ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 1, 2019

1

ಕುಮಾರರಾಮ

‍ನಿಲುಮೆ ಮೂಲಕ

– ವರುಣ್ ಕುಮಾರ್
(ವಾರಕ್ಕೊಂದು ವೀರರು)

Kumararamaಭಾರತದ ಹಿಂದೂ ಸಾಮ್ರಾಟ ಎಂದ ಕೂಡಲೇ ನಮ್ಮ ಸ್ಮೃತಿಪಟಲದಲ್ಲಿ ಶಿವಾಜಿ ಮಹಾರಾಜರ ಹೆಸರು ಬರುತ್ತದೆ. ಶಿವಾಜಿ ಮಹಾರಾಜರ ಆಡಳಿತ ವೈಖರಿ, ಮೊಘಲರ ದಾಳಿಯನ್ನು ಹಿಮ್ಮೆಟ್ಟಿಸಿದ ರೀತಿ, ಅವರ ರಾಜಕೀಯ ತಂತ್ರಗಾರಿಕೆಗಳು, ಎಂಥವರಿಗೂ ರೋಮಾಂಚನವನ್ನು ಉಂಟು ಮಾಡುತ್ತದೆ. ತನ್ನ ಅಲ್ಪಾವಧಿಯಲ್ಲಿ ಮೊಘಲರ ಸಾಮ್ರಾಜ್ಯವನ್ನು ಕೇವಲ ಉತ್ತರ ಭಾರತಕ್ಕೆ ಸೀಮಿತಗೊಳಿಸುವಲ್ಲಿ ಶಿವಾಜಿಯ ಪಾತ್ರ ಅಪಾರವಾದುದು. ಆದರೆ ಶಿವಾಜಿಯ ಪೂರ್ವ ಕಾಲದಲ್ಲಿ ದಕ್ಷಿಣ ಪ್ರಾಂತ್ಯಕ್ಕೆ ಮೊಘಲರ ದಾಳಿಯನ್ನು ಹಿಮ್ಮಟ್ಟಿಸುವಲ್ಲಿ ಯುವ ಅರಸ ಕುಮಾರರಾಮನ ಪಾತ್ರ ಮಹತ್ವದ್ದು. ಹಿಂದೂ ಸಾಮ್ರಾಜ್ಯಕ್ಕೆ ಭದ್ರವಾದ ಬುನಾದಿಯನ್ನು ಕೊಟ್ಟು ಮುಂದಿನ ೨೦೦ ವರ್ಷಗಳ ಕಾಲ ಅವರ ವಂಶಜರು ದಕ್ಷಿಣ ಪ್ರಾಂತ್ಯದಲ್ಲಿ ಹಿಂದೂ ಸಾಮ್ರಾಜ್ಯವನ್ನು ಪುನರುತ್ಥಾನಗೊಳಿಸಿದರು‌.

೧೨೮೫-೧೩೨೦ ರ ದಶಕದಲ್ಲಿ ಬಳ್ಳಾರಿ ಹಾಗೂ ಉತ್ತರ ಕರ್ನಾಟಕದ ಭಾಗದಲ್ಲಿ ಕುಮಾರ ರಾಮ ಹಾಗೂ ಅವರ ತಂದೆಯವರ ಆಡಳಿತವಿತ್ತು. ಕೆಲವೇ ಸಮಯಗಳ ಕಾಲ ಬದುಕಿದರೂ ವಿಜಯನಗರ ಸ್ಥಾಪನೆಯ ಭದ್ರ ಬುನಾದಿಗೆ ಮೊದಲ ಹೆಜ್ಜೆಯನ್ನಿಟ್ಟರು. ಕುಮಾರ ರಾಮನ ತಂದೆಯಾದ ಕಂಪ್ಲಿರಾಯರು ಉತ್ತಮ ಆಡಳಿತಗಾರನಾಗಿದ್ದು ತನ್ನ ಮಗನಾದ ಕುಮಾರರಾಮ ಹರೆಯಕ್ಕೆ ಬಂದ ನಂತರ ಯುದ್ಧ ತಂತ್ರದಲ್ಲಿ ಹಾಗೂ ಆಡಳಿತ ಶೈಲಿಯಲ್ಲಿ ಬಹಳಷ್ಟು ಬದಲಾವಣೆಗಳಾದವು.

ಬೇಡರ ವಂಶಕ್ಕೆ ಸೇರಿದ ಕುಮಾರ ರಾಮನ ಪೂರ್ವಜರು ಬಲ್ಲಾಳರ ಆಡಳಿತದಲ್ಲಿ ಹಲವಾರು ಹುದ್ಧೆಗಳನ್ನು ನಿಭಾಯಿಸಿ ಆಡಳಿತದಲ್ಲಿ ಪರಿಣತಿಯನ್ನು ಪಡೆದಿದ್ಧರು‌. ಬಳ್ಳಾರಿ ಭಾಗದ ಜನತೆಯು ಗಂಡುಗಲಿ ಕುಮಾರ ರಾಮ ಎಂಬ ಬಿರುದನ್ನು ನೀಡಿ ಅವನ ನೆನಪಿಗೆ ದೇವಾಲಯವನ್ನು ನಿರ್ಮಿಸಿದ್ದಾರೆ.

ಮೊಘಲ್ ಆಡಳಿತ ವ್ಯಾಪ್ತಿಯನ್ನು ದಕ್ಷಿಣಭಾರತಕ್ಕೆ ವಿಸ್ತರಿಸುವ ದೃಷ್ಟಿಯಿಂದ ಮೊಹಮ್ಮದ್ ಬಿನ್ ತುಘಲಕ್ ತನ್ನ ರಾಜಧಾನಿಯನ್ನು ಸ್ಥಳಾಂತರಿಸುವ ನಿರ್ಧಾರವನ್ನು ತೆಗೆದುಕೊಂಡಾಗ ಆ ಸೇನೆಯನ್ನು ತಡೆಯೊಡ್ಡುವಲ್ಲಿ ಕುಮಾರ ರಾಮನು ಸಫಲರಾಗಿದ್ಧರು. ತಂದೆ ಕಂಪ್ಲಿರಾಯರ ಜತೆಗೂಡಿ ಕಾಕತೀಯ, ವಾರಂಗಲ್ ಹೊಯ್ಸಳ ಹಾಗೂ ವೀರಬಲ್ಲಾಳರನ್ನು ಸೋಲಿಸಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿ ದಕ್ಷಿಣ ಪ್ರಾಂತ್ಯದಲ್ಲಿ ಬಲವಾದ ಅಡಿಪಾಯವನ್ನು ಕುಮಾರರಾಮನು ರಚಿಸಿದ್ಧರು, ಜೊತೆಗೆ ತುಘಲಕನ ಸೇನೆಯನ್ನು ಧೈರ್ಯದಿಂದ ಸೆಣೆಸಿ ಗೆದ್ದರು. ತನ್ನ ಕಾಲ ನಂತರ ಸಂಬಂಧಿಕರಾದ ಹಕ್ಕ ಬುಕ್ಕರಿಗೆ ವಿಜಯನಗರ ಸಾಮ್ರಾಜ್ಯವನ್ನು ನಿರ್ಮಿಸಲು ಸುಗಮವಾದ ಹಾದಿಯನ್ನು ಮಾಡಿಕೊಟ್ಟರು.

ಕುಮಾರ ರಾಮನ ಆಡಳಿತವು ಕೆಲವೇ ವರ್ಷಗಳಿಗೆ ಸೀಮಿತವಾಗಲು ಪ್ರಮುಖವಾಗಿ ಕೌಟುಂಬಿಕ ಸಮಸ್ಯೆಗಳೇ ಕಾರಣವಾದವು. ತಾನು ಪ್ರೀತಿಸುತ್ತಿದ್ಧ ಪ್ರೇಯಸಿಯು ರಾಜಕೀಯ ಕಾರಣಗಳಿಂದಾಗಿ ತಂದೆ ಮದುವೆಯಾಗಬೇಕಾಗಿ ಬಂತು. ಆದರೆ ಪ್ರೇಯಸಿಯು ಪಟ್ಟು ಬಿಡದೆ ಕುಮಾರ ರಾಮನನ್ನೇ ಒಲಿಸಲು ಪ್ರಯತ್ನ ಪಟ್ಟಳು. ತಾಯಿಗೆ ಸಮನಾದವಳಿಗೆ ಒಲಿಯುವುದು ತರವಲ್ಲ ಎಂದು ತಿಳಿದು ಕುಟುಂಬದಿಂದ ದೂರವಿರಲು ಕುಮಾರ ರಾಮ ನಿರ್ಧರಿಸಿದರು. ಇದು ತನ್ನ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಲು ಕಾರಣವಾಯಿತು. ಕುಮಾರರಾಮ ಒಲಿಯಲಿಲ್ಲ ಎನ್ನುವ ದ್ವೇಷದಲ್ಲಿ ಕಂಪ್ಲಿರಾಯರ ಬಳಿ ಕುಮಾರರಾಮನ ವಿರುದ್ಧ ಸುಳ್ಳು ದೂರನ್ನು ನೀಡಿದರು. ಇದರಿಂದ ಕುಪಿತಗೊಂಡ ಕಂಪ್ಲಿರಾಯರು ತನ್ನ ಮಗನೆಂಬ ಅಲೋಚನೆಯನ್ನು ಮಾಡದೆ ವಧೆ ಶಿಕ್ಷೆಯ ತೀರ್ಪನ್ನು ವಿಧಿಸಿದರು. ಆದರೆ ತನ್ನ ಸಹೋದರನಾದ ಚೆನ್ನಿಗ ರಾಯರು ಕುಮಾರ ರಾಮನ ಮೇಲಿನ ಸುಳ್ಳು ಆಪಾದನೆಗಳನ್ನು ತಾನೇ ಹೊತ್ತು ವಧೆ ಶಿಕ್ಷೆಗೆ ಒಳಗಾಗಿ ಕುಮಾರರಾಮನ ಪ್ರಾಣವನ್ನು ರಕ್ಷಿಸಿದರು. ಇಷ್ಟೆಲ್ಲಾ ಒಡಕುಗಳು ಇರುವಾಗಲೇ ರಾಜ್ಯದ ಆಡಳಿತದ ಹಾದಿ ಸಹಜವಾಗಿಯೇ ದಿಕ್ಕು ತಪ್ಪಲು ಶುರುವಾಗತೊಡಗಿತು. ಯಾವುದೇ ಕ್ಷಣದಲ್ಲೂ ಯುದ್ಧದ ವಾತವರಣ ಸೃಷ್ಟಿಯಾಗುವ ಭೀತಿ ಇತ್ತು. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿದ್ದ ಮೊಘಲ್ ಅರಸ ಮಹಮ್ಮದ್ ಬಿನ್ ತುಘಲಕ್ ಇದೇ ಸರಿಯಾದ ಸಂಧರ್ಭವೆಂದು ತಿಳಿದು ಕಂಪ್ಲಿಯ ಮೇಲೆ ಯುದ್ಧ ಸಾರಿದರು. ಮೊದಲೇ ಅರಾಜಕತೆಯು ತಾಂಡವವಾಡುತ್ತಿದ್ಧ ರಾಜ್ಯಕ್ಕೆ ಯುದ್ಧವು ಒಂದು ಹೊರೆಯಾಗಿ ಪರಿಣಮಿಸಿತು. ಆದರೂ ಛಲ ಬಿಡದೆ ಕುಮಾರರಾಮನು ಸೈನ್ಯವನ್ನು ಮುನ್ನಡೆಸಿ ಮೊಘಲರ ಜೊತೆ ಕೆಚ್ಚೆದೆಯಿಂದ ಹೋರಾಡಿ ರಣರಂಗದಲ್ಲಿಯೇ ತನ್ನ ಪ್ರಾಣವನ್ನು ಅರ್ಪಿಸಿದರು.

ಕುಮಾರ ರಾಮನ ಬಗ್ಗೆ ನಮ್ಮಲ್ಲಿ ಎಷ್ಟೋ ಜನರಿಗೆ ಪರಿಚಯವೇ ಇಲ್ಲದಿರಬಹುದು. ಆದರೆ ಬಳ್ಳಾರಿ ಭಾಗದಲ್ಲಿ ಈಗಲೂ ಅವನ ಸಾಹಸವನ್ನು ಜನ ಮಾತನಾಡಿಕೊಳ್ಳುತ್ತಿರುತ್ತಾರೆ. ಈ ರೀತಿ ನಮ್ಮ ನೆಲವನ್ನು ರಕ್ಷಿಸುವ ವೀರರ ಸಾಹಸ ಎಲ್ಲರಿಗೂ ತಿಳಿಯಬೇಕಾದುದು ನಮ್ಮ ಕರ್ತವ್ಯ.

ಮುಂದಿನ ವಾರ ಮತ್ತೊಂದು ಲೇಖನದೊಂದಿಗೆ

ವಂದೇ ಮಾತರಂ

1 ಟಿಪ್ಪಣಿ Post a comment
  1. ಏಪ್ರಿಲ್ 2 2019

    ಈ ಲೇಖನ ಕುಮಾರರಾಮನ ಚಿತ್ರಣವನ್ನು ತೀರಾ ಅಸ್ಪಷ್ಟವಾಗಿಸಿದೆ. ಐತಿಹಾಸಿಕ ಅಂಶಗಳನ್ನು ಗುರುತಿಸುವಲ್ಲಿ ಲೇಖಕರ ಉತ್ಸಾಹ ವಿಫಲವಾಗಿದೆ. ಕುಮಾರರಾಮನ ಕೋಟೆ, ವಾಸಸ್ಥಳ ಇರುವುದು ಕೊಪ್ಪಳ ಜಿಲ್ಲೆಯಲ್ಲಿ. ಲೇಖಕರು ಹೇಳಿರುವಂತೆ ಬಳ್ಳಾರಿಯಲ್ಲಿ ಅಲ್ಲ. ಕುಮಾರರಾಮ ದೊಡ್ಡ ರಾಜನೂ ಆಗಿರಲಿಲ್ಲ. ಅವನೊಬ್ಬ ಪುಟ್ಟ ಪಾಳೆಯಗಾರ.

    ಹೇಳುತ್ತ ಹೋದರೆ ಇಂತಹ ಸಾಕಷ್ಟು ವಿಷಯಗಳಿವೆ. ಲೇಖಕರು ಇನ್ನೊಮ್ಮೆ ಪರಿಷ್ಕರಿಸಿ ಬರೆದರೆ ಉತ್ತಮ.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments