ಎಲ್ಲದಕ್ಕೂ ಹಿಂದೂಗಳನ್ನು ದೂಷಿಸುವ ಮುನ್ನ …
– ಬೇಲಾಡಿ ದೀಪಕ್ ಶೆಟ್ಟಿ
So called ವಿಚಾರವಾದಿಗಳೇ, ಲಿಬರಲ್ಗಳೇ ದ್ವೇಷ ಮಾಡಬೇಡಿ, ಫೋಭೀಯಾ ಬೆಳೆಸಬೇಡಿ ಅನ್ನುವವರೇ,
ಅರ್ಥ ಮಾಡ್ಕೊಳ್ಳಿ.ನಮ್ಮ ಸಿಟ್ಟು ಇರೋದು ಯಾವುದೇ ಧರ್ಮದ ಮೇಲಲ್ಲ. ಹಾಗಂತ ದ್ವೇಷನೂ ಸಾಧಿಸುತ್ತಿಲ್ಲ, ಫೋಭೀಯಾನೂ ಹುಟ್ಟು ಹಾಕುತ್ತಿಲ್ಲ.
ಅಲ್ಪಸಂಖ್ಯಾತಧರ್ಮದ ಹೆಸರಿನಲ್ಲಿ ಜಾತ್ಯಾತೀತತೆಯ ಸೋಗಿನಲ್ಲಿ, ಬಹುಸಂಖ್ಯಾತರ ಭಾವನೆಗಳಿಗೆ ರಾಷ್ಟ್ರ ಮತ್ತು ಜೀವನ ಪದ್ದತಿಯ ವಿಚಾರಗಳಲ್ಲಿ ನಮ್ಮ ಭಾವನೆಗಳಿಗೆ ಘಾಸಿ ಆದ್ರೂ ಸುಮ್ಮನೆ ಎಷ್ಟು ದಿನ ಅಂತ ತಾಳ್ಮೆಯಿಂದ ಇರೋದು. ಒಂದಲ್ಲ ಒಂದು ದಿನ ಆಕ್ರೋಶದ ಕಟ್ಟೆ ಒಡೆಯಲೇಬೇಕಲ್ಲವೇ.
ಅದೂ ಹೋಗ್ಲಿ, ಆರೈಕೆ ಕೇಂದ್ರದಲ್ಲಿ ಮಲ ವಿಸರ್ಜನೆ, ನರ್ಸ್ಗಳ ಎದುರು ಬಟ್ಟೆ ಬಿಚ್ಚೋದು, ನೋಟಿಗೆ ಬಾಯಲ್ಲಿ ಉಗುಳು ಹಚ್ಚೋದು. ಆಶಾ ಕಾರ್ಯಕರ್ತೆಯರ ಮೇಲಿನ ಹಲ್ಲೆ, ಮೊನ್ನೆ ಮೊನ್ನೆ ಪೋಲಿಸರ ಮೇಲೆ ಹಲ್ಲೆ , ಇಡೀ ದೇಶ ಪಕ್ಷಾತೀತವಾಗಿ ಸ್ವಲ್ಪ ವಿಚಾರದಲ್ಲಿ ವ್ಯತ್ಯಾಸ ವಿದ್ದರೂ ಸಾಮೂಹಿಕವಾಗಿ ಹೋರಾಡುವಾಗ,ಇವರ ಈ ಕಿರಿಕ್ಕು. ಎಲ್ಲರಂತೆ ಇರಲು ಏನು ಪ್ರಾಬ್ಲಂ. ಇದೇ ರೀತಿ ಅರಬ್ ದೇಶಗಳಲ್ಲಿ ಮಾಡಿದ್ರೆ ಏನು ಮಾಡ್ತಿದ್ದರು. ಇಲ್ಲಿ ಏನು ಮಾಡಿದ್ರು ನಡೀತಿದೆ ಅನ್ನೋ ಮನೋಭಾವನೆ. ಸರ್ವೇ ಜನೋ ಸುಖಿನೋ ಭವಂತು, ವಸುದೈವ ಕುಟುಂಬಕಂ ಅಂದವರಿಗೆ ಈ ಗತಿ.
ನೋಡಿ,ನಾವು ಎಷ್ಟು ದೇವರನ್ನು ಪೂಜೆ ಮಾಡ್ತೀವಿ ಅಂದ್ರೆ ಒಂದು ದೈವದ ಕಲ್ಲಿನಿಂದ ಹಿಡಿದು ಶಿವ,ಲಿಂಗ,ದೇವಿ,ಹನುಮಂತ,ನಾಗ,ಗೋವು ಹೀಗೆ ಎಲ್ಲರನ್ನೂ ಸರಿ ಸುಮಾರು ಮುಕ್ಕೋಟಿ ದೇವತೆಗಳ್ಳನ್ನು ಪೂಜೀಸುವವರಿಗೆ ಒಂದು ಅಲ್ಲಾ ಮತ್ತು ಒಂದು ಏಸು ಹೆಚ್ಚಾಗುವುದಿಲ್ಲ. ಆದರೆ ನಮ್ಮನ್ನು ಬಿಟ್ಟು ಯಾರು ಇರಬಾರದು , ಕಾಫೀರರು, ಜಿಹಾದ್ ಅಂದಾಗ ಸಿಟ್ಟು ಬರುತ್ತದೆ ,ಅದೂ ಪ್ರಾರಂಭದಲ್ಲಿ ಸಾತ್ವಿಕವಾಗಿಯೇ ತೋರಿಸುತ್ತೇವೆ.
ಹಿಂದೂತ್ವ ಅಂದ್ರೆ ಒಂದು ಜೀವನ ಪದ್ದತಿ. ಇದನ್ನು ಸರ್ವೋಚ್ಚ ನ್ಯಾಯಾಲಯವೂ ಒಪ್ಪಿಕೊಂಡಿದೆ. ರಿಲೀಜಿಯನ್ ಪರಿಕಲ್ಪನೆ ನಮ್ಮಲ್ಲಿ ಇಲ್ಲ. ಧರ್ಮ ಅಂದರೆ ರಾಜ ಪಾಲಿಸಬೇಕಾದ ಧರ್ಮ ರಾಜಧರ್ಮ , ತಾಯಿ ಪಾಲಿಸಬೇಕಾದ ಧರ್ಮ ಮಾತೃ ಧರ್ಮ ಹೀಗೆ. ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಭಾರತ ಯಾವಾಗಲೂ ತೋರಿದೆ, ಯಾಕೆಂದರೆ ಅದು ಕ್ಷಾತ್ರ ಧರ್ಮ. ಭಾರತ ಇನ್ನೊಂದು ದೇಶದ ಮೇಲೆ ತಾನೇ ಯುದ್ದ ಮಾಡಿದ ಇತಿಹಾಸ ಸಿಗುವುದೇ ಇಲ್ಲ.
ನೋಡಿ, ಭಾರತೀಯ ಜೀವನ ಪದ್ದತಿಯಲ್ಲಿ ಪುನರ್ಜನ್ಮ ದ ನಂಬಿಕೆ ಇದೆ , ಆತ್ಮದ ಪರಿಕಲ್ಪನೆ ಇದೆ. ಮೊಕ್ಷ , ಮರಣಾನಂತರ ಜೀವನ, ಆತ್ಮದ ಪರಿಚಲನೆ, ಅತಿಮಾನುಷ ಶಕ್ತಿಯ ಹುಡುಕಾಟ ಹೀಗೆ ಹುಡುಕಾಟ ಸಾಗುತ್ತಲೇ ಇದೆ. ಆಧ್ಯಾತ್ಮ ಅದು ಭಾರತದ ಆತ್ಮ. ಭಾರತ ಹೀಗೆ ಇರಲು ಕಾರಣ ಇಲ್ಲಿಯ ಆಧ್ಯಾತ್ಮ. ಇಲ್ಲಿ ವಿಜ್ಞಾನ ಆಧ್ಯಾತ್ಮದೊಂದಿಗೆ ಮಿಳಿತಗೊಂಡಿದೆ. ಅದನ್ನು ಅರ್ಥ ಮಾಡಿಕೊಂಡವರು, ಸಾಧಿಸಿದವರು ನಮಗೆ ಧರ್ಮ ಮೀರಿ ದೇವರಾಗುತ್ತಾರೆ ಉದಾಹರಣೆಗೆ ಶಿರ್ಡಿ ಸಾಯಿಬಾಬಾ,ಯಾವತ್ತಾದರೂ ಅವರು ಯಾರು ಅವರು ಧರ್ಮ ಯಾವುದು ಎಂದು ಪ್ರಶ್ನೆ ಮಾಡಿದ್ದಿವಾ, ನಾವು ಅವರ ಸಮಾಧಿಗೆ, ದೇವಸ್ಥಾನ ಕ್ಕೆ ಹೋಗುವುದಿಲ್ಲವೇ. ಶಿಶುನಾಳ ಶರೀಫರ ಗದ್ದಿಗೆಗೆ ಗೋವಿಂದ ಭಟ್ಟರ ಗದ್ದಿಗೆಯ ಜೊತೆ ಜೊತೆಗೆ ನಮಸ್ಕರಿಸುವುದಿಲ್ಲವೇ. ಯೋಗಿಯ ಆತ್ಮಚರಿತ್ರೆಯಲ್ಲಿ ಇರುವಂತೆ ಏಸು ಯೋಗ, ಆಧ್ಯಾತ್ಮ ಜ್ಞಾನ ಪಡೆಯಲು ಭಾರತಕ್ಕೆ ಬಂದಿದ್ದರು. ಇವತ್ತಿಗೂ ಆಧ್ಯಾತ್ಮ ದ ವಿಷಯದಲ್ಲಿ ಭಾರತ ಜಗತ್ತಿನಲ್ಲಿ ವಿಶ್ವವಿದ್ಯಾಲಯವೇ ಆಗಿದೆ. ಯಾಕೆಂದರೆ ಪಾಶ್ಚಿಮಾತ್ಯ ಭೋಗ ಜಗತ್ತಿಗೆ ಯೋಗಿಗಳಾಗಲು ಯೋಗ ಧ್ಯಾನ ಹೇಳಿಕೊಟ್ಟವರು ನಾವು ಭಾರತೀಯರು.
ಚರಕ ಸಂಹಿತೆ, ವೈಮಾನಿಕ ಸಂಹಿತೆ, ಸುಶ್ರೂತ ಸಂಹಿತೆ, ಖಗೋಳ ವಿಜ್ಞಾನ ಹೀಗೇ ಹಲವಾರು ಸಂಶೋಧನೆಗಳನ್ನು ವೈಜ್ಞಾನಿಕವಾಗಿ ಆಧ್ಯಾತ್ಮ ದ ನೆಲೆಗಟ್ಟಿನಡಿ ನೀಡಿದ ಭಾರತದಲ್ಲಿ ಇವಾಗ ನಡೆಯುತ್ತಿರುವುದೇನು, ನಮ್ಮ ಪ್ರತಿಯೊಂದು ಆಚರಣೆಗಳೆಲ್ಲವನ್ನು ಪ್ರಶ್ನಿಸುವುದು ಇದು ಸರಿಯಾ. ನಾನು ಯಾರಿಗೂ ತೊಂದರೆ ಮಾಡದೇ ನನ್ನ ಆಚಾರ ವಿಚಾರಗಳನ್ನು ಅನುಸರಿಸಲು ಮುಂದಾದರೆ ಮೌಢ್ಯತೆ ಕಂದಾಚಾರ ದ ಹೆಸರಲ್ಲಿ ಕೊಂಕು ಮಾತುಗಳು. ನಮಗೆ ನನ್ನ ಆಧ್ಯಾತ್ಮ ಸಾಧನೆಗೂ ಅಡ್ಡಿ ಆತಂಕಗಳು. ಯೋಗದ ಬಗ್ಗೆ ಅನ್ಯ ಧರ್ಮದ ಹೆಸರಿನಲ್ಲಿ ಕೊಂಕು ಮಾತನಾಡಿರಿ , ವಿರೋಧಿಸಿದಿರಿ. ನಾವು ದ್ವೇಷ ಮಾಡುತ್ತಿಲ್ಲ, ಸಿಟ್ಟು ಹೊರಹಾಕುತ್ತಿದ್ದೇವೆ ಅಷ್ಟೇ . ಅದು ಈಗ ನಿಮಗೆ ದ್ವೇಷದಂತೆ ಕಂಡರೆ ತಪ್ಪಲ್ಲ. ಐಸಿಸ್ ಕೌರ್ಯಗಳ್ಳನ್ನ್ನು ನೋಡೀದ ಮೇಲೆ ಭಯ ಎನ್ನುವುದು ಹುಟ್ಟಿಕೊಳ್ಳುತ್ತದೆ, ಇದು ಸಹಜ ಕೂಡಾ. ಅದಕ್ಕೆ ಐಸಿಸ್, ಆಲ್ ಖೈದಾ ದವರೀಗೆ ಭಯೋತ್ಪಾದಕರು ಎನ್ನುವುದು. ಇವುಗಳ ಕಬಂಧ ಬಾಹುಗಳು ಭಾರತದಲ್ಲಿ ಚಾಚಲು ಪ್ರಯತ್ನಿಸುತ್ತಿರುವುದು ಎಲ್ಲರಿಗೂ ತಿಳಿದ ವಿಷಯವೇ. ಎಲ್ಲರೊಂದಿಗೆ ಪ್ರೀತಿಯೊಂದಿಗೆ ಬದುಕಿದರೆ ಪರವಾಗಿಲ್ಲ, ಅದೇ ಜಿಹಾದ್ ಎಂದರೆ ಸಮಸ್ಯೆ ಶುರು.
ಅನಕ್ಷರಸ್ಥರು ಅಂತ ಹೇಳೋ ಜನಕ್ಕೆ ಜ್ಞಾನಿಗಳು ಹೇಳುವುದನ್ನು ಕೇಳೋ ತಾಳ್ಮೆಯಾದರೂ ಬೇಕು. ಇವರಿಗೆ ಕೋವಿಡ್ ಬಗ್ಗೆ 22 ದಿನಗಳ ಲಾಕ್ ಡೌನ್ ಮುಗಿದ ಮೇಲೂ ಗೋತ್ತಿಲ್ಲ, ಅನಕ್ಷರಸ್ಥರು ಅಂಥ ಒಪ್ಪಿಕೊಳ್ಳೋಣ ಅಂದ್ರೆ ಇವರು ನಾಗರಿಕ ತಿದ್ದುಪಡಿ ಕಾಯ್ದೆ , ಸಂವಿಧಾನ ಹಕ್ಕುಗಳು ಅಂತ ಮಾತನಾಡ್ತಾರೆ. ಹೀಗೆ ಎರಡು ರೀತಿಯಲ್ಲಿ ವ್ಯವಹರಿಸುವವರನ್ನು ನಂಬುವುದಾದರೂ ಹೇಗೆ. ದೇಶದ ಸಂಕಷ್ಟದ ಪರಿಸ್ಥಿತಿಯಲ್ಲೂ ಇಂಥವರನ್ನು ಬೆಂಬಲಿಸುವ ರಾಜಕೀಯ ನಾಯಕರು ಇನ್ನು ಮುಂದಿನ ದಿನಗಳಲ್ಲಿ ಏನೂ ಮಾಡಲು ಹೇಸುವುದಿಲ್ಲ. ಸಮಾನ ನಾಗರಿಕ ಸಂಹಿತೆ ಬರಲೇಬೇಕು. ನಾನು ಹೇಳುತ್ತಿಲ್ಲ , ಬಾಬಾ ಸಾಹೇಬ ಅಂಬೇಡ್ಕರ್ ರವರು ಬರೆದ ಸಂವಿಧಾನದಲ್ಲಿ ಅವರು ಸೇರಿಸಿದ್ದಾರೆ, ಅದು ಸರ್ಕಾರದ ಕರ್ತವ್ಯವಾಗಿದೆ. ಸಮಾನ ನಾಗರಿಕ ಸಂಹಿತೆ ಬಂದು ಮೇಲೆ ಸಂವಿಧಾನ ಜಾರಿಗೆ ಬಂದ ನಂತರ ಚರ್ಚೆಯಾಗದೇ ಸೇರಿಸಿದ ಜ್ಯಾತ್ಯಾತೀತತೆ ಶಬ್ದಕ್ಕೂ ಸ್ವಲ್ಪ ಬೆಲೆ ಬರಬಹುದು. ಯಾರು ಭಯ ಉತ್ಪಾದಿಸುವ ಕೃತ್ಯಗಳನ್ನು ಎಸಗುತ್ತಾರೋ ಅದೇ ಸಮುದಾಯದ ಜನ ಆ ಕೃತ್ಯಗಳನ್ನು, ವಿಚಾರಗಳನ್ನು ತೀವ್ರ ವಾಗಿ ವೀರೋಧಿಸಿ ರಾಷ್ಟ್ರವಾದಿ ಚಿಂತನೆಗಳನ್ನು ಬೆಂಬಲಿಸಿದರೆ ಮೇಲೇ ಹೇಳಿದ ಫೋಬಿಯಾವನ್ನು ಚಿವುಟಿ ಹಾಕಬಹುದು.
ನಮ್ಮ ಜೀವನವೆನೋ ಹೇಗೋ ಕಳೆಯಬಹುದು. ಆದರೆ ಮುಂದಿನ ತಲೆಮಾರಿನ ಗತಿಯೇನು? ಹಿರಿಯರು ಕಾಪಾಡಿಕೊಂಡು ಬಂದ ನಾಗರೀಕತೆಯ ಸಂಸ್ಕೃತಿ ಸಂಪ್ರದಾಯದ ಗತಿ ಏನು? ಒಂದು ಕಾಲದಲ್ಲಿ ಹಿಂದುಗಳಿಂದ ತುಂಬಿದ್ದ ಪಾಕಿಸ್ತಾನ,ಬಾಂಗ್ಲಾದೇಶ,ಕಾಶ್ಮೀರದ ಗತಿ ಇವತ್ತಿಗೇನಾಗಿದೆ? ಅದು ಬಿಡಿ. ಇದೇ ಬೆಂಗಳೂರಿನ ಪಾದರಾಯನಪುರದ ಸ್ಥಿತಿ ಏನಾಗಿದೆ? ನಮ್ಮ ಹಿರಿಯರು ನಮ್ಮ ನಾಗರೀಕತೆ ಹೀಗೆ ಬೆಳೆಸಿದ್ದಕ್ಕೆ ನಾವು ಇನ್ನೂ ವಿಚಾರ ವಿಮರ್ಶೆ ಮಾಡುತ್ತಾ ಇದ್ದೇವೆ. ಇಲ್ಲವಾಗಿದ್ದರೆ ಭಾರತ ಇನ್ನೊಂದು ಸಿರಿಯಾ ಆಗಿದ್ದರೂ ಅಚ್ಚರಿಯಿಲ್ಲ. ಯಾಕೆಂದರೆ ಸಿರಿಯಾದ ಜೊತೆಗೆ ಬೆಲ್ಜಿಯಂ ದೇಶದ ಕಥೆಯೂ ನಮ್ಮ ಕಣ್ಣೆದುರೇ ನಡಿತಾ ಇದೆ. ಇಷ್ಟೆಲ್ಲಾ ಆದರೂ ನಮಗೆ ಮಾನವೀಯತೆ ಇದೆ, ವಿಶ್ವದ ಇತರ ರಾಷ್ಟ್ರಗಳಿಂದ ಮಾನವೀಯತೆ ಬಗ್ಗೆ ಪಾಠ ಹೇಳಿಸಿಕೊಳ್ಳುವಂತಹ ಪರಿಸ್ಥಿತಿ,ದರ್ದು ನಮ್ಮಗಿನ್ನೂ ಬಂದಿಲ್ಲ ಎಂಬುದು ನನ್ನ ಭಾವನೆ. ಇದು ನಮ್ಮ ನಿಲುವು.
ಆದ ಕಾರಣ ಸೆಕ್ಯುಲರ್ ಮತ್ತು ಲಿಬರಲ್ಲುಗಳು ಹಿಂದುಗಳಿಗೆ ಬುದ್ಧಿ ಹೇಳಿಕೊಂಡು ಆತ್ಮವಂಚನೆ ಮಾಡಿಕೊಳ್ಳುವ ಬದಲು ಅವರಿಗೆ ಬದಲಾಗಲು ಬುದ್ಧಿ ಹೇಳಿ.
ಓಂ ಶಾಂತಿ
ಚಿತ್ರಕೃಪೆ : https://www.dnaindia.com/