ಹಿಂದೂಗಳು ಎರಡನೇ ದರ್ಜೆಯ ಪ್ರಜೆಗಳೇ ಮುಖ್ಯಮಂತ್ರಿಗಳೇ?
– ರಾಕೇಶ್ ಶೆಟ್ಟಿ
ಇಂಗ್ಲೀಷ್ ಸುದ್ದಿ ವಾಹಿನಿಗಳಲ್ಲಿ ತಮ್ಮ ಪ್ಯಾನೆಲ್ ಚರ್ಚೆಗಳ ಮೂಲಕ,ಹಾಗೂ ಪ್ಯಾನೆಲಿಸ್ಟ್-ರಾಜಕಾರಣಿಗಳಿಗೆ ನಿರ್ಭಿತಿಯಿಂದ ಪ್ರಶ್ನೆ ಕೇಳುವ ಮೂಲಕ ದೇಶದ ಗಮನ ಸೆಳೆದ ಪತ್ರಕರ್ತ ಅರ್ನಬ್ ಗೋಸಾಮಿಯವರಂತೆಯೇ ಕರ್ನಾಟಕ ರಾಜ್ಯದ ಪತ್ರಿಕಾ ರಂಗದಲ್ಲಿ ತಮ್ಮ ನೇರಾ ನೇರ ಪ್ರಶ್ನೆಗಳು ಹಾಗೂ ಸತ್ಯ-ನ್ಯಾಯದ ಪರ ದನಿಯಾದವರು ಸುವರ್ಣ ಸುದ್ದಿ ವಾಹಿನಿಯ ಮುಖ್ಯಸ್ಥರಾದ ಅಜಿತ್ ಹನಮಕ್ಕನವರ್.ಇವರು ನಡೆಸಿಕೊಡುವ ಲೆಫ್ಟ್-ರೈಟ್-ಸೆಂಟರ್ ಎಂಬ ಚರ್ಚಾ ಕಾರ್ಯಕ್ರಮದಲ್ಲಿ ದಾಖಲೆಗಳನ್ನು ಮುಂದಿಟ್ಟುಕೊಂಡು, ಸುತ್ತಿ ಬಳಸಿ ಹೊಗಳಿಕೆಯ ಮಾತನಾಡದೇ ಸತ್ಯವನ್ನು ಸ್ಪಷ್ಟವಾಗಿ ಹೇಳುವುದು ಅಜಿತ್ ಶೈಲಿ.ಐತಿಹಾಸಿಕ ಸತ್ಯವನ್ನು ನೇರವಾಗಿ ಹೇಳಿದ್ದರಿಂದಾಗಿ ಈಗ ಅಜಿತ್ ಹನಮಕ್ಕನವರ್ ಸಂಕಟದಲ್ಲಿದ್ದಾರೆ.
ಕಳೆದ ಗುರುವಾರ, ಪ್ರೊ.ಭಗವಾನರನ ಕುರಿತ ಚರ್ಚೆಯ ಸಮಯದಲ್ಲಿ,ಭಗವಾನರನ ಪರ ವಹಿಸಿದ್ದ ಮಹೇಶ್ ಚಂದ್ರಗುರು ಅವರ “ಯಾರೂ ಪ್ರಶ್ನಾತೀತರಲ್ಲ” ಎನ್ನುವ ಮಾತಿಗೆ ಪ್ರತಿಯಾಗಿ ಅಜಿತ್, ಹೌದು ಸರ್ ನಿಮ್ಮ ಮಾತು ಒಪ್ಪುತ್ತೇನೆ ಯಾರೂ ಕೂಡ ಪ್ರಶ್ನಾತೀತರಲ್ಲ. ಆದರೆ ಯಾರನ್ನು ಪ್ರಶ್ನಿಸಲು ನೀವುಗಳು (ಬುದ್ಧಿಜೀವಿಗಳು) ಆರಿಸಿಕೊಳ್ಳುತ್ತೀರಿ ಎಂದರೆ,ಯಾರನ್ನು ಪ್ರಶ್ನಿಸಿದರೆ ಅತ್ಯಂತ ಕಡಿಮೆ ಅಪಾಯ ಆಗಬಹುದೋ ಅಂತವರನ್ನು ಮಾತ್ರ ಆರಿಸಿಕೊಳ್ಳುತ್ತೀರಿ. ರಾಮನನ್ನು ಪ್ರಶ್ನಿಸಬಹುದು.೫೩ ವಯಸ್ಸಿನಲ್ಲಿ ೬ ವರ್ಷದ ಹೆಣ್ಣುಮಗುವನ್ನು ಮದುವೆಯಾದವರನ್ನು ಪ್ರಶ್ನಿಸುವ ಧೈರ್ಯ ನಿಮಗೆ ಬರುವುದಿಲ್ಲ ಎನ್ನುವ ಅರ್ಥದಲ್ಲಿ ಮಾತನ್ನಾಡಿದ್ದರು.ಅಷ್ಟೇ ನೋಡಿ ಶುರುವಾಯಿತು!
ಫೇಸ್ಬುಕ್ಕಿನಲ್ಲಿ ಸದಾಕಾಲ ದ್ವೇಷಕಾರುವ ಮಂಗಳೂರು ಮುಸ್ಲಿಮ್ಸ್ ಎನ್ನುವ ಪೇಜ್ ಒಂದಿದೆ.ಈ ಪೇಜಿನ ಅಡ್ಮಿನ್ನು ಅಜಿತ್ ಹಾಗೂ ಅವರ ಕುಟುಂಬ ಫೋಟೋಗಳನ್ನು ಹಾಕಿ ಇನ್ನೆರಡು ದಿನದಲ್ಲಿ ಕ್ಷಮೆ ಕೇಳದಿದ್ದರೆ ನಿನ್ನನ್ನು ಹತ್ಯೆಗೈಯ್ಯುವುದಾಗಿ ಬಹಿರಂಗಾಗಿಯೇ ಬರೆದುಕೊಂಡ.ಮರುದಿನ ಬೆಳಗ್ಗೆಯಿಂದ ಅಜಿತ್ ಅವರ ಫೋನಿಗೆ ಬೆದರಿಕೆಗಳು ಬರಲಾರಂಭಿಸಿದವು. ಅದು ಒಂದಲ್ಲ-ಎರಡಲ್ಲ ದಿನಕ್ಕೆ ೧ ಸಾವಿರಕ್ಕೂ ಹೆಚ್ಚು ಕರೆಗಳು! ಖುದ್ದು ನಾನೇ ಅವರ ಜೊತೆಗಿದ್ದ ಹದಿನೈದು ನಿಮಿಷಗಳಲ್ಲಿ ೨೦ಕ್ಕೂ ಹೆಚ್ಚು ಕರೆಗಳು ಬರುತ್ತಲೇ ಇದ್ದವು. ಕೆಲವು ಲೋಕಲ್ ನಂಬರ್ರುಗಳಾದರೆ ಹಲವು ಅರಬ್ ಮತ್ತಿತ್ತರ ಹೊರದೇಶದ ನಂಬರ್ರುಗಳಿಂದ ಬರುತ್ತಿದ್ದ ಕರೆಗಳವು.ಈ ರಾಜ್ಯದ ಪ್ರಮುಖ ಸುದ್ದಿವಾಹಿನಿಯೊಂದರ ಮುಖ್ಯಸ್ಥರಾಗಿರುವವರ ಪರಿಸ್ಥಿತಿಯೇ ಈ ರೀತಿಯಾದರೇ ,ಇನ್ನು ಈ ರಾಜ್ಯದ ಸಾಮಾನ್ಯ ವರದಿಗಾರರು,ಪತ್ರಕರ್ತರು,ಬರಹಗಾರರ ಗತಿಯೇನು? ಅವರ ಸುಖ-ದುಃಖ ಗಳನ್ನು ಕೇಳುವವರು ಯಾರು?
ಬೆತ್ತಲೆ ರಾಜ್ಯದಲ್ಲಿ ಬಟ್ಟೆತೊಟ್ಟುಕೊಂಡವರದೇ ತಪ್ಪು ಎನ್ನುವಂತೆ,ಕಾನೂನು ಸುವ್ಯವಸ್ಥೆ ಎನ್ನುವುದು ಕಾನೂನು ಅವ್ಯವಸ್ಥೆಯಾಗಿರುವ ರಾಜ್ಯದಲ್ಲಿ ಸತ್ಯ,ನ್ಯಾಯದ ಪರವಾಗಿ ದನಿಯೆತ್ತುವವರ ಮೇಲೆ ದೌರ್ಜನ್ಯಗಳು ನಿರಂತರವಾಗಿದ್ದರೂ ಕೇಳುವವರೇ ದಿಕ್ಕಿಲ್ಲದಂತಾಗಿದೆ.ಕಾನೂನು ಅವ್ಯವಸ್ಥೆಯ ಬಗ್ಗೆ ಹೇಳುವುದಾದರೂ ಯಾರಿಗೆ ಹೇಳಿ? ಈ ರಾಜ್ಯದಲ್ಲಿ ಸಿದ್ಧರಾಮಯ್ಯನವರ ಕಾಂಗ್ರೆಸ್ ಸರ್ಕಾರ ಶುರುವಾಗಿ ಈಗ ಕುಮಾರಸ್ವಾಮಿಯವರ ಸಮ್ಮಿಶ್ರ ಸರ್ಕಾರದವರೆಗೂ ರಾಜ್ಯಕ್ಕೊಬ್ಬ ಫುಲ್ ಟೈಮ್ ಗೃಹ ಸಚಿವರೇ ಇಲ್ಲ. ಗೃಹ ಸಚಿವರೇ ಇಲ್ಲದ ಮೇಲೆ ಪೊಲೀಸ್ ಇಲಾಖೆಯ ಕತೆ ಏನಾಗಬೇಕು?
ಅವನು,ಆ ಅಯೋಗ್ಯ,ಭಗವಾನರ ಮತ್ತು ಅವನಂತೆ ಹಿಂದೂ ದೇವರುಗಳ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದರೆ ಈ ರಾಜ್ಯದಲ್ಲಿ ಅವರಿಗೆ ಪ್ರಶಸ್ತಿ ಸಿಗುತ್ತದೆ.ಜನರ ತೆರಿಗೆ ಹಣದಲ್ಲಿ ಅವನಿಗೆ ಪೊಲೀಸ್ ಭದ್ರತೆಯನ್ನು ಕೊಡಲಾಗುತ್ತದೆ. ಆದರೆ ಹಿಂದೂಗಳನ್ನು ಬಿಟ್ಟು ಅನ್ಯಧರ್ಮದ ಐಡಿಯಾಲಜಿಗಳ ಬಗ್ಗೆ “ವೈಚಾರಿಕ ಪ್ರಶ್ನೆ”ಗಳನ್ನು ಎತ್ತಿದರೆ, ಇದೇ ತುಘಲಕ್ ಸರ್ಕಾರ ರಾತ್ರೋರಾತ್ರಿ ನಿಮ್ಮ ಮನೆಗೆ ಕಳ್ಳರಂತೆ ನುಗ್ಗಿ ನಿಮ್ಮನ್ನು ಬಂಧಿಸುತ್ತದೆ. ಪತ್ರಕರ್ತ, ಅಂಕಣಕಾರ ಸಂತೋಷ್ ತಮ್ಮಯ್ಯ ಅವರೊಂದಿಗೆ ಆಗಿದ್ದು ಕೂಡ ಅದೇ. ಟಿಪ್ಪುಸುಲ್ತಾನನ ನೈಜ ಮುಖದ ಅನಾವರಣ ಮಾಡುತ್ತ ವಿಚಾರ ಸಂಕಿರಣವೊಂದರಲ್ಲಿ, “ಶತಮಾನಗಳ ಹಿಂದೆ ಪ್ರವಾದಿಯೊಬ್ಬ ಅರಬ್ ನೆಲದಲ್ಲಿ ಸ್ಥಾಪಿಸಿದ ಅಸಹನೆಯ ಸಿದ್ಧಾಂತವೇ ಟಿಪ್ಪುಸುಲ್ತಾನನಂತ ಮತಾಂಧನೊಬ್ಬ ಹುಟ್ಟಿಕೊಳ್ಳಲು” ಕಾರಣವಾಯಿತು ಎನ್ನುವ ಅರ್ಥದಲ್ಲಿ ಸಂತೋಷ್ ಮಾತನಾಡಿದ್ದರು.ನಿಜವಾಗಿಯೂ ಅದೊಂದು ಗಂಭೀರವಾದ ವೈಚಾರಿಕ ಪ್ರಶ್ನೆಯಾಗಿತ್ತು. ಆದರೆ,ಮರುದಿನವೇ ಅವರ ಮೇಲೆ ಧರ್ಮನಿಂದನೆಯ ಕೇಸು ದಾಖಲಾಯಿತು.ಹಾಸ್ಯಾಸ್ಪದ ವಿಷಯವೆಂದರೆ ಮಾತನಾಡಿದ್ದು ಸಂತೋಷ್ ಆದರೂ ಆ ದಿನ ವೇದಿಕೆಯ ಮೇಲಿದ್ದ ಇತರೆ ಅತಿಥಿಗಳ ಮೇಲೂ ಈ ಜನಗಳು ದೂರು ಕೊಡುತ್ತಾರೆ ಮತ್ತು ನಮ್ಮ ಪೊಲೀಸರು ಅವರ ಮೇಲೂ ಕೇಸ್ ದಾಖಲಿಸಿಕೊಳ್ಳುತ್ತಾರೆ! ಟಿಪ್ಪುಜಯಂತಿ ಮುಗಿಯುವವರೆಗೂ ನರಿಯಂತೆ ಕಾದುಕುಳಿತಿದ್ದ ಸರ್ಕಾರ,ರಾತ್ರೋರಾತ್ರಿ ಪತ್ರಕರ್ತ ಸಂತೋಷ್ ತಮ್ಮಯ್ಯನವರನ್ನು ಅವರ ಮನೆಯಿಂದಲೇ ಬಂಧಿಸಿ ಕರೆದುಕೊಂಡು ಹೋದರು. ಬಹುಶಃ ತುರ್ತುಪರಿಸ್ಥಿತಿಯ ಕಾಲದಲ್ಲೂ ಈ ರೀತಿ ಪತ್ರಕರ್ತನೊಬ್ಬನ್ನನ್ನು ಮಧ್ಯರಾತ್ರಿ ಕರ್ನಾಟಕದಲ್ಲಿ ಬಂಧಿಸಿರಲಿಲ್ಲವೇನೋ? ಆದರೆ ಈ ತುಘಲಕ್ ದರ್ಬಾರಿನ ಎರಡನೇ ಅವತರಣಿಕೆಯ ಸರ್ಕಾರದಲ್ಲಿ ಅದೂ ಆಗಿ ಹೋಯಿತು.
ಕಡೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದ ಸಂತೋಷ್ ತಮ್ಮಯ್ಯನವರಿಗೂ ಪ್ರಾಣ ಬೆದರಿಕೆಯ ಸಂದೇಶಗಳು ಬಂದಿದ್ದವು. ಅದರ ವಿರುದ್ಧ ನೀಡಲಾಗಿರುವ ದೂರನ್ನು ಪೊಲೀಸರು ದಿಂಬಿನ ಅಡಿಯಲ್ಲಿ ಇಟ್ಟು ಮಲಗಿಕೊಂಡಿರಬಹುದು. ಈಗ,ಅಜಿತ್ ಹನಮಕ್ಕನವರ್ ಅವರು ಯಾವುದೇ ತಪ್ಪು ಮಾಡದೇ ಇದ್ದರೂ ಕೂಡ,ಯಾರದಾದರೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದು ಹೇಳಿದ ನಂತರವೂ ಅವರಿಗೆ ನಿರಂತರ ಬೆದರಿಕೆ ಕರೆಗಳು ಮುಂದುವರೆದಿವೆ.ರಾಜ್ಯದ ಬೇರೆ ಬೇರೆ ಕಡೆ ಅವರ ವಿರುದ್ಧ ದೂರುಗಳು ದಾಖಲಾಗುತ್ತಿವೆ. ಅಷ್ಟು ಮಾತ್ರವಲ್ಲ. ಸರ್ಕಾರದಲ್ಲಿರುವ ಮುಸ್ಲಿಂ ಖೋಟಾದ ಸಚಿವರ ಬಳಿಗೆ ನಿಯೋಗಗಳು ಬಂದು ಅವರ ಬಂಧನವಾಗಬೇಕೆಂದು ಒತ್ತಡ ಹೇರುತ್ತವೆ.ಕಾಂಗ್ರೆಸ್ಸಿನ ಸಚಿವರೊಬ್ಬರು ಉನ್ನತ ಪೊಲೀಸ್ ಅಧಿಕಾರಿಗಳಿಗೆ ಬಂಧಿಸಿ ಅಂತಲೂ ಹೇಳುತ್ತಾರೆ.ಯಾಕ್ರೀ ಸಚಿವರೇ ನಿಮ್ಮ ಪಕ್ಷವೇ ತಾನೇ ಅಭಿವ್ಯಕ್ತಿ ಸ್ವಾತಂತ್ರ್ಯದ ಚಾಂಪಿಯನ್ನು? ಈಗ ಎಲ್ಲಿ ಹೋಯಿತು ಆ ಸ್ವಾತಂತ್ರ್ಯ?
ಸಂತೋಷ್ ತಮ್ಮಯ್ಯ ಹಾಗೂ ಅಜಿತ್ ಹನಮಕ್ಕನವರ್ ಅವರ ಕೇಸುಗಳನ್ನು ನೋಡಿದಾಗ ಇಬ್ಬರಿಗೆ ಪ್ರಶ್ನೆಗಳನ್ನು ಕೇಳಬೇಕು ಎನಿಸುತ್ತದೆ.
ಸದಾಕಾಲ ದೇವಸ್ಥಾನಗಳನ್ನು ಸುತ್ತುವ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಹೇಳಿ,ಈ ರಾಜ್ಯದಲ್ಲಿ ಹಿಂದೂಗಳು ಎರಡನೇ ದರ್ಜೆಯ ಪ್ರಜೆಗಳೇ? ಹಿಂದೂ ದೇವರುಗಳ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವ ಭಗವಾನರನ ಭದ್ರತೆಗಾಗಿ ಅರ್ಧಕೋಟಿಗೂ ಹೆಚ್ಚು ತೆರಿಗೆದಾರರ ಹಣವನ್ನು ಸರ್ಕಾರ ವ್ಯಯಿಸಿದೆ. ಕಳೆದ ಬಾರಿ ಆತನಿಗೆ ಜಾಮೀನು ನೀಡುವಾಗ ಘನ ನ್ಯಾಯಾಲಯವು ಅವನಿಗೆ ಮತ್ತೆ ಇಂತಹದ್ದೇ ವಿವಾದಾಸ್ಪದ ಹೇಳಿಕೆ ನೀಡದಂತೆ ನಿರ್ಬಂಧ ವಿಧಿಸಿತ್ತು.ಅದಾದ ನಂತರವೂ ಅವನು ತನ್ನ ದುಂಡಾವರ್ತನೆಯನ್ನು ನಿಲ್ಲಿಸಿಲ್ಲ. ಈ ವಿಷಯ ನಿಮ್ಮ ಪೊಲೀಸರಿಗೆ ಗೊತ್ತಿಲ್ಲವೇ? ಅವರೇಕೆ ಇದನ್ನು ನ್ಯಾಯಾಲಯದ ಗಮನಕ್ಕೆ ತಂದು ಅವನ ಜಾಮೀನು ರದ್ಧತಿಗೆ ಪ್ರಯತ್ನಿಸಿಲ್ಲ? ಸಂತೋಷ್ ತಮ್ಮಯ್ಯರನ್ನು ರಾತ್ರೋರಾತ್ರಿ ಬಂಧಿಸಲು ತೋರುವ ಉತ್ಸಾಹವನ್ನು ನಿಮ್ಮ ಸರ್ಕಾರ ಭಗವಾನರನನ್ನು ಜೈಲಿಗಟ್ಟುವಲ್ಲಿ ಏಕೆ ತೋರುವುದಿಲ್ಲ? ಭಗವಾನರನ ಭದ್ರತೆಯನ್ನು ಮುಂಜಾಗ್ರತಾ ಕ್ರಮವಾಗಿ ನಿಮ್ಮ ಪೊಲೀಸ್ ಇಲಾಖೆ ಹೆಚ್ಚಿಸಿದೆ.ಆದರೆ ಪ್ರಾಣಬೆದರಿಕೆ ಎದುರಿಸುತ್ತಿರುವ ರಾಜ್ಯದ ಪ್ರಮುಖ ಪತ್ರಕರ್ತ ಅಜಿತ್ ಅವರಿಗೆ,ಅವರ ಮನೆಗೇಕೆ ನಿಮ್ಮ ಸರ್ಕಾರ ಭದ್ರತೆಯನ್ನು ಕಲ್ಪಿಸಿಲ್ಲ? ಭಗವಾನರಂತಹ ಮೆಂಟಲ್ ಪೇಶೆಂಟುಗಳಿಗೆ ಮಾತ್ರವೇನು ನಿಮ್ಮ ಸರ್ಕಾರ ರಕ್ಷಣೆ ಕೊಡುವುದು? ಪ್ರಾಮಾಣಿಕ ಪತ್ರಕರ್ತರ ಜೀವಕ್ಕೆ ಬೆಲೆಯಿಲ್ಲವೇ ಮುಖ್ಯಮಂತ್ರಿಗಳೇ? ಪತ್ರಕರ್ತರನ್ನು ಬಂಧಿಸುವ ನಿಮ್ಮ ಪೊಲೀಸರಿಗೆ ಮಂಗಳೂರು ಮುಸ್ಲಿಂ ಪೇಜಿನಂತಹ ದ್ವೇಷಕಾರುವವರ ಹೆಡೆಮುರಿಕಟ್ಟುವ ಶಕ್ತಿಯಿಲ್ಲವೇ?
ಇನ್ನು ಎರಡನೆಯ ಪ್ರಶ್ನೆ,ರಾಜ್ಯದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹಾಗೂ ಪತ್ರಕರ್ತರ ಸಂಘ ಎನ್ನುವುದು ಅಸ್ಥಿತ್ವದಲ್ಲಿದೆಯೇ? ಬಿಜೆಪಿ ಆಳ್ವಿಕೆಯಿರುವ ರಾಜ್ಯದಲ್ಲಿ ಪತ್ರಕರ್ತರ ಮೇಲೆ ದೌರ್ಜನ್ಯವೋ ಅಥವಾ ಸಹಜ ಕಾನೂನು ಪ್ರಕ್ರಿಯೆಗಳೇನಾದರೂ ನಡೆದಾಗ ಈ ಸೋಕಾಲ್ಡ್ ಪತ್ರಕರ್ತರ ಸಂಘ ಎದ್ದು ಕುಳಿತು ಪತ್ರಿಕಾ ಸ್ವಾತಂತ್ರ್ಯ ಹರಣವೆಂದು ಆಕಾಶ-ಭೂಮಿ ಒಂದಾಗುವಂತೆ ಅಬ್ಬರಿಸುತ್ತದೆ.ಬಿಜೆಪಿ ಆಡಳಿತದಲ್ಲಿದ್ದಾಗ ರಾಜ್ಯದ ಗೃಹಸಚಿವರನ್ನೇ ತಮ್ಮ ಧರಣಿಯ ಜಾಗಕ್ಕೆ ಕರೆಸಿಕೊಳ್ಳುವಷ್ಟು ಶಕ್ತಿ ಇರುವ ಈ ಪತ್ರಕರ್ತರ ಸಂಘದವರು ಅವತ್ತು ಸಂತೋಷ್ ಅವರನ್ನು ಮಧ್ಯರಾತ್ರಿ ಬಂಧಿಸಿದಾಗ,ಇವತ್ತು ಅಜಿತ್ ಹನಮಕ್ಕನವರ್ ಅವರಿಗೆ ಪ್ರಾಣಬೆದರಿಕೆ ಹಾಕಿ,ನಿರಂತರ ಕೇಸುಗಳನ್ನು ದಾಖಲಿಸುತ್ತಿದ್ದರೂ ತುಟಿಕ್ ಪಿಟಿಕ್ ಎನ್ನುತ್ತಿಲ್ಲ. ಈಗ ಈ ಸೋಕಾಲ್ಡ್ ಪತ್ರಕರ್ತರ ಸಂಘದವರ ಪತ್ರಿಕಾಸ್ವಾತಂತ್ರ್ಯವೆಲ್ಲೋ ಪಾತಾಳದಲ್ಲಿ ಅಡಗಿ ಕುಳಿತಿರುವಂತಿದೆ. ಸಂಕಟದಲ್ಲಿರುವ ಪತ್ರಕರ್ತರ ಜೊತೆ ನಿಲ್ಲದ ಸಂಘವಿದ್ದರೆಷ್ಟು ಬಿಟ್ಟರೆಷ್ಟು?
ಕಡೆಯದಾಗಿ, ಸಂತೋಷ್-ಅಜಿತ್ ಅವರಿಗೆ ಬೆದರಿಕೆ ಹಾಕಿದ ಮುಸ್ಲಿಂ ಮನಸ್ಥಿತಿಯ ಬಗ್ಗೆ ನನಗೇನು ಆಶ್ಚರ್ಯವೆನಿಸುತ್ತಿಲ್ಲ.ತಮ್ಮ ಧರ್ಮದ ನಿಂದನೆಯನ್ನು ಬಿಡಿ,ಅದರ ಕುರಿತ ಪ್ರಶ್ನೆಗಳಿಗೂ ಅವರು ತೀರಾ ಹಿಂಸಾತ್ಮಕಾವಾಗಿಯೇ ಪ್ರತಿಕ್ರಿಯಿಸುವುದನ್ನು ಈ ದೇಶ,ಈ ರಾಜ್ಯ ನೋಡಿದೆ. ರಾಜ್ಯದ ಸೋಕಾಲ್ಡ್ ಸೆಕ್ಯುಲರ್ ಪತ್ರಿಕೆಗಳು ಅದರ ಬಿಸಿಯನ್ನು ಅನುಭವಿಸಿವೆ,ಪ್ರಾಣಹಾನಿಗಳು ಆಗಿವೆ.ಅಭಿವ್ಯಕ್ತಿ ಸ್ವಾತಂತ್ರ್ಯ,ಸಂವಿಧಾನ ಉಳಿಸಿ,ಇಂಟಾಲರೆನ್ಸ್ ಅಂತೆಲ್ಲ ಬೊಗಳೆ ಬಿಡುವ ಮೂರುಕಾಸಿನ ಬುದ್ಧಿಜೀವಿಗಳಿಗೆ ಮುಸ್ಲಿಂ ಮನಸ್ಥಿತಿಯನ್ನು ಪ್ರಶ್ನಿಸುವ ತಾಕತ್ತಿಲ್ಲ.ಅವರ ಪೌರುಷವೇನಿದ್ದರೂ ಹಿಂದೂಗಳ ಮೇಲೆ ಮಾತ್ರವೇ. ಮುಸ್ಲಿಂ ಮನಸ್ಥಿತಿಯಂತೂ ಬದಲಾಗದು. ಆದರೆ ಕಾನೂನು ಸುವ್ಯಸ್ಥೆ ಕಾಪಾಡಬೇಕಾದ ಸರ್ಕಾರ ಕತ್ತೆ ಕಾಯುತ್ತಿದೆಯಾ?