ಸಿದ್ಧಗಂಗಾ ಶ್ರೀಗಳಿಗೇಕಿಲ್ಲ ಭಾರತರತ್ನ?
– ರಾಕೇಶ್ ಶೆಟ್ಟಿ
“ಮೂರು ಬಿಟ್ಟೋರು ಊರಿಗೇ ದೊಡ್ಡೋರು” ಅನ್ನೋ. ಗಾದೆ ಮಾತು ಯಾರಿಗಾದರೂ ಸೂಕ್ತವಾಗಿ ಅನ್ವಯವಾಗುವುದಿದ್ದರೆ ಅದು ಕಾಂಗ್ರೆಸ್ ಪಕ್ಷ ಹಾಗೂ ಅದನ್ನು ಬೆಂಬಲಿಸುವ ಗಂಜಿಗಿರಾಕಿಗಳಿಗೆ. ಕಾರಣವೇನು ಗೊತ್ತೇ, ತನ್ನ ಪಕ್ಷದ ಇತಿಹಾಸದಲ್ಲಿ ಮಾಡಲಾಗಿರುವ ಅನ್ಯಾಯಗಳ ಪಟ್ಟಿ ಅಕ್ಷಯಪಾತ್ರೆಯಂತದ್ದು ಎನ್ನುವುದು ಗೊತ್ತಿದ್ದರೂ ಬೇರೆ ಪಕ್ಷಗಳನ್ನು ಟೀಕಿಸಲು ಹೊರಟಾಗ ಕಾಂಗೈ ನಾಯಕರು ನಾಚಿಕೆ ಬಿಟ್ಟು ನಿಲ್ಲುತ್ತಾರೆ. ಇದಕ್ಕೆ ಇತ್ತೀಚಿನ ಉದಾಹರಣೆ, ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಕೊಡದಿರುವ ವಿವಾದ.
ಇವತ್ತಿಗೆ ಸಿದ್ದರಾಮಯ್ಯನವರಿಂದ ಹಿಡಿದು ಕಾಂಗಿ ಮರಿಪುಢಾರಿಗಳೆಲ್ಲ ಬಿಜೆಪಿಯನ್ನು ಈ ಬಗ್ಗೆ ಪ್ರಶ್ನಿಸುತ್ತಿವೆ.ಆದರೆ,ಹಾಗೆ ಪ್ರಶ್ನಿಸುವ ಭರದಲ್ಲಿ ದೇಶದ ಉನ್ನತ-ಅತ್ಯುನ್ನತ ಪ್ರಶಸ್ತಿಗಳ ಮಾನವನ್ನು ಮೂರು ಬಿಟ್ಟವರ ಪಕ್ಷ ಹೇಗೆ ಕಳೆದಿದೆ ಎನ್ನುವುದನ್ನು ಇವರು ಮರೆತಿರುವಂತಿದೆ.
ಸ್ವರತಿಯ ಪರಾಕಾಷ್ಟೆ ಮೆರೆಯುತ್ತಿದ್ದ ಜವಹರಲಾಲ್ ನೆಹರೂ ತನಗೇ ತಾನೇ ಭಾರತ ರತ್ನ ಕೊಟ್ಟುಕೊಂಡಿದ್ದರು. ಅಪ್ಪನಿಗಿಂತ ತಾನೇನು ಕಮ್ಮಿ ಎನ್ನುವಂತೆ ಮಗಳು ಇಂದಿರಾ ಕೂಡ ತಾವೇ ಭಾರತ ರತ್ನ ಕೊಟ್ಟುಕೊಂಡಿದ್ದರು. ರಾಜೀವ್ ಗಾಂಧಿಗೂ ಮರಣೋತ್ತರವಾಗಿ ಭಾರತ ರತ್ನ ಕೊಟ್ಟಿತ್ತು ಕಾಂಗ್ರೆಸ್ (ಬದುಕಿದ್ದರೆ ಅವರೇ ಕೊಟ್ಟುಕೊಳ್ಳುತ್ತಿದ್ದರೇನೋ). ಭಾರತವನ್ನೇ ತನ್ನಪ್ಪನ ಮನೆ ಸ್ವತ್ತು ಎಂದುಕೊಂಡಿದ್ದ ನೆಹರೂ ಕುಟುಂಬ ಮತ್ತು ನೆಹರೂ ಸಾಕಿದ ನಾಯಿಗಳಂತೆ ವರ್ತಿಸುತ್ತಿದ್ದ ಗಂಜಿಗಿರಾಕಿಗಳಿಗೇ ಡಾ.ಅಂಬೇಡ್ಕರ್, ಸರ್ದಾರ್ ವಲ್ಲಭಾಯ್ ಪಟೇಲರಿಗೆ ಭಾರತ ರತ್ನ ಸಿಗಬೇಕಿತ್ತು ಎಂದು ಯಾವತ್ತಿಗೂ ಅನ್ನಿಸಿರಲೇ ಇಲ್ಲ. ಈ ಇಬ್ಬರು ಮಹನೀಯರಿಗೆ ಅಂತಹ ಗೌರವ ಸಿಗಲಿಕ್ಕೆ ಕಾಂಗ್ರೆಸ್ಸೇತರ ಸರ್ಕಾರವೇ ಕೇಂದ್ರದಲ್ಲಿ ಬರಬೇಕಾಯಿತು.ಇವರಿಬ್ಬರ ದೇಹಾಂತ್ಯವಾದ ಸರಿ ಸುಮಾರು 40 ವರ್ಷಗಳ ನಂತರ ಅವರಿಗೆ ಗೌರವ ನೀಡಿದ್ದು ಜನತಾಪಕ್ಷದ ಸರ್ಕಾರ. ಅಂಬೇಡ್ಕರ್,ಪಟೇಲರಿಗೆ ಗೌರವ ಕೊಟ್ಟರೆ, ಕೃತಕವಾಗಿ ಕಟ್ಟಲ್ಪಟ್ಟ ನೆಹರೂ ಕುಟುಂಬದ ಸೌಧ ನೆಲಕಚ್ಚುವುದೆಂಬ ರಾಜಕೀಯ ಭಯವಿತ್ತು ಎಂದುಕೊಳ್ಳೋಣ ಬಿಡಿ.
ಸೇವೆಯ ಸೋಗಿನಲ್ಲಿ ಮತಾಂತರದ ಮಾಫಿಯಾ ನಡೆಸುತ್ತಿದ್ದ ತೆರೆಸಾ ಅವರಿಗೆ 60ರ ದಶಕದ ಆದಿಯಲ್ಲೇ ಪದ್ಮಶ್ರೀ,80ರ ದಶಕದಲ್ಲಿ ಭಾರತ ರತ್ನವನ್ನು ನೀಡಲು ಕಾಂಗ್ರೆಸ್ಸಿಗೆ ನೆನಪಿತ್ತು. ಆದರೆ, ನಡೆದಾಡುವ ದೇವರು ಸಿದ್ಧಗಂಗಾ ಶ್ರೀಗಳಿಗೆ ಅರ್ಹ ಗೌರವ ಕೊಡಬೇಕೆಂದು ಕಾಂಗ್ರೆಸ್ ಸರ್ಕಾರಗಳಿಗೇಕೆ ಯಾವತ್ತಿಗೂ ನೆನಪಾಗಲಿಲ್ಲ? ಅವರು ಹಿಂದೂ ಆಗಿದ್ದರೆಂದೇ? ಈ ಪ್ರಶ್ನೆಯನ್ನೇಕೆ ಕೇಳಬೇಕಾಗಿದೆಯೆಂದರೇ,
ಅಂತರರಾಷ್ಟ್ರೀಯ ಮಟ್ಟದಿಂದ ಹರಿದು ಬರುತ್ತಿದ್ದ ಹಣದ ತೈಲಿ ಹಿಡಿದು,ತನ್ನ ತೆಕ್ಕೆಗೆ ಬರುತ್ತಿದ್ದ ಮಕ್ಕಳ ಕೊರಳಿಗೆ ಶಿಲುಬೆ ತೊಡಿಸಿಯೇ ಮುಂದುವರೆಯುತ್ತಿದ್ದ ತೆರೆಸಾಗೆ ಪದ್ಮಶ್ರೀ,ಭಾರತ ರತ್ನ ಕೊಡಲಾಯಿತು.ಅದೇ ತನ್ನ ಮಠದ ಬಾಗಿಲಿಗೆ ಬಂದ ಮಕ್ಕಳ ಜಾತಿ,ಧರ್ಮ ಕೇಳದೇ ಅವರವರ ನಂಬಿಕೆಯಡಿಯಲ್ಲೇ ಅವರನ್ನು ಬೆಳೆಯಲು ಬಿಡುತ್ತಿದ್ದರೇ ಹೊರತು ತಮ್ಮ ಸಂಪ್ರದಾಯ, ನಂಬಿಕೆಗಳನ್ನು ಆ ಮಕ್ಕಳ ಮೇಲೆ ಹೇರಿಕೆ ಮಾಡದಂತಹ ನಡೆದಾಡುವ ದೇವರು ಸಿದ್ಧಗಂಗೆಯ ಶ್ರೀಗಳಿಗೆ ಪದ್ಮಭೂಷಣ ಪ್ರಶಸ್ತಿ ಸಿಕ್ಕಿದ್ದು 2015ರಲ್ಲಿ.ಅದಕ್ಕೂ ನರೇಂದ್ರ ಮೋದಿಯವರ ಬಿಜೆಪಿ ಸರ್ಕಾರವೇ ಬರಬೇಕಾಯಿತು.ಇಷ್ಟು ಹೇಳಿ ಮೋದಿ ಸರ್ಕಾರಕ್ಕೆ ಬೇಲ್ ಕೊಡುವುದು ಲೇಖನದ ಉದ್ದೇಶವಲ್ಲ.
ಕಾಂಗ್ರೆಸ್,ನೆಹರೂ ಕುಟುಂಬ ಮತ್ತು ಆ ಕುಟುಂಬದ ಬಾಗಿಲು ಕಾಯುತ್ತ ಬೂಟು ನೆಕ್ಕುವ ಸೋಕಾಲ್ಡ್ ಬುದ್ಧಿಜೀವಿ ವರ್ಗವೆಂಬ ಗಂಜಿಗಿರಾಕಿಗಳು,ಪ್ರೆಸ್ಟಿಟ್ಯೂಟ್ಸ್ ಗಳು,ಬಿಜೆಪಿ,ನರೇಂದ್ರ ಮೋದಿ ಇದರಾಚೆಗೂ ಪ್ರಶಸ್ತಿಗಳತ್ತ ತಿರುಗಿ ನೋಡಿದಾಗ ಭಾರತದ ಉನ್ನತ ಪ್ರಶಸ್ತಿಯೆಂದು ಪರಿಗಣಿಸಲಾಗುವ ಭಾರತ ರತ್ನವಿರಲಿ,ಸಾಹಿತ್ಯ ಲೋಕದ ಉನ್ನತ ಪ್ರಶಸ್ತಿಯೆಂದು ಕೃತಕ ಬಿಲ್ಡ್ ಅಪ್ ಕೊಡಲಾದ ಜ್ಞಾನಪೀಠ,ಸರಸ್ವತಿ ಸಮ್ಮಾನ್,ಅಂತರರಾಷ್ಟ್ರೀಯ ಮಟ್ಟದ ಪ್ರತಿಷ್ಟಿತ ಪ್ರಶಸ್ತಿಗಳೆಂದು ಪರಿಗಣಿಸಲ್ಪಡುವ ನೊಬೆಲ್, ಆಸ್ಕರ್, ಬೂಕರ್ ಯಾವುದಾದರೂ ಅವೆಲ್ಲವೂ ಸಿಗಬಾರದವರಿಗೆ, ಕಾಂಟ್ಯಾಕ್ಟ್ ಆಧಾರಿತ,ಜಾತಿಯಾಧಾರಿತ,ವೋಟ್ ಬ್ಯಾಂಕ್ ಆಧಾರಿತ ಪ್ರತಿಭೆಗಳಿಗೆಲ್ಲ ಸಿಕ್ಕಿವೆ.
ಬಹುತೇಕ ಎಲ್ಲಾ ಪ್ರತಿಷ್ಟಿತ ಪ್ರಶಸ್ತಿಗಳು ಅನರ್ಹರಿಗೆ ಸಿಕ್ಕಿವೆ.ಸಿಗಲೇಬೇಕಾದ ಅರ್ಹರಿಗೆ ಸಿಗದೇ ಮೋಸವೂ ಆಗಿದೆ.ಈ ದೃಷ್ಟಿಯಿಂದ ನೋಡಿದಾಗ, ಪ್ರಶಸ್ತಿಯ ಜೊತೆಗೆ ಅನರ್ಹರ ಸಾಲಿನಲ್ಲಿ ನಿಲ್ಲುವ ಬದಲು ಭಾರತ ರತ್ನದಂತಹ ಪ್ರಶಸ್ತಿ ಸಿದ್ಧಗಂಗಾ ಶ್ರೀಗಳಿಗೆ ಸಿಗದಿರುವುದೇ ಮೇಲು ಅನಿಸುತ್ತದೆಯಾದರೂ,90 ವರ್ಷಗಳ ಕಾಲ ತನ್ನಿಡಿ ಜೀವನವನ್ನು ಪರರಿಗಾಗಿ ಮೀಸಲಿಟ್ಟು ಮಹಾನ್ ಬದುಕೊಂದನ್ನು ಬದುಕಿದ ಹೋದ ಮಹಾತ್ಮನಿಗೆ ಸಿಗದ ಈ ಪ್ರಶಸ್ತಿ ಇನ್ಯಾರಿಗೆ ಸಿಗಬೇಕಪ್ಪ ಅನ್ನಿಸುತ್ತದೆ.
ಸುಕ್ರಿ ಬೊಮ್ಮುಗೌಡ,ಸೂಲಗಿತ್ತಿ ನರಸಮ್ಮ,ಸಾಲುಮರದ ತಿಮ್ಮಕ್ಕ,ಸೀತವ್ವ ಜೋಡಟ್ಟಿ,ಸಿದ್ದೇಶ್ವರ ಸ್ವಾಮೀಜಿ,ಇಬ್ರಾಹಿಂ ಸುತಾರ್,ರುದ್ರಪಟ್ಟಣ ಸಹೋದರರು, ಸದ್ಗುರು ಅವರಂತಹ ಪ್ರಶಸ್ತಿಯ ಮೌಲ್ಯ ಹೆಚ್ಚಿಸುವ ಅರ್ಹರನ್ನೆಲ್ಲ ಗುರುತಿಸಿ ಗೌರವಿಸಿದ ಮೋದಿಯವರ ಸರ್ಕಾರ ಶ್ರೀಗಳ ವಿಷಯದಲ್ಲೇಕೆ ಹೀಗೆ ಮಾಡಿತು ಅಂತ ಕೇಳಲೇಬೇಕಾಗುತ್ತದೆ.
ನೆನಪಿರಲಿ,ಈ ವಿಷಯದಲ್ಲಿ ಮೋದಿ ಸರ್ಕಾರವನ್ನು ಪ್ರಶ್ನಿಸುವ ನೈತಿಕತೆಯಿರುವುದು ಮೋದಿಯವರ ನೈಜ ಬೆಂಬಲಿಗರು ಹಾಗೂ ಶ್ರೀಗಳ ಭಕ್ತರದ್ದೇ ಹೊರತು, 60 ವರ್ಷ ಅಧಿಕಾರದಲ್ಲಿದ್ದಾಗ ಶ್ರೀಗಳ ನೆನಪಾಗದೆ ಈಗ ರಾಜಕೀಯ ಕಾರಣಕ್ಕಾಗಿ ಥರ್ಡ್ ಗ್ರೇಡ್ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ಪಕ್ಷ ಹಾಗೂ ನೆಹರೂ ಕುಟುಂಬದ ಬಾಗಿಲು ಕಾಯುವ ಗಂಜಿಗಿರಾಕಿಗಳಿಗಿಲ್ಲ.ಅರಸು ಕಾಲದಲ್ಲಿ ಇದೇ ಕಾಂಗ್ರೆಸ್ ಪಕ್ಷ ಮಠದ ವಿರುದ್ಧ ಮುರಕೊಂಡು ಬಿದ್ದು ಅನುದಾನ ನಿಲ್ಲಿಸಿತ್ತಲ್ಲ ,ಆಗ ಮೂರು ಬಿಟ್ಟ ಪಕ್ಷದವರ ಬುದ್ಧಿ ಮಣ್ಣು ತಿನ್ನುತ್ತಿತ್ತೇ?
ಮೋದಿ ಸರ್ಕಾರವನ್ನು ಸಮರ್ಥಿಸಿಕೊಳ್ಳಲೇಬೇಕೆನ್ನುವವರು ಪದ್ಮ ಪ್ರಶಸ್ತಿಯ ನಂತರ ಮತ್ತೊಂದು ಉನ್ನತ ಹಂತದ ಪ್ರಶಸ್ತಿಗೆ 5 ವರ್ಷಗಳ ಗ್ಯಾಪ್ ಇರಲೇಬೇಕು ಅಂತೆಲ್ಲ ತೌಡು ಕುಟ್ಟುತ್ತಿದ್ದಾರೆ. ಅವರು ಎರಡು ವಿಷಯಗಳನ್ನು ಅರ್ಥ ಮಾಡಿಕೊಳ್ಳಬೇಕು. ಮೊದಲನೆಯದಾಗಿ ಆ ನಿಯಮವಿರುವುದು ಪದ್ಮ ಅವಾರ್ಡುಗಳಿಗೆ ಸಂಬಂಧಿಸಿದಂತೆಯೇ ಹೊರತು ಭಾರತ ರತ್ನಕ್ಕಲ್ಲ. ಒಂದು ವೇಳೆ ಅದನ್ನು ಭಾರತ ರತ್ನಕ್ಕೆ ಅನ್ವಯಿಸಿದರೂ ಲತಾ ಮಂಗೇಶ್ಕರ್ ಅವರಿಗೆ 2 ವರ್ಷಗಳ ಅವಧಿಯಲ್ಲಿ ಪದ್ಮವಿಭೂಷಣ ಹಾಗೂ ಭಾರತರತ್ನ ಸಿಕ್ಕಿದೆ. ಮತ್ತೊಂದು ಸಬೂಬು ಒಮ್ಮೆಲೇ ಮೂರು ಜನಕ್ಕಿಂತ ಹೆಚ್ಚು ಜನರಿಗೆ ಕೊಡುವಂತಿಲ್ಲ ಅನ್ನೋ ನಿಯಮವಂತೆ. ಈ ವಾದಕ್ಕೆ ತಲೆಯೂ ಇಲ್ಲ ಬುಡವೂ ಇಲ್ಲ. ಮೂವರ ಸಾಲಿನಲ್ಲಿ ಅಗ್ರಗಣ್ಯರಾಗಿ ನಿಲ್ಲುವ ಎಲ್ಲಾ ಅರ್ಹತೆಯೂ ಶ್ರೀಗಳಿಗಿತ್ತು. ಆದರೂ ಸಿಕ್ಕಿಲ್ಲವೆಂದರೆ ಅವರಿಗೆ ಕೊಡಲಾಗಿಲ್ಲ ಎನ್ನುವುದು ವಾಸ್ತವವೇ ಹೊರತು ಉಳಿದೆಲ್ಲ ಸಮರ್ಥನೆಗಳು ನಾನ್ಸೆನ್ಸ್ ಎನಿಸುತ್ತದೆ. ಈ ವಿಷಯದಲ್ಲಿ ಮೋದಿಯವರ ಸರ್ಕಾರದಿಂದ ಖಂಡಿತ ತಪ್ಪಾಗಿದೆ.ತೀರಾ ಈ ವಿಷಯದಲ್ಲೂ ಮೋದಿಯವರ ಸರ್ಕಾರದ ಪರ ವಹಿಸಲು ತರೇವಾರಿ ಸಬೂಬು ನೀಡುವ ಬೆಂಬಲಿಗರಿಗೂ, ಕಾಂಗಿಗಳ ಬಾಲ ಬಡಿಯುವ ಗಂಜಿಗಿರಾಕಿಗಳಿಗೂ ಏನು ವ್ಯತ್ಯಾಸ ಉಳಿದೀತು?
ತೆರೆಸಾ ಅಂತವರನ್ನು ಕಾಂಗ್ರೆಸ್ ಗೌರವಿಸಿದ ರೀತಿಯನ್ನು ಬಿಜೆಪಿ ಸರ್ಕಾರ ಕಲಿಯದೇ ಇದ್ದರೆ,ಶ್ರೀಗಳ ವಿಷಯದಲ್ಲಿ ಕಾಂಗ್ರೆಸ್ಸಿಗೂ-ಬಿಜೆಪಿಗೂ ಯಾವುದೇ ವ್ಯತ್ಯಾಸ ಉಳಿಯಲಾರದು. ತಪ್ಪಾಗಿದೆ ಅದನ್ನು ತಿದ್ದಿಕೊಂಡರೇ ದೊಡ್ಡವರಾಗಬಹುದೇ ಹೊರತು ಕೆಲಸಕ್ಕೆ ಬಾರದ ಸಬೂಬು ನೀಡುವುದರಿಂದಲ್ಲ.
ತಮ್ಮ ಸುತ್ತಮುತ್ತ ಹಲವಾರು ಸಮಕಾಲೀನರು ಮಠಗಳನ್ನೋ..ಮಂದಿರಗಳನ್ನೋ ಕಟ್ಟಿ.. ಎಡೆ ಸೇವೆಯಲ್ಲೋ.. ಮಡೆ..ಸೇವೆಯಲ್ಲೋ.. ತೊಡೆಸೇವೆಯಲ್ಲೋ..ನಿರತರಾಗಿದ್ದಾಗ..ಈ ಮಹಾತ್ಮ.. ಜನಸೇವೆಯೇ ಜನಾರ್ದನನ ಸೇವೆ..ಕಾಯಕವೇ ಕೈಲಾಸ ಅಂತ ತಿಳಿದು..ನಡೆದು ದೇವರಾದರು
ರಾಷ್ಟ್ರೀಯ ಸಮ್ಮಾನಗಳು ದಿನೇ..ದಿನೇ…ಅಪಮೌಲ್ಯಗೊಳ್ಳುತ್ತಿರುವ..ಈ ದಿನಗಳಲ್ಲಿ..ಈ ಮಹಾತ್ಮನಿಗೆ..ಭಾರತರತ್ನ ಬೇಡ..ಯಾಕೆಂದರೆ…ರತ್ನ ವನ್ನು..ಯಾರೂ..ರತ್ನ ಅಂತ ಕರೆದು ಗುರುತಿಸುವ ಅಗತ್ಯ ಇಲ್ಲ..
ಒಮ್ಮೆ ಯೋಚಿಸಿ..ಈಗಿರುವ..”ಭಾರತರತ್ನ” ಗಳ ಭಾವಚಿತ್ರ ಗಳ ಸಾಲಿನಲ್ಲಿ… ಈ “ದೇವರ” ಭಾವಚಿತ್ರವನ್ನು..ಕಲ್ಪಿಸಿಕೊಳ್ಳಲೂ ಸಾಧ್ಯವೆ…
apt response.
bharataratna award will have to follow a process. Nominations should be sent by the state governments or some organisation. State bodies have failed in doing it. When pujya swamijy left this world, rules , regulations and processes cannot be sidestepped to announce to please the crowd. Hope people would have sense in understnding it. It was possible that te Goverment might be waiting for the Sri to get better before awarding. If the process is broen by the government, what value would remain in the award itself. I urge people to trust the current governemnt. They have not awarded it any one so far who do not deserve it.