ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 24, 2020

ದೇಶ ಹಾಳಾದರೂ ‘ಅವರಿಗೆ’ ನೋವಾಗಬಾರದು ನೋಡಿ

‍ನಿಲುಮೆ ಮೂಲಕ

– ಅಜಿತ್ ಶೆಟ್ಟಿ ಹೆರಂಜೆ

ಇವತ್ತು ಇಡೀ ವಿಶ್ವ ಕೊರೋನಾ ಮಹಾ ಮಾರಿಯ ವಿರುದ್ಧ ಯುದ್ಧ ಮಾಡುತ್ತಿದೆ.ವಿಶ್ವದ ದಿಗ್ಗಜ ರಾಷ್ಟ್ರಗಳೇ ಇದರ ವಿರುದ್ದ ಮಂಡಿಯೂರಿ ಕುಳಿತಿವೆ. ರೋಗದ ಪಸರುವಿಕೆ ಮತ್ತು ರೋಗದಿಂದ‌ ಆಗುತ್ತಿರುವ ಸಾವು ಇವೆರಡನ್ನು ತಹಬಂದಗಿ ತರುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಇಂತಹಾ ಸಮಯದಲ್ಲಿ‌ ಭಾರತ ಈ ಮಹಾಮಾರಿಯ ವಿರುದ್ಧ ಸಮರ್ಥವಾಗಿ ಸೆಣಸುತ್ತಿದೆ. ಇದು ಸಾಧ್ಯವಾಗಿದ್ದು ಮೋದಿಯವರ ಸಮರ್ಥ ನಾಯಕತ್ವದ ಜೊತೆಗೆ ಮೋದಿಯಂತಹ ನಾಯಕನಿಗೆ‌ ಹೆಗಲಿಗೆ ಹೆಗಲು ಕೊಟ್ಟು ನೆಡೆಯುತ್ತಿರುವ ಬಹುಸಂಖ್ಯಾತ ಭಾರತಿಯರು ಸಹಕಾರದಿಂದ, ಇವರು ಪ್ರದರ್ಶನ ಮಾಡತ್ತಿರುವ ಸಾಮಾಜಿಕ ಬದ್ದತೆಯಿಂದಾಗಿ ಇದು ಸಾಧ್ಯವಾಗಿದ್ದು. ಎಲ್ಲದರಲ್ಲೂ ತಾನು ದೊಡ್ಡವ ಎನ್ನುವ ಅಮೇರಿಕಾದಲ್ಲಿ‌ ಜನ ಲಾಕ್‌ ಡೌನ್ ಗೆ ಸಮ್ಮತಿಸುತ್ತಿಲ್ಲ. ಅಲ್ಲಿಯ ನಾಗರೀಕರಿಗೆ ತಮ್ಮ ಉದ್ಯೋಗ ಮತ್ತು ಹಣದ ಚಿಂತೆ‌ ಬಿಟ್ಟರೆ, ಸಮಾಜ‌ ಹಾಗು ದೇಶದ ಬಗ್ಗೆ ಯಾವುದೆ ಬದ್ದತೆ ಇದ್ದಂತೆ ತೋರುತ್ತಿಲ್ಲ.‌ ಬಹುಶಃ ಇದೆ ಕಾರಣಕ್ಕೆ ಇವತ್ತು ಅಮೇರಿಕಾದಲ್ಲಿ‌ ವಿಶ್ವದಲ್ಲೇ ಅತ್ಯಂತ ಹೆಚ್ಚು ಕೊರೋನಾ ಸೋಂಕಿತರು ಇರುವುದು ಮತ್ತು ಸಾವು ಆಗಿರೋದು.

ತಬ್ಲಿಕಿ ಜಮಾತ್ ಕೊಟ್ಟ ಉಪಟಳದ ಮಧ್ಯೆಯೂ, ಕೊರೋನಾ ಸಮಸ್ಯೆಯನ್ನು ಭಾರತ ಇಲ್ಲಿಯ ತನಕ ಸಮರ್ಥವಾಗಿಯೇ ಎದುರಿಸುತ್ತಿದೆ. ಭಾರತದ ಬಹುಸಂಖ್ಯಾತ ಹಿಂದುಗಳೇ ಇರಲಿ ಅಥವ ಅಲ್ಪಸಂಖ್ಯಾತರಾದ ಸಿಖ್,ಜೈನ,ಬೌದ್ಧ,ಕ್ರೈಸ್ತರೇ ಇರಲಿ ಎಲ್ಲರೂ ತಮ್ಮ‌ ಧಾರ್ಮಿಕ‌ ನಂಬಿಕೆ ಮತ್ತು ಆಚರಣೆಗಳನ್ನು ‌ಸರ್ಕಾರ ಪ್ರಸ್ತುತ ಹೊರಡಿಸಿರುವ ಆದೇಶದ ಅನ್ವಯ ಅದಕ್ಕೆ ಚ್ಯುತಿ ಬಾರದ ರೀತಿಯಲ್ಲಿ ನಡೆಸಿಕೊಂಡು ಬರುತ್ತಿವೆ. ಹೌದು ಮೊದಮೊದಲಿಗೆ ಇದು ಕೊಂಚ ಕಷ್ಟ ಅನಿಸಿದರೂ ಬರಬರುತ್ತ ಇದನ್ನು ಬಹುತೇಕರು ರೂಢಿಸಿಕೊಂಡರು.ಈ ಸಂಬಂಧ ಮೋದಿಯವರು ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದ್ದನ್ನೇ ಇವರೆಲ್ಲ ಪಾಲಿಸಿದರು. ಅಂದ ಹಾಗೆ ಈ ಸಂದರ್ಭದಲ್ಲಿ ಸಮುದಾಯ ನೆಡೆದುಕೊಳ್ಳಬೇಕಾದ ರೀತಿ ರಿವಾಜುಗಳ ಬಗ್ಗೆ ಯಾವುದೇ ಸಮುದಾಯದ ಮುಖಂಡರ ಮುಖಾಂತರ ಸರ್ಕಾರ ಮಾರ್ಗಸೂಚಿಗಳನ್ನೇನು ತಲುಪಿಸಲಿಲ್ಲ. ಅಥವ ಅವರ ಸಮಾಜದ‌‌ ಮುಂಡರನ್ನು ವಿಶೇಷವಾಗಿ ಕರೆದು ಮಾತಾಡಿಸಿ ದೇಶ ಇರುವ ಈ ಸಂದಿಗ್ದ ಸಮಯದಲ್ಲಿ ನಿಮ್ಮ‌ ಸಮಾಜದ ಸಹಕಾರ ಬೇಕು ಎಂದ ಪ್ರತ್ಯೇಕವಾಗಿ ಕೂರಿಸಿ ಮಾತಾಡಿಸಲಿಲ್ಲ.

ಆದರೆ ಆ ಒಂದು ಸಮಾಜ.., ಹೌದು ಅದನ್ನ ಇವತ್ತು ನಾನು ಹಾಗೆಯೇ ಕರೆಯಬೇಕಾಗಿದೆ. ಕಾರಣ, #ಅವರ ಹೆಸರು ಹೇಳಿದರೆ ಬಹಳಷ್ಟು ಜನರಿಗೆ ಬಹಳ ಜಾಗದಲ್ಲಿ ಉರಿ ಹತ್ತುತ್ತದೆ. ಅಂತಹಾ ಆ ಒಂದು ಸಮಾಜ ಮಾತ್ರಾ ಯಾಕೋ ನಾವು ಭಾರತದಲ್ಲಿ ತಮ್ಮನ್ನ ತಾವು ಅತಿ ವಿಶಿಷ್ಟರು, ನಾವು ಈ ದೇಶದ ಮಕ್ಕಳಲ್ಲ #ಅಳಿಯಂದಿರು ಅಂದುಕೊಂಡಿದ್ದಾರೆ. ನಮಗೆ ದೇಶದ ಎಲ್ಲಾ ಸವಲತ್ತು ಸಿಗಬೇಕು ಬಿಟ್ರೆ ನಾವು ದೇಶಕ್ಕೆ ಏನೂ‌ ಕೊಡೋದಿಲ್ಲ. ಎಲ್ಲಿಯ ತನಕ ಕೊಡೋದಿಲ್ಲ ಅಂದ್ರೆ ನೀವು ದೇಶದ ನಾಗರೀಕರೋ ಅಂತ ಕೇಳಿದರೆ ಅದಕ್ಕೆ ದಾಖಲೆಯನ್ನೂ ಕೊಡೋದಿಲ್ಲ ಅನ್ನುವಷ್ಟರಮಟ್ಟಿಗಿನ ಉದ್ದತಟತನ ಪ್ರದರ್ಶನ ಮಾಡುತ್ತದೆ.‌ (ಇವರಲ್ಲಿ‌ ಇರುವ ಒಂದಷ್ಟು ರಾಷ್ಟ್ರ ಭಕ್ತರನ್ನು‌ ಹೊರತುಪಡಿಸಿ) ಇವರಲ್ಲೂ ಈ ತಬ್ಲಿಗಿಗಳು ಅನ್ನುವ ವರ್ಗವೋ..ಇವುಗಳ ಉಪಟಳ‌ ಕೇವ‌ಲ ಭಾರತಕ್ಕೆ ಸೀಮಿತವಾಗಿಲ್ಲ. ಕೆಲವು ಪತ್ರಿಕೆಗಳ ವರದಿಗಳ ಪ್ರಕಾರ ಇವರ ಹಾವಳಿಯಿಂದ ಇಡೀ ದಕ್ಷಿಣ ಏಶ್ಯಾದ ರಾಷ್ಟ್ರಗಳೇ ಕಂಗೆಟ್ಟಿವೆ.ಇವರನ್ನು ನಿಯಂತ್ರಿಸಲು ದೇಶದ ಬಹುತೇಕ ರಾಜ್ಯ ಸರ್ಕಾರಗಳು ಇವರ ಸಮುದಾಯದ ಮುಖಂಡರ ಜೊತೆ ಸಭೆ ಮಾಡಿ ನಿಮ್ಮ ಸಮುದಾಯದ ಸಹಕಾರ ದೇಶಕ್ಕೆ ಕೊರೋನಾ ನಿಯಂತ್ರಣ ಮಾಡೋದಕ್ಕೆ ಬೇಕು ಅಂತ ಕೇಳಿಕೊಳ್ಳುವ ಪ್ರಸಂಗ ಎದರಾಯಿತು.

ದೇಶದ ಬೇರೆ ಕಡೆ ಬಿಡಿ, ಕರ್ನಾಟಕದಲ್ಲಿ ಆದ ಘಟನೆಗಳನ್ನು ನೋಡುವ. ಬೇಂಗಳೂರಿನ ಸಾದಿಕ್ ಪಾಳ್ಯದಲ್ಲಿ ಅಲ್ಲಿಯ ನಿವಾಸಿಗಳಿಗೆ ಕೊರೋನಾ ಬಗ್ಗೆ‌ ಮಾಹಿತಿ ಕೊಡಲು ಹೋದ ಆಶಾ ಕಾರ್ಯಕರ್ತೆಯೆ ಮೇಲೆ ಹಲ್ಲೆ ಆಗುತ್ತದೆ, ಅಂದಹಾಗೆ ಈ ಹಲ್ಲೆ ಮಾಡೋದು #ಅವರೆ . ಆಶಾ ಕಾರ್ಯಾಕರ್ತೆ ಕರ್ತವ್ಯದ ಮೇಲೆ ಹೋದಾಗ ಅಲ್ಲಿ #ಅವರ ಮಸೀದಿಗಳಲ್ಲಿ ಧ್ವನಿವರ್ಧಕದ ಮುಖಾಂತರ ಯಾರೂ ಮಾಹಿತಿ ಕೊಡಬೇಡಿ ಎಂದು‌ ಅನೌನ್ಸ್ ಮಾಡ್ತಾರೆ. ಇವರ ಬಗ್ಗೆ ಮೊದಲು ಟಿವಿಯಲ್ಲಿ ಬರುತ್ತೆ, ನಂತರ ಅವರ ಮನೆಗೆ ಉಪ ಮುಖ್ಯಮಂತ್ರಿ ಅಶ್ವತ್ ನಾರಾಯಣ್ ಅವರೂ ಹೋಗ್ತಾರೆ. ಆ ಸಂದರ್ಭದಲ್ಲಿಯೂ ಆಶಾ ಕಾರ್ಯಕರ್ತೆ #ಅವರು ಆಕೆಯ ಮೇಲೆ‌ ಹೇಗೆ ಹಲ್ಲೆ ಮಾಡಿದರು ಎನ್ನುದನ್ನು ಹೇಳುತ್ತಾರೆ. ಆದರೆ ಹಲ್ಲೆ ಮಾಡಿದವರ ಮೇಲೆ ಪೊಲೀಸರು ಆ ಸಂದರ್ಭದಲ್ಲಿ ಯಾವುದೇ ಸ್ವಯಂಪ್ರೇರಿತ ದೂರನ್ನು ದಾಖಲು ಮಾಡೋದಿಲ್ಲ. ಇದನ್ನು ಟ್ವಿಟರ್ ಮುಖಾಂತರ ಬೆಂಗಳೂರಿನ ಪೋಲೀಸ್ ಆಯುಕ್ತರ ಬಳಿ ಕೇಳಿದಾಗ ಅವರು ಆಶಾ ಕಾರ್ಯಕರ್ತೆ ದೂರು ಕೊಟ್ಟರಷ್ಟೇ ಕಾರ್ಯಾಚರಣೆ ಮಾಡೋದಾಗಿ ಹೇಳುತ್ತಾರೆ. ಇದರ ಬಗ್ಗೆ ಮರು ಪ್ರಶ್ನೆ ಮಾಡಿದ ಯುವಕನ ಮೇಲೆಯೇ ಕೇಸು ಹಾಕೋದಾಗಿ‌ ಪೋಲೀಸ್ ಆಯುಕ್ತರು ಬೆದರಿಸುತ್ತಾರೆ. ನೋಡಿ ನಾವು ಅವರ ಬಗ್ಗೆ ಎಷ್ಟು ಸಹಿಷ್ಣುಗಳು. ಜನಸಾಮನ್ಯರು ಬಿಡಿ, ಪೊಲೀಸರು ಕೂಡ ಹಾಗೆಯೆ. ಬೆಂಗಳೂರಿನ ಸಂಜಯ ನಗರದಲ್ಲಿ ಇದೇ #ಅವರು ಪೋಲೀಸರ ಮೇಲೆ ಹಲ್ಲೆ ನಡೆಸುತ್ತಾರೆ. ಪಾದರಾಯನ ಪುರದಲ್ಲಿ ಅಲ್ಲಿದ್ದ #ಅವರನ್ನ ಕ್ವಾರಂಟೈನ್ ಮಾಡಲು ಹೋದಾಗ #ಅವರು ಗುಂಪು ಗುಂಪಾಗಿ ಬಂದು ವೈದ್ಯರ ಮೇಲೆ ಪೋಲೀಸರ ಮೇಲೆ ದಾಳಿ ಮಾಡುತ್ತಾರೆ. ನಮ್ಮ‌ ಸಯದಾಯದ ನಾಯಕರು ಬಾರದೆ, #ಅವರು ಹೇಳದೆ ನಾವು ಸರ್ಕಾರಕ್ಕೆ ಯಾವುದೇ ಮಾಹಿತಿ ಕೊಡೋದಿಲ್ಲ ಅನ್ನುತ್ತಾರೆ. ಇಷ್ಟಾಗಿಯೂ #ಅವರ ಸುದಾಯದ ನಾಯಕ ಎಂದೆನಿಸಿಕೊಂಡ ಜಮೀರ್ ಅಹ್ಮದ್ #ಅವರನ್ನು ಸಮರ್ಥಿಸಿಕೊಳ್ಳುತ್ತಾರೆ. ಸರ್ಕಾರ ವೈದ್ಯರನ್ನು ಕಳಿಸುವಾಗ #ಅವರ ಅನುಮತಿ ಪಡೆದು ಅವರ ಜಾಗಕ್ಕೆ ಹೋಗಬೇಕಿತ್ತು ಅನ್ನುತ್ತಾರೆ. ಇದರ ಜೊತೆಗೆ ರಾಜ್ಯದ‌ ಬೇರೆ ಬೇರೆ ಕಡೆ ಅದೆಷ್ಟು ಮಸೀದಿಗಳಲ್ಲಿ #ಅವರಿಗೆ ಸಮಾಹಿಕ‌ ಪ್ರಾರ್ಥನೆ ನಿಷಿದ್ದ ಎಂದು ಗೊತ್ತಿದ್ದೂ ಅದರ ಉಲ್ಲಂಘನೆ ‌ಮಾಡಿ‌ ಕೊನೆಗೆ ಪೋಲೀಸರಿಂದ‌ #ಅವರು ಏಟು ತಿಂದಿಲ್ಲ? #ಅವರ ನಡವಳಿಕೆ ಒಮ್ಮೊಮ್ಮೆ ಹೇಗಿರುತ್ತದೆ ಎಂದರೆ ನಾವು ಇರೋದೆ ಹೀಗೆ, ನೀವು ನಿಮ್ಮ‌ ಕಾನೂನು ನಮ್ಮ‌ ಕೂದಲಿಗೂ ಸಮ‌ವಲ್ಲ‌ ಅನ್ನೋ ರೀತಿ‌.

ನಮ್ಮ ರಾಜ್ಯದಲ್ಲಿ ಅದೆಷ್ಟು ಬ್ರಾಹ್ಮಣರ ಅಗ್ರಹಾರಗಳಿಲ್ಲ, ಅದೆಷ್ಟು ದಲಿತರ ಕೇರಿ‌,ಅದೆಷ್ಟು ಮಡಿವಾಳರ, ಕುಂಬಾರ ಕೇರಿ‌ ಇಲ್ಲ? ಇಲ್ಲಿ‌ ಯಾವತ್ತಾದರೂ ಕೊರೋನಾ ಕಾರ್ಯಕರ್ತರ ಮೇಲೆ ದಾಳಿಗಳು ಆಗಿದೆಯಾ? ಅವರು ಕೇಳಿದ ಮಾಹಿತಿಗಳನ್ನು ಕೊಡಲು‌ ನಿರಾಕರಣೆ ಮಾಡಿದ್ದಾರಾ? ಅಲ್ಲಿಗೆ ಯಾವತ್ತಾದರು ಪೋಲಿಸ್ ಪಡೆ ಗಸ್ತು ತಿರಗಲು ಹೋಗಿತ್ತಾ? ಅಥವ ರಾಜ್ಯದ ಮುಖ್ಯಮಂತ್ರಿ ಕೊರೋನಾ ನಿಯಂತ್ರಣಕ್ಕೆ ನಿಮ್ಮ‌ ಸಮುದಾಯದ ಸಹಕಾರ ಬೇಕು ಎಂದು ಅಂಗಲಾಚಿ ಬೇಡಿಕೊಂಡಿದ್ದರಾ? ಇಲ್ಲಾ ತಾನೆ.. ಯಾರಿಗೂ ಕೊಡದ ಮತ್ತು ಕೇಳದ ವಿಶೇಷ ಸ್ಥಾನ ಇವರಿಗೆ ಮಾತ್ರ ಯಾಕೆ ಕೊಡಬೇಕು? … ಇವರಿಗೆ ದೇಶಕ್ಕಿಂತ ಮೊದಲು ತಮ್ಮ ಧರ್ಮ ತಮ್ಮ ನಂಬಿಕೆ ಮುಂದು.‌ ದೇಶ ಕುಲಗೆಟ್ಟೂ ಹೋದರೂ ಚಿಂತೆ ಇಲ್ಲ ಇವರ ಧರ್ಮದ ಆಚರಣೆ ಆಗಬೇಕು. ಅಂದಾಗೆ ಇವರಿಗೆ ದೇಶದಿಂದ ಸಿಗಬೇಕಾದ ಸವಲತ್ತು ದೇಶದ ಕಾನೂನಿನ,ಸಂವಿಧಾನದ ಪ್ರಕಾರವೇ ಸಿಗಬೇಕು. ಆದರೆ‌ ಇವರು ದೇಶದ ಬಗ್ಗ ಯೋಚಿಸಬೇಕಾದಗ, ದೇಶಕ್ಕೆ ಕೊಡಬೇಕಾದಾಗ ಅದು ದೇಶದ ಸಂವಿಧಾನಬದ್ದವಾಗಿ ಅಲ್ಲ. ಬದಲಿಗೆ ಆಗ ಅವರಿಗ ಅವರ ಧರ್ಮ‌ ಮುಖ್ಯ ಅಗುತ್ತದೆ, ಅವರ ಧಾರ್ಮಿಕ ನಂಬಿಕೆ ಮುಖ್ಯ ಆಗುತ್ತದೆ. ಇದನ್ನೇ ನಮ್ಮ‌ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದು “ಅವರಿಗೆ ಮಾತೃ ಭೂಮಿ ಅನ್ನುವ ಯಾವುದೇ ಕಲ್ಪನೆ ಇಲ್ಲ, ಅವರಿಗೆ ಇರೋದು ಎರಡೇ, ದಾರ್ ಉಲ್ ಇಸ್ಲಾಮ್, ಮತ್ತು ದಾರ್ ಉಲ್ ಹರ್ಬ್. ಸದ್ಯ ಭಾರತ #ಅವರ ಪಾಲಿಗೆ ದಾರ್ ಉಲ್ ಹರ್ಬ್ ಅಷ್ಟೇ ”
ಎಂತಹಾ ಸ್ವಾರ್ಥಿಗಳು ನೋಡಿ ಇವರು. ಇಡೀ ದೇಶದಲ್ಲಿ ತಬ್ಲಿಗಿಗಳು ಮತ್ತು ಅವರ ಸಮರ್ಥಕರು ಭಾರತ ಸರ್ಕಾರಕ್ಕೆ ಕೊಟ್ಟ ಉಪದ್ರ ಎಷ್ಟು? ಇವರ ಉಪದ್ರವನ್ನು‌ ನಿಗ್ರಹಿಸಲು ಸ್ವತಃ ಎನ್ ಎಸ್ ಎ ಅಜಿತ್ ದೋವಲ್ ಅವರೇ ರಂಗ ಪ್ರವೇಶ ಮಾಡಬೇಕಾಯಿತು.

ದೆಹಲಿ, ಉತ್ತರಪ್ರದೇಶ ಮಧ್ಯಪ್ರದೇಶ ,ಮಹಾರಾಷ್ಟ್ರ, ಕರ್ನಾಟಕದಲ್ಲಿ ಇವರ ಕಪಿ ಚೇಷ್ಟೆ ಹೇಗಿತ್ತು, ಕ್ವಾರಂಟೈನ್ ಸಮಯದಲ್ಲಿ ಆರೋಗ್ಯ ಸಿಬ್ಬಂದಿಗಳ ಜೊತ ದುರ್ವ್ಯವಹಾರ, ಕ್ವಾರಂಟೈನ್ ವಾರ್ಡಿನಲ್ಲೆ ಮಲ ಮೂತ್ರ ವಿಸರ್ಜನೆ, ಯಾರಿಗೂ ಇಲ್ಲದ ವಿಶೇಷ ಸೌಲಭ್ಯದ ಕೋರಿಕೆ. ಎಷ್ಟು ಗೋಳಾಡಿಸಿದರು ಇವರು ಸರಕಾರವನ್ನ..? ಇಂತಹಾ ಕಾರಣಗಳಿಂದಾಗಿಯೇ ಸರ್ಕಾರ ಇವತ್ತು ವೈದ್ಯಕೀಯ ಸಿಬ್ಬಂದಿಯ ರಕ್ಷಣೆಗೆ ಸುಗ್ರೀವಾಜ್ನೆ ತರಬೇಕಾದ ಪರಿಸ್ಥಿತಿ ಉಂಟಾಯಿತು. ಇಂತವರ ನೀಚತನವನ್ನು ವಿರೋಧಿಸಿದರೆ ದೇಶದ ಬುದ್ದಿ ಜೀವಿಗಳು, ಗಂಜಿಗಿರಾಕಿಗಳು ಲಬೋ ಲಬೋ ಅಂತ ಬಾಯಿ ಬಡಿದುಕೊಂಡು ಹಿಂದುಗಳಿಂದ ಅಲ್ಪಸಂಖ್ಯಾತ #ಅವರ ಮೇಲೆ ದಬ್ಬಾಳಿಕೆ ಅಂತ ದೇಶ ವಿದೇಶಗಳಲ್ಲಿ ಪುಂಗಿ ಊದುತ್ತಾರೆ.ದೇಶದ ಬಿಜೆಪಿ ಸರ್ಕಾರದಲ್ಲಿ‌ #ಅವರ ನರಮೇಧ ನೆಡೆಯುತ್ತಿದೆ, ಕೊರೋನಾ ಸಮಯದಲ್ಲಿ ಸರ್ಕಾರ ಕೋಮುವಾದಿಯಾಗಿ ವ್ಯವಹರಿಸುತ್ತದೆ ಅನ್ನುತ್ತಾರೆ. ಅದನ್ನೆ ದೂರದ ಅರಬ್ ದೇಶದ ಯಾವನೋ ಒಬ್ಬ ದೊಣ್ಣೆ ನಾಯಕ ಭಾರತದ ವಿರುದ್ದ, ಭಾರತೀಯರ ವಿರುದ್ದ, ಅದರಲ್ಲೂ ಮೋದಿ, ಬಿಜೆಪಿ ಮತ್ತು ಸಂಘಪರಿವಾರದ ವಿರುದ್ದ ಜೊತೆಗೆ ಅರಬ್ ರಾಷ್ಟ್ರಗಳಲ್ಲಿ ಕೆಲಸ ಮಾಡುವ ಹಿಂದುಗಳ ವಿರುದ್ದ ಪಿತೂರಿ ಮಾಡಲು ಬಳಸುತ್ತಾನೆ. ಹೌದು ಇದೇ ಕಾರಣಕ್ಕೆ ಮಿತ್ರ ರಾಘವೇಂದ್ರ ಶೃಂಗೇರಿ ಫೇಸ್ ಬುಕ್ ಬಿಟ್ಟದ್ದು.. ‌ಕಾರಣ ಈ ದುಷ್ಟ ಕೂಟಗಳ ಉಪಟಳದಿಂದ ಬಚವಾಗಲು ಕೆಲಸ ಕಳೆದುಕೊಳ್ಳುವುದರ ಬದಲು ಫೇಸ್‌ಬುಕ್‌‌ ನಿಂದ ದೂರ ಹೋಗೋದೆ ಸೂಕ್ತ ಅಲ್ವಾ?

ಇವತ್ತು ರಾಜ್ಯದ ಪರಿಸ್ಥಿತಿ ಹೇಗಿದೆ ಅಂದ್ರೆ ರಾಜ್ಯದ ಮುಖ್ಯಮಂತ್ರಿಯರೇ #ಆಸಮುದಾಯದ ಬಗ್ಗೆ ಯಾರೇ ಮಾತನಾಡಿದರೂ ಅವರ ಮೇಲೆ ಕಟ್ಟುನಿಟ್ಟಿನ ಕ್ರಮ ತೆಗದುಕೊಳ್ಳಲಾಗುವುದು ಅಂದ್ರು. ಅವರು ಹಾಗೆ ಹೇಳಿ ಕಲವೇ ದಿನದಲ್ಲಿ ರಾಜ್ಯದ ಸುಮಾರು ೨೨ಕ್ಕೂ ಹೆಚ್ಚು ಬಿಜೆಪಿ ಮತ್ತು ಸಂಘ ಪರಿವಾರದ ಸದಸ್ಯರ ಮೇಲೆ ರಾಜ್ಯದ ಪೋಲೀಸರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿದರು. ನೆನಪಿರಲಿ ಸರ್ಕಾರಿ ಕರ್ತವ್ಯ ಮಾಡುತ್ತಿದ ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ಮಾಡಿದ #ಅವರ ಮೇಲೆ ಪೋಲೀಸರು ಇಷ್ಟು ಮತುವರ್ಜಿ ವಹಿಸಿ ಪ್ರಕರಣ ದಾಖಲು ಮಾಡಲಿಲ್ಲ. ಇರಲಿ ಸರ್ಕರ ಯಾರದ್ದೆ ಇದ್ದರೂ ಸಾಯೋದು, ಕೇಸು ಹಾಕಿಸಕೊಳ್ಳೊದು ನಮ್ಮಂತಹಾ ಸಂಘ ಪರಿವಾರದ ಕಾರ್ಯಕರ್ತರೆ, ನಮಗೆ ಇದರ ಬಗ್ಗೆ ಬೇಸರ ಇಲ್ಲ. ಕಷ್ಟ ಆಗ್ತದೆ,ಏನು ಮಾಡುವ , ನಮ್ಮಿಂದಾಗಿ ನಮ್ಮ ದೇಶ,ನಮ್ಮ ಪಕ್ಷ ನಮ್ಮ ನಾಯಕರಿಗೆ ತೊಂದರೆ,ಮುಜುಗರ ಆಗೋದು ನಮಗೂ ಇಷ್ಟ ಇಲ್ಲ.

ಆದರೆ ಒಂದು ಮಾತು, ಭಾರತದಂತಹ ರಾಷ್ಟ್ರದಲ್ಲಿ #ಅವರು ಸುರಕ್ಷಿತರಲ್ಲ ಅಂತಾದರೆ ಪ್ರಪಂಚದ ಯಾವುದೇ ಮೂಲೆಯಲ್ಲೂ ಅವರು ಸುರಕ್ಷಿತರಲ್ಲ. ಸದ್ಯಕ್ಕೆ ಭಾರತದಲ್ಲಿ ಅಸುರಕ್ಷಿತರು ಹಿಂದೂಗಳೇ. ಅದರಲ್ಲೂ ಸಂಘಪರಿವಾರದ ಕಾರ್ಯಕರ್ತರುಗಳು. ಈ ಲೇಖನದ ಕಾರಣಕ್ಕೆ ನಾಳೆ ನನ್ನ ಮೇಲೆ ಕೇಸ್ ಬಿದ್ದರೂ ಆಶ್ಚರ್ಯ ಇಲ್ಲ. ಯಾಕೆಂದರೆ ಹೇಳಿ.#ಅವರಿಗೆ ನೋವಾಗಬಾರದು ನೋಡಿ.

 

ಚಿತ್ರಕೃಪೆ : https://www.pharmaceutical-technology.com/features/coronavirus-affected-countries-india-measures-impact-pharma-economy/

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments