ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 25, 2018

ಪ್ರಗತಿಪರರ ಈ ವಿತಂಡ ಹೋರಾಟ ಹಿಂದೂಗಳ ಆಚರಣೆಗಳ ಮೇಲೆಯೇ ಏಕೆ..?

‍ನಿಲುಮೆ ಮೂಲಕ

– ನಮೋ ಹಿಂದುಸ್ಥಾನಿ 

file6x2g9i3wm3mjrklz1w4ಓದಿದ್ದೇವೆ ಎನ್ನುವ ಹಮ್ಮುಬಿಮ್ಮಿನ ಮೂಲಕ, ಕೈಯ್ಯಲೊಂದಿಷ್ಟು ಅವಾರ್ಡಗಳು, ಕುತ್ತಿಗೆಮೇಲೆ ಒಂದಿಷ್ಟು ಬೋರ್ಡ್ ಗಳು, ಹೀಗೆ ಹಲಾವಾರು ರೀತಿಯಲ್ಲಿ ಕಾಣಿಸಿಕೊಳ್ಳುವ ಈ ಪ್ರಗತಿಪರರು ಲಗ್ಗೆ ಇಡುವುದೇ ಪುರಾತನ ಹಿಂದೂ ಆಚರಣೆಗಳು ಮೇಲೆ.

ಮೊದಲೆಲ್ಲ ಟೀಕಿಸುತ್ತಿದ್ದವರು, ಇಂದು ಬರಬರುತ್ತ ಇವರ ಅಟಾಟೋಪಗಳು ಹಿಂದೂ ಸಂಪ್ರದಾಯದ ಮೇಲೆ ಬಿದ್ದಿದೆ. ಕಾಲ ಬದಲಾಗುತ್ತಿದೆ ಎಲ್ಲರು ವಿದ್ಯಾವಂತರಾದೆವೆಂದು ಪಾಶ್ಚಾತ್ಯ ಶೈಲಿಯ ವಿದೇಶಿಗರ ಉಡುಗೆ ತೊಡುಗೆಗೆ ಮಾರುಹೋಗಿ ಹಿಂದುತ್ವವನ್ನೇ ಬಿಟ್ಟು ಬಿಡುವ ಕೊನೆ ಪರಿಸ್ಥಿತಿಯ ಕಡೆ ಪಯಣವೇ ಇವರ ಈ ಹಿಂದೂ ವಿರೋಧಿ ರೀತಿ-ನೀತಿ ರುಜುವಾತುಗಳು.

ತಾವೊಂದಿಷ್ಟು ಓದಿದ್ದೇವೆ-ತಿಳಿದಿದ್ದೇವೆ ಎಲ್ಲವು ನಾವೊಂದುಕೊಂಡಂತೆ ನಡೆಯುತ್ತವೆ ಎನ್ನುವ ಬವಣೆಯ ಕಾರ್ಕೋಟಕ ವಿಷ ಅವರ ಮೆದುಳನ್ನು ಪ್ರವೇಶಿಸಿದೆ. ಕ್ರಿಶ್ಚಿಯನ್ ಮಿಷಿನರಿಗಳ ಮೂಲ ನೆಲೆ ಇವರೆಂದರೆ ತಪ್ಪಾಗಲಾರದು, ಏಕೆಂದರೆ ಹಿಂದೂಗಳ ಪವಿತ್ರ ಆರಾಧನೆಯನ್ನು ಟೀಕಿಸಿ, ಧರ್ಮವನ್ನು ಹೀಗಳೆಯುವುದೇ ಇವರ ಕಾಯಕವಾಗಿದೆ.

ಪ್ರಗತಿಪರರ ತಮ್ಮ ಪ್ರಗತಿಯ ಬೆನ್ನ ಹಿಂದೆ ನಿಂತು ಕೈ ಜೋಡಿಸಿರುವವರು ಕ್ರಿಶ್ಚಿಯನ್ ಮಿಷಿನರಿಗಳು ಒಂದುಕಡೆಯಾದರೆ, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ರಾಜಕೀಯ ವ್ಯಕ್ತಿಗಳು ಪ್ರಗತಿಪರರೆಂಬ ಹುಂಬರನ್ನು ಮುಂದೆ ಬಿಟ್ಟಿದ್ದಾರೆ ಎಂದರೆ ತಪ್ಪಾಗಲಾರದು. ಈ ಪ್ರಗತಿಪರರಿಗೆ ಒಂದಿಷ್ಟು ರಾಜಕೀಯ ವ್ಯಕ್ತಿಗಳ ಜೊತೆಗಿನ ರಾಜಕೀಯ ನಂಟು, ತಾನು ಸಮಾಜದಲ್ಲಿ ಬುದ್ದಿ ಜೀವಿ ಎನಿಸಿಕೊಳ್ಳುವ ಹುಚ್ಚುತನ ಅತಿರೇಕಕ್ಕೆ ಎಡೆಮಾಡಿಕೊಟ್ಟಿದೆ.

ವಿಷಯಕ್ಕೆ ಬರುವುದಾದರೆ ಮೊದಲಿಗೆ ಲಗ್ಗೆ ಇಟ್ಟಿದ್ದು ಈ ಪ್ರಗತಿಪರ ಬುದ್ದಿ ಜೀವಿಗಳು ಶನಿಯ ಮೂಲ ನೆಲೆಯೆಂದು ಕರೆದು ಆರಾಧಿಸುವ ಶನಿ ಸಿಂಗಣಾಪುರಕ್ಕೆ, ಹೀಗೆ ಲಗ್ಗೆ ಇಟ್ಟು ಅಪವಿತ್ರ ಮಾಡಿ. ಕಾನೂನಿನ ಚೌಕಟ್ಟಿನಲ್ಲಿ ತಮ್ಮದೇ ಎಳೆಯನ್ನ ಎಳೆದು ಸಮಾನತೆಯ ಆದರದ ನೆಪವೊಡ್ಡಿ ಮಠ-ಮಂದಿರ, ಧಾರ್ಮಿಕ ಸ್ಥಳಗಳಲ್ಲೂ ನಮಗೆ ಪಾಲುಬೇಕೆಂದು, ಹಿಂದೂ ಆಚರಣೆಯ ಮೇಲೆ ಲಗ್ಗೆ ಇಡುತ್ತಾರೆ.

ಇವರ ಈ ಹೋರಾಟದ ಮುಂದುವರಿದ ಭಾಗವಾಗಿ ಶಬರಿಮಲೆಯ ಅಯ್ಯಪ್ಪನ ಸನ್ನಿಧಾನಕ್ಕೆ ೧೮-೫೦ ವರ್ಷದೊಳಗಿನ ಮಹಿಳೆಯರ ಪ್ರವೇಶಕ್ಕೆ ಕೋರ್ಟ್ ಮುಖಾಂತರ ಸಿಕ್ಕ ತೀರ್ಪು ಎಂದರೆ ತಪ್ಪಾಗಲಾರದು. ಆ ತೀರ್ಪಿನ ಹಿಂದೆ ಬಿದ್ದು ಅದೆಷ್ಟು ಬುದ್ದಿ ಜೀವಿಗಳು ಶಬರಿಗಿರಿ ಪ್ರವೇಶಿಸುವರೋ ನಾವು ಕಾದು ನೋಡಬೇಕು.

ಹೀಗೆ ಹಿಂದುತ್ವವನ್ನು ನಂಬದೆ ಇರುವವರಿಗೆ ಅನ್ಯ ಧರ್ಮದ ಕುಮ್ಮಕ್ಕು ಸಿಕ್ಕಿದೆ, ಕ್ರಿಶ್ಚಿಯನ್ನಿಕರಣ ಹಿಂದಿನ ಕಾಲದಲ್ಲಿ ಹಿಂದೂ ರಾಜರ ಮದ್ಯೆ ಜಾತಿಯ ನೆಪವೊಡ್ಡಿ, ಹಿಂದುಗಳನ್ನು ಒಡೆದು ಅವರ ಮದ್ಯೆಯೇ ಒಡೆದು-ಆಳುವ ನೀತಿಯನ್ನ ತಂದು ಅವರವರೇ ಕಾದಾಡುವಂತೆ ಮಾಡಿ ಅಖಂಡ ಹಿಂದುಸ್ಥಾನವನ್ನು ಒಡೆದು ನುಚ್ಚು ನೂರು ಮಾಡಿ ಆಳಿದ್ದು ಆಗಿನ ಕಾಲಕ್ಕೆ ಒಂದೆಡೆಯಾದರೆ.

ಇಂದು ಹಿಂದೂ ಆಚಾರ ವಿಚಾರಗಳನ್ನು ಕೆದಕಿ ಅದಕ್ಕೆ ಒಂದು ವಿಜ್ಞಾನದ ನೆಲೆಯೇನೆಂಬೆ ಸೆಳೆಯನ್ನ ಸೇರಿಸಿ ಹಿಂದುತ್ವವನ್ನು ಒಡೆಯ ಹೊರಟಿದೆ ಈ ಪ್ರಗತಿಪರ ಬುದ್ದಿ ಜೀವಿಗಳ ಸವಾರಿ.

ಅಲ್ಲಿ ಇಲ್ಲಿ ಹಿಂದುತ್ವಕ್ಕೆ ಧಕ್ಕೆಯಾಗುತ್ತಿದೆಯೆಂದು ಹೋರಾಟಕ್ಕೆ ಟೊಂಕ ಕಟ್ಟಿ ಕೈ ಜೋಡಿಸಿದ ಕರುನಾಡಿನ ಹಿಂದೂ ಬಾಂದವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿರುವುದೇ ಈಗಿನ ಪ್ರಗತಿಪರರ ಈ ಹೋರಾಟದ ಕರಿ ಛಾಯೆ ಬೀರಿರುವುದು. ಅದು ಎಲ್ಲೂ ಅಲ್ಲ, ನಮ್ಮ ಹಾಸನ ಜಿಲ್ಲೆಯ ಆರಾಧ್ಯ ದೈವವೆಂದೇ ಕರೆಯುವ ಹಾಸನಾಂಬೆಯ ತಾಯಿಯ ಪವಾಡಗಳ ಮೇಲೆ ಕಣ್ಣು ಬಿದ್ದಿದೆ.

೧೨ ನೇ ಶತಮಾನದಲ್ಲಿ ಕೃಷ್ಣಪ್ಪ ನಾಯಕ ಎನ್ನುವ ಪಾಳೇಗಾರನು “ಹಾಸನಾಂಬ ದೇವಿಗೊಂದು” ದೇವಾಲಯವನ್ನು ಕಟ್ಟಿದನೆಂದು ಹಾಸನ ಜಿಲ್ಲೆಯ ಕುದುರುಗುಂಡಿ ಗ್ರಾಮದಲ್ಲಿರುವ ಕ್ರಿ.ಶ. ೧೧೪೦ ರ ವೀರ ಗಲ್ಲಿನ ಮೇಲೆ ಶಿಲಾಶಾಸನವನ್ನು ಕೆತ್ತಿ ತಿಳಿಸಲಾಗಿದೆ.

ದೇವಿಯ ಮೈಮೇಲೆ ಮುಡಿಸಿದ್ದ ಹೂವು ಹಾಗೂ ಗರ್ಭಗುಡಿಯಲ್ಲಿ ಹಚ್ಚಲಾಗಿರುವ ದೀಪದ ಜ್ಯೋತಿ, ದೇವಿಗಾಗಿ ಇಟ್ಟಿರುವ ನೈವೇದ್ಯವನ್ನು ಕಾಣಲು ಭಕ್ತರು ಕಾತುರದಿಂದ ನಗರಕ್ಕೆ ಆಗಮಿಸುತ್ತಿದ್ದಾರೆ
ವರ್ಷಕ್ಕೆ ಒಂದು ಬಾರಿ ದೇವಸ್ಥಾನದ ಬಾಗಿಲು ತೆರೆದು ತಾಯಿಯ ಪೂಜೆಗೆಂದು ಅಣಿಯಾಗುತ್ತಾರೆ, ಆದರೆ ಈ ಪ್ರಗತಿಪರರು, ಇನ್ನೇನು ಈ ವರ್ಷದಲ್ಲಿ ದೇವಿಯ ದರ್ಶನಕ್ಕೆ ಬಾಗಿಲು ತೆರೆಯಲು ಕೆಲವೇ ದಿನ ಬಾಕಿಯಿದೆ ಎನ್ನುವ ಸಮಯದಲ್ಲೇ ಈ ಪ್ರಗತಿಪರರು ಹಾಸನಾಂಬೆಯ ಪವಾಡವನ್ನು ಬಯಲು ಮಾಡಿ ಎಂದು ಜಿಲ್ಲಾಧಿಕಾರಿಗಳ ಹಿಂದೆ ಬಿದ್ದಿದ್ದಾರೆ. ಎಷ್ಟರ ಮಟ್ಟಿಗೆ ಎಂದರೆ “ಅವೈಜ್ಞಾನಿಕ ಮೂಢನಂಬಿಕೆಯ ಮೂಲಕ ಜನತೆಯನ್ನ ಹಿಂದುಗಳನ್ನು ಯಾಮಾರಿಸುತ್ತ ಇದೆ ಎಂದು ಸಿಐಟಿಯು, ಸಿಪಿಎಂ ಮತ್ತು ಭಾರತ ಜ್ಞಾನ-ವಿಜ್ಞಾನ ಸಮಿತಿ ಸೇರಿದಂತೆ ಹಲವು ಪ್ರಗತಿಪರ ಸಂಘಟನೆಗಳು ಹಿಂದೂ ಭಾವನೆಗಳಿಗೆ ದಕ್ಕೆ ಇಡಲು ಹವಣಿಸುತ್ತಿವೆ ಎಂದರೆ ತಪ್ಪಾಗಲಾರದು.

ಇವರ ಈ ರೀತಿಯ ವಿತಂಡ ಹೋರಾಟಗಳು ಹಿಂದೂ ಧರ್ಮದ ವಿರುದ್ಧ ಏಕೆ ಎಂದು ನೀವೇ ಅರ್ಥ ಮಾಡಿಕೊಳ್ಳಿ.

ಹಿಂದೂಗಳ ಭಾವನೆಗಳಿಗೆ ದಕ್ಕೆ ತಂದರೆ ಇವರಿಗೇನು ಲಾಭ ಎಂದು ಹುಡುಕುತ್ತ ಹೊರಟರೆ ಆ ದಾರಿ ಕವಲು ದಾರಿಗಳಾಗಿ ನಮ್ಮ ಜನತೆಯ ಮದ್ಯೆಯೇ ಸುತ್ತುತ್ತ ಸಾಗುತ್ತದೆ. ಅಮಾಯಕರನ್ನ ಸೆಳೆದು ಹಣದ ಆಮಿಷವೊಡ್ಡಿ ಹಿಂದೂ ಆಚರಣೆಗಳಿಂದ ಪ್ರಯೋಜನವಿಲ್ಲ ಎಂದು ನಂಬಿಸಿ ಅವರಿಗೊಂದಿಷ್ಟು ಹಣ ಹಾಗು ಒಂದಿಷ್ಟು ಮತಾಂತರದ ಪುಸ್ತಕಗಳನ್ನು ನೀಡಿ ಮತಾಂತರಕ್ಕೆ ಪ್ರೇರೆಪಿಸುತ್ತಾರೆ. ಹಾಗೆಯೆ ಸಫಲರು ಆಗುತ್ತಾರೆ.

ಈ ಪ್ರಗತಿಪರರಿಗೆ ಅರ್ಹತೆಗಳಾದರು ಏನಿದೆ, ನಮ್ಮ ಹಿಂದೂ ಸಂಪ್ರದಾಯವನ್ನು ಟೀಕಿಸಲು? ವಿಜ್ಞಾನ ತಂತ್ರಜ್ಞಾನ ಎಷ್ಟೇ ಬೆಳೆದಿರಬಹುದು. ಆದರೆ ಕೆಲವೊಂದು ಆಚರಣೆಗಳ ಮೇಲೆ ಅದರ ಕರಿ ನೆರಳು ಬೀಳದಿರುವುದೇ ಉತ್ತಮವೆನಿಸುತ್ತದೆ. ಕ್ರಿಶ್ಚಿಯನ್ ಸಮುದಾಯ ಹಾಗು ಮುಸ್ಲಿಂ ಸಮುದಾಯದ ಮೂಢನಂಬಿಕೆಯ ಆಚರಣೆಗಳ ಮೇಲೆ ಇವರ ಹೋರಾಟಗಳು ಏಕಿಲ್ಲ ಎಂದು ನೀವು-ನಾವು ಯೋಚಿಸುತ್ತ ಹೋದರೆ ಮೂಲ ಅಲ್ಲೆಯೇ ಇದೆ, ಈವರದ್ದೇ ಕರಿ ನೆರಳು ಹಿಂದೂ ಧರ್ಮವನ್ನು ಹಂತ ಹಂತವಾಗಿ ತುಳಿದು ತಮ್ಮದೇ ಸಮುದಾಯವನ್ನು ಮುಂಚೂಣಿಗೆ ತರಲು ಹವಣಿಸುತ್ತಿದೆ ಎಂದರೆ ತಪ್ಪಾಗಲಾರದು.

ಈ ಪ್ರಗತಿಪರರ ಹಾರಾಟಗಳಿಗೆ ಹಿಂದೂ ಆಚಾರ-ವಿಚಾರಗಳನ್ನು ಒಪ್ಪಿಕೊಂಡವರು, ಹಿಂದುತ್ವವನ್ನು ಆರಾಧಿಸುವವರು ಲಗಾಮು ಹಾಕದೆ ಹೋದಲ್ಲಿ ಮುಂದೊಂದು ದಿನ ನೀವೆಲ್ಲ ಹಿಂದುಗಳೇ ಅಲ್ಲ, ಎಂದು ನಿರೂಪಿಸುತ್ತಾರೆ. ಇದಕ್ಕೆ ನಮ್ಮ ಆಡಂಬರದ ಪಾಶ್ಚಾತ್ಯ ಶೈಲಿಗೆ ಒಗ್ಗಿ ಕೊಂಡವರು ಒಪ್ಪಿಕೊಳ್ಳುತ್ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಶಬರಿಗಿರಿಯ ಅಯ್ಯಪ್ಪನ ಸನ್ನಿದಾನದ ಪರವಾಗಿ ಕೈ ಜೋಡಿಸಿದ ಜನನಾಯಕರು ಹಾಗು ಹಿಂದೂ ಭಾಂದವರಾದ ನಾವು ಹಾಸನಾಂಬೆಯ ಪವಾಡಗಳನ್ನು ಆಚಾರ ವಿಚಾರಗಳನ್ನು ಕಟ್ಟು ಪಾಡುಗಳನ್ನು ಉಳಿಸುವುದರ ಜೊತೆಗೆ ಹಿಂದುಸ್ಥಾನ ಹಾಗು ಹಿಂದುತ್ವಕ್ಕೆ ದಕ್ಕೆ ಬಂದಾಗ ಎದ್ದು ನಿಲ್ಲಬೇಕು ಎನ್ನುವುದು ನಮ್ಮ ಹೃದಯದಲ್ಲಿ ಬೆರೆತಿದ್ದರೆ ಒಳ್ಳೆಯದ್ದು ಎನಿಸುತ್ತದೆ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments