ಬೀರಿದ್ದು ಎಲ್ಲರಿಗು ಗೊತ್ತಿರುವಂತದ್ದೇ.
ರಕ್ತ ಪಿಪಾಸು ಹಫೀಜ್ ನ ದಾಳಿಗೆ ಸಿಕ್ಕ ದೇಶ ಭಾರತವೊಂದೇ ಅಲ್ಲ, ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್ಡಮ್, ಯುರೋಪಿಯನ್ ಒಕ್ಕೂಟ, ರಷ್ಯಾ ಹಾಗು ಆಸ್ಟ್ರೇಲಿಯಾದಂತಹ ಒಕ್ಕೂಟ ರಾಷ್ಟ್ರಗಳು ಇವನ ಉಗ್ರ ಸಂಘಟನೆ ಲಷ್ಕರ್ ಇ ತೊಯ್ಬಾವನ್ನು ನಿಷೇದಿಸುವಷ್ಟರ ಮಟ್ಟಿಗೆ ನಲುಗಿ ಹೋಗಿದೆ.
ಅಂಗೈ ಹುಣ್ಣಿಗೆ ಸಾಕ್ಷಿ ಕೇಳುವ ಪಾಪಿ ಲೋಕದ ಪಾಕಿಸ್ತಾನ ಇವನ ಬೆನ್ನಿಗೆ ನಿಂತಿರುವ ಮಹಾನ್ ಉಗ್ರಗಾಮಿ ದೇಶವೆಂದರೆ ತಪ್ಪಾಗಲಾರದು, ಒಂದಲ್ಲ ಒಂದು ವಿಷಯಕ್ಕೆ ಕ್ಯಾತೆ ತೆಗೆಯುವ ಈ ಪಾಪಿಸ್ತಾನ, ಇಂತಹ ಉಗ್ರಗಾಮಿ ಸಂಘಟನೆಗಳಿಗೆ ಪ್ರತ್ಯಕ್ಷವಾಗಿ ಹಾಗು ಪರೋಕ್ಷವಾಗಿ ಬೆಂಬಲ ನೀಡುತ್ತಾ ಬಂದಿದೆ. ಎಲ್ಲಿಯವರೆಗೆ ಅಂದರೆ ತನ್ನವರನ್ನ ತಾವುಗಳೇ ಹತ್ಯೆ ಮಾಡುವವರೆಗೆ. ಪಾಪಿ ಪಾಕಿಸ್ತಾನ ಎಷ್ಟರ ಮಟ್ಟಿಗೆ ಇವನಿಗೆ ಬೆಂಬಲ ನೀಡಿದೆಯೆಂದರೆ, ಲಾಹೋರ್ ಹೈಕೋರ್ಟ್ ಇವನ ಮೇಲಿರುವ ರೆಡ್ ಕಾರ್ನರ್ ನೋಟಿಸ್ಗಳನ್ನು ಲೆಕ್ಕಿಸದೆ ಇವನ ಮೇಲಿದ್ದ ಎಲ್ಲ ಪ್ರಕರಣಗಳಿಗೂ ತಿಲಾಂಜಲಿ ಇಟ್ಟಿತ್ತು.
ಎಲ್ಲಿಯವರೆಗೆ ಹಫೀಜನ ಉಗ್ರ ಸಂಘಟನೆ ಆಟಾಟೋಪ ಭಾರತದಲ್ಲಿ ಬೀಡುಬಿಟ್ಟಿತೆಂದರೆ ೨೦೧೪ ಲೋಕಸಭಾ ಚುನಾವಣೆಯಲ್ಲಿ ಮೋದಿ ಜಿ ನೇತೃತ್ವದ ಏನ್.ಡಿ.ಎ ಮಿತ್ರಕೂಟ ತಮ್ಮ ವಿಜಯ ಪತಾಕೆನ ಯಾರು ಕಂಡರಿಯದಂತೆ ಇಡೀ ಭರತ ಖಂಡದಾದ್ಯಂತ ಹಾರಿಸುವ ತನಕವಷ್ಟೇ. ಸಿಂಹ ನಡೆದಿದ್ದೆ ಹಾದಿ ಎಂಬಂತೆ ಮೋದಿ ಜಿ ತನ್ನ ದೇಶವನ್ನ ಸದೃಢಗೊಳಿಸಲು ತೆಗೆದುಕೊಂಡ ನಿರ್ಧಾರವೆಲ್ಲ ಚರಿತ್ರೆಯೇ ಸರಿ.
೬೦ ವರ್ಷ ಯು.ಪಿ.ಎ ಮೈತ್ರಿಕೂಟ ದೇಶವನ್ನ ಆಳಿದ್ದು, ತಿಂದು ತೆಗಿದ್ದು & ಹರಿದು ಮೂರಾಬಟ್ಟೆ ಮಾಡಿದ್ದೂ ಬಿಟ್ಟರೆ ದೇಶವನ್ನ ಸದೃಢಗೊಳಿಸುವಲ್ಲಿ ಸಂಪೂರ್ಣ ನಿಶಕ್ತಿ ತೋರಿದ್ದು ನಮ್ಮ ದೇಶದಲ್ಲಿ ನಡೆದ ಉಗ್ರ ಕೃತ್ಯಗಳು ನಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತವೆ. ಗಾಡಿಯಲ್ಲಿ ನಮ್ಮ ಸೈನಿಕ ತನ್ನ ಶತ್ರುವಿನ ಕಡೆಯಿಂದ ತೂರಿ ಬರುವ ಬಂದೂಕಿನ ಗುಂಡಿಗೆ ಎದೆಯೊಡ್ಡಿ ನಿಲ್ಲುವುದರಿಂದ ಹಿಡಿದು ಕಾಶ್ಮೀರದಲ್ಲಿ ಸೈನಿಕರ ಮೇಲೆ ಕಾಶ್ಮೀರಿ ಮುಸಲ್ಮಾನ ಜನತೆ ಕಲ್ಲು ತೂರುವ ತನಕ ಬಂದು ನಿಂತಿದ್ದು ಸುಳ್ಳಲ್ಲ.
ಈ ೬೦ ವರ್ಷದ ಯು.ಪಿ.ಎ ಮೈತ್ರಿಕೂಟ ಆಡಳಿತ ಎಷ್ಟರ ಮಟ್ಟಿಗೆ ನಮ್ಮ ಸೈನಿಕರ ಕೈ ಕಟ್ಟಿ ಹಾಕಿತ್ತೆಂದರೆ ಸೈನಿಕರು ತನ್ನ ಬಂದೂಕಿನಿಂದ ಶತ್ರುಗಳ ಕಡೆ ಗುಂಡು ಹಾರಿಸಲು ಅಪ್ಪಣೆ ಕೇಳುವಷ್ಟು. ತನ್ನದೇ ದೇಶದ ಸೈನಿಕರನ್ನ ಅತೀ ಕೀಳುಮಟ್ಟದಲ್ಲಿ ಬಳಸಿಕೊಂಡಿದ್ದು ಹಾಗು ಟೀಕೆ ಮಾಡಿದ್ದೂ, ನಿಂದಿಸಿದ್ದು ಇದೇ ಕಾಂಗ್ರೆಸ್ ನಾಯಕರೇ ಹೊರತು ಬೇರ್ಯಾರು ಅಲ್ಲ.
ಇದೆಲ್ಲ ಒಂದು ಕಡೆಯಾದರೆ ಮೋದಿ ಬಂದ ಆ ೨೦೧೪ ರ ಸುವರ್ಣ ಯುಗ ೧೯೪೭ರ ನಂತರ ಮತ್ತೊಮ್ಮೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತೇನೋ ಎಂಬಂತೆ ಇಡೀ ದೇಶದ ೧೦೬ ಕೋಟಿ ಜನತೆಯ ಜನಮಾನಸದಲ್ಲಿ ಅಜರಾಮರವಾಗಿ ಉಳಿದಿದೆ.
ಈ ಉಗ್ರಾದಿಪತಿ ಹಫೀಜ್ ಹಿಂದುಸ್ತಾನವನ್ನ ದ್ವೇಷಿಸಲು ಕಾರಣ ಅವನ ಧರ್ಮದ ಮೇಲಿರುವ ಅಂಧಾಭಿಮಾನ, ಭಾರತವನ್ನ ಇಸ್ಲಾಮೀಕರಣ ಮಾಡುವ ಕನಸು ಹಾಗು ಹಿಂದೂಗಳನ್ನ ಕಂಡರೆ ಎಲ್ಲಿಲ್ಲದ ದ್ವೇಷ. ಈ ದ್ವೇಷ ಬೆಳೆಯಲು ಕಾರಣ ಒಬ್ಬ ಮಹಾನ್ ದೇಶಭಕ್ತ ಹಾಗೂ ಆರ್.ಎಸ್.ಎಸ್ ಎಂಬ ಮಹಾನ್ ದೇಶಭಕ್ತರ ಸಂಘಟನೆಯಿಂದ ಬಂದ ಮೋದಿಜಿ ಈ ಭರತ ಖಂಡದ ಅಧಿಕಾರದ ಚುಕ್ಕಾಣಿಯನ್ನ ಹಿಡಿದದ್ದು ಹಾಗು ಪ್ರಧಾನಿ ಹುದ್ದೆಗೇರಿದ್ದು. ೬೦ ವರ್ಷ ಮೋಜು ಮಸ್ತಿ ಮಾಡಲು ವಿದೇಶಿ ಪರ್ಯಟನೆ ಮಾಡುತ್ತಿದ್ದ ಒಂದು ಯುಗವಾದರೆ ೨೦೧೪ ರ ನಂತರ ಮೋದಿಜಿ ತನ್ನ ದೇಶವನ್ನ ಸುಭದ್ರ ಪಡಿಸಲು ವಿದೇಶಿ ಪ್ರವಾಸಗಳನ್ನ ಮಾಡಿ ಪ್ರತಿಯೊಂದು ದೇಶದ ವಿಶ್ವಾಸವನ್ನ ಗಳಿಸುವಲ್ಲಿ ಯಶಸ್ವಿಯಾದಂತೆಲ್ಲ ಪಾಕಿಸ್ತಾನಕ್ಕೆ ಹಾಗು ಉಗ್ರ ಸಂಘಟನೆಗೆ ಪರೋಕ್ಷವಾಗಿ ಹಣ ಸಂದಾಯ ನಿಂತಿದ್ದು ಒಂದು ಕಡೆಯಾದರೆ ಭಾರತಕ್ಕೆ ಹೊಂದಿಕೊಂಡ ಪಾಕಿಸ್ತಾನದ ಗಡಿ ಪ್ರದೇಶಗಳಲ್ಲಿ ನಮ್ಮ ಹೆಮ್ಮೆಯ ದೇಶ ಕಾಯುವ ಸೈನಿಕರು ಒಳ ನುಸುಳಲು ಬಂದ ನುಸುಳುಕೋರ ಉಗ್ರರನ್ನ ಸದೆಬಡಿಯುತ್ತ ದೇಶದ ಗಡಿ ದಾಟದಂತೆ ಮಾಡಿದ್ದೂ, ಸೈನಿಕರು ಗಡಿ ದಾಟಿ ನಡೆಸಿದ ಸರ್ಜಿಕಲ್ ಸ್ಟ್ರೈಕ್. ಇಂತಹ ಮಾಸ್ಟರ್ ಸ್ಟ್ರೋಕ್ ಹಫೀಜ್ ಎಂಬ ರಕ್ತ ಪಿಪಾಸುವಿನ ರಕ್ತದ ದಾಹ ಎಲ್ಲೇ ಮೀರಿಸುವಂತೆ ಮಾಡಿದಂತೂ ಸುಳ್ಳಲ್ಲ.
ವಿಶ್ವ ಮಟ್ಟದಲ್ಲಿ ಮೋದಿಜಿಯವರು ಪಾಕಿಸ್ತಾನಕ್ಕೆ ಚಾಟಿ ಬೀಸುತ್ತಾ ಯಾವುದೇ ಕಡೆಯಿಂದಲೂ ಹಣ ಸಂದಾಯವಾಗದಂತೆ ಮಾಡಿದ್ದೂ ಜಗತ್ ಜಾಹಿರಾದ ವಿಷಯವೇ. ಯಾವ ಅಮೇರಿಕ ಮೋದಿಜಿ ಅವರಿಗೆ ಅಮೇರಿಕಾಕ್ಕೆ ಬಾರದಂತೆ ವಿಸಾ ನಿರ್ಬಂಧಿಸಿತ್ತೋ ಅದೇ ದೇಶ ಮೋದಿಜಿ ಅವರಿಗೆ ಕೆಂಪು ಬಣ್ಣದ ಕಂಬಳಿ ಹಾಸಿ ಕೈ ಬೀಸಿ ಕರೆದಿತ್ತು. ಇದೆಲ್ಲವೂ ಪಾಕಿಸ್ತಾನದ ಹಫೀಜನ ಹಣದ ಹೊಳೆಗೆ ಬ್ರೇಕ್ ಹಾಕಿದಂತಿತ್ತು.
ಕಾಶ್ಮೀರದಲ್ಲಿ ಕಲ್ಲು ತೂರುವ ಜನತೆಯ ಮೇಲೆ ನಮ್ಮ ಸೈನಿಕರು ಮೃದು ಧೋರಣೆ ತೋರದೆ, ಅವರಿಗೆ ತಕ್ಕ ರೀತಿಯಲ್ಲಿ ಉತ್ತರ ಕೊಟ್ಟಿದ್ದು, ದೇಶದಲ್ಲಿ ನೋಟು ಅಮಾನ್ಯೀಕರಣ ಮಾಡಿ ಖೋಟಾ ನೋಟು ದಂದೆಗೆ ನಿರ್ಬಂಧ ಹೇರಿದ್ದು, ಈ ಕಾಶ್ಮೀರಿ ಜನತೆಯ ಕಲ್ಲು ತೂರಾಟವನ್ನೇ ಬಂದ್ ಮಾಡಿತ್ತು.
ಶಾಂತಿ-ಸೌಹಾರ್ಧಯುತ ದೇಶ ಎಂದೇ ಹೆಸರಾಗಿರುವ ಭಾರತ, ಉಗ್ರ ಮುಸ್ಲಿಮರಿಂದ ಇಷ್ಟೆಲ್ಲ ತೊಂದರೆಗಳನ್ನ ಅನುಭವಿಸಿದ್ದರು, ಮೋದಿಜಿ ಕೆಲವು ದಿನಗಳ ಹಿಂದೆ ತೆಗೆದುಕೊಂಡ ದೃಢ ನಿರ್ಧಾರ? ರಂಜಾನ್ ಸಮಯದಲ್ಲಿ ಸೈನಿಕರಿಗೆ ಬಂದೂಕನ್ನ ಕೆಳಗಿಡಿ ಎನ್ನುವ ಒಂದು ಹೇಳಿಕೆಯನ್ನು ಕೊಟ್ಟಿತ್ತು. ಆದರೆ ಇದ್ಯಾವುದನ್ನು ಲೆಕ್ಕಿಸದ ನಮ್ಮ ಕಾಶ್ಮೀರಿ ಜನತೆ ದೇಶ ಕಾಯೋ ಸೈನಿಕನ ಮೇಲೆ ತಾವೇ ಪವಿತ್ರ ರಂಜಾನ್ ಎಂದು ಕರೆದುಕೊಳ್ಳುವ ತಿಂಗಳಲ್ಲೇ ಕಲ್ಲು ಬಿಸಿದ್ದು, ೨೦೧೯ ಚುನಾವಣೆಯಲ್ಲಿ ಮೋದಿ ಈ ದೇಶಕ್ಕೆ ಮತ್ತೊಮ್ಮೆ ಪ್ರಧಾನಿಯಾದರೆ, ಹಿಂದುಸ್ತಾನವನ್ನ ಈ ರಕ್ತ ಪಿಪಾಸುವಿನ ಇಸ್ಲಾಮೀಕರಣದ ಮಾಡುವ ಕನಸಿಗೆ ಬೆಂಕಿ ಬೀಳುವ ಕಾಲವಾಗಿ ಪುನರಾವರ್ತಿಸಲಿದೆ.
ಇದೆಲ್ಲದರ ಅವಲೋಕನವೇ ಈ ರಂಜಾನ್ ನಲ್ಲಿ ಮೋದಿ ಅವರ ಹತ್ಯೆಗೆ ಸಂಚು ರೂಪಿಸಲು ಕಾರಣವಾಗಿದೆ. ಇಲ್ಲಿ ನಮ್ಮನ್ನ ಕಾಡುವುದು ಏನೆಂದರೆ ಶತ್ರು ಹೊರಗಿನವನೇ ಆದರೂ ಹಂತಕ ನಮ್ಮ ಮಧ್ಯದಲ್ಲೇ ಇರುವ ಒಬ್ಬನಾಗಿರುತ್ತಾನೆ, ಹೇಗೆಂದರೆ ಶತ್ರುಗಳೇ ದೇಶಕ್ಕೆ ಬರದಂತೆ ಸುಭದ್ರ ಬೇಲಿಯನ್ನ ಹಾಕಿರುವ ಮೋದಿಜಿಯವರು, ಒಳಗಿನ ಶತ್ರುಗಳ ಬಗ್ಗೆ ಸ್ವಲ್ಪ ತಲೆಕೆಡಿಸಿ ಕೊಳ್ಳಬೇಕಷ್ಟೆ. ಆ ಶತ್ರು ನಮ್ಮದೇ ಹಿಂದೂಗಳ ಹತ್ಯೆ ಮಾಡುತ್ತ ಬರುತ್ತಿರುವ ಇಸ್ಲಾಮೀಕರಣದ ಕನಸು ಹೊತ್ತಿರುವ ಭಾರತದ ಇಸ್ಲಾಂ ಸಂಘಟನೆಗಳಾದ ಎಸ್.ಡಿ.ಪಿ.ಐ ಇಲ್ಲ ಪಿ.ಎಫ್.ಐ ಸಂಘಟನೆ ಆಗಿರಬಹುದು, ಇದೆಲ್ಲದರ ಜೊತೆ ಜೊತೆಗೆ ದೇಶದ ರೀತಿ-ನೀತಿಗಳನ್ನ ದ್ವೇಷಿಸುವ ಮಾವೋವಾದಿಗಳು & ನಕ್ಸಲರು ಆಗಿರಬಹುದು.
ಒಂದಂತೂ ಹೇಳಬಹುದು ಉಗ್ರರ ಕಡೆಯಿಂದ ಮೋದಿಜಿ ಅವರಿಗೆ ಒಂದೇ ಒಂದು ಸಣ್ಣ ಗಾಯವಾದರೂ, ಆ ಆದ ಮರುಕ್ಷಣವೇ ವಿಶ್ವ ಭೂಪಟದಲ್ಲಿ ಪಾಕಿಸ್ತಾನ ಎಂಬ ಹೆಸರೇ ಇರುವುದಿಲ್ಲ ಎನ್ನುವುದಂತೂ ಸತ್ಯ!
ರಕ್ತ ಪಿಪಾಸುವಿನ ರಕ್ತದ ದಾಹಕ್ಕೆ ಕಡಿವಾಣ ಹಾಕಲು ಮತ್ತೊಮ್ಮೆ ಮೋದಿಯವರನ್ನು ಈ ದೇಶಕ್ಕೆ ಪ್ರಧಾನಿಯನ್ನಾಗಿ ಮಾಡಿ ಈ ಉಗ್ರ ಸಂಘಟನೆಗಳ ಹೇಯ ಮರಣ ಮೃದಂಗಕ್ಕೆ ಕೊನೆಯ ತಿಲಾಂಜಲಿ ತಿಲಕವನ್ನಿಟ್ಟು ಕೇಸರಿ-ಬಿಳಿ-ಹಸಿರು ಮದ್ಯೆ ಅಶೋಕ ಚಕ್ರವಿರುವ ತ್ರಿವರ್ಣ ಧ್ವಜ ಹಾರಿಸಬೇಕಷ್ಟೆ ಬೇರೆ ಇನ್ನೇನೂ ಇಲ್ಲ.