ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 27, 2020

ಅಂತರರಾಷ್ಟ್ರೀಯ ತೈಲ‌ ಮಾರುಕಟ್ಟೆ, ಭಾರತ‌ ಮತ್ತು ಮೋದಿ – ಭಾಗ 2

‍ನಿಲುಮೆ ಮೂಲಕ

– ಪ್ರಶಾಂತ್ ಪದ್ಮನಾಭ

ಭಾಗ 1 – ಜಾಗತಿಕ ಕಚ್ಚಾ ತೈಲದ ಬೆಲೆ ಮೈನಸ್ ಆಗಿರುವುದೇಕೆ? ಅದರ ಅರ್ಥವೇನು?

ಮೊದಲನೇ ಪೋಸ್ಟ್ನಲ್ಲಿ ಕಾಂಮೆಂಟ್ನಲ್ಲಿ ಯಾರೋ ಕೇಳಿದ ಪ್ರಶ್ನೆಗಳು, ಹಾಗು ಅದರ ಉತ್ತರ ಎಲ್ಲರಿಗೂ ತಲುಪಲಿ ಅನ್ನೋ ಉದ್ದೇಶದಿಂದ ಹೊಸ ಪೋಸ್ಟ್ ಹಾಕಿದ್ದೀನಿ. ಮೊದಲ ಪೋಸ್ಟ್ ನ ಉದ್ದೇಶ ಅಮೇರಿಕಾದಲ್ಲಿ WTI ನ ಬೆಲೆ ಹೇಗೆ ನೆಗೆಟಿವ್ ಆಯಿತು, ಹಾಗೆ ಆಗಿದ್ದಿರಿಂದ ಭಾರತದಲ್ಲೂ ಕಮ್ಮಿ ಮಾಡಿಯೆಂದು ಕೇಳುವುದು ಅವಿವೇಕತನ ಎಂಬುದಾಗಿತ್ತು. (ಅಮೇರಿಕಾದಲ್ಲಿ ಮಳೆಯಾದರೆ, ಮೋದಿ‌ ಭಾರತದಲ್ಲಿ‌ ಯಾಕೆ ಕೊಡೆ‌ ಹಿಡಿಯಲ್ಲಿಲ್ಲ ಅಂತ ಕೇಳುವ ಕಾಂಗ್ರೆಸ್ ಗೆ ಬಹುಪರಾಕ್‌ ಹೇಳವ ಮನಸ್ಥಿತಿಗೆ ಉತ್ತರ ಹೇಳುವುದು)

ಇದನ್ನೂ ಕೂಡ ಜಾಸ್ತಿ ಟೆಕ್ನಿಕಲಿಯಾಗಿ ಹೇಳದೆ, ಸರಳ ಭಾಷೆಯಲ್ಲಿ ಹೇಳುವ ಪ್ರಯತ್ನ ಮಾಡಿದ್ದೀನಿ.

ಪ್ರಶ್ನೆ:
1. ಜಗತ್ತಿನ ಕಚ್ಚಾ ತೈಲದ ಕ್ವಾಲಿಟಿ ನಿರ್ಧಾರವಾಗುವುದು 2 ಅಂಶಗಳಿಂದ. Low Sulphur ಕಂಟೆಂಟ್ ಮತ್ತು Low Density (Higher API). ಈ ಎರಡು ಅಂಶಗಳನ್ನ ಪರಿಗಣಿಸಿ Brent ಹಾಗೂ WTI compare ಮಾಡಿದ್ರೆ WTI ಗುಣಮಟ್ಟವೇ ಉತ್ತಮ.
2. ಎರಡನೆಯದು ತೈಲ its self is commodity. ಶೇರು ವ್ಯವಹಾರವನ್ನ ಸರಿಯಾಗಿ ಅರ್ಥ ಮಾಡ್ಕೊಳ್ಳಿ.
3. ಮೂರನೆಯದು WTI ಸೀಮಿತವಾಗಿ ಹೇಳೋದಾದ್ರೆ..ಅಲ್ಲಿರುವ Future Trading Agreement ಇರುವುದು Every 1000 Barrels ಗೆ. ಹಾಗಾಗಿ ಅದು negative Trade ಆದ್ರು ಅದನ್ನ ಕೊಂಡುಕೊಳ್ಳುವುದು ಕಷ್ಟ.
4. ನಾಲ್ಕನೆಯದು ಭಾರತದಲ್ಲಿ Oil rate ಏರಿರಲು ಮಖ್ಯ ಕಾರಣ ನಮ್ಮ Tax ವ್ಯವಸ್ಥೆ.
5. ಅಂತರರಾಷ್ಟೀಯ ಕಚ್ಚಾ ತೈಲದ ವೇಳೆ 20 ಡಾಲರ್ ಪ್ರತಿ ಬ್ಯಾರೆಲ್ ಆಗಿದೆ. ಹಾಗಾದ್ರೆ ಪೆಟ್ರೋಲ್ ಬೆಲೆ ಇನ್ನಷ್ಚು ಇಳಿಯಬೇಕಿತ್ತಲ್ಲವೇ..?

ಉತ್ತರ:

1. ಕ್ರೂಡ್ ಆಯಿಲ್ ನ ಗುಣಮಟ್ಟವನ್ನು ಕೇಲವ ಟೆಕ್ನಿಕಲಿ ಅಳಿಯಲು ಆಗುವುದಿಲ್ಲ. ಬ್ಯುಸಿನೆಸ್ ನಲ್ಲಿ ಬರಿ ಕೆಮಿಕಲ್ ಕಂಪೋಸಿಷನ್ ಅಳತೆಗೋಲು ಆಗಿರುವುದಿಲ್ಲ. ಕೆಮಿಕಲ್ ಕಂಪೋಸಿಷನ್ ಜೊತೆಗೆ functional ಮತ್ತು non -functional ಪ್ಯಾರಾಮೀಟರ್ಸ್ಗಳು ಇರುತ್ತವೆ . ನಮ್ಮ ಕಂಪನಿಯಲ್ಲಿ functional ಒಂದೇ, ಒಂದು ಸಪರೇಟ್ ಯೂನಿಟ್. 8000 ಸಾವಿರ ಉದೋಗಿಗಳು ಕೆಲಸ ಮಾಡುತ್ತಾರೆ ಹಾಗು ಹತ್ತಿರ ಬರಿ ಇದರ ವ್ಯಾಲ್ಯೂವಷನ್ 50 ಬಿಲಿಯನ್ ಡಾಲರ್. ಅಂದ್ರೆ ಇಡಿ ಕಂಪನಿಯ ಒಂದು ಬ್ಯುಸಿನೆಸ್ ಯೂನಿಟ್ ಇನ್ಫೋಸಿಸ್ಗಿಂತ 4 ಪಟ್ಟು ದೊಡ್ಡದು.

ಇನ್ನು WTI ಮಾತು ಬ್ರೆಂಟ್ ನ ಕೆಮಿಕಲ್ ಕಂಪೋಸಿಷನ್ಗೆ ಬಂದರೆ, ಅದು ಹೀಗಿದೆ. ಎರಡರಲ್ಲೂ 1% ಗಿಂತ ಕಮ್ಮಿ ಸಲ್ಫುರ್ ಇರುತ್ತದೆ ಹಾಗಾಗಿ ಎರಡು ಸಿಹಿ ಕ್ರೂಡ್ ಆಯಿಲ್ ಗಳೇ..
1. WTI – 0.29 ಪರ್ಸೆಂಟ್ ಸಲಫರ್ ಇದ್ದರೇ, ಬ್ರೆಂಟ್ ನಲ್ಲಿ 0 .4 ಪರ್ಸೆಂಟ್ ಸಲಫರ್ ಇರ್ತದೆ.
2. ಗ್ರಾವಿಟಿ ವಿಚಾರಕ್ಕೆ ಬಂದರೆ WTI 39 .೬ ಪರ್ಸೆಂಟ್ ಹಾಗು ಬ್ರೆಂಟ್ ನದ್ದು 38 ಪರ್ಸೆಂಟ್. ಹಾಗಾಗಿ ಬ್ರೆಂಟ್ ಹಗುರ ಮತ್ತು ಆದ್ಧರಿಂದ ಬ್ರೆಂಟ್ ಉತ್ತಮ ಎಂದು ಪರಿಗಣಿಸುತಾರೆ.

ಸಲ್ಫುರ್ WTI ನಲ್ಲಿ ಕಮ್ಮಿ ಇದ್ದರು, ಜಗ್ಗತ್ತಿನ 75 % ರಿಫೈನರಿ ವರ್ಕ್ ಆಗುವುದು 0.4% ಸಲ್ಫುರ್ ಒಪೆರಟಿಂಗ್ ಮಾಡೆಲ್ ನಲ್ಲಿ. (ರಿಫೈನಿಂಗ್ ನಲ್ಲಿ 0.01 ಪರ್ಸೆಂಟ್ ಸುಲ್ಫೋರ್ ಕಂಟೆಂಟ್ ಕೂಡ ತುಂಬ ದೊಡ್ಡ ಇಂಪ್ಯಾಕ್ಟ್ ಮಾಡುತ್ತದೆ ಹಾಗು ಸಲಫರ್ ಎರರ್ ಮಾರ್ಜಿನ್ 0.05% ಇರುತ್ತದೆ. ಹೆಚ್ಚುಕಮ್ಮಿ ಆದರೆ ಬಹಳ ದೊಡ್ಡ ಬೆಂಕಿ ಅನಾಹುತಗಳು ಇರುತ್ತವೆ )

ಇನ್ನು ಭಾರತದ ರಿಫೈನರಿ ಗಳು ೧.೫% ನಿಂದ ೨% ಸಲ್ಫೋರ್ರ ಕಂಟೆಂಟ್ ನಲ್ಲಿ ಆಪರೇಟ್ ಮಾಡುತ್ತವೆ, ಒಳ್ಳೆ ಕ್ವಾಲಿಟಿಯಾ ಬ್ರೆಂಟ್ ಅಥವಾ 0 .4 ಅನ್ನು ಭಾರತಕ್ಕೆ ತಂದರು, ನಮ್ಮ ರಿಫೈನರಿ ಗಳು ಅದನ್ನು ಪ್ರೋಸೆಸ್ ಮಾಡಲು ಆಗುವುದಿಲ್ಲ.

ಹಾಗಾಗಿ ವಿಶ್ವ ಒಪ್ಪಿಕೊಂಡಿರುವ ಸ್ಟ್ಯಾಂಡರ್ಡ್ ಪ್ರಕಾರ,ಲೇಮನ್ ಲ್ಯಾಂಗ್ವೇಜ್ ನಲ್ಲಿ ಸಲಫರ್ ಜಾಸ್ತಿ ಇದ್ದರೇ ಒಳ್ಳೆ ಗುಣಮಟ್ಟ ಎಂದು ಕರೆಯುತಾರೆ. ಹಾಗಾಗಿ ಬ್ರೆಂಟ್, wತಿ ಗಿಂತ ಉತ್ತಮ ಗುಣಮಟ್ಟ.

WTI ಬೆಲೆ ಬ್ರೆಂಟ್ ಬೆಲೆಗಿಂತ ಜಾಸ್ತಿ ಆಗಿರಲು ಅಥವಾ ಮುಂದೆ ಆಗಲು ಸಾಧ್ಯವೇ ಇಲ್ಲ. ಜಗತ್ತಿನ ೭೫% ಮಾರುಕಟ್ಟೆಯ ಸ್ಟ್ಯಾಂಡರ್ಡ್ ಬೆಂಚ್ ಮಾರ್ಕ್ ಬ್ರೆಂಟ್. ಯಾಕೆ ಅಂದರೆ WTI ನ ಡಿಮ್ಯಾಂಡ್ ತುಂಬಾ ಲಿಮಿಟೆಡ್, ಉತ್ಪತ್ತಿಯು ಜಾಸ್ತಿ. ಅಮೇರಿಕಾದಲ್ಲಿ ಫ್ರಾಕಿಂಗ್ (Fracking ) ಅನ್ನೋ ಚೀಪ್ ಟೆಕ್ನಾಲಜಿಯಲ್ಲಿ ಆಯಿಲ್ ತೆಗಿಯುವ ಕೆಲಸವಾದಾಗ ಮಾತು ಇರಾನ್ ನ ಕೆಲವು ಪೊಲಿಟಿಕಲ್ ಅಜೆಂಡಗಳಿಂದ , ಕೆಲವು ದಿನಗಳ ಮಟ್ಟಿಗೆ WTI ಜಾಸ್ತಿ ಆಗಿದ್ದಿರಬಹುದು. ಆದರೆ ಅದನ್ನು ಇಂಡಸ್ಟ್ರಿ ಸ್ಟ್ಯಾಂಡರ್ಡ್ ಪ್ರಕಾರ ಕನ್ಸಿಡರ್ ಮಾಡುವುದಿಲ್ಲ.

2. ಆಯಿಲ್ ಇಂಡಸ್ಟ್ರಿ ಯಲ್ಲಿ ಷೇರು ವ್ಯವಹಾರ ವೆಂದರೆ ಪೇಪರ್ ಅಥವಾ ಕಾಂಟ್ರಾಕ್ಟ್ ಮೇಲೆ ನಡೆಯುವ ವಹಿವಾಟು. ಅದನ್ನು ಊರ್ಜಿತ ಮಾಡುವುದು ನ್ಯೂ ಯಾರ್ಕ್ ಮರ್ಚೆಂಡಿಲೇ ಎಕ್ಸ್ಚೇಂಜ್ ಸಂಸ್ಥೆ (NYMEX).. ಅಂದರೆ ಯಾರಾದರೂ ಮಧ್ಯವರ್ತಿ ಗಳು ಬರಿ ಪೇಪರ್ ಮೇಲೆ ವ್ಯವಹಾರ ಮಾಡುತ್ತಾರೆ. ಕಮಾಡಿಟಿ ವ್ಯವಹಾರವೆಂದರೆ ಆಯಿಲ್ ಅನ್ನು ರಿಯಲ್ ಆಗಿ ಮುಟ್ಟಿ ಮಾಡುವ ವಹಿವಾಟು. ಹಾಗಾಗಿ ಕಾಂಟ್ರಾಕ್ಟ್ ವ್ಯವಹಾರ ಮಾತು ಕಮಾಡಿಟಿ ವ್ಯವಹಾರ ಬೇರೆ ಬೇರೆ ರೀತಿಯಲ್ಲಿ ನಡೆಯುತದೆ.

3. ಪ್ರತಿದಿನ 120 ಮಿಲಿಯನ್ ಬ್ಯಾರೆಲ್ ಆಯಿಲ್ ತೆಗೆಯುವ ಇಂಡಸ್ಟ್ರಿ ಗೆ (12 ಕೋಟಿ ಬ್ಯಾರೆಲ್), 1000 ಬ್ಯಾರೆಲ್ ಒಂದು ಲೆಕ್ಕವ ಸ್ವಾಮಿ? ಇಂಡಸ್ಟ್ರಿ ಅಲ್ಲಿ 1000 ಬ್ಯಾರೆಲ್ ಅಂದರೆ ನಮ್ಮ ಮನೆಯ ಒಂದು ಲೋಟ ನೀರಿನ ಲೆಕ್ಕ.

4. ನನ್ನ ಮೊದಲನೇ ಪೋಸ್ಟ್ನಲ್ಲಿ ನಲ್ಲಿ ನಾನು ಭಾರತದ ಪೆಟ್ರೋಲ್ ಹಾಗು ಡೀಸಿಲ್ ಬೆಲೆ ಏರಿಕೆಯ ಕಾರಣಗನ್ನು ಹಾಕಿಲ್ಲ. ಹಾಗಾಗಿ ಅದು ಇರ್ರೆಲವೆಂಟ್. ಜೊತೆಗೆ ಟ್ಯಾಕ್ಸ್ ಸ್ಟ್ರಕ್ಚರ್ ಭಾರತದ ಇಂಟರ್ನಲ್ ವಿಷಯ. ಅದಕ್ಕೂ WTI ನ ಬೆಲೆ ನೆಗೆಟಿವ್ ಅಲ್ಲಿ ಟ್ರೇಡ್ ಆಗಿದ್ದಕ್ಕೂ ಸಂಬಂಧ ಇಲ್ಲ. ಭಾರತದಲ್ಲಿ ಇಂಧನದ ಮೇಲೆ ಟ್ಯಾಕ್ಸ್ ಜಾಸ್ತಿ ಅನ್ನುವುದು ಸಾರ್ವಕಾಲಿಕ ಸತ್ಯ. ಹಾಗು ಅದು ಭಾರತದ ಆರ್ಥಿಕತೆಯನ್ನು ಮುಂದೊಯ್ಯಲು ಸಹಾಯಕಾರಿ.

5. ಭಾರತದಲ್ಲಿ ಬೆಲೆ ಕಮ್ಮಿ ಆಗಬೇಕು ಹಾಗು ಅದರ ಲಾಭ ಜನಸಾಮಾನ್ಯರಿಗೆ ಸಿಗಬೇಕು ಅನ್ನುವುದು ನನ್ನ ಆಸೆ ಕೂಡ. ಆದರೆ, ಕ್ರೂಡ್ ಆಯಿಲ್ ಬೆಲೆ 20 ಡಾಲರ್ ಬೆಲೆ ಇದೆ ಎಂದ ಮಾತ್ರಕ್ಕೆ, ಯಾರು ನನಗೆ ಆ ಬೆಲೆಗೆ ಮಾರುವುದಿಲ್ಲ. ಆಯಿಲ್ ಕಂಪನಿಗಳಿಗೆ ಪ್ರೊಡಕ್ಷನ್ ವೆಚ್ಚವೇ ಪ್ರತಿ ಬ್ಯಾರೆಲ್ ಗೆ 35 ಡಾಲರ್ ಇರುತ್ತದೆ. ನಷ್ಟ ಮಾಡಿಕೊಂಡು ಯಾರು 20 ಡಾಲರ್ ಗೆ ಮಾರುವುದಿಲ್ಲ. ಆಯಿಲ್ ಅನ್ನು ಸ್ಟೋರ್ ಮಾಡಿಕೊಳ್ಳಲು ಶುರುಮಾಡಿಕೊಳ್ಳುತ್ತಾರೆ. ಆರ್ಟಿಫಿಷಿಯಲ್ ಸ್ಕೇರ್ಸಿಟಿ ಕ್ರಯೇಟ್ ಮಾಡಿ ಡಿಮಾಂಡ್ ಜಾಸ್ತಿ ಆಗುವ ಹಾಗೆ ನೋಡಿಕೊಳ್ಳುತ್ತಾರೆ. ಆಯಿಲ್ ಪ್ರೊಡಕ್ಷನ್ ಅನ್ನು ನಿಲ್ಲಿಸಿಬಿಡುತ್ತಾರೆ. ಅಂದಹಾಗೆ ಆಯಿಲ್ ಅಂಡ್ ಗ್ಯಾಸ್ ಇಂಡಸ್ಟ್ರಿ ಅಲ್ಲಿ ಎರಡು ವಿಭಾಗಗಳಿವೆ. ಅಪ್ಸ್ಟ್ರೀಮ್ Upstream (ಆಯಿಲ್ ಹುಡುಕುವ ಮಾತು ಪ್ರೊಡ್ಯೂಸ್ ಮಾಡುವ ವಿಭಾಗ) ಹಾಗು ಡೌನ್ಸ್ಟ್ರೆಯಂ (Downstream – ಆಯಿಲ್ ಅಲ್ಲಿ ರಿಫೈನೆ ಮಾಡಿ ಮಾರುವ ವಿಭಾಗ). (ನಾನು ಕೆಲಸ ಮಾಡುವುದು Upsteam ನಲ್ಲಿ). ಎರಡು ವಿಭಾಗ ಕೆಲಸ ಮಾಡುತಿದ್ದರೆ ಕಂಪನಿ ಗಳಿಗೆ ತುಂಬಾ ಲಾಭ, ಪ್ರೊಡಕ್ಷನ್ ನಿಲ್ಲಿಸಿಬಿಟ್ಟರು Downstream ಮೂವ್ಮೆಂಟ್ ಇರುವುದರಿಂದ ಕಂಪನಿ ಲಾಭದಲ್ಲೇ ಇರುತವೆ. ಈಗಿನ ಕೋವಿಡ್ ಸೇಚುವೇಶನ್ ನಲ್ಲಿ ಡಿಮ್ಯಾಂಡ್ ಇಲ್ಲದಿರುವುದರಿಂದ, Upsteam ನಲ್ಲಿ ಕೆಲಸ ನಡೆಯುತ್ತಿರುತ್ತದೆ ಹಾಗು ಆಯಿಲ್ ಸ್ಟೋರ್ ಆಗುತ್ತಿರುತ್ತದೆ. (ಇದು ನಿಮ್ಮ ಮಾಹಿತಿಗೆ).

ತುಂಬಾ ಸುಲಭ ಇದ್ದರೆ ನಾನೇ ಇಂಟರ್ನ್ಯಾಷನಲ್ ಮಾರುಕಟ್ಟೆಯಿಂದ ನಂಗೆ ಬೇಕಾದಷ್ಟು ಪೆಟ್ರೋಲ್, ಡೀಸಲ್ ಆಮೆಝನ್ ಆಥವ ಇ-ಬೇ ಇಂದ ಆರ್ಡರ್ ಮಾಡಿಕೊಳ್ಳವ ಸೌಲಭ್ಯ ಇರುತ್ತಿತ್ತು ಅಲ್ಲವಾ..

ಎಲ್ಲಾ ರಾಷ್ಟ್ರಗಳು ಇನಫ್ಲೇಶನ್ ಕಂಟ್ರೋಲ್ ಮಾಡಲು ಪೆಟ್ರೋಲ್ ಹಾಗು ಡೀಸೆಲ್ ಬೆಳೆಯನ್ನು ವಿಪರೀತ ಜಾಸ್ತಿ ಮತ್ತು ಕಮ್ಮಿ ಮಾಡುವುದಿಲ್ಲ ( ಉದಾಹರಣೆಗೆ ಭಾರತದ ಪಾಯಿಂಟ್ ಆಫ್ ವ್ಯೂ ನಲ್ಲಿ ಹೇಳುವುದಾದರೆ, ಕ್ರೂಡ್ ಆಯಿಲ್ ಬೆಲೆ 135 ಡಾಲರ್ ಪ್ರತಿ ಬ್ಯಾರೆಲ್ ಆದರೆ ಪೆಟ್ರೋಲ್ ಹಾಗು ಡೀಸೆಲ್ ದರವನ್ನು 150 ರೂಪಾಯಿ ಮಾಡುವುದು, 35 ಡಾಲರ್ ಪ್ರತಿ ಬ್ಯಾರೆಲ್ ಆದರೆ ಪೆಟ್ರೋಲ್ ಹಾಗು ಡೀಸೆಲ್ ದರವನ್ನು 35 ರೂಪಾಯಿ ಮಾಡುವುದು). ಹಾಗೆ ಮಾಡಿದರೆ ನಾವು ದಿನನಿತ್ಯ ಬಳಸುವ ವಸ್ತುಗಳ ಬೆಲೆ, ತರಕಾರಿ ಬೆಲೆ, ಪಬ್ಲಿಕ್ ಟ್ರಾನ್ಸ್ಪೋರ್ಟಷನ್ ದರಗಳನ್ನು ಮೇಲೆ, ಕೆಳಗೆ ಮಾಡಿ ಕಂಟ್ರೋಲ್ ಮಾಡುವುದು ಸರ್ಕಾರಕ್ಕೆ ವಿಪರೀತ ಕಷ್ಟವಾಗಿ ಬಿಡುತ್ತದೆ. ನಾಳೆ ಕ್ರೂಡ್ ಆಯಿಲ್ ಬೆಲೆ 135 ಪ್ರತಿ ಬ್ಯಾರೆಲ್ ಆದರೂ, ಸರ್ಕಾರ 90 ಅಥವಾ 100 ರೂಪಾಯಿ ಮೇಲೆ ಮಾರುವುದಿಲ್ಲ.. ಇದು ಇನಫ್ಲೇಶನ್ ತಡೆಗಟ್ಟುವ ಕ್ರಮ.. ಇದನ್ನು ಆಯಿಲ್ ಬಾಂಡ್ಗಳ ಮೂಲಕ ಆಯಿಲ್ ತಂದು ಹಾಗು ಸಬ್ಸಿಡಿ ಮೂಲಕ ಸಧ್ಯಕ್ಕೆ ಸರಿದೂಗಿಸಿಕೊಳ್ಳುತ್ತಾರೆ. ಇದು‌ ನಂತರ ಫಿಸಿಕಲ್ ಡೆಫಿಸಿಟ್ ಆಗಿ ಪರಿವರ್ತನೆ ಆಗುತದೆ.. ಆನಂತರಲ್ಲಿ ಬೆಲೆ ಕಮ್ಮಿ ಆದಾಗ ಆ ಲಾಭವನ್ನು ಜನರಿಗೆ ದಾಟಿಸದೆ ಕ್ರೂಡ್ ಆಯಿಲ್ ತಂದ ದೇಶಗಳ ಸಾಲ ತೀರಿಸಲು ಹಾಗು ಫಿಸಿಕಲ್ ಡೆಫಿಸಿಟ್ ಸರಿದೋಗಿಸಿಕೊಳ್ಳಲು ಉಪಯೋಗಿಸುತ್ತಾರೆ ಪ್ರತಿ ಬ್ಯಾರೆಲ್ ಬೆಲೆ ಕಮ್ಮಿ ಆದರೆ, ಅದರ ಉಪಯೋಗವನ್ನು ಮೊದಲು ಸರ್ಕಾರ ತನ್ನ ಆಯಿಲ್ ಸಪ್ಲೈ ರಾಷ್ಟ್ರಗಳ ಪೆಮೆಂಟ್ಗೆ, ಫ್ಯೂಚರ್ ಪೇಮೆಂಟ್ಸ್ ಗಳಿಗೆ, ಫಿಸಿಕಲ್ ಡೆಫಿಸಿಟ್ (ಹಣಕಾಸು ಕೊರತೆ) ನೀಗಿಸಿಕೊಳ್ಳಲು ಬಳಸುತ್ತಾರೆ. ಸರ್ಪ್ಲಾಸ್ (Surplus) ಗಳಿಕೆಯನ್ನು ತನ್ನ ಸೋಶಿಯಲ್ ವೆಲ್ಫೇರ್ ಸ್ಕೀಮ್ ಗಳಿಗೆ ( ಸಿದ್ದರಾಮಯ್ಯ ರವರ ಭಾಗ್ಯಗಳಿಗೆ ಎಂದು ಓದಿ ಕೊಳ್ಳಬಹುದು) ಬಳಸುತ್ತಾರೆ. ಅದರ ಮೇಲು ಮಿಗುವ ಲಾಭ ಕೊನೆ ಗ್ರಾಹಕನನ್ನು ತಲುಪುತ್ತದೆ. ಇದು ಆಯಿಲ್ ಪ್ರೊಡ್ಯೂಸ್ ಮಾಡುವ ರಾಷ್ಟ್ರಗಳಿಗೂ ಅನ್ವಯಿಸುತ್ತದೆ, ಅವರು ಕೂಡ ಕ್ರೂಡ್ ಆಯಿಲ್ ಬೆಲೆ ಕಮ್ಮಿ ಆದರೆ ತಕ್ಷಣಕ್ಕೆ ಗ್ರಾಹಕನಿಗೆ ನೀಡುವುದಿಲ್ಲ. ಅಂತರರಾಷ್ಟ್ರೀಯ ಆಯಿಲ್ ಪಾಲಿಟಿಕ್ಸ್, ಟ್ರೇಡ್ ವಾರ್, ಕ್ರೂಡ್ ಆಯಿಲ್ ಬೆಲೆಗಳ ವಿಪರೀತ ಏರುಪೇರು ಎಡಕ್ಕೆ ಮೂಲ ಕಾರಣ. (ಕಾಡು ನೋಡುವ ತಂತ್ರವೆನ್ನಬಹುದು)

ನನ್ನ ತಿಳುವಳಿಕೆಯಲ್ಲಿ ನಮ್ಮ ಕೊಂಡುಕೊಳ್ಳುವ ಸಾಮರ್ಥ್ಯವು ಹೆಚ್ಚಿರುವುದರಿಂದ ಭಾರತದಲ್ಲಿ 65 ರಿಂದ 75 ರೂಪಾಯಿ ಫೇರ್ ಬೆಲೆ. ಇದು ನನ್ನ ಪೆರ್ಸನೆಲ್ ಒಪೀನಿಯನ್..

ವಿ.ಸೂ : ಕೊನೆಯ ಪಾಯಿಂಟ್, ನಾನು ಇರುವ ದೇಶ view point ನಿಂದ ಬರೆದ್ದಿದ್ದೇನಿ, ಭಾರತಕ್ಕೂ ಹೆಚ್ಚು ಕಮ್ಮಿ ಅನ್ವಯಿಸಬಹುದು.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments