ಬಾಂಗ್ಲಾ ಬಾಂಬ್ ಮತ್ತು ಬೇಜವಾಬ್ದಾರಿ ರಾಜಕಾರಣಿಗಳು
– ರಾಕೇಶ್ ಶೆಟ್ಟಿ
ಬಂಗಾಳಿಗಳ ಬಗ್ಗೆ ಯೋಚಿಸುವಾಗ ಕನಿಕರವಾಗುತ್ತದೆ.ಸ್ವಾತಂತ್ರ್ಯಾ ನಂತರದ ಬರೋಬ್ಬರಿ ಮೂವತ್ತು ವರ್ಷವನ್ನು ಕಾಂಗ್ರೆಸ್ (INC ಮತ್ತು ಬಂಗಾಳಿ ಕಾಂಗ್ರೆಸ್) ಕೈಗೆ ಕೊಟ್ಟು ಪೆಟ್ಟು ತಿಂದು ನಂತರದ ಮೂವತ್ತೇಳು ವರ್ಷಗಳನ್ನು ಕಮ್ಯುನಿಸ್ಟರ ಕೈಯಲಿಟ್ಟು ಹೈರಾಣಾಗಿ ಕಡೆಗೆ ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ ಪಕ್ಷದ ಕೈಗೆ ರಾಜ್ಯದ ಚುಕ್ಕಾಣಿಯನ್ನು ಕೊಟ್ಟರೂ ಅವರ ಕಷ್ಟಗಳು ಮಾತ್ರ ತೀರಲೇ ಇಲ್ಲ ಬದಲಾಗಿ ಹೆಚ್ಚಾಗುತ್ತಲೇ ಹೋದವು. ಅಯೋಗ್ಯರನ್ನೇ ಆರಿಸಿಕೂರಿಸಿದರೆ ಸಮಸ್ಯೆ ಉಲ್ಬಣವಾಗದೇ ಪರಿಹಾರವಾಗಲು ಸಾಧ್ಯವೇ? “ಊದೋದು ಬಿಟ್ಟು ಬಾರ್ಸೋದ್ ತಗೊಂಡರು” ಎನ್ನುವಂತಹ ಪರಿಸ್ಥಿತಿ ಪಶ್ಚಿಮ ಬಂಗಾಳ ರಾಜ್ಯಕ್ಕೆ ಅನ್ವಯವಾಗುತ್ತದೆ.
ಕಮ್ಯುನಿಸ್ಟರ ಹಿಂಸಾಚಾರ,ಓಲೈಕೆಯ ರಾಜಕಾರಣವನ್ನು ವಿರೋಧಿಸುತ್ತಲೇ ರಾಜಕೀಯ ಅಧಿಕಾರಕ್ಕೇರಿದ ಮಮತಾ ಬ್ಯಾನರ್ಜಿ,೨೦೧೧ರಲ್ಲಿ ಅಧಿಕಾರಕ್ಕೇರಿದ ನಂತರ ಅಳವಡಿಸಿಕೊಂಡಿದ್ದು ಕಮ್ಯುನಿಸ್ಟರ ಹಿಂಸಾಚಾರ,ಓಲೈಕೆಯ ರಾಜಕಾರಣವನ್ನೇ. ಆದರೆ ಕಮ್ಯುನಿಸ್ಟರು ತೀರಾ ಮಮತಾ ಬ್ಯಾನರ್ಜಿಯಷ್ಟು ಕ್ರಿಮಿನಲ್ ಎಲಿಮೆಂಟುಗಳನ್ನು ಸಾಬರನ್ನು ಈ ಮಟ್ಟಕ್ಕೆ ಓಲೈಸುತ್ತಿರಲಿಲ್ಲ ಎನ್ನುತ್ತಾರೆ ಬೆಂಗಾಲಿ ಗೆಳೆಯರು. ಅಧಿಕಾರವನ್ನು ಉಳಿಸಿಕೊಳ್ಳಲಿಕ್ಕಾಗಿ ಮಮತಾ ಯಾವುದೇ ಮಟ್ಟಕ್ಕಾದರೂ ಇಳಿಯಬಲ್ಲರು ಅದು ಮುಂದೆ ದೇಶವನ್ನೇ ಮತ್ತೊಮ್ಮೆ ವಿಭಜನೆಯ ಹಂತಕ್ಕೆ ತಂದಿಡುವಂತದ್ದಾದರೂ ಆಕೆಗದು ಸಮ್ಮತವೇ ಎನಿಸುತ್ತದೆ.ದೇಶಕಂಡ ಅತ್ಯಂತ ಬೇಜವಾಬ್ದಾರಿ ಮತ್ತು ಅಪಾಯಕಾರಿ ರಾಜಕಾರಣಿಗಳ ಪಟ್ಟಿಯಲ್ಲಿ ಸದ್ಯಕ್ಕೆ ಈಕೆಯದ್ದೇ ಅಗ್ರಸ್ಥಾನ.ಅಸ್ಸಾಂ ರಾಜ್ಯದಲ್ಲಿ, ಸುಪ್ರೀಂ ಕೋರ್ಟ್ ಕಣ್ಗಾವಲಿನಲ್ಲಿ ನಡೆಯುತ್ತಿರುವ National Register of Citizens (NRC)ಯ ಅಂತಿಮ ಕರಡು ಪಟ್ಟಿಯ ವಿಷಯದಲ್ಲಿ ಈಕೆ ಮಾಡುತ್ತಿರುವ ಕೊಳಕು ರಾಜಕೀಯ ನೋಡಿದರೆ ಅಧಿಕಾರಕ್ಕೋಸ್ಕರ ದೇಶವನ್ನೇ ಇಬ್ಭಾಗ ಮಾಡಿಸಿದ ನೆಹರೂ-ಜಿನ್ನಾ ಜೋಡಿಯ ಆತ್ಮವೇನಾದರೂ ಈಕೆಯ ಮೇಲೆ ಆವಾಹನೆಯಾಗಿರಬಹುದೇ ಎನ್ನುವ ಅನುಮಾನ ಮೂಡುತ್ತದೆ.
ಬಂಗಾಳ ರಾಜ್ಯ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯಾ ನಂತರವೂ ದೇಶದ ರಾಜಕೀಯ ಇತಿಹಾಸದ ಕೇಂದ್ರ ಭಾಗದಲ್ಲಿ ಬೇರೆ ಬೇರೆ ಕಾರಣಗಳಿಂದಾಗಿ ಪ್ರಾಮುಖ್ಯತೆ ಪಡೆದ ರಾಜ್ಯ.ಬಂಗಾಳ,ಬ್ರಿಟಿಷರ ಆಡಳಿತ ಕೇಂದ್ರ ಭಾಗ ಹೇಗೆ ಆಗಿತ್ತೋ ಅದೇ ರೀತಿಯಲ್ಲಿ ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯದ ಹೋರಾಟದ ಪ್ರಮುಖ ನಾಯಕರ ಕೇಂದ್ರವೂ ಆಗಿತ್ತು.ಬ್ರಿಟಿಷರ ಒಡೆದು ಆಳುವ ನೀತಿಯಿಂದಾಗಿ ಹುಟ್ಟಿಕೊಂಡಿದ್ದ ಬಂಗಾಳ ವಿಭಜನೆಯನ್ನು ವಿರೋಧಿಸಿ ಶುರುವಾದ ಹೋರಾಟವೇ ಮುಂದೆ ಸ್ವಾತಂತ್ರ್ಯ ಹೋರಾಟವನ್ನು ತೀವ್ರವಾಗಿಸಿತ್ತು.ಆದರೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕುವ ಸಮಯದಲ್ಲಿ ಅದೇ ಬಂಗಾಳವನ್ನು ಮತ್ತದೇ ಹಿಂದೂ-ಮುಸ್ಲಿಂ ಆಧಾರದಲ್ಲೇ ವಿಭಜಿಸಿಯೇ ಬ್ರಿಟಿಷರು ತೊಲಗಿದ್ದು. ಸ್ವಾತಂತ್ರ್ಯ ಪೂರ್ವದಲ್ಲಿ ಬಂಗಾಳ ವಿಭಜನೆಯನ್ನು ಸಮರ್ಥವಾಗಿ ವಿರೋಧಿಸಬಲ್ಲ ನಿಸ್ವಾರ್ಥ ಧೀಮಂತ ನಾಯಕರಿದ್ದರು.ಸ್ವಾತಂತ್ರ್ಯದ ಸಮಯದಲ್ಲಿ ಅಧಿಕಾರಕ್ಕಾಗಿ ಕಚ್ಚಾಡುತ್ತಿದ್ದ ಇಬ್ಬರು ನಾಯಕರನ್ನು ಬ್ರಿಟಿಷರು ಖೆಡ್ಡಾಗೆ ಕೆಡವಿಕೊಂಡಿದ್ದರು,ಒಬ್ಬ ಅಧಿಕಾರದ ಅಮಲಿನಲ್ಲಿ ಇದ್ದರೆ ಮತ್ತೊಬ್ಬರು ಅಧಿಕಾರದ ಅಮಲಿನ ಜೊತೆಗೆ ಹನಿಟ್ರ್ಯಾಪಿಗೂ ಒಳಗಾಗಿದ್ದರೇನೋ ಎನಿಸುತ್ತದೆ.ಹಾಗೇ ಬಂಗಾಳ ವಿಭಜನೆಯಾಗುವ ಮೊದಲು ಕೋಲ್ಕತ್ತಾ ಡೈರೆಕ್ಟ್ ಆಕ್ಷನ್ ಡೇಯಂತ ಭೀಕರ ಹತ್ಯಾಕಾಂಡಕ್ಕೆ ಸಾಕ್ಷಿಯಾಗಿತ್ತು. ಅಂದು ನಡೆದ ನರಮೇಧದ ಮೂಲ ಉದ್ದೇಶ ಹಿಂದೂಗಳ ಕೊಲ್ಕತ್ತಾವನ್ನು ಕೈವಶ ಮಾಡಿಕೊಂಡು ಅಂತಿಮವಾಗಿ ಪಾಕಿಸ್ತಾನಕ್ಕೆ ಸೇರಿಸಬೇಕು ಎನ್ನುವುದೇ ಆಗಿತ್ತು. ಆದರೆ ಶ್ಯಾಮ್ ಪ್ರಸಾದ್ ಮುಖರ್ಜಿಯವರಂತಹ ನಾಯಕರಿಂದಾಗಿ ಮುಸ್ಲಿಂ ಲೀಗಿನ ಈ ನಡೆ ಮಣ್ಣುಪಾಲಾಯಿತು. ಹಿಂದೂಗಳು ತಿರುಗಿ ಕೊಟ್ಟ ಹೊಡೆತಕ್ಕೆ ತತ್ತರಿಸಿದ ಮುಸ್ಲಿಂ ಲೀಗ್ ಮತ್ತು ಮುಲ್ಲಾಗಳು ಭಾರತ ಪೂರ್ವ ರಾಜ್ಯಗಳನ್ನು ಬಲಪ್ರಯೋಗದಿಂದ ಆಪೋಶನ ತೆಗೆದುಕೊಂಡು ಇಸ್ಲಾಮೀಕರಣ ಮಾಡುವುದು ಸುಲಭವಲ್ಲವೆಂದು ತಾತ್ಕಾಲಿಕವಾಗಿ ಹಿಂದೆ ಸರಿದರು.
ಪಾಕಿಸ್ತಾನ ಸ್ಥಾಪನೆಯಾದ ನಂತರವಾದರೂ ದೇಶ ಬಿಟ್ಟು ಹೋದ ಈ ಹರಾಮಿಗಳು ಅವರ ನೆಲದಲ್ಲೇ ಇರುವುದು ಬಿಟ್ಟು ಮತ್ತೆ ಭಾರತದತ್ತ ನುಸುಳಲಾರಂಭಿಸಿದರು. ಈ ಬಾರಿ ಅವರ ಕಣ್ಣು ಬಂಗಾಲದ ಜೊತೆ ಜೊತೆಗೆ ಅಸ್ಸಾಂನ ಮೇಲೂ ಇತ್ತು.ನೆಹರೂ ಕಾಲದಲ್ಲೇ ಈ ಅಕ್ರಮ ವಲಸಿಗರ ವಿರುದ್ಧ ಕೂಗು ಎದ್ದಿತ್ತು. ಸದಾ ಕಾಲ ತನ್ನದೇ ಸುಪಿರಿಯಾರಿಟಿಯ ಅಮಲಿನಲ್ಲಿದ್ದ ನೆಹರೂ ಸೆಕ್ಯುಲರಿಸಂ ಹಾಗೂ ಓಲೈಕೆಯ ನೆಪದಲ್ಲಿ ಕಾಲಹರಣ ಮಾಡಿದರು.ಮೇಲ್ನೋಟಕ್ಕೆ ವಲಸಿಗರ ಕಾಯ್ದೆ ಸಂಸತ್ತಿನಲ್ಲಿ ಪಾಸ್ ಆದರೂ ಜಾರಿಗೆ ಬರಲಿಲ್ಲ.
೭೧ರ ಬಾಂಗ್ಲಾ ವಿಮೋಚನೆಯ ಸಮಯದಲ್ಲಂತೂ ಆ ಅಕ್ರಮ ನುಸುಳುಕೋರರ ಹಾವಳಿ ಯಾವ ಪರಿ ಹೆಚ್ಚಿಹೋಯಿತೆಂದರೆ ಅಸ್ಸಾಂ ರಾಜ್ಯದಲ್ಲಿ ಖುದ್ಧು ಅಸ್ಸಾಮಿಗಳೇ ಅಲ್ಪಸಂಖ್ಯಾತರಾಗುವ ಹಂತ ತಲುಪಿಕೊಂಡಿತ್ತು. ಕೇಂದ್ರದ ಕಾಂಗ್ರೆಸ್ ಸರ್ಕಾರಗಳದ್ದು ಯಥಾ ಪ್ರಕಾರ ಓಲೈಕೆ ರಾಜಕಾರಣ ಮತ್ತು ಕುರುಡು ನೀತಿ. ಆದರೆ ಅನ್ಯಾಯಗಳನ್ನು ಜನರು ಎಷ್ಟು ಸಹಿಸಬಲ್ಲರು ಹೇಳಿ? ಸಹನೆಯ ಕಟ್ಟೆ ಒಡೆಯುವ ಹಂತಕ್ಕೆ ತಲುಪಿತ್ತು,ಅದಕ್ಕೆ ವೇದಿಕೆಯಾಗಿದ್ದು ೧೯೭೯ರಲ್ಲಿ ಮಂಗೋಲ್ಡಯ್ ಕ್ಷೇತ್ರದ ಲೋಕಸಭಾ ಉಪಚುನಾವಣೆ. ೧೯೭೭ರ ಮಾರ್ಚ್ ತಿಂಗಳಲ್ಲಿ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಜನತಾ ಪಕ್ಷದ ಹೀರಲಾಲ್ ಪಟ್ವಾರಿ ಅವರು ಈ ಕ್ಷೇತ್ರವನ್ನು ಗೆದ್ದಾಗ ೫೬೦೦೦+ ಮತದಾರರಿದ್ದರು. ಹೀರಾಲಾಲ್ ಅವರ ನಿಧನದ ನಂತರ ಕೇವಲ ೧೪ ತಿಂಗಳಲ್ಲಿ ನಡೆದ ಉಪಚುನಾವಣೆಯ ಸಮಯದಲ್ಲಿ ಮತದಾರರ ಸಂಖ್ಯೆ ೮೦೦೦೦ ದಾಟಿತ್ತು. ೧೪ ತಿಂಗಳಲ್ಲಿ ಹುಟ್ಟಿ,ವಯಸ್ಕರ ಹಂತವನ್ನು ತಲುಪಿದ ಈ ಮೂವತ್ತು ಸಾವಿರ ಜನರು ಯಾರು ಎಂದು ಅರ್ಥ ಮಾಡಿಕೊಳ್ಳಲು ಅಸ್ಸಾಂ ವಿದ್ಯಾರ್ಥಿಗಳಿಗೆ ಹೆಚ್ಚು ಸಮಯ ಹಿಡಿಯಲಿಲ್ಲ. ಹಾಗೇ ಶುರುವಾಗಿದ್ದೇ ಅಸ್ಸಾಂ ಸ್ಟೂಡೆಂಟ್ ಹೋರಾಟ.
ಯಾವ ಜನಪರ ಹೋರಾಟವನ್ನಾದರೂ ಹಳ್ಳಹಿಡಿಸಬಲ್ಲ ಕಾಂಗ್ರೆಸ್ ಸರ್ಕಾರ ಇಲ್ಲೂ ಅದನ್ನೇ ಪ್ರಯತ್ನಕ್ಕಿಳಿಯಿತು.ಇಂದಿರಾ ಕಾಲದಲ್ಲಿ ಅವರಪ್ಪನಂತೆ ಮತ್ತೊಂದು ಕೆಲಸಕ್ಕೆ ಬಾರದ ಅಕ್ರಮ ವಲಸಿಗ(ನ್ಯಾಯಾಧಿಕರಣ) ಕಾಯ್ದೆಯ ಮೂಲಕ ಬಾಯಿ ಮುಚ್ಚಿಸಲು ನೋಡಿದ್ದರು.ಬಾಂಗ್ಲಾ ಮುಸ್ಲಿಂ ಜನಸಂಖ್ಯೆ ಅಸ್ಸಾಮಿನಲ್ಲಿ ಯಾವ ಪರಿ ಏರಲಾರಂಭಿಸಿತ್ತೆಂದರೆ ೧೯೭೧-೧೯೯೧ರ ಇಪ್ಪತ್ತು ವರ್ಷಗಳ ಅವಧಿಯಲ್ಲಿ ಹಿಂದೂ ಜನಸಂಖ್ಯೆ ೪೧% ಇದ್ದರೆ,ಮುಸ್ಲಿಂ ಜನಸಂಖ್ಯೆ ೭೭% ಆಗಿತ್ತು. ಆರು ವರ್ಷಗಲು ಅಸ್ಸಾಂ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಗೆ ಮಣಿಯದೆ ಕೇಂದ್ರದ ಕಾಂಗ್ರೆಸ್ ಸರ್ಕಾರದ ಬಳಿ ಬೇರೆ ಮಾರ್ಗಗಳಿರಲಿಲ್ಲ. ಅಂತಿಮವಾಗಿ 1985ರಲ್ಲಿ ರಾಜೀವ್ ಗಾಂಧಿ ಸರ್ಕಾರ,ಅಸ್ಸಾಂ ಹಾಗೂ ವಿದ್ಯಾರ್ಥಿ ಸಂಘಟನೆಯೊಂದಿಗೆ ಒಪ್ಪಂದ ಮಾಡಿಕೊಂಡಿತು. ಆ ಒಪ್ಪಂದವನ್ನು ಅಸ್ಸಾಂ ಒಪ್ಪಂದವೆಂದೇ ಗುರುತಿಸಲಾಗುತ್ತದೆ. ಅದರ ಪ್ರಕಾರ ಅಕ್ರಮ ವಲಸಿಗರನ್ನು ಅಸ್ಸಾಮಿನಿಂದ ಹೊರಹಾಕಬೇಕಾಗಿತ್ತು. ಅಕ್ರಮ ವಲಸಿಗರನ್ನು ಗುರುತಿಸಲು ೧೯೫೧ರ ಸೆನ್ಸಸ್ಸಿನಲ್ಲಿ ಇದ್ದ ಹೆಸರುಗಳು ಹಾಗೂ ೨೪ನೇ ಮಾರ್ಚ್ ೧೯೭೧ರ ವರೆಗಿನ ದಾಖಲೆಗಳನ್ನು ಪರಿಗಣಿಸಬೇಕಾಗಿತ್ತು. ೧೯೭೧ರ ಮಾರ್ಚ್ ೨೪ರ ಆಚೆಗಿನ ಸರ್ಕಾರಿ ದಾಖಲೆಗಳು ಇದ್ದರೂ ಅವು ಅಸ್ಸಾಮಿ ಎನ್ನಲು ಆಧಾರವಾಗುವುದಿಲ್ಲ ಎನ್ನುವುದು NRC ಅನುಸರಿಸಿರುವ ವಿಧಾನ.
ಈ ಒಪ್ಪಂದವಾಗಿ ಮೂವತ್ತು ವರ್ಷಗಳು ಕಳೆದರು ಕಾಂಗ್ರೆಸ್ ಸರ್ಕಾರಗಳು ಈ ಪ್ರಕ್ರಿಯೆಯನ್ನು ಶುರುಮಾಡುವ ಧೈರ್ಯ ಮಾಡಲೇ ಇಲ್ಲ,ದೇಶದ ರಕ್ಷಣೆಗಿಂತ ವೋಟ್ ಬ್ಯಾಂಕ್ ರಾಜಕೀಯಕ್ಕೆ ಕಾಂಗ್ರೆಸ್ ಮನ್ನಣೆ ನೀಡಿತ್ತು. ೧೯೯೮ರಲ್ಲೇ ಅಸ್ಸಾಮಿನ ರಾಜ್ಯಪಾಲರಾಗಿದ್ದ ಲೆಫ್ಟೆನೆಂಟ್ ಜನರಲ್ ಎನ್ ಕೆ ಸಿನ್ಹಾ ಕೇಂದ್ರ ಸರಕಾರಕ್ ಕಳಿಸಿದ್ದ ವರದಿಯಲ್ಲಿ ‘ಧುಬ್ರಿ,ಗೋಲ್‌ಪಾರಾ, ಬಾರ್ಪೇಟಾ,ಹಿಲಾಕಾಂಡಿ,ನಾಗಾಂವ್, ಕರೀಮ್‌ಗಂಜ್,ಮೋರಿಗಾಂವ್ ‘ಜಿಲ್ಲೆಗಳು ಅಕ್ರಮ ನುಸುಳುಕೋರರ ಕಾರಣದಿಂದ ಮುಸ್ಲಿಂ ಬಾಹುಳ್ಯವಾಗಲಿವೆ ಎಂದು ಆತಂಕ ವ್ಯಕ್ತಪಡಿಸಿದ್ದರು. ೨೦೦೧ರ ಜನಗಣತಿಯು ರಾಜ್ಯಪಾಲರ ಆತಂಕವನ್ನು ನಿಜ ಮಾಡಿತ್ತು. ಶೇ.೫೦ಕ್ಕಿಂತ ಹೆಚ್ಚು ಜನಸಂಖ್ಯೆ ಆ ಜಿಲ್ಲೆಗಳಲ್ಲಿ ಮುಸ್ಲಿಮರಾದಾಗಿತ್ತು.
ಕಡೆಗೂ NRC ಪ್ರಕ್ರಿಯೆ ಶುರುವಾಗಿದ್ದು ಸುಪ್ರೀಂ ಕೋರ್ಟಿನಲ್ಲಿ ಇಂದಿನ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ್ ಸೋನೊವಾಲ್ ದಾವೆ ಹಾಕಿದಾಗಲೇ. ಆಗಲೂ ಅಕ್ರಮ ನಿವಾಸಿಗಳ ಪರ ನಿಂತಿತ್ತು ಕಾಂಗ್ರೆಸ್ ಹಾಗೂ ಯುಪಿಎ. ಈಗ NRC ಅನ್ನು ಟೀಕಿಸುತ್ತಿರುವ ಇದೇ ಮಮತಾ ೨೦೦೫ರಲ್ಲಿ ಸಂಸತ್ತಿನಲ್ಲೇ ಕಮ್ಯುನಿಸ್ಟರು ಬಾಂಗ್ಲಾ ನುಸುಳುಕೋರರನ್ನು ವೋಟ್ ಬ್ಯಾಂಕ್ ಆಗಿ ಬಳಸಿಕೊಂಡು ರಾಜ್ಯದಲ್ಲಿ ನೆಲೆಸಲು ಬಿಟ್ಟಿದ್ದಾರೆ ಅಂತೆಲ್ಲ ಬೊಬ್ಬೆ ಹೊಡೆದು ರಾಜೀನಾಮೆಯ ನಾಟಕ ಮಾಡಿದ್ದರು. ಅಂತಿಮವಾಗಿ ಸುಪ್ರೀಂ ಕೋರ್ಟ್ ಚಾಟಿ ಬೀಸಿ,ಕೇಂದ್ರ ಸರ್ಕಾರಕ್ಕೆ ಅಕ್ರಮವಲಸಿಗರನ್ನು ಹೊರಹಾಕುವ ಗಂಭೀರತೆಯೇ ಇಲ್ಲದಿರುವುದನ್ನು ಪರಿಗಣಿಸಿ,ನ್ಯಾಯಾಲಯದ ಕಣ್ಗಾವಲಿನಲ್ಲಿಯೇ NRC ಪ್ರಕ್ರಿಯೆ ಶುರುಮಾಡಿಸಿ ೨೦೧೪ರಿಂದ ಮೂರು ವರ್ಷಗಳ ಕಾಲಾವಧಿಯನ್ನು ನೀಡಿತ್ತು.ಈಗ ಬಿಡುಗಡೆಯಾಗಿರುವುದು ಅಂತಿಮ ಹಂತದ ವರದಿಯ ಮೊದಲ ಕರಡು ಪಟ್ಟಿ. ಇಲ್ಲಿ ಹೆಸರು ಇಲ್ಲದ ೪೦ ಲಕ್ಷ ಜನರು ೧೯೫೧ರ ಜನಗಣತಿ ಅಥವಾ ೨೪ ಮಾರ್ಚ್ ೧೯೭೧ರ ಅವಧಿಯ ದಾಖಲೆಗಳನ್ನು ಸಮಿತಿಯ ಮುಂದಿಟ್ಟರೆ ನಿಜವಾದ ಅಸ್ಸಾಮಿಗಳೆಂದು ಪರಿಗಣಿಸಲ್ಪಡುತ್ತಾರೆ.
ಈಗ ಕ್ಯಾತೆ ತೆಗೆಯುತ್ತಿರುವ ಮಮತಾರ ಬಂಗಾಳ ರಾಜ್ಯ ಸರ್ಕಾರವೇ NRC ಪ್ರಕ್ರಿಯೆಗೆ ಸಹಕಾರ ನೀಡಿಲ್ಲ. ಉಳಿದೆಲ್ಲಾ ರಾಜ್ಯಗಳಿಗೆ ಹೋಲಿಸಿದರೆ ಬಂಗಾಳಕ್ಕೆಂದೇ NRC ತನ್ನದೇ ಸಹಾಯಕರನ್ನು ಸರ್ಕಾರಕ್ಕೆ ನೀಡಿತ್ತು. ಆದರೂ ಸರಿಯಾಗಿ ಕೆಲಸ ಮಾಡದ ಮಮತಾ ಈಗ ಕೇಂದ್ರದ ಮೇಲೆ ಗೂಬೆ ಕೂರಿಸಿ,ರಕ್ತಪಾತವಾಗುತ್ತದೆ,ನಾಗರೀಕ ಯುದ್ಧವಾಗುತ್ತದೆ,೪೦ ಲಕ್ಷ ಜನರು ಬಂಗಾಳಕ್ಕೆ ಬರಲಿ ಅಂತೆಲ್ಲ ಬೇಜವಾಬ್ದಾರಿಯುತವಾಗಿ ಬಡಬಡಿಸುತ್ತಿದ್ದಾರೆ. ಆಶ್ಚರ್ಯವೆಂದರೇ ಇಂತಹ ಬೇಜವಾಬ್ದಾರಿ ನಾಯಕಿಗೆ ದೇವೇಗೌಡರಂತವರು ಬೆಂಬಲ ನೀಡುತ್ತಿರುವುದು.ಇವತ್ತಿಗಿದ್ದು ನಾಳೆ ಹೋಗುವ ಅಧಿಕಾರದ ದುರಾಸೆಗೆ ಬಿದ್ದ ಈ ಜನರು ದೇಶದ ಭದ್ರತೆಯನ್ನೇ ಪಣಕ್ಕಿಡಲು ಹೊರಟಿರುವುದು ರೇಜಿಗೆ ಹಾಗೂ ಆಕ್ರೋಶ ಉಂಟು ಮಾಡುವಂತದ್ದು. ದೇಶ ಹಾಳಾದರೂ ತಾನು ಹಾಗೂ ತನ್ನ ಕುಟುಂಬ ಅಧಿಕಾರದಲ್ಲಿ ಮೆರೆಯಬೇಕು ಎನ್ನುವ ಪರಮ ದುರಾಸೆ.
ಅಕ್ರಮ ಬಾಂಗ್ಲಾ ವಲಸಿಗರ ಸಮಸ್ಯೆ ಇವತ್ತಿಗೆ ಕೇವಲ ಅಸ್ಸಾಮಿಗೆ ಸೀಮಿತವಾಗಿ ಉಳಿದಿಲ್ಲ,ಅವರು ಈಗ ಇಡೀ ಭಾರತವನ್ನು ವ್ಯಾಪಿಸಿದ್ದಾರೆ. ಕರ್ನಾಟಕದಲ್ಲೂ ಸುಮಾರು ೪ ಲಕ್ಷ ಜನರಿದ್ದಾರೆ,ರಾಜಧಾನಿಯಲ್ಲೇ ೪೦ ಸಾವಿರ ಜನರಿದ್ದಾರೆ ಎನ್ನುವ ಅಂದಾಜಿದೆ. ಇವರ ಸಂತಾನೋತ್ಪಾದನೆ ಸ್ಪೀಡು ನೋಡಿದರೆ ಹೋದ ಕಡೆಯಲ್ಲೆಲ್ಲಾ ಇವರು ಮುಸ್ಲಿಂ ಬಾಹುಳ್ಯ ಸ್ಥಾನಗಳನ್ನು ಸ್ಥಾಪಿಸುತ್ತಲೇ ಹೋಗುತ್ತಾರೆ. ಅಂತಿಮವಾಗಿ ತಮ್ಮದೇ ಅಧಿಪತ್ಯವನ್ನು ಸ್ಥಾಪಿಸುತ್ತಾರೆ. ಅಸ್ಸಾಮನ್ನು ಆಗಿನ ಪಾಕಿಸ್ತಾನಕ್ಕೆ ಸೇರಿಸಿಕೊಳ್ಳಬೇಕೆಂಬ ಇಂಗಿತವನ್ನು ಪಾಕಿಸ್ತಾನದ ರಾಜಕಾರಣಿಗಳು ಬಹಿರಂಗವಾಗಿಯೇ ಮಾಡುತ್ತಿದ್ದರು. ಪಾಕಿಸ್ತಾನಿಗಳು ಮಾಡಲಾಗದ್ದನ್ನು ಮಮತಾ ಬ್ಯಾನರ್ಜಿಯಂತಹ ಬೇಜವಾಬ್ದಾರಿ ರಾಜಕಾರಣಿ,ಕಾಂಗ್ರೆಸ್ಸಿನಂತಹ ವೋಟ್ ಬ್ಯಾಂಕ್ ಪಕ್ಷ ಹಾಗೂ ಇಂತವರನ್ನು ಬೆಂಬಲಿಸುವ ಸ್ವಾರ್ಥ ರಾಜಕಾರಣಿಗಳು ಹಾಗೂ ಗಂಜಿಗಿರಾಕಿಗಳು ಮಾಡಿಬಿಡಬಲ್ಲರು. ಈಗ ಘೋರಿ-ಘಜನಿಗಳಿಲ್ಲ.ಆದರೆ ಅವರ ಪ್ರೇತಾತ್ಮಗಳು ಸೆಕ್ಯುಲರ್ ರಾಜಕಾರಣಿಗಳ ರೂಪದಲ್ಲೇ ಇಲ್ಲೇ ಆವಾಹಿಸಿಕೊಂಡಿವೆ. ಅವುಗಳು ಇದು ಅಸ್ಸಾಮಿಗಳಿಂದ ಅಸ್ಸಾಮನ್ನು ಆಪೋಶನ ತೆಗೆದುಕೊಂಡರೇ ನಾಳೆ ಬಂಗಾಳ,ಬಿಹಾರ,ಒಡಿಶಾ..,ಕರ್ನಾಟಕದ ಬಾಗಿಲಿಗೂ ಬಂದಾರು!
ಅಕ್ರಮ ಬಾಂಗ್ಲಾ ವಲಸಿಗರ ಬಗ್ಗೆ ಬ್ಯಾಟಿಂಗ್ ಮಾಡುತ್ತಿರುವ ರಾಜಕಾರಣಿಗಳು,ಗಂಜಿಗಿರಾಕಿಗಳು ಅವರನ್ನು ತಂದು ತಮ್ಮ ಮನೆಯಲ್ಲಿಟ್ಟುಕೊಳ್ಳಲಿ,ಅಥವಾ ಅವರೊಂದಿಗೆ ಬಂಗಾಳಕೊಲ್ಲಿಗೆ ಹಾರಿಕೊಳ್ಳಲಿ ಎಂದು ಹೇಳಿಬಿಡಬಹುದು. ಆದರೆ ವಾಸ್ತವ ಹಾಗೂ ಮಾನವೀಯ ದೃಷ್ಟಿಯಲ್ಲಿ ನೋಡುವುದಾದರೆ, ಅಕ್ರಮ ವಲಸಿಗರಿಗೆ ವೀಸಾ ಕೊಟ್ಟು ಅವರ ಜನಸಂಖ್ಯೆಗೆ ಕಡಿವಾಣ ಹಾಕಿ,ಅವರಿಗೆ ವೋಟ್ ಸೌಲಭ್ಯವನ್ನು ನೀಡಬಾರದು. ನಮ್ಮ ಸಮಾಜವನ್ನು,ರಾಜಕಾರಣದ ಮೇಲೆ ಪ್ರಭಾವ ಬೀರದಂತೆ ಅವರನ್ನು ವಲಸಿಗರ ಸ್ಥಾನದಲ್ಲಿಡಬೇಕು ಮತ್ತು ಮುಖ್ಯವಾಗಿ ಅವರ ರಿಲಿಜನ್ನಿನ ಚಟುವಟುಕೆಗಳಿಗೂ ಕಡಿವಾಣ ಹಾಕಬೇಕು. ಬಹುಶಃ ಅವರನ್ನು ಇಲ್ಲೇ ಉಳಿಸಿಕೊಳ್ಳಲು ಇರುವ ಮಾರ್ಗ ಇದೊಂದೇ…